Tumbe Group of International Journals

Full Text


ಲಕ್ಷ್ಮೀ ಸಾಗರದ ಶೈವ ದೇವಾಲಯಗಳ ಕಲೆ ಮತ್ತು ವಾಸ್ತುಶಿಲ್ಪ

1 ಮಾರುತಿ .ಹೆಚ್

1ಪಿಎಚ್. ಡಿ ಸಂಶೋಧನಾ ವಿಧ್ಯಾರ್ಥಿ

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ ಹಂಪಿ

ವಿದ್ಯಾರಣ್ಯ -583276

maruthih48@gmail.com


ಸಾರಾಂಶ

         ಕರ್ನಾಟಕ ರಾಜ್ಯ ಸಂಧರ್ಬದಲ್ಲಿ ಪ್ರತಿಯೊಂದು ಧರ್ಮ ಪ್ರಭೇದಗಳು ತಮ್ಮನ್ನು ರಕ್ಷಿಸಿಕೊಳ್ಳವುದರೊಂಡಿಗೆ ತಮ್ಮ ಪ್ರದೇಶವನ್ನು ಹೆಚ್ಚಿಸಿಕೊಳ್ಳುವ ಕೆಲಸದಲ್ಲಿಯೂ ಎಂಜ್ಞಾವಾಗುತ್ತ ಬಂದಿರುವುದು ಸಮಕಾಲೀನ ಶಾಸನಗಳು ಹಾಗೂ ಸಾಹಿತ್ಯಿಕ ಸಾಕ್ಷಿಗಳಿಂದ ಸ್ಪಷ್ಟವಾಗುತ್ತದೆ. ಣಈ ವಿಸ್ಥರಿಸಿಕೊಳ್ಳುವಿಕೆ ಎನ್ನುವುದು ತಾನು ಸಬಳವಾಗುವುದು ಮತ್ತು ತನ್ನ ಪ್ರತಿಸ್ಪರ್ಧಿ ಧರ್ಮವನ್ನು ದುರ್ಬಲಗಳಿಸುವುದು ಎಂಬೆರಡು ಕವಲುಗಳಲ್ಲಿಗೋಚರಿಸುತ್ತದೆ.ಬೇರೆ ಧರ್ಮೀಯರನ್ನು ಸ್ವವಲಯಕ್ಕೆ ಮತಂತರಿಸಿಕೊಳ್ಳುವುದು ತನ್ನನ್ನು ಸಬಲ ಮದಿಕೊಳುವುದದರೆ, ಹಾಗೆ ಒಳಗೆ ಬರದೆ ಹೊರಗೆ ಉಳಿದವರಲ್ಲಿ ತನ್ನ ಸಂಸ್ಕೃತಿಯನ್ನು ಬೆರೆಸುವುದು ಮತ್ತು ಅವರ ನಿರ್ಮಾಣಗಳನ್ನು ನಾಶ ಮಾಡುವುದು ಅನ್ಯವನ್ನು ದುರ್ಬಲ ಗೊಳಿಸುವೇದಾಗಿದೆ. ಇವುಗಳ ದೇವಾಲಯ ನಾಶವೆನ್ನುವುದು ಅವುಗಳ ಸಮೂಲ ನಾಶ ಕ್ರಿಯೆ. ರೂಪಾಂತರ ಕ್ರಿಯೆ ಮತ್ತು ನಾಶ ಪ್ರಯತ್ನ ಎಂಬ ಮೂರು ಬಗೆಗಳಲ್ಲಿ ಜರುಗುವಂತೆ ತೋರಿಸುತ್ತದೆ. ರೂಪಾಂತರ ಕ್ರಿಯೆಯು ವಿರೋಧಿಗೈಂದ ಘಟಿಸಿರಬಹುದು. ಇಲ್ಲವೇ ಯಾವುದೋ ಒಂದು ಕಾರಣಕ್ಕಾಗಿ ಸಾಮೂಹಿಕವಾಗಿ ಮತಾಂತರ ವಾದ ಒಂದು ಗ್ರಾಮದ ಒಂದು ಮತೀಯರು ತಮ್ಮ ದೇವಾಲಯವು ನಿಷ್ಪಯೋಜಕವಾಗಿ ಉಳಿಯಬಾರ್ದೆಂದು ತಾವೇ ಅದನ್ನು ರೂಪಂತರಿಸಿರಬಹುದು. ದೇವಾಲಯದ ಸಮೂಲನಾಶ ರೂಪಾಂತರ ಮತ್ತು ನಾಶ ಪ್ರಯತ್ನಗಳಿಗೆ ಮತ ಅಸೂಯೆಗಳು ಕಾರಣವಾಗಿದ್ದರೂ ಕೆಲವೊಮ್ಮೆ ಪರಸ್ಪರ ಧರ್ಮೀಯರಲ್ಲಿ ಜರುಗುತ್ತಿದ್ದ ವಾದ - ವಿವಾದಗಳು ಸೋಲೂ ಕಾರಣವಾಗಿರುತ್ತದೆ. ಚಿತ್ರದುರ್ಗ ಜಿಲ್ಲೆಯು ಈ ಕ್ರಿಯೆಗಳು ಜರುಗುತ್ತ ಬಂದಿರುವುದನ್ನು ಸಮಕಾಲೀನ ಶಾಸನ - ಸಾಹಿತ್ಯಗಳ ಹಿನ್ನಲೆಯಿಂದ ಸ್ಪಷ್ಟವಾಗುತ್ತದೆ. ಈ ಜಿಲ್ಲೆಯ ಮತ್ತು ಇದೆ ತಾಲೂಕಿನ ಗ್ರಾಮವಾದ ಲಕ್ಷ್ಮಿಸಾಗರದ ಶೈವ ದೇವಾಲಯಗಳನ್ನು ಕುರಿತು ಚರ್ಚಿಸುವುದು ಈ ಲೇಖನದ ಆಶಯವಾಗಿದೆ.

ಪ್ರಮುಖ ಪದಗಳು: ಲಕ್ಷ್ಮೀ ಸಾಗರ, ಶೈವ ದೇವಾಲಯ, ಕಲೆ, ವಾಸ್ತುಶಿಲ್ಪ.

ಪೀಠಿಕೆ

ಕರ್ನಾಟಕ ರಾಜ್ಯ ಸಂಧರ್ಬದಲ್ಲಿ ಪ್ರತಿಯೊಂದು ಧರ್ಮ ಪ್ರಭೇದಗಳು ತಮ್ಮನ್ನು ರಕ್ಷಿಸಿಕೊಳ್ಳವುದರೊಂದಿಗೆ ತಮ್ಮ ಪ್ರದೇಶವನ್ನು ಹೆಚ್ಚಿಸಿಕೊಳ್ಳುವ ಕೆಲಸದಲ್ಲಿಯೂ ಎಂಜ್ಞಾವಾಗುತ್ತ ಬಂದಿರುವುದು ಸಮಕಾಲೀನ ಶಾಸನಗಳು ಹಾಗೂ ಸಾಹಿತ್ಯಕ ಸಾಕ್ಷಿಗಳಿಂದ ಸ್ಪಷ್ಟವಾಗುತ್ತದೆ. ಇಡೀ ವಿಸ್ತರಿಸಿಕೊಳ್ಳುವಿಕೆ ಎನ್ನುವುದು ತಾನು ಸಬಲವಾಗುವುದು ಮತ್ತು ತನ್ನ ಪ್ರತಿಸ್ಪರ್ಧಿ ಧರ್ಮವನ್ನು ದುರ್ಬಲಗಳಿಸುವುದು ಎಂಬೆರಡು ಕವಲುಗಳಲ್ಲಿ ಗೋಚರಿಸುತ್ತದೆ. ಬೇರೆ ಧರ್ಮೀಯರನ್ನು ಸ್ವವಲಯಕ್ಕೆ ಮತಂತರಿಸಿಕೊಳ್ಳುವುದು ತನ್ನನ್ನು ಸಬಲ ಮದಿಕೊಳುವುದದರೆ, ಹಾಗೆ ಒಳಗೆ ಬರದೆ ಹೊರಗೆ ಉಳಿದವರಲ್ಲಿ ತನ್ನ ಸಂಸ್ಕೃತಿಯನ್ನು ಬೆರೆಸುವುದು ಮತ್ತು ಅವರ ನಿರ್ಮಾಣಗಳನ್ನು ನಾಶ ಮಾಡುವುದು ಅನ್ಯವನ್ನು ದುರ್ಬಲ ಗೊಳಿಸುವೇದಾಗಿದೆ. ಇವುಗಳ ದೇವಾಲಯ ನಾಶವೆನ್ನುವುದು ಅವುಗಳ ಸಮೂಲ ನಾಶ ಕ್ರಿಯೆ, ರೂಪಾಂತರ ಕ್ರಿಯೆ ಮತ್ತು ನಾಶ ಪ್ರಯತ್ನ ಎಂಬ ಮೂರು ಬಗೆಗಳಲ್ಲಿ ಜರುಗುವಂತೆ ತೋರಿಸುತ್ತದೆ. ರೂಪಾಂತರ ಕ್ರಿಯೆಯು ವಿರೋಧಿಗೈಂದ ಘಟಿಸಿರಬಹುದು, ಇಲ್ಲವೇ ಯಾವುದೋ ಒಂದು ಕಾರಣಕ್ಕಾಗಿ ಸಾಮೂಹಿಕವಾಗಿ ಮತಾಂತರವಾದ ಒಂದು ಗ್ರಾಮದ ಒಂದು ಮತೀಯರು ತಮ್ಮ ದೇವಾಲಯವು ನಿಷ್ಪಯೋಜಕವಾಗಿ ಉಳಿಯಬಾರ್ದೆಂದು ತಾವೇ ಅದನ್ನು ರೂಪಂತರಿಸಿರಬಹುದು, ದೇವಾಲಯದ ಸಮೂಲನಾಶ ರೂಪಾಂತರ ಮತ್ತು ನಾಶ ಪ್ರಯತ್ನಗಳಿಗೆ ಮತ ಅಸೂಯೆಗಳು ಕಾರಣವಾಗಿದ್ದರೂ ಕೆಲವೊಮ್ಮೆ ಪರಸ್ಪರ ಧರ್ಮೀಯರಲ್ಲಿ ಜರುಗುತ್ತಿದ್ದ ವಾದ ವಿವಾದಗಳು ಸೋಲೂ ಕಾರಣವಾಗಿರುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಕ್ರಿಯೆಗಳು ಜರುಗುತ್ತ ಬಂದಿರುವುದನ್ನು ಸಮಕಾಲೀನ ಶಾಸನ - ಸಾಹಿತ್ಯಗಳ ಹಿನ್ನಲೆಯಿಂದ ಸ್ಪಷ್ಟವಾಗುತ್ತದೆ. ಈ ಜಿಲ್ಲೆಯ ಮತ್ತು ಇದೆ ತಾಲೂಕಿನ ಗ್ರಾಮವಾದ ಲಕ್ಷ್ಮೀಸಾಗರದ ಶೈವ ದೇವಾಲಯಗಳನ್ನು ಕುರಿತು ಚರ್ಚಿಸುವುದು ಈ ಲೇಖನ ಆಶಯವಾಗಿದೆ.

            ಲಕ್ಷ್ಮೀಸಾಗರ ಗ್ರಾಮದ ಶೈವ ದೇವಾಲಯಗಳು ಮತ್ತು ಮೂರ್ತಿಶಿಲ್ಪಗಳ

         ಲಕ್ಷ್ಮೀಸಾಗರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಐವಳ್ಳಿ ಕಾವಲು,ವಿಜಾಪುರ, ಬಲ್ಲೇಕಟ್ಟೆ ಗ್ರಾಮಗಳ ಪಕ್ಕದಲ್ಲಿದೆ.ಭಿಚ್ಚುಗತ್ತಿ ಭರಮಣ್ಣ ನಾಯಕನ ಕಾಲದಲ್ಲಿ ಇದೊಂದು ಪಟ್ಟಡಿ ಗ್ರಮವಾಗಿದ್ದು, ಕ್ರಿ,ಶ 1700-1701ರಲ್ಲಿ ಚಿತ್ರದುರ್ಗದ ಶ್ರೀಮುರಾಘಾಮಠದ ಸಂಸ್ಥಾಪಕರಾದ ಶ್ರೀಶಾಂತವೀರಮುರಿಗಸ್ವಾಮಿಗಳು ಈ ಗ್ರಾಮಕ್ಕೆ ಬಂದು ಗ್ರಾಮದ ಸನ್ಮಾನ್ಯನಾದ ದೇವಣಗೌಡನ ಮನೆಯಲ್ಲಿ ಅತನ ಭಕ್ತಿಗೆ ಒಲಿದು ಸುಖದಿಂದ್ದರಂತೆ ಹಾಗೂ ಅವರ ಮನೆಯಲ್ಲಿಭಿನ್ನ ತೀರಸಿದ್ದರಂತೆ2.

ಸ್ಥಳನಾಮ

              ಶಾಸನಸ್ಥ ಗ್ರಾಮವಾದ ಲಕ್ಷ್ಮಿಸಾಗರಕ್ಕೆ ಮೊದಲಿಗೆ ' ಚೋರ ತಿಂತನಿ ' ಅಥವಾ ' ಕಲ್ಲಹುಣಸೆ ' ಇನ್ನುವ ಹೆಸರಿತ್ತು. ಇದಕ್ಕೆ ಸುಮಾರು ೧೦೦ವರ್ಷಗಳಿಂದ ಇದಕ್ಕೆ ಲಕ್ಷ್ಮಿಸಾಗರ ಎಂದು ಪುನಃ ಬದಲಾವಣೆ ಮಾಡಲಾಗಿದ್ದು, ಮದಕರಿನಾಯಕನ ನಾಗತಿ ಲಕ್ಕಾಂಬೆಯ ಹೆಸರಿನಲ್ಲಿ ಏನಾದರೂ ಈ ಊರಿಗೆ ಲಾಕ್ಷ್ಮಿಸಾಗರ ಎಂದು ಬಂದಿರಬಹುದೆಂದು ಹೇಳಲಾಗಿದೆ.

            ಲಕ್ಷ್ಮೀಸಾಗರ ಗ್ರಾಮವು ಶಾಸನ ಸ್ಥ ಸ್ಥಳವಾಗಿದೆ. ಅನೇಕ ದೇವಾಲಯಗಳು ಕಂಡುಬರುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದ್ರೆ ಕಲ್ಲೇಶ್ವರ ದೇವಾಲಯ, ಆಂಜಿನೆಯ ದೇವಾಲಯ, ಈಶ್ವರ ದೇವಾಲಯ ಗಳು ಕಂಡು ಬರುತ್ತವೆ. ಇದರಿಂದ ಶೈವ ಹಾಗೂ ವೈಷ್ಣವ ಪಂಥದ ದೇವಾಲಯಗಳು ಹಾಗೂ ಶಕ್ತಿ ದೇವತೆಯ ಪ್ರತೀಕವಾದ ಶಾಕ್ತಪಂಥದ ದೇವಾಲಯಗಳು ಇರುವುದನ್ನು ಕಾಣಬಹುದು.

ಕಲ್ಲೇಶ್ವರ ದೇವಾಲಯ ಮತ್ತು ಮೂರ್ತಿಶಿಲ್ಪ

          ಕಲ್ಲೇಶ್ವರ ದೇವಾಲಯವು ಲಕ್ಷ್ಮೀ ಸಾಗರ ಗ್ರಾಮದ ಪ್ರಾಚೀನ ದೇವಾಲಯವಾಗಿದ್ದು, ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ದ್ದು, ಕೆರೆಯ ಹಿಂಭಾಗದಲ್ಲಿ ಕಂಡು ಬರುವ ಹಾಗೂ ಬಹುತೇಕವಾಗಿ ಅಜ್ಞಟವಾಗಿದೆಯೆಂದು ಹೇಳಬಹುದಾಗಿದೆ. ಕಲ್ಲೇಶ್ವರ ದೇವಾಲಯದ ತಲವಿನ್ಯಸದಲ್ಲಿ ಗರ್ಭಗೃಹ, ಅಂತರಾಳ, ತೆರೆದ ಮಂಟಪವಿದೆ. ಗರ್ಭಗಹದಲ್ಲಿ ಶಿವಲಿಂಗವಿದ್ದು, ಅಂತರಾಳದಲ್ಲಿ ನಂದಿಶಿಲ್ಪವಿದೆ. ತೆರೆದ ಮಂಟಪದಲ್ಲಿ ಆರು ಸ್ವತಂತ್ರವಾದ ಕಂಬಗಳಿವೆ.

ಮೂರ್ತಿಶಿಲ್ಪ ಗಳು

           ಕಲ್ಲೇಶ್ವರ ದೇವಾಲಯದಲ್ಲಿ ಸುಮಾರು ೨ ೧/೨ ಅಡಿ ಇತ್ತರದ ಸ್ಥಾಪಿತ ಲಿಂಗವಿದೆ. ಅಂತರಾಳದಲ್ಲಿ ಗರ್ಭಗುಡಿಯಲ್ಲಿರುವ ಲಿಂಗಕ್ಕೆ ಇದುರಾಗಿರುವ ನಂದಿಶಿಲ್ಪ ವಿದೆ. ನಂದಿಶಿಲ್ಪವು ಸುಮಾರು ೧ ೧/೨ ಅಡಿ ಎತ್ತರವಿದೆ, ನಾಗರಶಿಲ್ಪವಿದ್ದು ಅದು ಸುಮಾರು ಒಂದು ಅಡಿಯಿದೆ.

ಕಂಬಗಳ ಶೈಲಿ

          ಕಲ್ಲೇಶ್ವರ ದೇವಾಲಯದ ಕಂಬಗಳು ಅತ್ಯಂತ ಗಿಡ್ಡದಾಗಿದ್ದು, ಕಂಬಗಳ ರಚನೆಯಿಂದ ದೇವಾಲಯವು ರಾಷ್ಟ್ರಕೂಟರ ಕಾಲದ ಆಗಿದೆ (ಸುಮಾರು ೧೦ ನೇ ಶತಮಾನ) ಕಂಬಗಳ ರಚನೆಯಲ್ಲಿ ಪೀಠ, ಎರಡು ಚಚ್ಚೌಕಗಳ ಮಧ್ಯಪೈಲು ರಚನೆಯಿದೆ.

ಈಶ್ವರ ದೇವಾಲಯ ಮತ್ತು ಮೂರ್ತಿಶಿಲ್ಪ

        ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಉತ್ತರ ಕಡೆಯಿಂದ ಲಕ್ಷ್ಮೀ ಸಾಗರ ಗ್ರಾಮಕ್ಕೆ ಪ್ರವೇಶಿಸಿದರೆ ಮೊದಲಿಗೆ ಕಾಣಿಸುವುದು ಈಶ್ವರ ದೇವಾಲಯ ಇದರ ಮೂಲ  ಹೆಸರು ಇದಕ್ಕಿಂತಲೂ ಹಿಂದಿನ ಹೆಸರು ಚಂದ್ರಮೌಳೇಶ್ವರ ಎಂಬ ಹೆಸರು ಎತ್ತೆಂದು ಹಿಂದಿನ ಸ್ಥಳ ಪುರಾಣದಿಂದ ತಿಳಿಯಲಾಗಿದೆ. ಈಶ್ವರ ದೇವಾಲಯಕ್ಕೆ ಮಹೇಶ್ವರ, ಉಮಾಮಹೇಶ್ವರ ದೇವಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು, ಶಾಸನದಲ್ಲಿ ಅಧಿಕೃತವಾಗಿ ಈಶ್ವರ ದೇವಾಲಯವೆಂದು ಉಲ್ಲೇಖಿಸಲಾಗಿದೆ. ಪ್ರಸ್ತುತ ಈ ದೇವಾಲಯವು ಉಮಾಮಹೇಶ್ವರ ದೇವಾಲಯ ಎಂದು ಕರೆಯಲಾಗುತ್ತಿದೆ. ಆದರೆ ಉಮಾ ಅಂದರೆ ಪಾರ್ವತಿ ಇಲ್ಲದೇ ಈ ರೀತಿ ಕರೆದಿರುವುದು ಅನ್ಪೆಕ್ಷೇನೀಯ ಎಂದು ಹೇಳಲಾಗಿದೆ.

         ಈಶ್ವರ ದೇವಾಲಯ ವು ಸಂಪೂರ್ಣ ಜೀರ್ಣೋದ್ಧಾರ ಗೊಂಡರು, ಹಳೆಯ ದೇವಾಲಯ ಎಂದು ಹೇಳಲು ಏನೂ ಕುರುಹುಗಳು ಇಲ್ಲದಿದ್ದರೂ ದೇವಾಲಯದ ಒಳ ಬಾಗಿಲಿನಲ್ಲಿರುವ ಶಾಸನದಿಂದ ವಿಜಯನಗರೋತ್ತರ ಕಾಲದ್ದೆಂದು ಹೇಳಬಹುದಾಗಿದೆ.

ಗರ್ಭಗುಡಿ

          ದೇವಾಲಯವು ಗರ್ಭಗುಡಿಯನ್ನು ಒಳಗೊಂಡಿದ್ದು, ಗರ್ಭಗುಡಿಯ ಮೇಲ್ಭಗದಲ್ಲಿ ವಿಮಾನವನ್ನು ಕಾಣಬಹುದು ಶಿಖರದ ಮೇಲ್ ತುದಿಯಲ್ಲಿ ಸ್ಥೂಪಿಯನ್ನು ಹೊಡಿದೆ. ಗರ್ಭಗುಡಿಯಲ್ಲಿ ಸುಮಾರು ೩ಅಡಿಯ ಸ್ಥಾಪಿತ ಲಿಂಗ ಇದ್ದು,ಅದರ ಇಕ್ಕಡೆಗಳಲ್ಲಿ ಗಣಪತಿ ಶಿಲ್ಪಗಳನ್ನು ಕಾಣಬಹುದು. ಲಿಂಗದ ಬಲಭಾಗಕ್ಕೆ ಚಿಕ್ಕದಾದ ಗೂಡು ಯಿದ್ದು ದ್ವೀಪ ಇಡಲು ವ್ಯವಸ್ಥೆ ಮಾಡಲಾಗಿದೆ.

           ಗರ್ಭಗುಡಿಯ ಬಾಗಿಲು ವಾಡವು ಸರಳ ತ್ರಿ ಶಾಖೆಯನ್ನು ಹೊಂದಿದೆ. ಗರ್ಭಗುಡಿಯ ನಂತರದ ಭಾಗವು ಎರಡು ಸ್ವತಂತ್ರ ಕಂಬಗಳಿಂದ ಕೂಡಿದ ಆಲಯ ವಿದೆ. ಇದರಲ್ಲಿ ಸುಮಾರು ೨ಅಡಿ ಎತ್ತರದ ನಂಡಿಷಿಲ್ಪವಿದೆ. ನಂತರ ಮುಖಮಂಟಪ ನಾಲ್ಕು ದೊಡ್ಡ ಸ್ವತಂತ್ರ ಕಂಬಗಳಿಂದ ಕೂಡಿದ್ದು, ಇತ್ತೀಚಿನ ರಚನೆಯಾಗಿದೆ. ಮುಖಮಂಟಪದ ಮೇಲೆ ಶಾಲಾ, ಕೂಟ, ಪಂಜರಗಳಿದ್ದು ಇವುಗಳು ಚಜ್ಜಾದ ಮೇಲಿವೆ.

     ಮುಖಮಂಟಪದ ನಂತರ ವಿಶಾಲವಾದ ಪ್ರಾಂಗಣವಿದೆ. ದೇವಾಲಯದ ಎಡಭಾಗಕ್ಕೆ ಇತ್ತೀಚೆಗೆ ಪ್ರತಿಷ್ಠಾಪಿಸಲಾದ ಗಣೇಶನ ದೇವಸ್ಥಾನವಿದೆ. ಅದರ ಮುಂಭಾಗದಲ್ಲಿ ಬಿಲ್ವಪತ್ರೆಯ ಮರದಡಿಯಲ್ಲಿ ನಾಗರ ಶಿಲ್ಪಗಳಿದ್ದು ಅದನ್ನು ಚಿತ್ರಲಿಂಗ ನೆಂದು ಪೂಜಿಸುತ್ತಾರೆ. ದೇವಾಲಯದ ಸುತ್ತಲೂ ಪ್ರಾಕಾರ ಗೋಡೆಯನ್ನು ಹೋಡಿದ್ದು, ಇತ್ತೀಚೆಗೆ ನಂದಿಯ ಮೇಲೆ ಅಸಿನನಾಗಿರುವ ಈಶ್ವರನ ವಿಗ್ರಹವಿರುವ ದ್ವಾರ ಮಂಟಪವನ್ನು ನಿರ್ಮಿಸಲಾಗಿದೆ. ಹೀಗೆ ಈಶ್ವರ ದೇವಾಲಯವು ಗ್ರಾಮದ ಪ್ರಮುಖ ಪೂಜ್ಯ ನೀಯ ದೇವರಾಗಿ ಸುಸ್ಥಿಯಲಿರುವ ದೇವಾಲಯವಾಗಿದೆ.

ಉಪಸಂಹಾರ         

ಹೀಗೆ ಈ ತಾಲ್ಲೂಕಿನ ಶೈವದರ್ಮಕ್ಕೆ ಸಂಬಂಧಿಸಿದಂತೆ ಈವರೆಗೆ ಬೆಳಕಿಗೆ ಬಂದಿರುವ ಶೈವ ದೇವಾಲಯಗಳ ಸಂಖ್ಯೆ ಹೆಚ್ಚು, ಈ ತಾಲ್ಲೂಕಿನಲ್ಲಿ ಉಳಿದ ಧರ್ಮದ ದೇವಾಲಯಗಳಿಗಿಂತ ಶೈವ ದೇವಾಲಯಗಳು ಅಧಿಕವಾಗಿವೆ. ಕಾಳಾಮುಖ ಪಂಥದ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿತ್ತು ಎಂದು ಸ್ಪಷ್ಟವಾಗುತ್ತದೆ. ಈ ತಾಲ್ಲೂಕಿನ ಶೈವ ಧರ್ಮದ ವಾಸ್ತು ಕಲೆಯ ಅಧ್ಯಯನಕ್ಕೆ ಅಪರೂಪದ ಕೊಡುಗೆಗಳಾಗಿವೆ.

ಕೊನೆ ಟಿಪ್ಪಣಿ

  1. ಕಲಬುರ್ಗಿ ಎಂ. ಎಂ,1998,"ಪ್ರಾಚೀನ ಕರ್ನಾಟಕದಲ್ಲಿ ದೇವಾಲಯಗಳ ನಾಶ" ಮಾರ್ಗ, ಸಂ,ಮೂರು, ಪು,39-40.
  2. ಸೋಮಶೇಖರ್ ಎಸ್.ವೈ.2017,ಕರ್ನಾಟಕ ದೇವಾಲಯ ಕೋಶ - ಚಿತ್ರದುರ್ಗ ಜಿಲ್ಲೆ, ಪ್ರಸಾರಾಂಗ,ಕನ್ನಡ ವಿಶ್ವವಿದ್ಯಾಲಯ,ಹಂಪಿ, ಪು,97-98.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal