ಕಲಿಕೆಗಾಗಿ ಅಭಿಪ್ರೇರಣೆಯ ಪ್ರಾಮುಖ್ಯತೆ
ಡಾ. ಯೋಗೀಶ್ ಎನ್
ಸಹಾಯಕ ಪ್ರಾಧ್ಯಾಪಕರು, ಗಣಿತಶಾಸ್ತ್ರ ವಿಭಾಗ
ಸರ್ಕಾರಿ ಪ್ರಥಮದರ್ಜೆ ಕಾಲೇಜು
ತುಮಕೂರು, ಕರ್ನಾಟಕ, ಭಾರತ
ಪೀಠಿಕೆ
ತರಗತಿಯ ಕಲಿಕಾ ಸನ್ನಿವೇಶದಲ್ಲಿ ಪೂರಕವಾದ ಮತ್ತು ಉತ್ತಮವಾದ ಅಭಿಪ್ರೇರಣೆಯನ್ನು ಹಂತ ಹಂತವಾಗಿ ನೀಡುತ್ತಾ ಬಂದರೆ ಮತ್ತು ಅವುಗಳನ್ನು ವಿದ್ಯಾರ್ಥಿಗಳು ಪಾಲಿಸುವಂತೆ ಮಾಡಿದರೆ ಸಮೂಹದಲ್ಲಿ ಉತ್ತಮ ಕಲಿಕೆ ಉಂಟಾಗುತ್ತದೆ.
ಅಭಿಪ್ರೇರಣೆ
“ಮಾನವ ಜೀವಿಯು ಒಂದು ನಿರ್ದಿಷ್ಠರೀತಿಯಲ್ಲಿ ವರ್ತಿಸುವಂತೆ ಪ್ರೋತ್ಸಾಹಿಸುವ ಕ್ರಿಯೆಯೇ ಅಭಿಪ್ರೇರಣೆ”
ಕ್ರೌ ಮತ್ತು ಕ್ರೌನ ಪ್ರಕಾರ “"ಅಭಿಪ್ರೇರಣೆಯನ್ನು ಕಲಿಕೆಗಾಗಿ ಹುಟ್ಟುವ ಆಸಕ್ತಿ ಮತ್ತು ಕಲಿಕೆಯ ವಿಸ್ತಾರಕ್ಕೆ ಮೂಲ ಎಂದು ತಿಳಿಯಬಹುದು".
ಅಭಿಪ್ರೇರಣೆ ವಿಧಗಳು
1. ಸ್ವಾಭಾವಿಕ ಅಥವಾ ಆಂತರಿಕ ಅಭಿಪ್ರೇರಣೆ
2. ಕೃತಕ ಅಥವಾ ಬಾಹ್ಯ ಅಭಿಪ್ರೇರಣೆ
1. ಆಂತರಿಕ ಅಭಿಪ್ರೇರಣೆ
ಆಂತರಿಕ ಅಭಿಪ್ರೇರಣೆಯು ಆನುವಂಶೀಯ ಗುಣ ವಿಶೇಷಣಗಳಿಗೆ ಸಂಬಂಧಿಸಿದ ವಿಚಾರ. ವ್ಯಕ್ತಿ ಚಟುವಟಿಕೆಯಲ್ಲಿ ಕಾರ್ಯೋನ್ಮುಖನಾದಾಗ ತಾನು ಆಸಕ್ತಿ ಹೊಂದಿ ಅದನ್ನು ಮುಂದುವರಿಸಬಹುದು ಇಲ್ಲವೆ ವಿಷಯದ ಆಂತರಿಕ ಮೌಲ್ಯವನ್ನು ಗುರುತಿಸಿ ಅಭಿಪ್ರೇರಣೆಗೆ ಒಳಗಾಗಬಹುದಾದ ಇಂತಹ ಪ್ರೇರಣೆಯನ್ನು ಆಂತರಿಕ ಪ್ರೇರಣೆ ಎನ್ನುತ್ತೇವೆ.
ಮಗುವನ್ನು ಆಂತರಿಕ ಪ್ರೇರಣೆಗೆ ಒಳಪಡಿಸುವುದು ಒಳ್ಳೆಯದು.
ಆಂತರಿಕ ಅಭಿಪ್ರೇರಣೆಗೆ ಉದಾಹರಣೆ :-
2. ಬಾಹ್ಯ ಅಭಿಪ್ರೇರಣೆ
ಒಂದು ವೇಳೆ ಮಗು ಆಂತರಿಕ ಪ್ರೇರಣೆಗೆ ಒಳಗಾಗದಿದ್ದಾಗ ಉತ್ತೇಜಕÀಗಳ ಮೂಲಕ ಬಾಹ್ಯವಾಗಿ ಪ್ರೇರೇಪಿಸಬೇಕು. ಬಾಹ್ಯ ಪ್ರೇರಣೆಯಲ್ಲಿ ಮಗುವು ಯಾವುದೋ ಬಾಹ್ಯ ಉತ್ತೇಜನಕ್ಕಾಗಿ ಕಲಿವಿನಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ.
ಬಾಹ್ಯ ಅಭಿಪ್ರೇರಣೆಗೆ ಉದಾಹರಣೆ :-
ಕೆಲವು ಸಾಮಾನ್ಯ ಪ್ರಕಾರಗಳ ಬಾಹ್ಯ ಅಭಿಪ್ರೇರಣೆ
1. ಹೊಗಳಿಕೆ ಮತ್ತು ತೆಗಳಿಕೆ
ಇವು ಬಾಯಿಮಾತಿಗೆ ಸಂಬಂಧಿಸಿದ ಬಹುಮಾನ ನೀಡುವ ಹಾಗೂ ಶಿಕ್ಷೆ ನೀಡುವ ಪ್ರಚೋದನೆಗಳಾಗಿವೆ. ಈ ಉತ್ತೇಜನಗಳು ಹೆಚ್ಚು ಪರಿಣಾಮಕಾರಿಯಾಗುವುದು ಯಾವಾಗ ಎಂದರೆ ಕಲಿಯುವವನು ಯಾರಲ್ಲಿ ಗೌರವ ಇಟ್ಟಿರುತ್ತಾನೋ ಅಂತಹ ವ್ಯಕ್ತಿಯಿಂದ ಬಂದಾಗ, ಸರಿಯಾಗಿ ಉಪಯೋಗಿಸಿದರೆ ಈ ಎರಡೂ ಉಪಯುಕ್ತವಾಗಿರುತ್ತವೆ. ಕೆಲವು ಅಧ್ಯಯನಗಳು ವಯಸ್ಸು ಅಥವಾ ಲಿಂಗಭೇದವಿಲ್ಲದೆ ಹೊಗಳಿಕೆ ತೆಗಳಿಕೆಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಸಲಹೆ ಮಾಡಿವೆ.
2. ಬಹುಮಾನ ಮತ್ತು ಶಿಕ್ಷೆ
ಈ ಎರಡು ಹೊಗಳಿಕೆ ಮತ್ತು ತೆಗಳಿಕೆಯನ್ನು ಹೆಚ್ಚು ಮೂರ್ತವಾಗಿ ವ್ಯಕ್ತಪಡಿಸುವಂತಹವು. ಬಹುಮಾನಗಳು ಸಂತೋಷಕರ ಭಾವನೆಗಳನ್ನುಂಟು ಮಾಡುತ್ತವೆ ಮತ್ತು ಅಪೇಕ್ಷಿತ ಕಲಿಕಾ ಚಟುವಟಿಕೆಯನ್ನು ಪುನರುಚ್ಚರಿಸಲು ಪ್ರಬಲವಾಗಿ ಹುರಿದುಂಬುವಂತೆ ಮಾಡುತ್ತವೆ. ಅನೇಕ ಶಾಲೆಗಳಲ್ಲಿ ಕೇವಲ ಕೆಲವೇ ವಿದ್ಯಾರ್ಥಿಗಳು ಯಾವಾಗಲೂ ಬಹುಮಾನ ಪಡೆಯುವುದನ್ನು ಕಾಣಬಹುದು. ಪರಿಣಾಮವಾಗಿ ಬಹುಮಾನ ಒಬ್ಬನಿಗೋ ಇಬ್ಬರಿಗೋ ಸಿಕ್ಕುತ್ತದೆ. ಪದೇ ಪದೇ ಇಂಥವರನ್ನು, ಬಹುಮಾನಗಳು ಕಲಿಕೆಗೆ ಪ್ರೇರೇಪಿಸುವುದಿಲ್ಲ. ಹೀಗಾಗದಂತೆ ಶಿಕ್ಷಕರು ಗಮನವಹಿಸಬೇಕು.
ಇದೇ ರೀತಿ ಶಿಕ್ಷೆ ಕೆಲವು ಅನುಕೂಲಗಳನ್ನು ಮತ್ತು ಕೆಲವು ಅನಾನುಕೂಲಗಳನ್ನು ಹೊಂದಿದೆ. ಅದು ಕೆಲವು ಸಾರಿ ಶಿಸ್ತಿನ ಸಾಧನದಂತೆ ವರ್ತಿಸಬಹುದು. ತಪ್ಪು ಮಾಡುವುದನ್ನು ತಾತ್ಕಾಲಿಕವಾಗಿ ತಡೆಯುವ ಶಕ್ತಿ ಶಿಕ್ಷೆಗೆ ಇದೆ. ಆದ್ದರಿಂದ ಉತ್ತಮ ಅಭ್ಯಾಸಗಳ ಮತ್ತು ಶಿಸ್ತಿನ ಬೆಳವಣಿಗೆಗೆ ಶಿಕ್ಷೆ ಒಂದು ಪ್ರಭಾವಶಾಲೀ ಪ್ರೇರಕ ಆಗಬಲ್ಲದು. ದಂಡಿಸಿದ್ದು ತನ್ನನ್ನು ಅಲ್ಲ, ತನ್ನ ತಪ್ಪು ಕಲಿಕೆಗೆ ಎಂಬ ಅರಿವು ವಿದ್ಯಾರ್ಥಿಯಲ್ಲಿ ಮೂಡಿಸಿದರೆ ಮಾತ್ರ ಶಿಕ್ಷೆ ಪರಿಣಾಮಕಾರಿ ಪ್ರೇರಕವಾಗುತ್ತದೆ. ಕಲಿಯುವ ವ್ಯಕ್ತಿಯಲ್ಲಿ ಶಿಕ್ಷೆ ಭಯವನ್ನು ಉತ್ಪಾದಿಸುವುದರಿಂದ, ಅವರಿಗೆ ಅತೃಪ್ತಿಯನ್ನು ಉಂಟುಮಾಡುವುದರಿಂದ, ಅತಿಯಾದಲ್ಲಿ ಕಲಿಕೆಗೆ ಪ್ರತಿಕೂಲ ಮಾನಸಿಕ ಸ್ಥಿತಿಯನ್ನು ಉಂಟುಮಾಡುತ್ತದೆ. ಬಹುಮಾನದ ಪ್ರಮಾಣ ಹೆಚ್ಚು ಇರುವ ಬಹುಮಾನ ಶಿಕ್ಷೆ ಮಿಶ್ರಣವನ್ನು ಸಮಯೋಚಿತವಾಗಿ ಶಿಕ್ಷಕ ಬಳಸಬೇಕು.
3. ಸ್ಪರ್ಧೆ ಮತ್ತು ಸಹಕಾರ
ಸ್ಪರ್ಧೆ ಮಕ್ಕಳ ಅನೇಕ ಮಾನಸಿಕ ಅಗತ್ಯತೆಗಳನ್ನು ಪೂರೈಸುತ್ತದೆ. ಸ್ಪರ್ಧೆ ಕಲಿಕೆಯಲ್ಲಿ ಉತ್ಸಾಹ ಮೂಡಿಸಿ, ಸ್ವಯಂ ಕಲಿಕೆಗೆ ವಿದ್ಯಾರ್ಥಿಯನ್ನು ಪ್ರೇರೇಪಿಸುತ್ತದೆ. ಸಾಮರ್ಥ್ಯಕ್ಕೆ ಮೀರಿದ ಸ್ಪರ್ಧೆ, ಅತಿ ತೀವ್ರವಾದ ಸ್ಪರ್ಧೆ ವ್ಯಕ್ತಿಯ ಮೇಲೆ ಅಹಿತಕರ ಪರಿಣಾಮ ಉಂಟು ಮಾಡುತ್ತದೆ. ಸ್ಪರ್ಧೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಧೋರಣೆ ಬೆಳೆದು ವಿದ್ಯಾರ್ಥಿ ಅನೈತಿಕ ವಿಧಾನ ಅನುಸರಿಸದಂತೆ ಎಚ್ಚರಿಕೆ ವಹಿಸಬೇಕು. ಸ್ಪರ್ಧೆ ಮತ್ತು ಸಹಕಾರವನ್ನು ಸಂಯೋಜಿಸಿ ಸಮೂಹ ಸ್ಪರ್ಧೆಗಳನ್ನು ಪ್ರೇರಕವಾಗಿ ಬಳಸಿದರೆ ತೀವ್ರ ವೈಯಕ್ತಿಕ ಸ್ಪರ್ಧೆಯ ಹಾನಿಕಾರಕ ಪರಿಣಾಮಗಳನ್ನು ನಿವಾರಿಸಬಹುದು. ಸ್ಪರ್ಧೆಯ ಅನುಕೂಲಗಳೆಂದರೆ,
4. ಗುರಿಯನ್ನು ರೂಪಿಸುವುದು
ಅಭಿಪ್ರೇರಣೆ ಒಂದು ಗುರಿ ನಿರ್ದೇಶಿತ ವರ್ತನೆ. ಉಪಾಧ್ಯಾಯ ಕಲಿಯುವವನಿಗೆ ಅಣಿಗೊಳಿಸುವಂತಹ ಗುರಿ ಅಥವಾ ಕಲಿಯುವವನು ತನ್ನಷ್ಠಕ್ಕೆ ತಾನೇ ಗುರಿಯನ್ನು ಅಣಿಮಾಡಿಕೊಳ್ಳುವುದು ಕಲಿಕೆಯ ಚಟುವಟುಕೆಯನ್ನು ನಿರ್ದೇಶಿಸುವಲ್ಲಿ ಮತ್ತು ಕಾಪಾಡಿಕೊಳ್ಳುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
5. ಪ್ರಗತಿಯ ಅರಿವು
ಸಂಶೋಧನಾ ಸಾಕ್ಷ್ಯಾಧಾರಗಳು ದೃಢೀಕರಿಸಿರುವ ಸಾಮಾನ್ಯ ನಂಬಿಕೆ ಏನೆಂದರೆ ಪ್ರಗತಿಯ ಸ್ಪಷ್ಠತೆಯ ಸಂಹಚರ್ಯ ಮುಂದಿನ ಪ್ರಯತ್ನಗಳನ್ನು ಉದ್ದೀಪನಗೊಳಿಸುತ್ತದೆ. ಚಿಕ್ಕ ಮಕ್ಕಳಿಗೆ ಪ್ರಗತಿಯ ವರದಿಗಳು ಬೆಲೆಯನ್ನು ಕಟ್ಟಲಾಗದಂತಹವು. ಯಶಸ್ವಿ ಸಾಧನೆಗೆ ಅವಕಾಶಗಳನ್ನು ಒದಗಿಸಬೇಕು. ಹಲವಾರು ಅಪಜಯಗಳು ವಿದ್ಯಾರ್ಥಿಗಳನ್ನು ಅಸ್ಥಿರಗೊಳಿಸುತ್ತವೆ ಮತ್ತು ಹತಾಶ ಮನೋಭಾವನೆಯನ್ನು ಬೆಳೆಸುತ್ತವೆ. ಕೆಲಸ ವಿದ್ಯಾರ್ಥಿಯ ಸಾಮರ್ಥ್ಯದ ಮಿತಿಯಲ್ಲಿರಬೇಕು. ಆದರೆ ಸಾಧನೆಯ ಪ್ರಯತ್ನದಲ್ಲಿ ಸವಾಲಾಗುವಷ್ಟು ಕಷ್ಠವಾಗಿರಬೇಕು.
ಇವುಗಳಲ್ಲೆ ಇನ್ನು ಕೆಲವು ವಿಧಾನಗಳನ್ನು ಬೆಳಸಬೇಕು.
ತೀರ್ಮಾನ
ಒಟ್ಟಿನಲ್ಲಿ ಹೇಳುವುದಾದರೆ, ಒಂದು ನಿರ್ದಿಷ್ಠ ಸನ್ನಿವೇಶದಲ್ಲಿ ನಿರ್ದಿಷ್ಠ ಗುರಿಯನ್ನು ತಲುಪಲು ಕಾರ್ಯೋನ್ಮುಖವಾಗುವಂತೆ ಮಾಡುವ ಮಾನವ ಜೀವಿಯ ಆಂತರಿಕ ಸ್ಥಿತಿಯೇ ಅಭಿಪ್ರೇರಣೆ.
ಆದ್ದರಿಂದ ಯಾವ ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ಇರುವುದಿಲ್ಲವೋ ಅವರಿಗೆ ಪ್ರಚೋದನೆಯ ಮೂಲಕ ಅಭಿಪ್ರೇರಣೆಯನ್ನು ಸೃಷ್ಠಿಸುವುದಾಗಿದೆ.
ಉಲ್ಲೇಖ ಪುಸ್ತಕಗಳು