Tumbe Group of International Journals

Full Text


ತಳ ಸಮುದಾಯಗಳ ನ್ಯಾಯಾಂಗ ವ್ಯವಸ್ಥೆ

ಶಶಿಕಲ ಟಿ

ಸಂಶೋಧನಾ ವಿದ್ಯಾರ್ಥಿ

ಬುಡಕಟ್ಟು ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ ಹಂಪಿ

ಹುಟ್ಟುತ್ತಾ ಹುಟ್ಟುತ ಮಾನವರೆಲ್ಲರು ಸಮಾನರು ಆದರೆ ಬೆಳೆಯುತ್ತಾ ಬೆಳೆಯುತ್ತಾ ಸಂಕೀರ್ಣತೆಯೆಡೆಗೆ ಸಾಗುತ್ತದೆ (ಕೆ ಬೈರಪ್ಪ-ಸಮಗ್ರ ಗ್ರಾಮೀಣ ಸಮಾಜ ಪುಟ 134 -2002)ಎಂಬ ಪ್ಲೇಟೋನ ಹೇಳಿಕೆಯು ವ್ಯಕ್ತಿಯ ಬೆಳವಣಿಗೆಯ ಹಂತಕ್ಕು ಹಾಗು ಸಮಾಜದ ಬೆಳವಣಿಗೆಯ ಹಂತಕ್ಕು ಹೋಲಿಸಬಹುದು.

 ವ್ಯಕ್ತಿ ಹುಟ್ಟುವಾಗ ಏಕಾಂಗಿಯಾಗಿ ಹುಟ್ಟಿದರು ಬೆಳೆಯುತ್ತಾ ಅಪ ಅಮ್ಮ,ಅಣ್ಣ;ತಮ್ಮ.ಅಕ್ಕ,ತಂಗಿ ತಮ್ಮ, ತಾತ, ಅಜ್ಜಿ ಮುಂತಾದ ಕುಟುಂಬದ ಸಂಬಂದಗಳಿಂದ ಸಾಮಾಜಿಕ ಸಂಬಂದಗಳ ಬಲೆಯಲ್ಲಿ ಸಿಲುಕಿಕೊಳ್ಳುತ್ತಾನೆ ಹಾಗೆಯೆ ಸಮುದಾಯ ಬೆಳವಣಿಗೆಯ ಹಂತಕ್ಕೆ ನೋಡುವುದಾದರೆ ಆದಿವಾಸಿಯಾಗಿದ್ದ ಮಾನವನು ಆಹಾರ,ಬೇಟೆ,ವಸತಿ,ಪಶುಪಾಲನೆ,ವ್ಯವಸಯದಿಂದ ಮುಂದುವರೆದು ಸಾಂಘಿಕಜೀವನದಿಂದ, ಸಮುದಾಯಗಳು,, ಹಟ್ಟಿ, ಕೇರಿಗಳು, ಹಳ್ಳಿಗಳ್ಳು, ಗ್ರಾಮ ಪಟ್ಟಣಗಳು, ನಗರಮಹಾನಗರಗಳು, ಜಿಲ್ಲೆ,  ರಾಜ್ಯ, ರಾಷ್ಟøಗಳಾಗಿ ಬೆಳವಣಿಗೆಯಾಗಿದ್ದಾನೆ,ನಾವು ನ್ಮವರು, ನಮ್ಮದು, ಎಂಬ ಐಕ್ಯತೆಯ ಭಾವನೆಯೊಂದಿಗೆ ಬದುಕುವ ಜನರ ಸಮುಹಕ್ಕೆ ಸಮುದಾಯ ಎಂದು ಹೆಸರಿಸಬಹುದು. ಅಧ್ಯಯನದ ದೃಷ್ಟಿಯಿಂದ ಈ ಸಮುದಾಯಗಳನ್ನು ಪರಿಗಣಿಸುವ ಸಮುದಾಯಗಳು, ಹಾಗೂ ಕಡೆಗಣಿಸುವ ಸಮುದಾಯಗಳು ಎಂದು ವಿಭಗಿಸಬಹುದಾಗಿದೆ, ಇಲ್ಲಿ ಪರಿಗಣಿಸುವ ಸಮುದಾಯ ಎಂದರೆ ವೈಧಿಕರು,ಆರ್ಯರು, ಸಂಪ್ರದಾಯವಾದಿಗಳು, ಅಲ್ಲದೆ ಜಾತಿ, ವರ್ಗ, ವೃತ್ತಿ, ಸಂಪ್ರದಾಯದ ಹೆಸರಲ್ಲಿ ಸಾಮಾಜಿಕ ನ್ಯಾಯವನ್ನು ಹಂಚುವಲ್ಲಿ ತಾರತಮ್ಯತೆಯನ್ನು ಮಾಡುತ್ತಾ ಮಾನವನ ಮೂಲಭೂತ ಹಕ್ಕುಗಳನ್ನು ಸ್ವಾರ್ಥಮಯವಾಗಿ ಅನುಭವಿಸುತ್ತಿದ್ದ ಸಮುದಾಯ ಎಂದು ಹೇಳಬಹುದು, ಇನ್ನೂ ಕಡೆಗಣಿತ ಸಮುದಾಯ/ ತಳಸಮುದಾಯಗಳೆಂದರೆ -ಹೆಸರೆ ಹೇಳುವಂತೆ ಸಂಪ್ರದಾಯವಾದಿಗಳಿಂದ ಬುಧ್ದಿವಂತಿಕೆಯಲ್ಲಿ, ಸಮಾಜಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ತಾತ್ವಿಕವಾಗಿ, ಶೈಕ್ಷಣಿಕವಾಗಿ, ವೈಚಾರಿಕವಾಗಿ, ಸಮಾಜಿಕ ನ್ಯಾಯದಿಂದ ವಂಚಿತವಾಗಿ, ಜೀವ ಇದ್ದು ಇಲ್ಲದಂತೆ, ಧ್ವನಿ ಇದ್ದು ಮೂಕರಂತೆ ಇರುವ ಸಮುದಾಯಗಳಾಗಿವೆ.

ಇನ್ನು ತಳಸಮುದಾಯಗಳಲ್ಲಿ ದಲಿತರು ಬುಡಕಟ್ಟುಗಳು ,ಅಲೆಮಾರಿಗಳು, ಹಾಗು ಅರೆ ಅಲರಮಾರಿಗಳು ಎಂದು ಗುರುತಿಸಲಾಗಿದೆ, ನನ್ನ ಅಧ್ಯಯನದಲ್ಲಿ ದಲಿತ ಸಮುದಾಯದ ಛಲವಾದಿ ಸಮುದಾಯವು ಅಸ್ಪøಶ್ಯತೆಯ ಪಟ್ಟಿಯಲ್ಲಿ ಬರುವ ಸಮುದಾಯವಾಗಿದೆ. ಹೊಲೆಯರು, ಮಾದಿಗರು, ಸಮಗಾರರು, ಡೊರ, ಡಕ್ಕಲ ಮಾಚಾಳ, ಪಂಭದ, ಪರವ, ನಲಿಕೆ, ಕೊರಗ, ವiತ್ಸ, ಮೇರ, ಮುಂತಾದವುಗಳನ್ನು ದಲಿತರು ಎಂದು ಗುರುತಿಸಲಾಗಿದೆ. ಆದರೆ ಹೊಲೆಯರು,ಮಾದಿಗರು ಇಂದಿಗು ಅಸ್ಪøಶ್ಯತೆಯ ಸುಳೀಯಲ್ಲಿ ನಲುಗುತ್ತಿರುವ ಸಮುದಾವಾಗಿದೆ.ಸಾವಿರಾರು ವರ್ಷಗಳಿಂದ ಶೋಷಣೆಗೆ, ದೌರ್ಜನ್ಯಕ್ಕೆ,ಜೀತಕ್ಕೆ, ಹಿಂಸೆಗೆ ಬಲಿಯಾಗಿ ಸಂಪ್ರಾದಾಯಿಕ ಸಮಾಜದಿಂದ ಸಾಮಾಜಿಕ ನ್ಯಾಯದಿಂದ ವಂಚಿತವಾಗಿರುವ ಸಮುದಾಯ ವಾಗಿದೆ. ಹೀಗೆ ಪ್ರಬಲರು,ದುರ್ಬಲರು ಒಳಗೊಂಡಿರುವ ಸಮಾಜದಲ್ಲಿ ದುರ್ಬಲವರ್ಗದ  ತಳಸಮುದಾಯಗಳ ಪರವಾದ ನ್ಯಾಯ ಕಾಣಿಗುವುದಿಲ್ಲ ಇಂತಹ ಸಂದರ್ಬದಲ್ಲಿ ಈಸಮುದಾಯಗಳು, ಸಾಮುದಾಯಿಕ ನ್ಯಾಯ ಹಾಗೂ ಸಾಮಾಜಿಕ ನ್ಯಾಯವನ್ನು ಪಡೆಯುವಲ್ಲಿ ನಿರ್ವಹಿದ ಕಾರ್ಯ,ಟ್ಟಿಕೋಂಡ ಸಂಸ್ಥಾನ, ಐಕ್ಯತೆ, ಸಾಂಸ್ಕೃತಿಕ ಬಂದುತ್ವದ ಸಂರóಕ್ಷಣೆಯನ್ನು ಹೇಗೆ ಮಾಡಿಕೊಂಡರು ಎಂಬುದು ಕುತೂಹಲದ ಸಂಗತಿ. ದಲಿತರೂ ಸೇರಿದಂತೆ ಬುಡಕಟ್ಟುಗಳು, ಅಲೆಮಾರಿಗಳು, ಅರೆಅಲೆಮಾರಿಗಳು, ಇಂದಿಗು ತಮ್ಮ ಸಂಸ್ಕೃತಿಗಳನ್ನು, ಸಂಪ್ರದಾಯಗಳನ್ನು, ಆಚರಣೆಗಳನ್ನು, ಪದ್ದತಿಗಳನ್ನು, ಬಂಧುತ್ವದ ವ್ಯವಸ್ಥೆಯನ್ನು, ವಿವಾಹಪದ್ದತಿಯನ್ನು, ಹೋದಿರುವಂತೆ ನ್ಯಾಯಂಗ ವ್ಯವಸ್ಥೆಯನ್ನು ಹೊಂದಿರುವುದನ್ನು ಗುರುತಿಸಬಹುದು. ಸಾಂಸ್ಕೃತಿಕ ಕೇಂದ್ರಗಳಾಗಿರುವ ಕಟ್ಟೆಮನೆಗಳು ಆಧುನಿಕರಣದಿಂದಾಗಿ, ಔದ್ಯೊಗಿಕರಣದಿಂದಾಗಿ ನಶಿಸುತ್ತಿರುವ ಸಂಧರ್ಬದಲ್ಲಿ ರಕ್ತಸಂಬಂದಗಳು ಶಾಶ್ವತವಾಗಿ ಉಳಿಯುವಂತೆ ಮಾಡುತ್ತವೆ. ನಗರೀಕರಣ, ಉದಾರಿಕರಣ, ಖಾಸಗೀಕರಣ, ಆಧುನೀಕರಣ, ಜಾಗತ್ತೀಕರಣದ ಪ್ರಭಾವ ಎಲ್ಲಾ ಸಮುದಾಯಕ್ಕು ಒಳಗಾದರು ಬುಡಕಟ್ಟುಗಳಲ್ಲಿ ಮೂಲಸಂಸ್ಕೃತಿಯ ಸ್ಥಿತ್ಯಂತರಗಳು ಇಂದಿಗೂ ಕಾಣಬಹುದು. ಅದರಲ್ಲಿಯು ದಲಿತರಿಗೆ ಒಂದು ನಿರ್ದಿಷ್ಟ ಸ್ಥಳ,ವೃತ್ತಿ ಎಂಬುದಿರದೆ ಜೀತಪದ್ದತಿಯಿಂದಾಗಿ ತ್ತುತ್ತು ಅನ್ನದ ಸಂಪಾದನೆಗಾಗಿ ಒಂದು ಪ್ರದೇಶದಿಂದ ಮತ್ತೋಂದು ಪ್ರದೇಶಕ್ಕೆ ವಲಸೆ ಬಂದರೂ ತಮ್ಮ ಮೂಲ ಸಂಸ್ಕೃತಿಕ ಕೇಂದ್ರ, ಬಂಧುತ್ವ ವ್ಯವಸ್ಥೆಯ ಕೇಂದ್ರ ಸ್ಥಳವಾದ, ನ್ಯಾಯಸ್ಥಾನ ಎಂಬ ನ್ಯಾಯಾಂಗ ವ್ಯವಸ್ಥೆಯನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. (ಜಿ,ಹೆಚ್,ಪ್ರಸಾದ್ ಅಭಿನಂದನ ಸಂಪುಟ,-ಕರ್ನಾಟಕ ಪಾಳೆಗಾರರ ನ್ಯಾಯಾಡಳಿತ, ಸಂಪಾದಕರು-ಲಕ್ಷಮಣ ತಲಗಾವಿ )

ಸಾಮಾನ್ಯವಾಗಿ ಮಾನವ ಸಮುದಾಯಗಳೆಲ್ಲದರಲ್ಲಿಯು ಈ ನ್ಯಾಯಾಂಗ ವ್ಯವಸ್ಥೆಯನ್ನು ಕಾಣುತ್ತೇವೆ. ಅದರ ಸ್ವರೂಪ ,ನಾಮಾವಳಿ ಗಳು.ಸಂರಚನೆ, ಬೇರೆ ಬೇರೆ ಯಾಗಿದ್ದರು ಅದರ ಕಾರ್ಯಾಚರಣೆಯು, ಉದ್ದೇಶಗಳು ಮಾತ್ರ ಸಮುದಾಯದ ಐಕ್ಯತೆಯನ್ನು ಕಾಪಾಡುವುದೇ ಆಗಿರುತ್ತದೆ. ಆದರೆ ದಲಿತರ ಛಲವಾದಿ ಸಮುದಾಯವು ವಿಶಿಷ್ಟರಲ್ಲಿ ವಿಶಿಷ್ಟವಾಗಿ ಕಂಡಬರುತಾರೆ. ಏಕೆಂದರೆ ಕರ್ನಾಟಕದಾದ್ಯಂತ ನೆಲೆಸಿರುವ ಇವರು ಒಂದೇ ಹೆಸರಿಂದ ಗುರುತಿಸಲ್ಪಡುವುದಿಲ್ಲ, ಒಂದೇ ಸಂಸ್ಕೃತಿಯನ್ನು ಹೋದಿಲ್ಲ, ಒಂದೇ ಕುಲಗಳನ್ನು ಹೊಂದಿಲ್ಲ, ಒಂದೇನ್ಯಾಯ  ಪದ್ದತಿಯನ್ನು ಹೋಂದಿಲ್ಲ, ಇದಕ್ಕೆ ಕಾರಣಗಳು ಹುಡುಕಬೇಕಾಗಿದೆ ಅಥವಾ ಹೆಚ್ಚಿನ ಅದ್ಯಯನಗಳು ನಡೆಯಬೇಕಾಗಿದೆ,  ಭಾರತದ 138 ಜಿಲ್ಲೆಗಳಲ್ಲಿ ಕಂಡುಬರುತ್ತಾರೆ .ಕರ್ನಾಟಕದಾದ್ಯಂತ ನಲೆಸಿರುವ ಇವರು ಒಂದೇ ಹೆಸರಿಂದಲೂ ಕರೆಯಲ್ಪಡುವುದಿಲ್ಲ. ಕೆಲವು ಕಡೆ ಕುಲಗಳನ್ನು,ಕೆಲವು ಕಡೆಗಳಲ್ಲಿ ಕಟ್ಟೆಮನೆಗಳನ್ನು ಹೊಂದಿರುತ್ತಾರೆ, ಕರ್ನಾಟಕದ ಮೈಸೂರು, ಮಳವಳ್ಳಿ ,ಮಂಡ್ಯ, ರಾಮನಗರ, ಚಾಮರಾಜನಗರ, ಹಾಸನ ಚಿಕ್ಕಬಳ್ಳಾಪುರ, ಮುಂತಾದ ಕಡೆಗಳಲ್ಲಿ ಕುಲಗಳು ಹೆಚ್ಚಾಗಿ  ಕಂಡುಬಂದರೆ ತುಮಕೂರು ಚಿತ್ರದುರ್ಗ, ದಾವಣಗರೆ, ಶಿವಮೊಗ್ಗ, ದಕ್ಷಿಣಕನ್ನಡ, ಗುಲ್ಬರ್ಗ, ಧಾರವಾಡ, ರಾಯಚೂರು ,ಯಾದಗಿರಿ, ಮುಂತಾದಕಡೆ ಕಟ್ಟೆಮನೆಗಳು ಕಂಡುಬರುತ್ತವೆ. ಅಂದರೆ ಕಟ್ಟೆಮನೆ ಎಂಬ ಹೆಸರಿಂದ ಕರೆಯುವ ಸಾಮುದಾಯಿಕ ನ್ಯಾಯಾಂಗ ವ್ಯವಸ್ತೆಯನ್ನು ಕಟ್ಟಿಕೊಂಡಿರುತ್ತಾರೆ.

ದಲಿತರು ತಮ್ಮ ಚರಿತ್ರೆಯನ್ನು ಸಂಸ್ಕೃತಿಯನ್ನು ಐಕ್ಯತೆಯನ್ನು ರಚನಾತ್ಮಕವಾಗಿ ಕಟ್ಟಿಕೊಳ್ಳ ಬೇಕಾದರೆ ಅದಕ್ಕೆ ತನ್ನದೇ  ಆದ ರೀತಿ ನೀತಿಗಳು ಕ್ರಮಬದ್ದ ವ್ಯವಸ್ತೆಯನ್ನು ಹೊಂದಬೇಕಾಗುತ್ತದೆ ಈ ಸಮುದಾಯಗಳಿಗೆ  ಮಠಗಳು, ದೇವಾಲಯಗಳು, ಧರ್ಮಗುರುಗಳು, ಅರ್ಚಕರು, ಪೂಜಾರಿಗಳು ಯಾರೂ ಇಲ್ಲದಿದ್ದರು ತಮ್ಮ ಸಮುದಾಯದಲ್ಲಿರುವ ಹಿರಿಯ ವ್ಯಕ್ತಿಯ ಮೂಲಕ ದೈವದ ಸಾಕ್ಷಿಯಾಗಿ ನಿರ್ಮಿಸಿಕೊಂಡಿರುವ ಸಂಸ್ಥೆಗಳಾಗಿ ಕಾರ್ಯಮಾಡುತ್ತವೆ.

ಛಲವಾದಿಗಳ ನ್ಯಾಯಾಂಗ ವ್ಯವಸ್ಥೆಯನ್ನು ಕಟ್ಟೆಮನೆ ಎಂಬ ಹೆಸರಿಂದ ಗುರುತಿಸಲಾಗುತ್ತದೆ.ಇದನ್ನು ನ್ಯಾಯದಮನೆ, ದೈವದಮನೆ, ನ್ಯಾಯಸ್ಥಾನ, ಗಡಿಮನೆ, ದೇವರಮನೆ, ಕುಲಪಂಚಾಹಿತಿ, ನ್ಯಾಯಪಂಚಾಹಿತಿ, ಜಾತಿಪಂಚಾಯ್ತಿ, ಚಾವಡಿ, ದೈವಸ್ತಾನ ಮುಂತಾದ ಹೆಸರಿಂದ ಗುರುತಿಸುತ್ತರೆ. ಜಾತಿಪಂಚಾಯಿತಿ ,ಅಲೆಮಾರಿ ಸಮುದಾಯದವರು ದಕ್ಕಲಿಗರು –ದೈವದಮನೆ ಎಂದೂ, ಕೊರವರು-ನ್ಯಾಯಪಂಚಾಯಿತಿ ಎಂದೂ, ಎರವರು-(ನ್ಯಾಯಮಾಡಿಂಚೆ) ಪಂಚಾಯಿ ಎಂದೂ, ಮಡಿವಾಳರು –ದೈವದ ಕೂಡಿಕೆ ಅಥವಾ ದೈವದವರು ಎಂದೂ, ಲಂಬಾಣೀಗರು-ಗೊರಪಂಚಾಯಿತಿ ಎಂದೂ ಬೇಡರು- ನ್ಯಾಯಕೇಂದ್ರಗಳಿಗೆ-ಕಟ್ಟೆಮನೆಗಳು ಎಂದೂ.ಆಂದ್ರಪ್ರದೇಶದ ರಾಜಗೋಂಡರು -ನ್ಯಾಯಪಂಚಾಯಿತಿಯನ್ನು -ರಾಯಕೇಂದ್ರ ಎಂದೂ, ಬುಡ್ಗಜಂಗಮರು - ಜಾತಿಪಂಚಾಯಿತಿ ಎಂದೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ - ಹೂಯಿಲು ಹೋಗುವುದು ಎಂಬ ಹಲವಾರು ಹೆಸರುಗಳಿಂದ ಗುರುತಿಸಲಾಗುತ್ತದೆ. ಛಲವಾದಿಗಳಲ್ಲಿ ಕಟ್ಟೆಮನೆ ಎಂದು ಕರೆಯತ್ತಾರೆ. ಮ್ಯಾಸಬೇಡರು ಕಾಡುಗೊಲ್ಲರು, ಮುಂತಾದ ಬುಡಕಟ್ಟುಗಳಲ್ಲಿ ಕಟ್ಟೆಮನೆ ಎಂಬ ಹೆಸರಿಂದ ಗುರುತಿಸುತ್ತಾರೆ.ಇಲ್ಲಿ ಗುರುತಿಸುವ ಹೆಸರು ಬೇರೆ ಬೇರೆ ಯಾದರು ಪ್ರತಿಯೋಂದು ಸಮುದಾಯದಲ್ಲಿ ಇವು ಕಂಡುಬರುತ್ತವೆ. ಇವು ಸಮುದಾಯದ ಜನರ ನಿಯಂತ್ರಣಮಾಡಲು ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ತೀರವಶ್ಯಕವಾಗಿ ಕಂಡುಬರುತ್ತವೆ. ಇವು ಸಮುದಾಯದ ಸಂವಿದಾನಗಳು ಹಾಗೂ ಸುಪ್ರೀಂ ಕೋರ್ಟಗಳೂ ಎಂದೂ ಹೇಳಲಾಗಿದೆ..

ಸಮುದಾಯದಲಿ ್ಲಸಮಾಜಿಕ ಸಂಬಂದಗಳುನ್ನು ಹಾಗೂ ರಕ್ತಸಂಬಂದಗಳನ್ನು ವೃದ್ದಿಸಿಕೊಳ್ಳುವ ಸಂದರ್ಭದಲ್ಲಿ ಅನೇಕ ವೈರುದ್ಯಗಳು ಕಂಡುಬರುವುದು ಸರ್ವೆಸಮಾನ್ಯವಾಗಿರುತ್ತದೆ. ಹೀಗಾಗಿ ಸಮುದಾಯಗಳ ಶಾಂತಿ ಸುವ್ಯವಸ್ಥೆಯನ್ನು ಐಕ್ಯತೆಯನ್ನು ಕಾಪಾಡಿಕೊಳಲು ಸಾಮಾಜಿಕ ನಿಯಂತ್ರಣ ಅತ್ಯವಶ್ಯಕವಾಗಿರುತ್ತವೆ, ಛಲವಾದಿಗಳು ತಮ್ಮ ಜನರನ್ನು ನಿಯಂತ್ರಣ ಮಾಡಲು ಉದ್ದೇಶದಿಂದಗಿ ರಕ್ತಸಂಬಂದಗಳನ್ನು ಗಟ್ಟಿಗೊಳಿಸುವ ಉದ್ದೆಶದಿಂದಾಗಿ ಹಲವಾರು ಗುಡಿಕಟ್ಟುಗಳನ್ನು ಹಾಗೂ ಕಟ್ಟೆಮನೆಗಳನ್ನು ಕಟ್ಡಿಕೋಂಡಿರುತ್ತಾರೆ. ಈ ಕಟ್ಟೆಮನೆಯ ಮುಖ್ಯಸ್ಥನನ್ನು ಕುಲದ ಹಿರಿಯ ,ಯಜಮಾನ ಗೌಡ,ಪೂಜಾರಿ ಮುಂತಾದ ಹೆಸರಿಂದ ಕರೆಯುತ್ತಾರೆ ಚಿತ್ರದುರ್ಗ ಜಿಲ್ಲೆಯಲ್ಲಿ  ಕಂಡುಬರುವ ಛಲವಾದಿಗಳು ಸುಮಾರು 48 ಕಟ್ಟೆ ಮನೆಗಳಿವೆ ಈ ಕಟ್ಟೆ ಮನೆಗಳು 150ಅಧಿಕ ಗುಡಿಕಟ್ಟುಗಳಾಗಿ ಹೂಡೆದು ಹೋಗಿವೆ.

ಛಲವಾದಿ ಸಮುದಾಯದ ದೇವಸ್ತಾನದ ಅಥವಾ ಕುಲದೇವರ ಗುಡಿಯ ಮುಭಾಗದಲ್ಲಿರುವ ಕಟ್ಟೆ ಅಥವಾ ದೇವಸ್ಥಾನದ ಜಗುಲಿಯಲ್ಲಿಯೇ ಪ್ರತೀಯೋಂದು ಕಟ್ಟೆಮನೆಯ ಯಜಮಾನರು ನ್ಯಾಯತೀರ್ಮಾನ ಮಾಡುತ್ತಾರೆ. ನ್ಯಾಯಕೊಡುವುದರಲ್ಲಿ ಅಂತಿಮ ತೀರ್ಪನ್ನು ಪ್ರತೀಯೋಂದು ಕಟ್ಟೆಮನೆಗಳಲ್ಲಿ ಯಜಮಾನರೆ ನೋಡಿಕೊಳ್ಳುತ್ತಾರೆ. ಕಟ್ಟೆಮನೆಗೆ ಆ ಹಳ್ಳಿಯ ಯಜಮಾನನೆ, ಪೂಜಾರಿಗಳು, ದೈವದವರು, ಮತ್ತು ವಿವಾಇರುವ  ಅಪರಾದಿಗಳು ಬರಬೇಕಾಗುತ್ತದೆ ಕಟ್ಟೆಮನೆಯಲ್ಲಿ ದೊಡ್ಡ ವ್ಯಾಜ್ಯಗಳು ಮಾತ್ರ ಬರುತ್ತವೆ,ಸಣ್ಣ ಸಣ್ಣ ಒಳಜಗಳಗಳನ್ನು ಗುಡಿಕಟ್ಟು ಗಳಲ್ಲಿಯೇ ಬಗೆಹರಿಸಿಕೊಳ್ಳುತ್ತಿದ್ದರು.ಕಟ್ಟೆಮನೆಗಳಲ್ಲಿ ನಡೆಯುವ ನ್ಯಯಾ ತೀರ್ಮಾನವು ನಿಸ್ಪಕ್ಷಪಾತವಾಗಿರುತಿತ್ತು. ತಾರತಮ್ಯತೆ ಎಂಬುದು ಇಲ್ಲಿಸುಳಿಯುವುದಿಲ್ಲ ನ್ಯಾಯ ತೀರ್ಮಾನ ನಡೆಯುವ ಸಮಯದಲ್ಲಿ ಅಪರಾದಿಗಳು, ವಾದಿಗಳು ಪ್ರತಿವಾದಿಗಳು ಏರು ಧ್ವನಿಯಲಿ ್ಲಮಾತನಾಡುವಂತಿರುವುದಿಲ್ಲ. ಅಸಭ್ಯತೆಯಿಂದ ವರ್ತಿಸುವಂತಿಲ್ಲ ಸಮುದಾಯದ ಏಲ್ಲಾ ಜನರು ತಾಳ್ಮೆ,ಶಾಂತಿಯಿಂದ ವಿಚಾರವನ್ನು ಕೇಳಬೇಕು ಇಲ್ಲಿ ಯಜಮಾನನ ಸಮ್ಮುಖದಲ್ಲಿಯೆ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ತಮ್ಮ ಕಟುಂಬದಲ್ಲಿರುವ ಕಲಹ ಅಥವಾ ಒಳಜಗಳಗಳು  ಉಂಟಾದರೆ ಅಣ್ಣ ತಮ್ಮ, ಒಂದೆ ಕುಲದಲ್ಲಿ ಆಸ್ತಿ ವ್ಯಾಜ್ಯಕ್ಕೆ, ವಿವಾಹಕ್ಕೆ ಸಂಬಂದಿಸಿದ ಸಮಸ್ಯಗಳಿದ್ದರೆ  ಕುಟುಂಬದ ಯಜಮಾನನೆ ಕಟ್ಟೆಮನೆಯಲ್ಲಿನ್ಯಾಯ ಇತ್ಯರ್ಥ ಮಾಡುತ್ತಿದ್ದರು.

ಕಟ್ಟೆಮನೆಗಳು ಸಾಂಸ್ಕೃತಿಕ ಕೇಂದ್ರಗಳಾಗಿ ನ್ಯಾಯಕೇಂದ್ರಗಳಾಗಿ ಕೆಲಸಮಾಡುತ್ತಿದ್ದವು ಒಂದೇ ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿದ್ದರೂ ತಮ್ಮದೇ ಆದ ಕಟ್ಟೆಮನೆಯನ್ನು ನಿರ್ಮಿಸಿಕೊಂಡಿರುತ್ತಾರೆ. ಛಲವಾದಿ ಸಮುದಾಯದವರು ಬುಡಕಟ್ಟು ಮಾದರಿಯಲ್ಲಿಯೆ  ಆಹಾರ ಸಂಗ್ರಹಣೆಯಿಂದ ಪಶುಪಾಲನೆ,ಕೃಷಿಗೆ ತಲುಪಿದ ಮೇಲೆ ಒಂದೆ ಕಡೆ ಶಾಶ್ವತವಾಗಿ ನೆಲೆ ನಿಂತ ಮೇಲೋ ಆ ಸಮುದಾಯವು ಆಪ್ರದೇಶವನ್ನೆ ತಮ್ಮ ಧಾರ್ಮಿಕ ನ್ಯಾಯಿಕ ಕಾರ್ಯಕ್ಷೇತ್ರವಾಗಿ ಮಾಡಿಕೊಂಡಿರುತ್ತಾರೆ ಕುಟುಂಬದಲ್ಲಿ ಕಂಡುಬರುವ ವ್ಯಾಜ್ಯಗಳು ,ಪತಿಪತ್ನಿಕಲಹ, ಆಸ್ತಿವಿವಾದ,ಅಂರ್ತಜಾತಿ ವಿವಾಹ, ವಿಧವೆಯನ್ನು ವಿವಾಹವಾಗುವುದು, ಅನೈತಿಕ/ಅಕ್ರಮ ಸಂಬಂದ ಹೊಂದುವುದು,ಚಪ್ಪಲಿತಿಂದ ಹೊಡೆಯುವುದು ಅಥವಾ ಹೋಡೆಯಿಸಿಕೊಳ್ಳುವುದು, ನಿಷಿದ್ದ ಜಾತಿಯವರ ಸಂಗಡ ಊಟ ಮಾಡುವುದು, ವಿವಾಹಿತ ಮಹಿಳೆಯೊಂದಿಗೆ ಅಕ್ರಮಸಂಬಂದ ಹೊಂದುವುದು ,ವಿವಾಹವಚನ ಭಂಗ,ಸಾಲತೀರಿಸದೆ ಇರುವುದು,ಬ್ರಾಹ್ಮಣರನ್ನು ಅವಮಾನ ಮಾಡುವುದು ,ಮದುವೆ ಮುಂಜಿಗಳಲ್ಲಿ ಸಂಪ್ರಾದಾಯಿಕವಾಗಿ ನಡೆದುಕೊಂಡುಬಂದ ಪದ್ದತಿಯನ್ನು ನಿರಾಕರಿಸುವುದು, ಅಲ್ಲದೆ ವಿವಾಹ,ಹಬ್ಬಹರಿದಿನ ಉತ್ಸವ, ಜಾತ್ರೆ, ಮರಣ, ಹೀಗೆ ಸಮುದಾಯಕ್ಕೆ ಸಂಬಂದಿಸಿದ ಹಲವಾರು ವ್ಯಾಜ್ಯಗಳು ಕಟ್ಟೆಮನೆಯಲ್ಲಿ ಇತ್ಯರ್ಥವಾಗುತ್ತಿದ್ದವು. ಇಲ್ಲಿರುವ ಅಪರಾಧಗಳ ಪ್ರಮಾಣದ ಆಧಾರದ ಮೇಲೆ ಶಿಕ್ಷೆಗಳು ಕಂಡುಬರುತ್ತವೆ. ಇದರ ಕಾಂರ್iವು ಅಲಿಖಿತ ಸ್ವರೂಪದ್ದಾಗಿತ್ತು, ಅಕ್ಷರ ಜಗತ್ತು ದಲಿತರ ಕೇರಿಯೊಳಗೆ ಪ್ರವೇಶ ಮಾಡದೆ ಇದ್ದಂತಹ ಕಾಲಮಾನದಲ್ಲಿ ಇವು ಪ್ರಾಮುಖ್ಯತೆಯನ್ನು ಪಡೆದು ಕೊಳ್ಳುತ್ತವೆ, ದೇವರು, ಗುರು, ಹಿರಿಯರು, ನೆರೆಹೊರೆಯವರು, ಮಾನಮರ್ಯದೆಗೆ ಅಂಜಿಕೆಯಿಂದ ಬದುಕುತ್ತಿದ್ದ ಸಮುದಾವು ಕಟ್ಟೆಮನೆಯ ನ್ಯಾಯಕ್ಕೆ ತಲೆ ಭಾಗುತ್ತಿದ್ದವು, ವ್ಯೆಕ್ತಿ ಹಾಗೂ ಸಮುದಾಯದ ವರ್ತನೆಯನ್ನು ನಿಯಂತ್ರಣಮಾಡುವುದು ತಪ್ಪುಮಾಡಿದವರಿ ಜಾತಿಯಿಂದ ಹೂರಹಾಕುವುದು, ದಂಡವಿಧಿಸುವುದು, ಜಾತಿವರಿಗೆ ಊಟ ಹಾಕಿಸುವುದು, ದೇವರನ್ನು ಮುಟ್ಟಿ ಪ್ರಮಾನಮಾಡುವುದು ಕುದಿಯುವ ಎಣ್ಣೆಯಲ್ಲಿ ಕೈಬಿಡಿಸುವುದು ಮುಂತಾದ ದಂಡ, ಶಿಕ್ಷೆ, ಬಹಿಷ್ಕಾರ ದಂತಹ ಮೂರು ರೀತಿಯ ಅಂಶಗಳಿಂದ ತೀರ್ಪುಕೊಡುತ್ತಿದ್ದರು. ಶಿಷ್ಟ ಸಂಪ್ರಾದಾಯಗಳು ಪ್ರಾಭಾವಕ್ಕೆ ಬಂದ ನಂತರ ಛಲವಾದಿ ಸಮುದಾಯಗಳಲ್ಲಿ ಧಾರ್ಮಿಕ ವಿಷಯದಲ್ಲಿ ಮಾತ್ರವಲ್ಲದೆ ಸಾಮಾಜಿಕ ಆರ್ಥಿಕ, ನೈತಿಕ, ಶೈಕ್ಷಣಿಕಕ, ವಿಷಯದಲ್ಲೂ ಬದಲಾವಣೆಗಳಾದವು. ಹಿಂದೆ ಕಟ್ಟೆಮನೆಯಲ್ಲಿ ನೀಡಿದ ನ್ಯಾಯ ತೀರ್ಪಿನಿಂದಾಗಿ ಸಮುದಾಯಗಳಲ್ಲಿ ಹೊಂದಾಣಿಕೆ, ಸಹಕಾರ ಮನೋಭಾವನೆ, ಗುರುಹಿರಿಯರು ಎಂಬ ಭಕ್ತಿಗೌರವ ಬೆಳೆಸಿಕೊಳ್ಳತ್ತಿದ್ದರು, ಆಧುನೀಕರಣ  ಔದ್ಯೋಗೀಕರಣ, ಕೈಗಾರಿಕರಣ, ನಗರೀಕರಣ ಪ್ರಭಾವದಿಂದಾಗಿ ಕಟ್ಟೆಮನೆಯನ್ನು ಕೇವಲ ಸಾಂಸ್ಕೃತಿಕ ಧಾರ್ಮಿಕ  ಆಚರಣೆಗಳಿಗೆ ವಿವಾಹ ಸಂದರ್ಭದಲ್ಲಿ, ಏಕಾದಶಿ ಹಬ್ಬದ ಆಚರಣೆಯಲ್ಲಿ, ಕಾರ್ತಿಕೋತ್ಸವಗಳಲ್ಲಿ ಶ್ರಾವಾಣ ಮಾಸ, ಆಷಾಡ ಮಾಸದಂತಹ ಹಬ್ಬಹರಿದಿನಗಳಲ್ಲಿ ವಾರ್ಷಕ್ಕೆ ಒಮ್ಮೆ ಎಂಬಂತೆ ಕಟ್ಟೆಮನೆಗೆ ಬರುತ್ತಾರೆ,. ಆದ್ದರಿಂದ ಹೆಚ್ಚಿನ ಜನರು ಗುರುಹಿರಿಯರಿಗೆ ಪ್ರಶ್ನಿಸುವ ಮನೋೀಭಾವನೆ ಹೆಚ್ಚಾಗಿರುವುದರಿಂದ ಕಟ್ಟೆಮನೆಯ ಯಜಮಾನರು ನ್ಯಾಯ ತಿರ್ಮಾನವನ್ನು ಧಿಕ್ಕರಿಸಿ ಪೋಲಿಸ್ ಠಾಣೆ, ಕೋರ್ಟ ಕಛೇರಿಗೆ ಹೋಗುವವರ ಸಂಖ್ಯೆಯು ಹೆಚ್ಚಾಗುತ್ತಿದೆ ಕಟ್ಟೆಮನೆಗಳನ್ನು ಮುಖ್ಯವಾಗಿ ಮೂರು ಅಂಶಗಳ ಆಧಾರದ ಮೇಲೆ ರಚನೆಯಾಗುತ್ತವೆ.

 ಸಮುದಾಯದ ಜನಸಂಖ್ಯೆ,ಸಾಂಸ್ಕೃತಿಕ ಗುರುತಿಸುವಿಕೆ,ಸಾಂಸ್ಕೃತಿಕ ಗುರುತಿಸುವಿಕೆ, ಸಾಂಸ್ಕೃತಿ ಕಥನಗಳುÀ ಅಥವಾ  ನಾಯಕ ನಾಯಕಿಯರ ಪ್ರಭಾವ ಹೆಚ್ಚಾಗಿರುವುದು, ಸ್ಥಳೀಯ ಚಾರಿತ್ರಿಕ ಹಿನ್ನೆಲೆ, ಕುಲದೇವರುಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಕಟ್ಟೆಮನೆಗಳು ರಚನೆಯಾಗುತ್ತವೆ, ಉದಾ; ಚಿತ್ರದುರ್ಗದ ಜಿಲ್ಲೆಯ ಜಗಳೂರು ತಾಲೂಕಿನ ಕಂಪಳದೇವರ ಹಟ್ಟಿ ಸಾಂಸ್ಕೃತಿಕ ನಾಯಕನ ಮೂಲ ಪ್ರದೇಶವಾಗಿರುವುದರಿಂದ ಪ್ರಾದೇಶಿಕವಾಗಿ ಚಿಕ್ಕದಿದ್ದರು ದೊಡ್ಡ ಕಟ್ಟೆಮನೆಯಾಗಿ ಮಾಡಿಕೊಂಡಿರುತ್ತಾರೆ. ರಕ್ತಸಂಬಂದಗಳು, ಕುಲಗಳು, ಬಳಿಗಳು, ಬಂಧುತ್ವದ ಯಾವುದೇ ಕಟ್ಟುಪಾಡುಗಳಿಲ್ಲದೆ  ಗಟ್ಟಿಗೊಳಿಸುವ ಕಾರ್ಯವನ್ನು ಕಟ್ಟೆಮನೆಗಳು ಮಾಡುತ್ತವೆ.

‘’ಛಲವಾದಿ ಸಮುದಾಯದ ನ್ಯಾಯ ವ್ಯವಸ್ಥೆಯಲ್ಲಿ ಮುಖ್ಯವಾಗಿ ಮೂರು ಹಂತಗಳನ್ನು                          ಒಳಗೊಂಡಿದೆ ಅವುಗಳೆಂದರೆ ಒಂದು  ಗುರುಸ್ಥಾನ,ಎರೆಡು ಗುಡಿುಕಟ್ಟು, ಮೂರು ಕಟ್ಟೆಮನೆ.’’

ಗುರುಸ್ಥಾನ- ಇದು ನ್ಯಾಯಾಲಯದ ಪ್ರಾಥಮಿಕ ಹಂತ. ಹೆಸರೇ ಸೂಚಿಸುವಂತೆ ಗುರುವಿನ                      ಸ್ಥಾನದಲ್ಲಿರುವ ವ್ಯಕ್ತಿಯನ್ನು ಕುಲದ ಹಿರಿಯನಾಗಿರುವ ವ್ಯಕ್ತಿಯನ್ನು  ಕೇಂದ್ರವಾಗಿರಿಸಿಕೊಂಡು ಸಮುದಾಯದಲ್ಲಿ ಬರುವಂತಹ ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತದೆ, ಹಿಂದಿನ ಕಾಲದಲ್ಲಿ ಜನರು ಕುಲದ ಹಿರಿಯರನ್ನು ಗೌರವಿಸುತ್ತಿದ್ದರು ಅವರ ಮಾತುಗಳನ್ನು ಚಾಚುತಪ್ಪದೆ ಪಾಲಿಸುತ್ತಿದ್ದರು ಸಮುದಾಯದಲ್ಲಿರುವಾ  ಹಿರಿಯ ವ್ಯಕ್ತಿಯು ಗುರುಸ್ಥಾನದಲ್ಲಿಟ್ಟು ಗೌರವಿಸುತ್ತಿದ್ರು, ಇವನನ್ನು ಪೂಜಾರಿ ಎಂಬ ಹೆಸರಿಂದ ಗುರುತಿಸಲಾಗುತ್ತು,ಪೂಜಾರಿಯು ದೇವರ ಸಮೀಪದಲ್ಲಿದ್ದು ಪೂಜೆ, ಪುನಸ್ಕಾರ, ಮುಂತಾದ  ದೇವರ ಕಾರ್ಯದಲ್ಲಿ ಇವನಿಗೆ ಪ್ರಮುಖ ಸ್ಥಾನ ಇರುವುದರಿಂದ ಜನರು ಇವನನ್ನು ಎರಡನೇ ದೇವರು ಎಂದು ಭಾವಿಸುತ್ತಿದ್ದರು,ಇವನು ಹೇಳಿದ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಿದ್ದರು. ಈ ಕಾರಣಕ್ಕಾಗಿ ಸಮುದಾಯದಲ್ಲಿ, ಅಥವಾ ಕುಟುಂಬದಲ್ಲಿ ಏನಾದರು  ಸಣ್ಣ ಸಣ್ಣ ವೈಮನಸ್ಸು ,ವ್ಯಾಜ್ಯ ಉಂಟಾದರೆ ಇವನ ಸಮ್ಮುಖದಲ್ಲಿ,ಹಾಗೂ ಮತ್ತಿತರೆ ಕುಲದ ಹಿರಿಯರ ಸಮ್ಮುಖದಲ್ಲಿ ವ್ಯಾಜ್ಯ ಬಗೆಹರಿಸಿ ಕೊಳ್ಳುತ್ತಿದರು.

ಗುಡಿಕಟ್ಟು—¸ಇದು ಸಮುದಾಯದ ಎರಡನೆ ಹಂತದ ನ್ಯಾಯಲಯ ವ್ಯವಸ್ಥೆ¸‘’ಸಾಮಾಜಿಕ ನಿಯಂತ್ರಣತರುವ ಹಾಗೂ ಸಮಾಜದಲ್ಲಿ ಸಹಜೀವನವನ್ನು ನಡೆಸುವ ಉದೇಶದಿಂದ ಅನೇಕ ವಿಧಿ ವಿಧಾನಗಳನ್ನು ಪಾಲಿಸಿಕೊಂಡು ಬರಲಾಗಿದೆ, ಗುಡಿಕಟ್ಟೆ ಎಂದರೆ ಒಂದೆಕುಲದ ಅಥವಾ ಬೆಡಗಿನವರು ಸೇರಿ ರಚಿಸಿಕೊಂಡ ನ್ಯಾಯ ತೀರ್ಮಾನದ ಒಂದು ಘಟಕ ಎನ್ನಲಾಗಿದೆ. ’’(ಡಿ,ರಾಜಣ್ಣ-ಮಾದಗ ಸಮುದಾಯದ ಸಾಮಾಜಿಕ ಬದಲಾವಣೆಯ ಒಂದು ಅಧ್ಯಯನ , ಅಪ್ರಕಟಿತ ಪಿಎಚ್ ಡಿ ಮಹಾಪ್ರಬಂದ) ಕುಟುಂಬವನ್ನು ಸಮಾಜದ ಮೂಲಘಟಕ ಎಂದು ಗುರುತಿಸಲಾಗಿದೆ ಜಾನಪದರು ಇದನ್ನು ಪ್ರಮುಖವಾದ ‘ವೇದಿಕೆ’ ಎಂದು ಗುರುತಿಸಲಾಗಿದೆ ಇಲ್ಲಿ ನ್ಯಾಯನಿರ್ಣಯ ಮಾತ್ರವಲ್ಲದೆ ಸಮುದಾಯದ ಧಾರ್ಮಿಕ ಚಟುವಟಿಕೆಗಳಾದ ಜಾತ್ರೆ, ಉತ್ಸವ, ಮದುವೆ, ಆಸ್ತಿವಿವಾದ, ಮುಂತಾದ ಬಹುಉಪಯೋಗಿ ಸ್ಥಳವಾಗಿದೆ(ಕನ್ನಡ ವಿಶ್ವಕೋಶ-ಜಾನಪದ ಪುಟ-542)ಕರ್ನಾಟಕದ ಬುಡಕಟ್ಟು ಜನಾಂಗಗಳಾದ ಸೋಲಿಗರು, ಹಸಲರು, ಕಾಡುಕುರುಬರು, ಎರವರು ಇತ್ಯಾದಿ ಸಮುದಾಯದವರು ದೇವರನ್ನು ಹೆಚ್ಚಾಗಿ ನಂಬುತ್ತಾರೆ ವತ್ತು ಪೂಜಿಸುತ್ತಾರೆ ತಮ್ಮ ಗುಂಪುಗಳ ಗುಡಿಸಲುಗಳಲ್ಲಿ ಒಂದನ್ನುದೇವರ ಗುಡಿಗಾಗಿ ನಿರ್ಮಿಸಿರುತ್ತಾರೆ ಈ ಗುಡಿಸಲಿಗೆ ದೇವರ ಗುಡಿ, ಗುಡಿಕಟ್ಟೆ, ದೇವರ ಕಟ್ಟೆ, ಜಗುಲಿ, ಎಂಬುದಾಗಿ ವಿವಿಧ ಹೆಸರಿಂದ ಕರೆಯುತ್ತಾರೆ. ’(ಅದೇ ಪು,ಪು 542)ಇವು ಬುಡಕಟ್ಟುಗಳು ತಮ್ಮ ಸಾಂಸ್ಕೃತಿಕ ಕುರುಹುಗಳಾಗಿ ಸಂಕೇತಗಳಾಗಿ ಗುರುತಿಸುವಂತೆ ಛಲವಾದಿ ಸಮುದಾಯವು ಇಂದಿಗೂ ನೂರಕ್ಕಿಂತ ಹೆಚ್ಚು ಗುಡಿಕ್ಕಟ್ಟುಗಳನ್ನು ಕಟ್ಟಿಕೊಂಡು ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಇಂದಿಗೂ ಮುಂದುವರೆಸಿಕೊಂಡು  ಬರುತ್ತಿದ್ದಾರೆ.

ದೇವಾಲಯದ  ಮುಂಭಾಗಗಳಲ್ಲಿ ಒಂದು ಜಗುಲಿ  ಅಥವಾ ದೇವಸ್ಥಾನದ ಕಟ್ಟೆಯೇ ಗುಡಿಕಟ್ಟೆಯಾಗಿರುತ್ತದೆ. ಇದರ ಮುಖ್ಯಸ್ಥನನ್ನು ಯಜಮಾನ ಎಂಬ ಹೆಸರಿಂದ ಕರೆಯುತ್ತಾರೆ. ಈ ಯಜಮಾನನನ್ನು ಸಮುದಾಯz ಹಿರಿಯ ವ್ಯಕ್ತಿಯಾಗಿರುತ್ತಾನೆ, ಎಲ್ಲಾ ಸದಸ್ಯರು ಒಪ್ಪಿಗೆ ಯಿಂದ ಇವನನ್ನು ಆಯ್ಕೆ ಮಾಡಿರುತ್ತಾರೆ, ಇವನು ತಮ್ಮ ಅನುಭವದ ಮೂಲಕ ಪೌರಾಣಿಕ ಕಥೆಗಳೂ ,ಗಾದೆ ಮಾತುಗಳು, ಜನಪದರ ಹಾಡುಗಳು ಮುಂತಾದವುಗಳ ಮೂಲಕ ಬುದ್ದಿಮಾತು ಹೇಳುವುದರ ಮೂಲಕ ತಪ್ಪಿತಸ್ತರ ಮನಸ್ಸನ್ನು ಪರಿವರ್ತನೆ ಮಾಡುವುದರ ಮೂಲಕ ಸಮಸ್ಯಯನ್ನು ಬಗೆಹರಿಸುತ್ತಿದ್ದರು, ಕೆಲವು ಸಂದರ್ಭಗಳಲ್ಲಿ ಗುಡಿಕಟ್ಟೆಯಲ್ಲಿ ತೀರ್ಮಾನವಾಗದ ವ್ಯಾಜ್ಯಗಳನ್ನು ಕಟ್ಟೆಮನೆಗಳಲ್ಲಿ ಬಗೆಹರಿಸಿ ಕೊಳ್ಳುತ್ತಿದ್ದರು. ಗುಡಿಕಟ್ಟು ,ಕಟ್ಟೆಮನೆಗಳಲ್ಲಿ ಯಜಮಾನರು ನ್ಯಾಯ ತೀರ್ಮಾನ ಮಾಡಿ ಕೆಲವು ಕಟ್ಟು ಕಟ್ಟಳೆ ಹಾಕುತ್ತಿದ್ದರು ಆಗ ತಪ್ಪಿತಸ್ತರು ಈ ಗುರುಸ್ಥಾನಗಳಿಗೆ ಹೋಗಿ ಅಲ್ಲಿ ಪೂಜಾರಿ, ದಾಸಯ್ಯ, ಎತ್ತಿನ ಕಿಲಾರಿಗಳಿಂದ ಗುರುಗಳಿಂದ ತೀರ್ಥಹಾಕಿಸಿಕೋಂಡು ಶುದ್ದರಾಗಿ ಬರುತ್ತಿದ್ದರು. ಆದರೆ ಇಂದು ಈ ಪದ್ದತಿಯು ಕಣ್ಮರೆಯಾಗುತ್ತಿದೆ. ಇದಕ್ಕೆ ಸಮಾಜೀಕರಣದ ಕೊರತೆ ಕಾದಣವಾಗಿದೆಯೋ, ಅಥವಾ ಆಧುನೀಕರಣವು ಕಾರಣವೋ, ಶಿಕ್ಷಣ, ನಾಗರೀಕತೆ,, ಮಾಧ್ಯಮಗಳು ,,,ಯಾವುದು ಕಾರಣವಾಗಿದೆ ಎಂಬುದನ್ನು ತಿಳಿಯುವುದು ಸಾಧ್ಯವಿಲ್ಲವೆಂದು ಹೇಳಬಹುದು.

ಕಟ್ಟೆಮನೆ

ಇದು ನ್ಯಾಯ ವ್ಯವಸ್ಥೆಯ ಅಂತಿಮ ಹಂತ, ಗುರುಸ್ಥಾನ, ಗುಡಿಕಟ್ಟೆಯ ಮುಂದುವರೆದ ಹಂತವೇ ಕಟ್ಟೆಮನೆಯಾಗಿದೆ, ಇದು ಸಮುದಾಯದ ಸುಪ್ರಿಂಕೋರ್ಟ ಎಂದರು ತಪ್ಪಾಗಲಾರದು ಕಟ್ಟೆಮನೆಗಳು ಯಾವಾಗ ಹೇಗೆ ರಚನೆಯಾದವು ಎಂಬುದರ ಬಗ್ಗೆ ನಿಖರವಾದ ಮಾಹಿತಿ ತಿಳಿಯುವುದು ಕಷ್ಟಸಾಧ್ಯ, ’ಮನುಷ್ಯನತಿಳುವಳಿಕೆಯು ಪ್ರಾರಂಬವಾದಾಗಿನಿಂದಲ್ಲಿಯೇ ದೇವರ ಅಸ್ತಿತ್ವದ  ಬಗ್ಗೆ ನಂಬಿಕೆ ಮೂಡಿದಾಗ, ದೇವರಮನೆ, ದೇವರಗುಡಿ, ದೇವಮಂದಿರ, ದೇವರಕಟ್ಟೆ, ಪಾದಕಟ್ಟೆ, ಇತ್ಯಾದಿಗಳು ರಚನೆಯಾದವು ”(ಅದೇ ಪು ಪು 542) ಕಟ್ಟೆಮನೆಯ ಮುಖ್ಯಸ್ಥನನ್ನು ಯಜಮಾನ ಎಂಬ ಹೆಸರಿಂದ ಕರೆಯುತ್ತಾರೆ, ಕಟ್ಟೆಮನೆಯ ಸಂರಚನೆಯಲ್ಲಿ ಯಜಮಾನ, ಪ್ರಮುಖಸ್ಥಾನ ಪಡೆದಿರುತ್ತಾನೆ. ಇವನು ಪೂಜಾರಿ, ಗೌಡ, ಗುರು, ಬುದ್ದಿವಂತ, ಯಜಮಾನ ಮುಂತಾದ ಹೆಸರಿಂದ ಕರೆಯುತ್ತಾರೆ.

ಯಜಮಾನಿಕೆಯು ವಂಶಪಾರಂರ್ಯವಾಗಿ ಮುಂದುವರೆದುಕೊಡು ಬಂದಿರುತ್ತದೆ. ಈ ವ್ಯಕ್ತಿಯು ಸಾಮಾಜಿಕವಾಗಿ, ಆರ್ಥಿಕವಾಗಿ, ಬೌದ್ದಿಕವಾಗಿ ,ಸ್ಥಾನಿಕವಾಗಿ, ಧಾರ್ಮಿಕವಾಗಿ, ವಿಭಿನ್ನವಾಗಿ ಆಲೋಚಿಸುವ ವ್ಯಕ್ತಿಯಾಗಿರಬೇಕು ಹಿಂದಿನ ಕಾಲದಲ್ಲಿ ಜನರು ಕುಲದ ಹಿರಿಯನ್ನು ಗೌರವಿಸುತ್ತ, ಅವರ ಮಾತುಗಳನ್ನು ಚಾಚುತಪ್ಪದೆ ಪಾಲಿಸಿಕೋಂಡು ಬರುತ್ತಿದ್ದರು, ಈ ವ್ಯಕ್ತಿಯು ದೇವರು, ಆತ್ಮ, ಪರಾಮಾತ್ಮ, ಪಾಪ ಪುಣ್ಯ, ಗುರುಹಿರಿಯರು ಎಂಬ ಗೌರವ ಭಾವನೆ ಬುದ್ದಿವಂತಿಕೆ ,ತಾಳ್ಮೆ ಮನೋಭಾವನೆಯನ್ನು ಹೊಂದಿರಬೇಕು, ಯಜಮಾನಿಕೆಯು ಪೂಜಾರಿಕೆಯು ವಂಶಪಾರಂಪರಿಯವಾಗಿ ಅಧಿಕಾರವನ್ನು ಮುಂದುವರೆಸಿಕೊಂಡು ಬಂದಿರುವ ವ್ಯಕ್ತಿಯಾಗಿರಬೇಕು, ಸಮುದಾಯದ ಮೆಚ್ಚುಗೆಯನ್ನು ಪಡೆದಂತಃ ನಿಷ್ಠಾವಂತ, ಪ್ರಾಮಾಣಿಕ ನಿಸ್ಪಕ್ಷಪಾತವಾಗಿ ನ್ಯಾಯ ಮಾಡುವ ವ್ಯಕ್ಥಿಯಾಗಿರಬೇಕು ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗಿರಬಾರದು, ಸರಿ ತಪ್ಪುಗಳ ಬಗೆಗೆ ಆಲೋಚಿಸು ವ್ಯಕ್ಥಿಯನ್ನು ಯಜಮಾನನಾಗಿ ಸಮುದಾಯದವರು ಆಯ್ಕೆ ಮಾಡುತ್ತಾರೆ.  ಛಲವಾದಿ ಸಮುದಾಯದಲ್ಲಿ ದೇವರ ಮನೆಯನ್ನೆ ಕಟ್ಟೆಮನೆಯಾಗಿರಿಸಿ ಕೊಂಡಿರುತ್ತಾರೆ, ದೇವರು ಇಲ್ಲಿ ನೆಲೆಸಿರುತ್ತಾನೆ ಎಂಬುದು ಇವರ ನಂಬಿಕೆಯಾಗಿರುತ್ತದೆ. ಗುಡಿಕಟ್ಟುಗಳಲ್ಲಿ ಬಗೆಹರಿಯದ ವ್ಯಾಜ್ಯಗಳನ್ನು ಕಟ್ಟೆಮನೆಗಳು ಬಗೆಹರಿಸುತ್ತಿದ್ದವು, ಎಲ್ಲಾ ಗುರುಸ್ಥಾನದ ಪೂಜಾರಿಗಳು, ಗುಡಿಕಟ್ಟುಗಳ ಯಜಮಾನರು ಒಂದೆಡೆ ಸೇರುತ್ತಾರೆ. ಕುಟುಂಬದ ಮತ್ತು ಬಂದುತ್ವದ ಆಧಾರದ ಮೇಲೆ ನಿರ್ಮಾಣವಾಗಿರುವ ಈ ಕಟ್ಟೆಮನೆಯು ಕುಟುಂಬ ,ವಾಸಸ್ತಾನದ ಆಧಾರದ ಮೇ¯ನಿರ್ಮಾಣವಾಗಿರುತ್ತವೆ. ಒಂದೇಕುಲಕ್ಕೆ ಸೇರಿದ ಕುಟುಂಬದ ಅಣ್ಣ ತಮ್ಮಂದಿರು  ತಮ್ಮ ರಕ್ತಸಂಬಂದ ಪಾವಿತ್ರತೆಯನ್ನು ಕಾಪಾಡಿಕೊಂಡು ಬರಲು, ವಂಶಬಂಧುತ್ವವನ್ನು ಮುಂದುವರೆಸಿಕೊಂಡು ಬರಲು ಈ ಕಟ್ಟೆಮನೆಗಳನ್ನು ನಿಮಿಸಿಕೋಂಡಿರುತ್ತಾರೆ ಇವುಗಳು ಕುಲದ ಸಂಘಟನೆಯಾಗಿ ಕಾರ್ಯ ಮಾಡುತ್ತವೆ. ಕುಲ ಎಂದರೆ ‘ಒಂದು ಹೊದಾಣಿಕೆಯ ಗುಂಪು ಎಂದು ತಿಳಿಯಬಹುದು. ಇಂತಹ ಹೊದಾಣಿಕೆಯ ಗುಂಪನ್ನು ಮೂರು ರೀತಿಯಲ್ಲಿ ವಿಭಾಗಿಸಬಹುದು. ಒಂದು ಪಿತೃವಂಶೀಯ ಕುಲಗಳೂ ಎರೆಡು ಮಾತೃವಂಶಿಯ ಕುಲಗಳು, ಮೂರು ಸೋದರಮಾವ ಸಂಬಂದಿಕುಲಗಳೂ, ನಾಲ್ಕು ಸೋದರತ್ತೆ ಸಂಬಂದಿ ಕುಲಗಳೂ ಎಂಬುದಾಗಿ ಗುರುತಿಸಲಾಗಿದೆ, ’(ಅದೇ ಪು ಪು316) ಛ¯ವಾದಿ ಸಮುದಾವು ಪಿತೃವಂಶೀಯಕುಲಗಳು ಇಲ್ಲಿ ಕಂಡುಬರುತ್ತವೆ. ಅದರೆ ಪಿತೃವಂಶಿಯ ವಾಸಸ್ತಾನ ಮತು ಪಿತೃವಂಶೀಯವಂಶಾನುಕ್ರಮವನ್ನು ಈಗುಂಪು ಹೊಂದಿರುತ್ತದೆ. ಎಲ್ಲಾಗಂಡುಮಕ್ಕಳು ಎಲ್ಲಾ ಅವಿವಾಹಿತ ಹೆಣ್ಣು ಮಕ್ಕಳು & ವಿವಾಹಿತ ಗಂಡುಮಕ್ಕಳ ಪತ್ನಿಯರು ಈ ಗುಂಪಿಗೆ ಸೇರುತ್ತಾರೆ, ಆದ್ದರಿಂದ ಒಂದೇ ಕುಲಕ್ಕೆ ಸೇರಿದ ಕುಟುಂಬಗಳು ಅಣ್ಣ ತಮ್ಮ ಸಹೋದರ ಸಂಬಂದವನ್ನು ಹೊದಿರುತ್ತವೆ. ಆದ್ದರಿಂದ ಇವರಲ್ಲಿ ಒಳಬಾಂದವ್ಯ ವಿವಾಹ ಇರುವುದಿಲ್ಲ, ಹೊರಬಾಂದವ್ಯ ವಿವಾಹ ಅನುಸರಿಸುತ್ತಾರೆ. ಛಲವಾದಿ ಸಮುದಾಯಲ್ಲಿ ಪ್ರಮುಖವಾಗಿ ನಾಲ್ಕು ಕುಲಗಳು ಕಂಡುಬರುತ್ತವೆ,ಅವುಗಳೆಂದರೆ; ಮಂದಲ, ಮುಚ್ಚಳ, ಮಿನುಗ್ಲ, ಎನುಮಲ, ಎಂಬ ನಾಲ್ಕು ಕುಲಗಳು ಪ್ರತ್ಯೇಕ ಕಟ್ಟೆಮನೆಯನ್ನು ಕಟ್ಟಿಕೊಂಡಿರುತ್ತಾರೆ. ಇಲ್ಲಿ ಕುಲಗಳು, ಬೆಡಗುಗಳು, ಆದಾರದ ಮೇಲೆ ಒಂದೊಂದು ಕಟ್ಟೆಮನೆ ರಚನೆಯಾಗುತ್ತವೆ, ಈ ಸಮುದಾಯದ ವಿಶೇಷವೆಂದರೆ ಏಳುಕರೆ, ಏಳುಸ್ವರ, ಏಳುಊರು, ಏಳು ಜನ, ಏಳು ಸಾಗರ, ಏಳುಪದಿ, ಏಳುದೇವತೆಗಳಿರುವಂತೆ ಏಳು ಬೆಡಗುಗಳುಸೇರಿ ಒಂದೋಂದು. ಕಟ್ಟೆಮನೆಯನ್ನು ರಚಿಸಿಕೊಂಡಿರುತ್ತಾರೆ. (ಕ್ಷೇತ್ರ ಕಾಂರ್ ಮಾಹಿತಿ) ಹಾಗೇಯೆ ಏಳು ಬೆಡಗುಗಳು ಸೇರಿ ಕಟ್ಟೆಮನೆಗಳನ್ನು ರಚಿಸಿಕೋಡಿರುತ್ತಾರೆ ಅವುಗಳೆಂದರೆ- ಏಳುಮಂದಿಮಂದಲರು, ಏಳು ಮಂದಿಮುಚ್ಳರು, ಏಳುಮಂದಿ ಮಿನುಗ್ಲರು, ಏಳು ಮಂದಿ ಎನುಮಲರು ಸೇರಿ ಕಟ್ಟೆಮನೆಗಳು ರಚನೆಯಾಗುತ್ತವೆ.

ಮಂದಲರಲ್ಲಿ ಕಂಡುಬರುವ ಕಟ್ಟೆಮನೆಗಳು; ಇಲ್ಲಿ ಪ್ರಮುಖವಾಗಿ ಮಂದಲ ಬೆಡಗಿನವು ಏಳು ಜನ ಅಣ್ಣ ತಮ್ಮಂದಿರು ಸೇರಿ ಬೆಳಗೆರೆ ಕಟ್ಟೆಮನೆಯನ್ನು ಕಟ್ಟಿಕೊಂಡಿರುತ್ತಾರೆ,ಈಜನ ವೃತ್ತಿಯಿಂದಾಗಿ, ವಿವಾಹದಿಂದಾಗಿ, ಸಾಮಾಜಿಕ ಸಂದರ್ಭದಿಂದಾಗಿ ಬೇರೆ-ಬೇರೆ ಪ್ರದೇಶಗಳಲ್ಲಿವಾಸಿಸುತಿದ್ದು ತಾವು ವಾಸಿಸುವಂತಹ ಪ್ರದೇಶಗಳನ್ನೆ ಚಿಕ್ಕ ಚಿಕ್ಕ ಗುಡಿಕಟ್ಟು ಅಥವಾಕಟ್ಟೆಮನೆಯಾಗಿ ರಚಿಸಿಕೊಂಡಿರುತ್ತಾರೆಅಂತಃ ಕಟ್ಟೆಮನೆಗಳೆಂದರೆ;ಬೆಳೆಗೆರೆ ಕಟ್ಟೆಮನೆ,ಗಂಜಿಗುಂಟೆ ಕಟ್ಟೆಮನ,ಮಾದೇನಹಳ್ಳಿ ಕಟ್ಟೆಮನೆ,ಮಧುರೆ ಕಟ್ಟೆಮನೆ ಕಾತ್ರ್ರಕೇನಹಳ್ಳಿ ಕಟ್ಟೆಮನೆ,ಅಬ್ಬೇನಹಳ್ಳಿ ಕಟ್ಟೆಮನೆ ಜಡಗಲರು ಕಟ್ಟೆಮನೆ,ಬೈಲಮಗ್ಗದ ಕಟ್ಟೆಮನೆ,ಹುಲಿಕುಂಟೆ ಕಟ್ಟೆಮನೆ,ನಾಯಕನಹಟ್ಟಿ ಕಟ್ಟೆಮನೆ,ಬೆಳಗಟ್ಟ ಕಟ್ಟೆಮನೆ,

ಮುಚ್ಚಳದವರಲ್ಲಿ ಕಂಡುಬರುವ ಕಟ್ಟೆಮನೆಗಳೆಂದರೆ;ಕೋಟೆಕರೆ ಕಟ್ಟೆಮನೆ ಬೆಜ್ಜನಹಳ್ಳಿ ಕಟ್ಟೆಮನೆ, ಕೊಂಕಲ್ಲು ಕಟ್ಟೆಮನೆ ಅಲಕುರು ಕಟ್ಟೆಮನೆ,ಹೇಮದೊರೆ ಕಟ್ಟೆಮನೆ, ದಂಬಳಕಟ್ಟೆ ಮನೆ, ಚೌಳೂರು ಕಟ್ಟೆಮನೆ, ಗೋಸಿಕೆರೆ ಕಟ್ಟೆಮನೆ ,ಬರಗೂರು ಕಟ್ಟೆಮನೆ,

ಮೀನಿಗ್ಲ ಕುಲದಲ್ಲಿರುವ ಕಟ್ಟೆಮನೆಗಳು;ಕೆರೆಕಟ್ಟೆಮನೆ ,ಕನ್ಕರೆಕಟ್ಟೆಮನೆ,ಗುಳಾಕಟ್ಟೆಮನೆ, ಗಿಡುಗನಹಳ್ಳಿ ಕಟ್ಟೆಮನೆ, ಮತ್ತಿಘಟ್ಟ್ ಕಟ್ಟೆಮನೆ, ಗುಬ್ಬಿಕಟ್ಟೆಮನೆ,ಶಿವಗಂಗೆ ಕಟ್ಟೆಮನೆ, ಇವುಗಳು ಆಂಧ್ರಪ್ರದೇಶದ ಅನಂತಪುರಜಿಲ್ಲೆ,ಕರ್ನಾಟಕದ ತುಮಕೂರು ಜಿಲ್ಲೆ ಗಳಲ್ಲಿ ಕಂಡುಬರುತ್ತವೆ.

ಎನುಮಲ ಕುಲದಲ್ಲಿರುವ ಕಟ್ಟೆಮನೆಗಳು; ಈ ಬೆಡಗಿನವರು ಅಮಾಸೆ ಎಂಬಕಟ್ಟೆಮನೆಗೆ ಸೇರಿದವರಾಗಿದ್ದು ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆಸೇರಿದವರಾಗಿದ್ದಾರೆ ,ಇವರು ಓಬಳ ನರಸಿಂಹ ಸ್ವಾಮಿ ದೇವರನ್ನುಪೂಜಿಸುತ್ತಾರೆ,ಹರ್ತಿಹನ್ನೋಂದಪ್ಪನ ಮಕ್ಕಳು ಎಂದು ಕರೆಯುತ್ತಾರೆಹಾಗೆಂದರೆ ಹನ್ನೋಂದು ಕಟ್ಟೆಮನೆಯನ್ನು ಸಕ್ಷಿಪ್ತವಾಗಿ ಕರೆಯುತ್ತಾರೆ.ಅವುಗಳೆಂದರೆ;  ಎಮ್ಮೆ ಹಟ್ಟಿ ಕಟ್ಟೆಮನೆ,ತಮ್ಮಡಿಹಳ್ಳಿ ಕಟ್ಟೆಮನೆ,ಮಲ್ಲುರು ಕಟ್ಟೆಮನೆ,ಬಾಣಗೆರೆ ಕಟ್ಟೆಮನೆ ,ಬಿದಿರಕೆರೆ ಕಟ್ಟೆಮನೆ, ತಡಕಲ್ಲು ಕಟ್ಟೆಮನೆ, ಹುಲಿಗೇರಿ ಕಟ್ಟೆಮನೆ,ಹಂದಿಕುಂಟೀರು ಕಟ್ಟೆಮನೆ,ವೇಣಕಲ್ಲು ಕಟ್ಟೆಮನೆ,ರಂಟವಾಳ ಕಟ್ಟೆಮನೆ,ಈ ಕಟ್ಟೆಮನೆಗಳು ಶಿರಾ ತಾಲೂಕು ತುಮಕೂರುಜಿಲ್ಲೆ,ಮಧುಗಿರಿತಾಲೂಕ,ತುಮಕೂರು ಜಿಲ್ಲೆ,ಹಿರಿಯೂರು ತಾಲುಕ್ ಚಿತ್ರದುರ್ಗ ಜಿಲ್ಲೆಯಲ್ಲಿ ಕಂಡುಬರುತ್ತವೆ,(ಸಜ್ಜನಕೆರೆ ಸಿದ್ದಲಿಂಗಪ್ಪ-ವಿಶಿಷ್ಟ ವಿವಾಹ ಪದ್ದತಿ ಪು-15)ಹೀಗೆ ಕಟ್ಟೆಮನೆಗಳು ಚಿತ್ರದುರ್ಗದಾದ್ಯಂತ ಸಂಖ್ಯಾತ್ಮಕವಾಗಿ ಕಂಡುಬರುತ್ತವೆ,ನಲವತ್ತೆಂಟು ಮೂಲ ಕಟ್ಟೆಮನೆಗಳು, ನೂರೈವತ್ತಕ್ಕು ಅಧಕ ಗುಡಿಕಟ್ಟುಗಳು ಹಂದಿವೆ ಎಂದು(ಕ್ಷೇತ್ರ ಕಾರ್ಯದಮೂಲಕ ತಿಳಿದು ಬರುತ್ತದೆ.ಇವುಗಳಲ್ಲಿ ಮೂಲ ಕಟ್ಟೆಮನೆಗಳು ಯಾವುವು? ಉಪ ಕಟ್ಟೆಮನೆಗಳಳು ಯಾವುವು,? ಯಾವ ಯಾವ ಕಟ್ಟೆಮನೆಗಳು ವಿವಾಹ ಸಂಬಂದವನ್ನು ಹೊದಿz ಯಾವು ಸಹೋದರ ಸಂಬಂದ ಹೊಂದಿದ್ದಾವೆ,ಯಾವ  ಕಟ್ಟೆಮನೆಯು ಚಾಲ್ತಿಯಲ್ಲಿವೆ ಯಾವ ಕಟ್ಟೆಮನೆಗಳು ನಿಂತಿವೆ ಎಂಬುದರ ಬಗ್ಗೆ ಹೆಚ್ಚಿನ ಅದ್ಯಯಗಳು ನಡೆಯಬೇಕಿದೆ,ಕಟ್ಟೆಮನೆಗಳು ಸಮುದಾಯದ ನ್ಯಾಯಂಗ ವ್ಯವಸ್ಥೇಯಸಾಮುದಾಯಿಕ ಸಂಸ್ಥೆಗಳಾಗಿವೆ ಚಾಲ್ರ್ಸ ಡಾರ್ವಿನನ ವಿಕಾಸವಾದ ಸಿದ್ದಾಂತದಂತೆ ಪ್ರತಿಯೊಂದು ಜೀವಿಯ ಮೂಲ ಸ್ಥಿತಿಯಿಂದ ಮುಂದುವರೆದು ಇಂದಿನ ನಾಗರಿಕ ಮಾನವನವರೆಗೂ ಅಮೀಬಾ ಎಂಬ ಸೂಕ್ಷಜೀವಿಯಿಂದ ಉಗಮವಾಗುವಂತೆ,ಮಂಗನಿಂದ ಮಾನವನಾದಂತೆ, ಇಂದಿನ ನ್ಯಾಯಾಂಗ ವ್ಯವಸ್ಥೆಯು ಕೋರ್ಟಗಳ ಪೂರ್ವದಲ್ಲಿ ಕಟ್ಟೆಮನೆಗಳು ,ಪಂಚಾಯ್ತಿಗಳು, ಕುಲಾಚಾರಗಳು, ಜಾತಿ ಪಂಚಾಯಿತಿಗಳು ಸಮುದಾಯದ ನಿಯಂತ್ರಣ ಮಾಡುವುದರ ಜೊತೆಗೆ ಐಕ್ಯತೆಯನ್ನು ಕಾಪಾಡುತ್ತಿದ್ದವು .ಶಾಂತಿಸುವ್ಯವಸ್ಥೆಯನ್ನು ಕಾಪಾಡುವುದು ಅಪರಾದಗಳ ಪ್ರಮಾಣ ಕಡಿಮೆ ಮಾಡುವುದು ಹಾಗೂ ಪವಿತ್ರ ರಕ್ತಸಂಬಂದಗಳನ್ನು ಸಂರಕ್ಷಿಸಿ ಮುಂದುವರೆಸಿಕೋಂಡು ಬರುವುದುಇದರ ಪ್ರಮುಖ ಕಾಂರ್ವಾಗಿರುತ್ತದೆ,ಬಂಧುತ್ವ ವ್ಯವಸ್ಥೆಯನ್ನು ಕಟ್ಟೆಮನೆಗಳ ಮೂಲ ಸ್ವರೂಪವಾಗಿರುತ್ತದೆ,

ಪರಾಮರ್ಶನ ಗ್ರಂಥಗಳು

  1. ಡಾ/ ಕೆ,ಎಂ, ಮೇತ್ರಿ,ಡಾ/ಚಲುವರಾಜು-  ಬುಡಕಟ್ಟು ಅಧ್ಯಯನ,ಪ್ರಸಾರಂಗ,ಕನ್ನಡ ವಿಶ್ವವಿದ್ಯಾಲಯ ಹಂಪಿ 2005
  2. ಡಾ ಕೇಶವನ್ ಪ್ರಸಾದ್ ಕೆ ಮರಟ್ಟಿ, ಡಾ/ಗಂಗಾಧರ ದೈವಜ್ಞ, -‘ಬುಡಕಟ್ಟ ಅಧ್ಯಯನ,ಸಂಪುಟ-5 ಸಂಚಿಕೆ-1 ಪ್ರಸಾರಂಗ, ಕನ್ನಡ ವಿಶ್ವವದ್ಯಾಲಯ ಹಂಪಿ,2008ಪರಾಮರ್ಶನ ಗ್ರಂಥಗಳು
  3. ಡಾ/ ಕೆ,ಎಂ, ಮೇತ್ರಿ,ಡಾ/ಚಲುವರಾಜು - ಬುಡಕಟ್ಟು ಅಧ್ಯಯನ,ಪ್ರಸಾರಂಗ,ಕನ್ನಡ ವಿಶ್ವವಿದ್ಯಾಲಯ ಹಂಪಿ 2005
  4. ಡಾ/ ಪ್ರಭಾಕರ ಎ ಎಸ್ -ಆದಿವಾಸಿ ಆಖ್ಯಾನ,ಸಿದ್ದಾರ್ಥ್ ಪ್ರಕಾಶನ,ಹೊಸಪೇಟೆ, 2004
  5. ಸಜ್ಜನಕೇರೆ ಸಿದ್ದಲಿಂಗಪ್ಪ,ಛಲವಾದಿ ಜನಾಂಗದ -ವಿಶಿಷ್ಟ ವಿವಾಹ ಪದ್ದತಿ ,2006
  6. ನಾಗರಾಜು, -ಕೆಂಬಟ್ಟಿ ಹೊಲೆಯರ ಸಂಸ್ಕೃತಿ-,ಕರ್ನಾಟಕ ಸಾಹಿತ್ಯ ಅಕಾಡಮಿ-,ಬೆಂಗಳೂರು -1993
  7. ಪ್ರೋ.ಎಚ್,ವಿ.ನಾಗೇಶ್ -‘ಗ್ರಾಮಾಂತರ’-ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು,2000
  8. ಅಮರೇಶ ನುಗಡೋಣಿ  -ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ-ಹಂಪಿ,
  9. ಎಮ್,ಎಸ್,ಗಂಟಿ -ಅಲೆಮಾರಿ ಸಮುದಾಯಗಳ ಅಧ್ಯಯನ ಮಾಲೆ,ಸುಡುಗಾಡುಸಿದ್ದ-ಕನ್ನಡ ಪುಸ್ತಕ ಪ್ರಾಧಿಕಾರ,ಬೆಂಗಳೂರು-2008
  10. ಡಾ/ತಾರಿಹಳ್ಳಿಹನುಮಂತಪ್ಪ- ಮಾನವ & ಸಾಂಸ್ಕೃತಿಕ ಪಲ್ಲಟಗಳು-ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ 2012
  11. ಕೆ,ಬೈರಪ್ಪ   -ಸಮಗ್ರ ಗ್ರಾಮೀಣ ಸಮಾಜ-ಸಪ್ನ ಬುಕ್ ಹೌಸ್,2002
  12. ಪ್ರೋ/ಹಿ,ಶಿ,ರಾಮಚಂದ್ರಗೌಡ -ಜನಪದ ಸಾಂಸ್ಕೃತಿಕ ಆಯಾಮಗಳು-ಕನ್ನಡ ಪುಸ್ತಕ ಪ್ರಾಧಿಕಾರ-ಬೆಂಗಳೂರು,2000.
  13. ಡಾ/ಎಂ,ಚಿದಾನಂದಮೂರ್ತಿ-ಮಧ್ಯಕಾಲೀನ ಕರ್ನಾಟಕ &ಅಸ್ಪøಶ್ಯರು-ಕನ್ನಡ ಸಾಹಿತ್ಯ ಪರಿಷತ್ತು-2014
  14. ಎಸ್ ಎಸ್ ಹೀರೆಮಠ-ದಲಿತ ಸಂಸ್ಕೃತಿ,ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ-


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal