Development of Organic Farming.
Ravi1
1Research Fellow, Department of Development Studies, Kannada University Hampi, Vidyaranya- 583276
Email-ravidoctorcamp@gmail.com
Abstract
After the implementation of the Green Revolution scheme, there have been many changes in the agricultural system of the country. Some of them are positive factors, while others are harmful factors for the country's agriculture and economic development. Due to food shortages in the 1960s, efficient use of water, modern equipment and use of chemical fertilizers and pesticides were introduced to increase production in a short period of time. Although this scheme was successful in producing wheat and rice to a small extent, it later led to many problems in the future. It led to unnatural crisis like spread of deadly diseases like cancer, barrenness of agricultural land, suicide of farmers. But at the beginning of the second century, as a solution to this, organic farming expanded. But some confusion among the farmers about this organic farming method and lack of guidance and encouragement from the government has become a barrier to the development of organic farming.
Keywords: organic, agriculture, development, green revolution, agricultural system.
ಸಾವಯವ ಕೃಷಿಯ ಅಭಿವೃದ್ಧಿ.
ರವಿ1
1ಸಂಶೋಧನಾರ್ಥಿ, ಅಭಿವೃದ್ಧಿ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ. - 583276
Email-ravidoctorcamp@gmail.com
ಸಾರಾಂಶ
ಹಸಿರು ಕ್ರಾಂತಿಯ ಯೋಜನೆಯ ಜಾರಿಯ ನಂತರ ದೇಶದ ಕೃಷಿ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗಿವೆ. ಅವುಗಳಲ್ಲಿ ಕೆಲವು ಸಾಧಕ ಅಂಶಗಳಾಗಿದ್ದರೆ, ಇನ್ನು ಕೆಲವು ದೇಶದ ಕೃಷಿ ಮತ್ತು ಆರ್ಥಿಕಾಭಿವೃದ್ಧಿಗೆ ಮಾರಕ ಅಂಶಗಳಾಗಿವೆ. 1960ರ ದಶಕದಲ್ಲಿನ ಆಹಾರದ ಅಭಾವದ ಕಾರಣ, ಕಡಿಮೆ ಸಮಯದಲ್ಲಿ ಅಧಿಕ ಉತ್ಪಾದನೆಯ ಉದ್ದೇಶದಿಂದ ಸಮರ್ಥ ನೀರಿನ ಬಳಕೆ, ಆಧುನಿಕ ಸಲಕರಣೆ ಮತ್ತು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಲಾಯಿತು. ಅಲ್ಪ ಮಟ್ಟಿಗೆ ಗೋಧಿ ಮತ್ತು ಅಕ್ಕಿ ಉತ್ಪಾದನೆಯಲ್ಲಿ ಈ ಯೋಜನೆಯು ಯಶಸ್ವಿ ಕಂಡರೂ ನಂತರ ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳ ಹುಟ್ಟಿಗೆ ಕಾರಣವಾಯಿತು. ಅದರಲ್ಲಿ ಕ್ಯಾನ್ಸರ್‍ನಂತಹ ಮಾರಕ ರೋಗದ ಹರಡುವಿಕೆ, ಕೃಷಿ ಭೂಮಿ ಬರಡಾಗುವಿಕೆ, ರೈತರ ಆತ್ಮಹತ್ಯೆಯಂತಹ ಅಸ್ವಾಭಾವಿಕ ಬಿಕ್ಕಟ್ಟಿಗೆ ಕಾರಣವಾಯಿತು. ಆದರೆ ಎರಡನೇ ಶತಮಾನದ ಆರಂಭದಲ್ಲಿ ಇದಕ್ಕೆ ಪರಿಹಾರ ಎಂಬಂತೆ ಸಾವಯವ ಕೃಷಿ ವಿಸ್ತಾರವಾಗುತ್ತಾ ಸಾಗಿತು. ಆದರೆ ಈ ಸಾವಯವ ಕೃಷಿ ಬಗೆಗೆ ರೈತರಿಗಿರುವ ಕೆಲವು ಗೊಂದಲಗಳು ಹಾಗೂ ಸರ್ಕಾರದ ಮಾರ್ಗದರ್ಶನ ಮತ್ತು ಉತ್ತೇಜನದ ಕೊರತೆ ಸಾವಯವ ಕೃಷಿಯ ಅಭಿವೃದ್ಧಿಗೆ ತಡೆಯಾಗಿ ಪರಿಣಮಿಸಿದೆ.
ಕೀವಡ್ರ್ಸ್: ಸಾವಯವ, ಕೃಷಿ, ಅಭಿವೃದ್ಧಿ, ಹಸಿರು ಕ್ರಾಂತಿ, ಕೃಷಿ ವ್ಯವಸ್ಥೆ.
ಪೀಠಿಕೆ
ಸಾವಯವ ಕೃಷಿಯು ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಕೃಷಿ ಪದ್ಧತಿಯಾಗಿದ್ದು ಇದು ಯಾವುದೇ ಕಾರ್ಖಾನೆಗಳಿಂದ ತಯಾರಿಸಲ್ಪಟ್ಟ ವಿಷಪೂರಿತವಾದ ಗೊಬ್ಬರವನ್ನು ಮತ್ತು ವಿಷಪೂರಿತ ಕೀಟನಾಶಕಗಳನ್ನು ಬಳಸದೆ ಕೇವಲ ಭೂಮಿಯ ಕೆಳಭಾಗದಲ್ಲಿ ಮತ್ತು ಭೂಮಿಯ ಮೇಲೆ ದೊರೆಯುವ ಗೊಬ್ಬರಗಳಿಂದ ಅಂದರೆ ಕೊಟ್ಟಿಗೆಗೊಬ್ಬರ, ಕೋಳಿಗೊಬ್ಬರ, ಎರೆಹುಳುಗೊಬ್ಬರ, ಇತ್ಯಾದಿ ಗೊಬ್ಬರಗಳ ಬಳಕೆಯಿಂದ ಬೆಳೆಗಳನ್ನು ಬೆಳೆಯುವ ಪದ್ಧತಿಯನ್ನು ಸಾವಯವ ಕೃಷಿ ಎಂದು ಕರೆಯುತ್ತಾರೆ. ಒಟ್ಟಾರೆಯಾಗಿ ದೇಶದ ಬೆನ್ನೆಲುಬು ಎಂದು ಹೇಳಿಕೊಳ್ಳುವ ರೈತನು ಬೆಳೆಗಳನ್ನು ಬೆಳೆಯುವ ಪದ್ಧತಿಗಳಲ್ಲಿ ಸಾವಯವ ಕೃಷಿ ಪದ್ಧತಿಯು ಒಂದು. ಇದು ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಪದ್ಧತಿಯಾಗಿದೆ. 1960ರ ದಶಕದಲ್ಲಿ ಆಹಾರ ಕೊರತೆಯ ಸಂದರ್ಭದಲ್ಲಿ ಹಸಿರುಕ್ರಾಂತಿ ಸಂಭವಿಸಿತು ಆದ್ದರಿಂದ ರಾಸಾಯನಿಕ ಗೊಬ್ಬರಗಳು ಅಧಿಕ ಉಪಯೋಗಿಸುವಲ್ಲಿ ರೈತರು ಮುಂದಾದರು. ಅಧಿಕ ಇಳುವರಿ ಮತ್ತು ಕಡಿಮೆ ಸಮಯದಲ್ಲಿ ಬೆಳೆ ಕೈಗೆ ಸಿಗುವುದನ್ನು ಮನಗೊಂಡ ರೈತರು ಸಾವಯವ ಕೃಷಿಯನ್ನು ಬಿಟ್ಟು ರಾಸಾಯನಿಕ ಕೃಷಿಗೆ ಮಾರು ಹೋದರು. ರಾಸಾಯನಿಕ ಕೃಷಿಯಿಂದ ಇಳುವರಿ ಅಧಿಕವಾಯಿತು ಆದರೂ ಅನೇಕ ರೀತಿಯ ಹಾನಿಗಳನ್ನು ಉಂಟುಮಾಡಿತು ಅವುಗಳೆಂದರೆ ಪರಿಸರ ಕಲುಷಿತ ಗೊಂಡಿತು, ಉಸಿರಾಟದಲ್ಲಿ ವ್ಯತ್ಯಾಸ ಮತ್ತು ಮನುಷ್ಯನ ಆರೋಗ್ಯದಲ್ಲಿ ಬದಲಾವಣೆಗಳು ಕಂಡುಬಂದವು.
ಕೃಷಿ ಮತ್ತು ಆರೋಗ್ಯ
ಸಾವಯವ ಕೃಷಿಯ ಬೆಳೆಯನ್ನು ಸೇವಿಸುವ ಜನರು ಯಾವುದೇ ಆರೋಗ್ಯ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಅನುಭವಿಸದೇಯಿದ್ದರು ರಾಸಾಯನಿಕ ಕೃಷಿಯ ಸಂಭವದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅನೇಕ ಕಾಯಿಲೆಗಳು ಬರತೊಡಗಿದವು ಅದರಲ್ಲಿ ಅಧಿಕ ಕೀಟನಾಶಕ ಬಳಕೆಯಿಂದ ತಯಾರಾದ ಬೆಳೆಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಕಾಯಿಲೆಗಳು ಅಧಿಕವಾದ ತೊಡಗಿದವು ಕ್ಯಾನ್ಸರ್ ರೋಗವು ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ವಿಷಪೂರಿತ ಆಹಾರ ಸೇವನೆಯೇ ಕಾರಣ ಎಂದು ವೈದ್ಯರು ತಿಳಿಸಿರುತ್ತಾರೆ.
“ಸಾವಯವ ಕೃಷಿ ಪ್ರಸ್ತುತದಲ್ಲಿ ವಿಶೇಷ ಸ್ಥಾನದಲ್ಲಿ ಕೊಡಲಾಗಿದೆ. ಏಕೆಂದರೆ ಭೂಮಿಯ ಉತ್ಪಾದಕತೆಯ ಸಾಮಥ್ರ್ಯವು ಕುಂಠಿತವಾತ್ತಿರುವುದನ್ನು ತಡೆಗಟ್ಟಲು ಸಾವಯವ ಗೊಬ್ಬರಗಳನ್ನು ಸಮರ್ಪಕವಾಗಿ ಬಳಸುವುದು ಮತ್ತು ದೊಡ್ಡ ಪ್ರಮಾಣದಲ್ಲಿ ಅತಿ ಹೆಚ್ಚಿನ ಖರ್ಚಿನಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರಗಳನ್ನು ನಿಯಂತ್ರಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಬರುವುದು ಅತೀ ಅವಶ್ಯಕವಾಗಿದೆ. ಎರಡನೇಯದಾಗಿ ಪರಿಸರದ ಸಂರಕ್ಷಣೆಗಾಗಿ ಭೂಮಿ, ನೀರು ಮತ್ತು ಗಾಳಿ ಇವುಗಳ ಮಾಲಿನ್ಯವನ್ನು ತಡೆಗಟ್ಟುವುದು ಮನುಷ್ಯನ ಆದ್ಯ ಕರ್ತವ್ಯವಾಗಿದೆ.
ಭೂಸಂಪತ್ತು ಮತ್ತು ಮಣ್ಣಿನ ಗುಣಧರ್ಮಗಳನ್ನು ಅರಿತುಕೊಳ್ಳುವುದು ಉತ್ತಮ ವ್ಯವಸಾಯ ಕೈಗೊಳ್ಳುವ ದಿಸೆಯಲ್ಲಿ ಮುಖ್ಯವಾದ ಹೆಜ್ಜೆಯಾಗಿದೆ. ಭೌತಿಕ ಹಾಗೂ ರಾಸಾಯನಿಕ ಗುಣಧರ್ಮಗಳನ್ನು ಮಾತ್ರವಲ್ಲದೆ ಮಣ್ಣಿನ ಜೈವಿಕ ಗುಣಗಳನ್ನು ತಿಳಿದು ಫಲವತ್ತತೆಯು ನಶಿಸಿಹೋಗದಂತೆ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನು ಉಪಯೋಗಿಸುವುದು ಸಾವಯವ ಕೃಷಿಯ ಸಾರಂಶವಾಗಿದೆ.
ಸಾವಯವ ಗೊಬ್ಬರ ರಹಿತ ಕೃಷಿಯಲ್ಲಿ ಆಮ್ಲಜನಕ ಕೊರತೆಯು ಕಂಡುಬಂದು. ಏಕೆಂದರೆ ಅದರಲ್ಲಿ ಅಧಿಕ ಪ್ರಮಾಣದಲ್ಲಿ ಬೇಕಾಗುವ ಪ್ರಧಾನ ಪೆÇೀಷಕಾಂಶಗಳಾದ ಸಾರಜನಕ, ರಂಜಕ ಹಾಗೂ ಪೆÇಟ್ಯಾಷಿಯಂ ಜೊತೆಗೆ ಅಲ್ಪ ಪ್ರಮಾಣದಲ್ಲಿ, ಆದರೆ ಬಹುಮಖ್ಯವಾಗಿ ಬೇಕಾದ ಇತರೆ ಪೆÇೀಷಕಾಂಶಗಳು ಇರುತ್ತವೆ. ಸಸ್ಯಗಳ ಬೇರು ಬೆಳವಣಿಗೆಯು ಕುಂದುತ್ತದೆ. ಅಧಿಕ ಪ್ರಮಾಣದಲ್ಲಿ ರಸಗೊಬ್ಬರಗಳ ಬಳಕೆಯಿಂದ ಬೇರಿನ ಕವಲು ಹರಡಿಕೊಳ್ಳುವಿಕೆ ಮತ್ತು ಬೆಳವಣಿಗೆಯು ಸಮರ್ಪಕವಾಗಿರುವುದಿಲ್ಲ ಎಂದು ತಿಳಿದುಬಂದಿದೆ. ಇಲ್ಲಿ ಪೆÇೀಷಕಾಂಶಗಳು ಕೇಂದ್ರೀಕರಿಸಿ ಮತ್ತು ಅವುಗಳ ಸಮತೋಲನ ಬಳಕೆ ಇಲ್ಲದಿರುವುದರಿಂದ ಬೇರು ಮತ್ತು ಸಸ್ಯಗಳ ಬೆಳವಣಿಗೆಗೆ ಮಾರಕವಾಗಬಹುದು. ಮೇಲಾಗಿ, ಸಸ್ಯಗಳ ರೋಗ ಮತ್ತು ಕ್ರಿಮಿಕೀಟಗಳ ಬಾಧೆ ಹೆಚ್ಚಾಗಬಹುದು. ಅಧಿಕ ರಸಗೊಬ್ಬರಗಳ ಬಳಕೆಯ ಜೊತೆಯಲ್ಲಿ ಇತರೆ ರಾಸಾಯನಿಕಗಳ ನಿರಂತರ ಬಳಕೆಯಿಂದ ನಿಸರ್ಗದ ಮಡಿಲಲ್ಲಿ ಇರುವ ಉಪಯುಕ್ತ ಜೀವರಾಶಿ ಮತ್ತು ಫಲವತ್ತತೆಯನ್ನು ವೃದ್ಧಿಸುವ ಜೀವಿಗಳು ನಾಶವಾಗುತ್ತವೆ. ಹೀಗೆ ಮಣ್ಣಿನ ಆರೋಗ್ಯವು ಕೆಡುವುದರಿಂದ ಬೆಳೆಯ ಉತ್ಪಾದಕತೆಯು ಕೆಳಮಟ್ಟಕ್ಕೆ ಇಳಿಯುತ್ತದೆ. ಅದ್ದರಿಂದ ಸಸ್ಯಗಳಿಗೆ ಬೇಕಾದ ಎಲ್ಲಾ ಪೆÇೀಷಕಾಂಶಗಳನ್ನು ಸಮತೋಲನವಾಗಿ ಒದಗಿಸಿದರೆ ಅವು ಸಹಜವಾಗಿ ದೃಢವಾಗಿ ಬೆಳೆದು ರೋಗರುಜಿನಗಳನ್ನು ನಿರೋಧಿಸಿ ಉತ್ತಮ ಫಲವನ್ನು ಕೊಡುತ್ತವೆ. ಅದಕ್ಕೋಸ್ಕರ ಕೃತಕ ಗೊಬ್ಬರಗಳಿಗಿಂತ ಸಾವಯವ ಗೊಬ್ಬರಗಳ ಬಳಕೆಯು ಅನುಕೂಲಕರ. ಏಕೆಂದರೆ ಅದರಲ್ಲಿ ಅಧಿಕ ಪ್ರಮಾಣದಲ್ಲಿ ಬೇಕಾಗುವ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ ಹಾಗೂ ಪೊಟ್ಯಾಷಿಯಂ ಜೊತೆಗೆ ಅಲ್ಪ ಪ್ರಮಾಣದಲ್ಲಿ ಆದರೆ ಬಹುಮುಖ್ಯವಾಗಿ ಬೇಕಾದ ಇತರೆ ಪೋಷಕಾಂಶಗಳು ಇರುತ್ತವೆ
ಸಾವಯವ ಕೃಷಿ ಬೆಳವಣಿಗೆ:
ಸಾವಯವ ಕೃಷಿ ಬೆಳವಣಿಗೆ 1940ರಿಂದ ಇಂಗ್ಲೆಂಡಿನ ಸರ್ ಆಲ್ಬರ್ಟ್ ಹೋವಾರ್ಡ್‍ರಿಂದ ಪ್ರಾರಂಭವಾದರೂ ಭಾರತದೇಶದಲ್ಲಿ ರೈತರು ಸಾಂಪ್ರದಾಯಿಕವಾಗಿ ಅನುಸರಿಸುತ್ತಿರುವ ಕೃಷಿ ಹಾಗೂ ಹೈನುಗಾರಿಕೆ ಪದ್ದತಿಗಳನ್ನು ಆಗ್ರ್ಯಾನಿಕ್ ಗ್ರೋಯಿಂಗ್ ಮೆಥಡ್ಸ ಇನ್ ಇಂಡಿಯಾ ಎಂಬ ಪುಸ್ತಕದ ಮುಖಾಂತರ ಪಾಶ್ಚಿಮಾತ್ಯರಿಗೆ ಪರಿಚಯ ಮಾಡಿಕೊಟ್ಟರು. ಇವರು ಇಂದೋರ್ ಕಾಂಪೋಸ್ಟ ಗೊಬ್ಬರ ತಯಾರಿಸುವುದನ್ನು ವೈಜ್ಞಾನಿಕವಾಗಿ ಸಂಶೋಧಿಸಿದರು. ಭಾರತದಲ್ಲಿ ಶತಮಾನಗಳಿಂದ ಪರಿಷ್ಕರಿಸಿ ಪಾಲನೆ ಮಾಡುತ್ತಿರುವ ಕೃಷಿ ಹೈನುಗಾರಿಕೆ ಸತತವಾಗಿ ಅನಾವೃಷ್ಟಿ,ಅತಿವೃಷ್ಟಿಗಳ ಮಧ್ಯೆಯೂ ಭೀಕರ ಬರಗಾಲವನ್ನು ಎದುರಿಸುವ ಚೈತನ್ಯವುಳ್ಳವಾಗಿದೆಯೆಂದು ತಿಳಿದು ಅಲ್ಲಲ್ಲಿ ಇದರ ಪ್ರಯೋಗವನ್ನು ಪ್ರಾರಂಭಿಸಿದರು. ಅಮೇರಿಕದಲ್ಲಿ ಈ ಪುಸ್ತಕದಿಂದ ಪ್ರಭಾವಗೊಂಡ ಜಿರೋ ಐ.ರೊಡೇಲ್‍ರವರು 1942ರಲ್ಲಿ ಪೆನ್ಸಿಲ್ವೇನಿಯ ರಾಜ್ಯದ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಪದ್ದತಿ ಜಾರಿಗೆತಂದು ಆಗ್ರ್ಯಾನಿಕ ಫಾರ್ಮಿಂಗ್ ಅಂಡ್ ಗಾರ್ಡನಿಂಗ್ ಮ್ಯಾಗ್‍ಜಿನ್ ಮೂಲಕ ಪ್ರಕಟಿಸಲು ಪ್ರಾರಂಭಿಸಿದರು. ಇದರ ಮೂಲ ಧ್ಯೇಯ ಆರೋಗ್ಯವಂತ ಮಣ್ಣು, ಆರೋಗ್ಯವಂತ ಆಹಾರ, ಆರೋಗ್ಯವಂತ ಜನ ಪ್ರಪಂಚದಲ್ಲೇ ದೀರ್ಘಕಾಲದ ಮೂರು ವಿಧವಾದ ಕೃಷಿ ಪದ್ದತಿ ತಾರತಮ್ಯ ನೋಡುವ ತಾಕುಗಳು ರೋಡೆಲ್ ಫಾರಂನಲ್ಲಿವೆ.
ಸಾವಯವ ಕೃಷಿ ಸ್ಥಿರ ಮತ್ತು ನಿರಂತರವಾದುದು. ಇದರ ಬಗ್ಗೆ ಅಂಕಿ-ಅಂಶಗಳನ್ನು ಪ್ರಯೋಗಗಳಿಂದ ಪಡೆಯಬೇಕಾಗಿದೆ. ಕಾರಣ ಈ ಪುಸ್ತಕದಲ್ಲಿ ಮಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಪ್ರಕಟನೆಗಳು, ಪದ್ಯದಲ್ಲಿ ಲಭ್ಯವವಿರುವುದಿಲ್ಲಿ ಕಾರಣವೆನೆಂದರೆ ಈ ಕೃಷಿ ಪದ್ದತಿಯಲ್ಲಿ ಮೂಲವಾಗಿ ಮಣ್ಣಿನ ಫಲವತ್ತತೆ ಕುರಿತು ಸ್ಥಿರರವಾಗಿ ಸತತ ನಿರಂತರವಾಗಿ ಒಂದೇ ಭೂಮಿಯಲ್ಲಿ ಹಲವಾರು ವರ್ಷಗಳವರೆಗೆ ಪ್ರಯೋಗ ಪ್ರಾತ್ಯಕ್ಷತೆಗಳು ನಡೆಯಬೇಕು ಅಲ್ಲದೇ ಮಣ್ಣನು ಫಲವತ್ತೆಯಿಂದ ಬೆಳೆಯ ಅಧಿಕ ಇಳುವರಿ ದೊರೆಯಬೇಕು ಇತ್ತೀಚಿನ 3 ದಶಕಗಳಿಂದ ನಾವು ಮೊರೆ ಹೋಗಿರುವ ರಾಸಾಯನಿಕ ಕೃಷಿ ಪದ್ದತಿಯೊಂದಿಗೆ ಈ ಸಾವಯವ ಕೃಷಿ ಪದ್ದತಿಗಳನ್ನು ಹೊಲಿಸಿ ನೋಡಬೇಕು ಈ ಕುರಿತು ಸತತ ಅಧ್ಯಯನ ಇನ್ನೂ ಪೂರ್ತಿಗೊಂಡಿಲ್ಲ ದೇಶದಾದ್ಯಂತ ಪ್ರಯೋಗಳಲ್ಲಿ ಮುಂದುವರೆದಿವೆ. ಏಶೀಯಾ ಖಂಡದ ಪ್ರಬಲ ದೇಶಗಳಾದ ಚೈನಾ ಜಪಾನಗಳ ರೈತರು ಈಗಾಗಲೇ ಸಂಪೂರ್ಣವಾಗಿ ಸಾವಯವ ಬಳಕೆಯಲ್ಲಿ ಗಮನ ಹಾರಿಸಿರುವರು. ಈ ಸಾವಯವ ಕೃಷಿಯನ್ನು ಅಳವಡಿಸುವ ಮೂಲಕ ಜೈವಿಕ ಸೂಕ್ಷ್ಮ ಜೀವಿಗಳ ಕ್ರಿಯೆಯನ್ನು ಹೆಚ್ಚಿಸಲು ಸಾಧ್ಯ. ಉಪಯುಕ್ತವಾದ ಜೀವಾಣುಗಳು ಪರಿಸರವನ್ನು ಆವರಿಸಿ ಶುದ್ದಹವೆ. ಶುದ್ದ ನೀರು ಪರಿಶುದ್ದ ವಾತವಾರಣವನ್ನು ನಿರ್ಮಿಸಲು ಸಾಧ್ಯವಾಗಲದೆಯೆಂದು ತಿಳಿದು ಬಂದಿದೆ ಎಂದು ತಮ್ಮ ಲೇಖನದಲ್ಲಿ ಲೇಖಕರು ತಿಳಿಸಿದ್ದಾರೆ. ಈ ಲೇಖನವು ಅಥವಾ ಪುಸ್ತಕವು ಓದುಗರಿಗೆ ಕೃಷಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ನಿರೂಪಿಸಿದ್ದಾರೆ.
ಸಾವಯವ ಕೃಷಿಯ ಅವಶ್ಯಕತೆ :
ಆಹಾರ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿಯೇ ಒಂದು ಸ್ವಾವಲಂಬಿ ರಾಷ್ಟವೆಂದು ಪ್ರಸಿದ್ದಿಗೆ ಪಾತ್ರವಾದರೂ ಕೂಡ, ಇತ್ತಿಚಿಗೆ ಆಧುನಿಕ ಬೇಸಾಯದ ಎಲ್ಲಾ ತಂತ್ರಜ್ಞಾನ ಬಳಸಿಯೂ ದೇಶದ ಸರಾಸಿರಿ ಕೃಷಿ ಉತ್ಪಾದನೆ ಬೆಳವಣಿಗೆ 34 ಪ್ರತಿಶತದಿಂದ ಈಗ 1.5 ಪ್ರತಿಶತ ಕಡಿಮೆಯಾಗಿದೆ. ಹಾಗೂ ಮುಂಬರುವ ದಿನಗಳಲ್ಲಿ ದೇಶದ ಆಹಾರ ಭದ್ರತೆಗೆÉ ಧಕ್ಕೆ ಉಂಟಾಗಬಹುದೆಂದು ಉಹಿಸಲಾಗಿದೆ. ಸಾವಯವ ಕೃಷಿ ಬೆಳವಣೆಗೆಯನ್ನು ವಿವರಿಸಿದ್ದಾರೆ. ಸಾವಯುವ ಕೃಷಿ ಬೆಳವಣೆಗೆ ಸಂಸ್ಥೆಯ ಇತ್ತೀಚಿನ ಒಂದು ಮಾಹಿತಿಯ ಪ್ರಕಾರ ಜಗತ್ತಿನಲ್ಲಿ 31 ಮಿಲಿಯನ್ ಹೆಕ್ಟೇರ್ ಪ್ರದೇಶ. ಸುಮಾರು 130 ದೇಶಗಳನ್ನು ಒಳಕೊಂಡು ಸಾವಯವ ಕೃಷಿಗೆ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ. ಮತ್ತು ಮಣ್ಣಿನ ಫಲವತ್ತತೆ ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ದ್ರವ ರೂಪದ ಗೊಬ್ಬರಗಳ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಮತ್ತು ಹಸಿರುಗೊಬ್ಬರಗಳು, ಜೈವಿಕಗೊಬ್ಬರಗಳ ಬಗ್ಗೆ ವಿಭಿನ್ನ ರೀತಿಯಲ್ಲಿ ಅದರ ಉಪಯೋಗ ಮತ್ತು ತಯಾರಿಸುವ ವಿಧಾನಗಳ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಬೆಳೆ ಮತ್ತು ಬೆಳೆ ಪದ್ದತಿಗಳ ಕುರಿತು ಮತ್ತು ಸಾವಯವ ಸಮಗ್ರ ಕೃಷಿ ಪದ್ದತಿ ಬಗ್ಗೆ ಮತ್ತು ಸಾವಯವ ಕೃಷಿಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಸಾವಯವ ಕೃಷಿಯಲ್ಲಿ ಪಂಶುಸಂಗೋಪನಾ ವಿಧಾನದ ಬಗ್ಗೆ ಮತ್ತು ಸಾವಯವ ಕೃಷಿ ದೃಢಿಕರವನ್ನು ಕೆಲವೊಂದು ಕೋಷ್ಟಕಗಳ ಮೂಲಕ ಮತ್ತು ಚಿತ್ರಗಳನ್ನು ತೋರಿಸಿ ಜನರಿಗೆ ಮತ್ತು ರೈತರಿಗೆ ಸುಲಭವಾಗಿ ತಿಳಿದುಕೊಳ್ಳುವ ರೀತಿಯಲ್ಲಿ ಲೇಖಕರು ಈ ಪುಸ್ತಕವನ್ನು ಬರೆದಿದ್ದಾರೆ.
ಭಾರತೀಯ ಕೃಷಿಯ ಬಹುತೇಕ ಸಂಪ್ರದಾಯಕ ಜ್ಞಾನ ಮತ್ತು ಸ್ವಾನುಭವಗಳ ಮೇಲೆ ಬೆಳೆದು ಬಂದ ಪದ್ದತಿ. ಸಾವಿರ ಸಾವಿರ ವರ್ಷಗಳು ಬದುಕಿ ಬಂದಿರುವ ಭಾರತೀಯ ಜನ ಸಮುದಾಯ ಕಂಡುಕೊಂಡ ಅನೇಕ ಸತ್ಯಗಳಲ್ಲಿ ಈ ಸಾವಯವ ಕೃಷಿ ಕಂಡುಕೊಂಡ ಅನೇಕ ಸತ್ಯಗಳಲ್ಲಿ ಈ ಸಾವಯವ ಕೃಷಿ ವಿಜ್ಞಾನವು ಮಹತ್ತರವಾದದು.
ಕೃಷಿ ಭೂಮಿಯ ಫಲವತ್ತತೆಯನ್ನು ಕಾಪಾಡಲು ಅದರಲ್ಲಿ ನಿರಂತರ ಜೈವಿಕ ಕ್ರಿಯೆಯೇ ಕಾರಣ ಮಣ್ಣಿನಲ್ಲಿ ವೈವಿದ್ಯಮಯ ಜೀವರಾಶಿಯ ಒಂದು ಕ್ಲಿಷ್ಟಕರಕವಾದ ಚಟುವಟಿಕೆಯ ಬಲೆಯ ರೂಪಗೊಂಡಿರುತ್ತದೆ. ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳನ್ನೊಳ್ಳಗೊಂಡ ಸಹಸ್ರಪದ ಮತ್ತು ಎರೆಹುಳುಗಳಂತಹ ಪ್ರಾಣಿಗಳು ಈ ವೈವಿದ್ಯಮೆಯ ಜೀವರಾಶಿಯ ಒಂದು ಕ್ಲಿಷ್ಟಕರವಾದ ಚಟುವಟಿಕೆಯ ಬಲೆಯ ರೂಪಗೊಂಡಿರುತ್ತವೆ. ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳನ್ನೊಳಗೊಂಡ ಸಹಸ್ರಪದ ಮತ್ತು ಎಕರೆಹುಳುಗಳಂತಹ ಪ್ರಾಣಿಗಳು ಈ ವೈವಿದ್ಯವಯ ಜೀವಿಗಳ ಸಂಕೇತವಾಗಿರುವುದು. ಈ ಜೀವಿಗಳು ತಮ್ಮದೆ ಆದ ಆಹಾರ ಸೇವನೆ ವಿಸರ್ಜನೆ ಹಾಗೂ ಚಲನೆಯಿಂದ ಮಣ್ಣಿನಲ್ಲಿ ರಚನೆ ಮತ್ತು ಇತರೇ ರಾಸಾಯನಿಕ ಗುಣಗಳ ಮೇಲೆ ಪ್ರಭಾವ ಬೀರುವವು, ಮೇಲ್ಪದರ ಮಣ್ಣು ಈ ಜೈವಿಕ ಕ್ರಿಯೆಯೆ ವಿಶೇಷವಾದ ಕೊಡಗು ಮತ್ತು ಇದು ಫಲವತ್ತಾದ ಮಣ್ಣಿನ ಸಂಕೇತ. ಮಣ್ಣಿನ ಚೈತನವನ್ನು ಈ ಕ್ರಿಯೆಯನ್ನು ಅವಲಂಬಿಸಿರುವುದು ಇಂತಹ ಪರಿಸ್ಥಿಯನ್ನು ಕೃಷಿ ಭೂಮಿಯಲ್ಲಿ ನಿರೂಪಿಸಲು ಅತಿಮುಖ್ಯವಾಗಿರಬೇಕಾಗುವುದು ಸಾವಯವ ಇಂಗಾಲ ಅಂಶ ಉಷ್ಣವಲಯದ ಮಣ್ಣಿನಲ್ಲಿ ಇದು ಶೀಥಿಲವಾಗವುದರಿಂದ ಇದರ ಮಾನ್ಯತೆ ಹೆಚ್ಚಾಗಿ ಕಂಡುಬರುವುದು. ಈ ಕಾರಣದಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಮಾಣ ಕಲ್ಲು ಸಾವಯವ ಗೊಬ್ಬರವನ್ನು ಬಳಸಬೇಕಾಗುವುದು. ಮಣ್ಣಿನಲ್ಲಿ ಹ್ಯೂಮಸ್ ಅಂಶವನ್ನು ಅವಲಂಭಿಸಿರುವುದು ಎರೆಹುಳುಗಳ ಅಭಿವೃದ್ದಿಯಲ್ಲಿ ಕಾಣಸಿಗುವ ಅಲೆ ಮುಖ್ಯವಾದ ಕಾರಣಗಳು. ಮಣ್ಣಿನಲ್ಲಿರುವ ತೇವಾಂಶ, ಸಾರಜನಕ, ರಸಸಾರ, ಮಣ್ಣಿನ ಭೌತಿಕ ಗುಣಗಳು, ವಾಯುಗುಣಗಳು, ಅನುಪಯುಕ್ತ ವಸ್ತುಗಳ ಲಭ್ಯತೆ, ಎರೆಹುಳು ಗೊಬ್ಬರಕ್ಕೆ ಬಳಸಬಹುದು ತ್ಯಾಜ್ಯಾ ವಸ್ತುಗಳು ಯಾವುದೇ ಸಸ್ಯಜನ್ಯ ಅಥವಾ ಪ್ರಾಣಿಜ್ಯನ್ಯ ತ್ಯಾಜ್ಯಗಳನ್ನು ಈ ಗೊಬ್ಬರ ತಯಾರಿಕೆಗೆ ಬಳಸಬಹುದು.
ಉಪಸಂಹಾರ
ಸಾವಯವ ಕೃಷಿಯು ಇತ್ತಿಚೀನ ದಿನಮಾನಗಳಲ್ಲಿ ರಾಸಾಯನಿಕ ಕೃಷಿಗಿಂತ ಹೆಚ್ಚು ಪ್ರಚಲಿತವಾಗುತ್ತಿದೆ. ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಿಂದ ಬೆಸತ್ತ ಜನರು ಸಾವಯವ ಕೃಷಿಯ ಕಡೆಗೆ ತಿರುಗಿದ್ದಾರೆ. ಸಾವಯವ ಕೃಷಿಯಿಂದ ಆರೋಗ್ಯ ಸುಧಾರಿಸಿಕೊಳ್ಳುವುದಕ್ಕೆ ಮತ್ತು ಲಾಭವನ್ನು ಗಳಿಸುವುದಕ್ಕೆ ಇದು ಒಂದೇ ದಾರಿಯಾಗಿದೆ. ಸಾವಯವ ಕೃಷಿಯು ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದ್ದು ಅನೇಕ ಜನ ರೈತರು ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿ ಕಡೆಗೆ ಗಮನ ಹರಿಸಿ ಲಾಭವನ್ನುಗಳಿಸಿ ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ, ಪರಿಸರದೊಂದಿಗೆ ಸಮತೋಲನ ಸಾಧಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಇದರಿಂದ ವಾತಾವರಣವು ಕಲುಷಿತಗೊಳ್ಳುವುದು ತಪ್ಪುತ್ತದೆ. ಮಾತ್ರವಲ್ಲದೆ ಮನುಷ್ಯ ಮತ್ತು ಭೂಮಿಯ ನಡುವಿನ ಸಂಬಂಧ ಪರಸ್ಪರಪೂರಕವಾಗಿ ಬೆಳೆಯಬಹುದಾಗಿದೆ. ಆಧುನಿಕ ಕಾಲದ ಜಾಗತಿಕ ಮಾರುಕಟ್ಟೆಯ ಭರಾಟೆಯಲ್ಲಿ ಹೆಚ್ಚು ಉತ್ಪಾದನೆಗೆ ಮಾತ್ರ ಜೋತುಬಿದ್ದು ಭೂಮಿಯ ಸತ್ವ ಕಳೆದುಕೊಳ್ಳುವುದಷ್ಟೇ ಅಲ್ಲದೆ, ರೋಗ-ರುಜಿನೆಗಳಿಗೆ ತುತ್ತಾಗದೆ ಸದೃಢ ಸಮಾಜ ಮತ್ತು ಸ್ವಾಸ್ಥ ವಾತಾವರಣ ನಿರ್ಮಿಸಲು ರೈತರು ಉತ್ಸುಕರಾಗಿದ್ದಾರೆ. ಆದರೆ ಸಾವಯವ ಉತ್ಪನ್ನಗಳಿಗೆ ಪ್ರತ್ಯೇಕ ಮಾರುಕಟ್ಟೆ ಇಲ್ಲದಿರುವುದು ಈ ರೈತರ ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಸರ್ಕಾರವು ಸಾವಯವ ಕೃಷಿಯ ಮಹತ್ವವನ್ನು ಜನರಿಗೆ ತಿಳಿಸುವ ಜೊತೆಗೆ, ಸಾವಯವ ಕೃಷಿಯಲ್ಲಿ ತೊಡಗಿಕೊಂಡ ಉತ್ಸುಕ ರೈತರಿಗೆ ಉತ್ತಮ ಮಾರ್ಗದರ್ಶನ, ಉತ್ತೇಜಕಗಳನ್ನು ನೀಡುವ ಮತ್ತು ಸಾವಯವ ಉತ್ಪನ್ನಗಳಿಗೆ ಪ್ರತ್ಯೇಕ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಸಾವಯವ ಕೃಷಿ ಅಭಿವೃದ್ಧಿಗೆ ಪ್ರಯತ್ನಿಸಬೇಕಿದೆ.
ಪರಮಾರ್ಶನ ಗ್ರಂಥಗಳು.