Tumbe Group of International Journals

Full Text


ಹಂಪಿ ಪರಿಸರದ ಸ್ಥಳೀಯ ಪುರಾಣಗಳ ಸಾಂಸ್ಕೃತಿಕ ಒಳನೋಟ

ನೀಲಪ್ಪ. ಎಸ್

ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ

ಜಾನಪದ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583276.


ಪ್ರಸ್ತಾವನೆ

ಪ್ರಪಂಚದ ಎಲ್ಲಾ ಸಮಾಜದಲ್ಲಿರುವ ಜನಗಳು ಒಂದಲ್ಲೊಂದು ಬಗೆಯ ಪುರಾಣಗಳಿವು ಕಂಡು ಬರುವವು. ಪುರಾಣಗಳನ್ನು ಮನುಷ್ಯ ಸಂಸ್ಕೃತಿಯ ಮುಖ್ಯ ಅಂಶವೆಂದು ಕರೆಯಬಹುದು. ಆದರೆ ಪುರಾಣಗಳ ಸ್ವರೂಪ, ಸಂಖ್ಯೆ ಮತ್ತು ಅವುಗಳ ವೈವಿಧ್ಯೆತೆಯ ಎಷ್ಟಿದೆ ಎಂದರೆ ಎಲ್ಲಾ ಪುರಾಣಗಳಿಗೂ ಸರಿಹೊಂದಂತೆ ಸಾಮಾನ್ಯ ಲಕ್ಷಣಗಳನ್ನು ಹೇಳುವುದೆ ಕಷ್ಟದ ಕೆಲಸವಾಗಿರುತ್ತದೆ, ಜಗತ್ತಿನ ಬಹುಪಾಲು ಜನರು ಈಗಲೂ ಪುರಾಣಗಳನ್ನು ನಂಬುತ್ತಾರೆ ಎಲ್ಲಾ ದೇಶಗಳ ಪುರಾಣಗಳನ್ನು ಒಂದಡೆ ಕಲೆ ಹಾಕಿ ಅವುಗಳನ್ನು ತೌಲನಿಕವಾಗಿ ಆಭ್ಯಾಸಿಸುವ ತನಿಕ ಒಂದು ನಿಶ್ಚಿತ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲಾ, ಆದರೆ ಒಂದಂತು ಸತ್ಯ, ಆದರೆ ಯಾವುದೆ ಒಂದು ಸಮುದಾಯಕ್ಕೆ ಸೇರಿದ ಪುರಾಣಗಳು ಆಯಾ ಜನಸಮುದಾಯವು ತನ್ನ ಬಗ್ಗೆ ತಾನು ಇಟ್ಟುಕೊಂಡಿರುವ ಕಲ್ಪನೆಗಳನ್ನು ವ್ಯೆಕ್ತಪಡಿಸುತ್ತಾವೆ, ತಾವು ಯಾರು ತಾವು ಏಕೆ, ಹೇಗಿದ್ದೆವೆ ಎಂಬುವುದನ್ನು ಆ ಜನ ಕಂಡುಕೊಳ್ಳಲು ಮಾಡಿದ ಪ್ರಯತ್ನಗಳನ್ನು ಪುರಾಣಗಳು ತೊರಿಸುತ್ತಾವೆ.

ಕೀ ವರ್ಡ್: ಪುರಾಣ, ಸಾಂಸ್ಕೃತಿಕ ಚರಿತ್ರೆ, ಸೃಷ್ಠಿ ಪುರಾಣ, ಮೌಲ್ಯಾದರ್ಶ, ಕಥಾನಕ, ಸಾಂಸ್ಕೃತಿಕ ವೀರ

ಪಿಠೀಕೆ

ಪ್ರಪಂಚದ ಎಲ್ಲಾ ಸಮಾಜದಲ್ಲಿರುವ ಜನಗಳು ಒಂದಲ್ಲೊಂದು ಬಗೆಯ ಪುರಾಣಗಳಿವು ಕಂಡು ಬರುವವು. ಪುರಾಣಗಳನ್ನು ಮನುಷ್ಯ ಸಂಸ್ಕೃತಿಯ ಮುಖ್ಯ ಅಂಶವೆಂದು ಕರೆಯಬಹುದು. ಆದರೆ ಪುರಾಣಗಳ ಸ್ವರೂಪ, ಸಂಖ್ಯೆ ಮತ್ತು ಅವುಗಳ ವೈವಿಧ್ಯೆತೆಯ ಎಷ್ಟಿದೆ ಎಂದರೆ ಎಲ್ಲಾ ಪುರಾಣಗಳಿಗೂ ಸರಿಹೊಂದಂತೆ ಸಾಮಾನ್ಯ ಲಕ್ಷಣಗಳನ್ನು ಹೇಳುವುದೆ ಕಷ್ಟದ ಕೆಲಸವಾಗಿರುತ್ತದೆ, ಜಗತ್ತಿನ ಬಹುಪಾಲು ಜನರು ಈಗಲೂ ಪುರಾಣಗಳನ್ನು ನಂಬುತ್ತಾರೆ ಎಲ್ಲಾ ದೇಶಗಳ ಪುರಾಣಗಳನ್ನು ಒಂದಡೆ ಕಲೆ ಹಾಕಿ ಅವುಗಳನ್ನು ತೌಲನಿಕವಾಗಿ ಆಭ್ಯಾಸಿಸುವ ತನಿಕ ಒಂದು ನಿಶ್ಚಿತ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲಾ, ಆದರೆ ಒಂದಂತು ಸತ್ಯ, ಆದರೆ ಯಾವುದೆ ಒಂದು ಸಮುದಾಯಕ್ಕೆ ಸೇರಿದ ಪುರಾಣಗಳು ಆಯಾ ಜನಸಮುದಾಯವು ತನ್ನ ಬಗ್ಗೆ ತಾನು ಇಟ್ಟುಕೊಂಡಿರುವ ಕಲ್ಪನೆಗಳನ್ನು ವ್ಯೆಕ್ತಪಡಿಸುತ್ತಾವೆ, ತಾವು ಯಾರು ತಾವು ಏಕೆ, ಹೇಗಿದ್ದೆವೆ ಎಂಬುವುದನ್ನು ಆ ಜನ ಕಂಡುಕೊಳ್ಳಲು ಮಾಡಿದ ಪ್ರಯತ್ನಗಳನ್ನು ಪುರಾಣಗಳು ತೊರಿಸುತ್ತಾವೆ.

ಮಾನವನು ಯಾವಾಗ ತನ್ನ ಸುತ್ತಲಿನ ಪರಿಸರದಲ್ಲಿ ಜರುಗುವ ಘಟಾನಾವಳಿಗಳನ್ನು ಪ್ರಶ್ನಾರ್ಥಕವಾಗಿ ನೋಡತೋಡಗಿದನೊ ಅದೇ ಸಂದರ್ಭದಲ್ಲಿ ಅವನಿಗೆ ಈ ಸೃಷ್ಠಿಯ ಹಿಂದಿನ ಕಾಣದ ಕೈ ಬಗ್ಗೆಯ ಯೋಚನೆ ಮೂಡಿದಂತಿದೆ, ಆ ಕಾರಣದಿಂದ ತನ್ನ ಕೈಯನ್ನೆ ಅವನು ದೇವರ ಸ್ಥಾನಕ್ಕೆ ತಂದು ನಿಲ್ಲಿಸಿ ತಾನು ಹಾಕಿಕೊಂಡ ಪ್ರಶ್ನೆಗಳಿಗೆ ಅದರ ಮುಖೇನ ಎತ್ತರವನ್ನು ಕಂಡುಕೋಳ್ಳಲು ಪ್ರಯತ್ನಿಸಿದ ಫಲವಾಗಿಯೇ ಅನೇಕ ಧಾರ್ಮಿಕ ವಿಚಾರಗಳನ್ನು ಹುಟ್ಟಿಸಿಕೊಳ್ಳುವನು, ಈ ಧಾರ್ಮಿಕ ವಿಚಾರಗಳೆ ಸರಣಿಯೇ ಮುಂದೊಂದು ದಿನ ಪುರಾಣದ ಸ್ವರೂಪವನ್ನು ಪಡೆದಿರಬಹುದಾಗಿರುತ್ತವೆ.

ಈ ಹಿನ್ನಲೆಯಲ್ಲಿ ಪುರಾಣ, ಐತಿಹ್ಯೆ ಮತ್ತು ಶಾಸನಗಳು ಮುಖೇನ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಳ್ಳಬೇಕಾದ ಸಂದರ್ಭದಲ್ಲಿ ಯಾವ ಬಗೆಯ ಒತ್ತಾಸೆಯಗಳು ಕೆಲಸ ಮಾಡಿವೆ ಎನ್ನುವುದನ್ನು ಗುರುತಿಸುವುದು, ಮಾನವನ ವೈಜ್ಞಾನಿಕವಾದ ಮೊದಮೋದಲಿನ ವಿಚಾರಗಳೆ ಪುರಾಣ, ಕಥೆಗಳು ಹುಟ್ಟಿಕೊಳ್ಳಲು ಕಾರಣವಾಗಿರುತ್ತವೆ. ಇಲ್ಲಿ ಭೂಮಿ, ಗಿಡಾ, ಮರ, ಬೆಟ್ಟ-ಗುಡ್ಡ ನದಿ, ಕಾಲುವೆ, ಕಲ್ಲು ಹೀಗೆ ಹಲವಾರು ರೀತಿಯಲ್ಲಿ ಪುರಾಣಗಳಿಗೆ ದಾರಿಯಾಗಿದೆ. ಮನುಷ್ಯ ಹೇಗೆ ಸೃಷ್ಠಿಸಿಕೊಂಡವು ಎನ್ನುವುದೆ ಆದಿಮಾನವನಿಗೆ, ಕಾಡಿರಬಹುದಾದ ಮುಖ್ಯ ಸಮಸ್ಯೆಯಾಗಿತ್ತು ಆತ ತನ್ನಷ್ಟಕ್ಕೆ ತಾನೆ ಲೆಕ್ಕಹಾಕಿಕೊಂಡು ಕೂಡಿಸಿ, ಕಳೆದು ಫಲಿತಾಂಶಗಳಿಂದಾಗಿಯೆ ಸೃಷ್ಠಿ ಪುರಾಣದ ನಂತರ ನಂಬಿಕೆಗಳು ಹುಟ್ಟಿಕೊಳ್ಳಲು ಕಾರಣವಾಗಿವೆ

            ಇಲ್ಲಿ ಪುರಾಣಗಳು ಜನಪದರ ನಂಬಿಕೆಗಳ ಪ್ರಕಾರ ಪುರಾಣಗಳು ನಿನ್ನೆ ಮೊನ್ನೆ ಹುಟ್ಟಿಕೊಂಡವುಗಳಲ್ಲಿ ಅವು ಹಿಂದೆ ಯಾವ ಕಾಲದಲ್ಲಿಯೂ ನಡೆದ ನಿಜವಾದ ಘಟನೆಯೆ ನಿರೋಪಕಗಳಾಗಿವೆ ಕಾಲಾಂತರದಲ್ಲಿ ಈ ಘಟನೆಗಳು ಬೇರೆ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತಾ ಬಂದವು. ಯಾವುದೇ ಕಾಲಘಟ್ಟದಲ್ಲಿ ಯಾರೋ ಒಬ್ಬರು ಇವುಗಳಿಗೆ ಧರ್ಮಿಕ ವೇಷವನ್ನು ತೊಡಗಿಸಿದರು ತತ್ತಪರಿಣಾಮವಾಗಿ ಅವುಗಳ ಬಗ್ಗೆ ಜನಸಾಮಾನ್ಯರಲ್ಲಿ ಭಕ್ತಿ ಹುಟ್ಟಿತು, ಕಾಲಚಕ್ರ ಉರುಳಿದಂತೆ ಧೈವಾಂಶ ಸಂಭೂತರಾದಂತಹ ಜನರ ಬದುಕಿನ ಸಂವಿಧಾನದಂತೆ ಪುರಾಣಗಳು ಕಾರ್ಯನಿರ್ವಹಿಸುತ್ತಾ ತೊಡಗಿದವು, ಅನೇಕ ವಿದ್ವಾಂಸರು, ಸಂಶೋಧಕರು ತಾವು ಕಂಡುಕೊಂಡಂತಹ  ದೃಶ್ಯಗಳೆಂದರೆ, ಪುರಾಣಗಳು, ನಂಬಿಕೆ ಬರದ ಶಾಸನವನ್ನೆ ಪುರಾಣವೆಂತಲೂ ತಿಳಿದಿರುವರು. ಒಮದು ಕಾಲಘಟ್ಟದಲ್ಲಿ ಯಾವುದೇ ಒಂದು ಸಮಾಜದಿಂದ ಅಥವಾ ಸಮಾಜದಿಂದ ಮನ್ನಣೆ ಪಡೆದು ನಂಬಿಕೆಯೊಂದು ಸರ್ವಕಾಲಿಕ ಸತ್ಯೆ ಎನ್ನುವ ರೂಪವನ್ನು ಪಡೆಯುತ್ತದೆ, ಅಂತಹ ನಂಬಿಕೆಗಳಿಗೆ ಪುರಾಣಗಳು ಶಾಸನಭದ್ದವಾದ ಧಾರ್ಮಿಕ ಮುದ್ರೆಯನ್ನುತ್ತದೆ.

             ಮಾನವನ ನಂಬಿಕೆ ಶ್ರೆದ್ಧೆ ನಡತೆ ಮೌಲ್ಯಾದರ್ಶಗಳನ್ನು ಕುರಿತು ನಿರ್ಧರಿಸಿ ಅವನ ಆತ್ಮವನ್ನು ಎಚ್ಚರಿಸುವ ಗುಣವನ್ನು ಹೊಂದಿದೆ. ಈ ಬಗೆಯ ಮತಾಚರಣೆಗಳ ಮಧ್ಯಂತರ ಜಗತ್ತೊಂದನ್ನು ಪ್ರತಿನಿಧಿಸುತ್ತವೆ, ಇಲ್ಲಿ ಮಧ್ಯಂತರ ಜಗತ್ತು ಯಾವುವು ಎಂದರೆ ಭೂತಾರಾಧನೆಯ ಸಂದರ್ಭದಲ್ಲಿ ಭೂತಕಟ್ಟಿದ ವ್ಯಕ್ತಿ ಆ ಜಗತ್ತಿಗೆ ಸಂಬಂಧಿಸಿದವನಾಗಿರುತ್ತಾನೆ. ಭೂತಕಟ್ಟಿರುವ ವ್ಯಕ್ತಿಯ ಮುಂದೆ ನಿಂತು ಜನರು ತಮ್ಮ ಕಷ್ಟಗಳಿಗೆ ಪರಿಹಾರವನ್ನು ಕೇಳಿದಾಗ ಭೂತಕಟ್ಟಿರುವ ವ್ಯಕ್ತಿಯು ಆಕಾಶದಡೆಗೆ ಮುಖಮಾಡಿ ಅಲ್ಲಿಂದ ಏನೋ ವರ ಪಡೆದಂತೆ ವರ್ತಿಸುತ್ತಾ ನಂತರ ಜನರಡೆ ತಿರುಗಿ ಯಾವುದೊ ಒಂದು ಪರಿಹಾರವನ್ನು ಅವರಿಗೆ ಸೂಚಿಸುತ್ತಾನೆ, ಆ ಸಂದರ್ಭದಲ್ಲಿ ಆತನೆ ಜನರ ಪಾಲಿಗೆ ವಿಶೀಷ್ಠ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ ಇದನ್ನೆ ಜನರು ಪೌರಾಣಿಕವಾಗಿ(ಪುರಾಣ)ಸಿಕೊಳ್ಳುತ್ತಾರೆ ಮನುಷ್ಯನು ಮಾನಸಿಕ ಬೆಳವಣೆಗೆಯ ಹಂತವನ್ನು ಸೂಚಿಸು ಕಥಾನಕಗಳಿಗೆ ಪುರಾಣಗಳೆನ್ನಬಹುದು.

ಪುರಾಣಕ್ಕೆಸಂಸ್ಕೃತದಲ್ಲಿಸ್ಮೃತಿ ಎನ್ನುತ್ತಾರೆ ಸ್ಮೃತಿ ಎಂದರೆ ನೆನಪು ಅಂದರೆ ಗತಿಸಿದ ಘಟನಾವಳಿಗಳನ್ನು ಒಂದು ಬಗೆಯ ಮೌಖಿಕವಾಗಿ ಕಥಾನಕ ರೂಪದಲ್ಲಿ ನೆನಪಿನಲ್ಲಿಡುವುದು ಎನ್ನಬಹುದಾ ಸಂಗತಿ. ಈ ಹಿನ್ನಲೆಯಲ್ಲಿಯೇ ಪುರಾಣಗಳು ಬೇಳೆದು ಬಂದಿರಬಹುದಾದ ಪ್ರಾಚೀನ ಸಂದರ್ಭದಲ್ಲಿ ಭಾರತೀಯ ಧಾರ್ಮಿಕ ವಲಯಕ್ಕೆ ನೀಡಿದ ಮಹತ್ವವು ಕೂಡಾ ಪುರಾಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಎಯಲು ಸಹಾಯಕವಾಗಿದೆ.

ಪುರಾಣ ಶಬ್ದಕ್ಕೆ ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಪುರಾಣವು ‘ಪರಾ’ ದಿಂದ ಬಂದಿದ್ದು ಪುರಾ’ ಎಂದರೆ ಹಳೆಯದು ಎಂತಲೂ ಕರೆಯಲಾಗಿದೆ, ಭಾರತೀಯರ ಪರಿಕಲ್ಪನೆಯಲ್ಲಿ ಪುರಾಣ ಎನ್ನುವುದು ದೇವತೆಗಳಿಗೆ ಹಾಗೂ ಸಾಂಸ್ಕೃತಿಕ ವೀರರಿಗೆ ಸಂಬಂಧಿಸಿದಂತೆ ಕಥೆ ಯಾವುದೇ ಒಂದು ಜನಾಂಗಕ್ಕೆ ತನ್ನ ಸ್ವಸಾಮಥ್ರ್ಯದ ಮೂಲಕ ನೀತಿ ನಿಯಮಗಳನ್ನು ರೂಪಿಸಿದ ವ್ಯಕ್ತಿಯು ಸಾಂಸ್ಕೃತಿಕ ವೀರನಾಗುತ್ತಾನೆ ಸೃಷ್ಠಿಯ ಉಗಮ ಅದರ ಹಿಂದಿನ ಲಯ ಮಾನವ ಜನಾಂಗದ ಮೂಲ ಇವುಗಳಿಗೆ ಸಂಬಂಧಿಸಿದ ಕಥೆಗಳೆ ಪುರಾಣಗಳ ರೂಪಗಳಾಗಿವೆ,

ಭಾರತೀಯ ಸಾಮಾಜಿಕ ಪರಿಸರದಲ್ಲಿ ಧಾರ್ಮಿಕ ವಿಚಾರಗಳು ಹೆಚ್ಚು-ಹೆಚ್ಚು ಗಟ್ಟಿಗೋಳ್ಳುತ್ತಾ ಹೋದಾಗ ಮತ-ಧರ್ಮದ ತತ್ವಗಳನ್ನು ಪ್ರಸಾರಗೋಳಿಸುವ ಸಂದರ್ಭದಲ್ಲಿ ಹುಟ್ಟಿಕೊಂಡ ಕಥಾನಕಗಳೆ ಪುರಾಣಗಳಾಗಿ ಪರಂಪರಾಗತವಾಗಿ ಬೇಳೆದು ಬಂದಂತಹ ವಿಚಾರಗಳನ್ನು ಒಂದು ಜನಾಂಗವು ತನ್ನ ಅಸ್ಮಿತಿಗೆ ಆಧಾರಗಳೆಂದುಕೊಳ್ಳುವಾಗ ಪೌರಾಣಿಕವಾದಂತಹ ವಿಚಾರಗಳನ್ನು ಐತಿಹಾಸಿಕವಾಗಿಸುವಾಗ ಪುರಾಣಗಳು ರೂಪಗೊಳ್ಳುತ್ತಾವೆ.

ಪುರಾಣಗಳನ್ನು ಜನಪದ ಮತ್ತು ಲಿಖಿತ ಪುರಾಣಗಳೆಂದು ವರ್ಗಿಕರಿಸಲಾಗಿದೆ ಯಾಕೆಂದರೆ ವಸ್ತುವಿನ ನಿರೂಪಣೆಯ ದೃಷ್ಠಿಯಿಂದ ಈ ಎರಡರಲ್ಲಿ ವ್ಯೆತ್ಯಾಸ ಕಂಡುಬರುತ್ತದೆ, ಇದನ್ನು ಹಲವಾರು ಜನಪದ ಸಾಹಿತ್ಯಗಳು ವಿದ್ವಾಂಸರು ಕಂಡುಕೊಂಡಂತಹ ವಿಷಯಗಳಾಗಿರುತ್ತವೆ.

ಪುರಾಣಗಳು ಸಾಮಾಜಿಕ, ಐತಿಹಾಸಿಕ, ಶೈಕ್ಷಣಿಕ ಮತ್ತು ಭೌಗೋಳಿಕ ಮಹತ್ವವನ್ನು ಹೊಂದಿರುತ್ತವೆ ಪುರಾಣಗಳು ಪುರಾತನ ಕಾಲದಿಂದ ಸಾಗಿಬಂದಿರುವ ಸೃಷ್ಠೀಯ ವಿವರಣೆ ಸಾಂಕೇತಿಕ ಕಟ್ಟು ಕಥೆ ರೂಪಕ ಸಂಪ್ರದಾಯ, ಸಾಂಸ್ಕೃತಿಕ, ಮತ, ಸಮಾಜ ನಿಯಮ ಮೊದಲಾದವುಗಳು ಲೋಕಪ್ರೀಯ ನಿರೂಪಣೆಗಳಾಗಬೇಕೆಂಬ ಮೂಲ ಉದ್ಧೇಶದಿಂದ ಕೂಡಿದ್ದವು.

ಪುರಾಣವು ಭಾರತೀಯರ ಹೃದಯದಲ್ಲಿ ಸನಾತನ ವೈದೀಕಿಯ ಧರ್ಮವು ಆಳವಾಗಿ ಬೇರುಬಿಟ್ಟಿತು ಆದರೆ ಬರುಬರುತ್ತಾ ಧರ್ಮಾಚರಣೆಯಲ್ಲಿ ಜನರ ಅದರ ಪೂರಕವಾದ ಪ್ರಾವೃತಿ ಕುಂಟಿತವಾಗತೊಡಗಿತು, ದೈನಂದಿನ ವೈದೀಕ ಜೀವನದಲ್ಲಿ ಮೇಲ್ಮೆಯುಂಟಾಗಬೇಕಾದರು ಸಮಾಜದಲ್ಲಿ ಶಾಶ್ವತವಾದ ಸುಖ, ಸಂತೋಷ ಶಾಂತಿಗಳಿಗೂ ನೆಲಿಸಬೇಕಾದರು ಅನನ್ಯೆ ಭಾವ ಅವರವರ ಧರ್ಮಕ್ಕೆ ಶರಣು ಹೋಗುವುದು ಏಕೈಕ ಉಪಾಯವೆಂಬ ಭಾವನೆ ಅವರ ಮನಸ್ಸಿನಿಂದ ಜಾರಿತೊಡಗಿಸಿಕೊಳ್ಳಲು ಸಹಕಾರಿಯಾಗಿ ಉಳಿದಿವೆ.

ಹಂಪೆಯ ಪರಿಸರದಲ್ಲಿ ಪುರಾಣ ಹಾಗೂ ಐತಿಹ್ಯೆಗಳು ಬಹಳ ಪ್ರಮುಖ ಪಾತ್ರವಹಿಸಿವೆ, ಇಲ್ಲಿ ಐತಿಹ್ಯ ಮತ್ತು ಪುರಾಣಕ್ಕೂ ಇರುವ ಮೊರೆಯನ್ನು ಗುರುತಿಸುವುದು ಕಷ್ಟಕರ ಸಂಗತಿಯಾಗಿರುತ್ತದೆ, ಆದರೆ ಇವು ಎರಡರ ನಡುವಿನ ಸಂಬಂಧವು ಸಮಸ್ಯಾತ್ಮಕವಾದುದು, ಪುರಾಣ ಕಥೆಯ ಪ್ರಧಾನ ಪಾತ್ರಗಳ ದೇವತೆಗಳು ಮತ್ತು ಪ್ರಕೃತಿ ಶಕ್ತಿಗಳ ಉದ್ಧೇಶಗಳಿಂದ ಐತಿಹ್ಯಗಳು ಪ್ರಾಚೀನ ವೀರರನ್ನ ಕುರಿತವು ಈ ವೀರರ ಕಥೆಯೆ ಆಗಾಗ ಪೌರಾಣಿಕ ಹಾಗೂ ಭ್ರಾಮಿಕ ಅಂಶಗಳನ್ನು ಒಳಗೊಂಡ ಪ್ರಮುಖ ಸಂಗತಿಯಾಗಿರುತ್ತವೆ. ಇಲ್ಲಿ ಸತ್ಯಾಂಶದಲ್ಲಿ ಕೊನೆಗೊಳ್ಳುತ್ತದೆ ಮತ್ತು ಕಲ್ಪನೆಯಲ್ಲಿ ಪ್ರಾರಂಭವಾಗುತ್ತದೆ ಎಂಬುವುದುನ್ನು ತಿರ್ಮಾನಿಸಲು ಕೆಲವು ಸಾರಿ ಅದು ಅಸಾಧ್ಯವಾಗಬಹುದು ಆದರೆ ಐತಿಹ್ಯಗಳು ಸಾಕಷ್ಟು ಪ್ರಮಾಣದ ವಾಸ್ತವಿಕ ಅಥವಾ ಚಾರಿತ್ರಿಕ ಸತ್ಯದ ಆಧಾರಗಳ ಮೇಲೆ ರೂಪಿತವಾಗಿರುತ್ತದೆ ಎಂಬುವುದು ಮರೆಯಬಾರದು, ಪುರಾಣ ಐತಿಹ್ಯಗಳು ಒಂದೆ ನಾಣ್ಯದ ಎರಡು ಮುಖಗಳಾಗಿ ಮತ್ತು ಇವೆರಡಕ್ಕೂ ನಿಕಟ ಸಂಬಂಧಗಳನ್ನು ಹೊಂದಿವೆ.

ಐತಿಹ್ಯೆ ಹಾಗೂ ಪುರಾಣದ ಸಂಬಂಧ ಅನನ್ಯವಾಗಿ ಜರುಗಿದ ಘಟನೆಗಳ ಕಥಾನಕ ನಿರೂಪಣೆಯ ಐತಿಹ್ಯ ಹಳೆಯದಾದ ಬಹುಪ್ರಾಚೀನದಲ್ಲಿ ನಡೆದಿದೆ ಎನ್ನಲಾದ ನಿರೂಪಣೆಯು ಪುರಾಣವೆಂತಲೂ ಕರೆಯಲಾಗಿದೆ, ಐತಿಹ್ಯವು ವಾಸ್ತವ ಘಟನೆಗಳೊಂದಿಗೆ ಹುಟ್ಟಿಕೊಂಡಿರುತ್ತದೆ. ಪುರಾಣವು ಲೌಕೀಕ ಹಾಗೂ ಅಲೌಕೀಕ ವಿಚಾರಗಳನ್ನು ತಿಳಿಸುತ್ತಾ ಐತಿಹ್ಯೆಕಿಂತ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುತ್ತದೆ. ಆರಂಭದಲ್ಲಿ ಯಾವುದೆ ಒಂದು ಸ್ಥಳ ಒಂದು ಘಟನೆ ಒಬ್ಬ ವ್ಯಕ್ತಿಯ ಬಗಗೆ ಐತಿಹ್ಯ ಹುಟ್ಟಿಕೊಂಡ ನಂತರ ಕಾಲದಲ್ಲಿ ಆ ಸ್ಥಳ ಆ ಘಟನೆ ಹಾಗೂ ವ್ಯಕ್ತಿಯ ಬಗ್ಗೆ ಪೂಜ್ಯಭಾವನೆಗಳಿಂದಹುಟ್ಟಿಕೊಂಣಡರೆ ಅದು ಪುರಾಣದ ಸ್ವರೂಪವನ್ನು ಪಡೆದುಕೊಳ್ಳುತ್ತದೆ.

ಹಂಪಿಗೆ ಪ್ರಾಚೀನ ಕಾಲದಿಂದಲೂ ಪಂಪಾ, ವೀರುಪಾಕ್ಷರ ವಾಸಸ್ಥಾನವೆಂಬ ಹೇಳಿಕೆ ಇಲ್ಲಿದೆ. ಪಂಪಾದೇವಿ ಶಿವನನ್ನು ಕುರಿತು ತಪಸ್ಸು ಕೈಗೊಂಡು ಲಗ್ನಳಾದಳೆಂಬ ನಂಬಿಕೆಯಲ್ಲಿ ಬೆಳೆದು ಬಂದಿದೆ, ಸ್ಥಳ ಪುರಾಣಗಳು ಒಂದು ಪ್ರದೇಶದ ಧಾರ್ಮಿಕ ಮಹತ್ವವನ್ನು ಹಾಗೂ ಆ ಪ್ರದೇಶದೊಂದಿಗೆ ದೇವತೆಗಳು ಹೊಂದಿರುವ ಸಂಬಂಧವನ್ನು ತಿಳಿಸುತ್ತವೆ. ಸ್ಥಳ ಪುರಾಣಗಳಲ್ಲಿ ನದಿ, ಬೆಟ್ಟ, ಗುಡ್ಡ, ಮರ, ದೇವಾಲಯ ಹಾಗೂ ಶಿಲ್ಪಗಳಲ್ಲಿ ಕಂಡುಬರುವ ಸಾಂಸ್ಕೃತ ಪುರಾಣಗಳಾಗಿ ಮತ್ತು ಪುರಾಣಗಳಲ್ಲಿ ದೊಡ್ಡದಾದ ಸ್ಕಂದ ಪುರಾಣದಲ್ಲಿಪಂಪಾ ಮಾತೆಯನ್ನು ಕುರಿತು ಸವಿಸ್ತಾರವಾಗಿ ಪ್ರಸ್ತಾಪಿಸಲಾಗಿದೆ. ಶ್ರೀಸ್ಕಂದ ಪುರಾಣಾಂತರಗತ ಹೇಮಕೂಟ ಖಂಡಾತ್ಮಕ ಸಪ್ತರ್ಷರ ಪ್ರಕಾಶಕೆಯಲ್ಲಿ ವರ್ಣಿಸಲಾದ ಪುರಾಣಗಳಾಗಿವೆ, ಬ್ರಹ್ಮನ ಮಗಳಾದ ಪಂಪಾದೇವಿಯು ಶಿವನನ್ನು ಮದುವೆಯಾಗಲು ಹೇಮುಕೂಟ ಎತ್ತರಕ್ಕಿರುವ ಅರ್ಧಕೋಶ ದೂರದಲ್ಲಿ ವಿಪ್ರಕೂಟ ಎಂಬ ಪರ್ವತದ ಬಳಿಯ ಸರೋವರ (ಪಂಪಾ ಸರೋವರ)ದಡದಲ್ಲಿ ಉಗ್ರವಾದ ತಪಸ್ಸನ್ನಾಚರಿಸುತ್ತಾಳೆ ಅವಳ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯೆಕ್ಷನಾಗುತ್ತಾನೆ ಅವಳ ಇಚ್ಛೆಯಂತೆ ಹೇಮುಕೂಟದಲ್ಲಿ ವಿವಾಹವಾಗಿ ವಿರುಪಾಕ್ಷನಾಗಿದ್ದವನು ಪಂಪಾಪತಿ ಎನಿಸಿಕೊಳ್ಳುತ್ತಾನೆ ಅದಕ್ಕೆ ಈ ಕ್ಷೇತ್ರ ಪಂಪಾಕ್ಷೇತ್ರವೆಂದು ಕರೆದರು

ಹಂಪೆ ಪರಿಸರದಲ್ಲಿ ಬಹುಪಾಲು ದೇವಾಲಯಗಳಿದ್ದು ಅದರಲ್ಲಿ ಪ್ರಮುಖವಾಗಿ ಶ್ರೀಪಂಪಾಮಹಾತ್ಮೆ, ಮತಂಗರಿ, ಮಾಲ್ಯವಂತಗಿರಿ, ಋಷಮುಖ, ಕಿಸ್ಕಿಂದ, ಹೇಮುಕೂಟ, ವಿಪ್ರಕೂಟ, ಗಂಧರ್ವಗಿರಿ, ಜಂಭುನಾಥಗಿರಿ, ಸೋಮಪರ್ವತ, ಮಾಣಿಭದ್ರೇಶ್ವರ ಪರ್ವತ ಮುಂತಾದ ಗಿರಿಗಳೆನಿಸಿವೆ ಮತ್ತು ಗುಡ್ಡದ ತಿಮ್ಮಪ್ಪ ತುಂಗಭದ್ರನದಿ ಹಾಗೂ ಸ್ತ್ರೀ ದೇವತೆಗಳಲ್ಲಿ ಹುಲಿಗೇಮ್ಮ ದೇವತೆ, ಹೊಸರಮ್ಮಾ ದೇವತೆ ಪಟ್ಟಣದ ಯಲ್ಲಮ್ಮ ದುರ್ಗಾದೇವತೆ, ಗಾಳೇಮ್ಮಾ ದೇವತೆ ಇನ್ನೂ ಹಲವಾರು ದೇವತೆಗಳ ಬಗೆಯ ಸಾಂಸ್ಕೃತಿಕ ಸಂಪ್ರದಾಯ ಆಚರಣೆಗಳು ಅವರುಗಳ ಕಾಲಮಾನ ತಕ್ಕಂತೆ ಆಚರಣೆಗಳಿಗೊಳಪಡಿಸುವ ಹಾಗೂ ದೇವತೆಗಳ ಪುರಾಣಗಳನ್ನು ಇವರ ಬಗೆಯ ಹಲವಾರು ಐತಿಹ್ಯ, ಕಥೆಗಳನ್ನು ಹೇಳಲಾಗಿತ್ತು.

ಈ ಕ್ಷೇತ್ರದಲ್ಲಿ ಮೂರುವರೆ ಕೋಟಿ ತಿರ್ಥಗಳುಂಟು ಖಾಸಗೆ ಗಂಗೆ ಮಾನವ ನೆನಸಿದ ತುಂಗಾಭದ್ರಾ ಎಂಬ ಪುಣ್ಯನದಿಯು ಹರಿಯುತ್ತಿದೆ. ಹಾಗೂ ಈ ಕ್ಷೇತ್ರದಲ್ಲಿ ಋಷಿಗಳ ದೀವ್ಯಾಶ್ರಮಗಳು ವಿರಾಜಿಸುತ್ತವೆ. ಇದು ಶಂಭುವಿನ ತಪೋಭೂಮಿಯು ಪಂಪಾಪತಿ, ಕಿನ್ನೂರೇಶ್ವರ, ಜಾಂಭುವಂತೇಶ್ವರ ಹೀಗೆ ಅನೇಕ ಶ್ರೇಷ್ಠ ತಿರ್ಥಗಳಲ್ಲಿ ಕಲ್ಯಾಣ ತೀರ್ಥ ಎನ್ನಬುದಾದ ವಿಷಯಗಳನ್ನು ಜನಸಾಮಾನ್ಯರು ಹೇಳುತ್ತಿದ್ದರು.

            ಹಂಪಿ ಪರಿಸರದಲ್ಲಿ ಒಂದೊಂದರ ದೇವತೆಗಳ ನಡುವೆ ನಡೆದ ಘಟನೆಗಳನ್ನು ಇಲ್ಲಿ ಪವೀತ್ರವಾದ ಇತಿಹಾಸವೊಂದನ್ನು ಕಾಣಬಹುದಾಗಿದೆ, ಶಿವನು ಇಡಿ ಹಂಪೆಯ ಸುತ್ತಲು ಆತನ ಸಹದೃಶ್ಯದ ಕಥೆ, ಘಟನೆಗಳು ವಿಶೀಷ್ಠವಾಗಿ ಪುರಾಣಗಳಲ್ಲಿ ಇವು ಕಂಡುಬರುವುವು ಗುಡಿಓಬಳಾಪುರಕ್ಕೆ ಸಮಿಪದಲ್ಲಿ ಧರ್ಮದ ಗುಡ್ಡವಿದ್ದು ಅದರಲ್ಲಿ ಬಂಡೆಯಾಶ್ರಯಗಳ ಕಂಡುಬಂದು ಶಿವನು ಇಲ್ಲಿ ತಪಸ್ಸಿಗೆ ಹೋದಾಗ ನಂದಿಯ ವಿಹಾರಕ್ಕಾಗಿ ಧರ್ಮದ ಗುಡ್ಡಕ್ಕೆ ಬರುತ್ತದೆ. ಅದರ ಸಲುವಾಗಿ ಅಲ್ಲಿ ಚನ್ನಬಸವೇಶ್ವರ ಗುಡಿ ಸ್ಥಾಪನೆಯಾಗಿರುತ್ತದೆ ಎಂದು ತಿಳಿದು ಬರುತ್ತದೆ.

ವಿಶೇಷವಾಗಿ ಹಂಪಿಯಲ್ಲಿ ಹಲವಾರು ಧೈವಗಳು ದೇವತೆಗಳು ರಾಮಾಯಣ ಮತ್ತು ಮಹಾಭಾರತದಂತಹ ಘಟನೆಯುಳ್ಳ ಸಹದೃಶ್ಯಗಳನ್ನು ಕಂಡುಬರುವುದಾದ ಸಂಗತಿಯಾಗಿತ್ತು. ಇಲ್ಲಿ ಪಾಂಡವರು ತಮ್ಮ ಅಜ್ಞಾತ ವನವಾಸ ಕಾಲದಲ್ಲಿ ಧರ್ಮದ ಗುಡ್ಡದಲ್ಲಿ ತಂಗಿದರೆಂದು ಜನಸಾಮಾನ್ಯರ ಅಭಿಪ್ರಾಯವಾಗಿತ್ತು. ಇವರ ವನವಾಸದ ಹಿನ್ನಲೆಯಲ್ಲಿ ಗೌಳಿಯರ ಹೆಣ್ಣುಮಗಳೊಬ್ಬಳು ಯಾರಿಗೂ ತಿಳಿಯದಂತೆಹಾಲು ಕೊಡುವುದನ್ನು ನೋಡಿ ಅವಳನ್ನು ಕಲ್ಲಾದಳೆಂಬ ಸಹದೃಶ್ಯ ಕಾಣಬಹುದು ಮತ್ತು ಅಲ್ಲಿ ಹಾಲಮ್ಮನ ಗುಡಿಯೊಂದನ್ನು ಸ್ಥಾಪನೆಗೊಂಡಿರುವ ದೃಶ್ಯಗಳುಂಟು. ಹಾಗೇಯೆ ಹಂಪೆ ಪರಿಸರದಲ್ಲಿ ಸ್ತ್ರೀ ದೇವತೆಗಳ ವಿಶೇಷವಾಗಿ ತುಂಗಭದ್ರನದಿಯ ಅಕ್ಕ-ಪಕ್ಕದಲ್ಲಿರುವ ಹೊಸರಮ್ಮಾ ದೇವಾಲಯವನ್ನು ಕಂಡು ವ್ಯಾಸಮಹರ್ಷಿ ಋಷಿಗಳು ಈ ಸ್ಥಾನಕ್ಕೆ ಬಂದಾಗ ಅಲ್ಲಿ ಪ್ರಾಣಿಗಳನ್ನು ಬಲಿಕೊಡುವುದನ್ನು ನೋಡಬಹುದಾಗಿತ್ತು ಇವರ ಕನಸ್ಸಿನಲ್ಲಿ ಸಾಲಿಗ್ರಾಮವು ಹೊಸರಮ್ಮಾ ದೇವತೆಯ ಬಳಿಯಲ್ಲಿ ಸಾಲಿಗ್ರಾಮ ಇದೆ ಎಂದು ತಿಳಿಯಲಾಗಿದೆ, ವ್ಯಾಸ ಮಹರ್ಷಿಗಳು ಪುನಃ ಬಂದು ದೇವತೆಯನ್ನು ಪೂಜಿಸಿದರು ನಂತರ ಮರೆಮ್ಮನಹಳ್ಳಿಯ ಹೊಬಳಿಯ ಗೊಲ್ಲರಹಳ್ಳಿಯಲ್ಲಿ ಹಿಂದೆ ಕಮ್ಮಾರರು ತಮ್ಮ ವೃತ್ತಿಯಲ್ಲಿ ತೊಡಗಿ ಸುತ್ತಿಗೆಯಿಂದ ಬಡಿತಿದ್ದಾಗ ಕಾಳಿಕಾದೇವಿಯ ಮೂರ್ತಿಯು ಉದ್ದವಾಯಿತೆಂದು ತಿಳಿದು ಅದರಿಂದಾಗಿ ಅಲ್ಲಿ ಕಾಳಮ್ಮಾ ದೇವಾಲಯ ನಿರ್ಮಿತವಾಯಿತೆಂದು ತಿಳಿದು ಬರುತ್ತದೆ ಎಂದು ಜನಸಾಮಾನ್ಯರ ಅಭಿಪ್ರಾಯವಾಗಿತ್ತು.

             ಹಂಪಿಯ ಪುರಾಣಗಳ ಬಗೆಯ ಹಲವಾರು ವಿಧನಗಳಲ್ಲಿ ಕಂಡುಬರುವವು ಒಂದೊಂದು ದೇವರುಗಳ ಬಗೆಯ ಪುರಾಣಗಲು ನೋಡಬಹುದಾಗಿದೆ ತಿಮ್ಮಲಾಪುರವನ್ನು ವಿರುಪಾಕ್ಷನ ಹೆಂಡತಿಯಾದ ಹಂಪಮ್ಮನ ತವರು ಮನೆ ಎಂದು ಹೇಳಲಾಗಿ ಕಂಪ್ಲಿ ಹೊಬಳಿಯ ಹಂಪಾದೇವನಳ್ಳಿ ಪಂಪಾಪತಿ (ವಿರುಪಾಕ್ಷ) ಮೂಲ ಸ್ಥಾನವಾಗಿತ್ತೆಂದು ಹೇಳಲಾಗಿದೆ. ರಾಮನ ಕಾಲದಲ್ಲಿ ರಾಮ-ಲಕ್ಷ್ಮಣರು ಕಿಷ್ಕಿಂದಿ, ಋಷ್ಯಾಮುಖಾದ್ರಿಯಿಂದ ಈ ಗ್ರಾಮಗಳ ಮೂಲಕ ಆಯ್ದು ದಕ್ಷಿಣಕ್ಕಿರುವ, ರಾಮನಲೆಯಲ್ಲಿ ಒಂದು ದಿನ ತಂಗಿದ್ದರೆಂದು ತಿಳಿದು ಬರುತ್ತದೆ. ವೆಂಕಟಾಪುರ, ಭೂದಿದಿಬ್ಬವನ್ನು ವಾಲೀಕಾಷ್ಠ ಅಥವಾ ವಾಲೀದಿಬ್ಬವೆಂದು ಕರೆಯಲಾಗಿದೆ ಇಲ್ಲಿ ವಾಲೀ ಸುಗ್ರೀವರ ಕಾಳಗ ನಡೆದ ಜಾಗವೆಂದು, ರಾಮನು ವಾಲೀಯನ್ನು ಕೊಂದ ಸ್ಥಳವೆಂದು ಮತ್ತು ವಾಲೀಯನ್ನು ಸುಟ್ಟಿದ್ದರಿಂದ ಈ ಬೂದಿ ಗುಡ್ಡ ನಿರ್ಮಾಣವಾಯಿತೆಂದು ತಿಳಿದುಬರುತ್ತದೆ. ಹಾಗೂ ಹಂಪಿಯಲ್ಲಿ ಪುರಂದರದಾಸರ ಮಂಟಪವೊಂದನ್ನು ತುಂಗಾಭದ್ರ ನೆಲೆಯಲ್ಲಿ ಕಾಣಬಹುದಾಗಿದೆ.

ಪ್ರಮುಖವಾಗಿ ಪುರಾಣಗಳು ಕರ್ನಾಟಕ ಎಂಬ ನೆಲೆಯಲ್ಲಿ ಬಹಳ ಪ್ರಾಚೀನತೆಯಿಂದ ಕೂಡಿರುವ ಆಕರಗಳಾಗಿದ್ದವು, ಪುರಾಣಗಳಲ್ಲಿ ಶ್ರೀರಾಮನ ಅಪೇಕ್ಷೆಮೇರೆಗೆ ಸುಗ್ರೀವನು ಸೀತಾದೇವಿಯನ್ನು ಹುಡಿಕಿಸುವ ಸಲುವಾಗಿ ತನ್ನ ಸೈನ್ಯಯನ್ನು ವಿವಿಧ ದಿಕ್ಕುಗಳಿಗೆ ಕಳುಹಿಸುವನು ದಕ್ಷಿಣ ದಿಕ್ಕಿಗೆ ತೆರಳಿದ್ದ ನೀಲ ಹನುಮಂತ ಅಂಗದ ಮುಂತಾದವರನ್ನು ಕುರಿತು ದಕ್ಷಿಣದ ವಿವಿಧ ದೇಶಗಳಲ್ಲಿ ಸೀತಾದೇವಿಯನ್ನು ಹುಡುಕಿಸುವುದರ ಬಗೆಯ ಹಲವಾರು ರೀತಿಯ ಪುರಾಣಗಳಾಗಿ ಉಳಿದಿರುವವು ಹಾಗೂ ಶ್ರೀರಾಮನು ಸೀತೆ ಲಕ್ಷ್ಮಣರೊಂದಿಗೆ ಪಂಚವಟಿಯಲ್ಲಿದ್ದಾ ಲಂಕಾಸುರನಾದ ರಾವಣನು ಮೊಸದಿಂದ ಸೀತೆಯನ್ನು ಅಪಹರಿಸಿದನು ಅವಳನ್ನು ಆಕಾಶ ಮಾರ್ಗವಾಗಿ ಒಯ್ಯುತ್ತಿದ್ದಾಗ ಜಟಾಯುವೆಂಬ ಪಕ್ಷರಾಜನು ಅವನನ್ನು ಅಡ್ಡಗಟ್ಟಿಸಿದನು ರಾವಣ ಜಟಾಯುವಿನ ರೆಕ್ಕೆ-ಪುಕ್ಕಗಳನ್ನು ಕಡಿದು ಬಿಡಲು ಆ ಪಕ್ಷಿರಾಜನು ಭೂಮಿಯ ಮೇಲೆ ಬಿದ್ದನು ಮುಂದೆ ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಜಟಾಯುವಿದ್ದ ಸ್ಥಳಕ್ಕೆ ಬಂದರು ಪಕ್ಷಿರಾಜನು ಅವರಿಗೆ ನಡೆದ ಸಂಗತಿಯನ್ನುತಿಳಿಸಿ ಪ್ರಾಣಬಿಟ್ಟನು ಜಟಾಯು ರಾವಣನೊಡನೆ ಹೊರಾಡಿದ ಸ್ಥಳ ಜಟಂಗಿರಾಮೇಶ್ವರ ಇದು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಬಳಿ ಇದೆ ಎಂದು ಜನಸಾಮಾನ್ಯರ ನಂಬಿಕೆ, ನಂತರ ರಾಮ-ಲಕ್ಷ್ಮಣರು ಜಟಾಯುವಿಗೆ ಅಂತ್ಯಸಂಸ್ಕಾರವನ್ನು ಮಾಡಿ ಕಿಷ್ಕಿಂದೆಗೆ ಬಂದರು ಇಲ್ಲಿಂದ ಕಿಷ್ಕಿಂದೆಖಾಂಡ ಪ್ರಾರಂಭವಾಯಿತೆಂದು ಜನಸಾಮಾನ್ಯರ ನಂಬಿಕೆಯಾಗಿತ್ತು ಕಿಷ್ಕಿಂದಖಾಂಡದ ಪೂರ್ಣಕಥೆಯು ಕರ್ನಾಟಕದಲ್ಲಿ ಪ್ರಸಿದ್ಧಗೊಂಡಿತು ರಾಮ-ಲಕ್ಷ್ಮಣರ ಮೊದಲಿಗೆ ಪಂಪಾಕ್ಷೇತ್ರಕ್ಕೆ ಬಂದಿರಬುದೆಂಬ ಪ್ರಮುಖ ಸಂಗತಿಯಾಗಿತ್ತು.

ಹಂಪಿಯ ನೆಲೆಯ ಪಂಪಾಕ್ಷೇತ್ರದಲ್ಲಿ ಮತಾಂಗ ಮುನಿಗಳ ಆಶ್ರಮ ಇದ್ದಿತು ಅದು ಪಂಪಾ ಸರೊವರದ ಪಶ್ಚಿಮ ತೀರದಲ್ಲಿತ್ತೆಂದು ತಿಳಿದು ಬಂದಿತು ಮುಂದೆ ಶ್ರೀ ರಾಮ ಲಕ್ಷ್ಮಣರು ಪಂಪಾ ಸರೊವರವನ್ನು ಕಂಡರು ಹಾಗೂ ರಾಮಾಯಣದ ಅರಣ್ಯಖಂಡ ಮತ್ತು ಕಿಷ್ಕಿಂದಖಂಡಗಳಲ್ಲಿ ಪಂಪಾಸರೊವರದ ಮನೋಹರಾವರಣೆಯನ್ನು ನಾವು ಇಲ್ಲಿ ಕಾಣಬಹುದಾಗಿದೆ. ಈ ನದಿಯು ಪಂಪಾಸರೊವರದಲ್ಲಿ ಹುಟ್ಟಿ ತುಂಗಭದ್ರ ನದಿಯನ್ನು ಸೇರುತ್ತದೆ.

             ಹಂಪಿ ಧಾರ್ಮಿಕ ನೆಲೆಯಲ್ಲಿ ಪುರಾಣಗಳು ವಿಶೀಷ್ಠವಾಗಿ ಜನರಿಗೆ ಸಹಾಯಕವಾದ ಫಲ್ಲಟಗಳಾಗಿವೆ. ವರಾಹ ಪುರಾಣದಲ್ಲಿ ಗೋಕರ್ಣದ ಬಗ್ಗೆ ಒಂದು ವಿಶೀಷ್ಠವಾದ ಕಥೆಯನ್ನು ಇಲ್ಲಿ ಕಾಣಬಹುದಾಗಿದೆ, ಇಲ್ಲಿ ಒಮ್ಮೆ ಪರಮೇಶ್ವರನು ಜಿಂಕೆಯ ರೂಪವನ್ನು ತಾಳಿ ಶೆಶಾತ್ಮಕ ಪರ್ವತದಲ್ಲಿ ಹಲವಾರು ರೀತಿಯ ದೃಶ್ಯಗಳು ಕಂಡುಬರುವವು ಬ್ರಹ್ಮ, ವಿಷ್ಣು, ಇಂದ್ರ ಮೊದಲಾದ ದೇವತೆಗಳು ಶಿವನನ್ನು ಹುಡುಕಿಕೊಂಡು ಆ ಪರ್ವತಕ್ಕೆ ಬಂದರು ಜಿಂಕೆಯ ರೂಪದಲ್ಲಿದ್ದ ಶಿವನನ್ನು ಹಿಡಿಯಲು ಯತ್ನಿಸಿದರು ಜಿಂಕೆಯು ಅವರಿಗೆ ಸಿಗದೆ ತಪ್ಪಿಸಿಕೊಂಡು ಹೊಯ್ತು ಆದರೆ ಕೊನೆಗೆ ಅದರ ಕೊಂಬು ಮಾತ್ರ ಮೂರು ಚೂರಾಗಿ ಮುರಿದು ಬ್ರಹ್ಮ, ವಿಷ್ಣು ಮತ್ತು ಇಂದ್ರನ ಕೈಗೆ ಒಂದೊಂದು ಚೂರು ಸಿಕ್ಕಿತು ಮೂವರು ಶಿವನನ್ನು ಜ್ಞಾನಿಸುತ್ತಾ ತಮಗೆ ಸಿಕ್ಕಿದ್ದ ಕೊಂಬಿನ ಚೂರುಗಳನ್ನು ತೆಗೆದುಕೊಂಡು ಬೇರೆ-ಬೇರೆ ದಿಕ್ಕುಗಳಿಗೆ ಹೊದರು. ಕುಂಬೆಯವನು ಚೂರುಗಳನ್ನು ಬ್ರಹ್ಮನು ಉತ್ತರ ಗೋಕರ್ಣದಲ್ಲಯೊ, ವಿಷ್ಣುವು ಶ್ರೀಗೆಶ್ವರದಲ್ಲಿಯೊ, ಇಂದ್ರನು ಸ್ವರ್ಗದಲ್ಲಿಯೊ ಸ್ಥಾಪಿಸಿದರು, ಆದರೆ ಲಂಕೆಯ ಅರಸನಾದ ರಾವಣನು ಉತ್ತರ ಗೋಕರ್ಣದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಮೂರು ಲೋಕಗಳನ್ನು ಜಯಸಿರುವನು ಆನಂತರ ಅವನು ಸ್ವರ್ಗಕ್ಕೆ ಹೋಗಿ ಇಂದ್ರನನ್ನು ಸೊಲಿಸಿದನು ಇಂದ್ರನು ಅಲ್ಲಿ ನಡೆಸಿದ್ದ ಜಿಂಕೆಯ ಕೊಂಬುವಿನ ಚೂರನ್ನು ಕಿತ್ತು ತಂದು ದಾರಿಯಲ್ಲಿ ಬರುತ್ತಿರುವಾಗ ಅದನ್ನು ಪಶ್ಚಿಮ ಸಮುದ್ರತೀರದಲ್ಲಿಟ್ಟು ಸಂಧ್ಯಾವಂದನೆಯನ್ನು ಆಚರಿಸಿದನು ಆಗ ಅದು ಭೂಮಿಯಲ್ಲಿ ನಾಟಿಕೊಂಡಿತು ರಾವಣನು ಎಷ್ಟೊ ಪ್ರಯತ್ನಪಟ್ಟರು ಅದನ್ನು ಕಿಳಲು ಆಗಲಿಲ್ಲಾ ಹತಾಶಯನಾಗಿ ಲಂಕೆಗೆ ಹಿಣದಿರುಗಿದನು, ಹೀಗೆ ಹಲವಾರು ರೀತಿಯ ಕೋನೆಗೆ ಶೃಂಗವು ಗೋಕರ್ಣದಲ್ಲಿ ನೆಲೆಯಾಯಿತು.

ಗೋಕರ್ಣದಲ್ಲಿ ಇನ್ನೊಂದು ಕಥೆ ರಾವಣನ ತಾಯಿಯಾದ ಕೈಕಸಿಯು ಪ್ರತಿದಿನ ಶವಲಿಂಗ ಒಂದನ್ನು ಪೂಜಿಸುತ್ತಿದ್ದಳು ಒಮದು ದಿನ ಆ ಲಿಂಗವು ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೊಗಲು ಅವಳು ತುಂಬಾ ದುಃಖಿತಳಾದಳು ಆಗ ರಾವಣನು ಅಮ್ಮಾ ದುಃಖಿಸಬೆಡಾ ನಾನು ಪರಮೇಶ್ವರನ ಆತ್ಮಲಿಂಗವನ್ನೆ ತರುವೆನು ಎಂದು ಪರ್ವತವೊಮದಕ್ಕೆ ಹೋಗಿ ಶಿವನನ್ನು ಕುರಿತು ತಪಸ್ಸು ಮಾಡಿದನು ಶಿವನು ಅವನ ತಪಸ್ಸಿಗೆ ಮಚ್ಚಿ ತನ್ನ ಆತ್ಮ ಲಿಂಗವನ್ನು ಅನುಗ್ರಹಿಸಿದನು ಆತ್ಮಲಿಂಗವನ್ನು ದಾರಿಯಲ್ಲಿ ಎಲ್ಲಿಯೊ ಇಡಬೇಡಾ ನೀನು ಅದನನ್ನು ಎಲ್ಲಿ ಇಡುತ್ತಿಯೊ ಅಲ್ಲೆ ಅದು ಪ್ರತಿಷ್ಠಾನವಾಗುವುದು ಎಂದು ತಿಳಿಸುವುನು, ಆಗ ರಾವಣನು ಆತ್ಮಲಿಂಗವನ್ನು ವಸ್ತ್ರದಲ್ಲಿ ಸುತ್ತಿಕೊಂಡು ಶ್ರೀಲಂಕೆಗೆ ಹೋರಟನು

            ರಾವಣನು ಆತ್ಮಲಿಂಗವನ್ನು ಪಡೆದಿದ್ದನ್ನು ನೋಡಿ ದೇವತೆಗಳಿಗೆ ಹೆದರಿಕೆ ಆಯಿತು. ರಾವಣನು ಮೊದಲೆ ಬಲಿಷ್ಠ ಈ ಆತ್ಮಲಿಂಗವನ್ನು ಪಡೆದು ಇನ್ನೇನು ಮಾಡಿಬಿಡುವನೆಂದು ಗಾಬರಿಗೊಂಡರು ಅವರೆಲ್ಲರು ವಿಷ್ಣುವಿನ ಬಳಿಗೆ ಹೋಗಿ ರಾವಣನಿಂದ ಆತ್ಮಲಿಂಗವನ್ನು ಬೇರ್ಪಡಿಸುವ ಉಪಾಯವನ್ನು ಹೇಳಿಕೊಟ್ಟನು ರಾವಣನು ಆತ್ಮಲಿಂಗವನ್ನು ಪಡೆದುಕೊಂಡು ಲಂಕೆಗೆ ಹಿಂದಿರುಗುತ್ತಿದ್ದಾಗ ಗಣಪತಿಯು ಒಬ್ಬ ಬ್ರಹ್ಮಚಾರಿ ವೇಷವನ್ನು ಧರಿಸಿ ಅವನನ್ನು ಸಂದಿಸಿದನು ಅಥವಾ ಬೆಟೆಯಾದನು ಆಗ ಜಿಂಕೆಯ ಸಮಯ ರಾವಣನು ಬ್ರಹ್ಮಾಚಾರ್ಯವನ್ನು ಕುರಿತು ಅಯ್ಯೊ ಈ ಆತ್ಮಲಿಂಗವನ್ನು ನಿನ್ನಬಳಿ ಇಟ್ಟುಕೊಂಡರ ನಾನು ಸಂಧ್ಯಾವಂಧನೆಯನ್ನು ಮುಗಿಸಿ ಬರುವೆನು, ಆದರೆ ಲಿಂಗವನ್ನು ಮಾತ್ರ ಖಂಡಿತಾ ಕೆಳಗೆ ಇಡಬೇಡಾ ಎಂದನು ಬ್ರಹ್ಮಚಾರಿ ಹಾಗೆ ಆಗಲಿ ಆದರೆ ನೀನು ಮೂರು ಘಳಿಗೆಯೊಳಗೆ ಹಿಂದಿರಗಬೇಕು ಇಲ್ಲದಿದ್ದರೆ ಲಿಂಗವನ್ನು ನೆಲದಮೇಲೆ ಇಟ್ಟುಬಿಡುವೆ ಎಂದನು. ರಾವಣನು ಆತ್ಮಲಿಂಗವನ್ನು ಬ್ರಹ್ಮಚಾರಿಯ ಕೈಯಲ್ಲಿ ಕೊಟ್ಟು ಸಂಧ್ಯಾವಂದನೆಗೆ ಹೋದನು ಆಗ ನೆಲದ ಮೇಲೆ ಇಟ್ಟನು ರಾವಣನು ಎಷ್ಟೇ ಪ್ರಯತ್ನಪಟ್ಟರು ಆತ್ಮಲಿಂಗವನ್ನು ಮೇಲೆತ್ತಲು ಸಾಧ್ಯವಾಗಲಿಲ್ಲಾ ಮಹಾ ಬಲಶಾಲಿಯಾದ ರಾವಣನಿಗೆ ಆ ಲಿಂಗವನ್ನು ಕದಲಿಸಲು ಸಾಧ್ಯವಾಗಲಿಲ್ಲವಾದುದ್ದರಿಂದ ಅದಕ್ಕೆ ಕೊನೆಗೆ ಮಹಾಬಲೇಶ್ವರ ಎಂದು ಹೆಸರು ಬಂದಿತು, ರಾವಣನು ದುಃಖ ಮತ್ತು ಕೊಪದಿಂದ ಆತ್ಮಲಿಂಗವನ್ನು ಸುತ್ತಿ ತಂದಿದ್ದ ವಸ್ತ್ರವನ್ನು ಹರಿದು ನಾಲ್ಕು ಭಾಗ ಮಾಡಿ ನಾಲ್ಕು ದಿಕ್ಕಿಗೆ ಬಿಸಾಡಿದನು ನಂತರ ರಾವಣನೆಂಬ ರಾಕ್ಷಸನು ಕ್ರೂರವಾದ ತಪಸ್ಸಿನಿಂದ ಪಡೆದ ಆ ಲಿಂಗವನ್ನು ಗಣಪತಿಯು ಗೋಕರ್ಣದಲ್ಲಿ ಸ್ಥಾಪಿಸಿದನು ಇಮತಹ ಘಟನಾಳಿಗಳಿಂದ ಪುರಾಣಗಳಿಗೆ ಪ್ರಭಲವಾದ ಮೌಲ್ಯ ಸಿಗುವುದು.

ಕರ್ನಾಟಕದಲ್ಲಿ ಬೆಳೆದು ನಿಂತಿರುವ ಸಹದೃಶ್ಯಗಳಿಂದ ಅಥವಾ ಪುರಾಣಗಳ ಆಶ್ರತೆಯಲ್ಲಿ ಸ್ಥಳ ಪುರಾಣಗಳು ಬೆಳಕಿಗೆ ಬಂದಿರುವವು ಪುರಾಣಗಳಿಂದ ಇಡಿ ಕಥೆ, ಘಟನೆಗಳು ಧಾರ್ಮಿಕ ಬೆಳವಂಇಗೆಗೆ ರೂಪಕವಾಗಿ ನಿಂತಿರುವುದು ಕಂಡುಬರುವುದು ಇದರ ನೆಲೆಯ ಸಮಾಜದಲ್ಲಿ ಜನಸಾಮಾನ್ಯರು ದ್ಯನಂದಿನ ಜೀವನಕ್ಕೆ ಬೇಕಾಗಿರುವ ಆಚರಣೆ ವಿಚಾರ ಸಂಪ್ರದಾಯಗಳು ಸಂಸ್ಕೃತಿಗಳು ಧಾರ್ಮಿಕ ಆಚರಣೆಗಳಿಗೆ ಪೂರಕವಾಗಿರುವವು. ಮಾನವನಿಗೆ ಹಬ್ಬ-ಹರಿದಿನಗಳು ಧಾರ್ಮಿಕತೆಯ ರೂಪಗಳು ಸಮಾಜಕ್ಕೆ ಸಂಪ್ರದಾಯಗಳಿಗೆ ಅತ್ಯವಶ್ಯಕವಾದ ಸಂಗತಿಗಳಾಗಿದ್ದವು ಮನುಷ್ಯನಿಗೆ ಬದುಕುವುದಕ್ಕೆ ಆಚಾರ-ವಿಚಾರವ ಆಚರಣೆ ಪುರಾಣಗಳ ಈ ಭೂಮಿಯ ಮೇಲೆ ಸ್ಥಿರವಾಗಿ ಉಳಿದಿರುವವು ಪುರಾಣಗಳು ಜನಸಾಮಾನ್ಯರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಬಹುದಾಗಿದೆ, ಸಂದೇಹ, ಮೂಢನಂಬಿಕೆಗಳನ್ನು ಹೊಗಲಾಡಿಸಲು ಇವುಗಳಿಗೆ ಮಹತ್ವದ ಸ್ಥಾನ ಸಿಗುವುದು.

ಹಂಪಿ ಪರಿಸರದ ಸುತ್ತಮುತ್ತಲಿನ ಬೆಟ್ಟ-ಗುಡ್ಡ ಹಬ್ಬ-ಹರಿದಿನಗಳ, ಜಾತ್ರೆ ಇವುಗಳು ಪುರಾಣಗಳಲ್ಲಿ ಚಾರಿತ್ರಿಕವಾದ ಐತಿಹ್ಯಗಳಾಗಿ ಉಳಿದು ಸ್ತ್ರೀ ಧೈವ ಆಚರಣೆಗಳಲ್ಲಿ ಮೌಖಿಕವಾಗಿ ಜನಸಾಮಾನ್ಯರ ಮನಸ್ಥಿತಿ ಆರೋಗ್ಯದ ಮನಸ್ಥಿತಿ ಧಾರ್ಮಿಕತೆ ಪ್ರಚಾರಕ್ಕೆ ಜನರ ಮನದಲ್ಲಿ ಇಂದಿಗೂ ಕೂಡಾ ಉಳಿದುಕೊಂಡಿರುವುದನ್ನು ಹಂಪೆ ಪರಿಸದಲ್ಲಿ ಕಾಣಬಹುದು.

ಆಕಾರ ಗ್ರಂಥಗಳು

  1. ಮೈ.ನ ನಾಗರಾಜ. ಪುರಾಣಗಳಲ್ಲಿ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ನಿರ್ಧೇಶನಾಲಯ ನೃಪತುಂಗ ರಸ್ತೆ ಬೆಂಗಳೂರ. 1983
  2. ನಾಯಕರ ಹುಲುಗಪ್ಪ. ಪುರಾಣ-ಐತಿಹ್ಯ, ಅನುಷಾ ಪ್ರಕಾಶನ ಕಮಲಾಪೂರ. 2017


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal