A Study on Socio-Economic Status of Garadimane Wrestlers of Gadag Taluk
Shivananda D Thimmannavar1, Dr. Lingaraj Niduvani2
1Research Student, Department of Social Work, Karnataka State Rural Development and Panchayat Raj University Gadag, shivananddt1435@gmail.com
2Lecturer and Research Guide, Department of Social Work, Karnataka State Rural Development and Panchayat Raj University Gadag, lingarajvn707@gmail.com
Abstract
In India the village society has its own pro-agricultural festivals, rituals and sports. Also, it has maintained only those sports which are part of this village culture. Wrestling is the dominant sport of Indian wrestling. It was earlier considered as an Indian village community prestige game. Every family aspired to have at least one youngster in Garadimane Kusti. In North Karnataka it was customary to send one son to the wrestling sport of Garadimane. Among them Scheduled Caste families gave high priority to Garadimane wrestling sport. Due to financial and organizational reasons of some Samajos, the sport of Garadimane wrestling is disappearing. Scheduled castes have taken up wrestling as a profession and this study deals with the socio-economic status of scheduled caste wrestlers and the lifestyle of the scheduled caste wrestlers.
Keywords: Garadimane, Wrestler, Sports, Social, Economic, Massage.
ಗದಗ ತಾಲ್ಲೂಕಿನ ಗರಡಿಮನೆಯ ಕುಸ್ತಿಪಟುಗಳ ಸಮಾಜೋ - ಆರ್ಥಿಕ ಸ್ಥಿತಿಗತಿ ಕುರಿತು ಒಂದು ಅಧ್ಯಯನ
ಶಿವಾನಂದ. ಧ. ತಿಮ್ಮಣ್ಣವರ1, ಡಾ. ಲಿಂಗರಾಜ ನಿಡುವಣಿ2
1ಸಂಶೋಧನಾ ವಿಧ್ಯಾರ್ಥಿ
2ಉಪನ್ಯಾಸಕರು ಮತ್ತು ಮಾರ್ಗದರ್ಶಕರು
1,2ಸಮಾಜಕಾರ್ಯ ವಿಭಾಗ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ, ಗದಗ
ಅಮೂರ್ತ
ಭಾರತವು ಗ್ರಾಮ ಸಮಾಜವು ತನ್ನದೇ ಆದ ರೀತಿಯಲ್ಲಿ ಕೃಷಿ ಪರವಾದ ಹಬ್ಬಗಳು ಆಚರಣೆಗಳು ಮತ್ತು ಕ್ರೀಡೆಗಳನ್ನು ಹೊಂದಿರುತ್ತದೆ. ಹಾಗೆಯೇ ಈ ಗ್ರಾಮ ಸಂಸ್ಕ್ರತಿಗೆ ಸೇರಿ ಹೋಗುವಂತಹ ಕ್ರೀಡೆಗಳನ್ನು ಮಾತ್ರ ಅದು ಕಾಪಾಡಿಕೊಂಡು ಬಂದಿರುತ್ತದೆ. ಭಾರತೀಯ ಗರಡಿಮನೆಯ ಕುಸ್ತಿ ಕ್ರೀಡೆಯು ಪ್ರಧಾನವಾಗಿದೆ. ಇದನ್ನು ಹಿಂದೆ ಭಾರತೀಯ ಗ್ರಾಮ ಸಮುದಾಯ ಪ್ರತಿಷ್ಠೆಯ ಆಟವೆಂದು ಪರಿಗಣಿಸಲುಪಟ್ಟಿತ್ತು. ಒಬ್ಬ ಯುವಕನಾದ್ದರೂ ಗರಡಿಮನೆ ಕುಸ್ತಿ ಪಟುವಾಗಿರಲ್ಲಿ ಎಂದು ಪ್ರತಿ ಕುಟುಂಬವು ಅಪೇಕ್ಷ ಪಡುತ್ತಿತ್ತು. ಉತ್ತರ ಕರ್ನಾಟಕದಲ್ಲಿ ಒಬ್ಬ ಮಗನನ್ನು ಗರಡಿಮನೆಯ ಕುಸ್ತಿ ಕ್ರೀಡೆಗೆ ಬಿಡುವುದು ಪದ್ದತಿಯಾಗಿತ್ತು. ಅದರಲ್ಲಿ ಪರಿಶಿಷ್ಟ ಪಂಗಡ ಕುಟುಂಬಗಳು ಗರಡಿಮನೆಯ ಕುಸ್ತಿ ಕ್ರೀಡೆಗೆ ಹೆಚ್ಚಿನ ಆದ್ಯೆತೆಯನ್ನು ನೀಡುತ್ತಿದ್ದರು. ಕೆಲವು ಸಾಮಾಜೋ ಆರ್ಥಿಕ ಮತ್ತು ವ್ಯವಸ್ಥೆಯ ಕಾರಣದಿಂದ ಗರಡಿಮನೆ ಕುಸ್ತಿ ಕ್ರೀಡೆಯು ಕಣ್ಣಮರೆಯಾಗುತ್ತಾ ಸಾಗುತ್ತಿರುವುದು ಕಂಡು ಬರುತ್ತದೆ. ಪರಿಶಿಷ್ಟ ಪಂಗಡದವರು ಕುಸ್ತಿಯನ್ನು ವೃತ್ತಿಯಾಗಿ ಮಾಡಿಕೊಂಡಿದ್ದು, ಈ ಅಧ್ಯಯನವು ಪರಿಶಿಷ್ಟ ಪಂಗಡ ಕುಸ್ತಿಪಟುಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳನ್ನು ತಿಳಿಸಲಾಗಿದೆ ಹಾಗೂ ಜೀವನದ ನಡೆಸಲು ಮಾಶಾಸನದ ಕುರಿತು ತಿಳಿಯಲಾಗಿದೆ.
ಪ್ರಮುಖ ಪದಗಳು : ಗರಡಿಮನೆ, ಕುಸ್ತಿಪಟು, ಕ್ರೀಡೆ, ಸಾಮಾಜಿಕ, ಆರ್ಥಿಕ, ಮಾಸಾಶನ.
ಪರಿಚಯ :
ಮಾನವನ ಬದುಕು ಚಲನಶೀಲವಾದದ್ದು. ಅವನು ನಿರಂತರವಾಗಿ ಬದಲಾವಣೆಗಳಿಗಾಗಿ ತುಡಿಯುತ್ತಾ ಇರುತ್ತಾನೆ. ಹಳೆಯದರಲ್ಲಿ ತನಗೆ, ಬೇಕಾದಷ್ಟನ್ನೇ ಇರಿಸಿಕೊಂಡು ಅದಕ್ಕೆ ಹೊಸತನ್ನು ಬೆರೆಸುತ್ತಾ ಸಾಗುವುದೇ ಮಾನವನ ಮೂಲ ಲಕ್ಷಣ. ಹೀಗೆ ಅವನು ನಡೆಯುತ್ತಿರುವುದರಿಂದಲೇ ಹೊಸ ಹೊಸ ಆವಿಷ್ಕಾರಗಳು ಸಾಧ್ಯವಾಗಿರುವುದು, ನಾಗರೀಕತೆ ಎನ್ನುವ ಪದ ಬಳಕೆಗೊಳ್ಳುತ್ತಿರುವುದು. ಅಂದರೆ ಮಾನವನ ಈ ತುಡಿತಗಳು ಯಾವಾಗಲೂ ಅವನ ಪರವಾಗಿದ್ದು ಅವನಿಗೆ ಒಳಿತನ್ನು ಉಂಟು ಮಾಡಲಾರವು. ಇವುಗಳಲ್ಲಿ ಎಷ್ಟೋ ವಿಚಾರಗಳು ಅವನ ಯೋಚನೆಗೆ ವಿರುದ್ಧ ದಿಕ್ಕಿನಲ್ಲಿ ಸಾಗುವ ಸಾಧ್ಯತೆಗಳು ಕಾಣುತ್ತವೆ. ಒಟ್ಟಾರೆಯಾಗಿ ಮಾನವನ ಈ ರೀತಿಯ ನಿರಂತರವಾದ ಚಟುವಟಿಕೆಗಳು ಅವನ ಹಳೆ ತಲೆಮಾರಿನ ಅಥವಾ ಪೂರ್ವಜರು ಹಾಕಿಕೊಟ್ಟ ಎಷ್ಟೋ ಉತ್ತಮವಾದ ವಿಚಾರಗಳು ಮರೆ ಮಾಚುವಂತೆ ಮಾಡುವುದಂತೂ ಸತ್ಯ. ಈ ರೀತಿ ಮರೆ ಮಾಚುತ್ತಾ ಸಾಗುತ್ತಿರುವ ಕಲೆಗಳಲ್ಲಿ ಗರಡಿಕಲೆಯಾದ ಕುಸ್ತಿಯೂ ಒಂದಾಗಿದೆ. ಗರಡಿಕಲೆಯ ಕುಸ್ತಿ ಪೂರ್ವದಲ್ಲಿ ಸಮರ ಕಲೆಗೆ ಪೂರಕವಾಗಿರುವ ಕಲೆಯಾಗಿದ್ದಿತು. ಸಮರ ಕಲೆ ರಾಜತ್ವವನ್ನು ಕಾಪಾಡುವ ಉದ್ದೇಶಕ್ಕೆ ಬಳಕೆಗೊಳ್ಳುತ್ತಿತ್ತು. ಆದರೆ ಇಂದು ಹಿಂದೆ ಇದ್ದ ರಾಜ ಮನೆತನಗಳು ಇಲ್ಲ. ಹಾಗೆ ರಾಜಪ್ರಭುತ್ವವೂ ಇಲ್ಲ. ಇವತ್ತಿನ ಭಾರತದ ಸ್ಥಿತಿಯೇ ಬದಲಾಗಿದೆ. ಪ್ರಜಾಪ್ರಭುತ್ವದ ಈ ಕಾಲದಲ್ಲಿ ರಾಜ್ಯ- ರಾಷ್ಟ್ರವನ್ನು ಕಾಪಾಡಲು ಮುಖ್ಯವಾಗಿ ವಿಶೇಷವಾದ ಸೇನಾ ಪಡೆಗಳಿವೆ. ಅದಕ್ಕಾಗಿ ಒಂದು ಸಮುದಾಯವಾಗಲಿ, ಅಥವಾ ಜನಾಂಗವಾಗಲಿ ಸೆಣಸಾಡಬೇಕಾದ ಅನಿವಾರ್ಯತೆ ಇಲ್ಲವಾಗಿದೆ. ಮಾನವನ ನಾಗರಿಕತೆಗಳೊಂದಿಗೆ ಅವನ ಚಟುವಟಿಕೆಗಳ ಸ್ಪೂರ್ತಿಯಂತಿದ್ದ ಕ್ರೀಡೆಗಳು ಬೆಳೆದು ಬಂದವು ಎಂಬುವುದನ್ನು ಇತಿಹಾಸ ಗುರುತಿಸುತ್ತದೆ. ರೋಮ್, ಈಜಿಪ್ಟ್, ಸಿಂಧೂ ಕಣಿವೆಯ ನಾಗರಿಕತೆಗಳನ್ನು ಗಮನಿಸಿದರೆ ಪ್ರಾಚೀನ ಕಾಲದಲ್ಲಿ ಕ್ರೀಡೆಗೆ ಎಂತಹ ಮಹತ್ವದ ಸ್ಥಾನವಿದ್ದಿತು ಎಂದು ತಿಳಿದು ಬರುತ್ತದೆ. ಇಂದು ಜಗತ್ತಿನಾದ್ಯಂತ ಗೌರವಿಸುವ ಒಲಂಪಿಕ್ಸ್ ಆಟಗಳು ಪ್ರಾಚೀನ ನಾಗರಿಕತೆಯ ಕ್ರೀಡೆಗಳ ಮನವರಿಕೆಯಂತೆ ಕಾಣುತ್ತದೆ. ಯಾಕೆಂದರೆ ಆ ಕಾಲದಲ್ಲಿ ಒಲಂಪಿಯಾಡ್ಸನಲ್ಲಿ ವಿಸ್ತಾರವಾದ ಆಟದ ಮೈದಾನ ರಚಿಸಿದ್ದು ಇತಿಹಾಸದ ಮೂಲಕ ತಿಳಿದು ಬರುತ್ತದೆ. ಸಿಂಧೂ ಕಣಿವೆಯ ನಾಗರಿಕತೆಯಲ್ಲಿ ಮಕ್ಕಳಾಟಿಕೆಯ ಎತ್ತಿನ ಗೊಂಬೆ ನಾಯಿ ಇತ್ಯಾದಿ ಹಾಗೇ ಮಣ್ಣಿನ ಮಕ್ಕಳ ಆಟಿಕೆಗಳು ದೊರೆತಿದೆ ಇಂತಹ ಕ್ರೀಡೆಗಳಿಗೆ ಗರಡಿ ಆಟ ಅಥವಾ ಕುಸ್ತಿ ಆಟ ಹೊರತಾದುದಲ್ಲ ಎನ್ನುವ ದೃಷ್ಟಿಯಿಂದ ಇದನ್ನೆಲ್ಲವನ್ನು ನೋಡಲಾಗಿದೆ.
ಹಿಂದಿನ ಕಾಲದಲ್ಲಿ ಗರಡಿಕಲೆಯ ಕುಸ್ತಿಯನ್ನು ಕಲಿಯುವುದು ಪ್ರತಿಯೊಬ್ಬ ಯುವಕನ ಪ್ರತಿ್ಠಯ ವಿಷಯವಾಗಿತ್ತು. ಆದರೆ ಈ ಮನೋಭಾವನೆ ಇಂದು ಬದಲಾವಣೆಗೊಂಡಿದೆ. ಇಂದು ಭಾರತದ ಸ್ಥಿತಿಯಲ್ಲಿ ಹಿಂದಿನ ಗರಡಿಕಲೆಯ ಸ್ಥಾನವನ್ನು ಇಂದು ಕ್ರಿಕೆಟ್ ಆಕ್ರಮಿಸಿಕೊಂಡಿದೆ. ಇವತ್ತಿನ ಯುವಕರಿಗೆ ಸಿಗುತ್ತಿರುವ ಶಿಕ್ಷಣ, ಪಾಶ್ಚಾತ್ಯ ಪ್ರಭಾವಗಳೂ ಸಹ ಗರಡಿ ಕುಸ್ತಿಯು ನಶಿಸಲು ಕಾರಣವಿರಬಹುದೆನಿಸುತ್ತದೆ. ಇಂದು ಭಾರತ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಜನಸಂಖ್ಯೆ ಹೆಚ್ಚಳ ನಿರುದ್ಯೋಗ ಮುಂತಾದ ಸವಾಲುಗಳು ಭಾರತೀಯನ ಮೇಲಿದೆ. ಹಾಗೆ ಅವುಗಳನ್ನು ನಿವಾರಿಸಿಕೊಳ್ಳಲು ಭಾರತೀಯ ಯುವಕರು ಸಾವತ್ರಿಕ ಸ್ಪರ್ದೆಗಳಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ. ಅಂದರೆ ಇಂದಿನ ಭಾರತೀಯ ಯುವಕರಿಗೆ ದೈಹಿಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದಕ್ಕಿಂತ ಮುಖ್ಯವಾಗಿ ಬೌದ್ಧಿಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಅತೀ ಮುಖ್ಯವಾಗಿದೆ, ಹಾಗೇ ಅನಿವಾರ್ಯವಾಗಿದೆ. ಹೀಗಾಗಿ ಇಂದಿನ ಯುವಕರು ದೈಹಿಕ ಶಕ್ತಿಯೇ ಪ್ರಧಾನವಾಗಿರುವ ಕುಸ್ತಿಯ ಕಡೆ ಹೆಚ್ಚು ಒಲವು ತೋರಿಸಲು ಇಷ್ಟಪಡದೇ ಇರುವುದು ಕಾರಣವಾಗಿರಬಹುದು. ಇಂದಿನ ಪೀಳಿಗೆಗೆ ಸಮಯದ ಕೊರತೆ ಕಾಣುತ್ತಿರುವುದು. ಯಾಂತ್ರಿಕ ಬದುಕಿನಲ್ಲಿ ತಮ್ಮನ್ನು ಹಂಚಿಕೊಂಡಿರುವ ಯುವಕರು ನಿರಂತರ ಶ್ರಮ ಹಾಗೂ ಸಮಯ ಬಯಸುವ ಕುಸ್ತಿಯ ಕಡೆ ಸಹಜವಾಗಿಯೇ ನಿರಾಸಕ್ತಿ ತೋರಿಸುತ್ತಾರೆ.
ಸಾಹಿತ್ಯ ಅವಲೋಖನ :
01. ಮ್ಯಾಥ್ಯೂ ಲಿಂಡಮನ (2007) “ಮಹಾಯುದ್ಧದ ಮೊದಲು ಪಾಶ್ಚಿಮಾತ್ಯ ಪ್ರಪಂಚದ ಮೇಲೆ ಕುಸ್ತಿಯ ಹಿಡಿತ”-ಮೊದಲನೆಯ ಮಹಾಯುದ್ಧದ ದಶಕಗಳ ಮೊದಲು, ಪಾಶ್ಚಿಮಾತ್ಯ ಪ್ರಪಂಚವು ಬದಲಾವಣೆಯು ಆಳವಾಗಿ ಮತ್ತು ವೇಗವಾಗಿತ್ತು."ಜನಸಾಮಾನ್ಯರ ಯುಗದ ಉದಯವಾಗಿತ್ತು, "ಸಾಮೂಹಿಕ ಸಮಾಜದ ಹೊರಹೊಮ್ಮುವಿಕೆಯು ವಾಣಿಜ್ಯ ಸಮೂಹ ಬಳಕೆ ಮತ್ತು ಕೈಗಾರಿಕಾ ಸಾಮೂಹಿಕ ಉತ್ಪಾದನೆಯಿಂದ ಸಮಾನಾಂತರವಾಗಿದೆ." ಎರಿಕ್ ಹಾಬ್ಸ್ಬಾಮ್ ಹೇಳಿದ್ದಾರೆ. ಶತಮಾನದ ತಿರುವಿನಲ್ಲಿ ಪಾಶ್ಚಿಮಾತ್ಯ ನಾಗರಿಕತೆಯ "ವೇಗವಾದ, ಉನ್ನತ, ಬಲವಾದ" ಮನೋಭಾವವನ್ನು ಇತಿಹಾಸಕಾರ ಯುಜೆನ್ ವೆಬರ್ ಒತ್ತಿಹೇಳಿದ್ದಾರೆ. ಫ್ರಾನ್ಸ್‍ನ ಮೇಲೆ ಕೇಂದ್ರೀಕರಿಸಿದ ಅವರು ಕ್ರೀಡೆಗಳ ಹೊರಹೊಮ್ಮುವಿಕೆಯನ್ನು ಜನಪ್ರಿಯ ವಿರಾಮ ಚಟುವಟಿಕೆಯಾಗಿ ವಿವರಿಸಿದರು, ವೇಗ, ಶಕ್ತಿ ಮತ್ತು ಹಿಂಸಾಚಾರದ ಮೇಲೆ ಅದರ ಮಹತ್ವದಾಗಿದೆ. ಕುಸ್ತಿಯ ಪ್ರಚಂಡ ಜನಪ್ರಿಯತೆ. ಹೃದಯದ ಮಂಕಾದವರಿಗೆ ಕ್ರೀಡೆಯಲ್ಲ, ಕುಸ್ತಿಯು ಶಕ್ತಿ ಮತ್ತು ಹಿಂಸಾಚಾರವನ್ನು ಸಂಯೋಜಿಸುತ್ತದೆ. ಪುರುಷತ್ವ ಮತ್ತು ರಾಷ್ಟ್ರೀಯತೆಯ ಸಂಕೇತವಾದ ಕುಸ್ತಿಯು ಸಾಮಾಜಿಕ ಮತ್ತು ತಾಂತ್ರಿಕ ಬದಲಾವಣೆಗಳಿಂದ ಉಂಟಾದ ಸಾಂಸ್ಕೃತಿಕ ಆತಂಕಗಳ ಅಭಿವ್ಯಕ್ತಿಯಾಗಿ ಉತ್ತರ ಅಮೆರಿಕಾ,ಯುರೋಪನವರು ಸ್ಪಂದಿಸುವತ್ತಾರೆ.
02. ಕ್ಯಾಟ್ರಿನ್ ಬ್ರೋಂಬರ (2014) “ಬಹುವಿಧದ ಆಧುನಿಕತೆಯಲ್ಲಿ ಕುಸ್ತಿ”- ಸಾಂಪ್ರದಾಯಿಕ ಶೈಲಿಗಳನ್ನು ವಿಸ್-ಎ-ವಿಸ್ ಸ್ಪೋಟ್ರ್ಸ್ ಪಥಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸುವ ಗುರಿಯನ್ನು ಹೊಂದಿದೆ ಮತ್ತು 'ಮಾರ್ಪಡಿಸಿದ' ಕುಸ್ತಿಯ ಕಲ್ಪನೆಯನ್ನು ಬೆಂಬಲಿಸುತ್ತದೆ. ನವ-ಸಾಂಪ್ರದಾಯಿಕ ಅಥವಾ 'ಮಾರ್ಪಡಿಸಿದ' ಕುಸ್ತಿ ಅಭ್ಯಾಸಗಳು ಸ್ವಲ್ಪ ಮಟ್ಟಿನ ಕೇಂದ್ರಿಕರಣವನ್ನು ತಲುಪಿದವೆ. ಅವುಗಳು 'ಸಾಕಷ್ಟು' ಶಿಸ್ತಿನವರಲ್ಲಿ ಇದ್ದಂತೆ ತೋರುತ್ತಿಲ್ಲ ಏಕೆಂದರೆ ಅವರು ತಮ್ಮ ಹಬ್ಬದ ಸಂದರ್ಭದಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿಲ್ಲ. ಇದಲ್ಲದೆ, ಅವರು ಸಂಪ್ರದಾಯ, ಪ್ರಾಚೀನತೆ ಮತ್ತು ದೃಢೀಕರಣದ ಕಲ್ಪನೆಗಳೊಂದಿಗೆ ಮತ್ತು ಅದೇ ಸಮಯದಲ್ಲಿ ಆಧುನಿಕ ಮತ್ತು ಬಹುಶಃ ಅಂತರರಾಷ್ಟ್ರೀಯ ಅಥವಾ ಒಲಿಂಪಿಕ್ ಕ್ರೀಡೆಗಳಾಗುವ ಬಯಕೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಬಹು-ಮಧ್ಯವು ಅವರ ನಿರ್ವಹಣೆಯ ಮೇಲೆ ಪ್ರಭಾವ ಬೀರುವ ಉದ್ವಿಗ್ನತೆಯನ್ನು ಸೃಷ್ಟಿಸುತ್ತದೆ ಮತ್ತು ಪ್ರಭಾವಶಾಲಿ ಮತ್ತು ಅನಿರೀಕ್ಷಿತ ರೀತಿಯಲ್ಲಿ ಬಳಸಲಾಗಿದೆ.
03. ಶರ್ಮಿಲ.ಬಿ (2022) "ಕಾಲಲೀನದೆಡೆಗೆ ಗರಡಿ ಮನೆಗಳ ನಡಿಗೆ: ಪೈಲ್ವಾನರಿಗೆ ಪ್ರೋತ್ಸಾಹ ಇಲ್ಲ.ಹೊಸ ಪೀಳಿಗೆಗೆ ತರಬೇತಿಯೂ ಇಲ್ಲ."- ಕಾಲಲೀನದೆಡೆಗೆ ಗರಡಿ ಮನೆಗಳ ನಡಿಗೆ: ಪೈಲ್ವಾನರಿಗೆ ಪ್ರೋತ್ಸಾಹ ಇಲ್ಲ.ಹೊಸ ಪೀಳಿಗೆಗೆ ತರಬೇತಿಯೂ ಇಲ್ಲ."ಎಂಬ ಅಧ್ಯಯನದಲ್ಲಿ.1940-1950 ರ ಕಾಲಕ್ಕೆ ಗದಗ ತಾಲ್ಲೂಕಿನ ರೋಣ, ಮಲ್ಲಾಪುರ, ಜಕ್ಕಲಿ, ಸವಡಿ ಗ್ರಾಮಗಳಲ್ಲಿ ಹೆಚ್ಚು ಗರಡಿ ಮನೆಗಳಿದ್ದವು ಅಂತಾರೆ ಆ ಕಾಲದ ಕುಸ್ತಿಪಟುಗಳು, ಇವರೆಲ್ಲ ಈಗ ಇಳಿವಯಸ್ಸಿನಲ್ಲಿದ್ದಾರೆ. ಅಷ್ಟೊಂದು ಗರಡಿ ಮನೆಗಳ ಪೈಕಿ ರೋಣ ಪಟ್ಟಣದ ತಳವಾರ್ ಓಣಿಯ ಗರಡಿ ಹೆಸರುವಾಸಿ ಆದರೆ ಒಂದು ಕಾಲದ ವೈಭವಕ್ಕೆ ಮುನ್ನುಡಿ ಬರೆದ ಬಹುತೇಕ ಗರಡಿ ಮನೆಗಳು ಇಂದು ಮೂಕವಾಗಿವೆ. ಯಲ್ಲಪ್ಪ ತಳವಾರ ರೋಣ ರಾಜಾಶ್ರಯ ಪಡೆದಿದ್ದ ಕುಸ್ತಿ ಈಗ ಕೇಳುವವರಿಲ್ಲದ ಸುಸ್ತಾಗಿದ್ದು ಕುಸ್ತಿ ಪೈಲ್ವಾನರನ್ನು ಸಜ್ಜುಗೊಳಿಸುವ ಗರಡಿ ಮನೆಗಳು ನಗರ ಪಟ್ಟಣಗಳಲ್ಲಿ ಜಿಮ್‍ಗಳ ಅಬ್ಬರದಲ್ಲಿ ಕಾಲಲೀನ ದೆಡಿಗೆ ಹೆಜ್ಜೆ ಹಾಕುತ್ತಿವೆ. ರೋಣದ ಗರಡಿ ಮನೆ ಅಂದ್ರೆ ಇಡೀ ರಾಜ್ಯಕ್ಕೆ ಹೆಸರುವಾಸಿ ಪ್ರಸ್ತುತ ಕ್ರಿಕೆಟಿಗೆ ಇರೋ ಬೆಲೆ ಆಗ ಕುಸ್ತಿಗೆ ಇತ್ತು ಆದರೆ ಸರ್ಕಾರವು ಗರಡಿಮೇನೆ, ಅಭಿವೃದ್ಧಿಗಾಗಲ್ಲಿ ಆದ್ಯತೆ ನೀಡುತ್ತಿಲ್ಲ.
ಸಂಶೋಧನಾ ಉದ್ದೇಶಗಳು :
01. ಕುಸ್ತಿಪಟುಗಳ ಸಾಮಾಜಿಕ ಸ್ಥಿತಿಗತಿಯನ್ನು ಅರಿಯುವುದು.
02. ಕುಸ್ತಿಪಟುಗಳ ಆರ್ಥಿಕ ಸ್ಥಿತಿ ಅರಿಯುವುದು.
ಸಂಶೋಧನಾ ವಿಧಾನ :
ಸಂಶೋಧನಾ ವಿನ್ಯಾಸ : ಈ ಸಂಶೋಧನೆಯ ಉದ್ದೇಶದಿಂದ ಪೂರ್ವ ಸಂಶೋಧನ ವಿನ್ಯಾಸವನ್ನು ಬಳಸಲಾಗಿದೆ ಮತ್ತು ಗುಣಾತ್ಮಕ ಸಂಶೋಧನಾ ವಿಧಾನವನ್ನು ಒಳಗೊಂಡಿದೆ.
ಮಾದರಿ ತಂತ್ರ ಮತ್ತು ಮಾದರಿ ಗಾತ್ರದ ಆಯ್ಕೆ : ಈ ಸಂಶೋಧನಾ ಅಧ್ಯಯನದ ಗಾತ್ರ 105 ನಮೂನೆಗಳನ್ನ ಸರಳ ಯಾದೃಚಿಕ ನಮೂನೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ.
ದತ್ತಾಂಶ ಸಂಗ್ರಹಣೆ ವಿಧಾನಗಳು : ಸಂದರ್ಶನ, ಅವಲೋಕನ
ದತ್ತಾಂಶ ವಿಶ್ಲೇಷಣೆ ತಂತ್ರಗಳು : ದತ್ತಾಂಶ ಸಂಪಾದನೆ, ದತ್ತಾಂಶ ಮಾಹಿತಿ ವರ್ಗೀಕರಣ, ದತ್ತಾಂಶ ಮಾಹಿತಿಯ ಕೋಷ್ಟಕ
ಸಂಶೋಧನಾ ಮಿತಿ : ಅಧ್ಯಯನವು ಗದಗ ತಾಲೂಕಿನ ಆಯ್ದ ಗ್ರಾಮಗಳ ಕುಸ್ತಿಪಟುಗಳಿಗೆ ಸೀಮಿತವಾಗಿದೆ. ಅಧ್ಯಯನವು ಕುಸ್ತಿಪಟುಗಳ ಸಾಮಾಜಿಕ – ಆರ್ಥಿಕ, ಮಾಶಾಸನದ ಜಾಗೃತಿಯ ಕುರಿತಾದ ಮಾಹಿತಿಯನ್ನು ಒಳಗೊಂಡಿದೆ.
ಹಿನ್ನಲೆ :
ಪ್ರಾಚೀನ ಭಾರತದ ಕ್ರೀಡಾ ಜೀವನವನ್ನು ಅರ್ಥಮಾಡಿಕೊಳ್ಳಲು ಆ ಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನು ಗಮನಿಸಬಹುದು. ರಾಮಾಯಣದಲ್ಲಿ, ಮಲ್ಲಯದ್ದ, ಮುಷ್ಟಿ ಯುದ್ಧಗಳ ಪ್ರಸ್ತಾಪ ಕಂಡು ಬರುತ್ತದೆ. ಮಹಾಭಾರತದಲ್ಲಿ ದುಶ್ಯಂತನ ಮೃಗಾಯ ವಿಹಾರ, ಭೀಮ-ಜರಾಸಂಧರ ದ್ವಂದ್ವ ಯುದ್ದ, ಭೀಮ-ದುರ್ಯೋಧನರ ಮುಷ್ಟಿಯುದ್ಧ ಮುಂತಾದವುಗಳು ಪ್ರಸ್ತಾಪಗೊಂಡಿದೆ.
ಭಾರತೀಯ ಶ್ರೀಮಂತ ವರ್ಗ ಹೆಚ್ಚಾಗಿ ಗಾಲ್ಫ್, ಕ್ರಿಕೆಟ್‍ನಂತಹ ಅತ್ಯಾಧುನಿಕ ಪಂದ್ಯಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಇನ್ನು ಮಧ್ಯಮ ವರ್ಗದವರಿಗೆ ಬದುಕಿಗಾಗಿ ಸಮಯವನ್ನು ಹೊಂದಿಸುವುದೇ ಒಂದು ಸರ್ಕಸ್ ಆಗಿರುತ್ತದೆ. ಹಾಗೆ ಬಡತನದಲ್ಲಿರುವವರಿಗೆ ಬದುಕೇ ಒಂದು ಸಮಸ್ಯೆಯಾಗಿರುತ್ತದೆ. ದಿನದ ಒಪ್ಪತ್ತು ಊಟ ಸಿಗುವುದೇ ಸಾಧ್ಯವಿಲ್ಲದ ಸಮಯದಲ್ಲಿ ಕುಸ್ತಿ ಪೂರಕವಾಗಿ ಬೇಕಾಗಿರುವ ಪೌಷ್ಟಿಕ ಆಹಾರ ದೊರಕಿಸಿಕೊಡುವವರಾರು? ಪ್ರತಿಯೊಂದು ಚಟುವಟಿಕೆಗಳಲ್ಲೂ ವಿದೇಶಿಯರನ್ನು ಅನುಕರಿಸುವ ಸ್ವಭಾವ ಭಾರತೀಯರಲ್ಲಿ ಕಂಡು ಬರುತ್ತಿದೆ. ಹೀಗೆ ಅನುಕರಿಸುವ ಸ್ವಭಾವವೂ ಸಹ ಕುಸ್ತಿಕಲೆಯು ನಾಶವಾಗಲು ಕಾರಣವಾಗಿರಬಹುದು. ಪೂರ್ವದ ಗರಡಿಮನೆಗಳು ಇಂದು ಜಿಮ್ ಕೇಂದ್ರಗಳಾಗಿ ರೂಪಾಂತರಗೊಳ್ಳುತ್ತಿವೆ. ಅತೀ ಕಡಿಮೆ ವೇಳೆಯಲ್ಲಿ ಕಡಿಮೆ ಶ್ರಮ ಹಾಕಿ ದೇಹದ ಅಂಗಷೌಷ್ಟವವನ್ನು ಇಂತಹ ಜಿಮ್ ಕೇಂದ್ರಗಳ ಮೂಲಕ ಕಾಪಾಡಿಕೊಳ್ಳಬಹುದಂತೆ, ಆದರೆ ಇದಕ್ಕೆ ತಮ್ಮ ದುಡಿತದ ಸ್ವಲ್ಪ ಭಾಗವನ್ನು ತೆಗೆದಿರಿಸಬೇಕಾಗುತ್ತದೆ. ಆದರೆ ಗರಡಿಮನೆಗಳಿಗೆ ತಮ್ಮ ಸಾಧನೆಗಾಗಿ ಯಾವೊಂದು ಸಂಭಾವನೆಯನ್ನು ಕೊಡಬೇಕಾದ ಅವಶ್ಯಕತೆ ಇರಲಿಲ್ಲವೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಕುಸ್ತಿಯು ಇಂದು ಪ್ರೋತ್ಸಾಹದ ಕೊರತೆ ಕಂಡು ಬರುತ್ತಿದೆ. ಈಗ ದಶಕಗಳ `ಹಿಂದಟ ಪೈಲ್ವಾನರಿಗಾಗಿ ಸಾರ್ವಜನಿಕ ಕುಸ್ತಿ ಪಂದ್ಯಗಳನ್ನು ಏರ್ಪಡಿಸಲಾಗುತ್ತಿತ್ತು. ಆ ಮೂಲಕ ಪೈಲ್ವಾನರಿಗೆ ಗೌರವ ಸನ್ಮಾನಗಳನ್ನು ನೀಡಲಾಗುತ್ತಿತ್ತು. ಆದರೆ ಇಂದು ಅಂತಹ ಸ್ಪರ್ಧೆಗಳು ಏರ್ಪಡುವುದು ಅತೀ ಅಪರೂಪವಾಗಿ ಬಿಟ್ಟಿದೆ.
ನಮ್ಮ ಕುಸ್ತಿಯಂತೆ ಅವರು ಕುಸ್ತಿ ಮಾಡುವುದಿಲ್ಲ ಅವರು ಗುದ್ದುಗಳನ್ನು ಕೊಡುತ್ತಾರೆ ಆ ಗುದ್ದುಗಳು ಎಷ್ಟು ಭಯ ಭಯಾನಕವಾಗಿರುತ್ತವೆಂದರೆ ಒಮ್ಮೊಮ್ಮೆ ಕಿವಿ,ಕಣ್ಣು, ಮುಖಗಳನ್ನು ನಾಶ ಪಡಿಸುತ್ತವೆ. ಕೆಲವು ಸಾರಿ ಅವರ ಸ್ನೇಹಿತರು ಪೈಲ್ವಾನರನ್ನು ಅಖಾಡದಿಂದ ಹೊತ್ತು ಹೊರವಯ್ಯುತ್ತಾರೆ. ನ್ಯಾಯ ನಿರ್ಣಯ ಮಾಡಲು ಕುಸ್ತಿ ಆಡಿಸಲು ಅಲ್ಲಿ ನುರಿತ ಸರದಾರರಿರುತ್ತಾರೆ. ಈ ದಿವಸ ಕುಸ್ತಿ ಮತ್ತು ನೃತ್ಯವನ್ನು ಬಿಟ್ಟು ಬೇರೆ ಏನು ಇರುವುದಿಲ್ಲ.
ಕುಸ್ತಿಪಟುಗಳ ಸಮಸ್ಯೆಗಳು :
ಮಾಶಾಸನದ ಬಗ್ಗೆ ಅರಿವಿನ ಪ್ರಾಮುಖ್ಯತೆಯಿಲ್ಲ, ಭಾರತದಲ್ಲಿ ಗ್ರಾಮೀಣ ಪ್ರದೇಶದ ಕುಸ್ತಿಪಟು ಮಾಶಾಸನವನ್ನು ತೆಗೆದುಕೊಳ್ಳಲು ಮತ್ತು ನಿರ್ವಹಿಸುವಲ್ಲಿ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವರು ಸಾಕ್ಷರತೆಯನ್ನು ಪಡೆದಿಲ್ಲ, ಹಾಗಾಗಿ ವಿವಿಧ ಹಣಕಾಸು ಸೇವೆಗಳಿಗೆ ಸಂಬಧಿಸಿದಂತೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಮಾಶಾಸನವನ್ನು ಪಡೆದುಕೊಳ್ಳಬೇಕೆಂಬುದರ ಕುರಿತು ಅರಿವು ಮೂಡಿಸಬೇಕಾಗಿತ್ತದೆ. ನೀಡುವಂತಹ ಮಾಶಾಸನವು ಜೀವನವನ್ನು ನಡೆಸಲು ಸಾಕಾಗಿವುದಿಲ್ಲ. ಗರಡಿಮನೆಗಳಿಗೆ ಸೇವಾ ಸೌಲಭ್ಯಗಳನ್ನು ನೀಡದೇ ಇರುವಿಕೆಯಾಗಿದೆ.
ಸಾಮಾಜಿಕ ಆರ್ಥಿಕ ಸ್ಥಿತಿ ಮತ್ತು ವಸತಿ ಪರಿಸ್ಥಿತಿಗಳು :
ಸಾಮಾಜಿಕ ಆರ್ಥಿಕ ಮತ್ತು ಇತರ ಮೊದಲೇ ವಿಧ ಸಂಪನ್ಮೂಲಗಳಿಗೆ ವ್ಯಕ್ತಿಗಳ ಪ್ರವೇಶದ ಅಳತೆ ಆರೋಗ್ಯದೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದೆ ವೈದಿಕ ನಿಯಂತ್ರಣ ಮತ್ತು ಸ್ವಾಭಿಮಾನದ ಭಾವನೆಗಳು ಸಾಮಾಜಿಕ ಬೆಂಬಲ ಅಥವಾ ಸಕಾರಾತ್ಮಕ ಉತ್ತೇಜಿಸುವ ಪರಿಸರಗಳು ಮತ್ತು ಅನುಭವಗಳಂತಹ ಸ್ಥಿತಿಸ್ಥಾಪಕ ಅಂಶಗಳ ಉಪಸ್ಥಿತಿಯ ಕುರಿತು ತಿಳಿದುಕೊಳ್ಳಬಹುದು. ಆರೋಗ್ಯದ ಪ್ರಮುಖ ಸಾಮಾಜಿಕ ನಿರ್ಧಾರಕವಾಗಿದೆ ಇದು ದೈಹಿಕ ಸುರಕ್ಷತೆ ಸಾಕಷ್ಟು ಪೋಷಣೆ ಮತ್ತು ಸ್ಥಿರ ಉದ್ಯೋಗದಂತಹ ಇತರ ಮೂಲಭೂತ ಅಗತ್ಯಗಳನ್ನು ಪೂರೈಸುವ ಜನರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ದತ್ತಾಂಶ ವಿಶ್ಲೇಷಣೆ
ಮಾಹಿತಿದಾರರ ಶಿಕ್ಷಣದ ಕುರಿತಾದ ಮಾಹಿತಿ :
ಕ್ರ.ಸ |
ಶಿಕ್ಷಣ |
ಮಾಹಿತಿದಾರರ ಸಂಖ್ಯೆ |
ಶೇಕಡಾವಾರು |
1 |
ಅನಕ್ಷರಸ್ಥ |
13 |
12.4 |
2 |
ಪ್ರಾಥಮಿಕ ಶಿಕ್ಷಣ |
47 |
44.8 |
3 |
ಪ್ರೌಢ ಶಿಕ್ಷಣ |
25 |
23.8 |
4 |
ಪದವಿಪೂರ್ವ ಶಿಕ್ಷಣ |
13 |
12.4 |
5 |
ತಾಂತ್ರಿಕ ಶಿಕ್ಷಣ |
4 |
3.8 |
6 |
ಸ್ನಾತಕೋತ್ತರ ಪದವಿ ಶಿಕ್ಷಣ |
3 |
2.9 |
ಒಟ್ಟು |
105 |
100.0 |
|
ಈ ಮೇಲ್ಕಂಡ ಕೋಷ್ಟಕದಲ್ಲಿ ಮಾಹಿತಿದಾರರು ಗರಡಿಮನೆಯ ಕುಸ್ತಿ ಪ್ರತಿಕ್ರಿಯಾದರರ ಶಿಕ್ಷಣವನ್ನು ತೋರಿಸಲಾಗಿದೆ. ಅನಕ್ಷರಸ್ಥರು 13 (12.4%) ರಷ್ಟಿದ್ದರೆ, ಪ್ರಾಥಮಿಕ ಶಿಕ್ಷಣವನ್ನು 47 (44.8%) ರಷ್ಟು ಪೊರೈಸಿದ್ದಾರೆ. ಪ್ರೌಢ ಶಿಕ್ಷಣವನ್ನು 25 (23.8%) ರಷ್ಟು ಪೊರೈಸಿದ್ದು. ಪದವಿಪೂರ್ವ ಶಿಕ್ಷಣ ಪೊರೈಸಿದ್ದರು 13 (12.4%) ರಷ್ಟಿದ್ದಾರೆ, 4 (3.8%) ರಷ್ಟು ತಾಂತ್ರಿಕ ಶಿಕ್ಷಣವನ್ನು ಪೊರೈಸಿದ್ದಾರೆ, ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ 3 (2.9%) ರಷ್ಟಿದ್ದಾರೆ. ಇಲ್ಲಿ ಪ್ರಾಥಮಿಕ ಶಿಕ್ಷಣ ಹೆಚ್ಚು ಮಾಹಿತಿದಾರರು ಹೊಂದಿದ್ದಾರೆ.
ಮಾಹಿತಿದಾರರ ವೈವಾಹಿಕ ಸ್ಥಿತಿ ಕುರಿತಾದ ಮಾಹಿತಿ :
ಕ್ರ.ಸ |
ವೈವಾಹಿಕ ಸ್ಥಿತಿ |
ಮಾಹಿತಿದಾರರ ಸಂಖ್ಯೆ |
ಶೇಕಡಾವಾರು |
1 |
ವಿವಾಹಿತ |
80 |
76.2 |
2 |
ಅವಿವಾಹಿತ |
25 |
23.8 |
3 |
ವಿಚ್ಛೇದನ |
00 |
0.00 |
4 |
ವಿಧುರ |
00 |
0.00 |
ಒಟ್ಟು |
105 |
100.0 |
|
ಈ ಮೇಲ್ಕಾನಿಸಿದ ಕೋಷ್ಟಕದಲ್ಲಿ ಮಾಹಿತಿದಾರರ ವೈವಾಹಿಕ ಸ್ಥಿತಿಯನ್ನು ತೋರಿಸಲಾಗಿದ್ದು, ಇಲ್ಲಿ ವಿವಾಹಿತರು 80 (76.2%) ರಷ್ಟಿದ್ದರೆ, ಅವಿವಾಹಿತರು 25 (23.8%) ರಷ್ಟಿದ್ದಾರೆ. ಅದೇ ರೀತಿಯಾಗಿ ವಿಚ್ಚೇದನ ಹಾಗೂ ವಿಧುರರು 00 (00%) ಶೂನ್ಯದಷ್ಟು ಇದ್ದಾರೆ.
ಮಾಹಿತಿದಾರರ ಕುಟುಂಬದ ವಾರ್ಷಿಕ ಆದಾಯದ ಕುರಿತು ಮಾಹಿತಿ :
ಕ್ರ.ಸ |
ಕುಟುಂಬದ ವಾರ್ಷಿಕ ಆದಾಯ |
ಮಾಹಿತಿದಾರರ ಸಂಖ್ಯೆ |
ಶೇಕಡಾವಾರು |
1 |
1 ರಿಂದ 15000 |
65 |
61.9 |
2 |
15001 ರಿಂದ 30000 |
20 |
19.0 |
3 |
30001 ರಿಂದ 50000 |
15 |
14.3 |
4 |
50001 ರಿಂದ ಲಕ್ಷ |
3 |
2.9 |
5 |
ಒಂದು ಲಕ್ಷಕ್ಕಿಂತ ಹೆಚ್ಚು |
2 |
1.9 |
ಈ ಮೇಲಿನ ಕೋಷ್ಟದನ್ವಯ ಗರಡಿಮನೆಯ ಕುಸ್ತಿಪಟು ಪ್ರತಿಕ್ರಿಯಾದರರು ಕುಟುಂಬದ ವಾರ್ಷಿಕ ಆದಾಯವನ್ನು 1 ರಿಂದ 15000 ರೂಪಾಯಿಗಳು 65 (61.9) ರಷ್ಟು, 15001 ರಿಂದ 30000 ರೂಪಾಯಿಯನ್ನು 20 (19.0) ರಷ್ಟುದ್ದಾರೆ. 30001 ರಿಂದ 50000 ರೂಪಾಯಿಗಳನ್ನು 15 (14.3) ರಷ್ಟು ಕುಟುಂಬದ ವಾರ್ಷಿಕ ಆದಾಯದವನ್ನು ಹೊಂದಿದ್ದಾರೆ. ಹಾಗೇ 50001 ರಿಂದ ಲಕ್ಷ ರೂಪಾಯಿಯನ್ನು 3 (2.9) ರಷ್ಟು ಹೊಂದಿದ್ದಾರೆ. ಹಾಗೇ ವಾರ್ಷಿಕ ಆದಾಯವನ್ನು ಒಂದು ಲಕ್ಷಕ್ಕಿಂತ ಹೆಚ್ಚು ಹೊಂದಿರುವಂತಹ ಕುಟುಂಬಗಳು 2 (1.9) ರಷ್ಟಿದ್ದಾರೆ. ಇಲ್ಲಿ 1 ರಿಂದ 15000 ಕುಟುಂಬದ ವಾರ್ಷಿಕ ಆದಾಯವನ್ನು ಹೆಚ್ಚು ಹೊಂದಿರುವುದಾಗಿದೆ.
ಮಾಹಿತಿದಾರರ ಧರ್ಮದ ಕುರಿತು ಮಾಹಿತಿ
ಕ್ರ.ಸ |
ಧರ್ಮ |
ಮಾಹಿತಿದಾರರ ಸಂಖ್ಯೆ |
ಶೇಕಡಾವಾರು |
1 |
ಹಿಂದೂ |
89 |
84.8 |
2 |
ಮುಸ್ಲಿಂ |
16 |
15.2 |
3 |
ಕ್ರೈಸ್ತ |
00 |
00.0 |
4 |
ಇತರೆ |
00 |
00.0 |
ಒಟ್ಟು |
105 |
100.0 |
|
ಈ ಮೇಲಿನ ಕೋಷ್ಟಕದನ್ವಯ, ಪ್ರಸ್ತುತ ಅಧ್ಯಯನದ ಒಟ್ಟಾರೆ ಮಾಹಿತಿದಾರರಲ್ಲಿ ಅಂದರೆ 105 ಪ್ರತಿಕ್ರಿಯಾದರಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಇತರೆ ಧರ್ಮದವರನ್ನು ಗುರುತಿಸಿದ್ದು, ಕ್ರಮವಾಗಿ ಹಿಂದೂ ಧವರ್iದವರು 89 (84.8%) ಇದ್ದಾರೆ, ಮುಸ್ಲಿಂ ಧರ್ಮದವರು ಕೇವಲ 16 (15.2%) ಇದ್ದಾರೆ.
ಮಾಹಿತಿದಾರರ ಉದ್ಯೋಗದ ಕುರಿತಾದ ಮಾಹಿತಿ:
ಕ್ರ.ಸ |
ಉದ್ಯೋಗ |
ಮಾಹಿತಿದಾರರ ಸಂಖ್ಯೆ |
ಶೇಕಡಾವಾರು |
1 |
ವ್ಯವಸಾಯ |
70 |
66.7 |
2 |
ಖಾಸಗಿ |
3 |
2.9 |
3 |
ಸರ್ಕಾರಿ |
0 |
00.0 |
4 |
ವಿದ್ಯಾರ್ಥಿ |
7 |
6.7 |
5 |
ನಿರುದ್ಯೋಗಿ |
6 |
5.7 |
6 |
ಇತರೆ |
19 |
18.1 |
ಒಟ್ಟು |
105 |
100.0 |
|
ಈ ಮೇಲ್ಕಂಡ ಕೋಷ್ಟಕದಲ್ಲಿ ಗರಡಿಮನೆಯ ಕುಸ್ತಿ ಪ್ರತಿಕ್ರಿಯಾದರು ಕಾರ್ಯ ನಿರ್ವಹಿಸುವಂತಹ ಉದ್ಯೋಗದ ವಿವಿರವನ್ನು ತೋರಿಸಲಾಗಿದೆ. ಅದರಂತೆ ಕ್ರಮವಾಗಿ ವ್ಯವಸಾಯದಲ್ಲಿ 70 (66.7%) ರಷ್ಟಿದ್ದರೆ, ಖಾಸಗಿಯಲ್ಲಿ 3 (2.9%) ರಷ್ಟಿದ್ದಾರೆ, ಸರ್ಕಾರಿ ಉದ್ಯೋಗದಲ್ಲಿ (00%) ಶೂನ್ಯವಾಗಿದ್ದಾರೆ. ಅದೇ ರೀತಿಯಾಗಿ ವಿದ್ಯಾರ್ಥಿಗಳು 7 (6.7%) ರಷ್ಟಿದ್ದು, ನಿರುದ್ಯೋಗಿಯರು 6 (5.7%) ರಷ್ಟಿದ್ದಾರೆ, ಹಾಗೂ ಇತರೆಯವರು 19 (18.1%) ರಷ್ಟಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯವಾದರೆ, ಹೆಚ್ಚು ಕೆಲಸವನ್ನು ನಿರ್ವಹಿಸುವಂತಹ ವ್ಯವಸಾಯ ಉದ್ಯೋಗಸ್ಥರನ್ನು ನೋಡಬಹುದು.
ಮಾಹಿತಿದಾರರ ಮಾಶಾಸನ ಪಡೆಯುವ ಕುರಿತು ಮಾಹಿತಿ
ಮಾಶಾಸನ |
ಮಾಹಿತಿದಾರರ ಸಂಖ್ಯೆ |
ಶೇಕಡಾವಾರು |
ಹೌದು |
21 |
20.0 |
ಇಲ್ಲ |
84 |
80.0 |
ಒಟ್ಟು |
105 |
100.0 |
ಈ ಮೇಲಿನ ಕೋಷ್ಟದನ್ವಯ ಮಾಹಿತಿದಾರರ ಮಾಶಾಸನ ಪಡೆಯುದರ ಬಗ್ಗೆ ತಿಳಿಯುವಂತಹ ಗುರಿಯನ್ನು ಹೊಂದಿದ್ದು, 21 (20.0%) ರಷ್ಟು ಹೌದು ಎಂದು ಪ್ರತಿಕ್ರಿಯೆಸಿದ್ದಾರೆ. ಹಾಗೆಯೇ ಇಲ್ಲವೆಂದು 84 (80.0%) ರಷ್ಟು ಪ್ರತಿಕ್ರಿಯೆಸಿದ್ದನ್ನು ಕಾಣಬಹುದಾಗಿದೆ.
ಫಲಿತಾಂಶಗಳು :
ಸಲಹೆಗಳು : ಕುಸ್ತಿಪಟುಗಳ ಜೀವನ ನಿರ್ವಹಣೆಗಾಗಿ ಇನ್ನೊಂದು ವೃತ್ತಿಯನ್ನು ಅವಲಂಸಬೇಕಾದ ಅನಿವಾರ್ಯತೆಯನ್ನು ಕಾಣಬಹುದಾಗಿದೆ. ಗರಡಿಕಲೆ ಕುಸ್ತಿಪಟುಗಳಿಗೆ ಬೇರೆ ವೃತ್ತಿ ಕೇವಲ ಪ್ರವೃತ್ತಿಯಾಗಿದೆ. ಯೋಜನೆಯು 60 ವಯಸ್ಸಿನವರೆಗೆ ಮಾತ್ರ ಸಿಮೀತವಾಗಿರದೇ, ಎಲ್ಲಾ ವಿವಿಧ ಕುಸ್ತಿಪಟುಗಳಿಗೆ ಗುರುತಿಸಿ ಮಾಶಾಸನವನ್ನು ನೀಡಬೇಕಾಗಿದೆ. ಅದೇ ರೀತಿಯಾಗಿ ನೀಡುತ್ತಿರುವಂತಹ ಮಾಶಾಸನವು ಜೀವನವನ್ನು ನಡೆಸಲು ಸಾಕಾಗುತ್ತಿದೆಯೇ / ಸಾಕಾಗುದಿಲ್ಲವೆಂದು ಗಮನಿಸಬೇಕಾಗಿದೆ.
ಉಪಸಂಹಾರ :
ಕುಸ್ತಿಯನ್ನು ಇಂದು ಸರ್ಕಾರವೇನೋ ರಾಷ್ಟ್ರೀಯ ಕ್ರೀಡೆ ಎಂದು ಹೇಳಿ ಗೌರವಿಸಿದ. ಆದರೆ ರಾಷ್ಟ್ರೀಯ ಕ್ರೀಡೆಗೆ ಕೊಡಬೇಕಾದಷ್ಟು ಪ್ರಾಧಾನ್ಯತೆಯನ್ನು ಗರಡಿಕಲೆಗೆ ಕೊಡದೆ, ಸರ್ಕಾರ ನಿರ್ಲಕ್ಷಿಸುತ್ತಿದೆ ಎಂಬುದನ್ನು ಇಲ್ಲಿ ಮನನ ಮಾಡಿಕೊಳ್ಳಬೇಕಾಗಿದೆ. ಇಂದು ಹಣ ತರುವ ಕ್ರಿಕೆಟ್‍ಗೆ ಕೊಟ್ಟಷ್ಟು ಪ್ರಚಾರ, ಪ್ರಾಶಸ್ತ್ರ ಹಣ ತರದ ಗರಡಿಕಲೆಯಾದ ಕುಸ್ತಿಗೆ ಕೊಡಲು ಇಷ್ಟ ಪಡುವುದಿಲ್ಲವೇನೋ. ಪ್ರತಿಯೊಂದನ್ನು ವ್ಯಾಪಾರಿ ಮನೋಭಾವದಿಂದಲೇ ನೋಡುವ ಇಂದಿನ ಆಧುನಿಕ ಯುಗದಲ್ಲಿ ಪ್ರಾಚೀನತೆಯ ದ್ಯೋತಕವಾದ ಕುಸ್ತಿ ಬದುಕುವುದಾದರೂ ಹೇಗೆ ಸಾಧ್ಯ. ನಶಿಸುತ್ತಿರುವ ಈ ಕಲೆಯನ್ನು ಇಂದು ಕಾಪಾಡಿಕೊಳ್ಳಬೇಕಾಗಿರುವುದು ಭಾರತೀಯರೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗೆ ಇದಕ್ಕೆ ಪೂರಕವಾದ ಯೋಜನೆಗಳನ್ನು ಹಾಕಿಕೊಂಡು ಅದು ಅನು್ಠನಗೊಳ್ಳುವಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯವಾಗಿದೆ.
ಸಾಮಾಜಿಕ ಬದಲಾವಣೆಯೊಂದಿಗೆ ಮನುಷ್ಯನ ಸಂಸ್ಕøತಿ, ಮನೋಭಾವನೆ, ಅಭಿರುಚಿಗಳಲ್ಲಾ ಬದಲಾಗಲೇಬೇಕಾಗುತ್ತದೆ. ಹೀಗಾಗಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳಿಗಾಗಿ ಇಂದು ಕುಸ್ತಿಯು ಮೂಲೆ ಗುಂಪಾಗುತ್ತಿದೆ. ಅದಕ್ಕೆ ಸರಿಯಾದ ಪ್ರೋತ್ಸಾಹ ಆರ್ಥಿಕ ಸಹಾಯ ಹಾಗೂ ಆಧುನಿಕ ಬದುಕಿಗೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾವಣೆಗಳನ್ನು ತಂದರೆ, ಇಂದಿಗೂ ಗರಡಿಯ ಕುಸ್ತಿ ತನ್ನ ತನವನ್ನು ಮೆರೆಯಲು ಸಾಧ್ಯವಾಗುತ್ತದೆ.
ಕೃತಜ್ಞತೆಗಳು : ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಮುಖ್ಯಸ್ಥರು, ಸಮಾಜಕಾರ್ಯ ವಿಭಾಗದ ಉಪನ್ಯಾಸಕರು ಮತ್ತು ಮಾರ್ಗದರ್ಶಕರಾದ ಡಾ. ಲಿಂಗರಾಜ ನಿಡುವಣಿ, ಕುಸ್ತಿಯ ಸಂಘ ಸಂಸ್ಥೆಗಳು ಹಾಗೂ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಿಗೆ
ಆಧಾರ ಗ್ರಂಥಗಳು