Tumbe Group of International Journals

Full Text


ಸಾಮಾಜಿಕ ನ್ಯಾಯ ಮತ್ತು ಧಾರ್ಮಿಕ ಸುಧಾರಣೆಯಲ್ಲಿ ವೀರಶೈವ ಲಿಂಗಾಯಿತ ಚಳುವಳಿ ಪಾತ್ರ

ಮಲ್ಲೇಶಪ್ಪ ಟಿ.ಎಸ್

ಸಹಾಯಕ ಪ್ರಾ ಧ್ಯಾ ಪಕರು, ಇತಿಹಾಸ ವಿಭಾಗ,

ಸರ್ಕಾರಿ ಪಾ ಥಮ ದರ್ಜಾ ರ್ಕಲೇಜು, ತುಮಕೂರು-572102

malleshappats1969@gmail.com


ಪ್ರಸ್ತಾವನೆ

ವೀರಶೈವ ಲಿಂಗಾಯತ ಧರ್ಮ – ಭಸವಾದಿ ಶರಣರ ಕ್ರಾಂತಿಕಾರಿ ಚಳುವಳಿಯ ಫಲಶೃತಿಯಾಗಿದೆ. ಹಿಂದೂಧರ್ಮದಲ್ಲಿದ್ದ ಮೌಢ್ಯ ಕಂದಾಚರಣಗಳಾದ ನರಬಲಿ, ಪ್ರಾಣಿಬಲಿ, ಅಧಿಕ ವೆಚ್ಚದ ಯಗ್ನ – ಕರ್ಮಾಚರಣೆಗಳನ್ನು ಖಂಡಿಸಿದರು, ಧರ್ಮ – ಮುಕ್ತಿ, ಶ್ರೀಮಂತರ ಸ್ವತ್ತು ಎಂಬ ಸ್ಥಿತಿಯಲ್ಲಿದ್ದ ಅವಧಿಯಲ್ಲಿ ಜನಸಾಮಾನ್ಯರಿಗೂ ಧರ್ಮ ಆಚರಣೆಯ ತತ್ವಗಳು, ಸ್ವರ್ಗ, ನರಕದ ಪರಿಕಲ್ಪನೆಯನ್ನ ಸತ್ಯ ನುಡಿಯುವದೆ ದೇವ ಲೋಕ, ಆಚಾರವೇ ಸ್ವರ್ಗ, ಧಯೋ ಇಲ್ಲದ ಧರ್ಮ ಯಾವುದಯ್ಯಾ ಎಂಬ ಅನರ್ಘ್ಯ ರತ್ನ ಎನ್ನಬಹುದಾದ ವಚನ ಸಾಹಿತ್ಯ ಸಂಪತ್ತಿನ ಮೂಲಕ ಭಾಷೆ, ಸಾಹಿತ್ಯ, ಸಾಮಾಜಿಕ – ಆರ್ಥಿಕ ಸುಧಾರಣೆಯ ದಿಕ್ಸೂಚಕರಾದರು.

ಭಾರತೀಯ ಸಮಾಜದಲ್ಲಿ 10 ಪ್ರಾಬಲ್ಯ ಸಾಧಿಸಿದ್ದ ವರ್ಣಾಶ್ರಮ ಶ್ರೇಷ್ಠರ ವಿರುದ್ದ ಸಮರ ಸಾಧಿಸಿದರು. ಜಾತ್ಯಾತೀತ, ಸರ್ವಸಮ್ಮತ ಪ್ರಜಾನುರಾಗಿ ಸಮಾಜವನ್ನು ನಿರ್ಮಾಣಮಾಡಲು ಸ್ವಾರ್ಥ ಬದುಕನ್ನು ತ್ಯಜಿಸಿದರು. ಕಲ್ಯಾಣದ ಕಲಚೂರಿ ರಾಜ ಬಿಜ್ಜಳನ ಆಸ್ಥಾನದಲ್ಲಿ ಉನ್ನತ ಮಂತ್ರಿ ಪದವಿಯಲ್ಲಿದ್ದರೂ ಅಧಿಕಾರ, ಪದವಿ, ಉತ್ಕೃಷ್ಠ ಜೀವನಕ್ಕೆ ಅಂಟಿಕೊಳ್ಳಯದೆ – ಸಮಾಜದ ತಳ ಸಮುದಾಯದವರನ್ನು ಮೇಲ್ವರ್ಗದ ಹಂತದಲ್ಲಿದ್ದ, ಸರಿಸಮನಾದ ಸಮಾಜ ನಿರ್ಮಿಸಲು ಅಂತರ್ ಜಾತಿ ವಿವಾಹ ನಡೆಸಿ ಜಾತಿ ವಿನಾಶಕ್ಕೆ ಕರೆನೀಡಿದರು. ಸಂಪಪ್ರದಾಯ ಬದ್ಧ ವರ್ಣಶ್ರೇಷ್ಠರ ಅವಕೃಪೆಗೆ ತುತ್ತಾದರು. ತಮ್ಮ ಅಲ್ಪಕಾಲದ ಜೀವಿತ ಅವಧಿಯಲ್ಲಿ ಇಷ್ಟಲಿಂಗ ಪರಿಪಾಲಕ ಧರ್ಮ ಸ್ಥಾಪನೆ ಮಾಡಿದರು. ಮಾನವೀಯ ಧರ್ಮ ವಿರೋಧಿಗಳ ಕುಠಿಲೋಪಾಯ ನೀತಿಗಳಿಂದ ಅಧಿಕಾರ, ಸಿರಿ, ಸಂಪತ್ತುಗಳನ್ನು ಕಳೆದು ಕೊಳ್ಳಬೇಕಾಯಿತು. ಎದುರಾದ ಸವಾಲುಗಳನ್ನು ಮೆಟ್ಟಿನಿಂತು, ಕ್ರಾಂತಿಕಾರಿ ಹೆಜ್ಜೆಯಿಟ್ಟರು. ಅನುಭವ ಮಂಟಪದಲ್ಲಿ ಸದ್ಗುಣ ಸಂಪನ್ನ ವಿಚಾರವಂತರನ್ನ ಆಹ್ವಾನಿಸಿ ವಚನ ನಿಷ್ಠೆ ಅನುಭವ ವಚನ ಸಾಹಿತ್ಯ ಮೂಲಕ ನವ ಸಮಾಜ ನಿರ್ಮಿಸಿದರು.

ಮುಖ್ಯ ಪದಗಳು: ವೀರಶೈವ, ಲಿಂಗಾಯತ, ಧರ್ಮ, ಜಾತಿ

ಪೀಠಿಕೆ

ಕರ್ನಾಟಕ ಹಲವು ಧರ್ಮಗಳ ಕೇಂದ್ರ. ಈ ನಾಡಿನಲ್ಲಿ ಶೈವ, ವೈಷ್ಣವ, ಜೈನ, ಬೌದ್ಧ, ಇಸ್ಲಾಂ, ಕ್ರೈಸ್ತ ಪಂಥಗಳು ಜನ ಜೀವನದ ಮೇಲೆ ಪ್ರಭಾವ ಬೀರಿವೆ. ಕರುನಾಡಿನಲ್ಲಿ ಜನ್ಮತಾಳಿದ ವೀರಶೈವ ಧರ್ಮ ಪ್ರಪಂಚದ ಪ್ರಮುಖ ಧರ್ಮಗಳ ಪಟ್ಟಿಗೆ ಸೇರುವ ಸನಿಹದಲ್ಲಿದೆ. ವೀರಶೈವ ಧರ್ಮ ದಕ್ಷಿಣ ಭಾರತದಲ್ಲಿ ಪ್ರಭಾವೀಧರ್ಮವಾಗಿ ಗುರುತಿಸಿಕೊಂಡಿದೆ. ತಾಳಗುಂದ ಈ ನಾಡಿನ ಪ್ರಾಚೀನ ಶೈವ ಕೇಂದ್ರ. ಶೈವ ಪಂಥದ ಕಾಳಮುಖ, ಪಾಶುಪಥ, ಕಾಪಾಲಿಕ, ಪಂಚರಾತ್ರ, ಬಳ್ಳಿಗಾವೆ ನಾಯ್ ನಾರರು, ಶಕ್ತಿ ದೇವತೆಯ ಆರಾದಕರು ಮತ್ತು ಆರಾಧನಾ ಕೇಂದ್ರಗಳು ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿದ್ದವು. ಈ ಮೇಲ್ಕಂಡ ಧಾರ್ಮಿಕ ಪಂಥಗಳಲ್ಲಿದ್ದ ಮೌಢ್ಯ ಆಚರಣೆಗಳ, ಕಠಿಣ ವ್ರತ (ಆಚರಣೆ) ಸಂಪ್ರದಾಯಗಳನ್ನು ತೊಡೆದುಹಾಕಿ. ಸರಳ ಮಾರ್ಗೋಪಾಯಗಳಿಂದ ನಿಷ್ಕಲ್ಮಷವಾದ ಭಕ್ತಿಯಿಂದ ಭಗವಂತ ಶಿವನ ಪ್ರೀತಿಗೆ ಪಾತ್ರರಾಗಬಹುದೆಂಬ ತತ್ವಗಳನ್ನ ಜನಮಾನಸದಲ್ಲಿ ಮೂಡಿಸಲು ಅಸ್ತಿತ್ವ ಪಡೆದ ಧರ್ಮವೇ ವೀರಶೈವ ಲಿಂಗಾಯತ ಧರ್ಮ. ಕ್ರಿ.ಶಕ 11ನೇ ಶತಮಾನದಲ್ಲಿ ತನ್ನದೆ ರೂಪರೇಷೆಯೊಡನೆ ಆಧ್ಯಾತ್ಮಿಕ ಕ್ಷೇತ್ರದಲ್ಲಿದ್ದ ದ್ವಂದ್ವತೆಗೆ ಹೊಸದಾದ ಅರ್ಥವನ್ನು ಪ್ರತಿಪಾದಿಸುತ್ತಾ, 12ನೇ ಶತಮಾನದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ವಲಯದಲ್ಲಿ ವಿನೂತನ ಬೆಳಕನ್ನು ಮತ್ತು ಮಾರ್ಗೋಪಾಯಗಳನ್ನು ಹುಡುಕಿಕೊಟ್ಟ ಪಂಥವೇ ವೀರಶೈವ ಚಳುವಳಿ.

ಕರ್ನಾಟಕದ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿದ್ದ ಅಂಧಕಾರದ ಕಾರ್ಮೋಡದ ಪರದೆಯನ್ನು ಪಕ್ಕಕ್ಕೆ ಸರಿಸಿ, ಶುದ್ಧವಾದ ತಿಳಿಯಾದ, ಸರಳವಾದ ಎಲ್ಲರಿಗೂ ಲಭ್ಯವಾಗುವ ವಿಶ್ವಾಸ ಪಾತ್ರ ಧಾರ್ಮಿಕ ತತ್ವಗಳನ್ನು ಪರಿಚಯಿಸುವ ಪ್ರಯತ್ನ ನಡೆಯಿತು. ಈ ಕ್ಷೇತ್ರದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೊಡಗಿಸಿಕೊಂಡ ಶಿವ ಶರಣರೆಂದರೆ, ಭಾಗೆವಾಡಿಯ ಬಸವೇಶ್ವರ ಬಳ್ಳಿಗಾವೆಯ ಅಲ್ಲಮ ಪ್ರಭು, ಉಡುತಡಿಯ ಅಕ್ಕಮಹಾದೇವಿ, ಸೊನ್ನಲಿಗೆಯ ಪಾಳೆಗಾರ ಸಿದ್ದರಾಮ, ಕಾಶ್ಮೀರ ರಾಜ ಮಹಾದೇವ ಭೂಪಾಲರ ಪತ್ನಿ ಮೋಳಿಗೆಯ ಮಾರಯ್ಯ, ಮಡಿವಾಳ ಮಾಚಯ್ಯ, ಉಳವಿಯ ಪಾಳೇಗಾರ ಚನ್ನಬಸವರು ಸೇರಿದಂತೆ, 300ಕ್ಕೂ ಮಿಕ್ಕ ಚಳುವಳಿಗಾರರು, ಕ್ರಾಂತಿಕಾರಿ ಬಸವೇಶ್ವರರ ನೇತೃತ್ವದಲ್ಲಿ ವಚನಗಳ ಮೂಲಕ ಸಮಾಜದೊಂದಿಗೆ ಕಲ್ಯಾಣದ ಅನುಭವ ಸೊಸೈಟಿಯಲ್ಲಿ ಎಲ್ಲಾ ಸ್ಥರಗಳಲ್ಲಿಯೂ ಚಲನಶೀಲರಾಗುವಂತೆ ಆತ್ಮಜ್ಞಾನದ ದೀವಿಗೆಯನ್ನಚ್ಚಿದ್ದರು.1

ವೀರಶೈವ ಧರ್ಮವು ಶತ – ಶತಮಾನಗಳಿಂದ ಜನಮಾನಸದಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯಾಚರಣೆ (ಗೊಡ್ಡು ಸಂಪ್ರದಾಯ)ಗಳನ್ನು ವಿರೋಧಿಸುವ ಪ್ರಯತ್ನವನ್ನಾರಂಭಿಸಿತು.2 ಅಂದರೆ ವೈದಿಕ ವ್ಯವಸ್ಥೆಯ ವಿರೋಧಿಗಳಾಗಿದ್ದರು. ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಮೇಲು – ಕೀಳು, ಉಚ್ಚ – ನೀಚ, ಉತ್ತಮ – ಅಧಮ, ಸೃಷ್ಯ – ಅಸ್ಪೃಶ್ಯರೆಂಬ ತಾರತಮ್ಯ ನೀತಿಗಳನ್ನು ವಿರೋಧಿಸಿದರು. ಅಲ್ಲದೆ ಕಂದಾಚರಣೆಗಳಿಂದ ವಿಮುಕ್ತರಾಗಿಸಿ ವೈಜ್ಞಾನಿಕ, ವೈಚಾರಿಕ ಪ್ರೌವೃತ್ತಿ ಬೆಳೆಸಿಕೊಂಡು, ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ರೂಪಿಸಿಕೊಳ್ಳುವಲ್ಲಿ ಸರಳ ಮಾರ್ಗೋಪಾಯಗಳನ್ನು ಹಾಕಿಕೊಟ್ಟರು.3

ಬಸವೇಶ್ವರರು ಕಲ್ಯಾಣದಲ್ಲಿ ಅನುಭವ ಮಂಟಪ (ಜ್ಞಾನ ಮಂಟಪ, ಮಹಾಮನೆ, ಧರ್ಮ ಛತ್ರ) ಸ್ಥಾಪಿಸಿದರು. ಧರ್ಮದಲ್ಲಿದ್ದ ಮೌಢ್ಯಾಚರಣೆಗಳ ತಾತ್ವಿಕ ಜಿಗ್ನಾಸೆವುಳ್ಳವರಿಗೆ ವಿಮರ್ಶೆ ಮಾಡುವ ವಾದಮಂಡಿಸುವ ಹಾಗೂ ಸಾಮಾಜಿಕ ಅಸಮಾನತೆ ಅನಿಷ್ಠ ಆಚರಣೆಗಳನ್ನು ವಿರೋಧಿಸುವ ಕ್ರಾಂತಿಕಾರಿ ಕ್ರಿಯೆಗೆ ವೇದಿಕೆಯಾಗಿತ್ತು. ಅಲ್ಲಮ ಪ್ರಭು ಅಧ್ಯಕ್ಷತೆಯಲ್ಲಿ ಸಮಾವೇಶಗೊಂಡು ಎಲ್ಲಾ ವರ್ಗದ ಜಾತಿಯವರಿಗೂ ಮತ್ತು ಸ್ತ್ರೀಯರಿಗೂ ಪ್ರವೇಶಾವಕಾಶ ಮುಕ್ತವಾಗಿ ನೀಡಿದ್ದರಿಂದ 213ಕ್ಕೂ ಮಿಕ್ಕ ಶಿವಶರಣೆಯರು, ಪಾಲ್ಗೊಂಡರು, ಸಾಮಾಜಿಕ ಮತ್ತು ಧಾರ್ಮಿಕ ವಲಯದ ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು. ಹೊಸ ಹೊಸ ವಿಚಾರಧಾರೆಗಳು ಪುಂಕಾನು ಪುಂಕವಾಗಿ ವಚನ ಜ್ಯೋತಿಯ ಮೂಲಕ ಹೊರಹೊಮ್ಮಿದವು. ಎಲ್ಲರಿಗೂ ಅರ್ಥವಾಗುವ ತಿಳಿಯಾದ ಕನ್ನಡ ಭಾಷೆಯಲ್ಲಿ ಏಳು ಸಾವಿರಕ್ಕೂ ಹೆಚ್ಚು ವಚನಗಳನ್ನ ರಚಿಸುವ ಮೂಲಕ ಜನಮಾನಸದಲ್ಲಿ ಜಿಗ್ನಾಸೆಗಳಿಗೆ ಪರಿಹಾರದ ಬೀಜಗಳನ್ನು ಬಿತ್ತಿದರು. ವೀರಶೈವ ಧರ್ಮ ಸ್ಥಾಪನೆಯ ನಂತರದ ಶತ, ಶತಮಾನಗಳ ವರೆವಿಗೂ ಯಾವುದೇ ನಿದಿಷ್ಠ ಸ್ಥಳಕ್ಕೆ (ಕಲ್ಯಾಣಕ್ಕೆ) ಸೀಮಿತವಾಗಿರದೆ ಮಂಗಳವಾಡದ ಗಡಿದಾಟಿ, ನಾಡು, ದೇಶ, ವಿದೇಶದಾದ್ಯಂತ ಶೋಷಿತ ದೌರ್ಜನ್ಯಕ್ಕೊಳಗಾಗಿದ್ದ ಸಮುದಾಯದವರಿಗೆ, ವರ್ಗ ಸಮಾನತೆ, ಸಾಮಾಜಿಕ ಸಮತೆ ಪ್ರತಿಪಾದಿಸುತ್ತ ಧರ್ಮದ ಮೇಲಿನ ಭಯದ ವಾತಾವರಣದಿಂದ ವಿಮುಕ್ತರನ್ನಾಗಿಸಿದರು. ವೈದಿಕ ಪದ್ಧತಿಯ ಉತ್ತುಂಗದಲ್ಲಿದ್ದ ಪುರೋಹಿತ ಶಾಹಿತ್ವವನ್ನು ವಿರೋಧಿಸಿದರು.4

ಧರ್ಮ ದೇವರು ಭಕ್ತರ ನಡುವಿನ ಮಧ್ಯವರ್ತಿಗಳಾಗಿ ಶೋಷಿಸುತ್ತಿದ್ದ ಪುರೋಹಿತಶಾಹಿ ಮತ್ತು ಅವರ ಆಚರಣೆಗಳನ್ನು ಬಸವಾದಿ ಶರಣ ಶರಣೆಯರು ತಿರಸ್ಕರಿಸಿದರು.5 ಪುರೋಹಿತ ಶಾಹಿಗಳ ಧಾರ್ಮಿಕ ಆಚರಣೆಗಳು, ಢಾಂಬಿಕ, ಆಡಂಬರದ ಮತ್ತು ಶೋಷಣೆಯ ಮಾರ್ಗೋಪಾಯಗಳಾಗಿವೆ. ಜಾತಿ ಮತ್ತು ಧರ್ಮದಲ್ಲಿ ಪಾಲಿಸುತ್ತಿದ್ದ ಹಿಂದಿನ ಆಚರಣೆಗಳಿಗೆ ವಸ್ತುನಿಷ್ಠ ಆಕರಗಳಿಲ್ಲ, ಸ್ವಾರ್ಥ ಹಿತಾಸಕ್ತಿಗಾಗಿ ಸೃಷ್ಠಿ ಮಾಡಿಕೊಂಡ ವ್ಯವಸ್ಥೆಯೇ ಹೊರತು ಬೇರೇನು ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದರು ಶತಶತಮಾನಗಳಿಂದ ನೊಂದು ಬೆಂದಿದ್ದ ಕೆಳಸ್ತರದ ಪ್ರಜಾ ಸಮೂಹಕ್ಕೆ ನೂತನ ಮಾರ್ಗವನ್ನು ತಿಳಿಸಿಕೊಟ್ಟರು.6 ವೀರಶೈವಧರ್ಮ ಪ್ರತಿಪಾದಕರು ಸ್ವರ್ಗ ನರಕದ ಪ್ರಜ್ಞೆಯನ್ನು ವಿರೋದಿಸಿದರು ಆಚಾರವೆ ಸ್ವರ್ಗ ಅನಾಚಾರವೆ, ನರಕ, ಸತ್ಯನುಡಿಯುವದೆ ದೇವಲೋಕ, ಮಿತ್ಯನುಡಿವುದೆ ಮೃತ್ಯಲೋಕವಂದರು ಅತೃಪ್ತ ಸ್ಮಾರ್ಥ ವಿಪ್ರವಿನೋದಿ ಬ್ರಾಹ್ಮಣರು ಕಸಬುದಾರಿಗಳು ಮತ್ತು ರೈತರುಸಹ ಚಳುವಳಿಯಲ್ಲಿ ಪಾಲ್ಗೊಂಡಿದ್ದರು – ಪ್ರಭಾವಿತರಾಗಿದ್ದರು. ಕಾಶಮುಖ ಕೇಮದ್ರಗಳು ವೀರಶೈವ ಮಠಗಳಾದವು, ವಚನಕಾರರು ಬಹಳಷ್ಠು ಕಸಬುದಾರರ ಹಿನ್ನಲೆಹೊಂದಿದ್ದ ವೃತ್ತಿಯನ್ನು ನಿಷ್ಠೆಯಿಂದ ಕೈಗೊಳ್ಳಲು ತಿಳಿಸಿದ್ದಾರೆ. ಮುಕ್ತಿ ಸಾಧನೆಗೆ ಭಕ್ತಿ ಮಾರ್ಗ ಪ್ರತಿಪಾದಿಸಿದರು ಕಾಯಕದ ಮಹತ್ವ ತಿಳಿಸುತ್ತಾ, ಕುಳಿತು ತಿನ್ನುವ (ರೈತರ ಸ್ವಾವಲಂಬಿ) ವ್ಯಕ್ತಿಗೆ ಬದುಕುವ ನೈತಿಕ ಹಕ್ಕುಇಲ್ಲವೆಂದು ಪ್ರತಿಪಾದಿಸಿದರು. ವೃತ್ತಿ ಬೇಧವನ್ನು ಪ್ರಬಲವಾಗಿ ತಿರಸ್ಕರಿಸಿದರು. ಯಾವ ವೃತ್ತಿಯಾವುದಾದರೇನು ನಿಷ್ಠೆಯಿಂದ ಕೆಲಸ ಮಾಡಿ ಶಿವ ಕೃಪೆಗೆ ಪಾತ್ರರಾಗಬೇಕೆಂದು ಸಲಹೆ ನೀಡಿದರು. ಅನುಭವ ಮಂಟಪದಲ್ಲಿದ್ದ ಶರಣ ಶರಣೆಯರು ವೃತ್ತಿ ನಿಷ್ಠರಾಗಿದ್ದು ಏಳಿಗೆಗೆ ಬಂದರು. ಎಲ್ಲರಿಗೂ ತಾವು ಮಾಡುವ ವೃತ್ತಿಯಲ್ಲಿ ದೈವ ಸಾಕ್ಷಾತ್ಕಾರ ಕಾಣಲು ಸಾಧ್ಯ ಎಂದು ತಿಳಿಸಿದರು. ದಯಯೇ ಧರ್ಮದ ಮೂಲ ಕರ್ಮವನ್ನ ಕ್ರಿಯಯಾಗಿಸಲು ಮಾನವೀಯತೆಯನ್ನು ಪ್ರತಿ ಪಾದಿಸಲು ವಚನಗಳ ಮೂಲಕ ವೃತ್ತಿ ಮಹತ್ವ ಪ್ರಚಾರ ಪಡಿಸಿದರು ದುಡಿಮಯ ಹಿರಿಮೆಗೆ ಹೆಚ್ಚಿನ ಆದೈತೆ ನೀಡಿದರು. ಶಾಂತಕುಮಾರಿ ಪ್ರಕಾರ 11ನೇ ಶತಮಾನದಲ್ಲಿದ್ದ 51 ಅಗ್ರಹಾರಗಳು 13ನೇ ಶತಮಾನದ ವೇಳೆಗೆ 20ಕ್ಕೆ ಉತ್ಪಾದನೆ ಅಧಿಕವಾಯಿತು. ವ್ಯಾಪಾರವೃದ್ಧಿಗಾಗಿ ಐಹೊಳೆ 500 ವರ್ತಕ ಸಂಘದಲ್ಲಿ ರೈತರು ಸ್ವಾವಲಂಬಿಗಳಾದರು, ದತ್ತಿ ಭೂಮಿ ಕಡಿಮೆಯಾದವು. “ಕಾಯಕವೇ ಕೈಲಾಸ” ಎಂಬ ಸರ್ವಕಾಲಿಕ ಸತ್ಯವನ್ನು ಪ್ರಪಂಚದ ಮಾನವ ಜನಾಂಗಕ್ಕೆ ಅಮರ ಸಂದೇಶವನ್ನು ಬಸವೇಶವರರು ನೀಡಿದರು. ಇದರಿಂದಾಗಿ ವಚನಗಳ ಮೂಲಕ ಧರ್ಮ ಸಮಾಜವನ್ನು ಸುಧಾರಿಸುವತ್ತ ಕ್ರಾಂತಿಕಾರಕ ಹೆಜ್ಜೆಯಿಟ್ಟರು. ಆರ್ಥಿಕ ರಂಗದಲ್ಲಿ ಊಳಿಗ ಮಾನ್ಯ ವ್ಯವಸ್ಥೆಗೆ ಹಿನ್ನಡೆಯಾಯಿತು, ಜೀತ ಮುಕ್ತರಾದ ರೈತರು ಏಳಿಗೆಗೆ ಬಂದರು, ಹಿಡುವಳಿದಾರರು ದುಡಿಯ ಬೇಕಾಯಿತು. ಶಾಂತಕುಮಾರಿ ಪ್ರಕಾರ 11ನೇ ಶತಮಾನದಲ್ಲಿದ್ದ 51 ಅಗ್ರಹಾರಗಳು 13ನೇ ಶತಮಾನದ ವೇಳೆಗೆ 20ಕ್ಕೆ ಕಡಿಮೆಯಾದವು. ಉತ್ಪಾದನೆಯ ದಿಕ್ಕೆ ಬದಲಾಯಿತು.ಸಯೆಯಿಲ್ಲದ್ದ ಧರ್ಮ ಯಾವುದಯ್ಯ ದಯೆಯೇ ಬೇಕು ಸಕಲ ಪ್ರಾಂಇಗಳೆರಲ್ಲಿಯೂ, ದಯವೆ ಧರ್ಮದ ಮೂಲವೆಂದು ದಯೆ, ಕರುಣೆ ರಸವನ್ನು ಜನ ಸಮೂಹಕ್ಕೆ ತಿಳಿಸಿದರಲ್ಲದೆ ಅಹಿಂಸಾ ತತ್ವವನ್ನು, ಸಸ್ಯಹಾರವನ್ನು ಪ್ರತಿಪಾದಿಸಿದರು. ಸ್ವಾರ್ಥರಹಿತ ಕಾಯಕದಲ್ಲಿ ತೊಡಗುವುದೆ ನಿಜವಾದ ಸ್ವರ್ಗ ಜೀವನ ಎಂದು ತಿಳಿಸಿದರು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ತನ್ನ ಬಣ್ನಿಸಬೇಡ ಇತರರನ್ನು ಹೀಯಾಳಿಸಬೇಡ ಅನ್ಯರಿಗೆ ಅಸಹ್ಯ ಪಡಬೇಡ ಇದೇ ಅಂತರಂಗ ಶುದ್ಧಿ ಇದೆ ಬಹಿರಂಗ ಶುದ್ಧಿ. ನಮ್ಮ ದೇವರನ್ನು ಒಲಿಸುವ ಪರಿ ಎಂದು ಭೇದ ಭಾವನೆಯನ್ನು ವಿರೋಧಿಸಿದರು. ಮೇಲು ಕೀಳು ಭಾವನೆ ವಿರೋಧಿಸಿದರು. ಅರಿವೆ ಗುರು ಜ್ಯೋರ್ತಿಲಿಂಗ ದಯವೆ ಧರ್ಮದ ಮೂಲ ತರಂಗ ಎಂದು ಕರುಣೆ, ಜ್ಞಾನದ ಮಹತ್ವ ತಿಳಿಸಿದರು. ಆರ್ಥಿಕ ಅಸಮಾನತೆ ಜಾತಿ ಭೇದ ವಿರೋಧಿಸಿದರು. ಅಪ್ಪನು ನಮ್ಮ ಮಾದರ ಚೆನ್ನಯ್ಯ ಚಿಕ್ಕಯ್ಯ ನಮ್ಮಯ್ಯ ಅಣ್ಣನು ನಮ್ಮ ಕಿನ್ನರಿಯ ಬೊಮ್ಮಯ್ಯ ಬೋಯಿತಿಯ ಮಗನಾದ ವ್ಯಾಸನಂಥ ಪ್ರತಿಭಾವನುಂಟೆ? ಮಾತಮಗಿಯ ಮಗನಾದ ಮಾರ್ಕಾಂಡೇಯನಿಗಿಂಥ ಭಕ್ತನುಂಟೆ? ಕಬ್ಬಿಲನ ಮಗನಾದ ಅಗಸ್ತ್ಯನಿಗೂ ಮಿಗಿಲಾದ ಶಿವೋಪಾಸಕನುಂಟೆ? ಬೇಡನಾದ ವಾಲ್ಮೀಕಿ ಕವಿ ಶ್ರೇಷ್ಠನಾಗಲಿಲ್ಲವೇ? ಎಂಬ ವೈಚಾರಿಕ ಸಂಗತಿಗಳನ್ನು ಪುನಃರುಚ್ಚರಿಸಿ ದೀನರು ಅಸ್ಪುಷ್ಯರಲ್ಲಿ ಜಾಗೃತಿ

“ವೇದಕ್ಕೊರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳುವನಿಕ್ಕುವ ತರ್ಕದ ಬೆನ್ನಬಾರವನೆತ್ತವೆ ಆಗಮನದ ಮೂಗ ಕೊಯ್ಯುವೆ ಎಂದು ಘೋಷಿಸಿದರು.

ದೇವರ ಪ್ರೀತಿಗೆ ನಿಷ್ಕಲ್ಮಶವಾದ ಭಾವನೆಗೆ ಮಹತ್ವ ನೀಡಿದರು. ಬೇಗುಲ ರಚನೆಗೆ ಬದಲಾಗಿ ಇಷ್ಠಲಿಂಗ ಆರಾಧನೆಗೆ ಮಹತ್ವ ನೀಡಿದರು. ಅಲ್ಲದೆ ಎನ್ನ ಕಾಲೇಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸ ಶಿಖರವೆಂದು ನಾನೇನು ಮಾಡಲಿ ಬಡವನಯ್ಯ ಮೆಚ್ಚುವನು ನಮ್ಮ ಕೂಡಲಸಂಗಮದೇವ ಎಂದು ಬಡವರಿಗೂ ಸಮಾನವಕಾಶ ಕಲ್ಪಿಸಿ ವರ್ಗ ಭೇದವನ್ನು ವಿರೋಧಿಸಿದರು. ವಿಪ್ರರು ದೇವಾಲಯ ಪ್ರವೇಶಕ್ಕೆ ಅಸ್ಪುಷ್ಯರನ್ನು ಬಹಿಷ್ಕರಿಸಿದರೆ ಬಸವಾದಿ ಶರಣರು ದೇವಾಲಯವನ್ನೆ ಬಹಿಷ್ಕರಿಸಿದರು.

ನಾವು ಆಡು ಮಾತು ನಡೆಗೆ ಸತ್ಯ ಮತ್ತು ಪ್ರಾಮಾಣಿಕತೆಗೆ ಪೂರಕವಾಗಿರಬೇಕೆಂದು ತಿಳಿಸುತ್ತಾ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದಂತೆ ನಡೆಯಬೇಕೆಂದು ತಿಳಿಸಿದರು. ನಂಬಿಸಿ ದ್ರೋಹ ಬಗೆಯುವ ಡೋಂಗಿಗಳನ್ನು ವಿರೋಧಿಸಿದರು. ವಿಶ್ವಾಸಘಾತಕರ ಕೃತ್ಯಗಳನ್ನು ಖಂಡಿಸಿದರು. ಅಂದಿನ ಸಮಾಜ ಮತ್ತು ಧರ್ಮದಲ್ಲಿದ್ದ ವಿದ್ಯಾಮಾನಗಳ ವಿರುದ್ಧ ಸಾರಿದ ಸಮರವೇ ವೀರಶೈವರ ಚಳುವಳಿ ಆಗಿದ್ದಿತು.7

ಸ್ತ್ರೀ ಪುರುಷರ ನಡುವೆ ಸಮಾನತೆ ಪ್ರತಿಪಾದಿಸಿದರು. ಪುರೋಹಿತ ಶಾಹಿಗಳು, ಶಿಕ್ಷಣ, ಧಾರ್ಮಿಕ ವಿಧಿವಿಧಾನಗಳಾದ, ಜನಿವಾರ ಧರಿಸುವಂತಿಲ್ಲ, ವೇದ, ಶ್ಲೋಕ, ಹೋಮ ಹವನಗಳಲ್ಲಿ ಮಂತ್ರ ಪಠಣೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಸಾಮಾಜಿಕ ಸಮಾನ ಸ್ಥಾನ ಮಾನಗಳಿಂದ ಮಹಿಳೆಯರನ್ನು ಅಂತರದಲ್ಲಿಟ್ಟು ಶೋಷಿಸುತ್ತಿದ್ದರು. ಈ ನೀತಿ ವಿರೋಧಿಸಿದ ವೀರಶೈವ ಧರ್ಮದ ಪ್ರತಿಪಾದಕರು, ಶರಣ-ಶರಣೆಯರ ನಡುವೆ ಯಾವುದೇ ಭೇದಭಾವ ಮಾಡದೇ ಸಮಾನವಕಾಶ ನೀಡಿದರು. ಸುಶಿಕ್ಷಿತ ಕೌಟಂಬಿಕ ಅಸ್ಥಿತ್ವ ಮತ್ತು ಸಾಂಸ್ಕೃತಿಕ ಸಿರಿವಂತಿಕೆಯ ಅಸ್ತಿತ್ವಕ್ಕೆ ಪ್ರೋತ್ಸಾಹಿಸಿದರು. ಅನುಭವ ಮಂಟಪದಲ್ಲಿ ಜಾತಿ ಭೇದ ಲಿಂಗ ಭೇದವಿಲ್ಲದೆ ಅವಕಾಶ ನೀಡಿದರು. ಅಕ್ಕಮಹಾದೇವಿ ನಾಗಲಾಂಬಿಕೆ, ನೀಲಾಂಬಿಕೆ, ಅಕ್ಕಮ್ಮ, ಲಿಂಗಮ್ಮ, ಮುಕ್ತಾಯಕ್ಕ, ನಾಗಮ್ಮ ಸತ್ಯಕ್ಕ, ತಳಸಮುದಾಯದವರೆಂದರೆ ಬಿಂಬಿತರಾಗಿದ್ದ ಕೊಟ್ಟಣದ ಸೋಮವ್ವ, ಅಮುಗೆ ರಾಯಮ್ಮ, ಆಯ್ದುಕ್ಕಿ ಲಕ್ಕಮ್ಮ ಮುಂತಾದವರು ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಮ್ಮ ಅನುಭವಗಳನ್ನು ವಚನಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು. ಸಬಲೀಕರಣಕ್ಕೆ ಬೆಂಬಲಿಸಿದರು. ಸಾಮಾಜಿಕ ಸಮಾನತೆ, ಲಿಂಗಸಮಾನತೆಗೆ ಅವಕಾಶ ನೀಡಿ ಇಂದಿನ ಸಮಾಜಕ್ಕೆ ಮಾರ್ಗದರ್ಶಗಳಾದರು.8

ವೀರಶೈವ ಧರ್ಮ ಪ್ರತಿಪಾದಕರು, ಚಳುವಳಿಗಾರರು, ಚಾತುರ್ವರ್ಣಾತೀತ ತತ್ವ ಪ್ರತಿಪಾದಿಸಿದರು.9 ಶತಶತಮಾನಗಳಿಂದ ಸಮಾಜದಲ್ಲಿ ಬೇರುಬಿಟ್ಟಿದ್ದ ಜಾತಿ ಭೇದಗಳನ್ನು ವಿರೋಧಿಸಿದರು. ಕೊಲುವವನೆ ಮಾದಿಗ, ಹೊಲಸು ತಿಂಬುವನೆ ಹೊಲಯ, ಕುಲವೇನು ಅವಂದಿರು ಸಕಲ ಜೀವಾತ್ಮರಿಗೆ ಲೇಸನ್ನ ಬಯಸುವವನೆ ನಿಜವಾದ ಕುಲಜಾತನೆದು ಪ್ರತಿಪಾದಿಸಿದರು. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಿಸಿದರು. ಬ್ರಾಹ್ಮಣ ಶರಣ ಮದುವಯ್ಯನ ಮಗಳು ಕಲಾವತಿಯನ್ನು ಅಸ್ಪೃಶ್ಯ ಮೋಚಿ, ಅಂತ್ಯಜನಾದ ಹರಳಯ್ಯನ ಶಿಲುವಂತ ಮಗನಿಗೆ ಕೊಟ್ಟು ವಿವಾಹ ಏರ್ಪಡಿಸುವ ಮೂಲಕ ಜಾತಿ ಸಂಪ್ರದಾಯಗಳ ವಿರುದ್ಧ ಕ್ರಾಂತಿಕಹಳೆ ಮೊಳಗಿಸಿದರು. ಸಂಪ್ರದಾಯಸ್ಥ ಬ್ರಾಹ್ಮಣರು ಬಿಜ್ಜಳ ರಾಜನಲ್ಲಿ ಹುಳಿ ಹಿಂಡಿದ್ದರಿಂದ ಮದುವಯ್ಯ, ಹರಳಯ್ಯರಿಗೆ ಗಲ್ಲುಶಿಕ್ಷೆ ವಿಧಿಸಿದನು ಮತ್ತು ನವದಂಪತಿಗಳ ಕಣ್ಣು ಕೀಳಿಸಿದನು. ಈ ಕೃತ್ಯದಿಂದ ಮನನೊಂದ ಬಸವೇಶ್ವರರು ಅಧಿಕಾರ ತ್ಯಜಿಸಿ ಸಂಗನ ಉಂಡಿಗೆಯ ಪಶು ನಾನು ಕೂಡಲಸಂಗನ ಸೇವೆಯಲ್ಲಿ ಕಳೆದರು. ಬಸವ ಅನುಯಾಯಿ ಜಗದೇವ ರಾಜ ಬಿಜ್ಜಳನನ್ನು ಹತ್ಯೆಗೈದನು. ಈ ಎಲ್ಲಾ ವಿದ್ಯಮಾನಗಳು ಜಾತಿ ಮತ್ತು ಮತ ನೀತಿ ವಿರುದ್ಧ ಬಸವೇಶ್ವರರ ದೃಢ ನಿರ್ಧಾರ ಮತ್ತು ಅಂದಿನ ಸಮಾಜದಲ್ಲಿದ್ದ ಶ್ರೇಣೀಕೃತ ಜಾತಿಗಳ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿತ್ತು. ಬಸವೇಶ್ವರರು ಜಾತಿ ಪದ್ಧತಿ ಖಂಡಿಸಿದರಲ್ಲದೆ ಕೆಳವರ್ಗದವರ ಮನೆಗಳಿಗೆ ಅಸ್ಪೃಶ್ಯ ತಳ ಸಮುದಾಯದ ಸಂಬೋಳಿ ನಾಗದೇವನ ಮನೆಗೆ ಭೇಟಿ ನೀಡಿ ಆರೋಗಣ (ಸಹಭೋಜನ) ಸ್ವೀಕರಿಸಿದರು.10 ಹಿಂದುಳಿದ ಸಮುದಾಯದವರಿಗೆ ಅನುಭವ ಮಂಟಪದಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಿದರಲ್ಲದೆ, ಈ ಮಹಾಮನೆಯ ಸದಸ್ಯತ್ವ ಪಡೆದ ಜಾತಿ ಪಂಗಡ ವರ್ಗದವರೆಲ್ಲಾ ಒಂದೇ ಕುಲಜರೆಂದು ಪ್ರತಿಪಾದಿಸಿದರು. ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಮಾದಾರ ಚನ್ನಯ್ಯ, ದೂಳಯ್ಯ, ಮೇದರ ಕೇತಯ್ಯ, ಗಾಣದ ಕಣ್ಣಪ್ಪ, ಸಮಗಾರ ಹರಳಯ್ಯ, ಕವಿ ಉರಿಲಿಂಗ ಪೆದ್ದರೆರಲ್ಲರೂ ದೇವರು ಮೆಚ್ಚುವ ಭಕ್ತರೆಂದು ಸಾರಿದರು.11 “ಸುಮಾರು 70 ರಿಂದ 100 ಜಾತಿ – ಉಪಜಾತಿಗಳೆಲ್ಲರದಿದ ಧರ್ಮವೆ ಲಿಂಗಾಯತ ವರ್ಗ, ಜಾತಿ, ಲಿಂಗ ಭೇದರಹಿತ ಸಮಾಜದ ನಿರ್ಮಾಣದ ಪ್ರಸ್ತುತತೆ ಅಗಾಧವಾಗಿದೆ ಎಂದು ತಿಳಿದರು. ಜ್ಞಾನದ ಬಲದಿಂದ ಅಸತ್ಯದ ಕಡೆ ನೋಡಯ್ಯ ಎಂಬ ವಚನದ ಮೂಲಕ ಜಾತಿಯ ಸಂಪ್ರದಾಯಗಳನ್ನು ತೊರೆಯುವಂತೆ ತಿಳಿಸಿದರು. ಕೆಳವರ್ಗದ ಜಾತಿ ಮತ್ತು ಸಾಮಾಜಿಕ ಸಮಸ್ಯೆಗಳತ್ತ ಜನರನ್ನು ಕೇಂದ್ರೀಕರಿಸಿದರು. ದಲಿತರಲ್ಲಿ ಕ್ರಾಂತಿಯ ಬೀಜ ಮೊಳಕೆಯೊಡೆಯುವಂತೆ ಮಾಡಿತು.12

ಧರ್ಮ ಸುಧಾರಣೆಗೆ ಸಂಬಂಧಿಸಿದಂತೆ ಸರಳ ಸುಲಭ ಮಾರ್ಗೋಪಾಯಗಳನ್ನು ತೋರಿಸಿ, ದೇವನೊಬ್ಬ ನಾಮ ಹಲವು ಎಂಬ ತಾತ್ವಿಕ ನಿಲುವು ಪ್ರತಿಪಾದಿಸಿದರು. ಏಕದೇವೋಪಾಸನೆಗೆ ಒತ್ತು ನೀಡಿದರು. ಲಿಂಗರೂಪದಲ್ಲಿ ಸರ್ವಶಕ್ತಿ ದೈವ ಸ್ವರೂಪವನ್ನು ಪ್ರತಿಪಾದಿಸಿದರು. ವೈದಿಕ ಶೈವರಲ್ಲಿದ್ದ ಲಿಕುಲೀಶ, ಪಾಶುಪಾತ, ಕಾಪಾಲಿಕ, ಕಾಳಮುಖ, ಪಂಚರಾತ್ರ, ನಾಯನಾರ ಹಾಗೂ ಶಕ್ತಿ ಅರಾಧಕರು ಸೇರಿದಂತೆ ಆಚರಣೆಯಲ್ಲಿದ್ದ ನರಬಲಿ, ಪ್ರಾಣಿಬಲಿಯಂತ ಅಮಾನುಷ ಆಚರಣೆಗಳನ್ನು ಅಲ್ಲಗಳೆದರು. ವೀರಶೈವ ಲಿಂಗಾಯತ ಪಂಥದಲ್ಲಿ ಕ್ರೂಢಿಕೃತ ಸರಳ ಮಾರ್ಗ ತಿಳಿಸಿದರು.13

ಎನ್ನದೇಹವೇ ಕಾಶಿ, ಒಡಲೆ ಕೇದಾರ, ಮಾಡಿ ನೀಡುವ ಹಸ್ತವೆ ಸೇತುಬಂಧ ಮಹಾಲಿಂಗವ ಹೊತ್ತಿರುವ ಶಿರಸ್ಸೇ ಶ್ರೀ ಶೈಲ ಪರ್ವತ ನೋಡಯ್ಯ ಎಂಬುದಾಗಿ ಪ್ರತಿಪಾದಿಸಿದರು.14

ಜೈನಧರ್ಮದಲ್ಲಿದ್ದ ಕಠಿಣ ಆಚರಣೆಗಳಾದ ಸಲ್ಲೇಖನ ವ್ರತ ಅಂದರೆ ಉಪವಾಸ ಮಾಡಿ ದೇಹ ಬಳಲಿಕೆಯಂತಹ ಆಚರಣೆಗಳನ್ನು, ಈ ಹಿಂದಿನ ಶೈವ ಪಂಥಗಳಲ್ಲಿದ್ದ ವ್ಯರ್ಥ ಆಚರಣೆಗಳನ್ನು ವಿರೋಧಿಸಿದರು. ಇಷ್ಟಲಿಂಗ ದೇವೋಪಾನೆಯಂತಹ ಸುಲಭ ಮಾರ್ಗದ ಮೂಲಕ ಜನಸಾಮಾನ್ಯರಿಗೂ ದೈವನನ್ನು ಕುರಿತು ಏಕಾಗ್ರತೆಯನ್ನು ಕಲ್ಪಿಸಿದರು.15

ವೀರಶೈವ ತತ್ವ (ಧರ್ಮ) ಪ್ರತಿಪಾದಕರು ಏಕೇಶ್ವರರನ್ನು ಆರಾಧಿಸಿ, ಷಟ್ ಸ್ಥಲ ಮೆಟ್ಟಿಲುಗಳ ಮೂಲಕ ಪಂಚಾಚಾರ ನಿಯಮವನ್ನನುಸರಿಸಿ ಅಷ್ಟಾವರಣ ಕವಚಗಳನ್ನು ಧರಿಸಿದರು. ಭಕ್ತಿ ಪ್ರಧಾನ ಮಾರ್ಗದ ಮೂಲಕ, ಕಾಯಕ ನಿಷ್ಠೆಯನ್ನು ಹೊಂದಿ, ದೇವರ ಸಾನಿಧ್ಯವನ್ನು ಜಾತಿ, ಮತ, ಲಿಂಗ ಮತ್ತು  ವರ್ಗ ಭೇದವಿಲ್ಲದೆ ಸದಾಚಾರಣೆ ಮೂಲಕ ಪಡೆಯಬಹುದೆಂದು ಪ್ರತಿಪಾದಿಸಿದರು.

ದೇವರು ಮತ್ತು ಧರ್ಮದ ಹೆಸರಲ್ಲಿ ಬದುಕುತ್ತಿದ್ದ ಡಾಂಭಿಕ, ಕಪಟ ಸನ್ಯಾಸಿಗಳು, ಸ್ವಾರ್ಥ ಪುರೋಹಿತ ಶಾಹಿಗಳು ಆಡಂಬರದ ಜೀವನಕ್ಕಾಗಿ ಧರ್ಮಬಾಹಿರ ಮಾರ್ಗ ಹಿಡಿದಿದ್ದ ಕಪಟಿಗ ವೇಷಧಾರಿಗಳನ್ನು ವಿರೋಧಿಸಿದರು. ನಂಬಿ ಕರೆದರೆ ಓ ಎನ್ನನೆ ಶಿವನು ಎಂದು ಹೇಳುತ್ತಾ ನಂಬಿಕೆಯಿಂದಿರಬೇಕೆಂದರು. ಗಂಡ ಶಿವಲಿಂಗ ದೇವರ ಭಕ್ತ ಹೆಂಡತಿ ಮಾರಿ ಮಸಣಿಯ ಭಕ್ತೆ ಗಂಡಕೊಂಬುದು ಪಾದೋದಕ ಪ್ರಸಾದ, ಹೆಂಡತಿ ಕಪಂಬುದು ಸುರೆ ಮಾಂಸ ಭಾಂಡ ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಕೆಯ ಹೊರಗ ತೊಳೆದಂತೆ ಎಂದು ಕೃತಕ ಜೀವನದ ಮೊರೆ ಹೋಗದಿರಲು ತಿಳಿಸಿದರು.

ಸಮಾರೋಪ

ವೀರಶೈವ ಧರ್ಮವು ಒಂದು ಚಳುವಳಿಯಾಗಿ ಹೊರಹೊಮ್ಮಿತು. ಜನರನ್ನು ಸರಳತೆ ಮತ್ತು ವೈಚಾರಿಕತೆಯಲ್ಲಿ ಚಿಂತಿಸುವಂತೆ ಮಾಡಿತು. ಸರಳತೆ, ಪ್ರೇಮ, ದಯೆ, ಅನುಕಂಪದಂತಹ ಮೌಲ್ಯಯುತ ಜೀವನವನ್ನು ಸಾಕ್ಷಾತ್ಕಾರಗೊಳ್ಳುವಂತೆ ಪ್ರೇರೇಪಿಸಿತು. ಮೌಢ್ಯತೆಗಳನ್ನು ಕೈಬಿಟ್ಟು ವೈಜ್ಞಾನಿಕ ಚಿಂತನೆಗೆ ಪ್ರಚೋದಿಸಿತು. ಜಾತಿ ಪದ್ಧತಿಯನ್ನು ವಿರೋಧಿಸಿ ಸಮ ಸಮಾಜ ನಿರ್ಮಾಣಕ್ಕೆ ಪ್ರೋತ್ಸಾಹಿಸಿದರು. ಸಂಸ್ಕೃತ ಭಾಷೆ, ಸಾಹಿತ್ಯ ಗ್ರಂಥಕ್ಕೆ ಬದಲಾಗಿ ಕನ್ನಡ ಭಾಚೆ, ಸಾಹಿತ್ಯ ಸಿರಿವಂತಿಕೆಗೆ ತಮ್ಮದೇ ಕೊಡುಗೆ ನೀಡಿದರು. ವೀರಶೈವ ಧರ್ಮ ತತ್ವ ಪ್ರಚಾರಗಳ ಅಸ್ತಿತ್ವಕ್ಕೆ ಬಂದ ವಚನಗಳು ತಮ್ಮದೇ ಸಾಹಿತ್ಯ ಪರಂಪರೆ ಸೃಷ್ಟಿಸಿದವು. ಡಾಂಭಿಕ ಬದುಕಿಗೆ ಬದಲಾಗಿ ಶುದ್ಧ ಮಾನವೀಯ ಮೌಲ್ಯಗಳ ಪಾಲನೆಗೆ ಕರೆ ನೀಡಿದರು. ಕಲ್ಲುನಾಗರಿಗೆ ಹಾಲನೆರೆಯುವರು ಉಣದ ಲಿಂಗಕ್ಕೆ ಭೋಜನ ನಿವೇದ್ಯ ಮಾಡಿ, ಉಂಬ ಜಂಗಮ ಬಂದರೆ ಮುಂದೆ ನಡೆ ಎಂಬ ಡೊಂಗಿಗಳನ್ನು ಖಂಡಿಸಿದರು. ವಿಪುಲ ವೆಚ್ಚದ ಧರ್ಮಾಚರಣೆಗಳನ್ನು ವಿರೋಧಿಸಿದರು. ಅಸ್ಪೃಶ್ಯತೆ ಖಂಡಿಸಿದರು. ಸ್ತ್ರೀಯರ ಪುರೋಗಮನಕ್ಕೆ ಆದ್ಯತೆ ನೀಡಿದರು. ಸರಳ ನೈತಿಕ ಪರಿಶುದ್ಧ ಮಾರ್ಗಸೂಚಿಗಳಾದ ವೀರಶೈವ ಪ್ರತಿಪಾದಕರು ವಿವಿಧ ಸ್ಥಳಗಳಲ್ಲಿ (ಮಠಗಳನ್ನು) ಪ್ರಚಾರ ಕೇಂದ್ರಗಳನ್ನು ಸ್ಥಾಪಿಸಿಕೊಂಡರು. ಕಾಳಮುಖ ಮಠಗಳು, ವೀರಶೈವ ಮಠಗಳಾದವು. ತತ್ವ ಪ್ರಚಾರಕ್ಕಾಗಿ ಆರಂಭವಾದ ಮಠಗಳು ದೀನ, ದಲಿತರ, ಅನಾಥರ ವೃದ್ಧರ ಸೇವಾ ಕೇಂದ್ರಗಳಾಗಿ ಮಾರ್ಪಾಡಾದವು. ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ವಿನೂತನ ಮಾರ್ಪಾಡಿಗೆ ಸಹಾಯಕವಾದವು. ಹರಿಹರ, ರಾಘವಾಂಕ, ಚಾಮರಸ ಕವಿಗಳು ಬೆಳಕಿಗೆ ಬಂದರು. ವಿಜಯನಗರ ಕಾಲದಲ್ಲಿ ಪುನರುಜ್ಜೀವನ ಕಂಡಿತು. ಕೆಳದಿ, ಕೊಡಗು ಅರಸರು ಶ್ರೀಮಂತ ಧರ್ಮವನ್ನಾಗಿಸಿದರು. ಮೈಸೂರು ಒಡೆಯರು, ಚಿತ್ರದುರ್ಗ, ಹಾಗಲವಾಡಿ, ನಿಡಗಲ್ಲು, ಮಧುಗಿರಿ ಪಾಳೆಗಾರರು ಮತ್ತು ರಾಜರು ತಮ್ಮ ಮನೆತನದವರ ಧರ್ಮವಾಗಿಸಿಕೊಂಡರು. ವೀರಶೈವ ಮಠಗಳನ್ನು ಪ್ರೋತ್ಸಾಹಿಸಿದರು. ಅಂದಿನಿಂದ ಶಿಕ್ಷಣ, ಭಾಷೆ, ಸಾಹಿತ್ಯ, ಆರೋಗ್ಯ, ದೀನ ದಲಿತ, ಅನಾಥರು, ವೃದ್ಧಾಶ್ರಮ ಪ್ರಸಾದ ನಿಲಯಗಳಂತಹ ಸೇವೆಗಳಲ್ಲಿ ತೊಡಗಿಕೊಂಡು ಸುಧಾರಣ ಆಂದೋಲನಕ್ಕಾಗಿ ಇಂದಿಗೂ ಕಾರ್ಯತತ್ಪರವಾಗಿವೆ. ವೀರಶೈವ ಧರ್ಮದ ತತ್ವಗಳು ದಕ್ಷಿಣ ಭಾರತವಲ್ಲದೆ ದೇಶ, ವಿದೇಶಗಳಲ್ಲಿ ವಚನ ಜ್ಯೋತಿಯ ಮೂಲಕ ಸುಧಾರಣಾ ಪ್ರಕ್ರಿಯೆ ಚಾಲ್ತಿಯಲ್ಲಿವೆ.

ಪರಾಮರ್ಶನ ಗ್ರಂಥಗಳು

  1. ಡಾ|| ಮರುಳಸಿದ್ಧಯ್ಯ, ಹೆಚ್.ಎಂ. ಸಂ-1 ಭಕ್ತಿ ಪಂಥದಲ್ಲಿ ಸಮಾಜ ಕಾರ್ಯದ ಬೇರುಗಳು, ಪ್ರಗತಿ ಪ್ರಕಾಶನ, ಬೆಂಗಳೂರು – 560009 ಪುಟ ಸಂ. 98-116
  2. ಪಿ.ಬಿ. ದೇಸಾಯಿ,Basaveshwar and his times Karnataka University Dharawad – 1968 and Saki making History 1998, P.No – 81
  3. ಡಾ|| ಮರುಳಸಿದ್ಧಯ್ಯ – ಪೂರ್ವೋಕ್ತ ಪುಟ 110
  4. ಪಿ.ಬಿ, ದೇಸಾಯಿ – ಪೂರ್ವೋಕ್ತ ಪುಟ 33-37
  5. ಎಂ.ಚಿದಾನಂದಮೂರ್ತಿ, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ ಅನುಭಾವ ಚರಿತ್ರೆ – ಕರ್ನಾಟಕ ವಿ.ವಿ ಪ್ರಕಟಣೆ, ಧಾರವಾಡ – 1985, ವಿಷಯ ಪ್ರವೇಶ ಪುಟ ಸಂಖ್ಯೆ 1-12
  6. ಶ್ರೀನಿವಾಸA comparative study of Sharana and Dasa Literature, Madras University publications Madras 1981
  7. Sharma. K, Bhakti Movement A New Pespectness, Mandharlal Publishers, New Delhi – 1987, P.No 16
  8. Malathi. L, The Bhakthi Movement and the status of women, shanthi Prakashana, New Delhi,  1989 ಮತ್ತು ವಚನ ಚಳುವಳಿಯಲ್ಲಿ ಪ್ರತಿಭಟನೆ ಡಾ|| ಬಸವರಾಜ ಸಬರದ ಗುಲ್ಬರ್ಗಾ
  9. ಸೂರ್ಯನಾಥ ಯು ಕಾಮತ್ ಕರ್ನಾಟಕದ ಸಂಕ್ಷಿಪ್ತ ಚರಿತ್ರೆ ಪುಟ – 73
  10. ವಿದ್ಯಾಶ್ರೀ, ಶತಮಾನೋತ್ಸವ ಸ್ಮರಣ ಸಂಚಿಕೆ ಕ.ವಿ.ವಿ.ನಿ ಸಂಸ್ಥೆ, ಗಾಂಧಿನಗರ ಬೆಂಗಳೂರು, ಜಿ.ಎಸ್ ಸಿದ್ಧಲಿಂಗಯ್ಯ ಪುಟ – 46, ಡಾ|| ಎಂ. ಚಿದಾನಂದ ಮೂರ್ತಿ ಪುಟ – 162
  11. ಬಸವಣ್ಣ – ಮುರುಘಾ ಶಿವಮೂರ್ತಿ ಶರಣರು ಕ.ವಿ.ವಿ.ನಿ ಸಂಸ್ಥೆ ಗಾಂಧಿನಗರ ಬೆಂಗಳೂರು, ಪುಟ – 9
  12. ಚಿನ್ನಸ್ವಾಮಿ ಸೋಸಲೆ, ಮೈಸೂರು, ಸಂಸ್ಥಾನ ದಲಿತರು ಮತ್ತು ಬ್ರಾಹ್ಮಣೇತರ ಚಳುವಳಿ, ಪುಟ – 60
  13. ಎಂ.ಎಂ ಕಲ್ಬುರ್ಗಿ, ಸಮಗ್ರ ವಚನ ಸಂಪುಟ (1-15) ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು – 1993, ಪೀಠಿಕೆ ಭಾಗ ಪುಟ ಸಂಖ್ಯೆ 1-32
  14. ಪಿ.ವಿ ನಾರಾಯಣ ವಚನ ಮತ್ತು ಸಾಹಿತ್ಯ ಒಂದು ಸಂಸ್ಕೃತಿ ಅಧ್ಯಯನ, ವೀರಶೈವ ಅಧ್ಯಯನ ಸಂಸ್ಥೆ, ಗದಗ – 1983
  15. ಸಾ.ರಾ. ಅಬೂಬಕರ್, ಸಾಹಿತ್ಯ, ಸಂಸ್ಕೃತಿ, ಮಹಿಳೆ – ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ 2007, ಪುಟ 1 ರಿಂದ 7.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal