Tumbe Group of International Journals

Full Text


ಪ್ರಕೃತಿಯ ಮಡಿಲಲ್ಲಿ ಹಸಿರಿನ ಸಿರಿಯಲ್ಲಿ

ಚನ್ನೆ ಗೌಡ .ಡಿ. ಸಿ

III BSC CBZ A section

GFGC TUMKUR

9844420512

EMAIL: dcchannegowda@gmail.com

 

ದಯವಿಟ್ಟು ಗಮನಿಸಿ

ನನ್ನ ಈ ಸಣ್ಣ ಕವನವ ಆಲಿಸಿ

ಹಿಂದೆ ಬದಲಿಸಿ ನಿಮ್ಮ ಮನವ

ಪರಿಸರ ಸ್ನೇಹಿಯಾಗಿ ಆಚರಿಸಿ ಹಬ್ಬವ

ಉಳಿಸಿ ನಮ್ಮ-ನಿಮ್ಮೆಲ್ಲರ ಜೀವವ

 

ಪ್ರಕೃತಿಯ ಮಡಿಲಲ್ಲಿ

ಹಸಿರಿನ ಸಿರಿಯಲ್ಲಿ

ಹುಟ್ಟಿ ಬೆಳೆದಿಹೆವು ನಾವು

 ಹಬ್ಬ ಆಚರಣೆಗಳು

ಸಂಭ್ರಮ ಸಡಗರಗಳು

ಅನುಭವಿಸಿದೆವು ನಾವು

 

ಮಾವಿನ ತೋರಣ

ಹಬ್ಬದ ಹೂರಣ

ಸಿಹಿಯಿಂದ ಆಚರಿಸೋಣ

ಪರಿಸರವ ಉಳಿಸೋಣ

 

                                                                         ಹಚ್ಚುತ್ತ ದೀಪವ                                                                        

ಸ್ವಾಗತಿಸಿ ದೀಪಾವಳಿಯ

ಅಳಿಸಿ ಪಟಾಕಿಯ

ಉಳಿಸಿ ಪರಿಸರವ

 

ಬಣ್ಣಗಳ ಬೆಳೆಯುತ್ತ

ಬರುತಿಹುದು ಹೋಳಿಯು

ಮಲಿನವಾಗುತಿಹುದು ಪ್ರಕೃತಿಯು

ಜೀವವನ್ನು ನಶಿಸುತ್ತಿರುವುದು

 

ಬಣ್ಣದ ಗಣಪ

ನೋಡಲುಬಹು ಚಂದ

ನೀರಿಗೆ ಇಳಿಯುತ್ತ

ಜೀವ ರಾಶಿಗಳಿಗೆ ತಂದ ಆತಂಕ

 

ಬೆಲ್ಲ ಸುಣ್ಣ ಬಳಸಿ

ಸುಂದರ ವಿನಾಯಕನ ಸೃಷ್ಟಿಸಿ

ಸಂಭ್ರಮದಿಂದ ಚತುರ್ಥಿಯ ಆಚರಿಸಿ

ಜಲಚರಗಳಿಗೆ ಉಣಬಡಿಸಿ

ಪರಿಸರವಉಳಿಸಿ.


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ನನ್ನಜ್ಜಿ & ಪ್ರೀತಿ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal