Tumbe Group of International Journals

Full Text


ಪ್ರಾಚೀನ ಭಾರತದ ಇತಿಹಾಸದಲ್ಲಿ ಶಾಸನಗಳು

ಶ್ರೀಮತಿ ಸಜೀಲ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ

ಎಸ್.ಎಂ.ಬಿ.ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ನರೇಗಲ್, ಗದಗ ಜಿ||

Email: sajeela.hassan@gmail.com, Ph 7760905785

ಪೀಠಿಕೆ

ಆಧಾರವಿಲ್ಲದೆ ಇತಿಹಾಸವಿಲ್ಲ. ಆಧಾರಗಳೆ ಇತಿಹಾಸ ರಚನೆಗೆ ಅಡಿಗಲ್ಲು, ಆಧಾರವಿಲ್ಲದೆ ಇತಿಹಾಸವನ್ನು ಹೇಳಲು ಹೊರಟರೆ ಅದು ಕಟ್ಟು ಕಥೆಯಾಗುತ್ತದೆ. ಆದ್ದರಿಂದಲೇ ಒಂದು ದೇಶದ ಚರಿತ್ರೆ ರಚನೆಗೆ ಆಧಾರಗಳ ಅಧ್ಯಯನ ಅತ್ಯಂತ ಅವಶ್ಯಕ. ನಮ್ಮ ಭಾರತದ ಇತಿಹಾಸದಲ್ಲಿ ಪ್ರಾಚೀನ ಭಾರತದ ಇತಿಹಾಸದ ಪರಿಚಯ ನಮಗೆಲ್ಲ ಅವಶ್ಯಕ. ಪ್ರಾಚೀನ ಭಾರತದ ಇತಿಹಾಸ ಭವ್ಯ ಮತ್ತು ಬಹುಮುಖವಾದುದು, ನಮ್ಮ ಸಂಸ್ಕೃತಿ, ನಾಗರಿಕತೆ, ಅವರುಗಳು ಅನುಸರಿಸುತ್ತಿದ್ದ ಕಸುಬುಗಳು, ಸಾಮಾಜಿಕ ಪದ್ಧತಿ, ಭಾಷೆ, ಲಿಪಿ ಇವುಗಳು ರೂಪುಗೊಂಡ ಬಗೆ ಇವುಗಳನ್ನು ತಿಳಿಸುತ್ತದೆ. ಕಲ್ಲು ಬಂಡೆಗಳ ಮೇಲೆ, ದೇವಾಲಯದ ಗೋಡೆಗಳ ಮೇಲೆ, ಸ್ಥಂಭಗಳ ಮೇಲೆ, ಗುಹಾಲಯಗಳಲ್ಲಿ ತಾಮ್ರದ ಹಲಗೆ, ಬೆಳ್ಳಿ, ಕಂಚು ಬಂಗಾರದ ತಗಡುಗಳ ಮೇಲೆ ಕೆತ್ತಲಾಗಿದೆ. ಪ್ರಾಚೀನ ಭಾರತದ ಇತಿಹಾಸ ರಚನೆಗೆ ಶಾಸನಗಳು ಬಹು ಮಖ್ಯ ಆಧಾರಗಳು. ಇತಿಹಾಸದ ಪುನರ್ನಿಮಾಣದಲ್ಲಿ ಶಾಸನಗಳು ನಂಬಲರ್ಹ ಮಾಹಿತಿಗಳನ್ನು ಒದಗಿಸುತ್ತದೆ. ಬ್ರಾಹ್ಮಿ, ಖರೋಷ್ಠಿ, ದೇವನಾಗರಿ ಲಿಪಿಗಳಲ್ಲಿ ಪ್ರಾಕೃತ, ಪಾಳಿ, ಸಂಸ್ಕೃತ, ಕನ್ನಡ ಮುಂತಾದ ಭಾಷೆಗಳಲ್ಲಿ ಶಾಸನಗಳು ಕೆತ್ತಲ್ಪಟ್ಟಿವೆ . ರಾಜಕೀಯ, ಸಾಮ್ರಾಜ್ಯದ ಗಡಿ, ಧಾರ್ಮಿಕತೆ, ವಂಶಾನುಕ್ರಮಣಿಕೆ, ದಾನ-ದತ್ತಿ, ಅಭಿವೃಧ್ದಿ ಕಾರ್ಯಗಳು, ಸಂಸ್ಕೃತಿ ನಂಬಲರ್ಹ ಮಾಹಿತಿಗಳನ್ನು ಒದಗಿಸುತ್ತದೆ. ಆದರೆ ಪ್ರಾಚೀನ ಭಾರತದ ಇತಿಹಾಸ ರಚನೆ ಅಷ್ಟು ಸುಲಭವಲ್ಲ ಅತಿ ಹೆಚ್ಚಿನ ಪ್ರಯತ್ನ ಅವಶ್ಯಕ. ಪ್ರಾಚೀನ ಇತಿಹಾಸವನ್ನು ರಚಿಸಲು ಮಾಹಿತಿಗಳು ಹಲವು ಮೂಲಗಳಿಂದ ದೊರೆಯುತ್ತದೆ ಅವುಗಳನ್ನು ಕಲೆಹಾಕಿ ಇತಿಹಾಸಕಾರ ಇತಿಹಾಸವನ್ನು ಬರೆಯ ಬೇಕಾಗುತ್ತದೆ.

ಪ್ರಾಚೀನ ಭಾರತದ ಇತಿಹಾಸ ರಚನೆಗೆ ಶಾಸನಗಳು

ಪ್ರಾಚೀನ ಬಾರತದಲ್ಲಿ ಹೆರೊಡೋಟಸ್, ಥುಸಿಡೈಡ್ಸ್, ಲೆವಿ ಇವರುಗಳಂತಹ ಇತಿಹಾಸಕಾರರಿರಲಿಲ್ಲವಾದರೂ ಪುರಾಣಗಳಲ್ಲಿ ನಮ್ಮ  ಇತಿಹಾಸ ಅಡಗಿದ್ದನ್ನು ಕಾಣಬಹುದು. ಪುರಾಣಗಳು ವಿಶ್ವಕೋಶದಂತಿದ್ದು, ಗುಪ್ತ ಆಳ್ವಿಕೆಯ ಆರಂಭದವರೆಗಿನ ರಾಜವಂಶದ ಇತಿಹಾಸವನ್ನು ತಿಳಿಸುತ್ತದೆ. ಆದರೂ ಘಟನೆಗಳು ನಡೆದ ನಂತರ ಅವುಗಳು ದಾಖಲಾಗಿರುವುದರಿಂದ,  ಪ್ರಾಚೀನ ಭಾರತದ ಇತಿಹಾಸ ರಚನೆಗೆ ಶಾಸನಗಳು ಬಹು ಮಖ್ಯ ಆಧಾರಗಳು. ಇತಿಹಾಸದ ಪುನರ್ನಿಮಾಣದಲ್ಲಿ ಶಾಸನಗಳು ನಂಬಲರ್ಹ ಮಾಹಿತಿಗಳನ್ನು ಒದಗಿಸುತ್ತದೆ.

 ಶಾಸನ ಲಿಖಿತ ರೂಪದ ದಾಖಲೆ, ಉದ್ದೇಶವೊಂದರ ಸಲುವಾಗಿ

  1. ಘನ ವಸ್ತುವಿನ ಮೇಲೆ ಬರೆಯಲ್ಪಟ್ಟಿರುವುದು.
  2. ಕಲ್ಲು ಬಂಡೆಗಳ ಮೇಲೆ,
  3. ದೇವಾಲಯದ ಗೋಡೆಗಳ ಮೇಲೆ,
  4. ಸ್ಥಂಭಗಳ ಮೇಲೆ,
  5. ಗುಹಾಲಯಗಳಲ್ಲಿ
  6. ತಾಮ್ರದ ಹಲಗೆ,
  7. ಬೆಳ್ಳಿ, ಕಂಚು ಬಂಗಾರದ ತಗಡುಗಳ ಮೇಲೆ ಕೆತ್ತಲಾಗಿದೆ.

ಪ್ರಾಚೀನ ಕಾಲದ ರಾಜರು ತಮ್ಮ ಸಾಧನೆಗಳನ್ನು ತಮ್ಮ ಮುಂದಿನ ಪೀಳಿಗೆಗೆ ತಿಳಿಯ ಪಡಿಸಲು, ಪ್ರಾಚೀನ ಭಾರತದ ಇತಿಹಾಸ ರಚನೆಗೆ ಶಾಸನಗಳು ಬಹು ಮಖ್ಯ ಆಧಾರಗಳು. ಇತಿಹಾಸದ ಪುನರ್ನಿಮಾಣದಲ್ಲಿ ಶಾಸನಗಳು ನಂಬಲರ್ಹ ಮಾಹಿತಿಗಳನ್ನು ಒದಗಿಸುತ್ತದೆ ಆಗಿನ

  1. ರಾಜಕೀಯ,
  2. ಸಾಮ್ರಾಜ್ಯದ ಗಡಿ,
  3. ಧಾರ್ಮಿಕತೆ,
  4. ವಂಶಾನುಕ್ರಮಣಿಕೆ,
  5. ದಾನ-ದತ್ತಿ,
  6. ಅಭಿವೃಧ್ದಿ ಕಾರ್ಯಗಳು,
  7. ಸಂಸ್ಕೃತಿ

ಮುಂತಾದ ಮಾಹಿತಿಗಳು ಶಾಸನಗಳಿಂದ ಲಭ್ಯವಾಗುತ್ತದೆ.

ಶಾಸನಗಳ ಅಧ್ಯಯನ- ಶಾಸನ ಶಾಸ್ತ್ರ

ಶಾಸನಗಳ ಅಧ್ಯಯನವೇ ಶಾಸನ ಶಾಸ್ತ್ರ ಹಾಗೂ ಹಳೆಯ ದಾಖಲಾತಿಗಳ ಬರವಣಿಗೆಯ ಅಧ್ಯಯನವನ್ನು ಲಿಪಿ ಶಾಸ್ತ್ರ ಎಂದು ಕರೆಯುತ್ತಾರೆ. ಬ್ರಾಹ್ಮಿ, ಖರೋಷ್ಠಿ, ದೇವನಾಗರಿ ಲಿಪಿಗಳಲ್ಲಿ ಪ್ರಾಕೃತ, ಪಾಳಿ, ಸಂಸ್ಕೃತ, ಕನ್ನಡ ಮುಂತಾದ ಭಾಷೆಗಳಲ್ಲಿ ಶಾಸನಗಳು ಕೆತ್ತಲ್ಪಟ್ಟಿವೆ.

ಖರೋಷ್ಠಿ ಲಿಪಿ

ಖರೋಷ್ಠಿ ಲಿಪಿಯು ಭಾರತದ ವಾಯುವ್ಯ ಭಾಗಕ್ಕೆ ಸೀಮಿತಗೊಳಿಸಲಾಗಿದೆ. ಈ ಲಿಪಿಯು ಬಹುಶಃ ಅರಾಮಿಕ್ ಲಿಪಿಯಿಂದ ಹುಟ್ಟಿಕೊಂಡಿರಬಹುದು ಎಂದು ನಂಬಲಾಗಿದೆ. ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ ಅಕೆಮೆನಿಡ್ ಆಳ್ವಿಕೆಯಲ್ಲಿ ಈ ಲಿಪಿಯನ್ನು ಪರಿಚಯಿಸಲಾಯಿತು. ಈ ಲಿಪಿಯು ಬಲದಿಂದ ಎಡಕ್ಕೆ ಬರೆಯುವ ದಿಕ್ಕನ್ನು ಅವಲಂಭಿಸಿರುತ್ತದೆ.

ಬ್ರಾಹ್ಮಿ ಲಿಪಿ

ಬ್ರಾಹ್ಮಿ ಲಿಪಿಯು ವಿಶ್ವದ ಪ್ರಮುಖ ಬರವಣಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಈ ಲಿಪಿಯು ಕ್ರಿ.ಪೂ 5ನೇ ಶತಮಾನದ ಹೊತ್ತಿಗಾಗಲೇ ಭಾರತದಲ್ಲಿ ಕಾಣಿಸಿ ಕೊಂಡಿತ್ತು. ಆದರೆ ಆರಂಭಿಕ ಗ್ರಂಥಗಳಲ್ಲಿಯೂ ಸಹ ಇದು ಅನೇಕ ಸ್ಥಳೀಯ ರೂಪಾಂತರಗಳನ್ನು  ಹೊಂದಿತ್ತು ಎಂಬ ಅಂಶವು ಅದರ ಮೂಲ ಸಮಯಕ್ಕಿಂತ ಹಿಂದಿದೆ ಎಂದು ಸೂಚಿಸುತ್ತದೆ. ಈ ಲಿಪಿಯು ಎಡದಿಂದ ಬಲಕ್ಕೆ ಬರೆಯುವ ಕ್ರಮವಾಗಿದ್ದು, ಸೆಮೆಟಿಕ್ ಲಿಪಿಯಿಂದ ಬಂದಿತೆಂದು, ಹರಪ್ಪ-ಮೊಹೆಂಜೊದಾರೋ ಲಿಪಿಯಿಂದ ಬಂದಿತೆಂದು, ತಾಂತ್ರಿಕ ಬೀಜಾಕ್ಷರಗಳಿಂದ ಬಂದಿತೆಂದು ವಾದಿಸುತ್ತಾರೆ. ಕ್ರಿ.ಶ 1837-38 ರಲ್ಲಿ ಜೇಮ್ಸ್ ಪ್ರಿನ್ಸೆಪ್ ಬ್ರಾಹ್ಮೀ ಲಿಪಿಯನ್ನು ಸಮರ್ಪಕವಾಗಿ ಪೂರ್ತಿ ಓದಿದನು.

ಶಾಸನಗಳ ವರ್ಗೀಕರಿಣಿ

ಶಾಸನಗಳನ್ನು ಶಿಲಾಶಾಸನ ಮತ್ತು ತಾಮ್ರ ಶಾಸನ ಎಂದು ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವುಗಳನ್ನು

  1. ರಾಜ ಶಾಸನ,
  2. ಪ್ರಶಸ್ತಿಶಾಸನ,
  3. ದಾನ ಶಾಸನ,

ದಾನಶಾಸ- ದಾನಶಾಸನಗಳಲ್ಲಿ

  1. ಅಗ್ರಹಾರ ದಾನ,
  2. ಪುರದಾನ,
  3. ಉಂಬಳಿ ದಾನ,
  4. ತೆರಿಗೆ ದಾನ,
  5. ನಿರ್ಮಾಣ ದಾನ,
  6. ನೆತ್ತರು ದಾನ,
  7. ದೇವಾಲಯ ದಾನ,
  8. ಭೂ ದಾನ

ಹೀಗೆ ಸ್ಥಳೀಯವಾಗಿ ಹಲವಾರು ವಿಧಗಳಿರುವುದನ್ನು ಕಾಣಬಹುದು. ಭಾರತದ ಬಹು ಪಾಲು ಶಾಸನಗಳು ದಾನ ಶಾಸನಗಳಾಗಿವೆ. ಅಲ್ಲದೇ ನಿಷೀದಿಗೆ, ವೀರಗಲ್ಲುಗಳು, ಮಾಸ್ತಿಗಲ್ಲುಗಳು, ಹೀಗೆ ಹಲವಾರು ವಿಧಗಳಾಗಿ ವಿಂಗಡಿಸ ಬಹುದಾಗಿದೆ.

ಸಿಂಧೂ ನಾಗರೀಕತೆ ಶಾಸನಗಳು- ಪ್ರಾಚೀನ ಶಾಸನಗಳಲ್ಲಿ ಸಿಂಧೂ ನಾಗರೀಕತೆ ಶಾಸನಗಳು ಬಹು ಪ್ರಾಚೀನವಾದವು. ಅವು ಚಿತ್ರ ಲಿಪಿಗಳಾದ್ದರಿಂದ ಓದಲು ಸಾಧ್ಯವಾಗಿಲ್ಲ. ಸೊಹ್ಗಾರ್ ಶಾಸನ ಭಾರತದ ಶಾಸನಗಳಲ್ಲೇ ಅತಿ ಪ್ರಾಚೀನ ಶಾಸನವಾಗಿದ್ದು ಇದನ್ನು ಅಶೋಕನ ಶಾಸನಗಳಿಗಿಂತ 50 ವರ್ಷಗಳಷ್ಟು ಹಳೆಯದೆಂದು ನಂಬಲಾಗಿದೆ. ಆದರೆ ಕ್ರಿ.ಪೂ 3ನೇ ಶತಮಾನದ ಅಶೋಕನ ಶಾಸನಗಳು ಓದಲಾದ ಭಾರತದ ಅತೀ ಪ್ರಾಚೀನ ಶಾಸನಗಳು. ಭಾರತದಲ್ಲಿ ಅಸಂಖ್ಯಾತವಾದ ಶಾಸನಗಳು ದೊರುಕುತ್ತವೆ ಸುಮಾರು 85000ಕ್ಕೂ ಹೆಚ್ಚು ಶಾಸನಗಳು ಲಭ್ಯವಾಗಿದೆ. ಬಹುಪಾಲು ತಮಿಳುನಾಡಿನಲ್ಲೂ, ಎರಡನೇಯದಾಗಿ ಅತೀ ಹೆಚ್ಚು ಶಾಸನಗಳು ಕರ್ನಾಟಕದಲ್ಲೂ ಲಭ್ಯವಾಗಿವೆ.

ಅಶೋಕನ ಶಾಸನಗಳು - ಪ್ರಾಚೀನ ಭಾರತದ ಕೆಲವು ಪ್ರಮುಖ ಶಾಸನಗಳೆಂದರೆ,ಶಿಲಾ ಶಾಸನಗಳ ಪಿತಾಮಹಾ, ಸ್ವ ಇತಿಹಾಸಕಾರ ಎನ್ನಿಸಿಕೊಂಡ ಸಾಮ್ರಾಟ್ ಅಶೋಕನ ಶಾಸನಗಳು ಭಾರತದ ವಿವಿಧ ಮೂಲೆಗಳಲ್ಲೂ ದೊರೆತ್ತಿದ್ದು

  1. ಆಶೋಕನ ಕಾಲಘಟ್ಟ ತಿಳಿಯಲು ಅನುಕೂಲವಾಗಿದೆ.
  2. ಅಶೋಕನ ಶಾಸನಗಳನ್ನು ಬಂಡೆಗಲ್ಲು, ಶಿಲಾಶಾಸನ, ಸ್ಥಂಭಶಾಸನಗಳೆಂದು ಕರೆಯಲಾಗುತ್ತದೆ.
  3. ಆಶೋಕನ ಶಾಸನಗಳು ದಕ್ಷಿಣ ಭಾರತದಲ್ಲಿ ಬ್ರಾಹ್ಮಿ ಲಿಪಿಯಲ್ಲೂ, ಮನ್ಷೇರ ಮತ್ತು ಷಹಬಾಜ್‍ಘರಿಗಳಲ್ಲಿ ಖರೋಷ್ಠಿ ಲಿಪಿಗಳಲ್ಲಿ ಕೊರೆಸಿದ್ದಾನೆ.
  4. ಆಶೋಕನ ಶಾಸನಗಳು ಸಾಮಾಜಿಕ, ರಾಜಕೀಯ, ಆರ್ಥಿಕ ಚಿತ್ರಣವನ್ನು, ಧಾರ್ಮಿಕ ಸಹಿಷ್ಣುತೆಯನ್ನು, ಬಿರುದು, ನೈತಿಕ ನೀತಿಗಳು, ಮೌರ್ಯ ಸಾಮ್ರಾಜ್ಯದ ಎಲ್ಲೆ ಇತ್ಯಾದಿ ವಿಷಯಗಳ ಬಗ್ಗೆ  ತಿಳಿಯಲು ಉಪಯುಕ್ತವಾಗಿವೆ.
  5. ಅಶೋಕನ ಶಾಸನಗಳನ್ನು ಬಂಡೆಗಲ್ಲು, ಶಿಲಾಶಾಸನ, ಸ್ಥಂಭಶಾಸನಗಳೆಂದು ಕರೆಯಲಾಗುತ್ತದೆ.
  6. ಆಶೋಕನ ಶಾಸನಗಳು ದಕ್ಷಿಣ ಭಾರತದಲ್ಲಿ ಬ್ರಾಹ್ಮಿ ಲಿಪಿಯಲ್ಲೂ, ಮನ್ಷೇರ ಮತ್ತು ಷಹಬಾಜ್‍ಘರಿಗಳಲ್ಲಿ ಖರೋಷ್ಠಿ ಲಿಪಿಗಳಲ್ಲಿ ಕೊರೆಸಿದ್ದಾನೆ.
  7. ಆಶೋಕನ ಶಾಸನಗಳು ಸಾಮಾಜಿಕ, ರಾಜಕೀಯ, ಆರ್ಥಿಕ ಚಿತ್ರಣವನ್ನು, ಧಾರ್ಮಿಕ ಸಹಿಷ್ಣುತೆಯನ್ನು, ಬಿರುದು, ನೈತಿಕ ನೀತಿಗಳು, ಮೌರ್ಯ ಸಾಮ್ರಾಜ್ಯದ ಎಲ್ಲೆ ಇತ್ಯಾದಿ ವಿಷಯಗಳ ಬಗ್ಗೆ  ತಿಳಿಯಲು ಉಪಯುಕ್ತವಾಗಿವೆ

ಶಕ ದೊರೆ ರುದ್ರದಾಮನ ಗುಜರಾತಿನ ಜುನಾಘಡದ ಗಿರ್ನಾರ್ ಶಾಸನ - ಶಕ ದೊರೆ ರುದ್ರದಾಮನ ಗುಜರಾತಿನ ಜುನಾಘಡದ ಗಿರ್ನಾರ್ ಶಾಸನ ಕ್ರಿ.ಶ ಎರಡನೇಯ ಶತಮಾನದ ಮಧ್ಯದಲ್ಲಿ ಬರೆದ ಪರಿಶುದ್ಧ ಸಂಸ್ಕೃತದ ಆರಂಭಿಕ ಉದಾಹರಣೆಯೆಂದು ಪರಿಗಣಿಸಲಾಗಿದೆ. ಸುದರ್ಶನ ಕೆರೆಯ ಮೌರ್ಯರ ರಾಜ್ಯಪಾಲ ವೈಶ್ಯ ಪುಷ್ಯಗುಪ್ತನು ನಿರ್ಮಾಣ ಮಾಡಿದನೆಂದು ಹಾಗೂ ರುದ್ರದಾಮನಿಂದ  ಜೀರ್ಣೋದ್ದಾರ ಆದ ಬಗ್ಗೆ ಮಾಹಿತಿ ನೀಡುತ್ತದೆ.

  1. ಮೆಹ್ರೌಲಿ ಶಾಸನ ಚಂದ್ರಗುಪ್ತ ವಿಕ್ರಮಾಧ್ಯಿತ್ಯನ ಬಗ್ಗೆ ವಿಪುಲ ಮಾಹಿತಿ ನೀಡುತ್ತದೆ.  ವಂಗ ದೇಶಗಳ ವಿರುದ್ಧ, ವಾಕಟಕರ ವಿರುದ್ಧದ ಹೋರಾಟದ ಬಗ್ಗೆ ತಿಳಿಸುತ್ತದೆ.
  2. ಅಲಹಾಬಾದ್ ಸ್ಥಂಭಶಾಸನ ಸಮುದ್ರಗುಪ್ತನ ಮಹಾದಂಡನಾಯಕ ಹರಿಸೇನನಿಂದ ರಚಿತವಾಗಿದ್ದು ಚಂಪು ಕಾವ್ಯ ಶೈಲಿಯ 33 ಸಾಲುಗಳ ಒಂದೇ ಬೃಹತ್ ವಾಕ್ಯವಾಗಿದ್ದು ಸಮುದ್ರಗುಪ್ತನ ದಿಗ್ವಿಜಯದ ಬಗ್ಗೆ ತಿಳಿಸುತ್ತದೆ.
  3. ನಾಸಿಕ್ ಶಾಸನವು ಕ್ರಿ.ಶ 149 ರಲ್ಲಿ ಗೌತಮಿ ಬಾಲಶ್ರೀ ಕೆತ್ತಿಸಿದಳು. ಗೌತಮಿ ಪುತ್ರ ಸಾತಕರ್ಣಿಯು ಯವನರನ್ನು ರಾಜ್ಯದಿಂದ ಓಡಿಸಿದರ ಬಗ್ಗೆ, ನಹಪಾಣನನ್ನು ಸೋಲಿಸಿದ್ದು, ಬಿರುದು, ಮತ ಸ್ವಾತಂತ್ರ ಇವುಗಳ ಬಗ್ಗೆ ತಿಳಿಸುತ್ತದೆ. ನಾನ್‍ಘಾಟ್, ಕಾರ್ಲೆ, ಕನ್ನೇರಿ, ಬನವಾಸಿ, ಮಳವಳ್ಳಿ ಶಾಸನಗಳು ಶಾತವಾºನÀರ ಬಗ್ಗೆ ಮಾಹಿತಿ ಒದಗಿಸುತ್ತದೆ.
  4. ಹಾಥಿಗುಂಫ ಶಾಸನವು ಕ್ರಿ.ಪೂ ಒಂದನೇ ಶತಮಾನದ ಶಾಸನವಾಗಿದ್ದು, ಭಾರತೀಯ ಇತಿಹಾಸದ ಮೇಲೆ ಹೆಚ್ಚಿನ ಬೆಳಕು ಚೆಲ್ಲುವ ಶಾಸನಗಳಲ್ಲಿ ಈ ಶಾಸನವು ಒಂದು. ಕಳಿಂಗದ ದೊರೆ ಖಾರವೇಲನ ಬಗ್ಗೆ ಹಾಗೂ ಮೌರ್ಯರ ನಂತರದ ಕಳಿಂಗದ ಇತಿಹಾಸ ತಿಳಿಸುವ ಶಾಸನವಾಗಿದೆ.
  5. ಕುಡಿಮಿಯಾ ಮಲೈ ಶಾಸನ ಪಲ್ಲವರ ಇತಿಹಾಸದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದ್ದು ದಕ್ಷಿಣದ ಸಂಗೀತದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
  6. ಚೋಳ ದೊರೆ ಒಂದನೇ ಪರಾಂತಕ ನಿಂದ ಕೆತ್ತಿಸಲ್ಪಟ್ಟ ಉತ್ತರಮೇರೂರು ಶಾಸನ ಗ್ರಾಮಾಡಳಿತದ ಬಗ್ಗೆ ವಿವರಿಸುತ್ತದೆ.
  7. ಕ್ರಿ.ಶ 450 ಹಲ್ಮಿಡಿ ಶಾಸನ, ಚಂದ್ರವಳ್ಳಿ ಶಾಸನ, ತಾಳಗುಂದ ಶಾಸನ, ಹಲಸಿಯ ಶಾಸನಗಳು ಕದಂಬರ ಬಗ್ಗೆ, ಶ್ರವಣಬೆಳಗೊಳ ಶಾಸನ, ಹೆಬ್ಬೆಟ್ಟ ಶಾಸನಗಳು ಗಂಗರ ಬಗ್ಗೆ,
  8. ಕ್ರಿ.ಶ 634ರ ಐಹೊಳೆ ಶಾಸನವು ಚಾಲುಕ್ಯರ ಎರಡನೇಯ ಪುಲಕೇಶಯ ಸಾಧನೆ ದಿಗ್ವಿಜಯದ ಬಗ್ಗೆ ವಿವರಣೆ ನೀಡುತ್ತದೆ.

ಹೀಗೆ ಸಾಕಷ್ಟು ಶಾಸನಗಳು ಲಭ್ಯವಾಗಿದ್ದು ಶಾಸನಗಳು ಎಂಬ ಬೇರುಗಳಿಂದ ಇತಿಹಾಸವೆಂಬ ಪುಷ್ಪ ಅರಳಿದೆ ಎಂಬ ಚರಿತ್ರಕಾರನ ಮಾತು ಸತ್ಯವಾಗಿದೆ.

ಶಾಸನಗಳ ಸಂರಕ್ಷಿಣನೆ

ಭಾರತದಲ್ಲಿ ಲಭ್ಯವಾದ ಶಾಸನಗಳನ್ನು ದೇಶದ ಹಲವು ಮ್ಯೂಸಿಯಂಗಳಲ್ಲಿ ಸಂರಕ್ಷಿಸಿಡಲಾಗಿದೆ. ಪ್ರಾಚೀನ ಭಾರತದ ಇತಿಹಾಸ ಅಧ್ಯಯನಕ್ಕೆ ಲಭ್ಯವಾದ ಶಾಸನಗಳನ್ನು ಸಂಗ್ರಹಿಸಿ ಎಪಿಗ್ರಾಫಿಯ ಆಫ್ ಕರ್ನಾಟಕ, ಎಫಿಗ್ರಾಫಿಯ ಆಫ್ ಇಂಡಿಯಾ ಎಂಬ ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಮೌರ್ಯರು ಮತ್ತು ಗುಪ್ತರ  ಕಾಲದ ಶಾಸನಗಳನ್ನು ಕಾರ್ಪಸ್ ಇನ್‍ಸ್ಕ್ರಿಪ್ಷನ್  ಇಂಡಿಕಾರಂ ಎಂಬಲ್ಲಿನ ಪ್ರಕಟಿಸಲಾಗಿದೆ.

  • ಶಾಸನಗಳಿಂದ ಇತಿಹಾಸದ ರಚನೆ ಅತ್ಯಂತ ನಂಬಲರ್ಹ ಮತ್ತು ಕ್ರಮಬದ್ಧವಾಗಿರುತ್ತದೆ.
  • ಶಾಸನಗಳು ಕಾಲಗಣನೆಯನ್ನು ತಿಳಿಸಲು,
  • ಭಾಷಾ ಬೆಳವಣಿಗೆ,
  • ಆ ಕಾಲದ ವೈಜ್ಞಾನಿಕ ಮನೋಭಾವನೆ,
  • ಲೋಹಶಾಸ್ತ್ರದ ನಿಪುಣತೆ ತಿಳಿಸುತ್ತದೆ.

ಆದರೆ ಶಾಸನಗಳಲ್ಲಿ ದೋಷಗಳಿಲ್ಲ ಎಂದಲ್ಲ ಕೆಲವೊಂದು ಶಾಸನಗಳು ಹೊಗಳಿಕೆಗಳಿಂದಲೂ, ಕೆಲವು ಕೂಟ ಶಾಸನಗಳು, ಉತ್ಪ್ರೇಕ್ಷಿತ ಅಂಶಗಳು, ಶಾಸನಗಳ ಲಿಪಿ, ಭಾಷೆ ಓದಲು ಸಾಧ್ಯವಾಗದೇ ಇರುವುದು,  ಹೀಗೆ ಇತಿಹಾಸಕಾರ ಇತಿಹಾಸವನ್ನು ರಚಿಸುವಾಗ ಎಚ್ಚರಿಕೆಯಿಂದ ಕೂಲಂಕಶವಾಗಿ ಪರಿಶೀಲಿಸಿ, ವಿಮರ್ಶಿಸಿ ರಚಿಸ ಬೇಕಾಗಿರುತ್ತದೆ.

  1. ಸಂಸ್ಕೃತಿ,
  2. ನಾಗರಿಕತೆ,
  3. ಅನುಸರಿಸುತ್ತಿದ್ದ ಕಸುಬುಗಳು,
  4. ಸಾಮಾಜಿಕ ಪದ್ಧತಿ,
  5. ಭಾಷೆ,
  6. ಲಿಪಿ ಇವುಗಳು ರೂಪುಗೊಂಡ ಬಗೆ ಇವುಗಳನ್ನು ತಿಳಿಸುತ್ತದೆ.

ಆದರೆ ಪ್ರಾಚೀನ ಭಾರತದ ಇತಿಹಾಸ ರಚನೆ ಅಷ್ಟು ಸುಲಭವಲ್ಲ ಅತಿ ಹೆಚ್ಚಿನ ಪ್ರಯತ್ನ ಅವಶ್ಯಕ. ಪ್ರಾಚೀನ ಇತಿಹಾಸವನ್ನು ರಚಿಸಲು ಮಾಹಿತಿಗಳು ಹಲವು ಮೂಲಗಳಿಂದ ದೊರೆಯುತ್ತದೆ ಅವುಗಳನ್ನು ಕಲೆಹಾಕಿ ಇತಿಹಾಸಕಾರ ಇತಿಹಾಸವನ್ನು ಬರೆಯ ಬೇಕಾಗುತ್ತದೆ.

ಪ್ರಾಚೀನ ಭಾರತದ ಇತಿಹಾಸ ಅಧ್ಯಯನಕ್ಕೆ ಲಭ್ಯವಾದ ಶಾಸನಗಳನ್ನು ಸಂಗ್ರಹಿಸಿ

  1. ಎಪಿಗ್ರಾಫಿಯ ಆಫ್ ಕರ್ನಾಟಕ,
  2. ಎಫಿಗ್ರಾಫಿಯ ಆಫ್ ಇಂಡಿಯಾ
  3. ಕಾರ್ಪಸ್ ಇನ್‍ಸ್ಕ್ರಿಪ್ಷನ್  ಇಂಡಿಕಾರಂ

ಅವುಗಳನ್ನು ಕಲೆಹಾಕಿ ಇತಿಹಾಸಕಾರ ಇತಿಹಾಸವನ್ನು ಬರೆಯ ಬೇಕಾಗುತ್ತದೆ. ಹೀಗೆ ಇತಿಹಾಸಕಾರ ಇತಿಹಾಸವನ್ನು ರಚಿಸುವಾಗ ಎಚ್ಚರಿಕೆಯಿಂದ ಕೂಲಂಕಶವಾಗಿ ಪರಿಶೀಲಿಸಿ, ವಿಮರ್ಶಿಸಿ ರಚಿಸ ಬೇಕಾಗಿರುತ್ತದೆ. ಆದರೆ ಶಾಸನಗಳಲ್ಲಿ ದೋಷಗಳಿಲ್ಲ ಎಂದಲ್ಲ ಕೆಲವೊಂದು ಶಾಸನಗಳು ಹೊಗಳಿಕೆಗಳಿಂದಲೂ, ಕೆಲವು ಕೂಟ ಶಾಸನಗಳು, ಉತ್ಪ್ರೇಕ್ಷಿತ ಅಂಶಗಳು, ಶಾಸನಗಳ ಲಿಪಿ, ಭಾಷೆ ಓದಲು ಸಾಧ್ಯವಾಗದೇ ಇರುವುದು,  ಹೀಗೆ ಇತಿಹಾಸಕಾರ ಇತಿಹಾಸವನ್ನು ರಚಿಸುವಾಗ ಎಚ್ಚರಿಕೆಯಿಂದ ಕೂಲಂಕಶವಾಗಿ ಪರಿಶೀಲಿಸಿ, ವಿಮರ್ಶಿಸಿ ರಚಿಸ ಬೇಕಾಗಿರುತ್ತದೆ.

ಆಧಾರ ಗ್ರಂಥಗಳು

  1. ಸಮಗ್ರ ಭಾರತದ ಇತಿಹಾಸ – ಡಾ. ಕೆ.ಸದಾಶಿವ
  2. ಪ್ರಾಚೀನ ಭಾರತ - ಪ್ರೊ. ಆರ್ ಎಸ್ ಶರ್ಮಾ
  3. ಪ್ರಾಚೀನ ಭಾರತ - ಹೆಚ್.ಎಂ.ಬಸವರಾಜು
  4. ಪ್ರಾಚೀನ ಭಾರತ - ಪ್ರೊ.ಸಿ.ಎನ್.ಲೋಕಪ್ಪಗೌಡ
  5. ಪ್ರಾಚೀನ ಭಾರತದ ಇತಿಹಾಸ – ಡಾ.ಎ.ಸಿ.ನಾಗೇಶ್
  6. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ – ಡಾ.ಎಂ ಚಿದಾನಂದಮೂರ್ತಿ
  7. https://www.jagranjosh.com
  8. https://www.newworldencyclopedia.org
  9. theindianhistory.org
  10. https://itihasaacademy.wordpress.com


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal