ಗ್ರಾಮ ಪಂಚಾಯಿತಿಯ ಕಾರ್ಯಚರಣೆ ದುಗ್ಗಾವತಿ ಗ್ರಾಮ ಚಾಯಿತಿ ಒಂದು ಅಧ್ಯಯನ
ಡಾ|| ಹೆಚ್.ಬಸವರಾಜ,
ಸಹಾಯಕ ಪ್ರಾಧ್ಯಪಕರು ರಾಜ್ಯಶಾಸ್ತ್ರ ವಿಭಾಗ,
ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ.
basavarajah@gmail.com 8217415687
ಪೀಠಿಕೆ
ಅಧಿಕಾರ ವಿಕೇಂದ್ರಿಕರಣ ಪದ್ಧತಿಯಲ್ಲಿಗ್ರಾಮ ಪಂಚಾಯಿತಿ ವ್ಯವಸ್ಥೆಯು ಭಾರತಕ್ಕೆ ಹೊಸದಾಗಿರದೇ ಪ್ರಾಚೀನ ಕಾಲದಿಂದಲೂಕಂಡು ಬಂದಿರುವಒಂದು ಪ್ರಜಾಪ್ರಭುತ್ವದ ವ್ಯವಸ್ಥೆಯಾಗಿದೆ. ವೇದಗಳ ಕಾಲದಿಂದಲೂಗ್ರಾಮ ಪಂಚಾಯಿತಿಗಳು ಇರುವುದನ್ನುಗುರುತಿಸಲಾಗಿದೆ. ಪಂಚಾಯಿತಿಗಳು ಪ್ರಾಚೀನ ಭಾರತದ ಇತಿಹಾಸಖಾಯಂ ಆಧಾರಗಳಾಗಿದ್ದವೆಂದು ಶ್ರೀ ಕೆ.ಪಣಿಕರ್ ತಿಳಿಸಿದ್ದರು. ‘ಶುಕ್ರನೀತಿ’, ಮನುಶ್ಮøತಿ ಸಾರ’ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿಗ್ರಾಮ ಪಂಚಾಯಿತಿಗಳ ರಚನೆ ಮತ್ತು ಕಾರ್ಯಗಳ ಬಗ್ಗೆ ವಿವರವಾದ ವಿವರಣೆಗಳಿವೆ. ಗ್ರೀಕ್‍ರಾಯಭಾರಿ ಮೆಗಸ್ತನೀಸ ಭಾರತದಗ್ರಾಮ ಪಂಚಾಯಿತಿಗಳ ಬಗ್ಗೆ ತಮ್ಮಗ್ರಂಥದಲ್ಲಿ ವಿಶ್ಲೇಷಿಸಿದ್ದಾರೆ.
ಭಾರತದಲ್ಲಿ ಜಾರಿಯಲ್ಲಿರುವ ಸ್ಥಳೀಯ ಸರ್ಕಾರಗಳು ಬ್ರಿಟಿಷ್ ಮಾದರಿ ಸರ್ಕಾರಗಳಾಗಿದ್ದರೂ ಸ್ಥಳೀಯ ಸರ್ಕಾರಗಳು ಭಾರತಕ್ಕೆ ಯಾವುದೇರಾಷ್ಟ್ರದಿಂದ ಬಳುವಳಿಯಾಗಿ ಬಂದಂತವುಗಳಲ್ಲ. ಪ್ರಾಚೀನ ಕಾಲದಿಂದಲೂ ಗ್ರಾಮಗಳು ಆಡಳಿತದ ಮೂಲ ಘಟಕಗಳಾಗಿ ಕಾರ್ಯ ನಿರ್ವಹಿಸುತ್ತದ್ದವು. ವೇದಗಳ ಕಾಲದಲ್ಲಿ ಸಭಾ ಮತ್ತು ಸಮಿತಿಗಳು ಗ್ರಾಮಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದವು. 8 ಮತ್ತು 9ನೇ ಶತಮಾನದಲ್ಲಿ ಪಾಂಡ್ಯರು ಮತ್ತು ಪಲ್ಲವರ ಆಡಳಿತದಲ್ಲಿ ಸ್ಥಳೀಯ ಸರ್ಕಾರಗಳು ಕಾರ್ಯನಿರ್ವಹಿಸುತ್ತಿದ್ದವು.
ಮೌರ್ಯರಕಾಲದಲ್ಲಿ ಈ ಕಾರ್ಯಗಳನ್ನು ಗಣಗಳು ಕಾರ್ಯ ನಿರ್ವಹಿಸುತ್ತಿದ್ದವು. ಮಹಾಭಾರತದಲ್ಲಿ ಇವುಗಳನ್ನು ಗ್ರಾಮ ಸಭೆಗಳೆಂದು ಕರೆಯಲಾಗುತ್ತಿತ್ತು. ಇವು ಪುಟ್ಟ ಗಣರಾಜ್ಯಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು. ಇಂತಹ ಪ್ರಾಚೀನಕಾಲದಲ್ಲಿ ಸ್ಥಳೀಯ ಸರ್ಕಾರಗಳು ತಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದವು.
ಪ್ರಜಾಪ್ರಭುತ್ವರಾಷ್ಟ್ರದಲ್ಲಿಆಡಳಿತ ಮತ್ತು ಹಣಕಾಸಿನ ಕಾರ್ಯಗಳ ವಿಕೇಂದ್ರಿಕರಣಬಹಳ ಅಗತ್ಯವಾಗಿದೆ. ಏಕೆಂದರೆ ಅಧಿಕಾರ ವಾಸ್ತವಿಕವಾಗಿ ಜನರಿಂದಲೇಜನರಿಗಾಗಿ ಬಳಸುವ ಸಾಧನವಾಗಬೇಕಾದರೆ ಅಧಿಕಾರ ಮತ್ತು ಸಂಪನ್ಮೂಲಗಳ ವಿಕೇಂದ್ರಿಕರಣ ಆಗಬೇಕು. ಆಗಲೇ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಆಡಳಿತದಲ್ಲಿ ಪಾಲ್ಗೋಳ್ಳುವುದಕ್ಕೆ ಸಾಧ್ಯವಾಗುತ್ತದೆ.ಅಲ್ಲದೇ ಸ್ಥಳೀಯ ಅವಶ್ಯಕತೆಗಳನ್ನು ಯಾವುದೇರಾಷ್ಟ್ರ ಅಥವಾ ರಾಜ್ಯಮಟ್ಟದ ಅಧಿಕಾರಾಂಗ ಗಮನಿಸಿ ಪರಿಹರಿಸುವುದು ಬಹಳ ಕಷ್ಟವಾಗುತ್ತದೆ. ಏಕೆಂದರೆ ಸ್ಥಳೀಯ ಸಮಸ್ಯೆಗಳ ಪೂರ್ಣ ಪರಿಚಯ ಅಷ್ಟಾಗಿ ಈ ಸರ್ಕಾರಗಳಿಗೆ ಇರುವುದಿಲ್ಲ. ಒಂದು ಗ್ರಾಮದ ಜನರ ಬೇಡಿಕೆಅಗತ್ಯಗಳನ್ನು ಪರಿಹರಿಸುವ ಸಾಧನಗಳು ಆಯಾ ಸ್ಥಳದವರಿಗೆ ಚೆನ್ನಾಗಿಗೊತ್ತಿರುತ್ತದೆ. ಒಂದು ವ್ಯವಸ್ಥೆಯನ್ನು ನಿರ್ಮಿಸಿ ಆಡಳಿತ ವಿಕೇಂದ್ರಿಕರಣ ಮಾಡಿದಾಗಲೇಅಭಿವೃದ್ಧಿ ಸಾಧ್ಯ.
ಗ್ರಾಮ ಪಂಚಾಯಿತಿಯಕಾರ್ಯಗಳು :
ಅಧಿಕಾರ ವಿಕೇಂದ್ರಿಕರಣದಿಂದಾಗಿಗ್ರಾಮ ಪಂಚಾಯಿತಿಗಳು ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖವಾದ ಸ್ಥಾನವನ್ನು ಹೊಂದಿದೆ.ಗ್ರಾಮೀಣಜನರಜೀವನಮಟ್ಟ ಸುಧಾರಿಸಲು ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚಿನ ಪಾತ್ರವನ್ನು ನಿರ್ವಹಿಸುತ್ತಿವೆ. ಮುಖ್ಯವಾಗಿಗ್ರಾಮಕ್ಕೆ ಬೇಕಾದಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳ ನಿರ್ಮಾಣ, ಬೀದಿ ದೀಪಗಳ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಗ್ರಾಮೀಣ ಗುಡಿಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಗ್ರಾಮಗಳಲ್ಲಿ ಮೀನುಗಾರಿಕೆಅಭಿವೃದ್ಧಿಪಡಿಸುವುದು ಸಾರ್ವಜನಿಕ ಭೂಮಿಯಲ್ಲಿ ಮರಗಳನ್ನು ನೆಡುವುದು ಮತ್ತು ಸಂರಕ್ಷಿಸುವುದು, ಶೌಚಾಲಯ ನಿರ್ಮಿಸುವುದು, ಪಶುಸಂಗೋಪನೆ ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹಿಸುವುದು ಸಾರ್ವಜನಿಕ ಗ್ರಂಥಾಲಯಗಳನ್ನು ಸ್ಥಾಪಿಸುವುದು ಮೊದಲಾದ ಕಾರ್ಯಗಳನ್ನು ಗ್ರಾಮಪಂಚಾಯಿತಿಗಳು ಕೈಗೊಳ್ಳುತ್ತವೆ.
ಸಮಸ್ಯೆ ಹೇಳಿಕೆ,
ಈ ಹಿಂದೆ ತಿಳಿಸಿದ ಕಾರ್ಯಗಳನ್ನು ಗ್ರಾಮ ಪಂಚಾಯಿತಿಗಳು ಎಷ್ಟರ ಮಟ್ಟಿಗೆ ಕಾರ್ಯಗತಗೊಳಿಸುತ್ತವೆ ಎಂಬುದನ್ನು ತಿಳಿಯಲು ಮತ್ತುತೆರೆಮರೆರಾಜಕೀಯಯಾವರೀತಿಯಾಗಿ ಸ್ಥಳೀಯ ಸರ್ಕಾರಗಳಲ್ಲಿ ತನ್ನ ಪಾತ್ರ ನಿರ್ವಹಿಸುತ್ತದೆಎಂಬುದನ್ನು ತಿಳಿಯಲು ದುಗ್ಗಾವತಿಗ್ರಾಮ ಪಂಚಾಯಿತಿಯನ್ನು ಸಂಶೋಧನೆಗೆಆಯ್ಕೆ ಮಾಡಿಕೊಳ್ಳಲು ಕಾರಣ ಈ ಗ್ರಾಮ ಪಂಚಾಯಿತಿ ಹರಪ್ಪನಹಳ್ಳಿ ತಾಲ್ಲೂಕಿನಅತೀ ಹೆಚ್ಚು ಸದಸ್ಯರನ್ನೊಳಗೊಂಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿದೆ. ಈ ತಾಲ್ಲೂಕು ಮಳೆಯನ್ನು ಆಧರಿಸಿ ಕೃಷಿ ಭೂಮಿಯನ್ನು ಒಳಗೊಂಡಿದೆ.ಮಹಿಳಾ ಅಧ್ಯಕ್ಷತೆಯನ್ನು ಹೊಂದಿರುತ್ತದೆ.ಈ ಗ್ರಾಮಪಂಚಾಯಿತಿ ಪರಿಶಿಷ್ಟ ವರ್ಗ ಮೀಸಲಾತಿಯಕ್ಷೇತ್ರವಾಗಿದೆ.
ಈ ತಾಲ್ಲೂಕು ಬಳ್ಳಾರಿ ಜಿಲ್ಲೆಯಲ್ಲಿದ್ದು 1997ರ ಆಗಸ್ಟ್ 15ರಂದು ಹರಿಹರ, ದಾವಣಗೆರೆ, ಜಗಳೂರು, ಹರಪನಹಳ್ಳಿ, ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳನ್ನು ಒಳಗೊಂಡು ನೂತನದಾವಣಗೆರೆಜಿಲ್ಲೆಯ ಅಸ್ಥಿತ್ವಕ್ಕೆ ಬಂದಿತು 2018ರಲ್ಲಿ 371ವಿಧಿ ಪ್ರಕಾರ ಹರಪನಹಳ್ಳಿ ತಾಲ್ಲೂಕು ಹೈದರಬಾದ್‍ಕರ್ನಾಟಕದ ವಿಶೇಷ ಸ್ಥಾನಮಾನಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ವಿಲೀನಗೊಳಿಸಲಾಯಿತು. ಹರಪನಹಳ್ಳಿ ತಾಲ್ಲೂಕು ದುಗ್ಗಾವತಿಗ್ರಾಮವು ಬಯಲುಸೀಮೆಯಾಗಿದ್ದು ಕಪ್ಪು ಮಣ್ಣಿನಿಂದ ಕೂಡಿದ ಒಣಭೂಮಿಯಾಗಿದೆ. ದುಗ್ಗಾವತಿಗ್ರಾಮ ಪಂಚಾಯಿತಿಯು ದುಗ್ಗಾವತಿ, ಶಾಂತಿನಗರ, ಕಂಡಿಕೆರೆ, ಒಟ್ಲಹಳ್ಳಿ ಹೀಗೆ ಆರು ಹಳ್ಳಿಗಳನ್ನೊಳಗೊಂಡ ಗ್ರಾಮ ಪಂಚಾಯಿತಿಯಾಗಿದೆ.
ಸಂಶೋಧನೆಯ ವಿಧಾನ :
ಪ್ರಸ್ತುತಅಧ್ಯಯನದಲ್ಲಿಗ್ರಾಮ ಪಂಚಾಯಿತಿ ಹಾಲಿ ಸದಸ್ಯರನ್ನು ಮಾಜಿ ಸದಸ್ಯರನ್ನಲ್ಲದೆ ಮಾಜಿಅಧ್ಯಕ್ಷಉಪಾಧ್ಯಕ್ಷರನ್ನು ಹಾಲಿ ಅಧ್ಯಕ್ಷಉಪಾಧ್ಯಕ್ಷರನ್ನು ಬೇಟಿ ಮಾಡಿ ಸಂದರ್ಶನದ ಮೂಲಕ ಮಾಹಿತಿ ಸಂಗ್ರಹಿಸಲಾಯಿತು.ಅಲ್ಲದೆಗ್ರಾಮದ ಪ್ರಮುಖಮುಖಂಡರುಗಳನ್ನು ಜಾತಿಆಧಾರದ ಮೇಲೆ ಆಯ್ಕೆ ಮಾಡಿಕೊಂಡು ಸಂದರ್ಶನಕೊಳಪಡಿಸಿ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಹಾಗೂ ಸಹಭಾಗಿಅವಲೋಕನದ ಮೂಲಕ ಗ್ರಾಮಸಭೆ ಕಾರ್ಯಚಟುವಟಿಕೆಗಳನ್ನು ಅಧ್ಯಯನ ಮಾಡಿ ಈ ವರದಿ ತಯಾರಿಸಲಾಗಿದೆ.
ದುಗ್ಗಾವತಿಗ್ರಾಮದ ಹಿನ್ನೆಲೆ :
ದುಗ್ಗಾವತಿ ಎಂಬ ಗ್ರಾಮಕ್ಕೆದುಗ್ಗಾವತಿ ಎಂಬ ಹೆಸರು ಬರಲುಕಾರಣ ಬಹಳ ವರ್ಷಗಳ ಹಿಂದೆ ಬಳ್ಳಾರಿಯಿಂದ ಒಬ್ಬ ವ್ಯಾಪಾರಿಯು ಕುದುರೆಯ ಮೇಲೆ ಚೀಲ ಹೇರಿಕೊಂಡು ಪ್ರಯಾಣಿಸುತ್ತಿದ್ದಾಗ ಒಂದು ಸ್ಥಳದಲ್ಲಿ ಚೀಲ ಜಾರಲಾಗಿಅದನ್ನು ಸರಿಪಡಿಸಲು ಒಂದು ದುಂಡನೆಯ ಕಲ್ಲನ್ನು ಎತ್ತಿಚೀಲದಲ್ಲಿ ಹಾಕಿಕೊಂಡನು. ವ್ಯಾಪಾರಿಯು ಪ್ರಯಾಣಿಸುತ್ತಾದುಗ್ಗಾವತಿ ಗ್ರಾಮಕ್ಕೆ ಬಂದಾಗ ಕುದುರೆಯು ಭಾರ ತಾಳಲಾರದೆ ಮಲಗಿಕೊಂಡಿತು. ಆಗ ಕಲ್ಲಿನರೂಪದಲ್ಲಿದ್ದ ದೇವತೆಯು ಪ್ರತ್ಯಕ್ಷವಾಗಿ ನನ್ನ ಹೆಸರುದುಗ್ಗಮ್ಮ ಇನ್ನು ಮುಂದೆ ನಾನು ಇಲ್ಲೇ ನೆಲಸುತ್ತೇನೆ. ಇಂದಿನಿಂದ ಈ ಊರಿಗೆ ದುಗ್ಗಾವತಿ ಎಂದು ಕರೆಯಿರಿ ಎಂದು ಹೇಳಿತು. ಅಂದಿನಿಂದ ಇಲ್ಲಿಯಾವರೆಗೆದುಗ್ಗತ್ತಿ, ದುಗ್ಗಾವತಿ, ದುಗ್ಗಾವತ್ತಿಎಂದು ಹೆಸರುರೂಡಿಗೆ ಬಂದಿರುತ್ತದೆ.
ದುಗ್ಗಾವತಿಗ್ರಾಮದ ವಿಶ್ಲೇಷಣೆ :
ದುಗ್ಗಾವತಿಗ್ರಾಮವು 1125 ಮನೆಗಳನ್ನೊಳಗೊಂಡು 4264 ಜನಸಂಖ್ಯೆಯನ್ನು ಹೊಂದಿದೆ.ಪುರುಷರು-2252, ಮಹಿಳೆಯರು-2012, ಪರಿಶಿಷ್ಟ ಜಾತಿ-745, ಪರಿಶಿಷ್ಟ ಪಂಗಡ-906 ಇದರಲ್ಲಿ 836ಜನರು ಬಡತನರೇಖೆಯ ಕೆಳಗೆ ವಾಸಿಸುವ ಜನರಿದ್ದಾರೆ.ದುಗ್ಗಾವತಿಗ್ರಾಮ ಪಂಚಾಯಿತಿಯು 1952ರಲ್ಲಿ ಜಾರಿಗೆ ಬಂದಿರುತ್ತದೆ.ದುಗ್ಗಾವತಿಗ್ರಾಮ ಪಂಚಾಯಿತಿಯಲ್ಲಿ 11 ವಾರ್ಡ್‍ಗಳಿವೆ. ಅವುಗಳಲ್ಲಿ 4 ವಾರ್ಡ್‍ಗಳಿಂದ ಮಹಿಳೆಯರು ಆಯ್ಕೆಯಾಗಿದ್ದಾರೆ.ಅವರಲ್ಲಿಎರಡುಜನ ಮಹಿಳೆಯರು ಪರಿಶಿಷ್ಟ ಜಾತಿಗೆ ಸೇರಿದ್ದರೆ, ಇನ್ನೇರಡು ಮಹಿಳಾ ಸದಸ್ಯರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುತ್ತಾರೆ.ಇತರೆ ಹಿಂದುಳಿದ ವರ್ಗದಿಂದಒಬ್ಬ ಮಹಿಳೆ ಆಯ್ಕೆಯಾಗಿದ್ದಾರೆ.ಇನ್ನುಳಿದ 05 ವಾರ್ಡ್‍ಗಳಿಂದ ಒಬ್ಬರು ಪರಿಶಿಷ್ಟ ಜಾತಿಗೆ ಸದಸ್ಯರಾಗಿದ್ದಾರೆ.2ಎ ವರ್ಗದಿಂದಇನ್ನೊಬ್ಬ ಸದಸ್ಯರುಆಯ್ಕೆಯಾಗಿದ್ದಾರೆ.ಇನ್ನುಳಿದ 03ಜನ ಸದಸ್ಯರು ಸಾಮಾನ್ಯ ವರ್ಗದವರಾಗಿದ್ದಾರೆ.ಈ ಎಲ್ಲಾ ಸದಸ್ಯರುಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.ಈ ಗ್ರಾಮ ಪಂಚಾಯಿತಿಯಚುನಾವಣೆಯಿಂದಾಗಿ ಹಲವಾರು ಪಂಗಡಗಳಾಗಲು ಮತ್ತು ಹಲವಾರು ದ್ವೇಷಗಳಿಗೆ ಕಾರಣವಾಗಿದೆ.ಆಯ್ಕೆಯಾಗಿರುವ ಸದಸ್ಯರಲ್ಲಿ 02ಜನ ಸದಸ್ಯರನ್ನು ಹೊರತುಪಡಿಸಿದರೆ ಉಳಿದ 06ಜನ ಸದಸ್ಯರುರಾಜಕೀಯ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ.ಆ ಹಿನ್ನೆಲೆಯಿಂದ ಬಂದಿರುವುದರಿಂದಲೇ ಸದಸ್ಯರಾಗಿರುತ್ತಾರೆಎಂದು ತಿಳಿದುಬರುತ್ತದೆ.
ಗ್ರಾಮ ಪಂಚಾಯಿತಿಯ ಕಾರ್ಯವೈಖರಿಯನ್ನು ಗಮನಿಸಿದಾಗ ಆಶ್ರಯ ನಿವೇಶನಗಳನ್ನು ನೀಡುವುದರಿಂದ ಹಿಡಿದು ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆಹೊದಗಿಸಿ ಕೊಡುವಲ್ಲಿ ಈ ಗ್ರಮ ಪಂಚಾಯಿತಿಯು ವಿಫಲವಾಗಿದೆ.ಆಶ್ರಯಯೋಜನೆಯಅಡಿಯಲ್ಲಿ ಕಟ್ಟಿಸಿಕೊಟ್ಟಿರುವ ಮನೆಗಳು ಬಹುತೇಕ ಶೀಥಿಲಗೊಂಡಿರುತ್ತವೆ.ಊರಿಗೆ ಶೌಚಾಲಯ ಮತ್ತು ಬಸ್ಸು ನಿಲ್ದಾಣದಕೊರತೆಇದೆ.ಈ ಸಮಸ್ಯೆಗಳ ಬಗ್ಗೆ ಅಲ್ಲಿಯಜನರನ್ನು ವಿಚಾರಿಸಲಾಗಿ ಅಧ್ಯಕ್ಷರು ಮಹಿಳೆಯಾಗಿರುವುದರಿಂದ ಅವರಿಗೆ ಯಾವುದೇ ರೀತಿಯ ರಾಜಕೀಯ ಅನುಭವ ಇರುವುದಿಲ್ಲ. ನಾನು ಬೇಟಿ ಮಾಡಿದ 50ಜನರಲ್ಲಿ 25ಜನ ಈ ರೀತಿ ಹೇಳುತ್ತಾರೆ. ಅಲ್ಲದೆ ಈ ಊರಿನಜನ ಬಳಸುವ ಕೊಳವೆ ಬಾವಿಯ ನೀರಿನಲ್ಲಿ ಪ್ಲೋರೈಡ್‍ನ ಅಂಶ ಹೆಚ್ಚಾಗಿರುವುದು ತಿಳಿದುಬರುತ್ತದೆ.
ಗ್ರಾಮ ಸಭೆಗಳ ಕಾರ್ಯಕಲಾಪಗಳ ವಿವರ :
ಗ್ರಾಮ ಸಭೆ ನಡೆಯುವ ದಿನಾಂಕದ ಮಾಹಿತಿದೊರೆತಿದ್ದರಿಂದ ನಾನು ಗ್ರಾಮಸಭೆ ನಡೆಯುವ ಸ್ಥಳಕ್ಕೆ ಬೇಟಿ ನೀಡಿದಾಗ ಅಂದಿನ ಗ್ರಾಮ ಸಭೆಯ ಮುಖ್ಯ ವಿಷಯ ಬಡತನರೇಖೆಯ ಕೆಳಗಿರುವವರನ್ನು ಗುರುತಿಸುವುದಾಗಿತ್ತು. ಗ್ರಾಮಸಭೆಗೆ ವಿಸ್ತಾರಣಾಧಿಕಾರಿಗಳನ್ನು ಹೊರತುಪಡಿಸಿ ಅಧಿಕಾರಿಗಳ್ಯಾರು ಹಾಜರಾಗಿರುವುದಿಲ್ಲ. ಅಲ್ಲದೆಜನರ ಹಾಜರಾತಿಯಕೊರತೆಯು ಸ್ಪಷ್ಟವಾಗಿಕಂಡು ಬರುತ್ತಿತ್ತು. ಯಾವುದೇ ಚರ್ಚೆಇಲ್ಲದೆ ಬಡತನರೇಖೆಯ ಕೆಳಗಿರುವ ಜನರ ಪಟ್ಟಿಗೆ ಸಭೆಯುಏಕಪಕ್ಷಿಯವಾಗಿಅನುಮತಿ ನೀಡಿತು. ಈ ಗ್ರಾಮಸಭೆಯಿಂದ ಈ ಕೆಳಗಿನ ಅಂಶಗಳನ್ನು ಕಂಡು ಕೊಳ್ಳಬಹುದಾಗಿದೆ.
1. ಅಧಿಕಾರಿಗಳ ಕೊರತೆ.
2. ಪ್ರತಿನಿಧಿಗಳೇ ಭಾಗವಹಿಸದಿರುವುದು.
3. ಗ್ರಾಮದಜನತೆ ಆಸಕ್ತಿ ತೊರದಿರುವುದು.
ದುಗ್ಗಾವತಿಗ್ರಾಮ ಪಂಚಾಯಿತಿಯತೆರಿಗೆಯ ವಿವರ :
ದುಗ್ಗಾವತಿಗ್ರಾಮ ಪಂಚಾಯಿತಿಯುತೆರಿಗೆಯ ಪದ್ದತಿಯು ಈ ರೀತಿಯಾಗಿದೆ. ಮನೆ ತೆರಿಗೆ, ಹಂಚಿನ ಮನೆ, ಶೀಟಿನ ಮನೆ, ಆರ್.ಸಿ.ಸಿ ಮನೆಗಳಿಗೆ 280 ರಿಂದ 350ರವರೆಗೆ ತೆರಿಗೆಯನ್ನು ವಿಧಿಸಿದರೆ, ಹೊಟೇಲ್‍ಗಳಿಗೆ 1500ರೂ ನಿಂದ 2500ರೂಗಳ ವರೆಗೆತೆರಿಗೆ ನಿಗಧಿಗೊಳಿಸಿದರೆ, ನೀರಿನಕಂದಾಯವನ್ನು 50ರೂಗಳನ್ನು ಮತ್ತು ಅಂಗಡಿಗಳಿಗೆ 500ರೂ ನಿಂದ 2000ರೂಗಳ ವರೆಗೆತೆರಿಗೆಯನ್ನು ವಾರ್ಷಿಕವಾಗಿ ವಸೂಲಿ ಮಾಡಲಾಗುತ್ತದೆ. ದುಗ್ಗಾವತಿ ಗ್ರಾಮಪಂಚಾಯಿತಿಗೆ ಸರ್ಕಾರದಅನುದಾನವನ್ನು ಹೊರತುಪಡಿಸಿ ವರ್ಷಕ್ಕೆ ಸುಮಾರು4ಲಕ್ಷ ರೂಪಾಯಿಗಳು ತೆರಿಗೆ ಸಂಗ್ರಹವಾಗಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಪಂಚಾಯಿತಿಯಲ್ಲಿ ಸುಮಾರು 12ಲಕ್ಷ ತೆರಿಗೆ ಬಾಕಿಯು ವಸೂಲಿಯಾಗಬೇಕಾಗಿರುವುದು ಕಂಡು ಬರುತ್ತದೆ.
ಈ ಮೇಲಿನ ಅಂಶಗಳನ್ನು ಗಮನಿಸಿದಾಗ ಗ್ರಾಮ ಪಂಚಾಯಿತಿಯುತೆರಿಗೆ ಸಂಗ್ರಹಿಸುವಲ್ಲಿ ವಿಫಲವಾಗಿದೆ.
ತೆರೆಮರೆಯರಾಜಕೀಯ :
ಈ ಗ್ರಾಮ ಪಂಚಾಯಿತಿಯು ಸಹ ತೆರೆಮರೆಯರಾಜಕೀಯದಿಂದ ಹೊರತಾಗಿಲ್ಲ. ಎಂಬುದು ಅವಲೋಕನದಿಂದ ತಿಳಿದುಬರುತ್ತದೆ. ಗ್ರಾಮ ಪಂಚಾಯಿತಿಅಧ್ಯಕ್ಷರಾದ ನವಲಿ ನಾಗಮ್ಮ ಯಾವುದೇ ರೀತಿಯಾದ ರಾಜಕೀಯ ಅನುಭವಾಗಲಿ ಶಿಕ್ಷಣವಾಗಲಿ, ಇರುವುದಿಲ್ಲ. ಅವರ ಸ್ಥಾನದಲ್ಲಿಅವರ ಮನೆಯವರು ಅಧಿಕಾರಚಲಾಯಿಸುತ್ತಾರೆ. ಇನ್ನೂ ಕೆಲವು ವ್ಯಕ್ತಿಗಳು ತಮ್ಮ ಹೆಂಡತಿಯನ್ನುಚುನಾವಣೆಯಲ್ಲಿ ಗೆಲ್ಲಿಸಿ ಅವರ ಹೆಸರಿನಲ್ಲಿಅಧಿಕಾರ ನಡೆಸುವುದು ಸ್ಪಷ್ಟವಾಗಿಕಂಡುಬರುತ್ತದೆ.ಮಹಿಳಾ ಸದಸ್ಯರುಗಳಗಂಡಂದಿರು ಮನೆ ಮತ್ತು ರಸ್ತೆಗಳ ಗುತ್ತಿಗೆಯನ್ನು ಪಡೆದು ಕೆಲಸ ಮಾಡಿಸುವುದು ಈ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.ಉದಾ:- ಈ ತೆರೆಮರೆಯರಾಜಕೀಯಎಷ್ಟರ ಮಟ್ಟಿಗೆ ನಡೆಯುತ್ತದೆಎಂದರೆ ಮಂಜುನಾಥ ಎಂಬ ವ್ಯಕ್ತಿಗೆರೋಜ್ಗಾರ್‍ಯೋಜನೆಯ ಶೇ.20ರ ಹಣದಲ್ಲಿಒಂದು ಮನೆಯನ್ನು ಮಂಜೂರು ಮಾಡಲಾಯಿತು. ಫಲಾನುಭವಿಯುತನ್ನ ಮನೆಯನ್ನುತಾನೇ ಕಟ್ಟಿಕೊಳ್ಳಲು ಮಂಜೂರು ಮಾಡಲಾಯಿತು.ಫಲಾನುಭವಿಯುತನ್ನ ಮನೆಯನ್ನುತಾನೇ ಕಟ್ಟಿಕೊಳ್ಳಲು ಮುಂದಾದಾಗಒಬ್ಬ ಮಹಿಳಾ ಸದಸ್ಯರ ಪತಿಯುತಾನೇ ಕಟ್ಟಿಸಿ ಕೊಡುವುದಾಗಿ ಹಟ ಮಾಡಿಅದರಗುತ್ತಿಗೆಯನ್ನು ಪಡೆಯುವಲ್ಲಿ ಯಶಸ್ವಿಯಾದನು.ಹೀಗೆ ತೆರೆಮರೆಯರಾಜಕೀಯಗ್ರಾಮದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಊರಿನಜಾತ್ರೆ :
ಈ ಊರಿನ ಎಲ್ಲಜಾತಿಯ ಜನಾಂಗದವರು ಒಟ್ಟಾಗಿ ಸೇರಿ ಆಚರಿಸುವ ಜಾತ್ರೆಯೆಂದರೆ ದುಗ್ಗಮ್ಮನಜಾತ್ರೆ. ಈ ಜಾತ್ರೆಯು 3 ವರ್ಷಗಳಿಗೊಮ್ಮ ನಡೆಯುತ್ತದೆ. ಈ ಜಾತ್ರೆಯಲ್ಲಿಗೌಡರು, ಬಣಕಾರರು, ಕಂದಾಚಾರರು, ಜ್ಯೋತಿ, ಹಡಪದವರು, ಶೆಟ್ಟಿರು, ಕೊರಗರು, 9ಜನ ಮಾದಿಗರು, ಕೋಲುಕಾರರು, ಶಾನುಬೋಗರು, ಕುಂಬಾರರು, ಸ್ವಾಮಿಗಳು ಹೀಗೆ ಪ್ರತಿಯೊಂದು ಜಾತಿಯ ಮುಖಂಡರುದೇವಿ ಹಬ್ಬದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.ಇವರುಗಳಿಗೆ ಬಾಬುದಾರರು ಎಂದುಕರೆಯುತ್ತಾರೆ. ಜಾತ್ರೆಯಲ್ಲಿಇವರೆಲ್ಲರಿಗೂ ಹೊಸ ಬಟ್ಟೆಯನ್ನುಉಡುಗೊರೆಯಾಗಿ ನೀಡಲಾಗುತ್ತದೆ.
ಜಾತೀಯತೆ:
ಪರಿಶಿಷ್ಟ ಜಾತಿಯವರಿಗೆಊರಿನ ಪ್ರಮುಖ ದೇವಾಲಯಗಳಾದ ದುಗ್ಗಮ್ಮ, ಆಂಜನೇಯ ಬಸವೇಶ್ವರ ದೇವಾಲಯಗಳಿಗೆ ಪ್ರವೇಶವಿಲ್ಲ, ಹೋಟೆಲ್‍ಗಳಲ್ಲಿ ಈಗಲೂ ಹೊರಗಡೆ ಪರಿಶಿಷ್ಟ ಜಾತಿಯವರಿಗಾಗಿ ಲೋಟಇಡುವ ಪದ್ಧತಿಯುಜಾರಿಯಲ್ಲಿದೆ. ಆ ವಿಚಾರವಾಗಿ ಹೋಟೆಲ್ ಮಾಲೀಕರನ್ನು ಕೇಳಿದಾಗ ಅವರಿಗೆ ಲೋಟ ನೀಡಿದರೆ ಮೇಲ್ಜಾತಿಯವರು ನಮ್ಮೊಂದಿಗೆ ಜಗಳಕ್ಕೆ ಬರುತ್ತಾರೆ. ಹಾಗೂ ನಮ್ಮ ಹೋಟೆಲ್‍ಗೆ ಬರುವುದಿಲ್ಲ ಎಂಬ ಉತ್ತರಕೊಡುತ್ತಾರೆ. ಅಲ್ಲದೆಕ್ಷೌರಿಕರು ಪರಿಶಿಷ್ಟ ಜಾತಿಯವರಿಗೆ ಸೇವೆ ಮಾಡಲು ಹಿಂಜರಿಯುತ್ತಾರೆ.ಹೀಗೆ ಈ ಊರಿನಲ್ಲಿಜಾತಿಯತೆಯು ಈಗಲೂ ಕಂಡು ಬರುತ್ತದೆ.
ಉಪಸಂಹಾರ, ಕಂಡುಕೊಳ್ಳುವಿಕೆ ಮತ್ತು ಸಲಹೆಗಳು :
ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಮಹಿಳಾ ಮೀಸಲಾತಿ ನೀಡಿರುವುದು ಸರಿಯಷ್ಟೆ ಅದನ್ನುಅವರು ಸರಿಯಾದ ಬಳಸಿಕೊಳ್ಳುವ ವಾತಾವರಣ ಸೃಷ್ಟಿಸಬೇಕು. ತೆರೆಮರೆಯ ರಾಜಕೀಯದಿಂದ ಗ್ರಾಮ ಪಂಚಾಯಿತಿಯನ್ನು ಮುಕ್ತಗೊಳಿಸಲು ಕಾನೂನು ಕ್ರಮಕೈಗೊಳ್ಳಬೇಕು. ಗ್ರಾಮ ಸಭೆಯು ಸರಿಯಾಗಿ ನಡೆಯಬೇಕಾದರೆ ಪ್ರಸಕ್ತ ವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಲು ಈ ರೀತಿಯ ಸಲಹೆಗಳನ್ನು ನೀಡಬಹುದು.
ತೆರಿಗೆ ವಸೂಲಿಗೆ ಕೆಲವು ಸಲಹೆಗಳು :
ಈ ಗ್ರಾಮ ಪಂಚಾಯಿತಿಯೊಂದರಆದಾಯದ ಮೂಲಗಳು ತುಂಬಾ ಸೀಮಿತವಾಗಿವೆ. ಮನೆ ತೆರಿಗೆ, ಭೂಕಂದಾಯದಲ್ಲಿ ಪಾಲು, ಅಂಗಡಿ ಮತ್ತುಇತರೆ ವಾಣಿಜ್ಯಗಳ ಮೇಲೆ ತೆರಿಗೆ ಇವುಗಳು ಗ್ರಾಮ ಪಂಚಾಯಿತಿಗೆ ಆದಾಯತರುವ ಮೂಲಗಳಾಗಿವೆ. ಈ ಊರಿನ ಆದಾಯದ ಮೂಲಗಳನ್ನು ಮತ್ತು ಅವುಗಳ ಸಂಗ್ರಹಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಸಲಹೆಗಳನ್ನು ಕೊಡಬಹುದು.
ಈ ಎಲ್ಲಾ ಸಲಹೆಗಳನ್ನು ಅನುಷ್ಟಾನಕ್ಕೆ ತರುವುದರ ಮೂಲಕ ಗಾಂಧಿಕಂಡಂತಹಗ್ರಾಮ ಸ್ವರಾಜ್ಯವನ್ನು ಸ್ಥಾಪಿಸಲು ನಾವೆಲ್ಲರೂ ಮುಂದಾಗುವುದು ಸೂಕ್ತವಾಗಿದೆ.
ಪರಾಮರ್ಶನಗ್ರಂಥಗಳು :