Deprecated: Required parameter $contactemail follows optional parameter $action in /home/u416200609/domains/tumbe.org/public_html/application/helpers/auth_helper.php on line 417
Tumbe Group of International Journals Tumbe Group of International Journals

Full Text


A Study on Socio-Economic and Occupational Status of Auto Rickshaw Drivers in Gadag City.

Nagaraj Hiremath1, Dr. Lingaraj Niduvani2

1Research Student, Department of Social Work, Karnataka State Rural Development and Panchayat Raj University Gadag, hiremathhn09@gmail.com  

2Lecturer and Research Guide, Department of Social Work, Karnataka State Rural Development and Panchayat Raj University Gadag, lingarajvn707@gmail.com

Abstract

The auto rickshaw industry provides a large number of employment opportunities to the unemployed in India. A majority of the country's population chooses to earn their livelihood by working in the informal sector with urban growth. There has been a significant increase in population in this sector which includes skilled, semi-skilled and unskilled persons. The traditionally oppressed, vulnerable and economically poor migrate from rural areas to cities for the opportunity to have relatively better income opportunities and better living conditions. The promise of a better tomorrow is to allow these people to work day and night without any restrictions on working hours and rest hours, with sufficient holidays and proper working conditions. Auto rickshaws are an important part of urban mobility and a step towards improving sustainable transport, as well as quality of life in Indian cities, auto rickshaw services bridge the gap between public transport and door-to-door services. It provides an alternative to private vehicles. The mechanized transport system in India began to play its role in the early nineteenth century. Road construction was considered a basic necessity of administration and for public convenience. The first motor vehicle imported into India in 1898 by the early rulers remained a novelty and luxury reserved for the wealthy class. In the early years other forms of road transport like bullock carts, horse drawn carts, palkans etc., the privileged class of the poor, had a limited range of operations with respect to the area involved, the number of persons carried and the amount of goods carried. Useful Twentieth century entered with it transportation.

Keywords: Rickshaw industry, Transportation, Governing Body, employment, Evaluation.


ಗದಗ ನಗರದ ಆಟೋ ರಿಕ್ಷಾ ಚಾಲಕರ ಸಮಾಜೋ-ಆರ್ಥಿಕ ಮತ್ತು ವೃತ್ತಿಯ ಸ್ಥಿತಿಗತಿಯ ಕುರಿತು ಒಂದು ಅಧ್ಯಯನ.

ನಾಗರಾಜ ಹಿರೇಮಠ, ಸಂಶೋಧನಾ ವಿಧ್ಯಾರ್ಥಿ, ಸಮಾಜಕಾರ್ಯ ವಿಭಾಗ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ.

   ಡಾ. ಲಿಂಗರಾಜ ನಿಡುವಣಿ, ಉಪನ್ಯಾಸಕರು ಮತ್ತು ಮಾರ್ಗದರ್ಶಕರು, ಸಮಾಜಕಾರ್ಯ ವಿಭಾಗ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ.

ಅಮೂರ್ತ

ಆಟೋ ರಿಕ್ಷಾವು ಉದ್ಯಮವು ಭಾರತದಲ್ಲಿ ನಿರುದ್ಯೋಗಿಗಳಿಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.  ದೇಶದ ಬಹುಪಾಲು ಜನಸಂಖ್ಯೆಯು ನಗರ ಬೆಳವಣಿಗೆಯೊಂದಿಗೆ ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಆಯ್ಕೆ ಮಾಡಿಕೊಳ್ಳುತ್ತರೆ. ನುರಿತ, ಅರೆಕೌಶಲ್ಯ ಮತ್ತು ಕೌಶಲ್ಯ ರಹಿತ ವ್ಯಕ್ತಿಗಳನ್ನು ಒಳಗೊಂಡಿರುವ ಈ ವಲಯದಲ್ಲಿ ಜನಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಸಾಂಪ್ರದಾಯಿಕವಾಗಿ ತುಳಿತಕ್ಕೊಳಗಾದ, ದುರ್ಬಲ ಮತ್ತು ಆರ್ಥಿಕವಾಗಿ ಬಡವರು ಮತ್ತು ತುಲನಾತ್ಮಕವಾಗಿ ಉತ್ತಮ ಆದಾಯದ ಅವಕಾಶಗಳು ಮತ್ತು ಉತ್ತಮ ಜೀವನ ಪರಿಸ್ಥಿತಿಗಳನ್ನು ಹೊಂದಲು ಅವಕಾಶಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೋಗುತ್ತಾರೆ. ಉತ್ತಮ ನಾಳೆಯ ಭರವಸೆಯು ಈ ಜನರನ್ನು ಕೆಲಸದ ಸಮಯ ಮತ್ತು ವಿಶ್ರಾಂತಿ ಗಂಟೆಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲದೆ ಹಗಲು ರಾತ್ರಿ ಕೆಲಸ ಮಾಡಲು ಸಾಕಷ್ಟು ರಜಾದಿನಗಳು ಮತ್ತು ಸರಿಯಾದ ಕೆಲಸದ ಪರಿಸ್ಥಿತಿಗಳಿಲ್ಲದೆ ಕೆಲಸ ಮಾಡುತ್ತಾರೆ. ಆಟೋ ರಿಕ್ಷಾಗಳು  ನಗರ ಚಲನಶೀಲತೆಯ ಪ್ರಮುಖ ಭಾಗವಾಗಿದೆ ಮತ್ತು ಸುಸ್ಥಿರ ಸಾರಿಗೆಯನ್ನು ಸುಧಾರಿಸುವ ಒಂದು ಹೆಜ್ಜೆ, ಹಾಗೆಯೇ ಭಾರತೀಯ ನಗರಗಳಲ್ಲಿ ಜೀವನದ ಗುಣಮಟ್ಟ  ಆಟೋ ರಿಕ್ಷಾ ಸೇವೆಗಳನ್ನು  ಸಾರ್ವಜನಿಕ ಸಾರಿಗೆ ಮತ್ತು ಮನೆ-ಮನೆ ಸೇವೆಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಇದು ಖಾಸಗಿ ವಾಹನಗಳಿಗೆ ಪರ್ಯಾಯವನ್ನು ಒದಗಿಸುತ್ತದೆ. ಭಾರತದಲ್ಲಿ ಯಾಂತ್ರೀಕೃತ ಸಾರಿಗೆ ವ್ಯವಸ್ಥೆಯು ಆಟವಾಡಲು ಪ್ರಾರಂಭಿಸಿತು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅದರ ಪಾತ್ರ. ರಸ್ತೆ ನಿರ್ಮಾಣವನ್ನು ಆಡಳಿತದ ಮೂಲಭೂತ ಅವಶ್ಯಕತೆ ಎಂದು ಪರಿಗಣಿಸಲಾಗಿದೆ ಮತ್ತು ಸಾರ್ವಜನಿಕ ಅನುಕೂಲಕ್ಕಾಗಿ ಆರಂಭಿಕ ಆಡಳಿತಗಾರರು ಮೊದಲ ಮೋಟಾರ್ 1898 ರಲ್ಲಿ ಭಾರತಕ್ಕೆ ಆಮದು ಮಾಡಿಕೊಂಡ ವಾಹನವು ಉಳಿದುಕೊಂಡಿತು ನವೀನತೆ ಮತ್ತು ಐರಾಮಿ ಶ್ರೀಮಂತ ವರ್ಗಕ್ಕೆ ಮೀಸಲಾಗಿದೆ. ಆರಂಭಿಕ ವರ್ಷಗಳಲ್ಲಿ ಎತ್ತಿನ ಬಂಡಿಗಳು, ಕುದುರೆ ಮುಂತಾದ ರಸ್ತೆ ಸಾರಿಗೆಯ ಇತರ ರೂಪಗಳು ಎಳೆದ ಗಾಡಿಗಳು, ಪಲ್ಕಿಗಳು ಇತ್ಯಾದಿ, ಬಡವರ ಸವಲತ್ತು ವರ್ಗ, ಪ್ರದೇಶಕ್ಕೆ ಸಂಬಂಧಿಸಿದಂತೆ ಸೀಮಿತ ವ್ಯಾಪ್ತಿಯ ಕಾರ್ಯಾಚರಣೆಗಳನ್ನು ಹೊಂದಿತ್ತು ಒಳಗೊಂಡಿರುವ, ಸಾಗಿಸುವ ವ್ಯಕ್ತಿಗಳ ಸಂಖ್ಯೆ ಮತ್ತು ಸರಕುಗಳ ಪ್ರಮಾಣ ಮೋಟಾರು ವಾಹನಗಳನ್ನು ಸಾಗಿಸಲಾಯಿತು, ಹೊಸ ರೂಪ ಮೋಡ್ ಆಯಿತು ಎರಡನೇ ದಶಕದಲ್ಲಿ ಮಾತ್ರ ಹೆಚ್ಚು ಹೆಚ್ಚು ಜನಪ್ರಿಯ ಮತ್ತು ಉಪಯುಕ್ತವಾಗಿದೆ ಇಪ್ಪತ್ತನೆ ಶತಮಾನ ಅದರೊಂದಿಗೆ ಸಾಗಣೆಯು ಪ್ರವೇಶಿಸಿತು.

ಸಾಹಿತ್ಯಾವಲೋಕನ

1.        ಸಿರಿಯಾಕ್ ಜೋಮಿ ಮತ್ತು ರೆಹಮನ್ ಅನೀಸ್ (2022) “ಇರತಿ ಪೇಟೆ ಪುರಸಭೆಯ ವಿಶೇಷ ಉಲ್ಲೇಖದೊಂದಿಗೆ ಆಟೋ ರಿಕ್ಷಾ ಚಾಲಕರ ಸಮಾಜೋ-ಆರ್ಥಿಕ ಸ್ಥಿತಿಗತಿಯ ಕುರಿತು ಅಧ್ಯಯನ” ಈ ಅಧ್ಯಯನವು ಆಟೋ ಚಾಲಕರ ಸಮಾಜೋ-ಆರ್ಥಿಕ ಸ್ಥಿತಿಗತಿಯ ಕುರಿತು ಅಧ್ಯಯನ ಮಾಡಲಾಗಿದೆ. ದತ್ತಾಂಶ ಸಂಗ್ರಹಿಸಲು ಪ್ರಾಥಮಿಕ & ಮಾಧ್ಯಮಿಕ ವಿಧಾನ ದಿಂದ ದತ್ತಾಂಶ ಸಂಗ್ರಹಿಸಲಾಗಿದೆ. ಸಂದರ್ಶನ ಅನುಸೂಚಿಯ ಮೂಲಕ ಮತ್ತು ದೂರವಾಣಿ ಸಂದರ್ಶನ ಮೂಲಕ 50 ಆಟೋರಿಕ್ಷಾ ಚಾಲಕರನ್ನು ಆಯ್ಕ ಮಾಡಿಕೊಂಡು ದತ್ತಾಂಶ ಸಂಗ್ರಹಿಸಲಾಗಿದೆ. ಈ ಅಧ್ಯಯನ ದಿಂದ ಆಟೋ-ರಿಕ್ಷಾ ಚಾಲಕರ ಜೀವನ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ. ಆಟೋ ಚಾಲಕ ಅಭಿವೃದ್ಧಿಗೆ ಸರ್ಕಾರದಿಂದ ಯೋಜನೆಗಳನ್ನು ಜಾರಿಗೊಳಿಸುವುದು ಮತ್ತು ಒಕ್ಕೂಟದ ಸದಸ್ಯತ್ವದ ಮೂಲಕ ಕಲ್ಯಾಣ ಚಟುವಟಿಕೆಗಳು ಹೆಚ್ಚಾಗಬೇಕು ಇದರ ಮೂಲಕ ಜೀವನ ಗುಣಮಟ್ಟ ಸುಧಾರಿಸಲು ಸಹಾಯಕವಾಗುತ್ತದೆ ಎಂದು ಸಲಹೆಗಳನ್ನು ನೀಡಿದ್ದಾರೆ.

2.       ರವಿ ರಮಾವತ್(2022) “ತೆಲಂಗಾಣ ರಾಜ್ಯದ ಮಹಬೂಬಾದನ ಪಟ್ಟಣದ ಆಟೋ-ರಿಕ್ಷಾ ಚಾಲಕರ ಆರ್ಥಿಕ ಚಟುವಟಿಕೆಯ ಅಧ್ಯಯನ ಮಾಡುತ್ತದೆ. ಪ್ರಸುತ್ತ ಲೇಖನವು ಮಹಬೂಬಾದನಲ್ಲಿ ಆಟೋ ರಿಕ್ಷಾ ಚಾಲಕರ ಆರ್ಥಿಕ ಚಟುವಟಿಕೆಯ ಅಧ್ಯಯನ ಮಾಡುತ್ತದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿಧಾನ ಗಳಿಂದ ದತ್ತಾಂಶ ಸಂಗ್ರಹಿಸಲಾಗಿದೆ. ಅಧ್ಯಯನವು ಮಾದರಿಯನ್ನಾಗಿ 100 ಆಟೋ-ರಿಕ್ಷಾ ಚಾಲಕ ರಿಂದ ಪ್ರಶ್ನಾವಳಿ ಸಂದರ್ಶನ ಮೂಲಕ ದತ್ತಾಂಶ ಸಂಗ್ರಹಿಸಲಾಗಿದೆ. ಯಾದೃಚ್ಛಿಕವಾಗಿ ಆಯ್ಕೆ ಮಾಡಿ ದತ್ತಾಂಶ ಪಡೆಯಲಾಗಿದೆ. ಅದರಲ್ಲಿ ಸುಮಾರು ಪ್ರತಿ ಶತ ಪ್ರತಿಕ್ರಿಯಿಸಿದವರು ಕೃಷಿಯನ್ನು ತಮ್ಮ ಮುಖ್ಯ ಉದ್ಯೋಗವನ್ನು ತೆಗೆದು ಕೊಂಡಿದ್ದಾರೆ, 100 ಚಾಲಕರಲ್ಲಿ 78 ಮಂದಿ ಸ್ವಂತ ಆಟೋ-ರಿಕ್ಷಾ ಹೊಂದಿದ್ದಾರೆ ಎಂದು ಅಧ್ಯಯನ ದಿಂದ ತಿಳಿದು ಬಂದಿದೆ. ಆದ್ದರಿಂದ ಸಾರ್ವಜನಿಕ ಬ್ಯಾಂಕಗಳ ಸಾಲ ಸೌಲಭ್ಯ ಒದಗಿಸಬೇಕು, ಸರ್ಕಾರದ ಸಹಾಯಧನ ಯೋಜನೆ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದ್ದಾರೆ.

3.       ಪಾಟೀಲ ಪಿ ಅಮರೇಶ (2022) “ಉತ್ತರ ಕರ್ನಾಟಕದ ಬೆಳಗಾವಿಯಲ್ಲಿರುವ ಆಟೋ-ರಿಕ್ಷಾ ಚಾಲಕರಲ್ಲಿ ತಂಬಾಕು ಸೇವನೆಯ ಬಗ್ಗೆ ಜಾಗೃತಿ ಕುರಿತು ಒಂದು ಅಧ್ಯಯನ” ಈ ಅಧ್ಯಾಯನವು ಉತ್ತರ ಕರ್ನಾಟಕದ ಬೆಳಗಾವಿಯಲ್ಲಿರುವ ಆಟೋ-ರಿಕ್ಷಾ ಚಾಲಕರಲ್ಲಿ ತಂಬಾಕು ಬಳಕೆಯ ಬಗ್ಗೆ ಅರಿವಿನ ಮಟ್ಟವನ್ನು ತಿಳಿದುಕೊಳ್ಳುವುದು ಮತ್ತು ಮಾದರಿಯನ್ನಾಗಿ 300 ಆಟೋ ಚಾಲಕರನ್ನು ಆಯ್ಕ ಮಾಡಿಕೊಳ್ಳಲಾಗಿದೇ. ಅಲ್ಲದೇ ಸಂದರ್ಶನ ಅನುಸೂಚಿಗಾಗಿ ಪ್ರಶ್ನಾವಳಿಯನ್ನು ಗೋಬಲ್ ಅಡ್ಡಟ್ ಟೋಬ್ಯಾಕೋ ಸರ್ವೆಯ ಪ್ರಶ್ನೆಗಳನ್ನು ಬಳಸಿಕೊಂಡು ದತ್ತಾಂಶವನ್ನು ಸಂಗ್ರಹಿಸಲಾಗಿದೇ. ಈ ಸಂಶೋಧನೆಯ ಫಲಿತಾಂಶವು 88.66% ತಂಬಾಕು ಆರೋಗ್ಯದ ಮೇಲೆ ಗಂಬೀರವಾದ ಪರಿಣಾಮ ಬೀರುತ್ತದೆ ಎಂಬುವುದು ತಿಳಿದುಕೊಂಡಿದ್ದಾರೆ. ಅದರಲ್ಲಿ 72.66% ಜನರಿಗೆ ಸಾಮಾನ್ಯವಾಗಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದನ್ನು ತಿಳಿದುಕೊಂಡಿದ್ದಾರೆ.

4.       ಮೋಹನ್ ಶಕೀಲ್, ಮಾರ್ಗರೇಟ್ ಬಿನು, ಎ ಮಂಜುಳಾ (2022) “ಉಡುಪಿ ಜಿಲ್ಲೆಯ ಆಟೋ-ರಿಕ್ಷಾ ಚಾಲಕರ ತಂಬಾಕು ಸೇವನೆ ಮತ್ತು ಅದರ ಬಳಕೆಯ ಕುರಿತು ಒಂದು ಅಧ್ಯಯನ” ಈ ಅಧ್ಯಯನವು ತಂಬಾಕು ಬಳಕೆ ಮತ್ತು ತಂಬಾಕು ಬಗೆಗಿನ ಗ್ರಹಿಕೆ ತಿಳಿದು ಕೊಳ್ಳವುದಾಗಿದೆ. ಮಾದರಿಯನ್ನಾಗಿ 161 ಆಟೋ-ರಿಕ್ಷಾ ಚಾಲಕ ರಿಂದ ಅಡ್ಡ-ವಿಭಾಗದ ಅಧ್ಯಯನ ದಿಂದ ದತ್ತಾಂಶ ಸಂಗ್ರಹಿಸಲಾಗಿದೆ. ಅದರಲ್ಲಿ 62% ಆಟೋ-ರಿಕ್ಷಾ ಚಾಲಕರು ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಬಳಕೆದಾರರು, 24% ಹೊಗೆ ರಹಿತ ತಂಬಾಕು ಉತ್ಪನ್ನಗಳನ್ನು ಬಳಕೆಮಾಡುತ್ತಿದ್ದಾರೆ, 73% ದೈನಂದಿನ ತಂಬಾಕು ಬಳಕೆದಾರರು, 57% ಆಟೋ-ರಿಕ್ಷಾ ಚಾಲಕರು ತಂಬಾಕು ತ್ಯಜಿಸಲು ಆಸಕ್ತಿ ಹೊಂದಿಲ್ಲ ಎಂಬುದು ಕಂಡು ಬಂದಿದೆ. ಇದರಿಂದ ಸರ್ಕಾರವು ತಂಬಾಕು ಸೇವನೆಯ ನಿಯಂತ್ರಿಸಲು ಕಾರ್ಯಕ್ರಮಗಳನ್ನು, ತಂಬಾಕು ಸೇವನೆಯ ನಿಯಂತ್ರಿಸಲು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕೆಂದು ಸಲಹೆಗಳನ್ನು ನೀಡಿದ್ದಾರೆ.

ಸಂಶೋಧನಾ ಅಧ್ಯಯನದ ಉದ್ದೇಶಗಳು

  • ಆಟೋ ರಿಕ್ಷಾ ಚಾಲಕರ ಸಾಮಾಜಿಕ ಸ್ಥಿತಿಯನ್ನು ತಿಳಿಯುವುದು.
  • ಆಟೋ ರಿಕ್ಷಾ ಚಾಲಕರ ಆರ್ಥಿಕ ಸ್ಥಿತಿಯನ್ನು ತಿಳಿಯುವುದು.
  • ಆಟೋ ರಿಕ್ಷಾ ಚಾಲಕರ ವೃತ್ತಿಯ ಸ್ಥಿತಿಯನ್ನು ತಿಳಿಯುವುದು.
  • ಬಂದಂತಹ ಸಂಶೋಧನಾ ಫಲಿತಾಂಶಗಳಿಂದ ಸೂಕ್ತ ಸಲಹೆಗಳನ್ನು ನೀಡುವ ಉದ್ದೇಶ.

ಸಂಶೋಧನಾ ವಿಧಾನ

ಈ ಸಂಶೋಧನೆಯಲ್ಲಿ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಸಂಶೋಧನ ವಿಧಾನವನ್ನು ಬಳಸಲಾಗಿದೆ.

ಸಂಶೋಧನಾ ವಿನ್ಯಾಸ: ಈ ಸಂಶೋಧನೆಯಲ್ಲಿ ವಿವರಣಾತ್ಮಕವಾದ ಸಂಶೋಧನ ವಿನ್ಯಾಸವನ್ನು ಬಳಸಲಾಗಿದೆ.

ಸಂಶೋಧನಾ ಮಾದರಿ ವಿಧಾನ ಮತ್ತು ನಮೂನೆ: ಈ ಸಂಶೋಧನ ಅಧ್ಯಯನಕ್ಕೆ ಉದ್ದೇಶಪೂರಿತ ಮಾದರಿ ವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದು, ಈ ನಮೂನೆಯನ್ನು ಸಾಮಾಜಿಕ ಸಂಶೋಧನೆಯಲ್ಲಿ ಅನುಸರಿಸುವುದು, ಸಾಮಾನ್ಯವಗಿ ಸಾಮಾಜಿಕ ಸಂಶೋಧನೆ ಎಂಬುದು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಆದ್ದರಿಂದ ಸರಳ ಸಂಭವನಿಯವಲ್ಲದ ನಮೂನೆ ಮಾದರಿಯನ್ನು ಆರಿಸಿಕೊಂಡಿದೆ.

ಮಾದರಿ ನಮೂನೆ ಆಯ್ಕೆಯ ಗಾತ್ರ: ಈ ಸಂಶೋಧನಾ ಅಧ್ಯಯನದ ಗಾತ್ರ 104 ನಮೂನೆಗಳನ್ನು ಅಸಂಭವನೀಯ ನಮೂನೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ.

ದತ್ತಾಂಶ ಸಂಗ್ರಹಣೆಯ ಮೂಲಗಳು

ಪ್ರಾಥಮಿಕ ಮೂಲಗಳು: ಸಂದರ್ಶನ ಅನುಸೂಚಿ, ಅವಲೋಕನ/ವಿಕ್ಷಣೆ

ಮಾದ್ಯಮಿಕ ಮೂಲಗಳು: ಸಾಹಿತ್ಯ ವಿಮರ್ಶೆ, ಲೇಖನಗಳ, ಸಂಶೋಧನ ಪತ್ರಿಕೆಗಳು, ಅಧ್ಯಯನಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳು, ವೆಬ್ ಸೈಟ್/ ಅಂತರ್ಜಾಲ

ಆಟೋ ರಿಕ್ಷಾದ ಇತಿಹಾಸ

ರಿಕ್ಷಾ ಮೂಲತಃ ಎರಡು ಅಥವಾ ಮೂರು ಚಕ್ರಗಳ ಪ್ರಯಾಣಿಕ ಸಾಗಿಸುವುದನ್ನು ಸೂಚಿಸುತ್ತದೆ, ಎಳೆಯುವ ರಿಕ್ಷಾ, ಇದನ್ನು ಸಾಮಾನ್ಯವಾಗಿ ಒಬ್ಬ ಪ್ರಯಾಣಿಕನನ್ನು ಹೊತ್ತೊಯ್ಯುವ ವ್ಯಕ್ತಿಯಿಂದ ಎಳೆಯಲಾಗುತ್ತದೆ. ಈ ಪದದ ಮೊದಲ ಬಳಕೆಯು 1879 ರಲ್ಲಿ ಆಗಿತ್ತು. ಕಾಲಾನಂತರದಲ್ಲಿ, ಸೈಕಲ್ ರಿಕ್ಷಾಗಳು, ಆಟೋ ರಿಕ್ಷಾಗಳು ಮತ್ತು ಎಲೆಕ್ಟ್ರಿಕ್ ರಿಕ್ಷಾಗಳು ಆವಿಷ್ಕರಿಸಲ್ಪಟ್ಟವು ಮತ್ತು ಪ್ರವಾಸೋದ್ಯಮದಲ್ಲಿ ಅವುಗಳ ಬಳಕೆಗಾಗಿ ಕೆಲವು ವಿನಾಯಿತಿಗಳೊಂದಿಗೆ ಮೂಲ ಎಳೆಯುವ ರಿಕ್ಷಾಗಳನ್ನು ಬದಲಾಯಿಸಿವೆ. ಎಳೆದ ರಿಕ್ಷಾಗಳು 19 ನೇ ಶತಮಾನದಲ್ಲಿ ಏಷ್ಯನ್ ನಗರಗಳಲ್ಲಿ ಜನಪ್ರಿಯ ಸಾರಿಗೆ ಮತ್ತು ಪುರುಷ ಕಾರ್ಮಿಕರಿಗೆ ಉದ್ಯೋಗದ ಮೂಲವನ್ನು ಸೃಷ್ಟಿಸಿದವು. ಅವರ ನೋಟವು ಬಾಲ್-ಬೇರಿಂಗ್ ಸಿಸ್ಟಮ್ಗಳ ಹೊಸದಾಗಿ ಸ್ವಾಧೀನಪಡಿಸಿಕೊಂಡ ಜ್ಞಾನಕ್ಕೆ ಸಂಬಂಧಿಸಿದೆ. ಕಾರುಗಳು, ರೈಲುಗಳು ಮತ್ತು ಇತರ ರೀತಿಯ ಸಾರಿಗೆಗಳು ವ್ಯಾಪಕವಾಗಿ ಲಭ್ಯವಾಗುತ್ತಿದ್ದಂತೆ ಅವರ ಜನಪ್ರಿಯತೆಯು ಕುಸಿಯಿತು. ಆಟೋ ರಿಕ್ಷಾಗಳು 21 ನೇ ಶತಮಾನದಲ್ಲಿ ಕೆಲವು ನಗರಗಳಲ್ಲಿ ಟ್ಯಾಕ್ಸಿಗಳಿಗೆ ಪರ್ಯಾಯವಾಗಿ ಹೆಚ್ಚು ಜನಪ್ರಿಯವಾಗುತ್ತಿವೆ ಏಕೆಂದರೆ ಅವುಗಳ ಬಾಡಿಗೆ ಕಡಿಮೆ.

ಆಟೋ ರಿಕ್ಷಾ ಪದದ ಹುಟ್ಟು

ರಿಕ್ಷಾವು ಜಪಾನೀಸ್ ಪದ ಜಿನ್ರಿಕಿಶಾ (ಜಿನ್ = ಮಾನವ, ರಿಕಿ = ಶಕ್ತಿ, ಶಾ = ವಾಹನ) ದಿಂದ ಹುಟ್ಟಿಕೊಂಡಿದೆ, ಇದರ ಅರ್ಥ "ಮಾನವ-ಚಾಲಿತ ವಾಹನ".

ಗದಗ ನಗರದ ಆಟೋ ರಿಕ್ಷಾ ಚಾಲಕರ ಸಮಾಜೋ-ಆರ್ಥಿಕ ಮತ್ತು ವೃತ್ತಿಯ ಸ್ಥಿತಿಗತಿ ಕುರಿತು ಒಂದು ಅಧ್ಯಯನ ಈ ಒಂದು ಸಂಶೋಧನೆಗಾಗಿ ಪಡೆದುಕೊಂಡ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಕೋಷ್ಟಕ: 4.1 ಮಾಹಿತಿದಾರರ ವಯಸ್ಸಿನ ಕುರಿತಾದ ಮಾಹಿತಿ

ಕ್ರ ಸಂ

ವಯಸ್ಸು

ಮಾಹಿತಿದಾರರು ಸಂಖ್ಯೆ

ಶೇಖಡವಾರು

1

18-25

9

8.7

2

26-35

42

40.4

3

36-45

35

33.7

4

46-55

16

15.4

5

55 above

2

1.9

ಒಟ್ಟು

104

100.0

 

 

ನಕ್ಷೆ: 4.1 ಮಾಹಿತಿದಾರರ ವಯಸ್ಸಿನ ಕುರಿತಾದ ಮಾಹಿತಿ

ಈ ಕೋಷ್ಟಕವು ಮಾಹಿತಿದಾರರ ವಯಸ್ಸಿನ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 8.7% ರಷ್ಟು 18ರಿಂದ25, 40.4% ರಷ್ಟು 26ರಿಂದ35, 33.7% ರಷ್ಟು 36ರಿಂದ45, 15.4% ರಷ್ಟು 46ರಿಂದ55, 1.9% ರಷ್ಟು 55 ಕ್ಕಿಂತ ಹೆಚ್ಚು ರಷ್ಟು ಇದ್ದಾರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ 26ರಿಂದ45 ವಯಸ್ಸಿನವರು ಅತಿ ಹೆಚ್ಚಾಗಿದ್ದು ಅವರಲ್ಲಿ ಕುಟುಂಬದ ನಿರ್ವಹಿಸುವ ಜವಾಬ್ದಾರಿ ಇರುವ ಕಾರಣ ಈ ವಯೋಮಾನದವರನ್ನು ಹೆಚ್ಚಾಗಿ ಈ ವೃತ್ತಿಯನ್ನು ಕಾಣಬಹುದಾಗಿದೆ.

ಕೋಷ್ಟಕ: 4.2 ಮಾಹಿತಿದಾರರ ಶಿಕ್ಷಣ ಕುರಿತಾದ ಮಾಹಿತಿ

ಕ್ರ ಸಂ

ಶಿಕ್ಷಣ

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

ಅನಕ್ಷರತೆ

6

5.8

2

ಪ್ರಾಥಮಿಕ

32

30.8

3

ಫ್ರೌಡ

44

42.3

4

ಪದವಿ ಪೂರ್ವ

18

17.3

5

ತಾಂತ್ರೀಕ

4

3.8

ಒಟ್ಟು

104

100.0

 

 

ನಕ್ಷೆ: 4.2 ಮಾಹಿತಿದಾರರ ಶಿಕ್ಷಣ ಕುರಿತಾದ ಮಾಹಿತಿ

ಈ ಕೋಷ್ಟಕವು ಮಾಹಿತಿದಾರರ ಶಿಕ್ಷಣ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 5.8% ರಷ್ಟು ಅನಕ್ಷರಸ್ಥರು, 30.8% ರಷ್ಟು ಪ್ರಾಥಮಿಕ ಶಿಕ್ಷಣ, 42.3% ರಷ್ಟು ಫ್ರೌಡ ಶಿಕ್ಷಣ, 17.3% ರಷ್ಟು ಪದವಿ ಪೂರ್ವ, 3.8% ರಷ್ಟು ತಾಂತ್ರೀಕ ಶಿಕ್ಷಣವನ್ನು ಹೊಂದಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಕಾರಣ ಇದರಲ್ಲಿ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಹೊಂದಿದವರು  ಅತಿ ಹೆಚ್ಚುಗಿದು ಅವರು ಬಡತನ ಕಾರಣದಿಂದ ಶಿಕ್ಷಣವನ್ನು ಬಿಟ್ಟು ಈ ವೃತ್ತಿಯನ್ನು ಪ್ರಾರಂಭಿಸಿರುತ್ತಾರೆ.

ಕೋಷ್ಟಕ: 4.13 ಮಾಹಿತಿದಾರರ ಪಡಿತರ ಚೀಟಿ ಕುರಿತಾದ ಮಾಹಿತಿ

ಕ್ರ ಸಂ

ಪಡಿತರ ಚೀಟಿ

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

ಹೌದು

95

91.3

2

ಇಲ್ಲ

9

8.7

ಒಟ್ಟು

104

100.0

 

 

ಈ ಕೋಷ್ಟಕವು ಮಾಹಿತಿದಾರರ ಪಡಿತರ ಚೀಟಿ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 91.3% ರಷ್ಟು ಪಡಿತರ ಚೀಟಿಯನ್ನು ಹೊಂದಿದ್ದು, 8.7% ರಷ್ಟು ಪಡಿತರ ಚೀಟಿಯನ್ನು ಹೊಂದಿಲ್ಲಾ ಕಾರಣ ಸರ್ಕಾರದ ಯೋಜನೆಯನ್ನು ಪಡೆದುಕೊಂಡಿದ್ದಾರೆ ಇನ್ನು ಕೆಲವರು ಮಾತ್ರ ಪಡೆದುಕೊಂಡಿಲ್ಲಾ ಈ ಕೋಷ್ಟಕದಿಂದ ತಿಳಿಯಬಹುದು.

ಕೋಷ್ಟಕ: 4.14 ಮಾಹಿತಿದಾರರ ಆಟೋ ಚಾಲಕರ ಸಂಘದಲ್ಲಿನ ಸದಸ್ಯತ್ವ ಕುರಿತಾದ ಮಾಹಿತಿ

ಕ್ರ ಸಂ

ಸಂಘ ಸದಸ್ಯತ್ವ

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

ಹೌದು

95

91.3

2

ಇಲ್ಲ

9

8.7

ಒಟ್ಟು

104

100.0

 

 

ಈ ಕೋಷ್ಟಕವು ಮಾಹಿತಿದಾರರ ಸಂಘದ ಸದಸ್ಯತ್ವ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 91.3% ರಷ್ಟು ಸಂಘದ ಸದಸ್ಯತ್ವ ಹೊಂದಿದ್ದು, 8.7% ರಷ್ಟು ಸಂಘದ ಸದಸ್ಯತ್ವ ಹೊಂದಿಲ್ಲಾ ಕಾರಣ ಪ್ರತಿಯೊಬ್ಬರು ಆಟೋ ಚಾಲಕರ ಸಂಘದಲ್ಲಿ ಸೇರಿದರೆ ಮಾತ್ರ ಅವರಿಗೆ ಆಟೋ ಸ್ಟ್ಯಾಂಡಿನಲ್ಲಿ ಬಾಡಿಗೆ ಹೊಡೆಯಲು ಅವಕಾಶವಿರುತ್ತದೆ ಮತ್ತು ಸಂಘ ಸೇವೆಗಳನ್ನು ಪಡೆಯಲು ಸಂಘ ಸದಸ್ಯತ್ವ ಪಡೆದಿದ್ದಾರೆ ಎಂಬುದನ್ನು ಈ ಕೋಷ್ಟಕದಿಂದ ತಿಳಿಯಬಹುದು.

ಕೋಷ್ಟಕ: 4.17 ಮಾಹಿತಿದಾರರ ಸಾಮಾಜಿಕ ಭದ್ರತೆ ಕುರಿತಾದ ಮಾಹಿತಿ

ಕ್ರ ಸಂ

ಸಾಮಾಜಿಕ ಭದ್ರತೆ

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

ಆಯು್ಮನ್ ಕಾರ್ಡ

36

34.6

2

ಇಶ್ರಮ ಕಾರ್ಡ

8

7.7

3

ಯಾವುದು ಅಲ್ಲ

60

57.7

ಒಟ್ಟು

104

100.0

 

 

ಈ ಕೋಷ್ಟಕವು ಮಾಹಿತಿದಾರರ ಸಾಮಾಜಿಕ ಭದ್ರತೆಯ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 34.6% ರಷ್ಟು ಆಯುಷ್ಮಾನ್ ಕಾರ್ಡ, 7.7% ರಷ್ಟು ಇಶ್ರಮ ಕಾರ್ಡ, 57.7% ರಷ್ಟು ಯಾವುದು ಅಲ್ಲ ಇಲ್ಲಿ ಗಮನಿಸಬೇಕಾದ ವಿಷಯವೆನೆಂದರೆ ಸಮಾಜಿಕ ಭದ್ರತೆಯ ಯೋಜನೆಗಳ ಮಾಹಿತಿ ಕಡಿಮೆ ಇರುವುದರಿಂದ ಸೌಲಭ್ಯ ಪಡೆಯವನ್ನು ಅತ್ಯಂತ ಕಡಿಮೆ ಜನರು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಈ ಕೋಷ್ಟಕದಿಂದ ತಿಳಿಯಬಹುದಾಗಿದೆ.

ಕೋಷ್ಟಕ: 4.19 ಮಾಹಿತಿದಾರರ ಅಭ್ಯಾಸದ ಕುರಿತಾದ ಮಾಹಿತಿ

ಕ್ರ ಸಂ

ಅಭ್ಯಾಸದ

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

ಪಾನ

10

9.6

2

ತಂಬಾಕು

4

3.8

3

ಮಧ್ಯಪಾನ

3

2.9

4

ಗುಟಕಾ

50

48.1

5

ದೂಮಪಾನ

4

3.8

6

ಅನ್ವಹಿಸುವುದಿಲ್ಲ

33

31.7

ಒಟ್ಟು

104

100.0

 

 

ನಕ್ಷೆ: 4.19 ಮಾಹಿತಿದಾರರ ಅಭ್ಯಾಸದ ಕುರಿತಾದ ಮಾಹಿತಿ

ಈ ಕೋಷ್ಟಕವು ಮಾಹಿತಿದಾರರ ಅಭ್ಯಾಸದ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 96% ರಷ್ಟು ಪಾನ, 3.8% ತಂಬಾಕು, 2.9% ರಷ್ಟು ಮಧ್ಯಪಾನ, 48.1% ಗುಟಕಾ, 3.8% ದೂಮಪಾನ, 31.7% ರಷ್ಟು ಯಾವುದೇ ಅಭ್ಯಸವಿಲ್ಲಾ ಇಲ್ಲಿ ಗಮನಿಸಬೇಕಾದ ವಿಷಯವೆದರೆ ಅತಿ ಹೆಚ್ಚು ಜನರು ಗುಟಕಾವನ್ನು ಅಭ್ಯಾಸ ಮಾಡಿಕೊಂಡಿದ್ದಾರೆ  ಎಂಬುದು ಈ ಕೋಷ್ಟಕದಿಂದ ತಿಳಿಯಬಹುದು.

ಕೋಷ್ಟಕ: 4.28 ಮಾಹಿತಿದಾರರ ನೀವು ಯಾವಾಗಿನಿಂದ ಈ ವೃತ್ತಿಯನ್ನು ಪ್ರಾರಂಭಿಸಿದ್ದಿರಾ ಕುರಿತಾದ ಮಾಹಿತಿ

          ಕ್ರ ಸಂ

ವೃತ್ತಿಯ ಪ್ರಾರಂಭ

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

ಬಾಲ್ಯದಿಂದ

12

11.5

2

ಯವನದಿಂದ

8

7.7

3

ಶಿಕ್ಷಣ ನಂತರ

68

65.4

4

ಮಧುವೆ ನಂತರ

16

15.4

ಒಟ್ಟು

104

100.0

 

 

          ಈ ಕೋಷ್ಟಕವು ಮಾಹಿತಿದಾರರ ವೃತ್ತಿಯ ಪ್ರಾರಂಭದ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 11.5% ರಷ್ಟು ಬಾಲ್ಯದಿಂದ, 7.7% ರಷ್ಟು ಯವನದಿಂದ, 65.4 ಶಿಕ್ಷಣದ ನಂತರ, 15.4 ಮಧುವೆ ನಂತರ ಈ ವೃತ್ತಿಯನ್ನು ಬಡತನದ ಕಾರಣದಿಂದ ಮತ್ತು ಯುವಕರು ಆಟೋ ರಿಕ್ಷಾ ಚಾಲನೆಗೆ ಆಕರ್ಶಿತರಾಗುತ್ತಿದ್ದಾರೆ ಎಂಬುವುದು ಕಂಡು ಬಂದಿದೆ.

ಕೋಷ್ಟಕ: 4.33 ಮಾಹಿತಿದಾರರ ವರ್ಷದಿಂದ ಆಟೋ ಚಾಲನೆ ಕುರಿತಾದ ಮಾಹಿತಿ

ಕ್ರ ಸಂ

ಆಟೋ ಚಾಲನೆ

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

1-5

19

18.3

2

6-10

26

25.0

3

11-15

20

19.2

4

15-20

20

19.2

5

25 above

19

18.3

ಒಟ್ಟು

104

100.0

 

 

ಈ ಕೋಷ್ಟಕವು ಮಾಹಿತಿದಾರರ ಎಷ್ಟು ವರ್ಷ ದಿಂದ ಆಟೋ ಚಾಲನೆ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 18.3% ರಷ್ಟು 1-5, 25.0% ರಷ್ಟು 6-10, 19.2% ರಷ್ಟು 11-15, 19.2% ರಷ್ಟು 15-20, 18.2% ರಷ್ಟು 25 ಕ್ಕಿಂತ ಹೆಚ್ಚಿನ ವರ್ಷದಿಂದ ಆಟೋ ಚಾಲನೆ ಮಾಡುತ್ತಿದ್ದಾರೆ ಕಾರಣ ಇದರಿಂದ ಜೀವನ ನೆಡೆಸಲು ಸಾಧ್ಯವಾಗುತ್ತದೆ ಅವರು ಈ ವೃತ್ತಿಯ ಮೇಲೆ ಅವಲಂಬಿತರಾಗಿದ್ದಾರೆ ಎಂದು ಈ ಕೋಷ್ಟಕದಿಂದ ತಿಳಿಯಬಹುದು.

ಕೋಷ್ಟಕ: 4.40 ಮಾಹಿತಿದಾರರ ಶಾಲಾ ಬಾಡಿಗೆ ಕುರಿತಾದ ಮಾಹಿತಿ

ಕ್ರ ಸಂ

ಶಾಲಾ ಬಾಡಿಗೆ

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

ಹೌದು

33

31.7

2

ಇಲ್ಲ

71

68.3

ಒಟ್ಟು

104

100.0

 

 

ನಕ್ಷೆ: 4.40 ಮಾಹಿತಿದಾರರ ಶಾಲಾ ಬಾಡಿಗೆ ಕುರಿತಾದ ಮಾಹಿತಿ

ಈ ಕೋಷ್ಟಕವು ಮಾಹಿತಿದಾರರ ಶಾಲಾ ಬಾಡಿಗೆ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 31.7% ರಷ್ಟು ಶಾಲಾ ಬಾಡಿಗೆ ಹೊಡೆಯುತ್ತಿದ್ದಾರೆ, 68.3% ರಷ್ಟು ಶಾಲಾ ಬಾಡಿಗೆ ಹೊಡೆಯುತ್ತಿಲ್ಲಾ ಕಾರಣ ಮಕ್ಕಳನ್ನು ನಿಬಾಹಿಸುವುದು ತುಂಬಾ ಕಷ್ಟ ಆದರಿಂದ ಕಡಿಮೆ ಜನರು ಶಾಲಾ ಬಾಡಿಗೆ ಹೊಡೆಯುತ್ತಿದ್ದಾರೆ ಎಂದು ಈ ಕೋಷ್ಟಕದಿಂದ ತಿಳಿಯಬಹುದು.

ಕೋಷ್ಟಕ: 4.41 ಮಾಹಿತಿದಾರರ ವೃತ್ತಿಯ ಮೇಲೆ ತೃಪಿಯ ಕುರಿತಾದ ಮಾಹಿತಿ

ಕ್ರ ಸಂ

ವೃತ್ತಿಯ ಮೇಲೆ ತೃಪಿಯ

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

ಹೌದು

97

93.3

2

ಇಲ್ಲ

7

6.7

ಒಟ್ಟು

104

100.0

 

 

ನಕ್ಷೆ: 4.41 ಮಾಹಿತಿದಾರರ ವೃತ್ತಿಯ ಮೇಲೆನ ತೃಪ್ತಿಯ  ಕುರಿತಾದ ಮಾಹಿತಿ

ಈ ಕೋಷ್ಟಕವು ಮಾಹಿತಿದಾರರ ವೃತ್ತಿಯ ತೃಪಿಯ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 93.3% ರಷ್ಟು ತೃಪ್ತಿಯನ್ನು ಹೊಂದಿದ್ದು, 6.7% ರಷ್ಟು ತೃಪ್ತಿಯನ್ನು ಹೊಂದಿಲ್ಲ ಎಂದು ಕಾರಣ ಈ ವೃತ್ತಿಯು ಅವರಿಗೆ ಜೀವನೋಪಾಯ ಮಾರ್ಗವಾಗಿದೆ ಆದ ಕಾರಣ ಈ ವೃತ್ತಿಯ ಮೇಲೆ ತೃಪ್ತಿಯನ್ನು ಹೊಂದಿದ್ದಾರೆ ಈ ಕೋಷ್ಟಕದಿಂದ ತಿಳಿಯಬಹುದು.

ಕೋಷ್ಟಕ: 4.42 ಮಾಹಿತಿದಾರರ ರಾತ್ರಿ ಆಟೋ ಓಡಿಸುವ ಕುರಿತಾದ ಮಾಹಿತಿ

ಕ್ರ ಸಂ

ರಾತ್ರಿ ಆಟೋ ಓಡಿಸುವುದು

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

ಹೌದು

12

11.5

2

ಇಲ್ಲ

92

88.5

 

ಒಟ್ಟು

104

100.0

 

ಈ ಕೋಷ್ಟಕವು ಮಾಹಿತಿದಾರರ ರಾತ್ರಿ ಆಟೋ ಓಡಿಸುವ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 11.5% ರಷ್ಟು ರಾತ್ರಿ ಆಟೋ ಓಡಿಸುತ್ತಾರೆ, 88.5% ರಷ್ಟು ರಾತ್ರಿ ಆಟೋ ಓಡಿಸುವುದಿಲ್ಲ ಕಾರಣ ಗದಗ ನಗರದಲ್ಲಿ ರಾತ್ರಿ ದುಡಿಮೆ ಕಡಿಮೆ ಇರುವುದರಿಂದ ಕಡಿಮೆ ಚಾಲಕರು ವಾಹನ ಚಲಾಯಿಸುತ್ತಾರೆ ಎಂದು ಈ ಕೋಷ್ಟಕದಿಂದ ತಿಳಿಯಬಹುದು.

ಕೋಷ್ಟಕ: 4.46 ಮಾಹಿತಿದಾರರ ಆಟೋ ಚಾಲನೆಯ ಸಂದರ್ಭದಲ್ಲಿ ಯಾವ-ಯಾವ ಸಮಸ್ಯೆ ಕುರಿತಾದ ಮಾಹಿತಿ

ಕ್ರ ಸಂ

ಮಾಹಿತಿದಾರರ ಸಮಸ್ಯೆ

ಮಾಹಿತಿದಾರರ ಸಂಖ್ಯೆ

ಶೇಖಡವಾರು

1

ಚಿಲ್ಲರೆ ಸಮಸ್ಯೆ

36

34.6

2

ವಿಳಾಸ ಸಮಸ್ಯೆ

3

2.9

3

ಇಂಧನ ದರ ಹೆಚ್ಚಳ ಸಮಸ್ಯೆ

33

31.7

4

ಟ್ರಾಫಿಕ್ ಸಮಸ್ಯೆ

26

25.0

5

ಆರ್ಥಿಕ ವ್ಯವಹಾರದಲ್ಲಿ ಸ್ಮಾಟ್ ಪೋನ್ ಬಳಕೆ ಸಮಸ್ಯೆ

 

 

 

2

1.9

 

6

ಮೇಲಿನ ಎಲ್ಲವು

4

3.8

ಒಟ್ಟು

104

100.0

 

 

ನಕ್ಷೆ: 4.46 ಮಾಹಿತಿದಾರರ ಆಟೋ ಚಾಲನೆಯ ಸಂದರ್ಭದಲ್ಲಿ ಸಮಸ್ಯೆಗಳು ಕುರಿತಾದ ಮಾಹಿತಿ

ಈ ಕೋಷ್ಟಕವು ಮಾಹಿತಿದಾರರ ಸಮಸ್ಯಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಮಾಹಿತಿದಾರರಲ್ಲಿ 34.6% ರಷ್ಟು ಚಿಲ್ಲರೆ ಸಮಸ್ಯೆ, 2.9% ರಷ್ಟು ವಿಳಾಸ ಸಮಸ್ಯೆ, 31.7% ರಷ್ಟು ಇಂಧನ ದರ ಹೆಚ್ಚಳ ಸಮಸ್ಯೆ, 25.0% ರಷ್ಟು ಟ್ರಾಫಿಕ್ ಸಮಸ್ಯೆ, 1.9% ರಷ್ಟು ಆರ್ಥಿಕ ವ್ಯವಹಾರದಲ್ಲಿ ಸ್ಮಾಟ್ ಪೋನ್ ಬಳಕೆ ಸಮಸ್ಯೆ, 3.8% ರಷ್ಟು ಮೇಲಿನ ಎಲ್ಲವು ಸಮಸ್ಯೆಯಿಂದ ಬಳಲುತ್ತಿದ್ದಾರೆ ಕಾರಣ ಆಟೋ ರಿಕ್ಷಾ ಚಾಲಕರಿಗೆ ಚಿಲ್ಲರೆ ಸಮಸ್ಯೆ ಅತಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಈ ಕೋಷ್ಟಕದಿಂದ ತಿಳಿಯಬಹುದು.

ಫಲಿತಾಂಶಗಳು

  • ಮಾಹಿತಿದಾರರಲ್ಲಿ ಅತಿಹೆಚ್ಚು 26ರಿಂದ45 ವಯಸ್ಸಿನವರು 71% ರಷ್ಟು ಜಾಸ್ತಿ ಇದ್ದಾರೆ ಎಂದು ತಿಳಿದು ಬಂದಿದೆ.
  • ಈ ಫಲಿತಾಂಶದಲ್ಲಿ ಮಾಹಿತಿದಾರ ಶಿಕ್ಷಣದಲ್ಲಿ ಅತಿಹೆಚ್ಚು 42% ರಷ್ಟು ಪ್ರೌಡ ಶಿಕ್ಷಣದಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.
  • ಈ ಫಲಿತಾಂಶದಲ್ಲಿ ಮಾಹಿತಿದಾರರ ಅತಿ ಹೆಚ್ಚು ಪುರುಷರು 100% ರಷ್ಟು ಈ ವೃತ್ತಿಯನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
  • ವೈವಾಹಿಕವಾಗಿ ಅತಿ ಹೆಚ್ಚು ವಿವಾಹಿತರು 73.1% ರಷ್ಟು ಇದ್ದಾರೆ ಎಂದು ತಿಳಿದು ಬಂದಿದೆ.
  • ಕುಟುಂಬದ ಸದಸ್ಯರ ಸಂಖ್ಯೆಯಲ್ಲಿ 4ರಿಂದ8 ಕುಟುಂಬದ ಸದಸ್ಯರು 51% ರಷ್ಟು ಕುಟುಂಬದ ಸದಸ್ಯರು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
  • ಮಾಹಿತಿದಾರರ ಸ್ವಂತ ಮನೆಯನ್ನು 57.7% ರಷ್ಟು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
  • ಮಕ್ಕಳ ವಿದ್ಯಾಅಭ್ಯಾಸದಲ್ಲಿ 43.3% ರಷ್ಟು ಪ್ರೌಢ ಶಿಕ್ಷಣವನ್ನು ಕಲಿಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
  • ಮಾಹಿತಿದಾರರಲ್ಲಿ ವಾಸಿಸುವ ಸ್ಥಳ ನಗರ ಪ್ರದೇಶದಲ್ಲಿ 87.5% ರಷ್ಟು ಇದ್ದಾರೆ ಎಂದು ತಿಳಿದು ಬಂದಿದೆ.
  • ಮಾಹಿತಿದಾರರಲ್ಲಿ 11.5% ರಷ್ಟು ವಲಸೆ ಕಾಣಬಹುದು.
  • ಮಾಹಿತಿದಾರರ 91.3% ರಷ್ಟು ಪಡಿತರ ಚೀಟಿಯನ್ನು ಹೊಂದಿದ್ದಾರೆ ಇದರಲ್ಲಿ 90% ರಷ್ಟು ಬಿಪಿಎಲ್ ಹೊಂದಿದ್ದು 1% ರಷ್ಟು ಅಂತೋದಯವನ್ನು ಹೊಂದಿದ್ದಾರೆ.
  • ಮಾಹಿತಿದಾರ ಆಟೋ ಚಾಲಕರ ಸಂಘದ ಸದಸ್ಯತ್ವವನ್ನು 91.3% ರಷ್ಟು ಜನರು ಸಂಘದ ಸದಸ್ಯತ್ವ ಹೊಂದಿದ್ದಾರೆ.
  • ಮಾಹಿತಿದಾರರ ಉಚಿತ ಆಟೋ ಸೇವೆಯಲ್ಲಿ 77.9% ರಷ್ಟು ಮಾಡುತ್ತಿದ್ದಾರೆ.
  • ಪ್ರಥಮ ಚಿಕಿತ್ಸೆ ಪಟ್ಟಿಗೆಯನ್ನು 35.6% ರಷ್ಟು ಬಳಸುತ್ತಿದ್ದಾರೆ.
  • ಮಾಹಿತಿದಾರರಲ್ಲಿ ಸಾಮಾಜಿಕ ಭದ್ರತೆ ಯೋಜನೆಯಲ್ಲಿ ಆಯುಷ್ಮಾನ ಕಾರ್ಡ 34.6% ರಷ್ಟು ಎಂದು ತಿಳಿದು ಬಂದಿದೆ.

ಸಲಹೆಗಳು

  • ಆಟೋ ರಿಕ್ಷಾ ಚಾಲಕರಿಗೆ ಸರ್ಕಾರದ ಯೋಜನೆಗಳಾದ ಆಯುಷ್ಮಮಾನ್ ಕಾರ್ಡ ಕಡಿಮೆ ಚಾಲಕರು ಮಾಡಿಸಿರುದಾಗಿ ತಿಳಿದುಬಂದಿರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತಹÀ ಯೋಜನೆ ಕುರಿತು ಸಾರ್ವಜನಿಕ ಅರಿವು ಮೂಡಿಸಬೇಕಾಗಿದೆ
  • ಸರ್ಕಾರದ ವಸತಿ ಯೋಜನೆಗಳಲ್ಲಿ ಆಟೋ ರಿಕ್ಷಾ ಚಾಲಕರಿಗೆ ವಿಶೇಷ ಅವಕಾಶ ನೀಡಬೇಕು
  • ಆಟೋ ರಿಕ್ಷಾ ಚಾಲಕರಿಗೆ ಪ್ರಥಮ ಚಿಕಿತ್ಸೆಯ ಕುರಿತು ತರಬೇತಿಗಳು ಅವಶ್ಯಕವಾಗಿದೆ
  • ಆಟೋ ರಿಕ್ಷಾ ಚಾಲಕರು ತಮ್ಮ ಸ್ವಚತೆ ಮತ್ತು ಆರೋಗ್ಯದ ಮೇಲೆ ಕಾಳಜಿ ವಹಿಸಬೇಕಾಗುತ್ತದೆ
  • ಆಟೋ ರಿಕ್ಷಾ ಚಾಲಕರು ಸಂಘದಲ್ಲಿ ಪ್ರತಿ ನಿತ್ಯ ಸಂಪಾದನೆಯಲ್ಲಿ ಉಳಿತಾಯದ ಮಾಡಿಸಬೇಕು
  • ಆಟೋ ರಿಕ್ಷಾ ಚಾಲಕರು ಕುಟುಂಬದ ಸದಸ್ಯರು ಸ್ವಸಹಾಯ ಸಂಘದಲ್ಲಿ ಸದಸ್ಯತ್ವ ಪಡೆಯಬೇಕು
  • ಲೈಸನ್ಸ ಮಾಡಿಸುವಾಗ ಏಜೆಂಟ ಹಾವಳಿ ಕಡಿಮೆ ಮಾಡಬೇಕು
  • ಆಟೋ ರಿಕ್ಷಾ ಚಾಲಕರನ್ನು ಅಸಂಘಟಿತ ವಲಯದಿಂದ ಅವರನ್ನು ಸಂಘಟಿತ ವಲಯಕ್ಕೆ ತರಬೇಕು.
  • ಕಾರ್ಮಿಕ ಇಲಾಖೆಯಲ್ಲಿ ಆಟೋ ರಿಕ್ಷಾ ಚಾಲಕರಿಗೆ ಅವಕಾಶ ನೀಡಬೇಕು.
  • ಪ್ರತಿಯೊಂದು ಬಸ್ಯಾಂಡಿನಲ್ಲಿ ಆಟೋ ರಿಕ್ಷಾ ಚಾಲಕರಿಗೆ ಸ್ಯಾಂಡ ಮತ್ತು ವಿಶಾಂತ್ರಿ ಗೃಹಗಳನ್ನು ಮಾಡಿಸಿಬೇಕು.
  • ಸರ್ಕಾರವು ಆಟೋ ರಿಕ್ಷಾ ಚಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಬೇಕು.
  • ಸರ್ಕಾರವು ಯೋಜನೆಯನ್ನು ಮಾಡುವಾಗ ಆಟೋ ರಿಕ್ಷಾ ಚಾಲಕರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೆ ಗೊಳಿಸಬೇಕು.
  • ಸಬ್ ಸಿಡಿ ಮೂಲಕ ಆಟೋ ರಿಕ್ಷಾಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕು.
  • ರೋಡ್ ತರಿಗೆಯನ್ನು ಕಡಿಮೆ ಮಾಡಬೇಕು.
  • ಬ್ಯಾಂಕಗಳಿಂದ ಸಾಲದ ಬಡಿದರವನ್ನು ಕಡಿಮೆ ದರದಲ್ಲಿ ಸಿಗುವಂತೆ ಮಾಡಬೇಕು.
  • ಸಾಮಾಜಿಕ ಭದ್ರತಾ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ದೊರೆಯುವಂತೆ ಅವಕಾಶ ಕಲ್ಪಸಬೇಕು.
  • ಗ್ಯಾಸ ಪೆಟ್ರೋಲ್ ದರದಲ್ಲಿ ಹೆಚ್ಚಳವಾಗಿರುವುದ ಇಂಧನವನ್ನು ಇಂಧನ ದರದ ನಿಯಂತ್ರಣವನ್ನು ಸರ್ಕಾರ ಮಾಡಬೇಕಾಗಿದೆ.

ಉಪಸಂಹಾರ

ಗದಗ ನಗರದಲ್ಲಿ ಆಟೋ ರಿಕ್ಷಾ ಚಾಲಕರ ಸಾಮಾಜಿಕ-ಆರ್ಥಿಕ ಮತ್ತು ಔದ್ಯೋಗಿಕ ಸ್ಥಿತಿಯ ವ್ಯಾಪಕವಾದ ಪರಿಶೋಧನೆಯು ನಗರ ಜನಸಂಖ್ಯೆಯ ವಿಮರ್ಶಾತ್ಮಕ ಮತ್ತು ಆಗಾಗ್ಗೆ ಕಡೆಗಣಿಸಲ್ಪಟ್ಟ ವಿಭಾಗದ ಸಮಗ್ರ ತಿಳುವಳಿಕೆಯನ್ನು ಒದಗಿಸಿದೆ. ಈ ಸಂಶೋಧನೆಯು ಅವರ ಜೀವನದ ಹಲವಾರು ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದೆ, ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಸ್ಥಳೀಯ ಸಾರಿಗೆ ವ್ಯವಸ್ಥೆಯಲ್ಲಿ ಅವರು ವಹಿಸುವ ಮಹತ್ವದ ಪಾತ್ರ ಎರಡರ ಮೇಲೆ ಬೆಳಕು ಚೆಲ್ಲುತ್ತದೆ. ಈ ಅಧ್ಯಯನದ ಮೂಲಕ, ಗದಗನಲ್ಲಿ ಆಟೋ ರಿಕ್ಷಾ ಚಾಲಕರು ಅನಿಯಮಿತ ಆದಾಯ, ದೀರ್ಘ ಕೆಲಸದ ಸಮಯ ಮತ್ತು ಸಾಮಾಜಿಕ ಭದ್ರತೆಯ ಕೊರತೆ ಸೇರಿದಂತೆ ಹಲವಾರು ಅಡಚಣೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಅಂಶಗಳು ಹಣಕಾಸಿನ ಅಸ್ಥಿರತೆಗೆ ಕಾರಣವಾಗಬಹುದು, ಇದು ಅವರಿಗೆ ಮತ್ತು ಅವರ ಕುಟುಂಬಗಳಿಗೆ ಸ್ಥಿರವಾದ ಜೀವನೋಪಾಯವನ್ನು ಭದ್ರಪಡಿಸಿಕೊಳ್ಳಲು ಕಷ್ಟವಾಗುತ್ತದೆ. ಔಪಚಾರಿಕ ಕಾರ್ಮಿಕ ಪ್ರಯೋಜನಗಳ ಅನುಪಸ್ಥಿತಿ ಮತ್ತು ಆರೋಗ್ಯ ಮತ್ತು ಶಿಕ್ಷಣಕ್ಕೆ ಸೀಮಿತ ಪ್ರವೇಶವು ಅವರ ದುರ್ಬಲತೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಈ ಸವಾಲುಗಳ ನಡುವೆಯೂ ಗದಗ ನಗರದ ಸಾರಿಗೆ ಜಾಲಕ್ಕೆ ಆಟೋ ರಿಕ್ಷಾ ಚಾಲಕರು ಅನಿವಾರ್ಯ. ಅವರು ಜನಸಂಖ್ಯೆಯ ಗಣನೀಯ ಭಾಗಕ್ಕೆ ಹೊಂದಿಕೊಳ್ಳುವ ಮತ್ತು ಕೈಗೆಟುಕುವ ಮೋಡ್ ಅನ್ನು ಒದಗಿಸುತ್ತಾರೆ, ಹೆಚ್ಚು ರಚನಾತ್ಮಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಂದ ಉಳಿದಿರುವ ಅಂತರವನ್ನು ತುಂಬುತ್ತಾರೆ. ಅವರ ಸೇವೆಗಳು ನಿವಾಸಿಗಳು ತಮ್ಮ ಕೆಲಸದ ಸ್ಥಳಗಳು, ಶಾಲೆಗಳು ಮತ್ತು ಅಗತ್ಯ ಸೇವೆಗಳನ್ನು ಸುಲಭವಾಗಿ ಪ್ರವೇಶಿಸಬಹುದು ಎಂದು ಖಚಿತಪಡಿಸುತ್ತದೆ. ಈ ಅಧ್ಯಯನದ ಸಂಶೋಧನೆಗಳ ಬೆಳಕಿನಲ್ಲಿ, ಆಟೋ ರಿಕ್ಷಾ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರೀಕೃತ ನೀತಿ ಉಪಕ್ರಮಗಳು ಅತ್ಯಗತ್ಯ ಎಂಬುದು ಸ್ಪಷ್ಟವಾಗಿದೆ. ನ್ಯಾಯಯುತ ವೇತನ, ಸಮಂಜಸವಾದ ಕೆಲಸದ ಸಮಯ ಮತ್ತು ಆರೋಗ್ಯ ಸೇವೆಯ ಪ್ರವೇಶವನ್ನು ಒಳಗೊಂಡಂತೆ ಅವರ ಕೆಲಸದ ಪರಿಸ್ಥಿತಿಗಳಲ್ಲಿನ ಸುಧಾರಣೆಗಳು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವುದಲ್ಲದೆ ಅವರ ಕುಟುಂಬಗಳು ಮತ್ತು ವಿಶಾಲ ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.

ಕೃತಜ್ಞತೆಗಳು :

          ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಮುಖ್ಯಸ್ಥರು, ಸಮಾಜಕಾರ್ಯ ವಿಭಾಗದ ಉಪನ್ಯಾಸಕರು ಮತ್ತು ಮಾರ್ಗದರ್ಶಕರಾದ ಡಾ. ಲಿಂಗರಾಜ ನಿಡುವಣಿ, ಗದಗ ನಗರದ ಆಟೋ ರಿಕ್ಷಾ ಚಾಲಕರಿಗೆ ಹಾಗೂ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಿಗೆ

ಆಧಾರ ಗ್ರಂಥ

  1. ಕರ್ಹಾಡ್ ಡಿ ಬಿ “ಜಲಗಾಂವ್ ನಗರದಲ್ಲಿ ಆಟೋ ರಿಕ್ಷಾ ಚಾಲಕರ ಸಮಸ್ಯೆಗಳು ಮತ್ತು ಕ್ರಮಗಳ”,
  2. ಪಾಟೀಲ್ ಪಿ ಅಮರೇಶ ಮತ್ತು ಎಸ್ ಯೋಗೇಶಕುಮಾರ “ಉತ್ತರ ಕರ್ನಾಟಕದ ಬೆಳಗಾವಿಯಲ್ಲಿನ ಆಟೋ ರಿಕ್ಷಾ ಚಾಲಕರಲ್ಲಿ ತಂಬಾಕು ಸೇವನೆಯ ಬಗ್ಗೆ ಜಾಗೃತಿ ಕುರಿತು”,
  3. ಸಿರಿಯಾಕ್ ಜೋಮಿ ಮತ್ತು ರೆಹಮನ್ ಅನೀಸ್ “ಇರತಿ ಪೇಟೆ ಪುರಸಭೆಯ ವಿಶೇಷ ಉಲ್ಲೇಖದೊಂದಿಗೆ ಆಟೋ ರಿಕ್ಷಾ ಚಾಲಕರ ಸಮಾಜೋ-ಆರ್ಥಿಕ ಸ್ಥಿತಿಗತಿ ಅಧ್ಯಯನ
  4. ತಿಗರಿ ಹರಿಶ್, ಮತ್ತು ಸಂತೋಷ ಎಚ್ ಬಿ, “ಆಟೋ ರಿಕ್ಷಾ ಚಾಲಕರ ಸಮಾಜೋ-ಆರ್ಥಿಕ ಹಿನ್ನಲೆ”,
  5. ಪಿ ಕೆ ಸಾಯಾಜಕುಮಾರ “ಕೊಲ್ಕತ್ತಾ ನಗರದ ಆಟೋ ರಿಕ್ಷಾ ಚಾಲಕರ ಸಾಮಾಜೋ-ಆರ್ಥಿಕ ಮತ್ತು ಆರೋಗ್ಯದ ಸ್ಥಿತಿಗತಿಯ ಮೇಲೆ ಒಂದು ಅಧ್ಯಯನ”,
  6. ರಂಗರಾಜನ್ ಆರ್ “ಚನ್ನೈ ನಗರದ ಆಟೋ ರಿಕ್ಷಾ ಚಾಲಕರ ಸಾಮಾಜಿಕ-ಆರ್ಥಿಕ, ಜೀವನ ಶೈಲಿ ಮತ್ತು ವೃತ್ತಿಪರ ತೃಪ್ತಿಯ ಒಂದು ವಿಶ್ಲೇಷಣೆ”,
  7. ರಂಜನ್ ರಾಜೇಶ “ಮುಂಬೈನ ಆಟೋ ರಿಕ್ಷಾ ಚಾಲಕರ ಕೆಲಸ ಜೀವನ ಸಮತೋಲನ ಕುರಿತು ಅಧ್ಯಯನ”,

 


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal