Tumbe Group of International Journals

Full Text


ನೊಟು ರದ್ದತಿಯ ನಿರ್ಧಾರ ಕೈಗೊಳ್ಳಲು ಕಾರಣ

Ram Kumar D

III BSc-CBZ

GFGC TUMKUR, INDIA

7760453054  &  ramkumartmk98@gmail.com

ದೇಶದ ಆರ್ಥಿಕತೆಗೆ ಭಾರೀ ಮಾರಕವಾಗಿದ್ದ ಕಪ್ಪುಹಣ ಹಾಗೂ ಖೋಟಾ ನೋಟು ಚಲಾವಣೆ ತಡೆಗಾಗಿಯೇ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.ಲೆಕ್ಕಕ್ಕೆಸಿಗದ ಅಸಲಿ ಹಾಗೂ ನಕಲಿ ನೋಟುಗಳಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಭಾರೀ ಪ್ರಮಾಣದಲ್ಲಿ ತೆರಿಗೆ ನಷ್ಟವಾಗುತ್ತಿತ್ತು. ಅನೇಕ ರೀತಿಯ ಕಳ್ಳವ್ಯವಹಾರಕ್ಕೆ ಅವಕಾಶವಾಗುತಿತ್ತು. ದೇಶದ ಆರ್ಥಿಕತೆಗೆ ಇದು ದೊಡ್ಡ ಹೊಡೆತವಾಗಿತ್ತು. ಹೀಗಾಗಿಯೇ ವಿದೇಶಿ ದೇಶಿ ಕಪ್ಪುಹಣಕ್ಕೆ ನಿಯಂತ್ರಣ ತರಲು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತ್ತು.

ಉದ್ದೇಶಗಳು:

ಕಪ್ಪು ಹಣವನ್ನು ಹೊರತೆಗೆಯುವುದು ನಕಲು ನೋಟುಗಳನ್ನು ತಡೆಯುವುದು ಮತ್ತು ದೇಶದಲ್ಲಿ ಭಯೋತ್ಪಾದನೆಗೆ ಹಣ ಉಪಯೋಗವಾಗುವುದನ್ನು ತಡೆಯುವ ಉದ್ದೇಶದಿಂದ ಈ ನೋಟು ರದ್ದತಿ ಕ್ರಮವನ್ನು ಸರ್ಕಾರ ಕೈಗೊಳ್ಳಲಾಗಿದೆ ಎಂದು ಪ್ರಧಾನಿಯವರು ತಮ್ಮ ಭಾಷಣದಲ್ಲಿಹೇಳಿದರು. ಭ್ರಷ್ಟಾಚಾರ ತಡೆಯುವುದು ಮತ್ತಿನ ಔಷದಿಗಳ ಮಾರಾಟ ನಿಯಂತ್ರಣ, ತೆರಿಗೆ ಪಾವತಿಯಲ್ಲಿ ಹೆಚ್ಚಳ,  ಸರ್ಕಾರಿ ಆದಾಯ ಹೆಚ್ಚಿಸುವುದು, ಇಲೆಕ್ಟ್ರಾನಿಕ್ ವ್ಯವಹಾರ ಬೆಳವಣಿಗೆ,  ಕರೆನ್ಸಿ ನೋಟುಗಳಿಗೆ ಬೇಡಿಕೆ ಇಳಿಸುವುದು ಮುಂತಾದ ಗುರಿಗಳು ಇದರ ಮುಂದಿದೆ. ನೆರೆಯ ದೇಶಗಳಿಂದ ನಮ್ಮ ದೇಶದೊಳಗೆ ಹರಿದು ಬರುವ ನಕಲಿ ನೋಟುಗಳಿಂದ ದೇಶದ ಆರ್ಥಿಕತೆಯು ದುರ್ಬಲಗೊಳ್ಳುತ್ತದೆ. ಮತ್ತು ಇದು ಉಗ್ರರಿಗೆ ಹಣ ದೊರೆಯುವ ಸುಲಭ ಮಾರ್ಗವಾಗಿದೆ. ಈ ನಕಲಿ ನೋಟುಗಳನ್ನು ಪತ್ತೆಹಚ್ಚಿ ಈ ನಮ್ಮ ದೊಡ್ಡ ಅರ್ಥವ್ಯವಸ್ಥೆಯನ್ನು ಸುಸ್ಥಿತಿಗೆ ತರುವುದೇ ಒಂದು ದೊಡ್ಡ ಸವಾಲಾಗಿತ್ತು.

2011 ಮತ್ತು  2016 ರ ಅವಧಿಯಲ್ಲಿ ಅರ್ಥವ್ಯವಸ್ಥೆಯು ಶೇ30% ರಷ್ಟು ಬೆಳೆಯಿತು ಆದರೆ ಚಲಾವಣೆಯಲ್ಲಿರುವ ನೋಟುಗಳು 40%  ರಂತೆ ಬೆಳೆದವು. 500 ರೂ ನೋಟುಗಳ ಚಲಾವಣೆಯು 76% ರಷ್ಟು ಬೆಳೆದರೆ 1000 ರೂ ನೋಟುಗಳ ಚಲಾವಣೆಯು 109% ಬೆಳೆಯಿತು. ಈ ಅವಧಿಯಲ್ಲಿ ನಕಲಿ ನೋಟುಗಳ ಸಂಖ್ಯೆಯು ಬೆಳೆದಿದೆ ಎಂದು ಹೇಳಲಾಯಿತು.ತಯಾರಿಕಾ ವಲಯವು ಅಷ್ಟು ಭರದಿಂದ ಬೆಳೆಯುತ್ತಿಲ್ಲ. ಇದರ ಜೊತೆಗೆ ರಿಸರ್ವ್ ಬ್ಯಾಂಕು ನಗದು ರಹಿತ ವ್ಯವಸ್ಥೆ ಮಾಡುವತ್ತ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾದರೂ ನೋಟುಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ವಿಚಿತ್ರ ಹಾಗಾಗಿ ನೋಟು ರದ್ದತಿಯಿಂದ ಇದನ್ನು ಹಿಡಿತದಲ್ಲಿಡಬಹುದು.

ಪರಿಣಾಮಗಳು:

  • ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವನ್ನು ಭಾರತಕ್ಕೆ ತರಲು ಕೇಂದ್ರ ಸರ್ಕಾರ ಮುಂದಾಯಿತು. ಅದರಂತೆ ಕಪ್ಪುಹಣದ ತನಿಖೆಗಾಗಿ 2014 ರ ಮೇ 27 ರಂದು ವಿಶೇಷ ತನಿಖಾ ತಂಡವನ್ನು ರಚನೆಮಾಡಲಾಗಿತ್ತು

 

  • ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ 13000 ಕೋಟಿ ಕಪ್ಪುಹಣವನ್ನು ಸರ್ಕಾರ ಪತ್ತೆಹಚ್ಚಿತ್ತು ಮತ್ತು ಜಿನಿವಾದ ಊSಃಅ ಬ್ಯಾಂಕುಗಳು ಭಾರತೀಯರು ಇಟ್ಟಿರುವ ಹಣಕ್ಕೆ ಸಂಬಂಧಿಸಿದಂತೆ 400 ಪ್ರಕರಣಗಳು ಬೆಳಕಿಗೆ ಬಂದಿದ್ದು. 8186 ಕೋಟಿ ಹಣ ಪತ್ತೆ ಮಾಡಲಾಗಿದೆ.
  • ಸ್ವದೇಶದಲ್ಲಿರುವ ಕಪ್ಪುಹಣವನ್ನು ಬಯಲಿಗೆಳೆಯುವುದು ನಿಟ್ಟಿನಿಂದ ಸರ್ಕಾರ ಕಪ್ಪುಹಣ ಘೋಷಣೆ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿ 6500 ಕೋಟಿ ಸ್ವದೇಶಿ ಕಪ್ಪುಹಣ ಘೋಷಣೆಯಾಗಿದೆ.
  • ಒಟ್ಟಾರೆಯಾಗಿ ಹಿಂದೆ ರದ್ದಾದ ದೊಡ್ಡ ಮೌಲ್ಯದ ನೋಟುಗಳ ಒಟ್ಟು ಹಣದ ಶೇ2% ರಷ್ಟು ಇರಲಿಲ್ಲ ಆದರೆ ಈಗ ರದ್ದು ಮಾಡಲ್ಪಟ್ಟ 500ರೂ ಮತ್ತು 1000ರೂ ನೋಟುಗಳು ಸೇರಿ ಚಲಾವಣೆಯಲ್ಲಿರುವ ಒಟ್ಟು ಹಣ ಶೇ 86% ರಷ್ಟಿದೆ.
  • ಜನರ ಆದಾಯದ ಹೆಚ್ಚಳದಿಂದಾಗಿ ಮತ್ತು ಬೆಲೆ ಏರಿಕೆಯಿಂದಾಗಿ ಈ ದೊಡ್ಡ ಮೌಲ್ಯದ ನೋಟುಗಳು ಸಾಮಾನ್ಯ ಜನರ ದಿನದ ಜೀವನಕ್ಕೂ ಅವಶ್ಯವೆನಿಸಿದರೆ. ಇದರಿಂದಾಗಿ ಈಗಿನ ನೋಟು ರದ್ಧತಿಯು ಎಲ್ಲಾ ವರ್ಗದ ಜನರ ದೈನಂದಿನ ವ್ಯವಹಾರದ ಮೇಲೆ ಆಳವಾದ ಪರಿಣಾಮವನ್ನು ಬೀರಿದೆ.
  • ಟೀಕೆಗಳು: ನೋಟು ರದ್ದತಿ ಕ್ರಮವನ್ನು ಕೆಲವರು ಜನ ವಿರೋಧಿಯೆಂದು ಬಿಂಬಿಸಿದರು ಹಾಗೆ ಕೆಲವು ಕಾರಣಗಳನ್ನು ಕೊಡಲಾಯಿತು.
  • ಹಳೆಯ ಹಣವನ್ನು ಹೊಸ ಹಣಕ್ಕೆ ವಿನಿಮಯ ಮಾಡಿಕೊಳ್ಳಲು. ಅನೇಕರು ಬ್ಯಾಂಕ್ ಖಾತೆ ಹೊಂದಿಲ್ಲ. ಅವರಿಗೆಲ್ಲ ಇದು ತೊಂದರೆದಾಯಕ ಎಂದು ಹೇಳಲಾಯಿತು.
  • ಆದರೆ ತಾತ್ಕಾಲಿಕ ಉಪಯೋಗಕ್ಕಾಗಿ ಬ್ಯಾಂಕು ಖಾತೆ ಇಲ್ಲದವರಿಗೂ 4000ರೂ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
  • ನಗದುವರಹಿತ ವ್ಯವಹಾರ ಮಾಡಬೇಕೆಂದು ಸರ್ಕಾರ ಹೇಳುತ್ತದೆ. ಆದರೆ ಹಣ ಗಳಿಸಿ ಖರ್ಚುಮಾಡುವುದು ಅಪರಾಧನೆ? ಹಾಗಲ್ಲ ಜನರು ತಾವುಗಳಿಸಿದ ಆದಾಯದ ಮೇಲೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದರೆ ಆತಂಕಕ್ಕೆ ಕಾರಣವಲ್ಲ.
  • ಕೆಲವೇ ಕೆಲವು ಶ್ರೀ ಮಂತರು ಕಪ್ಪುಬಣ್ಣದ ಹೊಂದಿದಾಗ ಎಲ್ಲಾರಿಗೂ ಶಿಕ್ಷೆಕೊಡುವುದು ಸರಿಯೆ? ಈಗ ದೇಶದಲ್ಲಿ ಮೇಲ್ಮದ್ಯಮ ವರ್ಗದವರು ಮತ್ತು ಮದ್ಯಮ ವರ್ಗದವರು ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಿ ತೆರಿಗೆ ತಪ್ಪಿಸುವ ಕಾರ್ಯ ಸಾಮಾನ್ಯ ಸಂಗತಿಯಾಗಿದೆ.
  • ಕಪ್ಪುಹಣವನ್ನು ಹೊರಸೆಳೆಯುವುದು ನೋಟು ರದ್ದತಿಯ ಪ್ರಮುಕ ಉದ್ದೇಶವೆಂದು ಸರ್ಕಾರ ಹೇಳಿಕೊಂಡಿದೆ. ಆದರೆ ಒಂದು ಅಂದಾಜಿನ ಪ್ರಕಾರ ನಗದು ರೂಪದಲ್ಲಿ ಕಪ್ಪುಹಣವು ಕೇವಲ 7% ರಷ್ಟು ಮಾತ್ರ ಇದೆ. ಈ ಸಣ್ಣ ಪ್ರಮಾಣದಲ್ಲಿರುವ ಕಪ್ಪುಹಣವನ್ನು ಹೊರತೆಗೆಯಲು ಇಷ್ಟು ದೊಡ್ಡ ಪ್ರಮಾಣದ ಕ್ರಮ ಜರುಗಿಸುವುದು ಅವಶ್ಯವಿತ್ತೆ?
  • ಸರ್ಕಾರವು ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯಬಹುದು ಈ ನೋಟು ರದ್ದತಿಯ                       ( ಕಪ್ಪುಹಣ + ಭಯೋತ್ಪಾದಕರಿಗೆ ಹಣದ ಪೂರೈಕೆ)  ಕ್ರಮವನ್ನು ಕೈಗೊಂಡಿತ್ತು ಆದರೆ ಇದರ ಅನುಷ್ಠಾನಕ್ಕೆ ಸಮರ್ಪಕವಾಗಿ ಆಗಿಲ್ಲವೆಂದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ನೋಟು ರದ್ದತಿಯು ಸರ್ಕಾರ ಜಾರಿ ಮಾಡಿದ ದಿಟ್ಟಕ್ರಮ ಇದರ ಉದ್ದೇಶಗಳಾದ ಕಪ್ಪುಹಣವನ್ನು ಮತ್ತು ನಕಲಿ ನೋಟುಗಳನ್ನು ನಿಯಂತ್ರಣಗಳು ಎಷ್ಟರಮಟ್ಟಿಗೆ ಸಕಾರಗೊಳ್ಳುವವೆಂಬುದನ್ನು ಕಾಲವೇ


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ನನ್ನಜ್ಜಿ & ಪ್ರೀತಿ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal