A Study on Social and Economic Status of Bhovi Community of Gadag District.
Dr. Lingaraj Niduvani 1, Shilpa Budihal2
1Lecturer and Research Guide, Department of Social Work, Karnataka State Rural Development and Panchayat Raj University Gadag, lingarajvn707@gmail.com
2Research Student, Department of Social Work, Karnataka State Rural Development and Panchayat Raj University Gadag, , shilpabudihal99@gmail.com
Abstract
Communities have their own custom, thought, culture, dress, language, traditional customs. One of the indigenous Dravidians of India, the Vaddara community is a unique community spread across the country. The people of this community are hardworking people who spend their lives in other services and go as nomads with their families to meet social needs. Although the Bhovi community is seen as one, several sub-sects are identified. With the help of government schemes, they have got the necessary amenities. It is found in the study that even today the people of Bhovi community are making a living depending on their ancestral profession of stonework and plastering. Their social, economic and cultural life has continued to change over time with its own cultural traditions, language and life style from pre-human to present day modern age.
Keywords: Bhovi, Vaddara, Bhovi Community, Social, Economic.
ಗದಗ ಜಿಲ್ಲೆಯ ಭೋವಿ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತು ಒಂದು ಅಧ್ಯಯನ
ಶಿಲ್ಪಾ ಬೂದಿಹಾಳ1, ಡಾ. ಲಿಂಗರಾಜ ನಿಡುವಣಿ2
1ಸಂಶೋಧನಾ ವಿಧ್ಯಾರ್ಥಿ
2ಉಪನ್ಯಾಶಕರು ಮತ್ತು ಮಾರ್ಗದರ್ಶಕರ
1,2ಸಮಾಜಕಾರ್ಯ ವಿಭಾಗ, ಕರ್ನಾಟಕ ರಾಜ್ಯ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ ಗದಗ
ಅಮೂರ್ತ
ಸಮುದಾಯಗಳು ತಮ್ಮದೇ ಆದ ಆಚಾರ, ವಿಚಾರ, ಸಂಸ್ಕೃತಿ , ಉಡುಗಿ-ತೊಡಿಗೆ, ಭಾಷೆ , ಸಾಂಪ್ರದಾಯಿಕ ಪದ್ಧತಿಗಳು ಹೊಂದಿವೆ. ಭಾರತದ ಮೂಲನಿವಾಸಿಗಳಾದ ದ್ರಾವಿಡರಲ್ಲಿ ಒಂದಾದ ವಡ್ಡರ ಸಮುದಾಯವು ದೇಶಾದ್ಯಂತ ವ್ಯಾಪಿಸಿದ ವಿಶಿಷ್ಠ ಸಮುದಾಯವಾಗಿದೆ. ಈ ಸಮುದಾಯದವರು ಶ್ರಮಜೀವಿಗಳಾಗಿದ್ದು ಇತರ ಸೇವೆಗಳಲ್ಲಿಯೇ ಜೀವನ ಕಳೆದು ಅಲೆಮಾರಿಗಳಾಗಿ ಪರಿವಾರ ಸಮೇತವಾಗಿ ಹೋಗಿ ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾರೆ. ಭೋವಿ ಸಮುದಾಯವು ಒಂದೇ ಎಂದು ಕಂಡರೂ ಹಲವಾರು ಒಳಪಂಗಡಗಳನ್ನು ಗುರುತಿಸಲಾಗಿದೆ. ಸರ್ಕಾರಿ ಯೋಜನೆಗಳ ನೆರವಿನೊಂದಿಗೆ ಜೀವನ ಅವಶ್ಯಕವಾದ ಸೌಕರ್ಯಗಳನ್ನು ಪಡೆದುಕೊಂಡಿದ್ದಾರೆ. ಇಂದಿಗೂ ಕೂಡ ಭೋವಿ ಸಮುದಾಯದವರು ತಮ್ಮ ವಂಶಪರಂಪರೆಯ ವೃತ್ತಿಯಾದ ಕಲ್ಲುಬಂಡೆ ಕೆಲಸ, ಗಾರೆಕೆಲಸವನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿರುವುದು ಅಧ್ಯಯನದಲ್ಲಿ ಕಂಡು ಬರುತ್ತದೆ. ಅವರ ಸಾಮಾಜಿಕ, ಆರ್ಥಿಕ ಮತ್ತು ಸಂಸ್ಕೃತಿಕ ಜೀವನವು ಅದಿಮಾನವನಿಂದ ಇಂದಿನ ಆಧುನಿಕ ಯುಗಕ್ಕೆ ತನ್ನದೇ ಆದ ಸಂಸ್ಕೃತಿ ಸಾಂಪ್ರದಾಯ ಪದ್ಧತಿಗಳು ಭಾಷೆ ಮತ್ತು ಜೀವನ ಶೈಲಿಯೊಂದಿಗೆ ಕಾಲಾನಂತರದಲ್ಲಿ ಬದಲಾಗುತ್ತಲೇ ಇದೆ.
ಪೀಠಿಕೆ :
ಭಾರತವು ಒಂದು ವೈವಿಧ್ಯಮಯವಾದ ದೇಶವಾಗಿದೆ ಹಲವು ಧರ್ಮ ಜಾತಿ ಮತ್ತು ಅನೇಕ ಬುಡಕಟ್ಟು ಸಮುದಾಯಗಳನ್ನು ಒಳಗೊಂಡಿದ್ದು ವೈವಿದ್ಯತೆಯಲ್ಲಿ ಏಕತೆಯನ್ನು ಒಳಗೊಂಡಿದೆ. ಭಾರತೀಯ ಸಮಾಜದಲ್ಲಿ ಸುಮಾರು 3000 ಕ್ಕಿಂತ ಹೆಚ್ಚು ಜಾತಿ ಉಪಜಾತಿಗಳಿದ್ದು ಆ ಜಾತಿ ಸಮುದಾಯಗಳಲ್ಲಾ ಇಂದಿಗೂ ತಮ್ಮದೇ ಆದ ಪಾರಂಪರಿಕ ವೃತ್ತಿಗಳನ್ನು ಅವಲಂಬಿಸಿದೆ. ಸಮುದಾಯಗಳು ತಮ್ಮದೇ ಆದ ಆಚಾರ, ವಿಚಾರ, ಸಂಸ್ಕøತಿ, ಉಡುಗಿ-ತೊಡಿಗೆ, ಭಾಷೆ, ಸಾಂಪ್ರದಾಯಿಕ ಪದ್ಧತಿಗಳು ಹೊಂದಿವೆ. ಭಾರತದ ಮೂಲನಿವಾಸಿಗಳಾದ ದ್ರಾವಿಡರಲ್ಲಿ ಒಂದಾದ ವಡ್ಡರ ಸಮುದಾಯವು ದೇಶಾದ್ಯಂತ ವ್ಯಾಪಿಸಿದ ವಿಶಿಷ್ಠ ಸಮುದಾಯವಾಗಿದೆ. ಈ ಸಮುದಾಯದವರು ಶ್ರಮಜೀವಿಗಳಾಗಿದ್ದು ಇತರ ಸೇವೆಗಳಲ್ಲಿಯೇ ಜೀವನ ಕಳೆದು ಅಲೆಮಾರಿಗಳಾಗಿ ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೆ ಶ್ರಮದ ಸಾಧನೆಗಳಾದ ಗಾಳಿ, ಗುದ್ದಿಲಿ, ಪಿಕಾಸಿ, ಸಲಕೆ, ಉಳಿ, ಸುತ್ತಿಗೆ ಹಿಡಿದು ಪರಿವಾರ ಸಮೇತವಾಗಿ ಹೋಗಿ ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾರೆ. ಅವರ ಸಾಮಾಜಿಕ, ಆರ್ಥಿಕ ಮತ್ತು ಸಂಸ್ಕೃತಿಕ ಜೀವನವು ಅದಿಮಾನವನಿಂದ ಇಂದಿನ ಆಧುನಿಕ ಯುಗಕ್ಕೆ ತನ್ನದೇ ಆದ ಸಂಸ್ಕೃತಿ ಸಾಂಪ್ರದಾಯ ಪದ್ಧತಿಗಳು ಭಾಷೆ ಮತ್ತು ಜೀವನ ಶೈಲಿಯೊಂದಿಗೆ ಕಾಲಾನಂತರದಲ್ಲಿ ಬದಲಾಗುತ್ತಲೇ ಇದೆ.
ಒಂದು ಎಂದು ಭೋವಿ ಸಮುದಾಯದ ಜನರು ಕಲ್ಲು, ಬಂಡೆ, ಮಣ್ಣಿನ ಕೆಲಸಗಳನ್ನು ಮಾಡುತ್ತಾ ಬಂಡೆಗಳನ್ನು ಎಬ್ಬಿಸುತ್ತಾ ಜೀವನ ನಡೆಸುತ್ತಾ ಬಂದಿದ್ದಾರೆ. ಈ ಸಮುದಾಯದ ಜನರು ಕಟ್ಟಡವನ್ನು ಕಟ್ಟುವುದರಲ್ಲಿ ಬಂಡೆ ಕಲ್ಲುಗಳನ್ನು ಸೀಳುವುದರಲ್ಲಿ ವಿಶೇಷ ಜಾಣತನ ಹೊಂದಿದ್ದಾರೆ ಹಾಗೂ ಬೃಹತ್ತಾದ ಅಣೆಕಟ್ಟುಗಳು, ಕೆರೆ ಕಾಲುವೆಗಳು, ಮನೆಯ ಬಳಕೆಯ ವಸ್ತುಗಳಾದ ಬೀಸುವ ಕಲ್ಲು, ರುಬ್ಬುವ ಗುಂಡು, ಹೊರಳು ಕಲ್ಲು, ಮುಂತಾದ ವಸ್ತುಗಳ ತಯಾರಿಕೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದುಕೊಂಡಿದ್ದಾರೆ. ಪುರಾತನ ಕಾಲದಿಂದಲೂ ಪ್ರತಿಯೊಂದು ಜಾತಿ ಸಮುದಾಯವು ತನ್ನದೇ ಆದ ಐತಿಹಾಸಿಕ ಹಿನ್ನಲೆಯನ್ನು ಒಳಗೊಂಡಿರುತ್ತದೆ ಸಮಾಜ ವಿವಿಧ ಸ್ಥಿತಿಗಳನ್ನು ಅಧ್ಯಯನ ಮಾಡಿದಾಗ ಸಮುದಾಯಗಳು ನಿರ್ವಹಿಸುತ್ತಿದ್ದ ವಿವಿಧ ವೃತ್ತಿಗಳು ಅವುಗಳು ಮೂಲ-ನೆಲೆ ಹಾಗೂ ವಾಸಿಸುವ ಪ್ರದೇಶಗಳನ್ನು ಆಧರಿಸಿ ಅವು ಜಾತಿಗಳಾಗಿ ಪರಿವರ್ತನೆ ಹೊಂದಿದವು.
ಸಾಹಿತ್ಯಾ ವಿಮರ್ಶೆಗಳು :
1. ಅನಿತಾ ಸಂಭಾಜಿ ಪೀಸಾಲ್ (2014) “ವಡ್ಡರ ಸಮುದಾಯದ ಸಾಮಾಜಿಕ ಆರ್ಥಿಕ ಸ್ಥಿತಿ ಅಧ್ಯಯನ” ಎಂಬ ಸಂಶೋಧನ ಅಧ್ಯಯನದಲ್ಲಿ ವಡ್ಡರ ಸಮುದಾಯದಲ್ಲಿನ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯ ಆಧುನಿಕರಣ, ಮಹಿಳೆಯರ ಸ್ಥಿತಿ, ಸಮಸ್ಯೆಗಳು, ಸರ್ಕಾರದ ಯೋಜನೆಗಳ ಬಗ್ಗೆ ಉದ್ದೇಶಗಳನ್ನು ಒಳಗೊಂಡು ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ 15 ಗ್ರಾಮಗಳಿಂದ ಒಟ್ಟು 522 ಪ್ರತಿ ವಾದಿಗಳನ್ನು ಮೂಲಕ ಈ ಅಧ್ಯಯನವನ್ನು ಯಾದೃಚಿಕ ಮಾದರಿಯ ಆಯ್ಕೆಮಾಡಿಕೊಂಡು ಮಾಹಿತಿಯನ್ನು ಪಡೆದಿದ್ದಾರೆ. ಭೋವಿ ಸಮುದಾಯದ ಮೂಲಭೂತ ಅವಶ್ಯಕತೆಗಳಾದ ಆಹಾರ ಬಟ್ಟೆ ವಸತಿಗಳನ್ನು ಸಂಪೂರ್ಣವಾಗಿ ಪೂರೈಕೆಯಾಗಿಲ್ಲ ಎಂದು ತಿಳಿದಿದೆ. ವಡ್ಡರ ಸಮುದಾಯದವರನ್ನು ವಿವಿಧ ಹೆಸರುಗಳಿಂದ ಕರೆಯಲ್ಪಟ್ಟಿದೆ. ಮೂಲವೃತ್ತಿಯನ್ನು ಅವಲಂಬಿತರು ಹಾಗೂ ಇವರು ವಲಸೆಗರು ಎಂದು ತಿಳಿಸುತ್ತಾರೆ. ವಡ್ಡರ ಸಮುದಾಯದ ಸಾಮಾಜಿಕ, ಆರ್ಥಿಕವಾಗಿ ಸಂಪೂರ್ಣವಾಗಿ ಈ ಸಂಶೋಧನೆಯಲ್ಲಿ ತಿಳಿಸಲಾಗಿದೆ.
2. ಹರೀಶ್ ಟಿ (2019) “ಭೋವಿ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ” ಜೀವನ ಎಂಬ ಅಧ್ಯಯನದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಭೋವಿ ಸಮುದಾಯವನ್ನು ಹಿಂದುಳಿದ ಜಾತಿ ಅಲೆಮಾರಿ ಜನಾಂಗ ಬುಡಕಟ್ಟು ಜನಾಂಗ ಹಾಗೂ ಭಾಷೆ ಹುಡುಗಿ ಮದುವೆ ವ್ಯವಸ್ಥೆ ಹಬ್ಬಗಳು ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳ ಸಮುದಾಯದಲ್ಲಿ ವಿಭಿನ್ನವಾಗಿದೆ ವಡ್ದರ್ ಓಡಿಸ ಒರಿಸ್ಸಾ ದಿಂದ ಬಂದವರು ಆಂಧ್ರಪ್ರದೇಶದವರು ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ ವಡ್ಡರನ್ನು ವಿವಿಧ ಹೆಸರಿನಿಂದ ಕರೆಯುತ್ತಾರೆ ಬೋಬಿ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಹಬ್ಬಗಳು ಹುಡುಗಿತೊಡುಗೆ ಮದುವೆ ಪದ್ಧತಿ ವಿವಾಹ ವಿಧಗಳು ಮಗುವಿನ ಜನನ ಮತ್ತು ನಾಮಕರಣ ಆಹಾರ ಪದ್ಧತಿ ಉದ್ಯೋಗ ಅಂತ್ಯಕ್ರಿಯೆ ಸಮಾರಂಭ ವಿವಿಧ ಸಾಮಾಜಿಕ ಸಾಂಸ್ಕೃತಿಕ ಸಾಂಪ್ರದಾಯಕ ಪದ್ಧತಿಗಳನ್ನು ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ ಬೋವಿ ಸಮುದಾಯದ ಶಿಕ್ಷಣ ಸಂಬಂಧಿಸಿದಂತೆ ಅಕ್ಷರಸ್ಥರು ಹಾಗೂ ಅನಕ್ಷರಸ್ಥರು ಕಂಡು ಬರುತ್ತಾರೆ ಮತ್ತು ಭೋವಿ ಸಮುದಾಯದ ಆರೋಗ್ಯ ಸಮಸ್ಯೆಗಳು ಹಾಗೂ ಸಾಲ ತೆಗೆದುಕೊಳ್ಳುವುದು ಧಾರ್ಮಿಕ ಹಬ್ಬಗಳಿಗೆ ಧರ್ಮ ಪದ್ಧತಿ ಮತ್ತು ಸಾಂಪ್ರದಾಯಿಕ ಕೆಲಸದ ಮೇಲೆ ಆಧುನಿಕರಣ ಪ್ರಭಾವ ಬೀರಿದೆ ಎಂದು ತಿಳಿಸಲಾಗಿದೆ ಭೋವಿ ಸಮುದಾಯದ ಸಾಮಾಜಿಕವಾಗಿ ಅವರ ಸಂಸ್ಕೃತಿಕ ಆಚಾರ ವಿಚಾರ ಗಳಿಂದ ವಡ್ಡರ್ ಎದುರಿಸುತ್ತಿರುವ ಸಮಸ್ಯೆಗಳು ಅಡ್ಡ ಪರಿಣಾಮಗಳು ಕಂಡು ಬಂದಿದೆ ಈ ಅಧ್ಯಯನದಲ್ಲಿ ತಿಳಿಸಲಾಗಿದೆ.
3. ಸಂಗಲದ (2014) “ಭೋವಿ ಸಮುದಾಯದ ಸಾಮಾಜಿಕ ಅಧ್ಯಯನ” ಎಂಬ ಮಾಹಪ್ರಬಂಧದಲ್ಲಿ ಬೋವಿ ಸಮುದಾಯದ ಮೂಲ ಮತ್ತು ಪಾರಂಪರೆ ಭಾರತದಲ್ಲಿ ಅಲೆಮಾರಿಗಳ ಸ್ಥಿತಿಗತಿ ಮತ್ತು ಕರ್ನಾಟಕದಲ್ಲಿ ಅಲೆಮಾರಿಗಳ ಸ್ಥಿತಿಗತಿಗಳು ತಿಳಿಯಬಹುದಾಗಿದೆ ಈ ಸಂಶೋಧನಾ ಅಧ್ಯಯನವನ್ನು ಬೆಳಗಾವ್ ಬಿಜಾಪುರ್ ಬಾಗಲಕೋಟ್ ಧಾರವಾಡ ಗದಗ್ ಹಾವೇರಿ ಮತ್ತು ಚಿತ್ರದುರ್ಗದಲ್ಲಿ ಅಧ್ಯಯನ ನಡೆಸಲಾಗಿದೆ ಭೋವಿ ಸಮುದಾಯದ ಸಾಮಾಜಿಕ ಆರ್ಥಿಕ ಸ್ಥಿತಿ ಜನಸಂಖ್ಯೆ ಕುಟುಂಬ ಉದ್ಯೋಗ ಶಿಕ್ಷಣ ಜೀವನ ಶೈಲಿ ಮತ್ತು ಭಾಷೆ ಇವುಗಳನ್ನು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ 10 ತಾಲೂಕುಗಳು ಮತ್ತು 30 ಗ್ರಾಮಗಳಲ್ಲಿ ಮತ್ತು ಚಿತ್ರದುರ್ಗಜಿಲ್ಲೆಯ ಆರುತಾಲೂಕು 18 ಗ್ರಾಮಗಳಲ್ಲಿ ಕುಟುಂಬದ ಗಾತ್ರ ತಿಳಿದಿದ್ದಾಗ ಹೆಚ್ಚಿನ ಜನಸಂಖ್ಯೆಯನ್ನು ಈ ಅಧ್ಯಯನ ಮಾಡಲಾಗುತ್ತದೆ. ಭೋವಿ ಸಮುದಾಯದವರು ತಮ್ಮ ಜೀವನೋಪಾಯಕ್ಕಾಗಿ ವಲಸೆ ಹೋಗುವುದು ಕಂಡು ಬರುತ್ತದೆ ಬೋವಿ ಸಮುದಾಯದ ಶೈಕ್ಷಣಿಕ ಸ್ಥಿತಿ ಆಹಾರದ ಪದ್ಧತಿ, ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಯಾವ ರೀತಿ ಬೆಳೆದು ಬಂದಿದ್ದಾರೆ ಅವರ ಕುಲ ಪಂಚಾಯಿತಿ ಸಾಂಪ್ರದಾಯಗಳು ಪದ್ಧತಿಗಳ ವಿಷಯದ ಬಗ್ಗೆ ಸಾಮಾಜಿಕವಾಗಿ ಈ ಅಧ್ಯಯನದಲ್ಲಿ ತಿಳಿಸಲಾಗಿದೆ.
4. ಸುರೇಶ್ ಕೆ ಬಿ (2020) “ಕರ್ನಾಟಕದಲ್ಲಿ ಭೋವಿ ಸಮುದಾಯ ಒಂದು ಸಮಾಜಶಾಸ್ತ್ರಿಯ ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧದಲ್ಲಿ ಭೋವಿ ಸಮುದಾಯದ ಹಿನ್ನೆಲೆ ಸಾಮಾಜಿಕ,ಆರ್ಥಿಕ,ರಾಜಕೀಯ,ಶೈಕ್ಷಣಿಕ ಗಮನದಲ್ಲಿಟ್ಟುಕೊಂಡು ಭಾರತೀಯ ಸಮಾಜ ವ್ಯಾಪ್ತಿಯಲ್ಲಿ ಭೋವಿ ಸಮುದಾಯದ ಸ್ಥಿತಿಗತಿ ತಿಳಿಸಲಾಗಿದೆ. ಕರ್ನಾಟಕದ ಭೋವಿ ಸಮುದಾಯದ ಒಂದು ಸಮಾಜಶಾಸ್ತ್ರಿಯ ಅಧ್ಯಯನವು ತುಮಕೂರು ಜಿಲ್ಲೆಯ 10 ತಾಲೂಕುಗಳಿರುವ 400 ಮಾಹಿತಿದಾರರ ಕುಟುಂಬವನ್ನು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಉದ್ಯೋಗಗಳ ದಾಖಲೆಗಳ ಹಿನ್ನೆಲೆಯನ್ನು ಸಂದರ್ಶನದ ಮೂಲಕ ಮಾಹಿತಿ ಕಲೆ ಹಾಕಿದ್ದಾರೆ. ಭೋವಿ ಸಮುದಾಯದವರಿಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಗುರುತಿಸಿ ಸಲಹೆಗಳನ್ನು ನೀಡಿದ್ದಾರೆ. ಸಾಂಪ್ರದಾಯಿಕ ಬದಲಾವಣೆ ಮೂಲಭೂತ ಅಗತ್ಯತೆಗಳನ್ನು ತೆಗೆದುಕೊಳ್ಳುವುದು ತಿಳಿಸಲಾಗಿದೆ. ಈ ಅಧ್ಯಯನದಲ್ಲಿ ಭೋವಿ ಸಮುದಾಯದ ಸಮಾಜ ಶಾಸ್ತ್ರೀಯ ಅಧ್ಯಯನ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಸಂಶೋಧನಾ ಅಧ್ಯಯನದ ಉದ್ದೇಶಗಳು :
1. ಭೋವಿ ಸಮುದಾಯದ ಸಾಮಾಜಿಕ ಸ್ಥಿತಿಯನ್ನು ಅಧ್ಯಯನ ಮಾಡುವುದು.
2. ಭೋವಿ ಸಮುದಾಯದ ಅರ್ಥಿಕ ಸ್ಥಿತಿಯನ್ನು ತಿಳಿಯುವುದು.
ಸಂಶೋಧನಾ ಅಧ್ಯಯನದ ಸಮಸ್ಯೆ ಕುರಿತಾದ ಹೇಳಿಕೆ :
ಈ ಅಧ್ಯಯನವು ಭೋವಿ ವಡ್ಡರ ಸಮುದಾಯದ ಅವರ ಐತಿಹಾಸಿಕ ಹಿನ್ನಲೆ ತಿಳಿದಾಗ ಅವರ ಸಂಸ್ಕ್ರತಿ, ಹಾಗೂ ಆಹಾರ, ಪದ್ದತಿ, ಭಾಷೆ, ಶಿಲ್ಪಕಲೆ ಇವು ಪ್ರಮುಖ ಪಾತ್ರವಹಿಸಿದೆ. ಅವರು ಅಲೆಮಾರಿ ಜೀವನ ನಡೆಸಯವರು ಇವರು ಆಧುನಿಕ ಸಮಾಜದ ವರು ಕೆಲವು ಗಂಭೀರವಾದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಈ ಸಮುದಾಯ ಸಾಮಾಜಿಕ, ಆರ್ಥಿಕ ಮತ್ತು ಅವರ ಜೀವನ ಶೈಲಿ, ವೃತ್ತಿಯ ಬಗ್ಗೆ ಅಂಶಗಳನ್ನು ತಿಳಿಸಯವ ಅವಶ್ಯಕತೆಯಾಗಿದ್ದು. ಈ ಸಂಶೋಧನ ಅಧ್ಯನದಲ್ಲಿ ಮಹತ್ವವಾಗಿದೆ ಪ್ರಸ್ತುತ ಪರಿಸ್ಥಿತಿ ಮತ್ತು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಅಧ್ಯಯನವನ್ನು ಕ್ಕೆಕೊಳ್ಳಲಾಗಿದೆ. ಈ ಸಮುದಾಯದ ವಿವಿಧ ಅಂಶಗಳನ್ನು ಅಧ್ಯಯನಮಾಡುವ ಅಗತ್ಯವಿದೆ.
ಸಂಶೋಧನಾ ವಿಧಾನ :
ಸಂಶೋಧನಾ ವಿಷಯಕ್ಕೆ ಸಂಬಂಧಸಿದಂತೆ ದತ್ತಾಂಶಗಳನ್ನು ಕಲೆಹಾಕಲು ಉದ್ದೇಶಪೂರಿತ ಮಾದರಿಯನ್ನು ಆಯ್ಕೆ ಮಾಡಿಕೋಳ್ಳಲಾಗುತ್ತದೆ. ಈ ಸಂಶೋಧನೆಯಲ್ಲಿ ವಿವರಣಾತ್ಮಕವಾದ ಸಂಶೋಧನಾ ವಿನ್ಯಾಸವನ್ನು ಬಳಸಲಾಗಿದೆ.
ದತ್ತಾಂಶ ಸಂಗ್ರಹಣೆಯ ಉಪಕರಣಗಳು :
1 ಪ್ರಾಥಮಿಕ ದತ್ತಾಂಶಗಳು ಮೂಲಗಳು : ಯಾವುದೇ ಸಂಶೋಧನೆಗಳಲ್ಲಿ ಪ್ರಾಥಮಿಕ ಮಾಹಿತಿಗಳು ಅಂತಗಳ ಮುಖ್ಯವಾಗಿರುತ್ತವೆ. ಈ ಮೂಲವಾಗಿ ಅನುಸೂಚಿ ಬಳಸಿಕೊಂಡು ಸಂಶೋಧನಾ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಸಮುದಾಯವನ್ನು ಸಂದರ್ಶಿಸಿ ಮತ್ತು ಅವಲೋಕನ ಸಹಾಯದಿಂದಲೇ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
2 ಮಾಧ್ಯಮಿಕ ದತ್ತಾಂಶ ಮೂಲಗಳು : ಈ ಅಧ್ಯಯನಕ್ಕೆ ಸಂಬಂಧಿಸಿದ ಮಾಧ್ಯಮಿಕ ಮಾಹಿತಿಯ ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ. ಸಂಶೋಧನಾ ಗ್ರಂಥಗಳು, ಲೇಖನಗಳು, ದಿನಪತ್ರಿಕೆಗಳು, ಪುಸ್ತಕಗಳು, ಸಾಹಿತ್ಯ ವಿಮರ್ಶೆ, ಇಲಾಖೆಗಳು, ಹಾಗೂ ಸರ್ಕಾರದ ಪ್ರಕಟಣೆಗಳು, ಸಮುದಾಯ ಮಠಗಳಲ್ಲಿ ಮಾಹಿತಿ ತೆಗೆದುಕೊಂಡು ಸಂಶೋಧನಾ ಮೂಲಗಳಿಂದ ಅಗತ್ಯವಾಗಿ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.
ಭೋವಿ ಸಮುದಾಯದ ಒಳಪಂಗಡಗಳು :
ಭೋವಿ ಸಮುದಾಯವು ಒಂದೇ ಎಂದು ಕಂಡರೂ ಹಲವಾರು ಒಳಪಂಗಡಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ ಮಣ್ಣುವಡ್ಡರು, ಕಲ್ಲುವಡ್ಡರು, ಮಣ್ಣ ವಡ್ಡರು, ಬಂಡಿವಡ್ಡರು, ಉಪ್ಪುವಡ್ಡರು. ಗಿರಣಿವಡ್ಡರು. ತುಡುಗು ವಡ್ಡರು, ರಜ ವಡ್ಡರು, ಅರಗು ವಡ್ಡರ, ಓರು ವಡ್ಡರ ಇತ್ಯಾದಿ ಒಳಪಂಗಡಗಳನ್ನು ಗುರುತಿಸಲಾಗಿದೆ.
ಭೋವಿ/ವಡ್ಡರ ಜನಾಂಗದ ಭೌಗೋಳಿಕತೆ ಮತ್ತು ಜನಸಂಖ್ಯೆ :
ಭಾರತ ದೇಶದಲ್ಲಿ ಈ ಜನಾಂಗ ವಾಸಿಸುವ ರಾಜ್ಯಗಳೆಂದರೆ, ಓರಿಸ್ಸಾ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಇತ್ಯಾದಿ. ಓರಿಸ್ಸಾದಲ್ಲಿ ಇವರಿಗೆ ಒಡ್ಡ ಅಥವಾ ಒಡ್ಡಿ ಎಂದು ಕರೆದರೆ, ತಮಿಳುನಾಡಿನಲ್ಲಿ ಬೋವಿಗಳೆಂದು ಗುರುತಿಸುತ್ತಾರೆ. ಆಂಧ್ರದಲ್ಲಿ ಒಡ್ಡಲು ಅಥವಾ ಒಡಿಯರಾಜು ಎನ್ನುತ್ತಾರೆ. ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ ಮಸ್ತರಿ (ಮಾಸ್ತರಿ) ಎಂತಲೂ ಕರ್ನಾಟಕದಲ್ಲಿ ಭೋವಿ/ವಡ್ಡರ ಎಂದೂ ಕರೆಯಲಾಗುತ್ತದೆ. ದೃಢಕಾಯವುಳ್ಳ ಈ ಜನಾಂಗದವರು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಪ್ರಮುಖ ಪಟ್ಟಣಗಳಲ್ಲಿ ದೊಡ್ಡ ಹಳ್ಳಿಗಳಲ್ಲಿ ಇವರು ವಾಸವಾಗಿದ್ದಾರೆ.
ಕರ್ನಾಟಕದಲ್ಲಿ ಭೋವಿ ವಡ್ಡರು :
ಕರ್ನಾಟಕದಲ್ಲಿ ಹಾವನೂರು ಸಮಿತಿಯನ್ನು 1972 ರಲ್ಲಿ ಸ್ಥಾಪಿಸಲಾಯಿತು. ಈ ಸಮಿತಿಯ ವರದಿಯಂತೆ ವಡ್ಡರ ಸಮುದಾಯವನ್ನು 1975 ರಲ್ಲಿ ಹಿಂದುಳಿದ ಬುಡಕಟ್ಟು ಗುಂಪಿಗೆ ಸೇರಿಸಬೇಕು 1975ರಲ್ಲಿ ಸಮಿತಿಯು ಸಾಮಾಜಿಕ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಪ್ರಸ್ತಾಪಿಸಲು ಅಥವಾ ಶಿಫಾರಸು ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಿದೆ ಈ ಸಮುದಾಯವು ಅನೇಕ ಬದಲಾವಣೆಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತಿರುವಂತೆ ಕರ್ನಾಟಕದ ವಡ್ಡರ್ ಸಮುದಾಯದ ಕೆಲವು ಮುಖಂಡರು ಈ ಸಮುದಾಯಕ್ಕೆ ಸಮಾನತೆಗಾಗಿ ಹೆಚ್ಚಿನ ಪ್ರಯತ್ನಗಳನ್ನು ಮಾಡಿದರು ಒಂದು ಸಮುದಾಯಕ್ಕೆ ವಿವಿಧ ಹೆಸರುಗಳನ್ನು ಕರೆಯುವುದನ್ನು ಅವರು ವಿರೋಧಿಸುತ್ತಾರೆ ವಡ್ಡರ ತಮ್ಮಲ್ಲಿ ಹಲವು ಉಪಜಾತಿಗಳಿವೆ ಎಂದು ಹೇಳಿಕೊಳ್ಳುತ್ತಾರೆ ಅವುಗಳಲ್ಲಿ 9 ಮಾತ್ರ ಅಸ್ತಿತ್ವದಲ್ಲಿವೆ. ಕರ್ನಾಟಕದಲ್ಲಿ ಕೋಲಾರ-ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ಸಿಂಧನೂರು ಹಾಗೂ ಗುಲ್ಬರ್ಗಾ, ವಿಜಯಪುರ ಜಿಲ್ಲೆಯಾದ್ಯಂತ ವಿಶೇಷವಾಗಿ ಶಹಬಾದ ಮತ್ತು ವಿಜಯಪುರ ಪಟ್ಟಣದಲ್ಲಿ ಇವರು ದಟ್ಟವಾಗಿ ಕಂಡು ಬರುತ್ತಾರೆ. ಕರ್ನಾಟಕದಲ್ಲಿ ಈ ಜನರು ಸುಮಾರ, 30, ರಿಂದ, 35 ಲಕ್ಷ ಜನಸಂಖ್ಯೆ ಇರಬಹುದು ಇತರ ರಾಜ್ಯಗಳಲ್ಲಿ ಹೋಲಿಸಿದರೆ ಕನ್ನಡನಾಡಿನಲ್ಲಿ ಇವರ ಉದ್ಯೋಗಕ್ಕೆ ಬೇಕಾದ ವೈವಿಧ್ಯಮಯವಾದ ಕಲ್ಲುಗಳು ಹೇರಳವಾಗಿ ದೊರೆಯುತ್ತವೆ. ಇವರ ವೃತ್ತಿ ಪ್ರವೃತ್ತಿಗಳೆರಡು ಕಲ್ಲಿನಲ್ಲಿ ಮಣ್ಣಿನಲ್ಲಿ ಹುದುಗಿವೆ.
ಕೋಷ್ಟಕ ಸಂಖ್ಯೆ 1 ಮಾಹಿತಿದಾರರ ಶಿಕ್ಷಣ ಕುರಿತಾದ ಮಾಹಿತಿ
ಕ್ರ.ಸಂ |
ಶಿಕ್ಷಣ |
ಸಂಖ್ಯಾವಾರು |
ಶೇಕಡವಾರು/ಪ್ರತಿಶತ |
1 |
ಅನಕ್ಷರಸ್ಥರು |
110 |
52.3 |
2 |
ಪ್ರಾಥಮಿಕ ಶಿಕ್ಷಣ |
57 |
27.1 |
3 |
ಪ್ರೌಢ ಶಿಕ್ಷಣ |
26 |
12.3 |
4 |
ಪಿಯುಸಿ |
8 |
3.8 |
5 |
ಪದವಿ |
6 |
2.8 |
6 |
ಸ್ನಾತಕೋತ್ತರ |
2 |
0.9 |
7 |
ಗಿÁಂತ್ರಿಕ |
1 |
0.4 |
|
ಒಟ್ಟು |
210 |
100.0 |
ಈ ಮೇಲಿನ ಕೋಷ್ಟಕ ಹಾಗೂ ಚಿತ್ರವನ್ನು ಗಮನಿಸಿದಾಗ ಶೈಕ್ಷಣಿಕ ಸ್ಥಿತಿಯನ್ನು ತಿಳಿಸಿಲಾಗುವುದು. ಅನಕ್ಷರಸ್ಥರು ಶೇ.52.3% ರಷ್ಟಿದ್ದಾರೆ. ಪ್ರಾಥಮಿಕ ಶಿಕ್ಷಣ ಶೇ.27.1% ರಷ್ಟು ಇದೆ. ಪ್ರೌಢ ಶಿಕ್ಷಣ ಶೇ.12.3% ರಷ್ಟು, ಪಿಯುಸಿ ಶೇ.3.8% ರಷ್ಟು, ಪದವಿ ಶೇ.2.8% ರಷ್ಟು, ಸ್ನಾತಕೋತ್ತರ ಶೇ.0.9% ರಷ್ಟು ಇದೆ, ತಾಂತ್ರಿಕ ಶೇ.0.4% ರಷ್ಟು ಇದೆ. ಇದರಲ್ಲಿ ಶಿಕ್ಷಣ ಕಲಿಯದೇ ಅನಕ್ಷರಸ್ಥರು ಶೇ.52.3% ಹೆಚ್ಚಾಗಿ ಕಂಡು ಬರುತ್ತಾರೆ.
ಕೋಷ್ಟಕ ಸಂಖ್ಯೆ 2 ಮಾಹಿತಿದಾರರ ಕುಟುಂಬದ ವಿಧ
ಕ್ರ.ಸಂ |
ಕುಟುಂಬದ ವಿಧ |
ಸಂಖ್ಯಾವಾರು |
ಶೇಕಡವಾರು/ಪ್ರತಿಶತ |
1 |
ಅವಿಭಕ್ತ ಕುಟುಂಬ |
180 |
85.7 |
2 |
ವಿಭಕ್ತ ಕುಟುಂಬ |
30 |
14.3 |
|
ಒಟ್ಟು |
210 |
100.0 |
ಈ ಮೇಲಿನ ಕೋಷ್ಟಕ ಮತ್ತು ವೃತ್ತ ಚಿತ್ರವನ್ನು ಗಮನಿಸಿದಾಗ ಶೇ.85.7% ರಷ್ಟು ಮಾಹಿತಿದಾರರು ಆವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ಇನ್ನು ಶೇ.14.3% ರಷ್ಟು ಮಾಹಿತಿದಾರರು ವಿಭಕ್ತ ಕುಟುಂಬಗಳಲ್ಲಿ ವಾಸಿಸುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಮುಖ್ಯ ಕಾರಣ ಸಮುದಾಯದಲ್ಲಿ ಆಧುನಿಕ ಬದಲಾವಣೆ ಕಾರಣವಾದರು ತಮ್ಮ ಕುಟುಂಬಸ್ಥರನ್ನು ಬೇರೆಯಾಗಲು ನೀಡುವುದಿಲ್ಲ ಎನ್ನಬಹುದಾಗಿದೆ. ಇಲ್ಲಿ ಕಂಡುಬರುವ ಅಂಶವೆಂದರೆ ಮಾಹಿತಿದಾರರು ಅತಿಹೆಚ್ಚು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ಅತಿ ಕಡಿಮೆ ಮಾಹಿತಿದಾರರು ವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವುದು ಕಂಡುಬರುತ್ತದೆ.
ಕೋಷ್ಟಕ ಸಂಖ್ಯೆ 3 ಮಾಹಿತಿದಾರರ ಜಮೀನು ಹೊಂದಿರುವವ ಮಾಹಿತಿ
ಕ್ರ.ಸಂ |
ಜಮೀನು |
ಸಂಖ್ಯಾವಾರು |
ಶೇಕಡವಾರು/ಪ್ರತಿಶತ |
1 |
ಹೌದು |
91 |
43.33 |
2 |
ಇಲ್ಲ |
119 |
56.66 |
|
ಒಟ್ಟು |
210 |
100% |
ಈ ಮೇಲಿನ ಕೋಷ್ಟಕ ಗಮನಿಸಿದಾಗ ಶೇ.56.66% ರಷ್ಟು ಜಮೀನು ಹೊಂದಿದವರು. ಶೇ.43.33% ರಷ್ಟು ಜಮೀನು ಹೊಂದಿರುವುದಿಲ್ಲ ಎಂದು ಕಂಡು ಬರುತ್ತಾರೆ. ಒಟ್ಟಾರೆ ಮಾಹಿತಿದಾರರಲ್ಲಿ ಕಡಿಮೆ ಜಮೀನು ಇರುವವರು ಅಧಿಕವಾಗಿ ಕಂಡು ಬರುತ್ತಾರೆ. ಹೀಗೆಯೇ ಅಧ್ಯಯನ ಕ್ಷೇತ್ರದ ಮಾಹಿತಿದಾರರು ಕೂಲಿ, ಕೃಷಿ ವೃತ್ತಿಗಳಲ್ಲಿ ತೊಡಗಿರುವುದು ಕಾಣಬಹುದಾಗಿದೆ. ಇವರಲ್ಲಿ ಕೃಷಿಕರೇ ಹೆಚ್ಚಾಗಿದ್ದರೂ ಸಹ ಸರಿಯಾದ ಸೌಲಭ್ಯವಿಲ್ಲದ ಕಾರಣ ಕೂಲಿಯನ್ನು ಅವಲಂಬಿಸಿಕೊಂಡು ಜೀವನ ಸಾಗಿಸುವಂತಹ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.
ಕೋಷ್ಟಕ ಸಂಖ್ಯೆ 4 ಮಾಹಿತಿದಾರರ ಕುಟುಂಬದ ಆದಾಯ ಮಾಹಿತಿ
ಕ್ರ.ಸಂ |
ಆದಾಯ |
ಸಂಖ್ಯಾವಾರು |
ಶೇಕಡವಾರು/ಪ್ರತಿಶತ |
1 |
1-15000 |
23 |
11.0 |
2 |
15001-30000 |
88 |
41.9 |
3 |
30001-50000 |
80 |
38.1 |
4 |
50001- ಲಕ್ಷಕ್ಕಿಂತ ಹೆಚ್ಚು |
19 |
9.0 |
|
ಒಟ್ಟು |
210 |
100.0 |
ಈ ಮೇಲಿನ ಕೋಷ್ಟಕ ಗಮನಿಸಿದಾಗ ಕುಟುಂಬ ಒಟ್ಟು ಆದಾಯ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 11% ರಷ್ಟು 1-15000 ಕುಟುಂಬದ ಒಟ್ಟು ಆದಾಯವಿದೆ, 15001-30000 ರವರಿಗೆ 41.9% ರಷ್ಟು ಕುಟುಂಬದ ಆದಾಯವಿದೆ, 30001-50000 ರವರಿಗೆ 38.1% ರಷ್ಟು ಕುಟುಂಬದ ಒಟ್ಟು ಆದಾಯವಿದೆ, 50001 ಲಕ್ಷಕ್ಕಿಂತ ಹೆಚ್ಚು 9% ರಷ್ಟು ಆದಾಯವನ್ನು ಒಳಗೊಂಡಿದ್ದಾರೆ. ಅತಿ ಹೆಚ್ಚು 15001-30000 ರವರಿಗೆ ಕುಟುಂಬದ ಆದಾಯವನ್ನು ಪಡೆದಿದ್ದಾರೆ. ಅತಿ ಕಡಿಮೆ 9% ರಷ್ಟು ಮಾಹಿತಿದಾರರ ಆದಾಯವು 50001 ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಪಡೆದ್ದಾರೆಂದು ಈ ಕೋಷ್ಟಕದಿಂದ ಕಾಣಬಹುದಾಗಿದೆ.
ಕೋಷ್ಟಕ ಸಂಖ್ಯೆ 5 ಮಾಹಿತಿದಾರರ ಪಡಿತರ ಚೀಟಿಯ ಮಾಹಿತಿ.
ಕ್ರ.ಸಂ |
ಮಾತೃ ಭಾಷೆ |
ಸಂಖ್ಯಾವಾರು |
ಶೇಕಡವಾರು/ಪ್ರತಿಶತ |
1 |
ಎ.ಪಿ.ಎಲ್ |
12 |
5.7 |
2 |
ಬಿ.ಪಿ.ಎಲ್ |
188 |
89.5 |
3 |
ಅಂತೋದಯ |
10 |
4.7 |
|
ಒಟ್ಟು |
210 |
100.0 |
ಈ ಮೇಲಿನ ಕೋಷ್ಟಕ ಮತ್ತು ಚಿತ್ರವನ್ನು ಗಮನಿಸಿದಾಗ ಕುಟುಂಬಗಳ ಆಧಾರದ ಮೇಲೆ ಅವರಲ್ಲಿನ ಕುಟುಂಬದ ಪಡಿತರ ಚೀಟಿಗಳನ್ನ ತಿಳಿಸಲಾಗಿದೆ. ಶೇ.5.7% ಎ.ಪಿ.ಎಲ್ ಚೀಟಿ ಹೊಂದಿದ್ದಾರೆ. ಶೇ.89.5% ರಷ್ಟು ಬಿ.ಪಿ.ಎಲ್ ಚೀಟಿಯನ್ನು ಮಾಹಿತಿದಾರರು ಹೊಂದಿದ್ದಾರೆ. ಅಂತೋದಯ ಚೀಟಿಯನ್ನು ಶೇ.4.3% ರಷ್ಟು ಹೊಂದಿದ್ದಾರೆ ಮತ್ತು ಇತರೆ ಪಡಿತರ ಚೀಟಿಯನ್ನು ಶೇ.0.5% ರಷ್ಟು ಮಾಹಿತಿದಾರರು ಹೊಂದಿದ್ದರೆ ಎಂಬ ಅಂಶಗಳು ತಿಳಿದುಬರುತ್ತದೆ.
ಸಲಹೆಗಳು :
1. ಸೌಲಭ್ಯಗಳು ಮತ್ತು ಯೋಜನೆಗಳ ಬಗ್ಗೆ ಅರಿವು ನೀಡುವ ಅಗತ್ಯವಿದೆ.
2. ಅವರ ಕೌಶಲ್ಯಗಳ ಆಧಾರದ ಮೇಲೆ ಕೆಲಸವನ್ನು ಒದಗಿಸಬೇಕಾಗಿದೆ.
3. ಮಾರ್ಕೆಟಿಂಗ್ ಸೇವಾ ವೇದಿಕೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ.
4. ವಲಸೆಯನ್ನು ತಡೆಯಲು ಸಾಮಾಜಿಕ ಭದ್ರತೆ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಅಗತ್ಯವಿದೆ.
5. ಆರ್ಥಿಕ ಅಂಶಗಳನ್ನು ಬಲಪಡಿಸುವುದು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು.
6. ಈ ಸಮುದಾಯಕ್ಕೆ ಅಂತ್ಯೋದಯ ಪಡಿತರ ಚೀಟಿ ಹಾಗೂ ಬಿ.ಪಿ.ಎಲ್. ಅರ್ಹ ಎಲ್ಲಾ ಕುಟುಂಬಗಳಿಗೆ ಸಕಾಲದಲ್ಲಿ ಒದಗಿಸಿ ಪೂರಕ ವ್ಯವಸ್ಥೆ ಕಲ್ಪಿಸುವುದು.
7. ಶಿಕ್ಷಣ ಹಂತದಲ್ಲಿ, ಭೋವಿ ಸಮುದಾಯದ ಪುರುಷ ಮತ್ತು ಮಹಿಳೆಯರಿಗಾಗಿ ಸ್ನಾತಕೋತ್ತರ ಪದವಿ, ಸಂಶೋಧನಾ ಪದವಿ ಮುಂತಾದ ಅಂಶಗಳ ಮಹತ್ವವನ್ನು ತಿಳಿಸಿ ಉನ್ನತವಾದ ಪದವಿಗಳನ್ನು ಪಡೆಯಲು ಅವರನ್ನು ಜಾಗೃತಿಗೊಳಿಸಬೇಕು.
8. ಸಮುದಾಯದವರಿಗೆ ಸರ್ಕಾರದಿಂದ ವೃತ್ತಿ ಪತ್ರವನ್ನು ಕಲ್ಪಸಬೇಕು.
9. ಸಮುದಾಯದವರಿಗೆ ಮೂಲ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳಬೇಕು
10. ಇವರಿಗೆ ಸರ್ಕಾರಿ ಸೌವಲಭ್ಯಗಳ ಬಗ್ಗೆ ಮಾಹಿತಿ ಒದಗಿಸುವುದು.
ಉಪಸಂಹಾರ :
ಈ ಜಿಲ್ಲೆಯಲ್ಲಿ ಭೋವಿ ಸಮುದಾಯದ ಹಲವಾರು ರೀತಿಯ ಆಯಾಮಗಳನ್ನು ಅಧ್ಯಯನ ಮಾಡಲಾಗಿದ್ದು ಈ ಸಮುದಾಯದಲ್ಲಿ ಅನೇಕ ರೀತಿಯ ಸಮಸ್ಯೆಗಳಿವೆ. ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಭೋವಿ ಸಮುದಾಯದವರನ್ನು ಕುರಿತು ಅಧ್ಯಯನವನ್ನು ಕೈಗೊಂಡಾಗ ಸರ್ಕಾರ ಹಲವು ಯೋಜನೆಗಳಿಂದ ಈ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಂಶಗಳು ಮೇಲ್ನೋಟಕ್ಕೆ ಬದಲಾವಣೆಗಳಾಗಿವೆ ಎಂದು ಗೋಚರಿಸಿದರು ಸಹ ವೈಜ್ಞಾನಿಕವಾಗಿ ಸಂಶೋಧನೆಯನ್ನು ಕೈಗೊಂಡಾಗ ಹೇಳಿಕೊಳ್ಳುವಂತಹ ಬದಲಾವಣೆಗಳು ಹಾಗದೇ ಇರುವುದು ಕಂಡು ಬಂದಿದೆ. ಒಟ್ಟಾರೆಯಾಗಿ ಭೋವಿ ಸಮುದಾಯವು ಆಧುನೀಕತೆಯ ಸಾಮಾಜಿಕ ಬದಲಾವಣೆಯಲ್ಲಿ ತಮ್ಮ ಸಂಪ್ರದಾಯಿಕ ಪದ್ಧತಿ, ನಿಯಮಗಳು, ರೂಢಿಗಳು ಬದಲಾವಣೆಯಾಗುತ್ತಿದ್ದರು ತಮ್ಮ ಮೂಲ ಭಾವನೆಗಳನ್ನು ಹಾಗೆ ಉಳಿಸಿಕೊಂಡಿದೆ.
ಕೃತಜ್ಞತೆಗಳು :
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಮುಖ್ಯಸ್ಥರು, ಸಮಾಜಕಾರ್ಯ ವಿಭಾಗದ ಉಪನ್ಯಾಸಕರು ಮತ್ತು ಮಾರ್ಗದರ್ಶಕರಾದ
ಡಾ. ಲಿಂಗರಾಜ ನಿಡುವಣಿ, ಭೋವಿ ಸಮುದಾಯÀದ ಸಂಸ್ಥೆಗಳು ಹಾಗೂ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಿಗೆ
ಆಧಾರ ಗ್ರಂಥಗಳು