Tumbe Group of International Journals

Full Text


ಗುಬ್ಬಿತಾಲ್ಲೂಕಿನ ಪ್ರಾಚೀನ ಆಡಳಿತ ಘಟಕಗಳು

ಶ್ರೀನಿವಾಸ .ಜಿ

ಸಂಶೋಧನಾ ವಿದ್ಯಾರ್ಥಿ, ಪ್ರಾಚೀನ ಇತಿಹಾಸ & ಪುರಾತತ್ವ ಅಧ್ಯಯನ ವಿಭಾಗ,

ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

Mob: 9986765239  e-mail: sreenivasa2283@gmail.com


 

ಪ್ರಸ್ತಾವನೆ

            ಪ್ರಾಚೀನವಾದ ಆಡಳಿತ ವಿಭಾಗಗಳನ್ನು ಗುರುತಿಸುವುದುಕಷ್ಟದ ಕೆಲಸ.  ವಿಸ್ತಾರವಾದ ಪ್ರದೇಶವನ್ನು ಆಡಳಿತದ ಅನುಕೂಲಕ್ಕಾಗಿ ಅನೇಕ ಭಾಗಗಳಾಗಿ ಅರಸರುಗಳು ವಿಂಗಡಿಸಿಕೊಂಡಿದ್ದರು.ಕಾಲದಿಂದ ಕಾಲಕ್ಕೆ ಬದಲಾವಣೆಗಳಾಗಿವೆ.ಏಕೆಂದರೆರಾಜಕೀಯ ವ್ಯವಸ್ಥೆಯ ಬದಲಾವಣೆ, ನಗರಗಳ ಬೆಳವಣಿಗೆ ಮತ್ತು ಆಡಳಿತ ಕೇಂದ್ರದ ಸುರಕ್ಷತೆದೃಷ್ಟಿಕೋನದಿಂದ ಬದಲಾವಣೆಯಾಗಬೇಕಾದ ಪರಿಸ್ಥಿತಿ ಉಂಟಾಗಿದೆ.  ರಾಜಕೀಯ ಆಡಳಿತ ವಿಭಾಗಗಳನ್ನು ರಚಿಸುವಾಗಹಿಂದೆ, ಭೌಗೋಳಿಕ ವ್ಯತ್ಯಾಸವನ್ನು ಗಮನಿಸಿರುವಂತಿದೆ.  ಆದ್ದರಿಂದಲೇಗಂಗವಾಡಿ, 96000, ನೊಳಂಬವಾಡಿ 32000, ತೊಂಡನಾಡು 48000 ಎಂಬ ದೊಡ್ಡ ಆಡಳಿತ ಘಟಕಗಳು ತಲೆಯೆತ್ತಿರಬೇಕು.  ಉತ್ತರಕರ್ನಾಟಕ ಮತ್ತುದಕ್ಷಿಣಕರ್ನಾಟಕದಲ್ಲಿನ ಊರುಗಳ ಸಂಖ್ಯೆಯನ್ನು ಗುರುತಿಸಿದರೆ ತಿಳಿಯುತ್ತದೆ.  ಅಲ್ಲದೆಒಂದುಊರು,ಮತ್ತೊಂದುಊರಿಗೆತುಂಬಾ ಹತ್ತಿರದಲ್ಲಿರುವುದರಿಂದ ಗ್ರಾಮಗಳ ನಡುವೆಗಡಿ ಜಗಳಗಳು ನಡೆದಿರುವುದೂಉಂಟು.  ಕೆಲವು ಸಂದರ್ಭದಲ್ಲಿ ಸಾಮಂತ ಅರಸರುಗಳು ಅಧಿಕಾರಿ ವರ್ಗದವರು ಕೈಹಾಕಿರುವುದುಉಂಟು.  ಆಡಳಿತ ವಿಭಾಗಗಳ ಸೀಮೆಗಳನ್ನು ಸಾಮಾನ್ಯವಾಗಿ ನದಿ, ಬೆಟ್ಟ, ಹಳ್ಳ, ಕೆರೆ ಭೂಮಿಯ ಫಲವತ್ತತೆ, ಮಣ್ಣು ಮುಂತಾದವುಗಳ ಮೂಲಕ ನಿರ್ಧರಿಸುತ್ತಿದ್ದರು. 1ಇದುಆರಂಭದಿಂದ ಹತ್ತನೇ ಶತಮಾನದವರೆಗೆ ನಿಯಮಿತವಾಗಿ ಪಾಲಿಸಿಕೊಂಡು ಬಂದರಾದರೂ ಮುಂದೆಅಧಿಕಾರ ವಿಸ್ತರಣೆಯದಾಹದಿಂದಅದನ್ನು ಮೀರಿರುವುದು ಕಂಡುಬರುತ್ತದೆ.

ಕೀ ವರ್ಡ್: ಆಡಳಿತ, ತೇಟ್ಟೂರ್ಸಪ್ತತಿ, ಸಾಮಂತ, ಸಿಲ್ವರ್‍ಸ್ಯಾಂಡ್‍, ವಸತಿಗೆಯೋಗ್ಯವಾದ, ಶಿಲಾಯುಗಕ್ಕೆ

ಪಿಠೀಕೆ

            ಭೌಗೋಳಿಕವಾಗಿ ಗುಬ್ಬಿತಾಲ್ಲೂಕು ಪ್ರದೇಶವು ಭೌಗೋಳಿಕ ಬಂಧನದಿಂದಕೂಡಿರುವ ಪ್ರದೇಶ.  ಇತರ ತಾಲ್ಲೂಕುಗಳಿಂದ ಬೇರ್ಪಡಿಸಲು ಬೆಟ್ಟ-ಗುಡ್ಡ ನದಿಗಳಾಗಲೀ ಕಂಡುಬರುವುದಿಲ್ಲ.  ದೇವರಾಯನದುರ್ಗದಲ್ಲಿಹುಟ್ಟುವ ಶಿಂಷಾನದಿ ಗುಬ್ಬಿತಾಲ್ಲೂಕಿನಲ್ಲಿ ನೈರುತ್ಯಾಭಿಮುಖವಾಗಿ ಹರಿದುಕಡಬದಕೆರೆಯ ಮೂಲಕ ಕಲ್ಲೂರಿನ ಬಳಿ ನಾಗಹೊಳೆ ಸೇರಿಕೊಂಡು ಮಾರ್ಕೋನಹಳ್ಳಿ ಜಲಾಶಯವನ್ನು ಸೇರುವುದರ ಮೂಲಕ ಕಾವೇರಿ ನದಿ ಸೇರುತ್ತದೆ.  ಉಳಿದಂತೆ ಯಾವುದೇ ನದಿಗಳು ಕಂಡುಬರುವುದಿಲ್ಲ.ಮಳೆಗಾಲದಲ್ಲಿ ಹಳ್ಳ-ಕೊಳ್ಳಗಳ ಮೂಲಕ ಹರಿದು ಬೇಸಿಗೆಯಲ್ಲಿ ಬರಡಾಗುತ್ತದೆ.

            ಗುಬ್ಬಿತಾಲ್ಲೂಕುಆರ್ಥಿಕವಾಗಿಗಮನಾರ್ಹವಾದ ಪ್ರದೇಶ.ಖನಿಜಗಳ ಆಗರವಾಗಿದೆ.ಗ್ರಾನೈಟ್, ಮ್ಯಾಂಗನೀಸ್, ಸಿಲ್ವರ್‍ಸ್ಯಾಂಡ್, ಬಳಪದಕಲ್ಲು, ಸುಣ್ಣದಕಲ್ಲು,ಓಕರ್ ಎಂಬ ಹಸನಾದಜೇಡಿಮಣ್ಣು, ಬೆಣಚುಕಲ್ಲು ಮತ್ತುಕಟ್ಟಡ ಕೆಲಸಕ್ಕೆ ಬೇಕಾದ ವಿವಿಧ ಕಲ್ಲುಗಳಿಂದ ಸಮೃದ್ಧವಾಗಿದೆ.ಇಲ್ಲಿದೊರೆಯುವ ಸುಣ್ಣಕಲ್ಲುಉತ್ತಮಜಾತಿಯದ್ದಾಗಿದ್ದುಅಮ್ಮಸಂದ್ರದ ಸಿಮೆಂಟ್ ಕೈಗಾರಿಕೆಗೆ ಮರಳು ಮತ್ತು ಸುಣ್ಣಕಲ್ಲು ಆಧಾರಿತವಾಗಿದೆ.2  ಈ ಭಾಗದಲ್ಲಿ ಮಳೆಯ ನೀರನ್ನೇ ನಂಬಿಕೊಂಡಿದ್ದರೂ ಪ್ರಾಚೀನಕಾಲದಲ್ಲಿ ಮಾನವನ ವಸತಿಗೆಯೋಗ್ಯವಾದ ಪ್ರದೇಶವಾಗಿ ಪರಿಣಮಿಸಿದೆ.  ತುಮಕೂರುಜಿಲ್ಲೆಯ ಹೃದಯ ಭಾಗದಂತಿರುವಗುಬ್ಬಿತಾಲ್ಲೂಕು ಪ್ರಾಗಿತಿಹಾಸದತವರೂರುಎಂದರೆತಪ್ಪಾಗಲಾರದು.30ಕ್ಕೂ ಅಧಿಕ ಪ್ರಾಗಿತಿಹಾಸಕಾಲದ ನೆಲೆಗಳು ಬೆಳಕಿಗೆ ಬಂದಿವೆ.  ಹಳೆಶಿಲಾಯುಗ, ಸೂಕ್ಷ್ಮ ಶಿಲಾಯುಗ, ನೂತನ ಶಿಲಾಯುಗಕ್ಕೆ ಸಂಬಂಧಿಸಿದ ನೆಲೆಗಳು ತಾಲ್ಲೂಕಿನಲ್ಲಿಕಂಡುಬಂದಿವೆ.  ಮೂಗನಾಯಕನಕೋಟೆ, ಅಮ್ಮನಘಟ್ಟ, ಬೆಟ್ಟದಹಳ್ಳಿ, ಸಾಗಸಂದ್ರ, ದೊಡ್ಡಗುಣಿ, ಯಕ್ಕಲಕಟ್ಟೆ.ಅಪ್ಪಾನಹಳ್ಳಿ, ಕೈಮರ ಮುಂತಾದ ಪ್ರದೇಶಗಳು ಪ್ರಾಗಿತಿಹಾಸಕಾಲದ ನೆಲೆಗಳಾಗಿದ್ದು, ಸಹಸ್ರಾರು ವರ್ಷಗಳಿಂದ ಜನರ ಬದುಕಿನ ನೆಲೆವೀಡಾಗಿತ್ತು3ಎಂದು ತಿಳಿಯುತ್ತದೆ.ಇತರ ಪ್ರದೇಶಗಳಂತೆ ಐತಿಹ್ಯಗಳನ್ನು ಬಿಂಬಿಸುವ ಅಂಶಗಳು ಕಂಡುಬರುತ್ತವೆ.  ಇದೇತಾಲ್ಲೂಕಿನಕಡಬದಲ್ಲಿ ಶ್ರೀರಾಮನು ತನ್ನ ಮಡದಿ ಸೀತೆಯ ಕೋರಿಕೆಯಂತೆ ಹರಿಯುತ್ತಿದ್ದ ನದಿಗೆ ಕಟ್ಟೆಯನ್ನುಕಟ್ಟಿಕೆರೆಯನ್ನು ನಿರ್ಮಿಸಿದನು.ಅದೇ ಇಂದಿನ ಕಡಬದದೊಡ್ಡಕೆರೆಎಂಬುದುಐತಿಹ್ಯವಿದೆ.  ಸೀತಾ,ರಾಮ, ಲಕ್ಷ್ಮಣರು ಸಂಚರಿಸಿ ಕಡಬದಲ್ಲಿ ವಾಸವಿದ್ದಕದಂಬ ಋಷಿಗಳಿಂದ ಆತಿಥ್ಯ ಪಡೆದಿದ್ದರು.ಎಂದೂ ಈ ಪ್ರದೇಶದಲ್ಲಿಕದಂಬ ಋಷಿ ನೆಲೆಸಿದ್ದರಿಂದಾಗಿ ಆ ಪ್ರದೇಶಕ್ಕೆಕಡಬ ಎಂದು ಹೆಸರು ಬಂದಿತೆಂದು ಹೇಳಲಾಗಿದೆ. ಅಂತೆಯೇ ಇತಿಹಾಸ ಆರಂಭಕಾಲದ ಅವಶೇಷಗಳು ಸಹ ಕಂಡುಬಂದಿವೆ.

ಆಡಳಿತ ವಿಭಾಗಗಳು

            ಮೌರ್ಯರು ಮತ್ತು ಶಾತವಾಹನರ ಆಡಳಿತದ ಬಗ್ಗೆ ಪ್ರತ್ಯಕ್ಷ ಆಧಾರಗಳು ಲಭ್ಯವಿಲ್ಲ.ಮೌರ್ಯ ಮತ್ತು ಶಾತವಾಹನರ ನೇರ ಆಡಳಿತಕ್ಕೆ ಈ ಪ್ರದೇಶ ಒಳಪಡದಿದ್ದರೂ ಈ ಭೂಭಾಗದ ಮೇಲೆ ಅವರ ಪ್ರಭಾವವಿದ್ದುದುದೃಢವಾಗಿದೆ.ಕ್ರಿ.ಶ.5ನೇ ಶತಮಾನದಆರಂಭದ ವೇಳೆಗೆ ಗಂಗರ ನೇರ ಆಳ್ವಿಕೆಗೆ ಒಳಪಟ್ಟಿತ್ತು.

ಹೆರುಹೆನಾಡು-300:

            ಕ್ರಿ.ಪೂ.2ನೇ ಶತಮಾನದಿಂದ ನಾಡು ಪದವು ಆಡಳಿತದ ಘಟಕವಾಗಿಅವಿಚ್ಛಿನ್ನವಾಗಿ ಮುಂದುವರಿದಿದೆ.  ಇದಕ್ಕೆ ಕ್ರಿ.ಶ.450ರ ಹಲ್ಮಿಡಿ ಶಾಸನವೇ ಸಾಕ್ಷಿಯಾಗಿದೆ.ಅಲ್ಲಿ ಬಳಕೆಯಾಗಿರುವ ‘ನರಿದಾವಿಳೆನಾಡು’ ಎಂಬ ಪದದಕಡೆಗೆ ಷ.ಶೆಟ್ಟರ್ ವಿದ್ವಾಂಸರ ಗಮನ ಸೆಳೆದಿದ್ದಾರೆ.ಕನ್ನಡದ ನಾಡು ಎಂಬ ಪದ ಮತ್ತುಅದು ಸೂಚಿಸಿರುವ ಆಡಳಿತ ಘಟಕಗಳು ತಮಿಳಿಗಿಂತ ಹೆಚ್ಚು ಆಳವಾಗಿ ಬಿಟ್ಟಿದ್ದಕ್ಕೆ ಸಾಕ್ಷಿಯಾಗಿವೆ.4

            ಹೆರುಹೆನಾಡು ಪ್ರಮುಖವಾದ ಆಡಳಿತ ಘಟಕವಾಗಿತ್ತು.  ಈಗಿನ ನಿಟ್ಟೂರು ಬಳಿ ಇರುವ ಪುರಗ್ರಾಮದ ಪ್ರಾಚೀನ ಹೆರುಕೂಡಲೂರುಆಗಿದೆ.ಆರಂಭದಲ್ಲಿಇದು ಮರುಕೆರೆ ವಿಷಯದಲ್ಲಿ ಸೇರಿಕೊಂಡಿತ್ತು.ಇದನ್ನುಗಂಗರ 2ನೇ ಮಾದವವರ್ಮನುಕೂಡಲೂರುಗ್ರಾಮವನ್ನುದಾನ ನೀಡಿದನು.ಈ ಗ್ರಾಮವು ತೊಳ್ಳಾನದಿಯ ಪಶ್ಚಿಮ ದಿಕ್ಕಿಗೆ ಮತ್ತು ಪೆರೂರುಗ್ರಾಮದ ಪೂರ್ವದಿಕ್ಕಿನಲ್ಲಿದೆಯೆಂದು ಕ್ರಿ.ಶ.5ನೇ ಶತಮಾನದ ಶಾಸನ ತಿಳಿಸುತ್ತದೆ.  ಈ ವಿಭಾಗದ ವ್ಯಾಪ್ತಿಯು 300 ಹಳ್ಳಿಗಳಿಗೆ ಸೀಮಿತವಾದಾಗ ಸ್ವತಂತ್ರ್ಯ ಆಡಳಿತ ವಿಭಾಗವಾಗಿ ರೂಪುಗೊಂಡಿತು.5  ಪುರಗ್ರಾಮದ ಕಲ್ಲೇಶ್ವರದೇವಾಲಯದ ಶಾಸನವು ಕುಮಾರನಾರಸಿಂಹ ಡಣ್ಣಾಯಕರುಹೆರುಹೆ 300ನ್ನು ಆಳುತ್ತಿದ್ದಂತೆಯೂ ಹೆರುಹೆನಾಡಿಗೆ ಶಿರೋಮಣಿಯೂ ಗಂಗವಾಡಿ 96000ಕ್ಕೆ ನಾಭಿಯಂತೆಂಕಣ ಅಯ್ಯುವೊಳೆ ಎನಿಸಿದ ನಿಟ್ಟೂರು ಮಹಾಪಟ್ಟಣವಾಗಿತ್ತು.  ಹೆರುಹೆಯಕೆರೆಯ ಕೆಳಗೆ ದೇವರಿಗೆದತ್ತಿಬಿಟ್ಟ ವಿವರ ನೀಡುತ್ತದೆ.  ಈ ಶಾಸನಗಳಲ್ಲಿ ಉಲ್ಲೇಖವಾಗಿರುವಹೆರುಹೆಗೌರಿಬಿದನೂರುತಾಲ್ಲೂಕಿನ ಶಾಸನಗಳಲ್ಲಿ ಕಂಡುಬರುವ ಹೆರುಹೆನಾಡು ಎಂಬುದು ಹಿಂದೂಪುರತಾಲ್ಲೂಕಿನ ಇಂದಿನ ಪರಿಗಿಗ್ರಾಮವನ್ನು ಕೇಂದ್ರವನ್ನಾಗಿ ಪಡೆದಿದ್ದು ಪ್ರಸಿದ್ಧವಿದೆ.ಆದರೆ ಈ ಹೆರುಹೆ 300 ಅದಕ್ಕಿಂತ ಭಿನ್ನವೆಂದುತೋರುತ್ತದೆ.ಏಕೆಂದರೆ ಈ ಹೆರುಹೆ ಮುನ್ನೂರರಲ್ಲಿ ಮಡಾಪಟ್ಟಣ ನಿಟ್ಟೂರು ಸ್ಥಳವಿದ್ದು, ಗಂಗವಾಡಿ 96000ಕ್ಕೆ ನಾಭಿಯಂತೆಂಕಣ ಅಯ್ಯುವೊಳೆ ಎಂದುಕರೆದಿರುವುದು ಗಮನ ಸೆಳೆಯುತ್ತದೆ. 6ಹಾಸನ ಮತ್ತು ಮಂಡ್ಯಜಿಲ್ಲೆಯಉತ್ತರ ಭಾಗಗಳನ್ನು ಒಳಗೊಂಡಿದ್ದ ನೀರ್ಗುಂದ ನಾಡಿನಲ್ಲಿ ಇಂದಿನ ಕಡಬ ಶ್ರೀ ದಶರಥರಾಮಚತುರ್ವೇದಿ ಮಂಗಲಂ ಎಂಬ ಅಗ್ರಹಾರಅಂತರ್ಗವಾಗಿದ್ದುಕಲ್ಬಿಪ್ಪು ಸಾಸಿರ ಪ್ರದೇಶದ ಉಪವಿಭಾಗವಾಗಿತ್ತೆಂದು ತಿಳಿಯುತ್ತದೆ. 7.

ಇಡಗೂರು ವಿಷಯ:

            ಇಡಗೂರುಗುಬ್ಬಿತಾಲ್ಲೂಕಿನ ಇಂದಿನ ಸಿ.ಎಸ್.ಪುರ ಹೋಬಳಿಯಲ್ಲಿ ಕಂಡುಬರುವಒಂದುಗ್ರಾಮ. ಇಡಗೂರು ಆಡಳಿತ ಭಾಗವಾದ ವಿಷಯವಾಗಿದ್ದು, ಇದುಕುಣಿಗಲ್ ನಾಡಿಗೆ ಸೇರಿತ್ತು.ರಾಷ್ಟ್ರಕೂಟರ 3ನೇ ಗೋವಿಂದನು ಕುಣಿಗಲ್‍ದೇಶವನ್ನು ಆಳುತ್ತಿದ್ದ ಚಾಲುಕ್ಯರ ವಿಮಾಲಾಧಿತ್ಯನನ್ನು ಗಂಗ ಮಂಡಲಕ್ಕೆ ಅಧಿಕಾರಿಯನ್ನಾಗಿ ನೇಮಿಸಿದನು.ವಿಮಲಾಧಿತ್ಯನಿಗೆ ಶನಿಕಾಟ ಕಾಡಲಾರಂಭಿಸಿದ್ದರಿಂದ ಅದರ ಬಿಡುಗಡೆಗಾಗಿ ಗಂಗಮಂಡಲವನ್ನು ಆಳುತ್ತಿದ್ದ ಚಾಕಿರಾಜನ ವಿನಂತಿಯ ಮೇರೆಗೆ 3ನೇ ಗೋವಿಂದನು ಮಾನ್ಯಪುರದ ಪಶ್ಚಿಮಕ್ಕಿದ್ದ ಶಿಲಾಗ್ರಾಮದ ಜೈನಬಸದಿಗೆ ಇಡಗೂರು ವಿಷಯದಲ್ಲಿನಜಾಲಮಂಗಲ ಗ್ರಾಮವನ್ನುದಾನವಾಗಿ ನೀಡಿದನು. ಜಾಲಮಂಗಲದ ನಾಲ್ಕು ದಿಕ್ಕಿಗೆ ಸ್ವಸ್ತಿಮಂಗಲ, ಬೆಳ್ಳಿ, ಗುಡ್ಡನೂರು, ತರಿಪಾರಿ ಗ್ರಾಮಗಳಿದ್ದವು.  ಶಿಲಾಗ್ರಾಮವು ಈಗಿನ ನೆಲಮಂಗಲ ತಾಲ್ಲೂಕಿನ ಮಣ್ಣೆಯ ಸಮೀಪ ಇರಬೇಕೆಂದು ಊಹಿಸಲಾಗಿದೆ.8  ಮಣ್ಣೆಯ ಸಮೀಪ ಶಿಲಾಗ್ರಾಮ ಎಂಬ ಊರು ಅಸ್ಥಿತ್ವದಲ್ಲಿಲ್ಲವೆಂದು ಹೆಚ್.ಎಸ್.ಗೋಪಾಲ್‍ರಾವ್ ತಿಳಿಸಿದ್ದಾರೆ.

ಚೇಳೂರು ನಾಡು:

            ವಿಜಯನಗರಕಾಲದಲ್ಲಿ ಪ್ರಮುಖ ಆಡಳಿತ ಕೇಂದ್ರವಾಗಿದ್ದ ಚೇಳೂರು ನಾಡುಇಂದು ಚೇಳೂರು ಗುಬ್ಬಿತಾಲ್ಲೂಕಿನಒಂದು ಹೋಬಳಿಕೇಂದ್ರವಾಗಿದೆ.  ಕ್ರಿ.ಶ.1403ರ ಶಿರಾದ ತಾಮ್ರಶಾಸನವು ವಿಜಯನಗರ ಸಾಮ್ರಾಜ್ಯದದಂಡನಾಯಕನಾದಇರುಗಪ್ಪದಂಡನಾಥನು ಪೆನುಗೋಂಡೆಯಲ್ಲಿ ಆಳ್ವಿಕೆ ಮಾಡುತ್ತಿದ್ದಾಗ ಚೇಳೂರು ನಾಡಿಗೆ ಸೇರಿದ ಶೀಬೂರು (ಈಗಿನ ಸೀಬಿ)ಸೀಮೆಯ ಅಡವಿಯೊಳಗೆ ದೇವರಾಯನದುರ್ಗ ಬೆಟ್ಟದ ಪಶ್ಚಿಮಕ್ಕಿರುವ ಆನೆಬಿದ್ದಜರಿಯಗಂಗಣ್ಣ, ಶೀಬೂರು ಸೀಮೆಯ ಗೌಡನಾಯಕರು, ಮಾನಿಸರ, ಪೋಚನೋಜ್ಞರ ಮಕ್ಕಳು ಅಪ್ಪಯ್ಯಭಟ್ಟರುಕೆರೆಯನ್ನು ಕಟ್ಟಿಸಿ, ಆ ಕೆರೆಯ ಹಿಂದಿನ ಗದ್ದೆಯನ್ನು ಚಂದ್ರಮೌಳೇಶ್ವರ ಸನ್ನಿಧಿಲ್ಲಿ ನರಸಿಂಹ ಹಾಗೂ ಬ್ರಾಹ್ಮಣರಿಗೆದಾನ ಮಾಡಿದರು.  ಅದನ್ನು ಸರ್ವಮಾನ್ಯಅಗ್ರಹಾರವನ್ನಾಗಿ ಮಾಡಿತನ್ನ ಒಡೆಯನಾದ ಹರಿಹರನ ಹೆಸರಿನಲ್ಲಿ ಹರಿಹರಪುರ9ಎಂದು ನಾಮಕರಣ ಮಾಡಿದನು.

ಬಿದರೆ ಸೀಮೆ:

            ಸೀಮೆಯೆಂದು ಪ್ರಯೋಗವಾಗಿರುವ ಆಡಳಿತ ಘಟಕಗಳು ಕ್ರಿ.ಶ.1400ರ ನಂತರದಲ್ಲಿ ವಿಜಯನಗರ ಅರಸರುಗಳ ಕಾಲದಲ್ಲಿ ಹೊಸದಾಗಿ ಸೇರ್ಪಡೆಯಾದ“ನಾಡು” ಆಡಳಿತ ವಿಭಾಗಕ್ಕೆ ಸಮಾನಾಂತರವಾದ ಆಡಳಿತ ಘಟಕವೇ ಸೀಮೆ.ಸೀಮೆಯ ಕೆಳಗೆ ಹೋಬಳಿ, ಸ್ಥಳ ಎಂಬುವು ಉಲ್ಲೇಖವಾಗಿರುವುದು ವಿಜಯನಗರ ಮತ್ತು ವಿಜಯನಗರೋತ್ತರಕಾಲದ ಬೆಳವಣಿಗೆಯಾಗಿರುವುದು ಗಮನಾರ್ಹ ಸಂಗತಿ.  ಹಲವಾರು ಸ್ಥಳಗಳನ್ನು ಸೇರಿಸಿ ಸೀಮೆ ಎಂದು ಕರೆಯಲಾಗುತ್ತಿತ್ತು.10ಸೀಮೆ ಎಂಬ ಪ್ರದೇಶವಾಚಕ ಪದವನ್ನು ನಾಡಿಗೆ ಪರ್ಯಾಯವಾಗಿ ಬಳಸಿರುವುದೂ ಉಂಟು. ನಿಟ್ಟೂರು ಹೋಬಳಿ ಮೂಗನಾಯಕನಕೋಟೆಯ ಕ್ರಿ.ಶ.1572ರ ಶಾಸನವು ರಂಗನಾಥ ಸ್ವಾಮಿಗೆ ಉಂಬಳಿ ಹೊಲವನ್ನು ಬಿದರೆ ಸೀಮೆಗೆ ಸೇರಿರುವ ಮೂಗನಾಯಕನಕೋಟೆಯ ನಾಗೇನಹಳ್ಳಿಯಲ್ಲಿ ನೀಡಿರುವ ವಿಷಯವನ್ನು ತಿಳಿಸುತ್ತದೆ.11ಚಿಂದಗೆರೆಯಗುಬ್ಬಿ ಸಿದ್ದಪ್ಪನ ಹೊಲದಲ್ಲಿ ನೆಟ್ಟಿರುವ ಶಾಸನದಲ್ಲಿ ಕೃಷ್ಣದೇವರಾಯನು ಆಳ್ವಿಕೆ ನಡೆಸುತ್ತಿರುವಾಗ ಬಿದರೆ ಸೀಮೆಯೊಳಗಿರುವ ಕಗ್ಗೆರೆಯನ್ನುಎಲ್ಲಪ್ಪನಾಯಕನಿಗೆ ಸತ್ತಿಗೆಯಕೊಡುಗೆಯಾಗಿಕೊಟ್ಟ ವಿಷಯವನ್ನು ಪ್ರಸ್ತಾಪಿಸುತ್ತದೆ.  ಬಿದರೆ ಸೀಮೆಯಲ್ಲಿ ಕರ್ಣಣೆರೆಯು ಸೇರಿತ್ತೆಂದು ತಿಳಿಯುತ್ತದೆ.ಶ್ರೀ ಚನ್ನಬಸವೇಶ್ವರರನ್ನು ಉಲ್ಲೇಖಿಸಲಾಗಿರುವ ಕ್ರಿ.ಶ.1331 ತಾಮ್ರಶಾಸನವುಗುಬ್ಬಿ ಹೊಸಹಳ್ಳಿ ಹಿರೇಮಠ ವಂಶಸ್ಥರಾದ ಲಿಂಗೈಕ್ಯ ಹೊನ್ನುಡಿಕೆಯ ಗುರುಚನ್ನಬಸವಾರಾಧ್ಯರ ಮನೆಯಲ್ಲಿದೊರೆತಿದ್ದ ಈ ಶಾಸನದಲ್ಲಿ ಬಿದರೆ ಸೀಮೆಯ ಮಧ್ಯದಲ್ಲಿನಗೌರೀಪುರ, ತೆಂಕಣ ಭಾಗದಲ್ಲಿನಅಮ್ಮನಘಟ್ಟ, ಪಡುವಣಭಾಗಕ್ಕೆ ಲಕ್ಕೇನಹಳ್ಳಿ, ಬಡಗಣದಲ್ಲಿಗೌರೀಪುರದ ಬಾಗಿಲು ಎಂಬ ಗ್ರಾಮಗಳ ಉಲ್ಲೇಖವಿದ್ದು13ಈ ಎಲ್ಲಾ ಗ್ರಾಮಗಳು ಬಿದರೆ ಸೀಮೆಗೆ ಸೇರಿದ್ದವಂದು ತಿಳಿಯುತ್ತದೆ.

ಗುಬ್ಬಿ ಸ್ಥಳ:

            ಪ್ರತಿಯೊಂದು ನಾಡು ಮತ್ತು ಸೀಮೆಗಳಲ್ಲಿ ಹಲವಾರು ಸ್ಥಳಗಳು ಅಂತರ್ಗತವಾಗಿರುತ್ತವೆ. ಆಡಳಿತ ಘಟಕಗಳಲ್ಲಿ ಸ್ಥಳ ಎಂಬುದು ಸೀಮೆಯಂತೆ ವಿಜಯನಗರಅರಸರ ವಿಶಿಷ್ಟಕೊಡುಗೆಯೆಂದೇ ತಿಳಿಯುತ್ತದೆ. ಪ್ರತಿಯೊಂದು ಸ್ಥಳದಲ್ಲೂ ಹಲವಾರು ಗ್ರಾಮಗಳು, ಉಪಗ್ರಾಮಗಳು ಸಮಾವೇಶಗೊಂಡಿರುತ್ತಿದ್ದವು. ಧೂಳನಹಳ್ಳಿ ಗ್ರಾಮದಲ್ಲಿರುವ ಗುಬ್ಬಿಯ 3ನೇ ಶಾಸನವು ಮಹಾನಾಡಪ್ರಭು ಮಸಣಗೌಡರ ಮಕ್ಕಳು ರಾಮಣ್ಣ ಮತ್ತು ಮಸಣ್ಣನವರಿಗೆಗುಬ್ಬಿಯ ಸ್ಥಳದ ಧೂಳಿನಹಳ್ಳಿಯನ್ನು ಕೊಡುಗೆಯಾಗಿ 14ಕೊಟ್ಟ ವಿಚಾರವನ್ನು ಈ ಶಾಸನ ಒಳಗೊಂಡಿದೆ. ಗುಬ್ಬಿತಾಲ್ಲೂಕಿನ ನಿಟ್ಟೂರು ಮತ್ತು ಕಸಬಾ ಹೋಬಳಿ ಪ್ರಾಂತ್ಯವು ಪ್ರಾರಂಭದಲ್ಲಿ ದೇವಗುಂದ ನಾಡು15ಎಂದು ಕರೆಯಲಾಗುತ್ತಿತ್ತು ಎಂದು ಕೆಂಕೆರೆ ಹನುಮಂತೇಗೌಡರು ದೇವಗುಂದ ಮಹಾನಾಡ ಪ್ರಭುಗಳು ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಕೋಟೆ ಸ್ಥಳ:

            ಮೂಗನಾಯಕನಕೋಟೆಯತಾಮ್ರಶಾಸನವು ಹಾಗಲವಾಡಿ ಪಾಳೆಯಗಾರರ ಮುನಿಯಪ್ಪನಾಯಕ ಹಾಗಲವಾಡಿ ಹೋಬಳಿಯಾದ ಕೋಟೆ ಸ್ಥಳದ ಗೇರಹಳ್ಳಿ ಗ್ರಾಮಕ್ಕೆ ಲಿಂಗ-ಸಾಗರವೆಂದು ನಾಮಕರಣ ಮಾಡಿ ಮುದ್ದೀರಸ್ವಾಮಿಗಳಿಗೆ ದಾನ ನೀಡಿದನು.16ಇದನ್ನು ಗಮನಿಸಿದಾಗ ಹಾಗಲವಾಡಿ ಪಾಳೆಯಗಾರರ ಕಾಲದಲ್ಲಿ ಮೂಗನಯಕನಕೋಟೆ ಆಡಳಿತ ವಿಭಾಗವಾದ ಸ್ಥಳವಾಗಿತ್ತೆಂದು ತಿಳಿಯುತ್ತದೆ.

ತ್ಯಾಗಟೂರು ವಿಷಯ:

            ಗುಬ್ಬಿತಾಲ್ಲೂಕಿನ ನಿಟ್ಟೂರು ಹೋಬಳಿಯಲ್ಲಿ ಕಂಡುಬರುವ ತ್ಯಾಗಟೂರು ಒಂದು ಪ್ರಾಚೀನ ಐತಿಹಾಸಿಕ ಕೇಂದ್ರವಾಗಿತ್ತು ಎಂಬ ಅಂಶ ತಿಳಿಯುತ್ತದೆ.  ಶಾಸನಗಳಲ್ಲಿ ಈ ಸ್ಥಳವು ಆಡಳಿತ ಕೇಂದ್ರವಾಗಿತ್ತೆಂದು ಕಂಡುಬರುತ್ತದೆ. ಗಂಗರ ಶಾಸನದಲ್ಲಿ“ತೇಗಟ್ಟೂರ್ ವಿಷಯ”ಎಂದೂ ಒಂಭತ್ತನೇ ಶತಮಾನದಕಾಲದಲ್ಲಿ“ತೇಟ್ಟೂರ್ಸಪ್ತತಿ”ಎಂದೂ ಹೊಯ್ಸಳರ ಶಾಸನದಲ್ಲಿ“ತೇಗಟ್ಟೂರು ಹನ್ನೆರಡು”ಎಂದು ಉಲ್ಲೇಖವಾಗಿದೆ. 17ಇದುಒಂದು ಆಡಳಿತ ಕೇಂದ್ರವಾಗುವುದರಜೊತೆಗೆ ಪ್ರಸಿದ್ಧ ಜೈನಕೇಂದ್ರವಾಗಿದ್ದಜೈನ ಮಠ ಮತ್ತು ಜಿನಾಲಯಗಳು ಇದ್ದವೆಂದು ತಿಳಿಯುತ್ತದೆ.

ಉಪಸಂಹಾರ:

            ಹೀಗೆ ಗುಬ್ಬಿತಾಲ್ಲೂಕಿನ ಶಾಸನಗಳಲ್ಲಿ ಕಂಡುಬರುವ ಪ್ರಾಚೀನ ಕಾಲದಿಂದಅರ್ವಾಚೀನಕಾಲದವರೆಗಿನ ಆಡಳಿತಾತ್ಮಕ ಘಟಕ ವಿಭಾಗಗಳನ್ನು ಈ ಲೇಖನದಲ್ಲಿ ಪರಿಚಯಿಸಲು ಪ್ರಯತ್ನಿಸಲಾಗಿದೆ.ಈ ಪ್ರದೇಶದ ಪ್ರಾಚೀನ ಆಡಳಿತಘಟಕಗಳಾಗಿ ಹೆರುಹೆ ನಾಡು ಮುನ್ನೂರು, ಚೇಳೂರು ನಾಡು, ಇಡಗೂರು ವಿಷಯ, ಬಿದರೆ ಸೀಮೆ, ಗುಬ್ಬಿ,ಕೋಟೆಸ್ಥಳಗಳು ಕಂಡುಬಂದಿವೆ.ಬೇರೆ ಬೇರೆ ಆಡಳಿತ ಘಟಕಗಳಿಗೆ ಅಂದರೆತಾಲ್ಲೂಕು ವ್ಯಾಪ್ತಿಯನ್ನು ಹೊರತುಪಡಿಸಿ ಇತರ ಆಡಳಿತ ಭಾಗಗಳಲ್ಲೂ ಈ ಗುಬ್ಬಿತಾಲ್ಲೂಕಿನ ಅನೇಕ ಗ್ರಾಮಗಳು ಅಂತರ್ಗತವಾಗಿರುವುದುಕಂಡುಬರುತ್ತದೆ.

ಅಡಿ ಟಿಪ್ಪಣಿಗಳು:

  1. ಚನ್ನಬಸವಯ್ಯ ಹಿರೇಮಠ, ಪ್ರಾಚೀನಕರ್ನಾಟಕದರಾಜಕೀಯ ವಿಭಾಗಗಳು ಪು.07.
  2. ನಾಗಭೂಷಣಸಿ.,ಗುಬ್ಬಿಒಂದು ಸಾಂಸ್ಕೃತಿಕದರ್ಶನ ಪು.89.
  3. ಶಿವತಾರಕ್ ಕೆ.ಬಿ. ಕರ್ನಾಟಕದ ಪುರಾತತ್ವ ನೆಲೆಗಳು ಪು.275-286.
  4. ಚನ್ನಬಸವಯ್ಯ ಹಿರೇಮಠ, ಪೂರ್ವೋಕ್ತ ಪು.39
  5. ಅದೇ ಪು.242-243.
  6. ಕೃಷ್ಣಮೂರ್ತಿ ಪಿ.ವಿ(ಲೇ) ತುಮಕೂರುಜಿಲ್ಲಾ ಪ್ರದೇಶದ ಪ್ರಾಚೀನ ಆಡಳಿತ ಘಟಕಗಳು ಪು.416.
  7. ಅದೇ ಪು.415.
  8. ಚನ್ನಬಸವಯ್ಯ ಹಿರೇಮಠ ಪೂರ್ವೋಕ್ತ ಪು.255.
  9. ನಂದೀಶ್ವರಎನ್, ಶಿರಾ ತಾಲ್ಲೂಕುದರ್ಶನ ಪು.28.
  10. ನಂದೀಶ್ವರಎನ್.,ತುಮಕೂರುಜಿಲ್ಲೆಯಲ್ಲಿ ವಿಜಯನಗರಕಾಲದ ಸೀಮೆಗಳು ಪು.93.
  11. ಗುಬ್ಬಿ17
  12. ಅದೇಗುಬ್ಬಿ 51.
  13. ನಂಜುಂಡಸ್ವಾಮಿ ಬಿ.(ಲೇ) ಗೋಸಲ ಶ್ರೀ ಚನ್ನಬಸವೇಶ್ವರರು ಪು.5.
  14. ರೈಸ್ ಬಿ.ಎಲ್., ಪೂರ್ವೋಕ್ತ,ಗುಬ್ಬಿ 03.
  15. ಕೆಂಕೆರೆ ಹನುಮಂತೇಗೌಡ, ದೇವಗುಂದ ಮಹಾನಾಡಪ್ರಭುಗಳು ಪು.01.
  16. ಶೈಲಜಎಂ., ಪಾಳೆಯಗಾರರ ಶಾಸನಗಳು ಸಂಪುಟ 01 ಪು.215.
  17. ಶಿವತಾರಕ್ ಕೆ.ಬಿ. (ಲೇ) ಮೂರುತಾಮ್ರ ಶಾಸನಗಳು ಪು.516-521.

ಆಧಾರ ಗ್ರಂಥಗಳು

  1. ರೈಸ್ ಬಿ.ಎಲ್. ಎಪಿಗ್ರಾಫಿಯಾಕರ್ನಾಟಕ ಸಂಪುಟ 12 (ಹಳೆಯದು)
  2. ಶ್ರೀನಿವಾಸ ರಿತ್ತಿ (ಸಂ) ಪ್ರಾಚೀನಕರ್ನಾಟಕ ಆಡಳಿತ ಪರಿಭಾಶಕೋಶ. ಪ್ರಾಚ್ಯಾವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು– 2000
  3. ಚಿದಾನಂದಮೂರ್ತಿ, ಎಂ ಕನ್ನಡ ಶಾಸನಗಳ ಸಾಂಸ್ಕೃತಿಕಅಧ್ಯಯನ - ಸಪ್ನ ಬುಕ್ ಹೌಸ್ ಬೆಂಗಳೂರು, 2017 (10ನೇ ಮುದ್ರಣ)
  4. ಚನ್ನಬಸವಯ್ಯ ಹಿರೇಮಠ, ಪ್ರಾಚೀನಕರ್ನಾಟಕದರಾಜಕೀಯ ವಿಭಾಗಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ. 2014
  5. ಶಿವತಾರಕ್ ಕೆ.ಬಿ. ಕರ್ನಾಟಕದ ಪುರಾತತ್ವ ನೆಲೆಗಳು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ. 2001
  6. ಗೋಪಾಲ್‍ಆರ್. (ಸಂ) ತುಮಕೂರುಜಿಲ್ಲೆಯಇತಿಹಾಸ ಮತ್ತು ಪುರಾತತ್ವ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು 2009
  7. ನಂದೀಶ್ವರಎನ್, ಶಿರಾ ತಾಲ್ಲೂಕುದರ್ಶನ, ಪೂರ್ಣಚಂದ್ರ ತೇಜಸ್ವಿ ಪ್ರಕಾಶನ, ಶಿರಾ, 2008
  8. ನಾಗಭೂಶಣ. ಸಿ. ಗುಬ್ಬಿಒಂದು ಸಾಂಸ್ಕೃತಿಕದರ್ಶನ, ಸಿರಿಗನ್ನಡ ಪ್ರಕಾಶನ. ಬೆಂಗಳೂರು. 2008
  9. ಸಿದ್ಧಲಿಂಗಪ್ಪ ಕೆ.ಎಸ್. (ಸಂ) ಚೆನ್ನುಡಿ, ತುಮಕೂರುಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ. 1997
  10. ಭಾಸ್ಕರಾಚಾರ್ ಸೋ.ಮು (ಪ್ರ.ಸಂ) ತುಮಕೂರು ಸಿರಿ, ತುಮಕೂರುಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ. 2015
  11. ಕೆಂಕೆರೆ ಹನುಮಂತೇಗೌಡ, ದೇವಗುಂದ ಮಹಾನಾಡ ಪ್ರಭುಗಳು, ಗೋಧೂಳಿ ಪ್ರಕಾಶನ. ಬೆಂಗಳೂರು 2015


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal