Tumbe Group of International Journals

Full Text


A Study on Job Satisfaction of Gadag District Woman Police

Chandrashekhar S K1, Dr. Lingaraj Niduvani2

1Research Student, Department of Social Work, Karnataka State Rural Development and Panchayat Raj University Gadag, cshekar40884@gmail.com 

2Lecturer and Research Guide, Department of Social Work, Karnataka State Rural Development and Panchayat Raj University Gadag, lingarajvn707@gmail.com

Abstract

This research paper explores the job satisfaction level of women police officers in Gadag district with an aim to understand the factors influencing their professional satisfaction. Job satisfaction is critical to employee well-being and productivity, and in the context of law enforcement, it plays an important role in shaping the effectiveness of outsourcing services. The study uses a mixed-methods approach, combining surveys and interviews to comprehensively explore the experiences of women in the workforce and factors contributing to their job satisfaction.

Keywords: Women Police, Gadag District, Job Satisfaction.


ಗದಗ ಜಿಲ್ಲಾ ಮಹಿಳಾ ಪೊಲೀಸರ ಉದ್ಯೋಗ ತೃಪ್ತಿಯ ಕುರಿತು ಒಂದು ಅಧ್ಯಯನ

ಚಂದ್ರಶೇಖರ ಎಸ್.ಕೆ, ಸಂಶೋಧನಾ ವಿಧ್ಯಾರ್ಥಿ, ಸಮಾಜಕಾರ್ಯ ವಿಭಾಗ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ.        

  ಡಾ. ಲಿಂಗರಾಜ ನಿಡುವಣಿ, ಉಪನ್ಯಾಸಕರು ಮತ್ತು ಮಾರ್ಗದರ್ಶಕರು, ಸಮಾಜಕಾರ್ಯ ವಿಭಾಗ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ.

ಅಮೂರ್ತ

ಈ ಸಂಶೋಧನಾ ಲೇಖನವು ಗದಗ ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿಗಳ ಉದ್ಯೋಗ ತೃಪ್ತಿ ಮಟ್ಟವನ್ನು ಪರಿಶೋಧಿಸುತ್ತದೆ, ಅವರ ವೃತ್ತಿಪರ ತೃಪ್ತಿಯ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ. ಉದ್ಯೋಗಿಗಳ ಯೋಗಕ್ಷೇಮ ಮತ್ತು ಉತ್ಪಾದಕತೆಗೆ ಉದ್ಯೋಗ ತೃಪ್ತಿಯು ನಿರ್ಣಾಯಕವಾಗಿದೆ ಮತ್ತು ಕಾನೂನು ಜಾರಿ ಸಂದರ್ಭದಲ್ಲಿ, ಪೊಲೀಸಿಂಗ್ ಸೇವೆಗಳ ಪರಿಣಾಮಕಾರಿತ್ವವನ್ನು ರೂಪಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಧ್ಯಯನವು ಮಿಶ್ರ-ವಿಧಾನಗಳ ವಿಧಾನವನ್ನು ಬಳಸುತ್ತದೆ, ಸಮೀಕ್ಷೆಗಳು ಮತ್ತು ಸಂದರ್ಶನಗಳನ್ನು ಒಟ್ಟುಗೂಡಿಸಿ ಪೊಲೀಸ್ ಪಡೆಗಳಲ್ಲಿನ ಮಹಿಳೆಯರ ಅನುಭವಗಳನ್ನು ಮತ್ತು ಅವರ ಉದ್ಯೋಗ ತೃಪ್ತಿಗೆ ಕಾರಣವಾಗುವ ಅಂಶಗಳನ್ನು ಸಮಗ್ರವಾಗಿ ಅನ್ವೇಷಿಸುತ್ತದೆ.

ಪ್ರಮುಖ ಪದಗಳು : ಮಹಿಳಾ ಪೊಲೀಸ್, ಗದಗ ಜಿಲ್ಲೆ, ಉದ್ಯೋಗ ತೃಪ್ತಿ.

ಪರಿಚಯ

ವೇದ ಪುರಾಣಗಳ ಕಾಲದಿಂದಲೂ ನಮ್ಮ ನಾಡಿನಲ್ಲಿ ಮಹಿಳೆಗೆ ಒಂದು ವಿಶೇಷವಾದ ಪೂಜ್ಯನೀಯ ಗೌರವವನ್ನು ನೀಡುತ್ತಿದ್ದುದ್ದನ್ನು ಸಹ ನಾವು ಕಾಣಬಹುದಾಗಿದೆ. “ಯತ್ರನಾರ್ಯೇಸ್ಥೊ ಪೂಜ್ಯಂತೇ ರಮಂತೇ ತತ್ರದೇವತಾಃ” ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತೇವೆಯೋ, ಪೂಜಿಸುತ್ತೇವೆಯೋ ಅಲ್ಲಿ ದೇವರು ಇರುತ್ತಾನೆ ಎಂಬುದು ಈ ವಾಖ್ಯದ ತಾತ್ಪರ್ಯವಾಗಿದೆ. ಇಂತಹ ನಾಡಿನಲ್ಲಿ ಇಂದು ಸಮಾಜ ಬದಲಾಗುತ್ತಾ ಮಹಿಳೆಯ ಸ್ಥಿತಿಗತಿಗಳು ಸಹ ವಿಭಿನ್ನರೀತಿಯಲ್ಲಿ ಬದಲಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಬಲಾತ್ಕಾರಗಳು, ಹೆಣ್ಣಿನ ಶೋಷಣೆ, ಬಾಲಾಪರಾದ, ವರದಕ್ಷಿಣೆ, ವೇಶ್ಯಾವಾಟಿಕೆ, ಮಕ್ಕಳ ಸಾಗಾಣಿಕೆ ಮತ್ತು ದೇವದಾಸಿ ಪದ್ದತಿಯಂತಹ ಸೂಕ್ಷ್ಮಾತೀತ ವಿಷಯಗಳು ಸಮಾಜದಲ್ಲಿದೊಡ್ಡ ಪೀಡುಗುಗಳಾಗಿವೆ. ಇಂತಹ ಪ್ರಕರಣಗಳನ್ನು ನಿಭಾಯಿಸಲು ಮತ್ತು ಸಾಮಾಜಿಕವಾಗಿ ನ್ಯಾಯ ಒದಗಿಸಲು ಗಮನಿಸಿದಾಗ ನಮಗೆ ತಿಳಿಯುವುದೇನೆಂದರೆ ಹೆಣ್ಣಿನ ರಕ್ಷಣೆ. ಆದ್ದರಿಂದ ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆಯನ್ನು ಒದಗಿಸಲು ವಿಶೇಷ ಮಹಿಳಾ ಪೊಲೀಸರ ಅವಶ್ಯಕತೆ ಇದೆ. ಈ ಕಾರಣದಿಂದಾಗಿ “ಸಾಮಾಜಿಕ ದೃಷ್ಟಿಯಿಂದ, ಮಾಧ್ಯಮಗಳ ಪ್ರೇರಣೆಯಿಂದ ಉಂಟಾದ ಬದಲಾವಣೆಗಳೆಲ್ಲವನ್ನು ಗಮನಿಸಿದ ಸರ್ಕಾರವು ಮಹಿಳಾ ಪೊಲೀಸರ ಕಾರ್ಯಕ್ಷಮತೆ, ನಿರ್ವಹಣೆಯ ಅವಶ್ಯಕತೆಯನ್ನು ನಾವು ಕಾಣುತ್ತೇವೆ”.

ಮಹಿಳಾ ಪೊಲೀಸ್ ವ್ಯವಸ್ಥೆ ‘ಸ್ತ್ರೀವಾದ’ದ ತಳಹದಿಯ ಮೇಲೆ ರೂಪುಗೊಂಡಿರುತ್ತಾದರೂ ಅದರ ಆಶಯ ಮತ್ತು ಧೋರಣೆಗಳು ಸಮಾಜಮುಖಿಯಾದಂತಹದ್ದು ಪುರುಷ ವಿರೋಧಿ ನೆಲೆಯದ್ದಲ್ಲ, ಬದಲಾಗಿ ವ್ಯವಸ್ಥೆಯೊಳಗಿನ ಪುರುಷ ನಿರ್ಮಿತ ನೀತಿ ನಿಲುವುಗಳು ದ್ವಂದ್ವಾತ್ಮಕ ನೆಲೆಯ ವಿರುದ್ಧದ್ದು. ಇಲ್ಲೂ ಕೂಡ ಪುರುಷನಿಗಿಂತ ಹೆಣ್ಣೇ ಮೊದಲು ಎಂಬರ್ಥವಲ್ಲ. ಆದರೆ ಆತನ ನಿಕೃಷ್ಟ ಮನಸ್ಥಿತಿಯಿಂದ ಅನುಭವಿಸುತ್ತಿರುವ ದೌರ್ಜನ್ಯಗಳ ಮೇಲಿನ ಅಟ್ಟಹಾಸವಷ್ಟೇ. ಇಲ್ಲಿ ಸಮಾನತೆ ಕಂಡರೂ ರಕ್ಷಣಾತ್ಮಕ ಹೋರಾಟದ ಹೆಜ್ಜೆಗಳಿವೆ. “ಮಹಿಳೆ ಸಮಾಜದಿಂದ, ಸಂಸ್ಕøತಿಯಿಂದ ಅನುಭವಿಸುವಂತಹ ಪ್ರತಿನಿತ್ಯದ ಹಿಂಸೆಗಳಿಂದ ಭವಮುಕ್ತಳಾಗಲು ಪ್ರಜಾಸತ್ತಾತ್ಮಕ ಆದರ್ಶದಡಿಯಲ್ಲಿ ಪೊಲೀಸ್ ಅಧಿಕಾರ ಪಡೆಯುವವಳಷ್ಟೇ”. ಹಾಗಾಗಿ ಈ ಅಧ್ಯಯನದ ಹುಡುಕಾಟ ‘ಫೆಮಿನಿಸಮ್’ನ ಸಿದ್ಧಾಂತದ ಚಿಂತನೆಯಿಂದ ಕೂಡಿತ್ತಾದರೂ ಸಹ ಸಮಸಮಾಜದ ಆದರ್ಶಮುಖಿ ಆರೋಗ್ಯವಂತ ಚಿಂತನೆಯದ್ದು ಎಂಬುದನ್ನು ಒತ್ತಿ ಹೇಳಬೇಕಾಗುತ್ತದೆ.

ಸಾಹಿತ್ಯ ವಿಮರ್ಷೆ

1.         ರೈ ಅರ್ಚನಾ ಮತ್ತು ಗುಪ್ತಾ ಕಲ್ಪನಾ (2023), “ಪೊಲೀಸ್‍ನಲ್ಲಿ ಕೆಲಸ ಮಾಡುವ ಮಹಿಳೆಯರ ಉದೋಗ ತೃಪ್ತಿಯ ಸ್ಥಿತಿ“ ಎಂಬ ಶೀರ್ಷಿಕೆಯ ಅಧ್ಯಯನವು ಪೊಲೀಸ್ ಸೇವೆಯಲ್ಲಿ ಮಹಿಳೆಯರ ಉದೋಗ ತೃಪ್ತಿಯನ್ನು ಮೌಲ್ಯಮಾಪನ ಮಾಡುವ ಗುರಿಯನ್ನು ಹೊಂದಿದೆ. ಈ ಸಂಶೋಧನೆಯು  ವಾರನಾಸಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 399 ಮಹಿಳಾ ಪೊಲೀಸರನ್ನು, ಅಮರ್‍ಸಿಂಗ್ ಮತ್ತು ಟಿ ಆರ್ ಶರ್ಮಾ ಅವರ ಉದ್ಯೋಗ ತೃಪ್ತಿ ಪ್ರಮಾಣ ಮತ್ತು ಉದ್ದೇಶಪೂರ್ವಕ ಮಾದರಿ ವಿಧಾನವನ್ನು ಬಳಸಿಕೊಂಡು ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಪ್ರತಿಕ್ರಿಯಿಸಿದವರಲ್ಲಿ ಬಹುಪಾಲು ಅಂದರೆ, 36.7% ಪ್ರತಿಶತ ಜನರು ಸರಾಸರಿ ತೃಪ್ತಿಯನ್ನು ಹೊಂದಿದ್ದಾರೆ, 20.7% ಪ್ರತಿಶತ ಜನರು ಸರಾಸರಿಗಿಂತ ಹೆಚ್ಚಿನ ತೃಪ್ತಿಯನ್ನು ಹೊಂದಿದ್ದಾರೆ ಹಾಗೂ 21.7% ಪ್ರತಿಶತ ಜನರು ತಮ್ಮ ಕೆಲಸದ ಬಗ್ಗೆ ಅತೃಪ್ತರಾಗಿದ್ದಾರೆಂದು ಸಂಶೋಧನಾ ಫಲಿತಾಂಶದಿಂದ ತಿಳಿಯಬಹುದಾಗಿದೆ.

2.         ಗಾಯಿತ್ರಿ ಜೆ ಮತ್ತು ಸಿ ಬುವಾನಾ ಎಸ್ತರ್ (2019), “ಭಾರತೀಯ ಸಮಾಜದಲ್ಲಿ ಮಹಿಳೆಯರ ವಿರುದ್ದದ ಅಪರಾಧ ಮತ್ತು ಪೋಲಿಸರ ಪ್ರಮುಖ ಪಾತ್ರ” ಎಂಬ ಶೀರ್ಷಿಕೆಯಡಿಯ ಸಂಶೋಧನೆಯಲ್ಲಿ, ವಿವಿಧ ಅವಧಿಯ ಮಹಿಳೆಯರ ಸ್ಥಿತಿ ಅಪರಾಧಗಳ ವಿರುದ್ಧ ಮಹಿಳೆಯರನ್ನು ರಕ್ಷಿಸುವ ಪೋಲಿಸರ ಜವಬ್ದಾರಿ ಮಹಿಳೆಯರಿಗೆ ಕಾನುನೂ ನಿಬಂಧನೆಗಳು,ಸಮಾಜದಲ್ಲಿ ಮಹಿಳೆಯರ ಸ್ಥನಮಾನವನ್ನು ಸುಧಾರಿಸಲು ಕೆಲವು ಕ್ರಮಗಳನ್ನು ವಿವರಣಾತ್ಮಕ ರೂಪದಲ್ಲಿ ವಿವರಿಸಲಾಗಿದೆ. ಸಂಶೋಧಕರು ತಮ್ಮ ಈ ಸಂಶೋಧನೆಯನ್ನು ತಮಿಳುನಾಡಿನ ಕೊಯಮತೂರು ಜಿಲ್ಲೆಯಲ್ಲಿ ಕೈಗೊಂಡಿರುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ಸಾಮನ್ಯವಾಗಿ ತಿಳಿದಿರುವ ಕೆಲವು ಅಪರಾಧಗಳ ಪಟ್ಟಿಯ ಬಗ್ಗೆ ಒಂದು ಅಂಶವನ್ನು ನೀಡುವ ಉದ್ದೇಶವನ್ನು ಈ ಸಂಶೋಧನೆಯನ್ನು ಹೊಂದಿದೆ.

3.         ಪಾಣೆಗ್ರಾಹಿ ಕುಮಾರಿ ಅನಿತಾ (2018), “ಭಾರತದ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೋಲಿಸರ ಉದೋಗ್ಯ ತೃಪ್ತಿಯ ಕುರಿತಾದ ಅಧ್ಯಯನ”. ಸಂಶೋಧಕರು ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ 126 ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಅಧ್ಯಯನದಲ್ಲಿ ಒಳಪಡಿಸಿರುತ್ತಾರೆ. ಪ್ರಸ್ತುತ ಈ ಸಂಶೋಧನೆಯಲ್ಲಿ ಸಂಶೋಧಕರು ಮಹಿಳಾ ಪೊಲೀಸ್ ಪಡೆಯಿಂದ ಉದೋಗ್ಯದ ತೃಪ್ತಿ ಕುರಿತು ಸೂಕ್ತ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಸಂದರ್ಶನಾ ಅನುಸೂಚಿಯನ್ನು ಬಳಸಿರುತ್ತಾರೆ. ಪ್ರಶ್ನಾವಳಿ ಮೂಲಕ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಯಲ್ಲಿ ಸಂಬಂಧಪಟ್ಟ ದಾಖಲೆಗಳು, ವರದಿಗಳು, ಬ್ರೌಚರ್‍ಗಳ ಮೂಲಕ ದ್ವೀತಿಯ ಮೂಲ ಮಾಹಿತಿಯನ್ನು ಸಂಗ್ರಹಿಸಿರುತ್ತಾರೆ. ಸಂಗ್ರಹಿಸಿದಂತಹ ದಂತ್ತಾಂಶಗಳ ಪ್ರಕಾರ, 126 ಪ್ರತಿಕ್ರಿಂದಾರರಲ್ಲಿ 42.86% ಪ್ರತಿಶತ ಜನರು ತೃಪ್ತರಾಗಿದ್ದಾರೆಂದು, 15.08% ಪ್ರತಿಶತ ಜನರು ಹೆಚ್ಚು ತೃಪ್ತಿ ಹೊಂದಿದ್ದಾರೆಂದು, 21.43% ಪ್ರತಿಶತ ಜನರು ಮಧ್ಯಮ ತೃಪ್ತಿಯನ್ನು ಹೊಂದಿದ್ದಾರೆಂದು, 11.9% ಪ್ರತಿಶತ ಜನರು ಅತೃಪ್ತಿ ಹೊಂದಿದ್ದಾರೆಂದು ಮತ್ತು ಉಳಿದ 8.73% ಪ್ರತಿಶತ ಜನರು ಅತ್ಯಂತ ಅತೃಪ್ತಿಯನ್ನು ಹೊಂದಿರುವವರಾಗಿದ್ದಾರೆಂದು ಸಂಶೋಧಕರು ತಮ್ಮ ಈ ಅಧ್ಯಯನದಿಂದ ಕಂಡುಕೊಂಡ ಫಲಿತಾಂಶವಾಗಿರುತ್ತದೆ.

4.         ಒಂಕಾರಿ ದಾನೇಶ್ವರಿ ಮತ್ತು ಇಟಗಿ ಸುನಂದಾ (2018), “ಮಹಿಳಾ ಪೊಲೀಸರ ಔಧ್ಯೋಗಿಕ ಒತ್ತಡದ ಕುರಿತು ಅಧ್ಯಯನ” ಎಂಬ ಶೀರ್ಷಿಕೆಯ ಸಂಶೋಧನೆಯು ಧಾರವಾಡ ತಾಲ್ಲೂಕಿನ ಮಹಿಳಾ ಪೊಲೀಸರ ಕರ್ತವ್ಯ ಒತ್ತಡವನ್ನು ತಿಳಿಯುವ ಉದ್ದೇಶವನ್ನು ಹೊಂದಿ, ಸರಳ ಯಾದೃಚ್ಚಿಕ ವಿಧಾನದ ಮೂಲಕ 66 ಮಾದರಿ ಪ್ರತಿಕ್ರಿಯಾದಾರರನ್ನು ಆಯ್ಕೆ ಮಾಡಿಕೊಂಡು, ಪ್ರಶ್ನಾವಳಿ ಸಂದರ್ಶನಾ ಅನುಸೂಚಿ ಮೂಲಕ ದತ್ತಾಂಶವನ್ನು ಸಂಗ್ರಹಿಸಿರುತ್ತಾರೆ. ಅದರಂತೆ 60% ಪ್ರತಿಶತ ಮಧ್ಯಮ ಒತ್ತಡವನ್ನು, 36.67% ಪ್ರತಿಶತ ಜನರು ಹೆಚ್ಚಿನ ಒತ್ತಡವನ್ನು ಹಾಗೂ 3.33% ರಷ್ಟು ಜನರು ಕಡಿಮೆ ಒತ್ತಡವನ್ನು ಹೊಂದಿದ್ದಾರೆಂದು ಈ ಸಂಶೋಧನಾ ಫಲಿತಾಂಶದಿಂದ ಬಹಿರಂಗವಾಗಿರುತ್ತದೆ.

ಸಂಶೋಧನೆಯ ಉದ್ದೇಶಗಳು :

         ಮಹಿಳಾ ಪೊಲೀಸರ ಔದ್ಯೋಗಿಕ ಸಾಮಾನ್ಯ ತೃಪ್ತಿಯ ಅಂಶಗಳನ್ನು ತಿಳಿಯುವ ಉದ್ದೇಶ,

         ಮಹಿಳಾ ಪೊಲೀಸರ ಕರ್ತವ್ಯ ನಿರ್ವಹಣೆಯಲ್ಲಿನ ತೃಪ್ತಿಯ ಅಂಶಗಳನ್ನು ತಿಳಿಯುವ ಉದ್ದೇಶ,

         ಮಹಿಳಾ ಪೊಲೀಸರ ಔದ್ಯೋಗಿಕ ಆರ್ಥಿಕ ಪ್ರಯೋಜನಗಳ ಕಡೆಗಿನ ತೃಪ್ತಿಯ ಅಂಶಗಳನ್ನು ತಿಳಿಯುವ ಉದ್ದೇಶ,

         ಬಂದಂತಹ ಸಂಶೋಧನಾ ಫಲಿತಾಂಶಗಳಿಂದ ಸೂಕ್ತ ಸಲಹೆಗಳನ್ನು ನೀಡುವ ಉದ್ದೇಶ. 

ಸಂಶೋಧನಾ ಮಾದರಿ  :

ಈ ಸಂಶೋಧನಾ ಅಧ್ಯಯನಯಕ್ಕೆ ಯಾದೃಚ್ಛಿಕವಲ್ಲದ ಮಾದರಿಯ ಮೂಲಕ 64 ಪ್ರತಿಕ್ರಿಯಾದಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಸಂಶೋಧನಾ ವಿಧಾನ :   ಪ್ರಸ್ತುತ ಅಧ್ಯಯನಕ್ಕೆ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಈ ಅಧ್ಯಯನಕ್ಕೆ ಸಂದರ್ಶನ ವಿಧಾನ, ಅವಲೋಕನ, ಗುಂಪು ಚರ್ಚೆ, ಕ್ಷೇತ್ರಕಾರ್ಯ ಮುಂತಾದ ವಿಧಾನಗಳನ್ನು ಬಳಸಲಾಗಿದೆ.

ದತ್ತಾಂಶ ಸಂಗ್ರಹಣೆಯ ಉಪಕರಣಗಳು

ಸಂದರ್ಶನ ಅನುಸೂಚಿ :

ಸಂಶೋಧಕರು ಪೂರ್ವ ಪರೀಕ್ಷೆಯ ನಂತರದಲ್ಲಿ ತಯಾರಿಸಿದ ಮುಚ್ಚಿದ ಸಂದರ್ಶನ ಅನುಸೂಚಿಯನ್ನು ಬಳಸಿ ಮಾಹಿತಿದಾರರಿಗೆ ಅಧ್ಯಯನದ ಬಗ್ಗೆ ತಿಳಿಸಿ ಮಾಹಿತಿ ಗೌಪ್ಯವಾಗಿರುವುದೆಂದು ತಿಳಿಸಿ ಅವರ ಒಪ್ಪಿಗೆ  ಪಡೆದು ಪೂರ್ವ ಪರೀಕ್ಷೆ ಮಾಡಿದವರನ್ನು ಬಿಟ್ಟು ಇತರೆ 64 ಮಾಹಿತಿದಾರರನ್ನು ಸಂದರ್ಶನ ಮಾಡಲಾಗಿದೆ. ಪ್ರತಿಯೊಬ್ಬ ಮಾಹಿತಿದಾರರಿಂದ 30 ನಿಮಿಷಗಳ ಕಾಲ ಸಂದರ್ಶನ ಅನುಸೂಚಿಯನ್ನು ಚರ್ಚಿಸಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಸಂಖ್ಯಾ ಶಾಸ್ತ್ರೀಯ ಪರಿಕರಗಳು :

ಟೇಬಲ್ ಗಳನ್ನು ಅಥವಾ ಪಟ್ಟಿಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಪ್ರಾಥಮಿಕ ದತ್ತಾಂಶದ ಸಹಾಯದಿಂದ ತಯಾರಿಸಲಾಗಿರುತ್ತದೆ.  ಪ್ರಾಥಮಿಕ ದತ್ತಾಂಶವನ್ನು ವಿಶ್ಲೇಷಿಸಲು ಶೇಕಡಾವಾರು ವಿಧಾನವನ್ನು  ಅನ್ವಯಿಸಲಾಗಿದೆ.

ಪೂರ್ವ ಪರೀಕ್ಷೆ ಅಥವಾ ಪೂರ್ವಭಾವಿ ಅಧ್ಯಯನ :

ಅಧ್ಯಯನ ಕೈಗೊಳ್ಳುವ ಮೊದಲು ಇದೇನಕ್ಕೆ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರಕ್ಕೆ ಭೇಟಿ ಮಾಡಿ ನಮೂನೆಯ 10% ರಷ್ಟು ಮಾಹಿತಿದಾರರಿಂದ ಮಾಹಿತಿ ಸಂಗ್ರಹಿಸಲಾಯಿತು. ಪೂರ್ವಭಾವಿ ಅಧ್ಯಯನದಲ್ಲಿ ಕಂಡು ಬಂದ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಕ್ಷೇತ್ರಕಾರ್ಯ ಅಧ್ಯಯನವನ್ನು ಕೈಗೊಂಡು ಮಾಹಿತಿ ಸಂಗ್ರಹಿಸಿಕೊಂಡು ವಿಶ್ಲೇಷಿಸಲಾಗಿದೆ

ಮಹಿಳಾ ಪೊಲೀಸ್ ಇತಿಹಾಸ:

ಭಾರತದಲ್ಲಿ ಪೊಲೀಸ್ ಕ್ಷೇತ್ರದಲ್ಲಿ ಮಹಿಳೆಯರ ಐತಿಹಾಸಿಕ ದೃಷ್ಟಿಕೋನವು ಕ್ರಮೇಣ ಪ್ರಗತಿ ಮತ್ತು ಕಾಲಾನಂತರದಲ್ಲಿ ಪರಿವರ್ತನೆಯ ಕಥೆಯಾಗಿದೆ.  ಭಾರತದಲ್ಲಿನ ಮಹಿಳಾ ಪೊಲೀಸ್ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲುಗಳು ಮತ್ತು ಬೆಳವಣಿಗೆಗಳ ಅವಲೋಕನ ಇಲ್ಲಿದೆ:

1.  ಆರಂಭಿಕ ಉಪಕ್ರಮಗಳು (19 ನೇ ಶತಮಾನದ ಉತ್ತರಾರ್ಧ) :

    - ವಸಾಹತುಶಾಹಿ ಅವಧಿಯಲ್ಲಿ 19 ನೇ ಶತಮಾನದ ಉತ್ತರಾರ್ಧದಲ್ಲಿ ಭಾರತದಲ್ಲಿ ಪೊಲೀಸಿಂಗ್‍ನಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಕಂಡುಹಿಡಿಯಬಹುದು.

    - 1913 ರಲ್ಲಿ, ಭಾರತವು ತನ್ನ ಮೊದಲ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಂಡಿತು, ಕಾರ್ನೆಲಿಯಾ ಸೊರಾಬ್ಜಿ, ಅವರು ಬಂಗಾಳದ ಕೋರ್ಟ್ ಆಫ್ ವಾರ್ಡ್‍ನಲ್ಲಿ ಪೆ್ರಬೇಷನರಿ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡರು.

 2. ಸ್ವಾತಂತ್ರ್ಯೋತ್ತರ ಯುಗ (1947) :

    - 1947 ರಲ್ಲಿ ಸ್ವಾತಂತ್ರ್ಯ ಗಳಿಸಿದ ನಂತರ, ಭಾರತವು ತನ್ನ ಪೊಲೀಸ್ ಪಡೆಗಳನ್ನು ವಿಸ್ತರಿಸಲು ಪ್ರಾರಂಭಿಸಿತು ಮತ್ತು ಮಹಿಳೆಯರು ಕ್ರಮೇಣ ಏಕೀಕರಣಗೊಂಡರು. 1948 ರಲ್ಲಿ, ದೆಹಲಿ ಪೊಲೀಸ್ ತನ್ನ ಮೊದಲ ಬ್ಯಾಚ್ ಮಹಿಳಾ ಕಾನ್‍ಸ್ಟೆಬಲ್‍ಗಳನ್ನು ನೇಮಿಸಿಕೊಂಡಿತು.

 3. 1960-1970 :

    - 1960 ಮತ್ತು 1970 ರ ದಶಕವು ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಅಗತ್ಯತೆಯ ಹೆಚ್ಚುತ್ತಿರುವ ಮನ್ನಣೆಗೆ ಸಾಕ್ಷಿಯಾಗಿದೆ. ಭಾರತದ ಹಲವಾರು ರಾಜ್ಯಗಳು ಮಹಿಳಾ ಕಾನ್ಸ್‍ಟೇಬಲ್‍ಗಳು ಮತ್ತು ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದವು.

 4. ಕಾನೂನು ಚೌಕಟ್ಟು ಮತ್ತು ಸಮಾನ ಅವಕಾಶಗಳು :

    - ಭಾರತೀಯ ಪೊಲೀಸ್ ಕಾಯಿದೆಗೆ 1975 ರ ತಿದ್ದುಪಡಿಯು ಮಹಿಳೆಯರನ್ನು ಪೊಲೀಸ್ ಅಧಿಕಾರಿಯಾಗಿ ನೇಮಿಸಲು ಅವಕಾಶ ಮಾಡಿಕೊಟ್ಟಿತು. ಕಾನೂನು ಸುಧಾರಣೆಗಳು ಮತ್ತು ಸಮಾನ ಅವಕಾಶ ಕ್ರಮಗಳು ಮಹಿಳೆಯರಿಗೆ ಪೊಲೀಸಿಂಗ್‍ನಲ್ಲಿ ಸಹಾಯ ಮಾಡಿತು.

 5.  ವೈವಿಧ್ಯಮಯ ಪಾತ್ರಗಳು (20 ನೇ ಶತಮಾನದ ಕೊನೆಯಲ್ಲಿ) :

    - ಭಾರತದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ತನಿಖೆ, ಟ್ರಾಫಿಕ್ ನಿರ್ವಹಣೆ ಮತ್ತು ಸಮುದಾಯ ಪೊಲೀಸಿಂಗ್ ಸೇರಿದಂತೆ ವೈವಿಧ್ಯಮಯ ಪಾತ್ರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.

 6.  ಏರುತ್ತಿರುವ ಸಂಖ್ಯೆಗಳು ಮತ್ತು ಸವಾಲುಗಳು :

    - ಭಾರತದಲ್ಲಿ ಪೊಲೀಸ್‍ನಲ್ಲಿ ಮಹಿಳೆಯರ ಸಂಖ್ಯೆಯು ವರ್ಷಗಳಲ್ಲಿ ಹೆಚ್ಚಾಯಿತು, ಆದರೂ ಅವರು ಇನ್ನೂ ಅನೇಕ ಪೊಲೀಸ್ ಪಡೆಗಳಲ್ಲಿ ಅಲ್ಪ ಸಂಖ್ಯಾತರಾಗಿದ್ದಾರೆ. ಲಿಂಗ ಪಕ್ಷಪಾತ, ಸ್ಟೀರಿಯೊಟೈಪಿಂಗ್ ಮತ್ತು ಕಿರುಕುಳದಂತಹ ಸವಾಲುಗಳು ಮುಂದುವರಿದವು.

 7.  ಮೀಸಲಾದ ಮಹಿಳಾ ಪೊಲೀಸ್ ಠಾಣೆಗಳು :

    - ಭಾರತದಲ್ಲಿನ ಕೆಲವು ರಾಜ್ಯಗಳು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸುರಕ್ಷಿತ ವರದಿ ಮಾಡುವ ವಾತಾವರಣವನ್ನು ಒದಗಿಸಲು ಮೀಸಲಾದ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿವೆ.

8. ನಾಯಕತ್ವ ಸ್ಥಾನಗಳಿಗೆ ಬಡ್ತಿ :

    - ಕಾಲಾನಂತರದಲ್ಲಿ, ಭಾರತದಲ್ಲಿನ ಕೆಲವು ಮಹಿಳಾ ಪೊಲೀಸ್ ಅಧಿಕಾರಿಗಳು ತಮ್ಮ ರಾಜ್ಯ ಪೊಲೀಸ್ ಪಡೆಗಳಲ್ಲಿ ಹಿರಿಯ ನಾಯಕತ್ವದ ಸ್ಥಾನಗಳನ್ನು ತಲುಪಿದ್ದಾರೆ.

 9. ವಿಶೇಷ ಘಟಕಗಳು :

    - ಮಹಿಳೆಯರು ಆಂಟಿ-ಟೆರರ್ ಸ್ಕ್ವಾಡ್, ವಿಶೇಷ ಶಸ್ತ್ರಾಸ್ತ್ರಗಳು ಮತ್ತು ತಂತ್ರಗಳ ತಂಡಗಳು ಮತ್ತು ಸೈಬರ್ ಕ್ರೈಮ್ ಘಟಕಗಳಂತಹ ವಿಶೇಷ ಘಟಕಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

 10. ಸಮುದಾಯ ಪೊಲೀಸಿಂಗ್ ಮತ್ತು ಸಬಲೀಕರಣ :

     - ಮಹಿಳಾ ಪೊಲೀಸ್ ಅಧಿಕಾರಿಗಳು ಸಮುದಾಯ ಪೊಲೀಸ್ ಉಪಕ್ರಮಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ, ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ನಂಬಿಕೆ ಮತ್ತು ಸೇತುವೆಯ ಅಂತರವನ್ನು ನಿರ್ಮಿಸಲು ಕೆಲಸ ಮಾಡಿದ್ದಾರೆ.

ಕೋಷ್ಟಕ: 4.7 ಪೊಲೀಸ್ ಇಲಾಖೆಗೆ ಹೇಗೆ ಬಂದಿದ್ದೀರಿ

ಕ್ರ.ಸಂ

ಪ್ರತಿಕ್ರಿಯೆ

ಮಾಹಿತಿದಾರರ ಸಂಖ್ಯೆ

ಶೇಕಡವಾರು

1

ವೈಯಕ್ಕಿಕ ಆಸಕ್ತಿ

49

76.6

2

ಇತರರಿಂದ ಆಕರ್ಷಿತರಾಗಿ

1

1.6

3

ನಿಮ್ಮ ಕುಟುಂಬ ಸದಸ್ಯೆರ ಬಲವಂತದಿಂದ

1

1.6

4

ಬೇರೆ ಆಯ್ಕೆ ಇರಲಿಲ್ಲ

5

7.8

5

ಇತರೆ

8

12.5

 

ಒಟ್ಟು

64

100.0

 

ಈ ಮೇಲಿನ ಕೋಷ್ಟಕದಲ್ಲಿ ಮಹಿಳಾ ಮಾಹಿತಿದಾರರು ತಾವು ಪೊಲೀಸ್ ಇಲಾಖೆಗೆ ಬಂದ ಹಾದಿಯ ಮೇಲೆ ಬೆಳಕು ಚೆಲ್ಲಿರುತ್ತಾರೆ. ಅದರಂತೆ ಇಲ್ಲಿ ಮಹಿಳಾ ಪ್ರತಿಕ್ರಿಯದಾರರಲ್ಲಿ ಇದರಿಂದ ಆಕರ್ಷಿತರಾಗಿ ಇಲಾಖೆಯನ್ನು ಆಯ್ಕೆ ಮಾಡಿಕೊಂಡವರು 1.6% ರಷ್ಟಿದ್ದರೆ ತಮ್ಮ ಕೌಟುಂಬಿಕ ಸಮಸ್ಯೆಯಿಂದ ಇಲ್ಲವೇ ಕುಟುಂಬ ಸದಸ್ಯರ ಬಲವಂತದಿಂದ ಬಂದವರು 1.6% ರಷ್ಟಿದ್ದಾರೆ, ಯಾವುದೇ ಬೇರೆ ಆಯ್ಕೆ ಇರಲಿಲ್ಲವೆಂದು 7.8% ಮಹಿಳೆಯರು ಇಲಾಖೆ ಮಾಡಿಕೊಂಡರೆ,ಹೆಚ್ಚಿನ ಪ್ರಮಾಣದಲ್ಲಿ ತಮ್ಮ ವೈಯಕ್ತಿಕ ಆಸಕ್ತಿಯಿಂದ ಅಂದರೆ 76.6% ಮಹಿಳೆಯರು ಈ ಇಲಾಖೆಯನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿರುತ್ತಾರೆ.

ಕೋಷ್ಟಕ: 4.8 ಹುದ್ದೆ

ಕ್ರ.ಸಂ

ಮಾಹಿತಿದಾರರ ಹುದ್ದೆ

ಮಾಹಿತಿದಾರರ ಸಂಖ್ಯೆ

ಶೇಕಡವಾರು

1

ಸಬ್ ಇನ್ಸಪೆಕ್ಟರ್

1

1.6

2

ಪೊಲೀಸ್ ಕಾನ್ಸ್‍ಟೇಬಲ್

19

29.7

3

ಹೆಡ್ ಕಾನ್ಸ್‍ಟೇಬಲ್

39

60.9

4

ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್

4

6.3

5

ಪೊಲೀಸ್ ಸಬ್ ಇನ್ಸಪೆಕ್ಟರ್

1

1.6

 

ಒಟ್ಟು

64

100.0

 

ಈ ಮೇಲ್ಕಂಡ ಕೋಷ್ಟಕದಲ್ಲಿ ಮಹಿಳಾ ಪ್ರತಿಕ್ರಿಯದಾರರು ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ತಾವು ಕಾರ್ಯನಿರ್ವಹಿಸುವಂತಹ ಹುದ್ದೆಯ ವಿವರವನ್ನು ತಿಳಿಸಿರುತ್ತಾರೆ. ಅದರಂತೆ ಕ್ರಮವಾಗಿ ಸಬ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿ 1.6 ಪಸೆರ್ಂಟ್ ಪ್ರಶ್ನೆ ಇದ್ದರೆ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಲ್ಲಿ 29.7% ರಷ್ಟಿದ್ದಾರೆ, ಮಹಿಳಾ ಹೆಡ್ ಕಾನ್ಸ್ಟೇಬಲ್ ಹುದ್ದೆಯಲ್ಲಿ 60.9% ರಷ್ಟಿರುವರು, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿ 6.3% ರಷ್ಟು ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿ 1.6% ರಷ್ಟಿದ್ದಾರೆ. ಎಲ್ಲಿ ಹೆಚ್ಚು ಜವಾಬ್ದಾರಿ ಮತ್ತು ಕೆಲಸವನ್ನು ಚಾಣಾಕ್ಷತನದಿಂದ ನಿಭಾಯಿಸುವಂತಹ ಮಹಿಳಾ ಹೆಡ್ ಕಾನ್ಸ್ಟೇಬಲ್ ಹುದ್ದೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರಿರುವುದನ್ನು ನಾವು ಗಮನಿಸಬಹುದಾಗಿದೆ.

ಕರ್ತವ್ಯ ನಿರ್ವಹಣೆಯಲ್ಲಿನ ತೃಪ್ತಿಯ ಅಂಶಗಳು

ಕೋಷ್ಟಕ: 4.14 ನಾನು ಮಾಡುವ ಕೆಲಸಕ್ಕೆ ಸರಿಯಾದ ಮನ್ನಣೆ ಸಿಗುತ್ತಿದೆ

ಕ್ರ.ಸಂ

ಪ್ರತಿಕ್ರಿಯೆ

ಮಾಹಿತಿದಾರರ ಸಂಖ್ಯೆ

ಶೇಕಡವಾರು

1

ಬಲವಾಗಿ ಒಪ್ಪುವುದಿಲ್ಲ

1

1.6

2

ಒಪ್ಪುವುದಿಲ್ಲ

3

4.7

3

ತಟಸ್ಥ

9

14.1

4

ಒಪ್ಪುತ್ತೇನೆ

48

75.0

5

ಬಲವಾಗಿ ಒಪ್ಪುತ್ತೇನೆ

3

4.7

 

ಒಟ್ಟು

64

100.0

 

 

ಈ ಮೇಲಿರುವ ಕೋಷ್ಟಕದಲ್ಲಿ ಮಹಿಳಾ ಮಾಹಿತಿದಾರರು ತಾವು ನಿರ್ವಹಿಸುವ ಕೆಲಸಕ್ಕೆ ಉತ್ತಮ ಮನ್ನಣೆ ಸಿಗುತ್ತಿದೆ ಎಂಬ ಪ್ರಶ್ನೆಗೆ ಬಲವಾಗಿ ಒಪ್ಪುತ್ತೇನೆಂದು 4.7% ರಷ್ಟು ಒಪ್ಪುವುದಿಲ್ಲ ವೆಂದು 4.7% ರಷ್ಟು ತಟಸ್ಥ ವೆಂದು 14.1% ರಷ್ಟು ಒಪ್ಪುತ್ತೇನೆಂದು 75% ರಷ್ಟು ಹಾಗೂ ಬಲವಾಗಿ ಒಪ್ಪುವುದಿಲ್ಲವೆಂದು 1.6% ರಷ್ಡು ಮಹಿಳಾ ಮಾಹಿತಿದಾರರು ತಮ್ಮ ಆಯ್ಕೆಗಳನ್ನು ತಿಳಿಸಿರುತ್ತಾರೆ.

ಕೋಷ್ಟಕ: 4.15 ವಿಶೇಷ ಕೆಲಸವನ್ನು ಮಾಡಿ, ನನ್ನ ಸಾಮಥ್ರ್ಯವನ್ನು ಸಾಬೀತುಪಡಿಸಲು ನನಗೆ ಅವಕಾಶ ನೀಡಲಾಗಿದೆ

ಕ್ರ.ಸಂ

ಪ್ರತಿಕ್ರಿಯೆ

ಮಾಹಿತಿದಾರರ ಸಂಖ್ಯೆ

ಶೇಕಡವಾರು

1

ಬಲವಾಗಿ ಒಪ್ಪುವುದಿಲ್ಲ

1

1.6

2

ಒಪ್ಪುವುದಿಲ್ಲ

1

1.6

3

ತಟಸ್ಥ

7

10.9

4

ಒಪ್ಪುತ್ತೇನೆ

49

76.6

5

ಬಲವಾಗಿ ಒಪ್ಪುತ್ತೇನೆ

6

9.4

 

ಒಟ್ಟು

64

100.0

 

 

ಈ ಮೇಲಿನ ಕೋಷ್ಟಕದಲ್ಲಿ ಮಹಿಳಾ ಮಾಹಿತಿದಾರರು ತಾವು ಕಾರ್ಯನಿರ್ವಹಿಸುವಂತಹ ಇಲಾಖೆಯಿಂದ ತಮ್ಮ ಸಾಮಥ್ರ್ಯವನ್ನು ತೋರ್ಪಡಿಸಲು ಅವಕಾಶವನ್ನು ನೀಡಲಾಗಿದೆ ಎಂಬ ವಿಷಯಕ್ಕೆ ಒಪ್ಪುತ್ತೇನೆಂದು 76.6% ರಷ್ಟು ಒಪ್ಪುವುದಿಲ್ಲ ಎಂದು 1.6% ರಷ್ಟು ಬಲವಾಗಿ ಒಪ್ಪುತ್ತೇನೆಂದು. 9.4% ರಷ್ಟು ಬಲವಾಗಿ ಒಪ್ಪುವುದಿಲ್ಲ ವೆಂದು 1.6% ರಷ್ಟು ಹಾಗೂ 10.9% ರಷ್ಟು ಮಾಹಿತಿದಾರರು ತಟಸ್ಥರಾಗಿದ್ದಾರೆ.

ಆರ್ಥಿಕ ಪ್ರಯೋಜನಗಳ ಕಡೆಗಿನ ತೃಪ್ತಿ

ಕೋಷ್ಟಕ: 4.21 ಇಲಾಖೆ ಒದಗಿಸುತ್ತಿರುವ ಸಂಬಳ ಮತ್ತು ಭತ್ಯೆಗಳಿಂದ ನಾನು ತೃಪ್ತಳಾಗಿದ್ದೇನೆ

ಕ್ರ.ಸಂ

ಪ್ರತಿಕ್ರಿಯೆ

ಮಾಹಿತಿದಾರರ ಸಂಖ್ಯೆ

ಶೇಕಡವಾರು

1

ಒಪ್ಪುವುದಿಲ್ಲ

4

6.3

2

ತಟಸ್ಥ

8

12.5

3

ಒಪ್ಪುತ್ತೇನೆ

44

68.8

4

ಬಲವಾಗಿ ಒಪ್ಪುತ್ತೇನೆ

8

12.5

 

ಒಟ್ಟು

64

100.0

 

ಈ ಮೇಲಿನ ಕೋಷ್ಟಕದಲ್ಲಿ ತಿಳಿಸಿದ ಹಾಗೆ, ಮಹಿಳಾ ಪೊಲೀಸರಿಗೆ ಇಲಾಖೆ ಒದಗಿಸುವಂತಹ ವೇತನ ಮತ್ತು ಬತ್ತಿಗಳಿಂದ ಅವರ ಆರ್ಥಿಕ ಪರಿಸ್ಥಿತಿ ಕಡೆಗಿನ ತೃಪ್ತಿಯನ್ನು ಅಳೆಯುವ ಗುರಿಯನ್ನು ಹೊಂದಿದ್ದು ಅದರ ಅನುಸಾರ ಇಲಾಖೆ ಒದಗಿಸುತ್ತಿರುವ ಸಂಬಳ ಮತ್ತು ಭತ್ಯೆಗಳಿಂದ ತೃಪ್ತಿ ಇರುವುದಾಗಿ 68.8% ರಷ್ಟು, ತೃಪ್ತಿ ಇಲ್ಲವೆಂದು 6.3% ರಷ್ಟು, ತಟಸ್ಥ ವೆಂದು 12.5% ರಷ್ಟು ಮತ್ತು ಸಂಪೂರ್ಣ ತೃಪ್ತಿಯಿದೆ ಎಂದು 12.5% ರಷ್ಟು ಮಹಿಳಾ ಮಾಹಿತಿದಾರರು ತಿಳಿಸಿರುತ್ತಾರೆ. ಇಲ್ಲಿ ಮುಖ್ಯವಾಗಿ ಅವರ ಕೆಲಸದಲ್ಲಿನ ಅನುಭವ ಮತ್ತು ಹುದ್ದೆ ಅನುಸಾರ ಸಂಬಳ ಮತ್ತು ಭತ್ಯೆಗಳ ವಿಷಯದಲ್ಲಿ ವ್ಯತ್ಯಾಸವನ್ನು ಕಾಣುವುದರ ಕಾರಣ ತೃಪ್ತಿ ಮಟ್ಟದಲ್ಲಿಯೂ ಸಹ ಅದರ ಪ್ರಭಾವವನ್ನು ನಾವು ಕಾಣಬಹುದಾಗಿದೆ. 

ಕೋಷ್ಟಕ: 4.23 ನನಗೆ ಸಿಗುವ ಸಂಬಳವು ಸಂತೃಪ್ತಿ ಜೀವನವನ್ನು ಖಚಿತಪಡಿಸುತ್ತದೆ

ಕ್ರ.ಸಂ

ಪ್ರತಿಕ್ರಿಯೆ

ಮಾಹಿತಿದಾರರ ಸಂಖ್ಯೆ

ಶೇಕಡವಾರು

1

ಬಲವಾಗಿ ಒಪ್ಪುವುದಿಲ್ಲ

1

1.6

2

ಒಪ್ಪುವುದಿಲ್ಲ

4

6.3

3

ತಟಸ್ಥ

5

7.8

4

ಒಪ್ಪುತ್ತೇನೆ

48

75.0

5

ಬಲವಾಗಿ ಒಪ್ಪುತ್ತೇನೆ

6

9.4

 

ಒಟ್ಟು

64

100.0

 

 

ಮೇಲಿನ ಕೋಷ್ಟಕದಲ್ಲಿನ ಅಂಕಿ ಅಂಶಗಳ ಪ್ರಕಾರ, ಮಹಿಳಾ ಪೊಲೀಸ್ ಮಾಹಿತಿದಾರರು ಅವರಿಗೆ ಸಿಗುವಂತಹ ವೇತನದಿಂದ ಜೀವನದಲ್ಲಿ ಸಂತೃಪ್ತಿಯನ್ನು ನಿಶ್ಚಲಮಟ್ಟಿಗೆ ಹೊಂದಿದ್ದಾರೆ ಎಂಬುದನ್ನು ತಿಳಿಯಲಾಗಿರುತ್ತದೆ. ಅದರ ಅನುಸಾರ ಸಂತೃಪ್ತಿಯನ್ನು ಹೊಂದಿರುವುದಾಗಿ 75% ರಷ್ಟು, ಹೊಂದಿಲ್ಲವೆಂದು 6.3% ರಷ್ಟು, ತಟಸ್ಥ ವೆಂದು 7.8% ರಷ್ಟು, ಬಲವಾಗಿ ಒಪ್ಪುತ್ತೇನೆಂದು 9.4% ರಷ್ಟು ಹಾಗೂ ಸಂಪೂರ್ಣವಾಗಿ ಒಪ್ಪುವುದಿಲ್ಲವೆಂದು 1.6% ರಷ್ಟು ಮಹಿಳಾ ಪೊಲೀಸರು ಮಾಹಿತಿಯನ್ನು ನೀಡಿರುತ್ತಾರೆ. ಇಲ್ಲಿ ಕೇವಲ ಸಂಬಳದಿಂದ ಸಂತೃಪ್ತಿ ಜೀವನವನ್ನು ಖಚಿತಪಡಿಸಲು ಸಾಧ್ಯವಿಲ್ಲ ಏಕೆಂದರೆ ಕೆಲಸದ ಸ್ಥಳದಲ್ಲಿ ಮತ್ತು ಮನೆಯಲ್ಲಿನ ಕೆಲವು ಒತ್ತಡಗಳನ್ನು ಸಂಬಳದಿಂದ ಸರಿಪಡಿಸಲು ಸಾಧ್ಯವಿಲ್ಲವೆಂಬುದು ಮಹಿಳಾ ಪೊಲೀಸರ ಅಭಿಪ್ರಾಯವಾಗಿರುತ್ತದೆ.     

ಫಲಿತಾಂಶಗಳು :

 • ಪೊಲೀಸ್ ಇಲಾಖೆಗೆ ಶೇಕಡ 76.6 ರಷ್ಟು ಮಹಿಳೆಯರು ತಮ್ಮ ವೈಯಕ್ತಿಕ ಆಸಕ್ತಿಯಿಂದ ಬಂದಿರುವ ಕಾರಣದಿಂದ ಒಟ್ಟಾರೆಯಾಗಿ ಅವರ ಕೆಲಸದಲ್ಲಿ ಶೇಕಡ 93.8 ರಷ್ಟು ಮಹಿಳಾ ಪೊಲೀಸರು ತೃಪ್ತಿಯನ್ನು ಹೊಂದಿರುತ್ತಾರೆ.
 • ಈ ಸಂಶೋಧನೆಯೆಲ್ಲಿ ಹೆಚ್ಚಿನ ಪ್ರತಿಸ್ಪಂದಕರು ಅಂದರೆ ಶೇಕಡ 54.7 ರಷ್ಟು ಮಹಿಳೆಯರು ಪದವಿ ಪೂರ್ವ ಶಿಕ್ಷಣವನ್ನು ಕಲಿತವರಾಗಿದ್ದು, ಅವರು ಮಹಿಳಾ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುತ್ತಾರೆ.
 • ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ  ಅವರ ಸಾಮಥ್ರ್ಯವನ್ನು ಸಾಬೀತುಪಡಿಸಲು ಅವಕಾಶ ಮತ್ತು ಮಾಡುವಂತಹ ಕೆಲಸಕ್ಕೆ ಸರಿಯಾದ ಮನ್ನಣೆ ಸಿಗುತ್ತಿದೆ ಎಂದು ಶೇಕಡ 76 ರಷ್ಟು ಮಹಿಳಾ ಪೊಲೀಸರು ಒಪ್ಪಿಕೊಂಡಿರುತ್ತಾರೆ.
 • ಪೆÇೀಲಿಸ್ ಇಲಾಖೆ ಒದಗಿಸುತ್ತಿರುವಂತಹ ಸಂಬಳ ಮತ್ತು ಭತ್ಯೆಗಳಿಂದ ಸಂತೃಪ್ತಿ ಜೀವನವನ್ನು ಸಾಗಿಸುವುದಾಗಿ ಶೇಕಡ 84 ರಷ್ಟು ಮಹಿಳಾ ಪ್ರತಿಕ್ರಿಯೆದಾರರು ಒಪ್ಪಿಕೊಂಡಿರುತ್ತಾರೆ.

ಸಲಹೆಗಳು :

 • ಕಾನ್ಸ್ಟೇಬಲ್‍ಗಳ ಶಿಕ್ಷಣ ಸಾಮಾನ್ಯವಾಗಿ ಪದವಿ ಪೂರ್ವ ಶಿಕ್ಷಣವಾಗಿರುತ್ತದೆ ಕಾನ್ಸ್ಟೇಬಲ್ ಹುದ್ದೆಯಲ್ಲಿ ಕೆಲಸ ಮಾಡುತ್ತಾ ಇನ್ನಿತರ ಪದವಿಗಳನ್ನು ಮಾಡಿಕೊಂಡು ಉನ್ನತ ಸ್ಥಾನಕ್ಕೆ ಹೋಗುವಂತೆ ಸಲಹೆ ನೀಡಬಹುದಾಗಿದೆ.
 • ಸಾಮಾನ್ಯವಾಗಿ ಪೊಲೀಸ್ ಇಲಾಖೆಗೆ ಮಹಿಳೆಯರು ಬರುವುದು ಅಲ್ಪ ಪ್ರಮಾಣದಲ್ಲಿ ಆದ್ದರಿಂದ ಮಹಿಳೆಯರಿಗೆ ನೇರ ನೇಮಕಾತಿಯಾದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುತ್ತಾರೆ.
 • ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಗುರುತರ ಅವಕಾಶಗಳನ್ನು ಒದಗಿಸುವುದರ ಮೂಲಕ ಅವರನ್ನು ಉನ್ನತ ಸ್ಥಾನಗಳಲ್ಲಿ ಗುರ್ತಿಸಿಕೊಳ್ಳುವಲ್ಲಿ ಸಹಕರಿಸಿದಂತಾಗುತ್ತದೆ.
 • ಮಹಿಳಾ ಪೊಲೀಸರಿಗೆ ಅವರ ಕುಟುಂಬ ನಿರ್ವಹಣೆಗಾಗಿ ಹೆಚ್ಚುವರಿ ಭತ್ಯೆ ಮತ್ತು ವಿಶೇಷ ಸಂಬಳವನ್ನು ನೀಡಬೇಕು ಹಾಗೂ ಸಮಯಕ್ಕೆ ಮೀರಿದ ಕೆಲಸಗಳಿಗೆ ಪೆÇ್ರೀತ್ಸಾಹ ಧನ ನೀಡುವುದರಿಂದ ಕೆಲಸ ಮಾಡುವ ಆಸಕ್ತಿಯನ್ನು ಹೆಚ್ಚಿಸಬಹುದಾಗಿದೆ.

ಉಪಸಂಹಾರ

ಗದಗ ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿಗಳ ಕೆಲಸದ ತೃಪ್ತಿಯು ಕೆಲಸದ ಹೊರೆ, ನಾಯಕತ್ವ, ವೃತ್ತಿ ಅವಕಾಶಗಳು, ಕೆಲಸ-ಜೀವನದ ಸಮತೋಲನ ಮತ್ತು ಲಿಂಗ ಅಸಮಾನತೆ ಸೇರಿದಂತೆ ಅಂಶಗಳ ಸಂಕೀರ್ಣವಾದ ಪರಸ್ಪರ ಪ್ರಭಾವದಿಂದ ಪ್ರಭಾವಿತವಾಗಿರುತ್ತದೆ. ಈ ಸವಾಲುಗಳನ್ನು ಪರಿಹರಿಸುವುದು ಉದ್ಯೋಗ ತೃಪ್ತಿಯನ್ನು ಹೆಚ್ಚಿಸಲು ಮಾತ್ರವಲ್ಲದೆ ಪೊಲೀಸ್ ಪಡೆಯೊಳಗೆ ಲಿಂಗ ಸಮಾನತೆಯನ್ನು ಉತ್ತೇಜಿಸಲು ಸಹ ಮುಖ್ಯವಾಗಿದೆ.

ಮಹಿಳಾ ಪೊಲೀಸ್ ಅಧಿಕಾರಿಗಳಲ್ಲಿ ಕೆಲಸದ ತೃಪ್ತಿಯನ್ನು ಸುಧಾರಿಸುವುದು ಸಮಾನತೆಯ ವಿಷಯ ಮಾತ್ರವಲ್ಲದೆ ಕಾನೂನು ಜಾರಿಯ ಪರಿಣಾಮಕಾರಿತ್ವ ಮತ್ತು ದಕ್ಷತೆಯ ಹೂಡಿಕೆಯಾಗಿದೆ ಎಂಬುದನ್ನು ಗುರುತಿಸುವುದು ಅತ್ಯಗತ್ಯ. ಪೊಲೀಸ್ ವ್ಯವಸ್ಥೆಯಲ್ಲಿ ಮಹಿಳೆಯರ ಸಬಲೀಕರಣವು ಬಲವಾದ ಮತ್ತು ಹೆಚ್ಚು ಪ್ರಾತಿನಿಧಿಕ ಕಾನೂನು ಜಾರಿ ಸಂಸ್ಥೆಗಳಿಗೆ ಕೊಡುಗೆ ನೀಡುತ್ತದೆ, ಇದು ಪ್ರತಿಯಾಗಿ, ಅವರು ಸೇವೆ ಸಲ್ಲಿಸುವ ಸಮುದಾಯಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಈ ಸಂಶೋಧನೆಯು ಗದಗ ಜಿಲ್ಲಾ ಪೊಲೀಸ್ ಇಲಾಖೆಯೊಳಗೆ ಸಕಾರಾತ್ಮಕ ಬದಲಾವಣೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತ ಮತ್ತು ಹೊರಗಿನ ಮಹಿಳಾ ಪೊಲೀಸ್ ಅಧಿಕಾರಿಗಳ ಅನುಭವಗಳು ಮತ್ತು ಉದ್ಯೋಗ ತೃಪ್ತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹೆಚ್ಚಿನ ಅಧ್ಯಯನಗಳು ಮತ್ತು ಉಪಕ್ರಮಗಳನ್ನು ಪ್ರೇರೇಪಿಸುತ್ತದೆ ಎಂದು ಭಾವಿಸಲಾಗುತ್ತದೆ.   

ಕೃತಜ್ಞತೆಗಳು :

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಮುಖ್ಯಸ್ಥರು, ಸಮಾಜಕಾರ್ಯ ವಿಭಾಗದ ಉಪನ್ಯಾಸಕರು ಮತ್ತು ಮಾರ್ಗದರ್ಶಕರಾದ  ಡಾ. ಲಿಂಗರಾಜ ನಿಡುವಣಿ, ಗದಗ ಜಿಲ್ಲಾ ಮಹಿಳಾ ಪೊಲೀಸರಿಗೆ ಹಾಗೂ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಿಗೆ

ಆಧಾರಗ್ರಂಥ :

 1. ಅನಿತಾ ಕುಮಾರಿ ಪಾಣೆಗ್ರಾಹಿ, “ಭಾರತದ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೋಲಿಸರ ಉದೋಗ್ಯ ತೃಪ್ತಿಯ ಕುರಿತಾದ ಅಧ್ಯಯನ” Intarantional journal of  Humanities and social science invention ( IJHSSI) volume no 7 ,issue  01, page no 63-67(2018)  
 2. ಅರ್ಚನಾ ರೈ ಮತ್ತು ಕಲ್ಪನಾ ಗುಪ್ತಾ, “ಪೊಲೀಸ್‍ನಲ್ಲಿ ಕೆಲಸ ಮಾಡುವ ಮಹಿಳೆಯರ ಉದೋಗ ತೃಪ್ತಿಯ ಸ್ಥಿತಿ“ journal of emerging technologies and innovative research (JETIR), volume 10, issue 2, vararasi (2022) www.jetir.org   
 3. ದಾನೇಶ್ವರಿ ಇಂಚಿಯನ್, “ಮಹಿಳಾ ಪೊಲೀಸರ ಔಧ್ಯೋಗಿಕ ಒತ್ತಡದ ಕುರಿತು ಅಧ್ಯಯನ” Indian journal of health and wellbeing , volume 9 , issue 1, page no 38-42 (2018)
 4. ಗಾಯಿತ್ರಿ ಜೆ  ಮತ್ತು ಎಸ್ತರ್ ಬುವಾನಾ ಸಿ, “ಭಾರತೀಯ ಸಮಾಜದಲ್ಲಿ ಮಹಿಳೆಯರ ವಿರುದ್ದದ ಅಪರಾಧ ಮತ್ತು ಪೋಲಿಸರ ಪ್ರಮುಖ ಪಾತ್ರ”  Intarantional journal  of   Applied Research , volume no 5, issue 4 ,page no 513-515 (2019)


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ
© 2018. Tumbe International Journals . All Rights Reserved. Website Designed by ubiJournal