ತರಕಾರಿಗಳ ಹಾಡು
ಮಂಜುನಾಥ ಕೆ.ಎಸ್.
ದ್ವಿತೀಯ ಬಿ.ಎಸ್.ಸಿ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
manjunathks099@gmail.com Ph: 9743769809
ಅಡುಗೆಮನೆಯಲ್ಲೊಂದು ದಿನ ಪಂಕ್ಷನ್ ನಡೆಯುತ್ತಿತ್ತು,
ಸೊಪ್ಪುಗಳೆಲ್ಲಾ ಸೇರಿ ಚಪ್ಪರ ಹಾಕಿತ್ತು,
ದಂಡಿನ ಸೊಪ್ಪು ತಾನೇ ಬಂದು ತೋರಣ ಹಾಕಿತ್ತು,
ಕುಂಬಳಕಾಯಿ ಕುರ್ಚಿಯಲ್ಲಿ ಕುಳಿತು ಅಧ್ಯಕ್ಷನಾಗಿತ್ತು,
ಸೌತೆಕಾಯಿ ಹುರುಳುತ್ತಾ ಬಂದು ಸ್ವಾಗತ ನೀಡಿತ್ತು,
ಹೀರೇಕಾಯಿ ಬಂದವರಿಗೆಲ್ಲಾ ಪನ್ನೀರು ಹಾಕಿತ್ತು
ನುಗ್ಗೇಕಾಯಿ ಪಡವಲಕಾಯಿ ಓಲಗ ಊದಿತ್ತು.
ಮಾವಿನಹಣ್ಣು ಮಂತ್ರ ಹೇಳಿ ಹಣ್ಣು ಹಂಚಿತ್ತು,
ಬೀಟ್ರೂಟ್ ಬಂದವರಿಗೆಲ್ಲಾ ಊಟ ಹಾಕಿತ್ತು.
ಬಾಳೇಹಣ್ಣು ಬಟ್ಟೆ ಬಿಚ್ಚಿ ಡ್ಯಾನ್ಸ್ಮಾಡಿತ್ತು
ಟೊಮ್ಯಾಟೋ ಹಣ್ಣು ಸುಂದರಿಯಂತೆ ತಾಂಬೂಲ ಹಂಚಿತ್ತು,
ಹಲಸಿನಹಣ್ಣು ಹೋಗೋರಿಗೆಲ್ಲಾ ಟಾಟಾ ಮಾಡಿತ್ತು
ಕ್ಯಾರೇಟ್ ಅಂತು ಬಂದವರಿಗೆಲ್ಲಾ ಕ್ಯಾತೆ ಮಾಡ್ತಿತ್ತು.