Tumbe Group of International Journals

Full Text


ಒಲವಿನೊಳಗೆ ಗೋವಿಂದರಾಜು ಎನ್.ವಿ, ಅಧೀಕ್ಷಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು   ನೋಟ ಪರಿಚಯವಾಗಿ ಪರಿಚಯ  ಸ್ನೇಹವಾಗಿ ಸ್ನೇಹ ಮುಂದುವರಿದು ಒಲವಾಗಿ ಸೇರಬೇಕು ಹೃದಯಗಳು ಒಂದಾಗಿ   ಒಲವು ಚೆಲವು ಒಂದಾಗಿ ಅಹಂಗಳು ಮಾಯವಾಗಿ ನಡೆ ನುಡಿಗಳೆಲ್ಲ ಹಿತವಾಗಿ ಇರಬೇಕು ಒಬ್ಬರಿಗೊಬ್ಬರು ಋಣಿಯಾಗಿ   ಒಲವಿನೊಳಗೆ ಮುಳುಗಿ ಸ್ತುತಿ ನಿಂದೆಗಳನ್ನು ನುಂಗಿ ನಂಬಿಕೆಯ ಅಡಿಪಾಯವಾಗಿ ನಿಲ್ಲಬೇಕು ಒಲವು ಪ್ರೇಮ ಮಂದಿರವಾಗಿ   ಬೇರೆ ಬೆಲುವಿಗಾಕರ್ಷಿತವಾಗಿ ಅದರ ಮಾಯೆಗೊಳಗಾಗಿ ತನ್ನ ತನವ ಮರೆತವನಾಗಿ ಮರೆಯ ಬಾರದು ಒಲವ ಹೀನವಾಗಿ   ಒಲವು ಒಂದು ಪ್ರೋತ್ರಾಹ ಮುನ್ನಡೆಸುವ ಉತ್ಸಾಹ ಅಂಜಿಕೆಯ ಕಳೆವ ಧೈರ್ಯವಾಗಿ ಬೇರೂರಬೇಕು ಹೃದಯದಲ್ಲಿ ಗಟ್ಟಿಯಾಗಿ   ಒಲವು ಒಂದು ಬಂಧನ ಅದಾಗಬಾರದು ದಿಗ್ಬಂಧನ ಕುಗ್ಗಬಾರದು ಹೃದಯ ಸಂಕುಚಿತವಾಗಿ ಹಿಗ್ಗಬೇಕು ಆಗಸದಂತೆ ವಿಶಾಲವಾಗಿ   ಒಲವು ಹುಟ್ಟಿದ್ದು ಸ್ನೇಹದಲ್ಲಿ ಮರೆಯದಿರಿ ಸ್ನೇಹ ಒಲವಿನಲ್ಲಿ ಒಲವು ಸ್ನೇಹಗಳು ಜೋಡೆತ್ತುಗಳಾಗಿ ಎಳೆಯಬೇಕು ಬಾಳೆಂಬ ಬಂಡಿ ಸರಾಗವಾಗಿ


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal