Tumbe Group of International Journals

Full Text


ಚಿತ್ರದುರ್ಗ ನಾಯಕರ ಕೃಷಿ ಉತ್ಪಾದನೆ ನೀತಿ

(ದಾವಣಗೆರೆ ಜಿಲ್ಲೆಯನ್ನು ಅನುಲಕ್ಷಿಸಿ)

ಮಾರುತಿ ಹೆಚ್

ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ.ಹಂಪಿ

9740093980


ಪ್ರಸ್ತಾವನೆ     

 ವೇದಗಳ ಕಾಲದಿಂದಲೂ ವ್ಯವಸಾಯಕ್ಕೆ ಮಹತ್ವ ನೀಡಲಾಗಿದೆ. ಅದನ್ನು ಗೌರವದ ವೃತ್ತಿ ಮತ್ತು ಪೂಜ್ಯ ಭಾವನೆಯಿಂದ ಕಾಣಲಾಗಿದೆ. ವಿಜಯನಗರ ಮತ್ತು ನಾಯಕ ಅರಸರ ಕಾಲದಲ್ಲಿ ಕೃಷಿಕರು ಸರ್ಕಾರಕ್ಕೆ ಬೆನ್ನೆಲುಬಾಗಿದ್ದರು. ಕೃಷಿಯು ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಮೂಲಾಧಾರವಾಗಿದ್ದು, ಅಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ ಪಡೆದಿತ್ತು. ಅವರಿಗೆ ಮಣ್ಣಿನ ವರ್ಗೀಕರಣತಿಳಿದಿದ್ದಿತು.ಶೋಧನೆ ಮತ್ತು ನೀರಾವರಿಉಪಯೋಗದಿಂದ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ತಮ್ಮ ಹಸಿವು ಮತ್ತು ಬಯಕೆಗಳನ್ನುಈಡೇರಿಸಿಕೊಳ್ಳುತ್ತಿದ್ದುದಲ್ಲದೆ ಬೊಕ್ಕಸಕ್ಕೆ ತೆರಿಗೆಯನ್ನು ನೀಡಿ, ಸರ್ಕಾರಕ್ಕೆ ಆದಾಯ ತಂದುಕೊಡುತ್ತಿದ್ದರು. ಪ್ರಜೆಗಳಿಂದ ಹಿಡಿದು ಪ್ರಭುಗಳವರೆಗೆ ಕೃಷಿಯು ಕೂಅತ್ಯುಪಯುಕ್ತವಾಗಿತ್ತು.

ವಿಜಯನಗರ ಮತ್ತು ನಾಯಕ ಅರಸರ ಸ್ಥಳೀಯ ಸ್ವತಂತ್ರ ರಾಜ್ಯಗಳ ಉದಯದೊಂದಿಗೆ ಆರ್ಥಿಕ ಕ್ಷೇತ್ರವು ಬದಲಾವಣೆ ಹೊಂದಿತು. ಈ ಸಮಯದಲ್ಲಿ ಕೃಷಿ ಆಧಾರಿತ ನೆಲೆಗಳು ಅಥವಾ ಹಳ್ಳಿಗಳು ಹೆಚ್ಚಾಗಿ ಅಸ್ತಿತ್ವಕ್ಕೆ ಬಂದವು. ಇವುಗಳ ಸ್ಥಳೀಯ ಅಧಿಕಾರಿಗಳು, ಬ್ರಾಹ್ಮಣರು, ಗ್ರಾಮ ಮುಖಂಡರ ನೆರವಿನಿಂದ ಕೃಷಿಯನ್ನು ಅಭಿವೃದ್ಧಿ ಪಡಿಸಲಾರಂಭಿಸಿದರು. ಹಾಗಾಗಿ ಚಿತ್ರದುರ್ಗ ನಾಯಕ ಅರಸರ ಕಾಲಾವಧಿಯ ಕೃಷಿ ಉತ್ಪಾದನೆಯ ಅಂಶಗಳನ್ನು ಕುರಿತಂತೆ ಚರ್ಚಿಸುವುದೇ ಈ ಲೇಖನದ ಉದ್ದೇಶವಾಗಿದೆ.

ಪ್ರಮುಖ ಪದಗಳು: ಚಿತ್ರದುರ್ಗ ನಾಯಕರ ಕೃಷಿ, ಮಾವಿನ ತೋಟ, ಬಾಳೆ ತೋಟ, ಹೂವಿನ ತೋಟ

ಪೀಠಿಕೆ:

            ಚಿತ್ರದುರ್ಗ ನಾಯಕರ ಪ್ರದೇಶದಲ್ಲಿ ಜನತೆಯು ಮುಖ್ಯವಾಗಿ ಕೃಷಿಯನ್ನು ಅವಲಂಭಿಸಿದ್ದರು. ಇದರ ಅಭಿವೃದ್ಧಿಗಾಗಿ ಆಡಳಿತ ಮತ್ತು ಕೃಷಿಕರು ಸಕ್ರಿಯವಾಗಿ ತೊಡಗಿದ್ದರು. ಈ ಅರಸರು ಅಣಜಿ, ಭರಮಸಾಗರ, ಹುಚ್ಚವ್ವನಹಳ್ಳಿಗಳಲ್ಲಿ ದೊಡ್ಡ ಕೆರೆಗಳನ್ನು ನಿರ್ಮಿಸಿ ಅವು ಇಂದಿಗೂ ನೂರಾರು ಎಕರೆ ಭೂಮಿಗಳಿಗೆ ನೀರನ್ನೊದಗಿಸುತ್ತವೆ. ಚಿತ್ರದುರ್ಗ ನಾಯಕ ಅರಸರ ಕಾಲದಲ್ಲಿ ಕೃಷಿ ಭೂಮಿಯನ್ನು ಅನೇಕ ವಿಧಗಳಾಗಿ ವಿಂಗಡಿಸಿಕೊಂಡಿದ್ದರು. ಈ ನಾಯಕ ಅರಸರು ಬ್ರಾಹ್ಮಣರಿಗೆ ದಾನ ನೀಡುವಾಗ ಆ ಭೂಮಿಯನ್ನು ಉತ್ತಮ, ಮಧ್ಯಮ, ಕನಿಷ್ಠವೆಂದು ವಿಂಗಡಿಸಿದ್ದರು1, ಸಾಗುವಳಿಯಾದ ಭೂಮಿಯನ್ನು ಗದ್ದೆ, ಬೆದ್ದಲು ಮತ್ತು ತೋಟ ಎಂಬುದಾಗಿ ವರ್ಗೀಕರಿಸಲಾಗಿತ್ತು. ತೋಟಗಳನ್ನು ಮಾವಿನ ತೋಟ, ಬಾಳೆ ತೋಟ, ಹೂವಿನ ತೋಟ, ತೆಂಗಿನ ತೋಟ, ಅಡಿಕೆ ತೋಟ ಎಂಬುದಾಗಿ ಕರೆಯುತ್ತಿದ್ದರು2. ಕ್ರಿ.ಶ.1698ರಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕನು ನೀರ್ಥಡಿಯ ಶ್ರೀರಂಗನಾಥ ಸ್ವಾಮಿಯ ದೇವಾಲಯ ಜೀರ್ಣೋದ್ಧಾರ ಮಾಡಿ ಆ ದೇವರಿಗೆ ಎರಡು ಮಮಸ್ತ ತೋಟವನ್ನು ದತ್ತಿ ನೀಡಿದನು3. ಬಿತ್ತನೆಯ ಪ್ರಮಾಣದ ಮೇಲೆ ಖಂಡುಗ, ಕೊಳಗ, ಮತ್ತು ಮತ್ತು ಇತ್ಯಾದಿ ಅಳತೆಗಳ ಆಧಾರದಲ್ಲಿ ಭೂ ಹಿಡುವಳಿಗಳ ಉತ್ಪಾದಕತೆಯನ್ನು ನಿರ್ಧರಿಸಲಾಗುತ್ತಿತ್ತು. ಚಿತ್ರದುರ್ಗನಾಯಕ ಅರಸರ ಆಡಳಿತಾವಧಿಯಲ್ಲಿ ವ್ಯಕ್ತಿಯೊಬ್ಬನು ಭೂಮಿ ರೂಪದ ಆಸ್ತಿಯ ಒಡೆತನ ಹೊಂದಿದ್ದು, ಈ ವೇಳೆಯಲ್ಲಿ ಖುಷಿ, ತರಿ, ಬಗಾಯ್ತು ಎಂಬ ಭೂ ಹಿಡುವಳಿಗಳಿದ್ದವು. ನಾಯಕ ಅರಸರ ಕಾಲದಲ್ಲಿ ಕಂದಾಯ ಪಡೆಯುವ ಭೂ ಹಿಡುವಳಿಗಳನ್ನು ಗದ್ದೆ, ಹೊಲ, ಬೆದ್ದಲು, ಬೈಲು, ತೋಟ, ತುಡಿಕೆ ಎಂದು ಕರೆಯುತ್ತಿದ್ದರು. ಈ ಪ್ರದೇಶದ ಕೆರೆಗಳ ಆಶ್ರಯದಲ್ಲಿ ಗದ್ದೆಗಳು ಇದ್ದವು. ಕೆರೆಗಳು ಇಲ್ಲದೆ ಎಂದು ತಿಳಿಸುವಂತೆ ಮಳೆಯನ್ನೇ ಅವಲಂಭಿಸಿ ವ್ಯವಸಾಯ ಮಾಡಬೇಕಿದ್ದ ಜಮೀನನ್ನು ಹೊಲ ಮತ್ತು ಬೆದ್ದಲು ಕರೆಯುತ್ತಿದ್ದರು. ಮಳೆಯನ್ನೇ ಅವಲಂಬಿಸಿದ ವ್ಯವಸಾಯ ಪದ್ಧತಿಯನ್ನು “ಕಾಡಾರಂಬ”ವೆಂದು, ಕೆರೆ ಮೊದಲಾದ ಜಲಾಶಯಗಳನ್ನು ಆಧರಿಸಿ ನಡೆಸುತ್ತಿದ್ದ ವ್ಯವಸಾಯ ಪದ್ಧತಿಗೆ “ನೀರಾರಂಬ”ವೆಂದು ಕರೆಯುತ್ತಿದ್ದರು4, ಶಾಸನದಲ್ಲಿ ಕಂಡುಬರುವಂತೆ “ಕಂಬ”, “ಮತ್ತ” ಎಂಬ ಪದಗಳು ಸ್ಪಷ್ಟವಾಗಿ ಭೂ ಹಿಡುವಳಿಯ ವಿಸ್ತಾರವನ್ನು ಸೂಚಿಸುತ್ತವೆ. ಹಾಗೆಯೇ ಶಾಸನದಲ್ಲಿ ಬರುವಂತೆ ಸಾಗುವಳಿ ಭೂಮಿಯನ್ನು ಗದ್ದೆ, ಬೆದ್ದಲು, ಹೊಲ, ಕಾಡಾರಂಬ, ನೀರಾರಂಭ5 ಎಂಬುದಾಗಿ ಕರೆಯತ್ತಿದ್ದರು. ಬುಕಾನನ್ ಚಿತ್ರದುರ್ಗ ಸುತ್ತಮುತ್ತಲಿನ ಪ್ರದೇಶವು ಜಿಗಟು ಕಪ್ಪು ಭೂಮಿಯಿಂದ ಕೂಡಿದ್ದು ಇಲ್ಲಿ ಹೊಲವನ್ನು ಹೂಳಲು ಭಾರೀ ಪ್ರಮಾಣದ ನೇಗಿಲು ಹಾಗೂ ಎಂಟರಿಂದ ಹನ್ನೆರಡು ಎತ್ತುಗಳನ್ನು ಬಳಸುತ್ತಾರೆ. ಈ ಪ್ರದೇಶದಲ್ಲಿ ಜೋಳ, ನವಣೆ, ರಾಗಿ, ಸಜ್ಜೆ, ಹತ್ತಿ ಬೆಳೆಯುತ್ತಾರೆ ಎಂದು ತಿಳಿಸುತ್ತಾನೆ5.

             ಗದ್ದೆ ಎನ್ನುವುದು ಭತ್ತವನ್ನು ಬೆಳೆಯುವ ನೀರಾವರಿಗೆ ಒಳಪಟ್ಟ ಪ್ರದೇಶವಾದರೆ, ಬೆದ್ದಲು ಎನ್ನುವುದು ಒಣ ಬೇಸಾಯ ಕ್ಷೇತ್ರವನ್ನು ನೀಸೂಚಿಸುತ್ತದೆ. ಬೆದ್ದಲು ಎಂಬುದು ಮಳೆಯಾಶ್ರಿತವಾಗಿ ಬೆಳೆಯನ್ನು ತೆಗೆಯಲು ಮಾತ್ರ ಅವಕಾಶವಿರುತ್ತದೆ. ವಿಜಯನಗರ ಕಾಲದ ಒಣಭೂಮಿ ಬೇಸಾಯ ಪ್ರಕಾರಗಳಲ್ಲಿ ಕಾಡಾರಂಬ ಎಂಬುದು ಮುಖ್ಯವಾದುದೆಂದು ತಿಳಿಯುತ್ತದೆ.

              ಚಿತ್ರದುರ್ಗ ನಾಯಕ ಅರಸರು ತಮ್ಮ ಪ್ರದೇಶದಲ್ಲಿ ಸಾಮಾನ್ಯವಾಗಿ ಬಿತ್ತುವ ಬೀಜ ಪದ್ಧತಿಯಲ್ಲಿ ಅಳತೆ ಮಾಡುವ ಪದ್ಧತಿ ಜಾರಿಯಲ್ಲಿದ್ದಿತು. ಉದಾಹರಣೆಗೆ ಶಾಸನದಲ್ಲಿ ಒಂದು ಖಂಡುಗ ಭೂಮಿ ಎಂಬಂತಹ ಮಾತುಗಳು ಕಂಡು ಬರುತ್ತವೆ6. ಒಂದು ಖಂಡುಗ ಭೂಮಿ ಎಂದರೆ ಆ ಪ್ರಮಾಣದ ಬೀಜವನ್ನು ಬಿತ್ತುವ ಭೂಮಿ ಎಂದರ್ಥ. ಈ ಪ್ರದೇಶದಲ್ಲಿ ಕೆರೆ ಮತ್ತು ಬಾವಿಗಳಿಂದಲೂ ವ್ಯವಸಾಯ ಮಾಡುತ್ತಿದ್ದರು. ಕಪಿಲೆ ಅಥವಾ ಬಕೇಟಿನ ಸಾಧನದಿಂದ, ಎತ್ತುಗಳ ಸಹಾಯದಿಂದ ಕೆರೆ ಬಾವಿಯ ನೀರನ್ನು ಎತ್ತಲಾಗುತ್ತಿತ್ತು. ಒಬ್ಬ ವ್ಯಕ್ತಿ ಮತ್ತು ಒಂದು ಜೊತೆ ಎತ್ತುಗಳ ಸಹಾಯದಿಂದ ನೀರನ್ನು ಎಳೆಯಬಹುದಾಗಿತ್ತೆಂದು ಬುಕಾನನ್ ತಿಳಿಸುತ್ತಾನೆ7. ಹೀಗೆ ಈ ಪ್ರದೇಶದ ನೀರಾವರಿ ವ್ಯವಸ್ಥೆಯಲ್ಲಿ ಕೆರೆ ಮತ್ತು ಬಾವಿಗಳು ಪ್ರಧಾನ ಪಾತ್ರವಹಿಸಿದ್ದವು.

          ಒಂದು ಗ್ರಾಮದ ಕೃಷಿ ಭೂಮಿಯನ್ನು ಲಿಂಗಮುದ್ರೆ ಕಲ್ಲುಗಳ ಮೂಲಕ ಗುರುತಿಸಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮವನ್ನು ಪ್ರತ್ಯೇಕಿಸುವ ಕ್ರಮವು ಜಾರಿಯಲ್ಲಿದ್ದಿತು. ಲಿಂಗಮುದ್ರೆ ಕಲ್ಲುಗಳನ್ನು ನೆಟ್ಟು ಗುರುತಿಸುವ ಕ್ರಮ ಜಾರಿಯಲ್ಲಿತ್ತೆಂದು ನಿಬಗೂರು ಶಾಸನ ತಿಳಿಸುತ್ತದೆ8, ಕೆಲವು ಬಾರಿ ಭೂಮಿಯ ವಿಸ್ತೀರ್ಣವನ್ನು ಬಿತ್ತುವ ಬೀಜದ ಪ್ರಮಾಣದಿಂದ ನಿರ್ಧರಿಸಲಾಗುತ್ತಿತ್ತು. ಒಂದು ಕೊಳಗ ಬೀಜವನ್ನು ಬಿತ್ತಿದ ಭೂಮಿಯು ಒಂದು ಘಟಕವೆನಿಸುತ್ತಿತ್ತು.

              ದಾವಣಗೆರೆ ಪ್ರದೇಶದ ಭೂಮಿ ಫಲವತ್ತತೆಯನ್ನು ಗಮನಿಸಿ ಎರೆಭೂಮಿ,ಕೆಂಪುಭೂಮಿ, ಮರಳು ಭೂಮಿ, ಕಲ್ಕಚ್ಚು ಭೂಮಿ ಮುಂತಾಗಿ ಕರೆಯುವ ಕ್ರಮ ರೂಢಿಯಲ್ಲಿತ್ತು. ಈ ನಾಯಕ ಅರಸರು ಕೃಷಿಯ ಅಭಿವೃದ್ಧಿಗೊಸ್ಕರ ಹಲವು ಬಾವಿ, ಕೆರೆಗಳನ್ನು ನಿರ್ಮಿಸಿದ್ದರು.

ಕೊನೆ ಟಿಪ್ಪಣಿಗಳು

  1. ಶಾಮಾಶಾಸ್ತ್ರಿ ಆರ್. (ಸಂ.), ಕೌಟಿಲ್ಯನ ಅರ್ಥಶಾಸ್ತ್ರ, 6ನೇ ಮುದ್ರಣ, ಮೈಸೂರು, 1960,ಪುಟ. 129
  2. ಗುರುರಾಜಚಾರ್ ಎಸ್., ಸನ್ ಆಫ್ ಫಸ್ಟ್ ಆಫ್ ಎಕನಾಮಿಕ್ಸ್ ಅಂಡ್ ಸೋಶಿಯಲ್ ಎಕನಾಮಿಕ್ ಕರ್ನಾಟಕ, ಪುಟ. 41
  3. ಜಗದೀಶ್ ಎಂ.ಹೆಚ್. ಮುಕ್ತನಹಳ್ಳಿಯ ಪ್ರಾಚೀನ ಅವಶೇಷಗಳು ಮತ್ತು ಅಪ್ರಕಟಿತ ಶಾಸನ, ಇತಿಹಾಸ ದರ್ಶನ ಸಂಪುಟ-21, 2006, ಪುಟ. 39
  4. ರಾಬರ್ಟ್ ಸಿವೆಲ್, ಎ ಫರಗಟನ್ ಎಂಪೈರ್ ವಿಜಯನಗರ, ದೆಹಲಿ, 1962, ಪುಟ. 230-248
  5. ಇಂದುಬಾಯಿ ಟಿ.ಕೆ. (ಸಂ.), ಹಾಡು-2, ಶಂಕರಗಂಡ, ಪದ್ಯ 33, ಪುಟ. 77
  6. ಅದೇ, ಚಂದ್ರಹಾಸನ ಕಥೆ, ಪದ್ಯ 113, ಪುಟ. 125
  7. ಬುಕಾನನ್, ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ಕಂಟ್ರೀಸ್ ಆಫ್ ಮೈಸೂರ್ ಕೆನರ ಮತ್ತು ಮಲಬಾರ್ ಸಂಪುಟ 5. ಪುಟ. 330, ಅದೇ, ಪುಟ. 327


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal