Tumbe Group of International Journals

Full Text


ವೆರೈಟಿ ವೆರೈಟಿ ಭಕ್ತರು ಪ್ರವೀಣ್ ಎಚ್.ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮಾರ್ಗದರ್ಶಕರು : Prof. Manoj C.R. HOD And Assistant Professor of English ದೇವರು ಎಂಬ ಮೂರೇ ಅಕ್ಷರದ ಪದ ಕೇಳಿದರೆ ಎಲ್ಲರೂ ಎಲ್ಲರಲ್ಲೂ ಭಯ ಭಕ್ತಿ ನಂಬಿಕೆ ಮುಗ್ಧತೆ ಕಾಣಿಸಿಕೊಳ್ತಾವೆ. ಜನರಲ್ಲಿ ದೇವರು ಎಂಬ ನಂಬಿಕೆ ದೇವರ ಮುಂದೆ ನೂರೆಂಟು ಹರಕೆ ದೇವರನ್ನ ದೇವಸ್ಥಾನವನ್ನ ನೋಡಿದ ಕೂಡಲೇ ಕೈ ಮುಗಿಯುವವರು ಯಾರು ಇಲ್ಲ. ಇದ್ದಾರೆ ಆದರೆ ಕೆಲವೊಬ್ಬರು ಮಾತ್ರ, ಅವರು ಜೀವನದಲ್ಲಿ ಸುಖದ ಸಂಪತ್ತಿನಲ್ಲಿ ತೇಲಾಡ್ತ ಇರೊರು. ದೇವರು ಎಂಬ ಪದವು ಪ್ರತಿಯೊಬ್ಬ ಮನುಷ್ಯನ ಮನಸ್ಸನ್ನ ಕಲಕುತ್ತದೆ. ಕೆಲವೊಬ್ಬರಿಗೆ ದೇವಸ್ಥಾನಗಳಿಗೆ ಹೋಗಿ ಬಂದರೆ ಏನೋ ಒಂಥರಾ ನೆಮ್ಮದಿ ಸುಖ ಸಂತೋಷ ಇನ್ನು ಕೆಲವೊಬ್ಬರಿಗೆ ದುಃಖ ಕಷ್ಟ ನಷ್ಟ ಯಾಕೆ ಅಂತಾ ಹೇಳ್ತಿನಿ. ಒಂದು ದಿನ, ಗಂಡ ಹೆಂಡತಿ ಮದುವೆಯಾಗಿ ಮೂರು ತಿಂಗಳು ಆಗಿತ್ತು. ಅವತ್ತು ಆಫೀಸ್ ಗೆ ರಜೆ ಹೆಂಡತಿ ಅಂತಾಳೆ ರೀ ಇವತ್ತು ಬೇಗ ಎದ್ದೇಳಿ ದೇವಸ್ಥಾನಕ್ಕೆ ಹೋಗಿ ಬರೋಣ. ಪಾಪ ಗಂಡ ಇನ್ನು ಮಲಗಿರ್ತಾನೆ ನಿಮಗೆ ಗೊತ್ತಲ್ಲ ಮದುವೆಯಾಗಿ ಒಂದು ವರ್ಷದ ತನನು ಬೇಗ ಎಳೋಕೆ ಮನಸೆ ಬರಲ್ಲಾ. ಹೆಂಡತಿ ಕಾಟ ತಡಿಯೊಕೆ ಆಗದೆ ಎದ್ದು ಸ್ನಾನ ಮಾಡಿ ರೆಡಿ ಆಗ್ತಾನೆ. ಆದರೆ ಇನ್ನು ಹೆಂಡತಿ ರೆಡಿ ಆಗಿಲ್ಲ ಕನ್ನಡಿ ಮುಂದೆ ನಿಂತ್ಕೊಂಡು ಅರ್ದ ಗಂಟೆಯಾಯ್ತು. ಈಗ ಗಂಡ ಅವಳೀಗೆ ಜಾಸ್ತಿ ಹೇಳೊಕೆ ಆಗಲ್ಲ ಬೇಗ ರೆಡಿ ಆಗೆ ಅಂತಾ. ಯಾಕಂದ್ರೆ ಮದುವೆಯಾಗಿ ಮೂರೆ ತಿಂಗಳಾಗಿತ್ತು. ಹೇಂಡತಿ ಮೇಕಪ್ ಸೆಟ್‍ನ್ನ ಮುಖಕ್ಕೆ ಮೆತ್ತಿಕೊಂಡು ಬರ್ತಾಳೆ, ಇಬ್ಬರು ಸೇರಿ ದೇವಸ್ಥಾನಕ್ಕೆ ಹೋಗ್ತಾರೆ. ಹೆಂಡತಿ ಹೆಸರು ಚಿನ್ನು ಅಂತ. ದೇವಸ್ಥಾನ ಹೆಗಿರುತ್ತೆ ಗೊತ್ತಲ್ವಾ, ದೇವಸ್ಥಾನದ ಆವರಣದಲ್ಲಿ ಬನ್ನಿ ಅಮ್ಮ ದೇವರಿಗೆ ಅರ್ಚನೆ ಮಾಡ್ಸೋಕೆ ಪೂಜಾ ಸಾಮನ ತಗೊಳಿ ಅಂತಾ ಹೂವು ಕಾಯಿ ಅಂಗಡಿಯವರು’’ಬನ್ನಿ ಸಾರ್ ಚಪ್ಪಲಿ ಇಲ್ಲೆ ಬಿಟ್ಟು ಹೋಗಿ ಸರ್’’ ಅಂತಾ ಚಪ್ಪಲ್ಲಿ ಕಾಯೋರು. ಶಿವ ಶಿವ ಅಂತ ಮಡಿಯಿಂದ ಆಕಡೆಯಿಂದ ಈಕಡೆ ಈಕಡೆಯಿಂದ ಆಕಡೆ ಒಡಾಡ್ತಾ ಇರೋ ಅರ್ಚಕರು ಗರ್ಭ ಗುಡಿಯನ್ನು ಭಕ್ತಿಯಿಂದ ಸುತ್ತುತ್ತಾ ಇರೋ ಭಕ್ತಾದಿಗಳು. ಇವೆಲ್ಲವನ್ನ ನೋಡ್ತಾ ನಮ್ಮ ಭಕ್ತಾಧಿಗಳು ಗರ್ಭ ಗುಡಿ ಒಳಗೆ ಹೋಗ್ತಾರೆ. ಇಬ್ಬರು ಪಕ್ಕ ಪಕ್ಕ ನಿಂತ್ಕೋಂಡು ದೇವರಿಗೆ ಕೈ ಮುಕ್ಕೊಂಡು ದೇವರ ಹತ್ತಿರಾ ಏನೇನೊ ಬೇಡ್ಕೋಳ್ತಾ ಇರ್ತಾರೆ ಎದೆನೆನು ಅಂತ ನಮಗೆ ಗೊತ್ತು. ಹಿಗಿರುವಾಗ ಒಬ್ಬ ಹೆಂಗಸು ರೇಷ್ಮೆಸೀರೆ ಹಾಕ್ಕೊಂಡು ಮೈ ತುಂಬಾ ಒಡವೇಗಳನ್ನ ಹಾಕ್ಕೊಂಡು ಬಂದು ಈ ನಮ್ಮ ಜೋಡಿ ಎದುರಿಗೆ ದೇವರಿಗೆ ಕೈ ಮಕ್ಕೊಂಡು ನಿಂತ್ಕೋತಾಳೆ. ಇವಳು ಬಂದು ನಿತ್ಕೋಂಡ ಕೂಡ್ಲೆ ನಮ್ಮ ಚಿನ್ನು ನೋಟ ಎಲ್ಲಾ ಅವಳ ಮೇಲೆನೆ. ಯಾಕಂದ್ರೆ ಜ್ಯೂವೆಲ್ಲರಿ ಶಾಪ್ ಮೈ ಮೇಲಿತ್ತು. ಈ ಸ್ತ್ರೀಯರು ಆಭರಣ ವಸ್ತ್ರ ಬಂಗಾರ ಅಂದ್ರೆ ಬಾಯ್ ಬಾಯ್ ಬಡ್ಕೋಳ್ತಾರೆ. ಒಂದೋಂದು ಸರ್ತಿ ಬಾಯನ್ನೆ ಮುಚ್ಕೊಂಡು ಬಿಡ್ತಾರೆ. ಚಿನ್ನು ಆ ಹೆಂಗಸನ್ನ ನೊಡಿದ ತಕ್ಷಣ ದೇವರ ಕಡೆ ದೃಷ್ಟಿನೇ ಹೊಯ್ತು. ತನ್ನ ಗಂಡಾನ ಕೈಯಿಂದ ತಿವಿತಾಳೆ ರೀ ಅಂತಾ ಪಾಪ ಗಂಡಾ ಭಕ್ತಿಯಿಂದ ದೇವರ ಹತ್ತಿರ ಏನೋ ಬೆಡ್ಕೊತಿರ್ತಾನೆ. “ಏನೆ ನಿನ್ನ ಗೋಳು” ಅಂತಾ ಕೇಳ್ತಾನೆ ಚಿನ್ನು ಹೆಳ್ತಾಳೆ “ನೋಡ್ರಿ ಅವಳ ಮೈ ತುಂಬಾ ಎಲ್ಲ ಬಂಗಾರ” ಇವಳ ಮಾತ ಕೇಳಿ ಗಂಡ ಅಂತಾನೆ ಅವಳ್ನ ನೋಡಿ ನಾನೇನ್ ಮಾಡ್ಲಿ. “ನಾಳೆ ನಂಗೂನು ಅವಳು ಹಾಕಿರೊ ತರ ನಕ್ಲಿಸ್ ಬೇಕೆ ಬೇಕು ಇಲ್ಲಾ ಅಂದ್ರೆ ನಾನು ನನ್ನ ತವರು ಮನೆಗೆ ಹೋಗ್ತಿನಿ” ಅಂತಾಳೆ ಚಿನ್ನು. ಲೇ ದೇವಸ್ಥಾನಕ್ಕ ಬಂದ್ರುವೆ ನಿಮ್ಮ ಬುದ್ದಿ ಬಿಡಲ್ವಲ್ಲಾ ನೀವೂ. ಕಣ್ಣ ದುರುಗುಟ್ಕಂಡು ಗಂಡನ್ನೆ ನೋಡ್ತಾಳೆ. “ಆಯ್ತು ಬಿಡೆ ನಾಳೆ ಕೊಡಿಸಿದ್ರೆ ಆಯ್ತು ಅಂತನೆ ಗಂಡ. ದೇವಸ್ಥಾನದಲ್ಲಿರೋ ದೇವ್ರೂ ಇದನ್ನೆಲ್ಲಾ ನೋಡಿ ಮೂಕನಾಗಿ ಕುಳ್ತಿರ್ದೆ ಏನ್ ಮಾಡ್ತಾನೆ ಹೇಳಿ. ಇನ್ನಕೆಲುವೊಬ್ಬರು ದೇವಸ್ಥಾನಕ್ಕೆ ಬರ್ತಾರೆ. ಶ್ರೀಮಂತರು, ಅವರು ಬರೋರ ಅಲ್ಲಾ ಆದ್ರೂ ಏನಕ್ಕೋ ಬಂದಿದ್ದಾರೆ. ಒಳ್ಳೆ ಕೋರ್ಟು, ಶರ್ಟು,  ಪ್ಯಾಂಟು ಕಾಲಲ್ಲಿ ಕಾಸ್ಲೀ ಚಪ್ಪಲು ಹಾಕ್ಕೊಂಡು ಬಂದಿರ್ತಾರೆ. ಚಪ್ಪಲಿ ಕಾಯೋರ ಹತ್ರಾ ಚಪ್ಪಲಿ ಬಿಟ್ರೆ 2 ರೂಪಾಯಿ ಕೊಡಬೇಕಾಗುತ್ತೆ ಅಂತಾ ತಿಳ್ಕೊಂಡು ಕಂಜುಸತನ ಮಾಡಿ, ದೇವರ ಗುಡಿಯಲ್ಲಿ ನಿಂತುಕೊಂಡರೇ ಚಪ್ಪಲಿ ಕಾಣಬೇಕು ಅಂತಹ ಜಾಗದಲ್ಲಿ ಬಿಡ್ತಾನೆ. ದೇವಸ್ಥಾನದ ಒಳಗಡೆ ಹೋಗ್ತಾನೆ, ದೇವರಿಗೆ ಕೈ ಮುಕ್ಕೊಂಡು ದೇವರನ್ನೆ ನೋಡ್ತಾ ಪ್ರಾರ್ಥನೆ ಮಾಡ್ತಾನೆ. ಚಪ್ಪಲಿ ಹೊರಗಡೆ ಬಿಟ್ಟಿದ್ದಿನಲ್ಲಾ ಅಂತಾ ನೆನಪಾಗುತ್ತೆ. ಚಪ್ಪಲಿ ಕಡೆ ನೋಡ್ತಾನೆ. ಅವನ ಮನಸ್ಸಲ್ಲಿ ನನ್ನ ಚಪ್ಪಲಿನಾ ಯಾರಾದ್ರು ತೋಗಂಡು ಹೋಗ್ತಾರೇನೋ ಅಂತಾ ಭ್ರಮೆ. ದೇವರ ಹತ್ರಾ ಬಂದ್ರು ಮನಸ್ಸನ್ನಾ ಏಕಾಗ್ರತೆ ಮಾಡ್ಕೊಳ್ಳೋಕೆ ಆಗ್ದೆ ಇರೋರು.             ಕೆಲವೊಂದು ದೊಡ್ಡ ದೊಡ್ಡ ದೇವಸ್ಥಾನ ಪ್ರಸಿದ್ದಿ ಪಡೆದಿರುವಂತಹ ದೇವಸ್ಥಾನಗಳಲ್ಲಿ ಅರ್ಚನೆ ಮಾಡಿಸೋ ಭಕ್ತರಿಗೆ ಒಂದು ದಾರಿ, ಮಾಡಿಸದೆ ಇರೋರಿಗೆ ಇನ್ನೊಂದು ದಾರಿ ಅಂತಾ ಭಾಗ ಮಾಡಿರ್ತಾರೆ. ಅರ್ಚಕರಿಗೆ ದುಡ್ಡು ಕೊಟ್ರೆ ದೇವರನ್ನಾ ಡೈರೆಕ್ಟ್ ಆಗಿ ನೋಡಬಹುದು. ದುಡ್ಡು ಕೊಡ್ದೆ ಹೋದ್ರೆ ಕ್ಯೂ ಅಲ್ಲಿ ನೊತ್ಕೊಂಡು ನೋಡಬೇಕು. ದೇವಸ್ಥಾನದಲ್ಲೂ ವ್ಯವಹಾರಗಳು ನಡಿತಾ ಇರ್ತಾವೆ. ಇದು ಎರಡು ದಾರಿ ಅಲ್ಲದೆ ಇನ್ನೊಂದು ದಾರಿ ಮಾಡಿರ್ತಾರೆ. ‘ವಿ.ಐ.ಪಿ’ ದಾರಿ ಅಂತಾ, ಅಂದ್ರೇ ಯಾರಾದ್ರೂ ರಾಜಕಾರಣಿಗಳು ದೊಡ್ಡ ದೊಡ್ಡ ವ್ಯಕ್ತಿಗಳು ಬಂದ್ರೆ ಆ ದಾರಿಯಿಂದ ಹೋಗಬಹುದು. ಅದಕ್ಕೆ ಅವರಿಗೆ ಗ VIP ಅನ್ನೊ ದಾರಿ. ಅವರು ಬರೋ ದಿನ ಅರ್ಚಕರು ಇವತ್ತು ದೇವಸ್ಥಾನಕ್ಕೆ ರಜೆ ಅಂತಾ ಬೋರ್ಡ್ ಹಾಕಿದ್ರು ಹಾಕಬಹುದು. ದೇವರು ವರ ಕೊಟ್ರೆ ಪೂಜಾರಿ ವರ ಕೊಡಲ್ಲಾ, ದುಡ್ಡು ಕೊಟ್ರೆ ಕೊಡ್ತಾನೆ.             ಡೀಲರ್ಸ್, ಗಣಿದನಿಗಳು ದೇವ್ರ ಹತ್ರಾನೆ ಡೀಲ್ ಮಾತಾಡ್ತಾ ಇರ್ತಾರೆ. “ಆ ಡೀಲ್ ನನಗೆ ಬಂತು ಅಂದ್ರೆ ನಿಂಗೆ fifty ನನಗೆ fifty ಆ ಡೀಲ್ ನಂಗೆ ಸಿಗೋ ಹಂಗೆ ಮಾಡಪ್ಪಾ ದೇವ್ರೆ” ಅಂತಾ ದೇವರನ್ನಾ ಬೇಡ್ಕೊಳ್ತಾ ಇರ್ತಾರೆ. ಅದಕ್ಕೆ ಗಣಿದಣಿಗಳಾದವರು ದೇವರಿಗೆ ಏನೇನೋ ಕೊಟ್ಟವರೆ. ದೇವ್ರೆ ನಮಗೆ ಸಾಕಷ್ಟು ಗಿಫ್ಟ್ ಕೊಟ್ಟವನೇ, ಇವರು ದೇವರಿಗೆನೇ ದೊಡ್ಡ ದೊಡ್ಡ ಗಿಫ್ಟ್ ಕೊಡ್ತಾರೆ. ದೇವರು ಕೇಳ್ತಾನಾ ಇಲ್ಲಾ ಎಲ್ಲಾ ಇವರೆ ಮಾತಾಡ್ತಾರೆ. ಇವರೆ ತೀರ್ಮಾನ ತೋಗೊಳ್ತಾರೆ.             ಮದುವೆ ವಯಸ್ಸಿಗೆ ಬಂದಿರೋ ಹುಡುಗರು ದೇವಸ್ಥಾನಕ್ಕೆ ಯಾಕೆ ಹೋಗ್ತಾರೆ ಅಂತ ನಿಮಗೆ ಗೊತ್ತು. ದೇವಸ್ಥಾನದಲ್ಲಿ ಕೈಮುಕ್ಕೊಂಡು ಭಕ್ತಿ ಇಂದ “ದೇವ್ರೆ ನನಗೆ ಒಳ್ಳೆ ಹೆಂಡ್ತಿ ಸಿಗೋಹಂಗೆ  ಆಶಿರ್ವಾದ ಮಾಡಪ್ಪಾ” ಅಂತಾ ಬೇಡ್ಕೊಳ್ತಾನೆ. ಅಷ್ಟರಲ್ಲೆ ಒಬ್ಬ ಸುಂದರವಾದ ಹುಡುಗಿ ಬಂದು ಎದುರುಗಡೆ ನಿಂತ್ಕೊಂಡು ದೇವರಲ್ಲಿ ಮೊರೆಹೋಗುತ್ತಾಳೆ. ಆಗ ನಮ್ಮ ಹುಡುಗ ಕಣ್ಣ ತೆರೆದು ಅವಳನ್ನೇ ನೋಡ್ತಾ ದೇವರೇ ಇವಳೇ ನನ್ನ ಹೆಂಡತಿ ಆಗುವಹಾಗೆ ಆಶಿರ್ವಾದ ಮಾಡಪ್ಪಾ ಅಂತಾನೆ. ಹೊರಗಡೆ ಬಂದು ಅವಳಿಗೋಸ್ಕರ ಕಾಯ್ತಾ ನಿಲ್ತಾನೆ. ಅವಳು ದೇವಸ್ಥಾನದಿಂದ ಹೊರಗಡೆ ಬಂದ ತಕ್ಷಣ ಅವಳ ಹಿಂದೆ ಬಿದ್ದುಬಿಟ್ಟ. ಈ ನಮ್ಮ ಹುಡುಗ್ರು ಫುಲ್ ಪಾಸ್ಟ್ ಒಂದು ಹುಡುಗಿನ ನೋಡನೋಡ್ತಾ ಲವ್ ಅಲ್ಲಿ ಬಿದ್ದು ಹೋಗಿಬಿಡ್ತಾರೆ.             ನಮ್ಮ ತುಂಡೈಕ್ಳು ಹುಡುಗ್ರು ದೇವಸ್ಥಾನಕ್ಕೆ ಬಂದ್ರೆ ದೇವರು ಮುಖ ಕೆಂಪಗ್ ಮಾಡ್ಕೊಳ್ತಾನೆ. ಒಂದು ದಿನ ಗುಂಡಾ, ಬಸ್ಯಾ ಹನುಮಂತನ ದೇವಸ್ಥಾನಕ್ಕೆ ಹೋಗಿರ್ತಾರೆ. ಇದೇ ಟೈಮ್‍ಗೆ ಇವರ ಕ್ಲಾಸ್‍ಮೇಟ್ಸ್ ಅರ್ಚನಾ, ಜ್ಯೋತಿ ಬರುತ್ತಾರೆ. ಇವರಿಬ್ಬರೂ ಬಂದು ಹನುಮಂತನ ಹತ್ತಿರ “ಅಪ್ಪಾ ಹನುಮಂತಪ್ಪಾ ಕಾಪಾಡಪ್ಪಾ, ನಾನ್ ಪರೀಕ್ಷೆಯಲ್ಲಿ ಪಾಸ್ ಆಗುವಹಾಗೆ  ಆಶಿರ್ವಾದ ಮಾಡಪ್ಪ”. ಅಂತಾ ಬೇಡ್ಕೊಂಡು ಹೋಗ್ತಾರೆ. ಇದನ್ನೆಲ್ಲಾ ಕೇಳ್ತಾ ನಮ್ಮ ಗುಂಡಾ, ಬಸ್ಯಾ ನಿಂತಿರ್ತಾರೆ. ಬಸ್ಯಾ ಹನುಮಂತನ ಮುಂದೆ ಬಂದು “ಮಾವಾ ಹನುಮಂತ ಮಾವಾ ಕಾಪಾಡಪ್ಪಾ” ಅಂತಾನೆ ಇದನ್ನಾ ನೋಡಿ ಗುಂಡಾ ಗಾಬರಿ ಆಗ್ತಾನೆ. ಗುಂಡಾ, ಬಸ್ಯಾನ ಕೇಳ್ತಾನೆ “ ಲೇ ಬಸ್ಯಾ, ಹನುಮಂತ ನಿನಗ್ಯಾವಾಗಲಾ ಮಾವ ಆದ”. ಬಸ್ಯಾ ಹೇಳ್ತಾನೆ, ಗುಂಡ್ಯಾ ಆಗ್ಲೆ ಬಂದಿದ್ರಲ್ಲಾ ನಮ್ಮ ಕ್ಲಾಸ್‍ಮೇಟ್ಸ್ ಜ್ಯೋತಿ, ಅರ್ಚನಾ ಅವರು ಹನುಮಂತನ ಹತ್ರ ಬಂದು ಅಪ್ಪ ಹನುಮಂತಪ್ಪಾ ಕಾಪಾಡಪ್ಪ ಅಂತಾ ಬೇಡ್ಕೊಂಡ್ರು. ಹನುಮಂತ ಅವರಿಗೆ ಅಪ್ಪ ಆದ್ರೆ ನಂಗೆ ಮಾವ, ಯಾಕೇಂದ್ರೆ ಅವರಿಬ್ರು ನನ್ನ ಲವರ್ಸ್” ಅಂತಾನೆ. ಇವರ ಮಾತ ಕೇಳಿ ಹನುಮಂತನ ಮುಖ ಇನ್ನೂ ಕೆಂಪು. ಹೀಂಗೆ Variety Variety ಭಕ್ತರು ಆಗಾಗಾ ದೇವಸ್ಥಾನಕ್ಕೆ ಭೇಟಿ ಕೊಡ್ತಾ ಇರ್ತಾರೆ. “ದೇವರು ಎಂಬ ನಂಬಿಕೆ ನೂರೆಂಟು ಹರಕೆ” Variety Variety ಭಕ್ತರು, ಇವರೆಲ್ಲರ್ನೂ ನೋಡಿ ಮುಖ ಕೆಂಪ ಮಾಡ್ಕೋಳ್ತಾನೆ, ದೇವರು”


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal