ಕೃಷಿ ಕ್ಷೇತ್ರದ ಮೇಲೆ ಕೋವಿಡ್-19 ಸಾಂಕ್ರಮಿಕ ರೋಗದ ಪರಿಣಾಮ
ವಿನಾಯಕ ಯು
ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿ
ಅಭಿವೃದ್ಧಿ ಅಧ್ಯಯನ ವಿಭಾಗ (ಅರ್ಥಶಾಸ್ತ್ರ) ಕನ್ನಡ ವಿಶ್ವವಿದ್ಯಾಲಯ, ಹಂಪಿ,
ಮೊಬೈಲ್ ಸಂಖ್ಯೆ : 9632166395 E mail: vinayakau17@gmail.com
ಮಾರ್ಗದರ್ಶಕರು
ಡಾ. ತೇಜಸ್ವಿನಿ ಬಿ. ಯಕ್ಕುಂಡಿಮಠ
ವಿಶೇಷಾಧಿಕಾರಿಗಳು,
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಬೆಂಗಳೂರು,
ಸಾರಾಂಶ
ಕೃಷಿ ದೇಶದ ಬೆನ್ನೆಲುಬು ಎನ್ನುವುದು ವಾಡಿಕೆಯಾಗಿಯೇ ಉಳಿದಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಕೃಷಿ ಕ್ಷೇತ್ರವನ್ನು ಹೊರತುಪಡಿಸಿ ಕೈಗಾರಿಕೆ, ಸೇವಾ ಕ್ಷೇತ್ರದ ಜಿಡಿಪಿಯ ಬೆಳವಣಿಗೆ ನಕರಾತ್ಮಕ ಹಂತವನ್ನು ತಲುಪಿತ್ತು. ಸರ್ಕಾರ ಒಂದು ನಿರ್ದಿಷ್ಟ ವರ್ಷಕ್ಕೆ ಉತ್ಪಾದನೆಯ ಗುರಿಯನ್ನು ನಿಗದಿಪಡಿಸುತ್ತದೆ. ಹಾಗೆಯೇ ಆ ಗುರಿಯನ್ನ ಮುಟ್ಟಲು ಸರ್ಕಾರ ಪ್ರಯತ್ನವನ್ನೂ ಮಾಡುತ್ತದೆ. ಆದರೆ ರೈತರು ಉಪಯೋಗಿಸುತ್ತಿರುವ ಬೀಜ, ಗೊಬ್ಬರ, ಕೃಷಿ, ಯಂತ್ರೋಪಕರಣಗಳ ಬೆಲೆ ಏರಿಕೆಯಾಗಿ ಉತ್ಪಾದನೆಯ ಪ್ರಮಾಣ ಗರಿಷ್ಠವಿದ್ದರೂ ಅದರ ಲಾಭವು ಮಾತ್ರ ಉತ್ಪಾದನಾ ವೆಚ್ಚಕ್ಕೆ ಸಮನಾಗುತ್ತಿದೆ. ಅದರಲ್ಲೂ ಲಾಕ್‍ಡೌನ್ ಎನ್ನುವಂತಹ ಪರಿಸ್ಥಿತಿಗಳು, ಅಂತರಾಜ್ಯ ನಿರ್ಬಂಧಗಳು, ಸಣ್ಣ ಮತ್ತು ಮದ್ಯಮ ರೈತರಿಗೆ ಬೆಲೆ ಸಿಗದಂತಾಗಿದೆ. ಹೀಗೆ ಮುಂದುವರೆದರೆ ದೇಶದ ಕೃಷಿ ಉತ್ಪಾದನೆ ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆಗಳಿವೆ.
ಕೀ ಪದಗಳು: ಕೋವಿಡ್-19 (ಸಾಂಕ್ರಮಿಕ ರೋಗ), ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ), ಜಿವಿಎ (ಒಟ್ಟು ದೇಶೀಯ ಮೌಲ್ಯ)
ಪೀಠಿಕೆ:
ಕೊರೋನ ವೈರಸ್ ಸಾಂಕ್ರಮಿಕ ರೋಗವು ಪ್ರಪಂಚದಾದ್ಯಂತ ವೇಗವಾಗಿ ಹರಡಿದ ರೋಗ. ಪ್ರಂಪಚದ ಲಕ್ಷಾಂತರ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದ ವೈರಾಣು. ಇದು ಭಾರತದಲ್ಲಿ ಜನೇವರಿ 30 2020 ರಂದು ಮೊದಲ ಬಾರಿಗೆ ಭಾರದಲ್ಲಿ ಕಾಣಿಸಿಕೊಂಡಿತು. ಈಗಾಗಿ ಭಾರದಲ್ಲಿ ಮಾರ್ಚ 25 ರಿಂದ “ಲಾಕ್‍ಡೌನ್” ಜಾರಿಗೊಳಿಸಲಾಯಿತು. ಇದು ಗ್ರಾಮೀಣ ಭಾರತೀಯರ ಆರ್ಥಿಕತೆಯ ಮೇಲೆ ಗಂಭೀರ ಹಾನಿಕಾರಕ ಪರಿಣಾಮವನ್ನು ಬೀರಿತು ಹಾಗೂ ಕರೋನ ವೈರಸ್ ಸಾಂಕ್ರಮಿಕ ರೋಗವು ನಗರದಿಂದ ಗ್ರಾಮೀಣ ಪ್ರದೇಶಗಳಗೆ ವಲಸೆ ಮಾಡಿತು. ಆರಂಭದ ಕೆಲವು ವಾರಗಳಲ್ಲಿ ಕಟ್ಟುನಿಟ್ಟಾದ ನಿಯಮಗಳು ಜಾರಿಗೆ ಬಂದವು. ಚಿಲ್ಲರೆ ಅಂಗಡಿಗಳು, ಸಂಸ್ಥೆಗಳು, ಮಾರುಕಟ್ಟೆಗಳು, ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರಗಳು, ಧಾರ್ಮಿಕ ಪೂಜಾ ಸ್ಥಳಗಳು, ದೇಶಾದ್ಯಾಂತ ನಿಷೇಧಿಸಲಾಯಿತು. ಕ್ರಮೇಣವಾಗಿ ಈ ಹಂತಗಳನ್ನು ಸಡಿಲಿಸಲಾಯಿತು. ಹಲವು ಜಾಗತಿಕ ವರದಿಗಳು ಭಾರತೀಯ ಜಿಡಿಪಿಯ ಮನ್ನೋಟವನ್ನು ತಿಳಿಸುತ್ತಾ ಬಂದರೂ ಅವು ಆತಂಕಕಾರಿಯಾಗಿದ್ದವು. ಒಂದು ರೂಪದಲ್ಲಿ ಅಥವಾ ಇನ್ನೊಂದರಲ್ಲಿ ನಿರ್ಬಂಧಗಳು ಇದು ಸಂಪೂರ್ಣ ಮುಚ್ಚುವಿಕೆಯೊಂದಿಗೆ ಆರ್ಥಿಕತೆಯನ್ನು ಸ್ಥಗಿತಗೊಳಿಸಿತು. ಎಲ್ಲಾ ಕ್ಷೇತ್ರಗಳಲ್ಲಿನ ಉದ್ಯಮಗಳು, ಕೃಷಿ ಚಟುವಟಿಕೆಗಳಿಗೆ ವಿನಾಯಿತಿಯನ್ನು ನೀಡಿದ್ದರೂ ಸಹ ಲಾಕ್‍ಡೌನ್ ಆರಂಭಿಕ ಹಂತಗಳು ಕೃಷಿ ಮೌಲ್ಯ ಸರಪಳಿಯ ದೊಡ್ಡ ಪ್ರಮಾಣದ ಅಡೆತಡೆಯನ್ನು ಎದುರಿಸಿತು. ದೇಶಕ್ಕೆ ದೇಶವನ್ನೆ ಬೇಡಿ ಹಾಕುತ್ತೇವೆಂದು ನಿರ್ಧರಿಸಿ ಹೊರಟಿದ್ದು ವಿಚಿತ್ರವಾದ ಘಟನೆಯೇ ನಮ್ಮ ಭಾರತ ದೇಶವು ಬಹುದೊಡ್ಡ ದೇಶ ಬಹುಪಾಲು ಬಡವರು ಹಾಗು ಅಲ್ಪ ಪ್ರಮಾಣದ ಶ್ರೀಮಂತರಿರುವ ದೇಶ ಲಾಕ್‍ಡೌನ್ ಮೊದಲು ಪಟ್ಟಣಕ್ಕೆ ಬಂದು ನಂತರ ತುಸು ಪ್ರಮಾಣದಲ್ಲಿ ಹಳ್ಳಿಗಳ ಮೇಲೆ ಪ್ರಭಾವ ಬೀರಿತು. ಭಾರತದಲ್ಲಿ ಲಾಕ್‍ಡೌನ್ ನಂತರದ ಆರ್ಥಿಕ ಬೆಳವಣಿಗೆಯನ್ನು ಗಮನಿಸಿದಾಗ ಕೃಷಿ ಕೇತ್ರವನ್ನು ಹೊರತುಪಡಿಸಿ ಕೈಗಾರಿಕೆ ಮತ್ತು ಸೇವಾ ವಲಯಗಳ ಒಟ್ಟು ದೇಶೀಯ ಉತ್ಪನ್ನದ ಪ್ರಮಾಣ (ಜಿಡಿಪಿ) ನಕರಾತ್ಮಕ ಹಂತ ತಲುಪಿತ್ತು.
ಒಟ್ಟು ದೇಶೀಯ ಉತ್ಪನ್ನದಲ್ಲಿ ಕೃಷಿಯ ಪಾಲು ಕಳೆದ 17 ವರ್ಷಗಳಲ್ಲಿ ಮೊದಲ ಬಾರಿಗೆ ಸುಮಾರು 20% ತಲುಪಿದೆ ಇದು 2020 21 ಅವಧಿಯಲ್ಲಿ ಜಿಡಿಪಿ ಕಾರ್ಯಕ್ಷಮತೆ ಒಂದು ಸಂತೋಷದ ಸಂಗತಿಯಾಗಿದೆ.
2020 21 ರಲ್ಲಿ ಇತರೆ ಎಲ್ಲಾ ವಲಯಗಳು ಕುಸಿತವನ್ನು ಅನುಭವಿಸಿದಾಗ ಕೃಷಿ ಕ್ಷೇತ್ರ ಮಾತ್ರ 2020-21ರಲ್ಲಿ ಸ್ಥಿರ ಬೆಲೆಯಲ್ಲಿ ಶೇಕಡಾ 3.4 ರಷ್ಟು ಸಕರಾತ್ಮಕ ಬೆಳೆವಣಿಗೆಯನ್ನು ಗಳಿಸಿದ ಏಕೈಕ ಕ್ಷೇತ್ರವಾಯಿತು. ಜಿಡಿಪಿಯಲ್ಲಿ ಶೇ. 17.8 ರಿಂದ 2020-21 ರಲ್ಲಿ ಶೇ. 19.9 ಕ್ಕೆ ಏರಿದೆ. ಈ ಪ್ರಮಾಣದ ಏರಿಕೆಯನ್ನ ನಾವು ಕಂಡಿದ್ದು 2003-4 ರಲ್ಲಿ ಆಗ ಜಿಡಿಪಿಯ ಪ್ರಮಾಣ ಶೇಕಡಾ 20% ರಷ್ಟಿತ್ತು. 2003-04 ರ ತೀರ್ವ ಬರಗಾಲದ ನಡುವೆಯೂ ಈ ವಲಯವು 9.5 ರಷ್ಟು ಜಿಡಿಪಿ ಬೆಳವಣಿಗೆಯನ್ನು ಸಾಧಿಸಿದ ವರ್ಷವಾಗಿತ್ತು. 2003 ರ ನಂತರ ಈ ಪಾಲು ಶೇಕಡಾ 17 ರಿಂದ 19ರವರೆಗೆ ತನ್ನ ಬೆಳವಣಿಯನ್ನು ಕಾಪಾಡಿಕೊಂಡು ಬರುತ್ತಲೇ ಇದೆ. 2020-21 ಅವಧಿಯಲ್ಲಿ ಇಡೀ ಆರ್ಥಿಕತೆಯ ಜಿವಿಎ ಶೇಕಡಾ 7.2 ರಷ್ಟು ಸಂಕುಚಿತಗೊಂಡರೆ ಕೃಷಿಯ ಜಿವಿಎ ಬೆಳವಣಿಗೆಯು ಶೇಕಡಾ 3.4 ರಷ್ಟು ಸಕರಾತ್ಮಕ ಬೆಳವಣಿಗೆಯನ್ನು ಕಾಯ್ದುಕೊಂಡಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಕೃಷಿ ಸರಕುಗಳ ನಿರಂತರ ಪೂರೈಕೆ, ವಿಶೇಷವಾಗಿ ಅಕ್ಕಿ, ಗೋಧಿ, ಬೇಳೆಕಾಳುಗಳು ಮತ್ತು ತರಕಾರಿಗಳು ಆಹಾರ ಭದ್ರತೆಗೆ ಸಹಾಯಕಾರಿಯಾಗಿವೆ. 2019-20 ರ (ನಾಲ್ಕನೇ ಮುಂಗಡ ಅಂದಾಜಿನ ಪ್ರಕಾರ) ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆ (296.65 ಮಿಲಿಯನ್ ಟನ್) ಉತ್ಪಾದನೆಯಾಗಿತ್ತು ಇದನ್ನು 2018-19 ಕ್ಕೆ ಹೋಲಿಸಿದರೆ 11.44 ಮಿಲಿಯನ್ ಟನ್ ಹೆಚ್ಚಾಗಿದೆ. ಇದು ಹಿಂದಿನ ಐದು ವರ್ಷಗಳಿಗಿಂತ 26.87 ಮಿಲಿಯನ್ ಟನ್ ಹೆಚ್ಚಾಗಿದೆ, (2014-15 ರಿಂದ 2018-19) ಸರಾಸರಿ ಉತ್ಪಾದನೆ 269.78 ಮಿಲಿಯನ್ ಟನ್‍ಗಳಾಗಿತ್ತು. 2019-20 ಕ್ಕೆ ಹೋಲಿಸಿದರೆ 2020-21 ರಲ್ಲಿ ಶೇಕಡಾ 56 ರಷ್ಟು ಹೆಚ್ಚಳವನ್ನು ಕಾಣಬಹುದು ಕಾರಣ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಆಹಾರ ಧಾನ್ಯಗಳ ಹಂಚಿಕೆಯನ್ನು 2020 ಡಿಸೆಂಬರ್ ವರೆಗೆ ಸರ್ಕಾರವು 943.53 ಲಕ್ಷ ಟನ್ ಆಹಾರ ಧಾನ್ಯವನ್ನು ರಾಜ್ಯ ಕೇಂದ್ರ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ.
ಕೃಷಿ ಕೇತ್ರ ಏಕೆ ಮಹತ್ವ?
ಕೃಷಿ ಅದಕ್ಕೆ ಸಂಬಂಧಿಸಿದ ವಲಯವು ಭಾರತೀಯ ಆರ್ಥಿಕತೆಗೆ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಭಾರತೀಯ ರಾಷ್ಟೀಂiÀi ಆದಾಯಕ್ಕೆ ಸುಮಾರು 6 ನೇ ಒಂದು ಭಾಗದಷ್ಟು ಉದ್ಯೋಗವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಸುಮಾರು ದೇಶದ 50 ರಷ್ಟು ಉದ್ಯೋಗಿಗಳು ರಾಷ್ಟ್ರದ ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಇದು ಮೂಲಭೂತವಾಗಿದೆ. ಅದರ ಮೂಲಕ ದ್ವಿತೀಯ ಮತ್ತು ತೃತೀಯ ಕ್ಷೇತ್ರದ ಬೆಳವಣಿಗೆಯ ಮೂಲವೇ ಈ ಕೃಷಿಯಾಗಿದ್ದು, ಅದರ ಬೆಳವಣಿಗೆಯ ಮೇಲೂ ಪ್ರಭಾವ ಬೀರುತ್ತದೆ. ಕೃಷಿಯು ಬಡತನ, ನಿರುದ್ಯೋಗವನ್ನು ಕಡಿಮೆ ಮಾಡಲು ಕೃಷಿ ಪರಿಣಾಮಕಾರಿಯಾದ ವಲಯ ಬಡತನ ನಿರ್ಮೂಲನೆಗೆ ಕೃಷಿ ಆದಾಯ ಹೆಚ್ಚಿಸುವ ಮೂಲಕ ಪರೋಕ್ಷವಾಗಿ ಉದ್ಯೋಗವನ್ನು ಸೃಷ್ಟಿಸಿ ಆಹಾರದ ಬೆಲೆಯನ್ನು ಕಡಿಮೆ ಮಾಡಬಹುದು.
ಅಧ್ಯಯನದ ಉದ್ದೇಶಗಳು:
ಮಹತ್ವ:
ಭಾರತದಲ್ಲಿ ಭೀಕರ ಬರಗಾಲದಂತಯೇ ರೋಗವು ಕಾಣಿಸಿಕೊಂಡಿತು ಈಗಿರುವಾಗ ಕೈಗಾರಿಕೆ, ಸೇವಾ ವಲಯಗಳು ಒಟ್ಟು ದೇಶೀಯ ಉತ್ಪನ್ನದಲ್ಲಿ ಗಣನೀಯ ಇಳಿಕೆಯನ್ನು ಸಾಧಿಸಿತು. ಅದರೆ ಕೃಷಿ ವಲಯವನ್ನು ಹೊರತುಪಡಿಸಿ ನಕರಾತ್ಮಕ ಹಂತವನ್ನು ತಲುಪಿದವು. ಹೀಗಾಗಿ ರೈತರು ತಾವು ಬೆಳೆದಿರುವ ಬೆಳೆಯನ್ನ ಲಾಕ್‍ಡೌನ್ ಪರಿಣಾಮದಿಂದಾಗಿ ಬೇರೆ ರಾಜ್ಯಗಳಿಗೆ ರಫ್ತು ಮಾಡುವ ಹಕ್ಕನ್ನು ಕಸಿದುಕೊಂಡಂತಾಯಿತು. ಇದರಿಂದ ತಿಳಿಯುವುದೇನೆಂದರೆ ಲಾಕ್‍ಡೌನ್ ಸಂದರ್ಭದಲ್ಲಿ ಕೈಗಾರಿಕೆ ಮತ್ತು ಸೇವಾ ವಲಯಗಳು ನಿಂತು ಹೋದರು ಬದುಕಬಹದು ಆದರೆ ಕೃಷಿ ಕ್ಷೇತ್ರ ನಿಂತು ಹೋದರೆ ಹಸಿವಿನಿಂದ ಸಾಯಬೇಕಾಗುತ್ತದೆ. ಆದ್ದರಿಂದ ಸರ್ಕಾರಗಳು ರೈತರು ಬೆಳೆದಿರುವ ಉತ್ಪನ್ನಗಳಿಗೆ ನಿರ್ಬಂಧವನ್ನು ವಿಧಿಸದೆ ಪರ್ಯಾಯ ಮಾರ್ಗ ತೋರಿದ್ದರೆ ರೈತರಿಗೆ ಸ್ಪಲ್ಪ ಪ್ರಮಾಣದ ನಷ್ಷವನ್ನು ಭರಿಸಬಹುದಾಗಿತ್ತು. ಈಗ ಪಂಜಾಬ್, ಮಹರಾಷ್ಟ್ರ, ಮಧ್ಯಪ್ರದೇಶ, ಕೇರಳ, ಕರ್ನಾಟಕದಂತಹ ರಾಜ್ಯಗಳಲ್ಲಿ ಕೋವಿಡ್-19 ಎರಡನೇ ಅಲೆ ಪ್ರಾರಂಭವಾಗಿದ್ದು, ಮೊದಲ ಅಲೆಗಿಂತಲೂ ವ್ಯಾಪಕವಾಗಿ ಹರಡುತ್ತಿದೆ. ಇದು ಈಗೇ ಮುಂದುವರೆದರೆ ಮೊದಲಿನ ಪರಿಸ್ಥಿತಿಗೆ ಕಾರಣವಾಗಬಹುದು. ಕೃಷಿ ಚಟುವಟಿಕೆಗಳಿಗೆ ಸರ್ಕಾರ ಲಾಕ್‍ಡೌನ್ ಅವಧಿಯಲ್ಲಿ ತೆಗೆದುಕೊಂಡ ಕ್ರಮಗಳೆಂದರೆ: ಗ್ರೀನ್‍ಪಾಸ್ ವ್ಯವಸ್ಥೆ: ಆಯಾ ರಾಜ್ಯಗಳು ಒಂದು ರಾಜ್ಯದಿಂದ ಮತೊಂದು ರಾಜ್ಯಕ್ಕೆ ಕೃಷಿ ಸರಕುಗಳನ್ನು ಸಾಗಿಸಲು ವಿನಾಯಿತಿಯನ್ನು ನೀಡಲಾಯಿತು. ಕೆಲವು ರಾಜ್ಯಗಳಲ್ಲಿ ಎಪಿಎಂಸಿ ಮಾರುಕಟ್ಟೆಗಳಿಗೆ ಸಮಯವನ್ನು ನಿಗದಿ ಮಾಡಲಾಯಿತು. ಮಾರುಕಟ್ಟೆಯ ನಿರ್ಬಂಧವನ್ನು ಹಂತ ಹಂತವಾಗಿ ಕಡಿಮೆಗೊಳಿಸಲಾಯಿತು.
ವ್ಯಾಪ್ತಿ:
ಲಾಕ್‍ಡೌನ್ ಕೇವಲ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿರದೆ ಇಡೀ ಭಾರತ ದೇಶಕ್ಕೆ ಅನ್ವಹಿಸಿದ್ದರಿಂದ ಇದು ದೇಶದ ವಿವಿಧ ಭಾಗಗಳಿಂದ ರೈತರು ಅನುಭವಿಸಿದ ತೊಂದರೆಗಳನ್ನು ಪರೀಕ್ಷಿಸಲಾಗಿದೆ. ಇದು ಲಾಕ್‍ಡೌನ್ ಸಂದರ್ಭದಲ್ಲಿ ಉತ್ಪಾದನೆಯಾದ ಉತ್ಪಾದನಾ ಪ್ರಮಾಣ, ಹಿಂದಿನ ಉತ್ಪಾದನೆಯ ಸಾಮ್ಯತೆಯನ್ನು ವಿವರಿಸಲಾಗಿದೆ. ಹಾಗೂ ಸರ್ಕಾರಗಳು ಕೃಷಿ ವಲಯದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ವಿವರಿಸಲಾಗಿದೆ.
ಸಾಹಿತ್ಯಾವಲೋಕನ:
ಒಂದು ಸಂಶೋಧನೆಗೆ ಸಾಹಿತ್ಯಾವಲೋಕನ ಅತೀ ಪ್ರಮುಖವಾದುದ್ದು, ಏಕೆಂದರೆ ಇದರಿಂದ ಅಧ್ಯಯನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಾಗೂ ಈಗಾಗಲೇ ಮಾಡಿರುವ ಸಂಶೋಧನೆಗಳ ಅಂತರವನ್ನು ತಿಳಿಯಲು ಸಾಹಿತ್ಯಾವಲೋಕನ ಅವಶ್ಯಕವಾದುದ್ದು.
ಎಂ ಚಂದ್ರ ಪೂಜಾರಿ
ಲಾಕ್‍ಡೌನ್: ಈ ಕೃತಿಯಲ್ಲಿ ಲೇಖಕರು ಕೋವಿಡ್-19 ಕಾರಣದಿಂದಾಗಿ ದೇಶದಲ್ಲಿ ಲಾಕ್‍ಡೌನ್ ಆದ ಪರಿಣಾಮದಿಂದಾಗಿ ಜನರು ಅನುಭವಿಸಿದ ಕಷ್ಟಗಳನ್ನು ಹಾಗು ಸರ್ಕಾರದ ಕೆಲವು ಅವೈಜ್ಞಾನಿಕವಾದ ನೀತಿಗಳಿಂದ ಜನರು ಅನುಭವಿಸಿದ ಮಾನಸಿಕ ಒತ್ತಡ, ನಿರುದ್ಯೋಗದ ಸಮಸ್ಯೆಯನ್ನು ವಸ್ತುನಿಷ್ಟವಾಗಿ ವಿವರಿಸಿದ್ದಾರೆ. ಹಾಗೂ ಸರ್ಕಾರಗಳು ಜನ ಸಾಮಾನ್ಯರ ಕಷ್ಟಗಳಿಗೆ ಹೇಗೆ ಸ್ಪಂದಿಸಿದವು, ರೈತರು, ಬೀದಿ ವ್ಯಾಪಾರಿಗಳು, ಸೇವಾ ವರ್ಗದವರು ಯಾವ ಯಾವ ತೊಂದರೆಗಳನ್ನು ಅನುಭವಿಸಿದರು ಎಂಬುವುದನ್ನು ತಿಳಿಸಿದ್ದಾರೆ.
Impact of COVID-19 on the indian agriculture system: A 10- point strategy for post pandemic recovery.
AG Adeeth Cariappa, Kamlesh Kumar Acharya Chaithanya Asok Adhav, R Sendhil and Ramasundarm.
Year |
GDP growth at 2011-12 prices |
GDP growth at current prices |
||||||||
Q1 |
Q2 |
Q3 |
Q4 |
Total |
Q1 |
Q2 |
Q3 |
Q4 |
Total |
|
2020-21 |
-23.92 |
-7.54 |
- |
- |
-15.67 |
-22.57 |
-4.04 |
- |
- |
-13.3 |
2019-20 |
5.24 |
4.42 |
4.08 |
3.09 |
4.18 |
8.06 |
5.87 |
7.39 |
7.53 |
7.21 |
2018-19 |
7.1 |
6.2 |
5.59 |
5.67 |
6.12 |
13.57 |
11.4 |
11.36 |
7.89 |
10.95 |
2017-18 |
5.78 |
6.47 |
7.64 |
8.18 |
7.04 |
10.1 |
11.13 |
11.64 |
11.4 |
11.09 |
2016-17 |
8.68 |
9.67 |
8.58 |
6.29 |
8.26 |
12.22 |
11.87 |
11.46 |
11.55 |
11.76 |
2015-16 |
7.59 |
8.03 |
7.2 |
9.09 |
8 |
11.29 |
9.89 |
9.16 |
11.5 |
10.46 |
2014-15 |
8.02 |
8.7 |
5.92 |
7.11 |
7.41 |
13.6 |
13.69 |
9.03 |
8.29 |
10.99 |
2013-14 |
6.45 |
7.34 |
6.53 |
5.34 |
6.39 |
10.9 |
13.97 |
14.62 |
12.31 |
12.97 |
2012-13 |
4.87 |
7.49 |
5.38 |
4.3 |
5.46 |
13.2 |
16.14 |
13.52 |
12.69 |
13.82 |
ಕೋವಿಡ್-19 ಸಾಂಕ್ರಮಿಕ ರೋಗವು ಭಾರತೀಯ ಕೃಷಿ ವ್ಯವಸ್ಥೆಯನ್ನೆ ವ್ಯಾಪಕವಾಗಿ ಅಡ್ಡಿಪಡಿಸಿತು. ಅದೆನೇ ಇದ್ದರೂ ಇತ್ತೀಚಿನ ತ್ರೈಮಾಸಿಕ ಜಿಡಿಪಿ ಕೋವಿಡ್ ನಂತರದ ಸನ್ನಿವೇಶವು ಭಾರತೀಯ ಕೃಷಿಯಲ್ಲಿ ಸ್ಥಿತಿಸ್ಥಾಪಕತೆಯನ್ನು ತೋರಿಸುತ್ತಿದೆ. ಈ ವಲಯ ಮಾತ್ರ ಸಕರಾತ್ಮಕವಾಗಿ ನೊಂದಾಯಿಸಿದ ವಲಯವಾಗಿದೆ. (2020-21 ತ್ರೈಮಾಸಿಕ ಏಪ್ರಿಲ್ 1 ರಿಂದ ಜೂನ್ 2020 ರವರಗೆ) ಆರ್ಥಿಕ ವರ್ಷದಲ್ಲಿ 3.4 ರಷ್ಟು ಬೆಳವಣಿಯಲ್ಲಿತ್ತು. ಅದೇ ಹಿಂದಿನ ಬೆಳವಣಿಗೆಯನ್ನು ಗಮನಿಸಿದಾಗ 5.9 ರಷ್ಡು ಅಂದಾಜಿಸಲಾಗಿತ್ತು. ಆದರೆ ಇಲ್ಲಿ 2.5 ರಷ್ಟು ಕುಸಿದಿದೆ. ಇದರಿಂದ ಉತ್ಪಾದನೆಯ ಪ್ರಮಾಣ ಲಾಕ್‍ಡೌನ್ ಸಮಯದಲ್ಲಿ ಕುಸಿದಿದೆ ಎಂದು ಸಂಶ್ಲೇಷಿಸಿದ್ದಾರೆ ಹಾಗೂ ಲಾಕ್‍ಡೌನ್ ನಂತರದ ದಿನಗಳಲ್ಲಿ ಕೃಷಿಯ ಪುನಃಚೇತನಕ್ಕಾಗಿ 10 ಅಂಶಗಳನ್ನು ಪ್ರಸ್ಥಾಪಿಸಿದ್ದಾರೆ.
V ವಿನ್ಯಾಸ ಮಾದರಿಯ ಆರ್ಥಿಕತೆ.
Source |
Ministry of Statistics and Programme Implementation : 2011-2019, 2019-20, 2020-21 |
ಕೋವಿಡ್ ಸಾಂಕ್ರಮಿಕ ರೋಗದ ಪರಿಣಾಮವಾಗಿ ಜಿಡಿಪಿಯಲ್ಲಿ ಬಾರಿ ಬದಲಾವಣೆ ಕಂಡು ಬಂದಿತು. ಅಂದರೆ 2020-21 ಮೊದಲ ತ್ರೈಮಾಸಿಕ ಅವಧಿಯಲ್ಲಿ -23.92% ರಷ್ಟು ನಕರಾತ್ಮಕ ಹಂತವನ್ನು ತಲುಪಿ ಎರಡನೇ ತ್ರೈಮಾಸಿಕ ಹಂತಕ್ಕೆ ಸಕರಾತ್ಮಕವಾಗಿಲ್ಲದಿದ್ದರೂ -7.54 ರಷ್ಟು ಸಾಧಿಸಿತು ಇದರಿಂದ ಜಿಡಿಪಿಯ ಬೆಳವಣಿಗೆಯು ನಕರಾತ್ಮಕವಾಗಿದ್ದರು ಚೇತರಿಕೆಯ ಹಂತವಾಯಿತು. ಈ ಏಳುÀಬೀಳಿನ ಜಿಡಿಪಿಯು ಇಂಗ್ಲಿಷ್ ಅಕ್ಷರದ ಗಿ ಅಕ್ಷರವನ್ನು ಹೋಲುವುದರಿಂದ ಇದನ್ನು V Shaped Economy ಎಂದು ಕರೆಯಲಾಗುತ್ತದೆ
ಯಾವುದೇ ಒಂದು ದೇಶ ನಿರ್ದಿಷ್ಟ ವರ್ಷದಲ್ಲಿ ಕೃಷಿ ಉತ್ಪಾದನೆಯ ಗುರಿಯನ್ನು ಸರ್ಕಾರ ನಿಗದಿಪಡಿಸುತ್ತದೆ ಹಾಗೂ ಇದಕ್ಕೆ ಸರ್ಕಾರಗಳು ಉತ್ಪಾದನೆಯ ಪ್ರಮಾಣದ ಗುರಿ ಮುಟ್ಟಲು ರೈತರಿಗೆ ಬೇಕಾದ ಸವಲತ್ತುಗಳನ್ನು ನಿರ್ಮಾಣ ಮಾಡಿಕೊಡಬೇಕು. ಈಗಿನ ಪರಿಸ್ಥಿಯಲ್ಲಿ ರೈತರು ಬಳಸುತ್ತಿರುವ ಬೀಜ, ಗೊಬ್ಬರ, ಕೃಷಿ ಉಪಕರಣಗಳ ಬೆಲೆ ಏರಿಕೆಯಾಗುತ್ತಿರುವುದು, ರೈತರು ಅವುಗಳನ್ನು ಅನಿವಾರ್ಯವಾಗಿ ಕೊಂಡುಕೊಳ್ಳುವ ವಾತಾವರಣವನ್ನು ಕಾರ್ಪೋರೇಟ್ ಕಂಪನಿಗಳು ಈಗಾಗಲೇ ರೈತರಲ್ಲಿ ಸೃಷ್ಟಿ ಮಾಡಿವೆ. ಉತ್ಪಾದನೆಯ ಪ್ರಮಾಣ ಸರ್ಕಾರ ನಿಗದಿಪಡಿಸಿದ ಗುರಿಯನ್ನು ತಲುಪಿದರೂ ಬೀಜ, ಗೊಬ್ಬರ, ಮತ್ತು ಕೃಷಿ ಉಪಕರಣಗಳ ಬೆಲೆ ಏರಿಕೆಯಾದಂತೆ ಅವರ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಲಾಗದೆ ಇರುವುದು ರೈತರ ಶೋಚನೀಯ ಸಂಗತಿ.
ವರ್ಷ |
ಉತ್ಪಾದನೆಯ ಪ್ರಮಾಣ ಮಿಲಿಯನ್ ಟನ್ಗಳಲ್ಲಿ |
2017-18 |
284.8 ಮಿ.ಟ |
2018-19 |
285.2 ಮಿ.ಟ |
2019-20 |
291.95 ಮಿ.ಟ |
2020-21 |
298.3 ಮಿ.ಟ |
ಮೇಲಿನ ಪಟ್ಟಿಯನ್ನು ಗಮನಿಸಿದರೆ ಸರ್ಕಾರ ನಿಗದಿಪಡಿಸಿದ ಉತ್ಪಾದನೆಯ ಗುರಿಯನ್ನು ಹೆಚ್ಚು ಕಡಿಮೆ ಸಾಧಿಸುತ್ತದೆ, ಆದರೆ ಈ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವಂತಾದರೆ ಇನ್ನೂ ಹೆಚ್ಚಿನ ಉತ್ಪಾದನೆಯನ್ನು ನಿರೀಕ್ಷಿಸಬಹುದು. ಹಾಗೆಯೇ ಭಾರತದಂತಹ ದೇಶಗಳಲ್ಲಿ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರು ಹೆಚ್ಚಾಗಿರುವುದರಿಂದ ಬೀಜ, ರಸಗೊಬ್ಬರ, ಮತ್ತು ಯಂತ್ರೋಪಕರಣಗಳಿಗೆ ಹೆಚ್ಚಿನ ವ್ಯಯ ಮಾಡದೇ ಉತ್ಪಾದನೆಯ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು.
ಸಲಹೆಗಳು
References