Tumbe Group of International Journals

Full Text


Indian Lok Sabha Elections: A Comparative Study

Dharnesha S T1

1Assistant Professor of Political Science, Government First Class College, Bellavi

dharaneshast@gmail.com


Abstract

Indian elections can be considered as a miracle of democracy and a festival of democracy because of its vast territory and huge population. Eligible registered voters in India are estimated to be more than 103 crores and the electoral process is being conducted astonishingly through more than ten lakh polling stations spread across 29 states and 8 Union Territories. India is a diverse multi-cultural country that encompasses multiple languages, several religions and different cultures. Along with Lok Sabha, Rajya Sabha elections of the Parliament of India, state assembly elections, local body elections and periodic elections to various bodies are held continuously. The Election Commission of India has been praised worldwide for its efforts to ensure transparency and fairness in the electoral process. India's elections through the use of Electronic Voting Machines, (EVM) Voter Verifiable Paper Audit Trail (VVPAT) and video surveillance are testimony to the vitality and resilience of the country's democratic institutions and serve as an inspiring model for other nations around the world.

By holding periodic general elections to India's highest legislative assembly, the Lok Sabha, it has maintained the rule of the people, in the spirit of the Constitution. The 17 general elections to the Lok Sabha held since the commencement of the Constitution of India, the details of the votes registered and cast, the performance of the political parties, etc., have been explained and analyzed in detail in this article.

Keywords: Election, Political Party, Parliament of India, Universal Adult Suffrage, Election Commission of India, Democracy.

ಭಾರತದ ಲೋಕಸಭಾ ಚುನಾವಣೆಗಳು: ಒಂದು ತೌಲನಿಕ ಅಧ್ಯಯನ.

ಡಾ. ಧರಣೇಶ. ಎಸ್‌ ಟಿ1

1ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾವಿ

ಅಮೂರ್ತ

ಭಾರತೀಯ ಚುನಾವಣೆಗಳನ್ನು ಇಲ್ಲಿನ ವಿಶಾಲ ಭೂಪ್ರದೇಶ ಮತ್ತು ಅಪಾರ ಪ್ರಮಾಣದ ಜನಸಂಖ್ಯೆಯ ಕಾರಣದಿಂದ ಪ್ರಜಾಪ್ರಭುತ್ವದ ಅದ್ಭುತ ಹಾಗೂ ಪ್ರಜಾಪ್ರಭುತ್ವದ ಹಬ್ಬ ಎಂಬುದಾಗಿ ಪರಿಗಣಿಸಬಹುದಾಗಿದೆ. ಭಾರತದಲ್ಲಿ ಅರ್ಹ ನೋಂದಾಯಿತ ಮತದಾರರು ಅಂದಾಜು 103 ಕೋಟಿಗೂ ಹೆಚ್ಚಾಗಿದ್ದು, 29 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಹರಡಿರುವ ಹತ್ತು ಲಕ್ಷಕ್ಕೂ ಅಧಿಕ ಮತ ಕೇಂದ್ರಗಳ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಆಶ್ಚರ್ಯಕರವಾಗಿ ನಡೆಸುತ್ತಿದೆ.  ಭಾರತವು ವೈವಿಧ್ಯಮಯ ಬಹು ಸಂಸ್ಕೃತಿಯ ದೇಶವಾಗಿದ್ದು, ಬಹುಸಂಖ್ಯೆಯ ಭಾಷೆಗಳು, ಕೆಲವಾರು ಧರ್ಮಗಳು ಮತ್ತು ವಿಭಿನ್ನ ಸಂಸ್ಕೃತಿಗಳನ್ನು ತನ್ನಲ್ಲಿ ಒಳಗೊಂಡಿದೆ.

ಭಾರತದ ಸಂಸತ್ತಿನ ಲೋಕಸಭೆ, ರಾಜ್ಯಸಭೆ ಚುನಾವಣೆಗಳ ಜೊತೆಗೆ, ರಾಜ್ಯ ವಿಧಾನಸಭಾ ಚುನಾವಣೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮತ್ತು ವಿವಿಧ ಸಂಸ್ಥೆಗಳಿಗೆ ನಿರಂತರವಾಗಿ ನಿಯತಕಾಲೀಕ ಚುನಾವಣೆಗಳನ್ನು ನಡೆಸಲಾಗುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತೆಯನ್ನು ಖಾತ್ರಿಪಡಿಸುವ ಪ್ರಯತ್ನಗಳಿಗಾಗಿ ಭಾರತದ ಚುನಾವಣಾ ಆಯೋಗವು ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ, (EVM) ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ಮತ್ತು ವೀಡಿಯೊ ಕಣ್ಗಾವಲುಗಳ ಮೂಲಕ ಭಾರತದ ಚುನಾವಣೆಗಳು ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಚೈತನ್ಯ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಸಾಕ್ಷಿಯಾಗಿದೆ ಮತ್ತು ಪ್ರಪಂಚದಾದ್ಯಂತ ಇತರ ರಾಷ್ಟ್ರಗಳಿಗೆ ಸ್ಫೂರ್ತಿದಾಯಕ ಮಾದರಿಯಾಗಿ ಕಾರ್ಯನಿರ್ವಹಿಸುತ್ತವೆ.

ಭಾರತದ ಅತ್ಯುನ್ನತ ಶಾಸನ ಸಭೆಯಾದ ಲೋಕಸಭೆಗೆ ನಿಯತಕಾಲಿಕ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುತ್ತಾ, ಜನತಾ ಪ್ರಭುತ್ವವನ್ನು, ಸಂವಿಧಾನದ ಅಭಿರಕ್ಷೆಯಲ್ಲಿ ಕಾಪಾಡಿಕೊಂಡು ಬಂದಿದೆ. ಭಾರತ ಸಂವಿಧಾನ ಪ್ರಾರಂಭವಾದ ನಂತರ ಈವರೆಗೆ ಲೋಕಸಭೆಗೆ ನಡೆದ 17 ಸಾರ್ವತ್ರಿಕ ಚುನಾವಣೆಗಳನ್ನು, ಅವುಗಳಲ್ಲಿ ನೋಂದಾಯಿತ ಮತ್ತು ಚಲಾವಣೆ ಮಾಡಿದ ಮತಗಳ ವಿವರ, ರಾಜಕೀಯ ಪಕ್ಷಗಳ ಸಾಧನೆ ಇತ್ಯಾದಿ ವಿವರಗಳನ್ನು ಈ ಲೇಖನದಲ್ಲಿ ಸವಿವರವಾಗಿ ವಿವರಿಸಿ ವಿಶ್ಲೇಷಿಸಲಾಗಿದೆ.

ಕೀವರ್ಡ್‌ಗಳು: ಚುನಾವಣೆ, ರಾಜಕೀಯ ಪಕ್ಷ, ಭಾರತದ ಸಂಸತ್ತು, ಸಾರ್ವತ್ರಿಕ ವಯಸ್ಕ ಮತದಾನ, ಭಾರತದ ಚುನಾವಣಾ ಆಯೋಗ, ಪ್ರಜಾಪ್ರಭುತ್ವ.

ಪೀಠಿಕೆ

ಭಾರತದ ಪ್ರಜಾಪ್ರಭುತ್ವದ ಯಶಸ್ಸಿನ ಬಗ್ಗೆ ಜಗತ್ತಿನ ಹಲವು ರಾಜಕೀಯ ವಿದ್ವಾಂಸರು ಮತ್ತು ಧುರೀಣರು ಆಶ್ಚರ್ಯದಿಂದ ಅವಲೋಕಿಸುತ್ತಿರುವ ಕಾರಣ, ಇಲ್ಲಿನ ಪ್ರಜಾಪ್ರಭುತ್ವಕ್ಕೆ ಪೂರಕವಲ್ಲದ, ಅನಕ್ಷರತೆ, ಬಡತನ, ಜಾತಿ, ಧರ್ಮ ಮತ್ತು ಸಂಸ್ಕೃತಿಯ ವೈವಿಧ್ಯತೆಯೊಂದಿಗೆ ಅಗಾಧ ಪ್ರಮಾಣದ ಜನಸಂಖ್ಯೆಯ ಕಾರಣವಿದ್ದಾಗ್ಯೂ 75 ವರ್ಷಗಳಿಂದ ಪ್ರಭುತ್ವವು ಅದನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗೆ ಹಸ್ತಾಂತರವಾಗುತ್ತಾ ಬಂದಿರುವುದು ನಿಜಕ್ಕೂ ಪರಮಾದ್ಬುತವೇ ಸರಿ. ಭಾರತಕ್ಕೆ ಪ್ರಜಾಪ್ರಭುತ್ವ ಹೊಂದಿಕೆಯಾಗುವುದಿಲ್ಲ, ಇದು ಹಾವಾಡಿಗರ, ಕೋಲೆ ಬಸವರ, ಸ್ವತಂತ್ರ ಬದುಕಿನ ಬಗ್ಗೆ ಪ್ರೀತಿಯೇ ಇಲ್ಲದೆ, ದಾಸ್ಯತ್ವವನ್ನೊಪ್ಪಿಕೊಂಡು ಜೀತದೊಂದಿಗೆ ಬದುಕುತ್ತಿರುವ ಇವರಿಗೆ, ಸ್ವಯಂ ಆಳ್ವಿಕೆಯ ಪ್ರಭುತ್ವದೊಂದಿಗಿನ ಸ್ವತಂತ್ರ, ಸಮಾನತೆ, ನ್ಯಾಯದ ಪರಿಕಲ್ಪನೆಯು ಅರ್ಥವಾಗುವುದಿಲ್ಲ ಎಂದಿದ್ದ, ಯುರೋಪಿಯನ್ನರ ಮುಂದೆ ಏಳೂವರೆ ದಶಕಗಳ ಕಾಲ ನಡೆಸಿಕೊಂಡು ಬಂದಿರುವ ಭಾರತದ ಮಾದರಿ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ಜಾತ್ರೆಯಂತಿರುವ ಚುನಾವಣೆಗಳು ಆಶ್ಚರ್ಯವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ.

ಭಾರತದಂತಹ ದೇಶದಲ್ಲಿ ಪ್ರಜಾಪ್ರಭುತ್ವದ ಯಶಸ್ಸು ಕೇವಲ ಉನ್ನತ ಜೀವನ ಮಟ್ಟ, ಶಿಕ್ಷಣ ಮತ್ತು ರಾಜಕೀಯ ಪ್ರಜ್ಞೆಯನ್ನು ಮಾತ್ರ ಅವಲಂಬಿಸಿರುವುದಿಲ್ಲ, ಬದಲಿಗೆ ನಾಯಕತ್ವದ ಮೇಲಿನ ಅಂಧಾನುಕರಣೆ, ಜಾತಿ ಮತ್ತು ಧರ್ಮಗಳ ಮೇಲಿನ ಪ್ರೀತಿ, ನಿರಂತರವಾಗಿ ಸೋತ ರಾಜಕೀಯ ನಾಯಕನ ಮೇಲಿನ ಕರುಣೆಯೂ ಕಾರಣವಾಗುತ್ತದೆ. ಮತದಾರ ಪ್ರಭುಗಳು ರಾಜಕೀಯ ಪಕ್ಷಗಳ ಧೋರಣೆಗಳು ಹಾಗೂ ಪ್ರಣಾಳಿಕೆಯ ಅರಿವೂ ಇಲ್ಲದೆ, ಸ್ಪರ್ಧಿಸಿರುವ ಅಭ್ಯರ್ಥಿಗಳ ಆಮಿಷಕ್ಕೆ ಮತದಾನ ಮಾಡುವುದು ಹಕ್ಕೆಂದು ಭಾವಿಸಿರುವ ಮೌಡ್ಯಾಂಧಕಾರದ ಪ್ರಜೆಗಳಿಂದ 75 ವರ್ಷಗಳಕಾಲ 17 ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ನಿಜಕ್ಕೂ ಇದು ಭಾರತ ಹೆಮ್ಮೆಪಡುವಂತಹ ವಿಚಾರವೇ! ಕಾರಣ ಅಮೆರಿಕಾ, ಕೆನಡಾ, ಇಂಗ್ಲೆಂಡ್‌ ಮತ್ತಿತರೆ ಕೆಲವೇ ಸುಶಿಕ್ಷಿತ, ಅಭಿವೃದ್ಧಿಹೊಂದಿರುವ ರಾಜಕೀಯ ಸಂಸ್ಕೃತಿಯ ರಾಷ್ಟ್ರಗಳನ್ನೊರತುಪಡಿಸಿದರೆ, ಮಧ್ಯಮ ಮತ್ತು ಕೆಳಮಧ್ಯಮ ಕ್ರಮಾಂಕದಲ್ಲಿನ ರಾಜಕೀಯ ಸಂಸ್ಕೃತಿಯ ದೇಶಗಳಲ್ಲಿ ಪ್ರಜಾಪ್ರಭುತ್ವ ಮತ್ತು ಆಡಳಿತದ ದಿಕ್ಸೂಚಿಯಾದ ಸಂವಿಧಾನವನ್ನು ಗಾಳಿಗೆತೂರಿ, ನಿರಂಕುಶ ಅಧಿಕಾರವನ್ನು ಪಡೆದಿರುವ ಮತ್ತು ಇನ್ನುಳಿದ ಕೆಲವು ದೇಶಗಳಲ್ಲಿ, ಸ್ಥಿರ ಸಂವಿಧಾನ ಮತ್ತು ಸರ್ಕಾರವನ್ನು ಸಂಸ್ಥಾಪನೆಮಾಡಿಕೊಳ್ಳಲು ಹೆಣಗಾಡುತ್ತಿರುವಾಗ, ನಮ್ಮಲ್ಲಿ ಇದು ನಿಜಕ್ಕೂ ಶ್ಲಾಘನೀಯವೇ ಸರಿ.

ಭಾರತದ ಪ್ರಜಾಪ್ರಭುತ್ವವು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಎನಿಸಿಕೊಂಡಿದ್ದು, ಗ್ರಾಮಪಂಚಾಯತ್‌ನಿಂದ ಸಂಸತ್ತಿನವರೆಗಿನ ಚುನಾವಣೆಗಳನ್ನು ನಡೆಸುವುದು ಅಸಾಧಾರಣ ಸಾಧನೆಯಾಗಿದೆ, ಕಾರಣ 473373748 ಪುರುಷ ಮತದಾರರು, 438537911 ಮಹಿಳಾ ಮತದಾರರು ಮತ್ತು 39075 ತೃತೀಯ ಲಿಂಗಿ ಮತದಾರರನ್ನು ಒಳಗೊಂಡಂತೆ 911950734 ಮತದಾರರು 2019ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ನೋಂದಣಿಯಾಗಿದ್ದು, ಆಪೈಕಿ ಶೇ. 67.1 ರಷ್ಟು ಮತಗಳು ಚಲಾವಣೆಯಾಗಿದ್ದು, ಅದರನ್ವಯ 317246927 ಪುರುಷ ಮತದಾರರು, 294624323 ಮಹಿಳಾ ಮತದಾದರರು ಮತ್ತು 5721 ತೃತೀಯ ಲಿಂಗಿಗಳನ್ನು ಒಳಗೊಂಡಂತೆ, 611876971 ಮತದಾರರು ಮತಚಲಾವಣೆಮಾಡಿದ್ದಾರೆ. ಜಗತ್ತಿನ 200 ಅಧಿಕ ದೇಶಗಳ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 11.37 ಪ್ರಮಾಣದಲ್ಲಿ ಭಾರತದ ಮತದಾರರಾಗಿದ್ದಾರೆ ಹಾಗೂ ಅಮೇರಿಕಾ, ಇಂಡೋನೇಷ್ಯ, ಬ್ರಜಿಲ್‌, ರಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಜಪಾನ್‌ ದೇಶಗಳ ಜನಸಂಖ್ಯೆಗೆ ಸಮನಾದ ಮತದಾರರು ಭಾರತದಲ್ಲಿದ್ದಾರೆ.

ಭಾರತದ ಚುನಾವಣಾ ಆಯೋಗವು 1951 ರಿಂದ 2019ರ ವರೆಗೆ, ಲೋಕಸಭೆಗೆ 17 ಸಾರ್ವತ್ರಿಕ ಚುನಾವಣೆಯನ್ನು ಅಲ್ಲದೆ, ವಿವಿಧ ಕಾರಣಗಳಿಂದ ಖಾಲಿಯಾದ ಸದಸ್ಯರ ಸ್ಥಾನಗಳಿಗೆ, ಆರು ತಿಂಗಳೊಳಗೆ ನಿಯತಕಾಲಿಕವಾಗಿ ಉಪ ಚುನಾವಣೆಗಳನ್ನು ನಡೆಸಿರುತ್ತದೆ. ವಿವಿಧ ಕಾರಣಗಳಿಗಾಗಿ ತನ್ನ ಐದು ವರ್ಷಗಳ ಅಧಿಕಾರಾವಧಿ ಮುಗಿಯುವ ಮೊದಲು ಲೋಕಸಭೆಯು ವಿಸರ್ಜನೆಯಾದಲ್ಲಿ, ನಡೆಯುವ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಮಧ್ಯಂತರ ಸಾರ್ವತ್ರಿಕ ಚುನಾವಣೆಗಳು ಎನ್ನಲಾಗುತ್ತದೆ.

ಚುನಾವಣಾ ಆಯೋಗವು ರಾಷ್ಟ್ರದ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಯೋಜಿಸುವ ಮತ್ತು ನಿರ್ದೇಶಿಸುವ ಸಂವಿಧಾನಾತ್ಮಕ ಸ್ವತಂತ್ರ ಸಂಸ್ಥೆಯಾಗಿದೆ. ಮತದಾರರ ನೋಂದಣಿಯಿಂದ, ಅಭ್ಯರ್ಥಿಯ ನಾಮಪತ್ರಗಳು, ಪ್ರಚಾರ, ಮತದಾನ ಮತ್ತು ಮತ ಎಣಿಕೆಯವರೆಗೆ, ಎಲ್ಲಾ ಪ್ರಕ್ರಿಯೆಗಳನ್ನು ಪ್ರಾಮಾಣಿಕವಾಗಿ ಮತ್ತು ನ್ಯಾಯಯುತವಾಗಿ ನಡೆಯುವುದನ್ನು ಖಾತ್ರಿಗೊಳಿಸುತ್ತದೆ.

Table- 1: ಲೋಕಸಭೆಯ ಚುನಾವಣಾ ಪ್ರಕ್ರಿಯೆ, ಮತದಾನದ ಹಂತಗಳು ಮತ್ತು ರಚನೆ.

ಕ್ರ. ಸಂ

ಚುನಾವಣಾ ವರ್ಷ

ಚುನಾವಣಾ ಅಧಿಸೂಚನೆಯ ಪ್ರಕಟಣೆ

ಚುನಾವಣೆಯ ಹಂತಗಳು

ಮತದಾನದ ದಿನಾಂಕಗಳು

ಲೋಕಸಭೆ ರಚನೆಯಾದ ದಿನಾಂಕ

1

1951

01-11-1951 to 29-11-1951

17

02-01-1952 to 25-01-1952

02-04-1952

2

1957

19-01-1957

20

24-02-1957 to 15-03-1957

05-04-1957

3

1962

13-01-1962 to 20-01-1962

7

19-02-1962 to 25-02-1962

02-04-1962

4

1967

13-01-1967 to 16-01-1967

13

15-02-1967 to 28-02-1967

04-03-1967

5

1971

27-01-1971 to 03-02-1971

9

01-03-1971 to 10-03-1971

15-03-1971

6

1977

10-02-1977

4

16-03-1977 to 20-03-1977

23-03-1977

7

1980

03-12-1979

2

03-01-1980 to 06-01-1980

10-01-1980

8

1984

20-11-1984

3

24-12-1984 to 28-12-1984

31-12-1984

9

1989

23-10-1989

3

22-11-1989 to 26-11-1989

02-12-1989

10

1991

19-04-1991

4

20-05-1991 to 05-06-1991

20-06-1991

11

1996

27-03-1996

3

27-04-1996 to 07-05-1996

15-05-1996

12

1998

20-01-1998 to 28-01-1998

4

16-02-1998 to 28-02-1998

10-03-1998

13

1999

11-08-1999 to 07-09-1999

8

05-09-1999 to 03-10-1999

10-10-1999

14

2004

24-03-2004 to 16-04-2004

4

20-04-2004 to 10-05-2004

17-05-2004

15

2009

23-03-2009 to 17-04-2009

5

16-04-2009 to 13-05-2009

18-05-2009

16

2014

14-03-2014 to 17-04-2014

10

07-04-2014 to 12-05-2014

04-06-2014

17

2019

18-03-2019 to 02-04-2019

7

11-04-2019 to 19-05-2019

25-05-2019

 

Source: ECI Electoral Statistics.

ಮೇಲಿನ ಕೋಷ್ಟಕದಲ್ಲಿ ಲೋಕಸಭೆಗೆ ನಡೆದ ಚುನಾವಣೆಯ ಹಲವು ಹಂತಗಳು, ಚುನಾವಣಾ ದಿನಾಂಕಗಳು ಮತ್ತು ಲೋಕಸಭೆಯ ರಚನೆಯಾದ ದಿನಾಂಕವನ್ನು ಒಳಗೊಂಡಿದೆ.  ಮೊದಲನೇ ಲೋಕಸಭೆಯಿಂದ ಹದಿನೇಳನೇ ಲೋಕಸಭೆ ಚುನಾವಣೆಗಳನ್ನು ಪಟ್ಟಿ ಮಾಡುತ್ತದೆ. ಮೊದಲ ನಾಲ್ಕು ಸಾರ್ವತ್ರಿಕ ಚುನಾವಣೆಗಳು ಐದು ವರ್ಷಕ್ಕೊಮ್ಮೆ ನಡೆದಿರುತ್ತವೆ. ಉಳಿದಂತೆ ಲೋಕಸಭೆಗೆ 1971(5ನೇ), 1980(7ನೇ), 1991(10ನೇ), 1998(12ನೇ), ಮತ್ತು 1999(13ನೇ) ರಲ್ಲಿ ಅವಧಿಗೆ ಪೂರ್ವದಲ್ಲಿ ಮಧ್ಯಂತರ ಚುನಾವಣೆಗಳು ನಡೆದಿದ್ದವು. ಮೊದಲನೇ ಎರಡನೇ, ನಾಲ್ಕನೇ ಮತ್ತು ಹದಿನಾರನೇ ಚುನಾವಣೆಗಳು 10 ಕ್ಕಿಂತ ಹೆಚ್ಚು ಹಂತಗಳಲ್ಲಿ ನಡೆಸಿದ್ದು, ಉಳಿದಂತೆ ಐದರಿಂದ ಹದಿನೈದನೆಯ ಚುನಾವಣೆವರೆಗೆ ಕಡಿಮೆ ಹಂತಗಳಲ್ಲಿ ಚುನಾವಣೆಗಳನ್ನು ನಡೆಸಲಾಗಿರುತ್ತದೆ. 1980ರಲ್ಲಿ ಏಳನೇ ಲೋಕಸಭೆಯು ಕೇವಲ ಎರಡು ಹಂತಗಳಲ್ಲಿ ನಡೆದಿರುವುದನ್ನು ಕಾಣಬಹುದು.

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಮತ್ತು ಸಂಸತ್ತಿನ ಕೆಳಮನೆಯಾದ ಲೋಕಸಭೆಯ 543 ಸದಸ್ಯರನ್ನು ಸಾರ್ವತ್ರಿಕ ವಯಸ್ಕ ಮತದಾನ ವ್ಯವಸ್ಥೆಯಿಂದ ಚುನಾಯಿಸಲಾಗುತ್ತದೆ. (ಇತ್ತೀಚೆಗೆ 2019 ರಲ್ಲಿ ಸಾಂವಿಧಾನದ ತಿದ್ದುಪಡಿ 104 ರನ್ವಯ ಇಬ್ಬರು ಆಂಗ್ಲೋ-ಇಂಡಿಯನ್ ಸದಸ್ಯರ ನಾಮನಿರ್ದೇಶನವನ್ನು ಕೈಬಿಡಲಾಗಿದೆ). ಆದರೆ 1951-52ರ ಮೊದಲನೇ ಲೋಕಸಭೆಯಲ್ಲಿ 489 ಸದಸ್ಯರಿದ್ದು, ವಿವಿಧ ಹಂತಗಳಲ್ಲಿ ನಡೆದ ಕ್ಷೇತ್ರ ಪುನರ್‌ ವಿಂಗಡಣೆಯನ್ವಯ ಲೋಕಸಭೆಯ ಸ್ಥಾನಗಳು ಹೆಚ್ಚಾಗಿರುವುದನ್ನು ಕೆಳಗಿನ ಕೋಷ್ಠಕದಲ್ಲಿ ಕಾಣಬಹುದು.

Table- 2: ಲೋಕಸಭೆಯ ಸದಸ್ಯರ ಸಂಖ್ಯೆ ಮತ್ತು ರಾಜ್ಯವಾರು ನಡೆದ ಚುನಾವಣೆಗಳು.

ಸಾರ್ವತ್ರಿಕ ಚುನಾವಣೆ

ಚುನಾವಣಾ ವರ್ಷ

ಲೋಕಸಭೆಯ ಸ್ಥಾನಗಳು

ಚುನಾವಣೆ ನಡೆದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

1 ನೇ ಲೋಕಸಭೆ

1951-52

489

(401 ಕ್ಷೇತ್ರಗಳು)

26 ರಾಜ್ಯಗಳು

2 ನೇ ಲೋಕಸಭೆ

1957

494

(403 ಕ್ಷೇತ್ರಗಳು)

13 ರಾಜ್ಯಗಳು & 4 ಕೇಂ. ಪ್ರದೇಶಗಳು

3 ನೇ ಲೋಕಸಭೆ

1962

494

14 ರಾಜ್ಯಗಳು & 4 ಕೇಂ. ಪ್ರದೇಶಗಳು

4 ನೇ ಲೋಕಸಭೆ

1967

520

17 ರಾಜ್ಯಗಳು & 10 ಕೇಂ. ಪ್ರದೇಶಗಳು

5 ನೇ ಲೋಕಸಭೆ

1971

518

18 ರಾಜ್ಯಗಳು & 9 ಕೇಂ. ಪ್ರದೇಶಗಳು

6 ನೇ ಲೋಕಸಭೆ

1977

542

25 ರಾಜ್ಯಗಳು & 6 ಕೇಂ. ಪ್ರದೇಶಗಳು

7 ನೇ ಲೋಕಸಭೆ

1980

529

(Except Assam-12, Meghalaya-1)

25 ರಾಜ್ಯಗಳು & 6 ಕೇಂ. ಪ್ರದೇಶಗಳು

8 ನೇ ಲೋಕಸಭೆ

1984

542

25 ರಾಜ್ಯಗಳು & 6 ಕೇಂ. ಪ್ರದೇಶಗಳು

9 ನೇ ಲೋಕಸಭೆ

1989

529

(Except Assam-12)

23 ರಾಜ್ಯಗಳು & 7 ಕೇಂ. ಪ್ರದೇಶಗಳು

10 ನೇ ಲೋಕಸಭೆ

1991-92

537

(Except J&K-2, Bihar-2, UP-1)

23 ರಾಜ್ಯಗಳು & 7 ಕೇಂ. ಪ್ರದೇಶಗಳು

11 ನೇ ಲೋಕಸಭೆ

1996

543

25 ರಾಜ್ಯಗಳು & 7 ಕೇಂ. ಪ್ರದೇಶಗಳು

12 ನೇ ಲೋಕಸಭೆ

1998

543

25 ರಾಜ್ಯಗಳು & 7 ಕೇಂ. ಪ್ರದೇಶಗಳು

13 ನೇ ಲೋಕಸಭೆ

1999

543

25 ರಾಜ್ಯಗಳು & 7 ಕೇಂ. ಪ್ರದೇಶಗಳು

14 ನೇ ಲೋಕಸಭೆ

2004

543

28 ರಾಜ್ಯಗಳು & 7 ಕೇಂ. ಪ್ರದೇಶಗಳು

15 ನೇ ಲೋಕಸಭೆ

2009

543

28 ರಾಜ್ಯಗಳು & 7 ಕೇಂ. ಪ್ರದೇಶಗಳು

16 ನೇ ಲೋಕಸಭೆ

2014

543

28 ರಾಜ್ಯಗಳು & 7 ಕೇಂ. ಪ್ರದೇಶಗಳು

17 ನೇ ಲೋಕಸಭೆ

2019

543

29 ರಾಜ್ಯಗಳು & 7 ಕೇಂ. ಪ್ರದೇಶಗಳು

 

Source: ECI Electoral Statistics.

ಭಾರತದ ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ ಸಂವಿಧಾನ ಜಾರಿಗೆ ಬಂದು ಪ್ರಥಮ ಲೋಕಸಭೆ ರಚನೆಯಾದಾಗ 401 ಚುನಾವಣಾ ಕ್ಷೇತ್ರಗಳೊಂದಿಗೆ 489 ಸದಸ್ಯರನ್ನು ಒಳಗೊಂಡಿತ್ತು. ಅಂದರೆ ದೇಶದಾದ್ಯಂತ 88 ಕ್ಷೇತ್ರಗಳಲ್ಲಿ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿತ್ತು. ಕರ್ನಾಟಕದ ಮೈಸೂರು ಮತ್ತು ಬೆಂಗಳೂರಿನಲ್ಲಿ ಎರಡು ಸದಸ್ಯ ಕ್ಷೇತ್ರಗಳಾಗಿದ್ದನ್ನು ಕಾಣಬಹುದು.

Table- 3: ಲೋಕಸಭೆಯ ಚುನಾವಣೆಗಳಲ್ಲಿ ಮತದಾನ ಕೇಂದ್ರ, ಮತದಾರರ ನೋಂದಣಿ ಮತ್ತು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿವರ

ಚುನಾವಣಾ ವರ್ಷ

ನೋಂದಾಯಿತ ಮತದಾರರು

(ಕೋಟಿಗಳಲ್ಲಿ)

ಚಲಾವಣೆಯಾದ ಮತ ಪ್ರಮಾಣ %

ಸ್ಥಾಪನೆಯಾಗಿದ್ದ

ಮತಗಟ್ಟೆಗಳು

ಸ್ಪರ್ಧಿಸಿದ್ದ ಅಭ್ಯರ್ಥಿಗಳು

ಚುನಾಯಿತರಾದ ಅಭ್ಯರ್ಥಿಗಳು

1951-52

17.32

45.67

196084

1874

489

1957

19.7

47.74

220478

1519

494

1962

21.64

55.42

238031

1985

494

1967

25.02

61.04

243693

2369

520

1971

27.42

55.27

342918

2784

518

1977

32.12

60.49

373910

2439

542

1980

35.62

56.92

436813

4629

529

1984

40.03

64.01

506058

5492

542

1989

49.89

61.95

580798

6160

529

1991-92

51.15

55.88

591020

8749

537

1996

59.26

57.94

767462

13952

543

1998

60.59

61.97

772681

4750

543

1999

61.95

59.99

774651

4648

543

2004

67.15

58.07

687473

5435

543

2009

71.70

58.21

830866

8070

543

2014

83.40

66.44

927553

8251

543

2019

91.20

67.40

1037848

8054

543

 

Source: ECI Electoral Statistics.

ಭಾರತದ ಚುನಾವಣಾ ಆಯೋವು ನಡೆಸಿದ ಮೊದಲನೇ ಸಾರ್ವತ್ರಿಕ ಚುನಾವಣೆಯಲ್ಲಿ 17.32 ಕೋಟಿ ಮತದಾರರು ನೋಂದಣಿಯಾಗಿದ್ದು, ಶೇ. 45.67 ರಷ್ಟು ಮತದಾರರು ಮತಗಳನ್ನು ಚಲಾವಣೆ ಮಾಡಿದ್ದರು. ಆ ಚುನಾವಣೆಯಲ್ಲಿ 196084 ಮತಗಟ್ಟೆಗಳಿದ್ದು 1874 ಅಭ್ಯರ್ಥಿಗಳು 489 ಸದಸ್ಯ ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಪ್ರಸ್ತುತ ಇತ್ತೀಚಿಗೆ ಅಂದರೆ 2019 ರಲ್ಲಿ ನಡೆದ 17 ನೇ ಸಾರ್ವತ್ರಿಕ ಚುನಾವಣೆಯಲ್ಲಿ 91.2 ಕೋಟಿ ಮತದಾರರು ನೋಂದಾಯಿತರಾಗಿದ್ದು, ಶೇ. 67.40 ಮತದಾರರು ತಮ್ಮ ಮತ ಚಲಾವಣೆ ಮಾಡಿದ್ದರು. ಈ ಚುನಾವಣೆಯಲ್ಲಿ 1037848 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 543 ಸದಸ್ಯ ಸ್ಥಾನಗಳಿಗೆ 8054 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇತ್ತೀಚಿನ 17 ನೇ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾವಣೆಯಲ್ಲಿ ಸರ್ವಕಾಲೀಕ ದಾಖಲೆಯನ್ನು ದಾಖಲಿಸಿದ್ದು, ಮತ ಚಲಾವಣೆ ಮೊದಲನೇ ಚುನಾವಣೆಯಿಂದ ಇತ್ತೀಚಿನವರೆಗೆ  ನಿರಂತರವಾಗಿ ಏರಿಕೆಯಾಗಿರುವುದನ್ನು ಕಾಣಬಹುದು. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಒಂದು ಸಾವಿರದಿಂದ ಎಂಟು ಸಾವಿರದವರೆಗೆ ಏರಿಕೆಯಾಗಿರುವುದರಿಂದ, ರಾಜಕಾರಣದಲ್ಲಿ ಪಾಲ್ಗೊಳ್ಳುವಿಕೆಯ ಮತ್ತು ಅಧಿಕಾರದತ್ತ ಆಕರ್ಷಿತರಾಗುತ್ತಿರುವುದನ್ನು  ಕಾಣಬಹುದು. ಆದರೆ 1996 ರ 11 ನೇ ಸಾರ್ವತ್ರಿಕ ಚುನಾವಣೆಯಲ್ಲಿ 13 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಸರ್ವಕಾಲೀಕ ದಾಖಲೆಯಾಗಿರುವುದನ್ನು ಕಾಣಬಹುದು. ಪ್ರಸ್ತುತ 2023ರ ಏಪ್ರಿಲ್‌ನಲ್ಲಿ ಮತದಾರರ ಅಂಕಿಅಂಶಗಳನ್ವಯ 103 ಕೋಟಿಗೂ ಅಧಿಕ ಮತದಾರರಿರುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ.

Table- 4: ಲೋಕಸಭೆಯ ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳ ನಡುವಣ ಸ್ಥಾನ ಹಂಚಿಕೆ.

ಚುನಾವಣಾ ವರ್ಷ

ಚು. ಸ್ಪರ್ಧಿಸಿದ್ದ ರಾ. ಪಕ್ಷಗಳು

ವಿವಿಧ ರಾಜಕೀಯ ಪಕ್ಷಗಳು ಪಡೆದ ಪಡೆದ ಸ್ಥಾನಗಳು

ರಾಷ್ಟೀಯ ಪಕ್ಷಗಳು

ರಾಜ್ಯ ಪಕ್ಷಗಳು

ಸ್ಥಾನಮಾನ ಪಡೆಯದ ಪಕ್ಷಗಳು

ಸ್ವತಂತ್ರ ಅಭ್ಯರ್ಥಿಗಳು

ಚುನಾಯಿತ ಅಭ್ಯರ್ಥಿಗಳು

1951

53

418

34

-

37

489

1957

15

421

31

0

42

494

1962

27

440

28

6

20

494

1967

25

440

43

2

35

520

1971

53

451

40

13

14

518

1977

34

481

49

3

9

542

1980

36

485

34

1

9

529

1984

35

462

66

0

13

541

1989

113

471

27

19

12

529

1991

145

478

51

4

1

537

1996

209

403

129

2

9

543

1998

176

387

101

49

6

543

1999

169

369

158

10

6

543

2004

230

364

159

15

5

543

2009

363

376

146

12

9

543

2014

464

342

182

16

3

543

2019

673

397

136

6

4

543

 

Source: ECI Electoral Statistics.

ಲೋಕಸಭೆಯ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪಾಲ್ಗೊಳ್ಳುವಿಕೆಯನ್ನು ಗಮನಿಸಿದರೆ, 1951 ರ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 53 ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದರೆ, 1984 ರ ವರೆಗೆ 50 ಪಕ್ಷಗಳ ಆಸುಪಾಸಿನಲ್ಲಿದ್ದದ್ದನ್ನು ಕಾಣಬಹುದು. ಒಂಬತ್ತನೆ ಲೋಕಸಭೆಯಲ್ಲಿ ಪ್ರಥಮ ಬಾರಿಗೆ ನೂರಕ್ಕೂ ಅಧಿಕ ಅಂದರೆ 113 ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದವು, ಆದರೆ 2019 ರ 17 ನೇ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಅಂದರೆ 673 ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಿದ್ದವು. ಲೋಕಸಭೆಯ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳ ಪ್ರಮಾಣದಲ್ಲಿ ರಾಷ್ಟ್ರೀಯ ಪಕ್ಷಗಳು ಸಿಂಹಪಾಲನ್ನು ಪಡೆಯುತ್ತಿದ್ದವು. ಆದರೆ 1996 ರ ವರೆಗೆ ರಾಷ್ಟ್ರೀಯ ಪಕ್ಷಗಳು 400 ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುತ್ತಿದ್ದರೆ, ನಂತರದ ಎಲ್ಲಾ ಚುನಾವಣೆಗಳಲ್ಲಿ ಮುನ್ನೂರಕ್ಕೂ ಅಧಿಕ ಹಾಗೂ 400ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದಿರುವುದನ್ನು ಕಾಣಬಹುದು. ಪ್ರಾದೇಶಿಕ ಪಕ್ಷಗಳು 1996 ರವರೆಗೆ 50 ಸ್ಥಾನಗಳಿಗಿಂತ ಕಡಿಮೆ ಸ್ಥಾನ ಪಡೆದಿದ್ದರೆ, ನಂತರದ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳು ನೂರೈವತ್ತರ ಆಸುಪಾಸಿನ ಸ್ಥಾನಗಳನ್ನು ಪಡೆಯುವ ಮೂಲಕ ನಿರ್ಣಾಯಕ ಹಾಗೂ ಕೇಂದ್ರ ಸರ್ಕಾರವನ್ನು ನಿಯಂತ್ರಿಸುವಷ್ಟು ಬಲಿಷ್ಠವಾಗುತ್ತಿರುವುದನ್ನು ಕಾಣಬಹುದಾಗಿದೆ. ಯಾವುದೇ ಸ್ಥಾನಮಾನ ಪಡೆಯದ ರಾಜಕೀಯ ಪಕ್ಷಗಳು ಏಳು ಚುನಾವಣೆಗಳಲ್ಲಿ ಒಂದು ಅಂಕಿಯ ಸ್ಥಾನಗಳಿಗೆ ಸೀಮಿತವಾದರೆ, ಮೂರು ಚುನಾವಣೆಗಳಲ್ಲಿ ಶೂನ್ಯ ಸಾಧನೆ ಹಾಗೂ ಏಳು ಚುನಾವಣೆಗಳಲ್ಲಿ ಇಪ್ಪತ್ತು ಸಂಖ್ಯೆಗಳಿಗೆ ಸೀಮಿತವಾದರೆ, 1998 ರ 12 ನೇ ಲೋಕಸಭೆಯಲ್ಲಿ 49 ಸ್ಥಾನಗಳನ್ನು ಗಳಿಸುವ ಮೂಲಕ ಅತ್ಯಂತಹೆಚ್ಚು ಸ್ಥಾನ ಪಡೆದಿರುವುದನ್ನು ಕಾಣಬಹುದು. ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧಿಸಿದ್ದರೂ ಹತ್ತನೇ ಲೋಕಸಭೆಯ ಚುನಾವಣೆಗಳಲ್ಲಿ ಒಬ್ಬ  ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದರೆ ಉಳಿದಂತೆ 10 ಚುನಾವಣೆಗಳಲ್ಲಿ 10 ಸ್ಥಾನಗಳನ್ನು ಮೀರಲಿಲ್ಲ. ಉಳಿದ ಏಳು ಚುನಾವಣೆಗಳಲ್ಲಿ ಎರಡು ಅಂಕಿಗಳನ್ನು ದಾಟಿದರೂ 50 ನ್ನು ಮುಟ್ಟಲಿಲ್ಲ. ಇಂದಿಗೂ ಎರಡನೇ ಲೋಕಸಭೆಯಲ್ಲಿಆಯ್ಕೆಯಾಗಿದ್ದ 42 ಸ್ವತಂತ್ರ ಅಭ್ಯರ್ಥಿಗಳನ್ನು ಹೊಂದಿದ್ದ ಸಂಖ್ಯೆಯೇ ಅಧಿಕವಾಗಿದೆ.

ರಾಜಕೀಯ ಪಕ್ಷಗಳ ಸಾಧನೆ ಮತ್ತು ಸಾಮರ್ಥ್ಯ

ಭಾರತದಲ್ಲಿನ ಚುನಾವಣೆಗಳು ಸಾಮಾನ್ಯವಾಗಿ ತೀವ್ರ ಜಿದ್ದಾಜಿದ್ದಿ ಮತ್ತು ಭರಾಟೆಯ ಪ್ರಚಾರದಿಂದ ಕೂಡಿರುತ್ತವೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಪಕ್ಷಗಳು, ಮತದಾರರನ್ನು ತಲುಪಲು ಮತ್ತು ತಮ್ಮತ್ತ ಸೆಳೆಯಲು ವಿವಿಧ ವಿಧಾನಗಳನ್ನು ಅನುಸರಿಸುತ್ತವೆ. ಇವುಗಳಲ್ಲಿ ರಾಜಕೀಯ ಪ್ರದರ್ಶನಗಳು, ಸಾರ್ವಜನಿಕ ಭಾಷಣಗಳು, ಮನೆ-ಮನೆ ಪ್ರಚಾರಗಳು ಮತ್ತು ಸಾಮಾಜಿಕ, ಡಿಜಿಟಲ್‌ ಮತ್ತು ಪ್ರಿಂಟ್‌ ಮಾಧ್ಯಮಗಳ ವೇಧಿಕೆಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ.  ಒಟ್ಟಾರೆಯಾಗಿ, ಭಾರತೀಯ ಚುನಾವಣೆಗಳು ದೇಶದ ಪ್ರಜಾಪ್ರಭುತ್ವದ ಹಬ್ಬದಂತಹ ಪ್ರಕ್ರಿಯೆಗಳಾಗಿವೆ.  ಈ ಚುನಾವಣೆಗಳ ಮೂಲಕ ರಾಷ್ಟ್ರದ ಆಡಳಿತ ವ್ಯವಸ್ಥೆಯಲ್ಲಿ ಸಾಮಾನ್ಯ ನಾಗರಿಕರಿಗೆ ಭಾಗವಹಿಸಲು ಅವಕಾಶವನ್ನು ಒದಗಿಸುತ್ತದೆ.  ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ, ದೃಢವಾದ ಮತ್ತು ಸಕ್ರಿಯವಾದ ರಾಜಕೀಯ ಸಂಸ್ಕೃತಿಯನ್ನು ಹೊಂದಿದೆ.  ಇದು ಭಾರತದ ರಾಜಕೀಯ ವ್ಯವಸ್ಥೆಯ ಮೇಲೆ ಭಾರತೀಯರ ನಂಬಿಕೆ, ಅದರ ಸ್ವಭಾವವನ್ನು ಅವಲಂಭಿಸಿದೆ.  ಭಾರತದಲ್ಲಿ 1951 ರಿಂದ ಈವರೆಗಿನ ಎಲ್ಲಾ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪ್ರಜಾಸತ್ತಾತ್ಮಕ ಬಲವರ್ಧನೆಯನ್ನು ಮುಂದುವರೆಸಿದೆ.

Table- 5: ಲೋಕಸಭೆಯ ಚುನಾವಣೆಗಳಲ್ಲಿ ವಿಜೇಯ ಹಾಗೂ ವಿರೋಧ ಪಕ್ಷದ ಸ್ಥಾನಪಡೆದ ಪಕ್ಷಗಳ ಮಾಹಿತಿ.

ಚುನಾವಣಾ ವರ್ಷ

ವಿಜೇತ/ಅತಿ ಹೆಚ್ಚು ಸ್ಥಾನ ಪಡೆದ ಪಕ್ಷ

ಎರಡನೇ ಸ್ಥಾನ ಪಡೆದ ಪಕ್ಷ

ರಾ. ಪಕ್ಷ

ಪಡೆದ ಸ್ಥಾನಗಳು

ಪಡೆದ ಮತದ  %

ರಾ. ಪಕ್ಷ

ಪಡೆದ ಸ್ಥಾನಗಳು

ಪಡೆದ ಮತದ  %

1951

INC

364

44.99

CPI

16

3.29

1957

INC

371

47.78

CPI

27

8.92

1962

INC

361

44.72

CPI

29

9.94

1967

INC

283

40.78

SWA

44

8.67

1971

INC

352

43.68

CPM

25

5.12

1977

JP

295

41.32

INC

154

34.52

1980

INC(I)

353

42.69

JNP(S)

41

9.39

1984

INC

424

48.12

CPM

22

5.71

1989

INC

197

39.53

JD

143

17.79

1991

INC

244

36.4

BJP

120

20.07

1996

BJP

161

20.29

INC

140

28.80

1998

BJP

182

25.59

INC

141

25.82

1999

BJP

182

23.75

INC

114

28.30

2004

INC

145

26.53

BJP

138

22.16

2009

INC

206

28.55

BJP

116

18.80

2014

BJP

282

31.34

INC

44

19.52

2019

BJP

303

37.7

INC

52

19.67

 

Source: ECI Electoral Statistics.

ಮೊದಲನೇ ಲೋಕಸಭೆಯಿಂದ ಹದಿನೇಳನೆ ಲೋಕಸಭೆಗೆ 72 ವರ್ಷಗಳ ಅವಧಿಯಲ್ಲಿ ನಡೆದ ಮದ್ಯಂತರ ಚುನಾವಣೆಗಳನ್ನು ಒಳಗೊಂಡಂತೆ 17 ಸಾರ್ವತ್ರಿಕ ಚುನಾವಣೆಗಳಲ್ಲಿ1951 ರಿಂದ 1971 ರವೆರೆಗೆ ಹಾಗೂ, 1980,1984 ರಲ್ಲಿ ನಿಚ್ಚಳ ಬಹುಮತದೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ ಅಧಿಕಾರವನ್ನು ಪಡೆದಿದ್ದು, 1989 ರಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದು ಅಗತ್ಯ ಬಹುಮತವಿಲ್ಲದೆ ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುತ್ತದೆ.  ಉಳಿದಂತೆ 1991, 2004 ಮತ್ತು 2009 ರಲ್ಲಿ ದೊಡ್ಡ ಶಾಸಕಾಂಗ ಪಕ್ಷವಾಗಿ ಹೊರಹೊಮ್ಮಿದರೂ ಸೂಕ್ತ ಬಹುಮತವಿಲ್ಲದೆ, ಇತರೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲದ ಮೂಲಕ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುತ್ತದೆ.  ರಾಷ್ಟ್ರೀಯ ತುರ್ತು ಪರಿಸ್ಥಿತಿಯ ನಂತರದ 1980 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೇಸ್‌ ಪಕ್ಷವನ್ನು ದೇಶದ ಜನತೆ ತಿರಸ್ಕರಿಸಿ, ಜನತಾ ಪಕ್ಷವನ್ನು ಅಧಿಕಾರಕ್ಕೇರಿಸಿದರು, ಆಗ ಪ್ರಥಮ ಬಾರಿಗೆ ಕಾಂಗ್ರೇಸ್‌ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದ್ದನ್ನು ಕಾಣಬಹುದಾಗಿದೆ. ಭಾರತೀಯ ಜನತಾ ಪಕ್ಷ 1980 ರಲ್ಲಿ ಸ್ಥಾಪನೆಯಾಗಿದ್ದು, 1991 ರ ಸಾರ್ವತ್ರಿಕ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 1996, 1998 ಮತ್ತು 1999 ರ ಚುನಾವಣೆಗಳಲ್ಲಿ ದೊಡ್ಡ ಶಾಸಕಾಂಗ ಪಕ್ಷವಾಗಿ, ವಿವಿಧ ರಾಜಕೀಯ ಪಕ್ಷಗಳ ಸಹಯೋಗದೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿರುತ್ತದೆ. ನಂತರದ 2004 ಮತ್ತು 2009 ರ ಚುನಾವಣೆಗಳಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದರೆ, 2014 ಮತ್ತು 2019 ರ ಸಾರ್ವತ್ರಿಕ  ಚುನಾವಣೆಗಳಲ್ಲಿ ಸಂಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿರುತ್ತದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಭಾರತೀಯ ಜನತಾ ಪಕ್ಷಗಳ ಅಧಿಕಾರ ಹಂಚಿಕೆ ನಡುವೆ 1977 ರಲ್ಲಿ ಜನತಾ ಪಕ್ಷ ಒಮ್ಮೆ ಬಹುಮತ ಪಡೆದಿತ್ತಾದರೂ, ಇನ್ನಾವುದೇ ರಾಜಕೀಯ ಪಕ್ಷವೂ ಬಹುಮತ ಅಥವಾ ಅತಿ ದೊಡ್ಡ ಶಾಸಕಾಂಗ ಪಕ್ಷದ ಸ್ಥಾನಮಾನ ಪಡೆಯಲಿಲ್ಲ. ಎರಡನೇ ಅತಿದೊಡ್ಡ ಪಕ್ಷವಾಗಿ ಈ ಎರಡು ಪಕ್ಷಗಳೇ 9 ಸಾರ್ವತ್ರಿಕ ಚುನಾವಣೆಯಲ್ಲಿ ಪರಸ್ಪರದ ಸ್ಥಾನಪಡೆದಿದ್ದವು. ಉಳಿದಂತೆ ಕಮುನಿಸ್ಟ್‌ ಪಕ್ಷಗಳು 1951, 1957, 1961, 1971 ಮತ್ತು 1984 ರಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುತ್ತವೆ. ಇನ್ನುಳಿದಂತೆ 3 ಸಾರ್ವತ್ರಿಕ ಚುನಾವಣೆಗಳಲ್ಲಿ ಜನತಾ ಪಕ್ಷದ ವಿವಿಧ ಘಟಕಗಳು ಎರಡನೇ ಸ್ಥಾನದಲ್ಲಿ ಉಳಿದವು. ಭಾರತ ರಾಜಕಾರಣದಲ್ಲಿ ಮೇಲ್ನೋಟಕ್ಕೆ ಬಹುಪಕ್ಷ ಪದ್ದತಿ ಇದ್ದರೂ, 1977 ರವರೆಗೆ ಭಾರತದ ರಾಷ್ಟ್ರೀಯ ಕಾಂಗ್ರೇಸ್‌ ಪಕ್ಷದ ಆಡಳಿತವನ್ನು ಮತ್ತು 1991 ರ ಭಾರತೀಯ ಜನತಾ ಪಕ್ಷದ ಪಾಲ್ಗೋಳ್ಳುವಿಕೆಯಿಂದ ದ್ವಿಪಕ್ಷ ಪದ್ದತಿಯಂತಹ ರಾಜಕಾರಣವನ್ನು ಕಾಣಬಹುದು.

ಭಾರತದ ಸಂಸತ್ತಿನ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ, ಚಲಾವಣೆಯಾದ ಮತಗಳಲ್ಲಿ ಶೇ. 50 ರ ಫಾಲನ್ನು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಯಾವ ರಾಜಕೀಯ ಪಕ್ಷವೂ ಪಡೆದಿರುವುದಿಲ್ಲ. ಎರಡನೇ ಸ್ಥಾನದಲ್ಲಿ ಕುಳಿತ ಪಕ್ಷಗಳು 9 ಸಾರ್ವತ್ರಿಕ ಚುನಾವಣೆಗಳಲ್ಲಿ ಎರಡು ಅಂಕಿಗಳ ಸದಸ್ಯತ್ವವನ್ನು ಪಡೆಯಲಿಲ್ಲ. ಆದುದರಿಂದ ಬದಲಾದ ಸಂದರ್ಭದಲ್ಲಿ ಏಕ ಪಕ್ಷದ ಜನಪ್ರಿಯತೆಯನ್ನು ಕಾಣಬಹುದು.

ಲೋಕಸಭೆಯಲ್ಲಿ ಮಹಿಳಾ ಪಾತಿನಿಧ್ಯ

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಪುರುಷರಿಗೆ ಸಮಾನವಾದ ಸಂಖ್ಯಾಬಾಹುಳ್ಯದ ಮಹಿಳೆಯರು, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ರಾಜಕಾರಣದಲ್ಲೂ ಅಲ್ಪಸಂಖ್ಯಾತರಾಗಿಯೇ ಉಳಿದಿದ್ದಾರೆ. ವಿವಿಧ ಕಾರಣಗಳಿಂದ ಮಹಿಳೆಯರ ಪಾಲ್ಗೊಳ್ಳುವಿಗೆ ಮತ್ತುಗೆಲುವಿನ ಪ್ರಮಾಣ ಅತ್ಯಂತ ಕಡಿಮೆ ಇದ್ದುದನ್ನು ಕಾಣಬಹುದು.

Table- 6: ಸಾರ್ವತ್ರಿಕ ಚುನಾವಣೆಗಳಲ್ಲಿ ಮಹಿಳೆಯರ ಪಾಲ್ಗೋಳ್ಳುವಿಕೆ ಮತ್ತು ಸಾಧನೆ.

ಸಾರ್ವತ್ರಿಕ ಚುನಾವಣೆ

ಚುನಾವಣೆ ನಡೆದ ವರ್ಷ

ಸ್ಪರ್ಧಿಸಿದ್ದ ಮಹಿಳೆಯರ ಸಂಖ್ಯೆ

ಚುನಾಯಿತರಾದ ಮಹಿಳೆಯರ ಸಂಖ್ಯೆ

ಶೇ. ವಾರು ಸ್ಥಾನ ಹಂಚಿಕೆ

1 ನೇ ಲೋಕಸಭೆ

1951-52

-

24

-

2 ನೇ ಲೋಕಸಭೆ

1957

45

22

4.5

3 ನೇ ಲೋಕಸಭೆ

1962

66

31

6.3

4 ನೇ ಲೋಕಸಭೆ

1967

68

29

5.6

5 ನೇ ಲೋಕಸಭೆ

1971

61

29

5.6

6 ನೇ ಲೋಕಸಭೆ

1977

70

19

3.5

7 ನೇ ಲೋಕಸಭೆ

1980

143

28

5.3

8 ನೇ ಲೋಕಸಭೆ

1984

171

43

7.9

9 ನೇ ಲೋಕಸಭೆ

1989

198

29

5.5

10 ನೇ ಲೋಕಸಭೆ

1991-92

330

39

7.3

11 ನೇ ಲೋಕಸಭೆ

1996

599

40

7.4

12 ನೇ ಲೋಕಸಭೆ

1998

274

43

7.9

13 ನೇ ಲೋಕಸಭೆ

1999

284

49

9.0

14 ನೇ ಲೋಕಸಭೆ

2004

355

45

8.3

15 ನೇ ಲೋಕಸಭೆ

2009

556

59

10.9

16 ನೇ ಲೋಕಸಭೆ

2014

668

62

11.4

17 ನೇ ಲೋಕಸಭೆ

2019

726

78

14.4

 

Source: ECI Electoral Statistics.

ಲೋಕಸಭೆಯ ಒಂದರಿಂದ ಏಳನೇ ಸಾರ್ವತ್ರಿಕ ಚುನಾವಣೆ ರವರೆಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಅತ್ಯಂತ ನೀರಸವಾಗಿದ್ದು, ಗೆಲುವಿನ ಪ್ರಮಾಣದಲ್ಲಿ 31 ಸ್ಥಾನಗಳನ್ನು, ಸದಸ್ಯತ್ವದ ಸ್ಥಾನ ಹಂಚಿಕೆಯಲ್ಲಿ ಶೇ. 6.3 ನ್ನು ಮೀರಲಿಲ್ಲ. ಇನ್ನುಳಿದಂತೆ 1980 ರಿಂದ 2019 ಚುನಾವಣೆಗಳಲ್ಲಿ ಮಹಿಳೆಯರು ಸ್ಪರ್ಧಿಸುವುದು ಹೆಚ್ಚುತ್ತಾ ಸಾಗಿದರೂ, ಗೆಲುವಿನ ಪ್ರಾತಿನಿಧ್ಯದ ಪ್ರಮಾಣದಲ್ಲಿ 59 ಸ್ಥಾನಗಳ ಮೂಲಕ ಶೇ. 10 ರ ಪ್ರಾತಿನಿಧ್ಯತೆ ಸಿಕ್ಕಿದ್ದು 2009 ರ 15 ನೇ ಲೋಕಸಭೆಯ ಚುನಾವಣೆಯಲ್ಲಿ. ಆರನೇ ಲೋಕಸಭೆಯ ಚುನಾವಣೆಯಲ್ಲಿ 19 ಸ್ಥಾನಗಳ ಮೂಲಕ ಅತ್ಯಂತ ಕಡಿಮೆ ಸ್ಥಾನ ಪಡೆದರೆ, ಇತ್ತೀಚಿನ 17 ಲೇಕಸಭೆಯಲ್ಲಿ 78 ಸ್ಥಾನಗಳನ್ನು ಪಡೆಯುವ ಮೂಲಕ ಶೇ. 14.4 ಪ್ರಾತಿನಿಧ್ಯವನ್ನು ಪಡೆದಿದೆ. ಭಾರತದ ಮಹಿಳೆಯರು ರಾಜಕಾರಣದಲ್ಲಿ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಬದಲು, ಮಹಿಳಾ ಮೀಸಲಾತಿಯನ್ನು ನೀಡುವ ಮೂಲಕ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ.

            ಭಾರತದ ಸಂಸತ್ತು ತನ್ನ ನೂತನ ಕಟ್ಟಡದಲ್ಲಿ 2023ರ ಮೇ 28 ರಂದು ಉದ್ಘಾಟನೆಯಾಗಿ ಜೂನ್‌ ಅಥವಾ ಜುಲೈನಿಂದ ಅಧಿವೇಶನಗಳು ಪ್ರಾರಂಭವಾಗಲಿವೆ. ಲೋಕಸಭೆಗೆ 18 ಸಾರ್ವತ್ರಿಕ ಚುನಾವಣೆ 2024ರ ಮೇ ಗೆ ಪೂರ್ಣಗೊಡು, ನೂತನ ಸರ್ಕಾರದ ನಿರೀಕ್ಷೆಯಲ್ಲಿ ದೇಶದ ಜನತೆ ಮತ್ತು ರಾಜಕೀಯ ಪಕ್ಷಗಳು ಎದುರುನೋಡುತ್ತವೆ. ಈ ಚುನಾವಣೆಯಲ್ಲಿ ಮಹಿಳೆಯರ ಪ್ರಾತಿನಿಧ್ಯತೆ ಹೆಚ್ಚಾಗಲಿ, ಶೇ. 75ರಷ್ಟು ಮತದಾನವಾಗಿ ಮತ್ತೊಂದು ಮೈಲಿಗಲ್ಲು ನಿರ್ಮಾಣವಾಗಲಿ ಮತ್ತು ಯಾವುದೇ ಪಕ್ಷವಾದರೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿ ಎನ್ನುವುದು ರಾಜನೀತಿ ತಜ್ಞರ ಮತ್ತು ರಾಜಕೀಯದ ಕುರಿತು ಸದಾಶಯಹೊಂದಿರುವವರ ಆಶಯವಾಗಿದೆ.

ಆಕರಗಳು:

  1. Electoral Statistical Hand Book 2021; ECI 2021
  2. Indian Polity; Lakshmikantha M 2021
  3. Elections DATA and Statistics
  4. News Papers.
  5. Different periodicals in Kannada and English
  6. https://en.wikipedia.org/wiki/Election_Commission_of_India
  7. https://eci.gov.in/
  8. https://pib.gov.in/
  9. www.ceo.karnataka.gov.in


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal