ಯುವ ಜನತೆಯಲ್ಲಿ ಭ್ರಷ್ಟಾಚಾರದ ಅರಿವು: ಒಂದು ಸಮಾಜಶಾಸ್ತ್ರಿಯ ಅಧ್ಯಯನ
ವಿಕ್ರಮ್ ಜಿ.ಬಿ.
ಪಿಹೆಚ್‍ಡಿ ಸಂಶೋಧನಾ ವಿದ್ಯಾರ್ಥಿ
ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ,
ಕುವೆಂಪು ವಿಶ್ವವಿದ್ಯಾಲಯ ಜ್ಞಾನಸಹ್ಯಾದ್ರಿ, ಶಂಕರಘಟ್ಟ, ಶಿವಮೊಗ್ಗ.
vikramhalebeedu@gmail.com
ಡಾ. ಪೂರ್ವಾಚಾರ್ ಎಂ.
ಸಹ ಪ್ರಾಧ್ಯಾಪಕರು,
ಸಮಾಜಶಾಸ್ತ್ರ ಅಧ್ಯಯನ ವಿಭಾಗ,
ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ.
ಸಾರಾಂಶ:
ಭಾರತೀಯ ಸಮಾಜವು ಪ್ರಾಚೀನ ಕಾಲದಿಂದಲೂ ತನ್ನದೆ ಅದ ವಿಭಿನ್ನ ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿದೆ. ಇಂತಹ ಸಂದರ್ಭವನ್ನು ನೋಡಿದಾಗ ಸ್ವಾಮಿ ವಿವೇಕಾನಂದರ ವಾಣಿಯಂತೆ ಈ ದೇಶದ ಭವಿಷ್ಯ ಯುವಜನತೆಯಲ್ಲಿ ಅಡಕವಾಗಿದೆ ಎಂದಿದ್ದಾರೆ. ಈ ದೇಶದ ನೀಜವಾದ ಸಂಪತ್ತು ಯುವ ಜನತೆಯಾಗಿದ್ದು, ಒಂದು ದೇಶದ ಅಭಿವೃದ್ಧಿ ಮತ್ತು ಅನಭಿವೃದ್ಧಿಯು ಈ ದೇಶದ ಯುವಜನತೆಯನ್ನು ಅವಲಂಬಿಸಿದೆ. ಭ್ರಷ್ಟಾಚಾರವು ಭಾರತೀಯ ದೇಶದಲ್ಲಿ ಪ್ರಮುಖವಾಗಿ ಅಡಳಿತ ವ್ಯವಸ್ಥೆಯಲ್ಲಿ ಹೆಚ್ಚಾಗಿದೆ. ಭ್ರಷ್ಟಚಾರವಿಲ್ಲದ ಕ್ಷೇತ್ರವನ್ನು ನಾವು ನೋಡಲು ಸಾಧ್ಯವಿಲ್ಲವಾಗಿದೆ. ಎಂತಹ ಕಠಿಣ ಕಾನೂನುಗಳು ಜಾರಿಯಾದರು ಸಹ ಭ್ರಷ್ಟಾಚಾರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಉದ್ಭವವಾಗಿದೆ. ರಾಜಕೀಯ ತತ್ವಜ್ಞಾನಿಯಾದ ಥಾಮಸ್ ಹಾಬ್ಸ್ ತನ್ನ ಲಿವಿಯಾಥನ್ ಎಂಬ ಪುಸ್ತಕದಲ್ಲಿ ಮಾನವನು ದುಸ್ವಾಭಾವಿ ಮತ್ತು ಕ್ರೂರಿ, ಆದ್ದರಿಂದ ಅತನ ವಿವೇಚನ ಶಕ್ತಿಯು ಬಹಳ ದುರ್ಬಲವಾಗಿದ್ದು ಅದು ಅವನ ಸ್ವಾರ್ಥ ಹಿತಾಸಕ್ತಿಯನ್ನು ವಿವರಿಸುತ್ತ ಒಬ್ಬ ವ್ಯಕ್ತಿ ಸಾಮಾಜಿಕ ಅಂತಸ್ತನ್ನು ಹೊಂದಲು ಇತರೆ ಜನತೆಯನ್ನು ಬಲಿಪಶು ಮಾಡುತ್ತಾನೆ ಎಂಬುದನ್ನು ಉಲ್ಲೇಖಿಸಿದ್ದಾರೆ.
ಕೀಲಿ ಪದಗಳು : ಯುವ ಜನತೆ, ಭ್ರಷ್ಟಾಚಾರ, ಭಾರತೀಯ ಸಮಾಜ
ಅಧ್ಯಯನ ವಿಷಯದ ಪರಿಕಲ್ಪನೆ
ಪ್ರಸ್ತುತ ಅಧ್ಯಯನವು ‘ಯುವ ಜನತೆಯಲ್ಲಿ ಭ್ರಷ್ಟಾಚಾರದ ಅರಿವು: ಒಂದು ಸಮಾಜಶಾಸ್ತ್ರಿಯ ಅಧ್ಯಯನ’ ಎಂಬ ವಿಷಯದ ಕುರಿತಾಗಿದ್ದು, ಯುವ ಜನತೆಯಲ್ಲಿ ಕೈಗಾರಿಕರಣ ಮತ್ತು ಅಧನೀಕರಣದ ಗೀಳುನಿಂದ ಯುವ ಜನತೆಯು ಸಾರ್ವಜನಿಕ ರಂಗಗಳಲ್ಲಿ ನಡೆಯುವ ಅವ್ಯವಾಹರಗಳ ಬಗ್ಗೆ ಧ್ವನಿಯೆತ್ತುವುದಿಲ್ಲ. ಕಾರಣ ಭ್ರಷ್ಟಾಚಾರ ದ ವ್ಯಾಪಕತೆಯ ಬಗ್ಗೆ ಮಾತನಾಡುವುದೇ ಒಂದು ದೊಡ್ಡ ಅಪರಾಧವಾಗಿದೆ.
ಯುವಜನತೆ ಮತ್ತು ಭ್ರಷ್ಟಾಚಾರ
‘ಯೌವ್ವನ’ ಪದವನ್ನು ಯುನೆಸ್ಕೋ ವ್ಯಾಖ್ಯೆನದ ಪ್ರಕಾರ ‘ಬಾಲ್ಯದ ಮೇಲಿನ ಅವಲಂಬನೆಯಿಂದ ಹದಿಹರೆಯದ ಸ್ವಾತಂತ್ರ್ಯದತ್ತ ಪರಿವರ್ತನೆಯ ಅವಧಿ ಮತ್ತು ಸಮುದಾಯದ ಸದಸ್ಯರಾಗಿ ನಮ್ಮ ಸ್ವಾತಂತ್ರ್ಯದ ಬಗೆಗಿನ ತಿಳಿವಳಿಕೆ ವ್ಯಕ್ತವಾಗುವ ಹಂತವಾಗಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 65ರಷ್ಟು ಭಾಗವನ್ನು 35ಕ್ಕಿಂತಲೂ ಕಡಿಮೆ ವಯೋಮಾನದ ಜನತೆಯಾಗಿ ಹೊಂದುವ ಮೂಲಕ ಭಾರತ ವಿಶ್ವದಲ್ಲಿಯೇ ಹೆಚ್ಚು ಯುವಜನತೆಯನ್ನು ಹೊಂದಿರುವ ದೇಶವಾಗಿದೆ. 2014ರ ರಾಷ್ಟ್ರೀಯ ಯುವ ಜನಸಂಖ್ಯೆ. ಇದು ವಿವಿಧ ಅಗತ್ಯತೆಗಳು ಮಹಾತ್ವಕಾಂಕ್ಷೆ, ಅವಶ್ಯಕತೆಗಳನ್ನು ಹೊಂದಿರುವ ವೈವಿಧ್ಯಮಯವಾದ ಗುಂಪು ಆಗಿದೆ.
ಸಾಮಾಜಿಕ ಸುಧಾರಣೆಯನ್ನು ತರುವಲ್ಲಿ ಅಂಬೇಡ್ಕರ್, ಬಸವಣ್ಣ, ಲೋಹಿಯಾ, ಗಾಂಧಿವಾದಿಗಳ ವಿಚಾರಧಾರೆಯು ಯುವ ಜನತೆಯನ್ನು ಸೂಕ್ತ ದಿಕ್ಕಿನೆಡೆಗೆ ಕೊಂಡುಯ್ಯುವಂತೆ ಮಾಡಿತು. ಇವರ ವಿಚಾರಧಾರೆಗಳು ಭ್ರಷ್ಟಾಚಾರದ ಮೂಲ ನೆಲೆಗಳಾದ ಕಂದಾಯ ಇಲಾಖೆ, ಸಾರಿಗೆ ಇಲಾಖೆ, ಪೋಲಿಸ್ ಇಲಾಖೆಯಂತ ಬೃಹತ್ ಇಲಾಖೆಗಳಲ್ಲಿ ಪ್ರಜ್ಞಾವಂತ ಯುವ ಪಡೆಯನ್ನು ಸೃಷ್ಠಿಸಲು ಕಾರಣವಾಯಿತು. ಭ್ರಷ್ಟಚಾರದ ಮೂಲ ಬೇರುಗಳು ಲಂಚ, ರುಘುವತ್ತು, ದೇಣಿಗೆ, ಹೈರಿ, ಖುಷಿ, ಕಾಣಿಕೆ, ಕಮಿಷನ್ ದಂದೆ, ವರದಕ್ಷಿಣೆ ಮತ್ತು ವಧುದಕ್ಷಿಣೆ, ಕಪ್ಪು ಕಾಣಿಕೆ, ಮೋಜು ಮಸ್ತಿ ಕಾರ್ಯಕ್ರಮಗಳಾಗಿವೆ.
ಭ್ರಷ್ಟಾಚಾರದ ವ್ಯಾಖ್ಯೆಗಳು
ರಾಮ್ ಅಹುಜರವರ ಪ್ರಕಾರ “ಲಂಚಕೋರತನವನ್ನು ಭ್ರಷ್ಟಾಚಾರವೆಂದು ವಿವರಿಸಬಹುದು”ಎಂದು ಅಭಿಪ್ರಾಯಿಸಿದ್ದಾರೆ.
ಆಂಡ್ರಿಸ್ಕಿಯವರ ಪ್ರಕಾರ “ಸಾರ್ವಜನಿಕ ಅಧಿಕಾರವನ್ನು ತಮ್ಮ ಖಾಸಗಿ ಅನುಕೂಲಕ್ಕಾಗಿ ಕಾನೂನಿನ ನಿಯಮವನ್ನು ಮೀರಿ ಉಪಯೋಗಿಸುವುದು” ಎಂದು ಪರಿಭಾವಿಸುತ್ತಾರೆ.
ಜೆ.ನೈ. ರವರು “ಭ್ರಷ್ಟಾಚಾರವು ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕ ಅಧಿಕಾರಿಗಳ ದುರುಪಯೋಗ ಅಥವಾ ದುರ್ಬಳಕೆ” ಎಂದು ಅರ್ಥ ಕೊಡುತ್ತದೆ ಎಂದು ಹೇಳಿದ್ದಾರೆ.
ಅಧ್ಯಯನದ ಉದ್ದೇಶಗಳು
ಅಧ್ಯಯನದ ಮಹತ್ವ
ಅಧ್ಯಯನ ವಿಷಯವಾದ ‘ಯುವ ಜನತೆಯಲ್ಲಿ ಭ್ರಷ್ಟಾಚಾರದ ಅರಿವು: ಒಂದು ಸಮಾಜಶಾಸ್ತ್ರಿಯ ಅಧ್ಯಯನ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ. ಅಧ್ಯಯನದ ಮಹತ್ವವು ಈ ಕೆಳಗಿನಂತಿದೆ,
ಅಧ್ಯಯನ ಕ್ಷೇತ್ರದ ವ್ಯಾಪ್ತಿ
ಪ್ರಸ್ತುತ ಅಧ್ಯಯನವು “ಯುವ ಜನತೆಯಲ್ಲಿ ಭ್ರಷ್ಟಾಚಾರದ ಅರಿವು: ಒಂದು ಸಮಾಜಶಾಸ್ತ್ರಿಯ ಅಧ್ಯಯನ’ ಎಂಬ ವಿಷಯವನ್ನು ಕುರಿತಾಗಿದ್ದು. ಹಾಸನ ಜಿಲ್ಲೆಯ ಸರ್ಕಾರಿ ಕಾನೂನು ಕಾಲೇಜುನಲ್ಲಿ 250 ವಿದ್ಯಾರ್ಥಿಗಳಿದ್ದು ಅಧ್ಯಯನಕ್ಕೆ ಅನೂಕೂಲವಾಗುವಂತೆ ಒಂದು ಕಾಲೇಜಿನ 25 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಅಧ್ಯಯನದ ಮಾದರಿ
ಹಾಸನ ಜಿಲ್ಲೆಯ ಸರ್ಕಾರಿ ಕಾನೂನು ಕಾಲೇಜುನಲ್ಲಿ ಒಟ್ಟು 250 ವಿದ್ಯಾರ್ಥಿಗಳಿದ್ದು, ಇವರಲ್ಲಿ ನನ್ನ ಅಧ್ಯಯನದ ದೃಷ್ಠಿಯಿದ 25 ವಿದ್ಯಾರ್ಥಿಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಯುವಕರು 15 ಮತ್ತು ಯುವತಿಯರು 10 ಜನ ಪ್ರತಿವರ್ತಿಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಭ್ರಷ್ಟಾಚಾರತೆ ನಿರ್ಮೂಲನೆಯ ಬಗಿನ ಅರಿವಿನ ಬಗ್ಗೆ ತಿಳಿಯುವುದಾಗಿದೆ. ಇಲ್ಲಿ ಉದ್ದೇಶಿತ ನಮೂನೆಯನ್ನು ಬಳಸಿಕೊಂಡು ಮಾದರಿಯನ್ನು ಆಯ್ಕೆಮಾಡಿಕೊಳ್ಳಲಾಗಿದೆ.
ಸಂಶೋಧನಾ ತಂತ್ರಗಳು
ಪ್ರಸ್ತುತ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಂದರ್ಶನ ಮತ್ತು ಸಂದರ್ಶನ ಅನುಸೂಚಿಯ ಸಹಾಯದಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅವಲೋಕನ ವಿಧಾನದಲ್ಲಿ ಸಹಭಾಗಿ ಅವಲೋಕನ ವಿಧಾನವನ್ನು ಬಳಕೆಮಾಡಿಕೊಳ್ಳುವುದರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಶೋಧನಾ ಆಕರಗಳಾದ ಸಂಶೋಧನಾ ಲೇಖಗಳು, ಪತ್ರಿಕೆಗಳು, ಕನ್ನಡ ವಿಶ್ವಕೋಶ, ಕರ್ನಾಟಕ ರಾಜ್ಯಸರ್ಕಾರದ ಗೆಜಿಟಿಯರ್, ಅಂತರ್ಜಾಲ, ಸಂಶೋಧನಾ ಗ್ರಂಥಗಳು ಮತ್ತು ಸಂಶೋಧನಾ ಕ್ಷೇತ್ರದ ಪ್ರತಿವರ್ತಿಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಮಾಹಿತಿಯನ್ನು ಸಂಶೋಧನಾ ತಂತ್ರಗಳ ಮೂಲಕ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಾಹಿತಿಯನ್ನು ಸಮಾಜಶಾಸ್ತ್ರಿಯ ಚೌಕಟ್ಟಿನಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ಭ್ರಷ್ಟಚಾರ ಮತ್ತು ಸಾಮಾಜಿಕ ಕ್ಷೇತ್ರಗಳು
ಭ್ರಷ್ಟಾಚಾರವು ಸಮಾಜಿಕ ಕ್ಷೇತ್ರಗಳಾದ ಕುಟುಂಬ, ವಿವಾಹ, ರಾಜಕೀಯ, ಧಾರ್ಮಿಕ ಹಾಗೂ ತಾಂತ್ರೀಕ ಕ್ಷೇತ್ರಗಳಲ್ಲಿ ಕಂಡುಬರುತ್ತದೆ. ಹಾಗಾಗಿ ಭ್ರಷ್ಟಚಾರವಿಲ್ಲದ ಕ್ಷೇತ್ರಗಳನ್ನು ಗುರುತಿಸಲು ಸಹಾಯಕವಾಗಿದೆ.
ಕೋಷ್ಟಕ 0.1: ಪ್ರತಿವರ್ತಿಗಳಿಗೆ ಭ್ರಷ್ಟಾಚಾರವಿರುವ ಸಾಮಾಜಿಕ ಕ್ಷೇತ್ರಗಳ ಅರಿವಿನ ವಿವರ
ಭ್ರಷ್ಟಾಚಾರದ ಕ್ಷೇತ್ರಗಳ ವಿವರ |
ಆವೃತ್ತಿ |
ಶೇಕಡವಾರು |
ರಾಜಕೀಯ ಕ್ಷೇತ್ರ |
10 |
40.00 |
ಧಾರ್ಮಿಕ ಕ್ಷೇತ್ರಗಳು |
05 |
20.00 |
ಆರ್ಥಿಕ ಕ್ಷೇತ್ರಗಳು |
06 |
24.00 |
ಶೈಕ್ಷಣಿಕ ಕ್ಷೇತ್ರಗಳು |
02 |
8.00 |
ಇತರೆ |
02 |
8.00 |
ಒಟ್ಟು |
25 |
100.00 |
ಮೂಲ: ಪ್ರಾಥಮಿಕ ಮಾಹಿತಿ
ಈ ಮೇಲ್ಕಂಡ ಕೋಷ್ಠಕದಲ್ಲಿ ಭ್ರಷ್ಟಚಾರ ಹೆಚ್ಚಿರುವ ಕ್ಷೇತ್ರಗಳ ಅರಿವಿನ ವಿವರಕ್ಕೆ ಸಂಬಂಧಿಸಿದಂತೆ ಶೇಕಡ 40ರಷ್ಟು ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವು ಹೆಚ್ಚಿರುವುದಾಗಿ ತಿಳಿಸಿದ್ದಾರೆ. ಕಾರಣ ಚುವಾವಣೆ ಸಂದರ್ಭಗಳಲ್ಲಿ ಹಾಗೂ ಕರ್ಪೋರೇಟ್ ವಲಯಗಳಲ್ಲಿ ರಾಜಕೀಯ ಹಸ್ತಕ್ಷೇಪಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ಹಾಗೆಯೇ ಧಾರ್ಮಿಕ ಕ್ಷೇತ್ರಗಳಾದ ಮಠಗಳು ಮತ್ತು ದೇವಸ್ಥಾನ ಸಮಿತಿಗಳು, ಧಾರ್ಮಿಕ ದತ್ತಿ ಸಂಸ್ಥೆಗಳಲ್ಲಿ ಶೇಕಡ 20.00ರಷ್ಟು ಭ್ರಷ್ಟಾಚಾರಗಳು ಕಂಡುಬರುತ್ತಿವೆ. ಎಂದಿದ್ದಾರೆ. ಕಾರಣ ಭಾರತೀಯ ಜನಸಮುದಾಯಗಳು ಹೆಚ್ಚು ಧಾರ್ಮಿಕ ಆಚರಣೆಯ ಮೇಲೆ ಅವಲಂಬಿತವಾಗಿರುವುದು ಕಂಡುಬರುತ್ತದೆ. ಹಾಗೆಯೇ ಆರ್ಥಿಕ ಕ್ಷೇತ್ರಗಳಾದ ವ್ಯಾಪರ ಮಾರುಕಟ್ಟೆ, ಬ್ಯಾಂಕ್‍ಗಳು, ಸಹಕಾರಿ ಸಂಘ ಸಂಸ್ಥೆಗಳಲ್ಲಿ ಶೇಕಡ 24ರಷ್ಟು ಭ್ರಷ್ಟಚಾರವು ಕಂಡುಬರುವುದಾಗಿ ತಿಳಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರಗಳಲ್ಲಿ ಶೇಕಡ 08ರಷ್ಟು ಹಾಗೂ ಇತರೆ ಕ್ಷೇತ್ರಗಳಾದ ತಾಂತ್ರೀಕ ಕ್ಷೇತ್ರ ಕೃಷಿ, ಕಲಾ ಕ್ಷೇತ್ರಗಳಲ್ಲಿ ಶೇಕಡ 08ರಷ್ಟು ಭ್ರಷ್ಟಾಚಾರವಿರುವದಾಗಿ ತಿಳಿಸಿದ್ದಾರೆ.
ಅಧ್ಯಯನದಿಂದ ವ್ಯಕ್ತವಾದ ಅಂಶಗಳು
ಸಲಹೆಗಳು
ಅಧ್ಯಯನದ ದೃಷ್ಟಿಯಿಂದ ಕಂಡುಕೊಂಡ ಅಂಶಗಳಿಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ಭ್ರಷ್ಟಚಾರ ಪ್ರಮಾಣವನ್ನು ತಗ್ಗಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಯುವಜನತೆಯು ಕೂಡ ಭ್ರಷ್ಟಾಚಾರದ ಕೂಪಕ್ಕೆ ಸಿಲುಕಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಎಲ್ಲ ಸಾಮಾಜಿಕ ರಂಗಗಳಲ್ಲಿ ಭ್ರಷ್ಟಾಚಾರವು ನೆಲೆಯೂರಿದ್ದು ಸರ್ಕಾರಗಳಿಗಿಂತ ಪ್ರಜ್ಞಾವಂತ ನಾಗರಿಕರು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವಲ್ಲಿ ನಿರ್ಲಕ್ಷ್ಯವಹಿಸುತ್ತಿರುವುದು ಅಧ್ಯಯನದಿಂದ ಕಂಡುಬಂದಿದೆ.
ಗ್ರಂಥಋಣ