Yashoda Talawar1, Dr. Lingaraj Niduvani2
1Research Student, Department of Social Work, Karnataka State Rural Development and Panchayat Raj University Gadag, talawaryashoda824@gmail.com
2Lecturer and Research Guide, Department of Social Work, Karnataka State Rural Development and Panchayat Raj University Gadag, lingarajvn707@gmail.com
Abstract
The Nati Vaidya system like our Indian system is inherited. Treatment of diseases using home remedies is a specialty of Nati Vaidya system. Kappatagudda, popularly known as Sahyadri in Uttar Karnataka, is an important place in Gadaga district. Has mineral and natural wealth. The area has recently been declared a wildlife sanctuary by the Government of Karnataka. Medicinal plant Kashi Kappatagudda covers Gadag, Mundaragi, Shirahatti taluk of Gadag district. The villages of Kappatagudda and surrounding areas are mostly inhabited by Scheduled Tribe people. Scheduled caste nati healers have the knowledge to cure diseases of women by using plant herbs found in our surrounding environment.
Keywords: Policy Aayog, Planning Commission, Governing Body, Think Tank, Evaluation.
ಮಹಿಳೆಯರ ಆರೋಗ್ಯ ಸಂಬಂಧಿತ ಸಮಸ್ಯೆಗಳ ಚಿಕಿತ್ಸೆಯಲ್ಲಿ ಪರಿಶಿಷ್ಟ ಪಂಗಡದ ಪಾರಂಪರಿಕ ನಾಟಿ ವೈದ್ಯರ ಜ್ಞಾನದ ಕುರಿತು ಒಂದು ಅಧ್ಯಯ.
ಯಶೋದ ತಳವಾರ1, ಡಾ. ಲಿಂಗರಾಜ ನಿಡುವಣಿ2
1ಸಂಶೋಧನಾ ವಿಧ್ಯಾರ್ಥಿ
2ಉಪನ್ಯಾಸಕರು/ ಮಾರ್ಗದರ್ಶಕರು
1,2ಸಮಾಜಕಾರ್ಯ ವಿಭಾಗ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ಯ ವಿಶ್ವವಿಧ್ಯಾಲಯ ಗದಗ.
ಅಮೂರ್ತ:
ನಮ್ಮ ಭಾರತೀಯ ಪದ್ದತಿಯಾದಂತಹ ನಾಟಿ ವೈದ್ಯ ಪದ್ದತಿಯು ಪಾರಂಪರಿಕವಾಗಿ ಬಂದಿರುವಂತದ್ದಾಗಿದೆ. ರೋಗಗಳಿಗೆ ಮನೆಮದ್ದುಗಳನ್ನು ಬಳಸಿಕೊಂಡು ನಿವಾರಣೆ ಮಾಡಿಕೊಳ್ಳುವುದು ನಾಟಿ ವೈದ್ಯ ಪದ್ದತಿಯ ವೈಶಿಷ್ಟವಾಗಿದೆ. ಉತ್ತರಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತವಾಗಿರುವ ಕಪ್ಪತಗುಡ್ಡ ಗದಗಜಿಲ್ಲೆಯ ಪ್ರಮುಖ ತಾಣವಾಗಿದೆ. ಖನಿಜ ಮತ್ತು ನೈಸರ್ಗಿಕ ಸಂಪತ್ತು ಹೊಂದಿದೆ. ಈ ಪ್ರದೇಶವನ್ನು ಇತ್ತೀಚಿಗೆ ಕರ್ನಾಟಕ ಸರ್ಕಾರವು ವನ್ಯಜೀವಿ ಅಭಿಯಾರಣ್ಯವಾಗಿ ಘೋಷಿಸಿದೆ. ಔಷಧಿ ಸಸ್ಯಗಳ ಕಾಶಿ ಕಪ್ಪತಗುಡ್ಡ ಗದಗ ಜಿಲ್ಲೆಯ ಗದಗ, ಮುಂಡರಗಿ, ಶಿರಹಟ್ಟಿ ತಾಲೂಕಿನ ವ್ಯಾಪ್ತಿಯನ್ನು ಹೊಂದಿದೆ.ಈ ಕಪ್ಪತಗುಡ್ಡ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಗ್ರಾಮಗಳಲ್ಲಿ ಹೆಚ್ಚಾಗಿ ಪರಿಶಿಷ್ಟ ಪಂಗಡದ ಜನರು ವಾಸಿಸುತ್ತಾರೆ. ಪರಿಶಿಷ್ಟ ಪಂಗಡದ ನಾಟಿ ವೈದ್ಯರು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವಂತಹ ಗಿಡ ಮೂಲಿಕೆಗಳನ್ನು ಬಳಸಿಕೊಂಡು ಮಹಿಳೆಯರಿಗೆ ಬರುವಂತಹ ರೋಗಗಳನ್ನು ಗುಣಪಡಿಸುವ ಜ್ಞಾನವನ್ನು ಹೊಂದಿದ್ದಾರೆ.
ಪ್ರಮುಖ ಪದಗಳು: ಪರಿಶಿಷ್ಟ ಪಂಗಡ, ಔಷಧಿ ಸಸ್ಯಗಳು, ಚಿಕಿತ್ಸೆ, ಮಹಿಳೆಯರ ಆರೋಗ್ಯ ಸಮಸ್ಯೆಗಳು.
ಪರಿಚಯ:
ಭಾರತದಲ್ಲಿ ನಾಟಿ ಪದ್ಧತಿಯನ್ನುವುದು ಪಾರಂಪರಿಕವಾಗಿ ಬಂದಿರುವಂತದ್ದಾಗಿದೆ ರೋಗಗಳಿಗೆ ಮನೆ ಮದ್ದುಗಳನ್ನು ಬಳಸಿಕೂಂಡು ನಿವಾರಣೆ ಮಾಡಿಕೂಳ್ಳುವುದು ನಾಟಿ ಪದ್ದತಿಯ ವೈಶಿಷ್ಟವಾಗಿದೆ. ಪ್ರಾಚೀನ ಕಾಲದಿಂದಲೂ ಮಾನವರು ಸಸ್ಯಗಳನ್ನು ಔಷಧವಾಗಿ ಬಳಸುವ ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸಲಾಗಿದೆ. ಭಾರತದಲ್ಲಿ ನಾಟಿ ವೈದ್ಯ ಪದ್ದತಿಯನ್ನುವುದು ವಂಶ ಪಾಯರ್ಂಪರ್ಯವಾಗಿ ಬಂದಿರುವಂತಹದ್ದು ನಾಟಿ ಪದ್ಧತಿಯುಎನ್ನುವುದು ಮಾನವನಿಗೆ ರೋಗಗಳು ಬಂದಾಗ ಆಸ್ಪತ್ರೆಗಳ ಮೊರೆ ಹೋಗದೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವಂತಹ ಗಿಡ-ಮೂಲಿಕೆಗಳನ್ನು ಬಳಸಿಕೂಂಡು ರೋಗಗಳನ್ನು ನಿವಾರಣೆ ಮಾಡಿಕೂಳ್ಳುವ ಉಪಾಯವೇ ನಾಟಿ ಪದ್ಧತಿಎನ್ನುವುದು.
ಹಿಂದಿನ ಕಾಲದಿಂದಲೂ ನಮ್ಮ ಭಾರತೀಯಜನರು ನಾಟಿ ಪದ್ಧತಿಯನ್ನು ವಂಶ ಪಾಯರ್ಂಪರ್ಯವಾಗಿ ಬಂದಂತಹ ಪದ್ಧತಿಯಾಗಿದ್ದು ಸಾಮಾನ್ಯವಾಗಿ ರೋಗಗಳು ಬಂದಾಗ ಆಸ್ಪತ್ರೇಗಳ ಮೊರೆ ಹೋಗದೆ ತುಳಿಸಿ, ಅಮೃತ ಬಳ್ಳಿ, ಅಶ್ವಗಂಧ, ಮುಂತಾದಗಿಡ ಮೊಲಿಕೆಗಳಿಂದ ರೋಗಗಳನ್ನು ನಿವಾರಣೆ ಮಾಡುವುದು ಹಿಂದಿನ ಕಾಲದಿಂದಲೂ ಬಂದಂತಹ ಪದ್ಧತಿ ಎಂದು ಹೇಳಬಹುದು. ಪ್ರಾಚೀನ ಕಾಲದಿಂದಲೂ ಮಾನವರು ಆಹಾರಕ್ಕಾಗಿ ಬಳಸುತ್ತೀದ್ದರು ಸಸ್ಯಗಳನ್ನು ಔಷಧವಾಗಿ ಬಳಸುವ ಸಾಂಪ್ರದಾಯಿಕ ಔಷಧದಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತದೆ.
ಅಧ್ಯಯನದ ಮಹತ್ವ:
ಈ ಅಧ್ಯಯನದ ಹಿನ್ನಲೆಯು ಭಾರತೀಯ ಪದ್ಧತಿಯಾದ ನಾಟಿ ವೈದ್ಯ ಪದ್ಧತಿಯನ್ನು ಬೆಳಸಿ, ಉಳಿಸಿಕೊಂಡು ಹೋಗವುದಾಗಿದೆ. ಪರಿಶಿಷ್ಟ ಪಂಗಡದ ಪಾರಂಪರಿಕ ನಾಟಿ ವೈದ್ಯರನ್ನು ಗುರುತಿಸಿ ಅವರು ಕೊಡುವ ಚಿಕಿತ್ಸೆಯನ್ನು ತಿಳಿದುಕೊಂಡು ಮತ್ತು ಪ್ರಮುಖವಾಗಿ ಮಹಿಳಾ ರೋಗಿಗಳಿಗೂ ಕೂಡ ಎಲ್ಲಾ ರೋಗಗಳನ್ನು ಈ ವೈದ್ಯ ಪದ್ಧತಿಯಿಂದ ಗುಣಪಡಿಸುವ ಜ್ಞಾನವನ್ನು ಹೊಂದಿದ್ದಾರೆ. ಇವರು ಹೊಂದಿರುವ ಜ್ಞಾನವನ್ನು ತಿಳಿಯುವುದಾಗಿದೆ.
ಸಾಹಿತ್ಯ ವಿಮರ್ಶೆ:
1. ಮೈಕಲ್‍ಜೆ ಬಾಲಿಕ್ ಫೈಡಿಕ್ರೂನೆನ್ ಬರ್ಗ. ಆಂಡ್ರಿಯಾನಾಎಲ್ ಒಸೊಸಿ. ಮರಿಯನ್‍ರೀಪ್ (2000) “ಮಹಿಳೆಯರ ಆರೋಗ್ಯ ಸ್ಥಿತಿಗಳಿಗಾಗಿ ಲ್ಯಾಟಿನೋ ವೈದ್ಯರು ಬಳಸುವ ಔಷಧಿಯ ಸಸ್ಯಗಳು” ಈ ಲೇಖನವು ವಿವಿಧ ಮಹಿಳೆಯರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಲ್ಯಾಟಿನೋ ವೈದ್ಯರುಔಷಧಿಯ ಸಸ್ಯಗಳ ಬಳಕೆಯನ್ನು ಪರಿಶೀಲಿಸಿ ಮಹಿಳೆಯರ ರೋಗಿಗಳೂಂದಿಗೆ ಸಮಾಲೋಚನೆಯ ಮೂಲಕ ಎಂಟು ಲ್ಯಾಟಿನೋ ವೈದ್ಯರು ಅಧ್ಯಯನದಲ್ಲಿ ಸಹಕರಿಸಿದರು, ಈ ಅಧ್ಯಯನವು ಒಟ್ಟು 67 ಸಸ್ಯ ಪ್ರಭೇದಗಳನ್ನು ಮಿಶ್ರಣ ರೂಪದಲ್ಲಿ ವೈದ್ಯರು ಸೂಚಿಸಿದ್ದಾರೆ ಸಾಂಪ್ರದಾಯಿಕ ವೈದ್ಯರು ಮತ್ತುಅವರು ನಗರ ವ್ಯೆವಸ್ಥೆಯಲ್ಲಿ ಬಳಸುವ ಸಸ್ಯಗಳ ಅಧ್ಯಯನಗಳು ಲ್ಯಾಟಿನೋ ಮತ್ತು ಲ್ಯಾಟಿನೋಅಲ್ಲದ ಸಮುದಾಯಗಳ ರೋಗಿಗಳಿಗೆ ಚಿಕಿತ್ಸೆಗೆ ಕೂಡುಗೆ ನೀಡಲು ಮಾಹಿತಿಯನ್ನು ಒದಗಿಸುತ್ತದೆ.
2. ಅವಿವಾ ರೂಮ್ (2017) “ಮಹಿಳೆಯರ ಆರೋಗ್ಯ ಇ -ಪುಸ್ತಕಕ್ಕಾಗಿ ಸÀಸ್ಯ ಶಾಸ್ತ್ರೀಯ ಔಷಧ”. ಮಹಿಳೆಯರಿಗೆ ಚಿಕಿತ್ಸೆ ನೀಡಲು ಗಿಡಮೂಲಿಕೆ ಔಷಧಗಳನ್ನು ಬಳಸಿ ಮಹಿಳೆಯರ ಆರೋಗ್ಯಕ್ಕಾಗಿ ಬೋಟನಿಕಲ್ ಮೆಡಿಸಿನ್ 2ನೇ ಆವೃತ್ತಿಯು ಹಲವಾರು ವಿಭಿನ್ನ ವೈದ್ಯಕೀಯ ಪರಿಸ್ಥಿತಿಗಳಿಗೆ ಸಸ್ಯ ಶಾಸ್ತ್ರೀಯ ವಿಧಾನವನ್ನುಒದಗಿಸುತ್ತದೆ. 150ಕ್ಕೂ ಹೆಚ್ಚು ನೈಸರ್ಗಿಕ ಉತ್ಪನ್ನಗಳನ್ನು ಒಳಗೊಂಡಿದೆ. ತಾರ್ಕಿಕ ಅಧ್ಯಾಯ ಸಂಘಟನೆಯು ಗಿಡಮೂಲಿಕೆ ಔಷಧದ ತತ್ವಗಳೊಂದಿಗೆ ಪ್ರಾರಂಭವಾಗಿ ಪ್ರಾರಂಭವಾಗುತ್ತದೆ ಮತ್ತು ನಂತರ ಹದಿಹರೆಯದ ಮತ್ತು ಸಂತಾನೋತ್ಪತ್ತಿಯ ವರ್ಷದಿಂದ ಮಧ್ಯ ವಯಸ್ಸಿನ ಜೀವನಚಕ್ರದ ಮೂಲಕ ಮಹಿಳಾ ಆರೋಗ್ಯ ಪರಿಸ್ಥಿತಿ ಗಳನ್ನು ಒಳಗೊಳ್ಳುತ್ತದೆ. ಮಹಿಳೆಯರ ಆರೋಗ್ಯಕ್ಕಾಗಿ ಗಿಡಮೂಲಿಕೆಗಳ ಸಾರಾಂಶಕೋಷ್ಟಕದ ಮಾಹಿತಿಯನ್ನು ಒಳಗೊಂಡಿದೆ. ಮಹಿಳೆಯರಿಗೆ ಆರೋಗ್ಯಕರ ವಯಸ್ಸಾದಿಕೆಯಲ್ಲಿ ಸಸ್ಯ ಶಾಸ್ತ್ರದ ಆಯುರ್ವೇದ ಗಿಡಮೂಲಿಕೆಗಳು ಮತ್ತು ಆರೋಗ್ಯ ಪ್ರಚಾರದ ಚರ್ಚೆಗಳನ್ನು ಒಳಗೊಂಡಿದೆ.
3. ರೈನರ್‍ಡಬ್ಲೂ ಬುಸ್ಸಮ್ಮನ್ನ ಆಶ್ಲೇಗ್ಲನ್ (2010) “ಸಂತಾನೋತ್ಪತ್ತಿ ಸಮಸ್ಸೆಗಳು ಮತ್ತು ಸ್ರತೀಆರೋಗ್ಯಕ್ಕಾಗಿ ಬಳಸುವ ಔಷಧೀಯ ಸಸ್ಯಗಳು” ಸಂತಾನೋತ್ಪತ್ತಿ ಪ್ರದೇಶದ ಸೋಂಕುಗಳು ಹೆರಿಗೆ ನಂತರದ ತೊಡಕುಗಳು ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳು ವಿಶ್ವದಾದ್ಯಂತ ಪ್ರಮುಖ ಆರೋಗ್ಯ ಸವಾಲಾಗಿ ಮುಂದುವರಿದಿದೆ ಉತ್ತರ ಪೆರವಿನಲ್ಲಿ 91 ತಳಿಗಳು ಮತ್ತುಅರವತ್ತೆರಡು ಕುಟುಂಬಗಳಿಗೆ ಒಟ್ಟು (105)ಸಸ್ಯ ಪ್ರಭೇದಗಳನ್ನು ದಾಖಲಿಸಲಾಗಿದೆ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಗಿಡಮೂಲಿಕೆ ಪರಿಹಾರಗಳಾಗಿ ಗುರುತಿಸಲಾಗಿದೆ. ಸಂತಾನೋತ್ಪತ್ತಿ ತೊಂದರೆಗಳಿಗೆ ಬಹುಪಾಲು ಗಿಡಮೂಲಿಕೆಗಳ ಸ್ಥಿತಿಗಳನ್ನು ಸಸ್ಯಗಳಿಗೆ ಎಲೆಗಳಿಂದ (22.72) ಸಸ್ಯದಿಂದ (21.97) ಕಾಂಡಗಳಿಂದ ತಯಾರಿಸಲಾಗುತ್ತದೆ ಸಂತಾನೋತ್ಪತ್ತಿ ಅಸ್ವಸ್ಥತೆಯ ಪರಿಹಾರವಾಗಿ ಬಳಸಲಾಗುವ ಸಾಂಪ್ರದಾಯಿಕ ಪರಿಹಾರಗಳ ಮೇಲೆ( 34) ಸಸ್ಯಗಳು ಕಂಡುಬಂದಿದೆ. ಸಾಂಪ್ರದಾಯಿಕ ಪರಿಹಾರಗಳ ಮೇಲೆ ಪಡೆದ ಮಾಹಿತಿ ಹೊಸ ವರ್ಷದಅಭಿವೃದ್ಧಿಪಡಿಸುವ ಪಡಿಸುವ ಸಲುವಾಗಿ ಮುಂದಿನ ವಿಶ್ಲೇಷಣೆಗಾಗಿ ಭವಿಷ್ಯದ ಗುರಿಗಳಿಗೆ ಕೆಲವು ದಾರಿಗಳ ನೀಡಬಹುದು.
4. ಜರ್ನರ್ ಆಫ್ ಯಥೋಪರ್ಮಕಾಲಜಿ (2016) “ಬ್ರೆಜಿಲಿಯನ್ ಸಂಸ್ಕøತಿಗಳಲ್ಲಿ ಹೆರಿಗೆ ಋತುಚಕ್ರ ಮತ್ತುಇತರ ಮಹಿಳೆಯರ ಆರೋಗ್ಯ ಪರಿಸ್ಥಿತಿಗಳಲ್ಲಿ ಬಳಸುವ ಸಸ್ಯಗಳ”. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಹಿಳೆಯರ ಆರೋಗ್ಯ ಮತ್ತು ಅನಿಶ್ಚಿತ ವೈದ್ಯಕ್ಕೆ ಹಾರೈಕೆಗೆ ಸಂಬಂಧಿಸಿದ ಪ್ರಕಾರಗಳಿಗೆ ಈ ಅಂತರವನ್ನುತುಂಬಲು ಸಸ್ಯಗಳ ದೊಡ್ಡ ಸಂಗ್ರಹವನ್ನುಜನಪ್ರಿಯ ಔಷಧಿಗಳಾಗಿ ಬಳಸಲಾಗುತ್ತದೆ ಈ ವಿಮರ್ಶೆಯು ಹೆರಿಗೆ ಋತುಚಕ್ರ ಮತ್ತು ಇತರ ಮಹಿಳೆಯರ ಆರೋಗ್ಯದ ವಿಶೇಷತೆಗಳಿಗೆ ಸಂಬಂಧಿಸಿದ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ಬ್ರೆಜಿಲಿಯನ ಮಹಿಳೆಯರ ಸ್ಥಳೀಯ ಗ್ರಾಮೀಣ ಮತ್ತು ಇತರ ಜನಸಂಖ್ಯೆಯ ಆರೋಗ್ಯವನ್ನು ನಿರ್ಣಯಿಸಲು ದತ್ತಾಂಶದ ಕೊರತೆಯನ್ನು ಪೂರೈಸುತ್ತದೆ ವಿಧಾನಗಳು ಪೆಡರಲ್‍ಯೂನಿವರ್ಸಿಟಿ ಆಫ್ ಸಾವು ಫಾಲೋದಯತ್ನ ಬೋಟನಿಕಲ್ ಮತ್ತು ಯತ್ನೋಫಾರ್ಮಾಲ್‍ಕೋಲಾಜಿಕಲ್ ಸೆಂಟರ್ ನಲ್ಲಿ ಸಾಹಿತ್ಯ ವಿಮರ್ಶೆ ನಡೆಸಲಾಯಿತು (1965) ರಿಂದ (2012)343 ಲೇಖನಗಳನ್ನು ಸಾಮಾಲೋಚಿಸಲಾಗಿದೆ ಸಮೀಕ್ಷೆಯು ಬ್ರೆಜಿಲಿಯನ್ ಸಂಸ್ಕೃತಿಗಳು ಮತ್ತುಅವರ ಅಭ್ಯಾಸಗಳಿಂದ ಮಹಿಳೆಯರ ಆರೋಗ್ಯ ಸ್ಥಿತಿಗಳಿಗೆ ಸಂಬಂಧಿಸಿದ ಚಿಕಿತ್ಸೆಯಲ್ಲಿ ಸಸ್ಯಗಳ ಕುರಿತು ಡೇಟಾವನ್ನು ಸಂಗ್ರಹಿಸಿದೆ ಗಿಡಮೂಲಿಕೆ ಔಷಧಿಗಳ ಅಭಿವೃದ್ಧಿಗೆ ಹೆಚ್ಚಿನಕೊಡುಗೆ ನೀಡುತ್ತದೆ.
5. ರೋಸ್ಮರಿ ಗ್ಲಾಡ್ಸರ್ (1993) “ಮಹಿಳೆಯರಿಗೆ ಗಿಡಮೂಲಿಕೆ ಚಿಕಿತ್ಸೆ” ಎಲ್ಲಾ ವಯಸ್ಸಿನ ಮಹಿಳೆಯರಿಗೆ ಸರಳ ಸುರಕ್ಷಿತ ಮತ್ತು ಪರಿಣಾಮಕಾರಿ ಮೂಲಿಕೆ ಮನೆ ಮದ್ದುಗಳು ಮುಟ್ಟಿನಿಂದ ಋತುಬಂಧವರೆಗೆ ಮಾಡುವ ಬಿಸಿ ಹೂಳಪಿನ ಬೆಳಗಿನ ಬೇನೆ ನೈಸಗಿ9ಕ ಚಿಕಿತ್ಸೆಗಳನ್ನು ಹೇಗೆ ತಯಾರಿಸಬೇಕೆಂದು ತಿಳಿಯುವುದು. ಶತಮಾನಗಳಿಂದಲೂ ಮಹಿಳೆಯರು ವಿವಿಧ ರೀತಿಯ ಆರೋಗ್ಯ ಸಮಸ್ಸೆಗಳು ಮತ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಗಿಡಮೂಲಿಕೆಗಳ ಕಡೆಗೆತಿರುಗಿದ್ದಾರೆ. ಮಹಿಳೆಯರಿಗಾಗಿ ಸಮಗ್ರ ಮತ್ತು ಬಳಸಲು ಸುಲಭವಾದ ಹರ್ಬಲ್ ಹೀಲಿಂಗ್ ವಿವರಿಸುತ್ತದೆ. ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ಗಿಡಮೂಲಿಕೆಗಳನ್ನು ಹೇಗೆ ಬಳಸಬಹುದೆಂದು ಕಲಿಸುತ್ತದೆ.
ಸಂಶೋಧನಾ ಉದ್ಧೇಶಗಳು:
ಇತಿಮಿತಿಗಳು:
1. ಈ ಅಧ್ಯನವನ್ನು ಪರಿಶಿಷ್ಟ ಪಂಗಡದ ಪಾರಂಪರಿಕ ನಾಟಿ ವೈದ್ಯರ ಮೇಲೆ ಅಧ್ಯಯನ ಮಾಡಲಾಗಿದೆ.
2. ನಾಟಿ ವೈದ್ಯ ಪದ್ದತಿಯು ಭಾರತದಲ್ಲಿ ಪ್ರಚಲಿತವಿದ್ದು ಈ ಅಧ್ಯನವುಗದಗಜಿಲ್ಲೆಗೆ ಸೀಮಿತವಾಗಿದೆ.
3. ಈ ಅಧ್ಯಯನದ ಫಲಿತಾಂಶವು ಗದಗಜಿಲ್ಲೆ, ಗದಗ, ಮುಂಡರಗಿ, ಶಿರಹಟ್ಟಿ ತಾಲೂಕಿಗೆ ಮಾತ್ರ ಅನ್ವಯಿಸುತ್ತದೆ.
ಸಂಶೋಧನಾ ವಿಧಾನ:
ಈ ಅಧ್ಯಯನವು ವಿವರಣಾತ್ಮಕ ಸಂಶೋಧನಾ ವಿನ್ಯಾಸವನ್ನು ಬಳಸಲಾಗಿದೆ. ದತ್ತಾಂಶವು ಮುಖ್ಯವಾಗಿ ಪ್ರಾಥಮಿಕ ಮೂಲ ಮತ್ತು ದ್ವೀತಿಯ ಮೂಲಗಳಾಗಿವೆ. ಪ್ರಸ್ತುತ ಅಧ್ಯಯನಕ್ಕಾಗಿ ಉದ್ದೇಶ ಪೂರ್ವಕವಾಗಿ ಮಾದರಿ ತಂತ್ರವನ್ನು ಅಳವಡಿಸಲಾಗಿದೆ. ದತ್ತಾಂಶ ಸಂಗ್ರಹಣೆಗಾಗಿ ಸಂದರ್ಶನಾ ಅನುಸೂಚಿಯನ್ನು ಬಳಸಲಾಗಿದೆ. ಈ ಸಂಶೋಧನಾ ಅಧ್ಯಯನವನ್ನು ಗದಗ ಜಿಲ್ಲೆಯ ಗದಗ, ಮುಂಡರಗಿ, ಹಾಗೂ ಶಿರಹಟ್ಟಿ, ತಾಲೂಕಿನ ಮತ್ತು ಕಪ್ಪತಗುಡ್ಡದ ಸುತ್ತಮುತ್ತಲಿನ ಗ್ರಾಮಗಳ ಒಟ್ಟು 100ಪರಿಶಿಷ್ಟ ಪಂಗಡದ ನಾಟಿ ವೈದ್ಯರನ್ನು ನೇರವಾಗಿ ಸಂಪರ್ಕಿಸಿ ದತ್ತಾಂಶವನ್ನು ಪಡೆದಿದ್ದು ಇದರ ಪೈಕಿ ಕೇವಲ 20 ಜನ ಪರಿಶಿಷ್ಟ ಪಂಗಡದ ಪಾರಂಪರಿಕ ನಾಟಿ ವೈದ್ಯರನ್ನು ಗುರ್ತಿಸಲಾಗಿದೆ.
ಮಹಿಳೆಯರು:
ಸ್ರ್ತೀ ಅಥವಾ ಮಹಿಳೆ ಪದವು ಸಂಸ್ಕøತವಾಗಿದ್ದುಕನ್ನಡದಲ್ಲಿ ಈ ಪದಕ್ಕೆ ಹೆಣ್ಣು ಎಂಬ ಅರ್ಥವಿದೆ. ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದವಾಗಿದ್ದು ವಯಸ್ಕ ಹೆಣ್ಣನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಆದಿನಿಂದಲೂ ಸೃಷ್ಟಿಯ ಮೂಲ ಸ್ರ್ತೀ ಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ರ್ತೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಹಿಂದೂ ಮಹಾ ಕಾವ್ಯಗಳಾದ ರಾಮಾಯಣ-ಮಹಾಭಾರತ ಕೃತಿಗಳ ರಚನೆಗೆ ಸ್ರ್ತೀ ಕಾರಣಿಭೂತಳಾಗಿದ್ದಾಳೆ ಆ ಕಾಲದಲ್ಲಿ ಸ್ರ್ತೀಯರಿಗೆ ಧಾರ್ಮಿಕ ಸ್ವಾತಂತ್ರ್ಯವಿತ್ತು.
ಪರಿಶಿಷ್ಟ ಪಂಗಡದ ಪಾರಂಪರಿಕ ನಾಟಿ ವೈದ್ಯರು:
ನಮ್ಮ ಭಾರತೀಯ ಪದ್ಧತಿಯಾದ ನಾಟಿ ವೈದ್ಯ ಪದ್ಧತಿಯು ಹಿಂದಿನಿಂದಲೂ ಆಚಾರ, ವಿಚಾರ, ಸಂಸ್ಕøತಿ, ಪದ್ಧತಿ ಮಹಿಳೆ ಇವುಗಳಿಗೆ ತುಂಬಾ ಮಹತ್ವ ನೀಡುವಂತಹ ದೇಶವಾಗಿದೆ. ಕಾಡು, ಗುಡ್ಡಗಳ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವಂತಹ ಪರಿಶಿಷ್ಟ ಪಂಗಡದ ನಾಟಿ ವೈದ್ಯರು ಅಗಾದವಾದ ಜ್ಞಾನವನ್ನು ಹೊಂದಿದ್ದಾರೆ. ಕೇವಲ ಔಷಧಿ ಸಸ್ಯಗಳನ್ನು ನೋಡಿದ ತಕ್ಷಣ ಅದರ ಹೆಸರನ್ನು ಗುರುತಿಸಿ ಆ ಔಷಧಿ ಸಸ್ಯವು ಇಂತಹ ಕಾಯಿಲೆಗಳಿಗೆ ಬರುತ್ತದೆ ಎಂದು ಹೇಳುವಷ್ಟು ಜ್ಞಾನವನ್ನು ಹೊಂದಿದ್ದಾರೆ. ಅμÉ್ಟೀ ಅಲ್ಲದೆಇವರು ಪ್ರಮುಖವಾಗಿ ಮಹಿಳೆಯರಿಗೂ ಕೂಡ ಚಿಕಿತ್ಸೆ ನೀಡುತ್ತಾರೆ. ಎಂತಹ ಸಮಸ್ಯೆಗಳಿದ್ದರೂ ಅದನ್ನು ಔಷಧಿ ಸಸ್ಯಗಳಿಂದ ಗುಣಪಡಿಸುತ್ತಾ ಬಂದಿದ್ದಾರೆ.
ಸಾಮಾನ್ಯವಾಗಿ ರೋಗಗಳು ಬಂದಾಗ ಆಸ್ಪತ್ರೆಗಳ ಮೊರೆಹೋಗದೆ ತುಳಸಿ, ಅಶ್ವಗಂಧ, ಅಮೃತಬಳ್ಳಿ, ಮುಂತಾದ ಸಸ್ಯಗಳನ್ನು ಬಳಸಿಕೊಂಡು ಔಷಧಿ ತಯಾರಿಸುವ ಜ್ಞಾನವನ್ನು ಹೊಂದಿದ್ದಾರೆ. ಪರಿಶಿಷ್ಟ ಪಂಗಡದ ನಾಟಿ ವೈದ್ಯರು ವಿಶೇಷವಾಗಿ ಮಹಿಳಾ ರೋಗಗಳಿಗೂ ಕೂಡ ಔಷಧಿಗಳನ್ನು ಕೊಡುವಂತಹ ವಿದ್ಯೆಯನ್ನು ಹೊಂದಿದ್ದಾರೆ. ಪ್ರಾಚೀನ ಕಾಲದಿಂಲೂ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಾ ಬಂದಿದ್ದಾರೆ.
ಪ್ರಾಚೀನ ಹಾಗೂ ಸಮೃದ್ದ ವೈದ್ಯ ಪದ್ಧತಿ ಯೋಗರತ್ನಾಕರ ಮುಂತಾದ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಗಳು ಇವೆ. ಆರೋಗ್ಯ ಮತ್ತು ಸೌಂದರ್ಯ ಪ್ರತಿ ಹೆಣ್ಣಿನ ಆಶೆಯವಾಗಿದೆ ಆಯುರ್ವೇದವು ಬರಿ ಮಹಿಳೆಯರ ಆರೋಗ್ಯವನ್ನμÉ್ಟೀ ಅಲ್ಲದೇ ಸೌಂದರ್ಯ ವೃದ್ದಿಯನ್ನು ಮಾಡುವಂತಹ ಗುಣವನ್ನು ಹೊಂದಿದೆ. ಹೆಣ್ನಿನ ಬಾಲ್ಯಾವಸ್ಥೆ, ಯೌವನ, ಫ್ರೌಡಾವಸ್ಥೆ ಗರ್ಭಿಣಿ, ಬಾಣಂತಿಚರ್ಯ, ಮದ್ಯವಯಸ್ಸು, ವೃದ್ಯಾಪ ಎಲ್ಲಾ ಹಂತಗಳಲ್ಲಿಯೂ ಮತ್ತು ಸೌಂದರ್ಯ ವೃದ್ದಿಯಲ್ಲಯೂ ಈ ನಾಟಿ ಪದ್ದತಿಯು ಸಲಹೆಗಳನ್ನು ನೀಡುತ್ತದೆ. ಪ್ರಾಚೀನ ಕಾಲದಿಂದಲೂ ಮಾನವರು ಆರೋಗ್ಯಕ್ಕಾಗಿ ಸಸ್ಯಗಳನ್ನು ಔಷಧವಾಗಿ ಬಳಸುತ್ತಿದ್ದರು ಸಸ್ಯಗಳನ್ನು ಬಳಸುವ ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸಲಾಗಿದೆ. ಕಳೆದ 60 ವರ್ಷಗಳಿಂದಿಚಿಗೆ ನಮ್ಮಲ್ಲಿ ಬಳಕೆಯಲ್ಲಿರುವ ಅಲೋಪತಿಕ್ ವೈದ್ಯ ಪದ್ದತಿಯು ಇಂದಿಗೂ ನಾಟಿ ವೈದ್ಯ ಪದ್ದತಿಯುನ್ನು ಹಿಮ್ಮೆಟ್ಟಿಸಲು ಸಂಪೂರ್ಣ ವಿಫಲವಾಗಿರುವುದಕ್ಕೆ ನಾಟಿ ವೈದ್ಯ ಪದ್ದತಿಯಲ್ಲಿರುವ ಅನುಭವವೇ ಕಾರಣ ಎಂದರು.
ಮಹಿಳೆಯರಿಗೆ ಇರುವಆರೋಗ್ಯ ಸಮಸ್ಯೆಗಳು
ಮುಟ್ಟಿನ ಸಮಸ್ಯೆ ಬಿಳಿ ಮುಟ್ಟು ಸಮಸ್ಯೆ
ಕೆಂಪು ಮುಟ್ಟು ಬಂಜೆತನ
ಸಂತಾನೋತ್ಪತ್ತಿ ಸಮಸ್ಯೆ ಋತುಚಕ್ರ ಬಂದಂದ ಬಳಿಕದ ಸಮಸ್ಯೆಗಳು
ಗರ್ಭಕೋಶ ಮತ್ತು ಅಂಡಾಶಯಗಳಲ್ಲಿ ಗಡ್ಡೆಗಳು ಪ್ರಸೂತಿಗೆ ಸಮಬಂಧಿಸಿದ ಆರೋಗ್ಯ ಸಮಸ್ಯೆಗಳು
ಸ್ತನದ ಕ್ಯಾನ್ಸರ್ ಗರ್ಭಕೋಶದ ಕ್ಯಾನ್ಸರ್
ಗರ್ಭಕಂಠದಕ್ಯಾನ್ಸರ್ ಚರ್ಮರೋಗಗಳು
ಮಾನಸಿಕ ಕಾಯಿಲೆಗಳು
ಮಹಿಳಾ ಆರೋಗ್ಯ ರಕ್ಷಣೆಯಲ್ಲಿ ಸಾಂಪ್ರದಾಯಿಕ ವೈದ್ಯರ ಪಾತ್ರ:
ಮಹಿಳಾ ಆರೋಗ್ಯ ರಕ್ಷಣೆಯಲ್ಲಿ ಸಾಂಪ್ರದಾಯಿಕ ವೈದ್ಯರ ಪಾತ್ರವು ಬಹುಮುಖವಾಗಿದೆ ಮತ್ತು ಸಾಂಸ್ಕøತಿಕ ಮಹತ್ವವನ್ನು ಹೊಂದಿದೆ. ಈ ವೈದ್ಯರು ಸಾಮಾನ್ಯವಾಗಿ ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಮುದಾಯ ಸಂಪನ್ಮೂಲಗಳಾಗಿ ಸೇವೆ ಸಲ್ಲಿಸುತ್ತಾರೆ, ವೈದ್ಯಕೀಯ ಜ್ಞಾನ, ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಸಾಂಸ್ಕೃತಿಕ ತಿಳುವಳಿಕೆಯ ವಿಶಿಷ್ಟ ಮಿಶ್ರಣವನ್ನು ಒದಗಿಸುತ್ತಾರೆ. ಅವರು ನೀಡುತ್ತವೆ:
ಸಮಗ್ರ ವಿಧಾನ: ಸಾಂಪ್ರದಾಯಿಕ ವೈದ್ಯರು ಮಹಿಳೆಯರ ಆರೋಗ್ಯದ ಭೌತಿಕ ಅಂಶಗಳನ್ನು ಮಾತ್ರವಲ್ಲದೆ ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಆಯಾಮಗಳನ್ನು ಪರಿಗಣಿಸುತ್ತಾರೆ. ಈ ಸಮಗ್ರ ವಿಧಾನವು ಆರೋಗ್ಯ ಮತ್ತು ಸ್ವಾಸ್ಥ್ಯದ ಬಗ್ಗೆ ಅನೇಕ ಸಮುದಾಯಗಳ ನಂಬಿಕೆಗಳೊಂದಿಗೆ ಹೊಂದಿಕೆಯಾಗುತ್ತದೆ.
ಸಾಂಸ್ಕೃತಿಕ ಪ್ರಸ್ತುತತೆ: ಸಾಂಪ್ರದಾಯಿಕ ವೈದ್ಯರು ತಮ್ಮ ಸಮುದಾಯಗಳ ಸಾಂಸ್ಕೃತಿಕ ರೂಢಿಗಳು, ಆಚರಣೆಗಳು ಮತ್ತು ನಂಬಿಕೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಇದು ಸಾಂಸ್ಕೃತಿಕ ಸಂದರ್ಭದೊಂದಿಗೆ ಅನುರಣಿಸುವ, ಸ್ವೀಕಾರ ಮತ್ತು ಅನುಸರಣೆಯನ್ನು ಹೆಚ್ಚಿಸುವ ಆರೋಗ್ಯ ರಕ್ಷಣೆಯ ಪರಿಹಾರಗಳನ್ನು ನೀಡಲು ಅವರಿಗೆ ಅನುವು ಮಾಡಿಕೊಡುತ್ತದೆ.
ಪ್ರವೇಶಿಸಬಹುದಾದ ಆರೈಕೆ: ಆಧುನಿಕ ವೈದ್ಯಕೀಯ ಸೌಲಭ್ಯಗಳಿಗೆ ಸೀಮಿತ ಪ್ರವೇಶವನ್ನು ಹೊಂದಿರುವ ಪ್ರದೇಶಗಳಲ್ಲಿ, ಸಾಂಪ್ರದಾಯಿಕ ವೈದ್ಯರು ಪ್ರವೇಶಿಸಬಹುದಾದ ಆರೋಗ್ಯ ಪೂರೈಕೆದಾರರಾಗಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಅವರು ಸಾಮಾನ್ಯವಾಗಿ ಆರೋಗ್ಯ ಕಾಳಜಿಗಾಗಿ ಸಂಪರ್ಕದ ಮೊದಲ ಬಿಂದುವಾಗಿದೆ.
ಸ್ಥಳೀಯ ಜ್ಞಾನ: ಸಾಂಪ್ರದಾಯಿಕ ವೈದ್ಯರು ಸ್ಥಳೀಯ ಸಸ್ಯಗಳು, ಗಿಡಮೂಲಿಕೆಗಳು ಮತ್ತು ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಬಳಸಬಹುದಾದ ಪರಿಹಾರಗಳ ಜ್ಞಾನವನ್ನು ಹೊಂದಿದ್ದಾರೆ. ಈ ಸ್ಥಳೀಯ ಜ್ಞಾನವು ತಲೆಮಾರುಗಳ ಮೂಲಕ ಹರಡುತ್ತದೆ.
ಭಾವನಾತ್ಮಕ ಬೆಂಬಲ: ಸಾಂಪ್ರದಾಯಿಕ ವೈದ್ಯರು ವಿಶ್ವಾಸಾರ್ರಾಗಿ ಸೇವೆ ಸಲ್ಲಿಸುತ್ತಾರೆ, ಆರೋಗ್ಯ-ಸಂಬಂಧಿತ ಸವಾಲುಗಳ ಸಮಯದಲ್ಲಿ ಮಹಿಳೆಯರಿಗೆ ಭಾವನಾತ್ಮಕ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ. ಈ ವೈಯಕ್ತಿಕ ಸಂಪರ್ಕವು ಚಿಕಿತ್ಸೆ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ.
ವಿಧ್ಯುಕ್ತ ಚಿಕಿತ್ಸೆ: ಅನೇಕ ಸಾಂಪ್ರದಾಯಿಕ ಚಿಕಿತ್ಸೆ ಅಭ್ಯಾಸಗಳು ಚಿಕಿತ್ಸೆ ಮತ್ತು ಸಮತೋಲನವನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಆಚರಣೆಗಳು ಮತ್ತು ಸಮಾರಂಭಗಳನ್ನು ಒಳಗೊಂಡಿರುತ್ತವೆ. ಈ ಸಮಾರಂಭಗಳು ಮಹಿಳೆಯರ ಸಬಲೀಕರಣ ಮತ್ತು ಯೋಗಕ್ಷೇಮದ ಭಾವನೆಗೆ ಕೊಡುಗೆ ನೀಡುತ್ತವೆ.
ತಡೆಗಟ್ಟುವ ಕ್ರಮಗಳು: ಸಾಂಪ್ರದಾಯಿಕ ವೈದ್ಯರು ಸಾಮಾನ್ಯವಾಗಿ ತಡೆಗಟ್ಟುವ ಕ್ರಮಗಳು ಮತ್ತು ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳನ್ನು ಒತ್ತಿಹೇಳುತ್ತಾರೆ, ಮಹಿಳೆಯರಲ್ಲಿ ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುತ್ತಾರೆ.
ಸಂಪ್ರದಾಯಗಳಿಗೆ ಗೌರವ: ಕೆಲವು ಸಮುದಾಯಗಳೊಳಗಿನ ಮಹಿಳೆಯರು ಬಲವಾದ ಸಾಂಸ್ಕೃತಿಕ ಸಂಪರ್ಕದಿಂದಾಗಿ ಸಾಂಪ್ರದಾಯಿಕ ವೈದ್ಯರಿಂದ ಆರೈಕೆಯನ್ನು ಬಯಸುತ್ತಾರೆ. ಸಂಪ್ರದಾಯದ ಈ ಗೌರವವು ಮಹಿಳಾ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರವನ್ನು ಹೆಚ್ಚಿಸುತ್ತದೆ.
ಮೂಲಭೂತವಾಗಿ, ಮಹಿಳಾ ಆರೋಗ್ಯ ರಕ್ಷಣೆಯಲ್ಲಿ ಸಾಂಪ್ರದಾಯಿಕ ವೈದ್ಯರ ಪಾತ್ರವು ವೈದ್ಯಕೀಯ ಚಿಕಿತ್ಸೆಯನ್ನು ಮೀರಿ ವಿಸ್ತರಿಸುತ್ತದೆ, ಸಾಂಸ್ಕೃತಿಕ ಸಂರಕ್ಷಣೆ, ಭಾವನಾತ್ಮಕ ಬೆಂಬಲ ಮತ್ತು ಸಮುದಾಯ ಯೋಗಕ್ಷೇಮವನ್ನು ಒಳಗೊಂಡಿದೆ. ಅವರ ಅಭ್ಯಾಸಗಳು ವೈದ್ಯಕೀಯ ವಿಜ್ಞಾನ ಮತ್ತು ಸಾಂಸ್ಕೃತಿಕ ನಂಬಿಕೆಗಳ ನಡುವಿನ ಅಂತರವನ್ನು ನಿವಾರಿಸುತ್ತದೆ, ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಸಮಗ್ರ ವಿಧಾನವನ್ನು ಒದಗಿಸುತ್ತದೆ.
ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಪರಿಶಿಷ್ಟ ಪಂಗಡದ ನಾಟಿ ವೈದ್ಯರು ಸೂಚಿಸುವ ಔಷಧಿಯ ಸಸ್ಯಗಳು ಮತ್ತು ಅದರ ಉಪಯೋಗಗಳು:
ಔಷಧಿಯ ಸಸ್ಯಗಳು:.
ದಾಸವಾಳ (ಈ ಔಷಧಿಯು ಮಹಿಳೆಯರ ಕೇಶ ವೃದ್ದಿಗೆ, ಹಾಗೂ ತೆಲೆಕೂದಲಿನ ಹೊಟ್ಟಿನ ಸಮಸ್ಯೆ, ಮುಂತಾದ ಸಮಸ್ಯೆಗೆ ದಾಸವಾಳವನ್ನು ಬಳಸುತ್ತಾರೆ.
ಉತ್ತರಾಣಿ (ಕೆಂಪು ಉತ್ತರಾಣಿಯುರಕ್ತ ಪ್ರಮೇಹ, ಇಸುಬು ಮುಂತಾದ ರೋಗಗಳಿಗೆ ಬಳಸುತ್ತಾರೆ.)
ಮದರಂಗಿ (ಮದರಂಗಿಯನ್ನುಉಷ್ಣವನ್ನುತಡೆಗಟ್ಟುತ್ತದೆ, ಮಹಿಳೆಯರು ಕೈಯಿಗೆ ಗೋರಂಟಿ ಹಚ್ಚುತ್ತಾರೆ.
ಗರಿಕೆ (ಗರಿಕೆಯನ್ನುರಕ್ತ ಪ್ರದರಕ್ಕೆ ಬಳಸುತ್ತಾರೆ.
ಲಾವಂಚ (ಈ ಔಷಧಿಯು ಮೂತ್ರಕೋಶದ ಸಮಸ್ಯೆ, ಉಷ್ಣದ ಸಮಸ್ಯೆಯನ್ನುತಡೆಗಟ್ಟುತ್ತದೆ.
ಹತ್ತಿಹಣ್ಣು (ಉಷ್ಣವನ್ನುತಡೆಗಟ್ಟುತ್ತದೆ ಮತ್ತು ಬಿಳಿ ಮುಟ್ಟು, ಉರಿಮೂತ್ರವನ್ನುತಡೆಗಟ್ಟುತ್ತದೆ.
ಸೊಗದೆ ಬೇರು (ಈ ಔಷಧಿಯುರಕ್ತ ಶುದ್ಧೀಕರಣ, ಮೂತ್ರದ ಹಳ್ಳನ್ನು ತಡೆಗಟ್ಟುತ್ತದೆ.
ಬೆಟ್ಟದ ನೆಲ್ಲಿ (ಪಿತ್ತಶಾಮಕ, ಕಫ ಶಾಮಕವನ್ನುತಡೆಗಟ್ಟುತ್ತದೆ.
ನೆಗ್ಗಲಿ ಮುಳ್ಳು (ವೇದನಾಅರ, ಶೂಲ ನಾಶಕ ಕಿಡ್ನಿಮುಂತಾದ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
ಜೇಷ್ಟಮಧು (ಈ ಔಷಧಿಯುಕಫವನ್ನುತಡೆಯುತ್ತದೆ.
ಶಿವಲಿಂಗ ಬಳ್ಳಿ (ಈ ಔಷಧವನ್ನುಗರ್ಭಾಶಯದ ತೊಂದರೆಗಳನ್ನು ತಡೆಗಟ್ಟಿಗರ್ಭ ಸ್ಥಾಪನೆಗೆ ಸಹಾಯ ಮಾಡುತ್ತದೆ.
ಅಶ್ವಗಂಧ (ಅಶ್ವಗಂಧವು ಹಲವಾರು ರೋಗಗಳನ್ನು ಗುಣಪಡಿಸಿ ನರದೌರ್ಭಲ್ಯವನ್ನು ನಿವಾರಣೆ ಮಾಡುತ್ತದೆ.
ದತ್ತಾಂಶ ವಿಶ್ಲೇಷಣೆ:
ದತ್ತಾಂಶ ವಿಶ್ಲೇಷಣೆಯು ಫಲಿತಾಂಶಗಳನ್ನು ಪಡೆಯುವಗುರಿಯೂಂದಿಗೆದತ್ತಾಂಶವನ್ನು ವಿವರಿಸುವ ಮತ್ತು, ವಿವರಿಸಲು ಸಾಂದ್ರೀಕರಿಸಲು ಮತ್ತು ಮರುಸಂಗ್ರಹಿಸಲು, ಮೌಲ್ಯಮಾಪನ ಮಾಡಲು ಸಂಖ್ಯಾಶಾಸ್ತ್ರೀಯ ತಾರ್ಕಿಕ ತಂತ್ರಗಳನ್ನು ವ್ಯವಸ್ಥಿತವಾಗಿ ಅನ್ವಯಿಸುವ ಪ್ರಕ್ರಿಯೆಯಾಗಿದೆ. ಇದುದತ್ತಾಂಶ ವಿಶ್ಲೇಷಣೆ ಪ್ರಕ್ರಯೆಯನ್ನು ಒಳಗೊಂಡಿದೆ.
ಫಲಿತಾಂಶ:
1. ನೀವು ಚಿಕಿತ್ಸೆ ಮಾಡುವ ವಿಧಾನವನ್ನು ಬೇರೆಯವರಿಗೆ ಕಲಿಸುತ್ತೀರಾ?
|
Frequency |
Percent |
ಹೌದು |
98 |
98.0 |
ಇಲ್ಲ |
2 |
2.0 |
ಖಿoಣಚಿಟ |
100 |
100.0 |
ಈ ಮೇಲಿನ ಕೋಷ್ಟಕದಲ್ಲಿ ಪರಿಶಿಷ್ಟಪಂಗಡದ ನಾಟಿ ವೈದ್ಯರು ನಾಟಿ ವೈದ್ಯ ಪದ್ಧತಿಯನ್ನು98.0% ರಷ್ಟು ಕಲಿಸುತ್ತಾರೆಂದು ತಿಳಿದಿದೆ. 2.0% ರಷ್ಟುಜನರು ಕಲಿಸುವುದಿಲ್ಲ ಎಂದು ತಿಳಿದಿದೆ.
2. ನೀವು ಬಳಸುವ ಔಷಧಿ ಸಸ್ಯಗಳು ಸಮರ್ಪಕವಾಗಿದೊರೆಯುತ್ತವೆಯೇ?
|
Frequency |
Percent |
ಹೌದು |
93 |
93.0 |
ಇಲ್ಲ |
7 |
7.0 |
ಖಿoಣಚಿಟ |
100 |
100.0 |
ಈ ಮೇಲಿನ ಕೋಷ್ಟಕದಲ್ಲಿ 93.0% ರಷ್ಟು ನಾಟಿ ವೈದ್ಯರುಔಷಧಿ ಸಸ್ಯಗಳು ಸಿಗುತ್ತವೆಂದು ತಿಳಿದಿದೆ. 7.0 % ರಷ್ಟುಜನರುಔಷಧಿ ಸಸ್ಯಗಳು ಸಿಗುವುದಿಲ್ಲ ಎಂದು ಹೇಳಿದ್ದಾರೆ.
3. ಔಷಧಿ ಸಸ್ಯಗಳನ್ನು ಎಲ್ಲಿಂದತರುತ್ತೀರಿ?
|
Frequency |
Percent |
ಕಾಡುಗಳಿಂದ |
38 |
38.0 |
|
|
|
ಹೂಲಗದ್ದೆಗಳಿಂದ |
62 |
62.0 |
Total |
100 |
100.0 |
ಈ ಮೇಲಿನ ಕೋಷ್ಟಕದಲ್ಲಿ 38.0 % ರಷ್ಟು ನಾಟಿ ವೈದ್ಯರುಔಷಧಿ ಸಸ್ಯಗಳನ್ನು ಕಾಡುಗಳಿಂದ ತರುತ್ತಾರೆಂದು ತಿಳಿದಿದೆ. 62.0% ರಷ್ಟುಜನರುಔಷಧಿ ಸಸ್ಯಗಳನ್ನು ಹೊಲಗದ್ದೆಗಳಿಂದ ತರುತ್ತಾರೆಂದು ತಿಳಿದಿದೆ.
4. ಮಹಿಳೆಯರಿಗೆ ಬರುವಂತಹ ಎಲ್ಲಾ ಕಾಯಿಲೆಗಳಿಗೂ ಔಷಧಿಯ ಸಸ್ಯಗಳಿಂದ ಗುಣವಾಗುತ್ತವೆಯೇ?
|
Frequency |
Percent |
ಹೌದು |
87 |
87.0 |
ಇಲ್ಲ |
13 |
13.0 |
ಖಿoಣಚಿಟ |
100 |
100.0 |
ಈ ಮೇಲಿನ ಕೋಷ್ಟಕದಲ್ಲಿ 87.0% ರಷ್ಡು ನಾಟಿ ವೈದ್ಯರು ಮಹಿಳೆಯರ ರೋಗಗಳನ್ನು ಔಷಧಿ ಸಸ್ಯಗಳಿಂದ ಗುಣವಾಗುತ್ತವೆಂದು ತಿಳಿಸಿದ್ದಾರೆ. 13.0% ರಷ್ಟುಜನರು ಕೆಲವೊಂದುಕಠಿಣ ರೋಗಗಳನ್ನು ಗುಣಪಡಿಸಲು ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
5. ನಿಮ್ಮ ವೃತ್ತಿಯಿಂದ ಪ್ರಶಸ್ತಿಗಳು ಲಭಿಸಿವೆಯಾ?
|
Frequency |
Percent |
ಹೌದು |
6 |
6.0 |
ಇಲ್ಲ |
94 |
94.0 |
ಖಿoಣಚಿಟ |
100 |
100.0 |
ಈ ಮೇಲಿನ ಕೋಷ್ಟಕದಲ್ಲಿ 94.0% ರಷ್ಟು ಪರಿಶಿಷ್ಟ ಪಂಗಡದ ನಾಟಿ ವೈದ್ಯರಿಗೆ ಈ ಪದ್ದತಿಯಿಂದಯಾವುದೇ ಪ್ರಶಸ್ತಿಗಳು ದೊರೆತಿಲ್ಲಎಂದು ತಿಳಿಸಿದ್ದಾರೆ. 6.0% ರಷ್ಟುಜನರುಯಾವುದೆ ಪ್ರಶಸ್ತಿಗಳು ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಉಪಸಂಹಾರ:
ಈ ಅಧ್ಯಯನವು ಕಪ್ಪತಗುಡ್ಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶಿಷ್ಟ ಪಂಗಡದ ನಾಟಿ ವೈದ್ಯರು ವಾಸಿಸುತಿದ್ದು ಕಪ್ಪತಗುಡ್ಡದಲ್ಲಿ ಸಿಗುವಂತಹ ಸಸ್ಯಗಳನ್ನು ಬಳಸಿಕೂಂಡು ಔಷಧಿಗಳನ್ನು ಮಾಡುತ್ತಾರೆ. ಮತ್ತು ಪ್ರಮುಖವಾಗಿ ಮಹಿಳೆಯರಿಗೆ ಬರುವಂತಹ ರೋಗಗಳನ್ನು ಔಷಧಿ ಸಸ್ಯಗಳಿಂದ ಗುಣಪಡಿಸುವ ಜ್ಞಾನವನ್ನು ಪರಿಶಿಷ್ಟ ಪಂಗಡದ ಪಾರಂಪರಿಕ ನಾಟಿ ವೈದ್ಯರು ಹೊಂದಿದ್ದಾರೆ. ಇಂತಹ ಪ್ರತಿಭೆಯನ್ನು ಗುರಿತಿಸಿ ಅವರಿಗೆ ವೈಜ್ಞಾನಿಕ ಚಿಕಿತ್ಸೆಯ ತರಬೇತಿಯನ್ನು ನೀಡಬೇಕೆಂದು ಈ ಸಂಶೋಧನೆಯ ಆಶಯವಾಗಿದೆ. ಭಾರತೀಯ ಪರಂಪರೆಯಾದ ನಾಟಿ ವೈದ್ಯ ಪದ್ದತಿಯನ್ನು ಬೆಳಸಿ ನಮ್ಮ ಮುಂದಿನ ಪೀಳಿಗೆಗೆ ಉಳಿಸುವುದು ಮತ್ತು ಪ್ರಮುಖವಾಗಿ ಅವರು ಹೊಂದಿರುವ ಜ್ಞಾನವನ್ನು ದಾಖಲಿಸುವ ಕಾರ್ಯ ಆಗಬೇಕಾಗಿದೆ.
ಕೃತಜ್ಞತೆಗಳು:
ಪರಿಶಿಷ್ಟ ಪಂಗಡದ ನಾಟಿ ವೈದ್ಯರು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ಯ ವಿಶ್ವವಿಧ್ಯಾಲಯ ಗದಗನ ಪ್ರೂ. ವಿಷ್ಣುಕಾಂತ, ಎಸ್. ಚಟಪಲ್ಲಿ.(ಕುಲಪತಿಗಳು), ಪ್ರೂ. ಬಸವರಾಜಎಲ್. ಲಕ್ಕಣ್ಣವರ (ಕುಲಸಚಿವರು), ಶ್ರೀ ಸೋಮಲಿಂಗ ಕರಣಿ (ಸಮಾಜಕಾರ್ಯ ಸಂಯೋಜಕರು), ಶ್ರೀ ಲಿಂಗರಾಜ ನಿಡುವಣಿ (ಉಪನ್ಯಾಸಕರು/ ಮಾರ್ಗದರ್ಶಕರು).
ಆಧಾರ ಗ್ರಂಥಗಳು: