Tumbe Group of International Journals

Full Text


ಅಂಬೇಡ್ಕರ್ ರವರ ಮೀಸಲಾತಿ ಜಾರಿಯ ಆಶಯ ಮತ್ತು ಪ್ರಸ್ತುತ ಸಂದರ್ಭ

ಡಾ. ಕೃಷ್ಣೋಜಿರಾವ್ ಟಿ ಎಂ

ಸಹಾಯಕ ಪ್ರಾಧ್ಯಾಪಕ

ತಿಮ್ಮಸಂದ್ರ, ತರಹುಣಿಸೆ ಅಂಚೆ, ಬೆಂಗಳೂರು ಉತ್ತರ ತಾಲೂಕು.

tmkrishnojirao@gmail.com 7204618297


 

ಪ್ರಸ್ತಾವನೆ

ದಮನಿತರ ಏಳಿಗೆಗಾಗಿ ಅಂಬೇಡ್ಕರ್‍ರವರು ಕಂಡುಕೊಂಡ ವೈಜಾÐನಿಕವಾದ ಪದ್ದತಿ ಎಂದರೆ ಸಾರ್ವಜನಿಕ ಸೇವಾವಲಯದಲ್ಲಿ  ದಮನಿತರ ವರ್ಗಕ್ಕೆ ಇಂತಿಷ್ಟು ಪ್ರಮಾಣದ ಮೀಸಲಾತತಿ ನಿಡಬೇಕೆಂದುದು ಸ್ವಾಗತಾರ್ಹವೇ. ಆದರೆ ಅದು ಹೆಚ್ಚುದಿನ ಉಳಿದರೆ ಅಪಾಯವೆಂಬುದನ್ನು ಸ್ವತಃ ತಾವೇ ಅರಿತ ಅಂಬೇಡ್ಕರ್‍ರವರು ಇದು ಜಾರಿಯಾದಂದಿನಿಂದ ಸುಮಾರು ಇಪ್ಪತ್ತು ವರ್ಷಗಳ ಕಾಲ ಜಾತಿ ಮೀಸಲಾತಿ ಇರಲಿ ಆಮೇಲೆ ಯಾವುದೇ ಜಾತಿಯ ವ್ಯಕ್ತಿ ಆರ್ಥಿಕ-ರಾಜಕೀಯ-ಸಾಮಾಜಿಕ-ಶೈಕ್ಷಣಿಕವಾಗಿ ಹಿಂದುಳಿದರೆ ಇದರ ಆಧಾರದ ಮೇಲೆ ಮೀಸಲಾತಿ ನೀಡಬೇಕೆಂಬ ಆಶಯವನ್ನು ಅಂದಿನ ದಿನವೇ ಹೇಳಿದ್ದರೂ ಕೂಡ ಅದು ಇಂದಿಗೂ ಸಾಕಾರಗೊಂಡಿಲ್ಲ.

ಕೀ ವರ್ಡ್: ಅಂಬೇಡ್ಕರ್‍, ಮೀಸಲಾತಿ, ದಲಿತ, 371 ಜೆ ಮೀಸಲಾತಿ, ಪರಿಶಿಷ್ಟ ಜಾತಿ

ಪಿಠೀಕೆ

            ಎಚ್ಚರಿಕೆಯ ವಿಷಯವೆಂದರೆ ಅಂಬೇಡ್ಕರ್‍ರವರಮೀಸಲಾತಿಯ ಆಶಯವೂ ಬರೀ ದಲಿತ ಜಾತಿಗೆ ಮಾತ್ರ ಇರಿಸದೆ ಇತರೆ ಹಿಂದುಳಿದ ವರ್ಗಗಳಿಗೂ ಇರಬೇಕೆಂದು ಹಕ್ಕೊತ್ತಾಯ ಮಾಡಿದ್ದು, ಅವರ ಮಾನವೀಯ ಅಂತಃಸತ್ವ, ಸಾಮಾಜಿಕ ನ್ಯಾಯದ ಆಶಯ ಹಾಗು ಸಮಾಜದ ಪ್ರಾಕ್ಟಿಕಲ್ ಸ್ಥಿತಿಗಳ ಸೂಕ್ಷ್ಮ ದೃಷ್ಟಿಯಿದ್ದುದೇ ಕಾರಣವಾಗಿದೆ.

            ಆದರೆ ಅದೇಕೋ ಮುಂದಿನ ದಲಿತ ನಾಯಕರೆಲ್ಲಾ ಅಂಬೇಡ್ಕರ್ ಎಂದರೆ ಕೇವಲ ಇವರ ಜಾತಿಗೆ ಮಾತ್ರ ಸೀಮಿತ ಎಂಬಂತೆ ತಮಗೆ ತಾವೇ ಘೋಷಿಸಿಕೊಂಡು ಅವರು ಇವರ ಪಾರಂಪರಿಕ ಆಸ್ಥಿ ಎಂಬ ಹಮ್ಮಿನಲ್ಲಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಹಾಗೇನಾದರೂ ಒಂದೇ ಒಂದು ಜಾತಿಗೆ ಸೀಮಿತವಾಗಿದ್ದಿದ್ದರೆ ಅವರು ದೊಡ್ಡ ವ್ಯಕ್ತಿಯಾಗುತ್ತಿರಲಿಲ್ಲ. ಅವರಿಗಿಲ್ಲದ ಬೇದ ಭಾವ ನಂತರದ ಅವರ ಅನುಯಾಯಿಗಳಿಗೂ ಬರಬಾರದಿತ್ತು.

ಮೀಸಲಾತಿಯ ಆಗು ಹೋಗುಗಳು :

            ಇಪಪ್ಪತ್ತು ವರ್ಷಗಳ ಮೀಸಲಾತಿ ಅನುಭವಿಸಿದ್ದ ಈ ವರ್ಗ ಸುಧಾರಣೆಗಳನ್ನು ಕಂಡುಕೊಂಡರೆ ಎಂದರೆ ; ಹೌದು ಎಂಬ ಉತ್ತರವೇನೋ ಸರಿ. ಆದರೆ ಇದು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಆಗಿಲ್ಲ. ದಲಿತ ಸಮುದಾಯದ ಬಲಿಷ್ಠರು ಮಾತ್ರ ಮೀಸಲಾತಿಯ ಲಾಭ ಪಡೆದರೆ ವಿನಃ ದಲಿತರಲ್ಲಿನ ದಮನಿತರು ಇಂದಿಗೂ ಅದರಿಂದ ವಂಚಿತರಾಗಿಯೇ ಇದ್ದಾರೆ. ಇಲ್ಲಿ ದಲಿತರೇ ದಲಿತರನ್ನು ಶೋಷಿಸುವ, ಅವರ ಅವಕಾಶಗಳನ್ನು ಇವರು ಕಸಿದುಕೊಳ್ಳುವ ಸ್ಥತಿ ಹಿಂದಿನಿಂದಲೂ ಬಂದಿದೆ, ಈಗಲೂ ಜಾರಿಯಲ್ಲಿದೆ. ಪ್ರತಿಷ್ಠಿತ ಕಂಪನಿಗಳಲ್ಲಿ, ಸರ್ಕಾರಿ ಹುದ್ದೆಗಳಲ್ಲಿ, ಇಂಜಿನಿಯರಿಂಗ್, ಡಾಕ್ಟರ್‍ನಂತಹ ಶೈಕ್ಷಣಿಕ ಮೀಸಲಾತಿ ಪಡೆಯುವವರಲ್ಲಿ ಆರ್ಥಿಕವಾಗಿ ಮುಂದುವರೆದ ದಲಿತರಿರುವರೇ ವಿನಃ ಆರ್ಥಿಕವಾಗಿ  ಹಿಂದುಳಿದ ದಲಿತರಲ್ಲ. ರಲ್ಲ. ಇಂದಿಗೂ ತೀರಾ ಹಳ್ಳಿಗಾಡಿನ ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲೂ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ, ವಸತಿ ಸೌಲಭ್ಯರಹಿತ, ದಲಿತರ ಸಂಖ್ಯೆ ಕಡಿಮೆಯೇನಿಲ್ಲ. ಹಾಗಾದರೆ ಇಷ್ಟು ವರ್ಷಗಳ ಕಾಲ ಸರ್ಕಾರ ಇವರಿಗಾಗಿ ಮೀಸಲಿಟ್ಟು ಇವರನ್ನು ಉದ್ದಾರ ಮಾಡಿದ್ದು ಸುಳ್ಳೇ  ಎಂದರೆ, ಅದು ಸುಳ್ಳಲ್ಲ ಸತ್ಯ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮೀಸಲಾತಿ ನೀಡಿದ್ದೆಲ್ಲಾ ಬಲವಂತ ದಲಿತ ಸಮುದಾಯ ತನ್ನ ಜನ ಬಲ, ಹಣ ಬಲ, ಹಾಗೂ ರಾಜಕೀಯ ಬಲದಿಂದ, ಸ್ವಾರ್ಥದಿಂದ ತನ್ನದಾಗಿಸಿಕೊಳ್ಳುವ ಮೂಲಕ ನಿಜವಾದ ಮೀಸಲಾತಿ ಅನುಭವಕ್ಕೆ ಅರ್ಹರಾದ ದಲಿತರಿಗೆ ಸಿಕ್ಕಿಲ್ಲ ಎಂಬುದು ಕಟು ಸತ್ಯ.

ಏನು ಮಾಡಬೇಕು ?

            ಹಾಗಾಗಿ ದಲಿತರಿಗಾಗಿ ಇರುವ ಮೀಸಲಾತಿಯನ್ನು ಶ್ರೀಮಂತ ದಲಿತರಿಗೆ ದೊರಕದಂತೆ ಬಡ ದಲಿತರಿಗೆ ದೊರಕುವಂತಹ ಕಾನೂನುಗಳನ್ನು ಮಾಡಬೇಕು. ಆಯಾ ಮೀಸಲಾತಿ ವರ್ಗದಲ್ಲೇ ಇರುವ ಕಡು ಬಡವರಿಗೆ ಮೀಸಲಾತಿ ನೀಡಬೇಕೇ ವಿನಃ ಶ್ರೀಮಂತರಿಗಲ್ಲ. ಇದು ಅಂಬೇಡ್ಕರ್ ಆಶಯವೇ ಆಗಿತ್ತು. 

             ಇಂದಿನ ಸಾಮಾಜಿಕ ಸ್ಥಿತಿಗತಿ ಹೇಗಿದೆ ಎಂದರೆ ಮೀಸಲಾತಿಯಿಂದ ಶ್ರೀಮಂತನಾದ ಪ್ರತಿಷ್ಠಿತ ಹುದ್ದೆಯಲ್ಲಿರುವ ಒಬ್ಬ ವ್ಯಕ್ತಿ ತನ್ನ ಮಕ್ಕಳು , ಮೊಮ್ಮಕ್ಕಳಿಗೂ ಅದೇ ಮೀಸಲಾತಿ ಪಡೆಯುವ ಅವಕಾಶವಿದೆ. ಅದನ್ನವನು ಪಡೆಯುತ್ತಿದ್ದಾನೆಯೂ ಹೌದು. ಇವನ ಈ ಕುಟುಂಬದಲ್ಲಿನ ವ್ಯಕ್ತಿಗಳಿಗೂ ಮೀಸಲಾತಿ ನೀಡುವುದು ಎಷ್ಟು ಸರಿ? ಯಾಕೆಂದರೆ ಆರ್ಥಿಕವಾಗಿ ಬಲವಂತನಾದ ಈತ ಸಾಕಷ್ಟು ಹಣವಿರುವುದರಿಂದ ಪ್ರತಿಷ್ಟಿತ ಶಾಲಾಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ಪಡೆದು ಉತ್ತಮ ಬೌದ್ದಿಕ ಶೈಕ್ಷಣಿಕ ಜಾÐನವುಳ್ಳವನಾಗಿರುತ್ತಾನೆ. ಇಂತಹವನ ಜೊತೆಯಲ್ಲಿ  ಅದೇ ಜಾತಿಗೆ  ಸೇರಿದ ತೀರಾ ಹಿಂದುಳಿದ ಬಡ ವಿದ್ಯಾರ್ಥಿಯೂ ಶೈಕ್ಷಣಿಕವಾಗಿ ಮುಂದುವರಿಯದೇ ಹಳ್ಳಿಗಾಡಿನ ಶಾಲೆಗಳಲ್ಲಿ ಅನೇಕ ಸಾಮಾಜಿಕ ತೊಂದರೆ ಆರ್ಥಿಕ ಹಿಂದುಳಿಯುವಿಕೆಯಿಂದ ಎಂತಹ ಶಿಕ್ಷಣ ಪಡೆಯಲು ಸಾಧ್ಯ? ಹೀಗೆ ಬಡ ದಲಿತ ವಿದ್ಯಾರ್ಥಿಯೊಬ್ಬ ಶ್ರೀಮಂತ ದಲಿತ ವಿದ್ಯಾರ್ಥಿಯೊಡನೆ ಪ್ರತಿಸ್ಪರ್ಧಿಸಿ ಇವರಿಗಾಗಿಯೇ ಇರುವ 15% ಮೀಸಲಾತಿಯನ್ನು ಪಡೆಯುವುದಾದರೂ ಹೇಗೆ? ಅಂದರೆ ಇಲ್ಲಿನ ಸ್ಪರ್ದೆಯಲ್ಲಿ ಬಡ ದಲಿತನು ಮೀಸಲಾತಿಯಿಂದ ವಂಚಿತನಾಗಿಬಿಡುತ್ತಾನಲ್ಲವೇ !, ಹಾಗಾದರೆ ದಲಿತ ಜಾತಿಯ ಬಡವ ಶ್ರೀಮಂತ ಎಲ್ಲರಿಗೂ ಮೀಸಲಾತಿಯನ್ನು ಇರಿಸಲಾದರೆ ಅದು ಸಾಮಾಜಿಕ ನ್ಯಾಯವಾದೀತೆ? ಇತರೆ ಹಿಂದುಳಿದ ಜಾತಿ ಬ್ರಾಹ್ಮಣರನ್ನು ಒಳಗೊಂಡಂತೆ ಅವರ ಜಾತಿ ಸ್ಥಿತಿ ಏನಾಗಬೇಡ?

            ನನ್ನ ವಾದ ಮೀಸಲಾತಿ ಒಂದು ಕಾಲದ ನಂತರ ಮುಂದುವರೆಯಬಾರದೆಂದಲ್ಲಂದಲ್ಲ, ಇಂದಿಗೂ ಅದು ಬೇಕು. ಏಕೆಂದರೆ ಶೇ20ರಷ್ಟು ಮಾತ್ರ ಶ್ರೀಮಂತ ದಲಿತರಾಗಿದ್ದಾರೆ. ಇನ್ನು ಶೇ80ರಷ್ಟು ದಲಿತ ಸಮುದಾಯ ಮೂಲಭೂತ ಸೌಕರ್ಯಗಳಿಲ್ಲದೆ ಒಂದೊತ್ತಿನ ಊಟ, ಬಟ್ಟೆ, ಹೊದಿಕೆ ಸೂರುಗಳಿಲ್ಲದೆ ಚಡಪಡಿಸುತ್ತಿದ್ದಾರೆ. ಹಾಗಾಗಿ ಬಲಿತ ದಲಿತರ ಮುಷ್ಠಿಯಿಂದ ದಮನಿತ ಹಾಗೂ ಅವಕಾಶ ವಂಚಿತ ದಲಿತರಿಗೆ ಮೀಸಲಾತಿ ದೊರೆಯುವಂತೆ ವ್ಯವಸ್ಥೆ ಮಾಡಬೇಕು.

            ನೋಡಿ....ಸರ್, ಈಗ ಶೇ100ರಷ್ಟು ಉದ್ಯೋಗ, ಶಿಕ್ಷಣ ಇನ್ನಿತರ ಸಾರ್ವಜನಿಕ ಸವಲತ್ತುಗಳನ್ನು ಪಡೆಯುವ ಸಂದರ್ಭದಲ್ಲಿ ಶೇ20ರಷ್ಟು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಇನ್ನುಳಿದ 50ರಷ್ಟರಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಇತ್ತೀಚೆಗೆ ಸ್ತ್ರೀ ಮೀಸಲಾತಿಗಳಲ್ಲಿ ಹಂಚಲ್ಪಟ್ಟಿದೆ. ಇಲ್ಲಿ ಈಗಾಗಲೇ ಮೀಸಲಾತಿ ಸೌಲಭ್ಯ ಪಡೆದು ಬಲಿತ ದಲಿತ ವರ್ಗವೊಂದನ್ನು ಒಳಗೊಂಡಂತೆ ಬ್ರಾಹ್ಮಣರು ಇತರ ಹಿಂದುಳಿದ, ಅಲ್ಪಸಂಖ್ಯಾತ ಮಹಿಳೆ ಯಾರೇ ಆದರೂ ಮೊದಲ ಸಾಮಾನ್ಯ ವರ್ಗದ ಪಲಾನುಭವಿಗಳು ಇಲ್ಲಿ ಸಾಮಾಜಿಕ ನ್ಯಾಯ ಸಮಾನವಾಗಿ ಹಂಚಲ್ಪಟ್ಟಿದೆ. ಆದರೆ ಇನ್ನುಳಿದುದರಲ್ಲಿ ಎಲ್ಲರಿಗೂ ಪಾಲುಂಟಾದರೂ ಬ್ರಾಹ್ಮಣರಿಗೆ ಹಾಗೂ ಮುಂದವರೆದ ಜಾತಿಗಳಿಗಿಲ್ಲದಿರುವುದು ಗಮನಾರ್ಹ. ಹಾಗಾದರೆ ಇವರು ಆರ್ಥಿಕವಾಗಿ ಅಷ್ಟು ಸಬಲರಾಗಿದ್ದಾರೆಯೇ? ಸಮಾಜದಲ್ಲಿ ಉನ್ನತ ಜಾತಿಯೆಂದು ಹೆಸರು ಪಡೆದುಕೊಂಡ ಮಾತ್ರಕ್ಕೆ ಅವರು ಸಬಲರಾಗಿರುವುದಿಲ್ಲ.

            ಹಾಗಾಗಿ ಮುಂದುವರೆದ ಜಾತಿ, ಬ್ರಾಹ್ಮಣ ಜಾತಿಯಲ್ಲಿಯೂ ಬಹು ಸಂಖ್ಯೆಯ ಬಡವರಿರುವುದರಿಂದ ಅವರ ಏಳಿಗೆಯತ್ತಲೂ ಗಮನಹರಿಸುವುದು ಒಳಿತಲ್ಲವೇ? ಮೀಸಲಾತಿ ಎಂಬುದು ಜಾತಿ ಆಧಾರದ ಮೇಲೆ ಇಂದಿಗೂ ನೀಡುತ್ತಿರುವುದು ಅವೈಜಾÐನಿಕವೇ ಸರಿ. ಎಲ್ಲಾ ಜಾತಿಯಲ್ಲಿರುವ ಕಡುಬಡವರಿಗೆ ಮೀಸಲಾತಿ ನೀಡಬೇಕೇ ವಿನಃ ಜಾತಿಯ ಹೆಸರಿಂದ ಅವನೆಷ್ಟೇ ಶ್ರೀಮಂತನಾಗಿದ್ದರೂ, ಈಗಾಗಲೇ ಸರ್ಕಾರಿ ಹುದ್ದೆಯಲ್ಲಿದ್ದರೂ ಅಂತಹ ವ್ಯಕ್ತಿಗೆ ಮೀಸಲಾತಿ ನೀಡುವುದು ಎಷ್ಟರ ಮಟ್ಟಿಗೆ ಸರಿಯಾದದ್ದು, ಇದು ಈಗಲಾದರೂ ಎಲ್ಲಾ ಹೃದಯವಂತ ಮನಸ್ಸುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ :

   ಇತ್ತೀಚಿನ ಹೊಸ ಟ್ರೆಂಡ್ ಎಂದರೆ “ಬಡ್ತಿಯಲ್ಲಿ” ಮೀಸಲಾತಿ ಎಷ್ಟರ ಮಟ್ಟಿಗೆ ಸರಿ?. ವಿಚಿತ್ರವೆಂದರೆ ಈ ಬಡ್ತಿಯಲ್ಲಿ ಮೀಸಲಾತಿ ಬರಿ ದಲಿತ ಸಮುದಾಯಕ್ಕೆ ಮಾತ್ರ ನೀಡಬೇಕೆಂಬ ಒಂದು ವಾದವಿದೆ. ಆದರೆ ಇದರ ವ್ಯಾಪ್ತಿಗೆ ಇತರೆ ಹಿಂದುಳಿದ ವರ್ಗಗಳಿಲ್ಲವೆಂಬ ಅವೈಜಾÐನಿಕ ವಾದವಿದೆ.ಈಗಾಗಲೇ ಉದ್ಯೋಗದಲ್ಲಿ ಬಡ್ತಿ ಪಡೆದವರಿಗೆ ಪುನಃ ಬಡ್ತಿಯಲ್ಲಿಯೂ ಮೀಸಲಾತಿ ಬಯಸುವುದೆಷ್ಟು ಸರಿ. ಹಾಗಾದರೆ ಈ ಪ್ರತಿಷ್ಟಿತ ಸರ್ಕಾರಿ ಉದ್ಯೋಗ ಪಡೆದವರು ಇನ್ನೂ ಆರ್ಥಿಕವಾಗಿ ಬಡವರೇ?ಹಾಗಾದರೇ “ಮೀಸಲಾತಿ”ಯ ಮೂಲ ಆಶಯವೇನು? ಅದು ಬಡವರಿಗಿರಬೇಕೇ? ಶ್ರೀಮಂತರಿಗಿರಬೇಕೇ?, ಎಂಬ ಪ್ರಶ್ನೆ ಹುಟ್ಟುತ್ತದೆಯಲ್ಲವೇ?

            ಬಡ್ತಿಯಲ್ಲಿ ಮೀಸಲಾತಿ ಸೀನಿಯಾರಿಟಿ, ಅಥವಾ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಮಾತ್ರ ನೀಡಬೇಕಾದುದು ಸಮಂಜಸವಲ್ಲವೇ? ಮೊನ್ನೆ ಒಂದು ಪತ್ರಿಕೆಯಲ್ಲಿ ಓದಿದೆ , ಒಬ್ಬ ದಲಿತ ವಿದ್ಯಾರ್ಥಿಗೆ ಪಾಠ ಹೇಳಿದ ದಲಿತೇತರ ಅಧ್ಯಾಪಕ

ತನ್ನ ವಿದ್ಯಾರ್ಥಿಗಿಂತ ಹೆಚ್ಚು ಅನುಭವ ಹೆಚ್ಚು ವಯಸ್ಸು, ಅಚೀವ್‍ಮೆಂಟ್ ಇದ್ದರೂ ಕೂಡ ಪುನಃ ಅವನು ಅಧ್ಯಾಪಕ ವೃತ್ತಿಗೆ ಅವರ ಮೇಷ್ಟ್ರು ಇರುವ ಸಂಸ್ಥೆಯಲ್ಲಿಯೇ ಅಧ್ಯಾಪಕನಾಗಿ ಕೆಲವೇ ವರ್ಷಗಳಲ್ಲಿ ಬಡ್ತಿ ಮೀಸಲಾತಿಯ ಸವಲತ್ತಿಂದ ಅವನು ಅವನ ಮೇಷ್ಟರಿಗಿಂತ ಮೊದಲೇ ಸೀನಿಯರ್ರಾಗಿ ಬಡ್ತಿಹೊಂದಿ, ಆ ಮೇಷ್ಟ್ರು ಮಾತ್ರ ಅವನಿಗಿಂತ ಜೂನಿಯರ್ ಸ್ಥಾನದಲ್ಲಿಯೇ ಇರಬೇಕಾಯಿತು.ಇವರಲ್ಲೂ ಬಹುತೇಕ ಕುಟುಂಬಗಳಿಗೆ ತಿನ್ನಲು ಆಹಾರ, ವಸತಿ, ಮೂಲಭೂತ ಸೌಕರ್ಯಗಳಿಲ್ಲ. ಅವರನ್ನು ನಾವು ಕೇಂದ್ರೀಕರಿಸಬೇಕೇ ವಿನಃ ದಲಿತ ಬ್ರಾಹ್ಮಣ ವರ್ಗವನ್ನು ಮಾತ್ರ ಕೇಂದ್ರೀಕರಿಸಿದ ದೃಷ್ಟಿಕೋನದಿಂದ ಎಲ್ಲರೂ ಅನುಕೂಲಸ್ಥರೆಂದು ತಿಳಿದು ಸೌಲಭ್ಯಗಳಿಂದ ವಂಚಿಸುವುದು ಸರಿಯಲ್ಲ.

            ಹಿಂದಿನ ರಾಜಾಧಿರಾಜರ ಕಾಲದಲ್ಲಿಯೂ ರಾಜನ ಕೃಪಾಕಟಾಕ್ಷದಿಂದ, ಅವನ ಆಸ್ಥಾನ ಬ್ರಾಹ್ಮಣರು ಮಾತ್ರ ಸೌಲಭ್ಯ ಪಡೆದು ಎಲ್ಲಾ ರೀತಿಯಿಂದಲೂ ಸದೃಢರಾಗಿದ್ದರೇ ವಿನಃ ಬಹುಸಂಖ್ಯೆಯಲ್ಲಿ ಬ್ರಾಹ್ಮಣರೂ ಕೂಡ ಬಡವರಾಗಿ ಅಂದಿನ ದಿನಗಳಲ್ಲಿಯೇ ಇದ್ದರು. ಸಾಮಾಜಿಕ ಸ್ಥಾನಮಾನ ದೊರೆತರೆ ಸಾಕೇ? ಆರ್ಥಿಕ ಸವಲತ್ತು ಬೇಡವೇ? ಶಿಕ್ಷಣ ಪಡೆಯಲು ಮುಕ್ತ ಅವಕಾಶವಿದ್ದರೂ ಇವರಿಗೂ ಹೊಟ್ಟೆ ತುಂಬಾ ಊಟ, ಆರ್ಥಿಕ ಸ್ವಾವಲಂಬನೆ ಬೇಡವೇ? ಇಂದಿನ ಪರಿಸ್ಥತಿಯನ್ನು ಸ್ವಲ್ಪ ಈ ದೃಷ್ಟಿಕೋನದಿಂದ ಅಧ್ಯಯನ ಮಾಡಿದರೆ ಅದರ ನಿಜ ಸ್ಥಿತಿ ತಿಳಿಯುತ್ತದೆ. ಯಾವುದೇ ಒಂದು ಕಾಲದಲ್ಲಿ ದಲಿತರನ್ನು ಬ್ರಾಹ್ಮಣರು ಶೋಷಿಸುತ್ತಿದ್ದರು ಎಂದರೆ ಈಗಲೂ ಶೋಷಿಸುತ್ತಿದ್ದಾರೆಯೇ, ಅದೇನೋ ಕನ್ನಡದ ಗಾದೆಯಿದೆಯಲ್ಲ “ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯುವುದೆಂದು” ಎಂದೋ ಯಾರೋ ಶೋಷಿಸಿದ್ದರೆಂದು ಇಂದಿನ ಬ್ರಾಹ್ಮಣ ವರ್ಗಕ್ಕೆ ಅವಕಾಶ ವಂಚಿತಗೊಳಿಸುದೆಷ್ಟು ಸರಿ. ಹೋಗಲಿ ದಲಿತರ ಅಂದಿನ ಕಷ್ಟಗಳಿಗೆ ಬ್ರಾಹ್ಮಣರಷ್ಟೇ ಕಾರಣವೇ ವೈಶ್ಯ, ಶೂದ್ರ ಇತರರ ಪಾಲೂ ಅದರಲ್ಲಿರಲಿಲ್ಲವೇ, ಒಂದು ಕಾಲದ ಸಾಮಾಜಿಕ ಸ್ಥರ ವಿನ್ಯಾಸದಲ್ಲಿ ಕೆಳಮುಖವಾಗಿ ಶೋಷಣೆ ಹರಿದು ಬಂದಿರುವುದನ್ನು ಯಾರಾದರೂ ಅರ್ಥಮಾಡಿಕೊಳ್ಳಬಲ್ಲರು.

            ಇನ್ನು ಮೀಸಲಾತಿಯ ಶೇ 50ರಷ್ಟು ಭಾಗದಲ್ಲಿ ಎಲ್ಲಾ ಜಾತಿಯ ಆರ್ಥಿಕ ಸ್ಥಿತಿ ಲೆಕ್ಕಸಿದ ಎಲ್ಲರಿಗೂ ಅವಕಾಶವಿದ್ದು ಇಲ್ಲಿ ಅಷ್ಟು ಉದ್ಯೋಗ, ಸೀಟುಗಳನ್ನು ಬಲಿತ ದಲಿತರೇ ಪಡೆದು ನಂತರದ ಮೀಸಲಾತಿಯಲ್ಲೂ ಶೇ 15 ರಷ್ಟರಲ್ಲಿಯೂ ಅವರೇ ಬಂದರೂ ಉಳಿದ ಜಾತಿಗಳಿಗೆ ಅದರ ಸವಲತ್ತು ಬೇಡವೇ? ಹೀಗೇ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಪಡೆದು ಬಡ್ತಿಯಲ್ಲೂ ಮೀಸಲಾತಿ ನೀಡುವ ಪರಿಕಲ್ಪನೆಯೇ ಅಸಮಂಜಸವಾದುದು. ಈ ಬಡ್ತಿ ಮೀಸಲಾತಿ ಸಂವಿಧಾನದ ಮೂಲ ಆಶಯವೂ ಅಲ್ಲ, ಅಂಬೇಡ್ಕರ್‍ರವರ ಮೂಲ ಆಶಯದಲ್ಲೂ ಇಲ್ಲ.... ಇದೇನಿದ್ದರ ಬಲಿತ ವರ್ಗದ ದಲಿತರ ಆಶಯವಷ್ಟೇ. ಸವಲತ್ತು ಪಡೆದವರೇ ಪಡೆಯಬೇಕೆಂಬ ಅತಿಯಾಸೆಯಾಗಿದೆ. ಬಡ್ತಿಯೂ ಕೂಡ ವಯೋಮಾನದ ಆಧಾರದ ಮೇಲೆ ನೀಡದೇ ಅವರು ಆಯಾ ಕ್ಷೇತ್ರದಲ್ಲಿ ಮುಂದಿನ ಸಾಧನೆಯನ್ನು ಪರಿಗಣಿಸಿ  ನೀಡಬೇಕು ಅದು ಯಾವುದೇ ಜಾತಿಯಾಗಿರಲಿ ಪಕ್ಷಪಾತ ಮಾಡಬಾರದು.

371 ಜೆ ಮೀಸಲಾತಿ :

            371 ಜೆ ಮೀಸಲಾತಿಯು ನಮ್ಮ ಸಂವಿಧಾನದಲ್ಲಿ ಸೇರ್ಪಡೆಯಾಗಿದೆ , ಕಾರಣ ಉತ್ತರ ಕರ್ನಾಟಕದ ಜನರಿಗೆ ಮಾತ್ರ ಮೀಸಲು ಕ್ಷೇತ್ರ. ಯಾಕೆಂದರೆ ಆ ಪ್ರದೇಶದ ಜನರನ್ನು ಮುಂದುವರೆಸುವ ಉದ್ದೇಶ. ಇಲ್ಲಿನ ವಿಪರ್ಯಾಸವೆಂದರೆ ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳು ಕರ್ನಾಟಕ ಅಥವಾ ಭಾರತದ ಯಾವುದೇ ಸ್ಥಾನದಲ್ಲಿನ ಉದ್ಯೋಗಗಳ ಅನುಭವಿಗಳು, ಸಾಮಾನ್ಯ ಹುದ್ದೆಗಳಲ್ಲಿಯೂ ಅರ್ಹರು ಹಾಗೆಯೇ ‘371 ಜೆ ಮೀಸಲಾತಿ’ ಎಂಬ ವಿಶೇಷ ಮೀಸಲಾತಿಯೂ ಇವರಿಗೆ ವರದಾನವಾಗಿದೆ. ಆದರೆ ಹೈದರಾಬಾದ್ ಕರ್ನಾಟಕದಲ್ಲಿ ಹುದ್ದೆಗಳು ಭರ್ತಿಮಾಡುವ ಸಂದರ್ಭದಲ್ಲಿ ಇತರೆ ಪ್ರದೇಶದವರಾರು ಸಾಮಾನ್ಯವಾಗಿರುವ ಶೇ50ರಷ್ಟು ಹುದ್ದೆಗಳಿಗೂ ಸ್ಪರ್ದಿಸುವಂತಿಲ್ಲ. ಈ ಪ್ರದೇಶದಲ್ಲಿ ಜನಗಳಿಗೆ ಶೇ 100ರಷ್ಟು ಹುದ್ದೆಗಳಿದ್ದು ಸಾಮಾಜಿಕ ನ್ಯಾಯಕ್ಕೆ ಎಷ್ಟು ಹತ್ತಿರವಾಗಿದೆ ? ಈ ಹುದ್ದೆಗೆ ಇತರೆ ಪ್ರದೇಶದ ದಲಿತರು ಅಲ್ಪಸಂಖ್ಯಾತರು ಸ್ಪರ್ದಿಸುವಂತಿಲ್ಲ, ಅಲ್ಲಿನ ದಲಿತರು ಅಲ್ಪಸಂಖ್ಯಾತರು ಮಾತ್ರ ಫಲಾನುಭವಿಗಳಾಗಿರುವುದು ವಿಪರ್ಯಾಸದ ಸಂಗತಿ.

            ಮೀಸಲಾತಿಯ ಹಂಚಿಕೆಯಲ್ಲಿ ಪುನಃ ಪ್ರಜಾÐವಂತ ಮನಸ್ಸುಗಳು ವೈಜಾÐನಿಕ, ಮಾನವೀಯ ಹಿನ್ನೆಲೆಯಲ್ಲಿ ಚಿಂತಿಸುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಅಂಬೇಡ್ಕರ್‍ರಿಗೆ ದಲಿತೇತರ ಮನಸ್ಸುಗಳು ದುಡಿದಂತೆ ಇಂದು ದಲಿತ ಮನಸ್ಸುಗಳು ಕೂತು ಬಡದಲಿತರನ್ನು ಒಳಗೊಂಡಂತೆ ದಲಿತೇತರ ಬಡವ್ಯಕ್ತಿಗಳ ಬೆಳವಣಿಗೆಗೂ ಸವಲತ್ತು ನೀಡುವ ಮನಸ್ಸು ಮಾಡಬೇಕಾದುದು ಮಾನವೀಯ ಸಂಕೇತವಾಗಿದೆ.

                ಮಹಾರಾಷ್ಟ್ರದಲ್ಲಿ ಜನಿಸಿದ ಅಂಬೇಡ್ಕರ್ ಆ ಸಮಾಜದ ಸಾಮಾಜಿಕ ತಾರಮ್ಯದಲ್ಲಿ ಸಿಲುಕಿ ಅಪಾರ ನೋವುಂಡರು ಅಸ್ಪøಷ್ಯತೆಯನ್ನು ಸ್ವತಃ ಅನುಭವಿಸಿದವರು. ಅವರಲ್ಲಿ ಧೈರ್ಯತುಂಬಿ ಸ್ವಾಭಿಮಾನಿಯನ್ನಾಗಿ ಮಾಡಿದ ಅವರ ಅಧ್ಯಾಪಕ ಅಂಬೇಡ್ಕರ್‍ರವರು ತಮ್ಮ  ಹೆಸರನ್ನೇ ಬಾಲಕ ಭೀಮರಾವ್ ಗೆ ಹೊಸದಾಗಿ ಅಂಬೇಡ್ಕರ್ ಎಂಬ ನಾಮಕರಣ ಮಾಡಿದ್ದು ದಲಿತೇತರ ಮನಸ್ಸು ಎಂದು ಮರೆಯುವಂತಿಲ್ಲ. ಹಾಗೆ ಇವರ ಹೋರಾಟದ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಬೆಂಗಾವಲು, ಸ್ಪೂರ್ತಿದಾಯಕರೂ ಆಗಿದ್ದದವರೂ ದಲಿತೇತರರು, ಬ್ರಾಹ್ಮಣರೂ ಇದ್ದರೆಂಬುದು ಮರೆಯುವಂತಿಲ್ಲ. ಮಹಡ್ಕೆರೆ ಪ್ರಸಂಗದಲ್ಲೂ ದಲಿತೇತರ ಮನಸ್ಸುಗಳು ದಲಿತರ ನೋವಿಗೆ ಸ್ಪಂದಿಸಿದ್ದಾರೆ. ಈ ಎಲ್ಲದರ ಅನುಭವದಿಂದಲೇ ಅಂಬೇಡ್ಕರ್‍ರವರಿಗೆ ದಲಿತ ಎಂಬ ಒಂದೇ ಒಂದು ಜಾತಿ ಅವರ ಹೋರಾಟದ ವ್ಯಾಪ್ತಿಗೆ ಬರುವುದಿಲ್ಲ.

    ಸಾಮಾಜಿಕ-ಆರ್ಥಿಕ-ರಾಜಕೀಯ-ಶೈಕ್ಷಣಿಕವಾಗಿ ತುಳಿತಕ್ಕೊಳಗಾದ ಎಲ್ಲಾ ಜಾತಿಯವರು ಮುಖ್ಯ ; ಇಲ್ಲಿ ಬ್ರಾಹ್ಮಣರು ಒಳಗೊಳ್ಳುತ್ತಾರೆ. ಆದರೆ ಈ ವರ್ಗವನ್ನು ಇಂದಿಗೂ ಶೋಷಣೆಯ ವಕ್ತಾರನೆಂಬಂತೆ ಅನುಮಾನದ ದೃಷ್ಟಿ ಇದೆ. ಯಾಕೆ ಸರ್. ಎಂ. ವಿಶ್ವೇಶ್ವರಯ್ಯನವರು ತಮ್ಮ ಪರೀಕ್ಷಾ ಶುಲ್ಕ ಕಟ್ಟಲು ಹಣವಿಲ್ಲದಾಗ ಬೆಂಗಳೂರಿನಿಂದ ಮುದ್ದೇನಹಳ್ಳಿಯ ತಾಯಿಯ ಮನೆಗೆ ರಾತ್ರಿ ಪೂರ ಕಾಲ್ನಡಿಗೆಯಲ್ಲಿ  ಬಂದಾಗ ಅವರ ತಾಯಿಯು ಹಣ ವಿಲ್ಲದೆ ಮನೆಯ ಪಾತ್ರೆಯನ್ನು ಅಡವಿಟ್ಟು ಮಗನ ಶುಲ್ಕ ಭರಿಸಿದ್ದು ನೆನಪಿಲ್ಲವೇ ? ಬೀದಿ ದೀಪದಲ್ಲಿ ಹಗಲಿಡೀ ಓದಿ ಮುಂದೆ ಇಂಜಿನಿಯರ್ ಆದ ಜೀವನದ ಗಾಥೆ ನೆನಪಾಗುವುದಿಲ್ಲವೇ ? ಹೆಚ್. ನರಸಿಂಹಯ್ಯ ನವರ ಬಡತನ ನೆನಪಾಗುದಿಲ್ಲವೇ ? ಯಾಕೆ ಈ ಪ್ರಸ್ತಾಪ ಮಾಡುತ್ತಿದ್ದೇನೆಂದರೆ ದಲಿತೇತರರಲ್ಲಿಯೂ ಅಂದಿನಿಂದ ಇಂದಿನವರೆಗೂ ತೀರಾ ಬದತನದ ಬೇಗೆಯಲ್ಲಿ ಯಾವುದೇ ಸೌಲಭ್ಯಗಳಿಲ್ಲದೇ, ಯಾರೊಬ್ಬರ ನೆರವೂ ಇಲ್ಲದೆ ಅವಕಾಶ ವಂಚಿತರಾದವರು ಅದೆಷ್ಟೋ ಜನರಿದ್ದಾರೆ, ಆದರೆ ನಮ್ಮ ಗಮನ ಸೆಳೆಯುವುದು ಮಾತ್ರ ಸಾಧಿಸಿದ ವಿಶ್ವೇಶ್ವರಯ್ಯನಂತಹವರು ಮಾತ್ರ.

ನನ್ನ ಅನಿಸಿಕೆ

            ಅಂಬೇಡ್ಕರ್‍ರವರ ಆಶಯವನ್ನೇ ಕೇಂದ್ರಿಕರಿಸಿ ಮೀಸಲಾತಿ ಬಗೆಗೆ ನನ್ನ  ಒಂದೆರಡು ಅಭಿಪ್ರಾಯವನ್ನು ಹೇಳಿ ನನ್ನ ಈ ಲೇಖನವನ್ನು ಮುಗಿಸುತ್ತೇನೆ ಇಂದಿಗೂ ಎಲ್ಲಾ ದಲಿತರಿಗೆ ಅವರ ಸವಲತ್ತು ದೊರೆತಿಲ್ಲ ಹಾಗಾಗಿ ಬಲಿತ ದಲಿತರ ಕಪಿಮುಷ್ಟಿಯಿಂದ ಬಡದಲಿತರಿಗೆ ತಲುಪುವಂತಾಗಬೇಕು. 371ಜೆ ಯ ವ್ಯಾಪ್ತಿಯಲ್ಲಿ ಕನಿಷ್ಟ ಮಟ್ಟದಲ್ಲಾದರೂ ಇತರ ಪ್ರದೇಶದವರಿಗೂ ಅವಕಾಶ ಕಲ್ಪಿಸಬೇಕು. ಜಾತಿಗೆ ಮೀಸಲಾತಿ ನೀಡುವಾಗ ಆಯಾ ಜಾತಿಯ ಆರ್ಥಿಕತೆಯಾಧಾರದ ಮೇಲೆಯೇ ಕಡ್ಡಾಯವಾಗಿ ಹಂಚಿತವಾಗಬೇಕೇ ವಿನಃ ಜಾತಿ ಕೇಂದ್ರಿತವಾಗೇ ನೀಡಬಾರದು. ಇದಕ್ಕೇ ಈಗಾಗಲೇ ಮೀಸಲಾತಿ ಪಲಾನುಭವದಿಂದ ಉನ್ನತ ಜೀವನ ಮಾರ್ಗ ಕಟ್ಟಿಕೊಂಡವರೇ ಮುಂದೆ ನಿಂತು  ತಮ್ಮವರೇ ಆದ ಆರ್ಥಿಕ ದುರ್ಬಲರಿಗೆ ಇಂತಹ ಅವಕಾಶಗಳ ಬಗೆಗೆ  ತೀರಾ ತಳ ಸಮುದಾಯ, ಗ್ರಾಮೀಣ ಪ್ರದೇಶದವರಿಗೆ, ಅದರ ತಿಳುವಳಿಕೆ ಇಲ್ಲದವರಿಗೆ ತಿಳಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ದುಡಿಯಬೇಕೆಂಬ ಆಶಯ ನನ್ನದಾಗಿದೆ.

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳು ಹಾಗು ಹಿಂದುಳಿದ ವರ್ಗಗಳ ರಾಜಕೀಯ, ಆರ್ಥಿಕ, ಶೃಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಸುದಾರಣೆ ತರಬೇಕು. ದುರಾವಸ್ಥೆ ಹಾಗೂ ಶೋಷಣೆಯನ್ನು ತಪ್ಪಿಸಲು ಹಾಗು ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದಲ್ಲಿ ಹಾಗೂ ಸಂವಿಧಾನದ ವಿಧಿವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳ ರಾಷ್ಟ್ರದ ಒಟ್ಟು ಜನಸಂಖ್ಯಾ ಪ್ರಮಾಣಕ್ಕನುಗುಣವಾಗಿ ಶೇ. ಮೀಸಲಾತಿಯನ್ನು ನಿಗದಿಪಡಿಸಿ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.

    ಸ್ವಾತಂತ್ರ್ಯ ನಂತರ ಸಂವಿಧಾನ ರಚನೆ ಸಂದರ್ಭದಲ್ಲಿ ನೀಡಿದ್ದ ಶೇ.18ರ ಪ್ರಮಾಣದ ಮೀಸಲಾತಿ ಅಂದಿನ ಜನಸಂಖ್ಯೆ ಆಧಾರದ ಮೇಲೆ ನೀಡಲಾಗಿತ್ತು. ಆದರೆ ಇಂದಿನ ಪರಿಸ್ಥಿತಿಯೇ ಬೇರೆಯಾಗಿದ್ದು ದಿನೇ ದಿನೇ ಜನಸಂಖ್ಯೆ ಹೆಚ್ಚಳ ದ್ವಿಗುಣಗೊಳ್ಳುತ್ತಿದ್ದು, ಏರುತ್ತಿರುವ ಜನಸಂಖ್ಯೆಗೆ ನೀಡಿರುವ ಮೀಸಲಾತಿ ಪ್ರಮಾಣ ಕುಸಿಯುತ್ತಿದೆ. ಶೇ.18ರಷ್ಟು ಮೀಸಲಾತಿಯೂ ಕೂಡ ಪರಿಶಿಷ್ಟ ಜಾತಿಗೆ ಲಭ್ಯವಾಗಿಲ್ಲ. ಸರ್ಕಾರಿ ಉದ್ಯೋಗಗಳ ಯಾವುದೇ ಕ್ಷೇತ್ರದಲ್ಲಿಯೂ   ಕೂಡ ಮೇಲ್ಮಟ್ಟದ ಸ್ಥಾನಗಳಲ್ಲಿ ಪರಿಶಿಷ್ಟಜಾತಿಯ ಸಂಖ್ಯೆಯು ಇಂದಿಗೂ ಕೂಡ ಬಹಳ ಕಡಿಮೆ ಇದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ವರದಿಯಂತೆ ಸರ್ಕಾರದ ಒಂದನೇ ದರ್ಜೆಯ ಹಾಗೂ ಎರಡನೇ ದರ್ಜೆಯ ಹುದ್ದೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೇಮಕ ಮಾಡದೇ ದೂರಕ್ಕೆ ತಳ್ಳಲ್ಪಟ್ಟಿದ್ದಾರೆ. ಉದ್ಯೋಗಾವಕಾಶಗಳಲ್ಲಿ ಕೆಲವು ಇಲಾಖೆಗಳಲ್ಲಿ ಸಮರ್ಪಕವಾಗಿ ತುಂಬಲಾಗಿಲ್ಲ.

ಶೇ.90ರಷ್ಟು ಮಂದಿ ಹಳ್ಳಿಗಾಡಿನಲ್ಲಿ ವಾಸ ಮಾಡುತ್ತಿದ್ದು 80ರಟು ಮಂದಿ ಕೃಷಿಕರಾಗಿದ್ದಾರೆ.ಸ್ವಂತ ಕೃಷಿ ಮಾಡುವವರಿಗಿಂತಲೂ ಕೂಲಿಕಾರರ ಸಂಖ್ಯೆಯೇ ಜಾಸ್ತಿಯಿದೆ.ಇರುವಂತಹ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರನ್ನು ಆರ್ಥಿಕ ಕಾರಣಗಳಿಂದಾಗಿ ಅವರ ಮೇಲೆ ನಿರಂತರವಾದ ದೌರ್ಜನ್ಯಗಳೂ ಕೂಡ ಹೆಚ್ಚಾಗುತ್ತಲಿದೆ.ಸರ್ಕಾರಿ ಹುದ್ದೆಗಳಲ್ಲಿ ಸ್ಥಾನಮಾನಗಳನ್ನು ಪಡೆದುಕೊಳ್ಳುವ ಅವಕಾಶಗಳಿದ್ದರೂ ಮೀಸಲಾತಿಯನ್ನು ಪಡೆದುಕೊಳ್ಳದ ಸ್ಥಿತಿಯಲ್ಲಿದ್ದಾರೆ.ಬಡವರಲ್ಲಿ ಬಡವರಾಗಿರುವ ಈ ಸಮುದಾಯವು ಬಡತನದ ರೇಖೆಗಿಂತಲೂ ಅದೆಷ್ಟೋ ಕೆಳಗಡೆ ಇದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಇಂದಿಗೂ ನಗಣ್ಯ ವರ್ಗವಾಗಿಯೇ ಉಳಿದಿದ್ದು, ಆಡಳಿತ ಅಥವಾ ಆರೈಕೆಯ ಯಾವುದೇ ವಿಭಾಗದಲ್ಲಿ ಸ್ಥಾನಮಾನಗಳನ್ನು ನೀಡದೇ ತಿರಸ್ಕರಿಸಲ್ಪಟ್ಟಿದ್ದಾರೆ. ಕಾರಣ ಇವರು ರಾಜಕೀಯವಾಗಿ ಸಂಘಟಿತ ಶಕ್ತಿಯಾಗಿ ಬೆಳೆದು ಬಂದಿಲ್ಲ. ರಾಜ್ಯ ಹಾಗು ಕೇಂದ್ರ ಸರ್ಕಾರಗಳಲ್ಲಿ ಪ್ರಾತಿನಿಧಿಕ ಸಭೆಗಳಲ್ಲಿ ಸ್ಥಳಾವಕಾಶವನ್ನು ಮೀಸಲಾಗಿರಿಸಿದ್ದರೂ ಅವುಗಳನ್ನು ಸದುಪಯೋಗಪಡಿಸಿಕೊಂಡು ಇಂದಿನ ರಾಜಕೀಯ ಲಾಭಿಯನ್ನು ಹುಟ್ಟುಹಾಕಲು ವಿಫಲರಾಗಿದ್ದಾರೆ. ಅದಕ್ಕೆ ಬೇಕಾದ ರಾಜಕೀಯ ಅರಿವು ಮತ್ತು ಜಾಗೃತಿ ಇಲ್ಲದೇ ಇರುವುದು ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದಲೇ ಒಂದು ವಿಶಿಷ್ಟ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ಧರ್ಮದವರನ್ನೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮಾನವಾಗಿ ಅವರ ಹಿತಾಸಕ್ತಿಯನ್ನು ಕಾಪಾಡುವುದು ಯಾವುದೇ ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ ಕೂಡ ಆಗಿದೆ.

ಅಂತೆಯೇ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳುವ ಅತ್ಯಂತ ಮಹತ್ವದ ವಿಚಾರವು ಕೂಡ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ನಿರ್ದಿಷ್ಟವಾದ ಮಾನದಂಡ ವೈಚಾರಿಕತೆಯ ಹಾಗೂ ಮಾನವೀಯ ಅಭಿಪ್ರಾಯಗಳು ಕೂಡ ಅಳವಡಿಸಿಕೊಂಡು ನೀಡಬಹುದಾದ ಸಂವಿಧಾನಾತ್ಮಕವಾದ ಎಲ್ಲಾ ಸೌಲಭ್ಯಗಳನ್ನು ನೀಡಬೇಕಾದದ್ದು ಕೇಂದ್ರ ಮತ್ತು ರಾಜ್ಯಸರ್ಕಾರಗಳ ಮೂಲ ಕರ್ತವ್ಯವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಶೋಷಿತ ಜನಾಂಗಕ್ಕೆ ನ್ಯಾಯ ಸಿಗುತ್ತಿಲ್ಲ. ಈ ಸಮುದಾಯವು ದೊರೆಯುವ ಸವಲತ್ತುಗಳಿಂದ ಸಂಪೂರ್ಣವಾಗಿ ವಂಚಿತವಾಗಿದೆ. ಈ ದೇಶದ ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಮೀಸಲಾತಿಯನ್ನು ವಿಸ್ತರಿಸುವ  ಪ್ರಸ್ತಾವನೆಯನ್ನು ಸಂವಿಧಾನದ  ನೀತಿನಿಯಮಗಳು ಮತ್ತು ಅವಧಿ ವಿಧಾನಗಳಿಗೆ ಬದ್ಧವಾಗಿ ಪೂರಕವಾದ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವುದು ಅವಶ್ಯಕವಾಗಿದೆ ಮತ್ತು ಅದು ಲಭ್ಯವಾಗಬೇಕು.   ಆದ್ದರಿಂದಲೇ ಇಂದಿಗೂ ಬಹುಸಂಖ್ಯಾತರಿಗೆ ತುಂಬಲಾರದ ನಷ್ಟವುಂಟಾಗಿದೆ. ಪ್ರಸ್ತುತ ಮೀಸಲಾತಿಯ ಪ್ರಮಾಣದಲ್ಲಿ ಹೆಚ್ಚಳವಾಗಬೇಕಾಗಿದೆ ಎಂಬ ಕೂಗಲ್ಲಿ ಅರ್ಥವಿಲ್ಲ.

             ಶೇ. 50 ಸಾಮಾನ್ಯ ವರ್ಗಕ್ಕೂ, ಇದರಲ್ಲಿ ಎಲ್ಲಾ ಜಾತಿ, ಧರ್ಮದ ಹಾಗೂ ಲಿಂಗ ತಾರ ತಮ್ಯವಿಲ್ಲದೆ ರ್ಯಾಂಕ್ ಬಂದವರೆಲ್ಲರಿಗೂ ಹಾಗೂ ಉಳಿದ ಶೇ.50 ರಷ್ಟನ್ನು  ಸಮಾಜದ ಎಲ್ಲಾ ದಮನಿತ ವರ್ಗಕ್ಕೂ ಹಂಚಬೇಕು. ಇಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೂ ಅದರಲ್ಲೂ ಸಾಮಾಜಿಕವಾಗಿ ಮುಂದುವರೆದ ಜನಾಂಗವೆಂದು ಕರೆಸಿಕೊಂಡರೂ ಆರ್ಥಿಕವಾಗಿ ಮುಂದುವರೆದ ಜನಾಂಗಕ್ಕೂ ಮೀಸಲಾತಿ ನೀಡುವುದೇ ಸಾಮಾಜಿಕ ನ್ಯಾಯದ ಆಶಯಕ್ಕೆ ಸರಿಯಾದುದಾಗುತ್ತದೆ. ದೂರಗಾಮಿ ಪರಿಣಾಮದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.

            ಇಂತಹ ಸಂದರ್ಭದಲ್ಲಿ ಕೆಲವು ವಿಚಾರಗಳನ್ನು ಅಂಕಿ ಅಂಶಗಳ ಪ್ರಕಾರ ವಿಶ್ಲೇಷಣೆ ಮಾಡುವುದು ಬಹಳ ಅಗತ್ಯವಾಗಿದೆ. ಏಕೆಂದರೆ ಹಿಂದುಳಿದೆ ವರ್ಗಗಳಲ್ಲಿ  ಎಷ್ಟು ಜಾತಿಗಳಿವೆ ಎಂಬುದಕ್ಕೆ ನಿಖರವಾದಂತಹ ಮಾಹಿತಿಗಳಿಲ್ಲ ಹಾಗು ದಾಖಲೆಗಳು ಸರ್ಕಾರದ ಯಾವ ಇಲಾಖೆಗಳಲ್ಲೂ ಇಲ್ಲ. ಹಿಂದುಳಿದ ವರ್ಗಗಳ ಆಯೋಗದಲ್ಲಿಯೂ ಕೂಡ ಮಾಹಿತಿಗಳ ಕೊರತೆಯಿದೆ. ಜಾತಿ ಉಪಜಾತಿಗಳ ಗೊಂದಲಗಳು ಹಲವು ವರ್ಷಗಳಿಂದ ಹಾಗೆಯೇ ಮುಂದುವರೆದುಕೊಂಡು ಬರುತ್ತಿದೆ. ಇದಕ್ಕೆ ಕಾರಣ ಯಾವ ಸರ್ಕಾರವೂ ಕೂಡ  ಹೆಚ್ಚಿನ ಆಸಕ್ತಿವಹಿಸದಿರುವುದು ಸಂಪೂರ್ಣ ಕಾರಣವಾಗಿದೆ. ಹಾಗೆಯೇ ಈಗ ಸಿಗುವುದು ಬರೀ ಅಂದಾಜು ಮಾಹಿತಿ ಮಾತ್ರ. ಸಧ್ಯದ ಪರಿಸ್ಥಿತಿಯಲ್ಲಿ ಲಭ್ಯವಿರುವ ಮಾಹಿತಿ ಹಾಗೂ ದಾಖಲೆಗಳ ಪ್ರಕಾರ ಅದನ್ನು ಆಧಾರವಾಗಿಟ್ಟುಕೊಂಡು ಸಮಗ್ರ ಅಧ್ಯಯನ ನಡೆಸಿ ಶಿಫಾರಸ್ಸುಗಳೊಂದಿಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ನೀಡಲು ಸೂಚನೆ ನೀಡಲಾಗಿದೆ.

ಪ್ರಸ್ತುತ ಸ್ಥಿತಿಯಲ್ಲಿ ಹಣ ಮತ್ತು ಸಿಬ್ಬಂದಿ ಕೊರತೆಯಿಂದ ಆ ಪ್ರಕ್ರಿಯೆ ಇನ್ನೂ ಕೂಡ ಪ್ರಾರಂಭವಾಗಿಲ್ಲ. ಸರಿಯಾದ ದಾಖಲೆ ಮತ್ತು ಮಾಹಿತಿ ಇಲ್ಲದೆ ಮೀಸಲಾತಿ ಕುರಿತು ವರದಿ ನೀಡುವುದು ಹೇಗೆ ಸಾಧ್ಯ ? ಜಾತಿವಾರು ಜನಗಣತಿ ಮುಗಿಯದ ಹೊರತು ಯಾವುದೇ ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ. ಈ ಜನಗಣತಿ ಆರಂಭಗೊಂಡರು ಸುಮಾರು ಒಂದರಿಂದ ಎರಡು ವರ್ಷ ಬೇಕಾಗುತ್ತದೆ. ಆ ಬಳಿಕ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿರುವ ಸಮುದಾಯಗಳನ್ನು ಗುರುತಿಸಿಯೋ ಮೀಸಲಾ ಸೌಲಭ್ಯವನ್ನು ಕಲ್ಪಿಸಲು ಅನುಕೂಲವಾಗುತ್ತದೆ. ಮೀಸಲಾತಿ ಗಣತಿ ಮಾಡಲು ಸರ್ಕಾರಕ್ಕೆ ಸುಮಾರು 100 ರಿಂದ 120 ಕೋಟಿ ಖರ್ಚು ಮಾಡಬೇಕಾಗುತ್ತದೆ. ಇದರಲ್ಲಿ ಮುಂದುವರಿದ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈ ಬಿಡಬೇಕಾಗುತ್ತದೆ.

             ಮೀಸಲು ಆಧಾರದಲ್ಲಿ ಪರಿಶಿಷ್ಟ ಜಾತಿಗೆ ಶೇ.15 ರಷ್ಟು ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಷು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶೇ.27 ರಷ್ಟದೆ.ಆದರೆ ಧಮನಿತ ವರ್ಗಗಳಿಗೆ ಸಿಗಬೇಕಾದ ಅವಾಕಾಶಗಳು ಇನ್ನೂ ಸಿಕ್ಕಿಲ್ಲ ಎನ್ನುವ ಅಂಕಿಅಂಶಗಳನ್ನು ಕೇಂದ್ರದ ಸರ್ಕಾರದ ಆಯೋಗವು ಸ್ಪಷ್ಟಪಡಿಸಿದೆ. ಆದರೆ ಪ್ರಸ್ತುತ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಉಪಜಾತಿಗಳÀ ಜನಗಣತಿಯ  ವರಧಿಯು ಅವೈಜಾÐನಿಕವಾಗಿದ್ದು, ಮನೆ ಮನೆ ಬಾಗಿಲಿಗೆ ಬಂದು ಸರಿ ಯಾಗಿ ಗಣತಿಯನ್ನು ಮಾಡದೆ ಅತಿ ತುರ್ತಾಗಿ ಸರಿಯಾದ ದಾಖಲೆ ಹಾಗೂ ಮಾಹಿತಿ ಯನ್ನು ಪಡೆಯದೆ ಆಯೋಗವು ಸಿದ್ದಪಡಿಸಿದೆ. ಆದ್ದರಿಂದ ಈ ಬಗ್ಗೆ ಸರಿಯಾದ ಅಂಕಿ ಅಂಶಗಳ ಪ್ರಕಾರ ವಿಶ್ಲೇಷಣೆಯನ್ನು ಮಾಡುವುದು ಬಹಳ ಅಗತ್ಯವಾಗಿದೆ. ಹಾಗೂ ರಾಷ್ರದ ಒಟ್ಟು ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಅಂದಾಜು ಮಾಹಿತಿಯನ್ನು ಪರಿಗಣಿಸದೆ ಮೀಸಾಲಾತಿಯನ್ನು ಹೆಚ್ಚಿಸಿ ಸವiಗ್ರ ಬದಲಾವಣೆಯ ಬಗ್ಗೆ ಚರ್ಚಿಸಿ ದುಡುಕಿನ ನಿರ್ದಾರ ಸಲ್ಲದು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಲಾಗಿದೆ.

              ಈಗಿನ ಅವೈಜಾÐನಿಕ ವರದಿಯನ್ನು ಕೈಬಿಟ್ಟು ವೈಜಾÐನಿಕ ಮತ್ತು ದೂರದೃಷ್ಟಿಯ ಆಧಾರದಲ್ಲಿ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಮೀಸಾಲಾತಿಯಿಂದ ವಂಚಿತ ಸಮುದಾಯ ಗಳಿಗೆ ಸಮರ್ಥ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವ ದೃಷ್ಟಿಯಿಂದ ವೈಜಾÐನಿಕ ಅಧ್ಯಯನಕ್ಕೆ ಹಾಗೂ ವರದಿಗೆ ಶಿಪಾರಸ್ಸು ಮಾಡಬೇಕೇ ಹೊರತು ಈ ಆಯೋಗವು ನೀಡಿರುವ ಆವೈಜಾÐನಿಕ ವರದಿಯನ್ನು ಮರು ಅವಲೋಕನ ಮಾಡುವ ಸದಾಶಿವ ಆಯೋಗವು ಪರಿಶಷ್ಟ ಜಾತಿಗಳನ್ನು ನಾಲ್ಕು ಪಂಗಡಗಳಾಗಿ ವಿಂಗಡಿಸಿದ್ದು ಒಳ ಮೀಸ ಲಾತಿಯ ಬಗ್ಗೆ ಮಾಹಿತಿಯನ್ನು ನೀಡಿರುವುದು ಹಾಗೂ ಅದರ ವರಧಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಸಿದ್ದಪಡಿಸಿರುವುದರಲ್ಲಿ ಸರಿಯಾದ ಮಾಹಿತಿಯಿರುವುದಿಲ್ಲ.

    ಎಡಗೈ ಜನಾಂಗ ಬಲಗೈ ಜನಾಂಗವೆಂದು ವಿಂಗಡಿಸಿ ಎಡಗೈ ಜನಾಂಕ್ಕೆ. ಶೇ.6 ಬಲಗೈ ಜನಾಂಕ್ಕೆ ಶೆ. 5 ಎಂದು ಮೀಸಾಲಾತಿ ಪ್ರಮಾಣವನ್ನು ನಮೂದಿಸುವುದು ಎಷ್ಟು ಸಮಂಜಸ.ಮತ್ತು ಎಡಗೈ ಜನಾಂಕಕ್ಕೆ ಎಷ್ಟು ಉಪಜಾತಿಗಳನ್ನು ಸೇರಿಸಿದಾರೆ. ಹಾಗೂ ಬ¯ಗೈ ಜನಾಂಗಕ್ಕೆ ಎಷ್ಟು ಉಪಜಾತಿಗಳನ್ನು ಸೇರಿಸಿದ್ದಾರೆ ಎನ್ನುವುದು ಇನ್ನೂ ನಿಗೂಢವಾದ ವಿಚಾರವಾಗಿದೆ. ಸ್ವಾತಂತ್ರ್ಯ ನಂತರ ಸಂವಿಧಾನ ರಚನೆ ಮಾಡಿ 50 ಜಾತಿಗಳು ಪರಿ ಶಿಷ್ಟಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದವು. ಅಂದಿನ ಮೀಸಲಾತಿ ಶೇ.18 ರಷ್ಟು ನೀಡಲಾಗಿತ್ತು. ಆದರೆ ತದನಂತರ ಪರಿಷ್ಟಜಾತಿಗಳ ಪಟ್ಟಿಗೆ 101 ಕ್ಕಿಂತ ಹೆಚ್ಚು ಉಪಜಾತಿ ಗಳನ್ನು ಸೇರ್ಪಡೆ ಮಾಡಲಾಯ್ತು. ಆದರೆ ಮೀಸಲಾತಿ ಹೆಚ್ಚಳ ಮಾತ್ರ ಮಾಡಲಿಲ್ಲ. ಈ ತೀರ್ಮಾನವು ಅದೆಷ್ಟು ಅವೈಜಾÐನಿಕ ಎನ್ನುವುದನ್ನು ವಿಮರ್ಶಸಬೇಕಾಗಿದೆ.

             ಪರಿಶಿಷ್ಟ ಜಾತಿಗೆ ಸೇರಿಸಿದ ಉಪಜಾತಿಗಳ ಹೆಚ್ಚಳಕೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಶೇ.18 ರಿಂದ ಶೇ.39% ಹೆಚ್ಚಳ ಮಾಡಬೇಕಿದೆ ಎಂಬ ಕೂಗಿಗೆ ಉತ್ತರ ಎಲ್ಲಿದೆ ? ಶೇ.50 ರಷ್ಟಿರುವ ಸಾಮಾನ್ಯ ವರ್ಗದ ಮೀಸಲಾತಿಯಲ್ಲಿಯೇ ಮೊಟಕುಗೊಳಿಸ ಬೇಕಾಗುತ್ತದಲ್ಲವೇ ? ಇವತ್ತೇನೋ ದಲಿತ ಸಮೂದಾಯ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸುತ್ತದೆ ನಾಳೆ ಕುರು ಜಾತಿಯೋ, ಇನ್ನಾವುದೋ ಜಾತಿಯೋ ತಮಗೂ ಂಇಸಲಾತಿಯಲ್ಲಿ ಹೆಚ್ಚಳ ನೀಡಬೇಕೆಂದು ಆಗ್ರಹಿತ್ತದಲ್ಲವೇ ? ಆಗ ಪುನಃ ಸಾಮಾನ್ಯ ವರ್ಗದಲ್ಲಿಯೇ ಮೀಸಲು ಪ್ರಮಾಣವನ್ನು ಮೊಟಕುಗೊಳಿಸಿ ಪಡೆಯಬೇಕಾಗುತ್ತದೆ. ಈಗ ಇರುವಂತಹ ಮೀಸಲಾತಿಯನ್ನು 10 ಉಪಜಾತಿಗಳಿಗೆ ಹಂಚುವುದು ಅದೆಷ್ಟು ಸರಿ ಎನ್ನುವ ಪ್ರಜ್ಞೆ ಆಯೋಗಕ್ಕೆ ಏಕೆ ಬರಲಿಲ್ಲ ಎನ್ನುವುದು ಸಂಶಯಾಸ್ಪದವಾಗಿದೆ.

ಉಪಸಂಹಾರ :

      ಮೀಸಲಾತಿ ಎಂಬುದು ವರವೋ ? ಶಾಪವೋ ? ಎಂಬ ಆತಂಕ ಒಮ್ಮೊಮ್ಮೆ ತಲೆದೋರುತ್ತದೆ. ಅಷ್ಟರ ಮಟ್ಟಿಗೆ ಇದರ ದುರುಪಯೋಗವಾಗುತ್ತಿದೆ. ಅಧಿಕಾರದ ಚುಕ್ಕಾಣಿ ಹಿಡಿಯುವ ರಾಜಕಾರಣಿಗಳಂತು ಇದರ ಹಾಗು ಹೋಗುಗಳನ್ನು ಯಾರೊಬ್ಬರೂ ಸಾವಧಾನದಿಂದ ಯೋಚಿಸುವ ಗೋಜಿಗೆ ಹೋಗುವುದಿಲ್ಲ, ಹೋದರೆ ಅವರ ಅಧಿಕಾರ ಇರುವುದೇ ಇಲ್ಲವೆಂಬ ಆತಂಕದಲ್ಲೇ ಬದುಕುವ ಜನರವರು. ಹೇಗೆ ಮಠಗಳ ಸ್ವಾಮೀಜಿಗಳನ್ನು ಎದುರು ಹಾಕಿಕೊಳ್ಳಲು ಹಿಂಜರಿಯುವರೋ ಹಾಗೆಯೇ ಮೀಸಲಾತಿದಾರರನ್ನು ಹೆದುರು ಹಾಕಿಕೊಳ್ಳಲೂ ಹಿಂಜರಿಯುತ್ತಾರೆ. ಅವರ ಕಪಿ ಮುಷ್ಠಿಯಿಂದ ಹೊರ ಬಂದರೆ ಮಾತ್ರ ಸರ್ವಸಮತೆ ಬರಲು ಸಾಧ್ಯವಾಗುತ್ತದೆ.

      ಆಧುನಿಕ ಮನಸ್ಸುಗಳು ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಅಗತ್ಯವಿರುವವರಿಗೆ ಸಂಜೀವಿನಿಯಂತಹ ಮೀಸಲಾತಿಯನ್ನು ಅದರ ವಾರಸುದಾರರಿಗೆ ದಕ್ಕುತ್ತದೆ. ಆದರೆ ಅದರ ವಾರಸುದಾರರು ಯಾರು ? ಒಂದು ಜನಾಂಗವೋ ಅಥವಾ ಆ ಜನಾಂಗದಲ್ಲಿರುವ ದಮನಿತರೋ ? ಜನಾಂಗಿಯ ಮೀಸಲಾತಿ ಅದೇ ಜನಾಂಗದ ದಮನಿತರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿದರೆ ಅದಕ್ಕೊಂದು ಮೌಲ್ಯ ದೊರೆಯುತ್ತದೆ ಇಲ್ಲದಿದ್ದರೆ ತಾರತಮ್ಯ ಅದರ ಮೂಲ ಆಶಯ ಎಂದಿಗೂ ಸಾಕಾರಗೊಳ್ಳುವುದಿಲ್ಲ.

ಪರಾಮರ್ಶನ ಗ್ರಂಥಗಳು :

  1. ಗೌತಮ್ ಡಿ.ಎನ್. ಪಿಪ್ಟಿ ಇಯರ್ಸ್ ಆಪ್  ಇಂಡಿಯನ್ ಕಾನ್ಟಿಟ್ಯೂಶನ್, ನವದೆಹಲಿ, 2001
  2. ಪೂರ್ಣಿಮ ಜಿ.ಆರ್. ಸುರೇಶ್ಕುಮಾರ್ ಎಂ.ಎನ್, ಭಾರತದ ಸಂವಿಧಾನ ಮತ್ತು ಮಾನವ ಹಕ್ಕುಗಳು, ಸಪ್ನಬುಕ್‍ಹೌಸ್, ಬೆಂಗಳೂರು, 2014.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal