Deprecated: Required parameter $contactemail follows optional parameter $action in /home/u416200609/domains/tumbe.org/public_html/application/helpers/auth_helper.php on line 417
Tumbe Group of International Journals Tumbe Group of International Journals

Full Text


Merge of Public Sector Banks: Lost Regional Identity and Impact of Merge

Kempegowda P

1 Assistant Professor of Economics

Government First Class College, Maluru-563160, Kolar District

Email: kempe2015@gmail.com


Abstract

The process of merger of banks is continuously going on in the banking sector of India. The current central government has recently done the process of merging many public sector banks. In this process many banks merged with other banks. This fact was much debated as an economic phenomenon at the national level. In this article an attempt has been made to discuss the aspirations of the merger, the attitude of the central government, the merged banks, the advantages of the merger, the effects of this process on the banking sector. In this analysis it is mentioned that Bank of Mysore in Karnataka which was performing well has lost its identity. On the face of it, the destruction of this regional identity is not seen as a serious matter by the common people of the society, but it is seen as a serious matter by the culturally conscious or economic experts of Karnataka. There is also the question of whether this will affect the presence and identity of other regional products in the future. For example, Nandini milk products from Karnataka indicate existence and destruction of identity. There are also fears that this is the beginning of the destruction of the institutional system. Eg: State Bank of Mysore disappeared as a local body so can KMF disappear? In this background, in the present article, the meaning of the word bank, its statutory basis and opportunities, the circumstances in which private banks were converted into public sector banks, the need for merger - the objectives, etc. have been briefly discussed.

Keywords: Public Sector, Banking Sector, Merger Process, Regional Identity, Act.

ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ: ನಶಿಸಿದ ಪ್ರಾದೇಶಿಕ ಅಸ್ಮಿತೆ ಹಾಗು ವಿಲೀನದ ಪರಿಣಾಮ

ಡಾ. ಕೆಂಪೇಗೌಡ ಪಿ

ಅರ್ಥಶಾಸ್ತ್ರ ಸಹಾಯಕ ಪ್ರಾದ್ಯಾಪಕ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾಲುರು-೫೬೩೧೬೦, ಕೋಲಾರ ಜಿಲ್ಲೆ

Email: kempe2015@gmail.com

 

ಸಾರಾಂಶ

ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಭಾರತದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿದೆ. ಈಗಿನ ಕೇಂದ್ರ ಸರ್ಕಾರ ಇತ್ತೀಚಗೆ ಹಲವು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಮಾಡಿತು. ಈ ಪ್ರಕ್ರಿಯೆಯಲ್ಲಿ ಹಲವು ಬ್ಯಾಂಕುಗಳು ಬೇರೆ ಬೇರೆ ಬ್ಯಾಂಕುಗಳೊಂದಿಗೆ ವಿಲೀನಗೊಂಡವು. ಈ ಸಂಗತಿ ರಾಷ್ಟ್ರ ಮಟ್ಟದಲ್ಲಿ ಆರ್ಥಿಕ ವಿದ್ಯಮಾನವಾಗಿ ಸಾಕಷ್ಟು ಚರ್ಚೆಗೆ ಒಳಗಾಯಿತು. ಈ ಲೇಖನದಲ್ಲಿ ವಿಲೀನದ ಆಶಯಗಳು, ಕೇಂದ್ರ ಸರ್ಕಾರದ ಧೋರಣೆ, ವಿಲೀನಗೊಂಡ ಬ್ಯಾಂಕುಗಳು, ವಿಲೀನದ ಅನುಕೂಲಗಳು, ಬ್ಯಾಂಕಿಂಗ್‌ ಕ್ಷೇತ್ರದ ಮೇಲೆ ಈ ಪ್ರಕ್ರಿಯೆಯ ಪರಿಣಾಮಗಳನ್ನು ಚರ್ಚಿಸುವ ಪ್ರಯತ್ನ ಮಾಡಲಾಗಿದೆ. ಈ ವಿಶ್ಲೇಷಣೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕರ್ನಾಟಕದ ಮೈಸೂರು ಬ್ಯಾಂಕು ತನ್ನ ಅಸ್ಮಿತೆಯನ್ನ ಕಳೆದುಕೊಂಡಿದ್ದನ್ನು ಉಲ್ಲೇಖಿಸಲಾಗಿದೆ. ಮೇಲ್ನೋಟಕ್ಕೆ ಈ ಪ್ರಾದೇಶಿಕ ಆಸ್ಮಿತೆಯ ನಾಶ ಸಮಾಜದ ಜನ ಸಾಮಾನ್ಯರಿಗೆ ಒಂದು ಗಂಭೀರ ಸಂಗತಿಯಾಗಿ ಕಂಡು ಬರದಿದ್ದರೂ ಸಾಂಸ್ಕ್ರತಿಕ ಪ್ರಜ್ಞೆವುಳ್ಳ ಅಥವಾ ಕರ್ನಾಟಕದ ಆರ್ಥಿಕ ತಜ್ಞರಿಗೆ ಒಂದು ಗಂಭೀರ ಸಂಗತಿಯಾಗಿ ಕಂಡು ಬಂದಿದೆ. ಭವಿಷ್ಯದಲ್ಲಿ ಇಂತಹ ಸಂಗತಿಯು ಬೇರೆ ಪ್ರಾದೇಶಿಕ ಉತ್ಪನ್ನಗಳ ಅಸ್ತಿತ್ವ ಹಾಗು ಆಸ್ಮಿತೆ ಮೇಲೆ ಪ್ರಭಾವ ಬೀರ ಬಹುದೇ ಎಂಬ ಪ್ರಶ್ನೆಯೂ ಇದೆ. ಉದಾಹರಣೆಗೆ ಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳ ಅಸ್ತಿತ್ವ ಮತ್ತು ಆಸ್ಮಿತೆಯ ನಾಶದ ಸೂಚನೆ. ಇದು ಸಾಂಸ್ಥಿಕ ವ್ಯವಸ್ಥೆಯ ವಿನಾಶದ ಪ್ರಾರಂಭ ಎಂಬ ಆತಂಕವೂ ಇದೆ. ಉದಾ: ಸ್ಟೇಟ್‌ ಬ್ಯಾಂಕು ಆಫ್‌ ಮೈಸೂರು ಒಂದು ಸ್ಥಳೀಯ ಸಂಸ್ಥೆಯಾಗಿ ಮರೆಯಾಯಿತು ಹಾಗೆಯೇ ಕೆ ಎಮ್‌ ಎಫ್‌ ಸಂಸ್ಥೆಯು ಮರೆಯಾಗ ಬಹುದೇ? ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನದಲ್ಲಿ ಬ್ಯಾಂಕು ಪದದ ಅರ್ಥ ಅದರ ಕಾಯಿದೆಯ ಆಧಾರ ಮತ್ತು ಅವಕಾಶಗಳು, ಖಾಸಗೀ ಬ್ಯಾಂಕುಗಳು ಸಾರ್ವಜನಿಕ ವಲಯದ ಬ್ಯಾಂಕುಗಳಾಗಿ ಪರಿವರ್ತನೆಗೊಂಡ ಸಂದರ್ಭ, ವಿಲೀನದ ಅವಶ್ಯಕತೆ- ಉದ್ದೇಶಗಳು ಇತ್ಯಾದಿ ಸಂಗತಿಗಳ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.

ಪ್ರಮುಖ ಪರಿಭಾಷೆಗಳು: ಸಾರ್ವಜನಿಕ ವಲಯ, ಬ್ಯಾಂಕಿಂಗ್‌ ಕ್ಷೇತ್ರ, ವಿಲೀನ ಪ್ರಕ್ರಿಯೆ, ಪಾದೇಶಿಕ ಆಸ್ಮಿತೆ, ಕಾಯಿದೆ, ಇತ್ಯಾದಿ.

ಪ್ರಸ್ತಾವನೆ

ಕಳೆದ ಒಂದುವರೆ ದಶಕಗಳಿಂದಲೂ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಭಾರತದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಡೆಯುತ್ತಿದೆ. ಈಗಿನ ಕೇಂದ್ರ ಸರ್ಕಾರ ಇತ್ತೀಚಗೆ ಹಲವು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಮಾಡಿತು. ಈ ಪ್ರಕ್ರಿಯೆಯಲ್ಲಿ ಹಲವು ಬ್ಯಾಂಕುಗಳು ಬೇರೆ ಬೇರೆ ಬ್ಯಾಂಕುಗಳೊಂದಿಗೆ ವಿಲೀನಗೊಂಡವು. ಈ ಸಂಗತಿ ರಾಷ್ಟ್ರ ಮಟ್ಟದಲ್ಲಿ ಆರ್ಥಿಕ ವಿದ್ಯಮಾನವಾಗಿ ಸಾಕಷ್ಟು ಚರ್ಚೆಗೆ ಒಳಗಾಯಿತು. ಕಳೆದ ಒಂದೂವರೆ ದಶಕದಲ್ಲಿ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾರ್ವಜನಿಕ ಕ್ಷೇತ್ರದ ಹಲವಾರು ಪ್ರಮುಖ ಬ್ಯಾಂಕುಗಳು ವಿಲೀನಗೊಂಡಿವೆ. ಆದರೂ ಇತ್ತೀಚನ ದಿನಗಳಲ್ಲಿ ಅದರಲ್ಲೂ ೨೦೧೯ ಏಪ್ರಿಲ್‌ ನಂತರ ಆಗಸ್ಟ್‌ ಮಧ್ಯೆ ತ್ಚರಿತಗತಿಯಲ್ಲಿ ವಿಲೀನ ಸಂಭವಿಸಿ, ಕೂಡಲೇ ಜಾರಿಗೆ ಬರುವಂತೆ ವಿಜಯಾಬ್ಯಾಂಕು ಮತ್ತು ದೇನಾ ಬ್ಯಾಂಕುಗಳನ್ನು ಬ್ಯಾಂಕ್‌ ಆಫ್‌ ಬರೋಡದಲ್ಲಿ ವಿಲೀನಗೊಳಿಸಿದರು. ಇದರ ನಂತರ ಭಾರತದ ಹಣಕಾಸು ಮಂತ್ರಿಗಳು ಇನ್ನೂ ನಾಲ್ಕು ಮಹತ್ವದ ವಿಲೀನಗಳನ್ನು ಘೋಷಿಸಿದ್ದಾರೆ. ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಓರಿಯಂಟಲ್‌ ಬ್ಯಾಂಕ್‌  ಆಫ್‌ ಇಂಡಿಯಾಗಳನ್ನು ಪಂಜಾಬ್‌ ನ್ಯಾಷನಲ್ ಬ್ಯಾಂಕಿನೊಂದಿಗೆ, ಸಿಂಡಿಕೇಟ್‌ ಬ್ಯಾಂಕ್‌ ನ್ನು ಕೆನರಾ ಬ್ಯಾಂಕಿನೊಂದಿಗೂ, ಆಂದ್ರ ಬ್ಯಾಂಕು ಮತ್ತು ಕಾರ್ಫೋರೇಷನ್‌ ಬ್ಯಾಂಕುಗಳನ್ನು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದೊಂದಿಗೂ ವಿಲೀನಗೊಳಿಸಲಾಗಿದೆ. ಈ ವಿಲೀನದಿಂದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಅಂದರೆ ವಿಲೀನಗೊಂಡ ಬ್ಯಾಂಕುಗಳ ಸರಾಸರಿ ಗಾತ್ರ ಮತ್ತು ಗ್ರಾಹಕರ ಸಂಖೈಯು ಮೊದಲಿಗಿಂತ ಅರ್ಧದಷ್ಟು ಕಡಿಮೆಯಾಗಿದೆ. ಉದಾಹರಣೆಗೆ ಪಂಜಾಬ್‌ ನ್ಯಾಷನಲ್ ಬ್ಯಾಂಕಿನ ಗಾತ್ರ ಒಂದೂವರೆ ಪಟ್ಟು ಹೆಚ್ಚಿದರೆ, ಕೆನರಾ ಬ್ಯಾಂಕು ಮತ್ತು ಯೂನಿಯನ್‌ ಬ್ಯಾಂಕುಗಳ ಗಾತ್ರ ಎರಡು ಪಟ್ಟು ಹೆಚ್ಚಿದೆ. ಆದರೆ ಗಾತ್ರದಲ್ಲಿ ಹೆಚ್ಚಳವಾದ ಮಾತ್ರಕ್ಕೆ ಸಾರ್ವಜನಿಕ ಬ್ಯಾಂಕುಗಳ ಕಾರ್ಯಕ್ಷಮತೆ ಸುಧಾರಿಸಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಅಧ್ಯಯನದ ಪ್ರಮುಖ ಉದ್ಧೇಶಗಳು ಕೆಳಖಂಡಂತಿವೆ,

೧. ಬ್ಯಾಂಕು ಪದದ ಅರ್ಥ,ಬ್ಯಾಂಕಿಂಗ್ ಕಾಯಿದೆಯ ಅವಕಾಶಗಳು ಮತ್ತು ಉದ್ಧೇಶಗಳು ೨. ಪ್ರಸ್ತುತ ವಿಲೀನದ ಪ್ರಕ್ರಿಯೆ, ಅದರ ಉದ್ದೇಶಗಳು, ವಿಲೀನಗೊಂಡ ಬ್ಯಾಂಕುಗಳು ಮತ್ತು ವಿಲೀನದ ವಿಶ್ಲೇಷಣೆ ೩. ಕರ್ನಾಟಕದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಜನರ ಮನಸ್ಸಿಂದ ಮರೆಯಾದ ಸಂಗತಿ ೪. ಉಪಸಂಹಾರ. ಮಾಹಿತಿಗಾಗಿ ಅನುಷಂಗಿಕ ವಿಧಾನವನ್ನು ಅನುಸರಿಸಿದ್ದು ಲಭ್ಯವಿರುವ ದಾಖಲೆಗಳ ಮಾಹಿತಿ, ತಜ್ಞರ ಉಪನ್ಯಾಸಗಳ ವೀಕ್ಷಣೆ, ಪತ್ರಿಕೆಗಳ ಪ್ರಕಟಣೆ ಇತ್ಯಾದಿಗಳ ಆಧಾರದ ಮಾಹಿತಿಯನ್ನು ಅಧ್ಯಯನ ಮಾಡಲಾಗಿದೆ.

ಬ್ಯಾಂಕು ಒಂದು ಹಣಕಾಸು ಸಂಸ್ಥೆ. ಅದೊಂದು ವ್ಯವಹಾರಿಕ ಸಂಸ್ಥೆ. ಲಾಭದ ಸಂಸ್ಥೆ. ಈ ಸಂಸ್ಥೆ ಭಾರತದ ೧೯೪೯ ರ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನೋಂದಾಯಿತವಾಗಿರುತ್ತದೆ. ಬ್ಯಾಂಕ್‌ ಪದದ ಅರ್ಥವನ್ನು ಈ ಕಾಯಿದೆಯ ಸೆಕ್ಸೆನ್‌ ೫ (ಬಿ) ಮತ್ತು ಸೆಕ್ಸೆನ್‌ ೫ (ಸಿ) ರ ಅಡಿಯಲ್ಲಿ ವ್ಯಾಖ್ಯಾಯಿನಿಸಲಾಗಿದೆ. ಅದರಂತೆ ಬ್ಯಾಂಕ್‌ ಎಂಬ ಪದವು ಈ ಕೆಳಖಂಡ ಅರ್ಥ ಮತ್ತು ಲಕ್ಷಣವನ್ನು ಒಳಗೊಂಡಿದೆ, ೧. ಸಾರ್ವಜನಿಕರಿಂದ ಠೇವಣಿಯನ್ನು ಸ್ವೀಕರಿಸುವುದು ೨. ಸ್ವೀಕರಿಸಿದ ಠೇವಣಿಯನ್ನು ಸಾಲ ನೀಡುವುದು ಅಥವಾ ಹೂಡಿಕೆ ಮಾಡುವುದು. ೩. ಬೇಡಿಕೆ ಮೇರೆಗೆ ಠೇವಣಿ ಹಣವನ್ನು ಹಿಂತಿರುಗಿಸುವುದು.ಒಪ್ದಂದದ ಪ್ರಕಾರ ಸಂಸ್ಥೆಯೊಂದರ ಆಸ್ತಿ ಮತ್ತು ಹೊಣೆಗಾರಿಗಳನ್ನು ಒಂದು ನಿರ್ದಿಷ್ಟ ಹೆಸರಿನಡಿ ತರುವುದೇ ವಿಲೀನ. ಈಗಿನ ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನ ಗೊಳಿಸಿ ನಾಲ್ಕು-ಐದು ಬ್ಯಹತ್‌ ಮತ್ತು ಪ್ರಬಲ ಸಾರ್ವಜನಿಕ ಬ್ಯಾಂಕುಗಳನ್ನು ಸೃಷ್ಟಿಸುವ ಆಶಯ ಹೊಂದಿತ್ತು. ವಿಲೀನಗೊಂಡ ಎಲ್ಲಾ ಬ್ಯಾಂಕುಗಳಿಗೆ ಸರ್ಕಾರದ ಬೃಹತ್‌ ಬ್ಯಾಂಕಾದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಣಕಾಸನ್ನು ಒದಗಿಸುವುದು. ವಿಲೀನ ಪ್ರಕ್ರಿಯೆ ೧೯೯೮ ರಲ್ಲೇ ಪ್ರಾರಂಭವಾಯಿತು. ೧೯೯೨ ಭಾರತದ ಆರ್ಥಿಕ ಸುಧಾರಣೆಯ ಸಂದರ್ಭದಲ್ಲೇ ಪ್ರೊ. ನರಸಿಂಹನ್‌ ಕಮಿಟಿಯು ಮೂರು ಸ್ಥರದ ವಿಲೀನಕ್ಕೆ ಸಲಹೆಗಳನ್ನು ನೀಡಿತ್ತು. ಅವುಗಳೆಂದರೆ ೧. ಒಂದು ಅಂತರಾಷ್ಟ್ರೀಯ ಬ್ಯಾಂಕಿನೊಂದಿಗೆ ಮೂರು ಬೃಹತ್‌ ಬ್ಯಾಂಕುಗಳು ೨. ಎಂಟರಿಂದ ಹತ್ತು ರಾಷ್ಟ್ರಮಟ್ಟದ ಬ್ಯಾಂಕುಗಳು ೩. ಪ್ರಾದೇಶಿಕ ಮತ್ತು ಸ್ಥಳೀಯ ಬ್ಯಾಂಕುಗಳು. ೨೦೧೪ ರಲ್ಲಿ ಪಿ.ಜೆ ನಾಯಕ್‌ ಸಮಿತಿ ಸಹ ಬ್ಯಾಂಕುಗಳ ವಿಲೀನಕ್ಕೆ ಸಲಹೆ ನೀಡಿತು.

ವಿಲೀನದ ಇತ್ತೀಚನ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳ ವಿಶ್ಲೇಷಣೆ

೨೦೧೭ ರಲ್ಲಿ ಎಸ್‌ಬಿಐ ಕುಟುಂಬದ ಐದು ಪ್ರಾದೇಶಿಕ ಬ್ಯಾಂಕುಗಳಾದ ಸ್ಟೇಟ್‌ ಬ್ಯಾಂಕ್‌ ಆಫ್‌ ಜೈಪುರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಅಲಹಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕನೇರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕುರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಟಿಯಾಲ ಗಳನ್ನು ಎಸ್‌ಬಿಐ ವಿಲೀನ ಗೊಳಿಸಲಾಯಿತು. ಎಸ್‌ ಬಿ ಐ ವಿಲೀನದಿಂದ ಈ ಬ್ಯಾಂಕು ಜಗತ್ತಿನ ಮೊದಲ ೫೦ ಬ್ಯಾಂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ಭಾರತೀಯ ರಲ್ಲಿ ಹೆಮ್ಮೆ ಮೂಡಿಸಿವ ಸಂಗತಿ. ಅದರೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್‌ಬಿಐ ಸಮೂಹದ ಈ ಎಲ್ಲಾ ಪ್ರಾದೇಶಿಕ ಬ್ಯಾಂಕಿಂಗ್‌ ಸಂಸ್ಥೆಗಳು ತಮ್ಮ ಸ್ಥಳೀಯ ಆಸ್ಮಿತೆಯನ್ನು ಕಳೆದುಕೊಂಡವು. ಇದು ಸ್ಥಳೀಯ ಮಟ್ಟದಲ್ಲಿ ಸಾಂಸ್ಕೃತಿಕ ಪ್ರಜ್ಞೆ ಇರುವ ಎಲ್ಲಾ ಜನರು ತಜ್ಞರು ಈ ಆಸ್ಮಿತೆಯ ವಿನಾಶವನ್ನು ಒಂದು ಗಂಭೀರ ಸಂಗತಿಯಾಗಿ ಪರಿಭಾವಿಸಿದ್ದಾರೆ. ಈ ವಿಲೀನದ ಭಾಗವಾಗಿ ೧೯೭೫ ರಲ್ಲಿ ಸ್ಥಾಪನೆಗೊಂಡಿದ್ದ ಪ್ರಾದೇಶಿಕ ಬ್ಯಾಂಕುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಯಿತು, ೨೦೧೯ ರಲ್ಲಿ ಹಲವು ರಾಷ್ಟ್ರೀಕೃತ ಬ್ಯಾಂಕುಗಳನ್ನು ಬ್ಯಹತ್‌ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಯಿತು. ಇದರ ಪರಿಣಾಮವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಖ್ಯೆಯು ೧೨ ಕ್ಕೆ ಇಳಿದಿದೆ. ೨೦೧೯ರ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕುಗಳನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಿದ ನಂತರ, ಭಾರತದ ಹಣಕಾಸು ಮಂತ್ರಿಗಳು ಇನ್ನೂ ನಾಲ್ಕು ಮಹತ್ವದ ವಿಲೀನಗಳನ್ನು ಘೋಷಿಸಿದ್ದಾರೆ. ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕಿನೊಂದಿಗೂ, ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕಿನೊಂದಿಗೂ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯ್ಯಾಂಕುಗಳನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೂ ಮತ್ತು ಇಂಡಿಯನ್ ಬ್ಯಾಂಕನ್ನು ಅಲಹಾಬಾದ್ ಬ್ಯಾಂಕಿನೊಂದಿಗೂ ವಿಲೀನಗೊಳಿಸಲಾಗಿದೆ. ಈ ವಿಲೀನದ ಕಾರಣಗಳನ್ನು ಪರಿಶೀಲಿಸಿದಾಗ ದುರ್ಬಲ ಸಾರ್ವಜನಿಕ ವಲಯದ ಬ್ಯಾಂಕುಗಳು ನಷ್ಟ ಹೊಂದುವುದನ್ನು ತಪ್ಪಿಸಿ ಅವುಗಳ ಗ್ರಾಹಕರಿಗೆ ಭದ್ರತೆ ನೀಡಿ ಬ್ಯಾಂಕಿಂಗ್‌ ವ್ಯವಸ್ಥೆಯ ಬಗ್ಗೆ ಜನರಲ್ಲಿ ಭರವಸೆಯನ್ನು ಉಳಿಸಿಕೊಳ್ಳುವುದು. ಹಾಗೆಯೇ ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಪೋರೇಟ್‌ ಕಂಪನಿಗಳಿಗೆ ನೀಡಿದ ನೀಡಿದ ಸಾಲ ಹಿಂದುರುಗಿ ಬರಲಿಲ್ಲ. ಈ ಕಂಪನಿಗಳು ಸಾಲದ ಅಸಲು ಅಥವಾ ಬಡ್ಡಿಯನ್ನು ಸಹ ಹಿಂದಿರುಗಿಸಿಲ್ಲ. ಇದರಿಂದ ಸಾಲ ನೀಡಿದ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಿ ಅವುಗಳ ಎನ್ ಪಿ ಎ ಪ್ರಮಾಣ ಹೆಚ್ಚಿ ಹಣಕಾಸು ನಿರ್ವಹಣೆ ಹೆಚ್ಚಾಯಿತು, ವಿಲೀನಗೊಂಡ ಬ್ಯಾಂಕುಗಳ ಗ್ರಾಹಕರ ಸಂಬಂಧ ಜಾಲ ವಿಸ್ತರಿಸುವುದು, ಮಾರುಕಟ್ಟೆ ಜಾಲ ವಿಸ್ತರಿಸುವಂತಹ ಹಾಗು ಜಾಗತಿಕ ಸ್ಪರ್ಧೆ ಎದುರಿಸುವ ಅವಕಾಶ ದೊರೆಯುವಿಕೆ, ಹಣಕಾಸಿಕಾಗಿ ಸರ್ಕಾರವನ್ನು ಅವಲಂಭಿಸುವುದು ತಪ್ಪುವಂತಹ ಕೆಲವು ಅನುಕೂಲಗಳಿದ್ದರೂ ಅನೇಕ ಸವಾಲುಗಳನ್ನು ಎದುರಾಗಿವೆ.  ಬ್ಯಾಂಕುಗಳ ಸಂಖೈಯಾಗಿ ಉದ್ದೋಗಿಗಳ ಸಂಖೈ ಕಡಿಮೆಯಾಗ ಬಹುದೆಂಬ ಆತಂಕ ಸಿಬ್ಬಂದಿಗಳಿಲ್ಲಿ ಇದೆ. ವಲೀನಗೊಂಡ ಬ್ಯಾಂಕುಗಳ ಕಾರ್ಯಕ್ಷಮತೆ ಹೆಚ್ಚುವುದೆ ಎಂಬ ಪ್ರಶ್ನೆಯೂ ಇದೆ . ಹಾಗೆಯೇ ಈ ವಿಲೀನ ಪ್ರಕ್ರಿಯೆ ಹಲವು ಪ್ರಶ್ನೆಗಳನ್ನು ಹುಟ್ಟು ಅಕಿದ್ದು ಬ್ಯಾಂಕಿಂಗ್ ಕ್ಷೇತ್ರದ ಎದುರಿಸುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವುಗಳ ಪುನಶ್ಚೇತನ ದೃಷ್ಟಿಯಿಂದ ನೋಡಿದಾಗ ವಿಲೀನವು ನಿಜಕ್ಕೂ ಯಶಸ್ವಿಯಾಗಬೇಕೆಂದು ಸರ್ಕಾರವು ಬಯಸುತ್ತಿದೆಯೇ? ಅಥವಾ ಸುಧಾರಣೆಗಳು ಪ್ರದರ್ಶನಕ್ಕೆ ಮಾತ್ರ ಯಶಸ್ಸನ್ನು ಸೀಮಿತಗೊಳಿಸಿ ಸುಧಾರಣೆಯ ಅಸಲೀ ಉದ್ದೇಶವನ್ನೇ ಮರೆತಿದೆಯೇ?ಎಂಬ ಅನುಮಾನವನ್ನು ಹುಟ್ಟು ಹಾಕುತ್ತದೆ ಈ ವಿಲೀನ. ವಿಲೀನದ ನೈಜ ಉದ್ದೇಶಗಳ ಬಗ್ಗೆ ಸರ್ಕಾರವು ತನ್ನ ನಿಲುವನ್ನು ಸರಿಯಾಗಿ ವ್ಯಕ್ತಪಡಿಸಿಲ್ಲ ಎಂಬ ಸಂದೇಹ ಸರ್ವವ್ಯಾಪಿಯಾಗಿದೆ, ಅದೇ ರೀತಿ ಮತ್ತೊಂದು ಮೂಲಭೂತ ಪ್ರಶ್ನೆಯೆಂದರೆ ವಿಲೀನದ ಪರಿಣಾಮಕತೆ ಬಗ್ಗೆ. ಸಾಪೇಕ್ಷವಾಗಿ ಈಗಿರುವ ಸಣ್ಣ ಗಾತ್ರದ ಬ್ಯಾಂಕುಗಳೇ ಸಮರ್ಥವಾಗಿ ಹಣಕಾಸು ವ್ಯವಹಾರವನ್ನು ನಿರ್ವಹಿತ್ತಿಲ್ಲ ಎಂದಾದರೆ ದೊಡ್ಡ ಬ್ಯಾಂಕುಗಳನ್ನು ಸೃಷ್ಟಿಸುವ ಅನಿವಾರ್ಯತೆ ಅಗತ್ಯ ಏನಿದೆ?. ಸಣ್ಣ ಹಣಕಾಸು ಯೋಜನೆ, ಸಾಲದ ಪ್ರಮಾಣವನ್ನು ಸ್ಪಷ್ಟವಾಗಿ ಉತ್ತಮವಾಗಿ ನಿರ್ವಹಿಸದ ಸಣ್ಣ ಗಾತ್ರದ ಬ್ಯಾಂಕುಗಳ ವ್ಯವಸ್ಥಾಪಕರು ವಿಲೀನದ ನಂತರ ಹುಟ್ಟಿಕೊಳ್ಳುವ ದೊಡ್ಟ ಗಾತ್ರದ ಬ್ಯಾಂಕುಗಳ ಮತ್ತಷ್ಟು ಸಂಕೀರ್ಣವಾಗಿರವ ವ್ಯಬಹಾರಗಳನ್ನು ಹೇಗೆ ವ್ಯವಹರಿಸಬಲ್ಲರು? ಎಂಬ ಸಮಸೈಗಳು ಎದುರಾಗಿವೆ.

ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನದಿಂದ ಒಂದಷ್ಟು ಅನುಕೂಲಗಳಿದ್ದರೂ ಅಂದರೆ ರಾಷ್ಟ್ರಮಟ್ಟದಲ್ಲಿ ಹಾಗು ಜಾಗತಿಕವಾಗಿ ಸ್ಪರ್ಧೆ ನೀಡುವಂಹತ ಹಾಗು ಹೆಮ್ಮ ಮೂಡಿಸುವ ಸಂಗತಿಯಾಗಿ ಕಂಡು ಬಂದರೂ ವಿಲೀನಗೊಂಡ ಸಂಸ್ಥೆಗಳಿಗಾಗಲಿ ದೇಶದ ಆರ್ಥಿಕತೆಗಾಗಲಿ ಅಂತಹ ಮಹತ್ವದ ಒಳ್ಳೆಯ ಬೆಳವಣಿಗೆ ಕಂಡು ಬಂದಿಲ್ಲ ಎನ್ನಬಹುದು. ಬದಲಾಗಿ ವಿಲೀನದಿಂದ ಒಂದು ರೀತಿಯಲ್ಲಿ ಕಾರ್ಪೊರೇಟ್‌ ಸಂಸ್ಥೆಗಳಿಗೆ ಪೂರಕ ಪರಿಸ್ಥಿತಿ ನಿರ್ಮಾಣವಾಗಿದೆ, ಕಾರಣ ವಿಲೀನದ ಪೂರ್ವದಲ್ಲಿ ಈ ಕಂಪನಿಗಳು ಸಾರ್ವಜನಿಕ ಬ್ಯಾಂಕುಗಳಿಂದ ಪಡೆದ ಅಗಾದ ಸಾಲವು ವಿಲೀನದ ನಂತರವೂ ಹಾಗೆ ಮುಂದುವರೆದಿದೆ. ಅಗಾದವಾದ ಎನ್‌ ಪಿ ಎ – ಸುಸ್ತಿ ಸಾಲ ವಸೂಲಾಗಿಲ್ಲ. ಕಾರ್ಪೊರೇಟ್‌ ಕಂಪನಿಗಳ ಮನೋಭಾವ ಸಹ ಬದಲಾಗಿಲ್ಲ. ಅಂದರೆ ಸಾರ್ವಜನಿ ಬ್ಯಾಂಕುಗಳಿಗೆ ಆಧಾರ ಜನರು – ಅವರ ಹಣವನ್ನು ಹೂಡಿಕೆ –ಉತ್ಪಾದನೆಗೆ ಸಾಲದ ರೂಪದಲ್ಲಿ ಪಡೆಯಲಾಗಿದೆ ಅದನ್ನು ಹಿಂದುರಿಗಿಸುವುದು ನಮ್ಮ ನೈತಿಕ ಹೊಣೆಗಾರಿಗೆ ಎಂಬ ಭಾವನೆ ಮೂಡಿಲ್ಲ. ಕಂಪನಿಗಳು ಮರುಪಾವತಿಸಬೇಕಾಗಿರುವ ಸಾಲವನ್ನು ಹಿಂದುರುಗಿಸುವಂತೆ ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬಹುದಿತ್ತು. ವಿಲೀನಗೊಂಡ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿತ್ತಿರುವು ಬ್ಯಾಂಕು ಸಿಬ್ಬಂದಿಗಳಲ್ಲೂ ಉದ್ದೋಗ ಭದ್ರತೆ ಆತಂಕ ಸೃಷ್ಟಿಯಾಗಿದೆ. ಹಾಗೆಯೇ ವಿಲೀನದಿಂದ ಸರ್ಕಾರದ ಮೇಲಿನ ಹಣಕಾಸಿನ ಅವಲಂಬನೆ ತಗ್ಗುತ್ತದೆ ಎಂಬ ನಿಶ್ಚಿತತೆಯೂ ಇಲ್ಲ. ಬದಲಾಗಿ ವಿಲೀನದಿಂದ ಸ್ಥಳೀಯ ಆಸ್ಮಿತೆಯ ಭಾವನೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಪ್ರಾದೇಶಿಕ ಬ್ಯಾಂಕು-ಸಂಸ್ಥೆಗಳ ಹೆಸರು ಬದಲಾಯಿಸದೆ ಅವುಗಳ ಮೂಲ ಹೆಸರಲ್ಲೇ ಕಾರ್ಯನಿರ್ವಹಿಸಲು ಬಿಡಬಹುದಾಗಿತ್ತು. ಅದರೆ ವಿಲೀನ ದಿಂದಾಗಿ ಇಂದು ಪ್ರಾದೇಶಿಕ ಆಸ್ಮಿತೆ ನಶಿಸಿ ಜನರ ಮನಸ್ಸಿಂದ ಶಾಶ್ವತವಾಗಿ ಮರೆಯಾಗಿವೆ, ವಿಲೀನದಿಂದ ಸರ್ಕಾರದ ಉದ್ದೇಶಗಳು ಈಡೇರಿಲ್ಲ ಹಾಗು ವಿಲೀನದ ಪ್ರಕ್ರಿಯೆ ಸಾರ್ವಜನಿಕಲ್ಲೂ ಸ್ಪಷ್ಟತೆ ಮೂಡಿಸುವಲ್ಲಿ ವಿಫಲವಾಗಿದೆ ಎನ್ನಬುಹುದು.

ಉಪಸಂಹಾರ :

ಕೇಂದ್ರ ಸರ್ಕಾರವು, ಕಾರ್ಪೋರೇಟ್‌ಗಳು ಸಾರ್ವಜಿನಿಕ ಬ್ಯಾಂಕುಗಳಿಂದ ಹೂಡಿಕೆ ಮತ್ತು ಉತ್ಪನ್ನ- ಅರ್ಥಿಕ ಚಟುವಟಿಕೆಗಳ ವಿಸ್ತರಣೆ ಹೆಸರಲ್ಲಿ ಪಡೆದ ಅಗಾಧ ಪ್ರಮಾಣದ ಸಾಲವನ್ನು ಹಿಂದುರುಗಿಸದೇ ಸಾರ್ವಜಿನಿಕ ಬ್ಯಾಂಕುಗಳ ಹಣಕಾಸು ಶಕ್ತಿ ದುರ್ಬಲಗೊಳಿಸಿದರು. ಬ್ಯಾಂಕುಗಳ ಹಣಕಾಸು ವ್ಯವಹಾರದ ಮೇಲೂ ಇದು ಋಣಾತ್ಮಕ ಪರಿಣಾಮ ಬೀರಿ ಅವುಗಳು ಸಂಪನ್ಮೂಗಳಿಗಾಗಿ ಸರ್ಕಾರವನ್ನು ಅವಲಂಬಿಸುವಂತಹ ಪರಿಸ್ಥಿತಿ ಸೃಷ್ಟಿಯಾಯಿತು.  ಇದರ ಗಂಭೀರತೆಯನ್ನು ಅರಿತ ಸರ್ಕಾರ ವಿಲೀನಕ್ಕೆ ಮುಂದಾಯಿತು ಎನ್ನಲಾಗಿದೆ. ಈ ಮೇಲಿನ ನೈಜ ಅಂಶ ಬೆಳಕಿಗೆ ಬರಲಿಲ್ಲ. ಸರ್ಕಾರವೂ ಈ ಸತ್ಯವನ್ನು ಎಲ್ಲೂ ಸ್ಪಷ್ಟ ಪಡಿಸಲೂ ಇಲ್ಲ. ವಿಲೀನ ಪ್ರಕ್ರಿಯೆ ಬೃಹತ್‌ ಬ್ಯಾಂಕುಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ ಎಂಬುದನ್ನಷ್ಟೇ ತಿಳಿಸುವ ಪ್ರಯತ್ನ ಮಾಡಿತ್ತು. ಈ ವಿಲೀನ ಕ್ರಿಯೆಯು ನೈಜ ಉದ್ದೇಶಗಳನ್ನು ಮರೆಮಾಚಿತು ಎನ್ನುವುದರ ಜೊತೆಗೆ ದುರ್ಬಲ ಹಣಕಾಸು ವ್ಯವಹಾರ ನಿರ್ವಹಣೆ, ಸಿಬ್ಬಂದಿಗಳಲ್ಲಿ ಉದ್ದೋಗ ಭದ್ರತೆಯ ಆತಂಕ ಇತ್ಯಾದಿ ಸಮಸ್ಯೆಗಳನ್ನು ಸೃಷ್ಟಿಸಿತು ಎಂಬುದು ವಾಸ್ತವ. ಎಸ್‌ ಬಿ ಐ ಸಮೂಹದ, ದಕ್ಷತೆಯಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದ ಪ್ರಮುಖ ಐದು ಪ್ರಾದೇಶಿಕ ಬ್ಯಾಂಕುಗಳು-ಸಂಸ್ಥೆಗಳು ವಿಲೀನದೊಂದಿಗೆ ತನ್ನ ಅಸ್ಮಿತೆ ಸ್ಥಳೀಯ ಗುರುತುಗಳನ್ನು ಶಾಶ್ವತವಾಗಿ ಕಳೆದುಕೊಂಡವು. ಸರ್ಕಾರಗಳು ವಿಲೀನದಂತಹ ನಿರ್ದಿಷ್ಟ ಪ್ರಕ್ರಿಯೆಯ ನೈಜ ಆಶಯಗಳನ್ನು ಸಾರ್ವಜಿನಿಕರಿಗೆ ಸ್ಪಷ್ಟ ಪಡಿಸದೇ ನಡೆಸುವ ಇಂತಹ ಪ್ರಯತ್ನಗಳು ಭವಿಷ್ಯದಲ್ಲಿ ಬೇರೆ ಸಂಸ್ಥೆಗಳ ಉತ್ಪನ್ನಗಳನ್ನೂ ಭವಿಷ್ಯವನ್ನೂ ವಿನಾಶದ ಹಂಚಿಗೆ ತಳ್ಳ ಬಹುದು ಎಂಬು ಸಂಶಯ ಆತಂಕವನ್ನು ಮೂಡಿಸುತ್ತದೆ. ಉದಾಹರಣೆ ಇತ್ತೀಚಗೆ ಕರ್ನಾಟಕದ ನಂದಿನ ಹಾಲಿನ ಉತ್ಪನ್ನಗಳ ವಿಚಾರದಲ್ಲಿ ಅದೇ ಸಂಶಯ ಕರ್ನಾಟಕದ ಜನರಲ್ಲಿ ಮೂಡಿ ವ್ಯಾಪಕ ಚರ್ಚೆ ವಿರೋಧಗಳೂ ವ್ಯಕ್ತವಾಗಿ, ಅವು ರಾಜಕೀಯ ಸ್ವರೂಪವನ್ನೂ ಪಡೆದು ಚುನಾವಣಾ ಪಲಿತಾಂಶಗಳು ಪ್ರಕಡಗೊಳ್ಳುತ್ತಿದ್ದಂತೆ ತಣ್ಣಗಾಯಿತು.

ಕೊನೆ ಟಿಪ್ಪಣಿ;

 1. ಇಲ್ಲಿ ಬ್ಯಾಂಕು ಪದದ ಅರ್ಥ, ಸಂಸ್ಥೆಯಾಗಿ ಅದರ ಲಕ್ಷಣಗಳು, ವ್ಯವಹಾರಿಕ ಕಾರ್ಯಗಳು, ಕಾಯಿದೆಯ ಅವಕಾಶಗಳನ್ನು ಇಲ್ಲಿ ಚರ್ಚಿಸಲಾಗಿದೆ.
 2. ಇಲ್ಲಿ ಎಸ್‌ ಬಿ ಐ ಬ್ಯಾಂಕು ಸಮೂಹದ ಸ್ಥಳೀಯ ಬ್ಯಾಂಕುಗಳ ವಿಲೀನದ ಪರಿಣಾಮಗಳನ್ನು ಚರ್ಚಿಸಲಾಗಿದೆ,
 3. ಇಲ್ಲಿ ಸಾರ್ವಜನಿಕ ಬ್ಯಾಂಕುಗಳ ವಿಲೀನದ ವಾಸ್ತವ ವನ್ನು ವಿಶ್ಲೇಷಿಸಲಾಗಿದೆ.
 4. ಸಣ್ಣ ಬ್ಯಾಂಕುಗಳು ಇಂದಿಗೂ ಸುಂದರ ಹಾಗು ಸಮರ್ಪಕವಾಗಿ ಕಾಣುತ್ತವೆಯೇ ಎಂಬ ವಿಶ್ಲೇಷಣೆಯನ್ನು ಇಲ್ಲಿ ಕಾಣಬಹುದು.

ಪರಾಮರ್ಶಿತ ಗ್ರಂಥಗಳು:

 1. ರೋಹಿತ್‌ ಜೈನ್‌ (೨೦೨೧). ಫಾರ್ಮೇಷನ್‌ ಆಫ್‌ ಎ ಬ್ಯಾಂಕಿಂಗ್‌ ಕಂಪನಿ ಇನ್‌ ಇಂಡಿಯಾ, ಭಾರತಿ ವಿದ್ಯಾಪೀಠ ಯೂನಿರ್ವಸಿಟಿಯ ನ್ಯೂ ಲಾ ಕಾಲೇಜ್, ಪುಣೆ, ಪುಟ; ೨-೧೦
 2. ಟಿ ಟಿ ರಾಮ್‌ ಮೋಹನ್‌ (೨೦೧೬). ಪಬ್ಲಿಕ್‌ ಸೆಕ್ಟರ್‌ ಬ್ಯಾಂಕ್ಸ್‌ ಅರ್‌ ಆಡಿಟ್‌, ಇ ಪಿ ಡಬ್ಲುಯ್ಯು, ವ್ಯಾಲ್ಯುಮ್‌ ೫೧, ಇಶ್ಯು ನಂ, ೪೨, ೧೫ ಅಕ್ಟೊ ೨೦೧೬. ಪುಟ. ೩೪-೩೬
 3. ಆರ್‌ ಕೃಷ್ಣಮೂರ್ತಿ (೨೦೧೭).  ಪಬ್ಲಿಕ್‌ ಸೆಕ್ಟರ್‌ ಬ್ಯಾಂಕ್ಸ್‌ ಮರ್ಜರ್ಸ್‌, ಇ ಪಿ ಡಬ್ಲುಯ್ಯು, ವ್ಯಾಲ್ಯುಮ್‌ ೫೨, ಇಶ್ಯು ನಂ, ೨೯, ೨೨ ಜುಲೈ ೨೦೧೭
 4. ಎಡಿಟೋರಿಯಲ್‌ (೨೦೧೯). ಬಿಹಾಂಡ್‌ ದಿ ಮರ್ಜರ್‌ ಮೇನಿಯಾ, ಇ ಪಿ ಡಬ್ಲುಯ್ಯು, ವ್ಯಾಲ್ಯುಮ್‌ ೫೪, ಇಶ್ಯು ನಂ, ೩೭, ೧೪ ಸೆಪ್ಟಂಬರ್ ೨೦೧೯. ಪುಟ ೪೮-೫೦.
 5. ಅರ್ ಎನ್.‌ ಚೌಧರಿ (೨೦೧೪). ಬ್ಯಾಂಕಿಂಗ್‌ ಲಾ, ಸೆಂಟ್ರಲ್‌ ಲಾ ಪಬ್ಲಿಕೇಶನ್‌, ಥರ್ಡ್‌ ಎಡಿಷನ್‌,
 6. rbidocs.rbi.org.in
 7. ರೋಹಿತ್‌ ಜೈನ್‌ (೨೦೨೦). ಲೀಗಲ್‌ ಫ್ರೇಮ್‌ ವರ್ಕ ಆಫ್‌ ಇಂಟರ್ನೆಟ್‌ ಇನ್‌ ಇಂಡಿಯಾ, ಇಂಟರ್ನಾಷನಲ್‌ ಜರ್ನಲ್‌ ಆಪ್‌ ಲಾ ಮ್ಯಾನೇಜ್ಮೆಂಟ್‌ ಅಂಡ್‌ ಹುಮ್ಯಾನಿಟೀಸ್‌, ವ್ಯಾಲ್ಯುಮ್‌ ೪, ಇಶ್ಯು ೧, ಪುಟ.೬೯೯.
 8. ಬ್ಯಾಂಕಿಂಗ್‌ ರೆಗ್ಯುಲೇಷನ್‌ ಆಕ್ಟ್‌ ೧೯೪೯
 9. ಸುಭಾನಿ ಬ್ಯಾನರ್ಜಿ (೨೦೧೭). ರಿ ವಿಸಿಟಿಂಗ್‌ ಬ್ಯಾಂಕ್‌ ಮರ್ಜರ್‌, ಇ ಪಿ ಡಬ್ಲುಯ್ಯು, ವ್ಯಾಲ್ಯುಮ್‌ ೫೨, ಇಶ್ಯು ನಂ, ೦೮, ೨೫ ಫೆಬ್ರವರಿ ೨೦೧೭. ಪುಟ ೨೪-೨೭.
 10. ಅಭಿಮಾನ್‌ ದಾಸ್‌ ಮತ್ತು ಸುಬಲ್‌ ಸಿ ಕುಂಬಾರ್ಕರ್‌ (೨೦೨೨). ಬ್ಯಾಂಕ್‌ ಮರ್ಜರ್‌, ಕ್ರೆಡಿಟ್‌ ಗ್ರೋಥ್‌, ದಿ ಗ್ರೇಟ್‌ ಸ್ಲೊ ಡೌನ್‌ ಇನ್‌ ಇಂಡಿಯಾ, ಇ ಪಿ ಡಬ್ಲುಯ್ಯು, ವ್ಯಾಲ್ಯುಮ್‌ ೫೭, ಇಶ್ಯು ನಂ, ೨೦, ೧೪ ಮೇ ೨೦೨೨. ಪುಟ ೧೫-೧೮.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ
© 2018. Tumbe International Journals . All Rights Reserved. Website Designed by ubiJournal