ಹಂಪಿ ಪರಿಸರದ ಗಾರೆಶಿಲ್ಪಗಳ ಸಾಮಾಜಿಕ ಜೀವನ
ನೀಲಪ್ಪ ಎಸ್.
ಪಿಎಚ್.ಡಿ., ಸಂಶೋಧನಾ ವಿದ್ಯಾರ್ಥಿ,
ಜಾನಪದ ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583276.
ಮೊ. ಸಂ-9880189581. Email-sneelappa@gmail.com
ಪ್ರಸ್ತಾವನೆ.
ದಕ್ಷಿಣ ಭಾರತವನ್ನು ಆಳಿದ ರಾಜಮನೆತನವಾದ ವಿಜಯನಗರ ಸಾಮ್ರಾಜ್ಯವು ತಮ್ಮ ಆಳ್ವಿಕೆಯ ಕಾಲದಲ್ಲಿ ಇನ್ನಿತರೆ ಕ್ಷೇತ್ರಗಳಿಗಿಂತ ವಾಸ್ತು ಮತ್ತು ಶಿಲ್ಪಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯ, ಹೊಯ್ಸಳ ವಿಜಯನಗರ ಹಾಗೂ ನೆರೆಯ ಪಲ್ಲವ, ಚೋಳ ಮುಂತಾದ ರಾಜಮನೆತನಗಳು ವಾಸ್ತು ಮತ್ತು ಶಿಲ್ಪಕಲೆಗಳಲ್ಲಿ ತಮ್ಮದೇಯಾದ ಶೈಲಿಯನ್ನು ಹುಟ್ಟುಹಾಕಿದವು. ಹೀಗೆ ಹುಟ್ಟಿಕೊಂಡ ಶೈಲಿಗಳಿಗೆ ಆಯಾಯಾ ರಾಜಮನೆತಗಳನ ಹೆಸರುಗಳು ಅನ್ವಯಿಸಿಕೊಂಡವು. ನಿರ್ಮಾಣಗೊಂಡ ವಾಸ್ತು ರಚನೆಗಳಲ್ಲಿ ಮಣ್ಣು, ಮರ, ಶಿಲೆ, ಮತ್ತು ಗಾರೆಗಳನ್ನು ಬಳಸಲಾಗಿದೆ. ಅದೇ ರೀತಿ ಮೂರ್ತಿ ಶಿಲ್ಪಗಳನ್ನು ಮಣ್ಣು ಶಿಲೆ ಲೋಹ ಮರ ಮತ್ತು ಗಾರೆಗಳನ್ನು ಬಳಸಿ ರಚಿಸಲಾಗಿದೆ. ಅದರಲ್ಲೂ ಶಿಲೆಯ ಬಳೆಕೆಯ ಅಮಿತವಾದುದು ಪ್ರಸ್ತುತ ಅಧ್ಯಯನದಲ್ಲಿ ವಿಜಯನಗರ ಕಾಲದ ಗಾರೆ ಶಿಲ್ಪಗಳನ್ನು ಕುರಿತು ಪರಿಶೀಲಿಸುವ ಹಾಗೂ ವಿಮರ್ಶಿಸುವ ಕ್ರಿಯೆಗಳನ್ನು ರಾಜಮನೆತನಗಳಲ್ಲಿ ಹೆಚ್ಚಾಗಿ ಗಮನಿಸಿದರು,
ಚಾರಿತ್ರಿಕ ಕಾಲದಿಂದಲೂ ಸಾಮಾಜಿಕ ಜೀಇವನವನ್ನು ಸೂಚಿಸುವ ಗಾರೆಶಿಲ್ಪಿಯ ಚಿತ್ರಗಳನ್ನು ನಾವು ಕಾಣುತ್ತೇವೆ, ಪುರಾತನ ಸಂಸ್ಕೃತಿಯನ್ನು ಹೊಂದಿರುವ ಹಂಪೆಯು ಒಂದು ಚಾರಿತ್ರಿಕ ಸಾಂಸ್ಕೃತಿಕ ಕೇಂದ್ರವಾಗಿದೆ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಯು ದಕ್ಷಿಣ ಭಾರತದ ಚರಿತ್ರೆಯಲ್ಲಿ ಮಹತ್ವದ ಘಟನೆಯಾಗಿತ್ತು, ಉತ್ತರ ಕಡೆಯ ಮುಸ್ಲಿಂದಾಳಿಗಳಿಂದಾಗಿ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ಭಾರಿ ಹಿನ್ನಡೆಯುಂಟಾಯಿತು, ಈ ಹಿನ್ನಡೆಯ ಪ್ರಬಲವು ವಿಜಯನಗರ ಸಾಮ್ರಾಜ್ಯದ ಹುಟ್ಟಿಗೆ ಕಾರಣವಾಯಿತು, ಹೀಗೆ ಹುಟ್ಟಿಕೊಂಡ ವಿಜಯನಗರ ಸಾಮ್ರಾಜ್ಯವು ಎಲ್ಲಾ ಮತಧರ್ಮಗಳ ಹಿತರಕ್ಷಕನಂತೆ ವರ್ತಿಸಿ ಅವುಗಳ ಏಳಿಗೆಗೆ ಬದ್ದವಾಗಲೆಂದು ಗಮನಾರ್ಹವಾಗಿತ್ತು, ಇದರಿಂದಾಗಿ ದಕ್ಷಿಣ ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಆಯಾಮ ದೊರಕಿತು.
ಕೀ ವರ್ಡ್: ಗಾರೆಶಿಲ್ಪಗಳು, ದೇವಕೊಷ್ಟಗಳು, ಪ್ರತಿಮಾಶಾಸ್ತ್ರ, ಕಾಮಿಕಾಗಮ, ಸಮಭಂಗಿ, ಗಂಡುಜೋಗಮ್ಮ
ಪಿಠೀಕೆ
ವಿಜಯನಗರ ಕಾಲದ ಸಾಂಸ್ಕೃತಿಕ ಸಾಧನೆಗಳನ್ನು ಆ ಕಾಲದ ಶಾಸನಗಳು ನಿರ್ಮಾಣಗಳು, ಶಿಲ್ಪಕಲಾಕೃತಿಗಳು, ನಾಣ್ಯಗಳು ಮತ್ತು ಸಾಹಿತ್ಯಾಕೃತಿಗಳು ಸವಿವರವಾಗಿ ಚಿತ್ರಿಸಲಾಗಿದೆ, ಏಕೆಂದರೆ ಗಾರೆಶಿಲ್ಪಗಳು ಆ ಕಾಲದ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಮಾತ್ರ ಅರ್ಥಪೂರ್ಣವಾಗಿ ಕಂಡುಬರುತ್ತವೆ, ಒಂದೇಕಡೆ ರಚನೆಗೊಂಡಿರುವ ವಿವಿಧ ಪಂಥದ ಗಾರೆಶಿಲ್ಪಗಳು ಒಂದು ಹಂತಕ್ಕೆ ಆ ಕಾಲದ ಧಾರ್ಮಿಕ ಸಹಮತವನ್ನು ಪ್ರಕಟಮಾಡುತ್ತವೆ ಅದೇರೀತಿ ಜನಪದ ಶೈಲಿಯಲ್ಲಿ ರಚನೆಗೊಂಡಿರುವ ಕೆಲವು ಶಿಲ್ಪಗಳು ಉದಾರಗೊಂಡು ಧಾರ್ಮಿಕ ಮನೋಭಾವನೆಯನ್ನು ಸೂಚಿಸುತ್ತವೆ, ಎಲ್ಲವುದಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾದ ವಿಚಾರವೊಂದಿದೆ ಅದೇನೆಂದರೆ ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳರ ಕಾಲದ ದೇವಾಲಯಗಳಲ್ಲಿನ ಭಿತ್ತಿ ಮತ್ತು ನವರಂಗಗಳಲ್ಲಿ ದೇವಕೋಷ್ಟಗಳನ್ನು ನಿರ್ಮಿಸಿ ಬಿಡಿಶಿಲ್ಪಗಳನ್ನು ಇಡುವುದಕ್ಕೆ ಅವಕಾಶವಿತ್ತು, ಆದರೆ ವಿಜಯನಗರ ಕಾಲದಲ್ಲಿ ಮೇಲೆ ಹೇಳಿದಂತೆ ಒಳಸರಿದ ದೇವಕೊಷ್ಟಗಳು ರಚನೆಗೊಳ್ಳಲಿಲ್ಲ ಬದಲಿಗೆ ಭಿತ್ತಿ ಮತ್ತು ಕಂಬಗಳ ಮೇಲೆ ಕೇವಲ ತೆಳು ಉಬ್ಬು ಶಿಲ್ಪಗಳನ್ನು ಮಾತ್ರ ಯಥಾಚ್ಛಿಕವಾಗಿ ಕಾಣುತ್ತೇವೆ, ಆದರೆ ಬಹುಶ ಈ ಕೊರತೆಯನ್ನು ಹೋಗಲಾಡಿಸಲು ಮಂಟಪಗಳ ಮೇಲೆ ಗೋಡೆಗಳನ್ನು ನಿರ್ಮಿಸಿ ಗಾರೆ ಶಿಲ್ಪಗಳನ್ನು ರಚಿಸಿರಬೇಕು. ಇರಿಂದಾಗಿ ನೋಡುಗರಿಗೆ ಶಿಲ್ಪಗಳ ಮೂಲಕ ಪೌರಾಣಿಕ ವಿಷಯಗಳನ್ನು ತಿಳಿಸಬಹುದಾಗಿತ್ತು.
ವಿಜಯನಗರ ಸಾಮ್ರಾಜ್ಯದಲ್ಲಿ ನಾಲ್ಕು ಮನೆತನಗಳಿದ್ದು ಅದರಲ್ಲಿ ಎರಡನೇ ದೇವರಾಯನ ವಾಸ್ತು ಮತ್ತು ಶಿಲ್ಪಗಳಲ್ಲಿ ವಿಶೇಷವಾಗಿ ಆಸಕ್ತಿವಹಿಸಿದ್ದನು, ಇವನ ದಂಡನಾಯಕರಲ್ಲಿ ಒಬ್ಬನಾದ ಪ್ರೊಲಗಂಟೆ ತಿಪ್ಪನು ವಿರೂಪಾಕ್ಷದೇವಾಲಯದ ಮಹಾದ್ವಾರ ಗೋಪುರವನ್ನು ನಿರ್ಮಿಸಿ ನಂತರವೇ ಅದರ ಮೇಲೆ ಗಾರೆ ಶಿಲ್ಪಗಳ ಚಿತ್ರಗಳನ್ನು ರಚಿಸಲಾಗಿದೆಯೆಂದು ಸಾಹಿತ್ಯಾಧಾರದಿಂದ ವಿಷಯ ತಿಳಿದು ಬರುತ್ತದೆ.
ಹಂಪಿ ಪರಿಸರದಲ್ಲಿ ಗಾರೆ ಶಿಲ್ಪಗಳು ಹೇಗೆ ರಚನೆಗೊಂಡಿರುವವು ಮತ್ತು ಎಲ್ಲ ಧಾರ್ಮಿಕ ಶೈಲಿಗಳಲ್ಲಿ ಪ್ರಚಲಿತಗೊಂಡವು ಹಾಗೂ ಅವುಗಳ ವೈಶಿಷ್ಟತೆಯನ್ನು ಸಾಮಾನ್ಯವಾಗಿ ಗಾರೆ ಶಿಲ್ಪಗಳು ಜೀರ್ಣೋದ್ಧಾರ ಮತ್ತು ಸುಣ್ಣ ಬಣ್ಣಗಳ ಕ್ರಿಯೆಗೆ ಒಳಗಾಗುವುದರಿಂದ ಅವುಗಳ ಕಾಲಮಾನವನ್ನು ಗುರುತಿಸುವಲ್ಲಿ ವಿಶೇಷವಾಗಿತ್ತು, ಶಿಲ್ಪಗಳನ್ನು ರಚಿಸಲು ಬೇಕಾದ ಗಾರೆಯನ್ನು ಸಾಂಪ್ರದಾಯಿಕವಾಗಿ ಇಂದು ಸಹ ರೂಢಿಯಲ್ಲಿರುವಂತೆ ಒಂದು ಭಾಗ ಸುಣ್ಣ ಎರಡು ಭಾಗ ಮರಳು, ಒಂದು ಭಾಗ ಬೆಲ್ಲ ಮತ್ತು ಅರ್ಧಭಾಗ ಅಂಟುವಾಳಕಾಯಿ ಮಿಶ್ರಣಗಳನ್ನು ನುಣ್ಣಗೆ ಅರೆದು ತಯಾರಿಸಲಾಗುತ್ತಿತ್ತು. ನಂತರ ಶಿಲ್ಪಗಳನ್ನು ನಿರ್ಮಿಸುವ ಗೋಡೆಯಲ್ಲಿ ಶಿಲ್ಪಗಳ ಭಂಗಿಯನ್ನು ಅನುಲಕ್ಷಿಸಿ ಮರದ ಗೂಟ ಮತ್ತು ಕಬ್ಬಿಣದ ಕಡ್ಡಿಗಳನ್ನು ಅಳವಡಿಸುತ್ತಿದ್ದರು, ಹೀಗೆ ಅಳವಡಿಸಿದ ಗೂಟ ಮತ್ತು ಕಡ್ಡಿಗಳ ಮೇಲ್ಮೈಗೆ ಗಾರೆಯನ್ನು ಹಂತ ಹಂತವಾಗಿ ಬೆಳೆದು ಒರಟು ಆಕೃತಿಯನ್ನು ಸಿದ್ದಪಡಿಸಿಕೊಳ್ಳಲಾಗುತ್ತಿತ್ತು ನಂತರ ಅದನ್ನು ಓರೆ ಕೋರೆಗಳನ್ನು ತಿದ್ದಿ ಅದರ ವಿಶೇಷವಾಗಿ ಅಗೆದ ನುಣ್ಣಗಿನ ಗಾರೆಯನ್ನು ಲೇಪಿಸಿ ಅಂತಿಮವಾದ ರೂಪವನ್ನು ಕೊಡುತ್ತಿದ್ದರು, ಕೊನೆಯಲ್ಲಿ ಬಣ್ಣವನ್ನು ಲೇಪಿಸಲಾಗುತ್ತಿತ್ತು.
ದೇವಾಲಯದ ಒಳಗಿರುವ ಲೋಹ ಮತ್ತು ಶಿಲಾ ಶಿಲ್ಪಗಳನ್ನು ಪೂಜಾವಿಧಿಗಳಿಗೆ ಬಳಸಿಕೊಂಡರೆ ಹೊರಗಿರುವ ಗಾರೆಶಿಲ್ಪಗಳು ದೇವತೆಗಳ ಕಥೆ ಮತ್ತು ಮಹಿಮೆಗಳನ್ನು ತಿಳಿಸುವ ಅಲಂಕಾರಿಕ ಪ್ರದರ್ಶನ ಶಿಲ್ಪಗಳಾಗಿದ್ದವು. ಇಲ್ಲಿ ಪ್ರಮುಖವಾಗಿ ರಚನೆಯ ಕಾಲಮಾನವನ್ನು ಸೂಚಿಸುವ ಸಮಯಗಳನ್ನು ಕಾಣಬಹುದಾಗಿದೆ, ಹಂಪಿಯ ದೇವಾಲಯಗಳಲ್ಲಿ ಕಂಡುಬರುವ ಗಾರೆಶಿಲ್ಪಗಳು ಮುಖ್ಯವಾಗಿ ಎರಡು ಕಾಲಘಟ್ಟದವುಗಳಾಗಿವೆ, ಅಂದರೆ ವಿಜಯನಗರ ಮತ್ತು ವಿಜಯನಗರೋತ್ತರ ಕಾಲದ ರಚನೆಗಳು ಗಾರೆಶಿಲ್ಪಗಳ ರಚನಾಸ್ವರೂಪಕಾಲ ವಿಂಗಡನೆಗೆ ಸಹಾಯಕವಾಗಿವೆ, ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ಗಾರೆ ಶಿಲ್ಪಗಳು ಬಿಡಿ ಶಿಲ್ಪಗಳಂತೆ ಕಂಡುಬರುತ್ತವೆ, ಪ್ರತಿಮಾಶಾಸ್ತ್ರ ಲಕ್ಷಣಗಳನ್ನೊಳಗೊಂಡ ಈ ಶಿಲ್ಪಗಳು ಅಂಗಾಂಗ ಪ್ರಮಾಣಬದ್ಧತೆಯನ್ನು ಕಾಯ್ದುಕೊಂಡಿವೆ, ವಿಶೇಷ ಅಲಂಕಾರಗಳಿಂದ ಕೂಡಿರುವ ಶಿಲ್ಪಗಳ ನುರಿತ ಮತ್ತು ಶಿಲ್ಪಗಳ ಅನುಭವದ ಸಕಾರ ಮೂರ್ತಿಗಳಂತೆ ಕಂಡುಬರುತ್ತವೆ, ಸಮಕಾಲೀನ ಲೋಹ ಶಿಲೆ, ಮರದ ಪ್ರತಿಮೆಗಳಿಗೆ ರಚನೆಯಲ್ಲಿ ಸರಸಮಾನಾಗಿ ನಿಲ್ಲುವ ಸಾಮಥ್ರ್ಯ ಮತ್ತು ಗುಣ ವಿಜಯನಗರ ಗಾರೆಶಿಲ್ಪಗಳಲ್ಲಿವೆ, ಇವುಗಳ ರಚನೆಗೆ ಮರದ ಗೂಟ ಮತ್ತು ಕಬ್ಬಿಣದ ಕಡ್ಡಿಗಳನ್ನು ಹಾಗೂ ಸಾಂಪ್ರದಾಯಿಕವಾಗಿ ತಯಾರಿಸಿದ ನುಣ್ಣಗಿನ ಗಾರೆಯನ್ನು ಬಳಸಲಾಗಿದೆ,
ಗಾರೆಯು ಪ್ರಾಚೀನ ಕಾಲದಿಂದಲೂ ಗಾರೆಯನ್ನು ವಾಸ್ತುರಚನೆಗಳಲ್ಲಿ ನಿರಂತರವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಇಟ್ಟಿಗೆ ಜತೆಗಾರಿ ಬಳಕೆಯನ್ನು ಕಾಣುತ್ತೇವೆ, ಕರ್ನಾಟಕದ ಶಾತವಾಹನರ ಕಾಲದಲ್ಲಿಯೂ ಸಹ ಕಟ್ಟಡಗಳ ರಚನೆಗೆ ಗಾರೆಯನ್ನು ಉಪಯೋಗಿಸಲಾಗಿದೆ ಮತ್ತು ಗಂಗರ ಕಾಲದ ದೇವಾಲಯಗಳಲ್ಲಿ ಭಿತ್ತಿ ಛಾವಣಿ ಹಾಗೂ ಶಿಖರಗಳ ರಚನೆಯಲ್ಲಿ ಇಟ್ಟಿಗೆಯೊಡನೆ ಗಾರೆಯನ್ನು ಬಳಸಲಾಗಿದೆ ಎಂದು ಜನಸಾಮಾನ್ಯರ ಅಭಿಪ್ರಾಯವಾಗಿತ್ತು, ಕಲ್ಯಾಣಚಾಲುಕ್ಯರ ಕಾಲದಲ್ಲಿ ಇಟ್ಟಿಗೆ ಗೋಡೆಯ ಮೇಲೆ ಗಾರೆಯ ಶಿಲ್ಪವನ್ನು ಮಾಡಿದ ಕುರುಹುಗಳ ಬಗೆಯ ಅನೇಕ ಸ್ವರೂಪವನ್ನು ತೋರುವವು, ಮಧ್ಯಕಾಲದ ಕಟ್ಟಡಗಳಲ್ಲಿ ಗಾರೆಯನ್ನು ಸಮೃದ್ದಿಯಾಗಿ ಬಳಸಲಾಗಿದೆ ಇಂತಹ ಸಂದರ್ಭಗಳ ಅನ್ವಯದಿಂದ ವಿಜಯನಗರ ಸಾಮ್ರಾಜ್ಯದಲ್ಲಿ ಸಾಸಿವೆ ಕಾಳು ಗಣಪತಿ ಮತ್ತು ಸರಸ್ವತಿನ ದೇವಾಲಯಗಳಲ್ಲಿನ ಕಂಬಗಳ ಮತ್ತು ಅದರ ಛಾವಣಿಯನ್ನು ಗಾರೆ ಲೇಪನದಿಂದ ನಯಗೊಳಿಸಿ ಅಲಂಕರಣಮಾಡುತ್ತಿದ್ದ ಕುರುಹುಗಳು ಸ್ಪಷ್ಟವಾಗಿ ಕಂಡುಬಂದಿರುವವು, ಬಿದ್ದ ಮಳೆನೀರು ಸುಲಭವಾಗಿ ಹರಿದು ಹೋಗಲು ಕಟ್ಟಡಗಳ ಮೇಲ್ಭಾಗದಲ್ಲಿ ಗಾರೆ ಅಚ್ಚನ್ನು ಮಾಡಲಾಗಿದೆ, ಹಂಪೆಯಲ್ಲಿರುವ ದೇವಾಲಯ ವಸತಿ ಮತ್ತು ರಕ್ಷಣಾ ಕಟ್ಟಗಳಲ್ಲಿ ಗಾರೆ ಬಳಕೆಯು ಎದ್ದು ಕಾಣತೊಡಗಿದ್ದವು, ಕಟ್ಟಡಗಳ ಛಾವಣಿಗಳ ರಚನೆಗೆ ತೊಲೆ ಮತ್ತು ಜಂತೆಗಳನ್ನು ಅಳವಡಿಸಿ ಮೇಲೆ ಬಿದರಿ ತಟ್ಟೆಯನ್ನು ಹಾಸಿ ಅದರ ಮೇಲೆ ಗಾರೆಯ ಗಚ್ಚನ್ನು ಮಾಡಲಾಗುತ್ತಿತ್ತು, ಇಂತಹ ರಚನೆಗಳನ್ನು ಹಂಪೆಯ ಮಾಲ್ಯವಂತ ರಘುನಾಥ ದೇವಾಲಯ ಮತ್ತು ತಿಮ್ಮಲಾಪುರದ ದೇವಾಲಯಗಳಲ್ಲಿ ಕಾಣಬಹುದು.
ಈಗಲೂ ನೋಡುವುದಾದರೆ ರಾಣಿಯರ ಸ್ನಾನಗೃಹ, ಕಮಲ ಮಹಲ್, ಕಾವಲು ಗೋಪುರಗಳು, ಆನೆಲಾಯ ಮುಂತಾದ ಕಟ್ಟಡಗಳು ಮಧ್ಯಕಾಲೀನ ಗಾರೆನಿರ್ಮಾಣಗಳಿಗೆ ಜೀವಂತ ಉದಾಹರಣೆಗಳಾಗಿವೆ, ಕಮಲ ಮಹಲ್ಲಿನ ಕಮಾನುಗಳಲ್ಲಿ ಮತ್ತು ರಾಣಿಯರ ಸ್ನಾನಗೃಹದ ಛಾವಣಿಯಲ್ಲಿ ವಿವಿಧರೀತಿಯ ಲತಾಬಳ್ಳಿಗಳ ಹಾಗೂ ಜಾಮತಿಕ ಆಕೃತಿಗಳನ್ನು ಬಳಸಲಾಗಿ ಈ ಸುಲಲಿತ ರಚನೆಗಳು ಗಾರೆ ಮಾಧ್ಯಮದಲ್ಲಿ ಸುಂದರವಾಗಿ ಮೂಡಿಬಂದಿವೆ, ಅನೇಕ ಐತಿಹಾಸಿಕ ತಾಣಗಳಲ್ಲಿ ಗಾರೆ ಶಿಲ್ಪಿಯ ಚಿತ್ರದ ರಚನೆಯನ್ನು ಕಾಣಬಹುದಾಗಿದೆ, ಗಂಗರು, ಚೋಳರು ರಚಿಸಿದ ದೇವಾಲಯಗಳ ಗೋಡೆಗಳ ಮೇಲೆ ಲೇಪನ ಮಾಡಿದ ಚಿತ್ರಣವು ನೋಡಬಹುದಾದ ಪ್ರಮುಖ ಸಂಗತಿಯಾಗಿದೆ, ಇಲ್ಲಿ ವಿಜಯನಗರ ಕಾಲದಲ್ಲಿ ಒರಟು ಕಂಬಗಳಿಗೆ ಗಾರೆ ಲೇಪನ ಮಾಡಿರುವುದನ್ನು ಕಾಣಬಹುದಾಗಿದೆ, ಗಾರೆರ ಶೀಲ್ಪಿಗಳೆಂದರೆ ಮೊದಲಿಗೆ ಕಬ್ಬಿಣದ ಕಂಬಗಳಿಂದ ಸ್ಥೂಲ ರಚನೆಯನ್ನು ಸಿದ್ದಪಡಿಸಿಕೊಂಡು ನಂತರ ಗಾರೆ ತುಮಬಲಾಗುತ್ತಿತ್ತು ಈ ಲೇಪನ ವಿಧಾನವು ಮೊದಲಿಗೆ ಮೈಸೂರು ಅರಸರು ಕಾಲದಲ್ಲಿರಬಹುದೆಂದು ಅನೇಕ ವಿದ್ವಾಂಸರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿತ್ತು.
ಗಾರೆ ಮಿಶ್ರಣಗಳ ಅಳತೆ ಮತ್ತು ಪ್ರಮಾಣಗಳಿಗೆ ಸಂಬಂಧಿಸಿದಂತೆ ಸಂಸ್ಕೃತ ಸಾಹಿತ್ಯದಲ್ಲಿನ ಆಗಮನಗಳು ಮತ್ತು ಶಿಲ್ಪಶಾಸ್ತ್ರ ಕೃತಿಗಳು ವಿವರಿಸಿವೆ ಎಂದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಕಾಮಿಕಾಗಮ ಹರಿಭಕ್ತ, ವಿಳಾಸ ಮುಂತಾದ ಕೃತಿಗಳಲ್ಲಿ ಗಾರೆಬಗೆಗಿನ ಮಾಹಿತಿಗಳುಂಟು ಶಿಲಾ ಪ್ರತಿಮೆಗಳಲ್ಲಿ ದೊರೆಯುವ ವಿಗ್ರಹಗಳ ನಿರ್ಮಾಣದ ಮಾನ, ಪ್ರಮಾಣ, ಉನ್ಮಾನ, ಪರಿಮಾಣ, ಉಪಮಾನ, ಲಂಬಮಾನ ಮೊದಲಾದ ಲಕ್ಷಣಗಳು ಗಾರೆ ಶಿಲ್ಪಿಗಳ ನಿರ್ಮಾಣದಲ್ಲಿ ಕಂಡುಬರುತ್ತವೆ, ದ್ರಾವಿಡ ಶೈಲಿಯ ಶಿಖರ ಮತ್ತು ಗೋಪುರಗಳಲ್ಲಿ ಗಾರೆಶಿಲ್ಪಗಳು ವಿಶೇಷವಾಗಿ ಕಂಡುಬಂದವು ಮತ್ತು ಇದನ್ನು ಹಂಪೆಯ ದೇವಾಲಯಗಳ ಶಿಖರ ಮತ್ತು ಗೋಪುರಗಳಲ್ಲಿ ರಚನೆಗೊಂಡಿರುವ ಅಸಂಖ್ಯಾತ ಗಾರೆಶಿಲ್ಪಗಳು ಸಮರ್ಥಿಸುತ್ತವೆ, ಆದರೂ ಗಾರೆ ಶಿಲ್ಪಗಳು ರಚನೆಗೆ ಮುಖ್ಯವಾಗಿ ಅಲಂಕಾರಿಕ ದೃಷ್ಠಿಯಲ್ಲಿ ಅದು ಬಿಡಿ ಶಿಲ್ಪವಾಗಲಿ ಅಥವಾ ಉಬ್ಬು ಶಿಲ್ಪವಾಗಿರಲಿ ಹಿನ್ನೆಲೆಯಲ್ಲರುವ ವಾಸ್ತುಭಾಗದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಖಾಲಿ ಕಾಣುವ ಸ್ಥಳವನ್ನು ಕಲಾಕೃತಿಗಳಿಂದ ತುಂಬಲಾಗಿತ್ತು.
ಗಾರೆ ಕಲಾಕೃತಿಗಳ ಬಗೆಯ ಹೇಳುವುದಾದರೆ ಹಂಪೆಯ ಪ್ರಮುಖವಾಗಿ ವೈಷ್ಣವ ದೇವಾಲಯಗಳು ಹಾಳಾದವೆಂದು ಚರಿತ್ರೆಯಿಂದ ತಿಳಿದುಬರುತ್ತದೆ ಇದೇ ಸಂದರ್ಭದಲ್ಲಿ ವಿರೂಪಾಕ್ಷದೇವಾಲಯದ ಗೋಡೆಗಳಲ್ಲಿದ್ದ ವೈಷ್ಣವ ಶಿಲ್ಪಗಳನ್ನು ಸಹ ಹಾಳುಮಾಡಿದ ಸೂಚನೆಗಳಿಗೆ ಸುಸ್ಪಷ್ಟವಾಗಿ ಕಂಡುಬರುತ್ತವೆ ಅವುಗಳನ್ನು ವಿಜಯನಗರೋತ್ತರ ಕಾಲದ ಆಯಾಯ ಗೋಡೆಗಳಲ್ಲಿ ಪುರನರ್ ರಚಿಸಲಾಯಿತು ಹೀಗೆ ವಿರೂಪಾಕ್ಷ ದೇವಾಲಯಗಳಲ್ಲಿರುವ ಶೈವ ಮತ್ತು ವೈಷ್ಣವ ಶಿಲ್ಪಿಗಳು ವಿಭಿನ್ನ ರಚನೆಗಳಂತೆ ಕಂಡುಬರುತ್ತವೆ, ಇನ್ನೂ ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣಗೊಂಡ ಗಾರೆ ಶಿಲ್ಪಗಳೆಂದರೆ ವಿರೂಪಾಕ್ಷ ದೇವಾಲಯದ ವೈಷ್ಣವ ಶಿಲ್ಪಗಳು ಇವು ಇಲ್ಲಿನ ಶೈವ ಶಿಲ್ಪಗಳಿಗಿಂತ ಅಲಂಕರಣದಲ್ಲಿ ಭಿನ್ನವಾಗಿದ್ದು, ಒರಟುತನವನ್ನು ಮತ್ತು ಮೊಂಡುಲಕ್ಷಣವನ್ನು ಪ್ರಕಟಮಾಡುತ್ತವೆ, ವೇಷಭೂಷಣಗಳಲ್ಲಿ ವಿಜಯನಗರ ಕಾಲದ ಶಿಲ್ಪಗಳನ್ನೇ ಅನುಕರಣೆ ಮಾಡದಂತೆ ಕಂಡುಬಂದರೂ ಅಂಗಾಂಗ ರಚನೆಯಲ್ಲಿ ಹಾಗೂ ಪ್ರಮಾಣದಲ್ಲಿ ಜನಪದ ಶೈಲಿಯನ್ನು ಅನುಸರಿಸಿದಂತೆ ಕಂಡುಬರುತ್ತದೆ.
ವಿಶೇಷವಾಗಿ ಗಾರೆ ಶಿಲ್ಪಗಳನ್ನು ದೇವಾಲಯದ ಗೋಪುರ ಶಿಖರ ಮತ್ತು ಮಂಟಪದಮೇಲೆ ಚಂದ್ರಶೇಖರದೇವಾಲಯದ ಮೇಲೆ ಕೃಷ್ಣದೇವಾಲಯದ ಗೋಪುರದ ಮೇಲೆ, ಗೋಡೆಗಳ ಮೇಲೆ ವೈವಿಧ್ಯಮಯವಾದ ಸೌಂದರ್ಯ ಸೃಷ್ಟಿಗಾಗಿ ವಾಸ್ತುರಚನೆಗಳ ನಡುವೆ ಗಾರೆ ಶಿಲ್ಪಿಗಳ ರಚನೆಯು ಕಂಡುಬಂದವು, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಹೊಸದಾಗಿ ಕೆಲವು ವಾಸ್ತುಬ ರಚನೆಗಳ ನಿರ್ಮಾಣಗೊಂಡು ದೇವಾಲಯಕ್ಕೆ ಸೇರ್ಪಡೆಗೊಂಡಿರುವವು, ಮುಖ ಮಂಟಪ, ಕಲ್ಯಾಣ ಮಂಟಪ, ಉಯ್ಯಾಲೆ ಮಂಟಪ, ಉತ್ಸವ ಮಂಟಪ ಮತ್ತು ಮಹಾದ್ವಾರ ಗೋಪುರಗಳಲ್ಲಿ ಮತ್ತು ವಿಶೆಷವಾಗಿ ಮಂಟಪಗಳ ಮೇಲ್ತುದಿಯಲ್ಲಿ ಅಲಂಕರಣದ ದೃಷ್ಟಿಯಿಂದ ನಿರ್ಮಾಣಗೊಂಡ ಕೈಪಿಡಿಯ ಗೋಡೆಗಳಲ್ಲಿ ಗಾರೆಶಿಲ್ಪಿಗಾಗಿ ಸುಂದರವಾದ ಗೋಡೆಗಳನ್ನು ನಿರ್ಮಿಸುವಲ್ಲಿ ಮುಂದಾದವು, ಇವು ಮಂಟಪ ಅಥವಾ ಕಟ್ಟಡದ ಸೌಂದರ್ಯಕ್ಕೆ ಕಿರೀಟಪ್ರಾಯವಾಗಿದ್ದವು ಹೀಗೆ ಹಂಪೆಯ ಪರಿಸರದಲ್ಲಿ ಹಲವಾರು ಮಂಟಪಗಳು ದೇವಾಲಯ ಗೋಡೆಗಳ ಮೇಲೆ ಗೋಪುರಗಳ ಮೇಲೆ ರಚನೆಗೊಂಡ ಗಾರೆ ಶಿಲ್ಪಗಳು ಇಡೀ ಸಮಾಜದಲ್ಲಿ ಜನಸಾಮಾನ್ಯರ ಮತ್ತು ಪ್ರವಾಸಿಗರ ಮನವನ್ನು ಗಮನಸೆಳೆಯುವಂತಹ ಪ್ರತಿರೂಪವನ್ನು ಮೂಡಿಸಿರುವವು ಇದು ಪವಿತ್ರ ಹಂಪೆಯಾಗಿದೆ.
ಇನ್ನು ಪ್ರಮುಖವಾಗಿರುವ ಗಾರೆಶಿಲ್ಪಗಳ ಚಿತ್ರದ ರಚನೆ ಬಗೆಯ ಹೇಳುವುದಾದರೆ ಧಾರ್ಮಿಕ ಆಚಾರ ವಿಚಾರಗಳಲ್ಲಿ ಮತ್ತು ಆಚರಣೆಗಳಲ್ಲಿ ಹೆಚ್ಚಿನ ರೀತಿಯ ವಿಧಾನಗಳಲ್ಲಿ ಕಂಡುಬರುವುದಾದರೆ ಹಂಪಿಯ ಪರಿಸರದ ದೇವಾಲಯಗಳಲ್ಲಿ ಎರಡು ಪಂಥದ ಶಿಲ್ಪಿಗಳು ಕಂಡುಬರುತ್ತವೆ, ಆದರೆ ವೈಷ್ಣವ ದೇವಾಲಯಗಳಲ್ಲಿ ತಮ್ಮ ಪಂಥದ ಶಿಲ್ಪಿಗಳು ಪ್ರಬಲವಾಗಿ ದೃಢವಾಗಿ ಶಿಲ್ಪಿಗಳು ಮಾತ್ರ ರಚನೆಗೊಂಡಿವೆ.
ದೇವತಾ ಶಿಲ್ಪಗಳಲ್ಲಿ ಶೈವ ಶಿಲ್ಪಗಳು ಇದು ವಿರೂಪಾಕ್ಷ ದೇವಾಲಯದ ಒಳ ಸಾಲು ಮಂಟಪಗಳ ಮೇಲಿರುವ ಕೈಪಿಡಿ ಗೋಡೆಯಲ್ಲಿನ ಗೋಡೆಗಳ ಹೆಚ್ಚಿನ ಸಂಖ್ಯೆಯ ಶೈವ ಶಿಲ್ಪಿಗಳು ಕಂಡುಬರುವವು, ಈ ಗಾರೆ ಶಿಲ್ಪಗಳು ಪ್ರತಿಮೆ ಶಾಸ್ತ್ರದ ರಿತ್ಯಾರಚನೆಗೊಂಡಿದ್ದು ಪ್ರಮಾಣಬದ್ಧವಾಗಿ ಪೀಠದ ಮೇಲೆ ಕುಳಿತಿರುವ ಪಾರ್ವತಿ ಪರಮೇಶ್ವರ ಮೂರ್ತಿಗಳಂತೂ ಮನಮೋಹಕವಾಗಿದೆ ಬಹುತೇಕ ಶಿಲ್ಪಿಗಳು ಭಗ್ನಗೊಂಡಿದ್ದರೂ ತನ್ನ ರಚನಾ ಶ್ರೇಷ್ಠತೆತಿಂದಾಗಿ ನೋಡುಗರ ಗಮನ ಸೆಳೆಯುವಂತೆ ಚಿತ್ರಣವಾಗಿದೆಯೆಂದು ಜನಸಾಮಾನ್ಯರ ಪ್ರಮುಖ ಸಂಗತಿಯಾಗಿದೆ. ಜಟಮುಕಟದಾರಿ ಶಿವನ ತೊಡೆಯ ಮೇಲೆ ಕುಳಿತ ನಂದಿಯನ್ನು ಹೊರಗೆ ನಿಂತ ಶಿವ, ಸಮಭಂಗಿಯಲ್ಲಿರುವ ಶಿವನಾಟ್ಯ ಭಂಗಿಯಲ್ಲಿರುವ ಗಣಪ, ಸ್ತ್ರೀ ಭಂಗಿಯಲ್ಲಿರುವ ಶಿವ, ಆ ಭಂಗಿಯಲ್ಲಿರುವ ಶಿವ ಪಾರ್ವತಿ ನಂದಿ ಮೇಲೆ ಕುಳಿತ ಶಿವ ಪಾರ್ವತಿ, ಧ್ಯಾನಮುದ್ರೆಯಲ್ಲಿರುವ ಶೈವ ಮತಿ, ಗಣಸಮೂಹ, ಚಾಮದಾರಿ, ಸ್ತ್ರೀಯರು, ಭಕ್ತರುಂಡ ಮುಂತಾದ ಗಾರೆ ಶಿಲ್ಪಗಳು ಪ್ರಮುಖವಾಗಿವೆ.
ವೈಷ್ಣವ ಶಿಲ್ಪಗಳು ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳಲ್ಲಿ ವೈಷ್ಣದೇವಾಲಯಗಳ ಸಂಖ್ಯೆಯೇ ಹೆಚ್ಚು ಹಂಪೆಗೆ ಅನ್ವಯಿಸುತ್ತದೆ, ಅದರಲ್ಲೂ ತುಳುವ ಮನೆತನದ ಆಳ್ವಿಕೆಯ ಕಾಲದಲ್ಲಿ ಬೃಹತ್ ದೇವಾಲಯಗಳು ನಿರ್ಮಾಣಗೊಂಡವು.
ಲೌಕಿಕ ಶಿಲ್ಪಗಳು: ವಿಜಯನಗರ ಕಾಲದ ಗಾರೆ ಶಿಲ್ಪಿಗಳಲ್ಲಿ ಲೌಕಿಕ ಶಿಲ್ಪಗಳು ವಿಶೇಷವಾಗಿ ಕಂಡುಬರುತ್ತವೆ ಈ ಶಿಲ್ಪಿಗಳು ವಿರೂಪಾಕ್ಷ ದೇವಾಲಯದ ಹೊರಭಾಗದಲ್ಲಿ ಕೈಪಿಡಿ ಗೋಡೆಗೆ ಹೊರಗೆ ನಿಂತ ಸಂಗೀತ ವಾಧ್ಯಕರು, ನೃತ್ಯಗಾರರು, ಭಕ್ತರು ಹಾಗೂ ಅವರು ಶಿಷ್ಯರುಗಳ ಗಾರೆಶಿಲ್ಪಿಯ ಚಿತ್ರಗಳು ಬಿಡಿಸಲಾಗಿದೆ, ಇವು ಸಮಕಾಲೀನ ಜನರ ವೇಷಭೂಷಣಗಳ ಬಗೆಗೆ ಸ್ಪಷ್ಟ ಚಿತ್ರಣವನ್ನು ಜನಸಮಾನ್ಯರ ಮನಸೆಳೆಯುವಂತೆ ಗಾರೆ ಶಿಲ್ಪಿಗಳಾಗಿವೆ ಜೊತೆಗೆ ಸಂಗೀತ ವಾಧ್ಯಗಳು ಹಾಗೂ ನರ್ತನದ ವಿವಿದ ಪ್ರಕಾರಗಳು ಸಹ ಕಂಡುಬರುವವು ಉತ್ತರ ಭಾಗದ ಗೋಡೆಯೊಂದರಲ್ಲಿ ತಲೆಗೆ ರುಮಾಲನ್ನು ಸುತ್ತಿದ ವ್ಯಕ್ತಿಯೊಬ್ಬನ ಪ್ರತಿಮೆಯುಂಟು ಇದು ಬುಕ್ಕರಾಯನ ಪ್ರತಿಮೆ ಎಂದು ಕರೆಯಲಾಗಿದೆ.
ವಿಜಯನಗರ ಸಾಮ್ರಾಜ್ಯಕ್ಕೆ ಒಳಪಡುವ ಮತ್ತೊಂದು ಗಾರೆ ಶಿಲ್ಪೆ ಕನಕಗಿರಿ ಗೋಪುರದಲ್ಲಿ ಕುದುರೆ ಸವಾರಿನ ಪ್ರತಿಮೆಗಳಿದ್ದು ಗೋಪುರದ ಅಲಂಕರಣಕ್ಕೆ ನೆರವಾಗಿವೆ ಅದರ ಮಹದ್ವಾರ ಗೋಪುರದ ಪಶ್ಚಿಮ ಮುಖದಲ್ಲಿ ಗಂಡುಜೋಗಮ್ಮನ ಪ್ರತಿಮೆಯೊಂದನ್ನು ಬಿಡಿಸಲಾಗಿದೆ ಶಿಷ್ಟವಿರಲಿ ಪರಿಶಿಷ್ಟವಿರಲಿ ಹಂಪಿ ಪರಿಸರದ ಸಾಂಸ್ಕೃತಿಕ ಚಿತ್ರಗಳನ್ನು ಗೋಪುರದಲ್ಲಿ ಬಿಡಿಸುವ ಪದ್ದತಿಯನ್ನು ವಿಜಯೋತ್ತರ ಕಾಲದಲ್ಲಿ ಆರಂಭಗೊಂಡಿತ್ತೆಂದು ಜನಸಾಮಾನ್ಯರ ನಂಬಿಕೆಯಾಗಿದೆ.
ವಿಜಯನಗರ ಸಾಮ್ರಾಜ್ಯದ ಒಡೆಯರಾದ ಶ್ರೀ ಕೃಷ್ಣದೇವಾಲಯದ ಮಹಾದ್ವಾರ ಗೋಪುರದ ಪಶ್ಚಿಮ ಭಾಗದಲ್ಲಿ ಉದಯಗಿರಿ ತಾಣದಲ್ಲಿ ಮತ್ತು ಅದರ ಯುದ್ದದಲ್ಲಿ ಪಾಲ್ಗೊಂಡ ಸೈನ್ಯವನ್ನು ಗಾರೆ ಶಿಲ್ಪಗಳೂ ಸಹ ಬಿಡಿಸಲಾಗಿದೆ, ಗಜದಳ, ಅಶ್ವದಳ, ಮತ್ತು ಕಾಲುದಳ, ಗುಂಪು ಶಿಲ್ಪಿಗಳು ಸುಂದರವಾಗಿ ಮೂಡಿಬಂದಿರುವ ಚಿತ್ರದ ಗಾರೆಶಿಲ್ಪಿಯೊಂದನ್ನು ಕಂಡುಬಂದಿದೆ. ಈ ದೇವಾಲಯಗಳ ಶಿಖರ ಮತ್ತು ಗೋಪುರಗಳಿಗೆ ನಡೆದ ಅಲಂಕರಣದಲ್ಲಿ ವೈಷ್ಣವಿನ ಅವತಾರಗಳಿಗೆ ಸಂಬಂಧಿಸಿದ ಶಿಲ್ಪಗಳನ್ನು ರೂಪಗೊಂಡವು ಜೊತೆಗೆ ಯತಿಗಳು ಶಿಷ್ಯರು ಮತ್ತು ದ್ವಾರಪಾಲಕರುಗಳು ಶಿಲ್ಪಗಳನ್ನು ರಚಿಸಲಾಯಿತು ಹಂಪಿಯ ಅನಂತಶಯನಗುಡಿ, ಮೇಲುಕೋಟೆ, ಕನಕಗಿರಿ ಮುಂತಾದ ಸ್ಥಳಗಳಲ್ಲಿರುವ ದೇವಾಲಯಗಳು ವೈಷ್ಣವ ಪಂಥದ ಶಿಲ್ಪಗಳು ಪ್ರಮುಖವಾಗಿ ಕಂಡುಬಂದಿರುವವು, ವಿಜಯನಗರ ಸಾಮ್ರಾಜ್ಯದ ಉಳಿವಿಗಾಗಿ ಬಹುಪಾಲ ವಿದ್ವಾಂಸರು ತಮ್ಮ ನೆನಪುಗಳನ್ನು ದೇವಾಲಯ ಮಂಟಪ, ಸಾಹಿತ್ಯ, ಚಿತ್ರಶಿಲ್ಪಗಳು, ಧಾರ್ಮಿ ಆಚರಣೆ, ಸಂಪ್ರದಾಯಗಳು, ಸಾಂಸ್ಕೃತಿಕ ಚಟುವಟಿಕೆಗಳನ್ನು ರಚನೆಗೊಳಿಸಿದರು ಹಂಪೆಯ ಪ್ರತಿಯೊಂದರ ಈ ತಾಣದ ನೆಲೆಯಲ್ಲಿ ಸಾಮ್ರಾಜ್ಯದ ಆಳ್ವಿಕೆಯ ಅನೇಕ ಸಾಧಕ ಬಾಧಕಗಳ ಕ್ರಿಯೆಗಳನ್ನು ಹಂಪೆಯ ಧಾರ್ಮಿಕ ಆಚಾರ ವಿಚಾರಗಳಿಗೆ ಧಾರೆಯಾಗಿದ್ದರು. ಇಂತಹ ಮನಮೋಹಕ ತಾಣದಲ್ಲಿ ವಿಜಯನಗರ ಸಾಮ್ರಾಜ್ಯವು ದಕ್ಷಿಣಭಾರತಕ್ಕೆ ಪ್ರಸಿದ್ದಗೊಂಡ ಪುಣ್ಯ ಕ್ಷೇತ್ರವಾಗಿದೆ, ಇಲ್ಲಿ ಜನಸಮಾನ್ಯರು ಬದುಕನ್ನು ನಿರಂತರ ದಿನಮಾನಗಳ ತಪಗೈದ ಪುಣ್ಯ ಪುರುಷರಾಗಿದ್ದರು, ಇಲ್ಲಿ ಪ್ರತಿಯೊಂದು ಕಾರ್ಯಗಳು ಜನರ ಜೀವನಕ್ಕೆ ಕಾರ್ಯಗಳು ಜನರಿಗೆ ಜೀವನಕ್ಕೆ ಪ್ರತಿರೂಪಕವಾಗಿ ಉಳಿದವು. ಸಾಮಾಜಿಕ ಜೀವನವು ಹಂಪೆಯ ಪುಣ್ಯ ಕ್ಷೇತ್ರದಲ್ಲಿ ಸರಿಸಮಾನವಾದ ಕ್ರಿಯಾ ವಸ್ತುಗಳನ್ನು ವ್ಯಾಪಾರಗಳು ಕೈಕಸುಬುಗಳ ಚಿತ್ರವು ಸಮರ್ಥಕವಾಗಿ ಕಂಡುಬಂದಿರುವವು. ಇಲ್ಲಿನ ಜನಸಾಮಾನ್ಯರು ತಮ್ಮದೇಯಾದ ಕ್ರಿಯೆಯಲ್ಲಿ ಪಾಲ್ಗೊಂಡು ಅದರಿಂದ ಬಂದ ಆರ್ಥಿಕಪ್ರಮಾಣವನ್ನು ಪಡೆದುಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿದ್ದರು. ಹಾಗೂ ಅಲ್ಲಿನ ಯುದ್ದದ ಸಮಯದಲ್ಲಿ ದಿಟ್ಟನಡಿಗೆಯಿಂದ ಮುನ್ನುಗ್ಗುವ ಕುದುರೆಗಳು, ಆನೆಗಳು, ಮತ್ತು ವೀರಾವೇಷದಿಂದ ಕೂಡಿದ ಸೂನಿಕರ ಶಿಲ್ಪಿಗಳು ಜೀವಂತಿಕೆಯನ್ನು ಪ್ರದರ್ಶಿಸಿದ ವಿಜಯನಗರ ಸೈನ್ಯದ ಶಕ್ತಿ ಸಾಮಥ್ರ್ಯಗಳ ಕಲ್ಪನೆಗಳನ್ನು ಜೀರ್ಣೋದ್ಧಾರಗೊಳಿಸಲಾಗಿರುವ ಗಾರೆ ಶಿಲ್ಪಿಗಳು ಕಂಡುಬರುವವು.
ಹಂಪಿಯ ಇತರೆ ದೇವಾಲಯಗಳಲ್ಲಿ ಕೆಲವು ಲೌಕಿಕ ಶಿಲ್ಪಗಳ ಚಿತ್ರಗಳು ಕಂಡುಬಂದು ಇಂತಹ ಚಿತ್ರವು ಇಡೀ ಸಮಾಜದ ಸಾಂಸ್ಕೃತಿಕ ನೆಲೆಯನ್ನು ಮತ್ತು ಸಾಂಪ್ರದಾಯಿಕ ಶಕ್ತಿ ಸಾಮಥ್ರ್ಯ ದಿಟ್ಟತನ ಅಲಂಕಾರಿಕ ಸಂಗತಿಯನ್ನು ಗಮನಿಸಿ ನೋಡಿದಾಗ ಅಲ್ಲಿನ ದೃಶ್ಯಚಿತ್ರಗಳ, ಭಂಗಿಯ ಚಿತ್ರಗಳ ಜನಸಾಮಾನ್ಯರ ಮನದಲ್ಲಿ ಅಳಿಸಲಾರದ ದೃಶ್ಯಗಳನ್ನು ನೋಡಬಹುದಾದ ಸಂಗತಿಯಾಗಿದೆ, ಇಲ್ಲಿ ಜನರ ಜೀವನಾರ್ಥಕ್ಕೆ ಬೇಕಾಗಿರುವ ಆರ್ಥಿಕತೆ, ಸಾಮಾಜಿಕತೆ, ಧಾರ್ಮಿಕತೆ, ಸಾಂಸ್ಕೃತಿಕೆಯನ್ನು ಪ್ರತಿರೂಪಕವಾಗಿವೆ.
ಹಂಪಿ ಪರಿಸರದಲ್ಲಿ ಮತ್ತೊಂದು ಗಾರೆಶಿಲ್ಪಿಗಳ ಚಿತ್ರವು ಮಿಥುನ ಚಿತ್ರಗಳಾಗಿದೆ ವಿಜಯನಗರ ಕಾಲದ ಮಿಥುನ ಶಿಲ್ಪಗಳು ಹೆಚ್ಚಾಗಿ ಅಂಗಾಂಗ ಪ್ರದರ್ಶನದ ಉದ್ದೇಶವನ್ನು ಹೊಂದಿರುವ ಸಂಗತಿಯಾಗಿದೆ ಗಾರೆ ಮಿಥುನ ಶಿಲ್ಪಗಳು ಒರಟು ರಚನೆಗಳಾದರೂ ತಮ್ಮ ಉದ್ದೇಶವನ್ನು ಹೇಳುವಲ್ಲಿ ಸಫಲವಾಗಿರುವುದು ಗಮನಾರ್ಹವಾಗಿರುತ್ತದೆ, ಮಿಥುನ ಶಿಲ್ಪಗಳ ಕೇವಲ ದೇಹ ಸೌಂದರ್ಯವನ್ನಲ್ಲದೆ ಮನಸ್ಸಿಗೆ ಉಲ್ಲಾಸವನ್ನು ಸಹ ಪ್ರಕಟಮಾಡುತ್ತವೆ ವಿಠ್ಠಲ ದೇವಾಲಯದ ಮಹಾದ್ವಾರ ಗೋಪುರದಲ್ಲಿ ನಗ್ನಸ್ತ್ರೀ ಹೊಂದಿದ್ದು ಕೃಷ್ಣದೇವಾಲಯದಲ್ಲಿ ಮಹಾದ್ವಾರ ಗೋಪುರದ ಪೂರ್ವ ಮುಖದ ನಗ್ನಸ್ತ್ರೀಯರ ಶಿಲ್ಪಗಳು ಇದ್ದು ತುಂಬಾ ಯೌವ್ವನವನ್ನು ಪ್ರದರ್ಶಿಸುತ್ತವೆ, ಸ್ತ್ರೀಯರ ಕೇಶಾಲಂಕಾರ ಮನಮೋಹಕವಾಗಿದೆ ಲೇಪಾಕ್ಷಿಯ ವರ್ಣಚಿತ್ರಗಳಲ್ಲಿರುವ ಸ್ತ್ರೀಯರ ಕೇಶಲಂಕಾರವನ್ನು ಹೋಲುತ್ತವೆ ಇದೇ ಗೋಪುರದಲ್ಲಿ ಕಂಡುಬರುವ ಗೋಪಿಕಾಸ್ತ್ರೀಯರು ಶಿಲ್ಪಿಗಳು ನಗ್ನವಾದರೂ ಸದಾಭಿರುಚಿಗೆ ಉತ್ತಮ ಉದಾಹರಣೆಗಳಾಗಿವೆಯೆಂದು ಹೇಳಬಹುದಾಗಿದೆ. ಉತ್ತರ ದಿಕ್ಕಿನ ದೇವಾಲಯದ ಸಾಲುಮಂಟಪದ ಗೋಡೆಯಲ್ಲಿ ರತಿಕ್ರೀಡೆಯಲ್ಲಿ ನಿರತರಾದ ಹೆಣ್ಣು ಗಂಡುಗಳು ಶಿಲ್ಪಿಗಳನ್ನು ಬಿಡಿಸಲಾಗಿದೆ ಮಿಥುನ ಚಿತ್ರಗಳ ಸಾಂಸ್ಕೃತಿಕ ಮತ್ತು ಸಾಮಾಜಿಕಕ್ಕೆ ವಿಭಿನ್ನ ರೂಪವಾಗಿದೆ ಹೆಣ್ಣು ಗಂಡುವಿನ ಶಿಲ್ಪಿಯೊಂದರ ಭಂಗಿಯನ್ನು ಗಮನಿಸಿದರೆ ಭೂಮಿ ಮತ್ತು ಬೀಜವನ್ನು ಸಂಕೇತಿಸಿದ ಅಂಕಣವಾಗಿದೆ ಇಲ್ಲಿ ಸೃಷ್ಟಿಯ ಮಹತ್ವವನ್ನು ಸಾರುವಂತೆ ಜೊತೆಗೆ ಭೋದನಾ ಉದ್ದೇಶವನ್ನು ಸಹ ಒಳಗೊಂಡಿರುತ್ತದೆ ಹಾಗೂ ಮಹಾದ್ವಾರ ಗೋಪುರದಲ್ಲಿ ಸ್ತ್ರೀಯರು ನಗ್ನಶಿಲ್ಪಗಳುಂಟು ಈ ಶಿಲ್ಪಿಗಳ ಉದ್ದೇಶವಾಗಿಯೇ ಮತ್ತು ಚಿತ್ರಗಳಲ್ಲಿ ಗುಪ್ತಾಂಗಗಳನ್ನು ಸೂಕ್ಷ್ಮವಾಗಿ ತೋರಿಸುವ ಶಿಲ್ಪಿಗಳಾಗಿವೆ.
ಉಪಸಂಹಾರ.
ವಿಜಯನಗರ ಸಾಮ್ರಜ್ಯದ ಗಾರೆಶಿಲ್ಪವು ವಿಶೇಷವಾಗಿ ಚಲನಾಶೀಲತೆ ಜೊತೆಗೆ ಗಾಂಭೀರ್ಯವನ್ನು ಮೈಗೂಡಿಸಿಕೊಂಡಿರುವುದು ಗಾರೆಶಿಲ್ಪಗಳ ವಿಶೇಷ ಲಕ್ಷಣವಾಗಿ ಬಹುತೇಕ ಗಾರೆ ಶಿಲ್ಪಗಳು ಸಮಭಂಗಿಯಲ್ಲಿ ರಚನೆಗೊಂಡಿವೆ, ಆ ಕಾಲದ ಗಾರೆ ಶಿಲ್ಪಗಳ ಮುಖ್ಯಲಕ್ಷಣ ಶಿಲಾ ಶಿಲ್ಪಗಳಿಗಿಂತ ಹೆಚ್ಚಿನ ಅಲಂಕಾರವನ್ನು ಗಾರೆ ಶಿಲ್ಪಿಗಳಲ್ಲಿ ಕಾಣುತ್ತಿದ್ದವು, ಹಾಗಾಗಿ ಕೆಲವು ಶಿಲ್ಪಗಳು ಹೊಯ್ಸಳರ ಶಿಲ್ಪಗಳನ್ನು ನೆನಪಿಸುತ್ತವೆ ಮತ್ತು ರಚನೆಗೊಂಡಿರುವ ಮುಖ್ಯವಾಗಿ ದೇವತೆಗಳ ಪುರಾಣ ಕಥೆಗಳನ್ನು ಜನಸಾಮಾನ್ಯರಿಗೆ ನೇರವಾಗಿ ತಿಳಿ ಹೇಳುವ ಉದ್ದೇಶವನ್ನು ಹೊಂದಿದ್ದವು ವಿಜಯನಗರ ಕಾಲದ ಗಾರೆಯನ್ನು ನವ್ಯಶೈಲಿಯೊಂದಾಗಿ ಕಟ್ಟಡ ಮತ್ತು ಶಿಲ್ಪಗಳಿಗೆ ಬಳಸಲಾಗಿತ್ತು ರಚನೆಗೊಂಡ ಶಿಲ್ಪಗಳ ಪಂಥ ಆಗಮ ಮೊದಲಾಗಿ ದೇವಾಲಯಗಳಲ್ಲಿ ನಡೆದು ಬಂದ ಪಾರಂಪರಿಕ ದಾರಿಯನ್ನು ಗುರುತಿಸಲು ಸಹಕಾರಿಯಾಗಿದೆ ಹಾಗೂ ವಾಸ್ತು ಮತ್ತು ಶಿಲ್ಪಕಲಾಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಟ್ಟಿತು ಕಾರಣ ತತ್ಪರಿಣಾಮವಾಗಿ ದೇವಾಲಯದ ನಿರ್ಮಾಣ ಹಗುರಗೊಂಡು ಆರ್ಥಿಕವಾಗಿ ಮಿತವ್ಯಯಗಳನ್ನು ಸಾಧಿಸುವುದರಲ್ಲಿ ಉತ್ತಮ ಮಾರ್ಗವಾಗಿತ್ತು.
ಆಕರ ಗ್ರಂಥ: