Tumbe Group of International Journals

Full Text


ಹಣ್ಣುಗಳು ಮತ್ತು ಆರೋಗ್ಯ

ದಯಾನಂದ ಪಿ

II BSC (CBZ), GFGC TUMKUR

dayananda381999@gmail.com

Ph.no: 8105502058

ಹಣ್ಣುಗಳು ಮನುಷ್ಯನಿಗೆ ಅತಿಮುಖ್ಯವಾದ ಭಾಗವಾಗಿದೆ. ಹಾಗೂ ಮನುಷ್ಯನ ಆಹಾರ  ಸಮತೋಲನವನ್ನು  ಕಾಪಾಡುತ್ತದೆ.  ಒಳ್ಳೆಯ ಪೌಷ್ಟಿಕಾಂಶದ ಮೌಲ್ಯಗಳನ್ನು ಒಳಗೊಂಡಿದ್ದು ಆಹಾರದ ಮುಖ್ಯ ಉಪಯುಕ್ತವಸ್ತುವಾಗಿದೆ.

ಮಾಗಿದ ಹಣ್ಣನ್ನು ಮತ್ತೆ ಕಾಯಿಯನ್ನಾಗಿ ಬದಲಾಯಿಸಲಾಗದು ಮತ್ತು ಅನುವಂಶಿಕ ನಿಯಂತ್ರಿತ ಕ್ರಿಯೆಯಾಗಿದೆ . ಹಣ್ಣುಗಳನ್ನು ದೈಹಿಕ ಮತ್ತು ರಾಸಾಯನಿಕ ವಾಗಿಬದಲಾವಣೆ ಮಾಡಿ ಅವುಗಳನ್ನು ತಾಗಿಸಿಮಾರುವರು.  ರಾಸಾಯನಿಕವಾಗಿ ಮಾಗಿಸಇರುವ ಹಣ್ಣುಗಳು ಮಾರುಕಟ್ಟೆಯಲ್ಲಿ ಮತ್ತು ಆರ್ಥಿಕವಾಗಿ ಒಳ್ಳೆಯಲಾಭದಾಯಕ ವಸ್ತುಗಳನ್ನಾಗಿ ಬಳಸುತ್ತಿದ್ದಾರೆ.

ಕೃತಕವಾಗಿ ಹಣ್ಣುಗಳನ್ನು ಮಾಗಿಸಲು ಬಳಸುವ ಸಿಂಪಡಿಕೆಗಳು.

ಇತ್ತೀಚಿನ ದಿನಗಳಲ್ಲಿ ಜಗತ್ತಿನೆಲ್ಲೆಡೆ ಹಣ್ಣುಗಳನ್ನು ಅತಿಬೇಗನೆ ಮಾಗಿಸಿ ಆರ್ಥಿಕವಾಗಿ ಬೆಳೆಯಲು ಅನೇಕ ರಾಸಾಯನಿಕ ಸಿಂಪಡಿಕೆಗಳನ್ನು ಬಳಸಲಾಗುತ್ತಿದೆ . ಅವುಗಳೆಂದರೆ ಕ್ಯಾಲ್ಸಿಯಂ ಕಾರ್ಬೈಡ್,  ಅಸಿಟಲಿ ನ್ಪ್ರೊಫೈಲ್ಮುಂತಾದವುಗಳನ್ನು ಬಳಸಲಾಗುತ್ತಿದೆ.

ಇವುಗಳಲ್ಲಿ ಸಾಮಾನ್ಯವಾಗಿ ಅತಿಹೆಚ್ಚಾಗಿ ಬಳಸುವ ರಾಸಾಯನಿಕ ಸಿಂಪಡಿಕೆವೆಂದರೆ ಕ್ಯಾಲ್ಸಿಯಂಕಾರ್ಬೈಡ್ ಆದರೆ ಇದು ಮಾನವನ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ .ಏಕೆಂದರೆ ಕ್ಯಾಲ್ಸಿಯಂಕಾರ್ಬೈಡ್ಗಳು ಫಾಸ್ಪೇಟ್ಲೇಪನಗಳನ್ನು ಒಳಗೊಂಡಿರುತ್ತದೆ. ನೀರಿನಲ್ಲಿ ಅನಿಲ ಫಾಸ್ಫಾರಿಕ್ ಅನಿಲಗಳನ್ನು ಉತ್ಪತ್ತಿಮಾಡುತ್ತದೆ  ಇವುಗಳನ್ನು ಅನೇಕರೀತಿಯಲ್ಲಿ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ . ಅವುಗಳೆಂದರೆ ಮರೆವು ,ಮಾನಸಿಕ ಗೊಂದಲ, ದೇಹದಲ್ಲಿ ಆಮ್ಲಜನಕದ ಕೊರತೆ ತಲೆತಿರುಗುವಿಕೆ ಮುಂತಾದರೋಗಗಳು ಹೊರಡಬಹುದು.

ಇಂತಹ ರಾಸಾಯನಿಕ ಸಿಂಪಡಣೆ ಮಾಗಿರುವ ಹಣ್ಣುಗಳನ್ನು ಬಳಸದೆ ನೈಸರ್ಗಿಕವಾಗಿ ಆಗಿರುವ ಹಣ್ಣುಗಳನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯ ಮತ್ತು ಆಹಾರ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

ರೈತರು ಜೈವಿಕ ಗೊಬ್ಬರಗಳನ್ನು ಹಾಕಿ ಬೆಳೆಸಿ ಅವುಗಳನ್ನು ನೈಸರ್ಗಿಕವಾಗಿ ಮಾಗಿಸಿ ಯಾವುದೇ ಆರ್ಥಿಕರೀತಿಯ ಹಾಗೂ ದುರಾಸೆಯ ದೃಷ್ಟಿ ಇಲ್ಲದೆ ಯಾವುದೇ ಆರೋಗ್ಯಕ್ಕೆ ಹಾನಿಯುಂಟಾಗದಂತೆ ಅವುಗಳನ್ನು  ಮಾರುಕಟ್ಟೆಗೆ ತಂದುಮಾರುವರು.

ರಾಸಾಯನಿಕ ಸಿಂಪಡಣೆ ಹಣ್ಣುಗಳು ತಮ್ಮ ರುಚಿಯನ್ನು ಕಳೆದುಕೊಳ್ಳುತ್ತದೆ ಆದರೆ ನೈಸರ್ಗಿಕವಾಗಿ ಮಾಗಿರುವ ಹಣ್ಣುಗಳು ತನ್ನ ನಿಜವಾದ ಸ್ವಾದವನ್ನು ಕಳೆದುಕೊಳ್ಳುವುದಿಲ್ಲ.


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ನನ್ನಜ್ಜಿ & ಪ್ರೀತಿ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture
© 2018. Tumbe International Journals . All Rights Reserved. Website Designed by ubiJournal