Tumbe Group of International Journals

Full Text


ಕೃಷ್ಣ ಮೃಗ  ರಂಗನಾಥ ಎಂ.ಹೆಚ್ ಅಳಿವಿನ  ಅಂಚಿನಲ್ಲಿರುವ ಎಷ್ಟೋ ಪ್ರಾಣಿ ಸಂತತಿಗಳಲ್ಲಿ ಕೃಷ್ಣ ಮೃಗವು ಒಂದು ಇದು ಆಂಟಿಲೋಪ್‍ನ ಒಂದೇ ಒಂದು ಸಂತತಿ. ರಾಣಿಬೆನ್ನೂರನ್ನು ಬಿಟ್ಟರೆ ಅತೀಹೆಚ್ಚು ಕೃಷ್ಣ ಮೃಗಗಳಿರುವ ಸ್ಥಳ ಯಾವುದು ಗೊತ್ತೇ? ಅದು ನಮ್ಮ ಜಿಲ್ಲೆಯಲ್ಲಿಯೇ ಇದೆ. ಅದು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮೈದನಹಳ್ಳಿ ಬಳಿ ಇರುವ ಜಯಮಂಗಲಿ ಕೃಷ್ಣ ಮೃಗ ಸಂರಕ್ಷಣಾ ಧಾಮದಲ್ಲಿದೆ. ಇಲ್ಲಿ ಭಾರತದಲ್ಲಿರುವ ಅತೀ ವಿರಳ ಪ್ರಾಣಿ ಸರಳ ನೋಟಕ್ಕೆ ಸಿಗುತ್ತದೆ. ಅದರ ಪರಿಚಯ ಅದರ ಪದಗಳಲ್ಲಿ ಕೇಳೋಣ ಬನ್ನಿ ಹಾಯ್ ನನ್ನ ಹೆಸರು ಕೃಷ್ಣ ಮೃಗ ನನ್ನ ವಾಸಸ್ಥಾನ ಮೈದನಹಳ್ಳಿಯ ಸರಹದ್ದಿನಲ್ಲಿರುವ ಸಮಶೀತೋಷ್ಣ ವಲಯದ ಹುಲ್ಲುಗಾವಲು, ನನ್ನ ಎತ್ತರ ಸುಮಾರು 35 ರಿಂದ 75 ಸೆಂ ಮೀಟರ್ ತಲೆಯ ಮೇಲೆ ಎರಡು ಕೋಡು ಸುರುಳಿಯಾಕಾರ ಸುತ್ತಿಕೊಂಡಿದೆ. ಗಂಟೆಗೆ ಸುಮಾರು 80.ಕಿ.ಮೀ ವೇಗವಾಗಿ ಓಡಬಲ್ಲೆನು. ನನ್ನ ಮೇಲಿರುವ ಕಂದು (ಕಪ್ಪು) ಬಣ್ಣದಿಂದ ನನಗೆ ಕೃಷ್ಣ ಮೃಗವೆಂಬ ಹೆಸರು ಬಂತು. ಒಟ್ಟಾರೆ ನನ್ನ ಜೀವಿತಾವಧಿ ಸುಮಾರು 12-ರಿಂದ 16ವರ್ಷಗಳ ವರೆಗೆ ನಾವು ಮಾನವರಂತೆ ಗುಂಪಾಗಿ ಜೀವಿಸಲು ಇಚ್ಚಿಸುತ್ತೇವೆ. ಐದಾರು ಮಂದಿ ಗುಂಪಾಗಿ ಆಹಾರವನ್ನು ಹುಡುಕುತ್ತಾ ಒಗ್ಗಟ್ಟಾಗಿ ಬಾಳುತ್ತೇವೆ. ಹುಲ್ಲನ್ನು ತಿನ್ನುತ್ತಾ ಬೇಲಿಯನ್ನು ಹಾರುತ್ತಾ ಕಾಡಿನ ಝರಿಯ ತಿಳಿ ನೀರನ್ನು ಕುಡಿಯುತ್ತಾ ಸ್ವಚ್ಛಂದವಾಗಿ ನಲಿಯುತ್ತಾ ದಿನಗಳನ್ನು ದೂಡುತ್ತೇವೆ. ನಮ್ಮಲ್ಲಿ ಹೆಣ್ಣು ಸ್ವಲ್ಪ ಬಿನ್ನ ಅವುಗಳಿಗೆ ನಮ್ಮಂತೆ ಕೋಡುಗಳಿರುವುದಿಲ್ಲ. ಬಣ್ಣ ತಿಳಿ ಬೂದು. ನಾವು ಸಸ್ಯ ಹಾರಿಗಳಾದರೂ ನಮ್ಮಿಂದ ಪ್ರಕೃತಿಗೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ದುರಾಸೆಯುಳ್ಳ ಮಾನವರು ನಮ್ಮ ಚರ್ಮಕ್ಕಾಗಿ ಕೋಡುಗಳಿಗಾಗಿ  ಮಾಂಸಕ್ಕಾಗಿ ಹಾಗೂ ಮೋಜಿಗಾಗಿ ನಮ್ಮನ್ನು ಕೊಲ್ಲುತ್ತಿದ್ದಾರೆ. ಇದು ನೆನ್ನೆ ಮೊನ್ನೆಯ ಮಾತಲ್ಲ. ಅನಾಧಿಕಾಲದಿಂದಲೂ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯವಿದು. ನಾವು ನಿಮ್ಮಂತೆಯೇ ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ. ನಮಗೂ ಈ ಸುಂದರ ಜೀವನವನ್ನು ಸವೆಯಲು ಆಸೆಇದೆ. ಹಚ್ಚ ಹಸಿರ ವನ ಸಿರಿಯಲ್ಲಿ ನಲಿಯಲು ಮನವು ಉತ್ಸುಕವಾಗಿದೆ. ಕೇವಲ ನಿಮ್ಮ ಮೋಜಿಗಾಗಿ ಕ್ಷಣದ ಸುಖಕ್ಕಾಗಿ ನಮ್ಮ ಪ್ರಾಣವನ್ನು ತೆಗೆಯದಿರಿ. ಒಂದುವೇಳೆ ನೀವು ಹೀಗೆಯೇ ನಮ್ಮನ್ನು ಬೇಟೆಯಾಡಿದಲ್ಲಿ ಅತೀ ಬೇಗ ಭೂಮಿಯಿಂದ ನಮ್ಮ ಸಂತತಿ ನಿರ್ಗಮವಾಗುತ್ತದೆ. ಇದು ಸತ್ಯ. ಪ್ರಕೃತಿ ಅಸಮತೋಲನಕ್ಕೆ ಮಾನವನೇ ನೀ ಮುಖ್ಯ ಕಾರಣ ಅದು ನಿನಗೂ ಗೊತ್ತು.             ಪ್ರಸ್ತುತ ಈಗ ನಾವು ಅಲ್ಲಲ್ಲಿ ಕೇವಲ ಬೆರಳೆಣಿಕೆಗೆ ಸಿಗುವಷ್ಟು ಸಂಖ್ಯೆಯಲ್ಲಿ ಮಾತ್ರ ಉಳಿದಿದ್ದೇವೆ. ರಾಜಸ್ಥಾನ್, ಗೀರ್, ರಾಣಿಬೆನ್ನೂರು, ನಾಮದ ಚಿಲುಮೆ, ಹೀಗೆ ಇನ್ನೂ ಹಲವು ಸ್ಥಳಗಳಲ್ಲಿ ಮಾತ್ರ ನೋಡಲು ಕಾಣಿಸುತ್ತೇನೆ. ನಾನಿರುವುದು ಮೈದನಹಳ್ಳಿ ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ಧಾಮದಲ್ಲಿ. ಇಲ್ಲಿ ನನಗೆ ಯಾವುದೇ ಬೇಲಿ ಇಲ್ಲ. ವಿಶಾಲವಾದ ಹುಲ್ಲುಗಾವಲು ಅಲ್ಲಲ್ಲಿ ಅರಣ್ಯ ಇಲಾಖೆಯವರು ಕಟ್ಟಿಸಿರುವ ನೀರಿನ ಆಸರೆಗಳು ಅಕ್ಕ ಪಕ್ಕದ ರೈತರ ಹೊಲಗಳು ಹೀಗೆ ಎಲ್ಲಿ ಬೇಕೆಂದಲ್ಲಿ ಸ್ವಚ್ಚಂದವಾಗಿ ಜಿಗಿಯುತ್ತಾ ಹಸಿರು ಮರದ ನೆರಳಲಲ್ಲಿ ವಿರಮಿಸುತ್ತಾ ದಿನವನ್ನು ಕಳೆಯುತ್ತೇನೆ. ನಿಸರ್ಗದ ಪಾಲಿಗೆ ನಾವು ನೀವೆಲ್ಲಾ ಸಮಾನರು. ಇಲ್ಲಿ ಯಾರು ಹೆಚ್ಚ್ಚಲ್ಲ. ಯಾರು ಕಮ್ಮಿ ಅಲ್ಲ. ಇಲ್ಲಿ ಎಲ್ಲರಿಗೂ ಬದುಕಲು ಅವಕಾಶವಿದೆ. “ನೀವು ಬದುಕಿ ನಮ್ಮನ್ನು ಬದುಕಲು ಬಿಡಿ”.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal