Tumbe Group of International Journals

Full Text


ಜೀವಜಾಲ ಡಾ. ಹನುಮಂತರಾಯ .ಜಿ Lecturer, GFGC, Tumkur ರಕುತವು ಜೀವ ಹಿಂಡಿ ನೆಲ ಮುಗಿಲ ಉದ್ದಕ್ಕೂ ನಾಲಿಗೆ ಚಾಚಿ ಒಂದೇ ಸಮನೆ ನುಗ್ಗಿ ಬರುತ್ತಿದೆ ಈ ಜೀವಜಾಲ ರಕ್ಕಸವತಾರವ ಮೀರಿ ಕುದ್ದ ಮಾಂಸತುಂಡುಗಳು ಎಳಿಕುವವೆ ಹೆಗಲ ಮೇಲೆ ಹೊತ್ತ ನೊಗ ಸಾಗಿ ಬರುವುದು ಧಣಿ ಮನೆತನಕ ಗೊಡ್ಡು ಗಾಳಿಗೆ ಹೆದರಿ ನೆಲ ಹೊಕ್ಕವೆ? ಋಣಭಾರವ ಹೊತ್ತವರು ತೀರಿಸಿಯಾಯಿತೆ? ಕೊರಳ ತುಂಬ ಮೂಳೆ ಸರಗಳದ್ದೇ ಸದ್ದು ಕಾಲದ ಕುಣಿಕೆಗೆ ಎದುರುಗೊಳ್ಳದವರು ಮಡಿ ಮೈಲಿಗೆಗೆ ಮೈಯೊಡ್ಡಿ ಶಾಸ್ತ್ರ ಪುರಾಣವು ನೇಪಥ್ಯಕ್ಕೆ ಹೊರಟಂತೆ ಸುರುಳಿಯಾಗತ್ತಲಿದೆ ಈ ಜೀವಜಾಲ ಉಳಿದಿರುವುದು ಪುಟಗೋಸಿಯೊಂದೆ ತೀರ ಮೇಲೆ ಹೊಕ್ಕ ಗಿಡುಗ ಕಾಯುತ್ತಲಿದೆ ನಾನು ಮುಟ್ಟುವುದೆಂದು ಎಂತಲೇ ರಾಜನ ಹೆಂಡತಿ ಬಸುರಿ ಮರದಡಿ ನೆರಳ ಹಾಸಿ ಕೊರೆವ ಚಳಿಯಲಿ ಜೀವ ಜಂತುವಿಗೆ ಮರವೊಡ್ಡಿದ್ದಾಳೆ.     ಕಡಲಂಚಿನಲ್ಲಿ ನಸುನಕ್ಕವಳು ತಾರೆಗಳ ಮರೆಯಲ್ಲಿ ಹಲ್ಲುಕಿಸಿದು ಕಾಮನಬಿಲ್ಲಿನ ಬಣ್ಣಗಳನು ವಕ್ಳಕ್ಕೆ ಧರಿಸಿ ಮುನ್ನೋಟದಲ್ಲೇ ನನ್ನ ಮನಸ್ಸನ್ನ ಕದ್ದ ಮಿಂಚುಳ್ಳಿ ಯಾರೆ ನೀ ನನ್ನೆದೆಯ ಪುಸ್ತಕದಲ್ಲಿ ವರಕಾಯ ಪ್ರವೇಶ ಮಾಡಿ ಪ್ರೇಮ ಎಂಬೆರಡು ಅಕ್ಷರಗಳ ಗೀಚಿ ಹಾಗೆ ಮರೆಯಾದ ಸುಕೋಮಲೆ, ದೀಪಗಳ ಬಾಲೆ ನೀ ಮೋಡಗಳ ನಡುವಲ್ಲಿ ಶೃಂಗಾರಗೊಂಡ ಬೆದರುಬೊಂಬೆಯ ನನ್ನ ಹೃದಯಂತರಾಳದಲಿ ನಗುವೆಂಬ ಮೊಗ್ಗು ಅರಳಿಸಿ ಸ್ವಪ್ನ ಪ್ರಪಂಚಕೆ ಹೂ ರಾಶಿ ಚೆಲ್ಲಿದವಳು ನೀನೆ ತಾನೆ, ಹುಣ್ಣಿಮೆಯ ಚಂದ್ರನಂತೆ ಸದಾ ಬೆಳಗುವವಳು ನೀನಾಗು, ವಸಂತದಲಿ ಮನತುಂಬಿ ಹಾಡಿಕ್ಕುವ ಹಕ್ಕಿಯಾಗಿ ಎಲ್ಲರ ಮನಸ್ಸನ್ನ ಸೂರೆಗೊಳ್ಳುವ ಮುದ್ದಿನಂತಾಗು. ನಸುನಗುಗಳ ಪಿಸುನುಡಿಯಲ್ಲಿ ನನ್ನ ಬಂದಿಸಿದವಳು ನೀನು ಸದಾ ಕುಣಿಯುವ ಸಂಭ್ರಮದ ನವಿಲೇ ನೂರು ವಸಂತಗಳನು ದಾಟಿದರೂ, ಬೋರ್ಗರೆಯುವ ಕಡಲು ತನ್ನ ನಕೆ ನಿಲ್ಲಿಸಿದರೂ ನೀ ಮಾತ್ರ ನನ್ನಲ್ಲಿ ಸದಾ ಮಿನುಗುವ ಬಿಸಿಲ ಚುಕ್ಕಿ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal