Tumbe Group of International Journals

Full Text


ಬಡತನ ವಿಷವರ್ತುಲದಲ್ಲಿ ದಲಿತರು

ಡಾ. ಸಂಜೀವಕುಮಾರ. ಮು. ಪೋತೆ

ಸಹಾಯಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ,

ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ,ಕಾಲೇಜು, ಚಿತ್ರದುರ್ಗ – 577 501.

Email: sanjupotennn@gmail.com

mobile: 8971219106, 8971515132

ಸಾರಲೇಖ

            ಈ ಲೇಖನವು ಬಡತನ ವಿಷವರ್ತುಲದಲ್ಲಿರುವ ದಲಿತರನ್ನು ಹೇಗೆ ಆರ್ಥಿಕ ಪಥದತ್ತ ಕೊಂಡೊಯ್ಯಬೇಕು. ದಲಿತರು ಅತಿ ಬಡತನದಲ್ಲಿರುವುದಕ್ಕೆ ಕಾರಣವನ್ನು ಹುಡುಕುತ್ತಾ ನಡೆದಾಗ, ಅವರು ಬಡತನದಲ್ಲಿ ಸಿಲುಕಿರುವುದಕ್ಕೆ  ಕಾರಣದ ಬೇರು ಹಿಂದೂ ವರ್ಣವ್ಯವಸ್ಥೆ ಹಾಗೂ ಮನು ಧರ್ಮದಲ್ಲಿ ಅಡಗಿದೆ. ಆದ್ದರಿಂದ, ದಲಿತರನ್ನು ಅಭಿವೃದ್ಧಿ ಪಡಿಸಬೇಕಾದರೆ ಅವರ ಹಿನ್ನೆಲೆ ದೇಶದ ಹಿನ್ನೆಲೆಯ ಅವಶ್ಯಕವಾಗಿರುತ್ತದೆ. ಅಭಿವೃದ್ಧಿ ಎನ್ನುವುದು ಭಾರತದಲ್ಲಿ ಒಂದು ವರ್ಣ, ವರ್ಗ ಹಾಗೂ ಜಾತಿಯ ಅಭಿವೃದ್ಧಿಯಾಗಿರುವುದಿಲ್ಲ. ದೇಶದಲ್ಲಿನ ಜನಾಂಗದ ಅಭಿವೃದ್ಧಿ ಎನ್ನಬೇಕಾದರೆ, ಅಭಿವೃದ್ಧಿಯ ಫಲವು ಒಂದು ವರ್ಗ ಅಥವಾ ಜಾತಿಗೆ ಸೀಮಿತವಾಗಿರಬಾರದು. ಭಾರತದ ಪ್ರತಿ ಜಾತಿ ಹಾಗೂ ಜನಾಂಗಕ್ಕೆ ಅದರ ಪ್ರತಿಫಲ ಹಂಚಲ್ಪಟ್ಟಿರಬೇಕು. ಅಂದರೆ, ದೇಶದ ರಾಷ್ಟ್ರೀಯ ಆದಾಯ ಹೆಚ್ಚಾಗಿದೆ ಎಂದರೆ ನನ್ನ ಪ್ರಕಾರ ಅದಕ್ಕೆ ಯಾವುದೇ ಅರ್ಥವಿಲ್ಲ. ರಾಷ್ಟ್ರೀಯ ಆದಾಯ ಭಾರತದ ಎಲ್ಲಾ ಜನಾಂಗದ ಮಧ್ಯ ಹಂಚಿಕೆಯಾಗಿದೆಯೇ ಎನ್ನುವುದು ಮುಖ್ಯವಾಗಿರುತ್ತದೆ.  ಈ ಲೇಖನದಲ್ಲಿ ನಾನು ದ್ವಿತೀಯ ದತ್ತಾಂಶಗಳನ್ನು ಬಳಸಿಕೊಂಡು ದಲಿತರ ಬಡತನದ ವಿಷವರ್ತುಲದಲ್ಲಿ ಇರುವುದಕ್ಕೆ ಕಾರಣ ಮತ್ತು ಪರಿಣಾಮವನ್ನು ವಿಶ್ಲೇಷಿಸಿದ್ದೇನೆ. ದಲಿತರ ಬಡತನದಲ್ಲಿ ಇರುವುದಕ್ಕೆ ನನ್ನ ಪ್ರಕಾರ ಮನುಸ್ಮøತಿ ಮೂಲ ಕಾರಣವಾಗಿದೆ. ಬ್ರಾಹ್ಮಣ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕೆಲಸವನ್ನು ಮಾಡಿದರೆ ಅದರಿಂದ ಅವನಿಗೆ ಯಾವುದೇ ಫಲಸಿಗುವುದಿಲ್ಲ, (ಮನುಸ್ಮøತಿ ಅಧ್ಯಾಯ : 10-123 ಶ್ಲೋಕ) ನಾನು ಹೇಳುವ ವಿಚಾರ ಇಷ್ಟೆ ದಲಿತರು ದುಡಿಯುವ ಸಾಮಥ್ರ್ಯವಿದ್ದರು, ಶಿಕ್ಷಣಪಡೆಯುವ ಹಕ್ಕು ಇದ್ದರೂ, ಸಂಪಾದಿಸುವ  ಛಲವಿದ್ದರೂ ಸಹ ಜಾತಿ ವ್ಯವಸ್ಥೆ ದಲಿತನಿಗೆ ಈ ಮೇಲಿನ ಸದರಿ ಅಂಶಗಳನ್ನು ಲಭಿಸದಂತೆ ನೋಡಿಕೊಂಡಿರುವುದರಿಂದ ಹಾಗೂ ಅವನನ್ನು ಕೀಳಾಗಿ ಕಾಣುವುದರಿಂದ ಅವನ ಪ್ರತಿಯೊಂದು ಹಕ್ಕನ್ನು ಪುರಾಣಗಳ ಮುಖಾಂತರ ಕಸಿದುಕೊಂಡಿರುವುದರಿಂದ, ದಲಿತರು ಬಡತನದಲ್ಲಿ ಜೀವಿಸುವಂತಾಯಿತು. ಆದ್ದರಿಂದ ದೇಶದ ಅಭಿವೃದ್ಧಿ ಎಂದರೆ ದಲಿತರ ಬಡತನ ವಿಷವರ್ತುಲವನ್ನು ಮುರಿಯುವುದಾಗಿದೆ. ಆದ್ದರಿಂದ ಭಾರತದ ಅಭಿವೃದ್ಧಿಯೆನ್ನುವುದು ‘ದಲಿತರ ಒಳಗೆ ಇರುವುದರಿಂದ ದಲಿತರ ಅಭಿವೃದ್ಧಿಯೇ, ಭಾರತದ ಅಭಿವೃದ್ಧಿಯಾಗಿದೆ'. ಈ ಲೇಖನದಲ್ಲಿ ನಾನು ದಲಿತರ ಬಡತನಕ್ಕೆ ಕಾರಣ, ಪರಿಣಾಮ ಮತ್ತು ಪರಿಹಾರಗಳನ್ನು ಕುರಿತು ಚರ್ಚಿಸಿದ್ದೇನೆ. ದಲಿತರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಂತಹ ಪರಿಹಾರೋಪಾಯಗಳನ್ನು ಗುರುತಿಸುವುದು ನನ್ನ ಉದ್ದೇಶವಾಗಿದೆ. ಆದ್ದರಿಂದ ಈ ಲೇಖನ ಮಹತ್ವ ಪಡೆದುಕೊಂಡಿದೆ.  

ಕೀಲಿಪದ: ಬಡತನ,  ದಲಿತರು, ವಿಷವರ್ತುಲ, ವರ್ಣವ್ಯವಸ್ಥೆ

 

ಪರಿಚಯ

            ಈ ಲೇಖನದಲ್ಲಿ ಬಡತನಕ್ಕೆ ಮೂಲ ಕಾರಣ ಬಡತನವಾಗಿದೆ ಎನ್ನುವ ಒಳತೋಟಿಯನಿಟ್ಟುಕೊಂಡು ವಿವರಿಸಲಾಗಿದೆ. ಅರ್ಥಶಾಸ್ತ್ರಜ್ಞರಾದ ರಾಗ್ನಾರ್ ನಕ್ರ್ಸ್ ಅವರು `ಬಡರಾಷ್ಟ್ರಗಳು ಬಡತನದಲ್ಲಿಯೇ ಮುಂದುವರೆಯಲು ಅವುಗಳ ಬಡತನವೆ ಮೂಲ ಕಾರಣವಾಗಿದೆ’ ಎಂದು ಹೇಳಿದ್ದಾರೆ. ಅವರ ಮಾತನ್ನು ಈ ಲೇಖನಕ್ಕೆ ಬಳಸಿಕೊಂಡಾಗ, ನಕ್ರ್ಸ್‍ರವರ ಮಾತಿನ ಸ್ಪಷ್ಟ ಅರ್ಥವೆನೆಂದರೆ? ಬಡತನಕ್ಕೆ ಮೂಲ ಕಾರಣ ಬಡತನವೇ ಆಗಿದೆ. ಸಾಮಾನ್ಯವಾಗಿ ಬಡತನವೆಂದರೆ ಮನುಷ್ಯ ಕನಿಷ್ಠ ಮಟ್ಟದ ಮೂಲಭೂತ ಸೌಕರ್ಯವನ್ನು ಪಡೆದುಕೊಳ್ಳದ ಸ್ಥಿತಿಯಾಗಿದೆ. ಈ ವಿಷಯವನ್ನು ಇಟ್ಟುಕೊಂಡು ದಲಿತರ ಕುರಿತು ವಿಶ್ಲೇಷಣೆ ಮಾಡಿದಾಗ. ಭಾರತದಲ್ಲಿ ಬಹುಪಾಲು ದಲಿತರು ಶಿಕ್ಷಣ, ಆರೋಗ್ಯ, ಸಂಪತ್ತು, ಭೂಮಿ, ನೀರು ಹಾಗೂ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆಯನ್ನು ಅನುಭವಿಸುತ್ತಿರುವುದು ಗಮನಿಯ ಸಂಗತಿ. ಅವರ ಈ ಸ್ಥಿತಿಯನ್ನು ಅನುಭವದ ಮುಖಾಂತರ, ಅಂಕಿ ಸಂಖ್ಯೆಗಳ ಮುಖಾಂತರ, ಚಿಂತಕರ ಮುಖಾಂತರ ನಾವು ಮನಗಂಡಿದ್ದೇವೆ. ಆದರೆ ಇಲ್ಲಿ ದಲಿತರು ಬಡವರಾಗಿವುದಕ್ಕೆ ಬಡತನವೇ ಮೂಲ ಕಾರಣವಾಗಿಲ್ಲ. ಅವರು ಬಡತನದಲ್ಲಿ ಇರುವುದಕ್ಕೆ ನೇರವಾಗಿ ಹಿಂದೂ ಧರ್ಮದ ವರ್ಣ ವ್ಯವಸ್ಥೆಯೇ ಕಾರಣವಾಗಿದೆ. ನಾನು ಹೇಳುವ ತಾತ್ಪರ್ಯ ಇಷ್ಟೆ ಹಿಂದೂ ಧರ್ಮದಲ್ಲಿ ಶ್ರೀಮಂತ ಹಾಗೂ ಬಡವ ಎಂಬ ಶ್ರೇಣೀಕರಣವು ಜಾತಿಯ ಆಧಾರದ ಮೇಲೆ ಹಾಗೂ ಮನುಸ್ಮøತಿಯ ಆಧಾರದ ಮೇಲೆ ನಿಂತಿದೆ. ಅದನ್ನು ಈ ಅಧ್ಯಾಯನವು ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ.

      ದಲಿತರು ಬಡತನದ ವಿಷವರ್ತುಲದಲ್ಲಿ ಇರುವುದಕ್ಕೆ ಜಾತಿಯೇ ಕಾರಣ ಎನ್ನುವುದು ಸ್ಪಷ್ಟ. ದಲಿತರು ಬಡತನದಲ್ಲಿಯೇ ಜೀವಿಸುವಂತೆ ಶತಶತಮಾನಗಳಿಂದ ವರ್ಣ ವ್ಯವಸ್ಥೆಯು ಕಾಪಾಡಿಕೊಂಡು ಬಂದಿದೆ. ಇದಕ್ಕೆ ಮನು ಧರ್ಮದ ಕುತಂತ್ರವು ಇದೆ. ವರ್ಣ ಹಾಗೂ ಜಾತಿ ವ್ಯವಸ್ಥೆಯು ಹಿಂದೂ ಧರ್ಮದಲ್ಲಿ ಇರುವವರೆಗೂ ದಲಿತರ ಅಭಿವೃದ್ಧಿ ಮರೀಚಿಕೆಯಾಗಿರುತ್ತದೆ. ಕಾರಣ ಹಿಂದೂ ಧರ್ಮ ವ್ಯವಸ್ಥೆಯ ಜಾತಿಯ ಜಾಲಗಳು ತುಂಬಾ ಗಟ್ಟಿಯಾಗಿವೆ. ಅವುಗಳು ಒಮ್ಮೆಲೇ ಕಿತ್ತೆಸೆಯುವುದು ಸುಲಭವಲ್ಲ. ದಲಿತರ ಬಡತನದ ವಿಮುಕ್ತಿ ಜಾತಿಯ ಬೇರಲ್ಲಿ ಹುದುಗಿದೆ ಎನ್ನುವುದನ್ನು ಈ ಲೇಖನದ ಮೂಲಕ ಸ್ಪಷ್ಟ ಪಡಿಸಿದ್ದೇನೆ.

            ಮನುಸ್ಮøತಿ ಶ್ಲೋಕ ಅಧ್ಯಾಯ 10:32, 54 ಹಾಗೂ 129, ದಲಿತರನ್ನು ಕುರಿತು ಹೀಗೆ ಹೇಳಿವೆ. “ಚಂಡಾಲರು ಹಾಗೂ ಕೊಳಕು ಜನರು, ಒಡಕು ಮಣ್ಣಿನ ಪಾತ್ರೆಗಳಲ್ಲಿ ಉಣ್ಣಬೇಕು, ಅವರ ಬಟ್ಟೆ ಹೆಣಗಳ ಮೇಲಿನದು, ಕಬ್ಬಿಣದ ಬಳೆ, ಹಾಗೂ ಸದಾ ಅಂಡುಲೆಯುತ್ತಲೇ ಇರಬೇಕು; ಭಿಕ್ಷೆ ಬೇಡಿಯೇ ಉಣ್ಣಬೇಕು; ಒಡಕು ಪಾತ್ರೆಗಳಲ್ಲಿ ಬಡಿಸಬೇಕು; ಹಾಗೂ ಇವರು ರಾತ್ರಿ ಸಂಚರಿಸಬಾರದು; ಹಾಗೂ ಬ್ರಾಹ್ಮಣ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ; ಅವನು ಬೇರೆ ಕೆಲಸವನ್ನು ಮಾಡಿದರೆ ಅದರಿಂದ ಅವನಿಗೆ ಯಾವ ಫಲವು ಲಭಿಸುವುದಿಲ್ಲ.” ದಲಿತರು ಮೂಲತ ಬಡವರಾಗಿಲ್ಲ ಈ ಮನುಸ್ಮøತಿ ಇವರನ್ನು ಬಡತನದ ವಿಷವರ್ತುಲದಲ್ಲಿ ಸಿಲುಕಿಸಿದೆ ಎನ್ನುವುದು ಈ ಮೇಲಿನ ಶ್ಲೋಕದಿಂದ ಸ್ಪಷ್ಟವಾಗುತ್ತದೆ. ಅಂದರೆ ಮನಸ್ಮøತಿಯ ಬೇರು ಹಿಂದೂ ಧರ್ಮದಲ್ಲಿದೆ, ಹಿಂದೂ ಧರ್ಮದ ಬೇರು ಜಾತಿಯಲ್ಲಿದೆ, ಈ ಜಾತಿಯ ಬೇರು ಅಸಮಾನತೆಯಲ್ಲಿದೆ. ಆದ್ದರಿಂದ ಜಾತಿಯ ಜಾಲದ ಎಳೆಗಳು ಒಂದೊಂದಾಗಿ ಕಟ್ ಮಾಡುವವರೆಗೂ ದಲಿತರ ಪ್ರಗತಿ, ವಿಮುಕ್ತಿ ಹಾಗೂ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ. ಆದ್ದರಿಂದ ಈ ಕೆಳಗಿನ ಅಂಶಗಳ ಮೂಲಕ ಬಡತನದ ವಿಷಮವರ್ತುಲದಲ್ಲಿ ದಲಿತರಿರುವುದನ್ನು ಚರ್ಚಿಸಲಾಗಿದೆ.

ಅಧ್ಯಯನದ ಉದ್ದೇಶ ಮತ್ತು ವಿಧಾನ

            ಈ ಲೇಖನದಲ್ಲಿ `ಬಡತನದ ವಿಷವರ್ತುಲದಲ್ಲಿ ದಲಿತರು’ ಎನ್ನುವ ಅಂಶವನ್ನು ವಿಶ್ಲೇಷಿಸಿದ್ದೇನೆ. ಈ ಲೇಖನದ ಮುಖ್ಯ ಉದ್ದೇಶವೆಂದರೆ, ದಲಿತರ ಬಡತನದ ವಿಷವರ್ತುಲದಲ್ಲಿ ಸಿಲುಕಿರುವುದನ್ನು ಭೇದಿಸುವುದಾಗಿದೆ. ಅಲ್ಲದೆ, ದಲಿತರ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಾಗಿರುವುದರಿಂದ ದಲಿತರ ಪ್ರಗತಿಯ ಕುರಿತು ಹಾಗೂ ದಲಿತರ ಸ್ಥಿತಿಗತಿ ಅರಿಯುವ ಉದ್ದೇಶ ಈ ಲೇಖನ ಹೊಂದಿದೆ.

            ಈ ಲೇಖನದ ಅಧ್ಯಯನ ವಿಧಾನ ದ್ವಿತೀಯ ದತ್ತಾಂಶಗಳ ಮೇಲೆ ಅವಲಂಬನೆಯಾಗಿದೆ. ದ್ವಿತೀಯ ಅಂಕಿ ಸಂಖ್ಯೆಗಳನ್ನು ಇಟ್ಟುಕೊಂಡು ವಿಶ್ಲೇಷಿಸಿದ್ದೇನೆ. ಮುಖ್ಯವಾಗಿ ಭಾರತದ ಜನಗಣತಿ, ಯೋಜನಾ ಆಯೋಗ, ಕೆಲವು ಆಯ್ದ ಪುಸ್ತಕಗಳು, ಲೇಖನಗಳು, ನಿಯತಕಾಲಿಕಗಳು, ಪ್ರಬಂಧ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕ ಈ ಲೇಖನದ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಬಡತನ ಮತ್ತು ದಲಿತರು

            ಭಾರತದ ದಲಿತ ಮತ್ತು ಬಡತನ ಎನ್ನುವ ಪದ ಒಂದೇ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇಲ್ಲಿ ನೇರವಾಗಿ ಹೇಳಬೇಕಾದ ವಿಚಾರವೆಂದರೆ, ಈ ಬಡತನವು ಹಿಂದೂ ಧರ್ಮದ ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಾಗಿಲ್ಲ. ಬಡತನ ಯಾವುದೇ ಜನಾಂಗ ಮತ್ತು ಜಾತಿಗೆ ಬರಬಹುದು. ಅದನ್ನು ಕೆಲವು ಸಮಯ, ಯೋಜನೆ, ಶಿಕ್ಷಣ ಮುಂತಾದ ಸಮಾಜಕ್ಕೆ ಮೌಲ್ಯೋತ್ಪಾದಕಗಳನ್ನು ಹೆಚ್ಚಿಸುವ ಮುಖಾಂತರ ಬಡತನದಿಂದ ಮುಕ್ತಿ ಪಡೆಯಬಹುದಾಗಿದೆ. ಆದರೆ ದಲಿತರ ದಲಿತ ಎನ್ನುವ ಪದದಿಂದ ಮುಕ್ತಿ ಪಡೆಯುವುದಕ್ಕೆ ಸಾಧ್ಯವಿಲ್ಲ. ಕಾರಣ ಇದು ಜಾತಿ ಪದ್ಧತಿಯ ಮೇಲೆ ನಿರ್ಮಾಣವಾದ ಪದವಾಗಿದೆ. ಜಾತಿಯು ಪತನಗೊಳ್ಳುವವರೆಗೂ ಈ ದೇಶದಲ್ಲಿ ದಲಿತರು ಎನ್ನುವ ಪದ ಪ್ರಸ್ತುತವಾಗಿರುತ್ತದೆ. ದಲಿತರು ನಾವು ದಲಿತರಾಗಿ ಜೀವಿಸಬೇಕು ಮತ್ತು ಬಡತನವೇ ನಮ್ಮ ಮೂಲ ಗುರುತು ಆಗಿರಬೇಕೆಂದುಕೊಂಡು ಬಂದವರಲ್ಲ. ಭಾರತದಲ್ಲಿ ಮನುವಿನ ಧರ್ಮ ಜಾರಿ ಇದ್ದಿರುವುದರಿಂದ ಅವನ ಪ್ರಕಾರ “ಶೂದ್ರನು ಸಂಪತ್ತು ಶೇಖರಣೆ ಮಾಡುವಂತಿಲ್ಲ; ಮಾಡಿದರೆ ಬ್ರಾಹ್ಮಣನಿಗೆ ನೋವು ತರುತ್ತದೆ ಎಂದು ಹೇಳಿದ್ದಾನೆ”. ದಲಿತರನ್ನು ಬಡತನದಿಂದ ಹೊರಗೆ ಬರದಂತೆ ಮನು ವಿಷವರ್ತುಲವನ್ನು ನಿರ್ಮಿಸಿ ದಲಿತರು ಬಡವರಾಗಿಯೇ ಮುಂದುವರೆಯುವಂತೆ ಮಾಡಿದ್ದಾನೆ. ಅಂದರೆ ದೇಶದಲ್ಲಿ ಜಾತಿ ವ್ಯವಸ್ಥೆ ಬಡತನವನ್ನು ಸೃಷ್ಟಿಸಿದೆ. ಮನುಷ್ಯತ್ವ ಇಲ್ಲದ ಈ ಜಾತಿ ಪದ್ದತಿ ದಲಿತರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣುವುದರಿಂದ ಅವರ ಅಭಿವೃದ್ಧಿಯಾಗುವುದಕ್ಕೆ ಸಾಧ್ಯವಾಗಿಲ್ಲ ಎನ್ನುವುದು ತೀರಾ ಸ್ಪಷ್ಟ. ಜಾತಿಗಳನ್ನು ಕಸುಬನ್ನಾಗಿ ಪರಿವರ್ತಿಸಿ ಶ್ರಮ ಜೀವಿಗಳನ್ನು ವಿಂಗಡಿಸಲಾಗಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಜಾತಿ ಮತ್ತು ಬಡತನ ಎನ್ನುವುದು ಈ ದೇಶದ ಶತ್ರುಗಳೆಂದು ಅಂಬೇಡ್ಕರ್‍ರವರು ಹೇಳಿದ್ದಾರೆ. ದಲಿತರ ಬಡತನಕ್ಕೆ ಮೂಲ ಕಾರಣ ವರ್ಣ ವ್ಯವಸ್ಥೆಯಾಗಿದೆ. ಇದು ಸಂವಿಧಾನ ಜಾರಿಯಾದರು ಸಹ ಬಡತನವು ಪ್ರಸ್ತುತದಲ್ಲಿ ಮುಂದುವರೆದಿದೆ ಎನ್ನುವುದೇ ದಲಿತರ ದುರಂತವಾಗಿದೆ.

ಕೋಷ್ಠಕ – 1

ಭಾರತದಲ್ಲಿ ಸಾಮಾಜಿಕ ಗುಂಪುಗಳ ಮಧ್ಯದಲ್ಲಿ ಬಡತನ ಪ್ರಮಾಣ (ಗ್ರ್ರಾಮೀಣ ಮತ್ತು ನಗರ)

UÁæ«ÄÃt ¥ÀæzÉñÀ

¸ÁªÀiÁfPÀ UÀÄA¥ÀÄUÀ¼ÀÄ

2004-05

2011-12

¥Àj²µÀÖ eÁw

53.50

31.50

¥Àj²µÀÖ ¥ÀAUÀqÀ

62.30

45.30

»AzÀĽzÀ ªÀUÀð

39.80

22.60

EvÀgÉ

27.10

15.50

MlÄÖ §qÀvÀ£À ¥ÀæªÀiÁt

41.80

25.70

£ÀUÀgÀ ¥ÀæzÉñÀ

¥Àj²µÀÖ eÁw

40.60

21.70

¥Àj²µÀÖ ¥ÀAUÀqÀ

35.50

24.10

»AzÀĽzÀ ªÀUÀð

30.60

15.40

EvÀgÉ

16.10

08.20

MlÄÖ §qÀvÀ£À ¥ÀæªÀiÁt

25.70

13.70

 

Sources: Planing Commission.www.business-standard.com (Fewer poor among SC.ST.OBC)

ಈ ಮೇಲಿನ ಕೋಷ್ಠಕದಿಂದ ಕಂಡುಬರುವ ಅಂಶವೆಂದರೆ 2004-05ರ ಅಂಕಿ ಸಂಖ್ಯೆಗಳು 2011-12ಕ್ಕೆ ತುಲನೆ ಮಾಡಿದಾಗ ದಲಿತರ ಬಡತನ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವುದು ಸ್ಪಷ್ಟ. ಅಷ್ಟಲ್ಲದೆ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿಯು ಕಡಿಮೆಯಾಗುತ್ತಿದೆ. ಈ ಅಂಕಿಸಂಖ್ಯೆಗಳು ಮಾನಸಿಕ ಪುಷ್ಟಿ ನೀಡುವ ಅಂಶಗಳಾಗಿವೆ. ಆದರೆ ದಲಿತರ ಬಡತನ ಪ್ರಮಾಣವನ್ನು ಒಟ್ಟು ಬಡತನ ಪ್ರಮಾಣಕ್ಕೆ ಹೋಲಿಕೆ ಮಾಡಿದಾಗ ಕಂಡುಬರುವ ಸಂಗತಿ ಎಂದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ದಲಿತರ ಬಡತನ ಪ್ರಮಾಣ ಹೆಚ್ಚಾಗಿರುವುದು ಕಂಡುಬರುತ್ತದೆ.

ಬಂಡವಾಳಶಾಹಿ ಮತ್ತು ದಲಿತರು

            ದಲಿತರು ಬಡತನ ವಿಷವರ್ತುಲದಿಂದ ಹೊರ ಬರಬೇಕಾದರೆ ಬಂಡವಾಳ ಶಾಹಿ ಅರ್ಥವ್ಯವಸ್ಥೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಭಾರತದಲ್ಲಿ ಬಂಡವಾಳದಾರರು ಹೆಚ್ಚಾಗಿ ಮೇಲ್ವರ್ಣದವರು ಮತ್ತು ಮೇಲ್ವರ್ಗದವರೇ ಆಗಿದ್ದಾರೆ. ಹಿಂದೂ ಧರ್ಮದ ಜಾತಿ ಹಾಗೂ ವರ್ಣ ವ್ಯವಸ್ಥೆಯಲ್ಲಿ ಮೇಲ್ವರ್ಗದ ಜನಾಂಗವು ಉತ್ಪಾದನೆ, ಉದ್ಯೋಗ ಮತ್ತು ವಿತರಣೆಯಲ್ಲಿ ಏಕಸ್ವಾಮ್ಯತೆಯನ್ನು ಪಡೆದುಕೊಂಡಿದೆ. ಅರ್ಥವ್ಯವಸ್ಥೆಯಲ್ಲಿ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಉದ್ಯಮ ಸಂಸ್ಥೆಗಳು ವಸ್ತುಗಳ ಉತ್ಪಾದನೆಯ ಮುಖಾಂತರ ನೆರವೇರಿಸುತ್ತಿವೆ. ಇಲ್ಲಿ ಅಧ್ಯಯನವು ಹೇಳುವ ಸೂಕ್ಷ್ಮ ವಿಚಾರವೆಂದರೆ? ಉತ್ಪಾದನೆ ಮಾಡುವ ಉದ್ಯಮ ಅಥವಾ ಕೈಗಾರಿಕಾ ವಲಯಗಳು ಭಾರತದಲ್ಲಿ ಮೇಲ್ಜಾóತಿಯವರ ಕಪಿಮುಷ್ಟಿಯಲ್ಲಿರುವುದು ಕಂಡುಬರುತ್ತದೆ. ಆದರೆ ಕೆಳ ಜಾತಿಯ ಜನಾಂಗದವರು ಹಿಂದೂ ಧರ್ಮದ ಮನುಸ್ಮøತಿಯ ಪ್ರಕಾರ ದಲಿತರು ಸಂಪತ್ತು ಹೊಂದುವ ಹಕ್ಕಿಲ್ಲವೆಂದು ಹೇಳಿದ್ದರಿಂದ ಪ್ರಸ್ತುತದವರೆಗೂ ಈ ಸಮಾಜ ಹಾಗೆಯೇ ನಡೆದುಕೊಂಡು ಬಂದಿದೆ. ಆದ್ದರಿಂದ ಮೇಲ್ವರ್ಗದ ಜನಾಂಗವು ಮಾತ್ರ ಭಾರತದಲ್ಲಿ ಬಂಡವಾಳಶಾಹಿಗಳಾಗಿದ್ದಾರೆ. ಅಂದರೆ, ಉತ್ಪಾದನೆ ಅರ್ಥವ್ಯವಸ್ಥೆಯಲ್ಲಿ ಏಕಸ್ವಾಮ್ಯಕ್ಕೆ ಒಳಪಟ್ಟಿದೆ ಎನ್ನುವುದು ಒಳನೋಟವಾಗಿದೆ. ಈ ವ್ಯವಸ್ಥೆಯಲ್ಲಿ ದಲಿತರು ಅಥವಾ ಕೆಳವರ್ಗದ ಜನರು ಶ್ರಮಿಕ ವರ್ಗವಾಗಿದೆ. ಉತ್ಪಾದನೆಯಲ್ಲಿ ತಮ್ಮ ಶ್ರಮದಾನದ ಮೂಲಕ ಪಾಲ್ಗೊಳ್ಳುತ್ತಾರೆ. ಆದರೆ ಅದನ್ನು ಅನುಭವಿಸುವುದಿಲ್ಲ. ಉತ್ಪಾದನೆಯಲ್ಲಿ ದಲಿತರ ಶ್ರಮವನ್ನು ನೀಡುವ ಮೂಲಕ ವಸ್ತುಗಳನ್ನು ಉತ್ಪಾದನೆಯನ್ನು ಹೆಚ್ಚಿಸಿ ಬಂಡವಾಳಶಾಹಿಗಳು ಲಾಭ ಪಡೆಯುವಂತೆ ಮಾಡುತ್ತಾರೆ. ಅವರು ಲಾಭ ಪಡೆದ ನಂತರ ಮತ್ತೆ ಬಂಡವಾಳ ಹೂಡಿಕೆ ಮಾಡುತ್ತಾರೆ. ಒಟ್ಟಾರೆ ಈ ಮೇಲಿನ ಎರಡು ಅಂಶಗಳಲ್ಲಿ ಶ್ರಮಿಕ ವರ್ಗ ಮತ್ತು ಬಂಡವಾಳಶಾಹಿ ವರ್ಗ ಯಥಾಸ್ಥಿತಿ ಮುಂದುವರೆಯುತ್ತಾರೆ. ಈ ವರ್ತುಲದ ಹರಿವಿನಲ್ಲಿ ದಲಿತರು ಬಂಡವಾಳ ಶಾಹಿಗಳಿಗೆ ಮೇಲ್ವರ್ಗದ ಜನರ ಸೇವೆಯನ್ನು ಮಾಡಿ ಮತ್ತೆ ದಲಿತರಾಗಿಯೇ ಉಳಿಯುತ್ತಾರೆ. ಹಿಂದೂ ಧರ್ಮದ ಅರ್ಥವ್ಯವಸ್ಥೆಯು ದಲಿತರಿಗೆ ಮುಚ್ಚಿದ ಅರ್ಥವ್ಯವಸ್ಥೆಯಾಗಿದೆ. ಅದು ದಲಿತರಿಗೆ ಉತ್ಪಾದನೆ, ವ್ಯಾಪಾರ ಹಾಗೂ ಸಂಘಟನೆಯಲ್ಲಿ ನಿರ್ಭಂಧವನ್ನು ಹೇರಿದೆ ಎನ್ನುವುದು ಕೆಲವು ಅಧ್ಯಯನದಿಂದ ಕಂಡುಬರುತ್ತದೆ. 

            ಈ ವರ್ಣವ್ಯವಸ್ಥೆಯಲ್ಲಿ ದಲಿತರು ದಲಿತರಾಗಿರುವುದಕ್ಕೆ ಕಾರಣವಾಗಿದೆ. ಒಂದು ಜನಾಂಗದ ಬಡತನವೆನ್ನುವುದು ಒಂದು ರಾತ್ರಿಯಲ್ಲಿ, ದಿನಗಳು, ವರ್ಷಗಳ ಹಿಂದಿನದಾಗಿರುವುದಿಲ್ಲಾ. ಅದಕ್ಕೆ ಚಾರಿತ್ರಿಕ ಇತಿಹಾಸವಿರುತ್ತದೆ. ಬಡತನ ವಿಷವರ್ತುಲ ಎನ್ನವುದು ಕಾರಣ ಮತ್ತು ಪರಿಣಾಮವಾಗಿರುತ್ತದೆ. ಭಾರತದಲ್ಲಿ ಜೀವಿಸುತ್ತಿರುವ ದಲಿತರ ಬಡತನಕ್ಕೆ ಏಕಸ್ವಾಮ್ಯ ಅರ್ಥವ್ಯವಸ್ಥೆ ಪ್ರಮುಖ ಕಾರಣವಾಗಿದೆ. ಬಂಡವಾಳ ಶಾಹಿಯ ವಿಷವರ್ತುಲದಲ್ಲಿ ದಲಿತರು ವಸ್ತುಗಳ ಉತ್ಪಾದನೆಯಲ್ಲಿ ಪಾಲ್ಗೊಂಡು ವಸ್ತುಗಳ ಮೇಲೆ ವೆಚ್ಚಮಾಡುತ್ತಾರೆ. ಇವರು ವೆಚ್ಚಮಾಡುವ ಆದಾಯವು ಉತ್ಪಾದೆನಯಾದ ವಸ್ತುಗಳಿಗೆ ಬೇಡಿಕೆ ತರುತ್ತದೆ. ಅರ್ಥವ್ಯವಸ್ಥೆಯಲ್ಲಿ ಬಡವರ್ಗದ ಜನಾಂಗದಿಂದ ವಸ್ತುಗಳಿಗೆ ಬೇಡಿಕೆ ಹೆಚ್ಚಿದ್ದು ತಮ್ಮ ಸಂಪೂರ್ಣ ಹಣವನ್ನು ಅನುಭೋಗದ ಮೇಲೆ ವೆಚ್ಚ ಮಾಡುವ ಮುಖಾಂತರ ಉತ್ಪಾದನೆ ಹೆಚ್ಚಿಸುವುದಕ್ಕೆ ಕಾರಣವಾಗುತ್ತಾರೆ. ಇದರಿಂದ ಅರ್ಥವ್ಯವಸ್ಥೆಯಲ್ಲಿ ಮಾರುಕಟ್ಟೆ ವಿಸ್ತರಣೆ ಹೊಂದುತ್ತದೆ. ಮೇಲ್ವರ್ಗದ ಶ್ರೀಮಂತ ಜನಸಂಖ್ಯೆ ಕಡಿಮೆ ಇರುವುದರಿಂದ ಮತ್ತು ಈಗಾಗಲೇ ಎಲ್ಲಾ ವಸ್ತುಗಳನ್ನು ಅನುಭೋಗಿಸಿರುವುದರಿಂದ ವಸ್ತುಗಳಿಗೆ ಬೇಡಿಕೆ ಕಡಿಮೆ ಇರುತ್ತದೆ. ಒಟ್ಟಾರೆಯಾಗಿ ಈ ಅರ್ಥವ್ಯವಸ್ಥೆಯಲ್ಲಿ ದಲಿತರು ಪ್ರಮುಖ ಗ್ರಾಹಕರಾಗಿರುವುದರಿಂದ ಮಾರುಕಟ್ಟೆ  ಸ್ವಯಂಚಾಲಿತವಾಗಿ ನಡೆಯುದಕ್ಕೆ ಕಾರಣರಾಗಿದ್ದಾರೆ. ಇಲ್ಲಿ ದಲಿತರ ದುರಂತವೆಂದರೆ ದಲಿತರು ಬಂಡವಾಳಶಾಹಿಗಳಿಂದ ಪಡೆಯುವ ಆದಾಯ ಪ್ರಮಾಣ, ವಸ್ತುಗಳ, ಬೆಲೆಗಳು ಮತ್ತು ಕೂಲಿ ಸಮಾನವಾಗಿರುವುದರಿಂದ,  ತಮ್ಮ ಆದಾಯವೆಲ್ಲವೂ ವೆಚ್ಚ ಮಾಡುತ್ತಾರೆ. ಇಲ್ಲಿ     ದಲಿತರಿಗೆ ಉತ್ಪಾದನೆಯ ಪ್ರಮಾಣದ ಲಾಭಕ್ಕಿಂತಲೂ ಕೂಲಿ ಕಡಿಮೆ ಕೊಡುವ ಮುಖಾಂತರ ಬಂಡವಾಳಶಾಹಿ ಲಾಭದಲ್ಲಿ ಮುಂದುವರೆಯುತ್ತದೆ. ಈ ಲಾಭವನ್ನು ಮಾಡಿಕೊಳ್ಳವ ಜನರು ಹಿಂದೂ ಧರ್ಮದಲ್ಲಿ ಮುಂದುವರೆಯುತ್ತಾರೆ. ಈ ಲಾಭವನ್ನು ಮಾಡಿಕೊಳ್ಳುವ ಜನರು ಹಿಂದೂ ಧರ್ಮದಲ್ಲಿ ವೈಶ್ಯ ವರ್ಣದವರಾಗಿದ್ದಾರೆ. ಅಂದರೆ ಈ ಮಾರುಕಟ್ಟೆ ವ್ಯವಸ್ಥೆ ದಲಿತರಿಗೆ ಮುಚ್ಚಲ್ಪಟ್ಟಿದೆ ಮತ್ತು ವೈಶ್ಯರಿಗೆ ಇದರಲ್ಲಿ ಏಕಸ್ವಾಮ್ಯತೆಯನ್ನು ನೀಡಿದೆ ಈ ಹಿಂದೂ ಧರ್ಮ.

            ಒಟ್ಟಾರೆಯಾಗಿ ಹಿಂದೂ ಧರ್ಮದ ಬಡತನದ ವಿಷವರ್ತುಲದಲ್ಲಿ ದಲಿತರು ಶ್ರಮಿಕ ವರ್ಗ ಮತ್ತು ಅನುಭೋಗಿಗಳಾಗಿರುತ್ತಾರೆ ಅಷ್ಟೆ. ಶ್ರಮಿಕರ ಆದಾಯವು ಉತ್ಪಾದಕ ವರ್ಣ (ಬಂಡವಾಳ ಶಾಹಿಗಳು) ಮತ್ತು ವೈಶ್ಯ ವರ್ಣದವರು ದಲಿತರ ಶ್ರಮವನ್ನು ಪಡೆದುಕೊಂಡು, ಅವರ ಆದಾಯವು ಪುನ: ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳನ್ನು ನೀಡುವ ಮುಖಾಂತರ ಹಣದ ಅಥವಾ ಸಂಪತ್ತಿನ ಶೇಖರಣೆ ಪುನ: ತಮ್ಮಲ್ಲೆ ಇರುವಂತೆ ನೋಡಿಕೊಳ್ಳುತ್ತಾರೆ. ಅಂದರೆ ಬಂಡವಾಳ ಶಾಹಿಗಳು ಬಂಡವಾಳದಾರರಾಗಿ ಮತ್ತು ದಲಿತರು ಶ್ರಮದಾನಿಗಳಾಗಿ ಮುಂದುವರೆಯುತ್ತಾರೆ. ಚರಿತ್ರೆಯಿಂದ ಪ್ರಸ್ತುತದವರೆಗೆ ಹೀಗೆ ನಡೆದುಕೊಂಡುಬಂದಿದೆ. ಆದ್ದರಿಂದ ದಲಿತರ ಬಡತನಕ್ಕೆ ಮೂಲ ಕಾರಣ ಈ ಮನುಸ್ಮøತಿಯಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹಗಳು ಉಳಿದಿಲ್ಲ.

ದಲಿತರ ಆದಾಯ ಮತ್ತು ಉಳಿತಾಯ

            ದಲಿತರು ಕಷ್ಟಪಟ್ಟು ತಮ್ಮ ಆದಾಯದ ಕೆಲಭಾಗ ಉಳಿತಾಯ ಮಾಡುತ್ತಾರೆ. ಅಂದರೆ ತಮ್ಮ ಅನುಭೋಗದ ಕಡಿತದಿಂದ ವೆಚ್ಚ ಕಡಿಮೆ ಮಾಡಿ ಭವಿಷ್ಯತ್ತಿನ ಉದ್ದೇಶಗಳಿಗೆ ಉಳಿತಾಯ ಮಾಡುತ್ತಾರೆ. ಈ ಉಳಿತಾಯವಾದ ಹಣ ಸಾಮಾನ್ಯವಾಗಿ ತಮ್ಮ ಬ್ಯಾಂಕು ಖಾತೆಗಳಲ್ಲಿ ಜಮಾ ಮಾಡುತ್ತಾರೆ. ಈ ಕಾರಣದಿಂದಾಗಿ ಬ್ಯಾಂಕು ತನ್ನ ವಹಿವಾಟನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅಂದರೆ ಬ್ಯಾಂಕುಗಳ ಬೆಳವಣಿಗೆಗೆ ದಲಿತರು ಮತ್ತು ಬಹುಸಂಖ್ಯಾತರು ಕಾರಣರಾಗಿದ್ದಾರೆ. ಆದರೆ ದಲಿತರು ಠೇವಣಿಯಾಗಿಟ್ಟ ಉಳಿತಾಯವು ಬ್ಯಾಂಕುಗಳಲ್ಲಿದ್ದ ಕಾರಣ ಬಂಡವಾಳಶಾಹಿಗಳಿಗೆ ಪುನ: ಪಾಲಾಗುತ್ತದೆ. ಬಂಡವಾಳಶಾಹಿಗಳು ಅಥವಾ ಮೇಲ್ವರ್ಗದ ಜನರು ಭಾರತದಲ್ಲಿ ಬ್ಯಾಂಕುಗಳಿಂದ ಹೆಚ್ಚು ಸಾಲ ಪಡೆಯುವಂತವರಾಗಿದ್ದಾರೆ. ದಲಿತರ ಹಣವು ಠೇವಣಿ ರೂಪದಲ್ಲಿದ್ದ ಹಣ ಹೂಡಿಕೆಯ ನೆಪದಲ್ಲಿ ಬಂಡವಾಳಶಾಹಿಗಳು ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳುತ್ತಾರೆ. ಹೂಡಿಕೆಯಾದ ಬಂಡವಾಳ ನಷ್ಟ ಸಂಭವಿಸಿದೆ ಎಂದು ಹೇಳಿ ಬಂಡವಾಳ ಶಾಹಿಗಳು ಅಥವಾ ಮೇಲ್ವರ್ಗ ಜನಾಂಗದ ಕೆಲ ಉದ್ಯಮದಾರರು ಬ್ಯಾಂಕುಗಳಿಗೆ ಮೋಸವನ್ನು ಮಾಡಿ ವಿದೇಶಗಳಿಗೆ ಪಲಾಯನಗೈಯುತ್ತಾರೆ. ಅಂದರೆ ದಲಿತರ ಹಣವು ಮೇಲ್ವರ್ಗದ ಜನರು ಸಾಲ ರೂಪದಲ್ಲಿ ಅನುಭವಿಸುತ್ತಾರೆ. ಒಟ್ಟಾರೆಯಾಗಿ ದಲಿತರ ಈ ಹಣಕ್ಕೂ ಸಹ ಮೋಸವನ್ನು ಮಾಡುತ್ತಾರೆ. ಇಂಥಹ ಉದಾಹರಣೆಗಳೆಂದರೆ, ಬ್ಯಾಂಕುಗಳಿಗೆ ಮೋಸಮಾಡಿದವರ ಹೆಸರುಗಳು, ನೀರವ ಮೋದಿ, ವಿಜಯ ಮಲ್ಯ, ಲಲಿತ ಮೋದಿ, ಇನ್ನೂ ಪ್ರಕಟಗೊಳ್ಳದ ಲಕ್ಷಾಂತರ ಜನರು ಇದ್ದಾರೆ. ಒಟ್ಟಾರೆಯಾಗಿ ತಮ್ಮ ಆದಾಯ ಮತ್ತು ಉಳಿತಾಯದ ಹಣಗಳಿಂದಲೂ ಸಹ ಅವರು ಪೂರ್ಣ ಪ್ರಮಾಣದ ಲಾಭ ಪಡೆಯುವುದಕ್ಕೆ ದಲಿತರಿಂದ ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ ಹಿಂದೂ ಧರ್ಮದಲ್ಲಿ ದಲಿತರು ಆರ್ಥಿಕ ಪ್ರಗತಿ ಹೊಂದುವುದಕ್ಕೆ ಸಾಧ್ಯವಿಲ್ಲವೆಂಬುವುದಕ್ಕೆ ಈ ಮೇಲಿನ ನಿದರ್ಶನ ಸ್ಪಷ್ಟ ಪಡಿಸುತ್ತದೆ. ಇತಿಹಾಸದ ಸಾವಿರಾರು ವರ್ಷಗಳಿಂದ ದಲಿತರು ಶ್ರಮಿಕರಾಗಿಯೇ ಉಳಿದಿದ್ದಾರೆ. ಜಾಗತೀಕರಣದ ಈ ಸಂದರ್ಭದಲ್ಲಿಯೂ ಅದನ್ನು ಮುಂದುವರೆಸಿದ್ದಾರೆ. ಜಾಗತೀಕರಣದಲ್ಲಿ ಕಾಯಕ ರೂಪಾಂತರಗೊಂಡಿದೆ; ಹೊರತು ಉದ್ಯೋಗವಲ್ಲವೆಂಬುವುದು ಸ್ಪಷ್ಟ.

            ಒಟ್ಟಾರೆಯಾಗಿ ಹೇಳುವುದಾದರೆ, ದಲಿತರು ಶ್ರಮದಾನದ ಮುಖಾಂತರ ಉತ್ಪಾದಕತೆಯನ್ನು ಹೆಚ್ಚಿಸಿ ಮೇಲ್ಜಾತೀಯ ಜನಾಂಗ ಶ್ರೀಮಂತರಾಗುವಂತೆ ಮಾಡುತ್ತಾರೆ. ಮತ್ತೊಂದು ಅಂಶವೆಂದರೆ ಶ್ರಮಿಕರೆ ಉತ್ಪಾದಿಸದ ಸರಕನ್ನು ವೈಶ್ಯನ ಮುಖಾಂತರ ಆ ವಸ್ತುಗಳು ಮಾರುಕಟ್ಟೆಯಲ್ಲಿ ಖರೀದಿಸುವ ಮುಖಾಂತರ ಮೇಲ್ಜಾತಿಯ ವೈಶ್ಯನು ಶ್ರೀಮಂತನಾಗುವುದಕ್ಕೆ ಮತ್ತು ವರ್ಣವ್ಯವಸ್ಥೆಯಲ್ಲಿ ಅವನ ಸ್ಥಾನವನ್ನು ಕಾಪಾಡಿಕೊಳ್ಳುವುದಕ್ಕೆ ಕಾರಣನಾಗುತ್ತಾರೆ. ಅದ್ದರಿಂದ ಬಂಡವಾಳದಾರ ಅಥವಾ ಮೇಲ್ವರ್ಗದ ಜನರು ಬಂಡವಾಳ ಶಾಹಿಯಾಗಿ ಮುಂದುವರೆಯುತ್ತಾರೆ. ಶ್ರಮಿಕರ ವರ್ಗ ಅಥವಾ ದಲಿತನು ದಲಿತನಾಗಿಯೇ ಯಥಾವತ್ತಾಗಿ ಮುಂದುರೆಯುತ್ತಾರೆ. ಅಂದರೆ, ಶ್ರಮಿಕ ವರ್ಗ ಶ್ರಮಿಕನಾಗಿರುವುದಕ್ಕೆ ಮೂಲ ಕಾರಣವಾಗಿದೆ. ಹಾಗೂ ಬಂಡವಾಳಶಾಹಿ ಅಥವಾ ಮೇಲ್ವರ್ಗದ ಜನರು ಬಂಡವಾಳಶಾಹಿದಾರರಾಗಿರುವುದೆ ಅಥವಾ ವೈಶ್ಯನಾಗಿರುವುದೇ ಮೂಲ ಕಾರಣವಾಗಿದೆ. ಒಟ್ಟಾರೆಯಾಗಿ ಬಡತನಕ್ಕೆ ಮೂಲ ಕಾರಣ ಬಡತನವೇ ಆಗಿದೆ” ಎನ್ನುವುದು ಸ್ಪಷ್ಟ.

ಇತರೆ ಅಂಶಗಳ ಚರ್ಚೆ

            ಈ ಬಡತನವು ದಲಿತರಿಗೆ ಹಲವಾರು ಸಾಮಾಜಿಕ ಮೌಲ್ಯೋತ್ಪಾದಕ ಬಂಡವಾಳಗಳನ್ನು ಪಡೆಯದಂತೆ ನೋಡಿಕೊಂಡಿದೆ. ಹಿಂದೂ ಧರ್ಮದ ಕಾರಣದಿಂದಾಗಿ 2011 ರಂತೆ ಶಿಕ್ಷಣವು ಪರಿಶಿಷ್ಟ ಜಾತಿಯಲ್ಲಿ 66.07%, ಪರಿಶಿಷ್ಟ ಪಂಗಡದಲ್ಲಿ 58.96% ಹಾಗೂ ಒಟ್ಟು ಶಿಕ್ಷಣ 72.99% ದಲಿತರು ಶಿಕ್ಷಣ ಪಡೆದುಕೊಂಡಿರುವುದನ್ನು ಕಾಣಬಹುದು. ಇದು ಒಟ್ಟು ಜನಸಂಖ್ಯೆಗಿಂತ ಕಡಿಮೆ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜನಾಂಗದ ಜನರು ಕೃಷಿಯೇತರಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ಹೆಚ್ಚಿನ ಪಾಲು ಹೊಂದಿದ್ದಾರೆ. ಸ್ವಉದ್ಯೋಗದಲ್ಲಿ ಒಟ್ಟು ಜನಸಂಖ್ಯೆಗಿಂತ ಕಡಿಮೆ ಪಾಲನ್ನು ಹೊಂದಿರುವುದು ಕಂಡು ಬರುತ್ತದೆ. ಇವರ ತಲಾ ಆದಾಯವು 2011-12ರಲ್ಲಿ ಪರಿಶಿಷ್ಟ ಜಾತಿ 1252ರೂ., ಪರಿಶಿಷ್ಟ ಪಂಗಡ 1122 ರೂ., ಹಿಂದುಳಿದ ವರ್ಗ 1439 ರೂ ಹಾಗೂ ಒಟ್ಟು ನಗರದಲ್ಲಿ 1430 ರೂ ಪ್ರತಿ ತಿಂಗಳ ವೆಚ್ಚ ಗ್ರಾಮೀಣ ಪ್ರದೇಶದಲ್ಲಿ ಕಂಡುಬಂದರೆ, ನಗರದಲ್ಲಿ ಪರಿಶಿಷ್ಟ ಜಾತಿ 2028ರೂ., ಪರಿಶಿಷ್ಟ ಪಂಗಡ 2193 ರೂ., ಹಿಂದುಳಿದ ವರ್ಗ 2275 ರೂ ಹಾಗೂ ಒಟ್ಟು ನಗರದಲ್ಲಿ 2630 ರೂಗಳಾಗಿದೆ. ದಲಿತರನ್ನು ಒಟ್ಟು ಜನಸಂಖ್ಯೆ ಅನುಭೋಗದ ವೆಚ್ಚಕ್ಕೆ ಹೋಲಿಕೆ ಮಾಡಿದಾಗ ದಲಿತರ ಅನುಭೋಗ ವೆಚ್ಚ ಕಡಿಮೆ ಇರುವುದು ಕಂಡು ಬರುತ್ತದೆ. ಭೂಮಿಯ ಪ್ರಮಾಣದಲ್ಲಿಯೂ ಸಹ ದಲಿತರು ಅತಿ ಕಡಿಮೆ ಮತ್ತು ಸಣ್ಣ ಹಿಡುವಳಿದಾರರು ಹಾಗೂ ಭೂಮಿಯನ್ನೆ ಹೊಂದಿರದ ಸ್ಥಿತಿ ಕಂಡು ಬರುತ್ತದೆ. ಈ ಮೇಲಿನ ಅಂಶಗಳನ್ನು ಗಮನಿಸಿದಾಗ ದಲಿತರ ಸ್ಥಿತಿ ಹೀನಾಯವಾಗಿರುವುದು ಕಂಡು ಬರುತ್ತದೆ. ಆದ್ದರಿಂದ ದಲಿತರು ಪ್ರಗತಿಯನ್ನು ಸಾಧಿಸಬೇಕಾದರೆ ಬಡತನ ವಿಷವರ್ತುಲ ಮುರಿಯುವುದು ಅವಶ್ಯಕವಾಗಿದೆ.

ಸಮಾರೋಪ ಮತ್ತು ಸಲಹೆಗಳು    

            ಈ ಮೇಲಿನ ಲೇಖನದ ವಿವರಣೆಯನ್ನು ನೋಡಿದಾಗ ದಲಿತರು ಭಾರತದಲ್ಲಿ ಶೋಷಣೆಗೂ ಹಾಗೂ ಬಡತನಕ್ಕೂ ಒಳಪಟ್ಟಿದ್ದಾರೆ. ಅದು ಪ್ರಸ್ತುತದಲ್ಲಿ ಕಂಡು ಬರುತ್ತದೆ ಎನ್ನುವುದು ದುರಂತ. ಹಿಂದೂ ಧರ್ಮವೇ ಇದಕ್ಕೆ ನೇರ ಹೊಣೆಯಾಗಿದೆ. ಜಾತಿ ಪದ್ದತಿಯು ಇರುವವರೆಗೂ ದಲಿತರ ಪ್ರಗತಿಯಾಗುವುದಕ್ಕೆ ಸಾಧ್ಯವಿಲ್ಲ ಎನ್ನುವುದು ತೀರಾ ಸ್ಪಷ್ಟ ಸತ್ಯವಾಗಿದೆ. ಆದ್ದರಿಂದ ಈ ಬಡತನ ವಿಷವರ್ತುಲ ಮುರಿಯುವುದಕ್ಕೆ ಕೆಳಗಿನ ಸಲಹೆಗಳು ಮಹತ್ವವಾಗಿವೆ. ದಲಿತರು ಉತ್ಪಾದಕತೆಗೆ ಪಾಲುದಾರನಾಗಿದ್ದಾನೆ ಎನ್ನುವುದು ಮುಖ್ಯ. ಆದ್ದರಿಂದ ದಲಿತರು ಕೂಲಿಯನ್ನು ಅನುಭೋಗ ವೆಚ್ಚದ ಮಟ್ಟಕ್ಕಿಂತ ಹೆಚ್ಚಿಸಿಕೊಳ್ಳಬೇಕು. ಇದು ಸಂಘರ್ಷದ ಮೂಲಕ ಮಾತ್ರ ಸಾಧ್ಯ. ದಲಿತರು ಅನುಭೋಗ ವೆಚ್ಚ ಕಡಿತಗೊಳಿಸಿ ಉಳಿತಾಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆ ಉಳಿತಾಯದ ಹಣವು ದಲಿತರಲ್ಲಿಯೇ ಶೇಖರಣೆಯಾಗುವಂತೆ ಮಾಡಿ, ದಲಿತರು ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಮುಖಾಂತರ ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು. ಈ ದೇಶದಲ್ಲಿರುವ ಸಂಪತ್ತು ಎಲ್ಲಾ ಜಾತಿ, ಜನಾಂಗ, ವರ್ಗ ಮತ್ತು ಧರ್ಮದ ಮಧ್ಯೆ ಪುನ: ಹಂಚಿಕೆ ಮುಖಾಂತರ ಸಮಾನತೆ ಸಾಧಿಸಿಕೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ. ಜಾತಿ ಪದ್ದತಿಯನ್ನು ಮುರಿದು ಅಂತರ್ಜಾತಿ ವಿವಾಹಗಳನ್ನು ಹೆಚ್ಚಿಸುವ ಮುಖಾಂತರ ಸಾಧಿತ ಕಾರ್ಯ ಮಾಡಬೇಕು. ಸಂವಿಧಾನ ನೀಡಿದ ಮೀಸಲಾತಿಗೆ ತೃಪ್ತಿ ಪಡದೆ ಈ ಸಂಪತ್ತು ಪುನರ್ ಹಂಚಿಕೆಗೆ ಒತ್ತಾಯಮಾಡಬೇಕು. ಸಂವಿಧಾನಕ್ಕೆ ಚ್ಯುತಿಬಾರದಂತೆ ಕಾಪಾಡಿಕೊಂಡು ಹೋಗಬೇಕು. ದಲಿತರ ಬಲವೇ ಸಂವಿಧಾನವಾಗಿದೆ. ದಲಿತರು ಹಾಗೂ ಹಿಂದುಳಿದವರು ಒಟ್ಟಾಗಿ ರಾಜಕೀಯ ಚುಕ್ಕಾಣಿಯನ್ನು ಹಿಡಿಯುವ ಮುಖಾಂತರ ಆರ್ಥಿಕ ಸಬಲತೆ ಸಾಧಿಸಬಹುದು ಹಾಗೂ ದಲಿತರು ಹೆಚ್ಚು ಹೆಚ್ಚು ಶಿಕ್ಷಣವಂತರಾಗಬೇಕು ಆಗ ಮಾತ್ರ ದಲಿತರು ಬಡತನ ವಿಷವರ್ತುಲವನ್ನು ಭೇದಿಸಬಹುದು.  

ಆಧಾರ ಗ್ರಂಥಗಳು

  1. ಡಾ.ಸಂಜೀವ ಕುಮಾರ ಪೋತೆ (2017), ಪುಸ್ತಕ “ಜಾಗತೀಕರಣ ಮತ್ತು ಭಾರತದ ದಲಿತರು”, ಜ್ಯೋತಿ ಪ್ರಕಾಶನ, ಮೈಸೂರು.  
  2. (2018), “ಮೀಸಲಾತಿ ಮತ್ತು ಆರ್ಥಿಕ ಅಭಿವೃದ್ಧಿ”, ಪೃಥ್ವಿ ಪ್ರಕಾಶನ, ಮೈಸೂರು.
  3. (2016), “ಭಾರತದ ಜಾಗತೀಕರಣದಲ್ಲಿ ದಲಿತರು ಮತ್ತು ಅವರ ಪ್ರಸ್ತುತ ಸವಾಲುಗಳು” (ದುರ್ಬಲ ವರ್ಗಗಳ ಸಬಲೀಕರಣ, ಸಂಪಾದನೆ ಡಾ. ಶೇಖರ ಮತ್ತು ಬಿ.ಎನ್. ಸುನೀಲ್ ಕುಮಾರ), ಪ್ರಕಾಶನ ಜನಸ್ಪಂದ ಟ್ರಸ್ಟ್ (ರಿ) ಶಿಕಾರಿ ಪುರ.  
  4. (2017) ಲೇಖನ “ಮಾರ್ಗದರ್ಶಕ ಡಾ.ಸಿದ್ರಾಮ ಕಾರಣಿಕ, (ಕಾರಣಿಕ ಅಂತರಂಗ, ಸಂ, ದುಂಡಪ್ಪ ನಾಂದ್ರೆ) ಕಿಟಕಿ ಪ್ರಕಾಶನ, ಮೈಸೂರು
  5. (2019), “ದಲಿತರ ಸಾಮಾಜಿಕ, ಆರ್ಥಿಕ ಸಮಸ್ಯೆಗಳು ಹಾಗೂ ಸವಾಲುಗಳು” Tumbe Group of International Journals International e-magazine, www.tumbe .org 27th Feb 2019. Page 838.
  6. Dr. Sanjeevakumara.M. Pote (2017) “ Role of Sciene and Technology for Sustainable Development of the Country” Sucharitha Publication Vishakapatnam Andhra Pradesh.
  7.  (2016) “ Ban credit and Economic Empowerment of weaker sections – An analysis, CREATE SPACE, 4900 Lacross Road  North Charleston, USA.
  8. S.M. Pote and S.T. Bagalkoti (2012), “Availability and accessibility to Dalits in Gulbarga and Kolar Districts as well as Karnataka in India”, Indian streams Research Journal (isrj) vol-2 Iss- 8.5 pet 2012, www.isrj.net
  9. (2011), “Education among Dalits in Gulbarga (Karnataka)” Third concept An nternational Journal of India, vol – 25, June 2011.
  10.  (2011), “Dalits in India vis –a-vis Karnataka” Third concept An International Journal of Indieas, vol – 25 (293) July- 2011.  
  11.  (2011) “NREGA and Socio – Economic Empowerment ; Prospects & Problems”, PRABHANVESHANA, Journal of Commerce & Economics, Vol-1, Jan – June 2011.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal