Tumbe Group of International Journals

Full Text


ಭಾಷಾ ಶಿಕ್ಷಣದ ಸಮಸ್ಯೆಗಳು ಮತ್ತು ಸವಾಲುಗಳು

ಡಾ.ನಾಗವರ್ಮ.ಜಿ.ಎಚ್

ಕನ್ನಡ ಸಹಾಯಕ ಪ್ರಾಧ್ಯಾಪಕರು,

ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ-577501

varmaturuvanuru@gmail.com   +91 9449614968

ಪ್ರಸಾವನೆ:

ಮಗುವೊಂದು ಜನಿಸಿದಾಗ, ಅದು ತನ್ನ ಮೊದಲ ಸಂಬಂಧವನ್ನು ತಾನು ಮಾಡುವ ಮತ್ತು ಕೇಳುವ ಶಬ್ದದಿಂದ ಸ್ಥಾಪಿಸಿಕೊಳ್ಳುತ್ತದೆ. ವಸ್ತುಗಳನ್ನಾಗಲೀ, ಇತರರನ್ನಾಗಲಿ ಅದು ತಾನು ಹೇಳುವ ಹೆಸರಿನಿಂದಲೇ ಗುರುತಿಸುತ್ತದೆ. ಅದು ಬೆಳೆಯುವ ವಾತಾವರಣದಲ್ಲಿ ಅದಕ್ಕೆ ದೊರಕಿರುವ ಭಾಷೆಯ ವ್ಯಾಕರಣವನ್ನು ತನ್ನಲ್ಲಿಯೇ ಕಲಿಯಲು ತನ್ನ ಆಂತರಿಕ ಭಾಷಾ ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತದೆ.

            ಆದಿ ಭಾಷೆಯನ್ನು ಬಳಸಿಕೊಂಡು ತನ್ನ ಪ್ರಪಂಚವನ್ನು ಕಟ್ಟಿಕೊಳ್ಳುತ್ತದೆ. ಮಾತೃಭಾಷೆಯ ಉತ್ತಮವಾದ ತಳಹದಿಯ ಮೇಲೆ ಇತರ ಭಾಷೆಗಳನ್ನು ಹಾಗೂ ಇತರ ವಿಷಯಗಳನ್ನು ಕಲಿಯುವುದು ಸುಲಭವಾಗುತ್ತದೆ. ಅಡಿಪಾಯವೇ ದುರ್ಬಲವಾದಾಗ ಅಡಿಪಾಯವಾಗಬೇಕಿದ್ದ ಭಾಷೆ, ಕಲಿಕೆಯ ಇತರ ಭಾಷೆಗಳು ಮತ್ತು ವಿಷಯಗಳು ದುರ್ಬಲವಾಗುತ್ತವೆ. ಎಎಸ್ಇಆರ್ ವರದಿಯ ಪ್ರಕಾರ ಎಂಟನೆಯ ತರಗತಿಯ ವಿದ್ಯಾರ್ಥಿಯು ಎರಡನೆಯ ತರಗತಿಯ ಪುಸ್ತಕಗಳನ್ನು ಓದಲಾರ ಎಂಬುದು ಇದಕ್ಕೆ ಒಳ್ಳೆಯ ಉದಾಹರಣೆ.

            ಇಂಗ್ಲಿಷ್ ಕಲಿಕೆ ಮತ್ತು ಅದರಲ್ಲಿಯೇ ಬೋಧಿಸುವುದು ಭಾರತೀಯ ಮನಸ್ಸುಗಳನ್ನು ಎಷ್ಟು ಆವರಿಸಿಕೊಂಡಿದೆಯೆಂದರೆ, ಅದು ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಸಂಕಷ್ಟದಲ್ಲಿ ಇಟ್ಟಿದೆ. ಇಂಗ್ಲಿಷ್ ಭಾಷೆ ಮಾತ್ರ ಅಂತಾರಾಷ್ಟ್ರೀಯ ಭಾಷೆಯೆಂದು ಹೇಳುವುದು ಇತರ ದೇಶೀ ಭಾಷೆಗಳನ್ನು ಕಲಿಯುವುದಕ್ಕೆ ಒಂದು ತಡೆಯನ್ನೇ ಏರ್ಪಡಿಸಿದೆ. ಸಮಸ್ತ ಜ್ಞಾನವನ್ನು ಒಳಗೊಂಡಿರುವ ಭಾಷೆಯೆಂದರೆ ಇಂಗ್ಲಿಷ್ ಮಾತ್ರ ಎನ್ನುವ ದೃಷ್ಟಿಯ ಅಭಿವೃದ್ಧಿ ಹೊಂದಿದ ಆಧುನಿಕ ಭಾರತೀಯ ಭಾಷೆಗಳನ್ನು ಬಲಿ ತೆಗೆದುಕೊಂಡಿದೆ. ಏಕಭಾಷೆಯಾಗಿ ವಿಜೃಂಭಿಸುತ್ತಿರುವ ಈ ಭಾಷೆ ಬಹು ಭಾಷಾ ಸಂಸ್ಕøತಿಯನ್ನು ಪ್ರತಿರೋಧಿಸುತ್ತದೆ. ಅದು ಅಲ್ಪಸಂಖ್ಯಾತರ ಭಾಷೆಗಳಿಗೆ ವಿನಾಶಕಾರಿಯಾಗಿದೆ.

            ಈ ವ್ಯವಸ್ಥೆಯಲ್ಲಿ ಇರುವ ದೋಷಗಳನ್ನು ತೋರಿಸುತ್ತಿರುವರು ಇಂಗ್ಲಿಷ್ ವಿರೋಧಿಗಳೆಂದೇನೊ ಅಲ್ಲ. ಇಂಗ್ಲಿಷ್ ಭಾಷೆಯನ್ನು ದೇಶದಿಂದ ಗಡೀಪಾರು ಮಾಡಬೇಕೆಂದು ಯಾರೂ ಹೇಳುತ್ತಿಲ್ಲ.  ಆದರೆ ಹೆಚ್ಚಿನ ಆಲೋಚನಾಶೀಲರು ಎಲ್ಲಾ ಕಡೆಯೂ ಅತಿಯಾಗಿ ಇಂಗ್ಲಿಷ್ ಮಾಯಾವಾಗುತ್ತಿರುವುದು ದೇಶದ ಸ್ವ್ಸಸ್ವರೂಪವನ್ನು ನಾಶಮಾಡುತ್ತಿದೆ ಎಂಬ ಕಾರಣಕ್ಕಾಗಿ ಅದನ್ನು ವಿರೋಧಿಸುತ್ತಿದ್ದಾರೆ. ಕಲಿಸಲು ಅಗತ್ಯವಾದ ಸಾಧನ ಸಾಮಾಗ್ರಿಗಳ ಅಭಾವ, ಯೋಗ್ಯ ಭಾಷಾ ಶಿಕ್ಷಕರು ಇಲ್ಲದೆ ಇರುವುದು ಮತ್ತು ಇಂಗ್ಲಿಷ್ ಭಾಷೆಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಿರುವುದು ಮತ್ತು ಮಾತೃ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಶಿಕ್ಷಣದ ಬುನಾದಿಯನ್ನೇ ಅಭದ್ರವಾಗಿಸುತ್ತಿದೆ.

ಇಂತಹ ದುರ್ಬಲ ತಳಹದಿಯ ಮೇಲೆ ನಿರ್ಮಸಿದ ತಂತ್ರಜ್ಞಾನ, ತಾಂತ್ರಿಕ ಶಿಕ್ಷಣ ಮತ್ತು ಉನ್ನತ ವಿದ್ಯಾಭ್ಯಾಸಗಳಿಂದಾಗಿ ಇಂದು ವಿಶ್ವದ 200 ಉತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಒಂದು ವಿಶ್ವವಿದ್ಯಾಲಯದ ಹೆಸರಿಲ್ಲದಿರುವುದು ಆಶ್ಚರ್ಯವೆನಿಸದು. ಬಹುಭಾಷಾ ಶಿಕ್ಷಣದ ಶಾಲೆಗಳಲ್ಲಿ ಇತರ ಭಾಷಾ ಅಥವಾ ಭಾಷೆಗಳ ಮೂಲಕ ಜ್ಞಾನವನ್ನು ಸಂಪಾದಿಸಲು ಮಾತೃ ಭಾಷೆಯೇ ಉತ್ತಮ ಮಾಧ್ಯಮವಾಗಿದೆ. ಭಾಷೆಗಳನ್ನು ಒಂದು ವಿಷಯವಾಗಿ ಅಭ್ಯಾಸ ಮಾಡುವುದನ್ನು ಉಳಿದಂತೆ ಇತರ ಎಲ್ಲಾ ವಿಷಯಗಳನ್ನೂ ಮಾತೃ ಭಾಷೆಯಲ್ಲಿಯೇ ಬೋಧಿಸಬೇಕು ಮತ್ತು ಉನ್ನತ ಹಂತದ ಮಾಧ್ಯಮದ ಬದಲಾವಣೆಯನ್ನು ವಿದ್ಯಾರ್ಥಿಗಳ ಆಯ್ಕೆಗೆ ಮುಕ್ತವಾಗಿರಿಸಬೇಕು. ಹೀಗೆ ಮಾಡುವುದರಿಂದ ಇಂಗ್ಲಿಷನ್ನೂ ಒಳಗೊಂಡಂತೆ ಇತರ ಭಾಷೆಗಳಿಂದ ಜ್ಞಾನವನ್ನು ಗಳಿಸುವುದಕ್ಕೆ ಸಹಾಯ ಮಾಡಿದಂತಾಗುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಬಂದ ಹೊಸದರಲ್ಲಿ. ಶ್ರೀಮಂತರು ಮತ್ತು ಬಡವರು, ಮೇಲು ಮತ್ತು ಕೆಳಜಾತಿಯವರು, ಸಾಮಾಜಿಕವಾಗಿ ಬಲಯುತವಾಗಿದ್ದವರು ಮತ್ತು ದುರ್ಬಲರು ಎಲ್ಲರೂ ಒಂದೇ ಎಡೆಯಲ್ಲಿ ಕುಳಿತು ವಿದ್ಯಾಭ್ಯಾಸವನ್ನು ಮಾಡುವಂತಹ ಶಾಲೆಗಳಿಗೆ ಬೇಡಿಕೆಯಿತ್ತು. ಆದರೆ ನಂತರದ ವರ್ಷಗಳಲ್ಲಿ ನಾವು ಎರಡು ವಿಧದ ವ್ಯವಸ್ಥೆಗಳನ್ನು ಬೆಳೆಸಿದೆವು- ಒಂದು ಉತ್ತಮ ಮೂಲಭೂತ ಸೌರ್ಕಯಗಳು, ತರಬೇತಿ ಹೊಂದಿದ ಶಿಕ್ಷಕರು, ಉತ್ತುಮವಾದ ಶೈಕ್ಷಣಿಕ ಸಾಮಾಗ್ರಿಗಳು ಮತ್ತು ಇಂಗ್ಲಿಷ್ ಮಾಧ್ಯಮವಿರುವ ಶಾಲೆಗಳಾದರೆ, ಇನ್ನೊಂದು ಮೂಲಭೂತ ಸೌಕರ್ಯಗಳ ಅಭಾವ, ತರಬೇತಿಯಿಲ್ಲದ ಶಿಕ್ಷಕರು, ಪರಿಣಾಮಕಾರಿಯಲ್ಲದ ಶೈಕ್ಷಣಿಕ ಸಾಮಾಗ್ರಿಗಳನ್ನು ಹೊಂದಿರುವ ಪ್ರಾದೇಶಿಕ ಭಾಷಾ ಮಾಧ್ಯಮದ ಶಾಲೆಗಳು, ಪ್ರಾದೇಶಿಕ ಭಾಷಾ ಮಾಧ್ಯಮದ ಪ್ರಾಥಾಮಿಕ ಶಾಲೆಗಳಲ್ಲಿ, ಒಳ್ಳೆಯ ಭಾಷಾ ಶಿಕ್ಷಕರು ಇರುವುದಿಲ್ಲ.

            ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವ ಮತ್ತು ಪ್ರಾಮುಖ್ಯತೆಯಿರುತ್ತದೆ. ಯಾವ ಭಾಷೆ ಹೆಚ್ಚು, ಯಾವ ಭಾಷೆ ಕಡಿಮೆ ಎಂದೇನೂ ಹೇಳಲು ಬರುವುದಿಲ್ಲ. ಜ್ಞಾನಾರ್ಜನೆ ಭಾಷೆಯಾಗಿ ಮತ್ತು ಪ್ರಗತಿಯ ಭಾಷೆಯಾಗಿ ಪ್ರಾದೇಶಿಕ ಭಾಷೆಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆಗಳು ನಡೆದಿಲ್ಲ.

            ಇಂಗ್ಲಿಷ್ ಭಾಷೆಯು ಹುದ್ದೆ, ಸ್ಥಾನಮಾನ ಮತ್ತು ಹಣವನ್ನು ತಂದುಕೊಡುತ್ತದೆ ಎಂದು ಆ ಭಾಷೆಯ ಶಿಕ್ಷಣದ ಬಗ್ಗೆ ಉತ್ತ್ತಮಿಕೆಯ ಭಾವನೆ ಮತ್ತು ಪ್ರಾದೇಶಿಕಕ ಭಾಷೆಗಳ ಕಲಿಕೆಯ ಬಗ್ಗೆ ನಿಕೃಷ್ಟತೆಯ ಭಾವನೆ ಇರುವುದು ವಸಾಹತುಶಾಹಿ ಮಾದರಿಯಲ್ಲಿ ನಾವು ಭಾಷೆಯನ್ನು ಬೋಧಿಸುತ್ತಿರುವುದರಿಂದ, ನಮ್ಮ ಭಾಷೆಗಳು ಜ್ಞಾನದ ಸಾಧನೆಗಳೂ ಆಗಿಲ್ಲ; ಪ್ರಗತಿಯ ವಾಹಕಗಳೂ ಆಗಿಲ್ಲ. ಭಾಷಾ ಕಲಿಕೆ ಮತ್ತು ಭಾಷೆಗಳನ್ನು ಮಾಧ್ಯಮವನ್ನಾಗಿ ಅಳವಡಿಸುವುದರ ಬಗ್ಗೆ ಸಂಶೋಧನೆಗಳು ನಡೆದಿಲ್ಲ.

            ಸಂಶೋಧನಾ ಗ್ರಂಥಗಳನ್ನು ಪಠ್ಯಪುಸ್ತಕವನ್ನಾಗಿ ಮತ್ತು ಪರಾಮರ್ಶನ ಗ್ರಂಥಗಳನ್ನಾಗಿ ಉ¥ಯೋಗಿಸಬೇಕು. ಬ್ರಿಜ್ಕೋರ್ಸ್ ಮತ್ತು ಇಂಟಿನ್ಸೀವ್ ಕೋರ್ಸ್ಗಳ ಬಗ್ಗೆ ಸಂಶೋಧನೆಗಳು ನಡೆದಿಲ್ಲ. ಶಿಕ್ಷಣದಲ್ಲಿ ಕಾನೂನು ಮತ್ತು ಆಡಳಿತದಲ್ಲಿ ಹಾಗೂ ಗುಣಮಟ್ಟದ ಶಿಕ್ಷಣದ ಬಗ್ಗೆ ಸಂಶೋಧನೆಗಳು ನಡೆದಿಲ್ಲ ಶಿಕ್ಷಕರ ತರಬೇತಿಗಾಗಿ ಉತ್ತಮ ಸಂಸ್ಥೆಗಳಿಲ್ಲ ಮತ್ತು ಸರಿಯಾದ ಪಠ್ಯಕ್ರಮವಿಲ್ಲ. ಶಾಲೆಗಳು ಸಾಕಷ್ಟು ಸಂಖ್ಯೆಯ ಶಿಕ್ಷಕರನ್ನು ಹೊಂದಿಲ್ಲ. ಹೊಂದಿದ್ದರೂ ತರಬೇತಿಯನ್ನು ಪಡೆದ ಶಿಕ್ಷಕರಿಲ್ಲ. ದ್ವಿಭಾಷಾ, ಬಹುಭಾಷಾ ಶಿಕ್ಷಣ ಹಾಗೂ ಇ-ಶಿಕ್ಷಣದ ಬಗ್ಗೆ ಸಂಶೋಧನೆಗಳು ನಡೆದಿಲ್ಲ.

            ಇವೆಲ್ಲಕ್ಕೂ ಮೂಲಭೂತವಾದದ್ದು ಭಾಷೆ, ಭಾಷೆಯಿಲ್ಲದೆ ಕಲಿಕೆಯ ಯಾವ ವಿಷಯವೂ ಇರಲು ಸಾಧ್ಯವಿಲ್ಲ ಮತ್ತು ಯಾವ ಭಾಷೆಯೂ ವಿಷಯದಿಂದ ಹೊರತಾಗಿಲ್ಲ. ನೋಡುವುದು ಕೇಳುವುದು ಮತ್ತು ಅರ್ಥಮಾಡಿಕೊಳ್ಳವುದು. ಮಾತಾನಾಡವುದು, ಹೆಸರಿಸುವುದು, ಓದುವುದು ಮತ್ತು ಬರೆಯುವುದು ಈ ಮೂಲಕ ಕೌಶಲಗಳೂ ಮಾನವ ಜೀವನದ ಮೂಲ ಸಾಮಾಗ್ರಿಗಳಾಗಿದ್ದು.

            ಇವೆಲ್ಲವೂ ಭಾಷೆಯನ್ನೇ ಅವಲಂಬಿಸಿರುತ್ತದೆ. ಮಗುವು ಭಾಷೆಯ ಮೂಲಕವೇ ಶಿಕ್ಷಣವನ್ನು ಪಡೆಯಬೇಕು ಮತ್ತು ಜ್ಞಾನವನ್ನು ಗಳಿಸಬೇಕು ಶಿಕ್ಷಣವನ್ನು ನೀಡುವಾಗ, ಯಾವ ಮಗುವೂ ಕಲಿಕೆಯಿಂದ ವಂಚಿತವಾಗದಂತೆ ಎಲ್ಲ ಮಕ್ಕಳಿಗೂ ಸೂಕ್ತ ಆಯ್ಕೆಗಳು ಹಾಗೂ ಪರ್ಯಾಯಗಳನ್ನು ಸರ್ಕಾರವು ಒದಗಿಸಬೇಕು.

            ಎರಡು ವಿಷಯಗಳು ಸ್ಪಷ್ಠವಾಗಿದೆ. ಮೊದಲೆನಯದು ಮಾತೃಭಾಷೆಯ ಆದ್ಯತೆ ಮತ್ತು ಎರಡನೆಯದು ರಾಜ್ಯದ ಅಧಿಕೃತ ಭಾಷೆ, ರಾಜ್ಯ ಅಥವಾ ರಾಜ್ಯಗಳ ಬಹುಭಾಷಾ ಪರಿಸ್ಥಿತಿಯನ್ನು ಗಮನಿಸಿದರೆ ಈ ಎರಡು ನೀತಿಗಳಿಗೆ ಪರ್ಯಾಯವಾದದ್ದು ಯಾವುದು ಇಲ್ಲ. ರಾಜ್ಯವು ನೀಡುವ ಪರ್ಯಾಯಗಳನ್ನು ಅವಲಂಬಿಸಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಮೂರು ಮತ್ತು ನಾಲ್ಕನೆಯ ಭಾಷೆಯಗಳಾಗಿರಬೇಕು. ಏನೇ ಆದರೂ ಆರನೆಯ ತರಗತಿಗೆ ಮೊದಲು ಇಂಗ್ಲಿಷ್ ಭಾಷೆಯನ್ನು ಮಕ್ಕಳ ಮೇಲೆ ಹೇರಬಾರದು. ಮಾಧ್ಯಮದಲ್ಲಿ ಆಯ್ಕೆಗಳು ಶಾಲಾ ಶಿಕ್ಷಣದ ನಂತರ ದೊರಕಬೇಕು.

ಉಪಸಂಹಾರ:

ಮೊದಲು ಮಾತೃಭಾಷೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ ತದನಂತರ ಉಳಿದ ಭಾಷೆಗಳ ಕಲಿಕೆಗೆ ಅನುವು ಮಾಡಿಕೊಡಬೇಕು. ‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ’. ಎನ್ನುವ ನಾಣ್ಣುಡಿಯಂತೆ ಮಾತೃ ಭಾಷೆಯ ಶಿಕ್ಷಣ ಅತ್ಯಗತ್ಯ. ಅದರ ಜೊತೆಗೆ ಇನ್ನುಳಿದ ಭಾಷೆಯ ಜ್ಞಾನ, ಅರಿವನ್ನೂ ಮಕ್ಕಳಿಗೆ ಕಲಿಸಬೇಕಿದೆ. ಭಾಷೆಗಳಲ್ಲಿ ಮೇಲು-ಕೀಳೆಂಬ ತರತಮ ಭಾವನೆ ಸಲ್ಲದು.

ಪರಾಮರ್ಶನ ಗ್ರಂಥಗಳು:

  1. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ, ಡಾ.ಮಹಾಬಲೇಶ್ವರ ರಾವ್ 2010, ನವಕರ್ನಾಟಕ ಪ್ರಕಾಶನ, ಬೆಂಗಳೂರು.
  2. ಫ್ರೌಢ ಶಾಲೆಗಳಲ್ಲಿ ಕನ್ನಡ ಬೋಧನೆ, ಡಾ.ಮಹಾಬಲೇಶ್ವರ ರಾವ್ 2010, ನವಕರ್ನಾಟಕ ಪ್ರಕಾಶನ, ಬೆಂಗಳೂರು.
  3. ಶಾಲೆಗಳಲ್ಲಿ ಕನ್ನುಡಿಯ ಕಲಿಕೆ, ಸಚ್ಚಿದಾನಂದಯ್ಯ.ಕೆ 1990, ಸತ್ಯಶ್ರೀ ಪ್ರಕಾಶನ, ಮೈಸೂರು.
  4. ಕನ್ನಡ ಭಾಷಾ ಕಲಿಕೆಯನ್ನು ಅನುಕೂಲಿಸುವುದು. ಕುಮಾರಸ್ವಾಮಿ.ಎಚ್, ಮತ್ತು ಬೃಂದಾರಾವ್ 2013 ಸಂಪನ್ಮೂಲ ಸಾಹಿತ್ಯ, ಡಿ.ಎಡ್. ಪ್ರಥಮ ವರ್ಷ ಡಿ.ಎಸ್.ಇ.ಆರ್.ಟಿ, ಬೆಂಗಳೂರು.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal