Tumbe Group of International Journals

Full Text


ಕನ್ನಡ ಭಾಷೆ,ಸಾಹಿತ್ಯ ಮತ್ತು ರಾಜಕೀಯ ವಿದ್ಯಾಮಾನಗಳು

ಕರಿಬಸಣ್ಣ. ಟಿ.

ಸಹಾಯಕ ಪ್ರಧ್ಯಾಪಕರು, ಕನ್ನಡ ವಿಭಾಗ,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು.

 ಪ್ರಸ್ತಾವನೆ

 ಒಂದು ಸಾವಿರ ವರ್ಷಕ್ಕೂ ಮೀರಿದ ಸಾಹಿತ್ಯ ಸಮೃದ್ಧತೆ ಕನ್ನಡ ಸಾಹಿತ್ಯ ಚರಿತ್ರೆಗೆ ಇದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ಆಯಾ ಕಾಲಘಟ್ಟದ ರಾಜಕೀಯ ಪರಿಸ್ಥಿತಿಗಳೊಂದಿಗೆ ಸಾಹಿತ್ಯವು ಬೆಸೆದುಗೊಳ್ಳುತ್ತದೆ. ಸಾಹಿತ್ಯ ಚರಿತ್ರೆಯಲ್ಲಿ ಕಾಲದಿಂದ ಕಾಲಕ್ಕೆ ಭಾಷಾರೂಪ, ಛಂದೋರೂಪಗಳಲ್ಲಿ ಬದಲಾವಣೆಯನ್ನು ಗುರುತಿಸಬಹುದಾಗಿದೆ. ಈ ಬದಲಾವಣೆಗೆ ಪ್ರಮುಖ ಕಾರಣ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳಲ್ಲಿ ಕಂಡು ಬಂದ ಬದಲಾವಣೆಗಳು. ಕನ್ನಡ ಸಾಹಿತ್ಯ ಪ್ರಮುಖವಾದ ಮತ ಧರ್ಮಗಳ ಪ್ರೇರಣೆಯಿಂದಲೂ ಬೆಳೆದು ಬಂದಿದೆ.

ಕೀ ವರ್ಡ್: ಕನ್ನಡ ಭಾಷೆ, ಸಾಹಿತ್ಯ, ರಾಜಕೀಯ ವಿದ್ಯಾಮಾನ, ಪಂಪಯುಗ, ಬಸವಯುಗ, ಹರಿಹರ ಯುಗ, ಕುಮಾರವ್ಯಾಸಯುಗ.

ಪಿಠೀಕೆ

ಜೈನ, ವೀರಶೈವ, ವೈಷ್ಣವಧರ್ಮಗಳ ಪ್ರಾಬಲ್ಯವಿದ್ದ ಸಂದರ್ಭದಲ್ಲಿ ಆಯಾ ಧರ್ಮದ ಪ್ರೇರಣೆ ಮತ್ತು ಪ್ರಭಾವಗಳಿಂದ ಸಾಹಿತ್ಯ ಸೃಷ್ಠಿಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಜೈನಯುಗ, ವೀರಶೈವಯುಗ, ವೈಷ್ಣವಯುಗ ಎಂದು ಕೂಡ ಕೂಡ ಧರ್ಮವನ್ನೆ ಮೂಲಮಾನವನ್ನಾಗಿಸಿಕೊಂಡು ಚರಿತ್ರೆಯನ್ನು ವಿಭಾಗಿಸಿ ನೋಡಬಹುದಾಗಿದೆ.ಆದರೆ ಮತಧರ್ಮವನ್ನೆ ಮುಖ್ಯವಾಗಿಸಿಕೊಂಡು ಚರಿತ್ರೆಯನ್ನು ಅಭ್ಯಾಸ ಮಾಡುವುದು ಸರಿಯೆನಿಸುವುದಿಲ್ಲ. ಆಯಾ ಕಾಲದ ರಾಜಕೀಯ ಪರಿಸ್ಥಿಗಳು ಮುಖ್ಯವಾಗುತ್ತವೆ ಸಾಹಿತ್ಯ ಸಮೃದ್ಧವಾಗಿ ಬರಲು ರಾಜಕೀಯ ಸುಭದ್ರತೆಯೂ ಮುಖ್ಯವಾಗುತ್ತದೆ. ವ್ಯಕ್ತಿಕೇಂದ್ರಿತವಾಗಿಯೂ ಅಭ್ಯಾಸ ಮಾಡುವವರು ಪಂಪಯುಗ, ಬಸವಯುಗ, ಹರಿಹರ ಯುಗ, ಕುಮಾರವ್ಯಾಸಯುಗ ಎಂದು ಪರಂಪರೆ ನಿರ್ಮಿಸಿದವರನ್ನು ಮುಖ್ಯವಾಗಿಸಿಕೊಂಡು ನೋಡುತ್ತಾರೆ. ಕ್ಷಾತ್ರಯುಗ, ಮತಪ್ರಸಾರಯುಗ, ಸಾರ್ವಜನಿಕಯುಗ ಮತ್ತು ಆಧುನಿಕಯುಗ ಎಂದು ಕೂಡ ವಿಭಾಗಿಸುತ್ತಾರೆ. ಯಾವ ರೀತಿಯಿಂದ ವಿಭಾಗಿಸಿಕೊಂಡು ಅಭ್ಯಾಸ ಮಾಡಲು ಹೊರಟರೂ ಅಂದಿನ ಸಾಮಾಜಿಕ ರಾಜಕೀಯ ಪರಿಸ್ಥಿತಿಗಳು ರಾಜ, ರಾಜಾಶ್ರಯ, ಧರ್ಮ ಮತ್ತು ಪ್ರಭುತ್ವಗಳು ಸಾಹಿತ್ಯ ಸೃಷ್ಟಿಯನ್ನು ನೇರವಾಗಿ ಪ್ರಭಾವಿಸುತ್ತವೆ.

         ಕವಿಗೆ ಕಾವ್ಯ ನಿರ್ಮಾಣ ಮಾಡುವ ಸಹಜ ಸಾಮಥ್ರ್ಯವಿರುತ್ತದೆ. ಆದರೆ ಅದನ್ನು ಪೋಷಿಸುವ ವರ್ಗದ ಅವಶ್ಯಕತೆ ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ರಾಜಮನೆತನಗಳು ಸಾಹಿತ್ಯಕ್ಕೆ ಉದಾರವಾದ ಪ್ರೋತ್ಸಾಹ ನೀಡಿವೆ. ಕರ್ನಾಟಕದ ಪ್ರಮುಖ ರಾಜಮನೆತನಗಳಾದ ಕದಂಬರು, ಗಂಗರು, ರಾಷ್ಟ್ರಕೂಟರು, ಚಾಳುಕ್ಯರು, ಕಳಚೂರ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಅರಸರು ಸಾಹಿತ್ಯವನ್ನು ಪ್ರೋತ್ಸಾಹಿಸಿದ್ದಾರೆ. ಕವಿಗಳಿಗೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ರಾಜಾಸ್ಥಾನಗಳು ಅತ್ಯಂತ ಮುಖ್ಯವಾಗುತ್ತದೆ. ರಾಜರಿಗೆ ತಮ್ಮ ಕೀರ್ತಿ ಪ್ರತೀಷ್ಟೆ ಬೆಳಗಿಸಲು ತಮ್ಮ ಇತಿಹಾಸವನ್ನು ದಾಖಲಿಸಲು ಕವಿಗಳು ಬೇಕು. ಆಶ್ರಯ ಕೊಟ್ಟರೆಂಬ ಕಾರಣಕ್ಕೆ ಕರ್ನಾಟಕದ ರಾಜರು, ಸಾಮಂತರು ಕರ್ನಾಟಕದ ಚರಿತ್ರೆಯಲ್ಲಿ ಉಳಿದಿದ್ದಾರೆಂಬುದಕ್ಕೆ ಕೆಲವು ನಿದರ್ಶನಗಳನ್ನು ನೋಡಬಹುದು.

       ಸಾಮಂತರಾಜನಾದ ಅರಿಕೇಸರಿ ಪಂಪ ಮಹಾಕವಿಗೆ ಆಶ್ರಯ ನೀಡಿದ್ದನು. ಆ ಕಾರಣಕ್ಕಾಗಿ ಪಂಪ ‘ವಿಕ್ರಮಾರ್ಜುನ ವಿಜಯ’ ಕೃತಿಯ ಪ್ರಧಾನ ಪಾತ್ರವಾದ ಅರ್ಜುನನ ಪಾತ್ರದೊಂದಿಗೆ ಅರಿಕೇಸರಿಯನ್ನು ಮೇಳೈಸಿ ಕೃತಿರಚನೆ ಮಾಡಿದ್ದಾನೆ. ರನ್ನನಿಗೆ ಇಮ್ಮಡಿ ತೈಲಪ ಆಶ್ರಯ ನೀಡಿದ್ದ ಕಾರಣ ‘ಸಾಹಸಭೀಮ ವಿಜಯ’ ಕೃತಿಯಲ್ಲಿ ರನ್ನ ತನ್ನ ಆಶ್ರಯಧಾತನನ್ನು ಮೆರೆಸಿದ್ದಾನೆ. ಸಾಹಿತ್ಯ ಕೃತಿಗಳು ರಾಜರ ಔದಾರ್ಯ, ಸಾಮಾಜಿಕ ಸ್ಥಾನಮಾನ, ರಾಜರ ವೀರ-ಪರಾಕ್ರಮಗಳ ಚರಿತ್ರೆಯನ್ನು ದಾಖಲಿಸುತ್ತವೆ. ಕೆಲವರು ಜೈನರಿಗೆ, ಕೆಲವರು ವೀರಶೈವರಿಗೆ ಮತ್ತೆ ಕೆಲವರು ವೈಷ್ಣವರಿಗೆ ಕವಿ ರಾಜಾಶ್ರಯ ಮತ್ತು ಸನ್ಮಾನವನ್ನು ದೊರಕಿಸಿದ್ದಂತೆ ಕಂಡು ಬರುತ್ತದೆ. ಆದರೆ ವಿಜಯನಗರದ ಅರಸರು ಎಲ್ಲಾ ಧರ್ಮೀಯ ಕವಿಗಳಿU ಪ್ರೋತ್ಸಾಹ ನೀಡಿದ್ದರು. ಕನ್ನಡದ ರನ್ನ ಜನ್ನರಿಗೆ ಕವಿಚಕ್ರವರ್ತಿ

 ಎಂಬ ಬಿರುದುಗಳಿರುವುದು ನೋಡಿದಾಗ ರಾಜನು ಕವಿಯನ್ನು ಪ್ರೋತ್ಸಾಹಿಸಿ ಆ ಮೂಲಕ ಚರಿತ್ರೆಯಲ್ಲಿ ಉಳಿದಿರುವುದು ಸ್ಪಷ್ಟವಾಗುತ್ತದೆ. ಹತ್ತನೆಯ ಶತಮಾನದ ವೀರಯುಗದ ಕವಿಗಳಲ್ಲಿ ಇಲ್ಲದ ಕೆಚ್ಚು ಹನ್ನೆರಡನೆಯ ಶತಮಾನದ ಕವಿಗಳಲ್ಲಿ ಇದೆ. ರಾಜರ ಆಶ್ರಯವನ್ನು ನೇರವಾಗಿ ತಿರಸ್ಕರಿಸಿದ ಅಥವಾ ತಟಸ್ಥವಾಗಿ ನಿಂತ  ಕವಿಗಳು ಶರಣರು ಇಲ್ಲಿ ಮುಖ್ಯವೆನಿಸುತ್ತಾರೆ. ಹರಿಹರ, ಕುಮಾರವ್ಯಾಸ, ಲಕ್ಷ್ಮೀಶ, ಷಡಕ್ಷರಿಯಂತಹ ಭಕ್ತಕವಿಗಳಿಗೆ ಅವರ ಆರಾಧ್ಯ ದೈವ ಮುಖ್ಯವಾಗುತ್ತದೆ. ರಾಜನನ್ನು ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ರಾಜಾಸ್ಥಾನದ ಆಚೆ ನಿರ್ಮಾಣವಾದ ಸಾಹಿತ್ಯವು ಜನಸಾಮಾನ್ಯರಿಗೆ ಆಪ್ತವಾದ ರೀತಿಯನ್ನು ಮುಖ್ಯವಾಗಿ ಗಮನಿಸಬಹುದಾಗಿದೆ.

          ಹೊಸಗನ್ನಡ ಸಾಹಿತ್ಯ ಕಾಲದಲ್ಲಿ ಸಾಹಿತಿಗಳು ಯಾವ ಪ್ರಭಾವಗಳಿಗೂ ಒಳಗಾಗದೆ ಸಾಹಿತ್ಯವನ್ನು ರಚಿಸುವ ಮುಕ್ತ ವಾತಾವರಣ ದೊರೆಯಿತು. ಪ್ರಭುತ್ವ ಮತ್ತು ಇತರ ಪ್ರಭಾವಗಳಿಗೆ ಒಳಗಾಗದೆ ಯಾರ ಆಧೀನಕ್ಕೂ ಸಿಗದೇ ಸಾಹಿತ್ಯವು ರಚನೆಯಾಗುತ್ತಿದೆ. ಸಾಹಿತ್ಯ ಗುರುತಿಸಲು, ಪ್ರಕಟಿಸಲು ಮತ್ತು ಗೌರವಿಸಲು ಪ್ರತಿಷ್ಠಾನಗಳು, ಅಕಾಡೆಮಿಗಳು ಇವೆ. ಆದರೆ ಇವು ಮೊದಲಿನ ರಾಜಾಸ್ಥಾನಗಳ ಕೆಲಸವನ್ನೇನೂ ನಿರ್ವಹಿಸುವುದಿಲ್ಲ. ಕವಿ, ಸಾಹಿತಿ, ಹಣ, ಪ್ರಶಸ್ತಿ, ಗೌರವ ಯಾವ ಪ್ರಲೋಭನೆಗೂ ಒಳಗಾಗದೆ ಸ್ವತಂತ್ರವಾದ ನಿಲುವುಗಳನ್ನು ಇಟ್ಟುಕೊಂಡು ಕೃತಿ ರಚನೆ ಮಾಡುತ್ತಿರುವುದನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊರಕಿರುವ ‘ಅಭಿವ್ಯಕ್ತಿ’ ಸ್ವಾತಂತ್ರ್ಯದ ಉತ್ತಮ ನಿದರ್ಶನವೆಂದೇ ಪರಿಗಣಿಸಬಹುದಾಗಿದೆ.

          ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಕನ್ನಡ ಭಾಷೆ ಅಳಿಯುವ ಹಂತವನ್ನು ತಲುಪಿತ್ತು. ಅನ್ಯಭಾಷಾ ಮಾಧ್ಯಮಗಳು ಅನಿವಾರ್ಯವಾಗಿ ಹುಟ್ಟಿಕೊಂಡವು. ಅನಂತರ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿ ಸಕಾಲಿಕವಾದ ಹೋರಾಟವು ಪ್ರಾರಂಭವಾಯಿತು. ಕನ್ನಡವು ಜನರ ಭಾಷೆಯಾಗಿರುವ ಕಾರಣ ಆಡಳಿತವು ಅದೇ ಭಾಷೆಯಲ್ಲಿರಬೇಕೆಂದು ಪ್ರಯತ್ನಿಸಲಾಯಿತು. ಕನ್ನಡ ಶಾಲೆಗಳು ಧಾರವಾಡದಲ್ಲಿ ಆರಂಭವಾದವು.  1856 ರ ವೇಳೆಗೆ ಕನ್ನಡ ಕಲಿಕೆಗೆ ಹೆಚ್ಚಿನ ಮಹತ್ವ ದೊರೆತು ಕರ್ನಾಟಕದ ಏಕೀಕರಣದ ಕನಸು ಮೊಳಕೆಯೊಡೆಯಿತು. ಕರ್ನಾಟಕದಲ್ಲಿ 1890 ರಲ್ಲಿ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಸ್ಥಾಪನೆಗೊಂಡಿತು. ಸಾಹಿತಿಗಳು, ಕನ್ನಡಾಭಿಮಾನಿಗಳು ಹಂತ ಹಂತವಾಗಿ ಏಕೀಕರಣದ ಚಳುವಳಿಯನ್ನು ನಡೆಸಿದರು. ಈ ಸಂಘ ಪಡೆದ ಅಪೂರ್ª ಸಂಘಟನೆಗಾರ ಆಲೂರು ವೆಂಕಟರಾಯರು 1715 ರಲ್ಲಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ ವಿದ್ಯಾವರ್ಧಕ ಸಂಘದೊಂದಿಗೆ ಸೇರಿ ಏಕೀಕರಣಕ್ಕಾಗಿ ಶ್ರಮಿಸಿತು. ‘ಕರ್ನಾಟಕತ್ವ’ ಎಂಬುದು ಕೇವಲ ದೇಶಾಭಿಮಾನವಲ್ಲ, ಭಾಷಾಭಿಮಾನವೂ ಅಲ್ಲ ಇವುಗಳೆಲ್ಲವನ್ನು ಮೀರಿದ ಪರಿಶುದ್ಧವಾದ ಪರಿಕಲ್ಪನೆ ಎಂದು ಹೋರಾಟಗಾರರು ಮನಗಂಡರು. ಜನರನ್ನು ಉರಿದುಂಭಿಸುವ ಕನ್ನಡ ಗೀತೆಗಳು ರಚನೆಯಾದವು. 1924 ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು..” ಎಂಬ ಗೀತೆ ಪ್ರಾರ್ಥನಾ ಗೀತೆಯಾಗಿ ಮೂಡಿಬಂದಿತ್ತು. ಏಕೀಕರಣದ ನಂತರ ಈ ಗೀತೆ “ಉದಯವಾಯಿತು ನಮ್ಮ ಚೆಲುವ ಕನ್ನಡನಾಡು” ಎಂದು ರೂಪಾಂತರಗೊಂಡಿತು. ಕನ್ನಡ ಕವಿ ವೈಭವ ಪರಂಪರೆಯನ್ನು ರೂಪಗೊಳಿಸಿದ ರಾ ನರಸಿಂಹಾಚಾರ್ಯರು ‘ಕನ್ನಡ ಕವಿಚರಿತೆ’ ರಚಿಸಿಕೊಟ್ಟರು. ಗೋವಿಂದ ಪೈ, ಬಿಎಂಶ್ರೀ, ಬೇಂದ್ರೆ, ಕುವೆಂಪು ಮೊದಲಾದವರು ಕನ್ನಡದ ಏಳಿಗೆಗಾಗಿ ಶ್ರಮಿಸಿದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕುವೆಂಪು ಕವಿತೆಯೊಂದರ ಮೂಲಕವೇ ಅದಕ್ಕೆ ಉತ್ತರವನ್ನು ನೀಡುತ್ತಾರೆ. ಅದೇ ‘ಅಖಂಢ ಕರ್ನಾಟಕ’ ಕವನ

                  ‘ನೃಪತುಂನೇ ಚಕ್ರವರ್ತಿ

                  ಪಂಪನಿಲ್ಲಿ ಮುಖ್ಯಮಂತ್ರಿ

                  ರನ್ನ ಜನ್ನ ನಾಗವರ್ಮ

                  ರಾಘವಾಂಕ ಹರಿಹರ ಬಸವೇಶ್ವರ

                  ನಾರಣಪ್ಪ ಸರ್ವಜ್ಞ ಷಡಕ್ಷರ......   ‘ಅಖಂಡ ಕರ್ನಾಟಕ’ ನಾಲ್ಕು ದಿನಗಳ ಕೂಗಾಟದ ರಾಜಕೀಯ ನಾಟಕವಲ್ಲ. ಇದಕ್ಕಾಗಿ ದೇವಗಾಂಧಿಯೇ ಹರಸಿದ್ದಾನೆ. ನಾಡನ್ನು ಆಳಲು ಯಾವುದೇ ಸಚಿವ ಮಂಡಲ ಬಂದರೂ ಅದು ಶಾಶ್ವತವಲ್ಲ. ಒಂದಲ್ಲಾ ಒಂದು ಸಮಯಕ್ಕೆ ಸಂದು ಹೋಗಲೇಬೇಕು. ಕನ್ನಡಮ್ಮನಿಗಾಗಿ ಇಲ್ಲಿ ಸರಸ್ವತಿಯೇ ಒಂದು ನಿತ್ಯ ಸಚಿವ ಮಂಡಲವನ್ನು ರಚಿಸಿಕೊಟ್ಟಿದ್ದಾಳೆ. ಎಂದು ಹೇಳುತ್ತಾ ಕನ್ನಡಕ್ಕಾಗಿ ದೀಕ್ಷೆ ಸ್ವೀಕರಿಸಿ ನಾಡಿನ ರಕ್ಷಣೆಗೆ ಪಣತೊಡಬೇಕೆಂದು ಹೇಳಿದ್ದಾರೆ.   

          ಕರ್ನಾಟಕವು ಎಲ್ಲಾ ಚಳುವಳಿಗಳಲ್ಲಿಯೂ ಮುಂದೆ ನಿಂತು ಹೋರಾಟ ಮಾಡಿದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕøತಿಕ, ರಾಜಕೀಯ ಎಲ್ಲ ಬಗೆಯ ಚಳುವಳಿಗೆ ಕರ್ನಾಟಕ ವೇದಿಕೆ ಒದಗಿಸಿಕೊಟ್ಟಿದೆ. ಹನ್ನೆರಡನೇ ಶತಮಾನದಷ್ಟು ಹಿಂದೆಯೇ ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಮೂಡಿದ ವಚನ ಚಳುವಳಿ, ಸಾಮಾಜಿಕ ಧಾರ್ಮಿಕ ತಳಹದಿಯಲ್ಲಿ ರೂಪುಗೊಂಡ ದಾಸಚಳುವಳಿ, ಬಂಡಾಯ ಚಳುವಳಿ,ಮಹಿಳಾ ಚಳುವಳಿ ಮುಖ್ಯವಾಗಿ ಸಾಹಿತ್ಯ ಚರಿತ್ರೆಯಲ್ಲಿ ,ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸದೊಂದು ಮನ್ವಂತರವನ್ನೇ ಸೃಷ್ಟಿಸಿಬಿಟ್ಟಿವೆ. ಈ ಎಲ್ಲಾ ಸಂದರ್ಭದಲ್ಲಿಯೂ ಕಥೆ,ಕಾದಂಬರಿ,ನಾಟಕ, ಕಾವ್ಯ, ಪ್ರಬಂಧ ಮುಂತಾದ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃತಿಗಳು ಹೊರಬಂದಿದ್ದು ಎಲ್ಲಾ ರಾಜಕೀಯ ವಿದ್ಯಾಮಾನಗಳನ್ನೂ ಆಯಾ ಕಾಲಘಟ್ಟದ ಕೃತಿಗಳಲ್ಲಿ ದಾಖಲಿಸುವಲ್ಲಿ ಯಶಸ್ವಿಯಾಗಿವೆ ಎಂದೇ ಹೇಳಬಹುದು.

ಪರಾಮರ್ಶನ ಗ್ರಂಥಗಳು

  1. ಕನ್ನಡ ಸಾಹಿತ್ಯ ಚರಿತ್ರೆ- ಜಿ.ಎಸ್.ಶಿವರುದ್ರಪ್ಪ.
  2. ಕನ್ನಡ ಸಂಸ್ಕøತಿ – ದೇಜಗೌ, ಪ್ರಸಾರಾಂಗ ಬೆಂಳೂರು.ವಿ ವಿ,2001
  3. ಕನ್ನಡ ತಾಯಿಗೆ ನುಡಿನಮನ - ಸಂ ಪ್ರೊ. ಎಲ್.ಎಸ್. ಶೇಷಗಿರಿ ರಾವ್, ಪ್ರಸಾರಾಂಗ ಕನ್ನಡ. 


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal