Tumbe Group of International Journals

Full Text


ಬಹುಮುಖಿ ಪರಂಪರೆ ಕೇಂದ್ರವಾಗಿ ಮಂದಾರಗಿರಿ

ಮಲ್ಲೇಶಪ್ಪ ಟಿ.ಎಸ್.

ಇತಿಹಾಸ ಪ್ರಾಧ್ಯಾಪಕರು,

ಸರ್ಕಾರಿ ಪ್ರಥಮದರ್ಜೆ ಕಾಲೇಜು, ತುಮಕೂರು.

            ಭಾರತ ಬಡವರಿಂದ ಕೂಡಿದ ಶ್ರೀಮಂತ ದೇಶ ಹಲವು ಧರ್ಮಗಳ ನೆಲೆವೀಡು, ನೈಸರ್ಗಿಕ, ಸಂಪತ್ತು, ಮಾನವ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಹೊಂದಿರುವ ಸರ್ವೋನ್ನತ ರಾಷ್ಟ್ರ. ಪ್ರಾಚೀನ ನಾಗರೀಕತೆ ಸಂಸ್ಕೃತಿಯ ಕಾಲಘಟ್ಟಗಳಡಿ ಹಲವಾರು ಮಾರ್ಪಾಡುಗಳನ್ನು ಕಂಡು ತನ್ನದೆಯಾದ ವೈಶಿಷ್ಠ್ಯತೆಯ ಸ್ವರೂಪವನ್ನು ಪಡೆದುಕೊಂಡಿದೆ. ಏಷ್ಯಾ ಉಪಖಂಡದ ಸ್ಮರಣೀಯ ಸಂಗತಿಗಳಿಗೆ ಪ್ರಜಾವರ್ಗದಲ್ಲಿದ್ದ ನಂಬಿಕೆ, ವಿಮರ್ಷಾತ್ಮಕ ದೃಷ್ಠಿಕೋನಗಳ ಪ್ರಭಾವದಿಂದಾಗಿ ಆರ್ಯತತ್ವಗಳ ವಿಡಂಬನೆಯನ್ನು ದಿಕ್ಕರಿಸಿದ ಕ್ಷತ್ರಿಯ ವರ್ಗದವರು, ಕರ್ಮಾಚರಣೆಯನ್ನಾದರಿಸಿದಂತೆ ವಿನೂತನ ತತ್ವಗಳ ಪ್ರತಿಪಾದನೆಗಾಗಿ ಸಾವಿರಾರು ವರ್ಷಗಳಿಂದ ವಸ್ತು, ಸ್ಥಿತಿ, ಲಯ ಮತ್ತು ಇಹ, ಪರಗಳ ವಾಸ್ತವಾಂಶ ಚಿಂತನೆ ಕಂಡುಕೊಳ್ಳಲು ಸರ್ವಸ್ವವನ್ನು ಅರ್ಪಿಸಿಕೊಂಡರು ಮೇಲ್ಕಂಡ ಆತ್ಮಾವಲೋಕನಗಳಿಂದಾಗಿ ಹೊಸ ಮತಗಳ ಅಸ್ಥಿತ್ವ ಪಡೆದವು. ಜಂಬೂ ದ್ವೀಪದ ಜನ ಸಮುದಾಯಗಳ ಆಧ್ಯಾತ್ಮಿಕ ಜಿಗ್ನಾಸೆಗಳಿಗೆ ಕಾಶಿಯ ರಾಜ ವೃಷಭನಾಥರಿಂದ ವೈಶಾಲಿಯ ರಾಜ ಮಹಾವೀರರವರೆಗೆ 24 ಮಂದಿ ರಾಜ ಮಹಾರಾಜು (ಉತ್ತರ) ಸಮಷ್ಠಿ ದಿಕ್ಕನ್ನು ನಿರ್ದೇಶಿಸಲು ಪ್ರಯತ್ನಿಸಿದರು. ಸತ್ಯ, ಅಹಿಂಸೆ, ತ್ಯಾಗ, ಪರೋಪಕರಾ ಇಂದ್ರಿಯ ನಿಗ್ರಹಗಳ ಮೂಲಕ ಕೈವಲ್ಯ (ಮುಕ್ತಿ) ಜ್ಞಾನ ಪಡೆಯಲು ನಡೆಸಿದ ಪ್ರಯತ್ನದ ಫಲವಾಗಿ ಜೈನಧರ್ಮ ಸ್ಥಾಪನೆಯಾಯಿತು. ಕ್ರಿ.ಪೂ. 6ನೇ ಶತಮಾನದಲ್ಲಿ ವೈಶಾಲಿ ಭಾಗದಿಂದ ಬೆಳಕಿಗೆ ಬಂದು ತ್ರಿರತ್ನತತ್ವ ಮೂಲಕ ಭಾರತದಾಧ್ಯಂತ ಮನುಕುಲದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದೆ.

            ಜೈನಧರ್ಮ ದಕ್ಷಿಣ ಭಾರತಕ್ಕೆ ಸಂಘಂ ಯುಗದಲ್ಲಿ ಪ್ರವೇಶಿಸಿತು. ಕ್ರಿ.ಪೂ. 296ರಲ್ಲಿ ಭದ್ರಬಾಹುವಿನ ನೇತೃತ್ವದಲ್ಲಿ ಚಂದ್ರಗುಪ್ತ, ಮೌರ್ಯನು ಸೇರಿದಂತೆ 10000 ಅನುಯಾಯಿಗಳು ಪಾಟಲೀಪುತ್ರದಿಂದ ಕುಮ್ಮಿತಲನಾಡಿನ ಶ್ರವಣಬೆಳಗೊಳಕ್ಕೆ ಆಗಮಿಸುವ ಮೂಲಕ ಕರ್ನಾಟಕದ ಕನ್ನಡಿಗರ ಮೇಲೆ ಅಘಾದ ಪ್ರಭಾವ ಬೀರಿ 100/30 ರಷ್ಟು ಅನುಯಾಯಿಗಳಿಗೆ ತನ್ನ ಮಡಿಲಿನಲ್ಲಿ ವೃದ್ಧಿಸಿಕೊಂಡಿತು. ಸನಾತನ ಜೈನತೀರ್ಥಂಕರರು ಮತ್ತು ಶಾಸ್ತ್ರಗುರು ಪರಂಪರೆಯನ್ನು ಏಷ್ಯಾದ ಉಪಖಂಡದಲ್ಲಿಯೇ ಪುಣ್ಯಭೂಮಿಯಾದ ಕರ್ನಾಟಕದಲ್ಲಿ ಮಾತ್ರ ವಿಕಸನದ ಮಾರ್ಗಗಳನ್ನು ಕಂಡುಕೊಳ್ಳಬಹುದಾಗಿದೆ. ಮೌರ್ಯರ ನಂತರದ ರಾಜ ಮಹಾರಾಜರು, ದಂಡನಾಯಕರು, ಆಧ್ಯಾತ್ಮಿಕ ಚಿಂತಕರು, ಜೈನ ಧರ್ಮತತ್ವ ಪ್ರತಿಪಾದಕ ಗುರುಗಳಾದ ಕುಂದ ಕುಂದಾಚಾರ್ಯ, ಸುಮಂತ ಭದ್ರ, ಪೂಜ್ಯಪಾದ, ಸಿಂಹ ನಂದಿ, ಸುದಾತ್ತಾಚಾರ್ಯರುಗಳ ಪ್ರಭಾವದಿಂದ ರಾಜಮನೆತನದವರ ಧರ್ಮವಾಗಿದ್ದಲ್ಲದೆ ಪ್ರಜಾಕಲ್ಯಾಣ, ಸಾಹಿತ್ಯ, ಕಲೆ ಮತ್ತು ವಾಸ್ತು ಶಿಲ್ಪ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಕಾಣಿಕೆಗಳನ್ನು ವಿಶ್ವಪರಂಪರೆಗೆ ಅರ್ಪಿಸಿರುತ್ತಾರೆ. ಕದಂಬರಾಜ ಮೃಗೇಶವರ್ಮ, ಚಾಲುಕ್ಯರಾಜ ಪುಲಕೇಶಿ, ಗಂಗರ-ಕೊಂಗಣಿವರ್ಮ, ಮಾರಸಿಂಹ, ರಾಷ್ಟ್ರಕೂಟ ಅಮೋಘವರ್ಮ ನೃಪತುಂಗ, ಹೊಯ್ಸಳ, ಅರಸ ಬಟ್ಟಿಗ ಬಟ್ಟಿದೇವ, ರಾಣಿ ಅತ್ತಿಮಬ್ಬೆ, ಶಾಂತಲೆ, ದಂಡನಾಯಕರಾದ ಬಂಕೇಶ, ಗಂಗರಾಜ, ಇರಿಗಪ್ಪ, ರವಿಕೀರ್ತಿ, ಮೊದಲಾದವರ ಪ್ರಯತ್ನದ ಫಲವಾಗಿ ಕರ್ನಾಟಕದ ಶ್ರವಣಬೆಳಗೊಳ 14 ಬಸದಿಗಳು, ಬಾದಾಮಿ 4ನೇ ಜೈನಗುಹೆ, ಐಹೊಳೆಯ ಮೇಘಣ ಬಸದಿ, ಪ್ರಶಸ್ತಿ ಶಾಸನ, ಪುಲಿಗೆರೆ, ಹಲಷಿ, ಮಾನ್ಯಖೇಟ, ಕಾರ್ಕಳ, ವೇಣೂರು, ಮೂಡಬಿದರೆ, ಗೇರುಸೊಪ್ಪ, ಕೊಪ್ಪಳ, ಸೊದೆ, ನರಸಿಂಹರಾಜಪುರ, ಸಿಂಗನಗದ್ದೆ, ಮಂದಾರಗಿರಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಬಸದಿಗಳನ್ನು, 7ಕ್ಕೂ ಹೆಚ್ಚು ದಿಗಂಬರ ಜೈನಮೂರ್ತಿಗಳನ್ನು, ಯಕ್ಷ-ಯಕ್ಷಿಣಿಯರ ಶಿಲ್ಪಗಳನ್ನು, ಸ್ತಂಭಗಳನ್ನು ನಿರ್ಮಿಸಿ (ವಾಸ್ತುಶಿಲ್ಪ) ಸಾಂಸ್ಕೃತಿಕ ಪರಂಪರೆಯನ್ನು ಸಿರಿವಂತಗೊಳಿಸಿದ್ದಾರೆ. ಜೈನ ಗುರುಗಳು ವೈರಾಗಿಗಳಾಗಿ ಕಠಿಣ ತಪಸ್ಸಿನ ಮತ್ತು ಸಲ್ಲೇಖನ ವ್ರತಾಚರಣೆಯ ಮೂಲಕ ಸಾತ್ವಿಕ, ಪ್ರಭುತ್ವ ಸಾಧಿಸಿ ಕೈವಲ್ಯ ಜ್ಞಾನ (ಸಿದ್ದಿ) ಪಡೆದಿದ್ದಾರೆ. ಜೈನ ಧರ್ಮದ ಪಾಲಕರು ಮತ್ತು ಪೋಷಕರಿಂದ ಕನ್ನಡ ಸಾಹಿತ್ಯ, ಕನ್ನಡ ನಾಡು, ನುಡಿ, ಆಚರಣೆಗಳು ಪ್ರಗತಿಯತ್ತ ಮುಖ ಮಾಡಿವೆ. ಪಂಪ, ರನ್ನ, ಪೊನ್ನ, ಜನ್ನರಂತಹ ಜೈನ ವಿದ್ವಾಂಸರುಗಳು ಕನ್ನಡ ಸಾಹಿತ್ಯ ಪರಂಪರೆಯ ಬೆಳವಣಿಗೆ ಮುನ್ನುಡಿ ಬರೆದಿದ್ದಾರೆ.

            ಜೈನ ಧರ್ಮದ ವಿಕಸನದ ಹಂತಗಳಲ್ಲಿ ಪಾಶ್ರ್ವನಾಥನ ಅನುಯಾಯಿಗಳು ಶ್ವೇತಾಂಬರಿಗಳಾಗಿಯೂ, ಮಹಾವೀರನ ಅನುಯಾಯಿಗಳು ದಿಗಂಬರಿಗಳಾಗಿ ಸರ್ವಸ್ವವನ್ನರ್ಪಿಸಿದರು. ಜೈನ ಧರ್ಮ ತತ್ವಗಳು ಕರ್ನಾಟಕದ ಪ್ರಭುತ್ವ ವಾದಿಗಳ ಮೇಲೆ ಪ್ರಭಾವ ಬೀರಿದವು. ಕನ್ನಡ ನಾಡಿನ ಜನಮಾನಸದಲ್ಲಿ ಬೇರೂರಿದ್ದ ಪ್ರತಿಸ್ಪರ್ಧಿ ಆಧ್ಯಾತ್ಮಿಕ ನಂಬಿಕೆಗಳಿಂದ ಮೂಲಧರ್ಮ ತತ್ವಗಳಲ್ಲಿ ಹೊಸ ಮಾರ್ಪಾಡುಗಳ ಅಗತ್ಯತೆಯುಂಟಾಯಿತು. ಅಂದಿನ ಜನರ ಮನೋಧರ್ಮವನ್ನರಿತ ಜೈನ ಗುರುಗಳು ಸುಧಾರಣೆಯತ್ತ ವಾಲಿದರು. ಪರಿಣಾಮವಾಗಿ ಯಾಪನೀಯ ಪಂಥ ಅಸ್ಮಿತತೆ ತಾಳಿತು. ಕ್ರಿ.ಶ. 148ರಲ್ಲಿ ಶ್ರೀ ಕಲಶ ಆಚಾರ್ಯರೆಂಬ ಶ್ವೇತಾಂಬರ ಜೈನಮುನಿವರ್ಯರಿಂದ ಗುಲ್ಬರ್ಗ ಜಿಲ್ಲೆ, ಕಲ್ಯಾಣದಲ್ಲಿ ಸುಧಾರಿತ ಜೈನ ಪಂಥವಾಗಿ ಬೆಳಕಿಗೆ ಬಂದಿತು. ದಿಗಂಬರರಂತೆ ನಗ್ನರಾಗಿಯೂ, ಶ್ವೇತಾಂಬರರ ಧಾರ್ಮಿಕ ವಿಧಿವಿದಾನಗಳನ್ನು ಪಾಲಿಸುವ ಸಮನ್ವಯ ಪಂಥವಾಗಿ ಹೊಸ ರೂಪಾಂತರ ಹೊಂದಿ ಬಹುಸಂಖ್ಯಾತರನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆದಿತ್ತು. ವ್ಯಾಕರಣಗಾರ ಶಾಕತಾಯನ, ರವಿಕೀರ್ತಿ, ಅಮೋಘವರ್ಷ ನೃಪತುಂಗರ ಪ್ರೋತ್ಸಾಹದಿಂದ ಸೇಡಂ, ಅಡಕಿ, ಹಲಸಿ, ರೋಣ, ನವಲಗೊಂದ ಭಾಗದಲ್ಲಿ ಜನಪ್ರಿಯತೆ ಪಡೆಯಿತು. ಕ್ರಿ.ಶ. 8ನೇ ಶತಮಾನದವರೆಗೆ ಉತ್ತರ ಕರ್ನಾಟಕ ಭಾಗಗಳಲ್ಲಿ ಪ್ರಭಾವಿತ ಪಂಥವಾಗಿತ್ತು. 12ನೇ ಶತಮಾನದಲ್ಲಿ ಜರುಗಿದ ಶೈವ ಧರ್ಮೀಯರ ಕ್ರಾಂತಿಯಿಂದಾಗಿ, ದಕ್ಷಿಣ ಕರ್ನಾಟಕದ ಕಡೆ ಚಲಿಸಿದ ಯಾಪನೀಯರು ಸುಧಾರಿತ ಮಾರ್ಗೋಪಯಗಳ ಮೂಲಕ ಜನರ ಮೇಲೆ ಪ್ರಭಾವ ಬೀರಿ ನೆಲೆಗಳನ್ನು ಕಂಡುಕೊಂಡರು. ಸಮಾಜ ಮುಖಿ ಕಾರ್ಯಗಳಾದ ಶಿಕ್ಷಣ, ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಕೆರೆ ಕಾಲುವೆಗಳ ನಿರ್ಮಾಣ ಸೇರಿದಂತ ಹಲವು ಸೇವೆಗಳನ್ನು ಸಲ್ಲಿಸಿದರು ಆ ಮೂಲಕ ಕರ್ನಾಟಕದ ಬಹುಸಂಖ್ಯಾತ ಜನಸಮುದಾಯದವರನ್ನು ತನ್ನತ್ತ ಸೆಳೆಯುವ ಪ್ರಯುತ್ವ ನಡೆಯಿತು. ಆರ್ಕಾಕೀರ್ತಿ, ವಿಜಯ ಕೀರ್ತಿ, ಕೋಚಿ ಆಚಾರ್ಯ ಮುಂತಾದ ಯಾಪÀನೀಯ ಜೈನ ಮುನಿಗಳು ನಂದಿ, ಕೈದಾಳ, ಪುನ್ಹಾಗ, ಮಂದಾರಗಿರಿ ಸೇರಿದಂತೆ ಹಲವು ಸ್ಥಳಗಳಲ್ಲಿ ನೆಲೆನಿಂತು ಸುಧಾರಿತ ಯಾಪನೀಯ ತತ್ವಗಳನ್ನು ಪ್ರಚಾರ ಮಾಡಿದರು.

            ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ  60 ಕಿ.ಮೀ. ದೂರದಲ್ಲಿರುವ ಮತ್ತು ತುಮಕೂರುನಿಂದ10 ಕಿ.ಮೀ. ಅಂತರದಲ್ಲಿರುವ ಮಂದಾರಗಿರಿ ತುಮಕೂರು-ಬೆಂಗಳೂರು ಹೆದ್ದಾರಿ-4 ರಿಂದ 4 ಕಿ.ಮೀ. ಅಂತರ ಕ್ರಮಿಸಿದಾಗ ಸಿಗುವ ಪಂಡಿತನಹಳ್ಳಿ ಬಳಿ ಅರ್ಧ ಕಿ.ಮೀ. ಇರುವ ಪ್ರಾಚೀನ ಪರಂಪರೆಯ ಕ್ಷೇತ್ರವಾಗಿದೆ. 1200 ವರ್ಷಗಳ ಐತಿಹ್ಯವುಳ್ಳ ಜೈನ ಪರಂಪರೆಯ ಸ್ಮಾರಕ ಬಸದಿಗಳನ್ನು ಹೊಂದಿ ಬಸದಿ ಬೆಟ್ಟ, ಅಕ್ಕಬಸದಿ ಬೆಟ್ಟ, ಚಂದ್ರನಾಥ ಪರ್ವತವೆಂದು ಜನಪ್ರಿಯತೆ ಪಡೆದಿದೆ. ವಿನಯಮುಕ್ತಿ ದೇವರೆಂಬ ಜೈನ ಮುನಿ ಕುಂದ ಕುಂದಾನ್ವಯ ಯಾಪನೀಯ ಗಣಕ್ಕೆ ಸೇರಿದವರಾಗಿದ್ದರು. ಶಾತವಾಹನ ಸಂತತಿಯ ಜೈನ ಸಂತ, ಕುಂದ ಕುಂದಾಚಾರ್ಯ ಗಣಪಂಥಕ್ಕೆ ಸೇರಿದವರಾಗಿದ್ದಾರೆ. ಮಂದರಗಿರಿ ಬೆಟ್ಟದ ತುದಿಯಲ್ಲಿ ಸಲ್ಲೇಖನ ವ್ರತವನ್ನಾಚರಿಸಿ ತನ್ನ ಶಿಷ್ಯವೃಂದವನ್ನು ಹೆಚ್ಚಿಸಿಕೊಂಡರು. ಬೆಟ್ಟದ ಪ್ರಾರಂಭದಲ್ಲಿಯೇ ಬ್ರಹ್ಮ ಯಕ್ಷದೇವರ ಮಂದಿರವಿದೆ. ಈ ಹಿನ್ನೆಲೆಯಲ್ಲಿ ಮಂದಾರಗಿರಿ ಬೆಟ್ಟ ಬ್ರಹ್ಮನಿಗೆ ಅರ್ಪಿತವಾದ ಪರ್ವತವೆಂಬ ಉಲ್ಲೇಖವಿದೆ.


            ಬಿಟ್ಟಿಗ ಮತ್ತು ಚಂದವ್ವರವರ ಮಗಳು ಮಾಚಿಯಕ್ಕ ಮಂದಾರಗಿರಿಯಲ್ಲಿ ಜಿನಾಯಗಳನ್ನು ನಿರ್ಮಿಸಲು ತನ್ನ ಪತಿಯಾದ ಈಶ್ವರ ಚಮಾಪತಿ ಮೇಲೆ ಪ್ರಭಾವ ಬೀರಿದಳು. ಎರೆಯಂಗಮಯ ಮತ್ತು ಈಶ್ವರ ಚಮಾಪತಿಯವರು ಹೊಯ್ಸಳ ದಂಡನಾಯಕರಾಗಿದ್ದು, ಕ್ರಿ.ಶ. 980ರ ಅವಧಿಯಲ್ಲಿದ್ದ ಕಿರು ಮಂದಿರಗಳನ್ನು, ಮಂದಾರಗಿರಿಯ ಜಿನಾಲಯಗಳನ್ನು 1160ರ ಅವಧಿಯಲ್ಲಿ ಈ ಹಿಂದಿನ ಕಿರು ಬಸದಿಗಳನ್ನು ದುರಸ್ಥಿಗೊಳಿಸಿದರ. ಮಾಚಿಯಕ್ಕ, ಮೈದಾಳ ಪದ್ಮಾವತಿ ಕೆರೆಯನ್ನು ನಿರ್ಮಿಸಿದರು. ಮಂದಾರಗಿರಿ ಬಸದಿಯ ದೈನಂದಿನ ಪೂಜಾಕೈಂಕರ್ಯಗಳಿಗಾಗಿ ಬಹಳಷ್ಟು ಭೂಮಿಯನ್ನು ದತ್ತಿಯಾಗಿ ನೀಡಿದ್ದರು. ಹೊಯ್ಸಳರ ದಂಡನಾಯಕನ ಪತ್ನಿ ಪೆರ್ಗಡತಿ ಮಾಚಿಯಕ್ಕಳ ಇಚ್ಛಾಶಕ್ತಿಯಿಂದಾಗಿ ಇಲ್ಲಿನ ಬಸದಿಗಳು ಜೈನ ಯಾತ್ರಾತ್ರಿಗಳಿಗೆ ಪವಿತ್ರ ಕ್ಷೇತ್ರವಾಗಿ ಭಕ್ತರನ್ನು ತನ್ನತ್ತ ಸೆಳೆಯುತ್ತಿವೆ. ಬೆಟ್ಟದ ಮೇಲ್ಬಾಗದಲ್ಲಿರುವ ಮಹಾಪ್ರಕಾರದ ಗೋಡೆಯೊಳಗೆ 5 ಬಸದಿಗಳಿವೆ. 2 ಬಸದಿಗಳು 1008 ಚಂದ್ರನಾಥನಿಗೆ ಅರ್ಪಿಸಲಾಗಿದೆ. ಹೊಯ್ಸಳ ರಾಜರು ಮತ್ತು ಸುದಾತ್ತಾಚಾರ್ಯ ಮುನಿಯವರ ಪ್ರಭಾವದಿಂದ ಜೈನ ಸ್ಮಾರಕಗಳು ಆರಾಧನ ಕೇಂದ್ರಗಳಾಗಿ ಬಸದಿಗಳು ನಿರ್ಮಾಣಗೊಂಡವು. 14ನೇ ಶತಮಾನದ ವೇಳೆಗೆ ಪಾಶ್ರ್ವನಾಥ ಮತ್ತು ಸುಪಾಶ್ರ್ವನಾಥ ಎಂಬ 2 ಬಸದಿಗಳು ನಿರ್ಮಾಣಗೊಂಡಿವೆ. ಈ ಹಿಂದಿನ ಬಸದಿಗಳು ದಕ್ಷಿಣ ಭಾರತ ವಾಸ್ತುಶಿಲ್ಪ ಶೈಲಿಯಾದ ದ್ರಾವಿಡ (8ನೇ ಶತನಮಾನದ) ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿವೆ. ಉತ್ತರ ಭಾರತದ ನಾಗರ ಶೈಲಿಯ ಲಕ್ಷಣಗಳನ್ನು ಇತ್ತೀಚಿನ ಮಾನಸ್ತಂಭಗಳು, ಜೈನಮೂರ್ತಿಗಳ ನಿರ್ಮಾಣದಿಂದ ಮಾತ್ರ ಜೈನ ಕ್ಷೇತ್ರವೆಂದು ಕಂಡುಕೊಳ್ಳಬಹುದಾಗಿದೆ. ಉತ್ತರಭಾರತದ ನಾಗರಿರೇಖೆಯ ಶಿಖರಗಳನ್ನು ಕಾಣಲು ಸಾಧ್ಯವಾಗಿಲ್ಲ. ಪ್ರಶಾಂತವಾದ ಸ್ಥಳದಲ್ಲಿ ತಪಸ್ಸು, ಧ್ಯಾನ, ಸಲ್ಲೇಖನ ವ್ರತಾಚರಣೆಯ ಹಿನ್ನೆಲೆಯಲ್ಲಿ ಪ್ರಸಿದ್ಧ ಯಾತ್ರ ಕ್ಷೇತ್ರವಾಗಿತ್ತು. 5 ಬಸದಿಗಳ ಸುತ್ತಲು ಪ್ರಕಾರದ ಗೋಡೆಯನ್ನು ಸಂರಕ್ಷಣೆಗಾಗಿ ನಿರ್ಮಿಸಲಾಗಿದೆ. ಬಸದಿಗಳ ಒಂದು ಬದಿಯಲ್ಲಿದೆ. ಗಣಧರರ ಪಾದುಕೆಗಳನ್ನು ನಾಲ್ಕು ಅಡಿ ತಳಭಾಗದ ನೆಲಹಂತದಲ್ಲಿ ಸ್ಥಾಪಿಸಲಾಗಿದೆ. 2 ಪಾದಗಳ ಕೆತ್ತನೆ (ಮುದ್ರೆ) ಇದೆ. ಭಗವಾನ್ ಮಹಾವೀರ ತೀರ್ಥಂಕರನ ಸುಂದರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಈ ಮುದ್ರೆಯು ಮಾಹಾವೀರರ ಪಾದದ ಮುದ್ರೆಯಾಗಿದೆ ಎಂಬ ನಂಬಿಕೆ, ಭಕ್ತ ವೃಂದದಲ್ಲಿ ಬಲವಾಗಿ ಬೇರೂರಿದೆ. ಜೈನರ ಆಧ್ಯಾತ್ಮಿಕ ಚೈತನ್ನಕ್ಕೆ ಪ್ರೇರಕ ಶಕ್ತಿಕೇಂದ್ರವಾಗಿದೆ. ಜೈನ ಆಸ್ತಿಕರು, ಸಂತರು, ಧ್ಯಾನ, ಉಪವಾಸ ವ್ರತಾಚರಣೆಗೈದ ಪವಿತ್ರ ಕ್ಷೇತ್ರ. 2012ರಲ್ಲಿ 108 ಪ್ರಣಾಮ ಸಾಗರರು 61 ದಿನಗಳು ಮೌನವಾಗಿ ಚಾತುರ್ಮಾಸವನ್ನು ನಡೆಸಿದರು. ಈ ಬಸದಿ ಗೋಡೆಗಳ ಮೇಲೆ ಮಹಾವೀರರ ಚಿತ್ರಗಳು, ಪ್ರಾಣಿ ಪಕ್ಷಿಗಳು, ಧ್ಯಾನಾಸಕ್ತ ಜೈನ ಮುನಿಗಳ ಚಿತ್ರಗಳನ್ನು ಬಿಡಿಸಲಾಗಿದೆ. ಇಲ್ಲಿನ ಚಿತ್ರಗಳಲ್ಲಿ, ಶಾಂತಿ, ಅಹಿಂಸೆ, ಧ್ಯಾನ, ಪರೋಪಕಾರದಂತಹ ವಸ್ತುವಿಷಯಗಳನ್ನು ಅಭಿವ್ಯಕ್ತ ಗೊಳಿಸುತ್ತಿವೆ. ಪ್ರಕಾರದ ಗೋಡೆಗೆ ಹೊಂದಿಕೊಂಡಂತೆ ಶಾಸನ ಕಲ್ಲನ್ನು ಕಾಣಬಹುದು. ಬಸದಿಯ ಗೋಡೆಗಳಲ್ಲಿ, ಶಾಸನವನ್ನು ಕೊರೆಸಿರುತ್ತಾರೆ. ಈ ಬೆಟ್ಟದ ಬಸದಿಗಳ ಹಿಂಭಾಗದಲ್ಲಿ ಅಂದರೆ ಬೆಟ್ಟದ ಎಡ ಪಾಶ್ರ್ವದಲ್ಲಿ ಪವಿತ್ರ ಗಂಗೆಯ ಕೊಳವಿದೆ. ಈ ಕೊಳವನ್ನು ಬಂಡೆ, ಕೆಂಪು ಮರಳು ಮಿಶ್ರಿತ ಮಣ್ಣಿನಿಂದ ನಿರ್ಮಿಸಿದ್ದು, ಮರಳುಗಾಡಿನಲ್ಲಿ ಅಮೃತÀ ಜಲಧಾರೆಯನ್ನು ಕಾಳುವ ಅನುಭವವಾಗುತ್ತದೆ. ಬಂಡೆಯನ್ನು ಸುತ್ತಿದ ಪ್ರವಾಸಿಗರಿಗೆ ಈ ಕೊಳದ ವೀಕ್ಷಣೆಯಿಂದ ಅಚ್ಚರಿ ವ್ಯಕ್ತವಾಗುತ್ತದೆ. ಅಂದಿನ ದಿನಮಾನಗಳಲ್ಲಿ ಪವಿತ್ರ ಕೊಳವಾಗಿದ್ದು ಧಾರ್ಮಿಕ ವಿಧಿ ವಿಧಾನಗಳಿಗೆ ಉಪಯೋಗಿಸುತ್ತಿದ್ದರೆಂಬ ಪ್ರತೀತ ಇದೆ. ಈ ಪ್ರಕಾರ ಗೋಡೆಯ ಮಧ್ಯಭಾಗದಲ್ಲಿ ಬಸದಿಗಳನ್ನು ನಿರ್ಮಿಸಿದ್ದಾರೆ. ಮುಖ್ಯ ಸ್ಮಾರಕಗಳ ಸನಿಹದಲ್ಲಿ, ಕಾಲಗರ್ಭದಲ್ಲಿ ಸಿಲುಕಿ ಅವಸಾನ ಕಂಡಿರುವ ಸ್ಮಾರಕಗಳ ಅವಶೇಷಗಳಿವೆ. ಪ್ರಕಾರದ ಗೋಡೆಯ ಒಳಗಿನ ಬಸದಿಗಳ ಮುಂಭಾಗದಲ್ಲಿ ಕೂಗೇ ಬ್ರಹ್ಮದೇವರ ಸ್ತಂಭ ನಿರ್ಮಿಸಿದ್ದಾರೆ. ಬೃಹತ್ ಬೆಟ್ಟದ ತುದಿಯಲ್ಲಿ ತಂಪುಗಾಳಿಯ ತರಂಗಗಳ ನಾದ, ಹಿತಕರ ವಾತಾವರಣ ಭಕ್ತಿರಸ ಮತ್ತು ಅಹಲ್ಲಾದಕರ ಅನುಭವ, ವಿಶ್ರಾಂತಿ, ಧ್ಯಾನಗಳಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳ ನಿವಾರಣೆಗೆ ಸೂಕ್ತ ಸ್ಥಳವಾಗಿದೆ. ಜೈನ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತಿದೆ.

            ಸಾಹಸ ಪ್ರವಾಸೋಧ್ಯಮ ಕೇಂದ್ರವಾಗಿ ಮಂದಾರಗಿರಿ ಬೆಟ್ಟ ಸಾಹಸಿ ಪ್ರವಾಸಿಗರಿಗೆ ದೈಹಿಕ ಕಸರತ್ತಿನಲ್ಲಿ ಪಾಲ್ಗೊಳ್ಳುವವರಿಗೆ ಉಪಯುಕ್ತ ನೆಲೆಯಾಗಿದೆ. ದುಂಡಾಕಾರದಲ್ಲಿರುವ ಬಂಡೆಯನ್ನೇರುವುದೇ ಸಾಹಸವಾಗಿದೆ. ಬೆಟ್ಟದ ಬುಡದಿಂದ ತುದಿಯಲ್ಲಿರುವ ಬಸದಿ ಸ್ಥಳ ತಲುಪಲು 435 ಕಿರು ಮೆಟ್ಟಿಲುಗಳನ್ನು ಕೆತ್ತಿಸಿ ಎಲ್ಲಾ ವಯೋಮಾನದ ಭಕ್ತ ಸಮುದಾಯಕ್ಕೆ ಮತ್ತು ಸಾಹಸಿಗರಿಗೆ ಅನುಕೂಲ ಕಲ್ಪಿಸಲಾಗಿದೆ. ಸಾವನದುರ್ಗ, ಮದುಗಿರಿ, ಶಿವಗಂಗೆ ಮಾದರಿಯಲ್ಲಿ ಮಂದಾರಗಿರಿ ಬೆಟ್ಟವು ಟ್ರೆಕ್ಕಿಂಗ್‍ನಲ್ಲಿ ಆಸಕ್ತಿ ಇರುವವರಿಗೆ ಸೂಕ್ತ ಸ್ಥಳವಾಗಿದೆ. ಮಂದಾರಗಿರಿ ಬೆಟ್ಟದ ಇಳಿಜಾರಾದ ಬಂಡೆ, ಬೆಟ್ಟದ ಮೇಲಿರುವ ಕಿರುಬಂಡೆಗಳು ಒಂದರ ಮೇಲೊಂದರಂತಿದ್ದು ಅವುಗಳನ್ನೇರಿ ಸಾಹಸ ಮೆರೆಯುವ ಉತ್ಸಾಹಿಗಳಿಗೆ ವಿಹಾರಿಗಳಿಗೆ ಪ್ರೇರಣೆ ನೀಡುವ ಸ್ಥಳವಾಗಿದೆ. ಈ ಬೆಟ್ಟವನ್ನೇರಲು ಮತ್ತು ಇಳಿಯಲು ಹಲವು ಬಂಡೆಗಳನ್ನೇರಿ ದೈಹಿಕ ಕಸರತ್ತಿನಲ್ಲಿ ಆಸಕ್ತಿ ಇರುವವರಿಗೆ ತನ್ನತ್ತ ಕೈಬೀಸಿ ಕರೆಯುತ್ತದೆ. ಪ್ರತಿಯೊಬ್ಬರಿಗೂ ಈ ಬೆಟ್ಟವನ್ನೇರುವುದು ಅವರ ಸಾಮಥ್ರ್ಯವನ್ನು ಪರೀಕ್ಷಿಸುವ ಪ್ರಯೋಗಾಲಯ ಸ್ಥಳವೆಂಬ ಅಭಿಪ್ರಾಯವಿದೆ. ಬೆಟ್ಟದ ಮೇಲಿರುವ ಬೃಹತ್ ಬಂಡೆಗಳನ್ನೇರಿ ಸುತ್ತಲಿನ ಪ್ರಾಕೃತಿಕ ಸೊಬಗನ್ನು ವೀಕ್ಷಿಸುವುದು ಒಂದು ರೋಮಾಂಚನಕಾರಿ ಅನುಭವವಾಗಿದೆ. ಇದೊಂದು ಸುಂದರ ಧಾರ್ಮಿಕ ಮತ್ತು ಪ್ರಾಕೃತಿಕ ಪರಿಸರ ವಾಗಿದೆ.

            (Fascinating Out look at the peak level) ಬೆಟ್ಟದ ತುದಿಯಲ್ಲಿ ನಿಂತು ಮುಸ್ಸಂಜೆಯ ಸೂರ್ಯ ರಶ್ಮಿಯ ದೃಶ್ಯ ಮನಮೋಹಕವಾಗಿದ್ದು ಆನಂದವನ್ನು ನೀಡುತ್ತಿದೆ. ಬೆಟ್ಟದ ಬದಿಯಲ್ಲಿನ ಮೈದಾಳ ಕೆರೆ ದೃಷ್ಯ ಮನಮೋಹಕ ಆನಂದ ನೀಡುತ್ತದೆ. ದೇವರಾಯನ ದುರ್ಗ, ಶಿವಗಂಗೆಯ ಬೆಟ್ಟ, ರೈತರ ಅಡಕೆ ತೋಟಗಳು, ನಿಜಗಲ್ಲು, ದುರ್ಗ, ಸಿದ್ದರಬೆಟ್ಟ, ಹೆದ್ದಾರಿಯಲ್ಲಿನ ವಾಹನಗಳ ಚಲನವಲನ ರೈಲ್ವೆ ಮಾರ್ಗಗಳು ಚಲಿಸುವ ರೈಲುಗಳ ದೃಷ್ಟಿ, ಬೆಟ್ಟ ಆವರ್ತದಲ್ಲಿ ನಿರ್ಮಿಸಲ್ಪಟ್ಟಿರುವ 81 ಅಡಿ ಎತ್ತರದ ನವಿಲುಗರಿ ಮಾದರಿಯಲ್ಲಿ ನಿರ್ಮಿತವಾದ ಜೈನ ದೇವಾಲಯ, ತೀರ್ಥಂಕರ, ಬಾಹುಬಲಿ ಮಾದರಿಯ ಶಿಲಾಮೂರ್ತಿ, ಧ್ವಜಸ್ಥಂಭ, ಪ್ರಕೃತಿ ಸೊಬಗನ್ನು ಹೆಚ್ಚಿಸಿರುವ ಗಿಡ-ಮರಗಳು ಆರೋಗ್ಯವನ್ನು ವೃದ್ದಿಸಿ, ಮಾನಸಿಕ ಸಮೃದ್ಧಿ ನೀಡುವ ಕ್ಷೇತ್ರವಾಗಿದೆ. (Superb natural Beauty)

            ಮಂದಾರಗಿತಿ ಬೆಟ್ಟದ ಬುಡದಲ್ಲಿ ಪ್ರಪಂಚದ ಯಾವ ಭಾಗದಲ್ಲಿಯೂ ಕಾಣಲಾಗದ 81 ಅಡಿ ಎತ್ತರದ ಪಿಂಚಿ ಮಾದರಿಯ (Pinchi Shaped Peacock Fathers Jain Temple)ನಿರ್ಮಿಸಿರುವ ದಿಗಂಬರ ಜೈನ ಆಚಾರ್ಯ 108ನೇ ಗುರುವಾದ ಶಾಂತ ಸಾಗರ್‍ಜಿ ಮಹಾರ್‍ರವರಿಗೆ ಅರ್ಪಿಸಿರುವ ಗುರುಮಂದಿರ ಅತ್ಯಾಕರ್ಷಕವಾಗಿದೆ. ಈ ಮಂದಿರವನ್ನು ಮೌನಿಭಾಬಾ, ಮುನಿಶ್ರೀ, 108, ಪ್ರಣಮ ಸಾಗರ ಪ್ರೇರಣೆಯಿಂದ ನಿರ್ಮಿಸಲಾಗಿದೆ. ನವಿಲುಗರಿಗಳನ್ನು ಒಂದಕ್ಕೊಂದು ಹೊಂದಿಕೊಂಡಂತೆ, ನವಿಲು ರೆಕ್ಕೆಗಳಲ್ಲಿ ಕಾಣುವ ತಿಳಿ ನೀಲಿ, ಹಸಿರು, ಆರೆಂಜ್ ಬಣ್ಣಗಳಿಂದ (ನಿರ್ಮಿಸಿದ್ದು) ಮಧ್ಯಗಾತ್ರದ ಗೊಮ್ಮಟ ರೂಪದಲ್ಲಿ ಕಂಡು ಬರುವಂತೆ ನಿರ್ಮಿಸಿದ್ದಾರೆ. ಶಾಂತಿ ಸಾಗರ್‍ಜಿ ಮಹರ್‍ರವರ ಗುರು ಮಂದಿರವು ಗುಮ್ಮಟಾಕಾರದ ಮೇಲ್ಚಾವಣಿಯ ಮೇಲ್ಬಾಗದಲ್ಲಿ ನವಿಲುಗರಿಯ ಮುಖ್ಯ ಮೊಗದಂತೆ ಮೇಲೇರಿದ ಈ ದೃಷ್ಯ ಹಲವಾರು ಚಿತ್ರ ಸಮೂಹಗಳಿಂದ ಕೂಡಿರುವಂತೆ ಭಾಸವಾಗುತ್ತವೆ. ಈ ಗುರು ಮಂದಿರದ ನಿರ್ಮಾಣವು ಸ್ವಿಟ್ಜರ್‍ಲ್ಯಾಂಡಿನಲ್ಲಿ ವಾಸ್ತು ಶಿಲ್ಪ ನಿರ್ಮಾಣದ ಅಂಶಗಳನ್ನು ಹೊಂದಿದ್ದರೂ ಸಹ ತನ್ನದೆಯಾದ ವೈಶಿಷ್ಟ್ಯತೆ ಮತ್ತು ವೈವಿದ್ಯಮಯವಾದ (ಆಕರ್ಷಣೆಗಳಲ್ಲಿ) ಶೈಲಿಯ ನಿರ್ಮಾಣವಾಗಿದೆ. ಈ ಮಂದಿರದ ಒಳಭಾಗದಲ್ಲಿ ಗುರುಗಳ ಮೂರ್ತಿಯಂತೆ ಕುಣಿತು ಏಕಾಂತವಾಗಿ (ದ್ಯಾನಿಸುತ್ತಾ) ಯೋಗಿ ಭಂಗಿಯಲ್ಲಿ ಕುಳಿತು ಧ್ಯಾನಮಾಡುವಾಗ ಚಲನ ಶೀಲ ನೀರಿನ ಶಬ್ಧಕೇಳಿ ಬರುತ್ತದೆ. ಈ ಮಂದಿರ ಮಂದಾರಗಿರಿಯ ಆಕರ್ಷಣೆ ಮತ್ತು ಮೌಲ್ಯವನ್ನು ಇಮ್ಮಡಿಗೊಳಿಸಿದೆ. ಕುಂತುಗಿರಿ, 108, ಪಿಂಚಿದಾರಿ ಸಂಘದ ವತಿಯಿಂದ ಶ್ರೀ ದೇವನಂದಿ ಮಹಾರಾಜರು 16-5-2013ರಲ್ಲಿ ಈ ಜೈನ ಪಿಂಚಿ ಮಂದಿರವನ್ನು ಲೋಕಾರ್ಪಣೆಗೊಳಿಸಿದರು. ಭಾರತದಲ್ಲಿ ಜೈನ ದಿಗಂಬರ ಕ್ಷೇತ್ರ ಶ್ರವಣಬೆಳಗೊಳ, ಧರ್ಮಸ್ಥಳದ ವೀರೇಂದ್ರ ಹೆಗ್ಡೆ, ಭಟ್ಟಾಚಾರ್ಯ, ಜೈನಮುನಿಗಳ ಸಾಂಘಿಕ ಪ್ರಯತ್ನದ ಫಲವಾಗಿ ವ್ಯಾಪನೀಯ ಕ್ಷೇತ್ರವೆನಿಸಿದ್ದ ಮಂದಾರಗಿರಿ ದಿಗಂಬರ ಕ್ಷೇತ್ರವಾಗಿ ಮೂಲತತ್ವ ಇತಿಹಾಸದತ್ತ ಪುನರಾವಲೋಕನದತ್ತ ಪ್ರಕ್ರಿಯೆ ನಡೆಯುತ್ತಿದೆ.


            2006ರಲ್ಲಿ ಕ್ರಾಂತಿಕಾರಿ ರಾಷ್ಟ್ರಸಂತ ಇಲ್ಲಿಗೆ ಬೇಟಿ ನೀಡಿದ್ದರು. ಪರಮಪೂಜ್ಯ, 108, ಪ್ರಮುಖ ಸಾಗರ್ ಮುನಿರಾಜರು 2007ರಲ್ಲಿ ಚಾತುರ್ಮಾಸಕ್ಕಾಗಿ ಆಗಮಿಸಿ 2 ತಿಂಗಳು ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ಪ್ರೇರಣೆ ನೀಡಿದರು. 21 ಅಡಿ ಎತ್ತರದ ಚಂದ್ರಪ್ರಭ ತೀರ್ಥಂಕರರ ಮೂರ್ತಿ ಮತ್ತು 50 ಅಡಿ ಎತ್ತರದ ಮಾನಸ್ಥಂಬ ನಿರ್ಮಾಣಕ್ಕೆ ಅಸ್ತಿಭಾರ ಹಾಕಲಾಯಿತು. 2008ರಲ್ಲಿ ಗಜಧರ್ಮೋತ್ಸವ ವಿಜೃಂಭಣೆಯ ಅವಧಿಯಲ್ಲಿ ಚಾಲನೆ ದೊರೆಯಿತು. ಪರಿಣಾಮವಾಗಿ ಗುರುಮಂದಿರದ ಸಮೀಪದಲ್ಲಿ 2011ರಲ್ಲಿ ನಿರ್ಮಿಸಲ್ಪಟ್ಟ ಚಂದ್ರನಾಥ ತೀರ್ಥಂಕರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರವಣಬೆಳಗೊಳದ ಬಾಹುಬಲಿಯನ್ನು ಹೋಲುವ ವೈರಾಗ್ಯಮೂರ್ತಿಯಾಗಿದೆ. ಈ ಮೂರ್ತಿಯ ಮುಂಭಾಗದಲ್ಲಿ ಶಾಂತಿ, ಸೌಹಾರ್ಧತೆಯ ಪ್ರತೀಕವಾಗಿ ಹುಲಿಯ ಹಾಲನ್ನು ಹಸುವಿನ ಕರುವೊಂದು ಕುಡಿಯುತ್ತಿರುವಂತೆ ಮತ್ತೆ ಹುಲಿಯ ಮರಿಯೊಂದು ಹಸುವಿನ ಮೊಲೆಹಾಲನ್ನು ಹೀರುತ್ತಿರುವಂತಹ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಚಂದ್ರನಾಥ ತೀರ್ಥಂಕರರ ಏಕಶಿಲಾ ಮೂರ್ತಿಯ ಮುಂಭಾಗದಲ್ಲಿ ಮಾನಸ್ತಂಭವನ್ನು ನಿರ್ಮಿಸಿದ್ದಾರೆ. ಮುಖ ಮಂಟಪದ ಮುಂಭಾಗದಲ್ಲಿ 50 ಅಡಿ ಎತ್ತರದ ಮಾನಸ್ಥಂಭ ನಿರ್ಮಿಸಿದ್ದಾರೆ. ನಿರ್ಮಿಸಿರುವ ಈ ಸ್ತಂಭವು ಜೈನ ವಾಸ್ತುಶಿಲ್ಪ ಪರಂಪರೆಯ ಲಕ್ಷಣಗಳ ಪ್ರತೀಕವಾಗಿದೆ. 2012ರಲ್ಲಿ ಪುಷ್ಪದಂತ ಸಾಗರ ಪ್ರಿಯಶಿಷ್ಯ ಮುನಿಶ್ರೀ 108 ಪ್ರಣಾಮ ಸಾಗರರು ಬೆಟ್ಟದ ಮೇಲೆ 61 ದಿನವಸಗಳು ಮೌನವ್ರತ ಆಚರಿಸಿದರು. ಬೆಟ್ಟದ ಮೇಲಿರುವ 5 ಜೈನಮಂದಿರಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ರಾಜರ್ಷಿ ಶ್ರೀ ಡಿ. ವೀರೇಂದ್ರ ಹೆಗ್ಗಡೆರವರು ತಮ್ಮ ಟ್ರಸ್ಟ್‍ವತಿಯಿಂದ ಇಂದು ಕಾಣುವ ರೂಪದಲ್ಲಿ ಜೀರ್ಣೋದ್ಧಾರ ಕಾರ್ಯವನ್ನು 12 ಲಕ್ಷ ರೂಪಾಯಿಗಳ ವೆಚ್ಚದಿಂದ ನೆರವೇರಿಸಿಕೊಟ್ಟಿದ್ದಾರೆ.

            ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಜನವರಿ ತಿಂಗಳ ಮಕರ ಸಂಕ್ರಮಣದ ದಿನಗಳಲ್ಲಿ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಜೈನ ಪರಂಪರೆಯ ಆಧ್ಯಾಮಿಕ ಕಾರ್ಯಕ್ರಮಗಳನ್ನು ಅತಿ ವಿಜೃಂಭಣೆಯಿಂದ ಸಾಂಪ್ರದಾಯಿಕವಾಗಿ ನೆರವೇರಿಸಲಾಗುತ್ತದೆ. ಅಖಿಲ ಭಾರತದಾದ್ಯಂತ ಜೈನ ಧರ್ಮೀಯರು ಸೇರಿದಂತೆ ಶ್ರೀ ಕ್ಷೇತ್ರದ ನೆರೆಹೊರೆಯ ಗ್ರಾಮಸ್ಥರು ಉತ್ಸುಕರಾಗಿ ಪಾಲ್ಗೊಳ್ಳುತ್ತಾರೆ. ಆಚಾರ್ಯ ಮುನಿವರ್ಯರ ಕೃಪೆಗೆ ಪಾತ್ರರಾಗುವ ಪ್ರತೀತಿಯನ್ನು ರೂಡಿಸಿಕೊಂಡಿದ್ದಾರೆ.

            ಜೈನರು ಶಕ್ತಿ ದೇವತೆಯ ರೂಪದಲ್ಲಿ ಜ್ವಾಲಮಾಲಿನಿ, ಯಕ್ಷ ಯಕ್ಷಿಣಿಯರ ಆರಾಧನೆಯಲ್ಲಿ ನಂಬಿಕೆ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಜ್ವಾಲಾ ಮಾಲೀನಿ ಅಮ್ಮನವರ ಕಿರುಮಂದಿರವಿದ್ದು ಧ್ಯಾನದ ಸ್ಥಳವಾಗಿ ಮಾರ್ಪಡಿಸಿಕೊಂಡಿದ್ದಾರೆ. ದೇವಾಲಯದ ನಿರ್ಮಾಣಕ್ಕೆ ಆಡಳಿತ ಮಂಡಳಿಯವರು ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

            ಪರಂಪರೆಯಿಂದ ಆರಾದಿಸುವ ದೇವರನ್ನು ಬೌಧಿಕ ಮಿತಿಗೆ ನಿಲುಕದ, ಮಾನಸಿಕ ಭಾವನೆಗಳಿಗೆ, ಕಲ್ಪನೆಗಳಿಗೆ ತಮ್ಮ ಸಾಮಾಜಿಕ ಹಿತಿಮಿತಿಯ ಚೌಕಟ್ಟಿನೊಳಗೆ ಜೀವ ತುಂಬಿ ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಪರಿವರ್ತಿಸಿಕೊಂಡು ಉತ್ತಮ ಮೌಲ್ಯವೆಂದು ಗುರುತಿಸಿಕೊಂಡ ಅಂಶಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಮಾನವರು ಪಾಲಿಸಿಕೊಂಡು ಬಂದಿರುವ ಧರ್ಮ, ರಚಿಸಿರುವ ಸಾಹಿತ್ಯ, ನಿರ್ಮಿಸಿರುವ ಸ್ಮಾರಕಗಳು, ಸಂಗೀತ, ನೃತ್ಯ ಇತ್ಯಾದಿ ಅಂಶಗಳು ಕರ್ನಾಟಕದಲ್ಲಿ ಶಾಸನಗಳು, ಗ್ರಂಥಗಳು, ಜಾಗತಿಕ ಸಂಸ್ಕೃತಿಗೆ ನೀಡಿದ ಹಿರಿದಾದ ಕಾಣಿಕೆಗಳಾಗಿವೆ.

            ಬಹುಮುಖಿ ಪ್ರವಾಸಿ ಕ್ಷೇತ್ರದಲ್ಲಿ ತ್ಯಾಗಿ ನಿವಾಸ, ಅತಿಥಿ ಗೃಹ, ಯಾತ್ರಿಕರಿಗೆ ಶ್ರೀ ಚಂದ್ರ ಪ್ರಭು ಪ್ರಸಾದ ನಿಲಯ, ಯುವ ವಿದ್ಯಾರ್ಥಿ ಸಮುದಾಯದವರಿಗೆ ರಾಷ್ಟ್ರೀಯ ಸೇವಾ ಯೋಜನಾರ್ಥಿಗಳಿಗೆ ವಸತಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪ್ರಸ್ತುತ 30 ಎಕರೆಯಷ್ಟು ಪರಿಸರದ ಭಾಗವನ್ನು ಸ್ವಾಧೀನದಲ್ಲಿ ಹೊಂದಿದ್ದು, ಕ್ಷೇತ್ರಕ್ಕೆ ಆಗಮಿಸುವ ಆಸಕ್ತಕರಿಗೆ ಮತ್ತಷ್ಟು ಸೇವಾ ಸೌಲಭ್ಯಗಳನ್ನು ಕಲ್ಪಿಸುವತ್ತ ಆಡಳಿತ ಮಂಡಳಿಯವರು ಗಮನಹರಿಸಬೇಕು. ಮತ್ತು ಸುಂದರ ಪರಿಸರ ಮಲೀನವಾಗದಂತೆ ಹಾಗೂ ಪ್ರವಾಸಿಗರಿಗೆ ಯಾವ ರೀತಿಯಿಂದಲೂ ಅನಾನುಕೂಲವಾಗದಂತೆ, ಜಾಗರೂಕತೆ ವಹಿಸುವುದು ಜರೂರಿನ ಕರ್ತವ್ಯವಾಗಿದೆ. ಆ ಮೂಲಕ ಈ ಕ್ಷೇತ್ರವನ್ನು ರಮ್ಯ ಪ್ರವಾಸಿ ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ರೂಪಿಸಿಕೊಳ್ಳಬಹುದು.

Reference

  1. Epigraphic of KARNAKATA – B.L. Rise, Tumkur-38-12
  2. B.A. Saltore – Medivil Jainism – Page – 36
  3. Mysore Arcalogical Report
  4. Tumkur District Gazetier
  5. Padmanaba S. Jainy – The jain Path of Purification, Gender & Salvation
  6. Christoper Key Chapple Jainism & Ecology
  7. Dibakar Mohanthi, - Jainism & Indian Philosophy
  8. R.B.P. Singh Jainism in early  medival Karnataka-Motilal Publishers
  9. Kumar Brijesh Piligrim Centers of India. Dymond Publisher book pvt. Ltd.
  10. Chaugh Lalith, Karnataka’s Rich Heritage & Art & Architecture, nation Press, Hosala Period 
  11. Sangavi vilas adhinath – aspects of jain releasing popular prakasha – 2001
  12. Harman Jacobi Jain Sutral – 1884
  13. ಪಂಡಿತ ಶಾಂತರಾಜ್ ಶಾಸ್ತ್ರಿ – ಕನ್ನಡ ನಾಡಿನ ವೀರ ಜೈನ ಮಹಿಳೆಯರು
  14. ಕನ್ನಡ ಶಾನಗಳ ಸಾಂಸ್ಕೃತಿಕ ಅಧ್ಯಯನ ಎಂ. ಚಿದಾನಂದ ಮೂರ್ತಿ, ಪ್ರಸಾರಂಗ ಮೈಸೂರು ವಿಶ್ವವಿದ್ಯಾಲಯ - 1979
  15. ಬಾಹುಬಲಿ ಬಾಬು ಟಿ.ಎಸ್. ರವರ ಸಂದರ್ಶನ – ಆಚಾರ್ಯ ಶಾಂತಿಸಾಗರ ಗುರುಮಂದಿರ ಸಮಿತಿಯ ಸದಸ್ಯರು,
  16. ಡಾ. ಪದ್ಮಪ್ರಸಾ ಎಸ್.ಪಿ. – ಜೈನ ವಿಧ್ವಾಂಸರ ಸಂದರ್ಶನ
  17. ಈ ರೀತಿಯ ಆಡಳಿತ ಮಂಡಳಿಯ ಮೇಲ್ವಿಚಾರಕರು, ಸದಸ್ಯರ ಸಂದರ್ಶನ
  18. ಕ್ಷೇತ್ರ ಕಾರ್ಯ - ನಾನು ಕಂಡಂತೆ


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal