Tumbe Group of International Journals

Full Text


ಕನ್ನಡ ಭಾಷೆಯ ಭಾಷಾಂತರ  ಮತ್ತು ಅದರ ಮಿತಿಗಳು

Translation and its Limitation in Kannada Language

ಡಾ. ಎಸ್. ಶಶಿರೇಖಾ

(Dr. S. Shashirekha)

Assistant professor in Kannada

Government First Grade College, Tumakuru

ಪ್ರಸಾವನೆ

ಭಾಷಾಂತರ ಒಂದು ವಿಶಿಷ್ಟವಾದ ಪ್ರಕ್ರಿಯೆ. ಭಾಷಾಂತರಕ್ಕೆ ಪರ್ಯಾಯವಾಗಿ ‘ಅನುವಾದ, ತರ್ಜುಮಾ, ಕನ್ನಡಿಸು’ ಎಂಬ ಶಬ್ದಗಳನ್ನು ಬಳಸಲಾಗುತ್ತಿದೆ. ಆಧುನಿಕ ಜಗತ್ತು ಅನುವಾದ ಕ್ರಿಯೆಯನ್ನು ಅನಿವಾರ್ಯವಾಗಿಸಿದೆ. ಇಂಗ್ಲಿಷ್ ಭಾಷೆಯಲ್ಲಿ ಮೊದಲು ನಿಘಂಟನ್ನು ರಚಿಸಿದ ಡಾ ಜಾನ್‍ಸನ್ ಭಾಷಾಂತರ ಎಂದರೆ ‘To change into another language retaining sense’ ಎಂದಿದ್ದಾರೆ. ಅಂದರೆ ‘ಅರ್ಥವನ್ನು ಕಾಯ್ದುಕೊಂಡು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಕೊಂಡೊಯ್ಯುವುದನ್ನು’ ಜಾನ್‍ಸನ್ ಭಾಷಾಂತರ ಎಂದು ಪರಿಗಣಿಸಿದ್ದಾನೆ. ಭಾಷೆಗಳ ನಡುವಣ ಪಾರಸ್ಪರಿಕ ವ್ಯತ್ಯಾಸದಿಂದಾಗಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅರ್ಥವನ್ನು ಸಂಪೂರ್ಣವಾಗಿ ಕೊಂಡೊಯ್ಯುವುದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ವಸ್ತುವನ್ನು ಮತ್ತು ವ್ಯಕ್ತಿಯನ್ನು ಸೂಚಿಸುವ ಪದಗಳು ಭಾಷಾಂತರಗೊಳ್ಳುತ್ತಿರುವ ಭಾಷೆಯಲ್ಲಿ ಪರ್ಯಾಯವಾಗಿ ಸಿಗುವುದಿಲ್ಲ. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ವಿಚಾರಗಳನ್ನು ssssಭಾಷಾಂತರ ಮಾಡುವಾಗ ಭಾಷಾಂತರಕಾರ ಎಚ್ಚರವಾಗಿರಬೇಕು .’ಸಂಸ್ಕೃತಿ’ ಯನ್ನು ಅಧ್ಯಯನ ಮಾಡಿರಬೇಕು. ಕೆಲವು ಕಡೆ ಪದವನ್ನು ಅದೇ ರೀತಿ ಬಳಸಿ ಅದಕ್ಕೆ ವಿಶೇಷವಾದ ವಿವರಣೆಯನ್ನು ಒದಗಿಸಬೇಕಾದ ಅನಿವಾರ್ಯತೆಯೂ ಬರುತ್ತದೆ. ಭಾಷಾಂತರ ಒಬ್ಬ ಪ್ರಜ್ಞಾವಂತ ಭಾಷಾತಜ್ಞನಿಂದ ನಡೆಯಬೇಕಾಗುತ್ತದೆ. ಯಂತ್ರ ಭಾಷಾಂತರ ಎಲ್ಲಾ ಕಡೆಗೂ ಅನ್ವಯಿಸುವುದಿಲ್ಲ. ಭಾಷೆಯ ಮಾಧ್ಯಮ ಬೇರೆ ಬೇರೆ ಆದಾಗಲೂ ಭಾವನೆಗಳು ಮೂಲದಲ್ಲಿ ಇರುವಂತೆಯೇ ಅರ್ಥೈಸಲ್ಪಡಬೇಕು. ಭಾವನೆಗಳು ಯಥಾವತ್ತಾಗಿ ಮತ್ತೊಂದು ಭಾಷೆಯಲ್ಲಿ ಮೈತಳೆದಾಗ ಮಾತ್ರವೇ ಭಾಷಾಂತರ ಕಾರ್ಯ ಯಶಸ್ವಿಯಾಗುತ್ತದೆ.

ಕೀಲಿಪದ: ಕನ್ನಡ ಭಾಷೆ, ಭಾಷಾಂತರ, ಅನುವಾದ, ತರ್ಜುಮಾ, ಕನ್ನಡಿಸು, ಭಾಷಾಂತರಕಾರ, ಭಾಷಾತಜ್ಞ

          ಭಾಷಾಂತರಕ್ಕೆ ಸಂಬಂಧಿಸಿದಂತೆ ಮಾಲ್ಕಮ್ ಕೌಲೇ ಹೇಳಿಕೆ ಮುಖ್ಯವೆನಿಸುತ್ತದೆ. ‘Translation is an art that involves the recreation of a work in another language for readers with a different back ground’ ಅಂದರೆ ‘ಭಾಷಾಂತರ ಒಂದು ಕಲೆ’. ಇದು ಪುನರ್ ಸೃಷ್ಟಿ ಕಾಂರ ಎನಿಸುತ್ತಿದೆ. ಈ ಪುನರ್ ಸೃಷ್ಟಿ ಕಾರ್ಯವು ಬೇರೆ ಭಾಷೆಯ ವಿವಿಧ ಹಿನ್ನಲೆಯ ಓದುಗರಿಗಾಗಿ ನಡೆಯುತ್ತದೆ. ಆದ್ದರಿಂದ ಭಾಷಾಂತರ ಒಂದು ಪ್ರಜ್ಞಾಪೂರ್ವಕವಾದ ಕ್ರಿಯೆ. ಇದು ಮೌಲ್ಯಯುತವಾದ ವಿಚಾರಗಳನ್ನು ಮತ್ತೊಂದು ಭಾಷೆಯಲ್ಲಿ ಅಷ್ಟೇ ಸಮರ್ಥವಾಗಿ ಅನುವಾದಿಸಬೇಕು. ಭಾಷಾಂತರಿಸುವಾಗ ಪ್ರಮಾದಗಳು ಸಂಭವಿಸದಂತೆ ಎಚ್ಚರವಹಿಸುವ ಅಗತ್ಯವಿದೆ.

    ಸಾಹಿತ್ಯದ ಭಾಷಾಂತರ ಕಾರ್ಯದಲ್ಲಿ ತೊಡಗಿರುವವರು ಸೃಜನಶೀಲರಾಗಿರಬೇಕು. ಪುನರ್‍ಸೃಷ್ಟಿ ಕೆಲಸ ಸಾರ್ಥಕವಾಗಲು ಮೂಲ ಸಾಹಿತಿಯನ್ನು ಅನುಸರಿಸಿ ಅನುಸೃಷ್ಟಿ ಕೆಲಸ ನಿರ್ವಹಿಸಬೇಕು. ಭಾಷೆಯಲ್ಲಿ ಧ್ವನಿ, ಸಂಕೇತ, ಶಬ್ದ, ಅರ್ಥ, ವಾಕ್ಯ ಎಲ್ಲವೂ ವ್ಯವಸ್ಥಿತವಾದ ಕ್ರಮದಲ್ಲಿ ಸಂರಚಿಸಲ್ಪಟ್ಟಿರುತ್ತವೆ. ಒಂದು ವರ್ಗಕ್ಕೆ ಸೇರುವ ಭಾಷೆಗಳಲ್ಲಿ ಸ್ವಲ್ಪ ಮಟ್ಟಿನ ಸಾಮ್ಯತೆ ಇರುತ್ತದೆ. ಆದರೆ ಬೇರೆ ಬೇರೆ ವರ್ಗಕ್ಕೆ ಸೇರುವ ಭಾಷೆಗಳಲ್ಲಿ ಈ ವ್ಯವಸ್ತೆ ವಿಭಿನ್ನವಾಗಿರುತ್ತದೆ. ಭಾಷಾಂತರಕಾರ ಭಾಷೆಯನ್ನು ಆ ಭಾಷೆಯ ಜನರ ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕು. ನಂತರ ಭಾಷಾಂತರ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಭಾಷೆಯು ನಿರಂತರವಾಗಿ ಬದಲಾವಣೆಗೆ ಒಳಪಡುತ್ತದೆ. ಸಾಮಾಜಿಕ ಸಂದರ್ಭಗಳಲ್ಲಿ ಪದಗಳ ಅರ್ಥಗ್ರಹಿಕೆ ಭಿನ್ನವಾಗಿ ರೂಪ ತಳೆಯುವ ಸಾಧ್ಯತೆಯೂ ಇರುತ್ತದೆ. ಆ ಕಾರಣದಿಂದಾಗಿಯೇ ಭಾಷಾಂತರ ಪ್ರಕ್ರಿಯೆಗೆ ಮಿತಿಗಳೇರ್ಪಡುತ್ತವೆ. ಸಮರ್ಥ ವಿದ್ವಾಂಸ ಮಾತ್ರ ಈ ಮಿತಿಗಳನ್ನು ಪರಿಹರಿಸಿಕೊಂಡು ಭಾಷಾಂತರ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲ. ಆಯಾ ಕಾಲದ ಸಾಹಿತ್ಯ, ಭಾಷಾ ಬೆಳವಣಿಗೆ ಮತ್ತು ಸಾಂಸ್ಕೃತಿಕ ಪಲ್ಲಟಗಳು ಅಧ್ಯಯನಕ್ಕೆ ದಕ್ಕಿದಾಗ ಮಾತ್ರ ಭಾಷಾಂತರಕಾರ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಭಾಷಾಂತರ ಮಾಡಲು ಸಾಧ್ಯವಾಗುತ್ತದೆ. ಮಾನವನಿಗೆ ಭಾಷಾ ಕಲಿಕೆಯ ಕಲೆ ಹುಟ್ಟಿನಿಂದ ಸಿದ್ಧಿಸಿದೆ. ಆತನು ಪ್ರಪಂಚದ ಯಾವ ಭಾಷೆಯನ್ನಾದರೂ ಕಲಿಯಬಹುದು. ಅದರಿಂದ ಸಂವಹನ ಮಾತ್ರ ಸಾಧ್ಯವಾಗುತ್ತದೆ. ಭಾಷಾಂತರದಲ್ಲಿ ತೊಡಗಿಸಿಕೊಳ್ಳಲು ವಿಶೇಷವಾದ ಪ್ರಾವೀಣ್ಯತೆ ಬೇಕಾಗುತ್ತದೆ. ಬರಿಯ ವಾಚ್ಯಾರ್ಥ ತಿಳಿದರೆ ಸಾಲದು. ಪದಗಳ ವಾಕ್ಯಗಳ ಬಳಕೆಯು ಹಿಂದಿರುವ ಧ್ವನಿಯನ್ನು ಗ್ರಹಿಸುವುದು ಮುಖ್ಯವಾಗುತ್ತದೆ. ಆಗ ಮಾತ್ರ ಭಾಷಾಂತರಕಾರ ಸಮರ್ಥವಾಗಿ ಸಾಹಿತ್ಯ ವಿಚಾರಗಳನ್ನು ಅಥ್ರ್ಯೆಸಲು ಸಾಧ್ಯವಾಗುತ್ತದೆ. ವಿಜ್ಞಾನದ ವಿಚಾರಗಳನ್ನು ಭಾಷಾಂತರಿಸುವಾಗ ಪಾರಿಭಾಷಿಕ ಪದಕೋಶದ ಸಹಾಯ ಅಗತ್ಯವಾಗುತ್ತದೆ. ಎಲ್ಲವನ್ನು ತರ್ಜುಮೆ ಮಾಡುವುದಕ್ಕಿಂತ ಕೆಲವು ವಿಜ್ಞಾನ ಪದಗಳನ್ನು ಯಥಾವತ್ತಾಗಿ ಬಳಸಿ ಅದಕ್ಕೆ ಕನ್ನಡದಲ್ಲಿ ವಿವರಣೆ ನೀಡಿದರೆ ಒಳ್ಳೆಯದೆಂದು ಅನಿಸುತ್ತದೆ. ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಚಿಂತನೆ, ರಾಜಕೀಯ ವಿದ್ಯಮಾನ ಎಲ್ಲವೂ ಇಂದು ಜಾಗತಿಕ ಮಟ್ಟದಲ್ಲಿ ದೇಶ ವಿದೇಶಗಳ ನಡುವೆ ಸುದ್ಧಿಯಾಗಿ ಹರಿದಾಡಲು ಭಾಷಾಂತರ ಕ್ಷೇತ್ರದ ಸಕ್ರಿಯತೆಯೆ ಕಾರಣ. ಇಂದು ಲಕ್ಷಾಂತರ ಜನ ಭಾಷಾಂತರ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲ ದೇಶಗಳಲ್ಲಿ ಭಾಷಾಂತರ ಸಂಸ್ಥೆಗಳು, ಅಕಾಡೆಮಿಗಳು ಪ್ರಾರಂಭವಾಗಿವೆ. ಭಾಷಾಂತg ತರಬೇತಿ, ಸರ್ಟಿಫಿಕೇಟ್, ಡಿಪ್ಲೊಮೊ ಕೋಸ್ರ್ಗಳು, ಸ್ನಾತಕ ಸ್ನಾತಕೋತ್ತರ ಪದವಿಗಳು ವಿಶ್ವ ವಿದ್ಯಾಲಯ ಮಟ್ಟದಲ್ಲಿ ದೊರಕುತ್ತವೆ. ಕರ್ನಾಟಕದಲ್ಲಿಯೂ ಕನ್ನಡ ಅನುವಾದ ಕ್ಷೇತ್ರ ವಿಸ್ತರಿಸುವ ಸಲುವಾಗಿ ಕರ್ನಾಟಕ ಅನುವಾದ ಅಕಾಡೆಮಿ ಪ್ರಾರಂಭವಾಗಿದೆ. ಅನುವಾದಕರಿಗೆ ಅನುವಾದಗೊಂಡ ಕೃತಿಗೆ ಪ್ರಶಸ್ತಿ ಪುರಸ್ಕಾರದ ಪ್ರೋತ್ಸಾಹ ಕೂಡ ದೊರೆಯುತ್ತದೆ.

   ಜ್ಞಾನ, ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅನೇಕ ದೇಶಗಳು ನಿಯತಕಾಲಿಕೆಗಳನ್ನು ಹೊರತರುತ್ತವೆ. ಎಲ್ಲ ದೇಶದ ಭಾಷೆಗಳಲ್ಲಿ ಅನುವಾದಗೊಂಡು ಪ್ರಚಲಿತ ವಿಚಾರಗಳು ತ್ವರಿತವಾಗಿ ಬಿತ್ತರಗೊಳ್ಳುತ್ತಿವೆ. ಈ ಪ್ರಕ್ರಿಯೆಯಲ್ಲಿ ಭಾಷೆಗೆ ಹೊಸ ಹೊಸ ಪದಗಳು ಸೇರ್ಪಡೆಯಾಗುತ್ತಿವೆ. ಕೆಲವು ದೇಶಗಳು ಭಾಷಾಂತರಕಾರ ಪಟ್ಟಿ ಪ್ರಕಟಿಸಿ ಪುಸ್ತಕಗಳನ್ನು ಹೊರತಂದಿವೆ ಇಂದು,

   1. Directory of scientific Translators and services(ಲಂಡನ್)

   2. National Lending library Translation Bulletin. ಗಳಂತಹ ಸೂಚಿಗಳನ್ನು ಗಮನಿಸಬಹುದು. ಖಾಸಗಿ ಭಾಷಾಂತರಕಾರರು ಭಾರತದಲ್ಲಿ ಕಾರ್ಯನಿರತರಾಗಿದ್ದಾರೆ. ಕನ್ನಡ, ಹಿಂದಿ, ಇಂಗ್ಲೀಷ್ ಇತರ ಭಾರತೀಯ ಭಾಷೆಗಳಿಗೂ ತರ್ಜುಮೆ ಮಾಡಿಕೊಡುವ ಕೆಲಸ ಮಾಡುತ್ತಾರೆ. ಭಾಷಾಂತರ ಪುಸ್ತಕ ರೂಪದಲ್ಲಿ ಕೂಡ ಹೊರ ಬರುತ್ತಿದೆ. ನ್ಯಾಷನಲ್ ಬುಕ್ ಟ್ರಸ್ಟ್, ದಕ್ಷಿಣ ಭಾರತ ಭಾಷಾ ಪುಸ್ತಕ ಸಂಸ್ಥೆ, ಭಾರತೀಯ ಜ್ಞಾನಪೀಠ, ಭಾರತೀಯ ಭಾಷಾ ಭಾರತಿ ಮುಂತಾದ ಸಂಸ್ಥೆಗಳು ಕೆಲವು ಆಯ್ದ ಕೃತಿಗಳನ್ನು ಭಾಷಾಂತರಿಸಿ ಪ್ರಕಟಿಸುವ ಕೆಲಸ ಮಾಡುತ್ತವೆ.        

 

 Translation- Necessity, Limitations, and Challenges:

ಭಾಷಾಂತರಅಗತ್ಯತೆ, ಮಿತಿಗಳು, ಮತ್ತು ಸವಾಲುಗಳು

  1. ಭಾಷೆ ಮಾನವ ಜನಾಂಗಗಳ ನಡುವೆ ಅಡ್ಡಗೋಡೆ ನಿರ್ಮಿಸಿದರೆ ಭಾಷಾಂತರ ಅವುಗಳನ್ನು ತೊಡೆದು ಹಾಕುತ್ತದೆ. ಇಂದು ಜಗತ್ತಿನ ಎಲ್ಲ ದೇಶಗಳ ಎಲ್ಲ ವಿಚಾರಗಳು ಇಂಗ್ಲಿಷ್ ಮೂಲಕ ಎಲ್ಲ    ಭಾಷೆಗಳಿಗೆ ಲಭ್ಯವಾಗುತ್ತದೆ.
  2. ಭಾಷಾಂತರ ಜ್ಞಾನ, ವಿಜ್ಞಾನ, ಸಾಹಿತ್ಯ, ರಾಜಕೀಯ ವಿಚಾರಗಳ ವಿನಿಮಯ ಮಾಡುತ್ತದೆ. ಇದೊಂದು ಅಗತ್ಯ ತುರ್ತಿನ ಕಾರ್ಯವಾಗಿರುತ್ತದೆ.
  3. ಸ್ಯಾಮುಯಲ್ ಡೇನಿಯಲ್ ಎನ್ನುವ ವಿದ್ವಾಂಸನು ಭಾಷೆ ಕುರಿತು ‘ ಇನ್‍ಟರ್ ಟ್ರಾಪಿಕ್ ಆಪ್ ದಿ ಮೈನ್ಡ್’ ಸಾಧ್ಯತೆ ಕುರಿತು ವಿವರಿಸಿದ್ದಾನೆ. ಮಾನವ ಸಮುದಾಯ ಆಲೋಚನೆಗಳನ್ನು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವಾಗ ವ್ಯಕ್ತಿಯು ತನ್ನ ಭಾಷೆಯಷ್ಟೇ ಪ್ರಭುದ್ಧತೆಯನ್ನು ಭಾಷಾಂತರ ಮಾಡುವ ಇನ್ನೊಂದು ಭಾಷೆಯಲ್ಲಿಯೂ ಹೊಂದಿರಬೇಕಾಗುತ್ತದೆ. ಇದು ಆತನ ಸಾಮಥ್ಯದ ಸವಾಲೆಂದೆ ಪರಿಗಣಿಸಬಹುದು.
  4. ಕನ್ನಡಕ್ಕೆ ಇಂಗ್ಲಿಷ್ ಸಾಹಿತ್ಯ ಭಾಷಾಂತರಗೊಂಡುದರ ಪರಿಣಾಮ ಆಧುನಿಕ ಕನ್ನಡ ಸಾಹಿತ್ಯದ ಉಗಮವಾಯಿತು. ಆಧುನಿಕ ಸಾಹಿತ್ಯ ಪ್ರಕಾರಗಳು, ಛಂಧಸ್ಸು ಹುಟ್ಟಿಕೊಂಡಿತು.
  5. ಬಂಗಾಳಿಯಿಂದ ಕನ್ನಡಕ್ಕೆ ಬಂದ ಭಾಷಾಂತರ ಸಾಹಿತ್ಯ ಕನ್ನಡ ಕಾದಂಬರಿ ಕ್ಷೇತ್ರವನ್ನು ಬೆಳೆಯಿಸಿತು. ಉದಾ: ಗಳಗನಾಥರು ಮತ್ತು ವೆಂಕಟಾಚಾರ್ಯರು ಬಂಗಾಳಿಯಿಂದ ಕನ್ನಡಕ್ಕೆ ತಂದ ಕಾದಂಬರಿಗಳು.
  6. 6. ಪಾಶ್ಚಾತ್ಯರಲ್ಲಿ ಭಾಷಾಂತರ ಕೃತಿಗಳು ಪ್ರತೀವರ್ಷ 30 ಶೇಕಡಾ ಪ್ರಕಟಗೊಂಡರೆ, ಭಾರತದಲ್ಲಿ ಪ್ರತಿ   ವರ್ಷ ಶೇಕಡಾ 10 ರ ಮಾತ್ರ ಭಾಷಾಂತರ ಕೃತಿಗಳು ಪ್ರಕಟಗೊಳ್ಳುತ್ತಿವೆ.
  7. ಜಗತ್ತಿನಲ್ಲಿ ತಂತ್ರಜ್ಞಾನ ಮಿಂಚಿನಂತೆ ಮುಂದುವರೆದಿದೆ. ಆದರೆ ಅದು ಕನ್ನಡಕ್ಕೆ ನಿಧಾನಗತಿಯಲ್ಲಿ ಭಾಷಾಂತರಗೊಳ್ಳುತ್ತಿದೆ. ವಿಜ್ಞಾನದ ವಿಚಾರಗಳು ಕನ್ನಡೀಕರಣಗೊಳ್ಳುವುದಕ್ಕೆ ಅನೇಕ ಸವಾಲುಗಳಿವೆ.
  8. ಇಂಗ್ಲಿಷ್ ವಿದ್ವಾಂಸರು ತಮ್ಮ ಸಂಶೋಧನಾ ಲೇಖನಗಳನ್ನು ಜರ್ಮನ್, ಪ್ರೆಂಚ್, ರಷ್ಯನ್ ಭಾಷೆಗೂ ಅನುವಾದಿಸಿ ಪ್ರಕಟಿಸುತ್ತಾರೆ. ರಷ್ಯಾ, ಪ್ರೆಂಚ್ ದೇಶಗಳಲ್ಲಿ ಭಾಷಾಂತರ ಶಾಲೆಗಳು 30 ದಿನಗಳಲ್ಲಿ ಎಲ್ಲ ಸಂಶೋಧನಾ ಲೇಖನಗಳನ್ನು ಭಾಷಾಂತರಿಸಿ ಪ್ರಕಟಿಸುತ್ತವೆ. ಆದರೆ ಕನ್ನಡದಲ್ಲಿ ಈ ಸಾಧ್ಯತೆಗಳು ತುಂಬಾ ಕಡಿಮೆ, ಇಂಗ್ಲಿಷ್ ಭಾಷೆಯ ಸರಕುಗಳಿಗೆ ಭಾಷಾಂತರಕಾರರೂ ಅಂಟಿಕೊಳ್ಳಬೇಕಾಗುತ್ತದೆ.
  9. ಭಾರತ ಬಹು ಭಾಷಾ ದೇಶ. ಆದ ಕಾರಣ ರಾಷ್ಟ್ರೀಯ ಪ್ರಾದೇಶಿಕ ವಿಚಾರಗಳು ಆಯಾ ಭಾಷೆಯಲ್ಲಿ, ಇಂಗ್ಲಿಷ್‍ನಲ್ಲಿ ಮತ್ತು ಭಾರತೀಯ ಇತರ ಭಾಷೆಗಳಲ್ಲಿ ಪ್ರಕಟಗೊಳ್ಳಬೇಕಾಗುತ್ತದೆ. ಭಾಷಾಂತರ ಸಂಸ್ಥೆಗಳು, ಅಕಾಡೆಮಿಗಳು, ತರಬೇತಿ ಶಾಲೆಗಳು ಭಾರತದಲ್ಲಿ ಹೆಚ್ಚಾಗಬೇಕಾಗಿದೆ.
  10. ಭಾಷಾಂತರ ಕ್ಷೇತ್ರದಲ್ಲಿ ಸಂಶೋಧನೆಗಳು ಹೆಚ್ಚಾಗಬೇಕು. ಇಂದು ಭಾಷಾಕೋಶಗಳು ಭಾಷಾಂತರಕ್ಕೆ ಮೀಸಲಾದ ಪತ್ರಿಕೆಗಳು ಹೆಚ್ಚಾಗುತ್ತಿವೆ. ಉದಾ: New letter, Translation, Inquier babel,  ಅನುವಾದ ಇತ್ಯಾದಿ.

       ಕನ್ನಡದಲ್ಲಿ ಭಾಷಾಂತರ ಕ್ಷೇತ್ರವನ್ನು ಬಲಪಡಿಸುವ ಅನಿವಾರ್ಯತೆ ಇದೆ, ಭಾಷಾಂತರ ತರಬೇತಿಗಳು ಹೆಚ್ಚಾಗಬೇಕು. ವಿಶ್ವವಿದ್ಯಾಲಯಗಳು ಭಾಷಾಂತರಕ್ಕೆ ಕೋರ್ಸ್‍ಗಳಲ್ಲದೆ ಪ್ರತ್ಯೇಕ ಶಾಖೆಗಳನ್ನೇ ನಿರ್ಮಿಸಬೇಕು. ಸರ್ಕಾರ ಪ್ರಶಸ್ತಿ ಪುರಸ್ಕಾರದ ಜೊತೆಗೆ ವಿವಿಧ ಭಾಷಾಂತರ ಯೋಜನೆಗೆ ಅನುದಾನ ನೀಡಬೇಕು. ಆಗ ಮಾತ್ರ ಕನ್ನಡದಲ್ಲಿ ಭಾಷಾಂತರ ಕೆಲಸಗಳು ಅಧಿಕವಾಗುತ್ತವೆ. ವಿದೇಶಿ ಸಾಹಿತ್ಯ ಕೃತಿಗಳು ವಿಜ್ಞಾನ ತಂತ್ರಜ್ಞಾನ ಕನ್ನಡದಲ್ಲಿ ದೊರೆಯುತ್ತದೆ. ಹಾಗೆಯೆ ಕನ್ನಡದ ಕೃತಿಗಳು ಭಾರತೀಯ ಭಾಷೆಗಳಿಗೆ, ಇಂಗ್ಲಿಷ್‍ಗೆ ಮತ್ತು ಇತರ ಭಾಷೆಗಳಿಗೆ ಅನುವಾದಗೊಂಡರೆ ಕನ್ನಡ ಸಾಹಿತ್ಯ ಕೃತಿಗಳ ಮೌಲ್ಯ ಸಮೃದ್ಧತೆ ಪ್ರಪಂಚಕ್ಕೆ ಅರ್ಥೈಸಿದಂತಾಗುತ್ತದೆ. ಕನ್ನಡ ತಂತ್ರಜ್ಞಾನ ಕ್ಷೇತ್ರದ ಸವಾಲುಗಳು ಭಾಷಾಂತರ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಮಾರ್ಪಾಡಾಗಬೇಕಾಗಿದೆ.

 ಪರಾಮರ್ಶನ ಗ್ರಂಥಗಳು

  1. ಭಾಷಾಂತರ ಕಲೆ – ಡಾ. ಪ್ರಧಾನ ಗುರುದತ್ತ.
  2. ಕನ್ನಡ ಸಂಶೋಧನೆಯ ವೈಜ್ಞಾನಿಕತೆ – ಸಂಪಾದನೆ-ಅಮರೇಶ್ ನುಗಡೋಣಿ
  3. ಅನ್ಯಜ್ಞಾನ ಶಿಸ್ತುಗಳು – ಡಾ.ಕೆ.ವಿ. ನಾರಾಯಣ


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal