Tumbe Group of International Journals

Full Text


ಮಾನವತಾವಾದಿ ಬಸವಣ್ಣ

ಶಾಂತಕುಮಾರಿ.ಕೆ.

ಸಹಾಯಕ ಪ್ರಾದ್ಯಪಕರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆ

ಪೀಠಿಕೆ:   

     ಬೌದ್ದ,ಜೈನಧರ್ಮಗಳೂ ಈ ತತ್ವಗಳನ್ನು ಪ್ರತಿಪಾದಿಸಿವೆ. ಈ ವಚನದಲ್ಲಿರುವ ಏಳು ಸೂತ್ರಗಳನ್ನು ಪಾಲನೆ ಮಾಡಿದರೆ ಅಂತ ರಂಗ,ಬಹಿರಂಗಗಳು ಶುದ್ದಿಯಾಗುತ್ತವೆ. ಇದು ಪರಮಾತ್ಮನನ್ನು ಒಲಿಸುವ ಸರಳ ದಾರಿ. ಸುಂದರವಾದ ಸರಳವಾದ ಮಹತ್ವದ ವಚನವಿದು. ಹಾಡಲು ಸೊಗಸಾಗಿದೆ. ನಿರಲಾಂಕಾರದಿಂದ ಕೂಡಿದ್ದರು, ಕಾವ್ಯದ ಯಾವ ಸೊಗಸುಗಳು ಇಲ್ಲದಿದ್ದರು ಇದು ವಿಶ್ವಮಾನ್ಯವಾದ ತತ್ವಗಳನ್ನು ಹೇಳುತ್ತದೆ. ಸರಳವಾಗಿ ಧರ್ಮತತ್ವಗಳನ್ನು  ತಿಳಿಸುವ ಜಗದ್ವಂದ್ಯ ವಚನವಾಗಿದೆ. ಬಸವಣ್ಣನವರು   ವಿಶ್ವಮಾನ್ಯರನ್ನಾಗಿ ಮಾಡಿರುವ ವಚನವಿದು. ದರ್ಮವನ್ನು ಇಷ್ಟು ಸರಳವಾಗಿ, ದೆವರನ್ನು ಒಲಿಸಿಕೊಳ್ಳುವ ದಾರಿಯನ್ನು ಸುಲಭವಾಗಿ ತಿಳಿಸಿಕೊಟ್ಟವರಾರು ಇಲ್ಲ. ಯಾವ ವಿಧಿ, ಕರ್ಮಾಚರಣೆ, ಪೂಜೆ,ಮಂತ್ರ,ತಂತ್ರ,ಯಙÐ, ಹವನ, ಹೋಮ, ಯಾಗ, ಏನೊಂದೂ ಬೇಡ. ಇಲ್ಲಿರುವ ಸೂತ್ರಗಳನ್ನು ಪರಿಪಾಲಿಸಿದರೆ ಸಾಕು. ಪರಮಾತ್ಮ ಸುಲಭವಾಗಿ ದೊರೆಯುತ್ತಾನೆ.

ಟಿಪ್ಪಣಿ:

    ಕಳಬೇಡ ಕೋಳಬೇಡ ಹುಸಿಯ ನುಡಿಯಳು ಬೇಡ.

    ಮುನಿಯಬೇಡ ಅನ್ಯರಿಗೆ ಅಸಯ್ಯ ಪಡಬೇಡ.

    ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ.

    ಇದೇ ಅಂತರಂಗಶುದ್ದಿ ಇದೇ ಬಹಿರಂಗ ಶುದ್ದಿ

    ಇದೇ ಕೂಡುಸಂಗಮನೂಳಿಸುವ ಪರಿ.

         ಪರಮಾತ್ಮನನ್ಮು ಒಳಿಸಿಕೊಳ್ಳುವ ದಾರಿ ಯಾವುದು ಎಂಬುದನ್ನು ತುಂಬ ಸರಳವಾಗಿ ಈ ವಚನದಲ್ಲಿ ತಿಳಿಸಿದ್ದಾರೆ. ಅಂತರಂಗ ಬಹಿರಂಗಗಳನನ್ನು ಪರಿಶುದ್ದ ಇರಿಸಿಕೊಳ್ಳುವುದೇ ಪರಮಾತ್ಮನ್ನು ಒಲಿಸಿಕೊಳ್ಳುವ ದಾರಿ. ಇದು ನೇರ ಯೋಗದ ದಾರಿ. ತುಂಬ ಅರ್ಥಗರ್ಭಿತವಾಗಿ ಈ ವಚನದಲ್ಲಿ ಹೆಳಿದ್ದಾರೆ.  ಬೌದ್ದ,ಜೈನಧರ್ಮಗಳೂ ಈ ತತ್ವಗಳನ್ನು ಪ್ರತಿಪಾದಿಸಿವೆ. ಈ ವಚನದಲ್ಲಿರುವ ಏಳು ಸೂತ್ರಗಳನ್ನು ಪಾಲನೆ ಮಾಡಿದರೆ ಅಂತ ರಂಗ,ಬಹಿರಂಗಗಳು ಶುದ್ದಿಯಾಗುತ್ತವೆ. ಇದು ಪರಮಾತ್ಮನನ್ನು ಒಲಿಸುವ ಸರಳ ದಾರಿ. ಸುಂದರವಾದ ಸರಳವಾದ ಮಹತ್ವದ ವಚನವಿದು. ಹಾಡಲು ಸೊಗಸಾಗಿದೆ. ನಿರಲಾಂಕಾರದಿಂದ ಕೂಡಿದ್ದರು, ಕಾವ್ಯದ ಯಾವ ಸೊಗಸುಗಳು ಇಲ್ಲದಿದ್ದರು ಇದು ವಿಶ್ವಮಾನ್ಯವಾದ ತತ್ವಗಳನ್ನು ಹೇಳುತ್ತದೆ. ಸರಳವಾಗಿ ಧರ್ಮತತ್ವಗಳನ್ನು  ತಿಳಿಸುವ ಜಗದ್ವಂದ್ಯ ವಚನವಾಗಿದೆ. ಬಸವಣ್ಣನವರು   ವಿಶ್ವಮಾನ್ಯರನ್ನಾಗಿ ಮಾಡಿರುವ ವಚನವಿದು. ದರ್ಮವನ್ನು ಇಷ್ಟು ಸರಳವಾಗಿ, ದೆವರನ್ನು ಒಲಿಸಿಕೊಳ್ಳುವ ದಾರಿಯನ್ನು ಸುಲಭವಾಗಿ ತಿಳಿಸಿಕೊಟ್ಟವರಾರು ಇಲ್ಲ. ಯಾವ ವಿಧಿ, ಕರ್ಮಾಚರಣೆ, ಪೂಜೆ,ಮಂತ್ರ,ತಂತ್ರ,ಯಙÐ, ಹವನ, ಹೋಮ, ಯಾಗ, ಏನೊಂದೂ ಬೇಡ. ಇಲ್ಲಿರುವ ಸೂತ್ರಗಳನ್ನು ಪರಿಪಾಲಿಸಿದರೆ ಸಾಕು. ಪರಮಾತ್ಮ ಸುಲಭವಾಗಿ ದೊರೆಯುತ್ತಾನೆ.

      ಕಳ್ಳತನಮಾಡಬೇಡ. ಇನ್ನೊಂದು ಜೀವನ ಜೀವ ತೆಗೆಯಬೇಡ. ಸುಳ್ಳು ಹೇಳಬೇಡ. ಕೋಪಿಸಬೇಡ. ಇನ್ನೋಬ್ಬರಿಗೆ ಅಸಹ್ಯಪಟ್ಟುಕೋಳ್ಳಬೇಡ. ನಿನ್ನನ್ನು ಹೊಗಳಿಕೊಳ್ಳಬೇಡ.ಎನ್ನಬರನ್ನು ಎದುರಿಗೆ ನಿಂಧಿಸಿ, ತೆಗಳಬೇಡ. ಈ ಏಳು ಸೂತ್ರಗಳ್ಳ£ದಾರಿ. ಇಂತಹ ಸುಂದರ ವಚನ ಕೂಡ ಭಕ್ತಿಬಂಡಾರಿ ಕೇಶಿರಾಜರ ಕಂದ್ದಪದ್ಯಗಳ್ಳಿಂದ ಪ್ರಬಾವಿತವಾಗಿದೆ. ಹುಲಸು ತಿಂಬವನೆ ಹೊಲೆಯ, ಹೊಲತಿ ಶ್ದುದ್ದ ನೀರ ಮಿಂದಂತಾಯಿತು.

ಹಾವಡಿಗನು ಮೂಕೊರತಿಯು ಶಕುನ ಓಲ್ಲೆಂಬ ಚದುರ ನೂಡ ಎಂದು ಇನ್ನೊಬ್ಬರಿಗೆ ಅಸಹ್ಯಪಟ್ಟು ಮೂದಲಿಸಿ ಮಾತಡಹಡಿದು ಏಕೇ ಎಂದು ಕೆಳ್ಳಿದ್ದರೆ ಇವು ಅವಹೇಳನ ಮಡಲು ವಚನಗಳಲ್ಲ. ಅವು ಆಕಲದ ಸಂರ್ಭದಲ್ಲಿ ಬಳಕೆಯಲ್ಲಿದ್ದ ವಿಚಾರಗಳು ಆದರು ಬಳಸ್ಸಿದ್ದರೆ.

ಕಳಬೇಡ ಜೀವನದಲ್ಲಿ ಹುಟ್ಡಿದವರೆಲ್ಲ ಒಮ್ಮೆಯಾದರು ಕಳ್ಳತನ ಮಾಡಿಯೇಇರುತ್ತಾರೆ.ದೇಹ ಮತ್ತು ಅಙÐನ ನಮ್ಮನ್ನು ಕಳ್ಳತನ ಮಾಡಲು ಪ್ರೇರಣೆನೀಡುತ್ತದೆ. ಇದ್ದನ್ನು ನಾವು ತುಂಬ ಎಚ್ಚರಿಕೆಯಿಂದ ಗೆಲ್ಲಬೇಕು. ತಿಳಿದು ಕಳ್ಳತನ ಮಾಡುವ ವಂಚನೆಮಾಡುವುದು ತಪ್ಪುಯೆಂದು ಯಾರಿಗೂ

ಅನಿಸಿಂiಯೇಯಿಲ್ಲ. ಇದರಿಂದ ಅರ್ಥವೆವಸ್ಥೆಯ ಮೇಲೆ ಕೆಟ್ಟಪರಿನಾಮಗಳಾಗುತ್ತಿವೆ.

ಕೊಲಬೇಡ ಒಂದು ಜೀವದ ಪ್ರಾಣ ತೆಗೆಯಬೇಡ. ಯಾರಿಗು ಜೀವಕೊಡುವ ಶಕ್ತಿಇಲ್ಲ, ಪ್ರಾಣತೆಗೆಯುವ ಹಕ್ಕುಇಲ್ಲ. ಇದು ಎಲ್ಲಾ ಧರ್ಮಗಳು ಹೇಳುವ ವಿಚಾರ ಆದರು ಕೊಲೆ ಸುಲಿಗೆಗಳು ನಡದೇಇದೆ. ಇದ್ದನ್ನು ಅಙÐನಿ ಮನುಷ್ಯ ನದೆಸಿಕೊಂಡು ಬದ್ದಿದಾನೆ. ಜಗತ್ತಿನ ಎಲ್ಲಾ ಧರ್ಮಗಳು ಈ ವಿಚಾರನ್ನು ಅಹಿಂಸತತ್ವ ಪ್ರತಿಪಾದನೆಮಾದಿವೆ.

ಹುಸಿಯ ನುಡಿಯಲು ಬೇಡ. ಸುಳ್ಳಹೇಬೇಡ. ಇದನ್ನು ಮನೆಯಲ್ಲಿ ತಂದೆ ತಾಯಿಗಳು ಬಾಲ್ಯಕಾಲಕ್ಕೆ ಎಲ್ಲಮಕ್ಕಳಿಗೂ ಕಲಿಸಿಕೊಡುತಾರೆ. ಆದರೆ ಇದೆ ತಂದೆ ತಾಯಿಗಳೇ ಮಕ್ಕಳಿಂದ ಸುಳ್ಳು ಹೇಳಿಸುತ್ತಾರೆ. ತಂದೆ ತಾಯಿಗಳ್ಳನು ಕೇಳಿಕೊಂಡು ಯಾರಾದರು ಮನೆಗೆ ಬಂದಾಗ, ದೂರವಾಣಿ ಕರೆ ಬಂದಾಗ ಅಪ್ಪ ಮನೆಯಲ್ಲಿ ಇಲ್ಲ.ಅಮ್ಮಮನೆಯಲ್ಲಿ ಇಲ್ಲೆಂದು ಹೇಳು. ಹೇಳಿಸುತ್ತಾರೆ. ಆ ಕಾಲ್ಲಕೆ ಮಕ್ಕಳಿಗೆ ಗೊಂದಲ. ಅಪ್ಪ ಯಾಕಪ್ಪಸುಳ್ಳು ಹೇಳುಸ್ದೆಎಂದು ಕೇಳಿದ್ದರೆ ತಲೆಹರಟೆ ಸುಮ್ಮನೆ ಕೂಡಉ ಎಂದು ಅಮ್ಮಗದರುತ್ತಾಳೆ. ಇಲ್ಲಿಂದ ಮಕ್ಕಳಿಗೆ ಬದುಕಿನ ಬಗೆಗೆ ಗೊಂದಲ್ಲ ಆರಂಭಾವಗುತ್ತದೆ. ಗಾಂಧೀಜೀಯವರು ಸತ್ಯವನ್ನೆ ಹೇಳಬೇಕು ಎನ್ನುವ ಸತ್ಯಹರಿಶ್ಚದ್ರನ ಕತೆಯಿಂದ ತರಗತಿಯಲ್ಲಿ ತಾವು ತಪ್ಪು  ಕಣೋ ಸರಿ ಬರಿ ಎಂದು ಇನ್ನೂಬ್ಬರು ಹೇಳಿದರು ಅವರು ಕಾಪಿ ಮಾಡಿ ಹೆಚ್ಚು ಅಂಕಗಳಿ ಸಲು ಬಯಸಲ್ಲಿಲ. ಆದರೆ ಇಂದು ನಮ್ಮ ಜೀವನದ್ದಲ್ಲಿ ಸುಳ್ಳು ಹೇಳಬೇಡ, ಸತ್ಯವನ್ನೆ ಹಳ್ಳ ಹಿಡಿ ಎನ್ನುವುದು ಕೇವಲ ಪುಸ್ತಕದ ವಿಷಯಕ್ಕೆಸೀಮಿತವಾಗಿರುವುದು ನಮ್ಮ ಜೀವನ ಹಳ್ಳ ಹಿಡಿ ಎನ್ನುವುದು  ಸೂಚನೆಯಾಗಿದೆ.

ನಮ್ಮೆಲ್ಲರಲ್ಲಿ ಆಶೇ,ಸ್ವಾರ್ಥ, ಲೋಭಗಳು ಆಪಾರವಾಗಿ ತುಂಬಿವೆ. ಇವು ನಮ್ಮನ್ನು ಕೋಪಗೋಳ್ಳುವಂತೆ ಮಾಡುತ್ತವೆ. ಈ ಸಪ್ತ ಸೂತ್ರಗಳನ್ನು ಪಾಲನೆ ಮಾಡಬೇಕಾದರೆ ಮನುಷ್ಯ ತನ್ನ  ಅಂತರಿಂದ್ರಿಯ, ಬಹಿರಿಂದ್ರಿಯಗಳ ಮೇಲೆ ಹತೋಟಿ ಸಾದಿಸುವುದು ಬಹಳ ಮುಖ್ಯವಾಗಿದೆ. ಇದ್ದಕ್ಕೆ ಬಹಳ ಸಾದನೆ ಬೇಕು. ಸುಲಭದಲ್ಲಿ ಇದು ಸಾದ್ಯಾವಗುವಂಥದಲ್ಲ. ಅನ್ಯರಿಗೆ ಅಸಹ್ಯ ಪಡಬೇಡ. ಇದಂತೂ ನಮ್ಮೆಲ್ಲರನ್ನು ಬಹಳ ಪರಿಕ್ಷೆಗೆ ಒಡ್ಡುತ್ತದೆ. ಆಸ್ತಿಕನಿಗೆ ನಾಸ್ತಿಕನಲ್ಲಿ ನಾಸ್ತಿಕನಾಗಿ ನಿರೋಗಿಗೆ ರೋಗಿಯಲ್ಲಿ, ಒಂದು ಧರ್ಮದವನಿಗೆ ಇನ್ನೊಂದು ಧರ್ಮದಲ್ಲಿ ಜಿಗುಪ್ಸೆ ಅಸಹ್ಯ,

ಮೂದಲೆ, ತಾತ್ಸಾರ,ಅಸಹ್ಯ ಭಾವನೆಗಳು ತುಂಬಿ ತುಳುಕಾಡಿವೆ. ಇದು ಹೋಗಿ ಮನುಷ್ಯಮನುಷ್ಯರ ನಡುವೆ ಸಹನೆ ಸೈರಣೆ, ಪ್ರೀತಿ,ಸಾಮರಸ್ಯ

ಬೇಕು ಎಂದು ಹೇಳುತ್ತದೆ ಈ ವಚನ.

               ತನ್ನ ಬಣ್ಣಿಸಬೇಡ. ತನ್ನನ್ನು ಹೊಗಳಿಕೊಳ್ಳಬೇಡ.ಹೊಗಳಿಕೊಳ್ಳದವರು ಲೋಕದಲ್ಲಿ ಯಾರಿದ್ದಾರೆ. ಹೊಗಳಿಕೆ ಎಲ್ಲರಿಗೂ ಪ್ರೀತಿ. ತೆಗಳಿಕೆ ನಿಜವಾಗಿದ್ದರೂ ಅದನ್ನು ತಿದ್ದಿಕೊಳ್ಳುವುದು ಯಾರಿಗು ಬೇಡ. ಹಾಗೆ ತೆಗಳಿದವನನ್ನು ನಾವೂ ತೆಗಳಿ ದೂರ ಇಡುತ್ತೇವೆ. ಈ ಆತ್ಮಪ್ರಶಂಸೆ ಕೂಡದು. ಮನುಷ್ಯನೆ ನೀನೇನು ದೊಡ್ಡವನಲ್ಲ. ಅದು ನಿನ್ನ ಸಾಧನೆಯೂ ಅಲ್ಲ. ಅದು ಇತರರ ಸಹಕಾರದಿಂದ ಇನ್ನೊಂದು ಅತೀತ ಶಕ್ತಿಯ ಪ್ರೇರಣೆಯಿಂದ ಆದುದು. ನಿನ್ನ ಹೆಚ್ಚುಗಾರಿಕೆಯೇನು ಬಂತು. ಈ ಸೃಷ್ಟಿಯಲ್ಲಿ ಒಂದು ಇರುವೆಯೂ ನಿನ್ನ ಮಾತು ಕೇಳುವುದಿಲ್ಲ.ಇದು ನಿನ್ನ ಮಿತಿ.ತಿಳಿದುಕೊಂಡು ತೆಪ್ಪಗಿರು.

                ಇದಿರ ಹಳಿಯಲು ಬೇಡ.ಇನ್ನೊಬ್ಬರನ್ನು ನಿಂದಿಸಬೇಡ. ತೆಗಳಬೇಡ. ದೂಷಿಸಬೇಡ. ಇದರಿಂದ ನಮ್ಮ ಅಲ್ಪತನದ ಪರಿಚಯವಾಗುತ್ತದೆಯೇ ವಿನಾ ಮತ್ತೇನು ಆಗದು. ಇನ್ನೊಬ್ಬರನ್ನು ಮನ ನೋಯಿಸುವುದಾಗುತ್ತದೆ.ಇದರಿಂದ ಮೈಮನಸ್ಯೆಗಳು ಬೆಳೆದು ವಿಪತ್ತಿಗೆ ಆಹ್ವಾನ ನೀಡಿದಂತಾಗುತ್ತದೆ.ನಾವು ಯಾವಾಗಲು ಹೊಗಳಬೇಕು. ಪ್ರಶಂಸಿಸಬೇಕು.ಅವರ ಒಳ್ಳೆಯ ಗುಣಗಳ ಬಗೆಗೆ ನಾಲ್ಕು ಒಳ್ಳೆಯ ಮಾತತನಾಡಬೇಕು. ನಾವು ಯಾವಾಗಲು ಇನ್ನೊಬ್ಬರಲ್ಲಿ ಒಳ್ಳೆಯದನ್ನು ಗುರುತಿಸಬೇಕು. ಗೌರವಿಸಬೇಕು. ಇದರಿಂದ ನಮ್ಮ ಅಂತರಂಗಗಳು ಶುದ್ದಿಯಾಗುತ್ತವೆ.

                ಸಂಗಮದೇವರನ್ನು ಒಲಿಸಿಕೊಳ್ಳುವ ದಾರಿ ಯಾವುದು ಎಂದರೆ ಈ ಸಪ್ತಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಆಗಿದೆ. ಸಂಗಮದೇವರು ಸಕಲ ಜೀವಜಾಲದಲ್ಲಿ ಆತ್ಮಸ್ವರೂಪಿಯಾಗಿದ್ದಾನೆ. ಸಕಲ ಮಾನವರಲ್ಲಿ ಸಾಮರಸ್ಯದಿಂದ ಬದುಕುವ ದಾರಿಯೇ ಪರಮಾತ್ಮನನ್ನು ಒಲಿಸುವ ದಾರಿ. ಇದರಿಂದ ಸುಂದರ ಸಮಾಜದ ನಿರ್ಮಾಣವಾಗುತ್ತದೆ. ನಮ್ಮ ಒಳ್ಳೆಯ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಈ ವಚನ ವ್ಯಕ್ತಿತ್ವ ನಿರ್ಮಾಣದ ಪರಿಪೂರ್ಣ ವಚನ ಎಂದು ಹೇಳಬಹುದು. ಈಗ ವ್ಯಕ್ತಿತ್ವ ವಿಕಾಸದ ವಿಚಾರ ಬಹಳ ಪ್ರಸ್ತಾಪವಾಗತೊಡಗಿದೆ. ಇಂತಹ ವ್ಯಕ್ತಿತ್ವದ ವಿಕಾಸದ,ಪರಿಪೂರ್ಣ ದಾರಿಯನ್ನು ಈ ವಚನ ತುಂಬಾ ಸುಂದರವಾಗಿ ತಿಳಿಸಿಕೊಡುತ್ತದೆ. ಇದು ಕೇವಲ ಅನುಭಾವಿ ಜೀವಿಗಳಿಗೆ ಮಾತ್ರವಲ್ಲ ಇಂದಿನ ತರುಣ ಜನಾಂಗಕ್ಕೆ ಒಳ್ಳೆಯ ಮಾರ್ಗದರ್ಶನ ಸೂತ್ರಗಳನ್ನು ತಿಳಿಸಿಕೊಡುತ್ತದೆ. ನಮ್ಮ ಚಾರಿತ್ರ್ಯ ಶುದ್ದ ಇರಿಸಿಕೊಳ್ಳುವ ಮತ್ತು ನಿರ್ಮಲತ್ವ ಸಾದಿಸಿಕೊಂಡು ಜೀವನವನ್ನು ಸುಖ, ಸಮೃದ್ದಿ ಮಾಡಿಕೊಳ್ಳುವ ದಾರಿಯನ್ನು ಈ ವಚನ ತುಂಬ ಸುಂದರವಾಗಿ ತಿಳಿಸಿದೆ. ಈ ವಚನ ಪ್ರತಿಪಾದಿಸುವ ಏಳು ಸಂಗತಿಗಳು ವಿಶ್ವಮಾನ್ಯವಾದ ಸಪ್ತಸೂತ್ರಗಳು. ಇಡಿ ವಿಶ್ವದ ಜನಸಮುದಾಯಕ್ಕೆ ಶ್ರೇಯಸ್ಸಿನ ದಾರಿಯನ್ನು ಈ ವಚನ ತುಂಬ ಸುಂದರವಾಗಿ ತಿಳಿಸಿದೆ.

                                  ದೇವಲೋಕ ಮತ್ರ್ಯಲೋಕ

                                  ಎಂಬುದು ಬೇರಿಲ್ಲ ಕಾಣಿಭೋ.

                                  ಸತ್ಯವ ನುಡಿವುದೇ ದೇವಲೋಕ.

                                  ಮಿತ್ಯವ ನುಡಿವುದೇ ಮತ್ರ್ಯಲೋಕ.

                                  ಆಚಾರವೇ ಸ್ವರ್ಗ. ಅನಾಚಾರವೇ ನರಕ.

                                  ಕೂಡಲಸಂಗಮದೇವಾ ನೀವೇ ಪ್ರಮಾಣು.

    ದೇವರು ವಾಸಮಾಡುವ ಲೋಕ, ಮನುಷ್ಯರು ವಾಸ ಮಾಡುವ ಲೋಕ ಎಂಬುದು ಬೇರೆ ಎಲ್ಲಿಯೂ ಇಲ್ಲ. ಎಲ್ಲಿ ನಿಜ, ಸತ್ಯ ನುಡಿಯಲಾಗುಯವುದೊ ಅದೇ ದೇವ ಲೋಕ. ಸುಳ್ಳು ಹೇಳುವುದೇ ನರಕ. ಸುಳ್ಳಿನಿಂದ ಎಲ್ಲರಿಗೂ ನೋವಿದೆ. ಸಮಾಜದ ಹಿತಾಹಿತಗಳನ್ನು ನಿರ್ಧರಿಸುವುದೇ ಸತ್ಯ,ಮಿತ್ಯಗಳು. ಆದುದರಿಂದ ಸತ್ಯಕ್ಕೆ ಮಹತ್ವವಿದೆ. ಸನ್ನಡತೆಯು ವ್ಯಕ್ತಿಗೆ ಸಂತೋಷ ಉಂಟುಮಾಡುವುದು. ಇದೇ ಸ್ವರ್ಗ. ದುರ್ನಡತೆಯು ವ್ಯಕ್ತಿಗೆ ಸಮಾಜಕ್ಕೆ ಅಹಿತ,ಕೆಡುಕು,ನೋವು ಉಂಟು ಮಾಡುವುದು ಇದೇ ನರಕ. ಜ್ಞಾನದ ಮನಸ್ಸಿನ ಸುಖವೇ ಸ್ವರ್ಗ. ಅಜ್ಞಾನದ ಮನಸ್ಸಿನ ದುಖವೇ ನರಕ. ಇದಕ್ಕೆ ಪರಮಾತ್ಮ ಸಂಗಮದೇವರೇ ಸಾಕ್ಷಿ.

     ತುಂಬ ಸರಳವಾದ ಮಹತ್ವದ ವಚನ. ಈ ದೇಶದಲ್ಲಿ ಇವತ್ತಿಗು ಒಂದು ವರ್ಗದ ಜನರು ಜನರಲ್ಲಿ ಅಜ್ಞಾನವನ್ನು, ಮೂಡನಂಬಿಕೆಗಳನ್ನು ಬೆಳೆಸುತ್ತ ಜಾತಿ ದ್ವೇಸ, ಉಚ್ಚ, ನೀಚ ಕುಲಗಳನ್ನು ಸೃಷ್ಟಸುತ್ತ ಜನರನ್ನು ವಿಭಾಗಿಸಿ ತನ್ನ ಸ್ವಾರ್ಥಕ್ಕೆ ಜನರನ್ನು ಅವಿದ್ಯೆಯಲ್ಲಿಟ್ಟು ಶೋಷಿಸುತ್ತಿದ್ದಾರೆ. ಇಂತಹ ಹಲವು ಸಮಸ್ಯೆಗಳನ್ನು ಧರ್ಮ, ಜಾತಿ ವಿದ್ಯೆ, ಅದಿಕಾರದ ನೆಲೆಯಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಂಡಿದ್ದಾರೆ. ನಿನ್ನ ಈ ಸ್ಥಿತಿಗೆ ನೀನು ಮಾಡಿದ ಕರ್ಮವೇ ಕಾರಣ ಎಂದು ಸಬೂಬು ಹೇಳುತ್ತ ಅವಿದ್ಯಾವಂತರ ಮೇಲೆ ಇತರ ಸಮಾಜದ ಮೇಲೆ ¸ವಾರಿ ಮಾಡಿದ್ದಾರೆ. ಇಂತಹ ವ್ಯವಸ್ತೆಗಳ ಸೋಗಲಾಡಿತನವನ್ನು ಈ ವಚನ ಜಾಲಾಡುತ್ತದೆ. ಇಂತಹ ಪಿತೂರಿಗಳ ವಿರುದ್ದವೇ ಬೌಧ್ಧ ಧರ್ಮ,ಜೈನಧರ್ಮ, ಲಿಂಗಾಯತ ಧರ್ಮಗಳು ಹುಟ್ಟಿಕೊಂಡವು. ಮನುಷ್ಯರ ನಡುವೆ ಪ್ರೀತಿ ಸಹೋದರತ್ವ ಮಾನವೀಯತೆ ದಯೆ ಇವುಗಳನ್ನು ಪಸರಿಸಿ ಜೀವನವನ್ನು ಎಲ್ಲರೂ ಸುಂದರ ಆನಂದ ಬದುಕಬೇಕು ಎನ್ನುವ ಮಾನವ ಪ್ರೀತಿಯ ತಳಹದಿಯ ಮೇಲೆ ಈ ವಚನವನ್ನು ಬಸವಣ್ಣನವರು ಹೇಳಿದ್ದಾರೆ.

                                  ದಯವಿಲ್ಲದ ಧರ್ಮವದೇವುದಯ್ಯಾ?

                                  ದಯವೇ ಬೇಕು ಸಕಲ ಪ್ರಾಣಿಉಗಳೆಲ್ಲರಲ್ಲಿಯೂ.

                                  ದಯವೇ ಧರ್ಮದ ಮೂಲವಯ್ಯಾ.

                                  ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.

ದಯವಿಲ್ಲದಿರುವ ಧರ್ಮ ಯಾವುದು? ಸಕಲ ಪ್ರಾಣಿಗಳ ಬಗೆಗೂ ದಯೆ, ಕರುಣೆ, ಪ್ರೀತಿ ಬೇಕು. ದಯವೇ ಧರ್ಮದ ತಳಹದಿ. ಕೂಡಲಸಂಗಮದೇವರು ದಯವಿಲ್ಲದಿರುವ ಧರ್ಮವನ್ನು ಒಪ್ಪುವುದಿಲ್ಲ. ಮಾನ್ಯ ಮಾಡುವುದಿಲ್ಲ.

ಉಪಸಂಹಾರ

ದಯೆಯಿಲ್ಲದ ಧರ್ಮವದು ಏವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯ. ದಯೆಯಿಲ್ಲದಿರುವ ಧರ್ಮವು ಯಾವುದು? ಎಲ್ಲ ಪ್ರಾಣಿಗಳಲ್ಲಿಯೂ ದಯರಯಿರಬೇಕು. ಮನುಷ್ಯ ರಾದಿಯಾಗಿಸಕಲ ಜೀವಜಾಲದಲ್ಲಿಯೂ ದಯೆ ಬೇಕು. ಧಮಾದ ತಳಹದಿಯೇ ದಯೆ. ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ. ಕೂಡಲಸಂಗಮದೇವರು ಹಾಗಲ್ಲದೆ ಒಪ್ಪುವುದಿಲ್ಲ. ಕೂಡಲಸಂಗಮದೇವರು ದಯೆಯಿಲ್ಲದ ಧರ್ಮವನ್ನು ಮಾನ್ಯ ಮಾಡುವುದಿಲ್ಲ.

                                  ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯ?

                                  ತನಗಾದ ಆಗೇನು?ಪರರಿಗಾದ ಚೇಗೇನು?

                                  ತನುವಿನ ಕೋಪ ತನ್ನ ಹಿರಿಯತನದ ಕೇಡು.

                                  ಮನದ ಕೋಪ ತನ್ನ ಅರಿವಿನ ಕೇಡು.

                                  ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ

                                  ನೆರೆಮನೆಯ ಸುಡದು ಕೂಡಲಸಂಗಮದೇವ. 

  ಪರಾಮರ್ಶನ ಗ್ರಂಥಗಳು

  1. ಬಸವಣ್ಣನವಚನಗಳು ಎಲ್ ಬಸವರಾಜು
  2. ಬಸವಣ್ಣನವರ ಚರಿತ್ರೆ ಮತ್ತು ಸಂಸ್ಕøತಿಯ ಶೋಧಗಳು


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal