Tumbe Group of International Journals

Full Text


ಚಾಣಕ್ಯ ಬೋಧಿಸಿದ ಜೀವನ ನಿರ್ವಣೆಯ ವಿಧಾನಗಳು ಗೋವರ್ಧನ್ ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಚಾಣಕ್ಯ (ಕ್ರಿ.ಪೂ.371) ಭಾರತದ ಮೆಕವಲ್ಲಿ : ಭಾರತ ಕಂಡ ಅದ್ವಿತೀಯ ರಾಜನೀತಿ ತಜ್ಞ, ಮಹಾನ್ ರಾಜಕೀಯ ಮುತ್ಸದ್ದಿ, ಭಾರತದ ಮಹಾನ್ ಅರ್ಥಶಾಸ್ತ್ರಜ್ಞ, ಚಾಣಕ್ಯ. ಭಾರತದ ಮಹಾನ್ ಸಾಮ್ರಾಜ್ಯಗಳಲ್ಲಿ ಒಂದಾದ ‘ಮೌರ್ಯಸಾಮ್ರಾಜ್ಯದ’ ಸ್ಥಾಪನೆಗೆ ಕಾರಣಿಭೂತನಾದ ಚಾಣಕ್ಯ “ಕ್ರಿ.ಪೂ.371ರಲ್ಲಿ ಪಾಲಿಪುತ್ರದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದನು.”             ಇವನು ತಕ್ಷಶಿಲದಲ್ಲಿ ಪ್ರಾಚಾರ್ಯನಾಗಿ ಸೇವೆಸಲ್ಲಿಸಿದ್ದಾನೆ. ಇವನ ಇತರೆ ನಾಮಾಂಕಿತಗಳೆಂದರೆ ‘ವಿಶ್ವಗುಪ್ತ’, ‘ಕೌಟಿಲ್ಯ’, ‘ವಿಷ್ಣುಶರ್ಮ’. 1) ಯಾವ ವ್ಯಕ್ತಿ ಜೀವನದಲ್ಲಿ ಸಮಯವನ್ನು ಗೌರವಿಸುವುದಿಲ್ಲವೋ ಅವನ ಜೀವನದಲ್ಲಿ ಕೇವಲ ಅಪಜಯ, ಪಶ್ಚ್ಯಾತಾಪಗಳೇ ಅವನಿಗೆ ಸಿಗುತ್ತವೆ. 2) ಜಗತ್ತನ್ನೆಲ್ಲ ಗೆಲ್ಲಬೇಕೆಂಬ ಇಚ್ಛೆ / ಆಸೆ ನಿನಗಿದ್ದರೆ ಅದಕ್ಕೆ ಬೇಕಾದದ್ದು ಒಂದೇ ಒಂದು ಮಾರ್ಗ. ಅದು ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡದೆ ಇರುವುದು. 3) ವಿದ್ಯೆ ಕಾಮಧೇನುವಿದ್ದಂತೆ, ಎಲ್ಲ ಕಾಲದಲ್ಲೂ ಫಲವನ್ನು ಕೊಡುತ್ತದೆ. ಪರಸ್ಥಳದಲ್ಲಿರುವಾಗ ತಾಯಿಯಂತೆ ಕಾಪಾಡುವುದು ವಿದ್ಯೆ. ಆದುದರಿಂದ ವಿದ್ಯೆ ಗುಪ್ತ ನಿಧಿ ಇದ್ದಂತೆ. 4) ರಾಜನ ಪತ್ನಿ, ಗುರುವಿನ ಪತ್ನಿ, ಪತ್ನಿಯ ತಾಯಿ ಮತ್ತು ಜನ್ಮಕೊಟ್ಟ ತಾಯಿ ಈ ಐವರು ತಾಯಿಯಂತೆ. 5) ವಿದ್ಯಾರ್ಥಿಯನ್ನು ಸೇವಕನನ್ನು, ಪ್ರಯಾಣಿಕನನ್ನು, ಹಸಿವು ಬಾಯಾರಿಕೆಗಳಿಂದ ಬಾದಿತನಾದವನನ್ನು, ಬಯಗ್ರಸ್ಥನನ್ನು, ಖಜಾನೆಯ ಕಾವಲುಗಾರನನ್ನು ಈ ಏಳುಮಂದಿ, ಕೆಲಸ ಮರೆತು ನಿದ್ದೆ ಮಾಡುತ್ತಿದ್ದರೆ ಖಂಡಿತ ಎಚ್ಚರಿಸಬೇಕು. 6) ಪರಸ್ತ್ರೀಯರಲ್ಲಿ ತಾಯಿಯನ್ನು, ಪರಸಂಪತ್ತಲ್ಲಿ ಕಸವನ್ನು, ಎಲ್ಲಾ ಜೀವಿಗಳಲ್ಲೂ ದೇವರನ್ನು ಕಾಣುವವನೇ ಜ್ಞಾನವಂತ. 7) ಪುಸ್ತಕದಲ್ಲಿರುವ ವಿದ್ಯೆ, ಬೇರೆಯವರ ಕೈಯಲ್ಲಿ ಕೊಟ್ಟಿರುವ ಹಣ ಸಮಯಕ್ಕೆ ಬೇಕಾದಾಗ ಉಪಯೋಗಕ್ಕೆ ಬರುವುದಿಲ್ಲ. 8) ಗುರುವಿನಿಂದಲ್ಲದೆ ಬರೀ ಪುಸ್ತಕದ ಸಹಾಯದಿಂದ ಪಡೆದ ವಿದ್ಯೆ, ಚಾರಿಣಿಯ ಮಗ ಸಭಾ ಮಧ್ಯದಲ್ಲಿ ಹೇಗೆ ಶೋಭಿಸುವುದಿಲ್ಲವೋ ಹಾಗೆ ಶೋಭಿಸುವುದಿಲ್ಲ. 9) ರಾಜ, ವೈಶ್ಯ, ಯಮ, ಅಗ್ನಿ, ಕಳ್ಳ, ಬಾಲಿಕೆ, ಯಾಚಕ ಮತ್ತು ಗ್ರಾಮ ಕಂಟಕರು ಈ ಎಂಟು ಜನರಿಗೂ ಬೇರೆಯವರ ದುಃಖ ತಿಳಿಯುವುದಿಲ್ಲ. 10)           ಹಣ ಗೃಹಲಕ್ಷ್ಮಿಯಂತೆ ಒಂದೇ ಮನೆಯಲ್ಲಿ ಒಬ್ಬನ ಸ್ವತ್ತಾಗಿದ್ದರೆ ಪ್ರಯೋಜನವಿಲ್ಲ.   ಹಣ ಯಾವಾಗಲೂ ವೇಶ್ಯಯಂತೆ ಹತ್ತಾರು ಜನರಿಗೆ ಸಿಗುವಂತಿರಬೇಕು. 11)           ಒಂದೇ ವಸ್ತುವನ್ನು ಮೂರು ಜನರೂ ಮೂರು ವಿಧಗಳಲ್ಲಿ ನೋಡುತ್ತಾರೆ. ಯೋಗಿಗೆ ಹೆಣ್ಣು ಹೆಣಕ್ಕೆ ಸಮಾನ, ಕಾಮಿಗೆ ಆಕೆ ಕಾಮಿನಿ, ನಾಯಿಗೆ ಅದು ಮಾಂಸ. 12)           ಕಾಮ, ಕ್ರೋದ, ಲೋಭ, ರುಚಿ, ಅತಿಪ್ರಣಯ ವಿಷಯದ ಕುತೂಹಲ, ಅತೀಯಾದ ನಿದ್ರೆ, ಅತಿಯಾದ ಪರರ ಸೇವೆ ಇವುಗಳಿಂದ ವಿದ್ಯಾರ್ಥಿಯಾದವನು ದೂರವಿರಬೇಕು. 13)           ರಾಜ ಒಂದೇ ಬಾರಿ ಆಜ್ಞೆ ಮಾಡುವುದು. ಪಂಡಿತನು ಒಮ್ಮೆ ಮಾತ್ರ ಉಪದೇಶ ಮಾಡುತ್ತಾನೆ. ಮಗಳ ಮದುವೆ ಒಮ್ಮೆಯಾತ್ರೆ ನಡೆಯುತ್ತದೆ. ಇವು ಮೂರು ಒಂದೊಂದು ಬಾರಿ ಮಾತ್ರ ಆಗುವಂಥದ್ದು. 14)           ತಪಸ್ಸು ಮಾಡುವಾಗ ಒಬ್ಬನೇ ಇರಬೇಕು, ಇಬ್ಬರು ಗೆಳೆಯರು ಕೊಡಿ ಓದಬೇಕು.   ಮೂರು ಜನ ಹಾಡಿದರೆ ಚೆನ್ನ, ಪ್ರಯಾಣ ಮಾಡುವಾಗ ನಾಲ್ಕು ಜನರಿದ್ದರೆ ಒಳ್ಳೆಯದು, ಐದು ಜನಕ್ಕಿಂತ ಹೆಚ್ಚಿನ ಜನ ಸೈನ್ಯಕ್ಕೆ ಮಾತ್ರ ಬೇಕು. 15)           ದನದಾನ್ಯದ ವ್ಯವಹಾರದಲ್ಲಿರುವನು, ವಿದ್ಯಾಕಾಂಕ್ಷಿಯಾದವನು, ತಿನ್ನುವುದರಲ್ಲಿ ಮತ್ತು ಸ್ವಭಾವದಲ್ಲಿ ಸಂಕೋಚಬಿಟ್ಟರೆ ಸುಖವಾಗಿರುತ್ತಾನೆ. 16)           ಹಣ ಕಳೆದುಕೊಂಡ ಬಗ್ಗೆ ಜಗಳವಾಡಿದ ವಿಷಯದ ಬಗ್ಗೆ ತನ್ನ ಮನೆಯಲ್ಲಿರುವ ದ್ರುಷ್ಠರ ಬಗ್ಗೆ, ಮೋಸ ಹೋದ ಬಗ್ಗೆ, ಅವಮಾನವಾದ ಬಗ್ಗೆ, ಬುದ್ಧಿವಂತರು ಯಾರೊಂದಿಗೂ ಹೇಳಿಕೊಳ್ಳದಿರುವುದು. 17)           ಸುಳ್ಳು ಹೇಳುವುದು ಮೂರ್ಖತನ, ಶುಚಿತ್ವ ಇಲ್ಲದಿರುವುದು, ದಯೆ ಇಲ್ಲದಿರುವುದು, ಮೋಸ ಮಾಡುವುದು, ಅತಿಯಾದ ಸಾಹಸ. ಇವು ಹೆಂಗಸರ ಸಹಜವಾದ ದೋಷಗಳು. 18)           ಪುರುಷರಿಗೆ ಹೋಲಿಸಿದರೆ ಸ್ತ್ರೀಯರಿಗೆ (ಹಸಿವು) ಆಹಾರ ಎರಡುಪಟ್ಟು, ಬುದ್ದಿ ನಾಲ್ಕುಪಟ್ಟು, ಸಾಹಸ ಆರುಪಟ್ಟು ಹಾಗೆ ಕಾಮ (ಆಸೆ) ಎಂಟುಪಟ್ಟು ಜಾಸ್ತಿ. 19)           ಕತ್ತೆಯು ಮನುಷ್ಯನಿಗೆ ಮೂರು ಅಂಶಗಳನ್ನು ಬೋಧಿಸುವುದೇ ನಿರಂತರ ದುಡಿತ, ವಿರಕ್ತಿ, ತೃಪ್ತಿಯ ಭಾವಗಳೇ ಈ ಮೂರು ಅಂಶಗಳು. 20)           ನಾಯಿಗೆ ಆಹಾರ ದೊರೆತಾಗ ಹೊಟ್ಟೆ ಬಿರಿಯುವಂತೆ ತಿನ್ನುವುದು. ಅಕಾಸ್ಮಾತ್, ಆಹಾರ ದೊರಕದೇ ಇರುವಾಗ ಚಿಂತಿಸದೇ ಕಣ್ತುಂಬಾ ನಿದ್ರೆ ಮಾಡುವುದು. 21)           ಶತ್ರುವನ್ನು ಸಭೆಯಲ್ಲಿ ನಿಂದಿಸಬಾರದು. 22)           ಇಂದ್ರಿಯಗಳನ್ನು ನಿಗ್ರಹಿಸಿದವನಿಗೆ ವಿಷಯಗಳ ಭಯವಿಲ್ಲ. 23)           ಬೇರೊಬ್ಬರ ತಪ್ಪುಗಳಿಂದ ಕಲಿಯಬೇಕು, ಎಲ್ಲಾ ತಪ್ಪುಗಳನ್ನೂ ನೀವೊಬ್ಬರೆ ಮಾಡಲು ನಿಮ್ಮ ಆಯಸ್ಸು ಸಾಲದು. 24)           ಅತಿ ಪ್ರಾಮಾಣಿಕರಾಗದಿರಿ, ನೇರವಾದ ಮರಗಳು ಮೊದಲು ನೆಲಕ್ಕೆ ಉರುಳುತ್ತವೆ.         ಆ ಬಳಿಕ ಡೊಂಕು ಮರದ ಸರದಿ. 25)           ಶಿಕ್ಷಣವು ಹುಲಿಯ ಹಾಲು ಇದ್ದಂತೆ, ಅದನ್ನು ಕುಡಿದವನು ಘರ್ಜಿಸಲೇಬೇಕು.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal