Tumbe Group of International Journals

Full Text


ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳ ಆಯೋಜನೆ ಮತ್ತು ಇಂದಿನ ಅಗತ್ಯತೆ

1ರಾಘವೇಂದ್ರ .ಹೆಚ್ ಸಿ

1ಸಂಶೋಧನಾ ವಿದ್ಯಾರ್ಥಿ

ಅಭಿವೃದ್ದಿ ಅಧ್ಯಯನ ವಿಭಾಗ,

ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ


Abstract:           

ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗಳಲ್ಲಿ  ಮಕ್ಕಳ ಸ್ಥಿತಿಗತಿಗಳನ್ನು  ಅರಿತು  ಅವರ ಬೆಳವಣಿಗೆಗೆ  ಪೂರಕವಾದ ವಾತಾವರಣ ಸೃಷ್ಟಿಸಿ,  ಮಕ್ಕಳು  ಉತ್ತಮ ಬಾಲ್ಯವನ್ನು ಅನುಭವಿಸಿ, ಮುಕ್ತ ಪರಿಸರದಲ್ಲಿ  ಬೆಳೆಯಬೇಕು. ಅವರಿಗೆ  ಕೊಡಮಾಡಿದ ಹಕ್ಕುಗಳು ಲಭಿಸುವಂತಾಗಬೇಕು.ಗ್ರಾಮೀಣ  ಸ್ಥಳೀಯ ಮಟ್ಟದಲ್ಲಿ ಮಕ್ಕಳ ಗ್ರಾಮಸಭೆಗಳನ್ನು  ಆಯೋಜಿಸುವ ಮೂಲಕ   ದೇಶದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಬಹುದು.

ಪ್ರಮುಖ ಪದಗಳು: ಮಕ್ಕಳ ಹಕ್ಕು, ಮೀಣಾಭಿವೃದ್ದಿ, ಗ್ರಾಮಸಭೆ.

 ಪೀಠಿಕೆ

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2006 ರಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಪ್ರತಿ ವರ್ಷ ನವೆಂಬರ್ 14 ರಿಂದ ಆಯೋಜಿಸುತ್ತಾ ಬರುತ್ತಿರುವುದು ಸರ್ಕಾರವು ಮಕ್ಕಳ ಕ್ಷೇತ್ರಕ್ಕೆ ನೀಡಿದ ಪ್ರಾಶಸ್ತ್ಯವನ್ನು ಎತ್ತಿ ತೋರಿಸುತ್ತಿದೆ. ರಾಷ್ಟ್ರದಲ್ಲಿಯೇ ಮಕ್ಕಳ ಭಾಗವಹಿಸುವಿಕೆಯನ್ನು ಗ್ರಾಮೀಣಾ ಸ್ಥಳೀಯ ಸರ್ಕಾರಗಳಿಂದ ಪ್ರೇರೇಪಿಸುತ್ತಿರುವ ಏಕೈಕ ರಾಜ್ಯ ಕರ್ನಾಟಕ ಎಂದು ಹೇಳಬಹುದು.

ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳ ಮೂಲಕ ಸ್ಥಳೀಯ ಮಟ್ಟದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಅತ್ಯಂತ ಸಮೀಪದಲ್ಲಿ ಕಂಡಿರುವವರಲ್ಲಿ ನಾನೂ ಒಬ್ಬ. ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯು ಸ್ಥಳೀಯ ಸರ್ಕಾರವನ್ನು ಸದಾ ಅಭಿವೃದ್ದಿಯತ್ತ ತೆಗೆದುಕೊಂಡು ಹೋಗುವ ಒಂದು ಪರಿಣಾಮಕಾರಿಯಾದ ಪ್ರಕ್ರಿಯೆ ಎಂದರೆ ತಪ್ಪಾಗಲಾರದು.

ಈ ಹಿಂದೆ ಗ್ರಾಮ ಪಂಚಾಯತಿಯ ಅನುದಾನಗಳು ಕೇವಲ ಭೌತಿಕ ವಸ್ತುಗಳ ಅಭಿವೃದ್ದಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದವು ಅದು ಅಗತ್ಯ ಇರಲಿ ಇಲ್ಲದಿರಲಿ, ಆದರೆ ಈಗ ಕಾಲ ಕ್ರಮೇಣ ಬದಲಾವಣೆಯನ್ನು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳ ಆಯೋಜನೆಗಳ ಮೂಲಕ ಬದಲಾಗುತ್ತಿವೆ.. ಮಕ್ಕಳು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು, ತಮ್ಮ ಸಮಸ್ಯೆಗಳನ್ನು ಮತ್ತು ಬೇಡಿಕೆಗಳನ್ನು ಮಂಡಿಸಲು ಗ್ರಾಮ ಪಂಚಾಯತಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಮಕ್ಕಳ ಮೂಲಭೂತ ಅವಶ್ಯಕತೆಗಳಾದ ಶಾಲೆಯಲ್ಲಿ ಶುದ್ದ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಶಾಲೆಗೆ ವಿದ್ಯುತ್ ಸಂಪರ್ಕ, ಗ್ರಂಥಾಲಯ, ಪ್ರಯೋಗಾಲಯ, ಸ್ಮಾರ್ಟಕ್ಲಾಸ್ ವ್ಯವಸ್ಥೆ, ಭೋದನಾ ಕೊಠಡಿಗಳು, ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸುಣ್ಣಬಣ್ಣ, ರಸ್ತೆ ಮತ್ತು ಸಾರಿಗೆ ಸಂಪರ್ಕ, ನೈರ್ಮಲ್ಯ, ಆರೋಗ್ಯ, ಶಿಕ್ಷಣ, ರಕ್ಷಣೆ ಮತ್ತು ಭಾಗವಹಿಸುವ ವಿಚಾರಗಳು ಕೂಡ ಪಂಚಾಯ್ತಿಗಳಲ್ಲಿ ಚರ್ಚೆಯ ಪ್ರಮುಖ ವಿಚಾರಗಳಾಗಿವೆ.

ಸುಸ್ಥಿರ ಅಭಿವೃದ್ದಿಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳ ಪಾತ್ರ :

ಮಕ್ಕಳ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತ ಗ್ರಾಮೀಣಾ ಮಟ್ಟದಲ್ಲಿ ಇತ್ತೀಚಗೆ ಅನೇಕ ಬಾಲ್ಯವಿವಾಹಗಳು, ಬಾಲಕಾರ್ಮಿಕ ಪದ್ದತಿ , ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು,ಅಪೌಷ್ಟಿಕತೆ, ಮಕ್ಕಳ ಮಾರಾಟ ಪ್ರಕರಣಗಳು, ಜೀತ ಪದ್ದತಿ ಪ್ರಕರಣಗಳು, ಅಕ್ರಮ ದತ್ತು, ದೇವದಾಸಿ ಪದ್ದತಿ ಹೀಗೆ ಅನೇಕ ಶೋಷಣೆಯ ವಿರುದ್ದ ತಮ್ಮ ಅಭಿಪ್ರಾಯವನ್ನು ಪಂಚಾಯತಿಗಳ ಮುಂದೆ ಮಂಡಿಸುತ್ತಿದ್ದಾರೆ. ಇದರ ಪರಿಣಾಮ ಗ್ರಾಮ ಪಂಚಾಯತಿಗಳು ತಮ್ಮ ಕ್ರಿಯಾಯೋಜನೆಯಲ್ಲಿ ಕೂಡ ಅನೇಕ ಬದಲಾವಣೆಗಳನ್ನು ಮಾಡಿರುವುದು ಕಂಡುಬಂದಿದೆ. ಜೊತೆಗೆ ಮಕ್ಕಳ ಹಕ್ಕುಗಳ ರಕ್ಷಣೆಗಿರುವ ಸಮಿತಿಗಳ ರಚನೆ ಮತ್ತು ಕಾರ್ಯಗಳನ್ನು ವಿಸ್ತರಿಸಿವೆ. ಶಿಕ್ಷಣ ಕಾರ್ಯಪಡೆಯಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಪುನಃ ಶಾಲೆಗೆ ಸೇರ್ಪಡೆಮಾಡುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸುತ್ತಿರವ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿಯಿಂದ ವೈಯಕ್ತಿಕ ಮತ್ತು ಸಾಮಾಹಿಕ ವಿವಾಹಗಳಲ್ಲಿ ಆಗುತ್ತಿದ್ದ ಬಾಲ್ಯ ವಿವಾಹಗಳನ್ನು ತಡೆಗಟ್ಟುತ್ತಿದ್ದಾರೆ. ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮ (ಕೆಡಿಪಿ) ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಬಳಸಲು ಮಕ್ಕಳಿಗೆ ಉತ್ತೇಜಿಸುತ್ತಿರುವುದು. ಮಕ್ಕಳ ಹಕ್ಕುಗಳ ರಕ್ಷಣೆಗೆ ಮತ್ತು ಮಕ್ಕಳ ಕಾನೂನುಗಳನ್ನು ತಿಳಿಸಲು ವ್ಯಾಪಕ ಪ್ರಚಾರವನ್ನು ಮೈಕ್ ಮೂಲಕ, ಗೋಡೆ ಬರಹ, ಕರಪತ್ರ, ಕಿರುಚಿತ್ರಗಳ ಮೂಲಕ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸಗಳು ಪ್ರಾರಂಭಿಸಿದ್ದಾರೆ.

ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಪುನರ್ವಸತಿ ಕೇಂದ್ರಕ್ಕೆ ದಾಖಲಿಸುತ್ತಿರುವುದು. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮಕೈಗೊಳ್ಳುತ್ತಿರುವುದು, ಶಾಲೆಗಳಲ್ಲಿ ರಾಷ್ಟ್ರಯ/ನಾಡ ಹಬ್ಬಗಳನ್ನು ಆಚರಿಸುತ್ತಿರುವುದು. ಗ್ರಂಥಾಲಯ ವ್ಯವಸ್ಥೆ ಕಲ್ಪಿಸುತ್ತಿರುವುದು. ಶಾಲೆಗಳಿಗೆ, ಅಂಗನವಾಡಿ ಕೇಂದ್ರಗಳಿಗೆ, ಆರೋಗ್ಯ ಉಪಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿರುವುದು. ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುತ್ತಿರುವುದು, ಆರೋಗ್ಯ ಮಟ್ಟವನ್ನು ಸುಧಾರಿಸಲು ಆರೋಗ್ಯ ಸೇವೆಗಳನ್ನು ಒದಗಿಸುವುದು. ಜನನ ದಾಖಲಾತಿಯನ್ನು ಸ್ಥಳೀಯವಾಗಿ ಲಭ್ಯವಾಗುವಂತೆ ಅನುಕೂಲ ಕಲ್ಪಿಸುತ್ತಿವೆ. ಪ.ಜಾ. ಮತ್ತು ಪ.ಪಂ, ಮಕ್ಕಳಿಗೆ ಹಾಗೂ ವಿಶೇಷ ಅಗತ್ಯವಿರುವ ಮಕ್ಕಳಿಗೆ ಶಿಕ್ಷಣದ ಪ್ರಗತಿಗೆ ಶ್ರಮಿಸುತ್ತಿವೆ. ಇವೆಲ್ಲವನ್ನೂ ಗ್ರಾಮ ಪಂಚಾಯತಿಯ ಅಭಿವೃದ್ದಿ ಅನುದಾನ, 15ನೇ ಹಣಕಾಸು ಯೋಜನೆಂiÀiಲ್ಲಿ ಇನ್ನೂ ಕೆಲವುಗಳನ್ನು ಎಂ,ಜಿ,ಎನ್,ಆರ್,ಇ,ಜಿ ಯೋಜನೆಯಲ್ಲಿ ಕ್ರಮ ಕೈಗೊಳ್ಳುತ್ತಿವೆ. ಕಿಶೋರಿಯರ ಸಬಲೀಕರಣ ಮತ್ತು ಮಕ್ಕಳ ರಕ್ಷಣೆಗೆ ಮುಂದಾಗುತ್ತಿವೆ. ಈ ಮೂಲಕ ಸುಸ್ಥಿರ ಅಭಿವೃದ್ದಿಗೆ ಅದರದೇ ಆದ ಕೊಡುಗೆಯನ್ನು ನೀಡುವಲ್ಲಿ ಗ್ರಾಮ ಪಂಚಾಯತಿಗಳು ಶ್ರಮಿಸುತ್ತಿವೆ.

ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 2015ರಲ್ಲಿ ತಿದ್ದುಪಡೆಗೊಳಿಸಿದ ಕಾಯ್ದೆ ಸೆ,3ಎಚ್ 2(1) ರ ಅನ್ವಯ ಪ್ರತಿ ವರ್ಷ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಬೇಕಾಗುತ್ತದೆ. ಮಕ್ಕಳ ಸಮಸ್ಯೆಗಳು, ಬೇಡಿಕೆಗಳನ್ನು ಹಾಗೂ ಅಂಕಿಅಂಶಗಳನ್ನು ಇಟ್ಟುಕೊಂಡು ಅವರೊಟ್ಟಿಗೆ ಕೆಲಸ ನಿರ್ವಹಿಸುವವರ ಜೊತೆ ಚರ್ಚೆ ಮಾಡಿ, ಮಕ್ಕಳ ಪರವಾದ ವಿವಿಧ ಕ್ರಮಗಳನ್ನು ಕೈಗೊಂಡು ಮಕ್ಕಳ ಹಿತ ಕಾಪಾಡಬೇಕಾಗುತ್ತದೆ.

ಪ್ರತಿ ವರ್ಷ ಸರ್ಕಾರದ ನಿರ್ದೇಶನದಂತೆ ರಾಜ್ಯದ 6022 ಗ್ರಾಮ ಪಂಚಾಯ್ತಿಗಳು ಫೆಬ್ರವರಿ 1 ನೇ ತಾರೀಖಿನಿಂದ ಮಾರ್ಚ್ 10 ರ ಒಳಗೆ ತನ್ನ ಕ್ರಿಯಾ ಯೋಜನೆಯನ್ನು ತಯಾರಿಸಿ, ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳಿಗೆ ಕಳುಹಿಸಿಕೊಡಲಾಗುತ್ತದೆ. ನಂತರ ಜಿಲ್ಲಾ ಪಂಚಾಯ್ತಿಯು ಜಿಲ್ಲಾ ಯೋಜನಾ ಸಮಿತಿಯಲ್ಲಿ ಯೋಜನೆಗಳನ್ನು ಅನುಮೋದಿಸುತ್ತವೆ. (ಗ್ರಾಮ ಪಂಚಾಯತಿಯ ಶೇ70, ತಾಲೂಕು ಪಂಚಾಯತಿಯ ಶೇ20, ಜಿಲ್ಲಾ ಪಂಚಾಯತಿಯ ಶೇ10 ರಷ್ಟು 70:20:10 ಅನುಪಾತದಲ್ಲಿ) ಈ ವರ್ಷದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ದಿ ಯೋಜನೆಯನ್ನು “ಸಬ್ ಕೀ ಯೋಜನಾ ಸಬ್ ಕಾ ವಿಕಾಸ್” ಜನರ ಯೋಜನೆ ಜನರ ಅಭಿವೃದ್ದಿ (ಜಿ,ಪಿ,ಡಿ,ಪಿ 5 ವರ್ಷಗಳ ಪಂಚವಾರ್ಷಿಕ ಯೋಜನೆ) ರೂಪಿಸಿಬೇಕಾಗಿರುವುದರಿಂದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಆಯೋಜನೆ ಹೆಚ್ಚು ಸೂಕ್ತವಾಗಿದೆ.

ಈ ಹಿನ್ನಲೆಯಲ್ಲಿ ಈ ಬಾರಿಯು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಅತೀ ತುರ್ತಾಗಿ ಈ ಕೆಳಕಂಡ ಕಾರಣಕ್ಕಾಗಿ ಆಯೋಜಿಸುವ ಅವಶ್ಯಕತೆ ಇರುತ್ತದೆ. 

  • ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯು ಮಕ್ಕಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರ್ಥಮಾಡಿಕೊಡುವುದು, ಜೊತೆಗೆ ನಾಯಕತ್ವಗುಣಗಳನ್ನು ಬೆಳಸುವುದು, ವ್ಯವಸ್ಥೆಯನ್ನು ಪ್ರಶ್ನಿಸುವುದರ ಮೂಲಕ ತನ್ನ ಹಕ್ಕನ್ನು ಪಡೆದುಕೊಳ್ಳಲು ಹತ್ತಿರದಲ್ಲಿಯೇ ಇರುವ ಸ್ಥಳೀಯ ಸರ್ಕಾರ ಎಂಬುದನ್ನು ಅಭ್ಯಾಸಿಸಲು ಸಾಧ್ಯವಾಗಿಸುವುದು.
  • ಕೋವಿಡ್-19 ಹಾಗೂ ನಂತರದ ಬೆಳವಣಿಗೆಯಿಂದ ಮಕ್ಕಳ ಮೇಲಾಗಿರುವ ಕೆಲವು ಪರಿಣಾಮಗಳನ್ನು ಅರಿತು ಮಕ್ಕಳಿಗೆ ನ್ಯಾಯ ಒದಗಿಸುವುದು.
  • ಮಕ್ಕಳ ಸಮಸ್ಯೆಗಳನ್ನು ತಿಳಿಯಲು ಮತ್ತು ಅವರ ಭಾಗವಹಿಸುವಿಕೆಯನ್ನು ಖಾತ್ರಿ ಪಡಿಸಲು ಹೆಚ್ಚು ಪರಿಣಾಮಕಾರಿಯಾಗಿದೆ.
  • ಮಕ್ಕಳು ಕಳೆದ 18 ತಿಂಗಳಿಂದ ಶಾಲೆಯಿಂದ ಹೊರಗಡೆ ಇದ್ದು ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಅವರಿಗೆ ಆತ್ಮಸ್ತೈರ್ಯ ತುಂಬಲು ಜರೂರಾಗಿ ಕ್ರಮ ಕೈಗೊಳ್ಳಬೇಕಿದೆ.
  • ಕೆಲವು ಮಕ್ಕಳಿಗೆ ಪೌಷ್ಟಿಕ ಆಹಾರದ ಅಗತ್ಯತೆ ಹಾಗೂ ಆರೋಗ್ಯ ಸೇವೆಗಳ ಅಗತ್ಯತೆ ಇರುವುದರಿಂದ ಅದನ್ನು ದೊರಕಿಸಿಕೊಡಲು ಮಕ್ಕಳ ಗ್ರಾಮಸಭೆ ಸೂಕ್ತ ಸ್ಥಳವಾಗಿದೆ.
  • ಕೋವಿಡ್ ನಿಂದ ತಂದೆ/ತಾಯಿ/ ಕಳೆದುಕೊಂಡ ಮಕ್ಕಳಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವುದು.
  • ಅಗತ್ಯ ವಿರುವ ಮಕ್ಕಳಿಗೆ ಶಾಲೆ ಹಾಗೂ ಪುನರ್ವಸತಿ ಕಲ್ಪಿಸಿಕೊಡುವುದು.
  • ದಿನಾಂಕ 11/06/2019ರ 20 ಅಂಶಗಳ ಕಾರ್ಯಕ್ರಮಗಳು ಸೇರಿದಂತೆ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳು ಪರಿಶೀಲನಾ ಸಮಿತಿಯು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಅಗತ್ಯ ಕ್ರಮವಹಿಸಲು ಸಾಧ್ಯವಾಗುತ್ತದೆ.
  • ಈ ವರ್ಷ ಗ್ರಾಮ ಪಂಚಾಯತಿಗಳು ಅಭಿವೃದ್ದಿ ಯೋಜನೆ(ಜಿ.ಪಿ.ಡಿ.ಪಿ 5 ವರ್ಷಗಳ ಯೋಜನೆ) ತಯಾರಿಸುತ್ತಿರುವುದರಿಂದ ಮಕ್ಕಳ ಗ್ರಾಮಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
  • ಮಕ್ಕಳ ಬೇಡಿಕೆ ಮತ್ತು ಸೌಲಭ್ಯಗಳ ಕುರಿತಾದ ವಿಚಾರಗಳನ್ನು ಯೋಜನೆಯಲ್ಲಿ ಸೇರ್ಪಡಿಸಲು ಹೆಚ್ಚು ಅವಕಾಶಗಳಿವೆ.
  • ಮಕ್ಕಳ ಅವವ್ಯಯ ತಯಾರಿಸಲು ಕೂಡ ಮಕ್ಕಳ ಗ್ರಾಮಸಭೆಯು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.
  • ಮಕ್ಕಳ ವಿಶೇಷ ಗ್ರಾಮಸಭೆಗಳಲ್ಲಿ ಮಕ್ಕಳಿಂದ ಬರುವ ಬೇಡಿಕೆ ಮತ್ತು ಸಮಸ್ಯೆಗಳನ್ನು 2022-23 ನೇ ಸಾಲಿಗೆ ತಯಾರಿಸುವ ವಾರ್ಷಿಕ ಯೋಜನೆಯಲ್ಲಿ ಸೇರ್ಪಡಿಸಲು ಸಾಧ್ಯವಾಗುತ್ತದೆ. ಆ ಮೂಲಕ ಮಕ್ಕಳ ಸ್ನೇಹೀ ಯೋಜನೆ ತಯಾರಿಸಲು ಸಾಧ್ಯವಾಗುತ್ತದೆ.
  • ಶಾಲೆಯಿಂದ ಹೊರಗಿರುವ ಮಕ್ಕಳನ್ನು ಗುರುತಿಸಿ ಪುನಃ ಶಾಲೆಗೆ ಕರೆ ತರಲು ಸಾಧ್ಯವಾಗುತ್ತದೆ.
  • ಬಾಲ್ಯ ವಿವಾಹಗಳನ್ನು ತಡೆಯಲು ಸಾಧ್ಯವಾಗುತ್ತದೆ.
  • ಇಲಾಖೆ ಇಲಾಖೆಗಳ ಮಧ್ಯ ಸಮನ್ವಯ ಹಾಗೂ ಸಹಕಾರ ಮಾಡಲು ಸಾಧ್ಯವಾಗುತ್ತದೆ.

ಉಪಸಂಹಾರ

ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು, ಸಮುದಾಯಕ್ಕೆ ಕಾನೂನು ಪ್ರಜ್ಞೆ ಮೂಡಿಸಿ, ತೊಂದರೆಗಳಿಗೆ ಒಳಗಾದ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಬೇಕು. ಮಕ್ಕಳಿಗೆ ಭಾಗವಹಿಸಲು ಅವಕಾಶಗಳನ್ನು ಸೃಷ್ಟಿಸಿ ಅವರ ಅಭಿಪ್ರಾಯಗಳನ್ನು ಆಲಿಸಬೇಕು.

ಉಲ್ಲೇಖಗಳು

  1. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ - 2019  ಸತ್ಪಲ್ ಪೂಲನಿ.
  2. ಮಕ್ಕಳ ಗ್ರಾಮಸಭೆಗಳು -2006  -ವಾಸುದೇವ  ಶರ್ಮ.
  3. ಸುತ್ತೋಲೆಗಳು  ;- 2006 - 2021  ವರಗಿನ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್   ರಾಜ್   ಇಲಾಖೆಯ  ಸುತ್ತೋಲೆಗಳು.
  4. Dr. Yogeesh N. "ಸಮೂಹದಲ್ಲಿ ಕಲಿಯುವವರ ವರ್ತನೆಗಳು". Educreation International Publication, 2018.
  5. Dr. Yogeesh N. "ಕಲಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು". Educreation International Publication, 2018.

 


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal