Tumbe Group of International Journals

Full Text


ಹಸಿರಸಿರಿ & ಮುಂಜಾವು

ಮನೋಜ್ ಟಿ ಇ.

ಬಿ ಎಸ್ಸಿ, ದ್ವಿತೀಯ ವರ್ಷ(ಸಿಬಿಜೆಡ್)

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು

9731713839

ಹಸಿರಸಿರಿ

ಹಸಿರಿನ ವನ ಕುಲವೇ ವಂದನೆ

ನಿನ್ನುಸಿರೆ ಜೀವವು ನಮ್ಮಯ ಕಾಯಕೆ

ಕಾಯ ಕರಗಿದರು ಮುಗಿಯದು ನಿನ್ನ ಕಾಯಕ

 

ನಿನ್ನ ನಗುವಿನ ಚಿಗುರೆಲೆಯೇ

ಜಗದ ಬಾಳಿನ ಹೊಸ ಸ್ಪಂದನ

ವಸಂತಕೆ ನೀ ತಂದ ಹೂವು ಕಾಯಿಗಳೆ ಋತುವಿಗೆ ಅಲಂಕಾರ

 

ಮಾನವ ಜನ್ಮವಿದು ಕಡಿದು ಕೆಡವಿಹರು ನಿನ್ನಯ

ತಂಡೊಡ್ಡಿಹರು ಪ್ರಾಣಕೆ ಸಂಚಕಾರ

ವನದೇವತೆ ನೀನಿಲ್ಲದೆ ಜೀವಗಳ ಬಾಳು ಆಹಾಕಾರ

 

ನಿನ್ನಿಂದಲೇ ಉಂಟು ನೀರು ಗಾಳಿ

ನಿನ್ನಿಂದಲೇ ಭೂಮಿಯ ಒಡಲಿಗೆ ಸದೃಢತೆಯ

ನಿನ್ನಿಂದಲೇ ಇಂಧನಾದಿಗಳು

 

ನೀನೇ ವನ ಸಿರಿಯೇ

ಭೂ ಮಂಡಲ ಸಲಹುವ ತಾಯೇ

ನಿನ್ನೋಲವಿಗೆ ನನ್ನಯ ವಂದನೆ

ಮುಂಜಾವು

 

ನಗುತಲಿ ಬಂದ ಉದಯ ಕವಿಯು

ಬಂಗಾರದ ಸೆರಗಿನೊಂದಿಗೆ ಕಪ್ಪುಗುಡ್ಡಕ್ಕೆ

ಸಿಂಧೂರವಿಟ್ಟು ನಿಂತ

 

ಹಸಿರ ಹೊತ್ತಗುಡ್ಡದೊಡಲು ಮಿನುಗುತಿತ್ತು

ಎಲೆಯಂಚಿನ ಮಂಜಿನನಿಯ ಹೊನಲು

ಜಾರುತ್ತಿತ್ತು ಮೆಲ್ಲನೆ ಧರೆಯ ಚುಂಚಿಸಲು

 

ಬಿರಿಯ ಆಸೆಯೊತ್ತು ನಗುತಲಿತ್ತು ಮಲ್ಲೆ

ಮೊಗ್ಗಿನ ಮುತ್ತು ಬಿರಿದು ನಗುವ ಹೊತ್ತಿಗೆ

ಎಲ್ಲೆಡೆಯೂ ಸುಗಂಧವತ್ತಿತು

 

ರವಿಯನಿಡಿಯುವ ಹಠವ ತೊಟ್ಟು

ಗುಡುಗು ಬಡಿದಿತ್ತು ಮೇಘ ಮಿಂಚು ಬೀರಿತ್ತು

ಹಿಡಿಯಲಾರೆನೆಂದು ನೊಂದು ಅಶೃಧಾರೆಯನರಿಸಿತ್ತು

 

ವರ್ಷಧಾರೆಗೆ ಮೈಯೊಡ್ಡಿ ತೋಯ್ದು ವೃಕ್ಷ

ವಂಶ ಮೈ ನವಿರಿಸಿತ್ತು ಪ್ರತಿ ಹನಿಯ ಹೀರಿ

ಧರೆಯು ತನುಮನ ತಣಿದಿತ್ತು ಹನಿಯು ಕುಣಿಕುಣಿದು ಧಣಿದಿತ್ತು.


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ನನ್ನಜ್ಜಿ & ಪ್ರೀತಿ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal