Tumbe Group of International Journals

Full Text


Battle of Koregaon brought identity to Dalits

Dr. Sanjeevakumar M Pote

Assistant Professor of Economics

Maharaja Madakarinayaka First Grade College, Chitradurga

Abstract

This article analyzes the Battle of Bhima Koregaon which brought recognition to Dalits. Manusmriti was duly enforced by the Peshwas during their rule. As a result of the implementation of untouchability, the Dalits were driven away. The policy of the Peshwas had threatened the self-esteem of the Dalits. By depriving the untouchables of their right to education, Dalits were reduced to a lower status than animals. He had legalized inhumane exploitations which were not found in any corner of the world. The untouchables demanded that the Maratha Bajirao II abolish such cruel practices. This did not benefit the Dalits. He said that the untouchables should live according to the Manu Constitution. Sidanaka, an untouchable youth, vehemently condemned this. In this context, the British gave Dalits equality and the opportunity to join the army. Taking advantage of this, Sidnak's army was eager to fight against the Peshwas. Sidnaka appealed to join the British army. The British agreed to that request and started providing education to the Dalits. On 01-01-1818 Dalits got an opportunity to wage war on the Peshwas. The Dalits fought against Baji Rao, the second of the Peshwas, and achieved victory. Victory Pillar was erected to commemorate this victory. This Victory Pillar is a symbol of valor of Dalits. Until Ambedkar wrote about this battle, this war was shrouded in the ideology of Brahmanism. Ambedkar introduced the history of this war to the people of the country. Bhima explained that the history of Dalits was changed by the Koregaon war. As a result of Sidnaka's struggle, Dalits have got all their rights. This article is based on secondary data.

Keywords: Dalits, Untouchables, Amanusha, Equality and Self-respect


ದಲಿತರಿಗೆ ಅಸ್ಮಿತೆಯನ್ನು ತಂದುಕೊಟ್ಟ ಕೋರೆಗಾವ ಕದನ

ಡಾ. ಸಂಜೀವಕುಮಾರ ಮು. ಪೋತೆ

ಅರ್ಥಶಾಸ್ತ್ರ, ಸಹಾಯಕ ಪ್ರಾಧ್ಯಾಪಕರು

ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗ

ಸಾರಲೇಖ

ಈ ಲೇಖನವು ದಲಿತರಿಗೆ ಅಸ್ಮಿತೆಯನ್ನು ತಂದುಕೊಟ್ಟ ಭೀಮಾ ಕೋರೆಗಾವ ಕದನವನ್ನು ಕುರಿತು ವಿಶ್ಲೇಷಿಸುತ್ತದೆ. ಪೇಶ್ವೆಗಳು ತಮ್ಮ ಆಡಳಿತ ಅವಧಿಯಲ್ಲಿ ಮನುಸ್ಮೃತಿಯನ್ನು ಯಥಾವತ್ತಾಗಿ ಜಾರಿಗೊಳಿಸಿದ್ದರು. ಅಸ್ಪೃಶ್ಯತೆ ಜಾರಿಯಾದ ಪರಿಣಾಮ ದಲಿತರು ಬೆಂದು ಹೋಗಿದ್ದರು. ಪೇಶ್ವೆಗಳ ನೀತಿಯು ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತಂದಿತ್ತು. ಅಸ್ಪೃಶ್ಯರ ವಿದ್ಯೆಯ ಹಕ್ಕುಗಳನ್ನು ಕಿತ್ತುಕೊಳ್ಳುವ ಮೂಲಕ ದಲಿತರು ಪ್ರಾಣಿಗಳಿಗಿಂತಲೂ ಹೀನಾಯ ಸ್ಥಿತಿ ತಲುಪುವುದಕ್ಕೆ ಕಾರಣವಾಗಿದ್ದರು. ಜಗತ್ತಿನ ಯಾವ ಮೂಲೆಯಲ್ಲಿರದ ಅಮಾನುಷ ಶೋಷಣೆಗಳನ್ನು ಕಾನೂನು ಬದ್ಧಗೊಳಿಸಿದ್ದರು. ಇಂಥ ಕ್ರೂರ ಆಚರಣೆಗಳು ನಿರ್ಮೂಲನೆಗೊಳಿಸಬೇಕೆಂದು ಮರಾಠಾ ಎರಡನೆಯ ಬಾಜಿರಾವನಿಗೆ ಅಸ್ಪೃಶ್ಯರು ಬೇಡಿಕೆ ಇಟ್ಟರು. ದಲಿತರಿಗೆ ಇದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಅಸ್ಪೃಶ್ಯರು ಮನು ಸಂವಿಧಾನದಂತೆ ಜೀವಿಸಬೇಕು ಎಂದನು. ಅಸ್ಪೃಶ್ಯರ ಯುವಕ ಸಿದನಾಕ ಇದನ್ನು ತೀವ್ರವಾಗಿ ಖಂಡಿಸಿದನು. ಈ ಸಂದರ್ಭದಲ್ಲಿ ಬ್ರಿಟಿಷರು ದಲಿತರಿಗೆ ಸಮಾನತೆಯನ್ನು ನೀಡುವುದರೊಂದಿಗೆ ಸೈನ್ಯಕ್ಕೆ ಸೇರುವ ಅವಕಾಶವನ್ನು ನೀಡಿದರು. ಇದರ ಸದುಪಯೋಗ ಪಡೆದುಕೊಂಡ ಸಿದನಾಕ ಪಡೆ ಪೇಶ್ವೆಗಳ ಮೇಲೆ ಯುದ್ಧ ಮಾಡುವುದಕ್ಕೆ ಮನದಲ್ಲಿಯೇ ಕುದಿಯುತ್ತಿದ್ದರು. ಸಿದನಾಕನು ಬ್ರಿಟಿಷರ ಸೈನ್ಯವನ್ನು ಸೇರುವುದರೊಂದಿಗೆ ಮನವಿ ಮಾಡಿಕೊಂಡನು. ಆ ಮನವಿಗೆ ಒಪ್ಪಿದ ಬ್ರಿಟಿಷರು ದಲಿತರಿಗೆ ವಿದ್ಯೆಯನ್ನು ನೀಡುವುದಕ್ಕೆ ಪ್ರಾರಂಭಿಸಿದರು. ದಲಿತರಿಗೆ ಪೇಶ್ವೆಗಳ ಮೇಲೆ ಯುದ್ಧ ಮಾಡುವುದಕ್ಕೆ 01-01-1818ರಲ್ಲಿ ಅವಕಾಶ ಲಭಿಸಿತು. ದಲಿತರು ಪೇಶ್ವೆಗಳ ಎರಡನೆಯ ಬಾಜಿರಾವನ ಮೇಲೆ ಯುದ್ಧಮಾಡಿ ವಿಜಯವನ್ನು ಸಾಧಿಸಿದರು. ಈ ವಿಜಯದ ನೆನಪಿಗಾಗಿ ವಿಜಯಸ್ತಂಭವನ್ನು ಸ್ಥಾಪಿಸಿದರು. ಈ ವಿಜಯಸ್ತಂಭವು ದಲಿತರ ಶೌರ್ಯದ ಸಂಕೇತವಾಗಿದೆ. ಅಂಬೇಡ್ಕರ್ ಅವರು ಈ ಕದನವನ್ನು ಕುರಿತು ದಾಖಲಿಸುವವರೆಗೂ ಈ ಯುದ್ಧವನ್ನು ಬ್ರಾಹ್ಮಣ್ಯ ಸಿದ್ಧಾಂತದ ಕೆಳಗೆ ಮುಚ್ಚಿಡಲಾಗಿತ್ತು. ಅಂಬೇಡ್ಕರ್ ಅವರು ಈ ಯುದ್ಧದ ಇತಿಹಾಸವನ್ನು ದೇಶದ ಜನತೆಗೆ ಪರಿಚಯಿಸಿದರು. ಭೀಮಾ ಕೋರೆಗಾವ ಯುದ್ಧದಿಂದ ದಲಿತರ ಇತಿಹಾಸವೇ ಬದಲಾವಣೆಗೊಂಡಿತು ಎಂದು ವಿವರಿಸಿದರು. ಸಿದನಾಕನ ಹೋರಾಟದ ಫಲದಿಂದ ಪಸ್ತುತ ದಲಿತರು ಎಲ್ಲ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಈ ಲೇಖನವು ದ್ವಿತೀಯ ಅಂಕಿ ಅಂಶಗಳ ಆಧಾರದ ಮೇಲೆ ರಚನೆಗೊಂಡಿದೆ.

ಕೀಲಿಪದ: ದಲಿತರು, ಅಸ್ಪೃಶ್ಯರು, ಅಮಾನುಷ, ಸಮಾನತೆ ಮತ್ತು ಸ್ವಾಭಿಮಾನ 

ಪಿಠೀಕೆ

ಭೀಮಾ ಕೋರೆಗಾವ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿ. ಭಾರತದ ಇತಿಹಾಸದಲ್ಲಿ ಭೀಮಾ ಕೋರೆಗಾವ ಕದನಕ್ಕೆ ಮಹತ್ವದ ಸ್ಥಾನವಿದೆ. ಭೀಮಾ ಕೋರೆಗಾವ ಕದನವು 01-01-1818ರಂದು ನಡೆಯಿತು. ಭೀಮಾ ಕೋರೆಗಾವ ಕದನವು ಮರಾಠಾ ಒಕ್ಕೂಟದ ಪೇಶ್ವೆಗಳ ಬಣ ಮತ್ತು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಯ ನಡುವೆ ನಡೆದ ಒಂದು ಕದನ. ಭೀಮಾ ಕೋರೆಗಾವ ಕದನವು ಮೂರನೇ ಆಂಗ್ಲೋ ಮರಾಠ ಯುದ್ಧದ ಭಾಗವಾಗಿತ್ತು ಮತ್ತು ಈ ಯುದ್ಧವು ಪೇಶ್ವೆಗಳ ಸೋಲಿಗೆ ಕಾರಣವಾಯಿತು. ಕೋರೆಗಾವ ಕದನವು ದಲಿತರಿಗೆ ಅಸ್ಮಿತೆಯನ್ನು ತಂದುಕೊಟ್ಟಿತು. ದೇಶದ ಇತಿಹಾಸವನ್ನು ನಿರ್ಮಿಸಿದವರೇ ಇತಿಹಾಸ ಮರೆತಿದ್ದು ಒಂದು ಚೋದ್ಯದ ಸಂಗತಿಯಾಗಿದೆ. ದಲಿತರು ತಮ್ಮ ಇತಿಹಾಸವನ್ನು ಮರೆತಿದ್ದೆ ಅವರ ಅವನತಿಗೆ ಕಾರಣವಾಗಿತ್ತೆಂದು ಹೇಳಬಹುದು. ‘ಪ್ರಸಕ್ತದಲ್ಲಿ ದಲಿತರು ಅನುಭವಿಸುತ್ತಿರುವ ಯಾತನೆಗೆ ಇತಿಹಾಸದ ಅರಿವಿನ ಕೊರತೆ ಕಾಡುತ್ತಿದೆ’. ಕೋರೆಗಾವ ಕದನದ ಇತಿಹಾಸವನ್ನು ಮರೆತ ದಲಿತರಿಗೆ ಅಂಬೇಡ್ಕರ್ ಅವರು ಮೊಟ್ಟ ಮೊದಲ ಬಾರಿಗೆ ಕದನದ ವೀರರನ್ನು ಕುರಿತು ದಾಖಲಿಸಿ ಪರಿಚಯಿಸಿದರು. ಕೇವಲ ಬೆರಳೆಣಿಕೆಯμÉ್ಟೀ ಇದ್ದ ದಲಿತರು ಬ್ರಾಹ್ಮಣ್ಯ ವಿಷಕೂಸು ಹೊತ್ತು ತಿರುಗುತ್ತಿದ್ದ ಪೇಶ್ವೆಗಳ ಬೃಹತ್ ಸೈನ್ಯವನ್ನು ಸೋಲಿಸಿದ್ದು ಇತಿಹಾಸ. ಇಂದಿಗೂ ಆ ಯುದ್ಧ ದಲಿತರ ಸ್ವಾಭಿಮಾನದ ಪ್ರತೀಕವಾಗಿದೆ. ಅಂಬೇಡ್ಕರ್ ಅವರು ಪ್ರತಿ ವರ್ಷವೂ ಜನವರಿ ಒಂದರಂದು ಕೋರೆಗಾವಕ್ಕೆ ಭೇಟಿ ನೀಡುತ್ತಿದ್ದರು. ಈ ದಿನವನ್ನು ಸ್ಮೃತಿ ದಿನವನ್ನಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸುತ್ತಿದ್ದರು. ಈ ದೇಶದ ಎಲ್ಲ ದಲಿತರು ಒಗ್ಗೂಡಿ ಜನವರಿ ಒಂದನ್ನು ಸ್ವಾಭಿಮಾನದ ದಿನವನ್ನಾಗಿ ಆಚರಿಸಬೇಕೆನ್ನುವ ಹೆಬ್ಬಯಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರದ್ದಾಗಿತ್ತು. ಈ ದಲಿತರ ದಿಗ್ವಿಜಯ ಅಂಬೇಡ್ಕರ್ ಅವರ ಮೇಲೆ ಗಾಢವಾದ ಪ್ರಭಾವ ಬೀರಿದ್ದು ಕಂಡುಬರುತ್ತದೆ. ಈ ವಿಜಯಕ್ಕೆ ಋಣಿಯಾದ ಬ್ರಿಟಿಷರು ದಲಿತರಿಗೆ ಶಿಕ್ಷಣ, ಸೈನ್ಯದಲ್ಲಿ ನೇಮಕಾತಿ, ಸಾಮಾಜಿಕ ಸ್ಥಾನಮಾನವನ್ನು ನೀಡಿದ್ದು ಕಂಡುಬರುತ್ತದೆ. ಬ್ರಿಟಿಷರು ದಲಿತರ ಬಗೆಗೆ ಮೃದು ಭಾವನೆಯನ್ನು ಹೊಂದಿದ್ದರು ಎನ್ನುವುದು ಅಂಶ ಹೊರಬರುತ್ತದೆ. ಕಾರಣ, ಈ ಯುದ್ಧವು ಬ್ರಿಟಿಷರಿಗೆ ಭಾರತದಲ್ಲಿ ನೆಲೆಸುವುದಕ್ಕೆ ಅಸ್ತಿತ್ವವನ್ನು ತಂದುಕೊಟ್ಟಿತ್ತು ಪ್ರಸಕ್ತದಲ್ಲಿ ದಲಿತರು ಎಲ್ಲ ಹಕ್ಕುಗಳನ್ನು ಪಡೆದುಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ‘ಇಂಥ ಕೆಚ್ಚೆದೆಯ ಹೋರಾಟದ ಇತಿಹಾಸದ ಅರಿವು ದಲಿತರಿಗಿಲ್ಲ’ ಎನಿಸುತ್ತದೆ. ಪ್ರಸ್ತುತದಲ್ಲಿ ಜಾತಿ, ವಿಜಾತಿಗಳು, ಧರ್ಮ, ಅಧರ್ಮ, ಮೀಸಲಾತಿ, ಒಳಮೀಸಲಾತಿ, ಮಧ್ಯ ಸೌಹಾರ್ದತೆಯು ಭಯಪಟ್ಟು ಮರೆಸರಿಯಲ್ಪಟ್ಟಿದೆ. ಇಂಥ ಕೌತಕ ಘಟ್ಟದಲ್ಲಿ ಮತ್ತೆ ದಲಿತರು ಭೀಮಾ ಕೋರೆಗಾವ ಕದನ ನೆನಪಿಸಿಕೊಳ್ಳುವ ಜರೂರತ್ತದಲ್ಲಿದ್ದಾರೆ. ಭೀಮಾ ಕೋರೆಗಾವ ಕದನದಲ್ಲಿ ದಲಿತರು ಬ್ರಿಟಿಷರ ಪರವಾಗಿ ಹೋರಾಡಿ ವೀರಮರಣ ಹೊಂದಿದವರ ಸಂಖ್ಯೆ 22 ಮಾತ್ರ. ದಲಿತರು ಬ್ರಿಟಿಷರ ಪರವಾಗಿ ಯುದ್ಧಮಾಡಿದ್ದರು ಎನ್ನುವ  ಅಂಶಕ್ಕಿಂತಲೂ; ಬ್ರಾಹ್ಮಣರ ಸಿದ್ಧಾಂತವನ್ನು ಮೈಗೂಡಿಸಿಕೊಂಡು ದಲಿತರ ಎಲ್ಲ ಹಕ್ಕುಗಳನ್ನು ಕಿತ್ತುಕೊಳ್ಳುವ ಮೂಲಕ ಶೋಷಣೆಗೆ ಇಳಿದಿದ್ದ ಪೇಶ್ವೆಗಳ ವಿರುದ್ಧವಾಗಿತ್ತು ಎನ್ನುವ ಅಂಶಹೊರಬರಬೇಕಾಗಿದೆ. ಪೇಶ್ವಗಳು ದಲಿತರ ಮೇಲೆ ಮಾಡಿದ ದೌರ್ಜನ್ಯಗಳನ್ನು ವಿವರಿಸುವುದಕ್ಕೆ ನನ್ನ ಲೇಖನಿ ಇಷ್ಟಪಡುವುದಿಲ್ಲ. ಇದು ದಲಿತರ ಸ್ವಾಭಿಮಾನದ ಕದನವೇ ಆಗಿತ್ತು.

ಹಿನ್ನೆಲೆ

ದಲಿತರು ಬ್ರಿಟಿಷರ ಆಡಳಿತದ ಮೊದಲು ಪೇಶ್ವೆಗಳ ಕಾಲದಲ್ಲಿ ಅಸ್ಪೃಶ್ಯತೆ ಮತ್ತು ತಿರಸ್ಕಾರಕ್ಕೆ ಒಳಗಾದ ಗುಂಪು. ಆದರೆ ವಿಶೇಷವೆಂದರೆ, ಪೇಶ್ವೆಗಳ ಸೈನ್ಯವನ್ನು ಸೇರುವ ಅವಕಾಶವನ್ನು ದಲಿತರು ಪಡೆದುಕೊಂಡಿದ್ದರು. ಆ ಸೈನ್ಯದಲ್ಲಿಯೂ ಸಹ ದಲಿತರಿಗೆ ಅಸ್ಪೃಶ್ಯತೆ ಕಾಡುತ್ತಿತ್ತು. ದಲಿತರು ಇದನ್ನೆಲ್ಲಾ ಹಂಗೂ ಹರೆದು ಹೋರಾಡಿ ಪೇಶ್ವೆಗಳಿಗೆ ಅದ್ವಿತೀಯ ಸೇವೆಯನ್ನು ಸಲ್ಲಿಸುತ್ತಿದ್ದರು. ಈ ಪರಾಕ್ರಮವು ಮರಾಠಾ ಮತ್ತು ಪೇಶ್ವೆಗಳ ಬ್ರಾಹ್ಮಣರಿಗೆ ಅವಮಾನವಾಗುತ್ತಿತ್ತು ಮತ್ತು ಇದನ್ನು ಅವರು ಸಹಿಸುತ್ತಿರಲಿಲ್ಲ. ದಲಿತರ ಪರಾಕ್ರಮವನ್ನು ಸೂಕ್ಷ್ಮವಾಗಿ ಅರಿತ ಮರಾಠರು, ದಲಿತರ ಪರಾಕ್ರಮವು ಹೀಗೆ ಮುಂದುವರೆದರೆ ಮುಂದೊಂದು ದಿನ ಮರಾಠಾ ರಾಜ್ಯವನ್ನು ಕಿತ್ತೆಸೆದು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿಕೊಳ್ಳುತ್ತಾರೆ ಎನ್ನುವ ದುಗುಡ ಅವರಲ್ಲಿತ್ತು. ದುಗುಡದ ಕಾರಣದಿಂದಾಗಿ ದಲಿತರನ್ನು ಸಾಮ್ರಾಜ್ಯದಿಂದ ದೂರಿಡುವ ಕುತಂತ್ರಕ್ಕೆ ಕೈಹಾಕಿ ಅಸ್ಪೃಶ್ಯತೆ ಮತ್ತಷ್ಟು ಬಿಗಿಗೊಳಿಸಿದ್ದರು. ಅಸ್ಪೃಶ್ಯತೆಯ ಕಾರಣದಿಂದಾಗಿ ಪೇಶ್ವೆಗಳ ರಾಜ್ಯದಲ್ಲಿ ದಲಿತರು ಯಾತನೆಯನ್ನು ಅನುಭವಿಸುತ್ತಿದ್ದರು. ಪೇಶ್ವೆಗಳ ಅಮಾನುಷ ವರ್ತನೆಗೆ ದಲಿತರು ಬೇಸತ್ತು ಹೋಗಿದ್ದರು. ಪೇಶ್ವೆಗಳು ಮಹಾರ ಮತ್ತು ಮಾಂಗ ಜನಸಮುದಾಯದ ಮೇಲೆ ಅಸ್ಪೃಶ್ಯದಂತಃ ಅಮಾನುಷ ಕಾನೂನುಗಳು ಜಾರಿಗೆ ತಂದಿದ್ದರು. ಮನುಸ್ಮೃತಿ ನಿಯಮಗಳನ್ನು ಆಡಳಿತದ ಹೃದಯ ಮಾಡಿಕೊಂಡಿದ್ದರು. ದಲಿತರ ಮೇಲೆ ಕಟ್ಟುನಿಟ್ಟಾದ ಕಾನೂನುಗಳು ಜಾರಿಗೆ ತರುವುದಕ್ಕೆ ಕಾರಣವನ್ನು ಸಂಶೋಧಿಸಿದಾಗ, ಒಬ್ಬ ದಲಿತ ಮತ್ತು ಅರಮನೆ ಹೇಣ್ಣಿನ ಪ್ರೇಮ ಕಥೆ ಹೊರಬರುತ್ತದೆ! ಈ ಪ್ರೇಮಕಥೆಯಲ್ಲಿ ಗಣಪತಿ ಎನ್ನುವ ವ್ಯಕ್ತಿ ಮಹಾರನಾಗಿದ್ದ. ಈ ಪ್ರೇಮ ಪ್ರಕರಣದಿಂದಾಗಿ ಮಹಾರರ ಮೇಲೆ ಅಸ್ಪೃಶ್ಯತೆಯನ್ನು ಕಟ್ಟುನಿಟ್ಟಾಗಿ ಜಾರಿಗೋಳಿಸಲು ಕ್ರಮ ಕೈಗೊಳ್ಳಲಾಯಿತು ಎಂದು ಸಮಜಾಯಿಸಿ ನೀಡುತ್ತಾರೆ. ಈ ಪ್ರೇಮ ಕಥೆ ಅಸ್ಪೃಶ್ಯತೆಗೆ ಕಾರಣವಾಯಿತು ಎನ್ನುವ ಅಂಶ ನಾನು ಒಪ್ಪುವುದಿಲ್ಲ. ಅಸ್ಪೃಶ್ಯತೆಗೆ ಮೂಲ ಕಾರಣ ಮನುಸ್ಮೃತಿಯೇ ಎನ್ನುವುದು ಸಾಮಾನ್ಯ ಜ್ಞಾನ. ಮನುಸ್ಮೃತಿಯು ಜಾರಿಯಾದ ಪ್ರದೇಶದಲ್ಲಿ ಅಸ್ಪೃಶ್ಯತೆ ತಾನಾಗಿ ಜಾರಿಗೆ ಬರುತ್ತದೆ. ದಲಿತರ ಪರಾಕ್ರಮವೇ; ದಲಿತರಿಗೆ ಮುಳುವಾಗಿತ್ತು ಎನ್ನುವ ಅಂಶ ನಾನು ವಿಶ್ಲೇಷಿಸಲು ಇಚ್ಛಿಸುತ್ತೇನೆ. ಅವರ ಪರಾಕ್ರಮವೇ ಅವರು ಹೀನಾಯ ಸ್ಥಿತಿಗೆ ಕಾರಣವಾಯಿತು. ದಲಿತರು ಕೊರಳಲ್ಲಿ ದಾರ, ಉಗುಳಲು ಕುಡಿಕೆ, ಬೆನ್ನಿಗೆ ಕಸಬಾರಿಗೆ, ಅಸ್ಪೃಶ್ಯರು ಮಧ್ಯಾಹ್ನದ ವೇಳೆಯಲ್ಲಿಯೇ ಗ್ರಾಮಕ್ಕೆ ಬರುವ ನಿಯಮಗಳು ಪೇಶ್ವೆಗಳ  ಆಡಳಿತದಲ್ಲಿಯೇ ಕಂಡುಬರುತ್ತವೆ. ಪೇಶ್ವೆಗಳು ದಿನನಿತ್ಯ ದಲಿತರ ಮೇಲೆ ಅನ್ಯಾಯದ ಬೆಂಕಿಯ ಮಳೆಯನ್ನೇ ಸುರಿಸುತ್ತಿದ್ದರು. ಇದಕ್ಕೆ ದಲಿತರು ಬೇಸತ್ತು ಹೋಗಿದ್ದರು. ದಲಿತರು ಪೇಶ್ವೆಗಳ ವಿರುದ್ಧವೆ  ಕದನಕ್ಕೆ ಸನ್ನದ್ಧಗೊಂಡು ಬ್ರಿಟಿಷರ ಪರವಾಗಿ ನಿಂತಿದ್ದು ಕಂಡುಬರುತ್ತದೆ.

ಇತಿಹಾಸದ ಮೆಲಕು

ಕ್ರಿ.ಶÀ, 1713ರಲ್ಲಿ ಕೊಂಕಣಿ ಬ್ರಾಹ್ಮಣರಾದ (ಚಿತ್ಪಾವನ) ಪೇಶ್ವೆಗಳು ಮರಾಠರ ಆಡಳಿತದ ಸೂತ್ರವನ್ನು ಹಿಡಿದರು. ಛತ್ರಪತಿ ಶಿವಾಜಿ ಮಹಾರಾಜರ ಅವಧಿಯಲ್ಲಿ ಪೇಶ್ವೆಗಳು, ಅಧಿಕಾರಿ ವರ್ಗದ ಒಂದು ಗುಂಪು. ಅವರು ಸೇನಾಧಿಪತಿಯ (ಸೇನಾಪತಿ) ಹುದ್ದೆಗಳನ್ನು ಅಲಂಕರಿಸಿಕೊಂಡಿದ್ದರು. ಇದು ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರ ಅವಧಿಯಲ್ಲಿಯೂ ಮುಂದುವರೆಯಿತು. ಶಾಹು ಮಹಾರಾಜರು ಕೊಲ್ಲಾಪುರದಲ್ಲಿ ನೆಲೆಸಿರುವುದರಿಂದ ಪುಣೆಯ ಭಾಗದ ಆಡಳಿತವೆಲ್ಲವೂ ಪೇಶ್ವೆಗಳ ಅಧೀನದಲ್ಲಿಯೇ ಮುನ್ನಡೆಯುತ್ತಿತ್ತು. ಮೊದಲನೆಯ ಬಾಜಿರಾವ ಪೇಶ್ವೆಗಳ ಉತ್ತಮ ಸೇನಾನಿಯಾಗಿದ್ದು; ಅಲ್ಪಕಾಲದಲ್ಲಿಯೇ ಮರಾಠಾಶಾಹಿ ಪ್ರದೇಶವನ್ನು ವಿಸ್ತರಿಸಿದ್ದ. ಬಾಜಿರಾವನು ಬಹು ಪರಾಕ್ರಮಿ ಮತ್ತು ಕುತಂತ್ರಿಯಾಗಿದ್ದ. ಪುಣೆಯ ಪ್ರಾಂತ್ಯದಲ್ಲಿ ಧಾರ್ಮಿಕ ಸಂಸ್ಕøತಿಯನ್ನು ಸಹ ವೈಭವಿಕರಿಸಿದ್ದ. ಆ ಪ್ರದೇಶವು ರಾಜಕೀಯ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಮೊದಲನೆಯ ಬಾಜಿರಾವನ ನಿಧನದ ನಂತರ ಪೇಶ್ವೆಗಳ ಆಡಳಿತ ಅಧಿಕಾರ ಅಧೋಗತಿಗೆ ತಲುಪಿತು. ಆತನ ಮಗನು ಅμÉ್ಟೂಂದು ಪರಾಕ್ರಮಿ ಆಗಿರಲಿಲ್ಲ. ‘ಪಾಣಿಪತ್’ ಕದನವು ಪೇಶ್ವೆಗಳಿಗೆ ದೊಡ್ಡ ಹೊಡೆತವನ್ನು ನೀಡಿತು. ನಾನಾಸಾಹೇಬ್ ನಂತರದಲ್ಲಿ ಪೇಶ್ವೆಗಳ ರಘುನಾಥರಾವನ ಕಾಲದಲ್ಲಿ ಅಧಿಕಾರ  ಅಧೋಗತಿಗೆ ಇಳಿಯಿತು. ಎರಡನೆಯ ಬಾಜಿರಾವನ  ಅವಧಿಯಲ್ಲಿ ನಡೆದ ಐತಿಹಾಸಿಕ ಕೋರೆಗಾವ ಕದನದಿಂದ ಪೇಶ್ವೆಗಳ ಆಡಳಿತ ಅವಧಿ ಕೊನೆಗೊಂಡಿತು.

ಪೇಶ್ವೆಗಳ ಅವಧಿಯಲ್ಲಿ ಸಾಮಾಜಿಕ ವ್ಯವಸ್ಥೆ

ಪೇಶ್ವೆಗಳ ಅವಧಿಯಲ್ಲಿ ಸಾಮಾಜಿಕ ವ್ಯವಸ್ಥೆ ಅಮಾನುಷ ಸ್ಥಿತಿಯಲ್ಲಿತ್ತು. ಮನುಸ್ಮೃತಿಯಲ್ಲಿ ದಾಖಲಾದ ಎಲ್ಲಾ ರೀತಿಯ ಶೋಷಣೆಗಳು ದಲಿತರ ಮೇಲೆ ಹೇರಲ್ಪಟ್ಟಿದ್ದವು ಮತ್ತು ಅದರೊಂದಿಗೆ ಇನ್ನೂ ಹಲವಾರು ಕ್ರೂರವಾದ ನಿಯಮಗಳು ಹೇರಲಾಗಿತ್ತು. ಸವರ್ಣೀಯರು ದಲಿತರ ಮುಖವನ್ನು ನೋಡುವುದಕ್ಕೆ ಅಸಹ್ಯ ಪಡುವ ಅವಧಿ ಅದು. ಒಂದು ವೇಳೆ ದಲಿತರೆದುರು ಸವರ್ಣೀಯರು ಬಂದರೆ ದಲಿತರು ತಕ್ಷಣವೇ ಮುಖ ಕಾಣದಂತೆ ತಲೆ ಕೆಳ ಮಾಡಿ ಅಡ್ಡ ಮಲಗಬೇಕಾಗಿತ್ತು. ಪೇಶ್ವೆಗಳ ಅವಧಿಯಲ್ಲಿ ಮಹಾರ(ಹೊಲೇಯ), ಮಾಂಗ(ಮಾದಿಗ) ಮತ್ತು ಚಮ್ಮಾರ ಜಾತಿಗಳನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗಿತ್ತು. ಸವರ್ಣೀಯರು ದಲಿತರ ಎಲ್ಲ ಹಕ್ಕುಗಳನ್ನು ಗ್ರಂಥಗಳ ಮೂಲಕ, ಆಚರಣೆಗಳ ಮೂಲಕ ಮತ್ತು ದೇವರುಗಳ ಮೂಲಕ ಕಿತ್ತುಕೊಂಡಿದ್ದರು. ಧಾರ್ಮಿಕ ಅಂಶಗಳ ಮೇಲೆ ಕೃಷಿ ಮಾಡಿದ್ದ ಬ್ರಾಹ್ಮಣ್ಯರಿಂದ ದಲಿತರು ಅಸ್ಪೃಶ್ಯತೆ ಮತ್ತು ಗುಲಾಮಗಿರಿಯಂತಹ ಕ್ರೂರವಾದ ಅನುಭವಗಳನ್ನು ಅನುಭವಿಸುತ್ತಿದ್ದರು. ಜೀವಂತವಾಗಿ ಸುಟ್ಟ ನೋವಿನ ಅನುಭವವನ್ನು ಅವರು ಅನುಭವಿಸುತ್ತಿದ್ದರು. ದಲಿತರ ಉಗುಳು(ಏಂಜಲು) ದಾರಿಯಲ್ಲಿ ಬಿದ್ದರೆ ದಾರಿ ಮಲಿನವಾಗುತ್ತಿತ್ತು. ಸವರ್ಣೀಯರು ದಲಿತರ ಹೆಜ್ಜೆಯ ಗುರುತನ್ನು ದಾಟಿದರೆ ಅವರು ಅಪವಿತ್ರರಾಗುತ್ತಿದ್ದರು. ಇಂಥ ಅವಮಾನಗಳಲ್ಲಿ ದಲಿತರು ಬೆಂದು ಹೋಗಿದ್ದರು. ಹೊಸದೊಂದು ಬಟ್ಟೆ ಖರೀದಿಸಿ ತಂದರೆ; ಅದನ್ನು ಧರಿಸುವಂತಿರಲಿಲ್ಲ, ಹೊಸ ಬಟ್ಟೆಯನ್ನು ತಂದು ಅದಕ್ಕೆ ಕೆಸರನ್ನು ಮೆತ್ತಿಸಿ, ನಂತರ ಆ ಬಟ್ಟೆಯನ್ನು ಎರಡು ತುಂಡುಗಳನ್ನಾಗಿ ವಿಂಗಡಿಸಿ, ಹರಿದ ಬಟ್ಟೆಯನ್ನೇ ದಲಿತರು ಧರಿಸಬೇಕಾಗಿತ್ತು. ಇದು ಪೇಶ್ವೆಗಳ ನಿಯಮ. ಕಾರಣ ದಲಿತರು ಕೊಳಕಾದ ಬಟ್ಟೆಗಳನ್ನೇ ಧರಿಸಬೇಕು, ಮಡಿಕೆ ಕುಡಿಕೆಗಳಲ್ಲಿ ಆಹಾರವನ್ನೇ ಸೇವಿಸಬೇಕು. ಇಂಥ ಕ್ರೂರವಾದ ನಿಯಮಗಳು ಪೇಶ್ವೆಗಳ ಅವಧಿಯಲ್ಲಿ ಜಾರಿಯಲ್ಲಿತ್ತು.

ಪೇಶ್ವೆಗಳು - ದಲಿತರ ವಿಂಗಡನೆ

ಪೇಶ್ವೆಗಳ ಸೈನ್ಯದಲ್ಲಿ ದಲಿತರು ಮುಂದಾಳತ್ವವನ್ನು ವಹಿಸಿದ್ದು ಕಂಡುಬರುತ್ತದೆ ಮತ್ತು ಅದು ವಿಶೇಷವೂ ಹೌದು. 1795ರಲ್ಲಿ ನಿಜಾಮ ಮತ್ತು ಪೇಶ್ವೆಗಳ ಮಧ್ಯ ಖರ್ಡೆ ಕದನ ಜರುಗಿತು. ಈ ಕದನದಲ್ಲಿ ಪೇಶ್ವೆಗಳು ಜಯಗಳಿಸಿದರು. ಆ ಯುದ್ಧದಲ್ಲಿ ಮಹಾರ ಜನಾಂಗದ ಸಿದನಾಕನು ಪ್ರಮುಖ ಪಾತ್ರವಹಿಸಿದ್ದು ಕಂಡುಬರುತ್ತದೆ. ಆದರೆ ಖರ್ಡೆ   ಕದನದ ಮೊದಲು ಈ ಕದನಕ್ಕಾಗಿ ಒಂದು ಮೈದಾನದಲ್ಲಿ ಪೇಶ್ವೆಗಳ ಸೈನ್ಯ ಬಿಡಾರ ಹೂಡಿತ್ತು. ಆ ಮೈದಾನದ ಮಧ್ಯಭಾಗದಲ್ಲಿ ಬ್ರಾಹ್ಮಣ ಮತ್ತು ಮರಾಠರ ಡೇರೆಗಳಿದ್ದವು. ಇಲ್ಲಿಯ ಮುಖ್ಯವಾದ ಘಟನೆ ಎಂದರೆ, ಪೇಶ್ವೆಗಳ ಮತ್ತು ಬ್ರಾಹ್ಮಣರ ಪಕ್ಕದಲ್ಲಿಯೇ ಸಿದನಾಕನ ಪಡೆಯು ಡೇರೆಹಾಕಿತ್ತು. ಪೇಶ್ವೆ ಮತ್ತು ಬ್ರಾಹ್ಮಣರು ಅಸ್ಪೃಶ್ಯರು ತಮ್ಮ ಡೇರೆಹತ್ತಿರ ಡೇರೆ ಹಾಕಿರುವುದನ್ನು ತಕರಾರು ಎತ್ತಿದರು. ಈ ತಕರಾರು ಎರಡನೆಯ ಬಾಜಿರಾವ ಪೇಶ್ವೆಗೆ ತಲುಪಿತು. ಆಗ ಬಾಜಿರಾವನು ಸಿದನಾಕನ ಪಡೆಯ ಪರವಾಗಿಯೇ ಮಾತನಾಡಿದನು. ನಂತರ ಸಿದನಾಕನು ಖರ್ಡೆ ಕದನವನ್ನು ಎರಡನೆಯ ಬಾಜಿರಾವನಿಗೆ ಗೆದ್ದುಕೊಟ್ಟನು. ಬ್ರಿಟಿಷರ ದಾಳಿಗೆ ಹೆದರದ ದಲಿತರು ಪೇಶ್ವೆಗಳ ಮೇಲೆ ಬ್ರಿಟಿಷರು ದಾಳಿ ಮಾಡಿದಾಗ ಪರಾಕ್ರಮದಿಂದ ಹೋರಾಡಿ ಬ್ರಿಟಿಷ ಸೈನ್ಯವನ್ನು ಹಿಮ್ಮೆಟ್ಟಿಸಿದರು. ದಲಿತರು ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಪೇಶ್ವೆಗಳ ಪರವಾಗಿ  ಮೊಘಲರ ವಿರುದ್ಧ ಹೋರಾಡಿದ್ದು ಇತಿಹಾಸ. ಪೇಶ್ವೆಗಳ ಆಡಳಿತವು ಸುಗಮವಾಗಿ ಸಾಗುವುದಕ್ಕೆ ದಲಿತರ ಸಹಾಯ ಗಣ್ಯವಾಗಿತ್ತು. ಆದರೆ ಇಂಥ ಸಂದರ್ಭದಲ್ಲಿಯೂ ಸಹ ದಲಿತರಿಗೆ ಅಸ್ಪೃಶ್ಯತೆ, ಅವಮಾನ, ಮಾನಸಿಕ ಹಿಂಸೆ, ಪೇಶ್ವೆಗಳು ನೀಡುತ್ತಿದ್ದರು.

ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿ

ಪೇಶ್ವೆಗಳ ಆಡಳಿತ ಅವಧಿಯಲ್ಲಿ ಅಸ್ಪೃಶ್ಯತೆ ಜಾತಿ ಪದ್ಧತಿ ಗುಲಾಮಗಿರಿ ಮತ್ತು ಇತರ ಕ್ರೂರ ಕಟ್ಟುಪಾಡುಗಳು ನಿಸ್ಸೀಮವಾಗಿ ಕಾಡುತ್ತಿದ್ದವು. ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಇಂತಹ ಕ್ರೂರ ಆಚರಣೆಗಳು ಜಾರಿಯಲ್ಲಿ ಇರಲಿಲ್ಲ. 1758ರಲ್ಲಿ ಈಸ್ಟ್ ಇಂಡಿಯಾ ಕಂಪನಿ ದೇಶದಲ್ಲಿ ಸ್ಥಾಪಿಸಲಾಯಿತು. ಪರಾಕ್ರಮಿ ಮಹಾರರಿಗೆ  ಬ್ರಟಿಷರು ತಮ್ಮ ಸೈನ್ಯದಲ್ಲಿ ಪ್ರವೇಶವನ್ನು ನೀಡಿದರು. ಬ್ರಿಟಿಷ ರೆಜಿಮೆಂಟ್‍ನಲ್ಲಿ ಸೇರ್ಪಡೆಗೊಂಡ ದಲಿತರಿಗೆ ಅಸ್ಪೃಶ್ಯತೆ ಮತ್ತು ತಾರತಮ್ಯದಂತಹ ಆಚರಣೆಗಳು ಕಾಡುತ್ತಿರಲಿಲ್ಲ. ಆದ್ದರಿಂದ ಬ್ರಿಟಿಷ ಸೈನ್ಯ ಸೇರುವುದಕ್ಕೆ ದಲಿತರು ಉತ್ಸಾಹಕರಾಗಿದ್ದರು. ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿ ಅಸ್ಪೃಶ್ಯರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವ ಮೂಲಕ ಶಿಕ್ಷಣ ಮತ್ತು ಇತರ ಮೂಲಭೂತ ಹಕ್ಕುಗಳನ್ನು ನೀಡಲು ಪ್ರಾರಂಭಿಸಿದರು. ಪೇಶ್ವೆಗಳ ಆಡಳಿತ ಅವಧಿಯಲ್ಲಿ ಇದ್ದ ದಲಿತರ ಸ್ಥಾನಮಾನಗಳಿಗಿಂತಲೂ ಬ್ರಿಟಿಷ ಸೈನ್ಯದಲ್ಲಿ ಅವರ ಸ್ಥಾನಮಾನವು ಸುಧಾರಿಸಿತು. ದಲಿತರಿಗೆ ಹಲವಾರು ಅವಕಾಶಗಳನ್ನು ಬ್ರಿಟಿಷ ಸೇನೆಯು ತೆರೆಯಿತು. ಪೇಶ್ವೆಗಳಿಗಿಂತಲೂ ಬ್ರಿಟಿಷರು ಉತ್ತಮವಾಗಿ ಪೆÇ್ರೀತ್ಸಾಹಿಸಿದರು ಮತ್ತು ಸಹಕರಿಸಿದರು. ಈ ಅವಕಾಶವನ್ನು ಬಳಸಿಕೊಂಡ ದಲಿತರು ತಮ್ಮ ಶೌರ್ಯ ಮತ್ತು ಪರಾಕ್ರಮ ಪ್ರತಿಬಿಂಬಿಸುವುದಕ್ಕೆ ಉತ್ತಮ ಅವಕಾಶ ಎಂದು ಅರಿತರು. ಇದು ದಲಿತರ ವ್ಯಕ್ತಿತ್ವ ವಿಕಾಸನ ಅನಾವರಣಗೊಳ್ಳುವುದಕ್ಕೆ ವೇದಿಕೆಯಾಯಿತು.

ಭೀಮಾ - ಕೋರೆಗಾವ್ ಕದನ

ಬಡೋದೆಯ ಗಾಯಕವಾಡ ಮತ್ತು ಪೇಶ್ವೆಗಳ  ಆಡಳಿತದಲ್ಲಿ ಒಂದು ಸಣ್ಣ ತೆರಿಗೆ ಸಂದಾಯ ವಿವಾದ ಎದ್ದಿತು. ಈ ವಿವಾದವನ್ನು ಅರಿಯಲು ಗಂಗಾಧರ ಶಾಸ್ತ್ರಿಯು ಬರುತ್ತಿದ್ದ. ಈ ಶಾಸ್ತ್ರಿಯನ್ನು ಪಂಡರಾಪುರದಲ್ಲಿಯೇ ಕೊಲೆಗೈಯಲಾಯಿತು. ಈ ಕೊಲೆಗೆ ಎರಡನೆಯ ಬಾಜಿರಾವನೇ ಕಾರಣ ಎನ್ನುವ ವಿವರವನ್ನು  ಬ್ರಿಟಿಷರು ಪಡೆದರು. ಆಗ ಬ್ರಿಟಿಷರು ಎರಡನೆಯ ಬಾಜಿರಾವನನ್ನು ಬಂಧಿಸಿದರು. ಬಂಧನದ ನಂತರ ಬಾಜಿರಾವನು ತಪ್ಪಿಸಿಕೊಂಡು ಹೋದನು. ಬ್ರಿಟಿಷರು ಅಪಾರ ಸೈನ್ಯದೊಂದಿಗೆ ಪುಣೆಯನ್ನು 13-06-1817 ರಲ್ಲಿ ಮುತ್ತಿಗೆ ಹಾಕಿ ಪುನಃ ಬಾಜಿರಾವ ಪೇಶ್ವೆಯನ್ನು ಬಂಧಿಸಲಾಯಿತು. ಆಗ ಎರಡನೆಯ ಬಾಜಿರಾವನು ‘ಪುಣೆ’ ಒಪ್ಪಂದಕ್ಕೆ ಬಂದನು. ಪುಣೆ ಒಪ್ಪಂದದ ಪ್ರಕಾರ ತನ್ನ ಅಧಿಕಾರವನ್ನು ಬ್ರಿಟಿಷರಿಗೆ  ಬಿಟ್ಟುಕೊಟ್ಟನು. ಆದರೆ ಎದೆಗುಂದದ ಬಾಜಿರಾವನು ಹೊಸದೊಂದು ಸೈನ್ಯವನ್ನು ಬಲಪಡಿಸಲು ಮುಂದಾದನು. ನಿಪಾಣಕರ, ಬೋಸಲೆ, ನಿಂಬಾಳ್ಕರ್, ಘೋರ್ಪಡೆ, ವಿಂಚೂರಕರ್, ಜಾಧವ, ಪಟವರ್ಧನ, ಬಾಪು ಗೋಖಲೆ ಮತ್ತು ಮೊದಲಾದ ಸರ್ದಾರರು ಪೇಶ್ವೆ ಸೈನ್ಯವನ್ನು ಸೇರಿಕೊಂಡರು. ಇನ್ನೂ ಅರಬರು, ರೋಹಿಲರು, ಪಠಾಣರು, ಗೋಸ್ವಾಮಿಗಳು ಮತ್ತು ಮುಸ್ಲಿಮರು ಸೇರಿದ ಪೇಶ್ವೆಯ ಸೈನ್ಯದ ಸಂಖ್ಯೆ 50,000ಗಡಿದಾಟಿತು. ಈ ಸೇನೆಯ ಮುಂದಾಳತ್ವವನ್ನು ಬಾಪು ಗೋಖಲೆ ವಹಿಸಿದ್ದನು. ಮತ್ತೆ 05-11-1817ರಲ್ಲಿ ಬ್ರಿಟಿಷರ ಮೇಲೆ ಯುದ್ಧ ಪ್ರಾರಂಭಿಸಿದರು. ಆದರೆ ಬ್ರಿಟಿಷ ಸೈನ್ಯವು ಪೇಶ್ವೆ ಸೈನ್ಯವನ್ನು ಕೆಲವೇ ಗಂಟೆಗಳಲ್ಲಿ ಹಿಮ್ಮಟಿಸಿತು. ಆದರೆ ಎರಡನೆಯ ಬಾಜಿರಾವನ ಪೇಶ್ವೆ ಸೈನ್ಯದಲ್ಲಿ ಎಂಟು ದಿನಗಳವರೆಗೆ ಯಾವುದೇ ಚಲನೆಗಳು ಕಂಡುಬರಲಿಲ್ಲ. ‘ಯರವಾಡ’ ಕದನವು 17-11-1817ರಲ್ಲಿ ನಡೆಯಿತು. ಈ ಕದನದಲ್ಲಿ ಬ್ರಿಟಿಷ್ ಸೈನ್ಯವು ಪೇಶ್ವೆ ಸೇನೆಯ ಮೇಲೆ ವಿಜಯಪತಾಕೆಯನ್ನು ಹಾರಿಸಿತು. ಯರವಾಡ ಕದನದಿಂದಾಗಿ ಎರಡನೆಯ ಬಾಜಿರಾವ ಮತ್ತು ಗೋಖಲೆ ತಪ್ಪಿಸಿಕೊಂಡು ತಮ್ಮ ಸೈನ್ಯದೊಂದಿಗೆ ಹೋದರು. ಆದರೆ ಬ್ರಿಟಿಷ ಸ್ಮಿತ್ ಪಡೆ ಎರಡನೆಯ ಬಾಜಿರಾವನ ಬೆನ್ನಟ್ಟಿತು. ಬಾಜಿರಾವನು ಬ್ರಿಟಿಷರ ದಿಕ್ಕನ್ನು ತಪ್ಪಿಸುತ್ತ ಮುಂದೆ ಸಾಗಿದನು. ಸ್ಮಿತ್ ಪಡೆಗೆ ಪೇಶ್ವೆಗಳ ಸೈನ್ಯದ ನಿಖರ ಮಾರ್ಗವನ್ನು ಪತ್ತೆಹಚ್ಚಲು ವಿಫಲವಾಯಿತು. ಆದರೆ ಸ್ಮಿತ್ ಪಡೆ ಬೆಂಬತ್ತುವ ಪ್ರಕ್ರಿಯೆಯನ್ನು ನಿಲ್ಲಿಸಲಿಲ್ಲ. ಸ್ಮಿತ್ ಪಡೆಯ ದಿಕ್ಕು ತಪ್ಪಿಸಿದ ಬಾಜಿರಾವನು ಪುಣೆಯನ್ನು ಪಡೆಯುವ ಆಶಾ ಮನೋಭಾವನೆ ಯೊಂದಿಗೆ ಅಪಾರ ಸೈನ್ಯದೊಂದಿಗೆ ಪುಣೆಯತ್ತ ಧಾವಿಸಿ ಬಂದನು. ಪುಣೆಯ ವಸ್ತುವಾರಿವಹಿಸಿದ್ದ ಕರ್ನಲ್ ಬರ್ ಶಿರೂರದ  ಲೆಫ್ಟಿನೆಂಟ್ ಕರ್ನಲ್ ಫಿಲ್ಸ್‍ಮನ್‍ಗೆ ಸುದ್ದಿ ತಿಳಿಸಿ ಸೇನೆಯ ಅವಶ್ಯಕವಾಗಿದೆ ಎಂದು ದೂತನ ಮೂಲಕ ಮನವಿ ಮಾಡಿಕೊಂಡನು. ಫಿಲ್ಸಮನ್ ಇದಕ್ಕೆ ಕ್ಷೀಪ್ರಗತಿಯಲ್ಲಿ ಪ್ರತಿಕ್ರಿಯಿಸಿ ಸೆಕೆಂಡ್ ಬಟಾಲಿಯನ್ ಆಫ್ ದ ಫಸ್ಟ್ ರೆಜಿಮೆಂಟ್, ಬಾಂಬೆ ನೇಟಿವ್ ಇನ್ಫಂಟ್ರಿಯನ್ನು ಪುಣೆಗೆ ಕಳುಹಿಸಿದನು. ಈ ಸೇನೆಯಲ್ಲಿ ಮಹಾರ, ಮರಾಠರು ಮತ್ತು ಮುಸ್ಲಿಮರು ಇದ್ದರು.

31-12-1817ರ ರಾತ್ರಿ 8 ಗಂಟೆಗೆ ಶಿರೂರಿಂದ ಹೊರಟ ಸೇನೆ, ಇದರಲ್ಲಿ 500 ಪದಾತಿದಳ, ಪುಣೆ ರೆಗ್ಯುಲರ್ ಹಾರ್ಸ್‍ನ 250 ಅಶ್ವದಳ, 26 ತೋಫುಗಳು ಮತ್ತು 24 ಯುರೋಪಿಯನ್ ಗನ್ನರ್ಸ್‍ಗಳಿಂದ ಕೂಡಿತ್ತು. ಪೇಶ್ವೆ ಸೇನೆಯಲ್ಲಿ 28,000 ಪ್ರಬಲ ಸೈನಿಕರು, 5,000 ಕ್ಕಿಂತಲೂ ಹೆಚ್ಚಿದ್ದ ಪದಾತಿದಳ, 20,000 ಅಶ್ವದಳ ಸೈನ್ಯವನ್ನು ಹೊಂದಿದ್ದು. 01-01-2018ರ ಬೆಳಗ್ಗೆ 10 ಗಂಟೆಗೆ ಕ್ಯಾಪ್ಟನ್ ಸ್ಟಂಟನ್ ಮುಂದಾಳತ್ವದ ಬ್ರಿಟಿಷ ಸೇನೆಯು ಭೀಮಾ ಕೋರೆಗಾವಕ್ಕೆ ಬಂದು ತಲುಪಿತು. ಸತತ ಕಾಲ್ನಡಿಗೆಯ  ಪ್ರಯಾಣದಿಂದ ಬ್ರಿಟಿಷ ಸೇನೆ ಸುಸ್ತಾಗಿತ್ತು. ಭೀಮಾ ನದಿಯ ಬಲದಂಡೆಯಲ್ಲಿಯೇ ಪೇಶ್ವೆ ಸೇನೆಯು ಯುದ್ಧಕ್ಕೆ ಸಂಪೂರ್ಣ ಸನ್ನದ್ಧವಾಗಿ ನಿಂತಿತ್ತು. ಆ ಸೇನೆಯನ್ನು ಕಂಡ ಕ್ಯಾಪ್ಟನ್ ಸ್ಟಂಟನ್‍ನು ಅವರೊಂದಿಗೆ ಯುದ್ಧವನ್ನು ಮಾಡುವುದಕ್ಕಿಂತ; ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭಾವಿಸಿದ, ಆದರೆ ಧೃತಿಗೆಡಲಿಲ್ಲ. ಊರಿನ ಕೋಟೆಯನ್ನು ಬಳಸಿಕೊಂಡು, ಕೋರೆಗಾವ ಗ್ರಾಮಕ್ಕೆ ಪ್ರವೇಶ ಪಡೆದನು. ಗ್ರಾಮದೊಳಗೆ ಕುದುರೆಗಳ ಮೇಲೆ ಸವಾರಿ ಮಾಡುತ್ತಾ ಯುದ್ಧ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಸ್ಟಂಟನ್ ಅರಿತಿದ್ದ. ಮೊದಲು ಆ ಗ್ರಾಮವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು. ಗ್ರಾಮದ ಮುಖ್ಯ ರಸ್ತೆಗಳನ್ನು ತೋಫುಗಳಿಂದ ಮತ್ತು ಸೇನೆಯಿದಿಂದ ಭದ್ರಪಡಿಸಿಕೊಂಡನು. ಇದನ್ನು ಅರಿತ ಪೇಶ್ವೆಗಳ ಸೇನೆಯು ನಾಲ್ಕು ದಿಕ್ಕಿನಿಂದಲೂ ಕೋರೆಗಾವಕ್ಕೆ ಮುತ್ತಿಗೆ ಹಾಕಿತು. ಮಧ್ಯಾಹ್ನದ ನಂತರ ಯುದ್ಧ ಪ್ರಾರಂಭವಾಯಿತು. ಪ್ರಥಮ ಹಂತದಲ್ಲಿ ಬ್ರಿಟಿಷ ಸೇನೆಯು ಯುದ್ಧದಲ್ಲಿ ತಮ್ಮ ಸೈನಿಕರನ್ನು ಕಳೆದುಕೊಂಡಿತು. ಪ್ರಬಲ ಸೇನೆಯೊಂದಿಗೆ ಯುದ್ಧಕ್ಕೆ ಇಳಿದಿದ್ದ ಪೇಶ್ವೆಗಳು ಊರನ್ನೇ ನಾಶಗೊಳಿಸುವ ತಂತ್ರವನ್ನು ರೂಪಿಸಿದ್ದರು. ಈ ಘೋರ ಕದನವು ಖಡ್ಗಗಳ ಬಲದಿಂದಲೇ ನಡೆಯಿತು ಎನ್ನುವುದೇ ಇಲ್ಲಿ ವಿಶೇಷ. ಬ್ರಿಟಿಷರ ಸೈನಿಕರ ಗಾಯಾಳುಗಳನ್ನು ಧರ್ಮಶಾಲೆಯಲ್ಲಿ ವಿಶ್ರಾಂತಿಗೆ ಇಡಲಾಗಿತ್ತು. ಆದರೆ ಇದನ್ನು ಅರಿತ ಪೇಶ್ವೆಯ ಸೇನೆಯು ಶಾಲೆಯ ಮೇಲೆ ಕ್ರೂರ ಧಾಳಿಯನ್ನಿಟ್ಟಿತು. ಗಾಯಾಳುಗಳನ್ನು ಇಲ್ಲಿ ಕೊಲ್ಲಲಾಯಿತು, ದಾಳಿ-ಪ್ರತಿದಾಳಿಗಳು ನಡೆಯುತ್ತಲೇ ಇದ್ದವು. ಪೇಶ್ವೆಗಳ ಸೈನ್ಯಕ್ಕೆ ಹೆದರಿ ಯುದ್ಧದಿಂದ ಹಿಂದೆ ಸರಿಯುವ ಮಾತೇ ಇಲ್ಲ; ಸತ್ತರು ಸರಿ ಶರಣು ಹೋಗುವದಿಲ್ಲ ಎನ್ನುತ್ತಾ ದಲಿತರು ಮುಂದೆ ಸಾಗಿದರು. ಸ್ವಾಭಿಮಾನದ ಜೀವನ ಬಹು ಮುಖ್ಯ, ಸ್ವಾಭಿಮಾನಕ್ಕೆ ದಕ್ಕೆತಂದ ಪೇಶ್ವೆಗಳಿಗೆ ನಾವು ತಲೆಬಾಗುವುದೇ ಇಲ್ಲ. ಸ್ವಾಭಿಮಾನದ ಮಹಾರರು ಸ್ವಾಭಿಮಾನಕ್ಕಾಗಿ ಹೋರಾಡತೊಡಗಿದರು. ಆಗ ಪೇಶ್ವೆಗಳ ಸೈನ್ಯದ ಸೇನೆಯ ಹೆಣಗಳು ಬೀಳಲು ಪ್ರಾರಂಭವಾದವು. ಕೇವಲ 500 ಸಂಖ್ಯೆಯಲ್ಲಿದ್ದ ದಲಿತ ಯೋಧರು ಶಿಸ್ತು ಬದ್ಧ ಹೋರಾಟದಿಂದ ಖಡ್ಗದ ರುಚಿಯನ್ನು ತೋರಿಸಿದರು. ರಾತ್ರಿ ವೇಳೆಯಲ್ಲಿ ಕುಡಿಯುವುದಕ್ಕೆ ನೀರು ಲಭಿಸಿತು; ನೀರು ಕುಡಿದ ನಂತರ ಮತ್ತಷ್ಟು ಉತ್ಸುಕರಾದ ಮಹಾರರು ಪೇಶ್ವೆಗಳ ಸೈನ್ಯದ ಮೇಲೆ ಭಯಂಕರ ದಾಳಿ ಮಾಡಿದರು. 01-01-1818ರ ರಾತ್ರಿ 9ರ ವೇಳೆಗೆ ಪೇಶ್ವೆಗಳ ಸೇನೆಯು ತಪ್ಪಿಸಿಕೊಂಡು ಓಡಿ ಹೋಯ್ತು.

ಈ ಯುದ್ಧದಿಂದ ದಲಿತರಿಗೆ ಆತ್ಮಸ್ಥೈರ್ಯ ಹೆಚ್ಚಿತು. ಯುದ್ಧದ ಪ್ರತಿಫಲವಾಗಿ ದಲಿತರು ಘÀನತೆಯ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ನಾಂದಿ ಹಾಡಿತು. ಒಂದು ವೇಳೆ ಸಿದನಾಕನ ಪಡೆಗೆ ಪೇಶ್ವೆಗಳು ಸಮಾನ ಅವಕಾಶಗಳನ್ನು ನೀಡಿದ್ದರೆ ದೇಶದ ಇತಿಹಾಸವೇ ಬೇರೆಯಾಗಿರುತ್ತಿತ್ತು. ಅಸ್ಪೃಶ್ಯತೆಯ ಆಚರಣೆಯು ಪೇಶ್ವೆಗಳ ಆಡಳಿತವನ್ನೇ ತೆಗೆಯಿತು. ಸಾವಿಗಿಂತಲೂ ಕೆಟ್ಟದಾದದ್ದು ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿ ಎನ್ನುವುದು ಈ ಯುದ್ಧದಿಂದ ಕಂಡುಬರುತ್ತದೆ. ಅಂಬೇಡ್ಕರ್ ಅವರು ಜನವರಿ 1ನ್ನು ಕೋರೆಗಾವ ಕದನದ ವೀರಯೋಧರ ದಿನವನ್ನು ಆಚರಿಸುತ್ತಿದ್ದರು. ಮುಚ್ಚಿಟ್ಟ ಇತಿಹಾಸವನ್ನು ಬಿಚ್ಚಿಡುವದÀರೊಂದಿಗೆ ಸ್ವಾಭಿಮಾನದ ದಿನವನ್ನಾಗಿ ಆಚರಿಸುವುದಕ್ಕೆ ಪ್ರಾರಂಭಿಸಿದರು. ಪ್ರಸ್ತುತದಲ್ಲಿ ಜನವರಿ 01 ನ್ನು, ಅಸಂಖ್ಯಾತ ಜನರು ಈ ವಿಜಯೋತ್ಸವವನ್ನು ಆಚರಿಸುತ್ತಿದ್ದಾರೆ. ದಲಿತರ ಸ್ವಾಭಿಮಾನದ ಸಂಕೇತವಾಗಿ ಅಲ್ಲಿ ನೆಟ್ಟಿರುವ ವಿಜಯಸ್ತಂಭ ಪರಿವರ್ತನೆಗೊಂಡಿದೆ. ಬ್ರಿಟಿಷರು ಕೋರೆಗಾವದಲ್ಲಿ ಹಾಕಲಾದ ವಿಜಯಸ್ತಂಭವು ಇಂದು ಹಳ್ಳಿಹಳ್ಳಿಗೆ ತಲುಪಿದೆ. ದಲಿತರಿಗೆ ಸ್ವಾಭಿಮಾನದ ರೂಪದಲ್ಲಿ ಪುಷ್ಟಿಯನ್ನು ನೀಡುತ್ತಿದೆ. ಆದ್ದರಿಂದ ಇಂದು ದಲಿತರು ಹೆಚ್ಚು ಹೆಚ್ಚು ಸ್ವಾಭಿಮಾನಿಗಳಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ತಾರತಮ್ಯದಂತಹ ವಿಷಯಗಳಿಗೆ ದಲಿತರು ತೀಕ್ಷ್ಣವಾಗಿ ಉತ್ತರಿಸುತ್ತಿರುವುದು ಕಂಡು ಬರುತ್ತದೆ. ದಲಿತರ ಪ್ರಗತಿಗೆ ಈ ಯುದ್ಧವು ತಿರುವು ನೀಡಿತು ಎಂದು ಹೇಳಬಹುದು.

ಭೀಮಾ ಕೋರೆಗಾವ - ಮಹತ್ವ

1927 ರ ಜನವರಿ 1 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೋರೆಗಾವ ವಿಜಯಸ್ತಂಭದ ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿ ಹೊಸ ವರ್ಷದಂದು, ಡಾ ಬಿ.ಆರ್. ಅಂಬೇಡ್ಕರ್ ಅವರು ಭೇಟಿ ನೀಡಿದ ಸ್ಮರಣಾರ್ಥಕವಾಗಿ ಅವರ ಸಾವಿರಾರು ಅನುಯಾಯಿಗಳು ಇಂದು ಭೇಟಿ ನೀಡುತ್ತಿದ್ದಾರೆ. ಭೀಮಾ ಕೋರೆಗಾವ ಯುದ್ಧದಲ್ಲಿ ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿ ಗೆದ್ದಿತು. ಮಹಾರ ಸಮುದಾಯದ ಜನರು ಬ್ರಿಟಿಷ್ ಪರವಾಗಿ ಹೋರಾಡಿದರು; ಈ ಯುದ್ಧದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿ ದಲಿತರ ಸ್ವಾಭಿಮಾನದ ಸಂಕೇತವಾಗಿ ನಿಂತರು. ಭೀಮಾ ಕೋರೆಗಾವ ಕದನವು ಭಾರತದ ದಲಿತರಿಗೆ ಹಕ್ಕುಗಳನ್ನು ಮರುಗಳಿಸಿಕೊಟ್ಟಿತು. ಭೀಮಾ ಕೋರೆಗಾವ ಕದನದ ವಿಜಯವನ್ನು ದಲಿತರು, ಪೇಶ್ವೆಗಳು ದಲಿತರ ಮೇಲೆ ಮಾಡಿದ ಅನ್ಯಾಯದ ವಿರುದ್ಧದ ವಿಜಯವೆಂದು ಪರಿಗಣಿಸಲಾಗುತ್ತದೆ. ಈ ಕದನದಲ್ಲಿ ಬ್ರಿಟಿಷರು ವಿಜಯವನ್ನು ಸಾಧಿಸಿದರು ಎನ್ನುವುದಕ್ಕಿಂತಲೂ ಅಸ್ಪೃಶ್ಯತೆ, ಶೋಷಣೆ, ಅಮಾನುಷ ಬ್ರಾಹ್ಮಣ್ಯ ಸಿದ್ಧಾಂತದ ಸೋಲಾಗಿತ್ತು. ಈ ಯುದ್ಧವು ದಲಿತರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಉದ್ದೀಪನಗೋಳಿಸುತ್ತದೆ.

ಭೀಮಾ ಕೋರೆಗಾವ ಕದನ - ಫಲಿತಗಳು

ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಯು ಜಯಗಳಿಸಿತು ಮತ್ತು ಪೇಶ್ವೆಯ ಪಡೆಗಳು ಯುದ್ಧದಿಂದ ಹಿಂದೆ ಸರಿದಿದ್ದು ಕಂಡುಬರುತ್ತದೆ. ಸಮಕಾಲೀನ ಜಾತಿ-ಆಧಾರಿತ ಸಮಾಜದಲ್ಲಿ, ಮಹಾರರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗಿದ್ದು, ಭೀಮಾ ಕೋರೆಗಾವ ಕದನವು ಭಾರತದ ದಲಿತರಿಗೆ ಸ್ವಾಭಿಮಾನವನ್ನು ತುಂಬಿತು. ದಲಿತ ಸಮುದಾಯವು ಈ ಹೋರಾಟವನ್ನು ಮೇಲ್ರ್ವದ ದಬ್ಬಾಳಿಕೆಯ ಮೇಲೆ ದಲಿತರ ದಿಗ್ವಿಜಯವೆಂದು ಪರಿಗಣಿಸಲಾಯಿತು. ಕೋರೆಗಾವನಲ್ಲಿ ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಯು ತಮಗಾಗಿ ಹೋರಾಡಿದವರ ಸ್ಮರಣಾರ್ಥವಾಗಿ 75 ಅಡಿಯ ವಿಜಯಸ್ತಂಭಕ್ಕೆ 26-03-1821 ರಲ್ಲಿ ಅಡಿಗಲ್ಲುಹಾಕಿ 1822ರಲ್ಲಿ ಪೂರ್ಣವಾಗಿ ನಿರ್ಮಿಸಿತು. ಇದು ಪೇಶ್ವೆಗಳ ನಡೆಸಿದ ಅಸಮಾನತೆಯ ವಿರುದ್ಧ ವಿಜಯ ಎಂದು ದಲಿತರ ಅಭಿಪ್ರಾಯ.

ಉಪಸಂಹಾರ

ಭೀಮಾ ಕೋರೆಗಾವ ಕದನವು ಬ್ರಿಟಿಷ ಮತ್ತು ಮರಾಠರ ಮಧ್ಯ ನಡೆಯದೆ; ಬ್ರಾಹ್ಮಣ್ಯತ್ವ ತುಂಬಿಕೊಂಡಿರುವ ಪೇಶ್ವೆ ಮತ್ತು ದಲಿತರ ಮಧ್ಯದಾಗಿತ್ತು. ಅಸ್ಪೃಶ್ಯತೆಯ ಆಚರಣೆಯಿಂದ ಪೇಶ್ವೆಗಳು ತಮ್ಮ ಆಡಳಿತವನ್ನು ಕಳೆದುಕೊಳ್ಳುಬೇಕಾಯಿತು. ಒಬ್ಬ ದಲಿತ ಸೈನಿಕನು ತಲಾ ಪೇಶ್ವೆಗಳ 56 ಕ್ಕಿಂತ ಹೆಚ್ಚು ಸೈನಿಕರನ್ನು ಸೋಲಿಸಿ ವಿಜಯ ಸಾಧಿಸಿದ್ದು ಚರಿತ್ರೆ. ಆದರೆ ದಲಿತರ ಚರಿತ್ರೆಯನ್ನು ಬ್ರಾಹ್ಮಣ ಸಿದ್ಧಾಂತದ ಬೆಟ್ಟದ ಕೆಳಗೆ ಮುಚ್ಚಿಡಲಾಗಿದೆ. ಈ ದೇಶದ ಚರಿತ್ರೆ ಎಂದರೆ, ಬೌದ್ಧ ಧರ್ಮ ಮತ್ತು ಬ್ರಾಹ್ಮಣ್ಯ ಧರ್ಮಗಳ ನಡುವಿನ ಸಂಘರ್ಷವೇ ಆಗಿದೆ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಈ ಬಚ್ಚಿಟ್ಟ ಇತಿಹಾಸವನ್ನು ಅಂಬೇಡ್ಕರ್ ಅವರು ಹೊರ ತಂದು, 01-01-1927 ರಂದು ಮೊದಲ ಬಾರಿಗೆ ಕೋರೆಗಾವ ವಿಜಯಸ್ತಂಭಕ್ಕೆ ಗೌರವನ್ನು ಸಲ್ಲಿಸಿದರು. ಈ ಕದನದಿಂದ ಹೊರ ಸೂಸುವ ಪ್ರಮುಖ ಅಂಶವೆಂದರೆ, ದಲಿತತ್ವ ಮತ್ತು ಬ್ರಾಹ್ಮಣ್ಯತ್ವದ ಸಿದ್ಧಾಂತದ ಯುದ್ಧವಾಗಿತ್ತು. ಪೇಶ್ವೆಗಳು ದಲಿತರನ್ನು ಅಮಾನುಷ, ಜಾತಿ ಪದ್ಧತಿಯನ್ನು ಹೇರಿ ಗುಲಾಮಗಿರಿಗೆ ತಳ್ಳಿದ್ದಕ್ಕಾಗಿ, ಈ ಕದನವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಯುದ್ಧವು ದಲಿತರ ಸ್ವಾಭಿಮಾನದ ಯುದ್ಧವಾಗಿರುವುದರಿಂದ ದಲಿತರು ಪೇಶ್ವೆಗಳ ವಿರುದ್ಧ ಸೋಲನ್ನೊಪ್ಪಲಿಲ್ಲ. ಒಂದು ವೇಳೆ ದಲಿತರು ಈ ಕದನದಲ್ಲಿ ಸೋತಿದ್ದೆಯಾದರೆ ಪುಣೆಯ ಪ್ರಾಂತ್ಯದಲ್ಲಿ ದಲಿತರ ಮೇಲೆ ಇನ್ನೂ ಘನ-ಘೋರ ಮತ್ತು ಕ್ರೂರವಾದ ಆಚರಣೆಗಳು ಹೇರಲಾಗುತ್ತಿತ್ತು ಎನ್ನುವ ಅಂಶ ಹೊರಬರುತ್ತದೆ. ಮಾನವನ ಭೌತಿಕ ಹಾನಿಗಿಂತಲೂ; ಮಾನಸಿಕ ಹಿಂಸೆ ಘನ ಘೋರವಾಗಿರುತ್ತದೆ ಎನ್ನುವುದು ಈ ಯುದ್ಧದಿಂದ ತಿಳಿದು ಬರುತ್ತದೆ.  ದಲಿತರು ಪೇಶ್ವೆಗಳ   ಸೈನ್ಯವನ್ನು ತೊರೆಯುದಕ್ಕೆ ಅವರಲ್ಲಿದ್ದ ಅಸಮಾನತೆ ಮತ್ತು ಅಸ್ಪೃಶ್ಯತೆಯೇ ಮೂಲ ಕಾರಣ. ದಲಿತರು ಬ್ರಿಟಿಷರ ಪರವಾಗಿ ಹೋರಾಡಿದ್ದಕ್ಕೆ ಸಮಾನತೆ, ಏಕತೆ, ಭ್ರಾತೃತ್ವ ಮತ್ತು ಶಿಕ್ಷಣದಂತ ಸೌಲಭ್ಯಗಳನ್ನು ನೀಡಿದರು ಎನ್ನುವ ಅಂಶ ಕಂಡುಬರುತ್ತದೆ. ಪೇಶ್ವೆಗಳು ದಲಿತರನ್ನು ಪರಕೀಯರಿಗಿಂತಲೂ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎಂಬುದು ಈ ಯುದ್ಧದಿಂದ ಕಂಡುಬರುತ್ತದೆ. ದಲಿತರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಂಡಿದ್ದ ಪೇಶ್ವೆಗಳಿಗೆ ತಕ್ಕ ಉತ್ತರ ಇದಾಗಿತ್ತು. ಈ ಕದನದಿಂದ ದಲಿತರ ಚರಿತ್ರೆಯನ್ನೇ ಪರಿವರ್ತನೆಗೊಳ್ಳುತ್ತಾ ಸಾಗಿತು. ಬ್ರಿಟಿಷರು ದಲಿತರಿಗೆ ವಿವಿಧ ಸವಲತ್ತುಗಳು ಮತ್ತು ಹಕ್ಕುಗಳನ್ನು ನೀಡುವುದರೊಂದಿಗೆ ದಲಿತರ ಪ್ರಗತಿಗೆ ಕೈಜೋಡಿಸಿದರು ಮತ್ತು ದಲಿತರನ್ನು ಜಾಗೃತಿಗೊಳಿಸಿದರು. ದಲಿತರಿಗೆ ಅವಕಾಶದ ಬಾಗಿಲಗಳನ್ನೇ ತೆರೆದರು. ದಲಿತರಲ್ಲಿ ಆತ್ಮ ಸ್ವಾಭಿಮಾನವನ್ನು ತುಂಬುವುದಕ್ಕಾಗಿ 1822 ರಲ್ಲಿ ಕೋರೆಗಾವ ಕದನದ ನೆನಪಿಗಾಗಿ ವಿಜಯಸ್ತಂಭವನ್ನು ಸ್ಥಾಪಿಸಿದರು. ಇದು ಸ್ವಾಭಿಮಾನದ ಯುದ್ಧವಾಗಿದೆ. ‘ದಲಿತರು ಪ್ರಾಣವನ್ನಾದರೂ ನೀಡುತ್ತಾರೆ; ಸ್ವಾಭಿಮಾನ ಬಿಡುವುದಿಲ್ಲ ಎನ್ನುವುದಕ್ಕೆ ಈ ಯುದ್ಧವೆ ಸಾಕ್ಷಿ.

ಆಧಾರ ಗ್ರಂಥಗಳು

  1. ಡಾ.ಬಾಬಾಸಾಹೇಬ್ ಅಂಬೇಡ್ಕರ್‍ರವರ ಸಮಗ್ರ ಬರೆಹಗಳು ಮತ್ತ ಭಾಷಣಗಳು ಸಂಪುಟಗಳು (2015), ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.
  2. https://byjus.com/free-ias-prep/203rd-anniversary-of-the-bhima-koregaon-battle/.
  3. https://en.wikipedia.org/wiki/2018_Bhima_Koregaon_violence
  4. https://thewire.in/rights/bhima-koregaon-violence-four-different-theories-but-no-justice-in-sight.
  5. https://www.researchgate.net/publication/323827364_Bheema_Koregaon_Jayastambh_Raaj_Karan_Jaat_ani_Vasahatik_Smruti.
  6. https://www.academia.edu/70925441/Bhima_Koregaon_and_the_Powers_of_the_Other_Shore_.
  7. https://www.epw.in/journal/2018/5/margin-speak/bhima%E2%80%93koregaon.html.
  8. monthlyreviewarchives.org.
  9. ಸುಧಾಕರ ಖಾಂಬೆ (ಅನು, ಸಿದ್ರಾಮ ಕಾರಣಿಕ),(2013), ‘ದಲಿತ ದಿಗ್ವಿಜಯ’ ಲಡಾಯಿ ಪ್ರಕಾಶನ-ಗದಗ.
  10. ಶ್ರೀನಿವಾಸ ಭಾಲೇರಾವ್ (ಅನು, ಸಿದ್ರಾಮ ಕಾರಣಿಕ),(2013), ‘ದಲಿತ ಅಸ್ಮತೆ’ ಲಡಾಯಿ ಪ್ರಕಾಶನ-ಗದಗ.
  11. ಎನ್ ಆರ್ ಶಿವರಾಮ (2013), ‘ಡಾ. ಅಂಬೇಡ್ಕರ್ ದರ್ಶನ’, ಲಕ್ಷ್ಮೀ ಮುದ್ರಣಾಲಯ-ಬೆಂಗಳೂರು.
  12. ವಿಠ್ಠಲ ವಗ್ಗನ್(2022), ‘ಭೀಮಾ ಕೋರೆಗಾಂವ್ ಮಹಾ ಸಂಗ್ರಮ’, ಶ್ರೀನಿಧಿ-ಸುಪ್ರೀತ್ ಪ್ರಕಾಶನ-ಕಲಬುರಗಿ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal