Tumbe Group of International Journals

Full Text


ದಿವ್ಯಾಂಗ(ವಿಕಲಚೇತನರ) ಮಕ್ಕಳ ಜೀವನ ರೂಪಿಸುವಲ್ಲಿ ಪೋಷಕರ ಕರ್ತವ್ಯ ಮತ್ತು ಸರ್ಕಾರಿ ಯೋಜನೆಗಳು

1ವಿಜಯಕುಮಾರ ಬಡಿಗೇರ,     

ಪಿಎಚ್,ಡಿ ಸಂಶೋಧನಾರ್ಥಿ

ಅಭಿವೃದ್ಧಿ ಅಧ್ಯಯನ ವಿಭಾಗ,

ಕನ್ನಡ ವಿಶ್ವವಿದ್ಯಾಲಯ ಹಂಪಿ

ಮೊ: 9731801873

E mail: vijayakumarkb73@gmail.com

2ಡಾ. ತೇಜಸ್ವಿನಿ ಬಿ.ಯಕ್ಕುಂಡಿಮಠ

ಮಾರ್ಗದರ್ಶಕರು

ವಿಶೇಷಾಧಿಕಾರಿಗಳು

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್

ಸಾರಾಂಶ

ಸಾಮಾನ್ಯರಾಗಿದ್ದರು ಬದುಕು ರೂಪಿಸಿಕೊಳ್ಳಲು ಕಷ್ಟಪಡುವ ದುಸ್ಥಿತಿಯಲ್ಲಿ ದಿವ್ಯಾಂಗರು ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದಾರೆ. ದಿವ್ಯಾಂಗರ ಸಮಾಜದ ಮುನ್ನುಡಿಗೆ ತರುವಲ್ಲಿ ಹಲವಾರು ಯೋಜನೆಗಳನ್ನು ಕಾಯ್ದೆಗಳನ್ನು ಜಾರಿಮಾಡಿದೆ. ದಿವ್ಯಾಂಗರ ಸಬಲೀಕರಣಕ್ಕೆ ಸರಕಾರ ಪ್ರತ್ಯೇಕ ಇಲಾಖೆಯನ್ನು ಆಯಾ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗಿದೆ. ಇದಲ್ಲದೆ ಕೇಂದ್ರ ಸರಕಾರ  2019 ರಲ್ಲಿ ಅನುಷ್ಟಾನಕ್ಕೆ ತಂದಿರುವ ದಿವ್ಯಾಂಗರ ಹಕ್ಕುಗಳ ಕಾಯ್ದೆಯನ್ನು ಕರ್ನಾಟಕದಲ್ಲಿ ಕಳೆದ ವರ್ಷ  ಅಳವಡಿಸಿಕೊಳ್ಳಲಾಗಿದೆ. ಈ ಕಾಯ್ದೆಯಲ್ಲಿ ದಿವ್ಯಾಂಗರಿಗೆ ಸರ್ಕಾರ ಎಲ್ಲ ರೀತಿಯ ಯೋಜನೆಗಳಲ್ಲಿ ಮೀಸಲು ಜೊತೆಗೆ ಒಟ್ಟು ಬಜೆಟ್ ನಲ್ಲಿ ಶೇಕಡಾ 5 ರಷ್ಟು ಸಂವಿಧಾನದ ಬಳಕೆಯನ್ನು ಕಡ್ಡಾಯಗೊಳಿಸಿದೆ.

ಪೀಠಿಕೆ:           

ದಿವ್ಯಾಂಗರಾದವರು ಸ್ವಾವಲಂಬಿಗಳಾಗಿ ಬಾಳುವುದರ ಜೊತೆಗೆ ಸುಂದರ, ಸದೃಢ ಸಮಾಜದ ನಿರ್ಮಾಣ ಕಾರ್ಯದಲ್ಲಿ ತೊಡಗಿದಾಗ ಮಾತ್ರ ಸರ್ಕಾರದ ಯೋಜನೆಗಳು ಸಫಲತೆಯನ್ನು ಪಡೆದುಕೊಂಡಂತೆ. ಆದರೆ ಸರಕಾರದ ಯೋಜನೆಗಳನ್ನು ಪಡೆದುಕೊಂಡವರಲ್ಲಿ ಬೆರಳಣಿಕೆಯಷ್ಟು ಮಾತ್ರ ಎಂದು ಹೇಳಬಹುದು. ಕೆಲವೊಂದು ಯೋಜನೆಗಳ ಅರಿವು ದಿವ್ಯಾಂಗರಿಗೆ ಇನ್ನೂ ತಲುಪಿಲ್ಲ ಎಂಬುದು ಒಂದು ಸಮಸ್ಯೆಯ ಸಂಗತಿಯಾಗಿದೆ.  ಹಿಂಜರಿಕೆ, ಭಯ, ಒಂಟಿತನದ ಸಮಸ್ಯೆಯಿಂದಾಗಿ ದಿವ್ಯಾಂಗರು ಸಮಾಜದ ಮುಖ್ಯವಾಹಿನಿಗೆ ಬರವಲ್ಲಿ ಪ್ರಮುಖವಾದ ಸಮಸ್ಯೆಯ ತಿರುಳಾಗಿದೆ. ದಿವ್ಯಾಂಗತೆಯ ಸಮಸ್ಯೆಯು ಯಾವುದೇ ಒಂದು ರಾಷ್ಟ್ರಕ್ಕೆ ಸೀಮಿತವಾಗಿಲ್ಲ. ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿ ದಿವ್ಯಾಂಗರು ಸಮಸ್ಯೆಯ ಹಾದಿಯಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಸ್ವಯಂಸೇವಾ ಸಂಸ್ಥೆಗಳು, ಸಮಾಜದ ಬುದ್ಧಿಜೀವಿಗಳು, ದಿವ್ಯಾಂಗರಲ್ಲಿ ಧೈರ್ಯ ತುಂಬಿಸುವ ಕೆಲಸ ಮಾಡಿದಾಗ ದಿವ್ಯಾಂಗರು ಸಾಮಾನ್ಯರಂತೆ ಬದುಕಲು ಅವರಿಗೆ ಅವಕಾಶ ನೀಡಿದಂತಾಗುತ್ತದೆ. ಮನೋಶಾಸ್ತ್ರಜ್ಞರು, ತಂದೆ-ತಾಯಂದಿರು, ಶಿಕ್ಷಕರು ಮತ್ತು ಸ್ನೇಹಿತರು ಅಶಕ್ತರಾದ ದಿವ್ಯಾಂಗರ ಮೇಲೆ ಬಾಹ್ಯಾ ಪ್ರಚೋದನೆ ಮೂಲಕ ಅವರ ನಡತೆಯನ್ನು ಸುಧಾರಿಸಿ ಸತ್ಪ್ರಜೆಗೊಳಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು.

ಭಾರತವು ಅಭಿವೃದ್ಧಿ ಹೊಂದುತ್ತಿರುವ ಒಂದು ಬೃಹತ್ ರಾಷ್ಟ್ರವಾಗಿದೆ. ಭಾರತವು ಬೃಹತ್ ಸಂವಿಧಾನವನ್ನು ಹೊಂದಿದ್ದು ಪ್ರತಿಯೊಬ್ಬ ನಾಗರಿಕನನ್ನು ಅಥವಾ ಜೀವಿಯನ್ನು ಸಮಾನ ಸ್ಥಿತಿಯಲ್ಲಿ ನೋಡಿಕೊಳ್ಳುವ ರೀತಿಯಲ್ಲಿ ಒಂದಿಷ್ಟು ಕಾಯ್ದೆಗಳನ್ನು ರೂಪಿಸಿದೆ. ಅಂತಹ ಕಾಯ್ದೆಗಳಲ್ಲಿ ದಿವ್ಯಾಂಗರಿಗೂ (ವಿಕಲಚೇತನರು)ಕೂಡ ಒಂದಿಷ್ಟು ಕಾಯ್ದೆಗಳನ್ನು ರೂಪಿಸಿದೆ. ದುರ್ಬಲರಾದ ದಿವ್ಯಾಂಗರನ್ನು ಸುಖಮಯವಾದ ಜೀವನವನ್ನು ಸಾಗಿಸಲು ಅವಕಾಶವನ್ನು ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1981ರ ವರ್ಷವನ್ನು ದಿವ್ಯಾಂಗರ ವರ್ಷವೆಂದು ಘೋಷಣೆ ಮಾಡಿದೆ.  ಇದರಿಂದ ದಿವ್ಯಾಂಗರ ಅನುಕೂಲಕ್ಕಾಗಿ ವಿಶೇಷವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸಾರ್ವಜನಿಕ ಜೀವನದಲ್ಲಿ ಸಮಾನ ಅವಕಾಶ ಕಲ್ಪಿಸುವಂತೆ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಸೂಚಿಸಲಾಗಿದೆ. ದಿವ್ಯಾಂಗರನ್ನ ಸಾಮಾನ್ಯರಂತೆ ಒಪ್ಪಿಕೊಳ್ಳುವುದು, ಸಹನುಭೂತಿ ತೋರುವುದು ಮತ್ತು ಬೆಂಬಲಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ಮಕ್ಕಳ ಪಾಲನೆ ಪೋಷಣೆಯಲ್ಲಿ ಮನೆಯ ಪಾಲಕರ ಅಥವಾ ಪೋಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ಪೋಷಕರ ಪಾತ್ರವನ್ನು ಕಠಿಣ ಮತ್ತು ಸಂಕೀರ್ಣವಾದದ್ದು ಎಂದು ಪರಿಗಣಿಸಲಾಗಿದೆ. ಪೋಷಕರ ಆರೈಕೆ ಮತ್ತು ಪ್ರಚೋದನೆಯ ಕಳಪೆ ಗುಣಮಟ್ಟ ಮತ್ತು ಆರೋಗ್ಯಕರ ವಾತಾವರಣವು ಬೌದ್ಧಿಕವಾಗಿ ಸಾಮಾನ್ಯ ಮಕ್ಕಳು ತಮ್ಮ ಸಾಮಥ್ರ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ರೂಸಾ (1972) ವಿವರಿಸಿದಂತೆ “ಪೋಷಕರು ತಮ್ಮ ದಿವ್ಯಾಂಗ ಮಕ್ಕಳ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದರಿಂದ ಕೋಪ, ನಿರಾಕರಣೆ, ಅಘಾತ, ಚೌಕಾಸಿ, ಖಿನ್ನತೆ ಭೀಕರ ಅಥವಾ ನಿರಾಕರಣೆ ಈ ಎಲ್ಲಾ ಸಮಯದಲ್ಲಿ ‘ಶೋಕ ಅವಧಿ’ಯಂದು ಕರೆಯಬಹುದು ಎಂದು ವಿವರಿಸುತ್ತದೆ. ದಿವ್ಯಾಂಗ ಮಕ್ಕಳನ್ನು ಬೆಳೆಸುವ ಎಲ್ಲಾ ಪೋಷಕರು ದಿವ್ಯಾಂಗ ಮಕ್ಕಳ ಜೀವನವನ್ನು ಅಚ್ಚುಕಟ್ಟಾಗಿ ರೂಪಿಸಬಹುದು.

 ಉದ್ದೇಶಗಳು:

•          ದಿವ್ಯಾಂಗ ಮಕ್ಕಳು ಜನಿಸಿದಲ್ಲಿ ಗುಣಾತ್ಮಕವಾಗಿ ಪರಿಗಣಿಸುವುದು.

•          ಉತ್ತಮವಾದ ಆರೋಗ್ಯ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

•          ದಿವ್ಯಾಂಗ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕುಡಿಸುವುದು.

•          ದಿವ್ಯಾಂಗರ ಯೋಜನೆಗಳನ್ನು ಅರಿತು ಅವುಗಳ ಸದುಪಯೋಗ ಪಡೆದುಕೊಳ್ಳುವುದು.

•          ದಿವ್ಯಾಂಗ ಸ್ನೇಹಿ ತರಬೇತಿ ನೀಡಿ ಅವರನ್ನು ಸ್ವಾವಲಂಬಿಯಾಗಿ ಬದುಕುವಂತೆ ಪ್ರೇರೇಪಿಸುವದು.

‘ದಿವ್ಯಾಂಗತೆ’ ಯ ಅರ್ಥ:

•          ದಿವ್ಯಾಂಗತೆ ಎಂದರೆ " ಒಬ್ಬ ವ್ಯಕ್ತಿಯ ಶಾರೀರಿಕ, ಕಾರ್ಯನಿರ್ವಹಣೆ, ಚಲನಶೀಲತೆ,ಕೌಶಲ್ಯ ಅಥವಾ ದೇಹಬಲದ ಮೇಲಿರುವ ಮಿತಿ" ಎಂಬುದಾಗಿದೆ.

•          ದಿವ್ಯಾಂಗ ವ್ಯಕ್ತಿಯ ಮಾನದಂಡ ಶೇಕಡಾ 40 ಹೆಚ್ಚು ಅಥವಾ ಇನ್ನೂ ಹೆಚ್ಚಿನ ನಿರ್ದಿಷ್ಟ ದಿವ್ಯಾಂಗತೆ ಇರುವ ವ್ಯಕ್ತಿ ಮತ್ತು ಯಾವುದೇ ದಿವ್ಯಾಂಗತೆಯ ಪ್ರಮಾಣವನ್ನು ಅಳೆಯಲಾಗದು ಎಂದಿದ್ದರೆ ಪ್ರಮಾಣೀಕರಿಸುವ ಪ್ರಾಧಿಕಾರ/ಅಧಿಕಾರಿಯಿಂದ ದಿವ್ಯಾಂಗತೆ ಇರುವ ವ್ಯಕಿ’್ತ ಎಂದು ಪ್ರಮಾಣಪತ್ರ ಪಡೆದಿರುವ ವ್ಯಕ್ತಿ.

•          ದೀರ್ಘಕಾಲೀನ ದೈಹಿಕ,ಮಾನಸಿಕ,ಭೌತಿಕ, ಸಂವಹನ ಅಥವಾ ಜ್ಞಾನೇಂದ್ರಿಯಗಳ ತೊಂದರೆ ಇದ್ದು ಪರಿಸರದಲ್ಲಿನ ಅಡೆತಡೆಗಳಿಂದ ಆ ವ್ಯಕ್ತಿ ಸಮಾಜದಲ್ಲಿ ಇತರರಂತೆ ಸಮರ್ಥವಾಗಿ ಮತ್ತು ಸಂಪೂರ್ಣವಾಗಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದಲ್ಲಿ ಅಂತಹ ವ್ಯಕ್ತಿ ‘ದಿವ್ಯಾಂಗ ವ್ಯಕಿ’್ತಯೆಂದು ಎನಿಸಿಕೊಳ್ಳುತ್ತಾರೆ.

•          ಅಧಿಕ ಆಸರೆ ಅವಶ್ಯಕವಿರುವ ದಿವ್ಯಾಂಗ ವ್ಯಕ್ತಿಯೆಂದರೆ ಸೆಕ್ಷನ್ 58ರ ಉಪಖಂಡ 2 ಕಲಂ (ಎ) ಪ್ರಕಾರ ಅಧಿಕ ಆಸರೆ ಅವಶ್ಯಕವಿರುವ ವ್ಯಕ್ತಿ ಎಂದು ಪ್ರಮಾಣಪತ್ರ ಪಡೆದಿರುವ ನಿರ್ದಿಷ್ಟ ಮಾನದಂಡದ ದಿವ್ಯಾಂಗತೆ ಇರುವ ವ್ಯಕ್ತಿ.

ಗ್ರಾಮೀಣ ಪ್ರದೇಶದಲ್ಲಿನ ದಿವ್ಯಾಂಗರ ಸಮಸ್ಯೆಗಳು:

ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯಂತೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಇಡೀ ರಾಷ್ಟ್ರವೇ ಅಭಿವೃದ್ಧಿಯಾದಂತೆ ಎಂದು ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಯನ್ನು ಕುರಿತು ತಿಳಿಸಿದ್ದಾರೆ. ಪ್ರತಿಯೊಂದು ಹಳ್ಳಿಗಳಲ್ಲಿ ದಿವ್ಯಾಂಗರಿರುವುದು ಸರ್ವೇಸಾಮಾನ್ಯ. ಅನಕ್ಷರತೆ, ಬಡತನ, ಸಾಮಾಜಿಕ ಸೌಕರ್ಯಗಳ ಕೊರತೆ, ಮೂಢನಂಬಿಕೆಗಳನ್ನು ಒಳಗೊಂಡ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಗ್ರಾಮೀಣ (ಹಳ್ಳಿಗಳಲ್ಲಿನ) ಪ್ರದೇಶದಲ್ಲಿನ ದಿವ್ಯಾಂಗರು ಕೇವಲ ಮನೆಯ ಪರಿಸರದಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.  ಬಡತನ, ಅನಕ್ಷರತೆ, ಆಸ್ತಿಯ ವಿಚಾರವಾಗಿ ಹಳ್ಳಿಗಳಲ್ಲಿ ತಮ್ಮ ತಮ್ಮ ರಕ್ತ ಸಂಬಂಧದಲ್ಲಿ ಮದುವೆ ಮಾಡಿಕೊಡುವ ವಾಡಿಕೆ.  ಆದರೆ ಇಂತಹ ರಕ್ತಸಂಬಂಧದಿಂದ ಜನಿಸುವ ಮಗು ದಿವ್ಯಾಂಗತೆಯಿಂದ ಜನಿಸಿದರೆ ದೇವರ ಶಾಪ ಎಂದು ಭಾವಿಸುತ್ತಾರೆ.  ಇಂತಹ ಮೌಢ್ಯಗಳಿಂದ ಇಂದಿನ ಜನಾಂಗ ಇನ್ನು ಹೊರಬರುತ್ತಿಲ್ಲ.  ಬಡತನದಿಂದ ವರದಕ್ಷಿಣೆ ಸಮಸ್ಯೆಯಿಂದಲೂ ಸಹಿತ ರಕ್ತ ಸಂಬಂಧದಲ್ಲಿ ಮದುವೆ ಇನ್ನು ನಡೆಯುತ್ತಿವೆ. ಗರ್ಭ ಧರಿಸಿದಾಗ ತಾಯಿಯ ಆಹಾರದ ಪೌಷ್ಟಿಕತೆ, ವಂಶಪರಂಪರೆ, ಇಲ್ಲವೇ ಮಗು ಜನಿಸಿದ ನಂತರ ಹಲವಾರು ತೊಂದರೆಗಳಿಂದ ದಿವ್ಯಾಂಗತೆಯಿಂದ ಬಳಲಬಹುದು. ದಿವ್ಯಾಂಗ ಮಗುವನ್ನು ಚಿಕ್ಕವರಿರುವಾಗ ಕುಟುಂಬದ ಸದಸ್ಯರು ಬಹಳ ಜಾಗರೂಕರಾಗಿ ನೋಡಿಕೊಳುತ್ತಾರೆ.  ಬರುಬರುತ್ತ ದೊಡ್ಡವರಾದಮೇಲೆ ಎಲ್ಲ ದಿವ್ಯಾಂಗ ಮಕ್ಕಳ ಕುಟುಂಬದ ಸದಸ್ಯರುಕಾಣುವ ರೀತಿ ಬೇರೆಯೆ ಆಗಿರುತ್ತದೆ. ಮನೆಗೆ ಭಾರವೆನ್ನುವ ರೀತಿಯಲ್ಲಿ ಕಾಣಲಾಗುವುದು.  ಇಂತಹ ಸಮಸ್ಯೆ ಗ್ರಾಮೀಣ ಭಾಗದಲ್ಲಿ ಅತೀಯಾಗಿ ಕಂಡುಬರುತ್ತಿವೆ. ಕುಟುಂಬದ ಸದಸ್ಯರು ಸಾಮಾನ್ಯ ಮಕ್ಕಳ ಮತ್ತು ದಿವ್ಯಾಂಗ ಮಕ್ಕಳನ್ನು ಆರೈಕೆ ಮಾಡಿದ ರೀತಿ, ಸರಿಯಾದ ಸಂಸ್ಕಾರ, ಶಿಕ್ಷಣ, ನೈತಿಕ ಮೌಲ್ಯಗಳು,  ಅವರ ಉಡುಗೆ-ತೊಡುಗೆ ಇವುಗಳೆಲ್ಲ ಅವರು ದೊಡ್ಡವರಾದಮೇಲೆ ಅವರ ಮೇಲೆ ಪ್ರಭಾವ ಬೀರುತ್ತವೆ. ಕುಟುಂಬದ ಇತರೆ ಸಾಮಾನ್ಯ ಮಕ್ಕಳು ಮುಂದೆ ಸರಳವಾದ ಜೀವನವನ್ನು ಸಾಗಿಸಬಹುದು. ಆದರೆ ದಿವ್ಯಾಂಗ ಮಕ್ಕಳು ಹಿರಿಯವರಾದ ಮೇಲೆ ಸದಸ್ಯರ ಇಲ್ಲವೇ ಇನ್ನೊಬ್ಬರ ಆಸರೆ ಅತೀ ಮುಖ್ಯವಾಗಿ ಬೇಕಾಗುತ್ತದೆ. ಹಳ್ಳಿಗಳಲ್ಲಾಗಲಿ, ನಗರಗಳಲ್ಲಾಗಲಿ ಅಭಿವೃದ್ಧಿಗೊಳಿಸಲು ಎಲ್ಲ ರೀತಿಯ ಸೌಕರ್ಯಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಲ್ಪಿಸಿವೆ. ಹಾಗಾಗಿ ದಿವ್ಯಾಂಗ ಮಕ್ಕಳು ಅವರು ಚಿಕ್ಕವರಿರುವಾಗಲೇ ಅವರಿಗೆ ನೈತಿಕ ಮೌಲ್ಯಗಳ ಜೊತೆಗೆ ಶೈಕ್ಷಣಿಕ ಮತ್ತು ತರಬೇತಿಯಂತಹ ಜೀವನ ಕೌಶಲಗಳನ್ನು ಕಲ್ಪಿಸಬೇಕಾದದ್ದು ದಿವ್ಯಾಂಗ ಮಕ್ಕಳ ಪೋಷಕರ ಮುಖ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.

ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಹಾಗೂ ಹೈದ್ರಾಬಾದ್ ಕರ್ನಾಟಕದ 371(ಜೆ) ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು13,89,920 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.  ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕನ್ನ ಒಳಗೊಂಡು 7 ತಾಲೂಕುಗಳಿದ್ದು ಸುಮಾರು 629 ಹಳ್ಳಿಗಳಿವೆ. ಈ ಎಲ್ಲ ಹಳ್ಳಿಗಳಲ್ಲಿ ಸುಮಾರು 34599 ಜನ ದಿವ್ಯಾಂಗರಿದ್ದಾರೆ.  ಎಲ್ಲಾ ಹಳ್ಳಿಗಳು ಅಭಿವೃದ್ಧಿಯ ಪ್ರಗತಿಯನ್ನು ಕಾಣದೆ ಹತ್ತು ಹಲವಾರು ಸಮಸ್ಯೆಗಳ ಗೂಡಾಗಿದೆ ಎಂದರೆ ತಪ್ಪಾಗಲಾರದು.  ಅಂತಹ ಸಮಸ್ಯೆಗಳಲ್ಲಿ ದಿವ್ಯಾಂಗರ (ವಿಕಲಚೇತನರ) ಸಮಸ್ಯೆಯು ಒಂದಾಗಿದೆ. ಪ್ರತಿಯೊಂದು ಹಳ್ಳಿಗಳಲ್ಲಿ  ಸುಮಾರು 45 ರಿಂದ 70 ದಿವ್ಯಾಂಗರು ಇರವುದು ಸರ್ವೇಸಾಮಾನ್ಯ. ಆದರೆ ಎಲ್ಲ ದಿವ್ಯಾಂಗರು ಸುಖಮಯವಾದ ಜೀವನವನ್ನು ಸಾಗಿಸುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾದದ್ದು.ಎಲ್ಲಾ ದಿವ್ಯಾಂಗರು ಒಂದಿಲ್ಲೊಂದು ಸಮಸ್ಯೆಯ ಮಧ್ಯೆ ಜೀವನವನ್ನು ಸಾಗಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಡತನದಿಂದ ಬದುಕುವವರೇ ಹೆಚ್ಚು.  ಆದರೆ ಅಂತಹ ಬಡತನದಲ್ಲಿ ಹುಟ್ಟಿದ ದಿವ್ಯಾಂಗರ ಸ್ಥಿತಿ ಶೋಚನೀಯ ಮತ್ತು ಆ ಕುಟುಂಬದ ಪರಿಸ್ಥಿತಿಯು ಕೂಡ ತುಂಬಾ ಗಂಭೀರವಾದುದ್ದಾಗಿರುತ್ತದೆ.

            ಗ್ರಾಮೀಣ ಪ್ರದೇಶದ ಪ್ರದೇಶದ ಜನರು ಎಲ್ಲ ಕೆಲಸಗಳನ್ನು ಅಂಚಿಕೊಂಡು ನಿರ್ವಹಿಸುವುದು ಸಾಮಾನ್ಯವಾಗಿ ಕಾಣಬಹುದಾಗಿದೆ. ಆದರೆ ಇಲ್ಲಿ ದಿವ್ಯಾಂಗರನ್ನು ಕೂಡ ಕೆಲಸಗಳನ್ನು ನಿಭಾಯಿಸಲು ಹೇಳುತ್ತಾರೆ.ಆದರೆ ಅವರ ಮುಂದಿನ ಭವಿಷ್ಯಗಳನ್ನು ಗಮನಿಸದೆ ಆಗಿನ ಸಮಯಕ್ಕೆ ಕೆಲಸ ಕಷ್ಟಪಟ್ಟರು ಜವಾಬ್ದಾರಿಯನ್ನು ನಿರ್ವಹಿಸಿದರೆ ಸಾಕು ಎನ್ನುವಷ್ಟು ನಂಬಿಕೆ ಮನೆಯ ಕೆಲವೊಂದು ಪೋಷಕರದ್ದಾಗಿದೆ. ಒಂದೊಂದು ಸಾರಿ ದಿವ್ಯಾಂಗರಿಗೆ ಮಾಡಲಾಗದ ಕೆಲಸವನ್ನು ಸಹಿತ ಒತ್ತಾಯಪೂರ್ವಕವಾಗಿ ಕೊಡುವುದು ಹಳ್ಳಿಗಳಲ್ಲಿನ ಅನಕ್ಷರಸ್ಥ ಪೋಷಕರ ಕೆಲಸ.ದಿವ್ಯಾಂಗರು ಬದುಕಲು ಇನ್ನೊಬ್ಬರ ಸಹಾಯ ಆಸರೆ ಬಹುಮುಖ್ಯ ಎನ್ನಬಹುದು. ಆದರೆ ಕೆಲವೊಂದು ದಿವ್ಯಾಂಗರು ಸ್ವಂತಿಕೆಯಿಂದ ಜೀವನವನ್ನು ಶಿಸ್ತುಬದ್ಧಾಗಿ, ಸ್ವಂತ ಆಲೋಚನೆಗಳನ್ನು, ಪ್ರಯತ್ನಗಳನ್ನು ಮತ್ತು ವಿವಿಧ ಉದ್ಯೋಗಗಳ ಮೂಲಕ ಜೀವನವನ್ನು ರೂಪಿಸಿಕೊಂಡಿದ್ದಾರೆ. ಬದುಕುವ ಮತ್ತು ಜೀವಿಸುವ ಛಲ ಒಂದಿದ್ದರೆ ಏನೆಲ್ಲ ಸಾಧನೆ ಮಾಡಬಹುದು ಎಂಬ ನಂಬಿಕೆ ಪ್ರತಿಯೊಬ್ಬ ಪ್ರತಿಯೊಬ್ಬ ದಿವ್ಯಾಂಗರಿಗೆ ಇರುವುದು ಅತೀ ಮುಖ್ಯವಾದ ಸಂಗತಿಯಾಗಿದೆ.

ದಿವ್ಯಾಂಗ ಸ್ನೇಹಿ ಸರಕಾರಿ ಯೋಜನೆಗಳು:

            ಪ್ರತಿಯೊಬ್ಬರಿಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಭಾರತ ಸಂವಿಧಾನವು ಪ್ರತಿಯೊಬ್ಬರಿಗೆ ಜೀವಿಸುವ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ತಮ್ಮ ತಮ್ಮ ಉದ್ಯೋಗವನ್ನು ನಿರ್ವಹಿಸುವ ಪ್ರತಿಯೊಂದು ಅಧಿಕಾರವನ್ನು ನಮ್ಮ ಭಾರತದ ಸಂವಿಧಾನವು ನೀಡಿದೆ. ನಮ್ಮ ಭಾರತವು ಬೃಹತ್ ಸಂವಿಧಾನವನ್ನು ಹೊಂದಿದ್ದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಪ್ರತಿಯೊಬ್ಬ ನಾಗರಿಕನ ಸಮಾನ ಸ್ಥಿತಿಯನ್ನ  ನೋಡಿಕೊಳ್ಳುವಂತೆ ಒಂದಿಷ್ಟು ಕಾಯ್ದೆಗಳನ್ನು ರೂಪಿಸಿದೆ. ದುರ್ಬಲರಾದ ದಿವ್ಯಾಂಗರು ಸುಖಮಯವಾದ ಜೀವನವನ್ನು ಸಾಗಿಸಲು ಅವಕಾಶಗಳನ್ನು ನೀಡಿದೆ.

 ಭಾರತ ಸರ್ಕಾರವು ದಿವ್ಯಾಂಗರ ಏಳಿಗೆಗಾಗಿ ರೂಪಿಸಿರುವ ಎಲ್ಲಾ ಯೋಜನೆಗಳು ಅರ್ಹ ದಿವ್ಯಾಂಗರಿಗೆ ತಲುಪಿದಲ್ಲಿ ಅವುಗಳ ಸದುಪಯೋಗ ಪಡೆದುಕೊಂಡಂತೆ. ಮನೆಯ ಹಿರಿಯರು ಅಥವಾ ಸುಶಿಕ್ಷಿತರು ತಮ್ಮ ಮನೆಯಲ್ಲಿ ದಿವ್ಯಾಂಗರಿದ್ದರೆ ಅವರಿಗೆ ಉತ್ತಮವಾದ  ನೈತಿಕ ಮೌಲ್ಯಗಳ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ತಿಳಿದುಕೊಂಡು ತಮ್ಮ ದಿವ್ಯಾಂಗ ಮಕ್ಕಳ ಅವಶ್ಯಕತೆಗನುಗುಣವಾಗಿ ಪಡೆದುಕೊಳ್ಳಲು ಪ್ರಯತ್ನಿಸಬೇಕು. ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಿದಲ್ಲಿ ದಿವ್ಯಾಂಗರು ಉತ್ತಮವಾದ ಜೀವನವನ್ನು ಸಾಗಿಸುತ್ತಾ ಅದರ ಜೊತೆಗೆ ಮತ್ತೊಬ್ಬ ಸಾಮಾನ್ಯ ಮತ್ತು ದಿವ್ಯಾಂಗ ಸದಸ್ಯರಿಗೆ ಮಾದರಿಯಂತೆ ಬದುಕಬಹುದು.

ದಿವ್ಯಾಂಗರಿಗಿರುವ ಸರಕಾರಿ ಯೋಜನೆಗಳು:

•          ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ.

•          ಮೆಟ್ರಿಕ್ಕೋತ್ತರ ವಿದ್ಯಾರ್ಥಿವೇತನ.

•          ಉನ್ನತ ಶ್ರೇಣಿಯ ಶೈಕ್ಷಣಿಕ ವಿದ್ಯಾರ್ಥಿವೇತನ.

•          ದಿವ್ಯಾಂಗ ವ್ಯಕ್ತಿಗಳಿಗೆ ರಾಷ್ಟ್ರೀಯ ಫೆಲೋಷಿಪ್.

•          ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನಗಳು.

•          ಉಚಿತ ಸಾಧನ-ಸಲಕರಣೆಗಳು.

•          ಪುನರ್ವಸತಿ ಕೇಂದ್ರಗಳ ಸೌಲಭ್ಯಗಳು.

•          ಮಾಸಿಕ ವೇತನ.

•          ಉಚಿತ ರೈಲ್ವೆ ಮತ್ತು ಬಸ್ ಪಾಸ್.

•          ವಿವಿಧ ಉದ್ಯೋಗಗಳಲ್ಲಿ ನೇರ ನೇಮಕಾತಿ.

•          ಅಂಧರಿಗೆ ಉಚಿತ ಬ್ರೈಲ್ ಲಿಪಿ ಮತ್ತು ಲ್ಯಾಪ್ಟಾಪ್.

•          ಆಧಾರ್ ಯೋಜನೆಯಡಿ ಸಬ್ಸಿಡಿ ಸಾಲ.

•          ಕಿವಿ ಕೇಳದವರಿಗೆ ಉಚಿತ ಮಷೀನ್.

•          ವಿವಿಧ ಸಾಧನೆಗೈದವರಿಗೆ ವಿಶೇಷ ಪ್ರಶಸ್ತಿ ಮತ್ತು ಬಹುಮಾನ ಮೊತ್ತ.

ಇಂತಹ ಹಲವಾರು ದಿವ್ಯಾಂಗ ಸ್ನೇಹಿ ಯೋಜನೆಗಳು ಉತ್ತಮವಾದ ಜೀವನ ಸಾಗಿಸಲು ಸರಕಾರ ರೂಪಿಸುವ ಎಲ್ಲ ಯೋಜನೆಗಳು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಉತ್ತಮ ಪಡಿಸುವಲ್ಲಿ ಸಹಾಯಕವಾಗಿವೆ. ಇವುಗಳ ಅರಿವು ದಿವ್ಯಾಂಗ ವ್ಯಕ್ತಿಗಳ ಮತ್ತು ಅವರ ಪೋಷಕರಿಗೆ ಇನ್ನು ತಲುಪಿರುವುದಿಲ್ಲ. ತಲುಪಿದರೂ ಕೂಡ ಅಧಿಕಾರಿಗಳ ಪ್ರಭಾವಕ್ಕೆ ಒಳಗಾಗಿ ದುರುಪಯೋಗವಾಗುತ್ತಿರುವುದರಿಂದ ಅವುಗಳ ಮೇಲೆ ನಿರಾಶವಾದ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ.

ಅವಿದ್ಯಾವಂತರಾದ ಯಾವುದೇ ಶಿಕ್ಷಣ ಪಡೆದ ದಿವ್ಯಾಂಗರಿಗೆ ಸರಕಾರದ ಯಾವುದೇ ಯೋಜನೆಯು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮೀಣ ಪ್ರದೇಶದಲ್ಲಿ ಮತ್ತು ನಗರ ಪ್ರದೇಶಗಳಲ್ಲಾಗಲಿ ಅವರ ಗಮನಕ್ಕೆ ಬಂದಿರುವುದಿಲ್ಲ.  ಒಂದು ವೇಳೆ ಶಿಕ್ಷಣ ಪಡೆದಂತಹ ದಿವ್ಯಾಂಗರಿಗೆ ಅವುಗಳ ಮಾಹಿತಿ ಇದ್ದರೂ ಕೂಡ ಒಬ್ಬರಿಗೊಬ್ಬರು ಮೋಸದ ಹಾದಿಯನ್ನು ತುಳಿಯುತ್ತಿದ್ದಾರೆ.  ದಿವ್ಯಾಂಗರ ದಿವ್ಯಾಂಗತೆಯ ಪ್ರತಿಶತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಯೋಜನೆಗಳನ್ನು ರೂಪಿಸಿದೆ.  ಇಂಥವುಗಳಲ್ಲಿ ಯಂತ್ರ ಚಾಲಿತ ವಾಹನ, ಮಾಸಿಕ ಭತ್ಯೆ, ಪುನರ್ವಸತಿ ಕೇಂದ್ರಗಳು, ಉಚಿತ ರಾಟೆ ಯಂತ,್ರ ಸಾಧನ-ಸಲಕರಣೆಗಳು, ಆಧಾರ್ ಯೋಜ£,É ಯಂತ್ರಚಾಲಿತ ಕುರ್ಚಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಿಕ್ಷಣ ಪಡೆಯುತ್ತಿರುವ ದಿವ್ಯಾಂಗರಿಗೆ ಪುಸ್ತಕಗಳ ದರಗಳನ್ನ ಮರುಪಾವತಿಸುವಂತಹ ಮುಂತಾದ ಯೋಜನೆಗಳನ್ನು ಆಯೋಜಿಸಿದೆ. ಆದರೆ ಎಲ್ಲಾ ಯೋಚನೆಗಳು ಪರಿಚಯಸ್ಥರ ಸಂಬಂಧಿಕರ ಇಲ್ಲವೇ ಶಿಕ್ಷಣ ಪಡೆದವರ ಹಾಗೂ ರಾಜಕಾರಣಿಗಳ ಪಾಲಾಗುತ್ತಿವೆ. ನಿಜವಾದ ಅರ್ಹ ಫಲಾನುಭವಿಗಳಿಗೆ ಇವುಗಳು ತಲುಪುವುದು ತುಂಬಾ ವಿರಳವಾಗಿದೆ. ಗ್ರಾಮೀಣ ಪ್ರದೇಶಗಳ ಶಿಕ್ಷಿತರ ಸಂಖ್ಯೆ ಕಡಿಮೆ ಅದರಲ್ಲೂ ತೀರಾ ದಿವ್ಯಾಂಗತೆಯ ಪ್ರಮಾಣವನ್ನು ಹೊಂದಿರುವ ಶಾಲೆಯನ್ನು ಕಾಣದ ಅಂದರೆ ಶಾಲೆಗೆ ಹೋಗಲು ಆಗದವರ ಅವಕಾಶವಿಲ್ಲದೆ ಮನೆಗೆ ಸೀಮಿತವಾಗಿರುವ ದಿವ್ಯಾಂಗರಿಗೆ ಸರ್ಕಾರದ ಯೋಜನೆಗಳು ತಲುಪುವುದು ಇರಲಿ ಅವುಗಳ ಬಗ್ಗೆ ಪರಿವೆಯೇ ಇರುವುದಿಲ್ಲ. ಒಂದು ವೇಳೆ ಅವುಗಳ ಬಗ್ಗೆ ತಿಳಿದಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಹಣದ ಬೇಡಿಕೆ ಇಡುತ್ತಾರೆ. ತೀರ ಬಡತನದ ಕುಟುಂಬದಲ್ಲಿ ಜನಿಸಿದ ದಿವ್ಯಾಂಗರಿಗೆ ಇಂತಹ ಪರಿಸ್ಥಿತಿಯನ್ನು ಎದುರಿಸಲಾಗದೆ ಇಂತಹ ಯೋಜನೆಗಳಿಂದ ದೂರ ಸರಿಯುತ್ತಾರೆ.

ಸಮಾರೋಪ:

          ಪರಕೀಯ ಪ್ರಜ್ಞೆ, ಬಡತನ, ಅನಕ್ಷರತೆ, ಮುಂತಾದ ಅಡಚಣೆಯಿಂದಾಗಿ ಹಲವಾರು ರೀತಿಯ ಸಮಸ್ಯಗಳನ್ನು ದಿವ್ಯಾಂಗರು ಎದುರಿಸುತಿದ್ದಾರೆ. ಮನೆಯ ಪೋಷಕರು ದಿವ್ಯಾಂಗರನ್ನು ಬಹಳ ಜಾಗರೂಕತೆಯಿಂದ ಆರೈಕೆ ಮಾಡುತ್ತ,ಅವರ ಮುಂದಿನ ಭವಿಷ್ಯದ ಕುರಿತು ಆಲೋಚನೆ ಮಾಡಿ ದೈರ್ಯ ನೀಡಿ ಯಾವದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೇರೆಪಿಸಬೇಕು.ಅಂದಾಗ ಮಾತ್ರ ದಿವ್ಯಾಂಗರು ಸಮಾಜಕ್ಕೆ ಮಾದರಿಯಾಗುವಂತೆ ಜೀವನ ಸಾಗಿಸಲು ಸಹಾಯಕವಾಗಿತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳಲ್ಲಿ ತಾವು ಅರ್ಹರಿರುವ ಯೋಜನೆಗಲ ಪ್ರಯೋಜನ ಪಡೆಯಲು ಪ್ರಯತ್ನಿಸಬೇಕು.ಅವುಗಳ ಸದುಪಯೋಗ ಪಡೆದುಕೊಂಡಲ್ಲಿ ಜೀವನದ ಹಾದಿ ಸುಗಮವಾಗಬಹುದು ಎಂದು ಹೇಳಬಹುದು.

ಪರಾಮರ್ಶನ ಗ್ರಂಥಗಳು

1.         ಕಲಾವತಿ.ವಿ , 2019, ಅಂಗವಿಕಲ ಮಕ್ಕಳಕಡೆಗೆ ಪೋಷಕರ ವರ್ತನೆಗಳು,  ಅಪ್ರಕಟಿತ ಪಿಎಚ್,ಡಿ ಪ್ರಬಂಧ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

2.         ದಾಸ್ ಜಯಂತಿ, 2014, ಮೂಳೆ ಚಿಕಿತ್ಸೆಯ ಅಂಗವಿಕಲ ಮಹಿಳೆಯರ ವೃತ್ತಿಪರ ಪುನರ್‍ವಸತಿ ಸಮಸ್ಯೆಗಳ ಅಧ್ಯಯನ, ಅಪ್ರಕಟಿತ ಪಿಎಚ್,ಡಿ ಪ್ರಬಂಧ, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ.

3.         ಪವರ್ ಐತಲ್, 2009, ದೈಹಿಕ ಅಂಗವಿಕಲ ಮಕ್ಕಳ ಪೋಷಕರ ಆತಂಕ ಮತ್ತು ಹೊಂದಾಣಿಕೆಯ ಸಮಸ್ಯೆಗಳ ಅಧ್ಯಯನ, ಅಪ್ರಕಟಿತ ಪಿಎಚ್,ಡಿ ಪ್ರಬಂಧ, ಡಾ.ಬಿ.ಆರ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯ.

4.         ಶಂಕರಲಿಂಗ ಟವಳಿ, 2019, ದಿವ್ಯಾಂಗರ ಸಬಲೀಕರಣದಲ್ಲಿ ಕಲ್ಯಾಣ ಕರ್ನಾಟಕದ ಪಾತ್ರ : ಒಂದು ವಿಶ್ಲೇಷಣೆ ಮತ್ತು ಅವಲೋಕನ, ಭೂಮಿ ಪ್ರಕಾಶನ, ಧಾರವಾಡ.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal