Tumbe Group of International Journals

Full Text


ಏಕಿಷ್ಟು ತಾಳ್ಮೆ ನಿನಗೆ ನನ್ನವ್ವ

ಮನೋಜ್. ಟಿ

III ಬಿಎಸ್ಸಿ (ಸಿ.ಬಿ.ಜಡ್)

Govt. First Grade College, Tumkur

7406240395, manojdhadha3839@gmail.com

 

ನೀ ಕೊಟ್ಟ ಗಾಳಿ, ನೀ ಕೊಟ್ಟ ಹಣ್ಣು,

ನೀ ಕೊಟ್ಟ ನೀರು, ನೀ ಕೊಟ್ಟ ಜೀವ

ಎಲ್ಲವೂ ನಿನ್ನಿಂದಲೆ ನಮ್ಮವ್ವ

ಈ ಪಾಪಿ ಜನಕೆ ಕರುಣೆ ಇಲ್ಲ ಕೇಳೆ ನನ್ನವ್ವ.....

 

ಕಡಿಯುತಿಹರು,ನಾಶಗೊಳಿಸುತಿಹರು ಕಾಡ,

ನೀನುಟ್ಟ ಹಸುರ ಕಿತ್ತು ಬಿಸಾಡುತಿಹರು ನೋಡ,

ಈ ಅಜ್ಞಾನಿ ಮಾನವರು....     ----> ಏಕಿಷ್ಟು ತಾಳ್ಮೆ ನಿನಗೆ ನನ್ನವ್ವ

 

ಅಲ್ಲಿಗೂ ತೀರದ ಅತಿ ಆಸೆ ಇವರದು,

ನಿನ್ನೊಡಲ ಬಗೆದು ಮಾರುತಿಹರು,

ನಿನ್ನ ಅಗೆದು ಅಗೆದು ಕೊಲ್ಲುತಿಹರು,

ನೀನೆ ಪಡೆದ ನಿನ್ನ ಜನರು .....   ----> ಏಕಿಷ್ಟು ತಾಳ್ಮೆ ನಿನಗೆ ನನ್ನವ್ವ

 

ವ್ಯರ್ಥಗೊಳಿಸಿ ಜೀವ ಜಲವ,

ಹೀರುತಿಹರು ಅಂತರ್ಜಲವ,

ನಾಶಗೊಳಿಸಿ ವನ್ಯಕುಲವ,

ಜಲ ಜೀವಕುಲಕೆ ವಿಷವ ಕುಡಿಸಿ,

ಸುತ್ತುತಿಹರು ಕಾರ್ಖಾನೆ ರಚಿಸಿ,

ಕೆಮ್ಮುತಿಹರು ಹೊಗೆ ಗಾಳಿಯ ಸೇವಿಸಿ....   ----> ಏಕಿಷ್ಟು ತಾಳ್ಮೆ ನಿನಗೆ ನನ್ನವ್ವ

 

ಬಿಸಿಲೆಂದರೆ ನೆರಳ ಹರಸಿ,

ಕುದಿವ ಟಾರ್ ಕಾಡಿಗೆರಚಿ,

ಮೆರೆಯುತಿಹರು ತಮ್ಮ ರಾಜ್ಯಭಾರ ನೆಡೆಸಿ....   ----> ಏಕಿಷ್ಟು ತಾಳ್ಮೆ ನಿನಗೆ ನನ್ನವ್ವ

 

ದೂರವಿಟ್ಟರು ನಿನ್ನ ಗೆಳೆಯ "ವರುಣ"ನ,

ಹೀಗೆ ನಡೆದರೆ ಜನರ ಜೀವನ,

"ಸತ್ತು ಬಿದ್ದ ದನದ ಹೆಣ".....   ----> ಏಕಿಷ್ಟು ತಾಳ್ಮೆ ನಿನಗೆ ನನ್ನವ್ವ


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ನನ್ನಜ್ಜಿ & ಪ್ರೀತಿ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal