ಸಿಂಹದ ಬಾಯಲ್ಲೊಂದು ಸಿರಿಯ ಸ್ವಪ್ನ
ತೇಜೆಶ್ವಿನಿ. ಎಸ್
3ನೇ ಬಿ.ಎಸ್.ಸಿ(ಸಿ.ಬಿ.ಜಡ್)
ಜಿ.ಎಪ್.ಜಿ.ಸಿ ತುಮಕೂರು
tejutejwini1@gmail.com 7349030174
ಅದೊಂದು ಕಂಡು ಕಂಡರಿಯದ ಕಾಡು ಆ ಕಾಡಿನಲ್ಲಿ ಎಲ್ಲಾ ಪ್ರಾಣಿಗಳಂತೆ ಸಿಂಹವೂ ವಾಸವಾಗಿತ್ತು. ಅವೆಲ್ಲ ಪ್ರತಿದಿನ ತಮ್ಮ ಆಹಾರಕ್ಕಾಗಿ ತಿರುಗಾಡಿ ತಿರುಗಾಡಿ ತಮ್ಮ ತಮ್ಮ ಗುಹೆಗಳನ್ನು ಸೇರುತ್ತಿದ್ದವು. ಒಂದು ದಿನ ಸಿಂಹವು ತನ್ನ ಬೇಟೆಯನ್ನು ಮುಗಿಸಿ ಗುಹೆಗೆ ತಲುಪಿ ಮಲಗಿತ್ತು. ಆ ಸಮಯದಲ್ಲಿ ಕಾರ್ಮೋಡ ಕವಿದು ಮಳೆ ಸುರಿಯುವಾಗ ಹನಿಗಳು ಯಾವ ರೀತಿ ಕಂಡು ಬರುತ್ತವೆಯೋ ಅದೇ ಗಾತ್ರದ ಒಂದು ನೊಣ ಸಿಂಹದ ಬಾಯಲ್ಲಿ ಸೇರಿತ್ತು. ಆ ಸಿಂಹಕ್ಕೆ ಎಂತಹ ನಿದ್ರೆ ಬಂದಿತೆಂದರೆ ತನ್ನ ಬಾಯಲ್ಲಿ ಒಂದು ನೊಣ ಬಾಡಿಗೆ ಪಡೆದಿರುವ ವಿಷಯವನ್ನು ಅರಿಯದೆ ಮಲಗಿತ್ತು. ಅಯ್ಯೋ ನೊಣ ಏನು ಕಮ್ಮಿ ಇಲ್ಲ ಕಂಡ್ರಿ ಯಾಕೆಂದರೆ ನೊಣವು ಕೂಡ ತಾನೊಂದು ಸಿಂಹದ ಬಾಯಿ ಎಂದು ಗುಹೆಯಲ್ಲಿ ಇದ್ದೀನಿ ಎಂಬ ವಿಷಯವನ್ನು ಮರೆತು ನಿದ್ದೆ ಮಾಡುತ್ತಿತ್ತು. ಸುಮ್ಮನೆ ನಿದ್ದೆ ಹೋದ್ರೆ ಪರವಾಗಿಲ್ಲ ಅದು ಒಂದು ಅದ್ಭುತವಾದ ಕನಸನ್ನು ಕಾಣುತ್ತಿತ್ತು. ಆ ಕನಸಿನಲ್ಲಿ ತಾನೊಂದು ಮೋಡಣ ಮಹಾರಾಜ್ಯಕ್ಕೆ ಅಧಿಪತಿಯಾಗಿ ನೂರಾರು ಸಿಹಿ ತಿಂಡಿಗಳಿಗೆ ಅಧಿಪತಿಯಾಗಿ ಸಿರಿ ಸಂಪತನ್ನು ಅನುಭವಿಸಿ ಅರಾಮಾಗಿ ರಾಜ್ಯಭಾರ ಮಾಡುತ್ತಿರುವ ಕನಸನ್ನು ಕಾಣುತಿತ್ತು. ಈ ಸಮಯದಲ್ಲಿ ಸಿಂಹಕ್ಕೆ ಎಚ್ಚರಿಕೆಯಾಯಿತು, ಈ ವಿಷಯವನ್ನು ತಿಳಿದ ನೊಣ ತನ್ನ ಅದ್ಭುತವಾದ ಕನಸನ್ನು ಪಕ್ಕಕ್ಕೆ ಇಟ್ಟು ತಾನು ಸಿಂಹದ ಬಾಯಿ ಎಂಬ ಮಹಾದ್ವಾರದಿಂದ ಹೊರ ಬಂದರೆ ಸಾಕೆಂದು ನಿಧಾನವಾಗಿ ಹೊರಬರುವಷ್ಟರಲ್ಲಿ ಬೇಟಿಗಾರರ ಸೈನ್ಯ ಸಿಂಹಕ್ಕೆ ಬಲೆ ಬೀಸಿತು. ಆ ಬಲಶಾಲಿ ಬೇಟಿಗಾರರು ಸಿಂಹವನ್ನು ತಾವಿರುವ ಜಾಗಕ್ಕೆ ಎಳೆ ತಂದರು ಸಿಂಹವನ್ನು ಎಳೆತೆರುವಷ್ಟರಲ್ಲಿ ಆ ನೊಣದ ಸುಳಿವೇ ಇರಲಿಲ್ಲ ಅ ನೋಣವು ಆಗಲೇ ಕಾಡನ್ನೇ ಬಿಟ್ಟು ಹೊರಟು ಹೋಗಿತ್ತು. ಎಂದರೆ ಅಗಲೇ ಅದು ನೊಣದ ಸೈನ್ಯವನ್ನು ಸೇರಿ ಕೆಲಸ ನಿರ್ವಹಿಸುತ್ತಿತು. ಹೀಗಿರುವಾಗು ಒಬ್ಬ ಬೇಟೆಗಾರನು ಸಿಂಹ ಎಲ್ಲಿ? ಎಂದು ಇನ್ನೋಬ್ಬ ಬೇಟೆಗಾರ ಯಾವ ಸಿಂಹ? ಎಂದ. ಈ ಸಿಂಹ ಮತ್ತು ನೊಣದ ಸುಂದರ ಕಥೆ ಮಲಗಿದ್ದ ಬೇಟೆಗಾರನ ಸುಂದರ ಕನಸಾಗಿತ್ತು.
ಕವನಗಳು
ಬಾವಿನಲ್ಲೋಂದು ಚುಕ್ಕಿ
ಅದನ್ನು ನೋಡುತ್ತಿತ್ತು ಪುಟ್ಟ ಹಕ್ಕಿ
ಪಕ್ಕದಲ್ಲಿ ಹರಿಯುತ್ತಿತ್ತು ನದಿಯೊಂದು ದುಮ್ಮಿಕ್ಕಿ ದುಮ್ಮಿಕ್ಕಿ
ಆ ಸಮಯದಲ್ಲಿ ಸಾಗುತ್ತಿತ್ತು
ಕನ್ನಡದ ಕಾಮನಬಿಲ್ಲಿನ ಸುಂದರ ಏಳು ಬಣ್ಣ್ದದ ಪಲ್ಲಕ್ಕಿ .
ತಂದೆ ತಾಯಿಯರ ಆರ್ಶೀವಾದವಿದ್ದರೆ ಅದು ಜೀವನ
ಸಾಧನೆಯ ಹಿಂದೆ ಇರಬೇಕು ಗುರುಗಳ ಮಾರ್ಗದರ್ಶನ
ಸಾಧಿಸಿದವನು ನೆನೆಯುವನು ತನ್ನ ಶಾಲೆಯನ್ನು
ಈ ಎಲ್ಲ ಗುಣಗಳು ಇದ್ದವನು ಮಾತ್ರ ಮುನ್ನಡೆಸಬಲ್ಲ ದೇಶವನ್ನು.