Tumbe Group of International Journals

Full Text


ದೇವರೆಂಬುವನು ಇದ್ದರೆ….! ಶ್ರೀಧರ .ಎಸ್ ಒ GFGC, Tumkur ದೇವರೆಂಬುವನು ಇದ್ದರೆ, “ಮುಂದಿನ ಜನ್ಮದಲ್ಲಿ ನಿನ್ನನ್ನು ಹೇಗೆ ಹುಟ್ಟಿಸಬೇಕೆಂದು ನೀನೆ ಕೋರಿಕೋ” ಎಂದು ಕೇಳಿದರೆ ತಾನೇನನ್ನು ಕೋರಿಕೊಳುತ್ತಾನೆಂದು ಒಬ್ಬ ತತ್ವಜ್ಞಾನಿ ಈ ರೀತಿ ಹೇಳುತ್ತಾನೆ. “ಓ ದೇವರೆ! ನಾನು ಮಾನಸಿಕವಾಗಿ ಬಲಹೀನನಾಗಿರುವಾಗ, ಹಾಗೇಕಿದ್ದೇನೆಂಬುದನ್ನು ಅರಿಯುವ ವಿಶ್ಲೇಷಣೆ ಎನಗೆ ನೀಡು. ನಾನು ಹೆದರಿದಾಗ, ಆ ಹೆದರಿಕೆಗೆ ಯಾವ ಕಾರಣವೆಂದು ತಿಳಿಯುವ ಧೈರ್ಯ ನೀಡು. ಒಂದು ಸ್ಪರ್ಧೆಯಲ್ಲಿ ಸೋತಾಗ, ಹೆಮ್ಮೆಯಿಂದ ಆ ಸೋಲನ್ನು ಒಪ್ಪಿಕೊಳ್ಳುವ ಸಾಹಸ ನೀಡು. ಓ ದೇವರೆ! ಆಸೆಗಳನ್ನು ಮೆದುಳಿನಲ್ಲಿ ತುಂಬದಿರು. ಆಸೆಗಳನ್ನು ಹೃದಯದಲ್ಲಿರಿಸಿ ಅವು ನೆರವೇರುವ ಆಲೋಚನೆಗಳನ್ನು ಮೆದುಳಿನಲ್ಲಿ ತುಂಬು. ನನ್ನನ್ನು ನಾನು ಅರಿಯುವುದೆ ಪ್ರಥಮ ಪಾಠವೆಂಬ ಇಂಗಿತ ಜ್ಞಾನವನ್ನು ಹುಟ್ಟಿದೊಡನೆಯೇ ನೀಡು. ನನ್ನ ಬದುಕನ್ನು ಹೂವಿನಷ್ಟು ಮೃದುವಾಗಿ ಮಾಡಬೇಡ. ಮುಳ್ಳಿನ ನೋವು ತಿಳಿದ ನಂತರ ಹೂವಿನ ಮೃದುತ್ವದ ಬಗ್ಗೆ ತಿಳಿಯುತ್ತದೆಂಬ ಪಾಠವನ್ನು ನನಗೆ ಕಲಿಸು ಓ ದೇವರೇ! ನನ್ನ ಹೃದಯ ಸ್ವಚ್ಛವಾಗಿ, ನನ್ನ ಗುರಿ ಎತ್ತರವಾಗಿ, ನನ್ನ ಆಲೋಚನೆ ನಿರ್ದಿಷ್ಟವಾಗಿ ಸಾಗುವಂತೆ ಮಾಡು. ನನ್ನನ್ನು ನಾನು ಎಷ್ಟು ಬೇಗ ಗೆದ್ದರೆ ಇತರರನ್ನು ಅಷ್ಟೇ ಬೇಗ ಗೆಲ್ಲಬಲ್ಲೆನು ಎನ್ನುವ ಚಿಕ್ಕ ಪಾಠವನ್ನು ನಾನು ಬಾಲ್ಯದಲ್ಲಿಯೇ ಅರಿಯುವಂತೆ ಮಾಡು. ಹಾಯಾಗಿ ನಗುವುದು ಹೇಗೆಂದು ನನಗೆ ಕಲಿಸು. ದುಃಖವನ್ನು ಮರೆಯುವಂತೆ  ಮಾಡಬೇಡ. ಭವಿಷ್ಯತ್ತನ್ನು ಹೇಗೆ ತಿದ್ದಿಕೊಳ್ಳಬೇಕೆಂದು ನನಗೆ ಕಲಿಸು. ಗತವನ್ನು ಮರೆಸಬೇಡ. ಓ ದೇವರೇ! ಹಾಸ್ಯವನ್ನು ಆಸ್ವಾದಿಸುವ ಗುಣವನ್ನು ನನ್ನಿಂದ ದೂರ ಮಾಡದಿರು. ಅದರಿಂದ  ನಾನೆಷ್ಟೋ  ದುಃಖದಲ್ಲಿರಬೇಕಾದ  ಪರಿಸ್ಥಿತಿ ಬಂದರೂ ನನ್ನನ್ನು ನಾನು ಕಳೆದುಕೊಳ್ಳುವುದಿಲ್ಲ. ನನಗೊಂದಿಷ್ಟು ಪೆಟ್ಟು ಕೊಡು. ಅದರಿಂದ ನನಗೆಂತಹ ವಿಜಯ ಸಿಕ್ಕಿದರೂ ನನ್ನನು ನಾನು ಮರೆಯದಂತೆ ನೋಡಿಕೊಳ್ಳುತ್ತೇನೆ. ಪರಿಪೂರ್ಣ ವ್ಯಕ್ತಿತ್ವಕ್ಕೆ ಇವೇ ಮೂಲಕಾರಣಗಳೆಂದು ನಾನು ನಂಬಿದ್ದೇನೆ. “ಇದಕ್ಕಿಂತಲೂ ಮಿಗಿಲಾದ ಕಾರಣಗಳನ್ನು ನೀನು ಕೂಡಾ ಕೊಡಲಾರೆಯೆಂಬ ನನ್ನ ವಾದವನ್ನು ನಾನು ಅಹಂ ಎಂದುಕೊಳ್ಳುವುದಿಲ್ಲ.”


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal