Tumbe Group of International Journals

Full Text


ಕೊಳಚೆ ಪ್ರದೇಶದಲ್ಲಿನ ಮಕ್ಕಳ ಮೇಲೆ ಕೋವಿಡ್ 19 ಪ್ರಭಾವ

ಪಕ್ಕೀರಪ್ಪ, ಎನ್

ಅಭಿವೃದ್ಧಿ ಅಧ್ಯಯನ ವಿಭಾಗ,

ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ-583276

Email: abhaipskote@gmail.com  Mob: 6361922283


ಪ್ರಸ್ತಾವನೆ

            ಕೊಳಚೆ ಪ್ರದೇಶಗಳು ಎಂದರೇನೇ..? ಸಮಸ್ಯೆಗಳ ತಾಣ ವಿಶೇಷವಾಗಿ ಕರೋನಾ ಸಂದರ್ಭದಲ್ಲಿ ಮಕ್ಕಳ ಮೇಲೆ ಆದ ಪರಿಣಾಮಗಳು ಹತ್ತಾರು ಪ್ರಮುಖವಾಗಿ ಕಂಡುಬರುವಂತಹ ಅಂಶಗಳನ್ನು ನೋಡುವುದಾದರೆ, ಅಪೌಷ್ಟಿಕತೆ ಮತ್ತು ಶಿಕ್ಷಣ. ಕೊಳಚೆ ಪ್ರದೇಶದಲ್ಲಿ ವಾಸವಾಗಿರುವ ಅಂತಹ ಪ್ರತಿಶತ 85% ಕುಟುಂಬಗಳು ತೀರನಿರ್ಗತಿಕವಾದ ಕುಟುಂಬಗಳು ಏಕೆಂದರೆ ಸಾಮಾನ್ಯ ಸಂದರ್ಭದಲ್ಲಿ ಅವರ ಜೀವನ ನಡೆಸುವುದು ತುಂಬಾ ಕಷ್ಟವಾದ ದಿನಗಳಲ್ಲಿ ದಿನನಿತ್ಯ ಕಾಯಕದಿಂದ ದಿನದ ಜೀವನ ಸಾಗಿಸುವ ಸ್ಲಂ ಜನರು ಬೆಳಗ್ಗೆಯಿಂದ ರಾತ್ರಿವರೆಗೂ ಕೆಲವು ಜನರು ವೃತ್ತಿಯಲ್ಲಿ ತೊಡಗಿದ್ದಾರೆ ಇನ್ನೂ ಕೆಲವು ಜನರು ರಾತ್ರಿಯಿಂದ ಬೆಳಗಿನವರೆಗೆ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿರುವುದನ್ನು ನಾವು ಗಮನಿಸಬಹುದು. ಉದಾಹರಣೆಗೆ ಕಾವಲುಗಾರರು ಮತ್ತು ಆಟೋ ಚಾಲನೆ ಮಾಡುವವರು ಹಾಗೂ ಎಪಿಎಂಸಿಗಳಲ್ಲಿ ಕೆಲಸ ಮಾಡುವವರು ರಾತ್ರಿ ಸಮಯದಲ್ಲಿ ನಿದ್ರೆಯನ್ನು ಬಿಟ್ಟು ಕೆಲಸ ಮಾಡುವುದನ್ನು ಗಮನಿಸಬಹುದು ಇಂತಹ ಸಂದರ್ಭದಲ್ಲಿ ಕರೋನ ದಂತಹ ಮಹಾಮಾರಿ ಬಂದ ಕಾರಣವಾಗಿ ಲಾಕ್‌ಡೌನ್ ಪ್ರಾರಂಭವಾಯಿತು. ಅದರ ಪರಿಣಾಮವಾಗಿ ಕೊಳಚೆ ಪ್ರದೇಶಗಳು ವಾಸವಾಗಿರುವ ಸಾವಿರಾರು ಜನರು ಕೆಲಸಗಳನ್ನು ಕಳೆದುಕೊಂಡು ದಿನನಿತ್ಯದ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಯಿತು. ಈ ವೃತ್ತಿಯನ್ನು ನಂಬಿಕೊಂಡ ಜನರ ಜೀವನ ನಿರ್ವಹಣೆಗೆ ತುಂಬಾ ಕಷ್ಟವಾಯಿತು. ಇಂತಹ ಸಂದರ್ಭದಲ್ಲಿ ಸರ್ಕಾರವು ಇವರಿಗೆ ಇವರ ಬೆಂಬಲಕ್ಕೆ ನಿಲ್ಲಲಿಲ್ಲ, ಏಕೆಂದರೆ ಅವರು ಅಸಂಘಟಿತ ಕಾರ್ಮಿಕರಾಗಿದ್ದರಿಂದ, ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳು ಕೂಡ ಇವರಿಗೆ ಸಿಗದಾಯಿತು. ಏಕೆಂದರೆ ಕಾರ್ಮಿಕ ಇಲಾಖೆಯಲ್ಲಿ ಒಂದು ಕಾಯಕದಲ್ಲಿ ತೊಡಗಿರುವ ಕಟ್ಟಡ ಕಾರ್ಮಿಕರು ಮತ್ತು ಇತರ ಕಾರ್ಮಿಕರು ನೋಂದಣಿಯನ್ನು ಮಾಡಿಕೊಂಡವರಿಗೆ ಎರಡರಿಂದ ಮೂರು ಕಂತುಗಳಲ್ಲಿ ಐದು ಸಾವಿರದಂತೆ ಎರಡರಿಂದ ಮೂರು ಸಾರಿ ಕಾರ್ಮಿಕ ಇಲಾಖೆಯಿಂದ ಹಣ ಬಂದಿದ್ದರಿಂದ ಕೆಲವು ಕುಟುಂಬಗಳು ಕೆಲಸವಿಲ್ಲದ ಸಮಯದಲ್ಲಿಯೂ ಜೀವನ ನಿರ್ವಹಣೆಗೆ ಸ್ವಲ್ಪ ಸಹಾಯವಾಯಿತು. ಆದರೆ ಅಸಂಘಟಿತ ವಲಯಗಳಲ್ಲಿ ದಿನಗೂಲಿ ಕೆಲಸ ಮಾಡುವಂತಹ ಕಾರ್ಮಿಕರು ಮತ್ತು ಮನೆ ಕೆಲಸ ಮಾಡುವಂತಹ ನೂರಾರು ಕುಟುಂಬಗಳಿಗೆ ಯಾವುದೇ ಸೌಲಭ್ಯಗಳಿಲ್ಲದೆ, ನಿತ್ಯ ಕಾಯಕದಲ್ಲಿ ತೊಡಗಲು ಕೊರೊನಾ ಸೋಂಕುನಿ ಸಮಸ್ಯೆ ಆದ್ದರಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ, ಮನೆ ನಿರ್ವಹಣೆಗೆ ಕಷ್ಟವಾಯಿತು.

ಕೀಲಿ ಪದ : ಕೋವಿಡ್ 19, ಮಕ್ಕಳು, ಅಪೌಷ್ಟಿಕತೆ, ಶಿಕ್ಷಣ

ಕೋವಿಡ್ 19 ಸಂದರ್ಭದಲ್ಲಿ ಮಕ್ಕಳ ಮೇಲೆ ಉಂಟಾದ ಆಹಾರ ಮತ್ತು ಶಿಕ್ಷಣದ ತೊಂದರೆಗಳು.

1. ಕೋವಿಡ್ 19 ಸಂದರ್ಭದಲ್ಲಿ ಆಹಾರ ತೊಂದರೆಗಳು

            ಇಂತಹ ಸಂದರ್ಭದಲ್ಲಿ ಜನರು ತಮ್ಮ ಮಕ್ಕಳಿಗೆ ಆಹಾರ ಮತ್ತು ಶಿಕ್ಷಣ ನೀಡುವುದರಲ್ಲಿ ಅಸಹಾಯಕರಾದರು, ಮುಖ್ಯವಾಗಿ ಭಾರತದಂತಹ ದೇಶದಲ್ಲಿ ಮಕ್ಕಳ ಅಪೌಷ್ಟಿಕತೆ ಮತ್ತು ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬಿರಿದೆ. ಅಲ್ಲದೆ ಪ್ರದೇಶದ ಮಕ್ಕಳು ನಿತ್ಯವೂ ಅಲ್ಲಿ ನಡೆಯುವಂತಹ ಶುಭ  ಮತ್ತು ಅಶುಭ ಸಂದರ್ಭದಲ್ಲಿ ಕಾರ್ಯಕ್ರಮಗಳಿಗೆ ಸಾಮೂಹಿಕವಾಗಿ ಒಟ್ಟಿಗೆ ಹೋಗುವುದು ಒಂದು ಹೊತ್ತಿನ ಊಟಕ್ಕಾಗಿ ಮಾತ್ರ & ಗಂಟೆಗಟ್ಟಲೆ ಕಾದು ಒಂದು ಹೊತ್ತಿನ ಊಟಕ್ಕಾಗಿ ಕಾಯುವಂತ ಪ್ರಸಂಗ ಕಂಡುಬರುತ್ತವೆ. ಹಾಗೂ ನಗರ ಪ್ರದೇಶಗಳಲ್ಲಿ ಕ್ರೈಸ್ತ ಮಿಷನರಿಗಳು ಹುಟ್ಟಿಕೊಳ್ಳುವುದಕ್ಕೆ ಒಂದು ಪ್ರಮುಖ ಕಾರಣವೇನು ಅದೇನೆಂದರೆ ಪುಟ್ಟ ಮಕ್ಕಳಿಗೆ ಉಪಹಾರ ನೀಡುವುದು ಮತ್ತು ಸ್ವಲ್ಪ ಮಟ್ಟಿಗೆ ಟುಶನ್ ರೀತಿಯಲ್ಲಿ ಶಿಕ್ಷಣ ನೀಡುವಂತದ್ದು ಕಾರ್ಯಕ್ರಮಗಳು ಮಾಡುವುದರಿಂದ ನೂರಾರು ವಿದ್ಯಾರ್ಥಿಗಳು ಇರುವಂತಹ ಆರರಿಂದ ಹತ್ತು ವರ್ಷದ ಮಕ್ಕಳು ಗಳಿಸುವುದರ ಮೂಲಕ ಉಪಹಾರಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಅಣ್ಣಂದಿರಿಗೆ ಮತ್ತು ತಂಗಿಯರಿಗೆ ಹಾಗೂ ಮನೆಯ ಕುಟುಂಬದವರಿಗೆ ಹಂಚಿಕೊಂಡು ತಿನ್ನುವಂತಹ ವಿಧಾನ ಕಾಣಬಹುದು ಒಂದುವೇಳೆ ಆ ಮಕ್ಕಳು ಅಲ್ಲೇ ಉಪಹಾರವನ್ನು ಸೇವಿಸಿದರೆ ಮನೆಯಲ್ಲಿ ಇರುವಂತಹ ಹಿರಿಯ ಮತ್ತು ಕಿರಿಯ ಸಹೋದರ ಸಹೋದರಿಯರಿಗೆ ಒಂದು ಹೊತ್ತಿನ ಊಟಕ್ಕೆ ಹೊಂದಿರುವಂತ ನೂರಾರು ಕುಟುಂಬಗಳು ಕೊಳಚೆ ಪ್ರದೇಶಗಳಲ್ಲಿ ಕಂಡು ಬರುವುದು ಸಾಮಾನ್ಯವಾಗಿದೆ ಈ ಸಂದರ್ಭವನ್ನು ಕಣ್ಣಾರೆ ಕಂಡ ನಂತರ ನಮಗೆ ಒಂದು ರೀತಿಯಲ್ಲಿ ಮನಕಲಕುವಂತ ಪ್ರಸಂಗವೂ ಕಣ್ಣಿ... ನೀರು ತರುತ್ತದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಆಶಯ ಮತ್ತು ಆಹಾರ ಕಾಯ್ದೆ ಹಾಗೂ ಬದುಕುವ ಹಕ್ಕುಗಳನ್ನು ಸರ್ಕಾರಗಳು ಮತ್ತು ಅಲ್ಲಿನ ಅಧಿಕಾರಿ ವರ್ಗದವರು ಗಮನಹರಿಸುವುದಿಲ್ಲ. ವೇನು ಅನಿಸುತ್ತದೆ ಏಕೆಂದರೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಸಂವಿಧಾನಗಳು ಇನ್ನೂ ಜಾರಿಗೊಂಡಿಲ್ಲ ಎನ್ನುವುದು ಇಲ್ಲಿನ ಜನರ ಸ್ಥಿತಿಯನ್ನು ನೋಡಿ ಅನಿಸುತ್ತದೆ. ಹಾಗಾದರೆ ಕೊಳಚೆ ಪ್ರದೇಶದ ಜನರು ತನ್ನ ದಿನನಿತ್ಯದ ಜೀವನ ನಡೆಸುವುದಕ್ಕಾಗಿ ವೃತ್ತಿಗಳನ್ನು ಕಾಯುವುದು ಬೇರೆಬೇರೆ ಪ್ರತಿಷ್ಠಿತ ಕಾಲೋನಿಗಳಲ್ಲಿ ಮನೆ ಕೆಲಸಗಳನ್ನು ಮಾಡುವುದು ಹಾಗೂ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಕೆಲಸಗಳನ್ನು ಮಾಡುವುದು ಹಾಗೂ ಮದುವೆ ಸಮಾರಂಭದ ಮಂಟಪಗಳಲ್ಲಿ ಬೆಳೆಯುವುದು ಮತ್ತು ಅಲ್ಲಿನ ಕೆಲಸಕಾರ್ಯಗಳಲ್ಲಿ ಆಹಾರಗಳನ್ನು ತಮ್ಮ ಮನೆಯ ಮಕ್ಕಳಿಗೆ ಕೊಡುವುದರ ಮೂಲಕ ಖುಷಿಪಡುವುದನ್ನು ನೋಡುತ್ತವೆ ಅಷ್ಟೇ ಅಲ್ಲ ಅವರಿಗೆ ಬಹುಮುಖ್ಯವಾದ ಆಗಿರುತ್ತದೆ ಏಕೆಂದರೆ ಅಲ್ಲಿ ಇರುವಂತಹ ಆಹಾರಗಳು ವಿಭಿನ್ನವಾದ ರಿಂದ ಮಕ್ಕಳಿಗೆ ಮತ್ತು ಮನೆಯವರಿಗೆ ಖುಷಿಕೊಡುತ್ತವೆ ಇವರಿಗೆ ಕೊಟ್ಟವಳು ಆಗಿರುವುದಿಲ್ಲ ಉಳಿದು ಇರುವಂತಹ ಹಾಗೂ ಅಲ್ಲಿ ಇರುವಂತಹ ಸಿಹಿತಿನಿಸುಗಳನ್ನು ಕದ್ದುಮುಚ್ಚಿ ತರುವಂತಹ ಗಳು ಇರುತ್ತವೆ ಹಾಗೂ ಅಲ್ಲಿ ಊಟ ಮಾಡಿದ ನಂತರ ಉಳಿದಂತಹ ಆಹಾರಗಳನ್ನು ಆಹಾರಗಳನ್ನು ಇವರ ಮನೆಗಳಲ್ಲಿ ಮಕ್ಕಳಿಗೆ ಮನೆಯ ನೋಡಿದರೆ ನಿಜವಾಗಲೂ ಇಂತಹ ಜನರು ಸಮಾಜದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಇದ್ದಾರೆ ಎನ್ನುವಂತಹ ಅಂಶವೂ ಬೆಳಕಿಗೆ ಬರುತ್ತದೆ.

             ಕ್ಷೇತ್ರಕಾರ್ಯ ಸಂದರ್ಭದಲ್ಲಿ ಈ ವಿಚಾರಗಳು ಗಮನಕ್ಕೆ ಬರುತ್ತವೆ ಆದರೆ ನಿತ್ಯವೂ ಇವರ ಜೀವನಕ್ಕಾಗಿ ಹಾಗೂ ಪ್ರತಿಷ್ಠಿತ ಕಾಲೋನಿಗಳಲ್ಲಿ ಕೆಲಸ ಮಾಡುವುದು ಮತ್ತು ಮನೆಯ ಕಟ್ಟಡ ಕೆಲಸ ಕಾರ್ಯಗಳನ್ನು ಕೈಗೊಂಡಿರುವುದು ಹೆಚ್ಚಾಗಿ ಕಂಡುಬರುತ್ತದೆ ಅದ್ದರಿಂದ ಸಂದರ್ಭದಲ್ಲಿ ಇವರಿಗೆ ವೃತ್ತಿಗಳು ಇದರಿಂದ ಅಲ್ಲಿನ ಮಹಿಳೆ ಮತ್ತು ಮಕ್ಕಳಿಗೆ ಹಸಿವಿನ ಸಂಕಟ ಎಂದು ತಿಳಿದುಬರುತ್ತದೆ ಈ ಮೇಲೆ ತಿಳಿಸಿರುವಂತೆ ಪ್ರಸಂಗಗಳ ಎಲ್ಲವೂ ನನ್ನ ಕ್ಷೇತ್ರಕಾರ್ಯದ ವ್ಯಾಪ್ತಿಯಲ್ಲಿ ಬರುವಂತಹ ಜನರ ಸ್ಥಿತಿಯನ್ನು ಹಾಗೂ ಅವರ ಬದುಕಿನ ನಿತ್ಯದ ಚಟುವಟಿಕೆಗಳನ್ನು ಸೂಚಿಸುವಂತೆ ಅಂಶಗಳು ಆಗಿರುತ್ತವೆ. ಸ್ಲಂ ಮತ್ತು ಗ್ರಾಮೀಣ ಮಕ್ಕಳ ಅಪೌಷ್ಟಿಕತೆ ಒಂದು ಗಂಭೀರ ಸಮಸ್ಯೆಯಾಗಿ ಪರಿಣಾಮ ಬೀರಿದೆ. ಏಕೆಂದರೆ ಕರೋನಾ ಸಂದರ್ಭದಲ್ಲಿ ಹಂತಹಂತವಾಗಿ ಲಾಕ್‌ಡೌನ್ ಆದ್ದರಿಂದ ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳು ಮುಚ್ಚಿದ್ದರಿಂದ, ಬಡಕುಟುಂಬದ ಲಕ್ಷಾಂತರ ಮಕ್ಕಳಿಗೆ ಸಿಗಬೇಕಾದ ಬಿಸಿಯೂಟ, ಮಹಿಳೆಯರಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ನಿಲ್ಲಿಸಿದ್ದರಿಂದ ಮಕ್ಕಳ ಮತ್ತು ಗರ್ಭಿಣಿ ಮಹಿಳೆಯರಿಗೆ ಕ್ಷೀರಭಾಗ್ಯ, ಗರ್ಭಿಣಿ ಪೌಷ್ಠಿಕತೆಯ ಸಮಸ್ಯೆ ಗಂಭೀರವಾಗಿ ಪರಿಣಾಮ ಬಿರಿತು ಲಾಕ್‌ಡೌನ್ ಮುಗಿದು ಸುಮಾರು ತಿಂಗಳುಗಳಾದರು ಅಂಗನವಾಡಿ ಕೇಂದ್ರಗಳಿಂದ ಆಹಾರದ ಕಿಟ್ಟುಗಳು ಈಗಲೂ ಸರಿಯಾದ ರೀತಿಯಲ್ಲಿ ಪೂರೈಕೆಯಾಗುತ್ತಿಲ್ಲಾ ಆದ್ದರಿಂದ ಕೊಳಚೆ ಪ್ರದೇಶದಲ್ಲಿನ ಮಕ್ಕಳಿಗೆ ಅಲ್ಲಿನ ಜನರಿಗೆ ಅಪೌಷ್ಟಿಕತೆ ಕಾಡಲು ಪ್ರಾರಂಭವಾಯಿತು. ಮತ್ತು ಆದುದರಿಂದ ಒಂದು ಹೊತ್ತು ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಇದೇ ಸಂದರ್ಭದಲ್ಲಿ 2020 Global hunger index results ಈ ಬಾರಿ ಜಾಗತಿಕ ಹಸಿವಿನ ಸೂಚಂಕದ ಅಧ್ಯಯನಕ್ಕಾಗಿ ಪರಿಗಣಿಸಲಾದ 107 ದೇಶಗಳಲ್ಲಿ ಭಾರತವು 94 ನೇ ಸ್ಥಾನವನ್ನು ಪಡೆದಿದೆ ಅಂದರೆ ಕೆಳಗಿನಿಂದ 13 ಸ್ಥಾನಪಡೆದಿದೆ ಎನ್ನುವಂತಹ ವಿಚಾರವು ಈ ವರದಿಯಿಂದ ತಿಳಿದು ಬರುತ್ತದೆ. ಒಂದು ದೇಶದ ಹಸಿವಿನ ಸೂಚ್ಯಂಕವನ್ನು ನಿಗದಿ ಮಾಡಲು ಈ ಅಧ್ಯಯನವು ನಾಲ್ಕು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

  1. ಒಟ್ಟಾರೆ ಅಪೌಷ್ಟಿಕತೆ ದೇಶದ ಜನಸಂಖ್ಯೆಯಲ್ಲಿ ಸೂಕ್ತವಾದ ಪೌಷ್ಟಿಕ ಆಹಾರ ದೊರೆತಿಲ್ಲವಾದರ ಪ್ರಮಾಣ.
  2. ಮಕ್ಕಳಲ್ಲಿ ಎತ್ತರಕ್ಕೆ ತಕ್ಕನಾದ ತೂಕ ಇಲ್ಲದಿರುವಿಕೆ ದೇಶದೊಳಗಿನ ಐದು ವರ್ಷದ ಮಕ್ಕಳಲ್ಲಿ ಎತ್ತರಕ್ಕೆ  ತಕ್ಕನಾದ ತೂಕ   ಇಲ್ಲದಿರುವವರು ಪ್ರಮಾಣ ಏಕೆಂದರೆ ದೂರವಾದ ಅಪೌಷ್ಟಿಕತೆಯಿಂದ ಸಂಭವಿಸುತ್ತದೆ.
  3. ಐದು ವರ್ಷದ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬಂದರೆ ಇದು ದೀರ್ಘಕಾಲದ ಅಪೌಷ್ಟಿಕತೆಯ ಪರಿಣಾಮವಾಗಿದೆ.
  4. ಶಿಶು ಮರಣದ ಪ್ರಮಾಣ ಒಂದು ದೇಶದೊಳಗಿನ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಏಕೆಂದರೆ ಇದು ಅಪೌಷ್ಟಿಕತೆ ಹಾಗೂ ಸಮರ್ಪಕ ಪರಿಸರ ಸಂಭವಿಸುತ್ತದೆ

            ಈ ನಾಲ್ಕು ಅಂಶಗಳನ್ನು ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಿಂದಲೆ ಪಡೆಯಲಾಗಿದೆ. ಈ ರೀತಿ 107 ದೇಶಗಳಲ್ಲಿ ನಡೆಸಲಾದ ಜಾಗತಿಕ ಹಸಿವಿನ ಸೂಚ್ಯಂಕ Global hunger 2020ರ ಭಾರತದಲ್ಲಿ 94 ನೇ ಸ್ಥಾನದಲ್ಲಿದೆ ಒಟ್ಟಾರೆಯಾಗಿ 27.2 ಅಂಕಗಳನ್ನು ಪಡೆದುಕೊಂಡಿರುವ ಭಾರತದ ಪರಿಸ್ಥಿತಿಯನ್ನು ಗಂಭೀರ ಎಂದು ವರದಿಯು ಘೋಷಿಸಿದೆ ಅಪೌಷ್ಟಿಕತೆಯ ಪ್ರಮಾಣ ಸ್ವಲ್ಪವಾದರೂ ಕಡಿಮೆಯಾಗಿರುವುದಕ್ಕೆ ದೇಶದ ಆಹಾರ ಭದ್ರತೆ ಕಾಯ್ದೆಯಮೂಲಕ 2013ರ ನಂತರ ದೇಶದ 67ರಷ್ಟು ಬಡ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತಿರುವ ಒಂದು ಪ್ರಮುಖ ಕಾರಣ ಎನ್ನುವುದು ಇಲ್ಲಿ ಗಮನಿಸಬಹುದಾದ ಒಂದು ಅಂಶ ಆದರೆ ಇದೇ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ಐ.ಸಿ.ಡಿ.ಎಸ್ ಇತ್ಯಾದಿ ಯೋಜನೆಗಳಿಗೆ ಸರ್ಕಾರದ ಅನುದಾನ ತೀವ್ರವಾಗಿ ಕಡಿತ ವಾಗಿರುವುದು ಮಾತ್ರವಲ್ಲದೆ, ಭಾರತದ ಬಹುಪಾಲು ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚುತ್ತಿರುವುದನ್ನು, ಈ ವರದಿಯೇ ಸೂಚಿಸುತ್ತದೆ. ಆದ್ದರಿಂದಲೇ ಈ ವರ್ಷ ಭಾರತ ತನ್ನ ಸ್ಥಾನವನ್ನು ಆಫ್ರಿಕದ ಅತಿ ಕಡುಬಡವ ರಾಷ್ಟ್ರವಾದ ಸುಡಾನ್ ನೊಂದಿಗೆ ಹಂಚಿಕೊಂಡಿದೆ ಅಷ್ಟು ಮಾತ್ರವಲ್ಲದೆ ಭಾರತದ ನೆರೆಹೊರೆ ದೇಶಗಳಾದ ಪಾಕಿಸ್ತಾನ ಶ್ರೀಲಂಕಾ ನೇಪಾಳ ಹಾಗೂ ಬಾಂಗ್ಲಾದೇಶಗಳ ಹಸಿವಿನ ಸೂಚಂಕ ಭಾರತಕ್ಕಿಂತ ಉತ್ತಮವಾಗಿವೆ.

            International food policy research institution IFPRI ನೀತಿಗಳ ಪರಣಿತರ ಸಂಸ್ಥೆಯು ಇತ್ತೀಚೆಗೆ ಭಾರತದ ಗ್ರಾಮೀಣ ಭಾಗಗಳಲ್ಲಿ ಪೌಷ್ಟಿಕ ಆಹಾರದ ಲಭ್ಯತೆ ಹಾಗೂ ಬಳಕೆಯ ಪ್ರಮಾಣದ ಬಗ್ಗೆ ಅಧ್ಯಯನ ಮಾಡಿ ತಮ್ಮ ವರದಿಯನ್ನು ಸ್ವಲ್ಪ ಮುಂಚೆ 2020 ರ ಮಾರ್ಚ್ ನಲ್ಲಿ ಬಿಡುಗಡೆ ಮಾಡಿದೆ ವರದಿಯ ಪ್ರಕಾರ ಭಾರತದಲ್ಲಿ ಶೇಕಡಾ 65% ರಷ್ಟು ಆರೋಗ್ಯವಂತರಾಗಿ ಬಾಳಲು ಅತ್ಯಗತ್ಯವಾಗಿರುವಷ್ಟು ಕ್ಯಾಲೋರಿಗಳನ್ನು ನೀಡುವ ಆಹಾರವನ್ನು ಮಾರುಕಟ್ಟೆಯಿಂದ ಕೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಅಪೌಷ್ಟಿಕತೆ ಹಾಗೂ ಆಹಾರ ಕೊರತೆಯಿಂದಾಗಿ ಭಾರತದಲ್ಲಿ ಶೇಕಡ 40% ರಷ್ಟು ಮಕ್ಕಳು ಬೆಳವಣಿಗೆ ಹಾಗೂ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಇಂತಹ ಗಂಭೀರ ವಿಷಯಗಳನ್ನು ವರದಿಯಿಂದ ತಿಳಿದು ಬರುತ್ತದೆ. ಉದಾಹರಣೆಯಾಗಿ ನೋಡುವುದಾದರೆ 58% ಅಪೌಷ್ಟಿಕ ಮಕ್ಕಳಿಗೆ ಓಖಅ ಇಲ್ಲ ಎನ್ನುವಂತಹ ವರದಿಯು ಸಂಡೂರು ತಾಲೂಕಿನಲ್ಲಿ ಮಾತ್ರ ಕಂಡುಬರುವುದನ್ನು ಗಮನಿಸಬಹುದು.

2. ಕೋವಿಡ್ 19 ಸಂದರ್ಭದಲ್ಲಿ ಶೈಕ್ಷಣಿಕ ತೊಂದರೆಗಳು.

            ಈ ಮೇಲೆ ತಿಳಿಸಿರುವಂತೆ ಅಂಶಗಳು ಅಪೌಷ್ಟಿಕತೆಗೆ ಮಾತ್ರವಾದರೆ ಮತ್ತೊಂದು ಗಂಭೀರ ಸಮಸ್ಯೆ ಪ್ರದೇಶದಲ್ಲಿನ ಮಕ್ಕಳಿಗೆ ಕರೋನಾ ಸಂದರ್ಭದಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿಂತಿದ್ದರಿಂದ ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿಷ್ಕ್ರಿಯಗೊಂಡಿದೆ ಏಕೆಂದರೆ ಕೊರೊನಾ ಸಂದರ್ಭದಲ್ಲಿ ಸರಿಸುಮಾರು ಒಂದು ವರ್ಷಗಳ ಕಾಲ ಮಕ್ಕಳ ಶಿಕ್ಷಣದಲ್ಲಿ ಸ್ಥಗಿತವಾಗಿರುವುದನ್ನು ನಾವು ಕಾಣಬಹುದು. ಅದರಿಂದ ಮಕ್ಕಳ ಮೇಲಾದ ಪರಿಣಾಮವೆಂದರೆ ಶಾಲೆಯಲ್ಲಿ ಕಲಿತ ನಾಲ್ಕಕ್ಷರ ಮರೆತುಹೋಯಿತು. ಕೊಳಚೆ ಪ್ರದೇಶದಲ್ಲಿನ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿತರಾದವರು. ನಂತರ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾದ ಸಂದರ್ಭದಲ್ಲಿ, ಕೊಳಚೆ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಮರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು ಏಕೆಂದರೆ ಸರ್ಕಾರಿ ಶಾಲೆಯಲ್ಲಿ ಮಾಡುವುದೆಂದರೆ ಆಲಸ್ಯವಾದ ಶಿಕ್ಷಕ ವರ್ಗಕ್ಕೆ ಕೊಳಚೆ ಪ್ರದೇಶದಲ್ಲಿನ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡುವುದು ಮತ್ತೊಂದು ಸವಾಲಿನ ಕೆಲಸವು ಕಷ್ಟ ಆದ್ದರಿಂದ ಹಲವಾರು ಕೊಳಚೆ ಪ್ರದೇಶದ ಶಾಲೆಗಳಲ್ಲಿ ಶಕ್ಷಕರ ಕೊರತೆ ಹಾಗೂ ಪೋಷಕರಿಗೆ ಮಕ್ಕಳ ಶಿಕ್ಷಣ ಮತ್ತು ಭವಿಶ್ಯ ಪ್ರಮುಖವಾದುದ್ದರಿಂದ ಸಾವಿರಾರು ಮಕ್ಕಳನ್ನು ತಮಗೆ ಸಮಿಪ ಮತ್ತು ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಶಾಲೆಯಲ್ಲಿನ ಆಡಳಿತ ಮಂಡಳಿಯ ಪೂರ್ಣಪ್ರಮಾಣದ ಪೀ ಕಟ್ಟುವಂತೆ ಆದೇಶ ಹೊರಡಿಸುವುದು ಮತ್ತು ನಿವಾಸಿಗಳ ಜನರಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟವಾದ ದಿನದಲ್ಲಿ ಮಕ್ಕಳಿಗೆ 20ರಿಂದ 30 ಸಾವಿರ ಒಂದೇಸಾರಿ ಹಣವನ್ನು ಪಾವತಿಸುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಆದ್ದರಿಂದ ತುಂಬಾ ಬಡ ತನದಲ್ಲಿ ಇರುವಂತೆ ಮಕ್ಕಳು ಶಾಲೆಗೆ ಹೋಗದೆತಂದೆ-ತಾಯಿಯವರ ಜೊತೆಯಲ್ಲಿ ಕೆಲಸಗಳಿಗೆ ಮತ್ತು ಮನೆಯಲ್ಲಿಯೇ ಇರುವುದನ್ನು ಗಮನಿಸಬಹುದು ಹಾಗೂ ಫಿ ಕಟ್ಟಲು ತೊಂದರೆ ಅನುಭವಿಸಿದಂತಹ ಮಕ್ಕಳು ಹಾಗೂ ಅವರ ಪಾಲಕರು ಪ್ರತಿಭಟನೆಗೆ ತೊಡಗಿರುವುದನ್ನು ಟಿವಿಯಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಿರುವುದು ಕಾಣಬಹುದು ಮತ್ತೊಂದು ಆಘಾತಕಾರಿ ವಿಷಯವೆಂದರೆ ಶಿಕ್ಷಣದಿಂದ ವಂಚಿತರಾಗಲು ಫಿ ಕಟ್ಟಲು ಒಂದು ಕಾರಣವಾದರೆ ಮತ್ತೊಂದು ಕರೋನ ಸಂದರ್ಭದಲ್ಲಿ ಮಕ್ಕಳಿಗೆ ಆನ್‌ಲೈನ ಕ್ಲಾಸ್ ಗಳನ್ನು ಮಾಡಲು ಸರ್ಕಾರ ಆದೇಶ ನೀಡಿದ ಸಂದರ್ಭದಲ್ಲಿ ಸ್ಲಂ ಮತ್ತು ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳು ಮಕ್ಕಳಿಗೆ ಆನ್‌ಲೈನ ತರಬೇತಿಗಾಗಿ ಆಂಡ್ರಾಯ್ಡ್ ಮೊಬೈಲ್ ಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಶಿಕ್ಷಣ ಕೊಡಿಸುವುದು ಒಂದು ಬಹುಮುಖ್ಯ ಸಮಸ್ಯೆ ಆದರೆ ಕರೋನಾ ಸಂದರ್ಭದಲ್ಲಿ ಆನ್‌ಲೈನ ಪಾಠದಿಂದ ಲಕ್ಷಾಂತರ ಗ್ರಾಮೀಣ ಮಕ್ಕಳಿಗೆ ಮೊಬೈಲ್ ಇಲ್ಲದ ಸಮಸ್ಯೆಯೂ ಮತ್ತೊಂದು ಪರಿಣಾಮ ಬೀರಿತು. ಇಂಟರ್ನೆಟ್ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ಕಾಡತೊಡಗಿದ್ದು ಅದೇ ಸಂದರ್ಭದಲ್ಲಿ ಕೊಳಚೆ ಪ್ರದೇಶದ ಮಕ್ಕಳಿಗೆ ಆಂಡ್ರಾಯ್ಡ್ ಮೊಬೈಲ್‌ ಸಮಸ್ಯೆ ತುಂಬಾ ಕಾಡತೊಡಗಿತ್ತು ಎನ್ನುವಂತಹ ವಿಚಾರಗಳು ಪತ್ರಿಕೆ ಮತ್ತು ಟಿವಿಯಲ್ಲಿ ಪ್ರಕರಣಗಳು ಬೆಳಕಿಗೆ ಬಂದವು ಉದಾಹರಣೆಗೆ ನೋಡುವುದಾದರೆ ಮನೆಯ   ನಿರ್ವಹಣೆಗಾಗಿ ಸಾಕಿಕೊಂಡ ಹಸುಗಳನ್ನು ಮಾರುವುದು ಒಂದುಕಡೆಯಾದರೆ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲೇಬೇಕು ಎಂಬುವಂತಹ ಆಸೆಯನ್ನು ಹೊಂದಿದಂತಹ ಬಡಕುಟುಂಬಗಳು ತಾಯಿ ಮಾಂಗಲ್ಯವನ್ನು ಮಾರಿ ಮತ್ತು ಮಾಂಗಲ್ಯವನ್ನು ಒತ್ತೆಯಿಟ್ಟು ಶಿಕ್ಷಣ ಕೊಡಿಸುವುದು, ಒಂದಡೆಯಾದರೆ ತಂದೆ ತನಗೆ ಉಳಿದಿರುವಂಥ ಸಣ್ಣಪುಟ್ಟ ಆಸ್ತಿಗಳನ್ನು ಮಾಡಿರುವಂತಹ ಘಟನೆಗಳನ್ನು ಮತ್ತು ಪತ್ರಿಕೆಗಳಲ್ಲಿ ನಾವು ಗಮನಿಸಿದ್ದೇವೆ. ಇವು ವರದಿಯಾದ ಅಂಶಗಳ ಆದರೆ ವರದಿಯಾಗದೇ ಇರುವಂತಹ ಸಾವಿರಾರು ಪ್ರಕರಣಗಳು ದೇಶದಲ್ಲಿ, ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಂತಹ ಸಂದರ್ಭದಲ್ಲಿ ಆದಂತಹ ಬಹುದೊಡ್ಡ ಸಮಸ್ಯೆಯಾಗಿ ತೊಡಕಾಗಿದೆ ಎಂದು ತಿಳಿದುಬರುತ್ತದೆ ಹಾಗೂ ಈ ಎಲ್ಲಾ ಕಷ್ಟಗಳನ್ನು ತಮಗೆ ಇರಲಿ ಎಂದು ಭಾವಿಸಿ ಮೊಬೈಲ್ ಕೊಡಿಸಿದ ನಂತರ ಆನ್‌ಲೈನ್‌ ಪಾಠದಿಂದ ಮಕ್ಕಳ ಮೇಲೆ ಅದರ ಪರಿಣಾಮವು ಮತ್ತೊಂದು ರೋಚಕ ಮಕ್ಕಳ ದೃಷ್ಟಿ ದೋಷ ಸಮಸ್ಯೆ ಕಾಡತೊಡಗಿತು ಎನ್ನುವಂತಹ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ ಇದು ಯಾವ ರೀತಿ ಎಂದರೆ ಆಫಲೈನ್ ಶಿಕ್ಷಣ ಆದನಂತರ ಮಕ್ಕಳಲ್ಲಿನ ಅಕ್ಷರ ಸರಿಯಾಗಿ ಕಾಣದ ವಿಚಾರವೂ ಬೆಳಕಿಗೆ ಬಂತು ಮೂವತ್ತರಿಂದ ನಲವತ್ತರಷ್ಟು ಸಮಸ್ಯೆ ಇದೆ ಎನ್ನುವುದನ್ನು ತಿಳಿಸುತ್ತದೆ ಇದು ಆನ್‌ಲೈನ್ ಶಿಕ್ಷಣದಿಂದ ಸಮಸ್ಯೆ ಆದರೆ ಕೊಳಚೆನ ಪ್ರದೇಶದ ಜನರ ಬಹುಮುಖ್ಯವಾಗಿ ದಿನನಿತ್ಯ ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಳ್ಳುವ ಸ್ಥಿತಿಗೆ ಕಷ್ಟ ಆದರೆ ಹತ್ತರಿಂದ ಇಪ್ಪತ್ತು ಸಾವಿರ ಕಟ್ಟಲೇಬೇಕು ಎಂಬುವಂತಹ ಒಂದು ಖಾಸಗಿ ಶಾಲೆಯ ಒಂದು ಮಾನದಂಡದಿಂದ ಸಾವಿರಾರು ವಿದ್ಯಾರ್ಥಿಗಳು ಶಾಲೆಯನ್ನು ಬಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಶಾಲೆಯ ಡೊನೇಶನ್ ವಿರುದ್ಧ ದೊಡ್ಡ ಧ್ವನಿಯಾಗಿ ಬೆಂಗಳೂರು ಮತ್ತು ಇತರೆ ಬೇರೆ-ಬೇರೆ ಜಿಲ್ಲೆಗಳಲ್ಲಿ ತಮ್ಮ ಮಕ್ಕಳಿಗೆ ಅನ್ಯಾಯವಾಗುತ್ತದೆ ಆದ್ದರಿಂದ ಪಿ ಕಡಿತಗೊಳಿಸಿ ಎನ್ನುವಂತಹ ಪ್ರತಿಭಟನೆಗಳು ತುಂಬಾ ನಡೆದರೂ ಅದು ಸಾಧ್ಯವಾಗಲಿಲ್ಲ. ಈ ಸಮಸ್ಯೆಯಿಂದ ಸಾವಿರಾರು ಮಕ್ಕಳು ಶಾಲೆಯನ್ನು ಬಿಟ್ಟು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡಿರುವುದನ್ನು ನಗರ ಪ್ರದೇಶದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈಗಲೂ ನಾವು ಕಾಣಬಹುದಾಗಿದೆ ಏಕೆಂದರೆ ನಂತರ ಎರಡು ಮೂರು ತಿಂಗಳಿಗೆ 20ರಿಂದ 30 ಸಾವಿರ ಹಣವನ್ನು ಕೊಡುವುದು ಬಡಕುಟುಂಬಗಳಿಗೆ ಅದರಲ್ಲೂ ನಗರ ಪ್ರದೇಶದ ಕೊಳಚೆ ಪ್ರದೇಶದಲ್ಲಿನ ಕುಟುಂಬಗಳಿಗೆ ತುಂಬಾ ಕಷ್ಟವಾಗುತ್ತದೆ. ಶಿಕ್ಷಣಕ್ಕೆ ಸಂಬಂಧಿತ ಮಾಹಿತಿ ಕೊಚಿ ಪ್ರದೇಶದ ಮಕ್ಕಳು ಶಿಕ್ಷಣವು ಸಾಮಾನ್ಯವಾಗಿ ತುಂಬಾ ನಿರಾಶದಾಯಕ ಫಲಿತಾಂಶ ಹಾಗಿದೆ ಅದರಲ್ಲೂ ಸಂದರ್ಭದಲ್ಲಿ ಮತ್ತಷ್ಟು ಗಂಭೀರವಾಗಿದೆ ಕಾರಣ ಮೇಲೆ ತಿಳಿಸಿರುವಂತೆ ನಲ್ಲಿ ಶಾಲೆಕಾಲೇಜು ಇಲ್ಲ ಅಂದ್ರು ಖಾಸಗಿ ಶಾಲೆಗಳಿಗೆ ಹರ್ದಫ ಕಟ್ಟಿ ಎನ್ನುವಂತಹ ಎನ್ನುವಂತಹ ಒಂದು ವಿಚಾರವು ತುಂಬಾ ಮಕ್ಕಳು ಶಾಲೆಯಿಂದ ವಂಚಿತರಾಗುವುದು ಕ್ಕೆ ಕಾರಣವಾಯಿತು ಏಕೆಂದರೆ ಬಡಕುಟುಂಬಗಳು20ಗಿಂದ 30 ಸಾವಿರ ಹಣವನ್ನು ಕಟ್ಟುವುದರ ಕಟ್ಟುವುದು ಲಕ್ಷಾಂತರ ಮಕ್ಕಳು ಶಾಲೆಯಿಂದ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ವಿಶೇಷವಾಗಿ ಕೊಳಚೆ ಪ್ರದೇಶಗಳಲ್ಲಿ ಕಂಡುಬರುವುದು ಕಂಡು ಬಂದಿರುವುದನ್ನು ಗಮನಿಸಬಹುದು ಆದರೆ ಶಾಲೆ ಬಿಟ್ಟ ಮಕ್ಕಳು ಮನೆಯಲ್ಲಿ ಕೂಡಲಿಲ್ಲ ತಂದೆತಾಯಿಯರ ಜೊತೆಗೆ ಸಣ್ಣಪುಟ್ಟ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿರುವುದನ್ನು ಗಮನಿಸಬಹುದು ಅವುಗಳೆಂದರೆ ಎಪಿಎಂಸಿ ಹೋಟೆಲ್ ಸಿನಿಮಾ ಮಂದಿರಗಳಲ್ಲಿ ಹಾಗೂ ಮದುವೆ ಸಮಾರಂಭ ಸಂದರ್ಭಗಳಲ್ಲಿ ಮಕ್ಕಳು ತಮ್ಮ ತಮ್ಮ ಕುಟುಂಬದವರಿಗೆ ಸ್ವಲ್ಪ ಸಹಾಯ ಆಗುವುದನ್ನು ಇಲ್ಲಿ ಗಮನಿಸಬಹುದು ಅಷ್ಟೇ ಅಲ್ಲದೆ ದುಡಿಯುವಂತಹ ಮಕ್ಕಳು ತಮ್ಮ ಕುಟುಂಬಕ್ಕೆ ಅರ್ಧ ಹಣವನ್ನು ನೀಡಿ ಅರ್ಧ ಹಣವನ್ನು ತಮ್ಮ ದಿನನಿತ್ಯದ ಖರ್ಚುಗಳಿಗಾಗಿ ಉಳಿಸಿಕೊಳ್ಳುವುದು ಒಂದು ಪರಿಪಾಠ ವಾಯಿತು ಆದರೆ ಇಲ್ಲಿ ಬಹುಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಅವರ ತಂದೆತಾಯಿ ಯಾವುದೇ ತಕರಾರು ಇಲ್ಲದೆ ಮಕ್ಕಳನ್ನು ಒಪ್ಪಿಕೊಂಡು ಗಳನ್ನು ಬಳಸಿಕೊಂಡು ಮಕ್ಕಳಿಗೆ ಯಾವುದೇ ರೀತಿಯಾದ ಶಿಕ್ಷಣದ ಅರಿವು ಹಾಗೂ ಮಕ್ಕಳಿಗೆ ಮುಂದಿನ ದಿನಮಾನಗಳಲ್ಲಿ ಶಿಕ್ಷಣದಿಂದ ಬರಬಹುದಾದಂತಹ ಕುರಿತು ಮಾಹಿತಿಯನ್ನು ನೀಡಲಿಕ್ಕೆ ಕುಟುಂಬಗಳು ನಾವು ಗಮನಿಸಬಹುದು ಅದರಲ್ಲೂ ವಿಶೇಷವಾಗಿ ಬಾಪೂಜಿ ಈ ನಗರ ಶ್ರೀರಾಂಪುರಂ ಕಾಲೋನಿ ಪ್ರದೇಶಗಳಲ್ಲಿ ಹೆಚ್ಚಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವ ನಮ್ಮ ಗಮನಕ್ಕೆ ಬಂದಿರುವುದು ತಿಳಿಯುತ್ತದೆ 16 ವರ್ಷದ ಮಕ್ಕಳನ್ನು ಸುಮಾರು 20 ಮಕ್ಕಳನ್ನು ನಾನು ಕೇಳಿದ ಸಂದರ್ಭದಲ್ಲಿ ಉತ್ತರಗಳು ದೊರೆಯುತ್ತವೆ ಶಿಕ್ಷಣವಂಚಿತ ನೂರಾರು ಮಕ್ಕಳಿಗೆ ಮಕ್ಕಳಿಗೆ ಶಿಕ್ಷಣ ಪಡೆದ ಹಾಗೂ ಕಾನೂನು ತಿಳುವಳಿಕೆ ಇರುವಂತಹ ಜನರು ಮಕ್ಕಳನ್ನು ಯಾವ ರೀತಿಯಾಗಿ ಬಳಸಿಕೊಂಡಿದ್ದಾರೆ ಎನ್ನುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬಹುದು ಒಂದು ರಾಜ್ಯದ ಏಳಿಗೆಗಾಗಿ ಇಂತಹ ಮಕ್ಕಳನ್ನು ಪ್ರಚಾರ ಸಂದರ್ಭದಲ್ಲಿ ಹಾಗೂ ಅವರ ದೌರ್ಜನ್ಯದ ರೀತಿಯಲ್ಲಿ ಮಕ್ಕಳನ್ನು ತೊಡಗಿಸಿಕೊಂಡಿರುವುದನ್ನು ಕೂಡ ಇಲ್ಲಿ ಗಮನಿಸಬಹುದು ಇದನ್ನು ಪ್ರಶ್ನಿಸುವಂತಹ ಅಲ್ಲಿನ ಜನರಿಗೆ ಕಾನೂನಿನ ಪ್ರಜ್ಞೆ ಇಲ್ಲದಿರುವುದು  ಮತ್ತು ಸಾಮಾನ್ಯ ಶಿಕ್ಷಣ ಇಲ್ಲದಿರುವುದು ಪೋಷಕರಲ್ಲಿ ಇರುವಂತಹ ಒಂದು ಬಹುಮುಖ್ಯ ತೊಡಗು ಆಗಿರುತ್ತದೆ ಏಕೆಂದರೆ ಮಕ್ಕಳು ದುಡಿ ಎನ್ನುವ ಒಂದೇ ಒಂದು ವಿಚಾರದಿಂದ ಮಕ್ಕಳನ್ನು ನೋಡಿದರೆ ಮಕ್ಕಳು ಯಾವ ರೀತಿಯ ಕೆಲಸ ಕಾರ್ಯಗಳು ಇದ್ದಾರೆ ಎನ್ನುವುದು ಅವರ ತಂದೆ ತಾಯಿಗೆ ಒಂದು ವಿಷಯವಾಗಿದೆ ಇಂತಹ ಸಂದರ್ಭದಲ್ಲಿ ಬೇರೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ನಾನು ಸೂಕ್ಷ್ಮವಾಗಿ ಗಮನಿಸಬಹುದು ಇಂತಹ ಸಮಸ್ಯೆಗಳು ಹಬ್ಬವಾಗಲಿಕ್ಕೆ ಪ್ರಮುಖ ಕಾರಣ ಪೋಷಕರಿಗೆ ಶಿಕ್ಷಣದ ಕೊರತೆ ಹಾಗೂ ಕಾನೂನಿನ ಅರಿವು ಇಲ್ಲದಿರುವುದು ಎಂಬ ಅಂತ ವಿಚಾರ ಮತ್ತೆ ಮತ್ತೆ ಕೇಳಿಬರುತ್ತದೆ ಅದರಲ್ಲೂ ಕೋವಿಡ್ ಸಂದರ್ಭದ ಮೇಲೆ ಸಮಸ್ಯೆಗಳಿಗೆ ಮತ್ತಷ್ಟು ಪುಷ್ಟಿ  ಕೊಟ್ಟಂತೆ ಆಯಿತು ಎನ್ನುವಂತಹ ವಿಚಾರವು ನಾನು ಕಣ್ಣಾರೆ ಕಂಡು ಸತ್ಯಾಂಶವೂ ಆಗಿರುತ್ತವೆ. ಸಮೂಹ ಮಾಧ್ಯಮಗಳಲ್ಲಿ ವರದಿಯಾಗಿವೆ ಕೋವಿಡ ಸಂದರ್ಭವೂ ಮಕ್ಕಳ ಮೇಲೆ ಈ ರೀತಿ ಅಂತಹ ಪರಿಣಾಮವನ್ನು ಬೀರಿದೆ ಎನ್ನುವುದು ಇಲ್ಲಿ ಗಮನಿಸಬಹುದು ಹಾಗೂ ವಾಸ್ತವವೂ ಆಗಿರುತ್ತದೆ ಆದ್ದರಿಂದ ಶೈಕ್ಷಣಿಕ ಸಮಸ್ಯೆ ಮತ್ತು ಅಪೌಷ್ಟಿಕತೆ ಸಮಸ್ಯೆ ಕೊಳಚೆ ಪ್ರದೇಶ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜೀವಂತವಾಗಿರುವುದು ಕಂಡುಬರುತ್ತದೆ.                                      

ಸಮಾರೋಪ

            ಕೋವಿಡ್ 19 ರ ಸಂದರ್ಭದಲ್ಲಿ ಉಂಟಾದಂತಹ ತೊಂದರೆಗಳಿಗೆ ಜನರು ನಡುಗಿಹೋದರು ಅಲ್ಲಿನ ಮಕ್ಕಳ ಆಹಾರ ಮತ್ತು ಶಿಕ್ಷಣವನ್ನು ಕಿತ್ತುಕೊಂಡ ರೀತಿ ತುಂಬಾ ಹೆಚ್ಚಿನ ಮಟ್ಟದ ಪ್ರಭಾವ ತಿಳಿವುದು ಈ ಲೇಖನದ ಮುಖ್ಯ ಆಶಯವಾಗಿದೆ,  ಈ ಮೇಲೆ ತಿಳಿಸಲಾದ ವರದಿಗಳು ಕ್ಷೇತ್ರ ಕಾರ್ಯದಲ್ಲಿ ಕಂಡುಬಂದಂತಹ ಜನರ ನೋವಿನ ಮಾತುಗಳು ಈ ಸಂದರ್ಭದಲ್ಲಿ ಆಹಾರ ಮತ್ತು ಮಕ್ಕಳ ಶಿಕ್ಷಣದ ಮೇಲೆ ಆದಂತ ತೊಂದರೆಗಳನ್ನು ಅವರ ಮಾತುಗಳಲ್ಲಿ ತಿಳಿಸುವುದು ಒಟ್ಟಾರೆಯಾಗಿ ಕೋವಿಡ್-19 ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಮತ್ತು ಆಹಾರ ಕಿತ್ತುಕೊಂಡರೆ ಇದು ಒಂದು ಕಡೆಯಾದರೆ ಕೋಟ್ಯಾಂತರ ಜನರು ಉದ್ಯೋಗವನ್ನು ಕಳಕೊಂಡಿದ್ದು ಮತ್ತೊಂದು ದುರಂತವೇ ಸರಿ ಎನ್ನುವುದು ಹಾಗೂ ಅವರಿಗೆ ಒಂದು ದಿನ ಊಟಕ್ಕಾಗಿ ಮತ್ತು ಆರೋಗ್ಯದ ವಿಷಯಕ್ಕೆ ಬಂದರೆ ಬಹುದೊಡ್ಡ ತೊಂದರೆಗಳನ್ನು ಇಲ್ಲಿನ ಜನರು ಅನುಭವಿಸಿರುವುದು ತಿಳಿದುಬರುತ್ತದೆ.

ಪರಾಮರ್ಶನ ಗ್ರಂಥಗಳು

  1. 2020 Global hunger index results.
  2. ಕ್ಷೇತ್ರಕಾರ್ಯದ ಅನುಭವಗಳ ಮಾಹಿತಿ.
  3. ಅಂತರ್ಜಾಲಆಧಾರಿತ ಮಾಹಿತಿ.
  4. ಕೋವಿಡ್ 19 ರ ಸಂದರ್ಭದಲ್ಲಿ ಕನ್ನಡ ದಿನಪತ್ರಿಕೆಗಳು ಮಾಹಿತಿ. 


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal