Sufi saints in inscriptions.
Khajasab1
1Research Fellow, Department of Kannada Literary Studies, Kannada University, Hampi, Vidyaranya 583 276
khajasabk00@gamil.com
Abstract
Inscriptions that mention the existence of Sufi saints in the history of Karnataka are traces of history. Along with Kannada inscriptions, Persian, Arabic and Urdu inscriptions have naturally come to light. References to Sufi saints are sparse in these inscriptions. These are mostly Persian, Arabic and Urdu language inscriptions. The Bhakti cult flourished in the medieval and post-medieval Deccan (southern India). 'Sufi' means empiricist, yogi, siddhi. This article is part of the understanding that Sufis are not recognized in the cultural settings of ancient Karnataka in the inscriptions. Veeragallu, mastigallu, nishedigallu and battle descriptions of kings, religious, social and political ideas are found in the inscriptions. Islamic rulers mostly used kafiyyats, baykhairs and names, farmans for writing. He was familiar with paper and had a sense of history, but the premise of this paper is that there were inscriptions on Sufi saints at a time when there was a growing understanding that there were no inscriptions. Its scope is 'Persian Arabic and Urdu Inscriptions of Karnataka' no. M. Yasin Khaddoosi and Sitarama Jagirdar, centered the Legislature. Includes observation and analysis method. Statutory volumes are noted as sources. There is little chance of studies of Sufi saints in inscriptions. It is my understanding that such writings are complementary. So why are Sufi saints found in inscriptions? Knowing that, the lineage details of the Sufi saints, the details submitted by Harake and the references made by the Sufi Khan-kha (Sufi Ashram) and the news of the death of the Sufi saints along with going on pilgrimages are available. References are found to Sufis of the 'Qadriya', 'Qalandaria' and 'Darwesh' traditions of Sufi sects. It is an unfortunate fact that such Sufis are also mentioned in the inscriptions, but this article aims to note that although it is less frequent. The information available about him in inscriptions in Persian and Urdu languages is given in Appendix (3).
Keywords: Inscription, Sufi Saints, Arabic, Urdu Inscriptions, Qadri, Qalandari.
ಶಾಸನಗಳಲ್ಲಿ ಸೂಫಿ ಸಂತರು
ಖಾಜಾಸಾಬ1
1ಸಂಶೋಧನ ವಿದ್ಯಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬
khajasabk00@gamil.com
ಪ್ರವೇಶ
ಕರ್ನಾಟಕದ ಚರಿತ್ರೆಯಲ್ಲಿ ಸೂಫಿ ಸಂತರ ಅಸ್ತಿತ್ವವನ್ನು ತಿಳಿಸುವ ಶಾಸನಗಳು ಇತಿಹಾಸದ ಕುರುಹುಗಳಾಗಿವೆ. ಕನ್ನಡ ಶಾಸನಗಳ ಜೊತೆಗೆ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು ಬೆಳಕಿಗೆ ಬಂದದ್ದು ಸಹಜವಾಗಿವೆ. ಈ ಶಾಸನಗಳಲ್ಲಿ ಸೂಫಿ ಸಂತರ ಉಲ್ಲೇಖಗಳು ಅಲ್ಪ ಪ್ರಮಾಣದಲ್ಲಿ ದೊರೆಯುತ್ತವೆ. ಇವುಗಳು ಬಹುತೇಕ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಭಾಷೆಯ ಶಾಸನಗಳಾಗಿವೆ. ಮಧ್ಯಕಾಲೀನ ಮತ್ತು ಮಧ್ಯಕಾಲೀನೋತ್ತರ ದಖ್ಖನ (ದಕ್ಷಿಣ ಭಾರತ) ಭಾಗದಲ್ಲಿ ಭಕ್ತಿ ಪಂಥ ಬೆಳೆಯಿತು. ‘ಸೂಫಿ’ ಎಂದರೆ ಅನುಭಾವಿ, ಯೋಗಿ, ಸಿದ್ಧಿ ಎಂದರ್ಥ. ಶಾಸನಗಳಲ್ಲಿ ಪ್ರಾಚೀನ ಕರ್ನಾಟಕದ ಸಾಂಸ್ಕೃತಿಕ ನೆಲೆಗಳಲ್ಲಿ ಸೂಫಿಗಳನ್ನು ಗುರುತಿಸಿಲ್ಲ ಎಂಬ ತಿಳುವಳಿಕೆಯ ಭಾಗವಾಗಿ ಈ ಲೇಖನ. ವೀರಗಲ್ಲುಗಳು, ಮಾಸ್ತಿಗಲ್ಲುಗಳು, ನಿಷೇದಿಗಲ್ಲುಗಳು ಮತ್ತು ರಾಜರ ಯುದ್ಧ ವರ್ಣನೆಗಳು, ಧಾರ್ಮಿಕ, ಸಾಮಾಜಿಕ, ರಾಜಕೀಯ ವಿಚಾರಗಳು ಶಾಸನಗಳಲ್ಲಿ ಕಂಡು ಬರುತ್ತವೆ. ಇಸ್ಲಾಂ ದೊರೆಗಳು ಬರವಣಿಗೆಗೆ ಹೆಚ್ಚಾಗಿ ಕೈಫಿಯತ್ತುಗಳು, ಬೈಖೈರುಗಳು ಮತ್ತು ನಾಮೆಗಳು, ಫರ್ಮಾನುಗಳನ್ನು ಬಳಸುತ್ತಿದ್ದರು. ಅವರಿಗೆ ಕಾಗದದ ಪರಿಚಯವಿತ್ತು ಜೊತೆಗೆ ಇತಿಹಾಸ ಪ್ರಜ್ಞೆ ಇತ್ತು, ಆದರೆ ಶಾಸನಗಳು ಇಲ್ಲ ಎಂಬ ತಿಳುವಳಿಕೆಯೇ ಹೆಚ್ಚಾಗಿದ್ದ ಕಾಲದಲ್ಲಿ ಸೂಫಿ ಸಂತರ ಕುರಿತ ಶಾಸನಗಳು ಇದಾವೆ ಎಂಬುವುದೇ ಈ ಬರಹದ ಪ್ರಮೇಯವಾಗಿದೆ. ಇದರ ವ್ಯಾಪ್ತಿಯು ‘ಕರ್ನಾಟಕದ ಪರ್ಶಿಯನ್ ಅರೇಬಿಕ್ ಮತ್ತು ಉರ್ದು ಶಾಸನಗಳು’ ಸಂ. ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ, ಶಾಸನ ಸಂಪುಟವನ್ನು ಕೇಂದ್ರಕರಿಸಿದೆ. ಅವಲೋಕನ ಮತ್ತು ವಿಶ್ಲೇಷಣ ವಿಧಾನ ಒಳಗೊಂಡಿದೆ. ಆಕರಗಳಾಗಿ ಶಾಸನ ಸಂಪುಟಗಳನ್ನು ಗಮನಿಸಲಾಗಿದೆ. ಶಾಸನಗಳಲ್ಲಿ ಸೂಫಿ ಸಂತರ ಅಧ್ಯಯನಗಳು ನಡೆದಿರುವ ಸಾಧ್ಯತೆಗಳು ಕಡಿಮೆ. ಅಂತಹ ಬರಹಗಳಿಗೆ ಪೂರಕವಾಗಿದೆ ಎಂಬುದು ನನ್ನ ಗ್ರಹಿಕೆಯಾಗಿದೆ. ಅಷ್ಟಾಗಿ ಯಾವ ಎಲ್ಲ ಕಾರಣಕ್ಕೆ ಸೂಫಿ ಸಂತರು ಶಾಸನಗಳಲ್ಲಿ ಸಿಗುತ್ತಾರೆ? ಎಂದು ಅರಿತಾಗ, ಸೂಫಿ ಸಂತರ ವಂಶದ ವಿವರಗಳು, ಹರಕೆ ಸಲ್ಲಿಸಿದ ವಿವರಗಳು ಮತ್ತು ಸೂಫಿ ಖಾನ್-ಖಾ(ಸೂಫಿ ಆಶ್ರಮ) ನಿಮಾರ್ಣ ಮಾಡಿಸಿದ ಉಲ್ಲೇಖಗಳು ಹಾಗೂ ಯಾತ್ರೆಗೆ ಹೊರಟ ಜೊತೆಗೆ ಸೂಫಿ ಸಂತರ ನಿಧನದ ಸುದ್ದಿಗಳು ದೊರೆಯುತ್ತವೆ. ಸೂಫಿ ಪಂಥದ ‘ಖಾದ್ರಿಯ’, ‘ಖಲಂದರಿಯ’ ಮತ್ತು ‘ದರ್ವೇಶ್’ ಪರಂಪರೆಯ ಸೂಫಿಗಳ ಉಲ್ಲೇಖಗಳು ಸಿಗುತ್ತವೆ. ಇಂತಹ ಸೂಫಿಗಳು ಶಾಸನಗಳಲ್ಲಿಯೂ ಉಲ್ಲೇಖಗೊಂಡಿರುವುದು ಗಮರ್ನಾಹ ಸಂಗತಿಯಾಗಿದೆ, ಆದರೆ ಅದು ಕಡಿಮೆ ಪ್ರಮಾಣದಲ್ಲಿದೆ ಆದರೂ ಅದನ್ನು ಗಮನಿಸುವ ಉದ್ದೇಶವನ್ನು ಈ ಲೇಖನವೂ ಹೊಂದಿದೆ. ಪರ್ಶಿಯನ್ ಮತ್ತು ಉರ್ದು ಭಾಷೆಯಲ್ಲಿರುವ ಶಾಸನಗಳಲ್ಲಿನ ಇವರ ಕುರಿತು ಸಿಗುವ ಮಾಹಿತಿಯನ್ನು ಅನುಬಂಧ(೩)ರಲ್ಲಿ ನೀಡಿರಲಾಗಿರುತ್ತದೆ.
ಕೀವರ್ಡ್ಗಳು: ಶಾಸನ, ಸೂಫಿ ಸಂತರು, ಅರೇಬಿಕ್, ಉರ್ದು ಶಾಸನಗಳು, ಖಾದ್ರಿಯ, ಖಲಂದರಿಯ
ಶಾಸನಗಳಲ್ಲಿ ಉಲ್ಲೇಖಗೊಂಡ ಸೂಫಿ ಸಂತರು
೧. ದಾದಾ ಹಯಾತ್ ಮೀರ್ ಖಲಂದರ್
೨. ಹಜರತ್ ಖ್ವಾಜಾ ಸಿರಾಜುದ್ದೀನ್ ಜುನೈದಿ
೩. ಮುನ್ಷಿ ಷಾಃ ಮೊಹಮ್ಮದ್ ಜಲಾಲ ಖಾದ್ರಿ
೪. ಅಲೀ ಅಸ್-ಸೂಫೀ
೫. ಮೊಹಮ್ಮದ್ ಹುಸೈನೀ ಗೇಸುದರಾಜ (ಖ್ವಾಜಾ ಬಂದು/ಬಂದೆ ನವಾಜ)
೬. ಸೂಫಿ ಸಂತ ಮೊಹಮ್ಮದ್ ಸಯ್ಯಿದ್ ಷಾಃ ಮಲ್ಲಿಕ್ ಅಲ್-ಖಾದ್ರಿ
೭. ಶ್ರೀ ಸಯ್ಯಿದ್ ಉಸ್‌ಮಾನ್
೧. ದಾದಾ ಹಯಾತ್ ಮೀರ್ ಖಲಂದರ್
ಇವರ ಕುರಿತ ಶಾಸನವು ಚಿಕ್ಕಮಂಗಳೂರ ಜಿಲ್ಲೆಯ ಬುಡನ್‌ಗಿರಿಯಲ್ಲಿ ದಾದಾ ಹಯತ್ ಖಲಂದರವರ ಗುಹೆಯ ಹೊರಗಡೆ ಕಲ್ಲಿನ ಮೇಲೆ ಬರೆಯಲಾಗಿದೆ. ಇದು ಪರ್ಶಿಯನ್ ಭಾಷೆಯ ಪದ್ಯ ರೂಪದಲ್ಲಿದೆ. “ ಆ.ಹಿ ೩೯೬ ಅಂದರೆ ಕ್ರಿ.ಶ. ೧೦೦೫-೧೦೦೬ ತೇದಿ ಆ ಸಮಯದಲ್ಲಿ ಅವರಿಗೆ ಗುಹೆಯನ್ನು ನಿರ್ಮಾಣ ಮಾಡಲಾಗಿದೆ”(ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ (ಸಂ):೨೦೦೧:೧೪೦). ಎಂದು ಉಲ್ಲೇಖವಾಗಿದೆ, ದಾದಾ ಎಂದರೆ-ಹಿರಿಯ ಗುರು, ಹಯಾತ್ ಎಂದರೆ-ದೀರ್ಘಾಯುಷ್ ಹೊಂದಿದವನು, ಖಲಂದರ ಎಂದರೆ- ಸೂಫಿ ಪರಂಪರೆ. ಇವರು ಅರಬ್‌ನಿಂದ ಬಂದವರು ಮತ್ತು ‘ಕಾಫಿ’ ಬೀಜಗಳನ್ನು ತಂದು ಬೆಳೆಸಿದವರು. ದಕ್ಷಿಣ ಕರ್ನಾಟಕದ ಪ್ರಮುಖ ಸೂಫಿ ಸಂತರಲ್ಲಿ ಒಬ್ಬರು. ಬಾಬಾ ಬುಡನ್‌ಗಿರಿ ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಇವರ ಮತ್ತು ಶಿಷ್ಯರ ಗೋರಿಗಳಿವೆ.
೨. ಹಜರತ್ ಖ್ವಾಜಾ ಸಿರಾಜುದ್ದೀನ್ ಜುನೇದಿ
ಹಜರತ್ ಖ್ವಾಜಾ ಸಿರಾಜುದ್ದೀನ್ ಜುನೇದಿಯವರ ಮೇಲೆ ಬೆಳಕು ಚಲ್ಲುವ ಈ ಶಾಸನವು ಪರ್ಶಿಯನ್ ಭಾಷೆಯಲ್ಲಿದೆ. ಇದು ಗುಲ್ಬರ್ಗ ಜಿಲ್ಲೆಯ “ಖ್ವಾಜಾ ಸಿರಾಜುದ್ದೀನ್ ಜುನೈದಿ ಅವರ ಸಮಾಧಿ ಕಟ್ಟಡದ ಪ್ರಕಾರದ ಹೊಕ್ಕು ಬಾವಿಯಲ್ಲಿ ದೊರೆತಿದೆ. ಸಂತರ ದರ್ಶನಕ್ಕೆ ಬರುವ ಯಾತ್ರಿಗಳಿಗೆ ಉಪಯೋಗಕ್ಕೆಂದು ಈ ಬಾವಿಯನ್ನು ತುರುಕರ ಮುಖ್ಯಸ್ಥ-ಅಬು ಮೊಹಮ್ಮದ್ ತಬ್ರಿಜಿ ಎಂಬವನಿಂದ ಮೊಹಮ್ಮದ್ ಖಾನ ಅಲಿಯವರ ಪುತ್ರ ಖ್ವಾಜಾ ಕಬೀರ ಅವರ ನೇತೃತ್ವದಲ್ಲಿ ಮೊಹಮ್ಮದ್ ಷಾಃ ಬಹುಮನಿ ದೊರೆಯ ಆಳ್ವಿಕೆಯ ಕಾಲದಲ್ಲಿ ಆ.ಹಿ ೭೬೮ ಷಾಬನ್ ೧೦ ಎಂದರೆ ಕ್ರಿ.ಶ ೧೩೬೭ ಏಪ್ರಿಲ್ ೧೧ ರಂದು ಕಟ್ಟಿ ಸಂಪೂರ್ಣಗೊಳಿಸಲಾಯಿತೆಂದು”(ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ (ಸಂ):೨೦೦೧:೧೬೦). ಈ ಶಾಸನ ತಿಳಿಸುತ್ತದೆ. ಈ ಶಾಸನದಲ್ಲಿ ಬಹುಮನಿ ಸುಲ್ತಾನರು ಸೂಫಿ ಸಂತರಿಗೆ ನೀಡಿದ ಕೊಡುಗೆಯನ್ನು ಗಮನಿಸಬಹುದು.
೩. ಮುನ್ಷಿ ಷಾಃ ಮೊಹಮ್ಮದ್ ಜಲಾಲ ಖಾದ್ರಿ
ಬೆಂಗಳೂರಿನ ದುಂಡು ಪ್ರದೇಶದಲ್ಲಿರುವ ಜಾಮೀಯ ಮಸೀದಿಯಲ್ಲಿದೆ. ಈ ಶಾಸನವು ಪರ್ಶಿಯನ್ ಶಾಸನವಗಿದೆ. “ಆ.ಹಿ.೧೨೪೪ ಎಂದರೆ ಕ್ರಿ.ಶ. ೧೮೨೮-೧೮೨೯ರಲ್ಲಿ ಮುನ್ಷಿ ಷಾಃ ಮೊಹಮ್ಮದ್ ಜಲಾಲ ಖಾದ್ರಿಯವರ ಮಸೀದಿಯನ್ನು ಕಟ್ಟಲಾಯಿತೆಂದು”(ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ (ಸಂ):೨೦೦೧:೦೩). ತಿಳಿದು ಬರುತ್ತದೆ. ಇವರು ಒಬ್ಬ ಕವಿಯು ಹೌದು, ಇವರ ಕಾವ್ಯನಾಮ-“ವಫಾ”. ಇವರು ಖಾದ್ರಿಯ ಪರಂಪರೆ ಸೇರಿದ್ದಾರೆ ಎಂದು ಹೇಳಬಹುದು. ಜೊತೆಗೆ ಇಬ್ಬರ ಕವಿಗಳ ವಿವರ ಸಿಗುತ್ತದೆ. ಮುನ್ಷಿ ಕಾಸೀಮ್ ಅಲಿ, ಕಾವ್ಯನಾಮ-‘ಕಾಜಿಮ್’ ಮತ್ತು ಸಯ್ಯಿದ್ ಹಸನ್ ಸಾಹೇಬ್, ಕಾವ್ಯನಾಮ-‘ರಫೀಲ್’ ಎಂದು ಉಲ್ಲೇಖವಿದೆ.
೪. ಅಲೀ ಅಸ್-ಸೂಫೀ
ಇವರ ಹೆಸರಿನ ಶಾಸನವು ಬೀದರ್ ಜಿಲ್ಲೆಯ ಮೊಹಮ್ಮದ್ ಗವಾನ್‌ನ ಮದರಸದ ಮುಂಭಾಗದಲ್ಲಿದೆ. ಇದು ಅರಬ್ಬಿ ಭಾಷೆಯಲ್ಲಿದೆ. “ಇದು ಧಾರ್ಮಿಕ ಪಠ್ಯ (ಕುರಾನ್-ಎ-ಶರೀಫ್) ಹೊಂದಿದೆ. ಈ ಶಾಸನದ ಅಕ್ಷರ ಅಲಂಕಾರಣಕಾರನ ಹೆಸರು ಅಲೀ ಅಸ್-ಸೂಫೀ ಎಂದಿದೆ”(ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ (ಸಂ):೨೦೦೧:೫೮). ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತೆ ಇತ ಒಬ್ಬ ಸೂಫಿ ಸಂತನಾಗಿದ್ದ ಎಂದು.
೫. ಮೊಹಮ್ಮದ್ ಹುಸೈನೀ ಗೇಸುದರಾಜ (ಖ್ವಾಜಾ ಬಂದು/ಬಂದೆ ನವಾಜ)
ಇವರ ಕುರಿತು ಒಂದಕ್ಕಿಂತ ಹೆಚ್ಚು ಶಾಸನಗಳು ಸಿಗುತ್ತವೆ. ಅದರಲ್ಲಿ ಒಂದು ಬೀದರ್ ಜಿಲ್ಲೆಯ ಕಲ್ಯಾಣದಲ್ಲಿ ಸೀಗುತ್ತದೆ. ಶಾಸನ ಪಠ್ಯ ಇಂತಿದೆ “ಷಾಃ ಬಡೇಸಾಹೇಬ ಅವರ ಆ.ಹಿ. ೧೨೦೨ ಎಂದರೆ ಕ್ರಿ.ಶ. ೧೭೮೭ ರಲ್ಲಿ ನಿಧನ ಹೊಂದಿದೆ ಸಂಗತಿಯನ್ನು ದಾಖಲಿಸುವ ಈ ಶಾಸನದ ಪಾಠವನ್ನು ಅಯ್ಯುಬ್ ಮತ್ತು ಗೇಸುದರಾಜ ರಚಿಸಿದ್ದಾರೆ ಎಂಬ ಮಾಹಿತಿಯನ್ನು ತಿಳಿಸುತ್ತದೆ”.(ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ (ಸಂ):೨೦೦೧:೭೨). ಇದು ಪರ್ಶಿಯನ್ ಶಾಸನ, ಜಾಮೀಯ ಮಸೀದ್ ಬಳಿಯ ಗೋರಿಯ ಮೇಲೆ ದೊರಿತಿದೆ. ಗೇಸುದರಾಜ ಎಂದರೆ- ನೀಳ ಕೇಶರಾಶಿವುಳ್ಳವನು ಎಂದು.
ಮತ್ತೊಂದು ಶಾಸನ ಗುಲ್ಬರ್ಗಾದಲ್ಲಿ ಹಿರಾಪುರದ ಹೊಕ್ಕು ತುಂಬವ ಬಾವಿಯಲ್ಲಿ ಲಭ್ಯವಾಗಿದೆ. “ರಾಜ ಇಬ್ರಾಹಿಂ ಆದಿಲ್ ಶಾಹಿ ದೊರೆಯು ಈ ಸ್ಥಳಕ್ಕೆ ತನ್ನ ಸೇನಾ ಸಮೇತವಾಗಿ ಬಿಡಾರ ಬಿಟ್ಟಗ ಇಲ್ಲೊಂದು ಕಾರಂಜೀ ಬಾವಿ ಹಾಗೂ ಫಲಭರಿತ ತೋಟವನ್ನು ಮಾಡಿಸುವುದಾಗಿ ರಾಜನ ತಾಯಿ ಮಖ್ದೂಮಾ-ಇ-ಜಿಹಾನ ಹರಕೆ ಹೊತ್ತಿದ್ದಳು. ಸಂತ ಸಯ್ಯಿದ್ ಮೊಹಮ್ಮದ್ ಗೇಸುದರಾಜ ಅವರ ದರ್ಗಾಕ್ಕೆ ಹೊರಟ್ಟಿದ್ದ” (ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ (ಸಂ):೨೦೦೧:೧೭೧). ಉಲ್ಲೇಖ ಸಿಗುತ್ತದೆ. ಆ.ಹಿ.೯೮೯ ಮೊರ‍್ರಂ ೩ ಎಂದರೆ ಕ್ರಿ.ಶ ೧೫೧೮ ಫೆ, ೭ ರಂದು ಹರಕೆ ಈಡೇರಿಸಿದರು ಎಂದು ತಿಳಿಯಲಾಗುತ್ತದೆ.
ಇವರ ಮೇಲೆ ಬೆಳಕು ಚೆಲುತ್ತದೆ. ಇದು ಪರ್ಶಿಯನ್ ಶಾಸನ “ನ್ಯಾಯಲಯದ ಅಧಿಕಾರಯಾದ ಮೊಹಮ್ಮದ್ ಖಾನರ ಪುತ್ರನಾದ ಅಲಿವಾಜಾ ಎಂಬವನು ಅರಮನೆಯಂತಹ ಕಟ್ಟಡವನ್ನು ಹಸನ್ ಹಾಗೂ ಹುಸೈನಿ ಅವರ ವಂಶಸ್ಥರಾದ ಸಂತ ಮುಖ್ವಾಜಂ ಸಯ್ಯಿದ್ ಮೊಹಮ್ಮದ್ ಹುಸೇನಿ ಗೇಸುದರಾಜ, ಒಂದಾ ನವಾಜ ಇವರಿಗೆ ಅರ್ಪಿಸಲು ಕಟ್ಟಿಸಿದನೆಂದು ತಿಳಿಸುತ್ತದೆ”.(ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ (ಸಂ):೨೦೦೧:೧೭೬). ಕಾಲ- ಅ.ಹಿ. ೧೦೫೮. ಅಂದರೆ ಕ್ರಿ.ಶ. ೧೬೪೮-೪೯ ಮೊಹಮದ್ ಅದಿಷಾ ದೊರೆ ಅಳ್ವಿಕೆಯಲ್ಲಿ ಸಂಪೂರ್ಣವಾಗಿತ್ತೆಂದು ತಿಳಿಯಲಾಗಿದೆ.
ಗೇಸುದಾರಾಜ್ ಆವರಿಗೆ ಸಂಬಂದಿಸಿದಂತೆ ಇದು ಗುಲ್ಬರ್ಗಾದಲ್ಲಿ ಪರ್ಶಿಯನ್ ಭಾಷೆಯಲ್ಲಿರುವ ಶಾಸನವಾಗಿದೆ. ಇದು “ಸಯ್ಯಿದ್ ಮೊಹಮ್ಮದ್ ಗೇಸುದರಾಜ ಅವರ ಸಮಾದಿ ಆವರಣದ ದಕ್ಷಿಣದ ಗೋಡೆಯಲ್ಲದೆ. ಇದು ಸ್ತ್ರೀಯೋರ್ವಳು(ಹೆಸರಿಲ್ಲ) ಆ.ಹಿ.೧೧೦೮ ಎಂದರೆ ಕ್ರೀ.ಶ. ೧೬೯೬ ಸೆಪ್ಟಂಬರ್ ೧೮ ರಂದು ಗೇಸುದರಾಜರವರು ನಿಧನ ಹೋದಿದ್ದನ್ನು”(ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ (ಸಂ):೨೦೦೧:೧೭೯). ತಿಳಿಸುತ್ತದೆ. ಸೂಫಿ ಸಂತ ಮೊಹಮ್ಮದ್ ಸಯ್ಯಿದ್ ಷಾಃ ಮಲ್ಲಿಕ್ ಅಲ್-ಖಾದಿ ಖ್ವಾಜಾ ಬಂದಾ (ಬಂದೇ) ನವಾಜರು ಕರ್ನಾಟಕದ ಪ್ರಮುಖ ಸೂಫಿ ಸಂತರಲ್ಲಿ ಪ್ರಮುಖರು ಇವರು ಸ್ವತಃ ಅನೇಕ ಕೃತಿಗಳನ್ನು ಬರೆದಿದ್ದಾರೆ. ಪವಾಡ ಪುರುಷರು ಸಮಾಜ ಸುಧಾರಕರು ಆಗಿದ್ದರು. ದಖ್ಖನಿನಲ್ಲಿ ಚಿಸ್ತಿಯಾ ಸೂಫಿ ಪರಂಪರೆಯ ಬದ್ರ ಬುನಾದಿ ಹಾಕಿದವರು, ಪ್ರತಿ ವರ್ಷವೂ ಇವರ ಉರುಸ್ ನಡೆಯುತ್ತದೆ.
೬. ಸೂಫಿ ಸಂತ ಮೊಹಮ್ಮದ್ ಸಯ್ಯಿದ್ ಷಾಃ ಮಲ್ಲಿಕ್ ಅಲ್-ಖಾದ್ರಿ
ಇವರ ಕುರಿತ ಶಾಸನವು ಬಿಜಪೂರದಲ್ಲಿ ಷಾಃ ಆಲಂಗೀರ ದರ್ವೇಶ್, ಅವರ ಸಮಾಧಿ ಬಳಿಯ ಗೋರಿಯೊಂದರ ಬಾಗಿಲ ಮೇಲೆ ಬರೆಯಲಾಗಿದೆ. ಇದು ಪರ್ಶಿಯನ್ ಶಾಸನವಾಗಿದೆ. “ಮಸ್ನದ್ ಸಯ್ಯಿದ್ ಷಾಃ ಅಬ್ದುಲ್ ಮೊಹಮ್ಮದ್ ಖಾದ್ರಿ ಅವರ ಪುತ್ರ ಸೂಫಿ ಮೊಹಮ್ಮದ್ ಸಯ್ಯಿದ್ ಷಾಃ ಮಲ್ಲಿಕ್-ಖಾದ್ರಿ ಆ.ಹಿ. ೧೧೦೦ ಮೊಹರಂ ೧೦ ಎಂದರೆ ಕ್ರಿ.ಶ. ೧೬೮೦ ರಂದು ನಿಧನ ಹೊಂದಿದ್ದನೆಂದು” (ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ (ಸಂ):೨೦೦೧:೧೧೫). ಈ ಶಾಸನ ತಿಳಿಸುತ್ತದೆ. ಇವರು ಖಾದ್ರಿಯ ಪರಂಪರೆಗೆ ಸೇರಿದ ಸೂಫಿ ಸಂತರಾಗಿದ್ದಾರೆ.
೭. ಶ್ರೀ ಸಯ್ಯಿದ್ ಉಸ್‌ಮಾನ್
ಇವರ ಕುರಿತ ಶಾಸನವು ಕೋಲಾರ ಜಿಲ್ಲೆಯಲ್ಲಿ ಒಂದು ಹಳೆಯ ತಂಗುದಾಣದಲ್ಲಿ ದೊರೆತಿದೆ. “ಇದು ಈ ಸಂತರ ಮನೆಯಾಗಿದೆ ಇದರಲ್ಲಿ “ರಕ್ಷಕನೆ” ಎಂಬ ವಾಕ್ಯ ಮತ್ತು ತಂಗುದಾಣವನ್ನು ಆ.ಹಿ. ೧೧೯೯ ಎಂದರೆ ಕ್ರಿ.ಶ. ೧೭೮೪-೮೫ ರಲ್ಲಿ ನಿರ್ಮಿಸಲಾಗಿದೆ” (ಎಂ.ಯಾಸೀನ್ ಖದ್ದೂಸಿ ಮತ್ತು ಸೀತಾರಾಮ ಜಾಗೀರ್‌ದಾರ (ಸಂ):೨೦೦೧:೧೯೦-೯೧). ಎಂಬ ಅಂಶಗಳಿವೆ. ಕೋಲಾರದ ಪಾಪರಾಜನ ಹಳ್ಳಿಯಲ್ಲಿ ಉಸ್ಮಾನ್ ಅಲಿ ಅವರ ದರ್ಗಾವಿದೆ.
ಕೊನೆಯ ಮಾತು
ಶಾಸನಗಳಲ್ಲಿ ಸೂಫಿ ಸಂತರು ಎಂಬ ಶಿರ್ಷಿಕೆಯಲ್ಲಿ ರಚನೆಗೊಂಡ ಈ ಸಂಶೋಧನ ಲೇಖನವು ಪಠ್ಯ ಕೇಂದ್ರಿತವಾದದ್ದು. ಮತ್ತು ಮಾಹಿತಿ ಪ್ರಧಾನವಾದ ಆಶಯವುಳ್ಳಾದ್ದಾಗಿದೆ. ಇಲ್ಲಿ ಸೂಫಿ ಸಂತರ ಜೀವನ ಚರಿತ್ರೆಯನ್ನು ಪೂರ್ವಕ್ಕೆ ಒಯ್ಯಲು ಅನುಕೂಲವಾಗಿದೆ. ಈ ಶಾಸನಗಳು ಸೂಫಿ ಸಾಹಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಜರ ಚರಿತ್ರೆಗಳ ಜೊತೆಗೆ ಈ ಸೂಫಿ ಸಂತರ ದರ್ಗಾಗಳ ಅವರ ನಾಮಗಳ ಉಲ್ಲೇಖಗಳು ಸಿಗುತ್ತವೆ, ಇಲ್ಲಿರುವ ಶಾಸನದ ಪಠ್ಯವು ಸೂಫಿ ಸಂತರ ಬಹುತ್ವದ ಚಹರೆಯನ್ನು ತಿಳಿಯಲು ಸಹಾಯಕವಾಗಿದೆ. ಮುಂದುವರೆದು ಸೂಫಿ ಸಂತರು ಪುರಾಣಗಳಲ್ಲಿ ಉಲ್ಲೇಖಗಳು ಸಿಕ್ಕಿವೆ. ಯಾವುದೇ ಸೂಫಿಯ ಕುರಿತು ಕನ್ನಡದಲ್ಲಿ ಸ್ವತಂತ್ರ ಚರಿತ್ರೆ ಬಂದಿಲ್ಲ. ಆದರೂ ಸೂಫಿ ಪಂಥದ ಪ್ರಭಾವದಿಂದ ಕೊಡೆಕಲ್ಲ ಬಸವಣ್ಣ, ಸಾವಳಗಿ ಶಿವಲಿಂಗ, ತಿಂತಣಿ ಮೋನಪ್ಪ, ಶೀರಹಟ್ಟಿ ಫಕೀರೆಶ ಇವರು ಕುರಿತ ಲೀಲೆಗಳು ರಚನೆಯಾಗಿವೆ. ಇಲ್ಲಿ ಸೂಫಿಗಳ ಪ್ರಸ್ತಾಪವು ಬಂದಿದೆ. ಉದಾ: ಚನ್ನಬಸವ ಪುರಾಣದಲ್ಲಿ ಬರುವ ಮಲ್ಲೇಶನ ಏಳನೂರ ಖಲಂದರರ ಉಲ್ಲೇಖ. ಅದೇ ರೀತಿ ಗುರುರಾಜ ಚರಿತ್ರೆ, ತತ್ವಪದಗಳಲ್ಲಿ ಸೂಫಿಗಳು ಮತ್ತು ಜಾನಪದ ಹಾಡುಗಳಲ್ಲಿ ಸೂಫಿಗಳು. ಮುಂದೆ ಆಧುನಿಕ ಕಾಲದಲ್ಲಿ ಕಾವ್ಯಗಳಲ್ಲಿ ಸೂಫಿಗಳ ಬಗ್ಗೆ ಕ್ರಿಯಾಶೀಲತೆಯ ಅನುವಾದಗಳ ಆರಂಭವಾದವು ನಂತರ ಸೃಜನಶೀಲವಾಗಿ ಮುಖಾಮುಖಿಯಾಗಿ ಬೆಳೆಯಿತು.
ಅನುಬಂಧ
೧. ಪರಿಭಾಷೆ
ಆ.ಹಿ = ಅಲ್ ಹಿಜರಿ ಶಕೆ
ಖಲಂದರ = ಅಧ್ಯಾತ್ಮಿಕ ಚಕ್ರವರ್ತಿ, ಪರಂಪರೆ
ಖ್ವಾಜಾ = ಸಂತ ಗುರು
ಗೇಸುದರಾಜ = ನೀಳ ಕೇಶರಾಶಿವುಳ್ಳವನು
ದರ್ಗಾ = (ದಾರ=ಅಸ್ಥಾನ) ಸೂಫಿ ಸಂತರ ಸಮಾಧಿ, ಮಜಾರ
ದರ್ವೇಶ = ಚಿಂದಿ ಬಟ್ಟೆ ತೊಟ್ಟ ಸೂಫಿ
ದಾದಾ = ಹಿರಿಯ ಸೂಫಿ
ವಲಿ = ದೇವರ ಗೆಳೆಯ, ಸಂತ
ಸೈಯದ್ = ನಾಯಕ, ಸೂಫಿ ಸಂತರಿಗೆ ಗೌರವ ಸೂಚಕವಾಗಿ ಬಳಸುವ ಬಿರುದು
ಹಯಾತ್ = ಧಿರ್ಘಆಯ್ಯುಷಿ
೨. ಶಾಸನಗಳ ಸ್ವರೂಪ
೧. ಪರ್ಶಿಯನ್ ಶಾಸನ ೨. ಉರ್ದು ಶಾಸನ
೩. ಪರಾಮರ್ಶನ ಗ್ರಂಥಗಳು