Tumbe Group of International Journals

Full Text


ಭಾರತದ ರಾಜಕಾರಣ: ಸಂಯುಕ್ತ ವ್ಯವಸ್ಥೆಯ ಕಾರ್ಯಾಚರಣೆಯಲ್ಲಿನ ಒಂದು ಅಧ್ಯಯನ

ಡಾ. ಸರಸ್ವತಿ.ಕೆ.

ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ,

ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,

ದಿಣ್ಣೂರು ಮುಖ್ಯರಸ್ತೆ, ಆರ್ ಟಿ. ನಗರ, ಬೆಂಗಳೂರು-560 032.

Email ID: saraswathi.basavaraju@yahoo.com

contact Number: 9972192645


ಪ್ರಸ್ತಾವನೆ

   ಭಾರತದ ರಾಜಕಾರಣದಲ್ಲಿ ಸ್ವಾತಂತ್ರ್ಯಾ ನಂತರ ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು 17ನೆಯ ಲೋಕಸಭಾ ಚುನಾವಣೆಯವರೆಗೆ ಹಂತ ಹಂತವಾಗಿ ಅನೇಕ ಬದಲಾವಣೆಗಳನ್ನು ಹೊಂದುತ್ತಾ ಮೊದಲನೆಯ ಹಂತ ಮೂರು ದಶಕಗಳ ಕಾಲ ಸತತವಾಗಿ ಕೇಂದ್ರ ಮತ್ತು ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತದ ಪರ್ವ, ದ್ವಿತೀಯ ಹಂತ ರಾಜ್ಯಗಳಲ್ಲಿ ವಿಭಿನ್ನ ಪಕ್ಷಗಳ ಆಡಳಿತದ ಆರಂಭದ ಕಾಲ, ಮೂರನೆಯ ಹಂತ ಕೇಂದ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷದ ಶಕೆ ಆರಂಭ, ನಾಲ್ಕನೆಯದಾಗಿ ಬದಲಾವಣೆಯ ಹಂತ ಸಮ್ಮಿಶ್ರ ಸರ್ಕಾರಗಳ ಯುಗದ ಅನುಭವ, ಐದನೆಯ ಹಂತ ಮತ್ತೊಮ್ಮೆ ಏಕ ಪಕ್ಷ ಪ್ರಾಬಲ್ಯವನ್ನು ಹೊಂದಿದೆ. ಮತದಾರ ಮೂರು ದಶಕಗಳ ನಂತರ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವುದರೊಂದಿಗೆ ಭಾರತದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಿರುವುದನ್ನು ಕಾಣಬಹುದು. ಹಂತ ಹಂತವಾಗಿ ಭಾರತದ ರಾಜಕಾರಣದಲ್ಲಿ ಶಾಂತಿಯುತವಾಗಿ ಬದಲಾವಣೆಯೊಂದಿಗೆ ಭಾರತದ ಪ್ರಜಾಪ್ರಭುತ್ವ ಇನ್ನಷ್ಟು ಸುಭದ್ರಗೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಭಾರತದ ರಾಜಕಾರಣ ಹಾಗೂ ಸಂಯುಕ್ತ ಕಾರ್ಯಾಚರಣೆಯ ಅಧ್ಯಯನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಪ್ರಮುಖ ಪದಗಳು: ಭಾರತದ ರಾಜಕಾರಣ, ಸಾಮಾಜಿಕ, ಆರ್ಥಿಕ ಶ್ಯೆಕ್ಷಣಿಕ, ತಾಂತ್ರಿಕ, ವೈದ್ಯಕೀಯ, ಸಂಶೋಧನಾ, ಕಾಂಗ್ರೆಸ್,

ಪೀಠಿಕೆ:

            ಭಾರತದ ರಾಜಕಾರಣದಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ ಸ್ವಾತಂತ್ರ್ಯಾ ನಂತರ ಮೊದಲ ಸಾರ್ವತ್ರಿಕ ಚುನಾವಣೆಯಾಗುವವರೆಗೆ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಂಚೂಣಿಯಲ್ಲಿದ್ದ ಮಹಾನ್ ನಾಯಕರುಗಳನ್ನೊಳಗೊಂಡ ಸಂವಿಧಾನ ರಚನಾಸಭೆಯೇ ಮೊದಲ ಸಂಸತ್ತಾಗಿ ಪರಿವರ್ತನೆಗೊಂಡು ಪ್ರಾರಂಭದಿಂದ ಅಂದರೆ ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ ಮೂರು ದಶಕಗಳ ಕಾಲ ರಾಷ್ಟ್ರವನ್ನಾಳಿದ ಪಕ್ಷ ಕಾಂಗ್ರೆಸ್ ಬಲಿಷ್ಠ ಒಕ್ಕೂಟ ಸರ್ಕಾರಕ್ಕೆ ಒತ್ತು ಕೊಟ್ಟಿತ್ತು. ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದ ಭಾರತದಲ್ಲಿ ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಾ ಸಾಮಾಜಿಕ, ಆರ್ಥಿಕ ಶ್ಯೆಕ್ಷಣಿಕ, ತಾಂತ್ರಿಕ, ವೈದ್ಯಕೀಯ, ಸಂಶೋಧನಾ, ರಾಷ್ಟ್ರ ರಕ್ಷಣೆಯ ಹೀಗೆ ನಾನಾ ಸಮಸ್ಯೆಗಳ ಸುಳಿಯಲ್ಲಿ ನಲುಗಿದ್ದ ದೇಶದ ಆಡಳಿತವನ್ನು ನೆಡೆಸಿದ ಮೊದಲ ಪ್ರಧಾನಮಂತ್ರಿ ಜವಹರಲಾಲ್ ನೆಹರುರವರ ಪಾತ್ರ ಭಾರತದ ರಾಜಕಾರಣದಲ್ಲಿ ಹಾಗೂ ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ ವಿಷಯವಾಗಿದೆ.

            ಮೂರು ದಶಕಗಳ ಕಾಲ ಸತತವಾಗಿ ದೇಶವನ್ನಾಳಿದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇವಲ ಸಣ್ಣ ಅಂತರದಲ್ಲಿ ಕಾಂಗ್ರೆಸ್ಸೇತರ ಪಕ್ಷ ಅಧಿಕಾರದಲ್ಲಿದ್ದರೂ ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿ 46 ವರ್ಷಗಳ ಕಾಲ ಸತತವಾಗಿ ಕೇಂದ್ರೀಕೃತ ಆಡಳಿತವನ್ನು ನಡೆಸುವಲ್ಲಿ ಯಶಸ್ವಿಯಾದರೂ 1985ರ ನಂತರ 1989ರಿಂದ 2019 ರವರೆಗೆ ಯಾವುದೇ ಒಂದು ಪಕ್ಷ ಬಹುಮತ ಪಡೆಯದೆ ಸಮ್ಮಿಶ್ರ ಸರ್ಕಾರಗಳು ಅನಿವಾರ್ಯವಾಗಿ 1989, 1991, 1996, 1998, 1999, 2004 ಮತ್ತು 2009, 2014ರ ಚುನಾವಣೆಗಳು ಸತತವಾಗಿ ಸಮ್ಮಿಶ್ರ ಸರ್ಕಾರಗಳ ರಚನೆಗೆ ದಾರಿಯಾಗಿದೆ.

ಕೇಂದ್ರ ಸರ್ಕಾರದ ಆಡಳಿತದಲ್ಲಿ ಸತತ ಏಕ ಪಕ್ಷದ ಮುಂದುವರೆಯುವಿಕೆಗೆ ಅನೇಕ ಮಹನೀಯರ, ಕೊಡುಗೆ ಸಹ ಅಭೂತಪೂರ್ವವಾಗಿದೆ. ಲಾಲ್ ಬಹುದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಾಯಿ ಪಟೇಲ್, ರಾಜೇಂದ್ರ ಪ್ರಸಾದ್, ಡಾ. ಬಿ.ಆರ್. ಅಂಬೇಡ್ಕರ್, ಮುಂತಾದ ಅನೇಕ ರಾಷ್ಟ್ರೀಯ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಂತಹ ದೇಶಪ್ರೇಮಿಗಳು, ಉದಾತ್ತ ಮನೋಭಾವವುಳ್ಳ ಮಹಾನ್ ವ್ಯಕ್ತಿಗಳು ಸಂಸತ್ತನ್ನು ಪ್ರವೇಶಿಸಿದ್ದರಿಂದ ಭಾರತದ ಸಂಸತ್ತು ಪ್ರಜಾಪ್ರಭುತ್ವದ ದೇಗುಲವಾಗಿ ಕಾರ್ಯನಿರ್ವಹಿಸಲಾರಂಭಿಸಿತು.

 ಆದರೆ ರಾಷ್ಟ್ರದ ಸಮಗ್ರತೆಯ ಹೆಸರಿನಲ್ಲಿ ರಾಜ್ಯಗಳ ಸಮಸ್ಯೆಗಳನ್ನು ಕಡೆಗಣಿಸಲಾಯಿತೆಂಬ ಕೂಗು ಕೆಲವು ರಾಜ್ಯಗಳಿಂದ ವ್ಯಕ್ತವಾಗುತ್ತ್ತಿದ್ದಂತೆಯೇ ಅದನ್ನು ಬಗೆಹರಿಸಲು ಕೇಂದ್ರ ತಂಡ ನೆರವಾಗುತ್ತಿದ್ದದು ಭಿನ್ನಾಭಿಪ್ರಾಯಗಳು ಶಮನಗೊಳ್ಳಲು ಸಾಧ್ಯವಾಗುತ್ತಿತ್ತು.

ಆದರೂ ಸಹ, ಪ್ರಾದೇಶಿಕ ಪಕ್ಷಗಳ ಬೆಳವಣಿಗೆಯಿಂದಾಗಿ, ನಂತರದ ಸಮ್ಮಿಶ್ರ ಸರ್ಕಾರಗಳ ಬೆಳವಣಿಗೆಯಿಂದಾಗಿ ಕೇಂದ್ರದ ಧೋರಣೆ ಬದಲಾಗಿದೆ ರಾಜ್ಯ ಸರ್ಕಾರಗಳ ವಿರುದ್ದ ಉಪಯೋಗಿಸುತ್ತಿದ್ದ ಅಸ್ರ್ತಗಳ ಪ್ರಯೋಗಕ್ಕೆ ಕತ್ತರಿ ಬಿದ್ದಿದೆ. ಅದರಿಂದಾಗಿ ಸಹಕಾರಯುತ ಸಂಯುಕ್ತ ಕಾರ್ಯಾಚರಣೆಗೆ ಬರುವಂತಾದದ್ದು ಒಂದು ಒಳ್ಳೆಯ ಬೆಳವಣಿಗೆಯಾಗಿ ಪರಿಣಮಿಸಿದೆ.

ಉದ್ದೇಶಗಳು:

 1. ಭಾರತದ ರಾಜಕಾರಣದಲ್ಲಿ ಮಹತ್ತರವಾದ ಬದಲಾವಣೆಗಳು ಸಂಭವಿಸಲು ಕಾರಣವೇನು?

 2. ಆ ಘಟ್ಟಗಳಿಗೆ ಕಾರಣರಾದ ವ್ಯಕ್ತಿಗಳು ಯಾರು? ಅವುಗಳು ಉಂಟಾಗಲು ಪರಿಸ್ಥಿತಿಗಳು, ಸನ್ನಿವೇಶಗಳು ಯಾವುವು? ಎಂಬ ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನ ಈ ಅಧ್ಯಾಯದಲ್ಲಿದೆ

ಪ್ರಮುಖ ಅಂಶಗಳು: ಭಾರತದ ರಾಜಕಾರಣ, ಏಕ ಪಕ್ಷದ ಪ್ರಾಬಲ್ಯ, ಸಮ್ಮಿಶ್ರ ಸರ್ಕಾರ, ಸಂಯುಕ್ತ ವ್ಯವಸ್ಥೆಯ ಕಾರ್ಯಾಚರಣೆ.

ಪೂರ್ವಕಲ್ಪನೆ:

ಭಾರತದ ರಾಜಕಾರಣದಲ್ಲಿ ಸಂಯುಕ್ತ ವ್ಯವಸ್ಥೆಯ ಕಾರ್ಯಾಚರಣೆಯ ಹಂತಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂವಿಧಾನದತ್ತವಾಗಿ ಅಧಿಕಾರ ವಿಭಜನೆ ಆಗಿರುವುದರಿಂದ ಘರ್ಷಣೆಗಳು ಉಂಟಾಗುವುದಿಲ್ಲ.

ಅಧ್ಯಯನದ ವಿಧಾನ

ಭಾರತದ ಸಂಯುಕ್ತ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಐತಿಹಾಸಿಕ ವಿಧಾನವನ್ನು, ಸಂಯುಕ್ತ ವ್ಯವಸ್ಥೆಯ ಕಾರ್ಯಾಚರಣೆಯನ್ನು ಅಧ್ಯಯನ ಮಾಡಲು ವಿಶ್ಲೇಷಣಾತ್ಮಕ, ಹೋಲಿಕಾ, ವಿಧಾನಗಳನ್ನು ಅನುಸರಿಸಲಾಗಿದೆ.

ಸಾಹಿತ್ಯದ ವಿಮರ್ಶೆ

ಭಾರತದ ರಾಜಕಾರಣದಲ್ಲಿ ಸಂವಿಧಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಧಿಕಾರ ವಿಭಜನೆ ಕುರಿತಂತೆ ಇರುವ ಸಂವಿಧಾನ ರಚನಾ ಸಭೆಯ ಚರ್ಚೆಯ ಪ್ರಾಥಮಿಕ ಗ್ರಂಥಗಳು, ಸಂಯುಕ್ತ ವ್ಯವಸ್ಥೆಯ ಕಾರ್ಯಾಚರಣೆಯ ಹಂತಗಳ ಕುರಿತು ಪುಸ್ತಕಗಳು, ನಿಯತಕಾಲಿಕೆಗಳು,   ಹಾಗೂ ಇತರ ದ್ವತೀಯ ಆಕರಗಳನ್ನು ಸಂಶೋಧಕರ ಲೇಖನUಳು, ಪತ್ರಿಕೆಗಳು, ವೆಬ್ ಸ್ಯೆಟ್ ಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. 

ವಿವರಣೆ

1: ಭಾರತದ ರಾಜಕಾರಣ: ಮೊದಲನೆಯ ಹಂತ -ಏಕ ಪಕ್ಷದ ಪ್ರಾಬಲ್ಯ

            ಸ್ವಾತಂತ್ರ್ಯಾ ನಂತರ ಭಾರತದ ರಾಜಕಾರಣದಲ್ಲಿ ಹಂತಹಂತವಾಗಿ ಮಹತ್ತರವಾದ ಬದಲಾವಣೆಗಳನ್ನು ಕಾಣುತ್ತಾ ಬಂದಿದೆ, ಭಾರತದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆಯ ಪಾತ್ರ ಬಹಳ ಮಖ್ಯವಾಗಿದೆ, ಕಾರಣ ಸ್ವಾತಂತ್ರ್ಯ ಪೂರ್ವದಲ್ಲಿ  ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಂಚೂಣಿಯಲ್ಲಿದ್ದದ್ದು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೇಶಕ್ಕಾಗಿ ಹೋರಾಡಿದ ಸಂಸ್ಥೆ ಮುಂದೆ ರಾಜಕೀಯ ಪಕ್ಷವಾಗಿ ಪರಿಣಮಿಸಿದ್ದರಿಂದ ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಶ್ರಮಿಸಿದ ಪಕ್ಷ ಎಂಬ ಮನೋಭಾವನೆ ಹಾಗೂ ಬಹುತೇಕ ಸ್ವಾತಂತ್ರ್ಯ ಚಳುವಳಿಯಲ್ಲಿ ಮೂಡಿದ್ದರಿಂದ ರಾಷ್ಟ್ರೀಯತಾ ಭಾವನೆಯ ಮುಂದುವರೆದ ಭಾಗವಾಗಿ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು 1989ರವರೆಗೆ ಸತತವಾಗಿ (1977-1979 ರ ಸಣ್ಣ ಅಂತರ ಹೊರತುಪಡಿಸಿ, ಕಾಂಗ್ರೆಸ್ಸೇತರ ಪಕ್ಷ ಅಧಿಕಾರದಲ್ಲಿದ್ದಿತು) ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರ ಸೂತ್ರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ಕೇಂದ್ರೀಕೃತ ಆಡಳಿತವನ್ನು ನಡೆಸುವಲ್ಲಿ ಗೆಲುವನ್ನು ಸಾಧಿಸಿತು.

            1989ರಿಂದ ಭಾರತದ ರಾಜಕಾರಣದಲ್ಲಿ ಅತ್ಯಂತ ಮಹತ್ತರ ಬದಲಾವಣೆಗಳಾಗಿವೆ, ಅದೊಂದು ಪರಿವರ್ತನಾ ಘಟ್ಟ ಎನಿಸಿದೆ, ಏಕೆಂದರೆ ಮೊದಲ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಸಮ್ಮ್ಮಿಶ್ರ ಸರ್ಕಾರ ರಚನೆಯಾಗುವುದರೊಂದಿಗೆ ಅದು ಭಾರತದಲ್ಲಿ ಪ್ರ್ರಾಂತೀಯ ಅಥವಾ ರಾಜ್ಯ ಪಕ್ಷಗಳನ್ನು ದೇಶದ್ರೋಹಿಗಳ ರೀತಿಯಲ್ಲಿ ಕಾಣುತ್ತಿದ್ದ ಪರಿಪಾಠ ಕೊನೆಗೊಂಡ ಘಟ್ಟ, ರಾಜ್ಯಗಳಿಗೆ ಪ್ರ್ರಾಂತೀಯ ಅಥವಾ ರಾಜ್ಯ ಪಕ್ಷಗಳಿಗೆ ಸ್ಥಾನವನ್ನು ರಾಷ್ಟ್ರಮಟ್ಟದಲ್ಲಿ ಕಲ್ಪಿಸಿಕೊಟ್ಟ ಘಟ್ಟ, ರಾಜ್ಯಗಳ ಕೂಗಿಗೆ ಬೆಲೆಯೇ ಇಲ್ಲದ ಸಂಧರ್ಭಗಳಲ್ಲಿ ರಾಜ್ಯದ ಮಾತಿಗೆ ಅತ್ಯಂತ ಬೇಡಿಕೆ ಬೆಲೆ ಬಂದ ಘಟ್ಟ, ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳಿಗೆ ಅತ್ಯಂತ ಹೆಚ್ಚಿನ ಮಹತ್ವ ಬಂದ ಘಟ್ಟ, ರಾಜ್ಯದ ರಾಜಕೀಯ ಪಕ್ಷಗಳು ಕೇಂದ್ರದ ನೀತಿ ನಿರ್ಧಾರಗಳಲ್ಲಿ ಪಾತ್ರ ವಹಿಸುವಷ್ಟರ ಮಟ್ಟಿಗೆ ಬzಲಾವಣೆಗೊಂಡು ರಾಜ್ಯಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಹೋದರೆ ಅದು ತನ್ನ ಅಸ್ಥಿತ್ವಕ್ಕೆ ಧಕ್ಕೆ ಆಗಬಹುದೆಂಬ ಭಯ ಕೇಂದ್ರಕ್ಕೆ ಬಂದಿರುವಂತಹ ಪರಿಸ್ಥಿತಿ, ಇದು ಕೇಂದ್ರದ ಬದುಕುಳಿಯುವ ಪ್ರಶ್ನೆ, ರಾಜ್ಯಗಳಿಗೆ ಹೆಚ್ಚಿನ ಬೇಡಿಕೆ ಬಂದಂತಹ ರಾಜ್ಯಗಳು ಮೇಲುಗ್ಯೆ ಸಾಧಿಸಿದ, ಸಂಯುಕ್ತ ವ್ಯವಸ್ಥೆಯು ರಾಜ್ಯದ ಕಡೆಗೆ ವಾಲಿರುವ ಘಟ್ಟ, ಭಾರತೀಯ ರಾಜಕೀಯವು ಪ್ರಾಯೋಗಿಕವಾಗಿ ಸಂಯುಕ್ತದೆಡೆಗೆ ಸಾಗಿ ಕಾರ್ಯನಿರ್ವಹಣೆಯತ್ತ ವಾಲಿದ ಪರ್ವ ಎಂದು ಹೇಳಬಹುದಾಗಿದೆ.

            ಬಹು ಪಕ್ಷ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಘಟ್ಟ ಅದು ಸಮ್ಮಿಶ್ರ ಸರ್ಕಾರಗಳ ರಚನೆಗೆ ಅವಕಾಶ ಮಾಡಿಕೊಟ್ಟ ಘಟ್ಟ, ‘ಸಮ್ಮಿಶ್ರ ಸರ್ಕಾರಗಳು ಅಲ್ಪಾಯು’ ಎಂಬ ಸಿದ್ದಾಂತವನ್ನು ತಲೆಕೆಳಗು ಮಾಡಿ ಪೂರ್ಣಾವಧಿಯನ್ನು ಮುಗಿಸಿದ ಘಟ್ಟ, ಅನೇಕ ರಾಜಕೀಯ ಪಕ್ಷಗಳು ಒಕ್ಕೂಟ ಸರ್ಕಾರದ ರಚನೆಯಲ್ಲಿ ಭಾಗವಹಿಸಿ ಒಟ್ಟಿಗೆ ಸೇರಿ ಆಡಳಿತವನ್ನು ನಡೆಸಿ ಪೂರ್ಣಾವಧಿಯನ್ನು ಯಶಸ್ವಿಯಾಗಿ ತಲುಪಿದ ಘಟ್ಟ, ಕಾಂಗ್ರೆಸ್‍ನಂತಹ ಏಕ್ಯೆಕ ಪಕ್ಷದಿಂದ ಮಾತ್ರ ದೇಶದಲ್ಲಿ ಸ್ಥಿರ ಆಡಳಿತ ಒದಗಿಸಲು ಸಾಧ್ಯವೇ ಹೊರತು ಬೇರೆ ಯಾವ ಪಕ್ಷದಿಂದಲೂ ಸಾಧ್ಯವಿಲ್ಲ ಎಂಬ ಭಾವನೆ ದೂರಾಗಿ ಕಾಂಗ್ರೆಸ್ ಪಕ್ಷದ ಅವಸಾನ ಪ್ರಾರಂಭಗೊಂಡಿದ್ದು ಪರಿವರ್ತನೆಯ್ಟ ಘಟ್ಟ,

             ಅಲ್ಲದೆ ಕಾಂಗ್ರಸ್ ಪಕ್ಷಕ್ಕೆ ಪರ್ಯಾಯವಾಗಿ ಮತ್ತೊಂದು ಬಹು ದೊಡ್ಡ ಪಕ್ಷವಾಗಿ ತನ್ನದೇ ಆದ ಸ್ವ-ಸಾಮಥ್ರ್ಯದ ಮೇಲೆ ಅಧಿಕಾರವನ್ನು ಪಡೆಯುವ ಮೂಲಕ ಭಾರತೀಯ ಜನತಾ ಪಕ್ಷ ಹೊರಹೊಮ್ಮಿದ್ದು ಹಂತ ಹಂತವಾಗಿ ರಾಜ್ಯಗಳಲ್ಲಿ ಅಧಿಕಾರವನ್ನು ನಡೆಸುವ ಮೂಲಕ ತನ್ನದೇ ಆದ ಛಾಪನ್ನು ರಾಜಕೀಯದಲ್ಲಿ ಮೂಡಿಸಲು ಯಶಸ್ವಿಯಾಗಿ ಪರಿಣಮಿಸಿರುವುದು, ಭಾರತದಾದ್ಯಂತ ಪ್ರಚಂಡ ಜನಪ್ರಿಯತೆಯನ್ನು ಗಳಿಸಿದ ಪಕ್ಷ, ಬಿ.ಜೆ.ಪಿ.ಯ ಹಂತ ಹಂತವಾದ ಬೆಳವಣಿಗೆಯು ಮತ್ತೊಂದು ಪ್ರಮುಖ ಘಟ್ಟ 

            ಈ ಎಲ್ಲಾ ಬದಲಾವಣೆಗಳು ಸಂಭವಿಸಲು ಕಾರಣವೇನು?  ಅವುಗಳು ಉಂಟಾಗಲು ಪರಿಸ್ಥಿತಿಗಳು, ಸನ್ನಿವೇಶಗಳು ಯಾವುವು? ಆ ಘಟ್ಟಗಳಿಗೆ ಕಾರಣರಾದ ವ್ಯಕ್ತಿಗಳು ಯಾರು? ಎಂಬ ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನ ಈ ಅಧ್ಯಾಯದಲ್ಲಿದೆ

            ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಪ್ರಥಮ ನ್ಯೆಜ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿರುವ ಭಾರತವು ತನ್ನದೇ ಆದ ರಾಜಕೀಯ ಇತಿಹಾಸವನ್ನು ಹೊಂದಿದೆ ಭಾರತದ ರಾಜಕೀಯ ಇತಿಹಾಸದಲ್ಲಿ 1885ರಲ್ಲಿ ಅಸ್ಥಿತ್ವಕ್ಕೆ ಬಂದ  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯಾ ನಂತರ ರಾಜಕೀಯ ಪಕ್ಷವಾಗಿ ಮಾರ್ಪಟ್ಟು ಮಹಾತ್ಮ ಗಾಂಧಿಯವರ ಉತ್ತರಾಧಿಕಾರಿ ಎನಿಸಿದ ಜವಹರಲಾಲ್ ನೆಹರೂರುವರು ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ ನೇಮಕಗೊಂಡು 1951-52ರಲ್ಲಿ ನೆಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಮತ್ತು ರಾಜ್ಯಗಳಲ್ಲಿ ಜಯಭೇರಿಯನ್ನು ಪಡೆದು 1967 ರವರೆಗೆ ಸತತವಾಗಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರವನ್ನು ಪಡೆಯುವಲ್ಲಿ ಯಶಸ್ವಿಯಾಗಲು ಮಹತ್ತರವಾದ ಪಾತ್ರವನ್ನು ವಹಿಸಿದೆ. ಏಕ ಪಕ್ಷದ ಪ್ರಾಬಲ್ಯ ಉಭಯ ಕಡೆಗಳಲ್ಲಿ ಮುಂದುವರೆಯಿತು

            ಕಾಂಗ್ರೆಸ್ ಪಕ್ಷ ಮೂರು ದಶಕಗಳ ಕಾಲ ಸತತವಾಗಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಹುಮತವನ್ನು ಪಡೆದು ಏಕ ಪಕ್ಷ ಪ್ರಾಬಲ್ಯ ಅಧಿಕಾರದಲ್ಲಿ ಮುಂದುವರೆಯಿತು 

            ಕಾಂಗ್ರೆಸ್ ಪಕ್ಷಕ್ಕೆ ಸರಿಸಮನಾದ ಯಾವುದೇ ಪಕ್ಷ ಆ ಸಮಯದಲ್ಲಿ ಇರಲಿಲ್ಲ ಅನೇಕ ರಾಜಕೀಯ ಪಕ್ಷಗಳು ಅಸ್ಥಿತ್ವದಲ್ಲಿದ್ದರೂ ನೆಹರೂರವರ ವರ್ಚಸ್ವಿ ನಾಯಕತ್ವ ಶ್ರೀಮಂತ ಮನೆತನದಿಂದ ಬಂದ, ವಕೀಲಿ ವೃತ್ತಿ ಹೊಂದಿದ್ದ ಬುದ್ದಿವಂತ ನಾಯಕ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಪತ್ತು ಮತ್ತು ಜೀವನವನ್ನು ತ್ಯಾಗ ಮಾಡಿ ಜ್ಯೆಲು ಸೇರಿದ” (Lyoyd. Rudolph & Susane Hoeber Rudolph, p-149)  ಹಾಗೂ ಮಹಾತ್ಮ ಗಾಂಧೀಜಿಯವರ ಸಂಪೂರ್ಣ ಬೆಂಬಲ ಅವರ ಮೇಲೆ ಇದ್ದುದರಿಂದಲೂ ಸ್ವಾತಂತ್ರ್ಯಾ ನಂತರವೂ ಜನರಲ್ಲಿ ಅವರ ಬಗ್ಗೆ ಆ ಭಾವನೆಯು ಮುಂದುವರೆಯಿತು.

            ಮಹಾತ್ಮ ಗಾಂಧಿಯವರು ತಮ್ಮ ಉತ್ತರಾಧಿಕಾರಿ ಎಂದು ನೆಹರು ರವರನ್ನು ಘೋಷಿಸಿದ್ದರಿಂದ ಭಾರತೀಯ ಜನತೆ ಅವರಲ್ಲಿ ಅಪಾರವಾದ ನಂಬಿಕೆಯನ್ನಿಟ್ಟಿದ್ದರು ಹಾಗೂ ನೆಹರುರವರ ವರ್ಚಸ್ವಿ ನಾಯಕತ್ವದ ಗುಣಗಳಿಂದಾಗಿ ಜನರು ಮೂರು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದರ ಮೂಲಕ ಅದನ್ನು ವ್ಯಕ್ತಪಡಿಸಿರುವುದು ತಿಳಿದುಬರುತ್ತದೆ,      

            ಕಾಂಗ್ರೆಸ್ ಪಕ್ಷದ ಸತತ ಮೂರು ದಶಕಗಳ ನಿರಂತರ ಆಡಳಿತದ ಮುಂದುವರೆವಿಕೆಗೆ ಅನೇಕ ಕಾರಣಗಳಲ್ಲಿ ಮತ್ತೊಂದು ಅಂಶವೆಂದರೆ ಪಕ್ಷದ ಮೇಲಿನ ಆಂತರಿಕ ನಿಯಂತ್ರಣ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಗಳ ಮೇಲೆ         (Phul Chand, pp 161-163) ನೆಹರು ರವರು ಹೊಂದಿದ್ದ ನಿಯಂತ್ರಣಾಧಿಕರವು ಸ್ಥಿರತೆಯನ್ನು ಕಾಪಾಡಲು ಅನುಕೂಲಕರವಾಗಿ ಪರಿಣಮಿಸಿತ್ತು

            ಆ ಅವಧಿಯಲ್ಲಿ ಭಾರತದ ಸಂಯುಕ್ತ ವ್ಯವಸ್ಥೆಯು ಏಕಾತ್ಮಕ ವ್ಯವಸ್ಥೆಗೆ ಸಮನಾದ ರೀತಿಯಲ್ಲಿತ್ತು, ಎಂಬುದು ಅನೇಕ ರಾಜ್ಯಶಾಸ್ತ್ರಜರ ಅಭಿಪ್ರಾಯವಾಗಿದೆ. ಏಕೆಂದರೆ (ಸಂದೀಪ್ ಶಾಸ್ತ್ರಿರವರ ರಿಪಬ್ಲಿಕ್ ಆಫ್ ಇಂಡಿಯಾ, ಮಿರನ್ ವೀನರ್ ರವರ ಸ್ಟೇಟ್ ಪಾಲಿಟಿಕ್ಸ) ರಾಜ್ಯದ ಮುಖ್ಯಮಂತ್ರಿಗಳ ಆಯ್ಕೆ, ರಾಜ್ಯ ಶಾಸಕಾಂಗದ ಹಾಗೂ ಸಂಸತ್ತಿನ ಚುನಾವಣೆಗೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಿಕೆ, ರಾಜ್ಯದ ಮಂತ್ರಿಮಂಡಲ ರಚಿಸುವಿಕೆ, ಮಂತ್ರಿಮಂಡಲದ ಪುನರ್ ರಚನೆ, ಎಲ್ಲವೂ ಕೂಡ ಪಕ್ಷದ ಹ್ಯೆಕಮಾಂಡ್ ನಿಂದ ನಡೆಯಲ್ಪಡುತ್ತ್ತಿತ್ತು  ರಾಜ್ಯದ ನಾಯಕರುಗಳಿಗೆ ರಾಜ್ಯಕ್ಕೆ ಸಂಭಂಧಿಸಿದ ಈ ವಿಷಯಗಳಲ್ಲಿ ತೀರ್ಮಾನ ಕ್ಯೆಗೊಳ್ಳುವ ಅವಕಾಶ ಬಹಳ ಕಡಿಮೆ ಇತ್ತು

            ನೆಹರೂ ರವರ ಅಧಿಕಾರಾವಧಿಯಲ್ಲಿ ರಾಜ್ಯಗಳ ಮೇಲೆ ನಿಯಂತ್ರಣಾಧಿಕಾರವನ್ನು ಪಕ್ಷದ ಮೂಲಕ ನಡೆಸಲಾಗುತ್ತಿತ್ತು, ರಾಜ್ಯದ ನಾಯಕರುಗಳು ಅವರ ಹಿಡಿತಕ್ಕೆ ಒಳಪಟ್ಟಿದ್ದರು ಕೇಂದ್ರೀಕೃತ ನಾಯಕತ್ವ ಹಾಗೂ ಸರ್ಕಾರದ ಅಧಿಕಾರ ಎರಡೂ ಅವರ ಕ್ಯೆಯಲ್ಲಿತ್ತು (Sandeep Shastri Détente, Vol-X, No.1, July – August 1996)

ಕೇಂದ್ರ ಮತ್ತು ರಾಜ್ಯದ ನಡುವೆ 1947ರಿಂದ 1967 ರವರೆಗೆ ಅಷ್ಟೊಂದು ಸಂಘರ್ಷವಿರಲಿಲ್ಲ, ಏಕೆಂದರೆ ಕೇಂದ್ರ ಮತ್ತು ಬಹುತೇಕ ರಾಜ್ಯ ಎರಡೂ ಕಡೆಗಳಲ್ಲಿ ಒಂದೇ ಪಕ್ಷದ ಆಡಳಿತ ಇದ್ದುದರಿಂದ ಒಂದೊಮ್ಮೆ ಕೇಂದ್ರ ಮತ್ತು ರಾಜ್ಯದ ನಡುವೆ (ತನ್ನದೇ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಿದ್ದರೆ) ವಿವಾದಗಳು ಉದ್ಬವವಾದರೆ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಮನವಿ ಹೋಗುತ್ತಿತ್ತು ಆಗ ಕೇಂದ್ರ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಮಾಡುತ್ತಿತ್ತು, (Sandeep Shastri, Journal of Karnataka University 1989-90)

2. ಭಾರತದ ರಾಜಕಾರಣದಲ್ಲಿನ ಬದಲಾವಣೆಯ ಎರಡನೆಯ ಘಟ್ಟ

1967 ಭಾರತದ ರಾಜಕೀಯದಲ್ಲಿ ಮೊದಲ ತಿರುವಾಗಿತ್ತು, ಭಾರತ ಸ್ವಾತಂತ್ಯ್ರಾ ನಂತರ 20 ವರ್ಷಗಳಾದ ಮೇಲೆ ಒಂದು ಹಂತದ ಬದಲಾವಣೆ ಸಂಭವಿಸಿತು. ರಾಜ್ಯ ಮಟ್ಟದಲ್ಲಿ ಇದು ಬದಲಾವಣೆಗೆ ದಾರಿಯಾಯಿತು. ಕಾಂಗ್ರೆಸ್ ಕೆಲವು ರಾಜ್ಯಗಳಲ್ಲಿ ಸಂಪೂರ್ಣ ಬಹುಮತವನ್ನು ಪಡೆದುಕೊಳ್ಳುವಲ್ಲಿ ವಿಫಲವಾಯಿತು ಅಧಿಕಾರವನ್ನು ಕಳೆದುಕೊಂಡಿತು ಬದಲಿಗೆ ಕಾಂಗ್ರೆಸ್ಸೇತರ ಸರ್ಕಾರ ಅಂದರೆ ಬೇರೆ ಪಕ್ಷಗಳು ಸರ್ಕಾರ ರಚನೆ ಮಾಡಿದವು ಆದರೆ ಕೇಂದ್ರದಲ್ಲಿ ಬಹುಮತ ಪಡೆದುಕೊಳ್ಳುವಲ್ಲಿ ಸಫಲವಾಯಿತು.

            ಆ ಸಂಧರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಅನೇಕ ವಿವಾದಗಳು ಉಂಟಾಗಿದ್ದವು ಕೇರಳದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ ನೇತೃತ್ವದ ಯುನ್ಯೆಟೆಡ್ ಸರ್ಕಾರ ಅಧಿಕಾರ ನಡೆಸುತ್ತಿದ್ದಾಗ ಸಂಘರ್ಷಕ್ಕೆ ಎಡೆಯಾಗಿದ್ದರಿಂದ ಕೇಂದ್ರ ಆಡಳಿತ ಸುಧಾರಣಾ ಆಯೋಗವನ್ನು ರಚನೆ ಮಾಡಲಾಯಿತು.

1967ರ ಬದಲಾªಣೆಯು ರಾಜ್ಯ ಮಟ್ಟದಲ್ಲಿ ಒಂದೇ ಪಕ್ಷದ ಪ್ರಾಬಲ್ಯದ ಅಂತ್ಯಕ್ಕೆ ಎಡೆಮಾಡಿಕೊಟ್ಟಿದ್ದರಿಂದ ಇದನ್ನು ಭಾರತದ ರಾಜಕಾರಣದ ಮೊದಲ ಬದಲಾವಣೆ ಎಂದು ಹೇಳಬಹುದಾಗಿದೆ. ಅದಕ್ಕೆ ಮೊದಲು ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷ ಆಡಳಿತವನ್ನು ನಡೆಸುತ್ತಿದ್ದುದರಿಂದ ಅವುಗಳ ನಡುವೆ ಸೌಹಾರ್ದ ಸಂಭಂಧಗಳು ಏರ್ಪಟ್ಟಿತ್ತ ನೆಹರೂರವರ ನಿಧನದ ನಂತರ ಲಾಲ್ ಬಹುದ್ದೂರ್ ಶಾಸ್ತ್ರಿ ಯವರು ಅಧಿಕಾರಕ್ಕೆ ಬಂದರೂ ಅವರ ಹಠಾತ್ ಸಾವಿನಿಂದ ಇಂದಿರಾಗಾಂಧಿಯವರು ಪ್ರಧಾನಮಂತ್ರಿಯ ಹುದ್ದೆಯನ್ನು ಅಲಂಕರಿಸಿದರು, ಆ ಸಂಧರ್ಭದಲ್ಲಿ ಕೆಲವೊಂದು ಬದಲಾವಣೆಗಳುಂಟಾದವು,

            ರಾಷ್ಟ್ರಮಟ್ಟದಲ್ಲಿ 1977ರಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು. ಅವೆರಡರ ಮಧ್ಯದಲ್ಲಿ 1969ರಲ್ಲಿ ಕಾಂಗ್ರಸ್ ಪಕ್ಷ ವಿಭಜನೆಗೊಂಡ ಪರಿಣಾಮವಾಗಿ ಲೋಕಸಭೆಯಲ್ಲಿ  ಅಲ್ಪಮತ ಸರ್ಕಾರ ರಚನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿತು ಆಗ ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆ ಸ್ವಲ್ಪ ಮಟ್ಟಿಗೆ ತಿಳಿಯಾ¬ ಆದರೆ, 1971ರಲ್ಲಿ ನಡೆದ  ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ನಿಚ್ಚಳ ಬಹುಮತ ಪಡೆಯುವುದರೊಂದಿಗೆ ಹಾಗೂ 1972ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಹುತೇಕ ಕಡೆಗಳಲ್ಲಿ ತನ್ನದೇ ಪಕ್ಷ ಅಧಿಕಾರಕ್ಕೆ ಬಂದುದರಿಂದ ಎಲ್ಲಾ ಅಧಿಕಾರವನ್ನು ಕೇಂದ್ರೀಕರಣ ಮಾಡಿಕೊಳ್ಳುವ ಮೂಲಕ ಕೇಂದ್ರೀಕೃತ ಸಂಯುಕ್ತತೆ ಅಸ್ಥಿತ್ವಕ್ಕೆ ಬಂದಿತು

            ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ನೀಡುವ ಉಲ್ಲಂಘಿಸಿದರೆ ಅಂತಹ ಸರ್ಕಾರದ ಮೇಲೆ ಕ್ರಮ ಕ್ಯೆಗೊಳ್ಳುವ ರಾಜ್ಯಗಳ ಅಧಿಕಾರ ಮೊಟಕುಗೊಂಡು ಕೇಂದ್ರದ ಅಧಿಕಾರ ಹೆಚ್ಚಾಯಿತು.

            ಬಲಿಷ್ಠ ಕೇಂದ್ರ ನಿರ್ಮಾಣಗೊಂಡು ರಾಷ್ಟ್ರದ ಅಧಿಕಾರ ಪ್ರಧಾನಮಂತ್ರಿಯವರ ಕಛೇರಿಯಲ್ಲಿ ಕೇಂದ್ರೀಕರಣಗೊಂಡಿತು ಪರಿಣಾಮವಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು ವಿಭಿನ್ನ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಮುಂದಾದವು     ಮೊರಾರ್ಜಿ ದೇಸಾಯಿರವರ ನೇತೃತ್ವದ ಜನತಾಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು.

3. ಭಾರತದ ರಾಜಕಾರಣದ ಬೆಳವಣಿಗೆಯಲ್ಲಿನ ಮೂರನೆಯ ಘಟ್ಟ

            1977ರ ಬೆಳವಣಿಗೆಯು ಭಾರತದ ರಾಜಕಾರಣದ ಎರಡನೆಯ ಘಟ್ಟವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಅಧಿಕಾರದಿಂದ ಹೊರಹಾಕುವ ಸಲುವಾಗಿ ಎಲ್ಲ ಕಾಂಗ್ರೆಸ್ ವಿರೋಧಿ ರಾಜಕೀಯ ಪಕ್ಷಗಳನ್ನು ಒಟ್ಟುಗೂಡಲು ಕರೆ ನೀಡಿದ ಜಯಪ್ರಕಾಶ್ ನಾರಾಯಣ್ ರವರ ಹೋರಾಟ, ರಾಷ್ಟ್ರೀಯ ತುರ್ತುಪರಿಸ್ಥಿತಿಯ ಕರಾಳ ಅನುಭವ ರಾಷ್ಟ್ರದ ರಾಜಕಾರಣದಲ್ಲಿ ಹೊಸ ಬದಲಾವಣೆಯ ಪರ್ವವನ್ನು ಸೃಷ್ಟಿಸಿತು.

             1977 ಭಾರತದ ರಾಜಕೀಯ ಬೆಳವಣಿಗೆಯಲ್ಲಿನ ಎರಡನೆಯ ಘಟ್ಟ ಆಗಿದೆ, ಈ ಬದಲಾವಣೆಗೆ ಅನೇಕ ಕಾರಣಗಳುಂಟು ಅದರಲ್ಲಿ ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ವಿಭಜನೆ, ಭಿನ್ನಾಭಿಪ್ರಾಯಗಳಿಂದ ಪಕ್ಷದ ನಿಷ್ಠಾವಂತರು ಪಕ್ಷ ತೊರೆದು ತಮ್ಮದೇ ಆದ ಪಕ್ಷಗಳನ್ನು ಸ್ಥಾಪಿಸಿದ್ದುದು,  352ನೆಯ ವಿಧಿಯನುಸಾರ ಆಂತರಿಕ ತುರ್ತುಪರಿಸ್ಥಿತಿಯ ಘೋಷಣೆಗೆ ಸೂಚನೆ ನೀಡಿದ್ದು, ಹಾಗೂ ಸಂವಿಧಾನದ 356ನೆಯ ವಿಧಿಯ ದುರ್ಬಳಕೆ,  ರಾಜ್ಯಮಟ್ಟದಲ್ಲಿನ ಪ್ರಭಾವಿ ವ್ಯಕ್ತಿಗಳ ಕಡೆಗಣನೆ, ಹೀಗೆ ನಾನಾ ಕಾರಣಗಳಿಂದಾಗಿ ಪಕ್ಷ ತನ್ನ ವರ್ಚಸ್ಸನ್ನು ಕಳೆದು ಕೊಳ್ಳಲು ಆರಂಭಿಸಿತು

            ವಿರೋಧ ಪಕ್ಷಗಳು ತಮ್ಮ ಪಕ್ಷದ ಸಿದ್ದಾಂತ ಮತ್ತು ವ್ಯೆರುಧ್ಯಗಳನ್ನು ಬದಿಗಿಟ್ಟು ಕಾಂಗ್ರೆಸ್‍ನ್ನು ಅಧಿಕಾರದಿಂದ ಹೊರದೂಡಲು ಜನತಾ ಪಕ್ಷದ ಬ್ಯಾನರ್ನ ಅಡಿಯಲ್ಲಿ ಚುನಾವಣೆಯನ್ನು ಎದುರಿಸಿತು ಮೊರಾರ್ಜಿ ದೇಸಾಯಿರªರು ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸುವುದರೊಂದಿಗೆ ಕೇಂದ್ರದಲ್ಲಿ ಅಧಿಕಾರವನ್ನು ಪಡೆಯುವಲ್ಲಿ ಯಶಸ್ವಿಯಾಯಿತು ಏಕಪಕ್ಷದ ಪ್ರಾಬಲ್ಯತೆಯನ್ನು ಕೊನೆಗಾಣಿಸಿತು.

            ಜನತಾ ಪಕ್ಷ ಅಧಿಕಾರವನ್ನು ಪಡೆಯುತ್ತಿದ್ದಂತೆಯೇ ತಾನು ನೀಡಿದ್ದ ಆಶ್ವಾಸನೆಯಂತೆ ಅಧಿಕಾರ ಕೇಂದ್ರೀಕರಣಕ್ಕೆ ವಿರುದ್ದವಾಗಿ ವಿಕೇಂದ್ರೀಕರಣ ತತ್ವಕ್ಕೆ ಬದ್ದವಾಗಿ ಆಡಳಿತ ನಡೆಸಲು ಮುಂದಾಯಿತು (R.B. Jain, 1978)

ಜನತಾ ಪಕ್ಷ ಕೇವಲ ಎರಡೇ ವರ್ಷಗಳಲ್ಲಿ ಅಧಿಕಾರವನ್ನು ಪೂರ್ಣಗೊಳಿಸದೆ ಪತನವಾಯಿತು. ರಾಜಕೀಯ ಧೃವೀಕರಣ ಅಸ್ಥಿರತೆಗೆ ದಾರಿಯಾಯಿತು.   1980ರಲ್ಲಿ ನಡೆದ (ಮಧ್ಯಂತರ) ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಮತ್ತು ಪಕ್ಷದಲ್ಲಿ ಪ್ರಭಾವಶಾಲಿ ಹಾಗೂ ಪ್ರಶ್ನಾತೀತವಾಗಿ  ರೂಪುಗೊಂಡಿತು. ಭಾರತದ ರಾಜಕೀಯದಲ್ಲಿ ಅವರ ತಂದೆಗಿಂತಲೂ ಬಹಳ ಪ್ರಭಾವಶಾಲಿಯಾಗಿ ಇಂದಿರಾಗಾಂಧಿಯವರು ಬೆಳೆದರು. (Myron Weiner, 1989, p-281)

ಇಂದಿರಾಗಾಂಧಿಯವರ ನಿಧನದ ನಂತರ ಅವರ ಮಗ ರಾಜೀವ್ ಗಾಂಧಿಯವರಿಗೆ ಅಧಿಕಾರ ಹಸ್ತಾಂತರವಾಯಿತು ಅವರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು ವಿರೋಧ ಪಕ್ಷಗಳು ಅಧಿಕಾರವಿರುವ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ಸಂವಿಧಾನದ ಯಂತ್ರಗಳನ್ನು ಉಪಯೋಗಿಸಿಕೊಳ್ಳುವ ಮೂಲಕ ದುರ್ಬಳಕೆ ಮಾಡಿಕೊಂಡಿತು

4: ಭಾರತದ ರಾಜಕೀಯ ಬೆಳವಣಿಗೆಯಲ್ಲಿನ ನಾಲ್ಕನೆಯ ಘಟ್ಟ

            ಮತದಾರರು ಕಾಂಗ್ರೆಸ್ಸೇತರ ಸರ್ಕಾರಗಳನ್ನು ರಾಜ್ಯಗಳಲ್ಲಿ ಅಧಿಕಾರಕ್ಕೆ ತಂದರು ಆಗ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಭಂಧಗಳಲ್ಲಿ ಹೊಸ ಆಯಾಮ ಶುರುವಾಯಿತು, ಕೇಂದ್ರದ ಸರ್ವಾಧಿಕಾರದ ವಿರುದ್ದ ಹೋರಾಟಕ್ಕಿಳಿದವು ಅಲ್ಲದೆ ಕೇಂದ್ರಕ್ಕಿಂತ ಭಿನ್ನ ಪಕ್ಷ ಅಧಿಕಾರದಲ್ಲಿರುವ ರಾಜ್ಯ ಹಾಗಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷ ರಾಜಕಾರಣ ಏರ್ಪಟ್ಟಿತು.

            ಬಹು ಪಕ್ಷ ಪದ್ದತಿಯ ಸ್ಪರ್ಧೆ ಏರ್ಪಡಲು ಕಾರಣವಾಯಿತು. ಯಥೇಚ್ಚವಾಗಿ 356ನೆ ವಿಧಿಯ ದುರ್ಬಳಕೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಭಂಧಗಳಲ್ಲಿ ಹೆಚ್ಚು ಸಂಘರ್ಷಕ್ಕೆ ಮಾರ್ಗವಾಯಿತು. 

            ಯಾವ ಯಾವ ರಾಜ್ಯಗಳಲ್ಲಿ ವಿಭಿನ್ನ ಸರ್ಕಾರ ಅಸ್ಥಿತ್ವದಲ್ಲಿತ್ತು ಆ ರಾಜ್ಯದ ನಾಯಕರುಗಳೆಲ್ಲ ಒಂದಾಗಿ ಕರ್ನಾಟಕದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಪಶ್ಚಿಮ ಬಂಗಾಳದ ಜ್ಯೋತಿಬಸು, ಆಂಧ್ರಪ್ರದೇಶದ ತೆಲುಗು ದೇಶಂನ ಎನ್.ಟಿ. ರಾಮರಾವ್ ಮೊದಲಾದವರ ನೇತೃತ್ವದಲ್ಲಿ  ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆಯ ದುರ್ಬಳಕೆಯ ತಾರತಮ್ಯ ನೀತಿಯನ್ನು  ವಿರೋಧಿಸಿ ಕೇಂದ್ರದ ದಬ್ಬಾಳಿಕೆಯನ್ನು ಕೊನೆಗಾಣಿಸಲು ಬೇರೆ ಪರ್ಯಾಯ ಸರ್ಕಾರದ ರಚನೆಗೆ ತಂತ್ರವನ್ನು ರೂಪಿಸಲಾಯಿತು. 

ಅದರ ಪ್ರತಿಫಲವೇ 1989ರ ಚುನಾವಣೆಯ   ಫಲಿತಾಂಶ. ಭಾರತದ ರಾಜಕಾರಣದಲ್ಲಿ  ಸಮ್ಮಿಶ್ರ ಸರ್ಕಾರದ ಶಕೆಯ ಆರಂಭ.

            1989ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬರುವುದರೊಂದಿಗೆ ವಿಕೇಂದ್ರಿಕೃತ ಸಂಯುಕ್ತ ಕಾಯಾಚರಣೆಗೆ ನಾಂದಿಯಾಯಿತು, ರಾಜ್ಯಗಳ ಮೇಲುಗ್ಯೆ ಸಾಧಿಸಿದವು ಮುಂದೆ ಬಂದಂತಹ ಎಲ್ಲಾ ಸರ್ಕಾರಗಳು 2019ರವರೆಗೆ ಸಮ್ಮಿಶ್ರ ಸರ್ಕಾರಗಳಾದವು 1991,1996,1998,1999,2004 ಮತ್ತು 2009, 2014ರ (1991ರಲ್ಲಿ ಅಲ್ಪಮತ ಸರ್ಕಾರ) ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವುದೇ ಒಂದು ಪಕ್ಷ ಸ್ಪಷ್ಟ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿವೆ, ಪ್ರಾದೇಶಿಕ ಪಕ್ಷಗಳು ಸಂಖ್ಯೆಯಲ್ಲಿ ಹೆಚ್ಚಾಗಿವೆ, ಬಹು ಪಕ್ಷೀಯ ಸ್ಪರ್ಧೆ ಏರ್ಪಟ್ಟಿತು. ಪ್ರಾದೇಶಿಕ ಪಕ್ಷಗಳಿಗೆ ಬೇಡಿಕೆ ಹೆಚ್ಚಾಯಿತು. ರಾಜ್ಯಗಳ ಅಭಿಪ್ರಾಯಕ್ಕೆ ಮೌಲ್ಯ ಬಂದಿತು. ರಾಜ್ಯಗಳಿಗೆ ಹಿಂದೆಂದೂ ಇರದಷ್ಟು ಗೌರವ, ಸ್ಥಾನಮಾನ ಹೆಚ್ಚಾಗಿರುವುದು ಈ ಅವಧಿಯಲ್ಲಿ ಕಂಡುಬಂದಿದೆ.

            1989ರ ರಾಷ್ಟ್ರೀಯ ರಂಗ ಸರ್ಕಾರ ರಚಿನೆಯಾಯಿತು ಜನತಾದಳದ ನಾಯಕ ವಿನಾಯಕ್ ಪ್ರತಾಪ್ ಸಿಂಗ್‍ರವರು ಜನಮೋರ್ಚಾ, ಲೋಕದಳ,  ಕಾಂಗ್ರೆಸ್(ಎಸ್) ವಿಲೀನದೊಂದಿಗೆ, ರಾಷ್ಟ್ರೀಯ ರಂಗ ಸರ್ಕಾರವನ್ನು ರಚಿಸಿದರು ಬಹುತೇಕ ರಾಜ್ಯಗಳಲ್ಲಿ ಜನತಾದಳ ಸರ್ಕಾರವನ್ನು ರಚಿಸಿತು.ಇದು ಭಾರತದ ರಾಜಕಾರಣದ ಐತಿಹಾಸಿಕ ಬೆಳವಣೆಗೆಯಲ್ಲಿ ಮಹತ್ತರವಾದ ಮ್ಯೆಲಿಗಲ್ಲು ಎನಿಸಿದೆ.  1989ರ ನಂತರ ಸಮ್ಮಿಶ್ರ ಸರ್ಕಾರ ರಚನೆಯೊಂದಿಗೆ ಸಹಕಾರಯುಕ್ತ ಸಂಯುಕ್ತತೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳ ಕಾಯಾಚರಣೆಯಲ್ಲಿ ಕಂಡುಬಂದಿದೆ. ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ, ಕಾಂಗ್ರಸ್ ಪಕ್ಷ 244 ಸ್ಥಾನಗಳನ್ನು ಪಡೆದು ಪಿ. ವಿ. ನರಸಿಂಹರಾವ್ ರವರು 1991ರಲ್ಲಿ ಅಲ್ಪಮತ ಸರ್ಕಾರವನ್ನು ರಚಿಸಿದರು. ನಂತರ ಅದು ಬಹುಮತ ಸರ್ಕಾರವಾಗಿ ಪರಿಣಮಿಸಿತು ಅದು ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿತು.

            1996ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಸರ್ಕಾರವನ್ನು ರಚಿಸಿದರೂ ಕೇವಲ 13 ದಿನಗಳ ಕಾಲ ಮಾತ್ರ ಅಧಿಕಾರದಲ್ಲಿದ್ದಿತು ನಂತರ ಹೆಚ್ ಡಿ ದೇವೇಗೌಡ ನೇತೃತ್ವದ ಸಂಯುಕ್ತರಂಗ ಸರ್ಕಾರ ಅಸ್ಥಿತ್ವಕ್ಕೆ ಬಂದರೂ ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂತೆಗೆದುಕೊಂಡು ನಾಯಕತ್ವ ಬದಲಾವಣೆ ಮಾಡಿದರೆ ಬೆಂಬಲ ಮುಂದುವರೆಸುವುದಾಗಿ ಭರವಸೆ ನೀಡಿ ಮತ್ತೆ ಐ. ಕೆ. ಗುಜ್ರಾಲ್ ರವರಿಗೆ ಬೆಂಬಲ ಸೂಚಿಸಿದರು. ಆದರೆ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದರಿಂದ ಸರ್ಕಾರ ಬಹುಮತದ ಕೊರತೆಯಿಂದಾಗಿ ಪತನ ಹೊಂದಿತು. 1998ರ 1999ರ ಲೋಕಸಭಾ ಚುನಾವಣೆಯಲ್ಲಿ ಬಿ. ಜೆ. ಪಿ. ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಅಟಲ್ ಬಿಹಾರಿ ವಾಜಪೇಯಿರವರ ಪ್ರಧಾನಮಂತ್ರಿಯ ನಾಯಕತ್ವದಲ್ಲಿ ಸಮ್ಮಿಶ್ರ ಸರ್ಕಾರ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದರಲ್ಲಿ ಯಶಸ್ವಿಯಾಯಿತು.

 ಭಾರತದ ರಾಜಕಾರಣದಲ್ಲಿ ಇದೊಂದು ಬಹು ಮುಖ್ಯವಾದ ತಿರುವು ಆಗಿದೆ. ಏಕೆಂದರೆ ಪ್ರಬಲ ರಾಷ್ಟ್ರೀಯ ಪಕ್ಷವೊಂದು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಅಸ್ಥಿತ್ವಕ್ಕೆ ಬಂದು ಅಧಿಕಾರವನ್ನು ಪಡೆಯುವಲ್ಲಿ ಯಶಸ್ವಿಯಾಯಿತು.

2004 ರ ಹಾಗೂ 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮ್ಯೆತ್ರಿಕೂಟ “ಸಂಯುಕ್ತ ಪ್ರಗತಿಪರ ಒಕ್ಕೂಟ” (ಯುಪಿಎ) ಮನಮೋಹನ್ ಸಿಂಗ್ ರವರ ನೇತೃತ್ವದಲ್ಲಿ  ಪೂರ್ಣಾವಧಿಯನ್ನು ಮುಗಿಸಿತು.

2014 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಒಕ್ಕೂಟ ಸರ್ಕಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮ್ಯೆತ್ರಿಕೂಟ (ಎನ್. ಡಿ. ಎ) 336 ಸ್ಥಾನಗಳನ್ನು ಪಡೆಯುವುದರೊಂದಿಗೆ ನರೇಂದ್ರ ಮೋದಿ ಅಧಿಕಾರ ಸೂತ್ರವನ್ನು ಕೇಂದ್ರದಲ್ಲಿ ಹೊಂದಿದರು.

5: ಭಾರತದ ರಾಜಕೀಯ ಬೆಳವಣಿಗೆಯಲ್ಲಿನ ಐದನೆಯ ಘಟ್ಟ

 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮ್ಯೆತ್ರಿಕೂಟ (ಎನ್. ಡಿ. ಎ) 353 ಸ್ಥಾನಗಳನ್ನು ಸ್ಪಷ್ಟ ಬಹುಮತವನ್ನು ಪಡೆಯುವಲ್ಲಿ ಸಫಲವಾಗಿ ಮತ್ತೊಮ್ಮೆ ನರೇಂದ್ರ ಮೋದಿ ಆಡಳಿತ ಕೇಂದ್ರದಲ್ಲಿ ಮುಂದುವರೆದಿದೆ. ಭಾರತೀಯ ಜನತಾ ಪಕ್ಷ 303 ಸ್ಥಾನಗಳನ್ನು ಪಡೆಯುವುದರೊಂದಿಗೆ ಮೂರು ದಶಕಗಳ ನಂತರ ಒಂದು ಪಕ್ಷಕ್ಕೆ ಜನರು ಮತದಾನ ಮಾಡಿದ್ದಾರೆ.

ಸಮ್ಮಿಶ್ರ ಸರ್ಕಾರಗಳ ಆಡಳಿತದ ನಂತರ ಮತದಾರ ಬದಲಾವಣೆಯನ್ನು ಭಾರತದ ರಾಜಕಾರಣದಲ್ಲಿ ಬಯಸಿ ಅಧಿಕಾರವನ್ನು ವರ್ಗಾವಣೆ ಮಾಡಿರುವುದು ಕಂಡುಬರುತ್ತದೆ. 

ಕಾಂಗ್ರೆಸ್ ಪಕ್ಷದಲ್ಲಿದ್ದಂತಹ ಕೆಲವೊಂದು ಸಂಸ್ಕøತಿ ಭಾರತೀಯ ಜನತಾ ಪಕ್ಷದಲ್ಲಿಯೂ ಮುಂದುವರೆದಿರುವಂತೆ ಕಂಡುಬರುತ್ತಿದೆ ಕಾರಣವೆಂದರೆ, ದೆಹಲಿಯ ಆಮ್ ಆದ್ಮಿ ಪಕ್ಷದ ನೇತಾರ ಹಾಗೂ ಮುಖ್ಯಮಂತ್ರಿ ನಡುವೆ ಹಾಗೂ ಕೇಂದ್ರದ ನಡುವಿನ ಸಂಭಂಧಗಳಲ್ಲಿ ಘರ್ಷಣೆ ತಲೆದೋರಿ ಸುಪ್ರಿಂಕೋಟ್ ್ ತೀರ್ಪು ನೀಡುವಂತಾದುದು, ಹಾಗೂ ಅದಕ್ಕೆ ಕೇಂದ್ರ ತಿದ್ದುಪಡಿಯೊಂದಿಗೆ ರಾಜ್ಯಪಾಲರ ಕೈಗೆ ಅಧಿಕಾರವರ್ಗಾವಣೆಗೆ ಮುಂದಾಗಿ ಯುಶಸ್ವಿಯಾದುದು ಹಾಗೂ ಆಮ್ಲಜನಕ ವಿತರಣೆಯಲ್ಲಿ ದೆಹಲಿಗೆ ಸುಪ್ರಿಂಕೋರ್ಟಿನಆದೇಶದ ಮೂಲಕ ರವಾನೆ ಮಾಡಿದನಂತರ ದೆಹಲಿಯ ವೈದ್ಯಕೀಯ ನೆರವಿಗೆ ಮುಂದಾದುದು ನಂತರ ಕೋರ್ಟಿನ ಆದೇಶಕ್ಕೂ ಕೇಂದ್ರ ಮಣಿಯದಿದ್ದಾಗ ನ್ಯಾಯಾಧೀಶರುಗಳು ನ್ಯಾಯಾಂಗ ನಿಂದನೆಯ ಶಿಕ್ಷೆಗೆ ಕೇಂದ್ರ ಮುಂದಾಗಿದೆಯೇ ಎಂದು ಪ್ರಶ್ನೆ ಮಾಡುವಂತಾದುದು ಇದಕ್ಕೆ ಸಾಕ್ಷಿಯಾಗಿದೆ.

ಅಲ್ಲದೆ ಮತ್ತೊಂದು ಕೇಂದ್ರ ಮತ್ತು ರಾಜ್ಯಗಳಲ್ಲಿನ ವಿಭಿನ್ನ ಪಕ್ಷಗಳಾಡಳಿತ ಇರುವ ಪಶ್ಚಿಮ ಬಂಗಾಳ ರಾಜ್ಯದ ನಡುವಿನ ಸಂಘರ್ಷ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

 ಅಲ್ಲದೆರಾಜ್ಯದ ಮುಖ್ಯಮಂತ್ರಿಗಳ ಆಯ್ಕೆ, ರಾಜ್ಯ ಶಾಸಕಾಂಗದ ನಾಯಕತ್ವದ ನಿರ್ಧಾರಕ್ಕೆ ಸಂಭಂಧಪಟ್ಟಂತೆ ಹಾಗೂ ಸಂಸತ್ತಿನ ಚುನಾವಣೆಗೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಿಕೆ, ರಾಜ್ಯದ ಮಂತ್ರಿಮಂಡಲ ರಚಿಸುವಿಕೆ, ಮಂತ್ರಿಮಂಡಲದ ಪುನರ್ ರಚನೆ, ಎಲ್ಲವೂ ಕೂಡ ಪಕ್ಷದ ಹ್ಯೆಕಮಾಂಡ್‍ನಿಂದ ನಡೆಯಲ್ಪಡುತ್ತ್ತಿರುವುದು ಸಾಬೀತಾಗಿದೆ.  ರಾಜ್ಯದ ನಾಯಕರುಗಳಿಗೆ ರಾಜ್ಯಕ್ಕೆ ಸಂಭಂಧಿಸಿದ ಈ ವಿಷಯಗಳಲ್ಲಿ ತೀರ್ಮಾನ ಕ್ಯೆಗೊಳ್ಳುವ ಅವಕಾಶ ಬಹಳ ಕಡಿಮೆ ಇರುವುದು ಗಮನಾರ್ಹವಾದ ವಿಷಯವಾಗಿದೆ.

ಸವಾಲುಗಳು

ರಾಷ್ಠ್ರದ ಐಕ್ಯತೆಯ ಹೆಸರಿನಲ್ಲಿ ಪ್ರಾದೇಶಿಕ ಸಮಸ್ಯೆಗಳ ಕಡೆಗಣನೆ ಮಾಡಿದುದು, ಆಂತರಿಕ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸದಸ್ಯರು, ನಾಯಕರುಗಳನ್ನು ನಡೆಸಿಕೊಂಡ ರೀತಿ ಇವೆಲ್ಲವೂ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಕಾರಣವಾದವು. ಇತಿಹಾಸದಿಂದ ಕಲಿತಿರುವ ಕಹಿ ಪಾಠ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕಾದುದು ಅಗತ್ಯವಾಗಿದೆ. 

ಫಲಿತಾಂಶಗಳು

ಭಾರತೀಯ ರಾಜಕಾರಣದ ಸಂಸ್ಕøತಿ ಒಂದು ಪಕ್ಷಕ್ಕೆ ಬಹುಮತ ಬಂದ ನಂತರಹಿಂದಿನಂತೆ ಕೇಂದ್ರೀಕರಣಕ್ಕೆ ಒತ್ತು ನೀಡುವಂತಹ ಚಕ್ರದಾಕಾರದಲ್ಲಿ ಮತ್ತೆ ಮುಂದುವರೆದಂತೆ  ಗೋಚರವಾಗಿದೆ.  ಕೇಂದ್ರದ ಕೇಂದ್ರೀಕೃತ ಆಡಳಿತವೇ ಈ ರೀತಿಯ ಬದಲಾವಗಳಿಗೆ ಮೂಲ ಕಾರಣವಾಗಿರುವುದು ಕಂಡುಬಂದಿದೆ.

ವಿಭಿನ್ನ ಪಕ್ಷಗಳ ಆಡಳಿತವಿರುವೆಡೆಗಳಲ್ಲಿಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ಹೊರತುಪಡಿಸಿ ಉಳಿದಂತೆ  ಕೇಂದ್ರದ ಮಲತಾಯಿ ಧೋರಣೆ ಮುಂದುವರೆದಂತಾಗಿದೆ.

ಸಲಹೆಗಳು

ಅಧಿಕಾರ ವಿಕೇಂದ್ರೀಕರಣವು ಭಾರತದ ರಾಜಕಾರಣದ ಬಲಿಷ್ಟಗೊಳ್ಳಲು, ಹಾಗೂ ಭಾರತದ ಪ್ರಜಾಪ್ರಭುತ್ವ ಯಶಸ್ವಿಗೊಳ್ಳಲು ಅಗತ್ಯಾಂಶಗಳಲ್ಲಿ ಒಂದಾಗಿದೆ ಹಾಗಾಗಿ ನ್ಯೆಜ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತನ್ನು ನೀಡುವುದು ಅವಶ್ಯಕವಾಗಿದೆ.        

ಪ್ರತಿಯೊಂದು ಚುನಾವಣೆಯಲ್ಲಿ ಅಧಿಕಾರದಲ್ಲಿರುವವರು ತಮ್ಮ ಅಧಿಕಾರವನ್ನು ದುರುಪಯೋಗವನ್ನು ಮಾಡಿಕೊಳ್ಳಲು ಮುಂದಾದಾUಲೆಲ್ಲಾ ಮತದಾರರು ಮುಂದಿನ ಚುನಾವಣೆಗಳಲ್ಲಿ ಅದಕ್ಕೆ ತಕ್ಕ ಪಾಠವನ್ನು ಕಲಿಸಿರುವುದು ಸಾಬೀತಾಗಿದೆ. ಭಾರತದ ರಾಜಕಾರಣದ ಸ್ಥಿತ್ಯಂತರಗಳಲ್ಲಿ ಶಾಂತಿಯುತ ಬದಲಾವಣೆಗಳೊಂದಿಗೆ ಭಾರತದ ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಟವಾಗುತ್ತಾ ಬಂದಿದೆ ಎಂಬುದು ತಿಳಿದುಬರುತ್ತದೆ.

ಉಪಸಂಹಾರ:

ಬಹುತ್ವವನ್ನು ಮ್ಯೆಗೂಡಿಸಿಕೊಂಡಿರುವ ಭಾರತ ದೇಶವು ತನ್ನದೇ ಆದ ವಿಶಿಷ್ಟ ರಾಜಕೀಯ ವ್ಯವಸ್ಥೆಯನ್ನು ಹೊಂದಿದ್ದು, ಮೂರು ದಶಕಗಳ ಕಾಲ ಏಕ ಪಕ್ಷದ ಪ್ರಾಬಲ್ಯವನ್ನು, ಮತ್ತೆ ಮೂರು ದಶಕಗಳ ಕಾಲ ಸಮ್ಮಿಶ್ರ ಸರ್ಕಾರದ ಅಧಿಕಾರವನ್ನು ನಂತರ ಏಕ ಪಕ್ಷದ ಸ್ಪಷ್ಟ ಆಡಳಿಡಕ್ಕೆ ಕೇಂದ್ರ ಮರಳಿರುವುದು ಐತಿಹಾಸಿಕ ರಾಜಕೀಯ ಮನ್ವಂತರದ ಅನುಭವವನ್ನು ಭಾರತದ ರಾಜಕಾರಣದಲ್ಲಿ ಕಾಣಬಹುದಾಗಿದೆ. 

1947ರಿಂದ 1989ರವರೆಗೆ ಭಾರತದ ರಾಜಕಾರಣವು ಅತಿಯಾದ ಕೇಂದ್ರೀಕರಣದ ಕಡೆಗೆ ತಿರುಗಿರುವುದು ಕಂಡುಬರುತ್ತದೆ. ಆದರೆ 1989ರಿಂದ 2019ರವರೆಗೆ ಒಕ್ಕೂಟದ ಯುಗ ಆರಂಭವಾಗಿದ್ದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಭಂಧಗಳಲ್ಲಿ ಪರಸ್ಪರ ಸಹಕಾರಯುತ ಆಡಳಿತ ಮುಂದುವರೆಯಲು ಅವಕಾಶವಾಗಿದೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತ ಪಡೆಯುವುದರೊಂದಿಗೆ ಮೂರು ದಶಕಗಳ ನಂತರ ಮತ್ತೊಮ್ಮೆ ಕೇಂದ್ರದಲ್ಲಿ ಒಂದು ಪಕ್ಷದ ಆಡಳಿತಕ್ಕೆ ಅಧಿಕಾರವು ವರ್ಗಾವಣೆಗೊಂಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂವಿಧಾನದತ್ತವಾಗಿ ಅಧಿಕಾರ ವಿಭಜನೆ ಆಗಿರುವುದರಿಂದ ಘರ್ಷಣೆಗಳು ಉಂಟಾಗುವುದಿಲ್ಲ ಎಂಬ ಪೂರ್ವಕಲ್ಪನೆಯು ಸ್ವಲ್ಪಮಟ್ಟಿಗೆ ಸವಾಲಾಗಿ ಪರಿಣಮಿಸಿದೆ ಏಕೆಂದರೆ ಅನೇಕ ಸಂದರ್ಭಗಳಲ್ಲಿ ಇವೆರಡರ ನಡುವೆ ಘರ್ಷಣೆ ಏರ್ಪಟ್ಟಿರುವುದು ಕಂಡುಬರುತ್ತದೆ.  

References

  1. Constituent Assembly Debates, Constitutional Reforms Commission, Vol-1, New Delhi, Universal Law Publishing Co, 2002,
  2. Deshta Sunil, “President’s Rule in the states-Constitutional Provisions & Practices”, & Dua B D “Presidential Rule in India: A study in crisis”, New Delhi, 1979
  3. Lyoyd Rudolph & Susane Hoeber Rudolph, 2008, EXPLAINING INDIAN DEMOCRACY -A 50 years Perspective, 1956-2006,
  4. Myron Weiner, 1989, THE INDIAN PARADOX, Party Politics and Electoral Behaviour: From Independence to the 1980’s, Sage Publications Sage Publicatons.
  5. Sandeep shastri, 2011, KARNATAKA POLITICS THE ROAD TAKEN THE JOURNEY AHEAD, Jain University,1990,
  6. 2019, Lal Bahadur Shastri Politics and beyond, Rupa Publications India Pvt ltd.
    1. Ghosh, S. Partha . 2000. BJP and the Evolution of  Hindu Nationalism. Delhi: Manohar Publishers.
  7. Phul Chand, “Federalism and the Indian Political parties”, Journal of Constructional and Parliamentary Studies, Vol. VI, No. 1, January – March 1972,
  8. Sandeep Shastri “Nehru and Centre state Relations, a study in the Dynamics of Indian Federalism” Détente, Vol-X, No.1, July – August 1996
  9. R.B. Jain, "Federalism in India, Emerging Pattern and Public Policy", Journal of Constitutional and Parliamentary Stud¬ies, Vol-XII, No. 1, January-March 1978.        
  10. Kailash, K.K.  2014. Regional Parties: Who Survived and Why? Economic and Political Weekly . 39:3:64-71.
  11. Alliances and Lessons of Election 2009.  Economic and Political Weekly 44:39:9-26
  12. Kamlesh, K.R. 2019. Smriti Vahini. Bangalore: Total Karnataka.
  13. Karnataka Model of Development. Economic and Political Weekly 42:8:649-52.
  14. Manor, James. 2016. The Writings on Politics and Society Relations in India. New Delhi: Orient Blackswan.
  15. The Election Outlook in Karnataka. Economic and Political Weekly. 53:5.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal