Tumbe Group of International Journals

Full Text


ಹಂಪಿಯ ಐತಿಹ್ಯಗಳ ಸಾಂಸ್ಕೃತಿಕ ದೃಷ್ಟಿಕೋನ.

ನೀಲಪ್ಪ ಎಸ್.

ಪಿಎಚ್.ಡಿ., ಸಂಶೋಧನಾ ವಿದ್ಯಾರ್ಥಿ,

ಜಾನಪದ ಅಧ್ಯಯನ ವಿಭಾಗ,

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ-583276.

ಮೊ. ಸಂ-9880189581.

Email-sneelappa@gmail.com

ಪ್ರಸ್ತಾವನೆ.

ಹಂಪಿ ಎಂದಾಕ್ಷಣ ನಮಗೆ ನೆನಪಾಗುವುದು ವಿರೂಪಾಕ್ಷನ ದೇವಾಲಯ, ಭಗ್ನ ವಿಠ್ಠಲ ದೇವಾಲಯ, ಕಲ್ಲಿನ ರಥ, ಬಡವಿ ಲಿಂಗ, ಉಗ್ರ ನರಸಿಂಹ, ಹಾಳಬಿದ್ದ ಮಂಟಪಗಳು, ಅರಮನೆ, ನಾಲ್ಕು ಮನೆಗಳು, ಚಾರಿತ್ರಿಕ ನೋಟ, ಕಲೆ, ಸಾಹಿತ್ಯ, ಪೌರಾಣಿಕ, ಧಾರ್ಮಿಕ, ಸಾಮಾಜಿಕ ಜೀವನ, ಪ್ರಾಕೃತಿಕ ಸೌಂದರ್ಯಗಳ ಕಲಾವಂತಿಕೆ  ಜನರ ಸಾಮರ್ಥ, ರಾಜಕೀಯ ಸೊಬಗು, ಹಲವಾರು ಘಟನೆಯ ದೃಶ್ಯಗಳು ಸಮಾಜದಲ್ಲಿ ವಿಭಿನ್ನವಾಗಿ ರಚನೆಗೊಂಡಿರವುವು. ಇತಿಹಾಸದಲ್ಲಿ ಹಾಗೂ ವಿಶ್ವ ಪರಂಪರೆಯಲ್ಲಿ ಪ್ರಸಿದ್ದ ಪಡೆದುಕೊಂಡಿರುವ ಒಂದು ಧಾರ್ಮಿಕ ಕ್ಷೇತ್ರವಾಗಿ ಬೆಳೆದಿರುವ ತಾಣವಾಗಿದೆ. ವಿಶೇಷವಾಗಿ ಹೇಳುವುದಾದರೆ ವಿಜಯನಗರ ಸಾಮ್ರಾಜ್ಯ ಜನಸಾಮಾನ್ಯರ ಮನದಲ್ಲಿ ಮಾಸದ ನೆನಪಿನ ಗಣಿಯಾಗಿದೆ ನಕ್ಷತ್ರದ ಬೆಳಕಿನಂತೆ ಮೆರಗುವ ಪ್ರಭುದ್ಧ ನೆಲೆಯಾಗಿದೆ. ಈ ಕ್ಷೇತ್ರದಲ್ಲಿ ಸ್ಮಾರಕಗಳು, ಬೃಹತ್ ಏಕಶಿಲೆಗಳು, ಪ್ರಪಂಚದಲ್ಲಿ ದೃಡವಾಗಿ ನಿಂತಿರುವ ಕಲೆಯಾಗಿವೆ. ಹಂಪಿಯು ರಾಜಕೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಮಹತ್ವ ಸ್ಥಾನ ಪಡೆದುಕೊಂಡಿದೆ. ಮೊದಲಿಗೆ ಹೊಯ್ಸಳ ವೀರಬಲ್ಲಾಳನ ಕಾಲದಲ್ಲಿ ಚಿಕ್ಕ ಕೇಂದ್ರವಾಗಿ ಕಂಡುಬರುವ ಹಂಪಿ ನಂತರ ದಿನಗಳಲ್ಲಿ ಒಂದು ಸಾಮ್ರಾಜ್ಯದ ರಾಜಧಾನಿಯಾಗಿ ಅದರ ನಿರ್ಮಾಣಕ್ಕೆ ಸ್ಪೂರ್ತಿದಾಯಕವಾಗಿದೆ.

ಹಂಪಿಯಲ್ಲಿನ ಐತಿಹ್ಯಗಳು ಮತ್ತು ಸ್ಥಳಪುರಾಣಗಳು, ಸುತ್ತಮುತ್ತಲ ಪ್ರದೇಶದ ಪ್ರಾಚೀನತೆಯನ್ನು ರಾಮಾಯಣ ಹಾಗೂ ಅದಕ್ಕೂ ಹಿಂದಿನ ಕಾಲಕ್ಕೆ ಒಯ್ಯತ್ತವೆ. ಈ ಕ್ಷೇತ್ರವು ಸಾಮಾಜಿಕವಾಗಿ, ಧಾರ್ಮಿಕವಾಗಿ, ಪೌರಾಣಿಕವಾಗಿ, ಮಹತ್ವವುಳ್ಳ ತುಂಗಭದ್ರ ನದಿ ಸ್ಥಳವಾಗಿದ್ದು ಪುರಾಣ ಪ್ರಸಿದ್ದವಾಗಿದ್ದು ಪಂಪಾಸರೋವರ ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. 

ಹಂಪಿಯಲ್ಲಿ ರಾಮನ ಆಗಮನಕ್ಕಿಂತ ಮುಂಚೆ ಈ ಕ್ಷೇತ್ರವು ಶಿವನ ಲೀಲೆಗಳಲ್ಲೊಂದಾದ ಮನ್ಮಥ ವಿಜಯಕ್ಕೆ ನಾಂದಿಯಾಗಿ ಬೆಳದಿರುವುದು. ಹಂಪಿಯು ಶೈವ ಕ್ಷೇತ್ರವಾಗಿ ಜಾಗೃತ ಸ್ಥಾನವಾಗಿ ಉಳಿದು ಬಂದಿರುವುದು. ಸಂಸ್ಕೃತಿ, ಸಂಪ್ರದಾಯಗಳಲ್ಲಿ ಸಾಂಸ್ಕೃತಿಕವಾಗಿ ಬೆಳೆದಿರುವುದು. ಹಂಪಿಯು ಭೌಗೋಳಿಕವಾಗಿ ತನ್ನದೇ ಆದ ವಿಶೇಷತೆಗಳಿಂದ ಕೂಡಿದೆ. ಶಾಸನಗಳು, ಸ್ಮಾರಕ, ಶಿಲ್ಪ, ಕಲೆ ಸಾಹಿತ್ಯ ಧಾರ್ಮಿಕತೆ, ಆಚಾರ ವಿಚಾರ, ಆಚರಣೆ, ಜಾತ್ರೆ, ಹಬ್ಬ-ಹರಿದಿನಗಳಂತಹ ಮಹತ್ವದ ಘಟನೆಗಳು ಜನರ ಮನದಲ್ಲಿನ ಚಾರಿತ್ರಿಕ ನೋಟದಲ್ಲಿ ಅಮರವಾಗಿ ಉಳಿದಿವೆ. ವಿದ್ಯಾರಣ್ಯವು ವಿದ್ಯಾರ್ಥಿಗಳ ಸಾಧನೆಯನ್ನು ಹಂಪಿಗೆ ಒಂದು ಬೆಳಕು ಚೆಲ್ಲುವ, ವಿನ್ಯಾಸವಾಗಿ ನಿಲ್ಲಿಸಿದೆ. ಇದರ ಬಗೆಗಿನ ವಿದ್ವಾಂಸರ ಅಭಿಪ್ರಾಯಗಳು ಸಮಾಜದಲ್ಲಿ ವಜ್ರವೈಡೂರ್ಯಗಳಾಗಿ ಬೆಳಗಿ ನಿಂತಿವೆ. ಬಾದಾಮಿ ಮತ್ತು ಕಲ್ಯಾಣ ಚಾಲುಕ್ಯ ಹಾಗೂ ಹೊಯ್ಸಳ ಅರಸರ ಶಾಸನಗಳು ಹಂಪಿಯ ರಾಜಕೀಯ ಧಾರ್ಮಿಕ ಪ್ರಚಾರದಲ್ಲಿ ಅತೀ ಪ್ರಮುಖವಾಗಿ ಉಳಿದವು. 7ನೇ ಶತಮಾನದಿಂದ 14ನೇ ಶತಮಾನದ ಮೊದಲರ್ಧದಷ್ಟೊತ್ತಿಗೆ ಐತಿಹ್ಯವಾಗಿ ಬೆಳೆದಿರುವುದನ್ನು ನಾವು ಕಾಣಬಹುದಾಗಿದೆ. ಪ್ರಮುಖವಾಗಿ ಇದು ನಾಲ್ಕು ಮನೆತನಗಳಿಂದ ಬೆಳೆದಿರುವ ಸಾಮ್ರಾಜ್ಯವಾಗಿರುತ್ತದೆ. ಆ ಬೆಳವಣಿಗೆಯ ಸಂಗಮ, ತುಳುವು, ಅರವೀಡುವಂಶ, ಸಾಳ್ವವಂಶಗಳ ಮನೆತನದ ಆಡಳಿತದಿಂದ ವಿಜಯನಗರ ಶುರುವಾದ ಮೇಲೆ ಹಂಪಿ ಒಂದು ರಾಜಧಾನಿಯಾಗಿ ಮಾರ್ಪಟ್ಟಿತು. ಪ್ರಪಂಚದ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿತ್ತು. ಈ ಮನೆತನಗಳಲ್ಲಿ ಸಂಗಮ ಮನೆತನದ ದೊರೆಯಾದ ಹರಿಹರನು ಕಾಲದಲ್ಲಿ ಈ ಸಾಮ್ರಾಜ್ಯವು ವೇಗದ ಬೆಳವಣಿಗೆಯನ್ನು ಕಂಡಿತು. 

ಕರ್ನಾಟಕದಲ್ಲಿ ದೇವಾಲಯಗಳ ನಿರ್ಮಾಣದ ಮೇಲೆ ಪ್ರಬಲ ವರ್ಚಸ್ಸನ್ನು ಬೀರಿತು. ಹೊಸ ಶೈಲಿಯ ದೇವಾಲಯಗಳ ರಚನೆಗೆ ಪ್ರೇರಿತವಾಯಿತು ಎಂದು ಹೇಳಬಹುದು. ದಕ್ಷಿಣ ಭಾರತದ ಇತಿಹಾಸವನ್ನು ನೋಡಿದಾಗ ನಮಗೆ ಎದ್ದು ಕಾಣುವ ಅಂಶವೆಂದರೆ ಯಾವುದೇ ವಂಶ ಹೊಸದಾಗಿ ರಾಜ್ಯಸ್ಥಾಪನೆ ಮಾಡಿದಾಗ ಮೊಟ್ಟ ಮೊದಲು ಕೈಕೊಳ್ಳುವ ಕಾರ್ಯವು ದೇವಾಲಯಗಳ ನಿರ್ಮಾಣ, ಇಲ್ಲವೇ ಇದ್ದ ದೇವಾಲಯಗಳಿಗೆ ದಾನದತ್ತಿಗಳನ್ನು ಕೊಡುವ ಕಾರ್ಯ ಈ ಮನೆತನದ ಅರಸರದಾಗಿತ್ತು. ಸಾಮಾನ್ಯ ಜನರಲ್ಲಿ ತಾವು ಧರ್ಮ ಬೀರುಗಳೆಂಬ ಭಾವನೆಯನ್ನು ಒಡಮೂಡಿಸಿ, ತಮ್ಮ ರಾಜಕೀಯ ಚಟುವಟಿಕೆಗಳಿಗೆ ಜನಸಾಮಾನ್ಯರ ಬೆಂಬಲ ಪಡೆಯಲು ಮಾಡಿದ ಯುಕ್ತಿಯವೆಂದು ಹೇಳುಬಹುದು. ಸಂಗಮ ಅರಸರು ರಾಜ್ಯ ಸ್ಥಾಪನೆಯ ನಂತರ ಇಲ್ಲಿ ದೇವಾಲಯಗಳ ನಿರ್ಮಾಣಕ್ಕೆ ತೊಡಗಬೇಕೆಂದಾಗ ಯಾವ ವಾಸ್ತು ಶೈಲಿಯಲ್ಲಿ ದೇವಾಲಯಗಳನ್ನು ನಿರ್ಮಿಸಬೇಕೆಂಬ ಪ್ರಶ್ನೆಯನ್ನು ಎದುರಿಸಬೇಕಾಯಿತು. ಆದರೆ ಇವರಿಗೆ ಮುಂಚೆಯ ಮೊದಲು ರಾಜ್ಯವಾಳಿದ ಹೊಯ್ಸಳ ಅರಸರ ಆಶ್ರಿತ ನೆಲೆಯಲ್ಲಿ ದೇವಾಲಯಗಳು ನಿರ್ಮಾಣಗೊಳ್ಳವುದರ ಮೂಲಕ ವಿಜಯನಗರ ಸಾಮ್ರಾಜ್ಯಕ್ಕೆ ಒಂದು ದಾರಿಯಾಗಿ ಉಳಿದಿತ್ತು, ಪ್ರಮುಖವಾಗಿ ಹೊಯ್ಸಳರ ದೇವಾಲಯಗಳಲ್ಲಿ ಕೆತ್ತನೆಯ ಅತಿ ಸುಂದರ ಮತ್ತು ಸೂಕ್ಷ್ಮತೆಗಳನ್ನು ಕಂಡುಬಂದವು. ಆಡಳಿತದ ಮೊದಲ ವರ್ಷಗಳಲ್ಲಿ ಅನೇಕ ಯುದ್ದಗಳನ್ನು ಮಾಡಬೇಕಾಗಿ ಬಂದುದರಿಂದ ಮತ್ತು ತಮ್ಮ ರಾಜ್ಯದಲ್ಲಿ ಸುವ್ಯವಸ್ಥಿತ ಆಡಳಿತ ಸ್ಥಾಪಿಸಬೇಕಾಗಿರುವುದರಿಂದ ಹಣದ ಬಹುಭಾಗವನ್ನು ಕೆಲವು ಕಾರ್ಯಗಳಿಗೆ ವಿನಿಯೋಗಿಸಬೇಕಾಯಿತು. ಆದರೆ ಅಲ್ಪ ವೆಚ್ಚದಲ್ಲಿಯೇ ಬೆಣಚು ಕಲ್ಲಿನ ಭವ್ಯ ದೇವಾಲಯಗಳನ್ನು ನಿರ್ಮಿಸಲು ಅವರಿಗೆ ಸಾದ್ಯವಾದವು.

            ನಂತರವೇ ಮುಖ್ಯವಾಗಿ ಸಂಗಮವು ಅರಸ ತಮ್ಮ ಆಳ್ವಿಕೆಯನ್ನು ಸ್ಥಾಪಿಸಿದ ಕೆಲವೇ ವರ್ಷಗಳಲ್ಲಿ ತಮಿಳು ಪ್ರದೇಶವನ್ನು ಆಕ್ರಮಿಸುತ್ತು. ಪ್ರತಿಯೊಂದು ದೇವಾಲಯದ ನಿರ್ಮಾಣವು ದ್ರಾವಿಡ ಶೈಲಿಯ ಆಕೃತಿಯಲ್ಲಿ ರಚನೆಯಾದವು, ತಮಿಳು ಪ್ರದೇಶದ ದೇವಾಲಯಗಳಿಂದ ವಿಜಯನಗರ ಅರಸ ಪ್ರಭಾವಿತರಾದರೆಂದು ನಾವು ಹೇಳಿದಾಗ ಸಹಜವಾಗಿಯೇ ಉದ್ಬವಿಸುವ ಪ್ರಶ್ನೆಯೆಂದರೆ ಕರ್ನಾಟಕದಲ್ಲಿ ವಿಜಯನಗರದ ಅರಸರ ಕಾಲಕ್ಕೆ ಮುಂಚೆ ಈ ಶೈಲಿಯಲ್ಲಿ ದೇವಾಲಯಗಳ ನಿರ್ಮಾಣವಾಗಲಿಲ್ಲವೇ ಎಂಬುದು ಹೊಯ್ಸಳರು, ನೊಳಂಬರು ಮತ್ತು ಚೋಳರು ಕರ್ನಾಟಕದ ಪ್ರದೇಶವನ್ನು ಆಳುವಾಗ ದ್ರಾವಿಡ ಶೈಲಿಯಲ್ಲಿ ಅನೇಕ ದೇವಾಲಯಗಳು ಮತ್ತು ಜೈನಬಸದಿಗಳು ನಿರ್ಮಾಣಗೊಂಡವೆಂದು ಹೇಳಬಹುದಾಗಿದೆ, ಮತ್ತು ಸಂಗಮ ವಂಶದ ಮೊದಲ ಕೆಲವು ದೊರೆಗಳ ಕಾಲದಲ್ಲಿ ಹಂಪಿಯಲ್ಲಿ ಕೆಲವು ದೇವಾಲಯಗಳು ಕದಂಬನಾಗರ ಶೈಲಿಯಲ್ಲಿ ರಚನೆಗೊಂಡವು ಇವು ಹೆಚ್ಚಾಗಿಯೇ ಹೇಮಕೂಟ ಬೆಟ್ಟದ ಮೆಲೆ ಕಂಡುಬರುವವು.

            ಹಂಪಿಯ ಐತಿಹ್ಯಗಳÀಲ್ಲಿ ಪ್ರಮುಖವಾಗಿ ಮಾತಂಗ ಪರ್ವತ, ಮಾಲ್ಯವಂತ ಖುಷ್ಯಮುಖ ಪರ್ವತ, ಕಿಷ್ಕಿಂದ, ಆಂಜನಾದ್ರಿ ಪರ್ವತ, ಹೇಮಕೂಟ, ವಿಪ್ರಕೂಟ, ಗಂಧರ್ವಗಿರಿ, ಜಂಬುನಾಥಗಿರಿ, ವಾಣಭದ್ರೇಶ್ವರ ಸೋಮಪ್ಪ, ಮನ್ಮಥತೀರ್ಥ ಲೋಕಪಾವನ ತೀರ್ತ, ಚಕ್ರತೀರ್ಥ, ಪಂಪಾಪತಿರ್ತ ಮುಂತಾದ ತೀರ್ಥಗಳು ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ಪವಿತ್ರ ಸ್ಥಳಗಳು ಪಂಪಾಬಿಕೆಯ ತಪೋಪ್ರಭಾವಕ್ಕೆ ಮೆಚ್ಚಿ ಪರಮಶಿವನು ಶ್ರೀ ವಿರುಪಾಕ್ಷ ನಾಮದಿಂದ ಅವಿರ್ಭವಿಸಿ ಪಂಪಾಂಬಿಕಯೊಂದಿಗೆ (ಪಾರ್ವತಿ) ಕಲ್ಯಾಣೋತ್ಸವ ನಡೆದು ಪತ್ನಿ ಸಮೇತವಾಗಿ ಶಿವಗಣ, ವಿಷ್ಣುಗಣ, ಬ್ರಹ್ಮಗಣ ದೇವತಾ ಸಮೂಹದೊಂದಿಗೆ ಈ ಕ್ಷೇತ್ರದಲ್ಲಿ ನೆಲೆಯಾಗಿರುವುದರಿಂದ, ಈ ಪಂಪಾಕ್ಷೇತ್ರಕ್ಕೆ ಧಾರ್ಮಿಕವಾಗಿ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿರುವ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿ ಬಹುಮುಖ್ಯವಾಗಿ ಶಿವ, ಪಾರ್ವತಿಯರ ಕಲ್ಯಾಣೋತ್ಸವದ ವಿವರಗಳನ್ನು ಆನೆಗೊಂದಿಯಲ್ಲಿ ದೊರೆತ ತಾಮ್ರ ಪತ್ರ ಶಾಸನದಲ್ಲಿ ಉಲ್ಲೇಖಿಸಿದ ದಾಖಲೆಯನ್ನು ಕಾಣಬಹುದಾಗಿದೆ. ಇವು ಸಮಾಜದಲ್ಲಿ ವಿಭಿನ್ನ ರೂಪದಲ್ಲಿ ಕಂಡುಬರುವ ಪ್ರತಿಯೊಂದರ ಧಾರ್ಮಿಕ, ಸಾಮಾಜಿಕ, ನೆಲೆಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿವೆ. ಪ್ರ್ರಾಚೀನಕಾಲದಿಂದ ಬೆಳವಣಿಗೆಯಲ್ಲಿ ಮತ್ತು ಅವುಗಳ ಸಂಪ್ರದಾಯ, ಸಾಂಸ್ಕೃತಿಕ, ಆಚರಣೆ ಹಬ್ಬ-ಹರಿದಿನಗಳಲ್ಲಿ ಹೆಚ್ಚಿನ ಪ್ರಚಾರಗಳಾಗಿ ನಿರಂತರ, ಘಟನೆಯ ನೆಲೆಯಲ್ಲಿ ಬಹುಪಾಲವಾಗಿ ನೆಲೆನಿಂತ, ಧಾರ್ಮಿಕ ಕ್ಷೇತ್ರಗಳಾಗಿವೆ, ಸಾಮಾಜಿಕವಾಗಿ ಗಮನಸಿದಾಗ ತನ್ನದೇಯಾದ ವ್ಯಕ್ತಿತÀ್ವವನ್ನು ಪಡೆದುಕೊಂಡಿರುವ ಜನಸಾಮಾನ್ಯರ ಮನದಲ್ಲಿ ದೈವಶಕ್ತಿಯು ಮನೆಮಾತಾಗಿ, ಜೀವನಾರ್ಥಕವಾಗಿ ಸಂಸ್ಕೃತಿಯಾಗಿ ಭಾರತ ಇತಿಹಾಸದಲ್ಲಿ ಪ್ರಚಲಿತ, ಘಟನೆಗಳಾಗಿ ನಿಂತಿರುವವು. ಹೀಗೆ ಹಂಪಿಯಲ್ಲಿ ಬೆಟ್ಟ, ಗುಡ್ಡ, ಪರ್ವತಗಳು, ಶಿಲ್ಪಕಲೆ, ಸ್ಮಾರಕಗಳಲ್ಲಿ ಇಡೀ ಇತಿಹಾಸದ ಸಾಮರಸ್ಯದ ಕಥೆ, ಕಾವ್ಯ ರೂಪಾಂತರಗಳಲ್ಲಿ ವಿಭಾಗಗಳಾಗಿ ಕಂಡುಬರುವವರು.

ಹಂಪಿ ಮತ್ತು ಆನೆಗೊಂದಿ ಪರಿಸರವು ಶಿಲಾಯುಗ ಕಾಲದ ಕುರುಹುಗಳನ್ನು ವ್ಯಾಪಕ ಪ್ರಮಾಣದಲ್ಲಿ ಹೊಂದಿರುವ ಮೂಲಕ ಈ ಭಾಗದ ಪ್ರಾಗೈತಿಹಾಸವನ್ನು ಶ್ರೀಮಂತಗೊಳಿಸಿವೆ ಎಂಬುದು ಜನರ ಅನಿಸಿಕೆ. ಇಲ್ಲಿ ನವಶಿಲಾಯುಗ ಕಾಲದ ವಸತಿ ಮತ್ತು ಸಮಾಧಿಯನ್ನು ಉತ್ಖನನ ಮಾಡಿದ್ದಾರೆ. ಇದು ಹಂಪಿ ಪರಿಸರದಲ್ಲಿದ್ದ ಮಾನವನ ಬದುಕಿನ ಮೊದಲ ದರ್ಶನವನ್ನೆಬಹುದು. ಹಂಪಿಯಲ್ಲಿ ಸುಮಾರು ಹದಿನಾಲ್ಕನೆಯ ಶತಮಾನದ ನೆಲೆಗಳಲ್ಲಿ ಕಂಡುಬರುವವು ಪ್ರಮುಖವಾಗಿ ಈ ಪರಿಸರದಲ್ಲಿ ದೊರೆತ ಬೌದ್ದ ಸ್ತೂಪ ವಿಶೇಷಗಳನ್ನು ದೊರೆ ಆಂದ್ರ ಭಾಗದಿಂದ ಹಂಪಿಗೆ ತರಲಾಗಿವೆ. ಕುಮ್ಮಟ, ದುರ್ಗ ಕಂಪಿಲ ದೇವನು ಇಲ್ಲಿನ ಹೇಮಕೂಟದಲ್ಲಿ ತಂದೆ, ತಾಯಿ ಮತ್ತು ಬಂಧೋತ್ವವನ್ನು  ಹೆಸರಿನಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿ ತ್ರಿಕೂಟ ದೇವಾಲಯವನ್ನು ನಿರ್ಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಂಪಿಯು ಬಂದು ಧಾರ್ಮಿಕ ಕಲೆಯಾಗಿರುವಂತೆ ಒಂದು ಐತಿಹ್ಯಯಾದ ನೆಲೆಯಾಗಿ ಗುರುತಿಸಲ್ಪಟ್ಟಿರುವುದು ಗಮನಾರ್ಹ ಸಂಗತಿಯಾಗಿದೆ. ಅಂದಿನಿಂದಲೂ ಇಲ್ಲಿ ಯತಿಗಳು, ಶರಣರು, ದಾಸರು, ಯೋಗಿಗಳು, ಸಾಧು ಸಂತರು ನೆಲೆಗೊಂಡ ಮೂಲಕ ಆದ್ಯಾತ್ಮ ಮತ್ತು ಮೋಕ್ಷದ ಕರ್ಮಕ್ಷೇತ್ರವಾಗಿಯೂ ದಾರ್ಶನಿಕ ಕ್ಷೇತ್ರವಾಗಿಯೂ ಪ್ರಸಿದ್ದಿಯನ್ನು ಪಡೆದಿದೆ.

ಭಾರತ ದೇಶದಲ್ಲಿನ ಒಂದು ಮಹತ್ವದ ಸಾಧನೆಗಳು, ಧರ್ಮ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ಸ್ಮಾರಕಗಳ ನೆಲೆಯಲ್ಲಿ ಪ್ರಾಚೀನ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆಯ ಕೇಂದ್ರವಾಗಿದೆ. ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರದ ಚಟುವಟಿಕೆಗಳಲ್ಲಿ ಮತ್ತು ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯನ್ನು ಪರೋಕ್ಷವಾಗಿ ಸೂಚಿಸುತ್ತವೆ. ಪೂಜಾ ಪದ್ದತಿ ಮತ್ತು ಆಚರಣೆಗಳಲ್ಲಾದ ಬದಲಾವಣೆಗೆ ಅನುಗುಣವಾಗಿ ಹೊಸ ಹೊಸ ವಾಸ್ತು ನಿರ್ಮಾಣಗಳ ದೇವಾಲಯಗಳು ತಲೆಎತ್ತಿದವು, ಅವು ಕಲ್ಯಾಣ ಮಂಟಪ, ಉಯ್ಯಾಲೆ ಮಂಟಪ, ಉತ್ಸವ ಮಂಟಪ, ವಾಹನ ಮಂಟಪ, ಶಯನಗೃಹ, ದೇವರಗಳ ನೋಟ, ಕಥೆ, ಪುರಾಣಗಳಲ್ಲಿನ ಹೇಳಿಕೆಗಳನ್ನು ಆಚರಣೆಗೆ ತಂದ ಪರಿಣಾಮವಾಗಿ ಮೇಲೆ ಹೇಳಿದ ಹೆಚ್ಚುವರಿ ವಾಸ್ತು ನಿರ್ಮಾಣಗೊಂಡಿವೆ.

ಹೀಗೆಯೇ ಹಂಪಿ ಪ್ರವಾಸ ಪರಂಪರೆಯಲ್ಲಿ ಪ್ರಾಚೀನವಾದದು. ಸುಮಾರು 14ನೇ ಶತಮಾನದಿಂದ ಪ್ರವಾಸ ಕಥನಗಳು ದೊರೆಯುವುವು. ಹಂಪಿ ಸ್ಮಾರಕಗಳ ವೀಕ್ಷಣೆಗೆ ದೇಶ ವಿದೇಶಗಳ ಪ್ರವಾಸಿಗರು ನಿರಂತರವಾಗಿ ಎಲ್ಲಾ ಕಾಲಮಾನಗಳಲ್ಲಿ ಹಂಪಿಗೆ ಬಂದಿರುವುದು ಕಂಡುಬರುತ್ತದೆ. ವಿಜಯನಗರದ ಇತಿಹಾಸ ರಚನೆಯ ಪುರಾತತ್ವ ಆಕರಗಳನ್ನು ಮತ್ತು ಸಮಕಾಲೀನ ಶಿಷ್ಟ ಸಾಹಿತ್ಯವನ್ನು ಆಧರಿಸಿದೆ. ಆದರೆ ಸ್ಥಳೀಯವಾಗಿ ಮೌಖಿಕ ಪರಂಪರೆಯಲ್ಲಿ ಉಳಿದು ಬಂದಿರುವ ಐತಿಹ್ಯ, ಪುರಾಣ, ಕಾವ್ಯ ಕಥೆ ಆಕರಗಳನ್ನು ನಿರ್ಲಕ್ಷಿಸಿಸಲಾಗಿದೆ. ಆದರೆ ಇವುಗಳು ಇತಿಹಾಸದ ರಚನೆಯ ಪ್ರಮುಖ ಆಕಾರಗಳಾಗಿವೆ ಎಂಬುದು ಹಲವು ವಿದ್ವಾಂಸರ ಅಭಿಪ್ರಾಯವಾಗಿದೆ. ಹಂಪಿಯು ವಿಶ್ವಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆಯಲು ಅದರ ಸಾಂಸ್ಕೃತಿಕ ಶ್ರೀಮಂತಿಕೆಯೇ ಮುಖ್ಯ ಕಾರಣವೆಂದು ಹೇಳಬಹುದಾಗಿದೆ. ಇಲ್ಲಿ ವಿಜಯನಗರ ಚರಿತ್ರೆಯ ನಿರ್ಮಾಣದಲ್ಲಿ ವಿದೇಶಿ ಪ್ರವಾಸಿಗರ ಬರಹಗಳು ಬಹುಮುಖ್ಯವಾದ ಆಕರಗಳಾಗಿವೆ. 

            ವಿಜಯನಗರ ಸ್ಥಾಪನೆಯಲ್ಲಿ ಶೃಂಗೇರಿ ಮಠದ ಪಾತ್ರ ಹಾಗೂ ವಿದ್ಯಾರಣ್ಯರ ಆಸಕ್ತಿಯನ್ನು ಉಲ್ಲೇಖಿಸಲಾಗಿದೆ. ಆ ಕಾಲದ ಧಾರ್ಮಿಕ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸುವ ನಿಟ್ಟಿನಲ್ಲಿ ಶೃಂಗೇರಿ ಮಠ ಮತ್ತು ಅದರ ಪರಂಪರೆಯು ಆಗಿನ ಆಡಳಿತ ಮತ್ತು ಅಧಿಕಾರಶಾಹಿಯನ್ನು ಕುರಿತಂತೆ ತಮ್ಮ ಕೀರ್ತನಗಳ ಮೂಲಕ ಸಮಾಜವನ್ನು ಎಚ್ಚರಿಸಿದರು. ಮಾನವೀಯ ಮೌಲ್ಯಗಳ ಪ್ರಸ್ತುತತೆಯನ್ನು ಒತ್ತಿ ಹೇಳಿದರು. ಇದರೊಂದಿಗೆ ಬಸವಾದಿ ಶರಣಗಳ ವಚನಗಳು ಸಹ ಮೌಡ್ಯ, ಲೌಕಿಕ, ಢಾಂಬಿಕತನವನ್ನು ಹಾಗೂ ಮೇಲ್ವರ್ಗದವರ ಆತ್ಮವಂಚನಗಳನ್ನು ಬಯಲಿಗೆಳೆಯುವ ಕಾಯಕವನ್ನು ಯಶಸ್ವಿಯಾಗಿ ಮಾಡಿದವು. ಜಾತಿ ಪದ್ದತಿಯನ್ನು ಖಂಡಿಸಿದವು ಜೊತೆಗೆ ಧಾರ್ಮಿಕ ಸಾಮರಸ್ಯ ಮೂಡಿಸಿದರು. ಇದು ಕಲೆ ಮತ್ತು ವಾಸ್ತು ಕ್ಷೇತ್ರದಲ್ಲಿ ಸಾಧ್ಯವಾಯಿತು. ಹಿಂದೂ  ಮುಸ್ಲಿಂ ಶೈಲಿಯಲ್ಲಿನ ಕಟ್ಟಡಗಳು ನಿರ್ಮಾಣಗೊಂಡವು ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಮಹಿಳಾ ಆಡಳಿತದಿಂದ ಬದಲಾವಣೆಗೆ ದಾರಿಯಾದರೂ ವಿಜಯನಗರ ಅರಸ ಪ್ರೌಢದೇವರಾಯ ವೀರಶೈವ ಧರ್ಮಕ್ಕೆ ಹೆಚ್ಚಿನ ಬೆಂಬಲ ನೀಡಿದ್ದ. ಅಲ್ಲದೇ ಆ ಧರ್ಮದ ಪ್ರಸಿದ್ದರು ಎನಿಸಿಕೊಂಡಿರುವ ಮಹಾಪಂಡಿತರಿಗೂ ಸಹ ಆಶ್ರಯ ನೀಡಿದ ಸಂಗತಿಯನ್ನು ಕಾಣಬಹುದಾಗಿದೆ. ಪ್ರಮುಖವಾಗಿ ಜಕ್ಕಣಾಚಾರ್ಯ, ಲಕ್ಕಣ್ಣ ದಂಡೇಶ, ಮಹಾಲಿಂಗದೇವ, ಚಾಮರಸ, ಮಗ್ಗೆಯ ವಾಯುದೇವ, ಚಂದ್ರಶೇಖರಂತಹ ಸುಪ್ರಸಿದ್ದ ವೀರಶೈವ ಕವಿಗಳು, ಶಾಸ್ತ್ರವೆತ್ತರು ಆಸ್ಥಾದಲ್ಲಿದ್ದರು. ಅವರು  ಆಶ್ರಯ ಪಡೆದಿರುವ ದೃಶ್ಯಗಳು ಸಾಮಾಜದಲ್ಲಿ ಭಿನ್ನಭಿನ್ನವಾಗಿ ಐತಿಹ್ಯ (ಘಟನೆಗಳಾಗಿ) ಶರಣ ಧರ್ಮದ ಪ್ರಭವಕ್ಕೆ ಒಳಗಾದ ಹಂಪಿ ಅಂದು ಶರಣರ ತತ್ವಗಳನ್ನು ಜನಸಾಮಾನ್ಯರಿಗೆ ಸಾಹಿತ್ಯ ಕೃತಿಗಳ ಮೂಲಕ ಪರಿಚಯ ಮಾಡಿಕೊಟ್ಟಿರುವವು.

            ಹಂಪಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶಾಸನಗಳು, ಶೈವ ದೈವಗಳು ಸಮುದಾಯಗಳು ಸಮುಚಯಕಾರರ ವಚನ ಚಳುವಳಿಯು, ಧಾರ್ಮಿಕ ಪಂಥಗಳು, ವೀರಶೈವ ಧರ್ಮದ ಚೌಕಟ್ಟಿನ ಅಡಿಯಲ್ಲಿ ಸಿಲುಕಿರುವ ಧಾರ್ಮಿಕ ಕ್ಷೇತ್ರಗಳಾಗಿವೆ. ವಿಜಯ ನಗರದೊಂದಿಗೆ ಸಾಂಸ್ಕೃತಿಕ ಸಂಬಂಧವನ್ನು ಹೊಂದಿದ ಅನೇಕ ಜನ ಸಮುದಾಯಗಳಿದ್ದವು. ಹಲವು ವಾಮಾಚಾರದ ಧಾರ್ಮಿಕ ಕ್ರಿಯಾಗಳು ಉಳಿದಿದ್ದವು. ಶಿಷ್ಟ ಮತ್ತು ಪರಿಶಿಷ್ಟ ನೆಲೆಯ ಅನೇಕ ಆದ್ಯಾತ್ಮಿಕ ಪಂಥಗಳ ಕೊಡುಗೆ ಮಾನವ ಸಮಾಜದಲ್ಲಿ ಅಪಾರವಾಗಿದೆ. ವಿಜಯನಗರ ಚರಿತ್ರೆಯಲ್ಲಿ ಕೇವಲ ರಾಜಪ್ರಭುತ್ವದ, ಧರ್ಮಪ್ರಭುತ್ವದ ಚರಿತ್ರೆಯಾಗಿರದೆ ಒಂದು ಬೃಹತ್ ಶಿಲೆಯ ಕಲೆಯಾಗಿ ಐತಿಹ್ಯವಾಗಿ ಬೆಳೆದಿರುವ ಹಂಪಿಯು ಕರ್ನಾಟಕ ಚರಿತ್ರೆಯಲ್ಲಿ ಮದ್ಯಕಾಲೀನ ಸಂದರ್ಭದ ಕಾಲಮಾನದಲ್ಲಿ ಆದ್ಯಾತ್ಮಿಕ ಭಕ್ತಿಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿತು. ಇಂತಹ ಸಂದರ್ಭದಲ್ಲಿ ವಚನಕಾರರು, ಕೀರ್ತನಾಕಾರರು ಹಾಗೂ ತತ್ವಪದಕಾರರು ತಮ್ಮ ತಾತ್ವಿಕ ಚಿಂತನೆಯ ಮೂಲಕ ಸಮಾಜವನ್ನು ಹಸನು ಮಾಡಿದರು. ತಮ್ಮ ನಡೆ ನುಡಿಯ ಮೂಲಕ ಜನಗಳ ಮನಸ್ಸನ್ನು ಪರಿಷ್ಕರಿಸಿ ಸಾಹಿತ್ಯ ಕ್ಷೇತ್ರ ಈಗಲೂ ಅಮರರಾಗಿದ್ದಾರೆಂದು ಹೇಳಬಹುದಾಗಿದೆ. ಸಾಹಿತ್ಯ, ವಚನ, ತತ್ವಪದಗಳನ್ನು, ಇತಿಹಾಸದ ಘಟನೆಗಳ (ಐತಿಹ್ಯ) ಮಹಾಜ್ಞಾನವುಳ್ಳವರಾಗಿರುವ ಅಲ್ಲಮಪ್ರಭು, ಬಸವಣ್ಣರವರು, ಇವರ ಹಿತ ನುಡಿ ನಡೆಗಳು ಸಮಾಜದಲ್ಲಿ ತಲೆ ಎತ್ತಿ ನಿಂತವು. ಮಹಿಳಾ ವಚನಾಕಾರರಲ್ಲಿ ಅಕ್ಕಮಹಾದೇವಿ ಇನ್ನೂ ಅನೇಕ ವಚನಗಳ ಆಶ್ರಿತ ನುಡಿಗಳಿಂದ ಇಡೀ ಸಮಾಜದ ಭಿನ್ನಾಬಿಪ್ರಾಯಗಳು ಕಣ್ಮರೆಯಾದವು. ಇವುಗಳೆಲ್ಲವೂ ವಿಜಯನಗರ ಹಂಪಿ ಕ್ಷೇತ್ರದಲ್ಲಿ ಅನೇಕ ಸ್ತ್ರೀ  ದೈವಗಳಲ್ಲಿ ಹುಲಿಗೆಮ್ಮದೇವಿ, ಹೊಸೂರಮ್ಮ, ಗಾಳೆಮ್ಮದೇವಿ, ಪಂಪಾಂಬಿಕ, ನಿಲಾಂಬಿಕ ಪಟ್ಟಣದ ಯಲ್ಲಮ್ಮ, ಇನ್ನೂ ಹಲವಾರು ಸ್ತ್ರೀ ದೈವಗಳು ವಿಜಯನಗರ ಸಾಮ್ರಾಜ್ಯದ ನೆಲೆಯ ಪ್ರತಿರೂಪಗಳಾಗಿ ನಿಂತಿರುವ ದೈವ ಶಕ್ತಿಗಳಾಗಿದ್ದರು. ಹೀಗೆ ಹಂಪಿಗೆ ಹೆಸರು ಬರಲು ಆನೇಕ ಶ್ರಮ ಶಕ್ತಿಗಳಾದ, ಹರಿಹರ ಹಕ್ಕಬುಕ್ಕ, ವಿದ್ಯಾರಣ್ಯರ ಸಂಗಮ, ಸಾಳ್ವ, ಅರವೀಡು, ತುಳು ಮನೆತನಗಳು, ಸಾಧುಸಂತರು ಕಲಾವಿದರು, ಶಿಲ್ಪಕಾರರು, ರಾಜ್ಯಾಡಳಿತದ ಶ್ರಮಿಕರು, ಶ್ರೀಕೃಷ್ಣದೇವರಾಯ ಸಾಮ್ರಾಜ್ಯದ ಸೈನಿಕರು, ಸೇವಕರು ಧಾರ್ಮಿಕ ಕ್ಷೇತ್ರಗಳು ಪೌರಾಣಿಕ, ಪುರಾಣಿಕ, ಸಾಂಸ್ಕೃತಿಕ ಸಂಪ್ರದಾಯ, ಶೈಕ್ಷಣೀಕ, ಬೆಟ್ಟ, ಗುಡ್ಡ, ಪ್ರಾಕೃತಿಕ ಸೌಂದರ್ಯ, ನದಿ, ಸರೋವರ, ಇಲ್ಲಿನ ಜನಸಮುದಾಯಗಳು ಶ್ರಮ ಸಾಹಿತ್ಯಕಾರರು, ಚಿತ್ರಕಲಾವಿದರು ನಾಟಕಕಾರರು ಬೃಹತ್ ಸ್ಮಾರಕಗಳು ಆವರಿಸಿರುವ ಹಂಪಿಯು ಪ್ರಭುದ್ದ ಭಾರತದ ನಾಂದಿಯಾಗಿದ್ದು ಇತಿಹಾಸದಲ್ಲಿ ಅಮರವಾಗಿ ಉಳಿದಿರುವುದು.

ಉಪಸಂಹಾರ.

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ಸಮಕಾಲೀನ ಜಗತ್ತಿನ ಪ್ರಸಿದ್ಧ ನಗರವಾಗಿ ಮೆರೆದ ಹಂಪಿ ಪ್ರಾಚೀನ ಕಾಲದಿಂದಲೂ ಜನಪ್ರಿಯವಾಗಿದೆ. ವಿರೂಪಾಕ್ಷನಪಾದ, ವಿರೂಪಾಕ್ಷ ತೀರ್ಥ, ವಿರೂಪಾಕ್ಷಪಟ್ಟಣ, ಹೊಸಪಟ್ಟಣ, ವಿದ್ಯಾನಗರ, ವಿಜಯನಗರ ಮುಂತಾದ ಮತ್ತು ಬೇರೆಬೇರೆ ಹೆಸರುಗಳಿಂದ ಹಂಪಿ ತನ್ನಕೀರ್ತಿ ವೈಭವಗಳನ್ನು ಇತಿಹಾಸದಲ್ಲಿ ಸ್ಥಿರಗೊಳಿಸಿದೆ. ಪುರಾಣದಲ್ಲಿ ಪಂಪಾಕ್ಷೇತ್ರ ಅಥವಾ ಪಂಪಾ ಎಂಬುವದು ತುಂಗಭದ್ರೆಯ ಇನ್ನೊಂದು ಹೆಸರಿಗಾಗಿದೆ. ಹಲವಾರು ಋಷಿಗಳು ಪಂಪಾಸರೋವರದಲ್ಲಿ ತಪಗೈದು ಸಂಗತಿಯನ್ನು ಕಾಣಬಹುದು, ಬ್ರಹ್ಮನ ಮಾನಸ ಪುತ್ರಿ ಪಂಪಾ ಎಂತಲೂ ಕರೆಯುವರು, ಅವಳು ಬಹಳ ಸುಂದರಿಯಾಗಿದ್ದಳು, ಪರಶಿವನೇ ಅವಳಿಗೆ ತಕ್ಕವರನೆಂದು ದೇವತೆಗಳು ನಿರ್ಧರಿಸಿದ ನಂತರವೇ ಅವಳು ಶಿವನನ್ನು ಕುರಿತು ಉಗ್ರ ತಪ್ಪಸ್ಸನ್ನು ಆಚರಿಸಿದಳು. ಕೊನೆಗೆ ಅವಳ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ಅವಳ ಇಷ್ಟವನ್ನು ನೆರವೇರಿಸಿದನು.

ಪರಾಮರ್ಶನ ಗ್ರಂಥಗಳು

  1. ನಾಗಲೋಟಿಮಠ. ಎಸ್. ಜೆ, ಸತ್ತ ಮೇಲೆ ಸಮಾಜ ಸೇವೆ, ಪ್ರಸಾರಂಗ ಕನ್ನಡ ವಿಶ್ವ ವಿದ್ಯಾಲಯ ಹಂಪಿ, 2016.
  2. ವಸಂತ .ಅ. ಕುಲಕರ್ಣಿ, ದೇಹ ಕ್ರಿಯೆಯ ಸೋಜಿಗಗಳು, ಪ್ರಸಾರಂಗ ಕನ್ನಡ ವಿಶ್ವ ವಿದ್ಯಾಲಯ ಹಂಪಿ, 2018.
  3. ಶಂಕರ್ ರಾವ್.ಚ.ನ, ಭಾರತೀಯ ಸಮಾಜದ ಅಧ್ಯಯನ, ಜೈ ಭಾರತ್ ಪ್ರಕಾಶನ ಮಂಗಳೂರು, 2000.

 


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal