Tumbe Group of International Journals

Full Text


ವಿಜ್ಞಾನ ವೇದಿಕೆ - ಸರ್ಕಾರಿ ಪ್ರಥಮದರ್ಜೆ ಕಾಲೇಜು, ತುಮಕೂರು ಡಾ. ಪ್ರಸನ್ನ ಕುಮಾರ್ ಜೆ ಬಿ ಮುಖ್ಯಸ್ತರು, ಭೌತಶಾಸ್ತ್ರ ವಿಭಾಗ ಸರ್ಕಾರಿ ಪ್ರಥಮದರ್ಜೆ ಕಾಲೇಜು, ತುಮಕೂರು ಪರಿಚಯ: - ವಿಜ್ಞಾನ ವೇದಿಕೆಯು ನಮ್ಮ ಕಾಲೇಜಿನ ಪ್ರಾರಂಭಿಕ ವರ್ಷದಲ್ಲೇ ಆರಂಭವಾಯಿತು. ಈ ವೇದಿಕೆಯು ನಮ್ಮ ವಿದ್ಯಾರ್ಥಿಗಳನ್ನು ವಿಜ್ಞಾನದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರೇರೆಪಿಸಲು ನೆರವಾಗಿದೆ. ಧ್ಯೇಯ:        ತಮ್ಮ ಶೈಕ್ಷಣಿಕ ಮತ್ತು ಪಠ್ಯೇತರ ಕೌಶಲ್ಯಗಳನ್ನು ನಿರ್ಮಿಸುವ ವಿಜ್ಞಾನ ಸಂಬಂಧಿತ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು. ಉದ್ದೇಶ:        ಸಾಮಾಜಿಕ ಅರಿವಿರುವ ವಿದ್ಯಾರ್ಥಿಗಳನ್ನು,ನೈತಿಕ ಮತ್ತು ಶೈಕ್ಷಣಿಕವಾಗಿ ಅವರ ಆಯ್ಕೆ ಕ್ಷೇತ್ರದಲ್ಲಿ ಉತ್ಸಾಹದಿಂದ ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುವುದು. ಸಮಿತಿಯ ಕ್ಷಮತೆ ಶಾಶ್ವತ ಬೋಧಕವರ್ಗ 15 ಅತಿಥಿ ಬೋಧಕವರ್ಗ 80 ವಿದ್ಯಾರ್ಥಿಗಳ ಸಂಖ್ಯೆ 730   ಸಮಿತಿಯ ಸದಸ್ಯರು: ಕ್ರ. ಸಂ. ಹೆಸರು   1 ಡಾ. ಪ್ರಸನ್ನ ಕುಮಾರ್ ಜೆ ಬಿ ಸಂಯೋಜಕರು 2 ಡಾ. ಯೋಗೀಶ್ ಎನ್ ಸದಸ್ಯರು 3 ಪ್ರೊ. ಹರಿದಾಸ್ ಸದಸ್ಯರು 4 ಡಾ. ಅನುಸುಯಾ ಕೆ ವಿ ಸದಸ್ಯರು 5 ಪ್ರೊ. ಭವಾನಿ ಪಾಟೀಲ್ ಸದಸ್ಯರು 6 ಪ್ರೊ. ವೈ ಎಸ್ ಚಂದ್ರಶೇಕರಯ್ಯ ಸದಸ್ಯರು 7 ಶ್ರೀ. ನಾಗರಾಜು ಟಿ ಎಲ್ ಪರಿಚಾರಕರು 8 ಶ್ರೀಮತಿ. ಕಲಾವತಿ ಪರಿಚಾರಕರು   ನಮ್ಮ ಸಮಿತಿಯ ಅತ್ಯುತ್ತಮ ಆಚರಣೆಗಳು: ಯಶಸ್ವಿಯಾಗಲು ವ್ಯವಸ್ಥಿತ ಮಾರ್ಗದರ್ಶನ. ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದು. ಅಧ್ಯಯನ ಪ್ರವಾಸಗಳನ್ನು ಆಯೋಜಿಸುವುದು. ಪಠ್ಯಕ್ರಮದ ಹೆಚ್ಚುವರಿ ಚಟುವಟಿಕೆಗಳನ್ನು ನಡೆಸುವುದು. ರಾಜ್ಯದಾದ್ಯಂತ ಸ್ಪರ್ಧೆಗಳಿಗೆ ವಿಜ್ಞಾನ ವಿದ್ಯಾರ್ಥಿಗಳನ್ನು ಕಳುಹಿಸುವುದು. 2017-18ರ ಅವಧಿಯಲ್ಲಿ ನಡೆಸಲಾದ ಕಾರ್ಯಕ್ರಮಗಳು: ಕಲ್ಪತರು ಪ್ರಥಮದರ್ಜೆ ಕಾಲೇಜು, ತುಮಕೂರು 29-01-2018 ರಂದು, ವಿಜ್ಞಾನಕ್ಕೆ ಸಂಬಂದಿಸಿದಂತೆ ವಿವಿಧ  ಸ್ಪರ್ಧೆಗಳನ್ನು ಆಯೋಜಿಸಿದ್ದರು. ಪ್ರಬಂಧ ಸ್ಪರ್ಧೆ : ಪ್ರಜ್ವಲ್ ಸಿ ಮತ್ತು ವಿನಯ್ ಕುಮಾರ್ , ತೃತೀಯ ಪಿ.ಸಿ.ಎಮ್ ಭಾಗವಹಿಸಿದ್ದರು.  ವಿಜ್ಞಾನ ಮಾದರಿ : ಸಚಿನ್ ಜಿ ವೈ ಮತ್ತು ಅರ್ಚನ ಕೆ ಆರ್, ಪ್ರಥಮ ಪಿ.ಸಿ.ಎಮ್ ಸಮಾದನಕರ ಬಹುಮಾನ ಪಡೆದಿದ್ದಾರೆ. ವಿಜ್ಞಾನ ರಸಪ್ರಶ್ನೆ : ಅಕ್ಷತ ವಿ ಗೋಪಾಲ್ ಮತ್ತು ಬಿಂದು ವೈ ಪಿ , ಪ್ರಥಮ ಪಿ.ಸಿ.ಎಮ್ ತೃತೀಯ ಬಹುಮಾನ ಪಡೆದಿದ್ದಾರೆ. ಸರ್ಕಾರಿ ಪ್ರಥಮದರ್ಜೆ ಕಾಲೇಜು, ತಿಪಟೂರು 22-02-2018 ರಂದು ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದ್ದು ಅಕ್ಷತ ವಿ ಗೋಪಾಲ್ ,ಬಿಂದು ವೈ ಪಿ, ಸಚಿನ್ ಜಿ ವೈ ಮತ್ತು ಅರ್ಚನ ಕೆ ಆರ್ (ಪ್ರಥಮ ಪಿ.ಸಿ.ಎಮ್) ಭಾಗವಹಿಸಿದ್ದರು. ಸರ್ಕಾರಿ ಪ್ರಥಮದರ್ಜೆ ಕಾಲೇಜು,ಯಲಹಂಕ, ಬೆಂಗಳೂರು 26-02-2018 ರಂದು ವಿವಿಧ ವಿಜ್ಞಾನ ಸ್ಪರ್ಧೆಗಳನ್ನು ಆಯೋಜಿಸಿದ್ದು 28-02-2018 ರಂದು ಬಹುಮಾನಗಳನ್ನು ವಿತರಿಸಿದರು. ಉಪನ್ಯಾಸ ಸ್ಪರ್ಧೆ : ಭರತ್ ಕುಮಾರ್ ಹೆಚ್ ಎನ್ ಮತ್ತು ಪ್ರಜ್ವಲ್ ಸಿ, ತೃತೀಯ ಪಿ.ಸಿ.ಎಮ್ ಭಾಗವಹಿಸಿದ್ದರು. ವಿಜ್ಞಾನ ರಸಪ್ರಶ್ನೆ : ಆನಂದ್ ಕೆ ತೃತೀಯ ಪಿ.ಸಿ.ಎಮ್ ಭಾಗವಹಿಸಿದ್ದರು. ವಿಜ್ಞಾನ ಮಾದರಿ : ಸಚಿನ್ ಜಿ ವೈ ಮತ್ತು ಅರ್ಚನ ಕೆ ಆರ್, ಪ್ರಥಮ ಪಿ.ಸಿ.ಎಮ್ ಭಾಗವಹಿಸಿದ್ದರು. ವಿಜ್ಞಾನ ಪ್ರಬಂಧ ಸ್ಪರ್ಧೆ : ಸುಕೃತಿ ಮತ್ತು ನವ್ಯ ತೃತೀಯ ಪಿ.ಸಿ.ಎಮ್ ಭಾಗವಹಿಸಿದ್ದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ- 2018 ರ ಅಂಗವಾಗಿ ವಿವಧ ವಿಜ್ಞಾನ ಸ್ಪರ್ಧೆಗಳನ್ನು 02-03-2018 ರಂದು ಆಯೋಗಿಸಲಾಗಿದ್ದು, 03-03-2018 ರಂದು ಬಹುಮಾನಗಳನ್ನು ವಿತರಿಸಲಾಯಿತು. ವೈಜ್ಞಾನಿಕ ರಂಗೋಲಿ: ಸುಮಾರು ಐವತಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಪ್ರಥಮ ಬಹುಮಾನ : ಕಲ್ಪನ ಮತ್ತು ಬಿಂದು – ದ್ವಿತೀಯ ಬಿ.ಸಿ.ಎ ದ್ವಿತೀಯ ಬಹುಮಾನ : ರೋಹಿಣಿ ಮತ್ತು ಕನಕ – ದ್ವಿತೀಯ ಪಿ.ಸಿ.ಎಮ್ ದ್ವಿತೀಯ ಬಹುಮಾನ : ಚಂದ್ರಕಲ ಮತ್ತು ಚಂದನ – ಪ್ರಥಮ  ಸಿ.ಬಿ.ಝೆಡ್ ತೃತೀಯ ಬಹುಮಾನ  : ದಿವ್ಯ ಜ್ಯೋತಿ ಮತ್ತು ಹರ್ಷಿತ ಕೆ ಎಲ್– ಪ್ರಥಮ  ಸಿ.ಬಿ.ಝೆಡ್ ಉಪನ್ಯಾಸ ಸ್ಪರ್ಧೆ : ಸುಮಾರು ಹದಿನೈದು ವಿದ್ಯಾರ್ಥಿಗಳು ಭಾಗವಹಿಸಿದ್ದರು ಪ್ರಥಮ ಬಹುಮಾನ :ಶಿವಾನಿ ಕುಮಾರಿ – ಪ್ರಥಮ ಪಿ.ಎಮ್.ಸಿಎಸ್ ದ್ವಿತೀಯ ಬಹುಮಾನ : ಲತ ಎಸ್  – ಪ್ರಥಮ  ಪಿ.ಸಿ.ಎಮ್ ತೃತೀಯ ಬಹುಮಾನ  : ರಶ್ಮಿ ಹೆಚ್– ಪ್ರಥಮ  ಸಿ.ಬಿ.ಝೆಡ್ 10-03-2018 ರಂದು ತೃತೀಯ ಬಿ.ಎಸ್ಸಿ ವಿದ್ಯಾರ್ಥಿಗಳು ಐ.ಐ.ಎಸ್ಸಿ , ಬೆಂಗಳೂರಿಗೆ ಬೇಟಿ ಕೊಟ್ಟರು. 23-03-2018 ರಂದು ಶುಕ್ರವಾರ 12.30 ಕ್ಕೆ "ಭೌತಶಾಸ್ತ್ರದಲ್ಲಿ ಸ್ಟೀಫನ್ ಹಾಕಿಂಗ್ನ ಅಧ್ಯಯನಗಳು" ನಲ್ಲಿ ವಿಶೇಷ ಉಪನ್ಯಾಸವನ್ನು ಡಾ. ಡರುಕಾ ಪ್ರಸಾದ್ ಬಿ, ಬಿ.ಎಂ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಬೆಂಗಳೂರು -560 064 ನಡೆಸಿಕೊಟ್ಟರು. ಸಮಾರೋಪ: ವಿಜ್ಞಾನ ವೇದಿಕೆಯು ವಿದ್ಯಾರ್ಥಿಗಳು ನೈಸರ್ಗಿಕ ಮತ್ತು ಜೈವಿಕ ಪರಿಸರ ವಿಜ್ಞಾನದ ಸುತ್ತಮುತ್ತಲಿನ ಪರಿಸರವನ್ನು ಮತ್ತು ಅದರ ವ್ಯಾಪಕ ಶ್ರೇಣಿಯ ಬಳಕೆಯ ಕೃತಜ್ಞತೆಯನ್ನು ನೀಡಲು, ಅದರಲ್ಲೂ ವಿಶೇಷವಾಗಿ ಇತರ ಭೌತಿಕ, ರಾಸಾಯನಿಕ ಮತ್ತು ಜೈವಿಕ ವಿಜ್ಞಾನಗಳನ್ನು ಬೆಂಬಲಿಸಲು ಪ್ರಯತ್ನಿಸುತ್ತದೆ. ಈ ವೇದಿಕೆಯು ವಿಶ್ವವಿದ್ಯಾನಿಲಯವು ಸೂಚಿಸಿರುವ ಎಲ್ಲಾ ನಿಯಮಾವಳಿಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ, ಮತ್ತು ಪದವಿ ಶಿಕ್ಷಣದ ಜೊತೆಗೆ ವಿಜ್ಞಾನದಲ್ಲಿ ಮತ್ತಷ್ಟು ಅಧ್ಯಯನಕ್ಕೆ ಘನ ಅಡಿಪಾಯವನ್ನು ಒದಗಿಸುತ್ತದೆ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal