Tumbe Group of International Journals

Full Text


ವಸತಿ ಯೋಜನೆಯನ್ನು ಅನುಷ್ಠಾನ ತರುವಲ್ಲಿ ಗ್ರಾಮ ಪಂಚಾಯಿತಿಯ ಪಾತ್ರ

ರೂಪಶ್ರೀ  ಎಂ. ಎನ್.

ಪಿಹೆಚ್.ಡಿ ಸಂಶೋಧನಾ ವಿದ್ಯಾರ್ಥಿನಿ,

ರಾಜ್ಯಶಾಸ್ತ್ರ ಸ್ನಾತಕೋತ್ತರ ಮತ್ತು ಸಂಶೋಧನಾ ಅಧ್ಯಯನ ವಿಭಾಗ,

ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.

ಮೊ: 8884769470

Email : roopashree1212 @gmail.com

ಪ್ರೊ. ಕೆ. ಚಂದ್ರಶೇಖರ್,

ಡೀನರು ಕಲಾನಿಕಾಯ

ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ,

ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.

ಪ್ರಸ್ತಾವನೆ

ಭಾರತ  ದೇಶದ ಬಹುದೊಡ್ಡ ಕನಸು ಗ್ರಾಮೀಣಾಭಿವೃದ್ಧಿಯಾಗಿದ್ದು, ಗ್ರಾಮೀನ ಭಾಗವನ್ನು ಗುಡಿಸಲು ಮುಕ್ತ ದೇಶವನ್ನಾಗಿ ಮಾಡುವುದಾಗಿದೆ. ಮಾನವನ ಮೂಲಭೂತ ಅಗತ್ಯಗಳೆಂದರೆ ಆಹಾರ, ಬಟ್ಟೆ ಮತ್ತು ವಸತಿಯಾಗಿದೆ. ಇದರಲ್ಲಿ ವಸತಿಯು ಮುಖ್ಯವಾಗಿದ್ದು ಅದರಿಂದ ವಿಶೇಷವಾಗಿ ಭಾರತದ ಗ್ರಾಮೀಣ ಪ್ರದೇಶದಲ್ಲಿರುವ ಬಡವರ್ಗದವರಿಗೆ ವಸತಿ ರಹಿತರಿಗೆ ಸ್ವಂತ ಮನೆಗಳನ್ನು ಒದಗಿಸುವುದಾಗಿ ಆದ್ದರಿಂದ ಗ್ರಾಮೀಣ ಜನರ ವಸತಿ ಕಲ್ಯಾಣಕ್ಕಾಗಿ ಸರ್ಕಾರವು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಗ್ರಾಮ ಪಂಚಾಯಿತಿಯ ಗ್ರಾಮಸಭೆಯ ಮೂಲಕ ಅರ್ಹಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಡವರಿಗೆ ಸೂರು ಒದಗಿಸುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯಿತಿಯು ವಸತಿ ಯೋಜನೆಯ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ.

ಅಧ್ಯಯನದ ವಿಷಯ ಪರಿಕಲ್ಪನೆ

             ಪ್ರಸ್ತುತ ಅಧ್ಯಯನವು ವಸತಿ ಯೋಜನೆಯನ್ನು ಅನುಷ್ಥಾನ ತರುವಲ್ಲಿ ಗ್ರಾಮ ಪಂಚಾಯಿತಿಯ ಪಾತ್ರ ಎಂಬಂತಹ ಅಧ್ಯಯನವಾಗಿದ್ದು ಗ್ರಾಮ ಪಂಚಾಯಿತಿಯು ವಸತಿ ಯೋಜನೆಗಳನ್ನು ಪ್ರಭಾವಯುತವಾಗಿ ಜಾರಿಗೊಳಿಸುವಲ್ಲಿ ಯಶ್ವಸಿಯಾಗಿರಬಹುದು. ಅಥವಾ ಯಶ್ವಸಿಯಾಗದಿರಬಹುದು ಎಂಬ ಅಂಶಗಳ ಬಗ್ಗೆ ತೌಲನಿಕವಾಗಿ ಅಧ್ಯಯನ ಮಾಡಲಾಗಿದ್ದು,  ಈ ವಿಷಯದ ಅರ್ಥ ವಿವರಣೆ ಈ ಕೆಳಗಿನಂತಿದೆ.

ವಸತಿಯ ಅರ್ಥ

              ವಸತಿಯು ಮಾನವನ ಮೂಲಭೂತವಾದ ವಾಸ್ತುಶಿಲ್ಪ ರಚನೆಯಾಗಿದೆ ಹಾಗೂ ಸ್ಥಳೀಯ ಪರಿಸರದಿಂದ ರಕ್ಷಣೆ ನೀಡುವಂತಹ ಕಟ್ಟಡವಾಗಿದೆ. ವಸತಿಯು ಸಾಮಾನ್ಯವಾಗಿ ಆಶ್ರಮ, ಸುರಕ್ಷತೆ ಮತ್ತು ಏಕಾಂತ ಸ್ಥಳವನ್ನು ಹೊಂದಿರುವುದರಿಂದ ವಸತಿಯು ಸಾಮಾನ್ಯವಾಗಿ ಮಾನವನ ಮೂಲಭೂತ ದೈಹಿಕ ಅಗತ್ಯವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ವಸತಿಯು ಹೆಚ್ಚಿನ ಮಾನವ ಪ್ರೇರಣೆಗಳನ್ನು ಅಭಿವೃದ್ಧಿಪಡಿಸುವ ಅಡಿಪಾಯವಾಗಿದೆ.

ಸಾಹಿತ್ಯಾಧ್ಯಯನ

            ಪ್ರಸ್ತುತ ಸಂಶೋಧನಾ ಲೇಖನಕ್ಕೆ ಸಂಬಂಧಿಸಿದಂತೆ  ಇದುವರೆಗೂ ನಡೆದ ಅನೇಕ ಸಂಶೋಧನಾ ಗ್ರಂಥಗಳು ಹಾಗೂ ಲೇಖನಗಳನ್ನು ಓದಿ ಅಥ್ರ್ಯೆಸಿಕೊಂಡು ಸಾಹಿತ್ಯಾವಲೋಕನವನ್ನು ಈ ಕೆಳಗಿನಂತೆ ಮಾಡಲಾಗಿದೆ.

Ammannaya K.K. “Housing development in India Problems, Issues and Challenges and Strategies for addressing And” ಎಂಬ   ಲೇಖನದಲ್ಲಿ 2001ರಲ್ಲಿ 24.9 ಕೋಟಿಯಿಂದ 2011ರಲ್ಲಿ 33.1 ಕೋಟಿಗೆ ವಸತಿ ದಾಸ್ತಾನು ಹೆಚ್ಚಾಗಿದ್ದರೂ ವಸತಿ ಕೊರತೆಯನ್ನು ಗಂಭೀರ ಸಮಸ್ಯೆಯೆಂದು ಪರಿಗಣಿಸಿದೆ. ಆದ್ದರಿಂದ ಶೇ.33ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ ಎನ್ನುತ್ತಾರೆ.ಪ್ರಸ್ತುತ ಮನೆಗಳ ಲಭ್ಯತೆ ಮತ್ತು ನಿಜವಾದ ಅಗತ್ಯತೆಯ ನಡುವೆ ಹೊಂದಾಣಿಕೆಯಲ್ಲಿ ಎಂದಿದ್ದಾರೆ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರು ಮತ್ತು ಕಡಿಮೆ ಆದಾಯದ ವರ್ಗದವರು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಕೊರತೆಯನ್ನು ಶೇ.90ರಷ್ಟಿದೆ ಎಂದಿದ್ದಾರೆ ಹಾಗೂ ಬಡತನ ರೇಖೆಗಿಂತ ಕೆಳಗಿನವರ ಕೊರತೆ.ಭಾರತದಲ್ಲಿನ ವಸತಿ ಕೊರತೆಯನ್ನು ನೀಗಿಸಲು ಸೂಕ್ತ ಕಾರ್ಯತಂತ್ರಗಳನ್ನು ಪ್ರಾರಂಭಿಸಲು ಸರ್ಕಾರಕ್ಕೆ ಲೇಖಕರು ಸೂಚಿಸಿದ್ದಾರೆ.

Arjun Kumar (2014) “Estimating Rural Housing Shortage”  ಎಂಬ  ಲೇಖನದಲ್ಲಿ  2012ರಲ್ಲಿ ಗ್ರಾಮೀಣ ವಸತಿ ಕೊರತೆಯನ್ನು ಅಂದಾಜು ಮಾಡಿದ್ದಾರೆ. ಇತ್ತೀಚಿನ ಜನಗಣತಿ 2011ರ ಜನಗಣತಿ ದಾಖಲೆಯ ದತ್ತಾಂಶ ಪ್ರಕಾರ ಲೇಖಕರ ಅಧ್ಯಯನವು ಗ್ರಾಮೀಣ ವಸತಿ ಸ್ಟಾಕ್ ಮತ್ತು ಮನೆಗಳ ಬೆಳವಣಿಗೆಯ ದರಗಳು ಕಾಲಾನಂತರದಲ್ಲಿ ಕುಸಿದಿದೆ ಎಂದು ಬಹಿರಂಗ ಪಡಿಸಿದೆ.ಗ್ರಾಮೀಣ ವಸತಿ ಸ್ಟಾಕ್‍ಗಳ ಬೆಳವಣಿಗೆಯ ದರವು ಗ್ರಾಮೀಣ ಕುಟುಂಬಗಳಿಗಿಂತ ಹೆಚ್ಚಾಗಿದೆ ಎಂದು ಲೇಖಕರು ಗಮನಿಸಿದ್ದಾರೆ.ಇದು ಒಂದು ಅವಧಿಯಲ್ಲಿ ಮನೆಗಳು ಮತ್ತು ವಸತಿ ಸ್ಟಾಕ್‍ಗಳ ನಡುವಿನ ಅಂತರವನ್ನು ಕಡಿಮೆ ಗೊಳಿಸಿದೆ ಎಂದಿದ್ದಾರೆ.ಇದಲ್ಲದೆ ತಾತ್ಕಾಲಿಕ ಮನೆಗಳಲ್ಲಿ ವಾಸಿಸುವ ಮನೆಗಳ ಸಂಖ್ಯೆ 2001 ಮತ್ತು 2011ರಲ್ಲಿ ಕುಸಿಯಿತು ಎಂದಿದ್ದಾರೆ.

Avatar Singh Sahota (2005), “Schemes on Rural Housing”,   ಎಂಬ ಲೇಖನದಲ್ಲಿ ಜನಸಂಖ್ಯೆಯ ಬೆಳವಣಿಗೆ ಮತ್ತು ಹಳೆಯ ವಸತಿ ದಾಸ್ತಾನು ಹದಗೆಟ್ಟಿರುವುದರಿಂದ ಮತ್ತು ಎಲ್ಲರಿಗೂ ವಸತಿ ನೀಡುವ ಸರ್ಕಾರದ ಬದ್ಧತೆಯ ಪರಿಣಾಮವಾಗಿ ವಾಸಿಸುವ ಘಟಕಗಳ ಅಗತ್ಯವನ್ನು ಒತ್ತಿ ಹೇಳಿದರು ಹಾಗೂ ಲೇಖಕರು ಗ್ರಾಮೀಣ ಬಡವರಿಗೆ ವಿವಿಧ ವಸತಿ ಯೋಜನೆಗಳು ಮತ್ತು ರಾಜ್ಯಸರ್ಕಾರವು ಕೈಗೊಂಡ ಉಪಕ್ರಮಗಳ ಮೌಲ್ಯಮಾಪನವನ್ನು ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಳ್ಳಬೇಕೆಂದು ಲೇಖಕರು ಒತ್ತಾಯಿಸಿದ್ದಾರೆ.

Chouban S.P., “Rural Housing and Improvement in Quality of Life”  ಎಂಬ ಲೇಖನದಲ್ಲಿ  ಗ್ರಾಮೀಣ ವಸತಿ ಯೋಜನೆಗಳ ಐತಿಹಾಸಿಕ ದೃಷ್ಠಿಕೋನಗಳನ್ನು ವಿಶ್ಲೇಷಿಸಿದ್ದಾರೆ ಹಾಗೂ ಗುಣಮಟ್ಟದಂತಹ ಜೀವನ ನಡೆಸಲು ಪ್ರಮುಖ ಲಕ್ಷಣಗಳನ್ನು ಸಹ ಅವರು ಹೇಳುತ್ತಾರೆ. ಅವುಗಳೆಂದರೆ ಮೂಲ ಸೌಕರ್ಯಗಳಾದ ಸುರಕ್ಷಿತ ಕುಡಿಯುವ ನೀರು, ರಸ್ತೆ, ಚರಂಡಿ ಗ್ರಾಮೀಣ ಪ್ರದೇಶದ ಬಡವರಿಗೆ ವಾಸಿಸುವ ಜೊತೆಗೆ ವಿವಿಧ ಸಚಿವಾಲಯಗಳು ಪ್ರಾರಂಭಿಸಿದ ಬಡತನ ನಿರ್ಮೂಲನಾ ಕಾರ್ಯಕ್ರಮಗಳು ಮತ್ತು ಉದ್ಯೋಗ ಖಾತರಿ ಯೋಜನೆಗಳನ್ನು ಸಮನ್ವಯಗೊಳಿಸಿ ಯಶಸ್ಸನ್ನು ಹೊಂದಬೇಕು ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

Hare Krishna Singh , “Rural Housing and Indira Awas Yojana”   ಎಂಬ ಲೇಖನದಲ್ಲಿ ಗ್ರಾಮೀಣ ವಸತಿ ಯೋಜನೆಗಳು, ಇಂದಿರಾ ಆವಾಸ್ ಯೋಜನೆ ಮತ್ತು ಅವರ ಸಾಧನೆಯನ್ನು ವಿಶ್ಲೇಷಿಸುವ ಮೂಲಕ, ಗ್ರಾಮೀಣ ವಸತಿ ಯೋಜನೆಗಳ ಯಶಸ್ಸುಜನರ ಸಕ್ರಿಯ ಭಾಗವಹಿಸುವಿಕೆ, ಗ್ರಾಮೀಣ ನಿರುದ್ಯೋಗ, ಗ್ರಾಮೀಣ ಬಡತನ ನಿವಾರಣಾ ಕಾರ್ಯಕ್ರಮಗಳು ಮತ್ತು ಮನೆ ನಿರ್ಮಾಣಕ್ಕೆ ಕಡಿಮೆ ವೆಚ್ಚದ ತಂತ್ರಜ್ಞಾನವನ್ನು ಅವಲಂಭಿಸಿರುತ್ತದೆ ಎಂದು ಅವರು ಗಮನಿಸಿದ್ದಾರೆ.

Manipal, “Panchayat Raj Institutions and Rural Housing”  ಎಂಬ ಲೇಖನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ವಸತಿ ಕೊರತೆಯನ್ನು ವಿವರಿಸಿದ್ದಾರೆ. ಪಂಚಾಯತ್‍ಗಳು ಸ್ವತಃ ವಸತಿ ನೀಡಲು ಮುಂದೆ ಬರಬೇಕು ಎಂದು ಅವರು ವಾದಿಸಿದ್ದಾರೆ.ಗ್ರಾಮಗಳು ಮತ್ತು ಗ್ರಾಮಸಭೆಯನ್ನು ಸಕ್ರಿಯಗೊಳಿಸುವ ಮೂಲಕ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು.ಇದರ ಕೆಲಸವನ್ನು ಕೈಗೆತ್ತಿಕೊಳ್ಳುವಂತೆ ಅವರು ಪಂಚಾಯಿತಿಗಳಿಗೆ ಮನವಿ ಮಾಡಿದ್ದಾರೆ.

ಅಧ್ಯಯನ ಉದ್ದೇಶಗಳು :

  1. ವಸತಿಯೋಜನೆಯ ಬಗ್ಗೆ ಗ್ರಾಮೀಣ ಜನರಿಗಿರುವ ಅರಿವನ್ನು ಗುರುತಿಸುವುದು.
  2. ಆ ವಸತಿ ಯೋಜನೆಯನ್ನು ಜಾರಿಗೆ ತರುವಲ್ಲಿ ಗ್ರಾಮ ಪಂಚಾಯಿತಿಯ ಪಾತ್ರವನ್ನು ಗುರುತಿಸುವುದು

ಅಧ್ಯಯನದ ಮಹತ್ವ :

            ವಸತಿ ಯೋಜನೆಯ ಅನುಷ್ಠಾನ ಮತ್ತು ಗ್ರಾಮೀಣ ಬಡಜನರಿಗೆ ವಸತಿ ಕಲ್ಪಿಸಿಕೊಡುವುದರಲ್ಲಿ ಗ್ರಾಮ ಪಂಚಾಯಿತಿ ಪಾತ್ರದ ಕಡೆ ಹೆಚ್ಚು ಒತ್ತು ನೀಡಿದೆ ಹಾಗೂ ವಸತಿ ಯೋಜನೆಯ ಬಗ್ಗೆ ಗ್ರಾಮೀಣ ಜನರಿಗಿರುವ ಅರಿವನ್ನು ಗುರುತಿಸುತ್ತಿದ್ದೀಯೇ ಎಂಬುದನ್ನು ತಿಳಿಯಲು ಈ ಅಧ್ಯಯನವು ಸಹಾಯಕವಾಗಿದೆ.

ಅಧ್ಯಯನ ಕ್ಷೇತ್ರದ ವ್ಯಾಪ್ತಿ :

            ಪ್ರಸ್ತುತ ಅಧ್ಯಯನವು “ವಸತಿ  ಯೋಜನೆಯನ್ನು ಅನುಷ್ಟಾನಗೊಳಿಸುವಲ್ಲಿ ಗ್ರಾಮ ಪಂಚಾಯಿತಿಯ ಪಾತ್ರ” ಎಂಬ ವಿಷಯವನ್ನು ಕುರಿತಾಗಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಗಾಮ ಎಂಬ ಗ್ರಾಮವನ್ನು ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿದೆ. ಶಿಕಾರಿಪುರ ತಾಲ್ಲೂಕು ಕೇಂದ್ರವು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 52 ಕಿ.ಮೀ. ಅಂತರದಲ್ಲಿದೆ 5 ಹೋಬಳಿಗಳನ್ನೊಳಗೊಂಡಂತೆ 43 ಗ್ರಾಮ ಪಂಚಾಯಿತಿ ಇದೆ.

ಅಧ್ಯಯನದ ಮಾದರಿ :

            ಗಾಮ  ಗ್ರಾಮಪಂಚಾಯಿತಿಯು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಹೋಬಳಿಗೆ ಸೇರಿದ ಗ್ರಾಮ ಪಂಚಾಯಿತಿಯಾಗಿದೆ. ಶಿವಮೊಗ್ಗದಿಂದ 50 ಕಿ.ಮೀ ಹಾಗೂ ಶಿಕಾರಿಪುರದಿಂದ 8 ಕಿ.ಮೀ ದೂರದಲ್ಲಿದೆ. ಸದರಿ ಗಾಮ ಗ್ರಾಮ ಪಂಚಾಯಿತಿ ಎಂಬ ಏಕಜನ ವಸತಿ ಪ್ರದೇಶವನ್ನು ಹೊಂದಿದೆ. 2011ರ ಜನಗಣತಿಯ ಪ್ರಕಾರ  ಈ ಗ್ರಾಮ ಪಂಚಾಯಿತಿಯು ಒಟ್ಟು 2010 ಕುಟುಂಬಗಳಿದ್ದು ಒಟ್ಟು 8969 ಜನಸಂಖ್ಯೆ ಹೊಂದಿದೆ. ಜನಸಂಖ್ಯೆಯ ಆಧಾರದ ಮೇಲೆ ಈ ಗ್ರಾಮ ಪಂಚಾಯಿತಿಯು 12 ಸದಸ್ಯರನ್ನು ಹೊಂದಿದೆ. ಪ್ರಸ್ತುತ ನನ್ನ ಸಂಶೋಧನೆಗೆ ಗಾಮ ಗ್ರಾಮದಿಂದ 25ಫಲಾನುಭವಿಗಳನ್ನು ಸರಳಯಾದೃಚ್ಛಿಕ ಮಾದರಿ ವಿಧಾನದ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

 

 

ಸಂಶೋಧನಾ ತಂತ್ರಗಳು :

              ಪ್ರಸ್ತುತ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಂದರ್ಶನ ಮತ್ತು ಅನುಸೂಚಿಯ ಸಹಾಯದಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅವಲೋಕನ ವಿಧಾನದಲ್ಲಿ ಸಹಭಾಗಿ  ಅವಲೋಕನ ವಿಧಾನವನ್ನು ಬಳಕೆ ಮಾಡಿಕೊಳ್ಳುವುದರ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಹಾಗೂ ಮಾಧ್ಯಮಿಕ ಸಂಶೋಧನಾ ಆಕರಗಳಾದ ಸಂಶೋಧನಾ ಲೇಖನಗಳು, ಕರ್ನಾಟಕ ರಾಜ್ಯ ಸರ್ಕಾರದ ಗೆಜಿಟಿಯರ್, ಅಂತರ್ಜಾಲ, ಸಂಶೋಧನಾ ಪ್ರಬಂಧಗಳು ಮತ್ತು ಸಂಶೋಧನಾ ಕ್ಷೇತ್ರದ ಪ್ರತಿವರ್ತಿಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಮಾಹಿತಿ ವಿಶ್ಲೇಷಣೆ :

            ಸಂಶೋಧನಾ ವಿಧಾನದ ಎಲ್ಲಾ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ಸಾಂಕೇತಿಕರಿಸಿ, ಪಟ್ಟೀಕರಣ ಮಾಡಿ, ವರ್ಗೀಕರಿಸಿ ಸಂಖ್ಯಾ ಶಾಸ್ತ್ರೀಯ ದೃಷ್ಠಿಕೋನದಲಿ ಮಾಹಿತಿಯನ್ನು ವಿಶ್ಲೇಷಣೆ ಮಾಡಲಾಗಿದೆ.

ಕೋಷ್ಠಕ – 01: ಮನೆಯ ಸ್ವರೂಪ

ಮನೆಯ ಸ್ವರೂಪ

ಸಂಖ್ಯೆ

ಶೇಕಡ

ಹಂಚು

18

72%

ಗುಡಿಸಲು

-

-

ಷೆಡ್

-

-

ಆರ್.ಸಿ.ಸಿ.

07

28%

ಒಟ್ಟು

25

100%

 

ಮೂಲ ಆಧಾರ : ಪ್ರಾಥಮಿಕ ಮಾಹಿತಿ

            ಈ ಮೇಲ್ಕಂಡ ಕೋಷ್ಟಕ-01ರಲ್ಲಿ ಒಟ್ಟು 25 ಮಾಹಿತಿದಾರರ ಮನೆಯ ಸ್ವರೂಪಕ್ಕೆ ಸಂಬಂಧಿಸಿದಂತೆ ಶೇಕಡಾ 72%ರಷ್ಟು ಹಂಚಿನಮನೆಗಳು ಕಂಡು ಬಂದರೆ ಹಾಗೆಯೇ ಯಾವುದೇ ಗುಡಿಸಲು ಮತ್ತು ಷೆಡ್ ರೀತಿಯಾದಂತಹ ಮನೆಗಳು ಕಂಡು ಬರುವುದಿಲ್ಲ. ಹಾಗೆಯೇ ಶೇಕಡಾ 28%ರಷ್ಟು ಆರ್.ಸಿ.ಸಿ ಕಂಡು ಬರುತ್ತದೆ.

ಕೋಷ್ಠಕ – 02: ವಾಸಿಸುವ ಸ್ವಂತ ಮನೆಯ ವಿವರ

ಸ್ವಂತ ಮನೆಯ ವಿವರ

ಸಂಖ್ಯೆ

ಶೇಕಡ

ಹೌದು

20

80%

ಇಲ್ಲ

05

20%

ಒಟ್ಟು

25

100%

 

ಮೂಲ ಆಧಾರ : ಪ್ರಾಥಮಿಕ ಮಾಹಿತಿ

            ಈ ಮೇಲ್ಕಂಡ ಕೊಷ್ಠಕಕ್ಕೆ ಸಂಬಂಧಿಸಿದಂತೆ ಗಾಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳು ಶೇಕಡಾ 80%ರಷ್ಟು ಹೌದು ಎಂದು ಹೇಳಿದ್ದಾರೆ. ಏಕೆಂದರೆ ಇಲ್ಲಿ ಸಂಪೂರ್ಣವಾಗಿ ವಸತಿ ಯೋಜನೆಯನ್ನು ಪಡೆದಿದ್ದಾರೆ. ಹಾಗೆಯೇ ಶೇ. 20%ರಷ್ಟು ಫಲಾನುಭವಿಗಳು ಇಲ್ಲ ಎಂದು ತಿಳಿಸಿದ್ದಾರೆ. ಏಕೆಂದರೆ ಇಲ್ಲಿ ಕೆವರು ಅತಿಬಡವರು ಮತ್ತು ಮಧ್ಯವ್ಯವಸ್ಥೆಯಲ್ಲಿದ್ದು ಅವರಿಗೆ ಸರ್ಕಾರದಿಂದ ಯಾವುದೇ ಯೋಜನೆ ಜಾರಿಗೆ ತಂದಿಲ್ಲ.

ಕೋಷ್ಠಕ – 03 : ವಸತಿ ಯೋಜನೆಯ ಅನುಷ್ಠಾನದಲ್ಲಿ ಗ್ರಾಮ ಪಂಚಾಯಿತಿಯ ಪಾತ್ರ

ಪ್ರತಿಕ್ರಿಯೆ

ಸಂಖ್ಯೆ

ಶೇಕಡ

ಹೌದು

22

88%

ಇಲ್ಲ

03

12%

ಒಟ್ಟು

25

100%

 

ಮೂಲ ಆಧಾರ : ಪ್ರಾಥಮಿಕ ಮಾಹಿತಿ

            ಈ ಮೇಲ್ಕಂಡ ಕೋಷ್ಟಕದಲ್ಲಿ ವಸತಿ ಯೋಜನೆ ಜಾರಿಗೆ ತರುವಲ್ಲಿ ಗ್ರಾಮ ಪಂಚಾಯಿತಿಯ ಪಾತ್ರದ ಕುರಿತು ಗಾಮ ಗ್ರಾಮದಲ್ಲಿ ಶೇ 88%ರಷ್ಟು ಪ್ರತಿವರ್ತಿಗಳು ಹೌದು ಎಂದು ಹಾಗೂ ಶೇ 12%ರಷ್ಟು ಪ್ರತಿವರ್ತಿಗಳು  ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಏಕೆಂದರೆ ಕೆಲವು ಪ್ರತಿವರ್ತಿಗಳು ಫಲಾನುಭವಿಗಳು ಆಗಿದ್ದರೂ ಅಲ್ಲಿಯ ವಿರೋಧ ಪಕ್ಷವನ್ನು ವಿರೋದಿಸುತ್ತಾರೆ.

ಅಧ್ಯಯನದಿಂದ ಕಂಡುಕೊಂಡಂತಹ ಅಂಶಗಳು

  1. ವಸತಿ ಸಮಸ್ಯೆಗಳನ್ನು ಗಮನಿಸಿ ಅವುಗಳಿಗೆ ಪರಿಹಾರಗಳನ್ನು  ಕಂಡುಕೊಳ್ಳುವ ಜವಾಬ್ದಾರಿ ಗ್ರಾಮ ಪಂಚಾಯಿತಿಯ ಮೇಲಿದೆ. ಆದರೆ ಕ್ಷೇತ್ರಾಧ್ಯಯನದ ಮೂಲಕ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಗ್ರಾಮ ಪಂಚಾಯಿತಿಯಲ್ಲಿನ ರಾಜಕೀಯ ಪಕ್ಷಗಳ ಹಸ್ತಕ್ಷೇಪ, ನಾಯಕರ ಸ್ವಾರ್ಥ, ಗುಂಪುಗಾರಿಕೆ, ಜಾತಿ-ಪ್ರಭಾವಗಳಿಂದ ಗ್ರಾಮ ಪಂಚಾಯಿತಿಯು ತನ್ನ ಜವಾಬ್ದಾರಿಯುತ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿಲ್ಲ ಎಂದು ತಿಳಿದು ಬಂದಿದೆ.
  2. ಗ್ರಾಮಸಭೆಗಳು ಸಮಯಕ್ಕೆ ಸರಿಯಾಗಿ ಸಭೆ ಸೇರುತ್ತಿಲ್ಲ. ಈ ಸಭೆಯು ಕೇವಲ ಫಲಾನುಭವಿಗಳ ಗುರುತಿಸುವಿಕೆಗೆ ಮತ್ತು ಕಾಮಾಗಾರಿಗಳ ಗುರುತಿಸುವಿಕೆಗೆ ಸೀಮಿತಗೊಂಡಿದೆ.
  3. ಜಾತಿಯ ಪ್ರಾಬಲ್ಯ ಮತ್ತು ಕ್ಷೇತ್ರದ ಗಣ್ಯರ ಪ್ರಭಾವದಿಂದ ಆಗುವಂತಹ ಒಳರಾಜಕೀಯದಿಂದ ಅರ್ಹ ಫಲಾನುಭವಿಗಳು ಆಯ್ಕೆಯಾಗುವುದಿಲ್ಲ.
  4. ವಸತಿ ಯೋಜನೆಯ ಯಶಸ್ವಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದರೆ ಮಾತ್ರ ಸಾಧ್ಯವಾಗುವುದಿಲ್ಲ. ಬದಲಾಗಿ ದೊರೆತ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುವುದರ ಮೇಲೆ ನಿಂತಿದೆ. ಆದರೆ ಸಂದರ್ಶನದಿಂದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ.

ಸಲಹೆಗಳು :

  1. ವಸತಿ ಯೋಜನೆಯನ್ನು ಜಾರಿಗೆ ತರುವಾಗ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು.
  2. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮತ್ತು ಅನಕ್ಷರಸ್ಥರಿಗೆ ಈ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು.
  3. ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಿಡುಗಡೆ  ಆದಂತಹ ಹಣವನ್ನು ಯೋಜನೆಗೆ ಫಲಾನುಭವಿಗಳು ಪ್ರಾಮಾಣಿಕವಾಗಿ ಬಳಸಬೇಕು.
  4. ವಸತಿ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕ ನಿಯಮವನ್ನು ಅನುಸರಿಸಬೇಕು.
  5. ಮಿತವ್ಯಯ ಮತ್ತು ಹೆಚ್ಚು ಬಲಯುತವಾದ ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡಬೇಕು.

             ಒಟ್ಟಾರೆಯಾಗಿ ವಸತಿ ಯೋಜನೆಯಲ್ಲಿ ಕೆಲವೊಂದು ನಿಯಮಗಳು ನೀತಿಗಳನ್ನು ಹಾಕಿಕೊಂಡು ಅದರಂತೆಯೇ ನಡೆದುಕೊಳ್ಳಬೇಕು. ಆಗ ಯೋಜನೆ ಯಶಸ್ವಿಯಾಗುತ್ತದೆ. ಈ ವಸತಿ ಯೋಜನೆ ಜಾರಿಗೆ ತರುವಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು, ಫಲಾನುಭವಿಗಳು, ಸಾಮಾನ್ಯ ಜನರು ಈ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಬಹುದು. ಎಲ್ಲರೂ ಈ ಆಶ್ರಯ ಯೋಜನೆಗೆ ಸ್ಪಂದಿಸಬೇಕು. ಜೊತೆಗೆ ಈ ವಸತಿ ಯೋಜನೆಯಲ್ಲಿ ಸಮಸ್ಯೆಗಳನ್ನು ಗುರುತಿಸಿ ಆ ಸಮಸ್ಯೆಗೆ ಕಾರಣಗಳನ್ನು ಗುರುತಿಸಿ ಅವುಗಳನ್ನು ಉತ್ತಮಗೊಳಿಸಲು ಕೆಲವೊಂದು ಸಲಹೆಗಳನ್ನು ನೀಡಲಾಗಿದೆ.

ಗ್ರಂಥ ಸೂಚಿ

  1. Abhas K. Jha Jennifer Duyne and Stephn (2010): “Safer Homes and Communities”, Sin Publications, PP 59-62.
  2. Aditya Kumar Patra (2008) : “Rural Development Rural Housing Programs and Panchyat Raj Institutions”, Kanishka Publishers, PP 155-156
  3. Bhatt S.C (2010), “Land Housing and People”, Kalpaz Publications, PP 584-588.
  4. Shylaja N. (2000), “Rural Housing Socio- Economic Impact, Agrobios Publication,  PP 178.
  5. Anjana Chaudhary (2018), Social Research Methodology, Wisdom Press, PP. 42
  6. Paul, Sujith Kumar (2015), “Rural Development”, Concept Publishing, New Delhi.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal