Tumbe Group of International Journals

Full Text


ಕನ್ನಡ ಮಾದ್ಯಮ ಅನುಷ್ಟಾನ: ಸಮಕಾಲೀನ ಸಮಸ್ಯೆ

ಡಾ. ಚಿಕ್ಕಣ್ಣ

ಸಹಾಯಕ ಪ್ರಾಧ್ಯಾಪಕರು

ಇತಿಹಾಸ  ಮತ್ತು ಪುರಾತತ್ವಶಾಸ್ತ್ರ ಅದ್ಯಯನ ಮತ್ತು ಸಂಶೋಧನಾ ವಿಭಾಗ ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

 

ಶ್ರೀಮತಿ  ಜ್ಯೋತಿಲಕ್ಷ್ಮಿ. ಹೆಚ್

ಸಹಾಯಕ ಪ್ರಾಧ್ಯಾಪಕರು

ಕನ್ನಡ ವಿಭಾಗ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು .

 

ಪೀಠಿಕೆ:

     ಕನ್ನಡಿಗರು ಕನ್ನಡ ನಾಡು ನುಡಿ ಸಂಸ್ಕøತಿಗಾಗಿ ನಿರಂತರವಾಗಿ ಹೋರಾಟ ನಡೆಸಿದ್ದಾರೆ. ತಮ್ಮ ಸಮಗ್ರತೆಯನ್ನು ಕಾಪಾಡಲು ರಾಜಮನೆತನಗಳ ಆದಿಯಾಗಿ ಐತಿಹಾಸಿಕ ವೈಶಾಲ್ಯತೆ ಪಡೆಯಿತು.  ವಸಾಹತು ಆಡಳಿತವನ್ನು ಮೆಟ್ಟಿನಿಂತು ಸ್ವಾತಂತ್ರ್ಯ ಚಳುವಳಿಯಲ್ಲಿ ಜಯಪಡೆದರು. ಭಾಷೆಯ ನೆಲೆಯಲ್ಲಿಯೇ ಏಕೀಕರಣಗೊಂಡರು. ಆದರೆ ಬೇರೆ ಬೇರೆ ಭಾಷೆಗಳು ಕನ್ನಡನಾಡಿನಲ್ಲಿ ನೆಲೆಯೂರಿ ಕನ್ನಡ ತನವನ್ನು ವಿನಾಶದ ಹಾದಿಗೆ ತಳ್ಳುತ್ತಿವೆ. ಕನ್ನಡಿಗರ ವಿಶಾಲ ಹೃದಯ, ಆತ್ಮಾಭಿಮಾನದ ಕೊರತೆಯಿಂದ ಕನ್ನಡ ಭಾಷೆಯನ್ನು ಶಿಕ್ಷಣ ಮತ್ತು ಆಡಳಿತದಲ್ಲಿ ಅನುಷ್ಠಾನಗೊಳಿಸಲು ನಿರಂತರ ಪ್ರಯತ್ನಗಳು. ನಡೆಯುತ್ತಿವೆ 1963ರಲ್ಲಿ ಕರ್ನಾಟಕ ರಾಜ್ಯ ಭಾಷಾ ಅಧಿನಿಯಮವು ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯೆಂದು ಘೋಷಿಸಿತು. ಆಡಳಿತ, ಸಚೀವಾಲಯ, ನ್ಯಾಯಾಲಯ, ಕಛೇರಿಗಳಲ್ಲಿ ಕನ್ನಡದ ಬಳಕೆಗೆ ಒತ್ತಾಯ ಮತ್ತು ಆದೇಶಗಳನ್ನು ಮಾಡಲಾಯಿತು. ಕನ್ನಡದಲ್ಲಿಯೇ ಶಿಕ್ಷಣ ನೀಡಬೇಕೆಂದು ಗೋಕಾಕ್ ಚಳುವಳಿ (1982) ಡಾ.ಹೆಚ್.ನರಸಿಂಹಯ್ಯ (1993) ಸಮಿತಿ, ರಾಜರಾಮಣ್ಣ ಸಮಿತಿ, (1994) ಡಾ,ವಿ.ಎಸ್.ಆಚಾರ್ಯ ಸಮಿತಿಗಳ ವರದಿಗಳು ಶಿಪಾರಸ್ಸು ಮಾಡಿದರು. ಆದರೆ ಕನ್ನಡಿಗರಿಗೆ ಆತ್ಮಾÀಭಿಮಾನದ ಕೊರತೆಯಿಂದ, ಆಂಗ್ಲ ಭಾಷೆಯ ವ್ಯಾಮೋಹದಿಂದ, ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆಯನ್ನು ಹುಡುಕುವ ಸ್ಥಿತಿಗೆ ತಲುಪುವಂತಾಗಿದೆ.  ಕನ್ನಡ ಭಾಷೆಯನ್ನು ಆಡಳಿತ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅನುಷ್ಠಾನಗೊಳಿಸಲು ಹೋರಾಟಗಳು ನಡೆಯುತ್ತಿವೆ. ಆದರೂ ಪರಿಪೂರ್ಣವಾಗಿ ಅನುಷ್ಠಾನವಾಗಿಲ್ಲವೆಂಬುದರ ಚರ್ಚೆ ಈ ಪ್ರಬಂದದ ಸಾರವಾಗಿದೆ.

     “ಹೊಸದಾಗಿ ಕಟ್ಟಲ್ಪಟ್ಟ ಈ ಕರ್ನಾಟಕ ರಾಜ್ಯವು ಕೇವಲ ಜನತೆಯ ಜನತೆಗಾಗಿ ಕಟ್ಟಿದ ರಾಜ್ಯ. ಇದು ಅಹಿಂಸಾತ್ಮಕವಾಗಿ ಕಟ್ಟಲ್ಪಟ್ಟಿದ್ದು.  ಜನತೆ ತನ್ನ ಕಲ್ಪನಾ ವಿಳಾಸದಿಂದ ಕಟ್ಟಿದ ರಾಜ್ಯ. ಗತವೈಭವದ ಭಾವೀ ಯುಗ ಮುಗಿಯಿತು.  ವೈಭವವು ಬರಬೇಕಾಗಿದೆ.  ಅದನ್ನು ಈಗಿನ ಪೀಳಿಗೆಯವರು ತಮ್ಮ ಸ್ವಂತ ಪರಿಶ್ರಮದಿಂದ ತರಬೇಕಾಗಿದೆ” ಈಗ ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟ ಕರ್ನಾಟಕ ರಾಜ್ಯವು ಆಯುಷ್ಯವಂತಾಗಲಿ, ಆರೋಗ್ಯವಂತವಾಗಲಿ, ಭಾಗ್ಯವಂತವಾಗಲಿ ಎಂದು ಹಾರೈಸುತ್ತೇನೆ”

                                                                           ಕುಲಪುರೋಹಿತ ಆಲೂರು ವೆಂಕಟರಾಯರು:

     ಕನ್ನಡನಾಡಿನ ಸರ್ವತೋಮುಖವಾದ ಅಬ್ಯುದಯಕ್ಕೆ ನಾವು ಕನ್ನಡಿಗರೆಲ್ಲರೂ ಒಂದಾಗಿ ದುಡಿಯೋಣ, ಕನ್ನಡಮ್ಮನ ಪವಿತ್ರ ಸೇವೆ ನಮ್ಮೆಲ್ಲರ ಹೊಣೆ. ಕನ್ನಡನಾಡಿನ ರಚನೆ ಭಾಷೆಯ ಆಧಾರದ ಮೇಲೆಯೇ ರಚನೆಗೊಂಡಿತು.  ಕನ್ನಡಿಗರ ಭಾಷೆ, ಸಂಸ್ಕøತಿ, ನೆಲ, ಜಲವು ಸಮಗ್ರ ಕನ್ನಡಿಗರನ್ನು ಒಗ್ಗೂಡಿಸಿತು.

    ಭಾರತಕ್ಕೆ ಸ್ವಾತಂತ್ರ್ಯ ಬಂದು 67 ವರ್ಷ ತುಂಬಿದರೂ ಇನ್ನೂ ಪರಿಹಾರವಾಗದಿರುವ ಸಮಸ್ಯೆಗಳಲ್ಲಿ ಭಾಷಾ ಸಮಸ್ಯೆಯು ಒಂದು. ಕರ್ನಾಟಕದಲ್ಲಿ 177 ಕ್ಕೂ ಹೆಚ್ಚು ಮಾತೃಭಾಷೆಯುಳ್ಳ ಜನರು ನೆಲೆಸಿದ್ದಾರೆ. ಪ್ರತಿಯೊಂದು ಹಳ್ಳಿಯಲ್ಲೂ ಒಂದಕ್ಕಿಂತ ಹೆಚ್ಚು ಭಾಷೆಗಳನ್ನಾಡುವ ಜನರಿದ್ದಾರೆ.  ಅಲ್ಲದೆ ಕರ್ನಾಟಕದ ಗಡಿ ರಾಜ್ಯಗಳಲ್ಲಿ ತಮಿಳು, ಮರಾಠಿ, ಕೊಂಕಣಿ, ತುಳು, ಮಲಯಾಳಂ, ತೆಲುಗು ಭಾಷೆಗಳನ್ನಾಡುವ ಜನರಿದ್ದಾರೆ,  ಭಾಷಾವಾರು ಪ್ರಾಂತ್ಯ ರಚನೆಯಾಗಿದ್ದರೂ ಈ ಕರ್ನಾಟಕದಲ್ಲಿ ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ.  1950 ರಲ್ಲಿ ಅನುಷ್ಠಾನಕ್ಕೆ ಬಂದ ಸಂವಿದಾನದಲ್ಲಿ 343 ರಿಂದ 347ರ ವರೆಗಿನ ವಿಧಿಗಳು ಅಧಿಕೃತ ಭಾಷೆಯ ಬಗೆಗೆ ಹೇಳುತ್ತವೆ.  1956ರಲ್ಲಿ ಭಾಷೆಗಳನ್ನು ಆಧರಿಸಿ ರಾಜ್ಯಗಳನ್ನು ವಿಂಗಡಿಸಲಾಯಿತು 1956ರ ನವೆಂಬರ 1 ರಂದು ಸಮಗ್ರ ಕರ್ನಾಟಕ ಉದಯವಾದರೂ ಮೈಸೂರು ರಾಜ್ಯವೆಂದು ಘೋಷಿಸಿತು 1973ರಲ್ಲಿ ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡಿತು, 1963ರಲ್ಲಿ ಕರ್ನಾಟಕ ರಾಜ್ಯ ಭಾಷಾ ಅಧಿನಿಯಮದ ಪ್ರಕಾರ ಕರ್ನಾಟಕದ ಆಡಳಿತ ಭಾಷೆ ಕನ್ನಡವೆಂದು ಘೋಷಿಸಿತು ಸರ್ಕಾರ ಕಾರ್ಯಾಂಗದಿಂದ ಹಿಡಿದು ನ್ಯಾಯಾಂಗದವರೆಗೆ ಕನ್ನಡಬಳಕೆಗೆ ಆದೇಶಿಸಿತು.

     ಭಾರತದ ಜನಸಂಖ್ಯೆಯಲ್ಲಿ ಕರ್ನಾಟಕದ ಜನಸಂಖ್ಯೆ ಶೇ.5.9 ಮಾತೃ ಭಾಷೆಯಾಗಿರುವವರ ಮಲಯಾಳಂ ಭಾಷೆಯವರು ಶೇ 8.5 % ಮತ್ತು ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಜನಸಖ್ಯೆ ಶೇ.4 ಮಾತ್ರ ತಮಿಳುನಾಡಿನಲ್ಲಿ ತಮಿಳು ಮಾತೃಭಾಷೆಯೆಂದರೆ ಶೇ 81.5 ಕೇರಳದಲ್ಲಿ ಮರಾಠಿ ಭಾಷೆಯವರು ಶೇ.77 ಆದರೆ ಕರ್ನಾಟಕದಲ್ಲಿ ಭಾಷೆ ಶೇ 66 % ಉರ್ದು 9.%, ತೆಲುಗು 8.2%, ತಮಿಳು 3.4 % ಮರಾಠಿ 4 % ಮಲಯಾಳಂ 1.5% ಹಿಂದಿ 1.8 % ಇದಲ್ಲದೆ ತುಳು ಮತ್ತು ಕೊಂಕಣಿ ಮಾತನಾಡುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ,  ಕರ್ನಾಟಕ ರಾಜ್ಯದಲ್ಲಿ ಕನ್ನಡ ಮಾತೃಭಾಷೆಯುಳ್ಳವರ ಸಂಖ್ಯೆ-1911-1931 ರವರೆಗೆ ಶೇ 63.03 ರಿಂದ ಶೇ 61.77 ಕ್ಕೆ ಕಡಿಮೆಯಾಗಿದೆ 1931-1971ರ ವರೆಗೆ ಶೇ 65.94% ಕ್ಕೆ ಅದೇ ರೀತಿ ಕನ್ನಡಿಗರ ಸಂಖ್ಯೆ ಬೆಂಗಳೂರಿನಲ್ಲಿ 1931 ರಲ್ಲಿ ಶೇ 23.7 % ಇದ್ದುದು 1971 ರಲ್ಲಿ ಶೇ 32.70 % ಆಯಿತು ಬೆಳಗಾವಿಯಲ್ಲಿ ಹಾಗೂ ರಾಜ್ಯದ ಕೆಲ ಪಟ್ಟಣಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ.

     ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸುವ ಭಾಷಾ ನೀತಿಯು ರಾಜ್ಯಭಾಷೆಗಳ ಕಾರ್ಯ ಪ್ರವೃತ್ತಿ ಮತ್ತು ಜಾರಿಗೊಳಿಸುವಲ್ಲಿ ವಿಫಲವಾಗಿದೆ ಆಡಳಿತ ಭಾಷೆಯ ಪ್ರಗತಿ ಕುಂಟಿತ ಗೊಂಡಿದೆ. ಪ್ರತಿ ರಾಜ್ಯದಲ್ಲಿಯೂ ಬೇರೆ ಬೇರೆ ಭಾಷೆ ಮಾತನಾಡುವ ಜನರಿದ್ದಾರೆ ಅದನ್ನು ಗಮನದಲ್ಲಿಟ್ಟುಕೊಂಡು ಅಧಿಕೃತ ಭಾಷಾ ನೀತಿ ರೂಪಿಸುವಲ್ಲಿ ಕೇಂದ್ರವು ವಿಫಲವಾಗಿದೆ.

 

ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ:1963

     ಕರ್ನಾಟಕ ಏಕೀಕರಣದ ಏಳು ವರ್ಷಗಳ ನಂತರ 1963 ಅಕ್ಟೋಬರ್ 10ರಂದು ಜಾರಿಗೆ ಬಂತು. ಕನ್ನಡ ಭಾಷೆಯನ್ನು ಪೂರ್ಣವಾಗಿ ಜಾರಿಗೊಳಿಸುವ ಬಗ್ಗೆ ಅಧಿಕೃತ ಆಜ್ಞೆಯಾಯಿತು. ಕೇಂದ್ರ ಸರ್ಕಾರದ ಕಛೇರಿಗಳು, ಹೊರರಾಜ್ಯ ನ್ಯಾಯಾಲಯಗಳೊಡನೆ ನಡೆಸಬಹುದಾದ ಪತ್ರ ವ್ಯವಹಾರಗಳನ್ನು ಹೊರತು ಪಡಿಸಿ ಉಳಿದೆಲ್ಲ ಪತ್ರವ್ಯವಹಾರಗಳು ಕನ್ನಡದಲ್ಲಿರಬೇಕಾಗುತ್ತದೆ. ವಿಭಾಗ ಮತ್ತು ಜಿಲ್ಲೆಯಲ್ಲಿನ ಕಛೇರಿಗಳು ಕನ್ನಡವನ್ನು ನೂರಕ್ಕೆ ನೂರರಷ್ಟು ಜಾರಿಗೊಳಿಸಲು ಆದೇಶಿಸಿತು. ಆದರೂ ಸಚೀವಾಲಯ, ನ್ಯಾಯಾಲಯ, ಹಲವು ಕಛೇರಿಗಳಲ್ಲಿ ಕನ್ನಡಭಾಷೆಯ ಬಳಕೆ ಪೂರ್ಣವಾಗಿ ಅನುಷ್ಠಾನಗೊಳ್ಳಲಿಲ್ಲ ಈ ಅಧಿನಿಯಮದ ಪ್ರಮುಖಾಂಶಗಳು.

•          ಕನ್ನಡದ ಅನುಷ್ಟಾನ ಸರ್ಕಾರ ಹೊರಡಿಸಿದ ಆದೇಶಗಳನ್ನು, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

•          ಕೇಂದ್ರ ಸರ್ಕಾರ ಹೊರರಾಜ್ಯ ಹಾಗೂ ನ್ಯಾಯಾಲಯಗಳೊಡನೆ ನಡೆಸಬಹುದಾದ ಪತ್ರವ್ಯವಹಾರಗಳನ್ನು ಹೊರತುಪಡಿಸಿ ನೂರಕ್ಕೆ ನೂರರಷ್ಟು ಕನ್ನಡದಲ್ಲಿರಬೇಕು.

•          ಸರ್ಕಾರಿ ಆದೇಶಗಳ ಉಲ್ಲಂಘನೆ ಮತ್ತು ಭಾಷಾನೀತಿಯನ್ನು ಉಲ್ಲಂಘಿಸಿದರೆ ಶಿಸ್ತಿನಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತು.

•          ರಾಜ್ಯ ಸರ್ಕಾರದಿಂದ ರಚಿತವಾದ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಅಥವಾ ಆರ್ಥಿಕ ನೆರವು ಪಡೆಯುವ ಎಲ್ಲ ಉದ್ಯಮ, ಸಂಘ ಸಂಸ್ಥೆಗಳು ಸರ್ಕಾರದ ಆದೇಶ/ಸೂಚನೆಗಳು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿತು.

ತ್ರಿಭಾಷಾ ಸೂತ್ರ:-

     ಕೇಂದ್ರ ಸರ್ಕಾರವು 1955ರಲ್ಲಿ ‘ಅಧಿಕೃತ ಭಾಷಾ ಆಯೋಗ’ವನ್ನು ರಚಿಸಿತು. ಅದರಂತೆ 1965 ಜನವರಿ 25 ರಿಂದ ತ್ರಿಭಾಷಾ ಸೂತ್ರವನ್ನು ಘೋಷಿಸಿತು.  ಕರ್ನಾಟಕದಲ್ಲಿ ‘ಕನ್ನಡ’ ಆಡಳಿತಭಾಷೆ ಇಂಗ್ಲೀಷ್ ಮತ್ತು ಹಿಂದಿ ಸಹಾಯಕ ಸ್ಥಾನದಲ್ಲಿ ಮುಂದುವರೆಯುವುದು ಕಡ್ಡಾಯವೆಂದು ಕಾಯಿದೆ ಜಾರಿಗೊಂಡಿತು. ಇದರಿಂದ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬಂದಿತು. ಅಲ್ಲದೆ ಹಿಂದಿ ಮತ್ತು ಇಂಗ್ಲೀಷ್ ಕಲಿಯುವುದು ಉಚಿತ ಎಂದು ತೀರ್ಮಾನಿಸಲಾಯಿತು. ಹಿಂದಿಯನ್ನು ರಾಷ್ಟ್ರೀಯ ಭಾಷೆಯೆಂದು ಅಧಿಕೃತ ಭಾಷಾ ಆಯೋಗ ತೀರ್ಮಾನಿಸಿತು. ವಿಶ್ವವಿದ್ಯಾಲಯ, ನ್ಯಾಯಾಲಯಗಳಲ್ಲಿ ಹಿಂದಿಯ ಬಳಕೆಗೆ ಆದ್ಯತೆ ನೀಡಿತು ಆದರೆ ಹಿಂದಿಯೇತರ ರಾಜ್ಯಗಳು ಹಿಂದಿಯನ್ನು ವಿರೋದಿಸಿದವು.  ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾದ್ದರಿಂದ ಅಧಿಕೃತಭಾಷೆ ಯಾವುದು ಬೇಕು ಎಂಬುದನ್ನು ಜನರೇ ನಿರ್ದರಿಸಬೇಕೆಂದು ಅಭಿಪ್ರಾಯಗಳು ಕೇಳಿಬಂದವು. ಶಿಕ್ಷಣ ನ್ಯಾಯಾಲಯ, ಆಡಳಿತದಲ್ಲಿ ನಡೆಯಬಹುದಾದ ಎಲ್ಲಾ ವ್ಯವಹಾರಗಳನ್ನು ಜನರು ತಿಳಿಯಲು ದ್ವಿಭಾಷಾಸೂತ್ರ, ತ್ರಿಭಾಷಾ ಸೂತ್ರಕ್ಕಿಂತ ಪರಿಣಾಮಕಾರಿಯಾಗಿರುತ್ತದೆ. ದ್ವಿಭಾಷಾ ಸೂತ್ರದಲ್ಲಿ ಎರಡು ಭಾಷೆ ಆಯ್ಕೆ ಮಾಡುವುದರಿಂದ ಹಿಂದಿ ಬೇಡವೆನ್ನುವವರಿಗೆ ಇಂಗ್ಲೀಷ್‍ನ   ಆಯ್ಕೆಗೆ ಅವಕಾಶವಿರುತ್ತದೆ.

ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ:-

     ಕನ್ನಡ ಭಾಷೆಯನ್ನು ನ್ಯಾಯಾಲಯಗಳಲ್ಲಿಯೂ ವಾದ ಮತ್ತು ತೀರ್ಪಿನ ಭಾಷೆಯಾಗಿರಬೇಕೆಂದು ಭಾಷಾ ನೀತಿಯನ್ನು ರೂಪಿಸಲಾಯಿತು 1974ರಲ್ಲಿ ಜುಡಿಷಿಯಲ್ ಮ್ಯಾಜಸ್ಟ್ರೇಟ್ ನ್ಯಾಯಾಲಯದ ವಾದ ಮತ್ತು ತೀರ್ಪಿನ ಭಾಷೆ ಕನ್ನಡದಲ್ಲೇ ಇರಬೇಕೆಂದು ತೀರ್ಮಾನಿಸಲಾಯಿತು. 1979ರಲ್ಲಿ ಸೆಷನ್ಸ್ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವ್ಯವಹರಿಸಬೇಕೆಂದು ಆದೇಶಿಸಲಾಯಿತು. 1979 ರಿಂದಲೇ ಉಚ್ಚ ನ್ಯಾಯಾಲಯದ ಪರಿಧಿಯಲ್ಲಿ ಬರುವ ಎಲ್ಲಾ ಸಿವಿಲ್ ನ್ಯಾಯಾಲಯಗಳ ಭಾಷೆ ಕನ್ನಡವೇ ಆಗಿರಬೇಕೆಂದು ಆದೇಶಿಸಲಾಯಿತು. 1980ರಲ್ಲಿ ಸಾರ್ವತ್ರಿಕವಾಗಿ ನ್ಯಾಯಾಲಯ ತೀರ್ಪಿನ ಭಾಷೆ ಕನ್ನಡವಾಗಿರಬೇಕೆಂದು ಅಂತಿಮ ಆಜ್ಞೆ ಹೊರಡಿಸಲಾಯಿತು.

ಗೋಕಾಕ್ ಆಯೋಗ: 1982

ಕರ್ನಾಟಕದಲ್ಲಿ ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣವನ್ನು ಅನುಷ್ಟಾನಗೊಳಿಸುವುದಕ್ಕೆ ಗೋಕಾಕ್ ಆಯೋಗದ ರಚನೆಯ ಮಹತ್ವದ ಸ್ಥಾನವನ್ನು ಹೊಂದಿದೆ.  ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಮತ್ತು ಶಿಕ್ಷಣದಲ್ಲಿ ಒಂದು ವ್ಯವಸ್ಥಿತ ಕ್ರಮವನ್ನು ಜಾರಿಗೆ ತರಲು ಶಿಕ್ಷಣ ತಜ್ಞರು ಒತ್ತಾಯಿಸಿದರು.  1979ರವರೆಗೂ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯ ಕಲಿಕೆ ನಡೆಯುತ್ತಿತ್ತು. ವಿವಿದ ಮಾದ್ಯಮಗಳ ಪ್ರೌಢಶಾಲೆಗಳಲ್ಲಿ ಕನ್ನಡ, ಇಂಗ್ಲೀಷ್, ತಮಿಳು, ತೆಲುಗು, ಮರಾಠಿ ಮುಂತಾದ ಭಾಷೆಗಳ ಜೊತೆಗೆ ಸಂಸ್ಕøತವು ಪ್ರಥಮ ಭಾಷೆಯಾಗಿತ್ತು.  ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕøತವನ್ನು ಕಲಿಯುವ ವ್ಯವಸ್ಥೆ ಇರದಿದ್ದರೂ ಪ್ರೌಡಶಾಲೆಗಳಲ್ಲಿ ಭಾಷೆಯನ್ನು ಮೊದಲ ಭಾಷೆಯಾಗಿ ಆರಿಸಿಕೊಂಡು ವಿದ್ಯಾರ್ಥಿಗಳಿಗೆ ಅಕ್ಷರಾಬ್ಯಾಸದಿಂದ ಶಿಕ್ಷಣ ಪ್ರಾರಂಭವಾಗುತ್ತಿತ್ತು ಅಧ್ಯಾಪಕರೂ ಸಹ ಅದನ್ನು ಪ್ರೋತ್ಸಾಹಿಸಿ ಹೆಚ್ಚು ಅಂಕಗಳನ್ನು ನೀಡುತ್ತಿದ್ದರು, ಇದರಿಂದ ಮಾತೃಭಾಷೆಗಿಂತ ಸಂಸ್ಕøತ ಭಾಷೆಗೆ ಹೆಚ್ಚು ಒಲವು ಉಂಟಾಯಿತು. ಕನ್ನಡವನ್ನು ಮೊದಲ ಭಾಷೆಯಾಗಿ ಓದುವ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಕುಂಟಿತಗೊಂಡಿತು ಕೇವಲ ಮೂರು ವರ್ಷ ಮಾತ್ರ ಓದಿದ ಸಂಸ್ಕøತ ಭಾಷೆಗೆ ಪ್ರಥಮಸ್ಥಾನ ನೀಡಬಾರದೆಂದು, ಪ್ರಪಂಚದಲ್ಲಿ ಯಾರೂ ಮಾತನ್ನೇ ಆಡದ ಸಂಸ್ಕøತವನ್ನು ಮೊದಲ ಸ್ಥಾನದಿಂದ ತೆಗೆಯಬೇಕೆಂದು ಶಿಕ್ಷಣ ತಜ್ಞರು ಒತ್ತಾಯಿಸಿದರು. ಇದರಿಂದ ಕನ್ನಡಕ್ಕೆ ಪ್ರಥಮ ಸ್ಥಾನ ಸಿಗಬೇಕೆಂದು ಕರ್ನಾಟಕ ಸರ್ಕಾರವು 1979ರ ಅಕ್ಟೋಬರ್‍ನಲ್ಲಿ ಆಜ್ಞೆಯನ್ನು ಹೊರಡಿಸಿತು ಅದರಂತೆ ಸಂಸ್ಕøತವನ್ನು ತೃತೀಯ ಭಾಷೆಯಾಗಿ ಮಾತ್ರ ಓದಲು ಅವಕಾಶ ನೀಡಿತು. ಇದರಿಂದ ಬೇಸತ್ತ ಸಂಸ್ಕøತವಾದಿಗಳು ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು ವಿದಾನ ಮಂಡಲದ ಎರಡೂ ಸದನಗಳಲ್ಲಿ ಚರ್ಚೆ ನಡೆಸಿದರು ಅದಕ್ಕೆ  ಅನುಗುಣವಾಗಿ ಸರ್ಕಾರವು ಕ್ರಮಾಂಕ ಇ.ಡಿ/13/ಎಸ್.ಒ.ಹೆಚ್/79 ದಿನಾಂಕ 5ನೇ ಜುಲೈ 1980ರಂದು ಆಜ್ಞೆಯನ್ನು ಹೊರಡಿಸಿ ಒಂದು ಸಮಿತಿಯನ್ನು ನೇಮಿಸಿತು.  ಡಾ.ವಿ.ಕೃ ಗೋಕಾಕ್ ಇದರ ಅಧ್ಯಕ್ಷರು, ಜಿ.ನಾರಾಯಣ, ಎಸ್.ಕೆ.ರಾಮಚಂದ್ರರಾವ್, ತ.ಸು.ಶಾಮರಾವ್, ಕೆ.ಕೃಷ್ಣಮೂರ್ತಿ, ಹೆಚ್.ಪಿ.ಮಲ್ಲೇದೇವರು ಈ ಸಮಿತಿಯ ಇತರ ಸದಸ್ಯರಾಗಿದ್ದರು. ಶಿಕ್ಷಣ ಇಲಾಖೆಯ ಅಡಿಷನಲ್ ಕಾರ್ಯದರ್ಶಿಯಾಗಿದ್ದ ಶ್ರೀ ಎಸ್.ಮಂಚಯ್ಯ ಈ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಗಳಾಗಿ ನೇಮಕಗೊಂಡರು.

ಸಮಿತಿಯ ಉದ್ದೇಶಗಳು:-

•          ಸಂಸ್ಕøತವು ಶಾಲಾ ಪಠ್ಯ ವಿಷಯಗಳಲ್ಲಿ ಅಭ್ಯಾಸದ ಒಂದು ವಿಷಯವಾಗಿ ಉಳಿಯಬೇಕೆ?

•          ಹಾಗೆಯೇ ಉಳಿಯಬೇಕಾದರೆ ಕನ್ನಡಕ್ಕೆ ಪರ್ಯಾಯವಾಗದೇ ಅದನ್ನು ಉಳಿಸಿಕೊಳ್ಳುವುದು ಹೇಗೆ?

•          ತ್ರಿಭಾಷಾ ಸೂತ್ರದಂತೆ ಕನ್ನಡವನ್ನು ಕಡ್ಡಾಯ ಮಾಡಿ ಮಿಕ್ಕ ಭಾಷೆಗಳಲ್ಲಿ ಯಾವುದಾದರೂ ಎರಡನ್ನು    ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೇ ಬಿಡುವುದು ಸೂಕ್ತವೇ.

     ಈ ಅಂಶಗಳನ್ನು ಸಮಿತಿಯು ಪರಿಶೀಲಿಸಿ ಮೂರುತಿಂಗಳಲ್ಲಿ ಸರ್ಕಾರಕ್ಕೆ ವರದಿ ನೀಡಲು ತಿಳಿಸಿತು. ಸಮಿತಿಯು ರಾಜ್ಯಾದ್ಯಂತ ಸಂಚಾರ ಮಾಡುತ್ತಾ ಜನರ ಅಭಿಪ್ರಾಯ ಸಂಗ್ರಹಿಸಿತು ಸಮಿತಿಯಲ್ಲಿ ಸಂಸ್ಕøತ ಪರವಾದಿಗಳಿರುವರೆಂದು ಜನರು ಸಂಶಯಗೊಂಡು ಸಮಿತಿಯನ್ನು ಬಹಿಷ್ಕರಿಸಬೇಕು. ಎಂದು ‘ಗೋಕಾಕ್ ಗೋಬ್ಯಾಕ್’ ಮತ್ತು ‘ಕನ್ನಡ ಉಳಿಸಿ’ ಎಂಬ ಘೋಷಣೆಗಳನ್ನು ಕೂಗಿದರು.  ಬೆಂಗಳೂರು, ಮೈಸೂರು, ದಾರವಾಡ ಮುಂತಾದೆಡೆ ಧರಣಿ, ಸತ್ಯಾಗ್ರಹ ನಡೆದವು. ಅಂತಿಮವಾಗಿ ಸಮಿತಿಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು.

ವರದಿಯ ಶಿಪಾರಸ್ಸುಗಳು:-

1.         ಪ್ರೌಡಶಾಲೆಗಳಲ್ಲಿ ಕನ್ನಡವನ್ನು ಏಕೈಕ ಪ್ರಥಮ ಭಾಷೆಯಾಗಿ ಭೋದಿಸಬೇಕು. ಅದಕ್ಕೆ 150 ಅಂಕಗಳನ್ನು ನಿಗದಿಗೊಳಿಸಿತು.

2.         100 ಅಂಕಗಳಿಗೆ ದ್ವಿತೀಯ ಭಾಷೆಯಾಗಿ ಇಂಗ್ಲೀಷ್, ಸಂಸ್ಕøತ, ಉರ್ದುÀ ಇತ್ಯಾದಿ ಭಾಷೆಗಳಿಗೆ ಆದ್ಯತೆ ನೀಡಿತು.

3.         50 ಅಂಕಗಳಿಗೆ ತೃತೀಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು ಆದರೆ ಪರೀಕ್ಷೆ ಕಡ್ಡಾಯವಲ್ಲವೆಂದು ಶಿಪಾರಸ್ಸು ಮಾಡಿತು.

     ಮೂರು ಭಾಷೆಗಳಿಗೂ ಪರೀಕ್ಷೆ ಕಡ್ಡಾಯವೆಂದು ಎಂಟನೇ ತರಗತಿಯಿಂದ ಕನ್ನಡ ಪ್ರಥಮ ಭಾಷೆಯಾಗಿ ಭೋದಿಸಬೇಕು ಕನ್ನಡೇತರ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಕನ್ನಡವನ್ನು ಕಡ್ಡಾಯ ಭಾಷೆಯಾಗಿ ಕಲಿಸಬೇಕೆಂದು ಸಮಿತಿ ಸೂಚಿಸಿತು. ಅಂದಿನ ಮುಖ್ಯಮಂತ್ರ ಶ್ರೀ ಗುಂಡೂರಾವ್‍ರವರು ಸಭೆಯಲ್ಲಿ ವರದಿಯ ಶಿಫಾರಸ್ಸುಗಳನ್ನು ಯತಾವತ್ತಾಗಿ ಜಾರಿಗೆ ತರುವುದಾಗಿ ಘೋಷಿಸಿದರು. ಆದರೆ ವಿರೋಧಿ ಚಳುವಳಿ ಪ್ರಾರಂಬವಾಯಿತು. ಅಲ್ಪಸಂಖ್ಯಾತರಾದ ಮುಸ್ಲಿಂರು ರೆಹಮಾನ್ ಖಾನ್ ನೇತೃತ್ವದಲ್ಲಿ ಉರ್ದು ಭಾಷೆಯ ಪರ ಹೋರಾಟಕ್ಕೆ ಇಳಿದರು ಮಾರ್ಚ್ 1982 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಇತರ ಕನ್ನಡ ಚಳುವಳಿಗಳು ಗೋಕಾಕ್ ವರದಿಯ ಪರವಾಗಿ ಹೋರಾಟಕ್ಕಿಳಿದವು. ಮೈಸೂರಿನಲ್ಲಿ ಡಾ|| ಯು.ಆರ್ ಅನಂತಮೂರ್ತಿ, ತಿಪ್ಪೇರುದ್ರಸ್ವಾಮಿ, ಮೈಸೂರಿನಲ್ಲಿ, ಸಂರಕ್ಷಣಾ ಸಮಿತಿಯ ಸದಸ್ಯರಾದ ಎಂ.ಚಿದಾನಂದಮೂರ್ತಿ ಬೆಂಗಳೂರಿನಲ್ಲಿ, ದಾರವಾಡದಲ್ಲಿ ಕನ್ನಡ ಕ್ರಿಯಾ ಸಮಿತಿಯ ಪರವಾಗಿ ಪಾಟಿಲ ಪುಟ್ಟಪ್ಪ ನೇತೃತ್ವದಲ್ಲಿ ಗೋಕಾಕ್ ವರದಿಯನ್ನು ಅನುಷ್ಠಾನಕ್ಕೆ ತರಲು ಒತ್ತಾಯಿಸಿ ಚಳುವಳಿಗಿಳಿದರು 1982ರ ಮೇ ನಲ್ಲಿ ಸಿನಿಮಾ ನಟರಾದ ಡಾ|| ರಾಜ್‍ಕುಮಾರ್, ವಿಷ್ಣುವರ್ದನ್, ಲೋಕೇಶ್ ಪಂಡರೀಬಾಯಿ ಮುಂತಾದವರು ಗೋಕಕ್ ವರದಿ ಅನುಷ್ಠಾನಕ್ಕೆ ಹೋರಾಟಕ್ಕಿಳಿದರು. ಮುಖ್ಯಮಂತ್ರಿಗಳಾದ ಗುಂಡೂರಾವ್‍ರವರು ಜುಲೈ 4 ರಂದು ಹಲವು ನಾಯಕರೊಂದಿಗೆ ಚರ್ಚಿಸಿದ ನಂತರ ‘ಗೋಕಾಕ್ ಬಾಷಾ ಸೂತ್ರವನ್ನು 20ನೇ ಜುಲೈ 1982ರಲ್ಲಿ ಅನುಷ್ಟಾನಕ್ಕೆ ತಂದರು. ಅದರ ಪ್ರಮುಖಾಂಶಗಳು

1.         ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕನ್ನಡ ಕಡ್ಡಾಯ.

2.         ಕನ್ನಡೇತರರಿಗೆ 3ನೇ ತರಗತಿಯಿಂದ ಕನ್ನಡ ಕಡ್ಡಾಯ

3.         ಪ್ರೌಢ ಶಾಲೆಗಳಲ್ಲಿ 125 ಅಂಕಗಳ ಏಕೈಕ ಪ್ರಥಮ ಭಾಷೆ ಕನ್ನಡ, ಉಳಿದೆರಡು ಭಾಷೆಗಳಿಗೆ 100 ಅಂಕಗಳ ನಿಗದಿಮಾಡಿ ( ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬಹುದು) ಮೂರು ಭಾಷೆಗಳ ತೇರ್ಗಡೆ ಕಡ್ಡಾಯ ಗೊಳಿಸಿತು.

4.         ಸಂವಿದಾನಬದ್ದವಾಗಿ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲಾಗಿ. ಮೊದಲೆರಡು ಭಾಷೆಗಳಲ್ಲದೆ 3ನೇಯ ಭಾಷೆ ಸಂಸ್ಕøತ, ಅರಾಬಿಕ್, ಪರ್ಷಿಯನ್, ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಅದರಂತೆ ಉಚ್ಚ ನ್ಯಾಯಾಲಯವು 19.6.1989ರಲ್ಲಿ ಆಜ್ಞೆಯನ್ನು ಹೊರಡಿಸಿದೆ.

5.         ಸರ್ಕಾರವು ಅಲ್ಪಸಂಖ್ಯಾತರಿಗೆ 10 ವರ್ಷಗಳ ವರೆಗೆ 15 ಗ್ರೇಸ್ ಅಂಕಗಳನ್ನು ನೀಡಿತು ಅಲ್ಲದೆ ಹಿಂದಿ ಭಾಷೇತರರಿಗೂ 15 ಅಂಕಗಳ ರಿಯಾಯಿತಿ (ಗ್ರೇಸ್) ನೀಡಿತು.

ಡಾ.ಹೆಚ್.ನರಸಿಂಹಯ್ಯ ವರದಿ: 1993

1998ರಲ್ಲಿ  ಶಿಕ್ಷಣ ತಜ್ಞರಾದ ಡಾ.ಹೆಚ್. ನರಸಿಂಹಯ್ಯ ನವರ ಅದ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು ಗೋಕಾಕ್ ವರದಿಯ ಅನುಷ್ಟಾನದಿಂದ ಕನ್ನಡಿಗರು ತೃಪ್ತರಾಗದ ಕಾರಣ 12 ವರ್ಷಗಳ ನಂತರ ಇದರ ಅವಶ್ಯಕತೆ ಕಂಡುಬಂದಿತು. ಕನ್ನಡ ಭಾಷೆಯು ಶಿಕ್ಷಣ ಮತ್ತು ಆಡಳಿತದಲ್ಲಿ ಅಭಿವೃದ್ದಿ ಪಡಿಸುವುದು ಈ ಸಮಿತಿಯ ಉದ್ದೇಶವಾಗಿತ್ತು.

ಸಮಿತಿಯ ಶಿಫಾರಸ್ಸುಗಳು:-

1.         ಎಲ್ಲಾ ಭಾಷಿಕ ಅಲ್ಪಸಂಖ್ಯಾತರಿಗೂ 1ರಿಂದ 4ನೇ ತರಗತಿಯವರೆಗೆ ಕನ್ನಡ ಕಡ್ಡಾಯ 5ನೇ ತರಗತಿಯಿಂದ ತಮ್ಮ ಮಾತೃಭಾಷೆಯನ್ನು ಕಲಿಯಬಹುದು.

2.         ಕರ್ನಾಟಕದ ಸರ್ಕಾರಿ ಹುದ್ದೆಗಳನ್ನು ಬಯಸುವವರು ಎಸ್.ಎಸ್.ಎಲ್.ಸಿ ವರೆಗೆ ಪ್ರಥಮ, ದ್ವಿತೀಯ, ತೃತೀಯ ಭಾಷೆಗಳಲ್ಲಿ ಯಾವುದರಲ್ಲಾದರೂ ಒಂದು ಭಾಷೆಯು ಕನ್ನಡ ಕಡ್ಡಾಯವಾಗಿ ಕಲಿತಿರಬೇಕು

3.         ಎಸ್.ಎಸ್.ಎಲ್.ಸಿ ವರೆಗೆ ಬೇರೆ ಭಾಷೆಗಳಲ್ಲಿ ಕಲಿತವರು 7ನೇ ತರಗತಿಯ ಕನ್ನಡ ಪಠ್ಯದ ಪರೀಕ್ಷೆಯಲ್ಲಿ ಪಾಸಾಗಬೇಕು.

4.         ದ್ವಿತೀಯ ಮತ್ತು ತೃತೀಯ ಭಾಷೆಯ ಪರೀಕ್ಷೆಗಳಲ್ಲಿ 100 ಕ್ಕೆ ಕನಿಷ್ಟ 30 ಅಂಕಗಳನ್ನು ಪಡೆದಿರಬೇಕು.

     ಈ ವರದಿಯಲ್ಲಿ ಇಂಗ್ಲೀಷ್, ಉರ್ದು, ಹಿಂದಿ ಭಾಷೆ ಓದಿದವರು 7ನೇ ತರಗತಿಯ ಕನ್ನಡ ಪಠ್ಯ ಪಾಸಾದರೆ ಸರ್ಕಾರಿ ಹುದ್ದೆ ಸಿಗುವುದು ಎಂಬ ರಿಯಾಯಿತಿ ಸಿಕ್ಕಿದ್ದರಿಂದ ಅಲ್ವಸಂಖ್ಯಾತರು ಸಹ ಈ ವರದಿಯನ್ನು ಟೀಕಿಸಲಿಲ್ಲ. ಸರ್ಕಾರ 1994ರಲ್ಲಿ ಈ ವರದಿಯನ್ನು ಅನುಷ್ಠಾನಕ್ಕೆ ತಂದಿತು.

ಡಾ.ರಾಜ ರಾಮಣ್ಣ ವರದಿ:1994

     ಪ್ರಾಥಮಿಕ ಶಿಕ್ಷಣವು ಕಡ್ಡಾಯ ಮತ್ತು ಉಚಿತವಾಗಿರಬೇಕೆಂದು ಉನ್ನತ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಸರ್ಕಾರವು 1994ರಲ್ಲಿ ಡಾ.ರಾಜರಾಮಣ್ಣರವರ ಅದ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿತು ಜಯಕುಮಾರ್ ಅಂಗೋಲ ಮತ್ತು ರಾದಿಕ, ಹೆರ್ತ್‍ಬುರ್ಗರ್  ಮುಂತಾದ 8 ಜನ ಸದಸ್ಯರನ್ನು ಈ ಸಮಿತಿ ಒಳಗೊಂಡಿತ್ತು.

ವರದಿಯ ಶಿಪಾರಸ್ಸುಗಳು:

1.         ಹಿಂದುಳಿದ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕನಿಷ್ಟ 15 ವಿದ್ಯಾರ್ಥಿಗಳಿಗೆ 1 ರಿಂದ 4ನೇ ತರಗತಿವರೆಗೆ ವಸತಿ ಶಾಲೆಗಳನ್ನು ಪ್ರಾರಂಬಿಸಬೇಕು.

2.         ಶಾಲೆಗಳಲ್ಲಿ ಶುದ್ದಕುಡಿಯುವ ನೀರು ಮತ್ತು ಶೌಚಾಲಯಗಳ, ವ್ಯವಸ್ಥೆ ಕಲ್ಪಿಸಬೇಕು, ಶಾಲಾ ಕಟ್ಟಡ ಮತ್ತು ಉತ್ತಮ ನಿರ್ವಹಣೆ ಇರಬೇಕು.

3.         15ರಿಂದ 20 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿರುವಂತೆ ನೋಡಿಕೊಳ್ಳಬೇಕು ಶಾಲೆಯ ವ್ಯಾಪ್ತಿಯಲ್ಲಿಯೇ ಆಹಾರದಾನ್ಯಗಳ ತಯಾರಿಕೆಗೆ ಆದ್ಯತೆ ನೀಡಬೇಕು.

4.         ಶಾಲೆಗಳಲ್ಲಿ ಹಾಜರಾತಿಯನ್ನು ಹೆಚ್ಚಿಸಲು ಅಂಗನವಾಡಿ ಕೇಂದ್ರಗಳಿಗೆ ಹೊಂದಿಕೊಂಡಂತಿರಬೇಕು.

5.         ಪ್ರತಿ 500 ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಒಂದು ಅಂಗನವಾಡಿ ಕೇಂದ್ರ ಪ್ರಾರಂಭಿಸಬೇಕು.

6.         ಶಾಲೆಯನ್ನು ಅರ್ದಕ್ಕೆ ಬಿಡುವ ವಿದ್ಯಾರ್ಥಿಗಳ ಬಗ್ಗೆ ಅಧಿಕಾರಿಗಳಿಗೆ ವರದಿ ಸಲ್ಲಿಸÀಬೇಕು.

7.         ಪ್ರಾಂತೀಯ ಶಾಲಾ ಅಭಿವೃದ್ದಿ ಮಂಡಲಿಗೆ (ಎಲ್.ಎಸ್.ಡಿ.ಸಿ) ಹೆಚ್ಚಿನ ಅಧಿಕಾರ ನೀಡಬೇಕು, ತಿಂಗಳಿಗೊಮ್ಮೆ ಸಬೆಯನ್ನು ನಡೆಸಬೇಕು.

8.         ವಿದ್ಯಾರ್ಥಿಗಳಿಗೆ, ಪುಸ್ತಕ, ಬ್ಯಾಗ್, ಸಮವಸ್ತ್ರ ಉಚಿತವಾಗಿ  ನೀಡಬೇಕು.

9.         ಪ್ರತಿ ಶಾಲೆಯಲ್ಲಿ ಗ್ರಂಥಾಲಯ, ಆಟದ ಮೈದಾನವನ್ನು ಕಲ್ಪಿಸಬೇಕು.

 ಈ ವರದಿಯಂತೆ ಹಿಂದುಳಿದ ಪ್ರದೇಶಗಳಲ್ಲಿ ವಸತಿಶಾಲೆಗಳನ್ನು ಪ್ರಾರಂಭಿಸಲಾಯಿತು.  ಆದರೆ ಅವುಗಳಿಗೆ ಬೇಕಾದ ಸೌಲಭ್ಯಗಳು ಮತ್ತು ಅವಶ್ಯಕತೆಗಳನ್ನು ಸರ್ಕಾರ ಪರಿಪೂರ್ಣವಾಗಿ ಒದಗಿಸಲಾಗಿಲ್ಲ.

 

ಕನ್ನಡ ಮಾದ್ಯಮ ಅನುಷ್ಠಾನ ವಿವಾದ:-

1982ರ ಗೋಕಾಕ್ ವರದಿಯನ್ನು ಆದರಿಸಿ ಸರ್ಕಾರ ದಿನಾಂಕ 20ನೇ ಜುಲೈ 1982ರಲ್ಲಿ ಆದೇಶ ಹೊರಡಿಸಿ ಪ್ರೌಡಶಾಲೆಗಳಲ್ಲಿ ಕನ್ನಡ ಪ್ರಥಮ ಭಾಷೆಯಾಗಿರಬೇಕೆಂದು ತಿಳಿಸಿತು.  ಪ್ರಾಥಮಿಕ ಶಾಲೆಗಳಲ್ಲಿ ಕನ್ನಡೇತರ ಶಾಲೆಗಳಲ್ಲೂ ಪ್ರಥಮ ವರ್ಷದಿಂದಲೇ ಕನ್ನಡ ಕಡ್ಡಾಯವೆಂದು ತಿಳಿಸಿತು.  ಈ ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಕೆಲವರು ಪ್ರಶ್ನಿಸಿದರು ಸಂವಿದಾನದ ಅನುಚ್ಛೇದ 14 (1) ಮತ್ತು 30(1) ರ ವಿಧಿಗಳಂತೆ ಸರ್ಕಾರದ ಆದೇಶವನ್ನು ನ್ಯಾಯಾಲಯ ಅನೂರ್ಜಿತಗೊಳಿಸಿತು. ಇದರ ವಿರುದ್ದವಾಗಿ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತು ಸರ್ಕಾರವು ಹಿಂದಿನಂತೆಯೇ 19ನೇ ಜೂನ್ 1986 ರಲ್ಲಿ 1ರಿಂದ 4ನೇ ತರಗತಿಯವರೆಗೆ ಮಾತೃಭಾಷೆ ಭೋದನಾ ಮಾದ್ಯಮವೆಂದು ಹೇಳಿತು. ಕನ್ನಡೇತರ ಶಾಲೆಗಳಲ್ಲಿ 3ನೇ  ತರಗತಿಯಿಂದ ಕನ್ನಡವನ್ನು ಐಚ್ಚಿಕ ವಿಷಯವಾಗಿ ಬೋದನೆ ಮಾಡಬೇಬೇಕು ಪ್ರೌಡಶಾಲೆ ಹಂತದಲ್ಲಿ ಒಂದು  ಭಾಷೆ ಕನ್ನಡ ಕಡ್ಡಾಯವೆಂದು ಆದೇಶಿಸಿತು.

     ರಾಜ್ಯ ಸರ್ಕಾರವು 1987 88 ರಲ್ಲಿ ಆಂಗ್ಲ ಮಾದ್ಯಮ ಶಾಲೆಗಳನ್ನು ತೆರೆಯಬಾರದೆಂದು ತೀರ್ಮಾನಿಸಿತು.  ಆದರೆ ಆಂಗ್ಲ ಮಾದ್ಯಮ ಶಾಲೆಗಳನ್ನು ತೆರೆದಿದ್ದ ಮಾಲಿಕರೆಲ್ಲರೂ ಸೇರಿ 19-06-1986ರ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿಸಲ್ಲಿಸಿದರು. ನ್ಯಾಯಾಲಯವು 8ನೇ ಡಿಸೆಂಬರ್ 1989ರಂದು ತೀರ್ಪು ನೀಡಿ, ಸರ್ಕಾರದ ಆದೇಶದ ಸಿಂದುತ್ವವನ್ನು ಎತ್ತಿ ಹಿಡಿಯಿತು. ಅಲ್ಲದೆ ಯಾವುದೇ ರಾಜ್ಯ ಭಾಷಾ ನೀತಿಯನ್ನು ಹೇಗೆ ರೂಪಿಸಬೇಕು ಮತ್ತು ಅದನ್ನು ಹೇಗೆ ಜಾರಿಗೊಳಿಸಬೇಕೆಂದು ಪ್ರತಿಯೊಂದು ರಾಜ್ಯಕ್ಕೂ ತಿಳಿದಿದೆ. ಇಂತಹ ಸಂಕೀರ್ಣ ವಿಚಾರಗಳಲ್ಲಿ ನ್ಯಾಯಾಲಯವು ಮದ್ಯಪ್ರವೇಶಿಸಬಾರದೆಂದು ಅಭಿಪ್ರಾಯಪಟ್ಟಿತು.

     ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಸರ್ಕಾರದ ಆದೇಶವನ್ನು ಪ್ರಶ್ನಿಸಲಾಯಿತು. ಅಲ್ಲದೆ 1989ಕ್ಕಿಂತ ಮೊದಲು ಪ್ರಾರಂಭವಾಗಿರುವ ಆಂಗ್ಲಮಾದ್ಯಮದ ಶಾಲೆಗಳಲ್ಲಿ ಕನ್ನಡ ಕಡ್ಡಾಯ ನೀತಿ ಕುರಿತು ತಡೆ ಆದೇಶ ತರಲಾಗಿತ್ತು.  1989ರ ನಂತರ ಪ್ರಾರಂಭವಾಗದ 1 ರಿಂದ 4 ನೇ ತರಗತಿಯವರೆಗಿನ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಎನ್ನುವುದು ಸರ್ಕಾರದ ನೀತಿ. ಆದರೆ ಈ ನೀತಿ ಜಾರಿ ಆಗುವುದಕ್ಕೆ ಮೊದಲು ಪ್ರಾರಂಭವಾದ ಶಾಲೆಗಳಲ್ಲಿ ಆಂಗ್ಲಮಾದ್ಯಮ ಹಾಗೆಯೇ ಉಳಿದುಕೊಂಡು ಬಂದಿದೆ.

     1994 ಮತ್ತು 2006 ರಲ್ಲಿ ಸರ್ಕಾರದ ಆದೇಶವನ್ನು ಆಂಗ್ಲ ಮಾದ್ಯಮ ಶಾಲೆಗಳು ಮಾನ್ಯ ಮಾಡಲಿಲ್ಲ. 7770 ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಗಳು ಅಧಿಕ ಶುಲ್ಕಗಳನ್ನು ವಸೂಲಿ ಮಾಡಿ ಶಿಕ್ಷಣವನ್ನು ವ್ಯಾಪಾರಿಕರಣ ಮಾಡತೊಡಗಿದವು 3000 ಕನ್ನಡ ಮಾದ್ಯಮ ಶಾಲೆಗಳು ಕನ್ನಡ ಮಾದ್ಯಮ ಭೋದನಾ  ಪರವಾನಿಗಿಯನ್ನು ಪಡೆದು ಹಣದಾಸೆಗಾಗಿ ಆಂಗ್ಲ ಮಾದ್ಯಮವನ್ನು ಭೋದಿಸುತ್ತಿವೆ.

     ಶಿಕ್ಷಣಮಂತ್ರಿ ಶ್ರೀ ಬಸವರಾಜ ಹೊರಟ್ಟಿರವರು 3000 ಶಾಲೆಗಳಿಗೆ ಸರ್ಕಾರಿ ಆದೇಶವನ್ನು ಹೊರಡಿಸಿ ಕನ್ನಡ ಮಾದ್ಯಮವನ್ನು ಪ್ರಾರಂಬಿಸಬೇಕೆಂದುÁ ಆದೇಶಿಸಿದರು.  2006 ಆಗಸ್ಟ್‍ನಲ್ಲ 1420 ಶಾಲೆಗಳ ಪರವಾನಗಿಯನ್ನು ರದ್ದುಗೊಳಿಸಿದರು.  ಆದರೆ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆ ಶಾಲೆಗಳು ಮುಂದುವರೆಯುತ್ತಿವೆ.

ಡಾ.ವಿ.ಎಸ್. ಆಚಾರ್ಯ ಸಮಿತಿ:- 2007

     ಕನ್ನಡ ಮಾದ್ಯಮ ಅನುಷ್ಠಾನದ ಸಮಸ್ಯೆಯು ನಿರಂತರವಾಗಿ ನ್ಯಾಯಾಲಯದಲ್ಲಿ ಮುಂದುವರೆಯುತ್ತಿರುವಾಗಲೇ ಸರ್ಕಾರವು ಡಾ.ವಿ.ಎಸ್ ಆಚಾರ್ಯ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿತು.  ಇದರ ಪ್ರಮುಖ ಉದ್ದೇಶವೆಂದರೆ.  ಕನ್ನಡ ಮಾದ್ಯಮ ಶಾಲೆಗಳ ಭವಿಷ್ಯವನ್ನು ನಿರ್ಧರಿಸುವುದೇ ಆಗಿತ್ತು.

     ಸಮಿತಿಯು ವರದಿಯನ್ನು ನೀಡಿ ಆಂಗ್ಲ ಶಾಲೆಗಳ ಪರವಾನಗಿಯನ್ನು ರದ್ದುಗೊಳಿಸುವುದು ಮತ್ತು ದಂಡ ವಿಧಿಸುವುದು ಹಾಗೂ 2007ರ ನಂತರ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಬೇಕೆಂದು ಆದೇಶಿಸಲು ಶಿಪಾರಸ್ಸು ಮಾಡಿತು.

     ಆಂಗ್ಲ ಶಾಲೆಗಳ ಮಾಲೀಕು ಮತ್ತೊಮ್ಮೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ಸಂವಿದಾನಿಕ ಹಕ್ಕಿನ ಅನ್ವಯ ಇಂಗ್ಲೀಷ್ ಮಾದ್ಯಮ ಭೋದನೆಗೆ ಅವಕಾಶ ನೀಡಬೇಕೆಂದು ಕೇಳಿದವು.  ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿ ದಂಡ ವಸೂಲಿಯನ್ನು ತಡೆಯಿತು. ಹಾಗೆಯೇ ಸರ್ಕಾರದಿಂದ ಆದೇಶಿಸಲಾಗಿರುವ  ಕನ್ನಡ ಮಾದ್ಯಮದಲ್ಲಿ ಭೋದಿಸಬೇಕೆಂದು ಆದೇಶಿಸಿತು.

     2008ರ ಏಪ್ರಿಲ್‍ನಲ್ಲಿ ಶಿಕ್ಷಣ ಇಲಾಖೆಯು ಪರವಾನಗಿ ರದ್ದಾದ ಶಾಲೆಗಳ ವಿವರವನ್ನು ದಿನ ಪತ್ರಿಕೆಗಳಲ್ಲಿ ಮುದ್ರಿಸಿತು.  ಆ ಮೂಲಕ ಪೋಷಕರಿಗೆ ಪರವಾನಗಿ ರದ್ದಾ ಶಾಲೆಗಳಿಗೆ ತಮ್ಮ ಮಕ್ಕಳನ್ನು  ಸೇರಿಸಬಾರದೆಂದು ಮತ್ತು ಆ ಶಾಲೆಗಳ ವಿರುದ್ದ ನ್ಯಾಯಾಂಗ ಪ್ರಕ್ರಿಯೆ ನಡೆಸಲಾಗುವುದೆಂದು ತಿಳಿಸಿದರು ಆದರೆ ಖಾಸಗೀ ಶಾಲೆಗಳು ತಮ್ಮ ಪ್ರವೇಶವನ್ನು ಪ್ರಾಂಬಿಸಿದವು.  ಆದರೆ ಉಚ್ಚ ನ್ಯಾಯಲಯವು 14 ವರ್ಷಗಳ ನಂತರ 1ನೇ ಜುಲೈ 2008ರಂದು ತೀರ್ಪು ನೀಡಿತು.

ಹೈಕೋರ್ಟ್ ತೀರ್ಪಿನ ಪ್ರಮುಖಾಶಗಳು:2008

ಆಂಗ್ಲ ಪ್ರಾಥಮಿಕ ಶಾಲೆಗಳ ಮಾಲೀಕರು ಉಚ್ಚ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುತ್ತಾ 1994ರಲ್ಲಿಯೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನಮಗೆ ಆಂಗ್ಲ ಮಾದ್ಯಮದಲ್ಲಿ ಭೋದಿಸಲು ಅವಕಾಶ ನೀಡಬೇಕೆಂದು ಕೇಳಿಕೊಂಡರು. ಅದಕ್ಕೆ ಅನುಗುಣವಾಗಿ ಉಚ್ಚ ನ್ಯಾಯಾಲಯವು ಜುಲೈ 2008 ರಂದು 14 ವರ್ಷಗಳ ನಂತರ ಈ ಕೆಳಕಂಡಂತೆ ತೀರ್ಪು ನೀಡಿತು.

1.         ಸರ್ಕಾರಿ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಗಳವರೆಗೆ ಕನ್ನಡ ಮಾದ್ಯಮ ಭೋದನೆ ಕಡ್ಡಾಯ.

2.         ಖಾಸಗೀ (uಟಿ ಂiಜeಜ-ಠಿಡಿivಚಿಣe) ಶಾಲೆಗಳಲ್ಲಿ ಕನ್ನಡ ಮಾದ್ಯಮ ಕಡ್ಡಾಯವಲ್ಲ.

3.         ಖಾಸಗೀ (uಟಿ ಂiಜeಜ) ಶಾಲೆಗಳಲ್ಲಿ ಒಂದನೇ ತರಗತಿಯಿಂದ ಕನ್ನಡ ಪಠ್ಯ ಬೋಧನೆ ಕಡ್ಡಾಯ ಆದರೆ ಬೇರೆ ವಿಷಯಗಳನ್ನು ಇಂಗ್ಲೀಷ್ ಮಾದ್ಯಮದಲ್ಲಿ ಭೋದಿಸಬಹುದು.

4.         ಸಂವಿದಾನದ ಪರಿಚ್ಚೇದ 21 ರಂತೆ 6 ರಿಂದ 14ರ ವರೆಗಿನ ಮಕ್ಕಳ ಶಿಕ್ಷಣ ಮಾದ್ಯಮವನ್ನು ಆಯ್ಕೆ ಮಾಡುವ ಹಕ್ಕು ಪೋಷಕರಿಗೆ ಇರುತ್ತದೆ. ಭೋದನೆಯು ವಿಧಿ 19 (1) ರಂತೆ ಒಂದು ವೈಯಕ್ತಿಕ ಉದ್ಯೋಗ. ಶಿಕ್ಷಣ ಸಂಸ್ಥೆಗಳು ತಮ್ಮ ಆಯ್ಕೆಗೆ ಅನುಗುಣವಾಗಿ ಶಿಕ್ಷಣ ನೀಡುವ ಹಕ್ಕು ಪಡೆದಿವೆ.

5.         ಖಾಸಗೀ ಶಾಲೆಗಳಲ್ಲಿ ಮಾತೃಭಾಷೆ ಅಥವಾ ಪ್ರಾಂತೀಯ ಭಾಷೆಯಲ್ಲಿಯೇ ಬೋದಿಸಬೇಕೆಂದು ಒತ್ತಾಯಿಸುವುದು ಅಸಂವಿದಾನಿಕ.

6.         ನ್ಯಾಯಾಲಯವು ಕನ್ನಡ ಮಾದ್ಯಮ ಶಾಲೆಗಳಲ್ಲಿ ಇಂಗ್ಲೀಷ್ ವಿಷಯವನ್ನು ಬೋಧಿಸುವುದು, ಇಂಗ್ಲೀಷ್ ಮಾದ್ಯಮ ಶಾಲೆಗಳಲ್ಲಿ ಕನ್ನಡ ವಿಷಯವನ್ನು ಭೋಧಿಸುವುದು.  ಕಡ್ಡಾಯವೆಂದು ಒಪ್ಪುತ್ತದೆ.

7.         ಪ್ರಸ್ತುತ ವರ್ಷಗಳಲ್ಲಿ ಕನ್ನಡ ಮಾದ್ಯಮವನ್ನು ಹಿಂದಿಗಿಂತ ಹೆಚ್ಚಿಸದಲಾಗುತ್ತಿದೆ ಅದು ಕನ್ನಡಿಗರ ಜವಾಬ್ದಾರಿ. ಕನ್ನಡಮಾದ್ಯಮ ಶಾಲೆಗಳು ಮತ್ತಷ್ಟು ಪ್ರಾರಂಬಿಸಬೇಕಾಗಿದೆ. ಉತ್ತಮ ಕನ್ನಡ ಶಿಕ್ಷಕರನ್ನು ನೇಮಿಸಬೇಕಾಗಿದೆ ಹಾಗೆಯೇ ಉತ್ತಮ ಭೋದನಾ ವಿದಾನಗಳನ್ನು ಅಳವಡಿಸಬೇಕಾಗಿದೆ.

8.         ಕನ್ನಡ ಅಭಿವೃದ್ದಿಗೆ ಎಲ್ಲಾ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಬೇಕು ಮತ್ತು ರಿಯಾಯಿತಿ ದರದಲ್ಲಿ ಮುದ್ರಣವಾಗಬೇಕು.

9.         ಕನ್ನಡ ಭಾಷೆ ಮತ್ತು ಸಾಹಿತ್ಯವು ಅಭಿವೃದ್ದಿಯಾಗಲು ಪರಿಣಿತ ಬರಹಗಾರರು ಕನ್ನಡ ಪುಸ್ತಕಗಳನ್ನು ಮುದ್ರಿಸಬೇಕು.

10.       ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಪಠ್ಯ ಪುಸ್ತಕಗಳು ಕನ್ನಡಕ್ಕೆ ಭಾಷಾಂತರವಾಗಬೇಕು.

11.       ಸರ್ಕಾರವು ಯಾವುದೇ ಮಾದ್ಯಮದಲ್ಲಿ ಸರ್ಕಾರ ಅಥವಾ ಖಾಸಗೀ ಶಾಲೆಗಳಲ್ಲಿ ಶಿಕ್ಷಣವನ್ನು ಜಾರಿಗೊಳಿಸಬಹುದು ಆದರೆ ಜನತೆಯ ಮೂಲಭೂತ ಹಕ್ಕುಗಳ ಮೇಲೆ ಯಾವುದೇ ನಿರ್ಬಂದ ಹೇರಬಾರದು.

12.       ಸರ್ಕಾರವು ಶಿಕ್ಷಣ ಮಾದ್ಯಮವನ್ನು ಮಾತೃ ಭಾಷೆಯಲ್ಲಿಯೆ ಅಥವಾ ಪ್ರಾಂತೀಯ ಭಾಷೆಯಲ್ಲಿಯೇ ನೀಡಬೇಕೆಂದು ಒತ್ತಾಯಿಸುವಂÀತಿಲ್ಲ.  ವಿದ್ಯಾರ್ಥಿಗಳೂ ಮತ್ತು ಪೋಷಕರು ಯಾವ ಶಿಕ್ಷಣ ಮಾದ್ಯಮವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಹಕ್ಕು ಅವರಿಗಿರುತ್ತದೆ.

13.       ಭಾರತದೇಶ ಹಲವು ಪ್ರಾಂತೀಯ ಭಾಷೆಗಳನ್ನು ಹೊಂದಿದೆ. ಇಂಗ್ಲೀಷ್ ಭಾಷೆಯಿಲ್ಲವೆಂದರೆ ನೆರೆಯ ರಾಜ್ಯಗಳೊಂದಿಗೆ ಸಂಬಂದ ಕಷ್ಟಕರವಾಗುತ್ತದೆ. ರಾಜ್ಯಗಳೊಂದಿಗಿನ ವ್ಯಾಪಾರ, ವಾಣಿಜ್ಯ ಹಾಗೂ ರಾಷ್ಟ್ರೀಯ ಐಕ್ಯತೆಗೆ ದಕ್ಕೆಬರುತ್ತದೆ. ಪೋಷಕರು ತಮ್ಮ ಮಕ್ಕಳು ತಮ್ಮ ಮಾತೃಭಾಷೆಯೊಂದಿಗೆ ಇಂಗ್ಲೀಷ್ ಭಾಷೆಯನ್ನು ಕಲಿಯಲು ಬಯಸಿದ್ದಾರೆ ಆದ್ದರಿಂದ ಅವರನ್ನು ಮಾತೃಭಾಷೆಯಲ್ಲಿಯೇ ಕಲಿಯಬೇಕೆಂದು ಒತ್ತಾಯಿಸಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ.

14.       ಇಂಗ್ಲೀಷ್ ಭಾಷೆಯನ್ನು ಕಲಿಯುವ ಮೂಲಕ ಪೋಷಕರು ಮತ್ತು ಮಕ್ಕಳು ಅಪರಾದ ಮಾಡುತ್ತಿಲ್ಲ, ಇಂಗ್ಲೀಷ್ ಕಲಿಯುವುದು ಅನ್ಯಾಯವಲ್ಲ.

15.       ಕನ್ನಡ ಒಂದು ಪ್ರಾದೇಶಿಕ ಭಾಷೆ ಇಂಗ್ಲೀಷ್ ಮಾದ್ಯಮ ಶಾಲೆಗಳಿಗೆ ಅದನ್ನು ಕಡ್ಡಾಯವಾಗಿ ಬೋದಿಸಲು ಹೇಳಬೇಕು.

     ಹೀಗೆ ನ್ಯಾಯಾಲಯವು ವಿದ್ಯಾರ್ಥಿಗಳ ಮತ್ತು ಪೋಷಕರ ಸಂವಿದಾನಿಕ ಹಕ್ಕನ್ನು ಎತ್ತಿ ಹಿಡಿಯಿತು. ಜೊತೆಗೆ ಪ್ರಾದೇಶಿಕ ಭಾಷೆ ಕನ್ನಡವನ್ನು ಕಲಿಯಬೇಕು ಕಲಿಯುವಹಕ್ಕು ವಿದ್ಯಾರ್ಥಿ ಮತ್ತು ಪೋಷಕರದೆಂದು ತೀರ್ಪು ನೀಡಿತು. ಉಚ್ಚನ್ಯಾಯಾಲಯದ ತೀರ್ಪನ್ನು 2008 ಜುಲೈನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಪ್ರಶ್ನಿಸಿದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾದೀಶರಾದ ಕೆ.ಜಿ.ಬಾಲಕೃಷ್ಣನ್, ಸದಾಶಿವನ್ ಮತ್ತು ಟಿ.ಎಂ. ಪಾನಹಾಲ್‍ರವರು ತೀರ್ಪು ನೀಡಿದರು. “ತಂದೆ ತಾಯಿ ಮತ್ತು ಪೋಷಕರು ತಮ್ಮ ಮಕ್ಕಳ ಶಿಕ್ಷಣ ಮಾದ್ಯಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಹೊಂದಿದ್ದಾರೆ” ಎಂದು ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.

     ಕನ್ನಡ ಮಾದ್ಯಮ ಅನುಷ್ಠಾನದ ಸಮಸ್ಯೆ ಸರ್ವೋಚ್ಚ ನ್ಯಾಯಾಲಯದ ಮೂಲಕ ಬಗೆಹರಿಯಬಹುದೆಂಬ ಕ್ನನಡಿಗರ ಕನಸ್ಸು ನನಸಾಗಲಿಲ್ಲ.  ಪೋಷಕರ ಇಂಗ್ಲೀಷ್ ಮಾದ್ಯಮದ ವ್ಯಾಮೋಹದಿಂದ ಕನ್ನಡ ಭಾಷೆ, ಕನ್ನಡ ಶಾಲೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತಿವೆ ಕನ್ನಡಶಾಲೆಗಳು ಮುಚ್ಚಲ್ಪಡುತ್ತಿವೆ.  ವಿದ್ಯಾರ್ಥಿಗಳ ಸಂಖ್ಯೆಗಣನೀಯವಾಗಿ ಕಡಿಮೆಯಾಗುತ್ತ್ತಿದೆ. ಕನ್ನಡ ಭಾಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ.  ಇದಕ್ಕೆ ಜನತೆ ತಮ್ಮ ಇಂಗ್ಲೀಷ್ ವ್ಯಾಮೋಹವನ್ನು ಬಿಡಬೇಕು.  ಮಾತೃಭಾಷೆಗೆ ಪ್ರಥಮ ಆದ್ಯತೆ ನೀಡಬೇಕು.  ಕನ್ನಡಭಾಷೆ, ಸಂಸ್ಕøತಿಯನ್ನು ರಕ್ಷಿಸಬೇಕು.  ಸರ್ಕಾರವು ರಾಜ್ಯದ ಕನ್ನಡಿಗರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಬೇಕು.  ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಜನ, ಭಾಷೆ, ಸಂಸ್ಕøತಿ ಸರ್ವಕಾಲಕ್ಕೂ ಗೆಲುವನ್ನು ಕಾಣಬೇಕು

ಕನ್ನಡ ಭಾಷಾ ಅನುಷ್ಟಾನಕ್ಕೆ ಸಲಹೆಗಳು:-

1)         ಕನ್ನಡ ಮಾತನಾಡಲು ಬಾರದ ಅಧಿಕಾರಿಗಳ ವಿರುದ್ದ ಸೂಕ್ತಕ್ರಮ ಮತ್ತು ಸರ್ಕಾರ ಬೆದರಿಕೆಯ  ಸುತ್ತೋಲೆಗಳನ್ನು ಹೊರಡಿಸಬೇಕು.

2)         ಕರ್ನಾಟಕ ಸರ್ಕಾರದಲ್ಲಿನ  ಶಾಸನಾತ್ಮಕವಾದ “ಭಾಷಾ ಅಭಿವೃದ್ಧಿ ಪ್ರಾಧಿಕಾರ” ಕನ್ನಡಭಾಷಾ ಅನುಷ್ಟಾನಕ್ಕೆ ಹೆಚ್ಚು ಕ್ರಿಂiÀiಶೀಲವಾಗಿ ಕೆಲಸ ಮಾಡಬೇಕಾಗಿದೆ.

3)         ಸರ್ಕಾರದ ಎಲ್ಲಾ ಉನ್ನತ ಹುದ್ಧೆಗಳಲ್ಲಿ ಕನ್ನಡಿಗರಿಗೆ ಪ್ರಥಮ ಪ್ರಾಶಸ್ಥ್ಯ ನೀಡಲು ಸೂಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು.

4)         ಇಂಗ್ಲೀಷ್ ವ್ಯಾಮೋಹ ನಿವಾರಿಸಲು ಸರ್ಕಾರದ ಎಲ್ಲಾ ಶಾಲೆಗಳಲ್ಲಿ ಪ್ರಾರಂಬಿಕ (ಒಂದನೇ ತರಗತಿಯಿಂದ) ಹಂತದಿಂದಲೇ ಇಂಗ್ಲೀಷ್ ಮಾದ್ಯಮಕ್ಕೆ ಎರಡನೇ ಸ್ಥಾನವನ್ನು ನೀಡಬೇಕು.  ಶಾಲೆಗಳ ಶಿಕ್ಷಕರ ಮತ್ತು ಪಠ್ಯ ಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಗುಣಮಟ್ಟ ಕಾಯ್ದುಕೊಳ್ಳಬೇಕು.

5)         ಗ್ರಾಮೀಣಮಟ್ಟದ ಕನ್ನಡ ಶಾಲೆಗಳಲ್ಲಿ ವಿಜ್ಞಾನ, ತಂತ್ರಜ್ಞಾನ ( ಐ.ಟಿ.ಬಿ.ಟಿ) ಅಭಿವೃದ್ದಿಗೊಳಿಸುವುದರ ಜೊತೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕಲಿಕೆಗೆ ಸರ್ಕಾರ ಆದ್ಯತೆ ನೀಡಬೇಕು.

6)         ಸರ್ಕಾರ ಖಾಸಗೀ ಶಾಲೆ’ಸಂಸ್ಥೆ’ವಿಶ್ವವಿದ್ಯಾಲಯಗಳು ವಿಧಿಸಬಹುದಾದ ಶುಲ್ಕಗಳು ಸರ್ಕಾರ ಮತ್ತು ಖಾಸಗೀಯ ಸಂಸ್ಥೆಗಳಲ್ಲಿ ಏಕರೀತಿಯ ನೀತಿಯನ್ನು ರೂಪಿಸಬೇಕು.

7)         ಪಠ್ಯಪುಸ್ತಕ, ಗ್ರಂಥಾಲಯ, ವಾಚನಾಲಯ, ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರಗಳು ಪ್ರಾಥಮಿಕ ಹಂತದಿಂದ ವಿ.ವಿ ಹಂತದವರೆಗೂ ಅಭಿವೃದ್ದಿ ಪಡಿಸಬೇಕು.

8)         ಕನ್ನಡಿಗರು ಹೊರರಾಜ್ಯದ ಅನ್ಯಭಾಷಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು ಕನ್ನಡ ಕಲಿಸಿ, ಕನ್ನಡ ಭಾಷಿಗರ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು.

9)         ಕರ್ನಾಟಕ ಸರ್ಕಾರ ಪ್ರತಿಯೊಂದೂ ಕ್ಷೇತ್ರದಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡಿ ಕನ್ನಡ ಭಾಷೆಯ ಮಹತ್ವವನ್ನು ಉತ್ತುಂಗ ಶಿಖರಕ್ಕೆ ಏರಿಸಬೇಕು.

10)       ಕನ್ನಡಭಾಷೆ, ನೆಲ, ಜಲ, ಸಂಸ್ಕøತಿಯ ಬಗ್ಗೆ ಕನ್ನಡಿಗರು ಹೆಮ್ಮೆಪಡಬೇಕು ಅನ್ಯರಲ್ಲಿಯೂ ಆಶಾ ಭಾವನೆಯನ್ನು ಮೂಡಿಸಬೇಕು.

11)       ಕನ್ನಡಪರ ಸಂಘಟನೆಗಳು ತಿಂಗಳಿಗೊಮ್ಮೆ ಕರ್ನಾಟಕದ ಐತಿಹಾಸಿಕ ಮನೆತನಗಳ, ಕಲೆ, ವಾಸ್ತುಶಿಲ್ಪ, ಸಂಸ್ಕøತಿ, ಜನಪದ ಸಂಸ್ಕøತಿ, ನಾಟಕ, ಕವಿಗೋಷ್ಠಿ, ನಾಡಹಬ್ಬಗಳು,  ರಾಷ್ಟ್ರೀಯ ಹಬ್ಬಗಳು ಮುಂತಾದುವುಗಳ ಬಗ್ಗೆ ಸಮ್ಮೇಳನ, ವಿಚಾರಸಂಕೀರ್ಣ, ರಸಸಂಜೆ, ಮತ್ತು ಸಂಸ್ಕøತಿಕ ಉತ್ಸವಗಳನ್ನು ಆಚರಿಸಿದರೆ ಕನ್ನಡಿಗರಲ್ಲಿ ನಾಡಿನ ಸಂಸ್ಕøತಿ ಮತ್ತು ಅಭಿಮಾನವು ದ್ವಿಗುಣಗೊಳ್ಳುತ್ತದೆ.

ಅಡಿ ಟಿಪ್ಪಣಿಗಳು ಮತ್ತು ಆಧಾರ ಗ್ರಂಥಗಳು.

  1. ಪ್ರೊ ಎಲ್.ಎಸ್.ಶೇಷಗಿರಿರಾವ್ (ಪಂ) ‘ಕನ್ನಡ ಕನ್ನಡಿಗ ಕರ್ನಾಟಕ-ಬೆಂಗಳುರು-2008
  2. (ಹೆಚ್.ಎಸ್. ಕೃಷ್ಣಮೂರ್ತಿ ಐಯಂಗರ್ (ಪಂ) ‘ಅವಲೋಕನ’ ಕರ್ನಾಟಕದ ಪರಂಪರೆಯ    ಸಮೀಕ್ಷೆ ಪು-210
  3. ಮುಖ್ಯಮಂತ್ರಿ ಚಂದ್ರು, ಡಾ.ಎಂ.ಮುರಿಗಪ್ಪ.  (ಪಂ) ‘ಆಡಳಿತ ಕನ್ನಡ’ ಬೆಂಗಳೂರು,2010
  4. ಡಾ.ಎಂ.ಚಿದಾನಂದ ಮೂರ್ತಿ. ‘ಬೃಹತ್ ಕರ್ನಾಟಕ ಭಾಷಿಕ ಸಾಸ್ಕøತಿಕ’-ಬೆಂಗಳೂರು, 2008
  5. ಜಿ.ಎಸ್.ಆಮೂರ ಆಧುನಿಕ ಕನ್ನಡ ವಿಮರ್ಶೇ, ಬೆಂಗಳೂರು-2008
  6. ಕೆ.ವಿ ತಿರುಮಲೇಶ್ “ವರ್ಮ ಕನ್ನಡ- 2006, ಬೆಂಗಳೂರು
  7. ಲಿಂಗದೇವರು ಹಳೆಮನೆ ಶಾಸ್ತ್ರೀಯ ಭಾಷೆಯ ಪರಿಕಲ್ಪನೆ ಮತ್ತು ಪುರೂತ ಬೆಂಗಳೂರು, 2006
  8. ಡಾ|| ಕೆ.ಎಂ.ಕುಮಾರ್ ‘ಕರ್ನಾಟಕದಲ್ಲಿ ರೈತಚಳುವಳಿ’ ಬೆಂಗಳೂರು-2008.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal